*ಸಿದ್ರಾಮಪ್ಪ ಸರ್ *

*ತುಂಬಾ ಒಳ್ಳೆಯ ವಿಮರ್ಶಾತ್ಮಕ ಲೇಖನ ಸರ್*

*ನಿಮ್ಮ ಕೊನೆಯ ಮಾತು*
*            "  ಮೀಸಲಾತಿ ಕುರಿತು ಅಪಸ್ವರ ಎತ್ತಲು ಸಿಗುವ ಸಣ್ಣ ಅವಕಾಶವನ್ನೂ
ಬಿಡಬಾರದೆಂಬ ಮನೋಭಾವ ಮೈಗೂಡಿಸಿಕೊಂಡವರಿಗೆ, ಕಣ್ಣೆದುರಿನ ವಾಸ್ತವವೇ ಭ್ರಮೆಯಂತೆ
ತೋರುತ್ತಿರುವುದು ವಿಪರ್ಯಾಸ.        ಆತ್ಮವಿಮರ್ಶೆಯ ಸ್ಥಾನದ*ಲ್ಲಿ *ಆತ್ಮವಂಚನೆ
ಆಸೀನವಾಗಿರುವಾಗ ಅಸಹನೆ ಹೊರಹೊಮ್ಮದೆ ಇರುವುದೇ?* "
   *ಅಸಹಿಷ್ಣತೆ ಎಲ್ಲಿದೆ ಎಂದು ತುಂಬಾ ಜನ ಪ್ರಶ್ನಿಸಿದ್ದರು             "???????"*

*ಸಂವಿದಾನದ ರಾಜ್ಯ ನಿರ್ದೇಶಕ ತತ್ವಗಳಲ್ಲಿ ಸರ್ಕಾರದ ಜವಾಬ್ದಾರಿ ಏನು ಎಂದು ಹೇಳಿದೆ
ಮೀಸಲಾತಿ ವಿರೋಧಿಸುಸುವವರು ಅದನ್ನು ಓದಬೇಕು?*




*  ಸಿದ್ದರಾಮಪ್ಪ ಸರ್ *
*ಎರಡು ವರ್ಗದ ಜನ ಇದ್ದಾರೆ*
*1. ಮೂಲಭೂತವಾದಿಗಳು - ಇವರು ಏನೇ ಸಿಗುವಂತಿದ್ದರೂ ಅದು ಅವರಿಗೆ ಸಿಗಬೇಕು , ಬೇರೆಯವರಿಗೆ
ಸಿಕ್ಕರೆ ಅದಕ್ಕೆ ವಿರೋಧ, ಅವರೇ ಮೀಸಲಾತಿಯ ಸವಲತ್ತು ಪಡೆದಿರುತ್ತಾರೆ. ಬೇರೆಯವರಿಗೆ
ನೀಡಬಾರದೆಂದು ವಿರೋಧಿಸುತ್ತಾರೆ*
*  ಉ.ದಾ. ಎಲ್ಲಾ ವರ್ಗದವರಿಗೂ ವಿದ್ಯಾರ್ಥಿ ವೇತನದ ಅವಕಾಶ ವಿದೆ ಆದರೆ,  SC,ST,
ವಿದ್ಯಾರ್ಥಿವೇತನಕ್ಕೆ ವಿರೋಧಿಸುವುದು. *
*2. ವಿಚಾರವಾದಿಗಳು - ಎಲ್ಲರಿಗೂ ಎಲ್ಲವೂ ಸಿಗಲಿ ಎಂದು ಹೋರಾಡುವವರು. ಉ.ದಾ. ಶಾಲೆಯ
ಎಲ್ಲಾವಿದ್ಯಾರ್ಥಿಗಳಿಗೆ *


2016-07-02 13:31 GMT+05:30 Druva H <[email protected]>:

> druvah111
> On 2 Jul 2016 06:16, "Siddaramappa s m Sri" <[email protected]> wrote:
>
>> ಮೀಸಲಾತಿ: ಅಸಹನೆ,ಆತ್ಮವಂಚನೆ
>> 30 Jun, 2016ಎಚ್‌.ಕೆ.ಶರತ್‌
>>
>> ಎಂಜಿನಿಯರಿಂಗ್  ವಿದ್ಯಾರ್ಥಿಗಳಿಗೆ ಬೋಧಿಸುವ ಅಧ್ಯಾಪಕರಿಗೆಂದೇ ಇತ್ತೀಚೆಗೆ
>> ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ, ಪ್ರತಿಯೊಬ್ಬರೂ ಯಾವುದಾದರೂ ಸಾಮಾಜಿಕ ವಿಷಯದ
>> ಕುರಿತು ಐದು ನಿಮಿಷ ಮಾತನಾಡಬೇಕೆಂದು ಸೂಚಿಸಲಾಯಿತು. ಬಡತನ, ಖಾಸಗೀಕರಣ, ನಿರುದ್ಯೋಗ ಹೀಗೆ
>> ತಮಗೆ ಸೂಕ್ತವೆನಿಸಿದ ವಿಷಯ ಆಯ್ದುಕೊಂಡು ಎಲ್ಲರೂ ಮಾತನಾಡಿದರು.
>>
>> ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿದ ಅಧ್ಯಾಪಕರೊಬ್ಬರು, ‘ನಿರುದ್ಯೋಗ ಸಮಸ್ಯೆಗೆ
>> ಮೀಸಲಾತಿಯೇ ಮುಖ್ಯ ಕಾರಣ. ಮೀಸಲಾತಿಯಿಂದಾಗಿ ಅರ್ಹರಿಗೆ ಉದ್ಯೋಗ ಸಿಗುತ್ತಿಲ್ಲ.
>> ಉದ್ಯೋಗದಲ್ಲಿ ಮೀಸಲಾತಿ ಕಿತ್ತೊಗೆಯಬೇಕು’ ಎಂದು ಗುಡುಗಿದರು. ಅವರ ಮಾತಿಗೆ ಅಲ್ಲಿ
>> ನೆರೆದಿದ್ದ ಬಹುತೇಕ ಅಧ್ಯಾಪಕರು ತಲೆದೂಗುವ ಮೂಲಕ ತಮ್ಮ ಸಹಮತ ವ್ಯಕ್ತಪಡಿಸಿದರು.
>> ಅಧ್ಯಾಪಕರು ವಿಚಾರ ಮಂಡಿಸುವ ಶೈಲಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ ಸಂಪನ್ಮೂಲ
>> ವ್ಯಕ್ತಿ, ‘ಮೀಸಲಾತಿಯಂತಹ ಸೂಕ್ಷ್ಮ ವಿಚಾರಗಳ ಕುರಿತು ಸಾರ್ವಜನಿಕವಾಗಿ ಮಾತನಾಡುವಾಗ ತುಂಬಾ
>> ಎಚ್ಚರದಿಂದಿರಬೇಕು. ಇಲ್ಲೇನೊ ನಾವು ನಾವೇ ಇದ್ದೀವಿ ಪರವಾಗಿಲ್ಲ. ಆದ್ರೆ ಬೇರೆ ಕಡೆ ಈ ರೀತಿ
>> ಮಾತಾಡಿದ್ರೆ ನೀವು ಸಮಸ್ಯೆಗೆ ಸಿಲುಕಿಕೊಳ್ತೀರಿ’ ಎಂದು ಹೇಳಿ, ಎಚ್ಚರಿಕೆ ರೂಪದ ಸಲಹೆ
>> ನೀಡಿದರು. ಕೊನೆಗೆ ‘enough is enough ಅಲ್ವಾ... ಇದುವರೆಗೂ ಕೊಟ್ಟಾಗಿದೆ. ಇನ್ನು
>> ಮುಂದೆನೂ ಕೊಡ್ಬೇಕಾ?’ ಎಂದು ಸೇರಿಸಿದರು.
>>
>> ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ವಿದ್ಯಮಾನಗಳಿಂದ ಹಿಡಿದು ನಿರುದ್ಯೋಗ, ಬಡತನಕ್ಕೂ
>> ಮೀಸಲಾತಿಯೇ ಕಾರಣವೆಂದು ದೂಷಿಸುತ್ತ, ಇಂದಿಗೂ ನಾನಾ ನಮೂನೆಯಲ್ಲಿ ಜೀವಂತವಾಗಿರುವ ಜಾತಿ
>> ಆಧಾರಿತ ಸಾಮಾಜಿಕ ತಾರತಮ್ಯದ ಪರ ಹಲವರು ವಕಾಲತ್ತು ವಹಿಸುವುದನ್ನು ಕಾಣಬಹುದು.
>>
>> ಮೀಸಲಾತಿಯ ಉದ್ದೇಶ ಬಡತನ ನಿರ್ಮೂಲನೆ ಎಂದೇ ಭಾವಿಸಿರುವ ಕೆಲವರು ಸಾಮಾನ್ಯ ವರ್ಗದಡಿ ಬರುವ
>> ಜಾತಿಗಳಲ್ಲೂ ಬಡವರಿಲ್ಲವೇ ಎಂದು ಆಗಾಗ ಪ್ರಶ್ನಿಸುತ್ತಿರುತ್ತಾರೆ. ಹಿಂದೆ ನಮ್ಮ ಹಿರಿಯರು
>> ಮಾಡಿದ ತಪ್ಪಿಗೆ ನಾವಿನ್ನೂ ಎಷ್ಟು ಕಾಲ ಶಿಕ್ಷೆ ಅನುಭವಿಸಬೇಕು ಎನ್ನುವ ಧಾಟಿಯಲ್ಲಿ ಅಳಲು
>> ತೋಡಿಕೊಳ್ಳುವವರ ಸಂಖ್ಯೆ ಸಹ ಕಡಿಮೆ ಏನಿಲ್ಲ. ಮೀಸಲಾತಿ ಇರುವವರೆಗೂ ಜಾತಿ
>> ವಿನಾಶವಾಗುವುದಿಲ್ಲ, ಕೆಳ ಜಾತಿಯವರ ಬಗೆಗಿನ  ತಮ್ಮ ಅಸಹನೆಗೆ ಮೀಸಲಾತಿಯೇ ಪ್ರಮುಖ ಕಾರಣಎಂಬ
>> ವಾದವನ್ನು ಕೆಲವರು ಮಂಡಿಸುತ್ತಿರುತ್ತಾರೆ.
>>
>> ಕಣ್ಣೆದುರಿನ ವಾಸ್ತವಗಳಿಗೆ ಬೆನ್ನು ತೋರಿದವರಷ್ಟೇ ಹೀಗೆಲ್ಲ ಮಾತನಾಡಲು ಸಾಧ್ಯವೇನೊ? ಬಾಳ
>> ಸಂಗಾತಿ ಆರಿಸಿಕೊಳ್ಳಲು, ಬಾಡಿಗೆಗೆ ಮನೆ ನೀಡಲು ಯಾವುದೇ ಮೀಸಲಾತಿಯ ಒತ್ತಡವಿಲ್ಲದಿದ್ದರೂ
>> ಏಕೆ ಬಹುತೇಕ ಮಂದಿ ತಮ್ಮ ಜಾತಿಯವರಿಗಷ್ಟೇ ಆದ್ಯತೆ ನೀಡುತ್ತಾರೆಂಬ ಸರಳ ಪ್ರಶ್ನೆ
>> ಎದುರಿಟ್ಟುಕೊಂಡು ಪರಿಶೀಲಿಸಿದರೂ ಸಾಕು, ಜಾತಿಯ ವಿಷ ವರ್ತುಲ ಎಷ್ಟು ಪ್ರಬಲವಾಗಿದೆ ಎಂಬುದು
>> ಮನದಟ್ಟಾಗುತ್ತದೆ.
>> ಪದವಿಗೆ ಪ್ರವೇಶ ಪಡೆಯುವ ಕಾಲಘಟ್ಟದಲ್ಲಿ ಮೀಸಲಾತಿಯಿಂದ ತಾವು ಅವಕಾಶ
>> ವಂಚಿತರಾಗುತ್ತಿದ್ದೇವೆ ಎನ್ನುವ ಅನಿಸಿಕೆ ಮೇಲ್ವರ್ಗದ ವಿದ್ಯಾರ್ಥಿಗಳಲ್ಲಿ ಅನಾಯಾಸವಾಗಿ
>> ಬೇರೂರಲಾರಂಭಿಸಿರುವುದನ್ನು ನಾವೆಲ್ಲ ಗಮನಿಸಬಹುದು. ಉದಾಹರಣೆಗೆ, ಸಿಇಟಿ ಮೂಲಕ
>> ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳನ್ನು ಹಂಚುವ ಪ್ರಕ್ರಿಯೆಯನ್ನು ಪರಿಗಣಿಸಬಹುದು.
>> ‘ನಲ್ವತ್ತು ಐವತ್ತು ಸಾವಿರ ರ್‍ಯಾಂಕ್ ಗಳಿಸಿದ್ರೂ ಅವ್ರಿಗೆ ಒಳ್ಳೆ ಕಾಲೇಜ್‌ನಲ್ಲಿ ಸೀಟು
>> ಸಿಗುತ್ತೆ. ನಮ್ಮ ರ್‍ಯಾಂಕ್ ಹತ್ತು ಸಾವಿರದೊಳಗಿದ್ರೂ ಬೇಕಾದ ಕಡೆ ಸೀಟು ದಕ್ಕುವುದಿಲ್ಲ.
>> ನಮ್ಮ ಪ್ರತಿಭೆಗೆ ಬೆಲೆ ಇಲ್ವಾ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು
>> ಗಮನಿಸಿದ್ದೇನೆ. ಉತ್ತಮ ರ್‍ಯಾಂಕ್‌ ಗಳಿಸಿಯೂ ಬಯಸಿದ ಸೀಟು ಸಿಗದಿರುವುದಕ್ಕೆ ಮೀಸಲಾತಿಯೇ
>> ಕಾರಣವೆಂದು ದೂಷಿಸುವವರು, ಹಣವುಳ್ಳವರಿಗೆಂದೇ ಮೀಸಲಾಗುವ ಮ್ಯಾನೇಜ್‌ಮೆಂಟ್ ಕೋಟಾದೆಡೆಗೆ
>> ಅದೇಕೊ ಅಸಹನೆ ತೋರುವುದಿಲ್ಲ. ತೋರಿದರೂ ಅದರ ತೀವ್ರತೆ ಮೀಸಲಾತಿಯೆಡೆಗಿನ ಅಸಹನೆಯಷ್ಟು
>> ತೀವ್ರವಾಗಿರುವುದಿಲ್ಲ.
>>
>> ಪ್ರತಿ ಬಾರಿ ಪಿಯುಸಿ ಮತ್ತು ಸಿಇಟಿ ಫಲಿತಾಂಶ ಹೊರಬಿದ್ದ ನಂತರ ನಡೆಯುವ ಸರ್ಕಾರ ಮತ್ತು
>> ಖಾಸಗಿ ಕಾಲೇಜುಗಳ ಒಕ್ಕೂಟದ ನಡುವಿನ ಮಾತುಕತೆ ಅಂತಿಮವಾಗಿ ಶುಲ್ಕ ಹೆಚ್ಚಳ, ಸರ್ಕಾರಿ
>> ಕೋಟಾದಡಿಯ ಸೀಟುಗಳ ಕಡಿತದೊಂದಿಗೆ ಮುಗಿಯುವುದಿಲ್ಲವೇ? ತಮ್ಮ ಪ್ರತಿಭೆಗೆ ಮನ್ನಣೆ
>> ದೊರೆಯದಿರುವುದಕ್ಕೆ ಜಾತಿ ಆಧಾರಿತ ಮೀಸಲಾತಿಯ ಬದಲಾಗಿ ಹಣವಂತರಿಗೆ ಸೀಟುಗಳು
>> ಮೀಸಲಾಗುತ್ತಿರುವುದೇ ಮುಖ್ಯ ಕಾರಣವೆಂಬುದು ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಒಕ್ಕೂಟದ
>> ನಡುವೆ ನಡೆದುಕೊಂಡು ಬರುತ್ತಿರುವ ಒಪ್ಪಂದವನ್ನು ಪರಿಶೀಲಿಸಿದರೆ ತಿಳಿಯುತ್ತದೆ. ಆದರೂ
>> ಮೇಲ್ವರ್ಗದವರ ಅಸಹನೆ ಮತ್ತೆ ಜಾತಿ ಆಧಾರಿತ ಮೀಸಲಾತಿಯತ್ತಲೇ ಕೇಂದ್ರೀಕೃತವಾಗುವುದು ಏನನ್ನು
>> ಸೂಚಿಸುತ್ತದೆ? ನಮ್ಮೊಳಗಿನ್ನೂ ಬೇರೂರಿರುವ ಜಾತಿ ಪ್ರಜ್ಞೆಯೇ
>> ಈ ಜಾಣಕುರುಡುತನಕ್ಕೆ ಕಾರಣವಲ್ಲವೇ?
>>
>> ಮೀಸಲಾತಿಯಿಂದ ತಮಗೆ ಆಗುತ್ತಿರುವ ಅನ್ಯಾಯ ಕೊನೆಗಾಣಿಸಲು ಮೀಸಲಾತಿ ಕಿತ್ತೊಗೆಯಬೇಕು ಅಥವಾ
>> ಖಾಸಗೀಕರಣಕ್ಕೆ ಆದ್ಯತೆ ನೀಡಬೇಕೆಂಬ ನಿಲುವನ್ನು ಹಲವರು ಹೊಂದಿದ್ದಾರೆ. ಮೀಸಲಾತಿ
>> ಜಾರಿಯಲ್ಲಿರದ ಖಾಸಗಿ ವಲಯದಲ್ಲಿ ಪ್ರತಿಭೆಗಷ್ಟೇ ಮೊದಲ ಮನ್ನಣೆ ಎಂಬ ಗ್ರಹಿಕೆ ಪ್ರಬಲವಾಗಿಯೇ
>> ಬೇರೂರಿದೆ. ಉದ್ಯೋಗ ದಕ್ಕಿಸಿಕೊಳ್ಳಲು ಬೇಕಾದ ‘ರೆಫರೆನ್ಸ್’ ಕೂಡ ಒಂದು ರೀತಿಯ ಮೀಸಲಾತಿಯೇ
>> ಎಂಬುದನ್ನು ಒಪ್ಪಲು ನಾವು ಸಿದ್ಧರಿದ್ದೇವೆಯೇ? ಮಿಕ್ಕೆಲ್ಲ ಅರ್ಹತೆಗಳಿಗಿಂತಲೂ ಉದ್ಯೋಗ
>> ಪಡೆಯಲು ‘ರೆಫರೆನ್ಸ್’ ಮುಖ್ಯವಾಗುವುದು ನಮ್ಮ ಅರಿವಿಗೆ ಬಂದಿಲ್ಲವೇ? ಈ ‘ರೆಫರೆನ್ಸ್’
>> ದಕ್ಕಿಸಿಕೊಳ್ಳಲು ಯಾರಿಗೆ ಸಾಧ್ಯವೆಂಬ ಸರಳ ಅಂಶ ಮುಂದಿಟ್ಟುಕೊಂಡು ನೋಡಿದರೂ ಖಾಸಗಿ
>> ವಲಯದಲ್ಲಿ ಜಾತಿ ಆಧಾರಿತ ಮೀಸಲಾತಿ ಜಾರಿಗೆ ಬರಬೇಕೆಂಬ ಕೂಗು ಏಕೆ ಪ್ರಬಲವಾಗುತ್ತಿದೆ
>> ಎಂಬುದು  ಅರಿವಾಗುತ್ತದೆ.
>>
>> ಮೀಸಲಾತಿಯ ದುರ್ಬಳಕೆಯಾಗುತ್ತಿದೆ, ಎಲ್ಲಾ ಜಾತಿಯ ಬಡವರಿಗೂ ಮೀಸಲಾತಿ ದೊರೆಯಲಿ ಎಂಬುದು
>> ಕೆಲವರ ನಿಲುವು. ಆದರೆ ಈ ದುರ್ಬಳಕೆ ಕೆಳ ಜಾತಿಯಲ್ಲಷ್ಟೇ ಇರುವುದೇ? ಮೀಸಲಾತಿ ದೊರೆತರೂ ಅದು
>> ಯಾವುದಕ್ಕೂ ಸಾಲದೆಂಬ ಕಾರಣಕ್ಕಾಗಿಯೇ ಅದರ ವಿರುದ್ಧ ದನಿ ಎತ್ತುವ ಕೆಲ ಪ್ರಬಲ ಜಾತಿಯವರು
>> ಕೂಡ ಅತ್ಯಲ್ಪ ಆದಾಯ ತೋರುವ ಪ್ರಮಾಣಪತ್ರಗಳನ್ನು ಮಾಡಿಸಿಕೊಂಡು ತಮ್ಮದೇ ಸಮುದಾಯದ ಅರ್ಹರಿಗೆ
>> ದೊರೆಯಬೇಕಾದ ಸೌಲಭ್ಯಗಳನ್ನು ಕಬಳಿಸುವುದಿಲ್ಲವೇ?
>>
>> ಮೀಸಲಾತಿ ಕುರಿತು ಅಪಸ್ವರ ಎತ್ತಲು ಸಿಗುವ ಸಣ್ಣ ಅವಕಾಶವನ್ನೂ ಬಿಡಬಾರದೆಂಬ ಮನೋಭಾವ
>> ಮೈಗೂಡಿಸಿಕೊಂಡವರಿಗೆ, ಕಣ್ಣೆದುರಿನ ವಾಸ್ತವವೇ ಭ್ರಮೆಯಂತೆ ತೋರುತ್ತಿರುವುದು ವಿಪರ್ಯಾಸ.
>> ಆತ್ಮವಿಮರ್ಶೆಯ ಸ್ಥಾನದಲ್ಲಿ ಆತ್ಮವಂಚನೆ ಆಸೀನವಾಗಿರುವಾಗ ಅಸಹನೆ ಹೊರಹೊಮ್ಮದೆ ಇರುವುದೇ?
>>
>> [email protected]
>> ಸಿದ್ದರಾಮಪ್ಪ. ಎಸ್.ಎಂ
>> ಸಶಿ ಕಲಾ
>> ಸರ್ಕಾರಿ ಪ್ರೌಢ ಶಾಲೆ
>> ಗಂಜಿಗೆರೆ. ಕೆ ಆರ್ ಪೇಟೆ ತಾ||
>> ಮಂಡ್ಯ ಜಿಲ್ಲೆ
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAJCvfyW51WcVDwgzRs2FGOejNfXpvOkad_XUzWROJuTqs9OAOQ%40mail.gmail.com
>> <https://groups.google.com/d/msgid/socialsciencestf/CAJCvfyW51WcVDwgzRs2FGOejNfXpvOkad_XUzWROJuTqs9OAOQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAFbcX9dCXpxD_Qo9rmFVjc4bj8fJER2Wi6Hk_rpom5NV2nR1%3Dg%40mail.gmail.com
> <https://groups.google.com/d/msgid/socialsciencestf/CAFbcX9dCXpxD_Qo9rmFVjc4bj8fJER2Wi6Hk_rpom5NV2nR1%3Dg%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>



-- 
Basavaraj Naika H D
Asst Teacher
G H S Baggavalli Tarikere Tq
Chickmagalur Dist

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz5XmfRmPQGVSg%2B9NvOurL_UbYvS5Bi5SY1WH%2BFKgagCzQ%40mail.gmail.com.
For more options, visit https://groups.google.com/d/optout.

Reply via email to