ನೆನ್ನೆ ಬುದ್ಧ ಪೂರ್ಣಿಮೆ ಪ್ರಯುಕ್ತ ; ಇಂದು

ಯಶೋಧರೆಯ ಅಳಲು

 ಹೊರಟೇ ಹೋದೆಯಾ ಇನಿಯಾ ?
 ಇಷ್ಟು ಬೇಸರವಾಯ್ತೆ ಎನ್ನ ಸನಿಹಾ !
 ಎದೆಯ ಆಶೆಗಳನ್ನೆಲ್ಲಾ ಕಲ್ಲುಮಾಡಿ
 ಮನದ ಬಯಕೆಗಳ ಮಣ್ಣುಗೂಡಿಸಿ //೧//

ಪ್ರೀತಿ ಕಡಲಲೆನ್ನ ತೇಲಿಸಿ,ಸುಖಿಸಿ
ಮಕರಂದದಾಸೆಗೆ ಸುತ್ತಿಸುಳಿದ ಪತಂಗ
ಮುತ್ತುಕೊಟ್ಟೆಯೆನಗೆ ' ರಾಹುಲ' ,ಸ್ವಾತಿಮುತ್ತು
ಮುತ್ತು ಕೈಯಲ್ಲೆ ಇದೆ,ಬಚ್ಚಿಟ್ಟಿಲ್ಲ ನಾನದನು //೨//

 ಗಲ್ಲತಟ್ಟಿ ಮಾತಿಲ್ಲದೇ ,ಮೆಲ್ಲನೇಕೆ ಹೋದೆಯೋ
 ಅರ್ಥವಾಗದು,ನಿನ್ನೆ ರಾತ್ರಿ ಮರಳಿ ಬಾರದು
 ಎಳ್ಳಷ್ಟಾದರೂ ಸುಳಿವು ಕೊಡದ ಮಳ್ಳನಂತೆ ನೀನು
 ಒಳ್ಳೆಯವನೆಂದು ಸೊಲ್ಲು ಸೊಲ್ಲಿಗೂ ಹೊಗಳಿಕೆ /೩/

  ಕರುಳ ಬಳ್ಳಿಯ ಅಕ್ಕರೆಗೂ ಬೆಲೆಯಿಲ್ಲ,
 ತೊರೆದೆಯಾ ನನ್ನ ಪ್ರೀತಿ ಸಂಕೋಲೆಯೆಂದು
 ಅರೆಗಳಿಗೆಗೊಮ್ಮೆ ರಾಹುಲನೆಂದು ಅಂಡಲೆಯುತ್ತಿದೆ
 ಅದೆಂತಹ ಮೋಹನಗಾರುಡಿಗೆ ಒಳಗಾದಿರಿ ನೀವು /೪/

  ಸರಸರನೆ ಸರಿದು ಹೋದಿರಿ ಮರೆತು ಬಿಟ್ಟಿರಿ
  ಪರಿ ನಿಮಗದು ಸರಿ ಇರಬಹುದು ,ಬಿಡಿರಿ
  ಅರಮನೆಗೆ ಏನೆಂದು ಉತ್ತರ ಕೊಡಲಿ ನಾನು
  ತೌರಿನವರ ಇರಿವ ಕಣ್ಣೋಟ ಎದುರಿಸಲಿ ಹೇಗೆ /೫/

  ಹೌದು,ಕಳೆದ ರಾತ್ರಿ ಕಣ್ಣಲೊಂದು ಮಿನುಗಿತ್ತು
  ಬಿಗಿದ ಮುಷ್ಠಿ,ಇಡುವ ಹೆಜ್ಜೆಯಲಿ ದೃಢತೆಯಿತ್ತು
  ಭಾರಹೊತ್ತ ಮುಖಭಾವ,ದೂರ ಕಂಡು ನಸುನಕ್ಕಿತ್ತು
  ನಿಶ್ವಾನದ ನಿಟ್ಟುಸಿರು,ಉಚ್ವಾಸದಲ್ಲಿ ಛಲವಿತ್ತು /೬/

  ಅಳುವಂತಿಲ್ಲ ಬಿಕ್ಕಳಿಸುವಂತಿಲ್ಲ
  ಎಚ್ಛರಾದಾನು ಮುದ್ಧು ರಾಹುಲ
 ಉಳಿದ ಗಳಿಗೆಗಳೆಣಿಸಲು ಅವನೇ ಬಲ
 ಕಪಿಲವಸ್ತುವ ಕವಿದ ಕೋಲಾಹಲ /೭/

 ನೀನೇನೋ ಹೊರಟೆ ,ಹೊಸತನೇನೋ ಅರಸಿ
 ಕತ್ತಲೆಯ ಕೂಪಕ್ಕೆ ಬಳ್ಳಿ- ಮೊಗ್ಗನು ತಳ್ಳಿ
 ಅರಸೊತ್ತಿಗೆಗಿಂತಲೂ ಆಪ್ಯಾಯವೇ ಆ ದಾರಿ ?
 ನಾನೊಂದು ಮರುಳು,ತಡೆಯಲಾದೀತೆ ಬಿರುಗಾಳಿ ! //೮//

     * ಚಂದ್ರೇಗೌಡನಾರಮ್ನಳ್ಳಿ, ೮೭೨೨೧೯೯೩೪೪Chandregowda m.d. pin 573119. mo
8722199344

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to