Tumba avashyakavagi de ellaru idannu tiliyabekide👍

On Oct 1, 2017 10:19 AM, "Shiva Prasanna" <[email protected]> wrote:

> Harish sir you are doing  very good job. Very enthusiastic and admirable
> work .Please keep it up. Thank you a lot 🙏👍🙏🙏
>
> # ಶಿವಪ್ರಸನ್ನ.ಕೆ.ವಿ. *7411174354, 7411174356
> ಬಾಲಕಿಯರ ಸ.ಪ.ಪೂ.ಕಾಲೇಜು-ವಿಭಜಿತ.
> ಹಾಸನ.
>
> 2017-09-29 2:34 GMT+05:30 Hareeshkumar K <[email protected]>:
>
>> http://m.vijaykarnataka.com/edit-oped/columns/sudhindra-hald
>> odderi/articleshow/60834818.cms
>> ನೆಟ್‌ ನೋಟ: ಪ್ರಳಯದ ಸುದ್ದಿಯೆಂಬ ಠುಸ್‌ ಪಟಾಕಿ
>> Updated Sep 27, 2017, 04:00 AM IST
>> AAA
>> [image: ನೆಟ್‌ ನೋಟ: ಪ್ರಳಯದ ಸುದ್ದಿಯೆಂಬ ಠುಸ್‌ ಪಟಾಕಿ]
>>
>>    -
>>    -
>>    -
>>    -
>>    -
>>    -
>>
>> ** ನೆಟ್‌ ನೋಟ: ಸುಧೀಂದ್ರ ಹಾಲ್ದೊಡ್ಡೇರಿ*
>>
>> ''ಎಲ್ಲಾ ಬೋಗಸ್‌ ಅಂತೀರಲ್ಲಾ, ಇದಕ್ಕೇನು ಹೇಳ್ತೀರಿ?,'' ಎಂದು ಭಾನುವಾರ ಪತ್ರಕರ್ತ
>> ಮಿತ್ರರೊಬ್ಬರು ಪತ್ರದ ಪ್ರತಿಯೊಂದನ್ನು ನನ್ನ ಮೊಬೈಲಿಗೆ ಕಳುಹಿಸಿದ್ದರು. ಪಾರಮಾನಸ
>> ವಿಜ್ಞಾನದಿಂದ ಭೂಮಿ ಹಾಗೂ ಬಾಹ್ಯಾಕಾಶವನ್ನು ಅಳೆಯುವ ಸಂಶೋಧನಾ ಸಂಸ್ಥೆಯೊಂದರ ನಿರ್ದೇಶಕರು
>> ಪ್ರಧಾನಮಂತ್ರಿಗಳಿಗೆ ಬರೆದ ಪತ್ರವದು. ಕಳೆದ ಆಗಸ್ಟ್‌ 20ರಂದು ಈ ಸಂಸ್ಥೆಯು ಪಾರಮಾನಸಿಕ
>> ಜ್ಞಾನದಿಂದ ಗ್ರಹಿಸಿದ ಮಾಹಿತಿಯ ಪ್ರಕಾರ ಇದೇ ವರ್ಷದ ಡಿಸೆಂಬರ್‌ 31ರಂದು ಹಿಂದೂ ಮಹಾಸಾಗರದ
>> ತಳದಲ್ಲಿ ಭಾರಿ ಭೂಕಂಪನವಾಗಲಿದೆ! ಭಾರತ, ಚೀನಾ, ಪಾಕಿಸ್ತಾನ, ಜಪಾನ್‌ ಸೇರಿದಂತೆ ಏಷಿಯಾ
>> ಖಂಡದ ಹನ್ನೊಂದು ರಾಷ್ಟ್ರದ ಭೂಪಟವನ್ನೇ ಬದಲಾಯಿಸಬಲ್ಲಷ್ಟು ಶಕ್ತಿ ಅದರಿಂದ
>> ಬಿಡುಗಡೆಯಾಗಲಿದೆ. ಸುಮಾರು 120ರಿಂದ 180 ಕಿಲೋಮೀಟರ್‌ನಷ್ಟು (ಅಗಲವೊ, ಎತ್ತರವೊ, ಉದ್ದವೋ
>> ಗೊತ್ತಿಲ್ಲ ? ) 'ಸೀಶ್ಮಾ' ಎಂಬ ಹೆಸರಿನ ಪ್ರಭಾವಶಾಲಿ ನೀರಿನಲೆ ಮಹಾಸಾಗರದ ತೀರವನ್ನು
>> ಅಪ್ಪಳಿಸಲಿದೆ. ಜತೆಗೆ ಇಡೀ ತೀರ ಪ್ರದೇಶದಲ್ಲಿ ಸುನಾಮಿಯೂ ಬಂದೆರಗಬಹುದು. ಸುನಾಮಿ
>> ಮುನ್ಸೂಚಕಗಳು, ಹವಾಮಾನ ರೇಡಾರ್‌ಗಳು, ಭೂಪರಿವೀಕ್ಷ ಣಾ ಉಪಗ್ರಹಗಳು, ಅಗಾಧ ಶಕ್ತಿಯ
>> ಸೂಪರ್‌ ಕಂಪ್ಯೂಟರುಗಳು ಕಂಡುಹಿಡಿಯಲಾಗದ ವಿದ್ಯಮಾನವನ್ನು ಕೇರಳದ ತಿರುವನಂತಪುರದ
>> ಲೆಟರ್‌ಹೆಡ್‌ 'ಸಂಶೋಧನಾ(?)' ಸಂಸ್ಥೆಯೊಂದು ಪತ್ತೆಹಚ್ಚಿದೆ. ಈ ಕುರಿತಂತೆ ಸಂಸ್ಥೆಯು ಬರೆದ
>> ಪತ್ರ ಪ್ರಧಾನಮಂತ್ರಿಯವರನ್ನು ಮುಟ್ಟುವ ಮೊದಲೇ ಫೇಸ್‌ಬುಕ್‌ ಮೆಸೆಂಜರ್‌, ವಾಟ್ಸ್‌
>> ಆ್ಯಪ್‌, ಟ್ವಿಟರ್‌ ಸೋಶಿಯಲ್‌ ಮೀಡಿಯಾಗಳ ಮೂಲಕ ಜಗಜ್ಜಾಹೀರಾಗಿದೆ. ಪ್ರಸಾರದ
>> ತುರ್ತಿನಲ್ಲಿರುವವರು ಕೇವಲ ಜನಸಾಮಾನ್ಯರಷ್ಟೇ ಅಲ್ಲ. ವಿಜ್ಞಾನ-ತಂತ್ರಜ್ಞಾನವನ್ನು (ಒಂದು
>> ಕಾಲದಲ್ಲಿ) ಅರೆದು ಕುಡಿದ ಮಹಾ ಮಹಿಮರಿದ್ದಾರೆ. ಈ ಹಿಂದೆ ನನ್ನೊಟ್ಟಿಗೆ ಐ.ಐ.ಟಿ.ಯಲ್ಲಿ
>> ಎಂಜಿನಿಯರಿಂಗ್‌ ಕಲಿತವರು ಇದೇ ಪತ್ರದ ಪ್ರತಿಯೊಂದನ್ನು ನನಗೆ ಕಳುಹಿಸಿದ್ದಾರೆ.
>> ಡಿ.ಆರ್‌.ಡಿ.ಓ.ದಲ್ಲಿ ನನ್ನ ಸಹೋದ್ಯೋಗಿ ಆಗಿದ್ದವರೂ ಅದನ್ನು ನನ್ನೊಂದಿಗೆ
>> ಹಂಚಿಕೊಂಡಿದ್ದಾರೆ.
>>
>> ಇನ್ನೇನು ಕಳೆದ ಶನಿವಾರ ಪ್ರಳಯ ಆಗಿಯೇ ಬಿಡುತ್ತದೆ ಎಂದು ಕಾದಿದ್ದ ವಿಘ್ನಸಂತೋಷಿಗಳಿಗೆ
>> ನಿರಾಶೆಯಾಗಿದೆ. ಅದಕ್ಕೆಂದೇ ಜನರನ್ನು ಒಂದಷ್ಟು ಕಾಲ ಚಟುವಟಿಕೆಯಿಂದಿಟ್ಟಿರಲು ಡಿಸೆಂಬರ್‌
>> 31ರ ಹೊಸ ಪ್ರಳಯದ ಪಾರಮಾನಸಿಕ ಜ್ಞಾನವನ್ನು ಹಬ್ಬಿಸುತ್ತಿದ್ದಾರೆ. ಅಮೆರಿಕದಲ್ಲಿ ಖಗ್ರಾಸ
>> ಸೂರ್ಯಗ್ರಹಣವಾದ ಮೂವತ್ಮೂರು ದಿನಗಳೊಳಗೆ 'ನಿಬಿರು' ಕ್ಷುದ್ರಗ್ರಹ ಅಥವಾ 'ಪ್ಲಾನೆಟ್‌
>> ಎಕ್ಸ್‌' ಗ್ರಹ ಭೂಮಿಗೆ ಬಂದಪ್ಪಳಿಸಬಹುದು ಎಂದು ಬೂಸಿ ಬಿಟ್ಟಿದ್ದ ಪ್ರಳಯಾಂತಕನೊಬ್ಬ, ಇದೀಗ
>> ಮುಳುಗಡೆಗೆ ಹೊಸ ದಿನಾಂಕವೊಂದನ್ನು (ಅಕ್ಟೋಬರ್‌ 21) ನಿಗದಿ ಮಾಡಿದ್ದಾನೆ. ಅಂದು
>> ಆರಂಭವಾಗುವ (ಮಹಾ)ಯುದ್ಧ ಸತತವಾಗಿ ಏಳು ವರ್ಷಗಳ ಕಾಲ ನಡೆದು, ಇಡೀ ಜಗತ್ತೇ ಅನಾಹುತದತ್ತ
>> ಜಾರುತ್ತದೆಂದಿದ್ದಾನೆ. ಬೈಬಲ್‌ ಗ್ರಂಥದಲ್ಲಿ ಈ ಬಗ್ಗೆ ಎಲ್ಲ ಉಲ್ಲೇಖಗಳಿವೆ ಎಂದೂ ಬೊಗಳೆ
>> ಬಿಟ್ಟಿದ್ದಾನೆ.
>>
>> ಈ ಬಗೆಯ ಸುದ್ದಿಗಳಿಗೆ ಸದಾ ಹಾತೊರೆಯುವ ನಮ್ಮ 24 -7 ಕನ್ನಡ ಸುದ್ದಿ ಟೀವಿ ಚಾನೆಲ್‌ಗಳು
>> 'ಜಗತ್ತು ಉಳಿಯತ್ತಾ?', 'ಮುಂದಿನ ಪ್ರಳಯಕ್ಕೆ ನಾವೂ ನೀವಾ ಆಗ್ತೀವಾ ಸಾಕ್ಷಿ?', 'ಗಡಗಡ
>> ನಡುಗುತ್ತಿರುವ ನಾಸಾ ವಿಜ್ಞಾನಿಗಳು ಇಷ್ಟು ದಿನ ಸುಮ್ಮನಿದ್ದದ್ದೇಕೆ?' ಎಂದು
>> ಬೊಬ್ಬಿರಿಯುತ್ತಿವೆ. ಹೆಂಗಳೆಯರ ಕಣ್ಣುಗಳಲ್ಲಿ ಧಾರಾಕಾರ ಕಣ್ಣೀರು ಸುರಿಸುವ
>> ಧಾರಾವಾಹಿಗಳನ್ನೇ ಬಂಡವಾಳ ಮಾಡಿಕೊಂಡಿರುವ ಮನರಂಜನಾ (?) ಟೀವಿ ಚಾನೆಲ್‌ಗಳಿಗೆ ಪೈಪೋಟಿ
>> ನೀಡಲು ಸುದ್ದಿ ಚಾನೆಲ್‌ಗಳು 'ಭೀತಿ'ಯನ್ನೇ ಒಂದು 'ವಾಣಿಜ್ಯ ಸರಕನ್ನಾಗಿ'ಸಿಕೊಂಡಿವೆ.
>> ಯಾವುದೋ ದೇಶದಲ್ಲಿ ಹಿಡಿಯುವ ಪಾಶ್ರ್ವ ಗ್ರಹಣಗಳಿಂದ ಹಿಡಿದು ಮಂಗಳವಾರದಂದೇ ಬಂದ ಸಂಕಷ್ಟ ಹರ
>> ಚತುರ್ಥಿಯ ಫಲಾಫಲಗಳನ್ನು ಪೈಪೋಟಿಗೆ ಬಿದ್ದು ಬಿತ್ತರಿಸುತ್ತವೆ. ಈ ಪ್ರಸಂಗಗಳನ್ನು
>> ವಿಶೇಷವಾಗಿ ಪ್ರಸ್ತಾಪಿಸುವುದಕ್ಕೆ ಕಾರಣಗಳಿವೆ. ಜಗತ್ತಿನ ನಾಲ್ಕೈದು ಪ್ರಮುಖ ರಾಷ್ಟ್ರಗಳ
>> ಸಾಲಿನಲ್ಲಿ ದೇಶವನ್ನು ತಂದು ನಿಲ್ಲಿಸಿರುವ ಬಾಹ್ಯಾಕಾಶ ತಂತ್ರಜ್ಞಾನ - ಅದು
>> ತಂದುಕೊಟ್ಟಿರುವ ಮೊಬೈಲ್‌ ಫೋನು, ಬಹುಚಾನೆಲ್‌ಗಳ ಟೀವಿ ಹಾಗೂ ಇಂಟರ್‌ನೆಟ್‌ ? ಇವುಗಳ
>> ಮೂಲಕ ಜನ್ಮಾಂತರದ ಮೌಢ್ಯವನ್ನು, ಪ್ರಳಯಾಂತಕ ಭವಿಷ್ಯವನ್ನು ಹಾಗೂ ಲೈಂಗಿಕ ಕ್ರೌರ್ಯದ
>> ಮನರಂಜನೆಯನ್ನು ಕ್ಷ ಣಾರ್ಧದಲ್ಲಿ ಸುಲಭವಾಗಿ ಪಸರಿಸಲು ಇಂದು ಸುಲಭ ಸಾಧ್ಯವಾಗಿದೆ. ಯಾವ ಯಾವ
>> ಗ್ರಹಗಳು ನಿಮಗೆ ಯಾವ ಅವಧಿಯಲ್ಲಿ ಕಾಟ ಕೊಡಲು ಸಿದ್ಧವಾಗಿವೆಯೆಂದು ಇಂಗ್ಲಿಷ್‌ ವರ್ಷದ
>> ಆರಂಭ, ಸಂಕ್ರಾಂತಿ, ಯುಗಾದಿ ಹಾಗೂ ದೀವಳಿಗೆಯ ವಿಶೇಷ ದಿನಗಳಂದು ಫರ್ಮಾನುಗಳು
>> ಹೊರಬೀಳುತ್ತವೆ. ಇನ್ನು ಸಂಖ್ಯಾ ಶಾಸ್ತ್ರಜ್ಞರ ಕಲ್ಪನೆಗಳಿಗೆ ಲೆಕ್ಕವೇ ಇಲ್ಲ. ಹುಟ್ಟಿದ
>> ದಿನ, ತಿಂಗಳು, ವರ್ಷಗಳನ್ನು ಕೂಡಿ ಬಂದ ಉತ್ತರದ ಸಂಖ್ಯೆಯನ್ನು ಒಂದಕ್ಕೊಂದು ಕೂಡಿ ನಿಮ್ಮ
>> ಅದೃಷ್ಟ ಸಂಖ್ಯೆಗೆ ಅದು ತಾಳೆಯಾಗುತ್ತದೆಯೇ ಎಂದು ಪರಿಶೀಲಿಸುತ್ತಾರೆ. ಇನ್ನೂ ಒಂದು ಹೆಜ್ಜೆ
>> ಮುಂದೆ ಹೋದವರು ಇಂಗ್ಲಿಷ್‌ ವರ್ಣಮಾಲೆಯಲ್ಲಿ ನಿಮ್ಮ ಹೆಸರಿನ ಅಕ್ಷ ರಗಳು ಯಾವ
>> ಅನುಕ್ರಮದಲ್ಲಿ ಬರುತ್ತದೆಯೋ ಅದಕ್ಕೊಂದು ಸಂಖ್ಯೆ ನೀಡಿ, ಅವುಗಳೆಲ್ಲವನ್ನೂ ಕೂಡಿ, ಮತ್ತೆ
>> ಕೂಡಿ ಮ್ಯಾಜಿಕ್‌ ಸಂಖ್ಯೆಯೊಂದನ್ನು ನಿಮಗೆ ಲಗತ್ತಿಸಿ ಅದು ನಿಮ್ಮ ರಾಶಿ-ನಕ್ಷ ತ್ರಕ್ಕೆ
>> ಸರಿ ಹೊಂದುವುದೋ ಇಲ್ಲವೋ ಎಂದು ತನಿಖೆ ಮಾಡಿಕೊಡುತ್ತಾರೆ. ಎಲೆಕ್ಷ ನ್‌ ಹತ್ತಿರ ಬಂದರೆ
>> ಯಡ್ಯೂರಪ್ಪ, ಈಶ್ವರಪ್ಪ, ಕುಮಾರಸ್ವಾಮಿ, ಸಿದ್ಧರಾಮಯ್ಯ, ಆಂಜನೇಯ, ಪರಮೇಶ್ವರ್‌,
>> ಡಿ.ಕೆ.ಶಿವಕುಮಾರ್‌ ಅವರ ಹುಟ್ಟಿದ ದಿನಾಂಕಗಳ ಜೊತೆಗೆ ಅವರ ಜನ್ಮರಾಶಿಯನ್ನು ಸ್ವಯಂಘೋಷಿತ
>> ಲೆಕ್ಕಾಚಾರಶಾಸ್ತ್ರಜ್ಞರಿಗೆ ಕೊಟ್ಟು, ಯಾರಿಗೆ 'ರಾಜ ಯೋಗ'ವಿದೆ, ಮತ್ಯಾರಿಗೆ 'ಅಮರ
>> ಯೋಗ'ವಿದೆ ಎಂಬುದನ್ನು ತಿಳಿಸಿ ವೀಕ್ಷ ಕರನ್ನು 'ಮಂಗ' ಮಾಡುತ್ತಾರೆ. ಬ್ರಹ್ಮಾಂಡವನ್ನೇ
>> ಅರಗಿಸಿಕೊಂಡ ಕಂಟಕರಂತೂ 'ಚೂಡೀದಾರ್‌ ಹಾಕ್ಕೊಂಡ್ರೆ ಸೆರ್ವಿಕಲ್‌ ಕ್ಯಾನ್ಸರ್‌ ಬರೋದು
>> ಗ್ಯಾರಂಟಿ' ಎಂದು ಘಂಟಾಘೋಷವಾಗಿ ನಿಮ್ಮ ಮಿದುಳನ್ನು ಕಲಿಸಿಹಾಕಿಬಿಡ್ತಾರೆ. ಉಳಿದಂತೆ
>> ಫುಟ್‌ಪಾತ್‌ನಲ್ಲಿ ಕವಡೆ ಹಾಕುತ್ತಿದ್ದವರೂ 'ಲ್ಯಾಪ್‌ಟಾಪ್‌ ಕಂಪ್ಯೂಟರ್‌'
>> ಮುಂದಿಟ್ಟುಕೊಂಡು, ನೀವು ಪ್ರಶ್ನೆ ಕೇಳಿದ ಸಮಯ, ನಿಮ್ಮ ಹುಟ್ಟಿದ ದಿನಾಂಕ, ಊರಿನ
>> ಅಕ್ಷಾಂಶ-ರೇಖಾಂಶ ಎಲ್ಲಾ ಕಲಸು ಮೇಲೋಗರಕ್ಕೆ ಒಂದು ವ್ಯಾಖ್ಯಾನ ನೀಡಿ, ಯಾವ ರತ್ನದ
>> ಉಂಗುರವನ್ನು, ಯಾವ ಬೆರಳಿಗೆ ಹಾಕಿಕೊಂಡು, ಯಾರ ಜಪ ಮಾಡಿದರೆ ನಿಮಗೆ ಉದ್ಯೋಗ, ವಿವಾಹ,
>> ಮಕ್ಕಳು, ಮನೆ ಭಾಗ್ಯ, ರೋಗ ನಿವಾರಣೆಯಾಗುತ್ತವೆಯೆಂಬ ಸುಲಭ ಪರಿಹಾರಗಳನ್ನು ನೀಡುವ
>> ಪಂಡಿತರಂತೆ ಪೋಸು ಕೊಡುತ್ತಾರೆ. ಬೇಕಿದ್ದರೆ ಯಾವ ಅಂಗಡಿಯಲ್ಲಿ ಯಾವ ಉಂಗುರ ಖರೀದಿಸುವುದು
>> ಉತ್ತಮ ಎಂಬ ಕನ್ಸಲ್ಟೇಶನ್‌ ನೀಡುತ್ತಾರೆ.
>>
>> ಅದ್ಯಾವ ಗಳಿಗೆಯಲ್ಲಿ ಈ 'ವಾಟ್ಸಪ್‌' ಅನ್ನೋ ಸೌಲಭ್ಯ ಬಂತೋ, ದುರದೃಷ್ಟದ ದಿನಗಳು
>> ನಮ್ಮನ್ನು ಸತತವಾಗಿ ಕಾಡುತ್ತಿವೆ. ಪುಕ್ಕಟೆ ಎಸ್ಸೆಮ್ಮೆಸ್‌ಗಳ ಮೂಲಕ ಹಳಸಲು ಜೋಕುಗಳ
>> ಚಿತ್ರಾನ್ನ ಬಡಿಸುತ್ತಿದ್ದವರೆಲ್ಲರೂ ಜಾಗೃತಗೊಂಡಿದ್ದಾರೆ. ದಿನಕ್ಕೊಂದು ಗೀಗಾಬೈಟ್‌
>> ಇಂಟರ್‌ನೆಟ್‌ ಸೌಲಭ್ಯವನ್ನು 'ಜಿಯೋ' ಕಂಪನಿ ಕೊಟ್ಟ ಮೇಲಂತೂ ವೀಡಿಯೋ ಹಾವಳಿ ಹೆಚ್ಚಾಗಿದೆ.
>> 'ಬಿ.ಬಿ.ಸಿ. ವರದಿ ಮಾಡಿದೆ. ನಾಸಾ ವೆಬ್‌ಸೈಟಲ್ಲಿ ಬೇಕಿದ್ರೆ ನೋಡಿ. ಇಂಥ ಗ್ರಹದಿಂದ ಹೊರಟ
>> ವಿಕಿರಣ ಇಷ್ಟು ಹೊತ್ತಿಗೆ ಭೂಮಿಯನ್ನು ಅಪ್ಪಳಿಸುತ್ತದೆ. ಮಕ್ಕಳನ್ನು ಆಚೆ ಕಳುಹಿಸಬೇಡಿ'
>> ಎಂಬ ಸುಳ್ಳು ಸಂದೇಶ ಒಬ್ಬರ ಮೊಬೈಲ್‌ ಫೋನಿಗೆ ಬಂದರೆ ಸಾಕು. ಅದನ್ನು ಪೂರ್ತಿ ಓದದೆಯೇ
>> ನೂರು ಜನರಿಗೆ ನೂರಕ್ಕೂ ಕಡಿಮೆ ನಿಮಿಷದಲ್ಲಿ ರವಾನಿಸಲು ಹೊರಡುತ್ತಾರೆ, 'ರೇಡಿಯೇಶನ್‌'
>> ಹಾಗೆಲ್ಲಾ ಇಷ್ಟು ದೂರ ಬರೋಕ್ಕೆ ಸಾಧ್ಯವಿಲ್ಲವೆಂದು ವಿಜ್ಞಾನ ತಿಳಿದ ಎಂಜಿನಿಯರಿಂಗ್‌
>> ವಿದ್ಯಾರ್ಥಿಗಳು. ದೊಡ್ಡ, ದೊಡ್ಡ ಸಾಫ್ಟ್‌ವೇರ್‌ ಕಂಪನಿಗಳಲ್ಲಿ ಉದ್ಯೋಗ ಮಾಡೋ
>> ಬ್ರಿಲಿಯಂಟ್‌ ಜನರೂ 'ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಣಿಸಿಕೊಂಡ ಎರಡು ತಲೆಯ ಹಾವಿನ ಬೋಗಸ್‌
>> ಡಿಜಿಟಲ್‌ ಚಿತ್ರವನ್ನು' ಹತ್ತು ಜನರಿಗೆ ರವಾನಿಸಿ 'ಸರ್ಪ ಸಂಸ್ಕಾರ ದೋಷ'ವನ್ನು
>> ಪರಿಹರಿಸಿಕೊಂಡು ಬಿಡುತ್ತಾರೆ. ಪ್ರತಿಯಾಗಿ ಅವರ ಮಿತ್ರರು 'ಕಣ್ಣು ಮಿಟುಕಿಸುವ ಶಿರಡಿ
>> ಸಾಯಿಬಾಬ ಚಿತ್ರ', 'ಗಣೇಶ್‌ಜಿ, ಹನುಮಾನ್‌ಜಿ'ಗಳ ಚಿತ್ರ, ಸಹಸ್ರನಾಮ, ಪುಣ್ಯಕತೆ, ಹರಿಕತೆ,
>> ಉಪಕತೆಗಳನ್ನು ಕ್ಷ ಣಾರ್ಧದಲ್ಲಿಯೇ ಹಂಚುತ್ತಾ ಹೊರಡುತ್ತಾರೆ. ಉಳಿದಂತೆ, 'ಇದು
>> ಮೈಕ್ರೋಸಾಫ್ಟು, ಹಾಟ್‌ಮೇಯ್ಲ್‌, ಯಾಹೂ, ಜೀಮೇಯ್ಲ್‌ ... ಕಂಪನಿಗಳು ನಡೆಸುತ್ತಿರುವ
>> ಸಮೀಕ್ಷೆ. ಇದರಲ್ಲಿ ಭಾಗಿಯಾಗೋ ಪ್ರತಿ ಸಾವಿರದ ವ್ಯಕ್ತಿಗೆ ಒಂದು ಲ್ಯಾಪ್‌ಟಾಪ್‌
>> ಕಂಪ್ಯೂಟರ್‌ ಇಲ್ಲವೆ ಸ್ಮಾರ್ಟ್‌ ಫೋನ್‌ ಕೊಡುಗೆಯಾಗಿ ಬರತ್ತೆ. ಮೇಯ್ಲ್‌ ಅನ್ನು ಮರು
>> ರವಾನಿಸಿ' ಅನ್ನೋ ಪತ್ರ ಇ-ಮೇಲ್‌ ಖಾತೆಗೆ ಬಂದೊಡನೆಯೆ ಉನ್ನತ, ಮಹೋನ್ನತ, ಅತ್ಯುನ್ನತ
>> ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಕಂಪನಿಗಳ 'ವಿಜ್ಞಾನ ಕಲಿತವರು' ಚಕಚಕನೆ ಪರಿಚಿತ
>> ನೂರು ಜನರಿಗೆ ಫಾರ್‌ವರ್ಡ್‌ ಮಾಡುತ್ತಾರೆ. ಥೇಟ್‌, 'ಸಂಗವ್ವಕ್ಕನ ಮುದ್ದಿನ ಸೊಸಿ, ಬಸಿರಾದ
>> ಸುದ್ದಿ'ಯ ರೀತಿ ಕಾಳಗಿಚ್ಚಿನಂತೆ ಅದು ಊರ ತುಂಬೆಲ್ಲಾ ಹಬ್ಬುತ್ತದೆ.
>>
>> ನಮ್ಮ ಸಾಧನೆ, ಕೇವಲ ವಿಜ್ಞಾನ ಕಲಿಯುವುದಷ್ಟೇ ಅಲ್ಲ, ಉತ್ತಮ ಅಂಕಗಳನ್ನು ಪಡೆದು, ಉನ್ನತ
>> ಪದವಿಗಳನ್ನು ಗಳಿಸಿ, ಪರಮೋಚ್ಛ ಉದ್ಯೋಗ ಹಿಡಿಯುವುದಷ್ಟೇ ಅಲ್ಲ, ಅವೆಲ್ಲವನ್ನೂ ಮೀರಿ
>> ಸಮುದಾಯದ ಪ್ರಗತಿಯತ್ತ ಸಾಗಬೇಕು. ಬುರುಡೆ ಸಂಗತಿಗಳನ್ನು ಯಾವ ವಿವೇಚನೆಯೂ ಇಲ್ಲದೆ
>> ಹಂಚುತ್ತಾ ಹೋಗುವ ಚಟವನ್ನು ಬಿಡಬೇಕು. ನಮ್ಮ ಸಂಪರ್ಕ ಸೌಕರ್ಯವು ವಿಜ್ಞಾನ ಕಲಿಯಲು, ಅರಿಯಲು
>> ಅವಕಾಶವಿರದವರನ್ನು ಜಾಗೃತಗೊಳಿಸುವಂತಾಗಬೇಕು. ಪ್ರಳಯವಾಗುವುದು ದಿಟವೇ ಆದಲ್ಲಿ, ಅದನ್ನು
>> ತಪ್ಪಿಸುವುದು ನಿಮ್ಮ ಟೀವಿ ಚಾನೆಲ್‌ಗಳ ಸ್ವಯಂಘೋಷಿತ ಗುರುಗಳೂ ಸೇರಿದಂತೆ ಯಾರಿಗೂ
>> ಸಾಧ್ಯವಿಲ್ಲ. ಇಂತದೊಂದು ಎಚ್ಚರಿಕೆಯಿಂದ ನಮಗೆ ಬಂದ ಮಾಹಿತಿಯನ್ನು ಹಂಚಿಕೊಳ್ಳುವುದು ಲೇಸು.
>> ಮೌಢ್ಯಬಿತ್ತುವ ಟೀವಿ ಕಾರ್ಯಕ್ರಮಗಳು ಯಾವುದೇ ಸಮಯದಲ್ಲಿ ಬಿತ್ತರವಾದರೂ ಚಕ್ಕೆಂದು ಆರಿಸಿ,
>> ಮನೆಮಂದಿಯನ್ನು, ವಿಶೇಷವಾಗಿ ಮಕ್ಕಳನ್ನು ಬೇರೆ ಉಪಯುಕ್ತ ಕಾರ್ಯಕ್ರಮಗಳತ್ತ ಗಮನ ಹರಿಸುವಂತೆ
>> ಮಾಡಿ.
>> Hareeshkumar K
>> GHS Huskuru
>> Malavalli TQ
>> Mandya Dt
>> 9880328224
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to