Thanks very useful information

CSK
On Jun 7, 2016 9:23 PM, "Bhaskar Sakri" <[email protected]> wrote:

> Thank you very much for your information sir
> On Jun 5, 2016 10:04 PM, "prajwal nayak" <[email protected]> wrote:
>
>> ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್ ಕಂಡುಹಿಡಿದನು ಅಂತ
>> ಶಾಲೆಯಲ್ಲಿ ಉರು ಹೊಡೆದದ್ದು ನೆನಪಿದೆಯೇ? ಮತ್ತೆ ನಿಕೋಲಾ
>> ಟೇಸ್ಲಾ ಏನನ್ನು ಕಂಡುಹಿಡಿದ ? ಹೆಚ್ಚಿನ ಜನ ಈ ಹೆಸರೇ
>> ಕೇಳಿಲ್ಲ. ಯಾಕೆ ಗೊತ್ತಾ? ಅವನ ಹೆಸರನ್ನೇ ಅಳಿಸಲು ಪ್ರಯತ್ನ
>> ನಡೆದಿತ್ತು. ಈತ ಎಷ್ಟರ ಮಟ್ಟಿಗೆ ವಿಕ್ಷಿಪ್ತ ಅಂದರೆ ಆತ ಹುಚ್ಚು
>> ವಿಜ್ಞಾನಿ ಅಂತ ಆಡಿಕೊಳ್ಳುವ ಮಟ್ಟಿಗೆ.
>> ಥಾಮಸ್ ಆಲ್ವಾ ಎಡಿಸನ್ ಈತನಿಗೆ ಘೋರ ಮೋಸ ಮಾಡಿದ್ದ.
>> ಕೈಯಲ್ಲಿ 4 ಸೆಂಟ್ಸ್ ಹಿಡಿದುಕೊಂಡು 1884 ರಲ್ಲಿ ಇಂಜಿನಿಯರಿಂಗ್
>> ಪಾಸಾಗದ ಟೇಸ್ಲಾ ಅಮೇರಿಕಾಗೆ ಬಂದ. ಕೆಲಸಕ್ಕೆ ಸೇರಿದ್ದು
>> ಎಡಿಸನ್ ಬಳಿ. ಸಂಬಳ ಅತೀ ಕಡಿಮೆ.
>> ಎಡಿಸನ್ ಕಂಡುಹಿಡಿದಿದ್ದು ಡೈರೆಕ್ಟ ಕರೆಂಟ್ ( ಡಿಸಿ ) ಮೋಟರ್.
>> ಅದರಲ್ಲಿ ಅನೇಕ ನ್ಯೂನತೆ ಗಳಿದ್ದವು. ತಾನು ಆಲ್ಟರನೇಟಿವ
>> ಕರೆಂಟ್ ( ಎಸಿ ) ಮೋಟಾರ್ ಕಂಡುಹಿಡಿಯುವುದಾಗಿ ಟೇಸ್ಲಾ
>> ಹೇಳಿದ. ಹಾಗೇನಾದರೂ ಮಾಡಿದಲ್ಲಿ 50 ಸಾವಿರ $
>> ಕೊಡುವುದಾಗಿ ಎಡಿಸನ್ ಹೇಳಿದ. ಇಂದಿನ ಲೆಕ್ಕ ದಲ್ಲಿ ಸುಮಾರು
>> ಎರಡು ಕೋಟಿ ರೂಪಾಯಿ ಇರಬಹುದು.
>> ಟೇಸ್ಲಾ ಹುಟ್ಟಿದ್ದು 1856 ಆಸ್ಟ್ರಿಯಾ ದಲ್ಲಿ. ( Arnold
>> Schwarzenegger too was born here ) ಚಿಕ್ಕವನಿರಬೇಕಾದರೆ
>> ಇಡೀ ಪುಸ್ತಕ ವನ್ನೇ ನೆನಪಿಟ್ಟುಕ್ಕೊಳ್ಳುವಷ್ಟು ಜ್ಞಾಪಕ
>> ಶಕ್ತಿ . ಅಸಾಮಾನ್ಯ ಮೇಧಾವಿ. 17 ವರ್ಷದ ಟೇಸ್ಲಾ ಕಾಲರಾ
>> ಆಗಿ ಒಂಬತ್ತು ತಿಂಗಳು ಹಾಸಿಗೆ ಹಿಡಿದ. ಬದುಕುವ ಚಾನ್ಸ್
>> ಇರಲಿಲ್ಲ. ಆಗ ಟೇಸ್ಲಾ ನ ತಂದೆ - ನೀನು ಬದುಕಿದರೆ
>> ಇಂಜಿನಿಯರಿಂಗ್ ಕಲಿಸುವೆ ಅಂತ ಮಾತು ಕೊಟ್ಟರು. ಟೇಸ್ಲಾ
>> ಪವಾಡದಂತೆ ಗುಣವಾದ. ಆದರೆ ಕಾಲೇಜಿಲ್ಲಿ ಜೂಜಾಟ ಕಲಿತು
>> ಇಂಜಿನಿಯರಿಂಗ್ ಕೊನೆಯ ಪರೀಕ್ಷೆ ಯಲ್ಲಿ ಏನೂ ಓದದೇ
>> ಹೋಗಿದ್ದ.
>> ಸರಿ. ಕತೆಗೆ ಹಿಂತಿರುಗೋಣ, ತಿಂಗಳು ಗಟ್ಟಲೇ ಕಷ್ಟ ಪಟ್ಟು ಎಸಿ
>> ಮೋಟಾರ್ ಕಂಡುಹಿಡಿದ ಟೇಸ್ಲಾ ಗೆ, ಎಡಿಸನ್ - ನಾನು ಜೋಕ್
>> ಮಾಡಿದ್ದೆ. ಹಣ ಗಿಣ ಏನೂ ಕೊಡಲು ಸಾಧ್ಯವಿಲ್ಲ. ಬೇಕಾದರೆ
>> ವಾರಕ್ಕೆ ಹತ್ತು ಡಾಲರ್ ಸಂಬಳ ಜಾಸ್ತಿ ಮಾಡುತ್ತೇನೆ ಅಂದ.
>> ಟೇಸ್ಲಾ ರಾಜೀನಾಮೆ ಕೊಟ್ಟು ಹೊರ ನಡೆದ.
>> ನಂತರ ನಡೆದದ್ದು ಟೇಸ್ಲಾ ಎಡಿಸನ್ ಯುದ್ಧ. ಇದು ಕರೆಂಟ್ ವಾರ್
>> ಅಂತ ಹೆಸರಾಯಿತು. ಡಿಸಿ ಕರೆಂಟ್ ಚಿಕ್ಕ ಪ್ರದೇಶ ಗಳಿಗೆ ಮಾತ್ರ
>> ಹೊಂದುತ್ತಿತ್ತು. ಟೇಸ್ಲಾ ಕರೆಂಟ್ ದೊಡ್ಡ ನಗರಗಳಿಗೆ
>> ಹೊಂದುತ್ತಿತ್ತು. ಮತ್ತು ಸಪೂರ ವಾಯರ್ ಸಾಕಿತ್ತು. ಎಡಿಸನ್
>> ಟೇಸ್ಲಾ ನನ್ನು ಸೋಲಿಸಲು ಆನ್ಯಾಯದ ದಾರಿ ಹಿಡಿದ. ಮಕ್ಕಳಿಗೆ
>> ದುಡ್ಡು ಕೊಟ್ಟು ಜನರ ನಾಯಿ ಬೆಕ್ಕು ಗಳನ್ನು ಕೊಂದು
>> ಹಾಕಿಸಿ ಇವು ಎಸಿ ಕರೆಂಟ್ ಕಾರಣ ಸತ್ತವು. ಅದು ಅಪಾಯಕಾರಿ
>> ಅಂತ ಸುದ್ದಿ ಹಾಕಿದ. ಜನರ ಎದುರು ಕೆಲ ನಾಯಿಗಳನ್ನು ಮತ್ತು
>> ಒಂದು ಆನೆಯನ್ನು ಕರೆಂಟ್ ಕೊಟ್ಟು ಸಾಯಿಸಿದ.
>> ಇದಕ್ಕೆ ಉತ್ತರ ವಾಗಿ ಟೇಸ್ಲಾ ಸಾವಿರಾರು ವೋಲ್ಟ್ ಕರೆಂಟ್
>> ತನ್ನ ಮೈಯಲ್ಲಿ ಹಾಯಿಸಿಕೊಂಡು ತೋರಿಸಿದ. ಹೈ ಫ್ರೀಕ್ವೆನ್ಸಿ
>> ಕರೆಂಟ್ ಹಾನಿ ಮಾಡುವುದಿಲ್ಲ. ಅತೀ ಹೆಚ್ಚು ತರಂಗದ ಧ್ವನಿ
>> ಮಾನವ ಕಿವಿಗಳಿಗೆ ಹೇಗೆ ಕೇಳುವುದಿಲ್ಲವೋ ಹಾಗೆ. 2000
>> ಸೈಕಲ್ ಗಿಂತ ಹೆಚ್ಚಿನ ಫ್ರೀಕ್ವೆನ್ಸಿ ಕರೆಂಟ್ ನ್ನು ದೇಹ
>> ಗುರುತಿಸುವುದಿಲ್ಲ. ಈಗ ಈ ತರ ಕರೆಂಟ್ ನ್ನು ಇಲೆಕ್ಟ್ರಿಸಿಟಿ
>> ಥೆರಪಿಯಲ್ಲಿ ಬಳಸುತ್ತಾರೆ.
>> ಎಡಿಸನ್ ಸೋತ. 1893 ವರ್ಲ್ಡ ಟ್ರೇಡ್ ಫೇರ್ ಗೆ ವಿದ್ಯುತ್
>> ಕೊಡುವ ಕಾಂಟ್ರಾಕ್ಟ ಟೇಸ್ಲಾ ಗೆ ಸಿಕ್ಕಿತು. Edison 's Co got
>> merged with General Electric . ವಿದ್ಯುತ್ ಬಲ್ಬ್
>> ಕಂಡುಹಿಡಿದವನೂ ಥಾಮಸ್ ಆಲ್ವಾ ಎಡಿಸನ್ ಅಲ್ಲ. ನಮಗೆ
>> ಶಾಲೆಯಲ್ಲಿ ತಪ್ಪಾಗಿ ಕಲಿಸಲಾಗಿತ್ತು. ಆದರೆ ಎಡಿಸನ್ ಕೂಡ ಕೆಲವು
>> ಸಂಶೋಧನೆ ಮಾಡಿದ್ದ. ಆತ ಆಗಿನ ಸಿನೇಮಾ ತಂತ್ರಜ್ಞಾನ ದಲ್ಲಿ
>> ಕೂಡ ನಂತರ ದುಡಿದಿದ್ಲ.
>> ಟೇಸ್ಲಾ ಮಾಡಿದ ಸಂಶೋಧನೆ ಗಳು 700 ಕ್ಕೂ ಅಧಿಕ. ಆತನ
>> ಹೆಸರಿನಲ್ಲಿ ಇದ್ದ ಪಾಟೆಂಟ್ 125 . ಟೇಸ್ಲಾ ನ ಜತೆ ಸಂಪರ್ಕ ಕ್ಕೆ
>> ಬಂದವರೆಲ್ಲ ಕೋಟ್ಯಾಧೀಶರಾದರು.
>> 1899 . ಆತ ಮಾನವ ನಿರ್ಮಿತ ಮಿಂಚು ಕಂಡುಹಿಡಿದ. ಲಕ್ಷಾಂತರ
>> ವೋಲ್ಟ್ ನ ಮಿಂಚನ್ನು ತಯಾರಿಸಿದ ಮಾತ್ರವಲ್ಲ ಅದನ್ನು ತನ್ನ
>> ದೇಹದಲ್ಲಿ ಹರಿಸಿದ. ಜಾದೂ ಮಾಡಿದಂತೆ ತನ್ನ ಕೈಯ್ಯಿಂದ
>> ಮಿಂಚನ್ನು ಎಸೆಯ ಬಲ್ಲವನಾಗಿದ್ದ. ಆತ ಈ ಪ್ರಯೋಗ
>> ಮಾಡಿದಾಗ ಆಕಾಶ ದಿಂದ 135 ಅಡಿ ಉದ್ದ ದ ಮಿಂಚಿನ
>> ಪ್ರವಾಹವೇ ಆತನ ಪ್ರಯೋಗ ಶಾಲೆಯ ಮೇಲೆ ಎರಗಿತು.
>> ಮೂವತ್ತು ಕಿಮೀ ಸುತ್ತಳತೆ ಯಲ್ಲಿ ಜನರಿಗೆ ಗುಡುಗಿನ ಆರ್ಭಟ
>> ಕೇಳಿತು. ಸುತ್ತ ನಡೆದಾಡುತ್ತಿದ್ದ ಜನರ ಪಾದಗಳ ಮಧ್ಯೆ ಕಿಡಿಗಳು
>> ಉಂಟಾದವು. ಏನು ಮುಟ್ಟಿದರೂ ಕಿಡಿಗಳು ಬಂದವು.
>> ಟೇಸ್ಲಾ ಹೇಳಿದ್ದು ಇಡೀ ಭೂಮಿಯಲ್ಲಿ ಕರೆಂಟ್ ಹರಿಯುತ್ತಿದೆ.
>> ಅದಕ್ಕೆ ಒಂದು ಫ್ರೀಕ್ವೆನ್ಸಿ ಇದೆ. ಆದೇ ಫ್ರೀಕ್ವೆನ್ಸಿ ಬಳಸಿದರೆ
>> ಭೂಮಿಯ ಮೇಲೆ ಎಲ್ಲೇ ಒಂದು ಕೋಲು ನೆಟ್ಟರೂ
>> ಇಲೆಕ್ಟ್ರಿಸಿಟಿ ಸಿಗುತ್ತದೆ. ಅದೂ ಪುಕ್ಕಟೆ.
>> ಬ್ಯಾಕ್ ಟು ದಿ ಫ್ಯೂಚರ್ ಸಿನಿಮಾ ನೀವು ನೋಡಿದ್ದರೆ ಅದರಲ್ಲಿ
>> ಬರುವ ವಿಜ್ಞಾನಿ ಟೇಸ್ಲಾ ನಿಂದ ಪ್ರೇರಿತ.
>> ಟೇಸ್ಲಾ ಇಡೀ ಜಗತ್ತಿಗೆ ಪುಕ್ಕಟೆ ಇಲೆಕ್ಟ್ರಿಸಿಟಿ ಕೊಡಬೇಕು
>> ಅಂತ ಯೋಜನೆ ಹಾಕಿದ್ದ . ಮಾತ್ರವಲ್ಲ ಅದು ವೈರ್ ಲೆಸ್
>> ಇಲೆಕ್ಟ್ರಿಸಿಟಿ. ಈಗಿನ ಮೊಬೈಲ ಸಿಗ್ನಲ್ ತರ. ಅಲ್ಲಲ್ಲಿ ಟವರ್ ಹಾಕಿ
>> ಇಲೆಕ್ಟ್ರಿಸಿಟಿ ರಿಲೇ ಮಾಡುವುದು. ಇವನ್ನು ಕಾರು ಕ್ಯಾಚ್
>> ಮಾಡಿ ಬಳಸುವುದು. ಪೆಟ್ರೋಲು ಬೇಡ ಡೀಸಲ್ ಬೇಡ. ಈ
>> ಗಲ್ಫ್ ವಾರ್ ಇರುತ್ತಲೇ ಇರಲಿಲ್ಲ. ಭಯೋತ್ಪಾದನೆ ಕೂಡ.
>> ಅದೊಂದು ಪ್ರಾಜೆಕ್ಟ ಆಗಿದ್ದಿದ್ದರೆ ಇಡೀ ಜಗತ್ತೇ ಇಂದು
>> ಬೇರಯೇ ಇರುತ್ತಿತ್ತು.
>> 1900 ಇಸ್ವಿ . ಇಂತಹ ಒಂದು ಟವರ್ ನಿರ್ಮಾಣ ಮಾಡಲು ಜೆ ಪಿ
>> ಮಾರ್ಗನ್ 1.5 ಲಕ್ಷ ಡಾಲರ್ ಕೊಟ್ಟ. ( ಇಂದು ಮಾರ್ಗನ್ ಎಂಡ್
>> ಸ್ಟಾನ್ಲಿ ) ಈಗಿನ ಲೆಕ್ಕದಲ್ಲಿ 45 ಲಕ್ಷ $. ಟವರ್ ಇನ್ನೇನು
>> ಮುಗಿಯಬೇಕು ಅಂದಾಗ ಮಾರ್ಗನ್ ಉಳಿದ ಹಣ ಕೊಡಲು
>> ಸಾಧ್ಯವಿಲ್ಲ ಅಂತ ಹೇಳಿದ. ಅಮೆರಿಕದ ಸರಕಾರ ಈ ಟವರ್
>> ಬೀಳಿಸಿತು. ಯಾಕೆ ಅಂತ ಗೊತ್ತಿಲ್ಲ. ಫ್ರೀ ವಿದ್ಯುತ್ ಕೊಟ್ಟರೆ
>> ಲಾಭ ಏನು ಅಂತ ಬೀಳಿಸಿತು ಅಂತ ನಂತರ ಗೊತ್ತಾಯಿತು.
>> ಟೇಸ್ಲಾ ಏನೇ ಮಾಡಿದರೂ ಸರಕಾರ ತೊಂದರೆ
>> ಕೊಡುತ್ತಿತ್ತು.
>> ಟೇಸ್ಲಾ ಸತ್ತ ನಂತರ ಆತನ ಎಲ್ಲ ನೋಟ್ಸ್ ಗಳನ್ನು ಅಮೆರಿಕ
>> ತೆಗೆದುಕೊಂಡು ಹೋಗಿ ಕ್ಲಾಸಿಫೈ ಮಾಡಿ ಇಟ್ಟಿದೆ.ಯಾಕೆ
>> ಗೊತ್ತಾ? ಟೇಸ್ಲಾ ಡೆತ್ ರೇಸ್ ಕಂಡುಹಿಡಿದಿದ್ದ. ಈ ಲೇಸರ್
>> ಮೂಲಕ ಆಕಾಶದಲ್ಲಿ ಹಾರುವ ವಿಮಾನ ವನ್ನು
>> ಹೊಡೆದುರುಳಿಸಲು ಏನೂ ಖರ್ಚು ಬರುತ್ತಿರಲಿಲ್ಲ. ಟೇಸ್ಲಾ ನ
>> ಈ ನೋಟ್ಸ್ ನಿಗೂಢ ವಾಗಿ ಮಾಯವಾದವು. ಈಗ ಮೂರು
>> ವರ್ಷಗಳ ಹಿಂದೆ ಟೇಸ್ಲಾ ನ ಡೆತ್ ರೇ ನಾವು ಡೆವಲಪ್
>> ಮಾಡಿದ್ದೇವೆ ಅಂತ ಅಮೇರಿಕಾದ ಟೀವಿ ವರದಿ ಮಾಡಿದೆ.
>> 1893 .ಮಾರ್ಕೋನಿ ರೇಡಿಯೋ ಕಂಡು ಹಿಡಿಯುವ ಮೊದಲೇ
>> ಟೇಸ್ಲಾ ಕಂಡುಹಿಡಿದಿದ್ದ. ಆದರೆ ಕೋರ್ಟ್ ಹಕ್ಕನ್ನು
>> ಮಾರ್ಕೋನಿಗೆ ನೀಡಿತು. ಆಗ ಟೇಸ್ಲಾ ಹೇಳಿದ - ಮಾರ್ಕೋನಿ
>> ಒಬ್ಬ ಒಳ್ಳೆಯ ವ್ಯಕ್ತಿ . ಆತ ನನ್ನ 17 ಪಾಟೆಂಟ್ ಗಳನ್ನು
>> ಬಳಸುತ್ತಿದ್ದಾನೆ. ಒಳ್ಳೆಯದಾಗಲಿ.
>> ಒಮ್ಮೆ ಟೇಸ್ಲಾ ತನ್ನ ಒಸ್ಸಿಲೇಟರ್ ಯಂತ್ರ ಚಾಲೂ
>> ಮಾಡಿದಾಗ ಸುತ್ತ ಭೂಕಂಪ ಆಯಿತು. ಅದನ್ನು ನಿಲ್ಲಿಸಲು
>> ಸಾಧ್ಯವಾಗದೇ ಟೇಸ್ಲಾ ಸುತ್ತಿಗೆಯಿಂದ ಅದನ್ನು
>> ಮುರಿಯುವದಕ್ಕೂ ಪೊಲೀಸರು ಬರುವದಕ್ಕೂ ಸರಿ ಆಯಿತಂತೆ.
>> ಭೂಮಿಯ ಫ್ರೀಕ್ವೆನ್ಸಿ ಯನ್ನು ಉಪಯೋಗಿಸಿ ಈ ಯಂತ್ರ ಕೆಲಸ
>> ಮಾಡುತ್ತದೆ. ಇದನ್ನು ಉಪಯೋಗಿಸಿ ಯಾವುದೇ ಬಿಲ್ಡಿಂಗ
>> ಬೀಳಿಸಬಹುದು. ಬೇಕಾದರೆ ಇಡೀ ಭೂಮಿಯನ್ನು ಎರಡು
>> ತುಂಡು ಮಾಡಬಹುದು ಅಂತ ಟೇಸ್ಲಾ ಹೇಳಿದ. ಈ
>> ಭೂಕಂಪನದ ಯಂತ್ರ ದ ಬಗ್ಗೆ ನಂತರ ಸುಳಿವು ಸಿಕ್ಕಿಲ್ಲ.
>> ಟೇಸ್ಲಾ 6.2 " hight . 64 ಕೆಜಿ. ಸ್ಪುರದ್ರೂಪಿ. ಆತನಿಗೆ ದಪ್ಪ
>> ಇದ್ದವರನ್ನು ಕಂಡರೆ ಆಗುತ್ತಿರಲಿಲ್ಲ.
>> ಟೇಸ್ಲಾ ತನ್ನ ಜೀವನದಲ್ಲಿ ಬ್ರಹ್ಮಚರ್ಯ ಮಾಡಿದ್ದರಿಂದ ತನಗೆ
>> ಈ ತರ ಪವರ್ ಬಂದಿದೆ ಅಂತ ಹೇಳಿದ್ದ. ಪ್ರತೀ ರಾತ್ರಿ ಕಾಲಿನ
>> ಹೆಬ್ಬೆರಳು ಗಳನ್ನು ನೂರು ಬಾರಿ ಉಜ್ಜಿದರೆ ಮೆದುಳು
>> ಚುರುಕಾಗುತ್ತದೆ ಅಂತ ನಂಬಿದ್ದ. ಸ್ವಾಮಿ ವಿವೇಕಾನಂದರ
>> ನ್ನು ಭೇಟಿಯಾಗಿದ್ದ . ಈತನ ಪ್ರಯೋಗ ಶಾಲೆಗೆ ಯಾವುದೋ
>> ರೇಡಿಯೋ ಸಂದೇಶಗಳು ಬಂದು ಅವು ಅನ್ಯ ಗ್ರಹ
>> ಜೀವಿಯವು ಅಂತ ಸುದ್ದಿಯಾಗಿತ್ತು. ಟೇಸ್ಲಾ ತಾನು ಟೈಮ್
>> ಮಷೀನ ಕಂಡು ಹಿಡಿಯುತ್ತೇನೆ ಅಂತ ಕೂಡ ಹೇಳಿದ್ದ.
>> 1897 ರಲ್ಲಿ ಒಂದು ವೈರ್ ಲೆಸ್ ಇಲೆಕ್ಟ್ರಿಸಿಟಿ ಪ್ರಯೋಗ ದಲ್ಲಿ ಆರು
>> ಮೈಲಿ ದೂರದ ಪವರ್ ಹೌಸ್ನ ಡೈನಮೋ ಹೆಚ್ಚಿನ ಕರೆಂಟ್ ಬಂದು
>> ಸುಟ್ಟು ಹೋಯಿತು. ಅಲ್ಲಿನ ಕಿಟಕಿಗಳೆಲ್ಲ ಸ್ಪಾರ್ಕ್. ಸ್ವಿಚ್ ಆಫ್
>> ಇದ್ದರೂ ಬಲ್ಬ್ ಗಳೆಲ್ಲ ಹೊತ್ತಿ ಉರಿದವು.
>> ಇಂದಿನ ಸ್ಪಾರ್ಕ್ ಪ್ಲಗ್ ಕಂಡುಹಿಡಿದಿದ್ದು ಟೇಸ್ಲಾ. ರಿಮೋಟ್
>> ಕಂಟ್ರೋಲ್, ಹೈಡ್ರೋ ಇಲೆಕ್ಟ್ರಿಸಿಟಿ, ಟೇಸ್ಲಾ ಕಾಯ್ಲ್.
>> ಇಂಡಕ್ಷನ್ ಮೋಟಾರ್ ಇತ್ಯಾದಿ ನೂರಾರು ಕೂಡ. ಅಮೆರಿಕದ
>> ನೈಗರಾ ವಿದ್ಯುತ್ ಸ್ಥಾವರ ದಲ್ಲಿ ಅಂದಿನಿಂದ ಇಂದಿನವರೆಗೆ
>> ವಿದ್ಯುತ್ ಉತ್ಪಾದನೆ ಟೇಸ್ಲಾ ತಯಾರಿಸಿದ ಮೋಟಾರ್ ನಿಂದ.
>> ಎಲ್ಲರಿಗೂ ಮೊದಲು ಟೇಸ್ಲಾ ಎಕ್ಸ್ ರೇ ಕಂಡುಹಿಡಿದಿದ್ದ.
>> ಎಡಿಸನ್ ಎಕ್ಸ್ ರೇ ತುಂಬಾ ರೇಡಿಯೇಶನ್ ನಿಂದ ಕೂಡಿತ್ತು.
>> ಟೇಸ್ಲಾ ಕೊಟ್ಟ ಎಚ್ಚರಿಕೆ ಕಡೆಗಣಿಸಿ ಎಡಿಸನ್ ತನ್ನ ಅಸಿಸ್ಟೆಂಟ್
>> ಸ್ಟಾನ್ಲಿ ಎಂಬಾತನ ಕೈಯಿನ ನೂರಾರು ಎಕ್ಸ್ ರೇ ತೆಗೆದು
>> ನಂತರ ಆತನ ಕೈಯನ್ನೇ ಕತ್ತರಿಸಬೇಕಾಗಿ ಬಂತು. ಇದಲ್ಲದೆ
>> ಎಡಿಸನ್ ತನ್ನ ಕಣ್ಣಿಗೂ ಎಕ್ಸ್ ರೇ ಬಿಟ್ಟುಕೊಂಡಿದ್ದ.
>> ಟೇಸ್ಲಾ ಎಂದೂ ದುಡ್ಡಿಗೆ ಆತ ಆಸೆ ಪಟ್ಟಿರಲೇ ಇಲ್ಲ. ಜಾರ್ಜ್
>> ವೆಲ್ಲಿಂಗಟನ್ ಟೇಸ್ಲಾ ನ ಜತೆ ಒಪ್ಪಂದ ಮಾಡಿಕೊಂಡು ಎಸಿ
>> ಮೋಟಾರ್ ತಯಾರಿಕೆ ಆರಂಭಿಸಿತು. ಅವರು ಟೇಸ್ಲಾ ಗೆ ಹತ್ತು
>> ಲಕ್ಷ $ ಕೊಡಬೇಕಾಗಿತ್ತು. ಆದರೆ ನಮಗೆ ತೊಂದರೆ ಆಗಿದೆ
>> ದಯವಿಟ್ಟು ಕೆಲವು ದಿನ ಹಣ ತೆಗೆದು ಕೂಳ್ಳಬೇಡಿ ಅಂತ ಅವರು
>> ಟೇಸ್ಲಾ ಹತ್ತಿರ ವಿನಂತಿ ಮಾಡಿದರು. ಟೇಸ್ಲಾ ಹಣ ಬೇಡ
>> ಅಂತ ಕಾಂಟ್ರಾಕ್ಟ ಹರಿದು ರೈಟ್ಸ್ ಪುಕ್ಕಟೆ ಕೊಟ್ಟ. ಆ
>> ಕಾಂಟ್ರಾಕ್ಟ ನ ಇಂದಿನ ಬೆಲೆ 300 ಕೋಟಿ ರೂಪಾಯಿ ಗೂ
>> ಹೆಚ್ಚು. ವೆಲ್ಲಿಂಗಟನ್ ಸಾವಿರಾರು ಕೋಟಿ ಡಾಲರ್ ದುಡಿಯಿತು.
>> ಟೇಸ್ಲಾನ ಪ್ರಯೋಗ ಶಾಲೆ ನಿಗೂಢವಾಗಿ ಸುಟ್ಟು
>> ಹೋಯಿತು. ಆತ ಮತ್ತೆ ಮೊದಲಿನಿಂದ ಶುರು ಮಾಡಿದ .
>> ಟೇಸ್ಲಾ ತನ್ನ ಪಾಟೆಂಟ್ ಗಳನ್ನು ಬ್ಯಾಂಕ ನಲ್ಲಿ ಅಡವಿಟ್ಟು
>> ಸಾಲ ಪಡೆದಿದ್ದ. ಬ್ಯಾಂಕ ಅವನ್ನು ಮುಟ್ಟುಗೋಲು
>> ಹಾಕಿತು. ಟೇಸ್ಲಾ ರಸ್ತೆಯ ಬದಿ ಹೊಂಡ ತೋಡುವುದು ,
>> ಮೋಟಾರ್ ರಿಪೇರಿ ಮಾಡುತ್ತಿದ್ದ. ಹೊಂಡ ತೋಡಿದರೆ ಎರಡು
>> ಡಾಲರ್ ಸಿಗುತ್ತಿತ್ತು.
>> 1943 . ಟೇಸ್ಲಾ ಸಾಯುವಾಗ ಕೈಯಲ್ಲಿ ಕಾಸಿಲ್ಲದೇ ಬಿಸ್ಕಿಟ್
>> ತಿಂದು ಯಾವುದೋ ಹೋಟೆಲ್ ನಲ್ಲಿ ಇದ್ದ. ಅರೆ ಹುಚ್ಚನಂತೆ
>> ಪಾರಿವಾಳ ಗಳ ಜೊತೆ ಮಾತನಾಡುತ್ತಿದ್ದ. ಸಾವಿರಾರು
>> ಪಾರಿವಾಳ ಗಳಿಗೆ ಕಾಳು ನೀಡುತ್ತಿದ್ದ. ಅದರಲ್ಲಿ ಒಂದು ಬಿಳಿ
>> ಪಾರಿವಾಳ ಈತ ಎಲ್ಲೇ ಇದ್ದರೂ ಬರುತ್ತಿತ್ತು. ಪಾರಿವಾಳ ಗಳಿಗೆ
>> ಆಹಾರ ನೀಡಲು ಹೋಗುವಾಗ ಕಾರೊಂದು ಬಂದು ಗುದ್ದಿ
>> ಆತನ ಪಕ್ಕೆಲುಬು ಗಳು ಮುರಿದು ಹೋದವು. ಆದರೂ ಟೇಸ್ಲಾ
>> ಒಬ್ಬ ಕೆಲಸದವನನ್ನು ನೇಮಿಸಿ ಪಾರಿವಾಳ ಗಳಿಗೆ ಆಹಾರ
>> ಕೊಡುತ್ತಿದ್ದ. ಬಿಳಿ ಪಾರಿವಾಳ ತಾನು ಸಾಯಲಿದ್ದೇನೆ ಅಂತ
>> ಹೇಳಲು ನನ್ನ ರೂಮಿಗೆ ಬಂತು, ಅಂತ ಹೇಳಿಕೆ ಕೊಟ್ಟ.
>> ಇಂದು ಟೇಸ್ಲಾ ಗಿಗಾಫ್ಯಾಕ್ಟರಿ ಸ್ಥಾಪಿಸಿ ಜಗತ್ತಿನಲ್ಲಿಯೇ
>> ಅತೀ ಹೆಚ್ಚು ಲಿಥಿಯಮ್ ಆಯಾನ್ ಬ್ಯಾಟರಿ ಗಳನ್ನು
>> ತಯಾರಿಸಲಾಗುತ್ತಿದೆ. ಟೇಸ್ಲಾ ಇಲೆಕ್ಟ್ರಿಕ್ ಕಾರ್ ತಯಾರಿಸುವ
>> ಟೇಸ್ಲಾ ಮೋಟಾರ್ಸ ಇದೆ.
>> " Present is their's. The future for which I have really
>> worked is mine " - Nikola Tesla
>> ಒಂದು ದಿನ ಕೈಯಲ್ಲಿ ಚಿಕ್ಕ ಯಂತ್ರ ಹಿಡಿದು ಇಡೀ ಜಗತ್ತಿನ
>> ಮಾಹಿತಿ ನೋಡುವಂತಾಗುತ್ತದೆ ಅಂತ ಇಂಟರ್ನೆಟ್ ಬಗ್ಗೆ
>> ಟೇಸ್ಲಾ ಆಗ ಹೇಳಿದ್ದ.
>> ಟೇಸ್ಲಾ ಮತ್ತು ಐನ್ಸ್ಟೈನ್ ಮಧ್ಯೆ ವಾದ ವಿವಾದ ಆಗಿತ್ತು.
>> ಐನ್ಸ್ಟೈನ್ ಹೇಳಿದ ಕೆಲವನ್ನು ಟೇಸ್ಲಾ ಒಪ್ಪಿರಲಿಲ್ಲ.
>> ನೀವು ಜಗತ್ತಿನಲ್ಲಿ ಯಾವುದೇ ವಿಜ್ಞಾನಿ ಯನ್ನು ಜೀವನ
>> ದಲ್ಲಿ ಒಮ್ಮೆ ಭೇಟಿಯಾಗಲು ಬಯಸಿದರೆ ಯಾರನ್ನು? ಅಂತ ಕಳೆದ
>> ವರ್ಷ ಆನ್ ಲೈನ್ ಪೋಲ್ ಮಾಡಿದ್ದರು. ಯಾರನ್ನು ಜನ ಆಯ್ಕೆ
>> ಮಾಡಿದರು ಅಂತ ಬಾಯಿ ಬಿಟ್ಟು ಹೇಳಬೆಕಿಲ್ಲ ತಾನೇ??
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CALWUL%3D6-Dm6tK_dity4epbACB2oB1d4dSu0B-HDM3%3Dca%2Bd0COQ%40mail.gmail.com
>> <https://groups.google.com/d/msgid/socialsciencestf/CALWUL%3D6-Dm6tK_dity4epbACB2oB1d4dSu0B-HDM3%3Dca%2Bd0COQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CA%2BsZ%3D45CKyrhNCH-TF-tgQ3psOZEathQVmv2jCCsoBYWtBn4pQ%40mail.gmail.com
> <https://groups.google.com/d/msgid/socialsciencestf/CA%2BsZ%3D45CKyrhNCH-TF-tgQ3psOZEathQVmv2jCCsoBYWtBn4pQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAFY2ei6SFf%2B8Om9A1BdAiVTPjuzHDVuCkmeQTQEpYT3wtcPZtQ%40mail.gmail.com.
For more options, visit https://groups.google.com/d/optout.

Reply via email to