ನೀವು ಉದ್ಯೋಗದಲ್ಲಿ, ಇನ್ನೊಬ್ಬರು, ರಾಜಕೀಯದಲ್ಲಿ, ಮತ್ತೊಬ್ಬರು, ಶುಲ್ಕ,
ವಿದ್ಯಾರ್ಥಿವೇತನ, ಹೀಗೆ ಅವರವರಿಗೆ ಅನುಕೂಲವಾಗುವ ಕ್ಷೇತ್ರದಲ್ಲಿ  ಬೇಡ ಎಂದು ಹೇಳುತ್ತಾರೆ

ಮೀಸಲಾತಿ ಪ್ರತಿಯೊಬ್ಬರಿಗೂ ಅವರವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ

ಇದರಿಂದ ಯಾರಗೂ ತೊಂದರೆ ಇಲ್ಲ ಅರ್ಥ ವಾಗಿಲ್ಲ?  ಅಷ್ಟೇ
On 02-Jul-2016 7:24 pm, "prajwal nayak" <[email protected]> wrote:

> ನಾವು ಹೇಳೋದು ಉದ್ಯೋಗದಲ್ಲಿ ಮೀಸಲಾತಿ ಬೇಡ ಅಂತಾ ಅಷ್ಟೇ ಸರ್
> On 2 Jul 2016 18:41, "Druva H" <[email protected]> wrote:
>
>> 👍
>> On 2 Jul 2016 06:16, "Siddaramappa s m Sri" <[email protected]>
>> wrote:
>> >
>> > ಮೀಸಲಾತಿ: ಅಸಹನೆ,ಆತ್ಮವಂಚನೆ
>> > 30 Jun, 2016ಎಚ್‌.ಕೆ.ಶರತ್‌
>> >
>> > ಎಂಜಿನಿಯರಿಂಗ್  ವಿದ್ಯಾರ್ಥಿಗಳಿಗೆ ಬೋಧಿಸುವ ಅಧ್ಯಾಪಕರಿಗೆಂದೇ ಇತ್ತೀಚೆಗೆ
>> ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ, ಪ್ರತಿಯೊಬ್ಬರೂ ಯಾವುದಾದರೂ ಸಾಮಾಜಿಕ ವಿಷಯದ
>> ಕುರಿತು ಐದು ನಿಮಿಷ ಮಾತನಾಡಬೇಕೆಂದು ಸೂಚಿಸಲಾಯಿತು. ಬಡತನ, ಖಾಸಗೀಕರಣ, ನಿರುದ್ಯೋಗ ಹೀಗೆ
>> ತಮಗೆ ಸೂಕ್ತವೆನಿಸಿದ ವಿಷಯ ಆಯ್ದುಕೊಂಡು ಎಲ್ಲರೂ ಮಾತನಾಡಿದರು.
>> >
>> > ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿದ ಅಧ್ಯಾಪಕರೊಬ್ಬರು, ‘ನಿರುದ್ಯೋಗ ಸಮಸ್ಯೆಗೆ
>> ಮೀಸಲಾತಿಯೇ ಮುಖ್ಯ ಕಾರಣ. ಮೀಸಲಾತಿಯಿಂದಾಗಿ ಅರ್ಹರಿಗೆ ಉದ್ಯೋಗ ಸಿಗುತ್ತಿಲ್ಲ.
>> ಉದ್ಯೋಗದಲ್ಲಿ ಮೀಸಲಾತಿ ಕಿತ್ತೊಗೆಯಬೇಕು’ ಎಂದು ಗುಡುಗಿದರು. ಅವರ ಮಾತಿಗೆ ಅಲ್ಲಿ
>> ನೆರೆದಿದ್ದ ಬಹುತೇಕ ಅಧ್ಯಾಪಕರು ತಲೆದೂಗುವ ಮೂಲಕ ತಮ್ಮ ಸಹಮತ ವ್ಯಕ್ತಪಡಿಸಿದರು.
>> ಅಧ್ಯಾಪಕರು ವಿಚಾರ ಮಂಡಿಸುವ ಶೈಲಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ ಸಂಪನ್ಮೂಲ
>> ವ್ಯಕ್ತಿ, ‘ಮೀಸಲಾತಿಯಂತಹ ಸೂಕ್ಷ್ಮ ವಿಚಾರಗಳ ಕುರಿತು ಸಾರ್ವಜನಿಕವಾಗಿ ಮಾತನಾಡುವಾಗ ತುಂಬಾ
>> ಎಚ್ಚರದಿಂದಿರಬೇಕು. ಇಲ್ಲೇನೊ ನಾವು ನಾವೇ ಇದ್ದೀವಿ ಪರವಾಗಿಲ್ಲ. ಆದ್ರೆ ಬೇರೆ ಕಡೆ ಈ ರೀತಿ
>> ಮಾತಾಡಿದ್ರೆ ನೀವು ಸಮಸ್ಯೆಗೆ ಸಿಲುಕಿಕೊಳ್ತೀರಿ’ ಎಂದು ಹೇಳಿ, ಎಚ್ಚರಿಕೆ ರೂಪದ ಸಲಹೆ
>> ನೀಡಿದರು. ಕೊನೆಗೆ ‘enough is enough ಅಲ್ವಾ... ಇದುವರೆಗೂ ಕೊಟ್ಟಾಗಿದೆ. ಇನ್ನು
>> ಮುಂದೆನೂ ಕೊಡ್ಬೇಕಾ?’ ಎಂದು ಸೇರಿಸಿದರು.
>> >
>> > ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ವಿದ್ಯಮಾನಗಳಿಂದ ಹಿಡಿದು ನಿರುದ್ಯೋಗ,
>> ಬಡತನಕ್ಕೂ ಮೀಸಲಾತಿಯೇ ಕಾರಣವೆಂದು ದೂಷಿಸುತ್ತ, ಇಂದಿಗೂ ನಾನಾ ನಮೂನೆಯಲ್ಲಿ ಜೀವಂತವಾಗಿರುವ
>> ಜಾತಿ ಆಧಾರಿತ ಸಾಮಾಜಿಕ ತಾರತಮ್ಯದ ಪರ ಹಲವರು ವಕಾಲತ್ತು ವಹಿಸುವುದನ್ನು ಕಾಣಬಹುದು.
>> >
>> > ಮೀಸಲಾತಿಯ ಉದ್ದೇಶ ಬಡತನ ನಿರ್ಮೂಲನೆ ಎಂದೇ ಭಾವಿಸಿರುವ ಕೆಲವರು ಸಾಮಾನ್ಯ ವರ್ಗದಡಿ
>> ಬರುವ ಜಾತಿಗಳಲ್ಲೂ ಬಡವರಿಲ್ಲವೇ ಎಂದು ಆಗಾಗ ಪ್ರಶ್ನಿಸುತ್ತಿರುತ್ತಾರೆ. ಹಿಂದೆ ನಮ್ಮ
>> ಹಿರಿಯರು ಮಾಡಿದ ತಪ್ಪಿಗೆ ನಾವಿನ್ನೂ ಎಷ್ಟು ಕಾಲ ಶಿಕ್ಷೆ ಅನುಭವಿಸಬೇಕು ಎನ್ನುವ
>> ಧಾಟಿಯಲ್ಲಿ ಅಳಲು ತೋಡಿಕೊಳ್ಳುವವರ ಸಂಖ್ಯೆ ಸಹ ಕಡಿಮೆ ಏನಿಲ್ಲ. ಮೀಸಲಾತಿ ಇರುವವರೆಗೂ ಜಾತಿ
>> ವಿನಾಶವಾಗುವುದಿಲ್ಲ, ಕೆಳ ಜಾತಿಯವರ ಬಗೆಗಿನ  ತಮ್ಮ ಅಸಹನೆಗೆ ಮೀಸಲಾತಿಯೇ ಪ್ರಮುಖ ಕಾರಣಎಂಬ
>> ವಾದವನ್ನು ಕೆಲವರು ಮಂಡಿಸುತ್ತಿರುತ್ತಾರೆ.
>> >
>> > ಕಣ್ಣೆದುರಿನ ವಾಸ್ತವಗಳಿಗೆ ಬೆನ್ನು ತೋರಿದವರಷ್ಟೇ ಹೀಗೆಲ್ಲ ಮಾತನಾಡಲು ಸಾಧ್ಯವೇನೊ?
>> ಬಾಳ ಸಂಗಾತಿ ಆರಿಸಿಕೊಳ್ಳಲು, ಬಾಡಿಗೆಗೆ ಮನೆ ನೀಡಲು ಯಾವುದೇ ಮೀಸಲಾತಿಯ
>> ಒತ್ತಡವಿಲ್ಲದಿದ್ದರೂ ಏಕೆ ಬಹುತೇಕ ಮಂದಿ ತಮ್ಮ ಜಾತಿಯವರಿಗಷ್ಟೇ ಆದ್ಯತೆ ನೀಡುತ್ತಾರೆಂಬ
>> ಸರಳ ಪ್ರಶ್ನೆ ಎದುರಿಟ್ಟುಕೊಂಡು ಪರಿಶೀಲಿಸಿದರೂ ಸಾಕು, ಜಾತಿಯ ವಿಷ ವರ್ತುಲ ಎಷ್ಟು
>> ಪ್ರಬಲವಾಗಿದೆ ಎಂಬುದು ಮನದಟ್ಟಾಗುತ್ತದೆ.
>> > ಪದವಿಗೆ ಪ್ರವೇಶ ಪಡೆಯುವ ಕಾಲಘಟ್ಟದಲ್ಲಿ ಮೀಸಲಾತಿಯಿಂದ ತಾವು ಅವಕಾಶ
>> ವಂಚಿತರಾಗುತ್ತಿದ್ದೇವೆ ಎನ್ನುವ ಅನಿಸಿಕೆ ಮೇಲ್ವರ್ಗದ ವಿದ್ಯಾರ್ಥಿಗಳಲ್ಲಿ ಅನಾಯಾಸವಾಗಿ
>> ಬೇರೂರಲಾರಂಭಿಸಿರುವುದನ್ನು ನಾವೆಲ್ಲ ಗಮನಿಸಬಹುದು. ಉದಾಹರಣೆಗೆ, ಸಿಇಟಿ ಮೂಲಕ
>> ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳನ್ನು ಹಂಚುವ ಪ್ರಕ್ರಿಯೆಯನ್ನು ಪರಿಗಣಿಸಬಹುದು.
>> ‘ನಲ್ವತ್ತು ಐವತ್ತು ಸಾವಿರ ರ್‍ಯಾಂಕ್ ಗಳಿಸಿದ್ರೂ ಅವ್ರಿಗೆ ಒಳ್ಳೆ ಕಾಲೇಜ್‌ನಲ್ಲಿ ಸೀಟು
>> ಸಿಗುತ್ತೆ. ನಮ್ಮ ರ್‍ಯಾಂಕ್ ಹತ್ತು ಸಾವಿರದೊಳಗಿದ್ರೂ ಬೇಕಾದ ಕಡೆ ಸೀಟು ದಕ್ಕುವುದಿಲ್ಲ.
>> ನಮ್ಮ ಪ್ರತಿಭೆಗೆ ಬೆಲೆ ಇಲ್ವಾ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು
>> ಗಮನಿಸಿದ್ದೇನೆ. ಉತ್ತಮ ರ್‍ಯಾಂಕ್‌ ಗಳಿಸಿಯೂ ಬಯಸಿದ ಸೀಟು ಸಿಗದಿರುವುದಕ್ಕೆ ಮೀಸಲಾತಿಯೇ
>> ಕಾರಣವೆಂದು ದೂಷಿಸುವವರು, ಹಣವುಳ್ಳವರಿಗೆಂದೇ ಮೀಸಲಾಗುವ ಮ್ಯಾನೇಜ್‌ಮೆಂಟ್ ಕೋಟಾದೆಡೆಗೆ
>> ಅದೇಕೊ ಅಸಹನೆ ತೋರುವುದಿಲ್ಲ. ತೋರಿದರೂ ಅದರ ತೀವ್ರತೆ ಮೀಸಲಾತಿಯೆಡೆಗಿನ ಅಸಹನೆಯಷ್ಟು
>> ತೀವ್ರವಾಗಿರುವುದಿಲ್ಲ.
>> >
>> > ಪ್ರತಿ ಬಾರಿ ಪಿಯುಸಿ ಮತ್ತು ಸಿಇಟಿ ಫಲಿತಾಂಶ ಹೊರಬಿದ್ದ ನಂತರ ನಡೆಯುವ ಸರ್ಕಾರ ಮತ್ತು
>> ಖಾಸಗಿ ಕಾಲೇಜುಗಳ ಒಕ್ಕೂಟದ ನಡುವಿನ ಮಾತುಕತೆ ಅಂತಿಮವಾಗಿ ಶುಲ್ಕ ಹೆಚ್ಚಳ, ಸರ್ಕಾರಿ
>> ಕೋಟಾದಡಿಯ ಸೀಟುಗಳ ಕಡಿತದೊಂದಿಗೆ ಮುಗಿಯುವುದಿಲ್ಲವೇ? ತಮ್ಮ ಪ್ರತಿಭೆಗೆ ಮನ್ನಣೆ
>> ದೊರೆಯದಿರುವುದಕ್ಕೆ ಜಾತಿ ಆಧಾರಿತ ಮೀಸಲಾತಿಯ ಬದಲಾಗಿ ಹಣವಂತರಿಗೆ ಸೀಟುಗಳು
>> ಮೀಸಲಾಗುತ್ತಿರುವುದೇ ಮುಖ್ಯ ಕಾರಣವೆಂಬುದು ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಒಕ್ಕೂಟದ
>> ನಡುವೆ ನಡೆದುಕೊಂಡು ಬರುತ್ತಿರುವ ಒಪ್ಪಂದವನ್ನು ಪರಿಶೀಲಿಸಿದರೆ ತಿಳಿಯುತ್ತದೆ. ಆದರೂ
>> ಮೇಲ್ವರ್ಗದವರ ಅಸಹನೆ ಮತ್ತೆ ಜಾತಿ ಆಧಾರಿತ ಮೀಸಲಾತಿಯತ್ತಲೇ ಕೇಂದ್ರೀಕೃತವಾಗುವುದು ಏನನ್ನು
>> ಸೂಚಿಸುತ್ತದೆ? ನಮ್ಮೊಳಗಿನ್ನೂ ಬೇರೂರಿರುವ ಜಾತಿ ಪ್ರಜ್ಞೆಯೇ
>> > ಈ ಜಾಣಕುರುಡುತನಕ್ಕೆ ಕಾರಣವಲ್ಲವೇ?
>> >
>> > ಮೀಸಲಾತಿಯಿಂದ ತಮಗೆ ಆಗುತ್ತಿರುವ ಅನ್ಯಾಯ ಕೊನೆಗಾಣಿಸಲು ಮೀಸಲಾತಿ ಕಿತ್ತೊಗೆಯಬೇಕು
>> ಅಥವಾ ಖಾಸಗೀಕರಣಕ್ಕೆ ಆದ್ಯತೆ ನೀಡಬೇಕೆಂಬ ನಿಲುವನ್ನು ಹಲವರು ಹೊಂದಿದ್ದಾರೆ. ಮೀಸಲಾತಿ
>> ಜಾರಿಯಲ್ಲಿರದ ಖಾಸಗಿ ವಲಯದಲ್ಲಿ ಪ್ರತಿಭೆಗಷ್ಟೇ ಮೊದಲ ಮನ್ನಣೆ ಎಂಬ ಗ್ರಹಿಕೆ ಪ್ರಬಲವಾಗಿಯೇ
>> ಬೇರೂರಿದೆ. ಉದ್ಯೋಗ ದಕ್ಕಿಸಿಕೊಳ್ಳಲು ಬೇಕಾದ ‘ರೆಫರೆನ್ಸ್’ ಕೂಡ ಒಂದು ರೀತಿಯ ಮೀಸಲಾತಿಯೇ
>> ಎಂಬುದನ್ನು ಒಪ್ಪಲು ನಾವು ಸಿದ್ಧರಿದ್ದೇವೆಯೇ? ಮಿಕ್ಕೆಲ್ಲ ಅರ್ಹತೆಗಳಿಗಿಂತಲೂ ಉದ್ಯೋಗ
>> ಪಡೆಯಲು ‘ರೆಫರೆನ್ಸ್’ ಮುಖ್ಯವಾಗುವುದು ನಮ್ಮ ಅರಿವಿಗೆ ಬಂದಿಲ್ಲವೇ? ಈ ‘ರೆಫರೆನ್ಸ್’
>> ದಕ್ಕಿಸಿಕೊಳ್ಳಲು ಯಾರಿಗೆ ಸಾಧ್ಯವೆಂಬ ಸರಳ ಅಂಶ ಮುಂದಿಟ್ಟುಕೊಂಡು ನೋಡಿದರೂ ಖಾಸಗಿ
>> ವಲಯದಲ್ಲಿ ಜಾತಿ ಆಧಾರಿತ ಮೀಸಲಾತಿ ಜಾರಿಗೆ ಬರಬೇಕೆಂಬ ಕೂಗು ಏಕೆ ಪ್ರಬಲವಾಗುತ್ತಿದೆ
>> ಎಂಬುದು  ಅರಿವಾಗುತ್ತದೆ.
>> >
>> > ಮೀಸಲಾತಿಯ ದುರ್ಬಳಕೆಯಾಗುತ್ತಿದೆ, ಎಲ್ಲಾ ಜಾತಿಯ ಬಡವರಿಗೂ ಮೀಸಲಾತಿ ದೊರೆಯಲಿ ಎಂಬುದು
>> ಕೆಲವರ ನಿಲುವು. ಆದರೆ ಈ ದುರ್ಬಳಕೆ ಕೆಳ ಜಾತಿಯಲ್ಲಷ್ಟೇ ಇರುವುದೇ? ಮೀಸಲಾತಿ ದೊರೆತರೂ ಅದು
>> ಯಾವುದಕ್ಕೂ ಸಾಲದೆಂಬ ಕಾರಣಕ್ಕಾಗಿಯೇ ಅದರ ವಿರುದ್ಧ ದನಿ ಎತ್ತುವ ಕೆಲ ಪ್ರಬಲ ಜಾತಿಯವರು
>> ಕೂಡ ಅತ್ಯಲ್ಪ ಆದಾಯ ತೋರುವ ಪ್ರಮಾಣಪತ್ರಗಳನ್ನು ಮಾಡಿಸಿಕೊಂಡು ತಮ್ಮದೇ ಸಮುದಾಯದ ಅರ್ಹರಿಗೆ
>> ದೊರೆಯಬೇಕಾದ ಸೌಲಭ್ಯಗಳನ್ನು ಕಬಳಿಸುವುದಿಲ್ಲವೇ?
>> >
>> > ಮೀಸಲಾತಿ ಕುರಿತು ಅಪಸ್ವರ ಎತ್ತಲು ಸಿಗುವ ಸಣ್ಣ ಅವಕಾಶವನ್ನೂ ಬಿಡಬಾರದೆಂಬ ಮನೋಭಾವ
>> ಮೈಗೂಡಿಸಿಕೊಂಡವರಿಗೆ, ಕಣ್ಣೆದುರಿನ ವಾಸ್ತವವೇ ಭ್ರಮೆಯಂತೆ ತೋರುತ್ತಿರುವುದು ವಿಪರ್ಯಾಸ.
>> ಆತ್ಮವಿಮರ್ಶೆಯ ಸ್ಥಾನದಲ್ಲಿ ಆತ್ಮವಂಚನೆ ಆಸೀನವಾಗಿರುವಾಗ ಅಸಹನೆ ಹೊರಹೊಮ್ಮದೆ ಇರುವುದೇ?
>> >
>> > [email protected]
>> > ಸಿದ್ದರಾಮಪ್ಪ. ಎಸ್.ಎಂ
>> > ಸಶಿ ಕಲಾ
>> > ಸರ್ಕಾರಿ ಪ್ರೌಢ ಶಾಲೆ
>> > ಗಂಜಿಗೆರೆ. ಕೆ ಆರ್ ಪೇಟೆ ತಾ||
>> > ಮಂಡ್ಯ ಜಿಲ್ಲೆ
>> >
>> > --
>> > *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>> >
>> > **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> > ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> > ---
>> > You received this message because you are subscribed to the Google
>> Groups "SocialScience STF" group.
>> > To unsubscribe from this group and stop receiving emails from it, send
>> an email to [email protected].
>> > To post to this group, send email to [email protected].
>> > Visit this group at https://groups.google.com/group/socialsciencestf.
>> > To view this discussion on the web visit
>> https://groups.google.com/d/msgid/socialsciencestf/CAJCvfyW51WcVDwgzRs2FGOejNfXpvOkad_XUzWROJuTqs9OAOQ%40mail.gmail.com
>> .
>> > For more options, visit https://groups.google.com/d/optout.
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAFbcX9cc%3DwJ8JqRMG1XpCGR2rz3yZ0YgVZoR9QRHtRhkpddbvg%40mail.gmail.com
>> <https://groups.google.com/d/msgid/socialsciencestf/CAFbcX9cc%3DwJ8JqRMG1XpCGR2rz3yZ0YgVZoR9QRHtRhkpddbvg%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CALWUL%3D581bSv%3DDKR8HhJOtDrYN13yr5qmLQbfd9WY%2B1MGVQ6Hw%40mail.gmail.com
> <https://groups.google.com/d/msgid/socialsciencestf/CALWUL%3D581bSv%3DDKR8HhJOtDrYN13yr5qmLQbfd9WY%2B1MGVQ6Hw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz5T_irS5aVOXYLQ1Dwvgy%2BKVB0yanEJbJwVCc6r9X-Snw%40mail.gmail.com.
For more options, visit https://groups.google.com/d/optout.

Reply via email to