Prajwal sir nice story thanks for sharing On May 14, 2016 8:19 PM, "prajwal nayak" <[email protected]> wrote:
> ಮೊಂಡುತನ ಮಾಡುತ್ತಿದ್ದ ಮರಿಯನ್ನು ಕಂಡು, ತಾಯಿ ಪಕ್ಷಿ ಹೇಳಿತು- "ಮಗೂ, ಮೊಂಡುತನ > ಒಳ್ಳೆಯದಲ್ಲ. ಹಿರಿಯರ ಮಾತನ್ನು ಕೇಳದೇ ಒದ್ದಾಡಿದ ಒಂದು ಮರಿ ಪಕ್ಷಿಯ ಕಥೆಯನ್ನು > ಹೇಳುತ್ತೇನೆ ಕೇಳು." ಕಥೆ ಎಂದೊಡನೆ ಮೈ ಎಲ್ಲಾ ಕಣ್ಣಾಗಿ, ತನ್ನ ಪುಕ್ಕಗಳನ್ನೆಲ್ಲಾ > ಹರಡಿಕೊಂಡು, ಅಮ್ಮನ ಕಣ್ಣುಗಳನ್ನೇ ದಿಟ್ಟಿಸುತ್ತ, "ಹೇಳಮ್ಮ" ಎಂದಿತು ಮರಿ. ಅಮ್ಮನ ಕಥೆ > ಸಾಗಿತು. > > "ಉತ್ತರ ಧ್ರುವದಲ್ಲಿ ತುಂಬಾ ಚಳಿ ಗೊತ್ತಾ? ಅಲ್ಲಿರುವ ಪಕ್ಷಿಗಳಿಗೆಲ್ಲ, ಯವಾಗ ಚಳಿ > ಹೆಚ್ಚಾಗುತ್ತದೆ ಎಂಬುದು ಗೊತ್ತು. ಅದಕ್ಕೆ ಅವುಗಳೆಲ್ಲ, ಚಳಿ ಪ್ರಾರಂಭವಾಗುವುದಕ್ಕೆ ಮೊದಲೇ > ದಕ್ಷಿಣದ ನೆಲದ ಕಡೆಗೆ ಹಾರಲು ಯೋಜನೆ ಹಾಕುತ್ತವೆ. ಎಲ್ಲವೂ ಜೊತೆಗೂಡಿ ಒಂದೇ ದಿನ > ಹಾರುವುದಕ್ಕೆ ಶುರು ಮಾಡುತ್ತವೆ. ಬಹುದೂರದ ಪ್ರಯಾಣ, ಸಮುದ್ರದ ಮೇಲೆ ಹಾರಾಟ. ಪ್ರತಿ ವರ್ಷ > ಈ ಪ್ರವಾಸವಿರುವುದರಿಂದ ಹಿರಿಯ ಹಕ್ಕಿಗಳಿಗೆ ಯಾವ ಸಮಯದಲ್ಲಿ ಎಲ್ಲಿ ತಂಗಬೇಕು, ಎಲ್ಲಿ > ಆಹಾರವಿದೆ ಎಂಬುದರ ಪರಿಚಯವಿರುತ್ತದೆ. ಅವು ಆರಾಮವಾಗಿ ತಮ್ಮ ಚಳಿಗಾಲದ ಮನೆಗಳನ್ನು ತಲುಪಿ > ಸುಖವಾಗಿರುತ್ತವೆ. ಹೀಗೊಂದು ಬಾರಿ ಎಲ್ಲ ಪಕ್ಷಿಗಳೂ ಹಾರುವುದಕ್ಕೆ ಸಿದ್ದವಾದಾಗ, ಒಂದು ಮರಿ > ಪಕ್ಷಿ ಬಂಡೆದ್ದಿತು. " ನಾನೇಕೆ ಹಾರಬೇಕು? ನಮ್ಮ ಮನೆ ಬಿಟ್ಟು ಹೋಗುವುದೇಕೆ? ನಾನು > ಗಟ್ಟಿಯಾಗಿದ್ದೇನೆ. ಎಂಥ ಚಳಿಯನ್ನಾದರೂ ತಡೆದುಕೊಂಡೇನು" ಎಂದೆಲ್ಲಾ ವಾದ ಮಾಡಿ ಮೊಂಡು > ಹಿಡಿಯಿತು. ಎಷ್ಟೆಲ್ಲ ತಿಳಿ ಹೇಳಿದರೂ ಕೇಳದಿದ್ದಾಗ, ಉಳಿದೆಲ್ಲ ಪಕ್ಷಿಗಳೂ ಅದನ್ನು > ಅಲ್ಲಿಯೇ ಬಿಟ್ಟು ಹಾರಿ ಹೋದವು. > > ಕೆಲ ದಿನಗಳ ಕಾಲ ಮರಿ ಪಕ್ಷಿ ಹೆಮ್ಮೆಯಿಂದ ಹಾರಾಡಿಕೊಂಡಿತ್ತು. ನಂತರ ಚಳಿ > ತೀವ್ರವಾಗತೊಡಗಿದಾಗ ಗಾಬರಿಯಾಯಿತು. ಇನ್ನು ಬದುಕಲು ಸಾಧ್ಯವಿಲ್ಲ ಎನಿಸಿದಾಗ, ದಕ್ಷಿಣದ > ಕಡೆಗೆ ಸಮುದ್ರದ ಮೇಲೆ ಹಾರ ತೊಡಗಿತು. ಪಾಪ! ಅದಕ್ಕೆ ಸರಿಯಾದ ದಾರಿ ಗೊತ್ತಿಲ್ಲ, ಅಲ್ಲಲ್ಲಿ > ನಿಲ್ಲುವ ತಾಣಗಳೂ ಗೊತ್ತಿಲ್ಲ. ಅದಕ್ಕೆ ತುಂಬಾ ಸುಸ್ತಾಗ ತೊಡಗಿತು. ರೆಕ್ಕೆಗಳ ಮೇಲೆ ಹಿಮ > ಗಟ್ಟಿಯಾಗ ತೊಡಗಿ, ರೆಕ್ಕೆ ಬೀಸುವುದೂ ಅಸಾಧ್ಯವಾಗಿ ಕಂಡಿತು. ಬದುಕಿ ಉಳಿಯುವ ಆಸೆ ದೂರಾಗ > ತೊಡಗಿತು. ಇನ್ನೊಂದು ಹತ್ತು ನಿಮಿಷದಲ್ಲಿ ನೆಲ ಕಾಣದಿದ್ದರೆ ಸಮುದ್ರದಲ್ಲಿ ಬಿದ್ದು > ಸಾಯುವುದು ಖಂಡಿತ ಎನಿಸಿತು. ತನ್ನ ದೇಹದಲ್ಲಿದ್ದ ಸಕಲ ಶಕ್ತಿಯನ್ನೂ ಹಾಕಿ, ಮರಿ ಪಕ್ಷಿ > ರೆಕ್ಕೆ ಬಡಿಯುತ್ತಾ, ದಿಕ್ಕು ದಿಕ್ಕುಗಳನ್ನೂ ನೋಡುತ್ತಿತ್ತು. ಆಹ್! ಭಗವಂತ ದೊಡ್ಡವನು, > ಸ್ವಲ್ಪ ದೂರದಲ್ಲಿಯೇ ನೆಲ ಗೋಚರಿಸುತ್ತಿದೆ. ಮರಿ ಪಕ್ಷಿ ಚಿಗುರಿದ ಉತ್ಸಾಹದಿಂದ ಆ ಕಡೆಗೆ > ತಿರುಗಿ ಹಾರಿತು. ಅಂತೂ ಇಂತೂ ಸರ್ವ ಶಕ್ತಿ ಬಳಸಿಕೊಂಡು ನೆಲದವರೆಗೂ ಹಾರಿ ನೆಲ ಕಂಡೊಡನೇ > ದೊಪ್ಪನೇ ಬಿದ್ದು ಬಿಟ್ಟಿತು. ಹೇಗೋ ಬದುಕಿದೆ ಎಂದಿತು. > > ಅದು ಬಿದ್ದುದ್ದು, ಒಬ್ಬ ರೈತನ ಮನೆಯ ಹಿಂಭಾಗದಲ್ಲಿ, ಆಗ ಬೆಳಗಿನ ಜಾವ. ಇನ್ನೂ > ಸೂರ್ಯೋದಯವಾಗಿರಲಿಲ್ಲ. ರೈತನ ಹೆಂಡತಿ ಎದ್ದು ಮನೆ ಗುಡಿಸಿ, ದನದ ಕೊಟ್ಟಿಗೆಯನ್ನು ಶುದ್ದ > ಮಾಡಿ, ಸಗಣಿಯನ್ನು ಬುಟ್ಟಿಯಲ್ಲಿ ತುಂಬಿಕೊಂಡು ಹಿತ್ತಲಿಗೆ ಬಂದಳು. ಅವಳಿಗೆ ಅಲ್ಲಿ > ಬಿದ್ದಿದ್ದ ಮರಿ ಕಂಡಿರಲಿಲ್ಲ. ತಂದ ಸಗಣಿಯನ್ನು ಮರಿಯ ಮೇಲೆ ಸುರಿದು ಮರಳಿ ಹೋದಳು. ಮರಿ > ಪಕ್ಷಿಗೆ ಉಸಿರು ಕಟ್ಟಿ ಹೋಯಿತು. "ಅಯ್ಯೋ ಸಮುದ್ರ ದಾಟಿ ಬಂದು ಬದುಕಿದೆ ಎಂದುಕೊಂಡರೆ ಈ > ಸಗಣಿಯ ಅಡಿ ಬಿದ್ದು ಸಾಯುವಂತಾಯಿತೇ?" ಎಂದುಕೊಂಡಿತು. ತನ್ನ ಮೂತಿಯನ್ನು ಚಾಚಿ > ಸಗಣಿಯಲ್ಲೊಂದು ತೂತು ಮಾಡಿತು. ಕೊಳಕು ವಾಸನೆ ಬಂದರೂ, ಹೊಸ ಗಾಳಿ ಬಂದು ಬದುಕಿದಂತಾಯಿತು. > ಆಶ್ಚರ್ಯ! ಆ ಸಗಣಿಯ ಕವಚದಿಂದಾಗಿ, ಮರಿ ಪಕ್ಷಿಗೆ ಚಳಿಯಾಗುತ್ತಿಲ್ಲ, ಸಾಕಷ್ಟು ಬೆಚ್ಚಗಿದೆ! > ಸ್ವಲ್ಪ ವಾಸನೆ ತಡೆದುಕೊಂಡರೆ ಸಾಕು, ತುಂಬಾ ಚೆನ್ನಾಗಿದೆ. ಯಾರಿಗೂ ಕಾಣುವುದಿಲ್ಲ, ಭದ್ರತೆ > ಇದೆ, ಸ್ವಲ್ಪ ಹೊತ್ತಿನ ನಂತರ ವಾಸನೆ ಅಭ್ಯಾಸವಾಗಿ ಬಿಡುತ್ತದೆ. ಸಂತೋಷವಾಗಿದ್ದ ಮರಿ ಪಕ್ಷಿ > ಹಾಡುವುದಕ್ಕೆ ಪ್ರಾರಂಭ ಮಾಡಿತು. ಹಿತ್ತಲಿನಲ್ಲಿ ಸುತ್ತಾಡುತ್ತಿದ್ದ ರೈತನ ಮನೆಯ ಬೆಕ್ಕು ಈ > ಹಾಡನ್ನು ಕೇಳಿ ಹುಡುಕಲು ಪ್ರಾರಂಭ ಮಾಡಿತು. ಸಗಣಿಯಲ್ಲಿ ಕೈ ಹಾಕಿ, ಒಳಗಿದ್ದ ಮರಿ > ಪಕ್ಷಿಯನ್ನು ಹೊರಗೆಳೆದು, ಹೊಡೆದು ಕೊಂದು ಹಾಕಿ ತಿಂದು ಬಿಟ್ಟಿತು. > > ಕಥೆಯನ್ನು ಕೇಳುತ್ತಿದ್ದ ಮರಿಗೆ ದುಃಖ ಉಮ್ಮಳಿಸಿ ಬಂತು. "ಯಾಕಮ್ಮಾ ಕಥೆ ಹೀಗೆ? ಪಾಪ! > ತುಂಬಾ ಕಷ್ಟಪಟ್ಟ ಮರಿ ಬದುಕಬೇಕಿತ್ತು" ಎಂದಿತು. ಆಗ ತಾಯಿ ಪಕ್ಷಿ ಹೇಳಿತು, "ಅದು ಕಥೆ > ಮಗೂ, ಏನಾದರೂ ಆದೀತು. ಆದರೆ ಈ ಕಥೆಯಲ್ಲಿ ನಾಲ್ಕು ನೀತಿ ಮಾತುಗಳಿವೆ, ಅವುಗಳನ್ನು > ತಿಳಿದುಕೋ. ನಿನಗೆ ತೊಂದರೆ ಬರುವುದಿಲ್ಲ- > > 1)ಹಿರಿಯರ ಮಾತನ್ನು ಕೇಳು. ಅವರ ಅನುಭವದ ಸಾರ ನಿನ್ನ ಜೀವನಕ್ಕೆ ಊರುಗೋಲಾಗುತ್ತದೆ. > 2)ನಿನ್ನ ಮೇಲೆ ಸಗಣಿ ಹಾಕುವವರೆಲ್ಲ ನಿನ್ನ ವೈರಿಗಳಲ್ಲ. ಅಕಸ್ಮಾತ್ ನಿನಗೇನಾದರೂ > ತೊಂದರೆಯಾದಲ್ಲಿ ಅದಕ್ಕೆ ಕಾರಣರಾದವರನ್ನು ವೈರಿಗಳೆಂದು ಭಾವಿಸಬೇಡ. > 3)ನಿನ್ನನ್ನು ಸಗಣಿಯಿಂದ ಹೊರಗೆ ತೆಗೆದವರು ನಿನ್ನ ಸ್ನೇಹಿತರೇ ಆಗಬೇಕಿಲ್ಲ. ಎಷ್ಟೋ ಬಾರಿ > ನಿನಗೆ ಸಹಾಯರು ಎನ್ನಿಸಿದವರು ನಿಜವಾಗಿಯೂ ಸಹಾಯಕರಾಗಿರುವುದಿಲ್ಲ. ಎಚ್ಚರವಿರಲಿ. > 4)ನೀನು ಸಗಣಿಯ ರಾಶಿಯಲ್ಲಿ ಸುಖವಾಗಿದ್ದೇನೆ ಎಂದು ಭಾವಿಸಿಕೊಂಡಿದ್ದರೆ ಬಾಯಿ > ಮುಚ್ಚಿಕೊಂಡು ಸುಮ್ಮನಿರು. ಸದ್ದು ಮಾಡಬೇಡ. ಜಗತ್ತಿನಲ್ಲಿ ಬಹಳಷ್ಟು ಜನ ಸಗಣಿಯ ರಾಶಿಯಲ್ಲೇ > ಸುಖವಾಗಿದ್ದೇವೆ ಎಂದು ಭಾವಿಸಿದ್ದಾರೆ. ಸಾಧ್ಯವಾದರೆ ಅದರಿಂದ ಹೊರಬಂದು ಸ್ವಚ್ಛ ಜೀವನ > ಸಾಗಿಸು. ಇಲ್ಲದೇ ಹೋದರೆ ಸದ್ದು ಮಾಡದೇ ಸುಮ್ಮನಿರು. ಕೊಳಕಿನಲ್ಲೇ ಇದ್ದು ಸದ್ದು ಮಾಡಿದರೆ, > ನಿನಗೆ ಆಗದವರು ಯಾರೋ ಹೊರಗೆ ಎಳೆದು ತೊಂದರೆ ಮಾಡಿಯಾರು. ಮನಸ್ಸನ್ನು > ಸ್ವಚ್ಛವಾಗಿಟ್ಟುಕೊಂಡು, ಭಗವಂತನನ್ನು ನೆನಪಿಸಿಕೊಂಡು ಬದುಕು, ಆಗ ಬದುಕು ಸ್ವಚ್ಛ, ಸುಂದರ > ಹಾಗೂ ಹಗುರಾಗುತ್ತದೆ." > > ಮರಿ ಪಕ್ಷಿ ಕಣ್ಣೊರೆಸಿಕೊಂಡು, "ಅಮ್ಮಾ, ನೀನು ಹೇಳಿದ ಹಾಗೆಯೇ ಕೇಳುತ್ತೇನೆ" ಎಂದು ಅಮ್ಮನ > ತೊಡೆಯ ಮೇಲೆ ತಲೆ ಇಟ್ಟು ನಿದ್ರೆ ಹೋಯಿತು. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CALWUL%3D6FS9cU96cmo5mU4CptNLK%3DMtEwqJeRhtiegzvszgFJpQ%40mail.gmail.com > <https://groups.google.com/d/msgid/socialsciencestf/CALWUL%3D6FS9cU96cmo5mU4CptNLK%3DMtEwqJeRhtiegzvszgFJpQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABM%3DbW1AAHpUVFMBat40dkCuk69gnHcPLYZ590kUdwGqReagQQ%40mail.gmail.com. For more options, visit https://groups.google.com/d/optout.
