ಅಮೂಲ್ಯವಾದ ಮಾಹಿತಿ ಕೊಟ್ಟಿದ್ದೀರಿ


*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: [email protected]
blog:NammaBellare.blogspot.com
school blog:* gpucbellare.blogspot.com <http://gpucbellare.blogspot.com>*
mobile: 9449592475

2016-03-21 21:59 GMT+05:30 Veeresh Arakeri <[email protected]>:

> "ಭಾಷೆ ಅನ್ನುವುದು ದೈವ ಮೂಲದಿಂದ ಹುಟ್ಟಿದ್ದಲ್ಲ, ಬದಲಿಗೆ ಮನುಷ್ಯನ ಪ್ರಯತ್ನದಿಂದ
> ಬಂದದ್ದು ಅಂತ ಮೊದಲು ಪ್ರತಿಪಾದಿಸಿದವನು ಯಾರು?"
>
>
> ಅನ್ನೋ ಪ್ರಶ್ನೆ ಕೇಳಿದ್ದೆ. ಅದಕ್ಕೆ ಕೆಲವರು ಆಸಕ್ತಿ ತೋರಿಸಿದರು. ಈ ಲೇಖನವು ಆ
> ಪ್ರಶ್ನೆಗೆ ಸಂಬಂಧಪಟ್ಟಿದೆ.
>
> ..........................
>
>
> ಜಗತ್ತಿನ ಅನೇಕ ಜನಾಂಗಗಳಲ್ಲಿ ಭಾಷೆ ಎಂಬುದು "ದೈವೀ ಮೂಲ" ಎಂದು ನಂಬಲಾಗಿತ್ತು. ಋಗ್ವೇದದ
> ಪ್ರಾಕಾರ "ವಾಗ್ದೇವಿ"ಯೇ ಭಾಷೆಯ ಅಧಿದೇವತೆ. ಬೈಬಲ್ಲಿನ ಜೆನೆಸಿಸ್ ಪ್ರಕಾರ GOD , ಈಜಿಪ್ಟ್
> ನವರಿಗೆ "ಥಾಥ್" ಎಂಬ ದೇವತೆಗಳು ಭಾಷಾ ಅಧಿದೇವತೆಗಳು. ಭಾರತದ ಇನ್ನೊಂದು ನಂಬಿಕೆಯ (
> ಬಹುಶ..ಪಾಣಿನಿಯ ಪ್ರಕಾರ?!) ಪ್ರಕಾರ ಈ ಭಾಷೆ / ದ್ವನಿಗಳು ಶಿವನ ಡಮರುಗ ದಿಂದ
> ಉತ್ಪತ್ತಿಯಾದವು. ಢಮರುಗದ ಒಂದು ಭಾಗದಿಂದ ಮೊದಲು "ಓಂ" ಕಾರ ಹೊರಟಿತು. ನಂತರ ಇನ್ನೊಂದು
> ಭಾಗದಿಂದ ಇತರ "ಅಕ್ಷರ"ಗಳು ಹುಟ್ಟಿದವು. ಪಾಣಿನಿಯ(?) ಮಹೇಶ್ವರ ಸೂತ್ರ ಸಂಸ್ಕೃತದ ಮೂಲ
> ಧ್ವನಿಗಳನ್ನು ಹಿಡಿದಿಡಲು ಪ್ರಯತ್ನಿಸಿದೆ. ಆದರೆ ಇದರಲ್ಲಿ ದ್ರಾವಿಡ ಭಾಷೆಯ ಕೆಲವು ಮೂಲ
> ಧ್ವನಿಗಳು ಬಿಟ್ಟು ಹೋಗಿವೆ.
>
>
> ಮೇಲಿನ ನಂಬಿಕೆಗಳು ಏನೇ ಇರಲಿ, ಆಧುನಿಕ ವಿದ್ವಾಂಸರು ಭಾಷೆಯು ದೈವೀಮೂಲವೆಂದು ಒಪ್ಪದೇ,
> ಮಾನವನ ಅಭಿವ್ಯಕ್ತಿಯ ಅವಶ್ಯಕತೆಯ ಮೂಲಕಾರಣವೇ ಭಾಷೆಯ ಆವಿಷ್ಕಾರಕ್ಕೆ ಮೂಲ ಕಾರಣ
> ಎನ್ನುತ್ತಾರೆ.
>
>
> ಭಾಷೆಯ ಹುಟ್ಟಿನ ಬಗ್ಗೆ ಅನೇಕ ವಾದಗಳಿವೆ. ಅವುಗಳಲ್ಲಿ ಮುಖ್ಯ್ವಾವಾದವು ಈ ಕೆಳಗಿನ ಐದು.
> ೧. ಅನುಕರಣವಾದ
> ೨. ಉದ್ಗಾರವಾದ
> ೩. ಅನುರಣನ ವಾದ
> ೪. ಶ್ರಮ ಪರಿಹಾರ ವಾದ
> ೫. ಸಂಜ್ಞ್ಯ ಭಾಷೆಯ ವಾದ
> ...ಇನ್ನೂ ಕೆಲವಿವೆ
>
>
> ಅನುಕರಣವಾದ
>
> ಪ್ರಾಚೀನ ಮಾನವ ತನ್ನ ಪರಿಸರದ ವಸ್ತುಗಳನ್ನು. ಅವುಗಳಿಂದ ಹೊರಡುವ ಶಬ್ಧಗಳನ್ನು ಅನುಕರಿಸಲು
> ಮಾಡಿದ ಪ್ರಯತ್ನದ ಫಲವೇ ಭಾಷೆ ಎಂಬುದು ಲೀಬ್ನಿಜ್ ಎಂಬುವನ ವಾದ. ಹೆಚ್ಚಿನ ವಿದ್ವಾಂಸರು ಈ
> ವಾದವನ್ನು ಸಮರ್ಥಿಸಿದ್ದರೂ ಪ್ರಾಣಿ ಪಕ್ಷಿಗಳ ವಸ್ತುಗಳ ಶಬ್ಧಗಳನ್ನು ಅವುಗಳಿಗಿಂತ
> ಮೇಲ್ಮಟ್ಟದ ಮನುಷ್ಯ ಅನುಕರಿಸುತ್ತನೆಂದರೆ ಒಪ್ಪಲಾಗುವುದಿಲ್ಲ ಎಂದು ರೇನಸ್ ಎಂಬಾತ ಈ
> ವಾದವನ್ನು ವಿರೋಧಿಸುತ್ತಾನೆ. ಮ್ಯಾಕ್ಷ್ ಮುಲ್ಲರ್  ಅಂತೂ ಈ ವಾದವನ್ನು bow  wow
>  ವಾದವೆಂದು ವಿಡಮ್ಬಿಸಿದ್ದಾನೆ.
>
>
>
>
> ಉದ್ಗಾರವಾದ
>
> ಮನುಷ್ಯ ತನ್ನ ಉತ್ಕಟ "ಭಾವಾವೇಶ"ಗಳ ಫಲವಾಗಿ ತನ್ನಿಂದ ಹೊರಟ ಉದ್ಗಾರಗಳನ್ನೇ ಭಾಷೆ
> ರೂಪದಲ್ಲಿ ಬಳಸಿಕೊಳ್ಳಲು ಯತ್ನ್ಸಿರಬಹುದು ಅನ್ನುವುದು ಹಮ್ಬೋಲ್ತ್ ಮತ್ತು ಹಿಲ್ಮಾರ್ ಅವರ
> ವಾದ.
>
> ಆದರೆ  ಹರ್ಡ್ರರ್ ಎಂಬಾತ 'ಓಹೋ', 'ಆಹಾ' , 'ಛೇ' , 'ಥೂ' ಎಂಬ ಉದ್ಗಾರಗಳಿಂದ ಭಾಷೆ
> ಹುಟ್ಟಿದೆ ಎಂಬುದು ತಪ್ಪು ಅಭಿಪ್ರಾಯ ಎಂದು ಈ ವಾದವನ್ನು ಅಲ್ಲಗೆಳೆಯುತ್ತಾನೆ.
>
>
>
>
> ಅನುರಣನ ವಾದ (ನಾದ ಸಿದ್ದಾಂತ)
>
> ಪ್ರಕೃತಿಯಲ್ಲಿ ಪ್ರತಿಯೊಂದು ವಸ್ತುವೂ  ಮತ್ತೊಂದರೊಡನೆ  ಘರ್ಷಿಸಿದಾಗ ಬೇರೆ ಬೇರೆಯದೇ ಆದ
> ಶಬ್ಧಗಳು ಹೊರಡುತ್ತವೆ. ಅಂತಹ ಶಬ್ಧಗಳು ಮನುಷ್ಯನ ಮನಸ್ಸಿನ ಮೇಲೆ ಮೂಡಿಸಿದ ಭಾವನೆಗಳ
> "ಧ್ವನ್ಯನುರಣನ" ವೆ ಭಾಷೆ ಎಂದು ಮ್ಯಾಜ್ ಮುಲ್ಲರ್ ವಾದಿಸಿದ್ದ. ಆದರೆ ಈ ವಾದವೂ ಅನುಕರಣ
> ವಾದದಂತೆಏ ಕಂಡದ್ದರಿಂದ ಅವನೇ ತನ್ನ ವಾದವನ್ನು ನಂತರ ಹಿಂತೆಗೆದುಕೊಂಡ.
>
> ಕೆಲವರು ಮ್ಯಾಕ್ಷ್ ಮುಲ್ಲರ್ ನ ಈ ಸಿದ್ದಾಂತವನ್ನು ding dong theory ಎಂದು ವ್ಯಂಗ್ಯ
> ಮಾಡಿದ್ದಾನೆ.
>
>
>
>
> ಶ್ರಮ ಪರಿಹಾರ ವಾದ
>
> ಮಾನವ ತನ್ನ ದೇಹಕ್ಕೆ ಸುಸ್ತಾಗುವಂತೆ ಕೆಲಸ ಮಾಡಿದಾಗ ಉಸಿರನ್ನು ಮತ್ತೆ ಮತ್ತೆ
> ಹೊರಹಾಕುವುದರಿಂದ  ( ಉದಾ. ಉಷ್ಯಪ್ಪಾ..ಹುಹ್..ಇತ್ಯಾದಿ)  ಸುಸ್ತು ಕಡಿಮೆ ಆಗುವೆದೆಂದು ,
> ನಮಗೆ ಗೊತ್ತಿಲ್ಲದೇ,  ಉಸಿರನ್ನು ಹೊರಹಾಕುತ್ತೇವೆ. ಇಂತಹ ಸಮಯದಲ್ಲಿ ಹೊರಹಾಕಿದ
> ಉಸಿರಿನೋಡೋನೆ  ಬಂದ ಧ್ವನಿಗಳೇ ಭಾಷೆಯ ಉಗಮಕ್ಕೆ ಕಾರಣ ಎಂಬುದು ನೋರಿ ಯ ವಾದ.
>
> ಕೆಲವರು ಈ ವಾದವೆನ್ನು "ಯೋ-ಹೇ-ಹೋ" ವಾದಬೆಂದು ಕರೆದರು.
>
>
>
> ಸಂಜ್ಞ್ಯಾ ಭಾಷೆಯ ವಾದ
>
> ಆಂಗಿಕ ಅಭಿನಯಗಳ ಮೂಲಕ ಅಭಿವ್ಯಕ್ತಿಯನ್ನು ಕಂಡುಕೊಂಡ ಮನುಷ್ಯ ಕ್ರಮೇಣ ಉಸುರಿದ ಶಬ್ಧಗಳೇ
> ಭಾಷೆಯ ಉಗಮಕ್ಕೆ ಕಾರಣವೆಂಬುದು ವುಂಡ್ಟ್ ಎಂಬಾತನ ವಾದ.
>
> .....................................
>
> ಒಂದು ನುಡಿಯ ಹುಟ್ಟಿನ ಬಗ್ಗೆ ಏನೆಲ್ಲಾ ವಾದಗಳು ಇದ್ದಾರೂ ಇವೆಲ್ಲ ಭಾಷೆಯ ಒಂದೊಂದು
> ಅಂಶವನ್ನು ತಿಳಿಸುತ್ತವೆಯೇ ಹೊರತು ಮುಖ್ಯ ಅಂಶಗಳನ್ನು ತಿಲಿಸಲ್ಲ.
>
>
>
>
> ಎಸ್ಪರ್ಸನ್ ಎಂಬಾತ  "ಭಾಷೆಯ ಉಗಮವನ್ನು  ಕುರಿತ ವಾದಗಳು ಭಾಷೆಯ ಪ್ರಧಾನ ಲಕ್ಷಣಗಳತ್ತ
> ಗಮನವೇ ಹರಿಸುವುದಿಲ್ಲ"  ಎಂದು ಹೇಳುತ್ತಾ, ಯಾವುದೇ ಭಾಷೆಯ ಪ್ರಾರಂಬಿಕ ಅವಸ್ತೆಯನ್ನು
> ತಿಳಿಯಲು ಮೂರು ಮಾರ್ಗಗಳನ್ನು ಸೂಚಿಸಿದ.
>
> ೧. ತೊದಲ್ನುಡಿಯನ್ನು ಬಳಸುವ ಮಕ್ಕಳ ಭಾಷೆ ಕುರಿತ ಅಧ್ಯಯನ.
>
>
> ಮಕ್ಕಳು ಮಾತನಾಡುವುದನ್ನು ಕಲಿಯುವಾಗ, ತನ್ನ ಪರಿಸರದವರು ಆಡುವ ಭಾಷೆಯನ್ನು
> ಗಮನಿಸುತ್ತದೆಯಾದರೂ, ಅದಕ್ಕೂ ಮೊದಲು ಮಗುವೊಂದು ಧ್ವನಿಯನ್ನು ಹೇಗೆ ಉಚ್ಚರಿಸುತ್ತದೆ
> ಎಂಬುದನ್ನು ಗಮನಿಸಬೇಕು.
>
>
>
> ೨. ಆದಿವಾಸಿ ಜನಾಂಗಗಳು ಬಳಸುವ  ಭಾಷೆಗಳ ಅಧ್ಯಯನ
>
>
> ಆದಿವಾಸಿಗಳ ಭಾಷೆ ಬದಲಾವಣೆ ಗೊಂಡಿರದೆ ಮೂಲ ರೂಪದಲ್ಲಿಯೇ ಬಳಕೆಯಾಗುತ್ತಿರುತ್ತದೆ.
> ಅದ್ದರಿಂದ ತನ್ನ ಮೂಲರೂಪಗಳನ್ನ ಆದಿವಾಸಿಗಳ ಭಾಷೆ ಉಳಿಸಿಕೊಂಡಿರುವ  ಸಾಧ್ಯತೆ ಹೆಚ್ಚು.
> ಹೊರಗಿನ ಪ್ರಭಾವ ಕಡಿಮೆ ಹೊಂದಿರುವ ಈ ಆದಿವಾಸಿ ಭಾಷೆಗಳ ಮೂಲಕ  ( ಉದಾ. ಸೋಲಿಗರ ಭಾಷೆ
> ಕನ್ನಡ ಮೂಲ ರೂಪದ ಬಗ್ಗೆ ಹೊಳಹು ಕೊಡಬಲ್ಲುದು). ಪ್ರಾಚೀನ ಭಾಷೆಯ ಲಕ್ಷಣಗಳನ್ನು
> ತಿಳಿಯಬಹುದು.
>
> ೩. ಭಾಷಾ ಚರಿತ್ರೆಯ  ಅಧ್ಯಯನ.
>
>
> ಒಂದು ಭಾಷೆಯ ಚಾರಿತ್ರಿಕ ಅಧ್ಯಯನದ ಮೂಲಕ ಆ ಭಾಷೆಯ ಹಿಂದಿನ ಸ್ವರೂಪವನ್ನು ತಿಳಿದುಕೊಳ್ಳಲು
> ಸಾಧ್ಯ.
>
>
>
> ಆದರೆ ಈ ಅಧ್ಯಯನಗಳ ಮೂಲಕ ಭಾಷೆಯ "ಹುಟ್ಟಿನ" ಕುರಿತು ಯಾವುದೇ ಸ್ಪಷ್ಟ ನಿರ್ಧಾರಕ್ಕೆ
> ಬರಲಾಗುವುದಿಲ್ಲ.  :)
>
>
> --
> VEERESH P, AM, Govt. EX.muncipal HS, Davangere.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAFK4Wv9c1xvxNKt_RzKKw4cMWUPpZLy%2Bm%2BaXfZw8G3qA7J5fUA%40mail.gmail.com
> <https://groups.google.com/d/msgid/socialsciencestf/CAFK4Wv9c1xvxNKt_RzKKw4cMWUPpZLy%2Bm%2BaXfZw8G3qA7J5fUA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABtYOUVx6bdyYWD6Tuue5BpV7uUHSdOWruRXkqp2N3%2BedrbgxA%40mail.gmail.com.
For more options, visit https://groups.google.com/d/optout.

Reply via email to