ನನ್ನ ಅಭಿಪ್ರಾಯ ವೇನೆಂದರೆ ಕೆಲವು ಶಿಕ್ಷಕರು ಓದಲೇಬೇಕು ಮತ್ತು ತಮ್ಮ ಪ್ರಸ್ತುತ ನಿಲುವನ್ನು ತಾವೇ ಪ್ರಶ್ನಿಶಿಕೊಳ್ಳಬೇಕು. ಸಿದ್ದರಾಮಪ್ಪರವರು ಪರೋಕ್ಷವಾಗಿ ಗ್ರೂಪ್ ನ ಶಿಕ್ಷಕರಿಗೆ ಹಿರಿಯರಾಗಿ ಅವರ ರಾಯರಂತೆ ತಿಳಿ ಹೇಳುತ್ತಿದ್ದಾರೋ ಅನ್ನಿಸುತ್ತಿದೆ. ಸರ್ ನಿಮ್ಮಂತಹ ಹಿರಿಯರ ಸೂಚನೆ ಸಲಹೆಗಳು ನಮಗೆ ದಾರಿ ದೀಪ ಸರ್. ಮುಂದಕ್ಕೂ ಹಿಗೆಯೇ ಲೇಖನಗಳು ಹರಿದು ಬರಲಿ.
*ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: [email protected] blog:NammaBellare.blogspot.com school blog:* gpucbellare.blogspot.com <http://gpucbellare.blogspot.com>* mobile: 9449592475 2016-02-22 20:20 GMT+05:30 Basavaraja Naika H.D. < [email protected]>: > ನಿಮ್ಮ ಸುಧೀರ್ಘ ಲೇಖನ ಓದಲು ತುಂಬಾ ತಾಳ್ಮೆಯಿಂದ ಕೂರಬೇಕು > On 22-Feb-2016 7:04 pm, "Siddaramappa s m Sri" <[email protected]> > wrote: > >> >> 13-Jan-2015 >> ಪ್ರಸಂಗ ೩: ನಿಯಮ ಉಲ್ಲಂಘನೆ >> ನರಹಳ್ಳಿ ಬಾಲಸುಬ್ರಹ್ಮಣ್ಯ >>  >> ನಾನು ಅಧ್ಯಾಪಕನಾಗಿ ಕಾಲೇಜು ಸೇರಿದಾಗ ನಮಗೆ ಪ್ರಾಂಶುಪಾಲರಾಗಿದ್ದವರು ಹಿರಿಯರು, >> ಅನುಭವಿಗಳು, ಅತ್ಯುತ್ತಮ ಅಧ್ಯಾಪಕರೆಂದು ಹೆಸರಾಗಿದ್ದವರು. ಶ್ರದ್ಧೆ ಅವರ ವ್ಯಕ್ತಿತ್ವದ >> ಒಂದು ಭಾಗವಾಗಿತ್ತು. ಎಂದೂ ನಿಯಮ ಮೀರಿದವರಲ್ಲ. ನನ್ನ ವೃತ್ತಿ ಬದುಕಿನ ಆರಂಭದಲ್ಲಿಯೇ >> ಅಂಥವರ ಒಡನಾಟ ಮಾರ್ಗದರ್ಶನ ಸಿಕ್ಕಿದ್ದು ಮುಂದಿನ ನನ್ನ ಹಾದಿಯನ್ನು ಸರಿಯಾಗಿ >> ರೂಪಿಸಿಕೊಳ್ಳಲು ನೆರವಾಯಿತು. ಐವತ್ತು ದಾಟಿದ್ದ ಅವರನ್ನು ಎಲ್ಲರೂ ರಾಯರು ಎಂದೇ >> ಕರೆಯುತ್ತಿದ್ದೆವು. ಅದೇನೂ ಅವರ ಹೆಸರಿನ ಭಾಗವಾಗಿರಲಿಲ್ಲ. ಯಾರೋ ಹಾಗೆ ಕರೆದದ್ದು ರೂಢಿಗೆ >> ಬಂದಿತ್ತು. >> ರಾಯರದು ನೀಳ ದೇಹ. ಕೂದಲನ್ನು ಎತ್ತಿ ಹಿಂದಕ್ಕೆ ಬಾಚುತ್ತಿದ್ದುದರಿಂದ ಮೊದಲೇ >> ಅಗಲವಾಗಿದ್ದ ಹಣೆ ಮತ್ತಷ್ಟು ವಿಶಾಲವಾಗಿ ಕಾಣುತ್ತಿತ್ತು. ಮುಖ ತೊಳೆಯಲು ಹೆಚ್ಚು ನೀರು, >> ಸೋಪು ಖರ್ಚಾಗುತ್ತದೆಂಬುದು ಸ್ವಾಮಿಯ ಅಂಬೋಣ. ಚೂಪಾದ ಮೂಗು, ಅದರ ಮೇಲೆ ಕನ್ನಡಕ. ಅವರು >> ನೋಡುವಾಗ ಕೊಂಚ ತಲೆ ತಗ್ಗಿಸಿ ಕನ್ನಡಕದ ಮೇಲ್ತುದಿಯ ಮೂಲಕ ನೋಡುತ್ತಿದ್ದುದರಿಂದ ಅವರ ನೋಟ >> ಅಗತ್ಯಕ್ಕಿಂತ ಹೆಚ್ಚು ತೀಕ್ಷ್ಣವಾಗಿರುತ್ತಿತ್ತು. ಸದಾ ಒಂದಲ್ಲ ಒಂದು ರೀತಿ ಉಪದೇಶ >> ಮಾಡುವುದು ಅವರ ಸ್ವಭಾವ. >> ಹಿಂದಿನ ಜನ್ಮದಲ್ಲಿ ಯಾವುದೋ ಮಠದ ಸ್ವಾಮಿಗಳಾಗಿದ್ದಿರಬೇಕೆಂಬುದು ನನ್ನ ಅನುಮಾನ. ಆದರೆ >> ಸ್ವಾಮೀಜಿಗಳ ರೀತಿ ಮಠ ಕಟ್ಟಿ, ತಮ್ಮದೇ ಸಾಮ್ರಾಜ್ಯ ಸ್ಥಾಪಿಸುವ ಸ್ಥಾವರ ಸ್ವಭಾವ >> ಅವರದಾಗಿರಲಿಲ್ಲ. ಎಲ್ಲದರಲ್ಲೂ ಅಚ್ಚುಕಟ್ಟುತನ, ಶಿಸ್ತಿನ ವ್ಯಕ್ತಿತ್ವ. ಜೊತೆಗೆ ನಾವೆಲ್ಲ >> ಅವರಿಗಿಂತ ಬಹಳ ಕಿರಿಯರಾದುದರಿಂದ, ನಾವು ಅವರ ನೇರ ವಿದ್ಯಾರ್ಥಿಗಳಲ್ಲದಿದ್ದರೂ ಒಂದು ರೀತಿ >> ವಿದ್ಯಾರ್ಥಿಗಳಿಗೆ ಹೇಳಿದಂತೆಯೇ ಬುದ್ಧಿ ಹೇಳುತ್ತಿದ್ದರು. ಒಂದು ಕಥೆಯಂತೂ ಅವರ ಬಾಯಿಂದ >> ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಿತ್ತು. >> ಅವರ ಪ್ರಾಂಶುಪಾಲರಾಗಿದ್ದ ಸುಬ್ಬರಾಯರು ಬಹಳ ಶಿಸ್ತಿನ ಮನುಷ್ಯರಂತೆ. ಅವರ ಬಗ್ಗೆ ಇವರಿಗೆ >> ಆರಾಧ್ಯ ಭಾವ. ರಾಯರು ಒಮ್ಮೆ ಮೌಲ್ಯಮಾಪನ ಕೆಲಸಕ್ಕೆ ಹೋಗಿದ್ದಾಗ ಅವರ ಸೀನಿಯರ್ ಒಬ್ಬರು >> ಒಬ್ಬ ವಿದ್ಯಾರ್ಥಿಯ ರಿಜಿಸ್ಟರ್ ನಂಬರ್ ಹಿಡಿದುಕೊಂಡು ಬಂದು ಆ ವಿದ್ಯಾರ್ಥಿಗೆ ಹೆಚ್ಚಿನ >> ಅಂಕ ನೀಡಲು ಸೂಚಿಸಿದರಂತೆ. ಆಗಿನ್ನೂ ಕೋಡಿಂಗ್ ವ್ಯವಸ್ಥೆ ಇರಲಿಲ್ಲ. ರಾಯರು ಸುಬ್ಬರಾಯರ >> ನೇರ ಶಿಷ್ಯರು, ಅವರ ಪ್ರಭಾವಕ್ಕೆ ಒಳಗಾದವರು. ಹೀಗಾಗಿ ಅದು ಸಾಧ್ಯವಿಲ್ಲವೆಂದು >> ಖಡಾಖಂಡಿತವಾಗಿ ಹೇಳಿ ಹಿರಿಯ ಅಧ್ಯಾಪಕರ ಕೆಂಗಣ್ಣಿಗೆ ಗುರಿಯಾದರು. ಆದರೂ ತಾವು ತಪ್ಪು >> ಮಾಡಲಿಲ್ಲವಲ್ಲ , ಒತ್ತಡಕ್ಕೆ ಒಳಗಾಗಿ ನ್ಯಾಯಮಾರ್ಗ ಬಿಡಲಿಲ್ಲವಲ್ಲ ಎಂದು ತಮ್ಮ ಬಗ್ಗೆ >> ಹೆಮ್ಮೆಯೂ ಆಯಿತು. >> ಈ ಸಂಗತಿಯನ್ನು ಅವರು ಒಮ್ಮೆ ತಮ್ಮ ಪ್ರಾಂಶುಪಾಲರಾದ ಸುಬ್ಬರಾಯರ ಬಳಿ ಹಂಚಿಕೊಂಡು ಅವರ >> ಮೆಚ್ಚುಗೆಯ ಮಾತುಗಳನ್ನು ನಿರೀಕ್ಷಿಸಿದ್ದರು. ಸುಬ್ಬರಾಯರು ಘಟನೆಯ ವಿವರಗಳನ್ನೆಲ್ಲ ಕೇಳಿ, >> ಕೊಂಚ ಹೊತ್ತು ಸುಮ್ಮನಿದ್ದು , ಅಸಮಾಧಾನದ ದನಿಯಲ್ಲಿ ‘ನೀನು ಇನ್ನೂ ಸುಧಾರಿಸಬೇಕು’ >> ಅಂದರಂತೆ. ಇವರಿಗೆ ಆಶ್ಚರ್ಯ! ತಾನು ತಪ್ಪು ಮಾಡಿಲ್ಲ, ಅಲ್ಲದೆ ತಮ್ಮ ಬಳಿ ಬಂದವರು ಹಿರಿಯ >> ಅಧ್ಯಾಪಕರಾದರೂ ಲೆಕ್ಕಿಸದೆ ನ್ಯಾಯಯುತವಾಗಿ ನಡೆದುಕೊಂಡಿದ್ದೇನೆ. ಮತ್ತೇನು ಸುಧಾರಿಸುವುದು? >> ಸುಬ್ಬರಾಯರ ಪ್ರತಿಕ್ರಿಯೆಯಿಂದ ಇವರಿಗೂ ಅಸಮಾಧಾನವಾಯಿತು. >> ಅದನ್ನು ತಮ್ಮ ದನಿಯಲ್ಲಿ ಸೂಚಿಸುತ್ತ ‘ನಾನೇನು ಅವರು ಹೇಳಿದಂತೆ ಹೆಚ್ಚು ಅಂಕ ಹಾಕಲಿಲ್ಲ’ >> ಎಂದರಂತೆ. ಆಗ ಸುಬ್ಬರಾಯರು ಇವರನ್ನೇ ದಿಟ್ಟಿಸಿ ನೋಡಿ, ಮಂದಹಾಸ ಬೀರುತ್ತಾ ನಿಧಾನ >> ಗತಿಯಲ್ಲಿ ‘ನೀನು ಅಂಕ ಹಾಕಲಿಲ್ಲ, ನಿಜ. ಆದರೆ ಅಂಕ ಹಾಕು ಅಂತ ನಿನ್ನನ್ನು ಕೇಳಬಹುದು ಎಂದು >> ಆ ನೀಚನಿಗೆ ಅನ್ನಿಸಿತಲ್ಲ! ನಿನ್ನ ಹತ್ತಿರ ಅಂಥವರು ಸುಳಿಯಲೇಬಾರದು, ಹಾಗಿರಬೇಕು ನಿನ್ನ >> ವ್ಯಕ್ತಿತ್ವ. ನಿಜ ಹೇಳುತ್ತೇನೆ ಇದುವರೆಗೆ ಯಾರೂ ನನ್ನನ್ನು ಹಾಗೆ ಕೇಳಿಲ್ಲ’ ಎಂದರಂತೆ. >> ಸುಬ್ಬರಾಯರ ಆಲೋಚನಾರೀತಿಗೆ ರಾಯರು ಸ್ತಂಭೀಭೂತರಾಗಿ ಅಂದಿನಿಂದ ತಮ್ಮ ವ್ಯಕ್ತಿತ್ವವನ್ನು ಆ >> ನಿಟ್ಟಿನಲ್ಲಿ ರೂಢಿಸಿಕೊಳ್ಳಲು ಪ್ರಯತ್ನಿಸಿದರಂತೆ. ರಾಯರೂ ಈಗ ನನಗೆ ಮತ್ತೊಬ್ಬ >> ಸುಬ್ಬರಾಯರಂತೆಯೇ ಕಾಣಿಸುತ್ತಾರೆ. >> ನನ್ನ ಬಗ್ಗೆ ರಾಯರಿಗೆ ವಿಶ್ವಾಸ. ಅದಕ್ಕೆ ಪ್ರಮುಖವಾಗಿ ಎರಡು ಕಾರಣಗಳು. ಮೊದಲನೆಯದು ಅವರ >> ಕೊರೆತಕ್ಕೆ ನಾನು ಸದಾ ಕಿವಿಯಾಗಿರುತ್ತೇನೆ. ಬಹಳಷ್ಟು ಜನ ಅವರ ಕೊರೆತ ತಾಳಲಾರದೆ ದೂರ >> ಸರಿಯುತ್ತಿದ್ದರು. ನಾನೂ ಪೂರ್ತಿ ಕೇಳಿಸಿಕೊಳ್ಳುತ್ತೇನೆ ಎಂದು ಹೇಳಲಾರೆ. ಕೆಲವೊಮ್ಮೆ >> ಕೇಳಿದ ಹಾಗೆ ನಟಿಸುತ್ತಿದ್ದುದುಂಟು. ಆದರೆ ಅವರ ಜೊತೆ ಇರುತ್ತಿದ್ದೆ. ದೂರ >> ಸರಿಯುತ್ತಿರಲಿಲ್ಲ. ಮತ್ತೊಂದು ಅವರ ಅನೇಕ ಯೋಜನೆಗಳು ನನಗೆ ಪ್ರಿಯ. ಅವುಗಳನ್ನೆಲ್ಲ >> ಕಾಲೇಜಿನಲ್ಲಿ ಕಾರ್ಯರೂಪಕ್ಕೆ ತರಲು ಅವರ ಜೊತೆ ಸಹಕರಿಸುತ್ತೇನೆ. ಗಂಟೆಗಟ್ಟಲೆ ಅಲ್ಲ >> ದಿನಗಟ್ಟಲೆ ಅವರ ಜೊತೆಯಲ್ಲಿ ಉತ್ಸಾಹದಿಂದ ಕೆಲಸ ಮಾಡಿದ್ದುಂಟು. ನನ್ನ ಈ ಉತ್ಸಾಹ >> ಕ್ರಿಯಾಶೀಲತೆಯ ಬಗ್ಗೆ ಅವರಿಗೆ ಮೆಚ್ಚುಗೆ. ಹೀಗಾಗಿ ಅವರ ಎಲ್ಲ ಕೆಲಸಗಳಲ್ಲೂ ನಾನು >> ಜೊತೆಗಿರಬೇಕೆಂದು ಬಯಸುತ್ತಿದ್ದರು. >> ನಮ್ಮ ಕಾಲೇಜಿನಲ್ಲಿ ರಜಾ ದಿನಗಳಂದು ಸಾಮಾನ್ಯವಾಗಿ ಸ್ಪರ್ಧಾತ್ಮಕ >> ಪರೀಕ್ಷೆಗಳಿರುತ್ತಿದ್ದವು. ನಮ್ಮ ಪ್ರಾಂಶುಪಾಲರು ಅವುಗಳನ್ನು ಅಚ್ಚುಕಟ್ಟಾಗಿ >> ನಡೆಸುತ್ತಿದ್ದುದರಿಂದ ಎಲ್ಲ ಸಂಸ್ಥೆಗಳೂ ನಮ್ಮ ಕಾಲೇಜಿನಲ್ಲೇ ಪರೀಕ್ಷೆಗಳನ್ನು ನಡೆಸಲು >> ಅಪೇಕ್ಷಿಸುತ್ತಿದ್ದರು. ರಾಯರಿಗೆ ಜವಾಬ್ದಾರಿ ವಹಿಸಿದರೆ ಸಂಸ್ಥೆಯವರು ನಿರಾತಂಕವಾಗಿ >> ಇರಬಹುದಿತ್ತು. ಈ ಪರೀಕ್ಷೆಗಳನ್ನು ನಡೆಸಲು ಸಾಕಷ್ಟು ಸಿದ್ಧತೆ ಬೇಕಾಗುತ್ತಿತ್ತು. ಇಂಥ >> ಆಹ್ವಾನ ಬಂದಾಗಲೆಲ್ಲ ರಾಯರು ಅವರ ಸಹಾಯಕನನ್ನಾಗಿ ನನ್ನನ್ನು ನೇಮಿಸಿಕೊಂಡು ಬಹುಪಾಲು >> ಜವಾಬ್ದಾರಿಯನ್ನು ನನಗೇ ವಹಿಸುತ್ತಿದ್ದರು. ಇದರಿಂದ ನನಗೆ ಇತರರಿಗಿಂತ ಹೆಚ್ಚುಹಣ >> ಬರುತ್ತಿದ್ದುದರಿಂದ , ಹಣದ ಅಗತ್ಯ ನನಗೆ ಬಹಳವಿದ್ದುದರಿಂದ ನಾನು ಸಂತೋಷದಿಂದಲೇ ಈ >> ಜವಾಬ್ದಾರಿಯನ್ನು >> ಒಪ್ಪಿಕೊಳ್ಳುತ್ತಿದ್ದೆ. ಸ್ವಾಮಿಯಾಗಲೀ ಗೋಪಾಲನಾಗಲೀ ಎಂದೂ ಇಂತಹ ಕೆಲಸಗಳನ್ನು >> ಒಪ್ಪಿಕೊಳ್ಳುತ್ತಿರಲಿಲ್ಲ. ಅವರಿಗೆ ನನ್ನಂತೆ ಹಣದ ಅಗತ್ಯವಿರಲಿಲ್ಲ.ರಾಯರ >> ಮಾರ್ಗದರ್ಶನದಲ್ಲಿ ಎಲ್ಲ ಕರ್ತವ್ಯಗಳನ್ನೂ ನಾನು ಸಮರ್ಥವಾಗಿ ನಿಭಾಯಿಸುತ್ತಿದ್ದೆ.ಹಲವೊಮ್ಮೆ >> ಇದು ಇತರ ಕೆಲವು ಸಹೋದ್ಯೋಗಿಗಳ ಅಸಮಾಧಾನಕ್ಕೂ ಕಾರಣವಾಗುತ್ತಿತ್ತು. >> ನನಗಿಂತ ಹಿರಿಯ ಅಧ್ಯಾಪಕರಿದ್ದರೂ ನನ್ನನ್ನೇ ತಮ್ಮ ಡೆಪ್ಯುಟಿಯನ್ನಾಗಿ ರಾಯರು >> ತೆಗೆದುಕೊಳ್ಳುತ್ತಿದ್ದುದರಿಂದ ಕಾಲೇಜಿನಲ್ಲಿ ನನಗೆ ಒಂದು ರೀತಿಯ ಪ್ರಾಮುಖ್ಯತೆಯಿತ್ತು , >> ಜೊತೆಗೆ ಹೆಚ್ಚಿನ ಹಣವೂ ದೊರಕುತ್ತಿತ್ತು. ಹಣದ ವಿಚಾರ ಹಾಗಿರಲಿ , ಸಿಗುತ್ತಿದ್ದ >> ಪ್ರಾಮುಖ್ಯತೆಯನ್ನು ಹೇಗೆ ಸಹಿಸಿಕೊಳ್ಳುವುದು? ಆದರೆ ರಾಯರು ಇದಕ್ಕೆಲ್ಲ ತಲೆ >> ಕೆಡಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಕೆಲಸ ಆಗಬೇಕಿತ್ತಷ್ಟೆ. ಆದರೆ ನನಗೆ ಕೆಲವೊಮ್ಮೆ >> ಇದರಿಂದ ಇರಿಸುಮುರಿಸುಂಟಾಗುತ್ತಿತ್ತು. >> ಆ ಒಂದು ಭಾನುವಾರವೂ ಸ್ಪರ್ಧಾತ್ಮಕ ಪರೀಕ್ಷೆಯಿತ್ತು. ಎಲ್ಲ ಸಿದ್ಧತೆ ಮಾಡಿಕೊಂಡು ನಾವು >> ಸನ್ನದ್ಧರಾಗಿದ್ದೆವು. ಪರೀಕ್ಷೆ ಪ್ರಾರಂಭವಾಗುವ ಸೂಚನೆಯಾಗಿ ಲಾಂಗ್ ಬೆಲ್ ಆಯಿತು. ತಡವಾಗಿ >> ಬರುವ ವಿದ್ಯಾರ್ಥಿಗಳನ್ನು ಒಳಸೇರಿಸದಂತೆ ಎಲ್ಲ ಗೇಟ್ ಗಳನ್ನು ಮುಚ್ಚಿಸಿ ರಾಯರು ಮುಖ್ಯ >> ದ್ವಾರದ ಬಳಿಯೇ ಠಳಾಯಿಸುತ್ತಿದ್ದರು. ಅವರು ಹಾಗೆ ಠಳಾಯಿಸುವಾಗ ಹಿಂದಕ್ಕೆ ಕೈ ಕಟ್ಟಿ >> ಎಲ್ಲವನ್ನೂ ಹದ್ದಿನ ಕಣ್ಣಿನಿಂದ ಸೂಕ್ಷ್ಮವಾಗಿ ಪರಿಶೀಲಿಸುತ್ತ ಶಿಸ್ತಿನ >> ಸೈನ್ಯಾಧಿಕಾರಿಯಂತೆ ಕಾಣಿಸುತ್ತಾರೆ. ಅಷ್ಟರಲ್ಲಿ ಒಬ್ಬ ವಿದ್ಯಾರ್ಥಿ ಓಡೋಡಿ ಬರುವುದಕ್ಕೂ >> ಗೇಟ್ ಮುಚ್ಚುವುದಕ್ಕೂ ಸರಿಯಾಯಿತು. ಆತ ಗೇಟಿನ ಆಚೆ ಉಳಿದ. ಅಟೆಂಡರ್ >> ಗೇಟ್ ತೆಗೆದು ಆತನನ್ನು ಒಳಬಿಡಬೇಕೆನ್ನುವಷ್ಟರಲ್ಲಿ ರಾಯರು ಆಕ್ರಮಣಶೀಲರಾಗಿ ಅತ್ತ >> ಧಾವಿಸಿ ಗೇಟ್ ತೆಗೆಯದಂತೆ ಸೂಚಿಸಿದರು. >> ಆತ ಗೇಟಿನಾಚೆ ನಿಂತು ಆರ್ತನಾಗಿ ಪ್ರಾರ್ಥಿಸುತ್ತಿದ್ದ. ರಾಯರು ತಮ್ಮ ತೋರು ಬೆರಳನ್ನು >> ಮುಂದೆ ಚಾಚಿ ಆತನನ್ನು ಕಾಲೇಜಿನಿಂದ ಹೊರ ಹೋಗಲು ಹೇಳುತ್ತಿದ್ದರು. ಆತ ಅಳುತ್ತಾ >> ಬೇಡಿಕೊಳ್ಳುತ್ತಿದ್ದ. ಅಲ್ಲೇ ಅನತಿ ದೂರದಲ್ಲಿದ್ದ ನಾನು ಈ ವಿದ್ಯಮಾನಗಳನ್ನೆಲ್ಲಾ >> ಗಮನಿಸುತ್ತಿದ್ದೆ. ತಕ್ಷಣ ನಾನು ಅಲ್ಲಿಗೆ ಧಾವಿಸಿ ಬಂದು, ಅಲ್ಲಿದ್ದ ರಾಯರನ್ನು >> ಲೆಕ್ಕಿಸದೆ, ಗೇಟ್ ತೆಗೆಸಿ, ಆ ವಿದ್ಯಾರ್ಥಿ ಪರೀಕ್ಷಾಕೊಠಡಿಗೆ ಹೋಗಲು ಅವಕಾಶ ಮಾಡಿಕೊಟ್ಟೆ. >> ರಾಯರು ಯಥಾಪ್ರಕಾರ ತಲೆ ಕೆಳಗೆಮಾಡಿ ಕನ್ನಡಕದ ಮೇಲ್ತುದಿಯಿಂದ ನನ್ನನ್ನು ಇರಿಯುವಂತೆ ನೋಡಿ >> ಏನನ್ನೂ ಹೇಳದೆ ಅಲ್ಲಿಂದ ದಢದಢ ಹೆಜ್ಜೆ ಹಾಕುತ್ತಾ ತಮ್ಮ ಕೊಠಡಿಯತ್ತ ಹೊರಟು ಹೋದರು. >> ಇದನ್ನು ಗಮನಿಸುತ್ತಿದ್ದ ಅಟೆಂಡರ್ ಹಾಗೂ ಕ್ಲರ್ಕ್ ಯಾವ ರೀತಿ ಪ್ರತಿಕ್ರಿಯಿಸಬೇಕೋ >> ತಿಳಿಯದೆ ದಿಗ್ಬ್ರಾಂತರಾಗಿ ನಿಂತಿದ್ದರು. ನಾನೂ ಒಂದೆರಡು ಕ್ಷಣ ಗೊಂದಲಕ್ಕೆ ಒಳಗಾದರೂ >> ತಕ್ಷಣ ಸಾವರಿಸಿಕೊಂಡು ಅಟೆಂಡರ್ ನತ್ತ ನೋಡಿ ನಕ್ಕು , ಎಲ್ಲ ಕೊಠಡಿಗಳ ಪರಿಶೀಲನೆಗೆ ಹೊರಟೆ. >> ರಾಯರ ದೊಡ್ಡ ಗುಣವೆಂದರೆ ಅವರಿಗೆ ಯಾರ ಬಗ್ಗೆ ಎಷ್ಟೇ ಅಸಮಾಧಾನವಿದ್ದರೂ >> ಎಲ್ಲರೆದುರಿನಲ್ಲಿ ಅದನ್ನು ವ್ಯಕ್ತಪಡಿಸುತ್ತಿರಲಿಲ್ಲ. ಸಮಯ ನೋಡಿ ವೈಯಕ್ತಿಕವಾಗಿ >> ಪ್ರಸ್ತಾಪಿಸಿ ತಮ್ಮ ಸಂಶಯ ಪರಿಹರಿಸಿಕೊಳ್ಳುತ್ತಿದ್ದರು. ಅಗತ್ಯ ಬಿದ್ದರೆ ಎಚ್ಚರಿಕೆ >> ನೀಡುತ್ತಿದ್ದರು. ಕೆಲವೊಮ್ಮೆ ಬುದ್ಧಿ ಹೇಳಿ ಮಾರ್ಗದರ್ಶನ ಮಾಡುತ್ತಿದ್ದರು. ಆ ದಿನ ನಂತರದ >> ಪರೀಕ್ಷೆಯ ಸಂದರ್ಭದಲ್ಲಿ ರಾಯರು ಏನೂ ಆಗದವರಂತೆ ಸಹಜವಾಗಿಯೇ ನನ್ನೊಡನೆ ವರ್ತಿಸಿದರು. ನಾನೂ >> ಹಾಗೆಯೇ ಇದ್ದೆ. ಆದರೆ ಅಷ್ಟರಲ್ಲಾಗಲೇ ಈ ಘಟನೆ ಸಹೋದ್ಯೋಗಿಗಳಲ್ಲಿ ಪಿಸುಮಾತಿಗೆ >> ಆಹಾರವಾಗಿತ್ತು. ನನಗೇನೋ ಕಾದಿದೆ ಎಂಬಂತೆ ಕೆಲವರು ನನ್ನನ್ನು ಸಮಾಧಾನ ಪಡಿಸಲು ಅನಗತ್ಯ >> ಪ್ರಯತ್ನಿಸುತ್ತಿದ್ದರು. ಮತ್ತೆ ಕೆಲವರಿಗೆ ಇದರಿಂದ ನಾನು ರಾಯರಿಂದ ದೂರವಾಗಬಹುದೆಂಬ ದೂರದ >> ಆಸೆ. >> ಪರೀಕ್ಷೆಯ ಕೆಲಸಗಳೆಲ್ಲ ಮುಗಿದ ಮೇಲೆ ರಾಯರು ನನ್ನ ವಿಚಾರಣೆ ನಡೆಸುತ್ತಾರೆಂಬ ಖಚಿತ >> ನಿರೀಕ್ಷೆಯಲ್ಲಿ ಕೆಲವರು ಅಲ್ಲೇ ಠಳಾಯಿಸುತ್ತಿದ್ದರು. ಆದರೆ ರಾಯರು ಅದನ್ನು ಮರೆತವರಂತೆ >> ಎಂದಿನ ಹಾಗೆ ನನ್ನ ಜೊತೆಯೇ ಮನೆಯ ಕಡೆ ಹೊರಟರು. ದಾರಿಯಲ್ಲೂ ನನ್ನೊಡನೆ ಆ ಬಗ್ಗೆ >> ಪ್ರಸ್ತಾಪಿಸಲಿಲ್ಲ. ಬೇರೇನೊ ಮಾತನಾಡುತ್ತಿದ್ದರು.ನಾನೂ ಸುಮ್ಮನಿದ್ದೆ. ಮಾರನೆಯ ದಿನವೂ >> ಮಹಾಜನತೆಯ ಕುತೂಹಲ ಗರಿಗೆದರಿತ್ತು. ಅಂದೂ ಏನೂ ನಡೆಯದಿದ್ದಾಗ ಕ್ರಮೇಣ ಸಹೋದ್ಯೋಗಿಗಳ ಆ >> ಘಟನೆಯ ಬಗೆಗಿನ ಆಸಕ್ತಿ ಕಡಿಮೆಯಾಯಿತು. ನಿರಾಸೆಯಿಂದ ಸುಮ್ಮನಾದರು. ಒಂದೆರಡು ದಿನಗಳು ಹಾಗೇ >> ಕಳೆದವು. ನನಗೂ ರಾಯರು ಆ ಬಗ್ಗೆ ಪ್ರಸ್ತಾಪಿಸದಿರುವುದು ಆಶ್ಚರ್ಯವೆನ್ನಿಸಿತು. >> ಒಂದು ವಾರ ಕಳೆದ ನಂತರ ಒಂದು ದಿನ ನನ್ನನ್ನು ಕರೆದು ತರಗತಿಗಳು ಮುಗಿದಾದ ಮೇಲೆ ಬಂದು >> ನನ್ನನ್ನು ನೋಡಿ ಎಂದರು. ನನಗೀಗ ಖಚಿತವಾಯಿತು. ಅವರ ಆಕ್ರಮಣಕ್ಕೆ ನಾನೂ ಮಾನಸಿಕವಾಗಿ >> ಸಿದ್ಧವಾಗತೊಡಗಿದೆ. ನನ್ನ ನಿಲುವಿನ ಬಗ್ಗೆ ನನ್ನೊಳಗೇ ಮತ್ತೊಮ್ಮೆ ಪರಿಶೀಲಿಸಿಕೊಂಡೆ. >> ರಾಯರನ್ನು ಭೇಟಿಯಾದಾಗ ಅವರು ಸಹಜವೆಂಬಂತೆ ಲೋಕಾಬಿsರಾಮವಾಗಿ ಮಾತನಾಡುತ್ತ ಒಂದು ಕ್ಷಣ >> ಮೌನವಾಗಿದ್ದು ನಂತರ ಆ ದಿನದ ಘಟನೆಯನ್ನು ಪ್ರಸ್ತಾಪಿಸಿದರು. >> ‘ಆ ಹುಡುಗ ನಿಮಗೆ ಗೊತ್ತಾ’ ಎಂದರು. ನಾನು ಅವರನ್ನೇ ದಿಟ್ಟಿಸಿ ನೋಡಿ ಇಲ್ಲ ಎಂದೆ. ಅವರೂ >> ತಮ್ಮ ಎಂದಿನ ರೀತಿಯಲ್ಲಿ ತಲೆ ಕೆಳಗೆ ಮಾಡಿ ಕನ್ನಡಕದ ಮೇಲ್ತುದಿಯಿಂದ ಇರಿಯುವಂತೆ >> ನೋಡುತ್ತಾ ‘ನಿಮ್ಮ ಆ ದಿನದ ನಡವಳಿಕೆ ಉದ್ಧಟತನದ್ದು ಅನ್ನಿಸುವುದಿಲ್ಲವೇ? ನನ್ನನ್ನು >> ನಿರ್ಲಕ್ಷಿಸಿ ನೀವು ಹಾಗೆ ಮಾಡಿದ್ದು ಅವಿನಯ ಮಾತ್ರವಲ್ಲ ಅಶಿಸ್ತೂ ಹೌದು ಬದುಕಿನಲ್ಲಿ >> ಶಿಸ್ತು ಮುಖ್ಯ’ ...... ಅವರ ಮಾತಿನ >> ಪ್ರವಾಹ ಹರಿಯುತ್ತಲೇ ಇತ್ತು. >> ನಾನು ಆ ಪ್ರವಾಹವನ್ನು ಅರ್ಧದಲ್ಲೇ ತಡೆದು ತಣ್ಣಗಿನ ದನಿಯಲ್ಲಿ ‘ಅದು ನೀವೇ ಕಲಿಸಿದ ಪಾಠ’ >> ಎಂದೆ. ನನ್ನ ಮುಖದಲ್ಲಿ ನನಗೇ ತಿಳಿಯದಂತೆ ಒಂದು ಮಂದಹಾಸವಿತ್ತು. ರಾಯರು ಒಂದು ಕ್ಷಣ >> ಗೊಂದಲಕ್ಕೊಳಗಾದರು. ಅವರ ಆಕ್ರಮಣಕ್ಕೆ ನಾನು ಅಧೀರನಾಗಿ ಕ್ಷಮೆ ಯಾಚಿಸುತ್ತೇನೆಂಬುದು ಅವರ >> ನಿರೀಕ್ಷೆಯಾಗಿತ್ತು. ಒಂದು ಸಣ್ಣ ಉಪದೇಶ ನೀಡಿ ಕ್ಷಮೆ ನೀಡಲೂ ಸಿದ್ಧರಿದ್ದರು. ಆದರೆ ನನ್ನ >> ಪ್ರತಿಕ್ರಿಯೆ ಅವರಿಗೆ ಅನಿರೀಕ್ಷಿತವಾಗಿತ್ತು. ಯಥಾಪ್ರಕಾರ ಕನ್ನಡಕದ ಮೇಲ್ತುದಿಯಿಂದ >> ತೀಕ್ಷ್ಣವಾಗಿ ನೋಡುತ್ತಾ ಮೌನವಾಗಿಯೇ ಪ್ರಶ್ನಾರ್ಥಕ ನೋಟ ಬೀರಿದರು. >> ನಾನು ಹಿಂದಿನ ಪ್ರಸಂಗವೊಂದನ್ನು ನೆನಪಿಸಿದೆ. ಒಮ್ಮೆ ಒಬ್ಬ ವಿದ್ಯಾರ್ಥಿ ಅನುಚಿತವಾಗಿ >> ವರ್ತಿಸಿದ್ದ. ಅವನೆಂದೂ ನಿಯಮಿತವಾಗಿ ತರಗತಿಗೆ ಬಂದವನಲ್ಲ. ಒಮ್ಮೊಮ್ಮೆ ಬಂದರೂ ಅವನದು >> ಏನೆಲ್ಲ ತರಲೆ. ಕೆಲವು ಅಧ್ಯಾಪಕರಿಗೆ ಅವನಿಂದಾಗಿ ಪಾಠ ಮಾಡುವುದೂ ಕಷ್ಟವಾಗುತ್ತಿತ್ತು. >> ಒಮ್ಮೆಯಂತೂ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ನಾವೆಲ್ಲ >> ಅಧ್ಯಾಪಕರು ಸೇರಿ ಆತನನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಬೇಕೆಂದು ರಾಯರನ್ನು >> ಒತ್ತಾಯಿಸಿದ್ದೆವು. ರಾಯರದು ಕೆಲವೊಮ್ಮೆ ನಿಧಾನ ಪ್ರವೃತ್ತಿ. ನಮ್ಮ ಅಹವಾಲಿಗೆ ಅವರು >> ಮೌನವಾಗಿದ್ದರು. ಆಗ ನಾವೆಲ್ಲ ಆತನ ಮೇಲೆ ಕ್ರಮ ಕೈಗೊಳ್ಳದಿದ್ದರೆ ಯಾರೂ ತರಗತಿಗಳನ್ನು >> ತೆಗೆದುಕೊಳ್ಳುವುದಿಲ್ಲವೆಂದು ಪ್ರತಿಭಟನೆಯ ದನಿಯಲ್ಲಿ ಸೂಚಿಸಿದೆವು. >> ಆದರೆ ಆ ವೇಳೆಗಾಗಲೇ ರಾಯರು ಅವನನ್ನು ಕರೆದು ಮಾತನಾಡಿದ್ದರು. ಅವನಿಗೆ ಬುದ್ಧಿ ಹೇಳಿ >> ಇನ್ನು ಮುಂದೆ ಸರಿಯಾಗಿ ನಡೆದುಕೊಳ್ಳುವಂತೆ ಸೂಚಿಸಿದ್ದರು. ನಮ್ಮನ್ನೆಲ್ಲ ಕರೆದು ಆತ >> ಬದಲಾಗಲು ಅವಕಾಶ ನೀಡಬೇಕೆಂದು ತಿಳಿಯ ಹೇಳಿದರು. ನಾವು ಪಟ್ಟು ಬಿಡದಿದ್ದಾಗ ‘ನಿಮ್ಮ >> ತಮ್ಮನೋ, ತಂಗಿಯೋ ತಪ್ಪು ಮಾಡಿದರೆ ಮನೆಯಿಂದ ಓಡಿಸಿ ಬಿಡುತ್ತೀರಾ’ ಎಂದು ಕೇಳಿ ನಮ್ಮ ಬಾಯಿ >> ಮುಚ್ಚಿಸಿದ್ದರು. ಶಿಕ್ಷೆಯೇ ಎಲ್ಲಕ್ಕೂ ಪರಿಹಾರವಲ್ಲ ಎಂದು ವಾದಿಸಿದ್ದರು. >> ನಾನು ಆ ಪ್ರಸಂಗವನ್ನು ಪ್ರಸ್ತಾಪಿಸಿ ‘ಈ ವಿದ್ಯಾರ್ಥಿ ಒಂದೆರಡು ನಿಮಿಷ ತಡವಾಗಿ ಬಂದದ್ದು >> ನಿಜ. ಅವಧಿ ಮೀರಿ ಬಂದ ವಿದ್ಯಾರ್ಥಿಗಳನ್ನು ನಾವು ಒಳಬಿಡಬಾರದೆಂಬುದೂ ನನಗೆ ಗೊತ್ತು. ಹಾಗೆ >> ಬಿಡುತ್ತಾ ಹೋದರೆ ಪರೀಕ್ಷೆಯನ್ನೇ ನಡೆಸಲಾಗುವುದಿಲ್ಲವೆಂಬುದನ್ನೂ ನಾನು ಬಲ್ಲೆ. ಒಂದು >> ವ್ಯವಸ್ಥೆಯೆಂದ ಮೇಲೆ ನಿಯಮಗಳು ಇರಲೇಬೇಕು. ಅವುಗಳನ್ನು ನಾವು ಪರಿಪಾಲಿಸಲೇಬೇಕು. ಆದರೆ ಈ >> ಪ್ರಸಂಗ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂಥದಲ್ಲ. ಮಾನವೀಯತೆಯ ಪ್ರಶ್ನೆಯಷ್ಟೆ’ ಎಂದು >> ಅವರನ್ನೇ ದಿಟ್ಟಿಸಿ ನೋಡಿದೆ. >> ಈಗವರ ಹುಬ್ಬು ಸಡಿಲಾಗಿತ್ತು. ನೋಟ ತನ್ನ ತೀಕ್ಷ್ಣತೆಯನ್ನು ಕಳೆದುಕೊಂಡಿತ್ತು. ನಿಧಾನ >> ಎದ್ದು ಬಂದು ನನ್ನ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಮೆಲ್ಲಗೆ ಅದುಮಿ ‘ನಿಮ್ಮ ಈ ನಿಲವು >> ಸದಾ ಹೀಗೆಯೇ ಇರಲಿ’ ಎಂದು ಹಾರೈಸಿ ಹೊರನಡೆದರು. >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit >> https://groups.google.com/d/msgid/socialsciencestf/CAJCvfyXdsL1ZYP3YMv1768XOoB6Tz%2BaFV8-Pui0Q9L9Uj7AV7A%40mail.gmail.com >> <https://groups.google.com/d/msgid/socialsciencestf/CAJCvfyXdsL1ZYP3YMv1768XOoB6Tz%2BaFV8-Pui0Q9L9Uj7AV7A%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CACwGsz6fa%2BdLu2V7mLx5xw1dTp1Nq0o4_iE2QdR8iOgn0fcTPQ%40mail.gmail.com > <https://groups.google.com/d/msgid/socialsciencestf/CACwGsz6fa%2BdLu2V7mLx5xw1dTp1Nq0o4_iE2QdR8iOgn0fcTPQ%40mail.gmail.com?utm_medium=email&utm_source=footer> > . > > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABtYOUUYaou4kFbRyg_LqLLhP1R8TU6Qk%3DQZL4ZYsrRbJwy7bw%40mail.gmail.com. For more options, visit https://groups.google.com/d/optout.
