ನಿಮ್ಮ ಸುಧೀರ್ಘ ಲೇಖನ ಓದಲು ತುಂಬಾ ತಾಳ್ಮೆಯಿಂದ ಕೂರಬೇಕು On 22-Feb-2016 7:04 pm, "Siddaramappa s m Sri" <[email protected]> wrote:
> > 13-Jan-2015 > ಪ್ರಸಂಗ ೩: ನಿಯಮ ಉಲ್ಲಂಘನೆ > ನರಹಳ್ಳಿ ಬಾಲಸುಬ್ರಹ್ಮಣ್ಯ >  > ನಾನು ಅಧ್ಯಾಪಕನಾಗಿ ಕಾಲೇಜು ಸೇರಿದಾಗ ನಮಗೆ ಪ್ರಾಂಶುಪಾಲರಾಗಿದ್ದವರು ಹಿರಿಯರು, > ಅನುಭವಿಗಳು, ಅತ್ಯುತ್ತಮ ಅಧ್ಯಾಪಕರೆಂದು ಹೆಸರಾಗಿದ್ದವರು. ಶ್ರದ್ಧೆ ಅವರ ವ್ಯಕ್ತಿತ್ವದ > ಒಂದು ಭಾಗವಾಗಿತ್ತು. ಎಂದೂ ನಿಯಮ ಮೀರಿದವರಲ್ಲ. ನನ್ನ ವೃತ್ತಿ ಬದುಕಿನ ಆರಂಭದಲ್ಲಿಯೇ > ಅಂಥವರ ಒಡನಾಟ ಮಾರ್ಗದರ್ಶನ ಸಿಕ್ಕಿದ್ದು ಮುಂದಿನ ನನ್ನ ಹಾದಿಯನ್ನು ಸರಿಯಾಗಿ > ರೂಪಿಸಿಕೊಳ್ಳಲು ನೆರವಾಯಿತು. ಐವತ್ತು ದಾಟಿದ್ದ ಅವರನ್ನು ಎಲ್ಲರೂ ರಾಯರು ಎಂದೇ > ಕರೆಯುತ್ತಿದ್ದೆವು. ಅದೇನೂ ಅವರ ಹೆಸರಿನ ಭಾಗವಾಗಿರಲಿಲ್ಲ. ಯಾರೋ ಹಾಗೆ ಕರೆದದ್ದು ರೂಢಿಗೆ > ಬಂದಿತ್ತು. > ರಾಯರದು ನೀಳ ದೇಹ. ಕೂದಲನ್ನು ಎತ್ತಿ ಹಿಂದಕ್ಕೆ ಬಾಚುತ್ತಿದ್ದುದರಿಂದ ಮೊದಲೇ ಅಗಲವಾಗಿದ್ದ > ಹಣೆ ಮತ್ತಷ್ಟು ವಿಶಾಲವಾಗಿ ಕಾಣುತ್ತಿತ್ತು. ಮುಖ ತೊಳೆಯಲು ಹೆಚ್ಚು ನೀರು, ಸೋಪು > ಖರ್ಚಾಗುತ್ತದೆಂಬುದು ಸ್ವಾಮಿಯ ಅಂಬೋಣ. ಚೂಪಾದ ಮೂಗು, ಅದರ ಮೇಲೆ ಕನ್ನಡಕ. ಅವರು ನೋಡುವಾಗ > ಕೊಂಚ ತಲೆ ತಗ್ಗಿಸಿ ಕನ್ನಡಕದ ಮೇಲ್ತುದಿಯ ಮೂಲಕ ನೋಡುತ್ತಿದ್ದುದರಿಂದ ಅವರ ನೋಟ > ಅಗತ್ಯಕ್ಕಿಂತ ಹೆಚ್ಚು ತೀಕ್ಷ್ಣವಾಗಿರುತ್ತಿತ್ತು. ಸದಾ ಒಂದಲ್ಲ ಒಂದು ರೀತಿ ಉಪದೇಶ > ಮಾಡುವುದು ಅವರ ಸ್ವಭಾವ. > ಹಿಂದಿನ ಜನ್ಮದಲ್ಲಿ ಯಾವುದೋ ಮಠದ ಸ್ವಾಮಿಗಳಾಗಿದ್ದಿರಬೇಕೆಂಬುದು ನನ್ನ ಅನುಮಾನ. ಆದರೆ > ಸ್ವಾಮೀಜಿಗಳ ರೀತಿ ಮಠ ಕಟ್ಟಿ, ತಮ್ಮದೇ ಸಾಮ್ರಾಜ್ಯ ಸ್ಥಾಪಿಸುವ ಸ್ಥಾವರ ಸ್ವಭಾವ > ಅವರದಾಗಿರಲಿಲ್ಲ. ಎಲ್ಲದರಲ್ಲೂ ಅಚ್ಚುಕಟ್ಟುತನ, ಶಿಸ್ತಿನ ವ್ಯಕ್ತಿತ್ವ. ಜೊತೆಗೆ ನಾವೆಲ್ಲ > ಅವರಿಗಿಂತ ಬಹಳ ಕಿರಿಯರಾದುದರಿಂದ, ನಾವು ಅವರ ನೇರ ವಿದ್ಯಾರ್ಥಿಗಳಲ್ಲದಿದ್ದರೂ ಒಂದು ರೀತಿ > ವಿದ್ಯಾರ್ಥಿಗಳಿಗೆ ಹೇಳಿದಂತೆಯೇ ಬುದ್ಧಿ ಹೇಳುತ್ತಿದ್ದರು. ಒಂದು ಕಥೆಯಂತೂ ಅವರ ಬಾಯಿಂದ > ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಿತ್ತು. > ಅವರ ಪ್ರಾಂಶುಪಾಲರಾಗಿದ್ದ ಸುಬ್ಬರಾಯರು ಬಹಳ ಶಿಸ್ತಿನ ಮನುಷ್ಯರಂತೆ. ಅವರ ಬಗ್ಗೆ ಇವರಿಗೆ > ಆರಾಧ್ಯ ಭಾವ. ರಾಯರು ಒಮ್ಮೆ ಮೌಲ್ಯಮಾಪನ ಕೆಲಸಕ್ಕೆ ಹೋಗಿದ್ದಾಗ ಅವರ ಸೀನಿಯರ್ ಒಬ್ಬರು > ಒಬ್ಬ ವಿದ್ಯಾರ್ಥಿಯ ರಿಜಿಸ್ಟರ್ ನಂಬರ್ ಹಿಡಿದುಕೊಂಡು ಬಂದು ಆ ವಿದ್ಯಾರ್ಥಿಗೆ ಹೆಚ್ಚಿನ > ಅಂಕ ನೀಡಲು ಸೂಚಿಸಿದರಂತೆ. ಆಗಿನ್ನೂ ಕೋಡಿಂಗ್ ವ್ಯವಸ್ಥೆ ಇರಲಿಲ್ಲ. ರಾಯರು ಸುಬ್ಬರಾಯರ > ನೇರ ಶಿಷ್ಯರು, ಅವರ ಪ್ರಭಾವಕ್ಕೆ ಒಳಗಾದವರು. ಹೀಗಾಗಿ ಅದು ಸಾಧ್ಯವಿಲ್ಲವೆಂದು > ಖಡಾಖಂಡಿತವಾಗಿ ಹೇಳಿ ಹಿರಿಯ ಅಧ್ಯಾಪಕರ ಕೆಂಗಣ್ಣಿಗೆ ಗುರಿಯಾದರು. ಆದರೂ ತಾವು ತಪ್ಪು > ಮಾಡಲಿಲ್ಲವಲ್ಲ , ಒತ್ತಡಕ್ಕೆ ಒಳಗಾಗಿ ನ್ಯಾಯಮಾರ್ಗ ಬಿಡಲಿಲ್ಲವಲ್ಲ ಎಂದು ತಮ್ಮ ಬಗ್ಗೆ > ಹೆಮ್ಮೆಯೂ ಆಯಿತು. > ಈ ಸಂಗತಿಯನ್ನು ಅವರು ಒಮ್ಮೆ ತಮ್ಮ ಪ್ರಾಂಶುಪಾಲರಾದ ಸುಬ್ಬರಾಯರ ಬಳಿ ಹಂಚಿಕೊಂಡು ಅವರ > ಮೆಚ್ಚುಗೆಯ ಮಾತುಗಳನ್ನು ನಿರೀಕ್ಷಿಸಿದ್ದರು. ಸುಬ್ಬರಾಯರು ಘಟನೆಯ ವಿವರಗಳನ್ನೆಲ್ಲ ಕೇಳಿ, > ಕೊಂಚ ಹೊತ್ತು ಸುಮ್ಮನಿದ್ದು , ಅಸಮಾಧಾನದ ದನಿಯಲ್ಲಿ ‘ನೀನು ಇನ್ನೂ ಸುಧಾರಿಸಬೇಕು’ > ಅಂದರಂತೆ. ಇವರಿಗೆ ಆಶ್ಚರ್ಯ! ತಾನು ತಪ್ಪು ಮಾಡಿಲ್ಲ, ಅಲ್ಲದೆ ತಮ್ಮ ಬಳಿ ಬಂದವರು ಹಿರಿಯ > ಅಧ್ಯಾಪಕರಾದರೂ ಲೆಕ್ಕಿಸದೆ ನ್ಯಾಯಯುತವಾಗಿ ನಡೆದುಕೊಂಡಿದ್ದೇನೆ. ಮತ್ತೇನು ಸುಧಾರಿಸುವುದು? > ಸುಬ್ಬರಾಯರ ಪ್ರತಿಕ್ರಿಯೆಯಿಂದ ಇವರಿಗೂ ಅಸಮಾಧಾನವಾಯಿತು. > ಅದನ್ನು ತಮ್ಮ ದನಿಯಲ್ಲಿ ಸೂಚಿಸುತ್ತ ‘ನಾನೇನು ಅವರು ಹೇಳಿದಂತೆ ಹೆಚ್ಚು ಅಂಕ ಹಾಕಲಿಲ್ಲ’ > ಎಂದರಂತೆ. ಆಗ ಸುಬ್ಬರಾಯರು ಇವರನ್ನೇ ದಿಟ್ಟಿಸಿ ನೋಡಿ, ಮಂದಹಾಸ ಬೀರುತ್ತಾ ನಿಧಾನ > ಗತಿಯಲ್ಲಿ ‘ನೀನು ಅಂಕ ಹಾಕಲಿಲ್ಲ, ನಿಜ. ಆದರೆ ಅಂಕ ಹಾಕು ಅಂತ ನಿನ್ನನ್ನು ಕೇಳಬಹುದು ಎಂದು > ಆ ನೀಚನಿಗೆ ಅನ್ನಿಸಿತಲ್ಲ! ನಿನ್ನ ಹತ್ತಿರ ಅಂಥವರು ಸುಳಿಯಲೇಬಾರದು, ಹಾಗಿರಬೇಕು ನಿನ್ನ > ವ್ಯಕ್ತಿತ್ವ. ನಿಜ ಹೇಳುತ್ತೇನೆ ಇದುವರೆಗೆ ಯಾರೂ ನನ್ನನ್ನು ಹಾಗೆ ಕೇಳಿಲ್ಲ’ ಎಂದರಂತೆ. > ಸುಬ್ಬರಾಯರ ಆಲೋಚನಾರೀತಿಗೆ ರಾಯರು ಸ್ತಂಭೀಭೂತರಾಗಿ ಅಂದಿನಿಂದ ತಮ್ಮ ವ್ಯಕ್ತಿತ್ವವನ್ನು ಆ > ನಿಟ್ಟಿನಲ್ಲಿ ರೂಢಿಸಿಕೊಳ್ಳಲು ಪ್ರಯತ್ನಿಸಿದರಂತೆ. ರಾಯರೂ ಈಗ ನನಗೆ ಮತ್ತೊಬ್ಬ > ಸುಬ್ಬರಾಯರಂತೆಯೇ ಕಾಣಿಸುತ್ತಾರೆ. > ನನ್ನ ಬಗ್ಗೆ ರಾಯರಿಗೆ ವಿಶ್ವಾಸ. ಅದಕ್ಕೆ ಪ್ರಮುಖವಾಗಿ ಎರಡು ಕಾರಣಗಳು. ಮೊದಲನೆಯದು ಅವರ > ಕೊರೆತಕ್ಕೆ ನಾನು ಸದಾ ಕಿವಿಯಾಗಿರುತ್ತೇನೆ. ಬಹಳಷ್ಟು ಜನ ಅವರ ಕೊರೆತ ತಾಳಲಾರದೆ ದೂರ > ಸರಿಯುತ್ತಿದ್ದರು. ನಾನೂ ಪೂರ್ತಿ ಕೇಳಿಸಿಕೊಳ್ಳುತ್ತೇನೆ ಎಂದು ಹೇಳಲಾರೆ. ಕೆಲವೊಮ್ಮೆ > ಕೇಳಿದ ಹಾಗೆ ನಟಿಸುತ್ತಿದ್ದುದುಂಟು. ಆದರೆ ಅವರ ಜೊತೆ ಇರುತ್ತಿದ್ದೆ. ದೂರ > ಸರಿಯುತ್ತಿರಲಿಲ್ಲ. ಮತ್ತೊಂದು ಅವರ ಅನೇಕ ಯೋಜನೆಗಳು ನನಗೆ ಪ್ರಿಯ. ಅವುಗಳನ್ನೆಲ್ಲ > ಕಾಲೇಜಿನಲ್ಲಿ ಕಾರ್ಯರೂಪಕ್ಕೆ ತರಲು ಅವರ ಜೊತೆ ಸಹಕರಿಸುತ್ತೇನೆ. ಗಂಟೆಗಟ್ಟಲೆ ಅಲ್ಲ > ದಿನಗಟ್ಟಲೆ ಅವರ ಜೊತೆಯಲ್ಲಿ ಉತ್ಸಾಹದಿಂದ ಕೆಲಸ ಮಾಡಿದ್ದುಂಟು. ನನ್ನ ಈ ಉತ್ಸಾಹ > ಕ್ರಿಯಾಶೀಲತೆಯ ಬಗ್ಗೆ ಅವರಿಗೆ ಮೆಚ್ಚುಗೆ. ಹೀಗಾಗಿ ಅವರ ಎಲ್ಲ ಕೆಲಸಗಳಲ್ಲೂ ನಾನು > ಜೊತೆಗಿರಬೇಕೆಂದು ಬಯಸುತ್ತಿದ್ದರು. > ನಮ್ಮ ಕಾಲೇಜಿನಲ್ಲಿ ರಜಾ ದಿನಗಳಂದು ಸಾಮಾನ್ಯವಾಗಿ ಸ್ಪರ್ಧಾತ್ಮಕ > ಪರೀಕ್ಷೆಗಳಿರುತ್ತಿದ್ದವು. ನಮ್ಮ ಪ್ರಾಂಶುಪಾಲರು ಅವುಗಳನ್ನು ಅಚ್ಚುಕಟ್ಟಾಗಿ > ನಡೆಸುತ್ತಿದ್ದುದರಿಂದ ಎಲ್ಲ ಸಂಸ್ಥೆಗಳೂ ನಮ್ಮ ಕಾಲೇಜಿನಲ್ಲೇ ಪರೀಕ್ಷೆಗಳನ್ನು ನಡೆಸಲು > ಅಪೇಕ್ಷಿಸುತ್ತಿದ್ದರು. ರಾಯರಿಗೆ ಜವಾಬ್ದಾರಿ ವಹಿಸಿದರೆ ಸಂಸ್ಥೆಯವರು ನಿರಾತಂಕವಾಗಿ > ಇರಬಹುದಿತ್ತು. ಈ ಪರೀಕ್ಷೆಗಳನ್ನು ನಡೆಸಲು ಸಾಕಷ್ಟು ಸಿದ್ಧತೆ ಬೇಕಾಗುತ್ತಿತ್ತು. ಇಂಥ > ಆಹ್ವಾನ ಬಂದಾಗಲೆಲ್ಲ ರಾಯರು ಅವರ ಸಹಾಯಕನನ್ನಾಗಿ ನನ್ನನ್ನು ನೇಮಿಸಿಕೊಂಡು ಬಹುಪಾಲು > ಜವಾಬ್ದಾರಿಯನ್ನು ನನಗೇ ವಹಿಸುತ್ತಿದ್ದರು. ಇದರಿಂದ ನನಗೆ ಇತರರಿಗಿಂತ ಹೆಚ್ಚುಹಣ > ಬರುತ್ತಿದ್ದುದರಿಂದ , ಹಣದ ಅಗತ್ಯ ನನಗೆ ಬಹಳವಿದ್ದುದರಿಂದ ನಾನು ಸಂತೋಷದಿಂದಲೇ ಈ > ಜವಾಬ್ದಾರಿಯನ್ನು > ಒಪ್ಪಿಕೊಳ್ಳುತ್ತಿದ್ದೆ. ಸ್ವಾಮಿಯಾಗಲೀ ಗೋಪಾಲನಾಗಲೀ ಎಂದೂ ಇಂತಹ ಕೆಲಸಗಳನ್ನು > ಒಪ್ಪಿಕೊಳ್ಳುತ್ತಿರಲಿಲ್ಲ. ಅವರಿಗೆ ನನ್ನಂತೆ ಹಣದ ಅಗತ್ಯವಿರಲಿಲ್ಲ.ರಾಯರ > ಮಾರ್ಗದರ್ಶನದಲ್ಲಿ ಎಲ್ಲ ಕರ್ತವ್ಯಗಳನ್ನೂ ನಾನು ಸಮರ್ಥವಾಗಿ ನಿಭಾಯಿಸುತ್ತಿದ್ದೆ.ಹಲವೊಮ್ಮೆ > ಇದು ಇತರ ಕೆಲವು ಸಹೋದ್ಯೋಗಿಗಳ ಅಸಮಾಧಾನಕ್ಕೂ ಕಾರಣವಾಗುತ್ತಿತ್ತು. > ನನಗಿಂತ ಹಿರಿಯ ಅಧ್ಯಾಪಕರಿದ್ದರೂ ನನ್ನನ್ನೇ ತಮ್ಮ ಡೆಪ್ಯುಟಿಯನ್ನಾಗಿ ರಾಯರು > ತೆಗೆದುಕೊಳ್ಳುತ್ತಿದ್ದುದರಿಂದ ಕಾಲೇಜಿನಲ್ಲಿ ನನಗೆ ಒಂದು ರೀತಿಯ ಪ್ರಾಮುಖ್ಯತೆಯಿತ್ತು , > ಜೊತೆಗೆ ಹೆಚ್ಚಿನ ಹಣವೂ ದೊರಕುತ್ತಿತ್ತು. ಹಣದ ವಿಚಾರ ಹಾಗಿರಲಿ , ಸಿಗುತ್ತಿದ್ದ > ಪ್ರಾಮುಖ್ಯತೆಯನ್ನು ಹೇಗೆ ಸಹಿಸಿಕೊಳ್ಳುವುದು? ಆದರೆ ರಾಯರು ಇದಕ್ಕೆಲ್ಲ ತಲೆ > ಕೆಡಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಕೆಲಸ ಆಗಬೇಕಿತ್ತಷ್ಟೆ. ಆದರೆ ನನಗೆ ಕೆಲವೊಮ್ಮೆ > ಇದರಿಂದ ಇರಿಸುಮುರಿಸುಂಟಾಗುತ್ತಿತ್ತು. > ಆ ಒಂದು ಭಾನುವಾರವೂ ಸ್ಪರ್ಧಾತ್ಮಕ ಪರೀಕ್ಷೆಯಿತ್ತು. ಎಲ್ಲ ಸಿದ್ಧತೆ ಮಾಡಿಕೊಂಡು ನಾವು > ಸನ್ನದ್ಧರಾಗಿದ್ದೆವು. ಪರೀಕ್ಷೆ ಪ್ರಾರಂಭವಾಗುವ ಸೂಚನೆಯಾಗಿ ಲಾಂಗ್ ಬೆಲ್ ಆಯಿತು. ತಡವಾಗಿ > ಬರುವ ವಿದ್ಯಾರ್ಥಿಗಳನ್ನು ಒಳಸೇರಿಸದಂತೆ ಎಲ್ಲ ಗೇಟ್ ಗಳನ್ನು ಮುಚ್ಚಿಸಿ ರಾಯರು ಮುಖ್ಯ > ದ್ವಾರದ ಬಳಿಯೇ ಠಳಾಯಿಸುತ್ತಿದ್ದರು. ಅವರು ಹಾಗೆ ಠಳಾಯಿಸುವಾಗ ಹಿಂದಕ್ಕೆ ಕೈ ಕಟ್ಟಿ > ಎಲ್ಲವನ್ನೂ ಹದ್ದಿನ ಕಣ್ಣಿನಿಂದ ಸೂಕ್ಷ್ಮವಾಗಿ ಪರಿಶೀಲಿಸುತ್ತ ಶಿಸ್ತಿನ > ಸೈನ್ಯಾಧಿಕಾರಿಯಂತೆ ಕಾಣಿಸುತ್ತಾರೆ. ಅಷ್ಟರಲ್ಲಿ ಒಬ್ಬ ವಿದ್ಯಾರ್ಥಿ ಓಡೋಡಿ ಬರುವುದಕ್ಕೂ > ಗೇಟ್ ಮುಚ್ಚುವುದಕ್ಕೂ ಸರಿಯಾಯಿತು. ಆತ ಗೇಟಿನ ಆಚೆ ಉಳಿದ. ಅಟೆಂಡರ್ > ಗೇಟ್ ತೆಗೆದು ಆತನನ್ನು ಒಳಬಿಡಬೇಕೆನ್ನುವಷ್ಟರಲ್ಲಿ ರಾಯರು ಆಕ್ರಮಣಶೀಲರಾಗಿ ಅತ್ತ ಧಾವಿಸಿ > ಗೇಟ್ ತೆಗೆಯದಂತೆ ಸೂಚಿಸಿದರು. > ಆತ ಗೇಟಿನಾಚೆ ನಿಂತು ಆರ್ತನಾಗಿ ಪ್ರಾರ್ಥಿಸುತ್ತಿದ್ದ. ರಾಯರು ತಮ್ಮ ತೋರು ಬೆರಳನ್ನು > ಮುಂದೆ ಚಾಚಿ ಆತನನ್ನು ಕಾಲೇಜಿನಿಂದ ಹೊರ ಹೋಗಲು ಹೇಳುತ್ತಿದ್ದರು. ಆತ ಅಳುತ್ತಾ > ಬೇಡಿಕೊಳ್ಳುತ್ತಿದ್ದ. ಅಲ್ಲೇ ಅನತಿ ದೂರದಲ್ಲಿದ್ದ ನಾನು ಈ ವಿದ್ಯಮಾನಗಳನ್ನೆಲ್ಲಾ > ಗಮನಿಸುತ್ತಿದ್ದೆ. ತಕ್ಷಣ ನಾನು ಅಲ್ಲಿಗೆ ಧಾವಿಸಿ ಬಂದು, ಅಲ್ಲಿದ್ದ ರಾಯರನ್ನು > ಲೆಕ್ಕಿಸದೆ, ಗೇಟ್ ತೆಗೆಸಿ, ಆ ವಿದ್ಯಾರ್ಥಿ ಪರೀಕ್ಷಾಕೊಠಡಿಗೆ ಹೋಗಲು ಅವಕಾಶ ಮಾಡಿಕೊಟ್ಟೆ. > ರಾಯರು ಯಥಾಪ್ರಕಾರ ತಲೆ ಕೆಳಗೆಮಾಡಿ ಕನ್ನಡಕದ ಮೇಲ್ತುದಿಯಿಂದ ನನ್ನನ್ನು ಇರಿಯುವಂತೆ ನೋಡಿ > ಏನನ್ನೂ ಹೇಳದೆ ಅಲ್ಲಿಂದ ದಢದಢ ಹೆಜ್ಜೆ ಹಾಕುತ್ತಾ ತಮ್ಮ ಕೊಠಡಿಯತ್ತ ಹೊರಟು ಹೋದರು. > ಇದನ್ನು ಗಮನಿಸುತ್ತಿದ್ದ ಅಟೆಂಡರ್ ಹಾಗೂ ಕ್ಲರ್ಕ್ ಯಾವ ರೀತಿ ಪ್ರತಿಕ್ರಿಯಿಸಬೇಕೋ > ತಿಳಿಯದೆ ದಿಗ್ಬ್ರಾಂತರಾಗಿ ನಿಂತಿದ್ದರು. ನಾನೂ ಒಂದೆರಡು ಕ್ಷಣ ಗೊಂದಲಕ್ಕೆ ಒಳಗಾದರೂ > ತಕ್ಷಣ ಸಾವರಿಸಿಕೊಂಡು ಅಟೆಂಡರ್ ನತ್ತ ನೋಡಿ ನಕ್ಕು , ಎಲ್ಲ ಕೊಠಡಿಗಳ ಪರಿಶೀಲನೆಗೆ ಹೊರಟೆ. > ರಾಯರ ದೊಡ್ಡ ಗುಣವೆಂದರೆ ಅವರಿಗೆ ಯಾರ ಬಗ್ಗೆ ಎಷ್ಟೇ ಅಸಮಾಧಾನವಿದ್ದರೂ ಎಲ್ಲರೆದುರಿನಲ್ಲಿ > ಅದನ್ನು ವ್ಯಕ್ತಪಡಿಸುತ್ತಿರಲಿಲ್ಲ. ಸಮಯ ನೋಡಿ ವೈಯಕ್ತಿಕವಾಗಿ ಪ್ರಸ್ತಾಪಿಸಿ ತಮ್ಮ ಸಂಶಯ > ಪರಿಹರಿಸಿಕೊಳ್ಳುತ್ತಿದ್ದರು. ಅಗತ್ಯ ಬಿದ್ದರೆ ಎಚ್ಚರಿಕೆ ನೀಡುತ್ತಿದ್ದರು. ಕೆಲವೊಮ್ಮೆ > ಬುದ್ಧಿ ಹೇಳಿ ಮಾರ್ಗದರ್ಶನ ಮಾಡುತ್ತಿದ್ದರು. ಆ ದಿನ ನಂತರದ ಪರೀಕ್ಷೆಯ ಸಂದರ್ಭದಲ್ಲಿ > ರಾಯರು ಏನೂ ಆಗದವರಂತೆ ಸಹಜವಾಗಿಯೇ ನನ್ನೊಡನೆ ವರ್ತಿಸಿದರು. ನಾನೂ ಹಾಗೆಯೇ ಇದ್ದೆ. ಆದರೆ > ಅಷ್ಟರಲ್ಲಾಗಲೇ ಈ ಘಟನೆ ಸಹೋದ್ಯೋಗಿಗಳಲ್ಲಿ ಪಿಸುಮಾತಿಗೆ ಆಹಾರವಾಗಿತ್ತು. ನನಗೇನೋ ಕಾದಿದೆ > ಎಂಬಂತೆ ಕೆಲವರು ನನ್ನನ್ನು ಸಮಾಧಾನ ಪಡಿಸಲು ಅನಗತ್ಯ ಪ್ರಯತ್ನಿಸುತ್ತಿದ್ದರು. ಮತ್ತೆ > ಕೆಲವರಿಗೆ ಇದರಿಂದ ನಾನು ರಾಯರಿಂದ ದೂರವಾಗಬಹುದೆಂಬ ದೂರದ ಆಸೆ. > ಪರೀಕ್ಷೆಯ ಕೆಲಸಗಳೆಲ್ಲ ಮುಗಿದ ಮೇಲೆ ರಾಯರು ನನ್ನ ವಿಚಾರಣೆ ನಡೆಸುತ್ತಾರೆಂಬ ಖಚಿತ > ನಿರೀಕ್ಷೆಯಲ್ಲಿ ಕೆಲವರು ಅಲ್ಲೇ ಠಳಾಯಿಸುತ್ತಿದ್ದರು. ಆದರೆ ರಾಯರು ಅದನ್ನು ಮರೆತವರಂತೆ > ಎಂದಿನ ಹಾಗೆ ನನ್ನ ಜೊತೆಯೇ ಮನೆಯ ಕಡೆ ಹೊರಟರು. ದಾರಿಯಲ್ಲೂ ನನ್ನೊಡನೆ ಆ ಬಗ್ಗೆ > ಪ್ರಸ್ತಾಪಿಸಲಿಲ್ಲ. ಬೇರೇನೊ ಮಾತನಾಡುತ್ತಿದ್ದರು.ನಾನೂ ಸುಮ್ಮನಿದ್ದೆ. ಮಾರನೆಯ ದಿನವೂ > ಮಹಾಜನತೆಯ ಕುತೂಹಲ ಗರಿಗೆದರಿತ್ತು. ಅಂದೂ ಏನೂ ನಡೆಯದಿದ್ದಾಗ ಕ್ರಮೇಣ ಸಹೋದ್ಯೋಗಿಗಳ ಆ > ಘಟನೆಯ ಬಗೆಗಿನ ಆಸಕ್ತಿ ಕಡಿಮೆಯಾಯಿತು. ನಿರಾಸೆಯಿಂದ ಸುಮ್ಮನಾದರು. ಒಂದೆರಡು ದಿನಗಳು ಹಾಗೇ > ಕಳೆದವು. ನನಗೂ ರಾಯರು ಆ ಬಗ್ಗೆ ಪ್ರಸ್ತಾಪಿಸದಿರುವುದು ಆಶ್ಚರ್ಯವೆನ್ನಿಸಿತು. > ಒಂದು ವಾರ ಕಳೆದ ನಂತರ ಒಂದು ದಿನ ನನ್ನನ್ನು ಕರೆದು ತರಗತಿಗಳು ಮುಗಿದಾದ ಮೇಲೆ ಬಂದು > ನನ್ನನ್ನು ನೋಡಿ ಎಂದರು. ನನಗೀಗ ಖಚಿತವಾಯಿತು. ಅವರ ಆಕ್ರಮಣಕ್ಕೆ ನಾನೂ ಮಾನಸಿಕವಾಗಿ > ಸಿದ್ಧವಾಗತೊಡಗಿದೆ. ನನ್ನ ನಿಲುವಿನ ಬಗ್ಗೆ ನನ್ನೊಳಗೇ ಮತ್ತೊಮ್ಮೆ ಪರಿಶೀಲಿಸಿಕೊಂಡೆ. > ರಾಯರನ್ನು ಭೇಟಿಯಾದಾಗ ಅವರು ಸಹಜವೆಂಬಂತೆ ಲೋಕಾಬಿsರಾಮವಾಗಿ ಮಾತನಾಡುತ್ತ ಒಂದು ಕ್ಷಣ > ಮೌನವಾಗಿದ್ದು ನಂತರ ಆ ದಿನದ ಘಟನೆಯನ್ನು ಪ್ರಸ್ತಾಪಿಸಿದರು. > ‘ಆ ಹುಡುಗ ನಿಮಗೆ ಗೊತ್ತಾ’ ಎಂದರು. ನಾನು ಅವರನ್ನೇ ದಿಟ್ಟಿಸಿ ನೋಡಿ ಇಲ್ಲ ಎಂದೆ. ಅವರೂ > ತಮ್ಮ ಎಂದಿನ ರೀತಿಯಲ್ಲಿ ತಲೆ ಕೆಳಗೆ ಮಾಡಿ ಕನ್ನಡಕದ ಮೇಲ್ತುದಿಯಿಂದ ಇರಿಯುವಂತೆ > ನೋಡುತ್ತಾ ‘ನಿಮ್ಮ ಆ ದಿನದ ನಡವಳಿಕೆ ಉದ್ಧಟತನದ್ದು ಅನ್ನಿಸುವುದಿಲ್ಲವೇ? ನನ್ನನ್ನು > ನಿರ್ಲಕ್ಷಿಸಿ ನೀವು ಹಾಗೆ ಮಾಡಿದ್ದು ಅವಿನಯ ಮಾತ್ರವಲ್ಲ ಅಶಿಸ್ತೂ ಹೌದು ಬದುಕಿನಲ್ಲಿ > ಶಿಸ್ತು ಮುಖ್ಯ’ ...... ಅವರ ಮಾತಿನ > ಪ್ರವಾಹ ಹರಿಯುತ್ತಲೇ ಇತ್ತು. > ನಾನು ಆ ಪ್ರವಾಹವನ್ನು ಅರ್ಧದಲ್ಲೇ ತಡೆದು ತಣ್ಣಗಿನ ದನಿಯಲ್ಲಿ ‘ಅದು ನೀವೇ ಕಲಿಸಿದ ಪಾಠ’ > ಎಂದೆ. ನನ್ನ ಮುಖದಲ್ಲಿ ನನಗೇ ತಿಳಿಯದಂತೆ ಒಂದು ಮಂದಹಾಸವಿತ್ತು. ರಾಯರು ಒಂದು ಕ್ಷಣ > ಗೊಂದಲಕ್ಕೊಳಗಾದರು. ಅವರ ಆಕ್ರಮಣಕ್ಕೆ ನಾನು ಅಧೀರನಾಗಿ ಕ್ಷಮೆ ಯಾಚಿಸುತ್ತೇನೆಂಬುದು ಅವರ > ನಿರೀಕ್ಷೆಯಾಗಿತ್ತು. ಒಂದು ಸಣ್ಣ ಉಪದೇಶ ನೀಡಿ ಕ್ಷಮೆ ನೀಡಲೂ ಸಿದ್ಧರಿದ್ದರು. ಆದರೆ ನನ್ನ > ಪ್ರತಿಕ್ರಿಯೆ ಅವರಿಗೆ ಅನಿರೀಕ್ಷಿತವಾಗಿತ್ತು. ಯಥಾಪ್ರಕಾರ ಕನ್ನಡಕದ ಮೇಲ್ತುದಿಯಿಂದ > ತೀಕ್ಷ್ಣವಾಗಿ ನೋಡುತ್ತಾ ಮೌನವಾಗಿಯೇ ಪ್ರಶ್ನಾರ್ಥಕ ನೋಟ ಬೀರಿದರು. > ನಾನು ಹಿಂದಿನ ಪ್ರಸಂಗವೊಂದನ್ನು ನೆನಪಿಸಿದೆ. ಒಮ್ಮೆ ಒಬ್ಬ ವಿದ್ಯಾರ್ಥಿ ಅನುಚಿತವಾಗಿ > ವರ್ತಿಸಿದ್ದ. ಅವನೆಂದೂ ನಿಯಮಿತವಾಗಿ ತರಗತಿಗೆ ಬಂದವನಲ್ಲ. ಒಮ್ಮೊಮ್ಮೆ ಬಂದರೂ ಅವನದು > ಏನೆಲ್ಲ ತರಲೆ. ಕೆಲವು ಅಧ್ಯಾಪಕರಿಗೆ ಅವನಿಂದಾಗಿ ಪಾಠ ಮಾಡುವುದೂ ಕಷ್ಟವಾಗುತ್ತಿತ್ತು. > ಒಮ್ಮೆಯಂತೂ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ನಾವೆಲ್ಲ > ಅಧ್ಯಾಪಕರು ಸೇರಿ ಆತನನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಬೇಕೆಂದು ರಾಯರನ್ನು > ಒತ್ತಾಯಿಸಿದ್ದೆವು. ರಾಯರದು ಕೆಲವೊಮ್ಮೆ ನಿಧಾನ ಪ್ರವೃತ್ತಿ. ನಮ್ಮ ಅಹವಾಲಿಗೆ ಅವರು > ಮೌನವಾಗಿದ್ದರು. ಆಗ ನಾವೆಲ್ಲ ಆತನ ಮೇಲೆ ಕ್ರಮ ಕೈಗೊಳ್ಳದಿದ್ದರೆ ಯಾರೂ ತರಗತಿಗಳನ್ನು > ತೆಗೆದುಕೊಳ್ಳುವುದಿಲ್ಲವೆಂದು ಪ್ರತಿಭಟನೆಯ ದನಿಯಲ್ಲಿ ಸೂಚಿಸಿದೆವು. > ಆದರೆ ಆ ವೇಳೆಗಾಗಲೇ ರಾಯರು ಅವನನ್ನು ಕರೆದು ಮಾತನಾಡಿದ್ದರು. ಅವನಿಗೆ ಬುದ್ಧಿ ಹೇಳಿ > ಇನ್ನು ಮುಂದೆ ಸರಿಯಾಗಿ ನಡೆದುಕೊಳ್ಳುವಂತೆ ಸೂಚಿಸಿದ್ದರು. ನಮ್ಮನ್ನೆಲ್ಲ ಕರೆದು ಆತ > ಬದಲಾಗಲು ಅವಕಾಶ ನೀಡಬೇಕೆಂದು ತಿಳಿಯ ಹೇಳಿದರು. ನಾವು ಪಟ್ಟು ಬಿಡದಿದ್ದಾಗ ‘ನಿಮ್ಮ > ತಮ್ಮನೋ, ತಂಗಿಯೋ ತಪ್ಪು ಮಾಡಿದರೆ ಮನೆಯಿಂದ ಓಡಿಸಿ ಬಿಡುತ್ತೀರಾ’ ಎಂದು ಕೇಳಿ ನಮ್ಮ ಬಾಯಿ > ಮುಚ್ಚಿಸಿದ್ದರು. ಶಿಕ್ಷೆಯೇ ಎಲ್ಲಕ್ಕೂ ಪರಿಹಾರವಲ್ಲ ಎಂದು ವಾದಿಸಿದ್ದರು. > ನಾನು ಆ ಪ್ರಸಂಗವನ್ನು ಪ್ರಸ್ತಾಪಿಸಿ ‘ಈ ವಿದ್ಯಾರ್ಥಿ ಒಂದೆರಡು ನಿಮಿಷ ತಡವಾಗಿ ಬಂದದ್ದು > ನಿಜ. ಅವಧಿ ಮೀರಿ ಬಂದ ವಿದ್ಯಾರ್ಥಿಗಳನ್ನು ನಾವು ಒಳಬಿಡಬಾರದೆಂಬುದೂ ನನಗೆ ಗೊತ್ತು. ಹಾಗೆ > ಬಿಡುತ್ತಾ ಹೋದರೆ ಪರೀಕ್ಷೆಯನ್ನೇ ನಡೆಸಲಾಗುವುದಿಲ್ಲವೆಂಬುದನ್ನೂ ನಾನು ಬಲ್ಲೆ. ಒಂದು > ವ್ಯವಸ್ಥೆಯೆಂದ ಮೇಲೆ ನಿಯಮಗಳು ಇರಲೇಬೇಕು. ಅವುಗಳನ್ನು ನಾವು ಪರಿಪಾಲಿಸಲೇಬೇಕು. ಆದರೆ ಈ > ಪ್ರಸಂಗ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂಥದಲ್ಲ. ಮಾನವೀಯತೆಯ ಪ್ರಶ್ನೆಯಷ್ಟೆ’ ಎಂದು > ಅವರನ್ನೇ ದಿಟ್ಟಿಸಿ ನೋಡಿದೆ. > ಈಗವರ ಹುಬ್ಬು ಸಡಿಲಾಗಿತ್ತು. ನೋಟ ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡಿತ್ತು. ನಿಧಾನ > ಎದ್ದು ಬಂದು ನನ್ನ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಮೆಲ್ಲಗೆ ಅದುಮಿ ‘ನಿಮ್ಮ ಈ ನಿಲವು > ಸದಾ ಹೀಗೆಯೇ ಇರಲಿ’ ಎಂದು ಹಾರೈಸಿ ಹೊರನಡೆದರು. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAJCvfyXdsL1ZYP3YMv1768XOoB6Tz%2BaFV8-Pui0Q9L9Uj7AV7A%40mail.gmail.com > <https://groups.google.com/d/msgid/socialsciencestf/CAJCvfyXdsL1ZYP3YMv1768XOoB6Tz%2BaFV8-Pui0Q9L9Uj7AV7A%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CACwGsz6fa%2BdLu2V7mLx5xw1dTp1Nq0o4_iE2QdR8iOgn0fcTPQ%40mail.gmail.com. For more options, visit https://groups.google.com/d/optout.
