ಸೂಪರ್ ಗುರು,

Mahadevappa Kundaragi
GHS Avathi
Chikkamagaluru Tq&Dist
mob:9481216233

On 01-Mar-2019 9:36 PM, "GENIUS CSK" <[email protected]> wrote:

>
> ಆತ್ಮೀಯ ಶಿಕ್ಷಕ ಮಿತ್ರರೇ ಇಂದು ನಡೆದ ಸಮಾಜ ವಿಜ್ಞಾನ  ವಿಷಯದ ರಾಜ್ಯ ಮಟ್ಟದ ಪೂರ್ವ
> ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಒಮ್ಮೆ ಅವಲೋಕಿಸಿದಾಗ ಅದರಲ್ಲಿ ಅನೇಕ ದೋಷಗಳು ಕಂಡು
> ಬಂದಿದೆ. ಇಂತಹ ದೋಷಗಳ ಕುರಿತು ಒಮ್ಮೆ ಕಣ್ಣಾಡಿಸೋಣ...
>
> 1. ಪಾಠಕ್ಕೆ ನಿಗದಿಪಡಿಸಿದ ಅಂಕಗಳನ್ನು ಸರಿಯಾಗಿ ನಿರ್ವಹಿಸಿಲ್ಲ. ಉದಾಹರಣೆಗೆ ಇತಿಹಾಸದ
> 6ನೇ ಅಧ್ಯಾಯ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಈ ಅಧ್ಯಾಯಕ್ಕೆ ಇಲಾಖೆಯು ಮೂರು
> ಅಂಕಗಳನ್ನು ನಿಗದಿ ಪಡಿಸಿದೆ. ಆದರೆ ರಾಜ್ಯ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಈ
> ಅಧ್ಯಾಯದಿಂದ ಕೇವಲ ಒಂದು ಅಂಕದ ಪ್ರಶ್ನೆ ಮಾತ್ರ ಕೇಳಲಾಗಿದೆ. ಇದಕ್ಕೆ ಬದಲಾಗಿ 7ನೇ ಅಧ್ಯಾಯ
> ಭಾರತದ ಸ್ವಾತಂತ್ರ್ಯ ಹೋರಾಟದ ಅಧ್ಯಾಯಕ್ಕೆ 2 ಅಂಕವನ್ನು ನಿಗದಿಪಡಿಸಲಾಗಿದೆ. ಆದರೆ ಈ
> ಪ್ರಶ್ನೆ ಪತ್ರಿಕೆಯಲ್ಲಿ ಒಂದು ಅಂಕದ 2 ಪ್ರಶ್ನೆಗಳನ್ನು ಮತ್ತು 2 ಅಂಕದ ಒಂದು
> ಪ್ರಶ್ನೆಯನ್ನು ಒಳಗೊಂಡಂತೆ 4ಅಂಕಕ್ಕೆ ಕೇಳಲಾಗಿದೆ.
>  ಅದೇ ರೀತಿ ಭೂಗೋಳ ವಿಜ್ಞಾನದ 2ನೇ ಅಧ್ಯಾಯಕ್ಕೆ 2 ಅಂಕಗಳು ನಿಗದಿಯಾಗಿದೆ. ಆದರೆ
> ಪ್ರಶ್ನೆಪತ್ರಿಕೆಯಲ್ಲಿ  ಎರಡು ಅಂಕದ ಒಂದು ಪ್ರಶ್ನೆ ಹಾಗೂ ನಕ್ಷೆಯು ಸೇರಿದಂತೆ ಮೂರು
> ಅಂಕಕ್ಕೆ ಪ್ರಶ್ನೆಗಳನ್ನು ಕೇಳಲಾಗಿದೆ. ಭೂಗೋಳದ 4ನೇ ಅಧ್ಯಾಯಕ್ಕೆ ಒಂದು ಅಂಕ
> ನಿಗದಿಯಾಗಿದೆ. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಪಾಠಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ
> ಬಂದಿರುವುದಿಲ್ಲ.  ಅದೇ ರೀತಿ 8ನೇ ಅಧ್ಯಾಯ ಕ್ಕೆ ಎರಡು ಅಂಕವನ್ನು ನಿಗದಿ ಮಾಡಲಾಗಿದೆ ಆದರೆ
> ಈ ಅಧ್ಯಾಯದಿಂದ ಕೇವಲ ಒಂದು ಅಂಕದ ಪ್ರಶ್ನೆ ಮಾತ್ರ ಕೇಳಲಾಗಿದೆ. ಹಾಗೆ ಮುಂದುವರೆದು
> ಒಂಬತ್ತನೇ ಅಧ್ಯಾಯ 3 ಅಂಕ ನಿಗದಿ ಮಾಡಲಾಗಿದೆ ಆದರೆ ಈ ಅಧ್ಯಾಯದಲ್ಲಿ ಎರಡು ಅಂಕದ 2
> ಪ್ರಶ್ನೆಗಳನ್ನು  ಪ್ರಶ್ನೆಗಳನ್ನು ಕೇಳಲಾಗಿದೆ.
>
> 2. ಇದೊಂದು ಅಪೂರ್ಣ ಪ್ರಶ್ನೆ ಪತ್ರಿಕೆಯಾಗಿದೆ. ಏಕೆಂದರೆ  ಮೂರು ಅಂಕದ ಆರು
> ಪ್ರಶ್ನೆಗಳಿಗೆ ಅಥವಾ ಪ್ರಶ್ನೆಗಳು ಹಾಗೂ ಎರಡು ಅಂಕದ ಒಂದು ಪ್ರಶ್ನೆಗೆ ಅಥವಾ ಪ್ರಶ್ನೆ
> ನೀಡುವುದರ ಮೂಲಕ ಒಟ್ಟು 100 ಅಂಕಕ್ಕೆ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತದೆ.
> ಆದರೆ ಈ ಪ್ರಶ್ನೆ ಪತ್ರಿಕೆಯಲ್ಲಿ ಎರಡು ಅಂಕದ ಯಾವುದೇ ಪ್ರಶ್ನೆಗೆ ಅಥವಾ ಪ್ರಶ್ನೆಯನ್ನು
> ನೀಡಿರುವುದಿಲ್ಲ. ಹಾಗಾಗಿ ಈ ಪ್ರಶ್ನೆ ಪತ್ರಿಕೆಯು 100 ಅಂಕ ಬದಲಾಗಿ 98 ಅಂಕಗಳಿಗೆ
> ತೆಗೆದಿರುವ ಪ್ರಶ್ನೆ ಪತ್ರಿಕೆ ಅಂದರೆ ಇದೊಂದು ಅಪೂರ್ಣ ಪ್ರಶ್ನೆ ಪತ್ರಿಕೆಯಾಗಿದೆ.
>
> 3. ದೋಷಪೂರಿತ ಪ್ರಶ್ನೆಗಳು.  ಈ ಪ್ರಶ್ನೆ ಪತ್ರಿಕೆಯಲ್ಲಿ ನಾವು ಅನೇಕ ದೋಷಪೂರಿತ
> ಪ್ರಶ್ನೆಗಳನ್ನು ಗುರುತಿಸಬಹುದಾಗಿದೆ. ಉದಾಹರಣೆಗೆ ಪೂರ್ವ ಕರಾವಳಿ ಮತ್ತಪಶ್ಚಿಮ ಕರಾವಳಿಯ
> ಬಂದರುಗಳನ್ನು ವಿಂಗಡಿಸಿ ಬರೆಯಿರಿ ಎಂಬುದಾಗಿ 4 ಬಂದರಗಳನ್ನು ನೀಡಲಾಗಿದೆ. ಆದರೆ ಅದರಲ್ಲಿ
> ಒಂದು ಮಾತ್ರ ಪೂರ್ವ ಕರಾವಳಿಗೆ ಸೇರಿದ್ದು ಉಳಿದ ಮೂರು ಪಶ್ಚಿಮ ಕರಾವಳಿ ಸೇರಿವೆ. ಯಾವುದೇ
> ಎರಡು ಬಂದರುಗಳನ್ನು ವರ್ಗೀಕರಿಸಿ ಬರೆದರೂ ಅಂಕ ನೀಡುವುದು ಅನಿವಾರ್ಯವಾಗುತ್ತದೆ.
>  ಅದೇ ರೀತಿ ಬಹು ಆಯ್ಕೆ ಪ್ರಶ್ನೆಯಲ್ಲಿ ಶೀತಲ ಸಮರದ ಕಾಲದಲ್ಲಿ ಶಸ್ತ್ರಾಸ್ತ್ರ ಪೈಪೋಟಿ
> ಯಿಂದ ಮುಖ್ಯ ಪರಿಣಾಮವೆಂದರೆ ಎಂಬುದಾಗಿ ಪ್ರಶ್ನೆಯನ್ನು ಕೊಟ್ಟು ಅದಕ್ಕೆ ಉತ್ತರವಾಗಿ
> ಅಮೆರಿಕ ಜಗತ್ತಿನ ಏಕಮಾತ್ರ ಶಕ್ತಿಯುತ ರಾಷ್ಟ್ರವಾಗಿ ತಲೆಯೆತ್ತಿತು ಎಂಬುದಾಗಿ ಉತ್ತರ
> ನೀಡಲಾಗಿದೆ. ಆದರೆ ಅಮೆರಿಕ ಜಗತ್ತಿನ ಏಕಮಾತ್ರ ರಾಷ್ಟ್ರವಾಗಿ ತಲೆ ಎತ್ತಿದ್ದು
> ಶಸ್ತ್ರಾಸ್ತ್ರ ಪೈಪೋಟಿಯಿಂದ ಅಲ್ಲ ಬದಲಾಗಿ ರಷ್ಯಾದ ವಿಘಟನೆ ಎಂಬುದಾಗಿ ಹೇಳಬಹುದು.
>
> 4. ಅದೇ ರೀತಿ ನಕ್ಷೆ.  ನಕ್ಷೆಯನ್ನು ಕೇಳುವಾಗ ಕೆಲವು ನಿಯಮಗಳನ್ನು ಪಾಲಿಸಬೇಕೆಂದು ಕೇಳಲು
> ಪಟ್ಟಿದ್ದೇನೆ.ಆದರೆ  ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿ ದಾವಣಗೆರೆ ಎಂಬ ಸ್ಥಳವನ್ನು
> ಗುರುತಿಸಲು ಕೇಳಲಾಗಿದೆ. ನನಗೆ ತಿಳಿದಂತೆ ಯಾವುದೇ ಅಧ್ಯಾಯದಲ್ಲಿ ದಾವಣಗೆರೆಯ
> ಪ್ರಸ್ತಾಪವನ್ನು ನಾನು ನೋಡಿರುವುದಿಲ್ಲ.
>
> ಮುಖ್ಯ ಗುರುಗಳ ಸಂಘಕ್ಕೆ  ಈ ಮೂಲಕ ಕೇಳಿಕೊಳ್ಳುವುದೇನೆಂದರೆ  ಪೂರ್ವ ಸಿದ್ಧತಾ
> ಪರೀಕ್ಷೆಗಳು ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸಿ ವಾರ್ಷಿಕ ಪರೀಕ್ಷೆಗೆ
> ಸಿದ್ಧಗೊಳಿಸುವಂತಿರಬೇಕೆ ಹೊರತು ಅವರನ್ನು ಮತ್ತಷ್ಟು ಗೊಂದಲಕ್ಕೆ ಈಡು ಮಾಡಿ ಪರೀಕ್ಷೆಯ
> ಭಯದಿಂದ ಬಳಲುವಂತೆ ಮಾಡುವಂತಿರಬಾರದು.  ಈ ಬಾರಿ ಹೊಸ ಪಠ್ಯ ಪುಸ್ತಕವನ್ನು ಪರಿಚಯಿಸಿದ್ದು
> ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸುವುದು ಶಿಕ್ಷಕರಿಗೆ ಒಂದು ಸವಾಲಾಗಿದೆ. ಅಂತಹುದರಲ್ಲಿ
> ಇಂತಹ ದೋಷಪೂರಿತ ಪ್ರಶ್ನೆ ಪತ್ರಿಕೆಗಳು ಮಕ್ಕಳನ್ನು ಮತ್ತು ಶಿಕ್ಷಕರನ್ನು ಮತ್ತಷ್ಟು
> ಗೊಂದಲಗಳಿಗೆ ಈಡು ಮಾಡುವಂತಿದೆ.  ಆದುದರಿಂದ ಇಂತಹ ಗೊಂದಲಗಳು  ಪುನರಾವರ್ತನೆಯಾಗದಂತೆ
> ಕ್ರಮವಹಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
>
> ಧನ್ಯವಾದಗಳೊಂದಿಗೆ
> ಸಂತೋಷ್ ಕುಮಾರ್ .ಸಿ
> ಸಹಶಿಕ್ಷಕರು
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> - https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to