ಮೀಸಲಾತಿ ನೀಡಿದರೆ ನಮ್ಮ ಸಂವಿಧಾನದ ಉಲ್ಲಂಘನೆ ಅಲ್ವಾ ಸರ್... ಸಂವಿಧಾನದಲ್ಲೆ ಹೇಳಿದ್ದಾರೆ
ಎಲ್ಲರೂ ಸಮಾನರು ಉದ್ಯೋಗ ಪಡೆಯಲು ಸಮಾನ ಅವಕಾಶ ಇದೆ ಅಂತೆಲ್ಲಾ ಆದರೆ ಇಗ ಆಗ್ತಾ ಇರುವುದು
ಏನು ಈ ಮೀಸಲಾತಿ ಇಂದ
On 2 Jul 2016 06:16, "Siddaramappa s m Sri" <[email protected]> wrote:

> ಮೀಸಲಾತಿ: ಅಸಹನೆ,ಆತ್ಮವಂಚನೆ
> 30 Jun, 2016ಎಚ್‌.ಕೆ.ಶರತ್‌
>
> ಎಂಜಿನಿಯರಿಂಗ್  ವಿದ್ಯಾರ್ಥಿಗಳಿಗೆ ಬೋಧಿಸುವ ಅಧ್ಯಾಪಕರಿಗೆಂದೇ ಇತ್ತೀಚೆಗೆ
> ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ, ಪ್ರತಿಯೊಬ್ಬರೂ ಯಾವುದಾದರೂ ಸಾಮಾಜಿಕ ವಿಷಯದ
> ಕುರಿತು ಐದು ನಿಮಿಷ ಮಾತನಾಡಬೇಕೆಂದು ಸೂಚಿಸಲಾಯಿತು. ಬಡತನ, ಖಾಸಗೀಕರಣ, ನಿರುದ್ಯೋಗ ಹೀಗೆ
> ತಮಗೆ ಸೂಕ್ತವೆನಿಸಿದ ವಿಷಯ ಆಯ್ದುಕೊಂಡು ಎಲ್ಲರೂ ಮಾತನಾಡಿದರು.
>
> ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿದ ಅಧ್ಯಾಪಕರೊಬ್ಬರು, ‘ನಿರುದ್ಯೋಗ ಸಮಸ್ಯೆಗೆ
> ಮೀಸಲಾತಿಯೇ ಮುಖ್ಯ ಕಾರಣ. ಮೀಸಲಾತಿಯಿಂದಾಗಿ ಅರ್ಹರಿಗೆ ಉದ್ಯೋಗ ಸಿಗುತ್ತಿಲ್ಲ.
> ಉದ್ಯೋಗದಲ್ಲಿ ಮೀಸಲಾತಿ ಕಿತ್ತೊಗೆಯಬೇಕು’ ಎಂದು ಗುಡುಗಿದರು. ಅವರ ಮಾತಿಗೆ ಅಲ್ಲಿ
> ನೆರೆದಿದ್ದ ಬಹುತೇಕ ಅಧ್ಯಾಪಕರು ತಲೆದೂಗುವ ಮೂಲಕ ತಮ್ಮ ಸಹಮತ ವ್ಯಕ್ತಪಡಿಸಿದರು.
> ಅಧ್ಯಾಪಕರು ವಿಚಾರ ಮಂಡಿಸುವ ಶೈಲಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ ಸಂಪನ್ಮೂಲ
> ವ್ಯಕ್ತಿ, ‘ಮೀಸಲಾತಿಯಂತಹ ಸೂಕ್ಷ್ಮ ವಿಚಾರಗಳ ಕುರಿತು ಸಾರ್ವಜನಿಕವಾಗಿ ಮಾತನಾಡುವಾಗ ತುಂಬಾ
> ಎಚ್ಚರದಿಂದಿರಬೇಕು. ಇಲ್ಲೇನೊ ನಾವು ನಾವೇ ಇದ್ದೀವಿ ಪರವಾಗಿಲ್ಲ. ಆದ್ರೆ ಬೇರೆ ಕಡೆ ಈ ರೀತಿ
> ಮಾತಾಡಿದ್ರೆ ನೀವು ಸಮಸ್ಯೆಗೆ ಸಿಲುಕಿಕೊಳ್ತೀರಿ’ ಎಂದು ಹೇಳಿ, ಎಚ್ಚರಿಕೆ ರೂಪದ ಸಲಹೆ
> ನೀಡಿದರು. ಕೊನೆಗೆ ‘enough is enough ಅಲ್ವಾ... ಇದುವರೆಗೂ ಕೊಟ್ಟಾಗಿದೆ. ಇನ್ನು
> ಮುಂದೆನೂ ಕೊಡ್ಬೇಕಾ?’ ಎಂದು ಸೇರಿಸಿದರು.
>
> ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ವಿದ್ಯಮಾನಗಳಿಂದ ಹಿಡಿದು ನಿರುದ್ಯೋಗ, ಬಡತನಕ್ಕೂ
> ಮೀಸಲಾತಿಯೇ ಕಾರಣವೆಂದು ದೂಷಿಸುತ್ತ, ಇಂದಿಗೂ ನಾನಾ ನಮೂನೆಯಲ್ಲಿ ಜೀವಂತವಾಗಿರುವ ಜಾತಿ
> ಆಧಾರಿತ ಸಾಮಾಜಿಕ ತಾರತಮ್ಯದ ಪರ ಹಲವರು ವಕಾಲತ್ತು ವಹಿಸುವುದನ್ನು ಕಾಣಬಹುದು.
>
> ಮೀಸಲಾತಿಯ ಉದ್ದೇಶ ಬಡತನ ನಿರ್ಮೂಲನೆ ಎಂದೇ ಭಾವಿಸಿರುವ ಕೆಲವರು ಸಾಮಾನ್ಯ ವರ್ಗದಡಿ ಬರುವ
> ಜಾತಿಗಳಲ್ಲೂ ಬಡವರಿಲ್ಲವೇ ಎಂದು ಆಗಾಗ ಪ್ರಶ್ನಿಸುತ್ತಿರುತ್ತಾರೆ. ಹಿಂದೆ ನಮ್ಮ ಹಿರಿಯರು
> ಮಾಡಿದ ತಪ್ಪಿಗೆ ನಾವಿನ್ನೂ ಎಷ್ಟು ಕಾಲ ಶಿಕ್ಷೆ ಅನುಭವಿಸಬೇಕು ಎನ್ನುವ ಧಾಟಿಯಲ್ಲಿ ಅಳಲು
> ತೋಡಿಕೊಳ್ಳುವವರ ಸಂಖ್ಯೆ ಸಹ ಕಡಿಮೆ ಏನಿಲ್ಲ. ಮೀಸಲಾತಿ ಇರುವವರೆಗೂ ಜಾತಿ
> ವಿನಾಶವಾಗುವುದಿಲ್ಲ, ಕೆಳ ಜಾತಿಯವರ ಬಗೆಗಿನ  ತಮ್ಮ ಅಸಹನೆಗೆ ಮೀಸಲಾತಿಯೇ ಪ್ರಮುಖ ಕಾರಣಎಂಬ
> ವಾದವನ್ನು ಕೆಲವರು ಮಂಡಿಸುತ್ತಿರುತ್ತಾರೆ.
>
> ಕಣ್ಣೆದುರಿನ ವಾಸ್ತವಗಳಿಗೆ ಬೆನ್ನು ತೋರಿದವರಷ್ಟೇ ಹೀಗೆಲ್ಲ ಮಾತನಾಡಲು ಸಾಧ್ಯವೇನೊ? ಬಾಳ
> ಸಂಗಾತಿ ಆರಿಸಿಕೊಳ್ಳಲು, ಬಾಡಿಗೆಗೆ ಮನೆ ನೀಡಲು ಯಾವುದೇ ಮೀಸಲಾತಿಯ ಒತ್ತಡವಿಲ್ಲದಿದ್ದರೂ
> ಏಕೆ ಬಹುತೇಕ ಮಂದಿ ತಮ್ಮ ಜಾತಿಯವರಿಗಷ್ಟೇ ಆದ್ಯತೆ ನೀಡುತ್ತಾರೆಂಬ ಸರಳ ಪ್ರಶ್ನೆ
> ಎದುರಿಟ್ಟುಕೊಂಡು ಪರಿಶೀಲಿಸಿದರೂ ಸಾಕು, ಜಾತಿಯ ವಿಷ ವರ್ತುಲ ಎಷ್ಟು ಪ್ರಬಲವಾಗಿದೆ ಎಂಬುದು
> ಮನದಟ್ಟಾಗುತ್ತದೆ.
> ಪದವಿಗೆ ಪ್ರವೇಶ ಪಡೆಯುವ ಕಾಲಘಟ್ಟದಲ್ಲಿ ಮೀಸಲಾತಿಯಿಂದ ತಾವು ಅವಕಾಶ
> ವಂಚಿತರಾಗುತ್ತಿದ್ದೇವೆ ಎನ್ನುವ ಅನಿಸಿಕೆ ಮೇಲ್ವರ್ಗದ ವಿದ್ಯಾರ್ಥಿಗಳಲ್ಲಿ ಅನಾಯಾಸವಾಗಿ
> ಬೇರೂರಲಾರಂಭಿಸಿರುವುದನ್ನು ನಾವೆಲ್ಲ ಗಮನಿಸಬಹುದು. ಉದಾಹರಣೆಗೆ, ಸಿಇಟಿ ಮೂಲಕ
> ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳನ್ನು ಹಂಚುವ ಪ್ರಕ್ರಿಯೆಯನ್ನು ಪರಿಗಣಿಸಬಹುದು.
> ‘ನಲ್ವತ್ತು ಐವತ್ತು ಸಾವಿರ ರ್‍ಯಾಂಕ್ ಗಳಿಸಿದ್ರೂ ಅವ್ರಿಗೆ ಒಳ್ಳೆ ಕಾಲೇಜ್‌ನಲ್ಲಿ ಸೀಟು
> ಸಿಗುತ್ತೆ. ನಮ್ಮ ರ್‍ಯಾಂಕ್ ಹತ್ತು ಸಾವಿರದೊಳಗಿದ್ರೂ ಬೇಕಾದ ಕಡೆ ಸೀಟು ದಕ್ಕುವುದಿಲ್ಲ.
> ನಮ್ಮ ಪ್ರತಿಭೆಗೆ ಬೆಲೆ ಇಲ್ವಾ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು
> ಗಮನಿಸಿದ್ದೇನೆ. ಉತ್ತಮ ರ್‍ಯಾಂಕ್‌ ಗಳಿಸಿಯೂ ಬಯಸಿದ ಸೀಟು ಸಿಗದಿರುವುದಕ್ಕೆ ಮೀಸಲಾತಿಯೇ
> ಕಾರಣವೆಂದು ದೂಷಿಸುವವರು, ಹಣವುಳ್ಳವರಿಗೆಂದೇ ಮೀಸಲಾಗುವ ಮ್ಯಾನೇಜ್‌ಮೆಂಟ್ ಕೋಟಾದೆಡೆಗೆ
> ಅದೇಕೊ ಅಸಹನೆ ತೋರುವುದಿಲ್ಲ. ತೋರಿದರೂ ಅದರ ತೀವ್ರತೆ ಮೀಸಲಾತಿಯೆಡೆಗಿನ ಅಸಹನೆಯಷ್ಟು
> ತೀವ್ರವಾಗಿರುವುದಿಲ್ಲ.
>
> ಪ್ರತಿ ಬಾರಿ ಪಿಯುಸಿ ಮತ್ತು ಸಿಇಟಿ ಫಲಿತಾಂಶ ಹೊರಬಿದ್ದ ನಂತರ ನಡೆಯುವ ಸರ್ಕಾರ ಮತ್ತು
> ಖಾಸಗಿ ಕಾಲೇಜುಗಳ ಒಕ್ಕೂಟದ ನಡುವಿನ ಮಾತುಕತೆ ಅಂತಿಮವಾಗಿ ಶುಲ್ಕ ಹೆಚ್ಚಳ, ಸರ್ಕಾರಿ
> ಕೋಟಾದಡಿಯ ಸೀಟುಗಳ ಕಡಿತದೊಂದಿಗೆ ಮುಗಿಯುವುದಿಲ್ಲವೇ? ತಮ್ಮ ಪ್ರತಿಭೆಗೆ ಮನ್ನಣೆ
> ದೊರೆಯದಿರುವುದಕ್ಕೆ ಜಾತಿ ಆಧಾರಿತ ಮೀಸಲಾತಿಯ ಬದಲಾಗಿ ಹಣವಂತರಿಗೆ ಸೀಟುಗಳು
> ಮೀಸಲಾಗುತ್ತಿರುವುದೇ ಮುಖ್ಯ ಕಾರಣವೆಂಬುದು ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಒಕ್ಕೂಟದ
> ನಡುವೆ ನಡೆದುಕೊಂಡು ಬರುತ್ತಿರುವ ಒಪ್ಪಂದವನ್ನು ಪರಿಶೀಲಿಸಿದರೆ ತಿಳಿಯುತ್ತದೆ. ಆದರೂ
> ಮೇಲ್ವರ್ಗದವರ ಅಸಹನೆ ಮತ್ತೆ ಜಾತಿ ಆಧಾರಿತ ಮೀಸಲಾತಿಯತ್ತಲೇ ಕೇಂದ್ರೀಕೃತವಾಗುವುದು ಏನನ್ನು
> ಸೂಚಿಸುತ್ತದೆ? ನಮ್ಮೊಳಗಿನ್ನೂ ಬೇರೂರಿರುವ ಜಾತಿ ಪ್ರಜ್ಞೆಯೇ
> ಈ ಜಾಣಕುರುಡುತನಕ್ಕೆ ಕಾರಣವಲ್ಲವೇ?
>
> ಮೀಸಲಾತಿಯಿಂದ ತಮಗೆ ಆಗುತ್ತಿರುವ ಅನ್ಯಾಯ ಕೊನೆಗಾಣಿಸಲು ಮೀಸಲಾತಿ ಕಿತ್ತೊಗೆಯಬೇಕು ಅಥವಾ
> ಖಾಸಗೀಕರಣಕ್ಕೆ ಆದ್ಯತೆ ನೀಡಬೇಕೆಂಬ ನಿಲುವನ್ನು ಹಲವರು ಹೊಂದಿದ್ದಾರೆ. ಮೀಸಲಾತಿ
> ಜಾರಿಯಲ್ಲಿರದ ಖಾಸಗಿ ವಲಯದಲ್ಲಿ ಪ್ರತಿಭೆಗಷ್ಟೇ ಮೊದಲ ಮನ್ನಣೆ ಎಂಬ ಗ್ರಹಿಕೆ ಪ್ರಬಲವಾಗಿಯೇ
> ಬೇರೂರಿದೆ. ಉದ್ಯೋಗ ದಕ್ಕಿಸಿಕೊಳ್ಳಲು ಬೇಕಾದ ‘ರೆಫರೆನ್ಸ್’ ಕೂಡ ಒಂದು ರೀತಿಯ ಮೀಸಲಾತಿಯೇ
> ಎಂಬುದನ್ನು ಒಪ್ಪಲು ನಾವು ಸಿದ್ಧರಿದ್ದೇವೆಯೇ? ಮಿಕ್ಕೆಲ್ಲ ಅರ್ಹತೆಗಳಿಗಿಂತಲೂ ಉದ್ಯೋಗ
> ಪಡೆಯಲು ‘ರೆಫರೆನ್ಸ್’ ಮುಖ್ಯವಾಗುವುದು ನಮ್ಮ ಅರಿವಿಗೆ ಬಂದಿಲ್ಲವೇ? ಈ ‘ರೆಫರೆನ್ಸ್’
> ದಕ್ಕಿಸಿಕೊಳ್ಳಲು ಯಾರಿಗೆ ಸಾಧ್ಯವೆಂಬ ಸರಳ ಅಂಶ ಮುಂದಿಟ್ಟುಕೊಂಡು ನೋಡಿದರೂ ಖಾಸಗಿ
> ವಲಯದಲ್ಲಿ ಜಾತಿ ಆಧಾರಿತ ಮೀಸಲಾತಿ ಜಾರಿಗೆ ಬರಬೇಕೆಂಬ ಕೂಗು ಏಕೆ ಪ್ರಬಲವಾಗುತ್ತಿದೆ
> ಎಂಬುದು  ಅರಿವಾಗುತ್ತದೆ.
>
> ಮೀಸಲಾತಿಯ ದುರ್ಬಳಕೆಯಾಗುತ್ತಿದೆ, ಎಲ್ಲಾ ಜಾತಿಯ ಬಡವರಿಗೂ ಮೀಸಲಾತಿ ದೊರೆಯಲಿ ಎಂಬುದು
> ಕೆಲವರ ನಿಲುವು. ಆದರೆ ಈ ದುರ್ಬಳಕೆ ಕೆಳ ಜಾತಿಯಲ್ಲಷ್ಟೇ ಇರುವುದೇ? ಮೀಸಲಾತಿ ದೊರೆತರೂ ಅದು
> ಯಾವುದಕ್ಕೂ ಸಾಲದೆಂಬ ಕಾರಣಕ್ಕಾಗಿಯೇ ಅದರ ವಿರುದ್ಧ ದನಿ ಎತ್ತುವ ಕೆಲ ಪ್ರಬಲ ಜಾತಿಯವರು
> ಕೂಡ ಅತ್ಯಲ್ಪ ಆದಾಯ ತೋರುವ ಪ್ರಮಾಣಪತ್ರಗಳನ್ನು ಮಾಡಿಸಿಕೊಂಡು ತಮ್ಮದೇ ಸಮುದಾಯದ ಅರ್ಹರಿಗೆ
> ದೊರೆಯಬೇಕಾದ ಸೌಲಭ್ಯಗಳನ್ನು ಕಬಳಿಸುವುದಿಲ್ಲವೇ?
>
> ಮೀಸಲಾತಿ ಕುರಿತು ಅಪಸ್ವರ ಎತ್ತಲು ಸಿಗುವ ಸಣ್ಣ ಅವಕಾಶವನ್ನೂ ಬಿಡಬಾರದೆಂಬ ಮನೋಭಾವ
> ಮೈಗೂಡಿಸಿಕೊಂಡವರಿಗೆ, ಕಣ್ಣೆದುರಿನ ವಾಸ್ತವವೇ ಭ್ರಮೆಯಂತೆ ತೋರುತ್ತಿರುವುದು ವಿಪರ್ಯಾಸ.
> ಆತ್ಮವಿಮರ್ಶೆಯ ಸ್ಥಾನದಲ್ಲಿ ಆತ್ಮವಂಚನೆ ಆಸೀನವಾಗಿರುವಾಗ ಅಸಹನೆ ಹೊರಹೊಮ್ಮದೆ ಇರುವುದೇ?
>
> [email protected]
> ಸಿದ್ದರಾಮಪ್ಪ. ಎಸ್.ಎಂ
> ಸಶಿ ಕಲಾ
> ಸರ್ಕಾರಿ ಪ್ರೌಢ ಶಾಲೆ
> ಗಂಜಿಗೆರೆ. ಕೆ ಆರ್ ಪೇಟೆ ತಾ||
> ಮಂಡ್ಯ ಜಿಲ್ಲೆ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAJCvfyW51WcVDwgzRs2FGOejNfXpvOkad_XUzWROJuTqs9OAOQ%40mail.gmail.com
> <https://groups.google.com/d/msgid/socialsciencestf/CAJCvfyW51WcVDwgzRs2FGOejNfXpvOkad_XUzWROJuTqs9OAOQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CALWUL%3D4AT_isv9cj%2BVsLa4cbGS19hFFUqOovNpOF6SfFwWYDqA%40mail.gmail.com.
For more options, visit https://groups.google.com/d/optout.

Reply via email to