*ಅಮ್ಮ*'

"ಓದಬೇಕು" ಇದೊಂದೇ ನನಗೆ ಅಮ್ಮ ಹೇಳಿದ ಮಾತು
 ,ಓದದೆ ಸಾಹಿತ್ಯದ ಸವಿ ದೊರೆಯದು.
ಓದದೆ  ಕವಿಗಳೆದೆಯಾಳ ಅರಿಯಲಾಗದು ,

 ಓದದೆ 'ಜಗದಗಲ ಮುಗಿಲಗಲ '
ಬ್ರಹ್ಮಾಂಡದ ಬಸಿರ ಬಗೆಯಲಾಗದು.

ಮಣ್ಣಿನ  'ವಾಸನೆ'  ಯು ಮನಕಾಗದು,
ಸಾಗರದ ತಳದ ಗೂಢಗಳು ಕಾಣದು.
ನದಿ ದಡದ 'ಸಂಸ್ಕೃತಿ'ಯ ಸಂದೇಶ ಬಾರದು:

 ಈಸಲಾಗದು.ವಿಶ್ವಜಾನ ಸಾಗರವ.

ಓದುವುದೇ ಅರಿವು ಓದುವುದೆ ಅರವು

ಓದಿ ಅರಗಿಸಿದರದು ಸುಳಿಯಾಗಿ ಸುತ್ತುವುದು.

ಬರೆದವರ ಆಳ ಮೊಗೆದಷ್ಟು ಉಕ್ಕುವುದು,ದಕ್ಕುವುದು.

'ಆದಕ್ಕಾಗಿ'

ಕುಳಿತು ಓದಬೇಕು.. ಓದಿ ತಿಳಿಯಬೇಕು.
ಅಂತ ಅಂದುಕೊಂಡೆ

 ಹಳೆ ಬುಕ್ಕನೊಂದ ಕೆಳಗೆ ತಂದೆ.ಪುಟ ತೆಗೆಯಲೆಂದೇ,
.
ಅಪರೂಪಕ್ಕೊಮ್ಮೆತಮ್ಮ ಬಂದಿಳಿದ
 ಓಡಿದೆನು ಬಳಿಗೆ!

ಒಬ್ಬನೇ ಬಂದೆ !ಅಮ್ಮನೆಲ್ಲಿ!!?

ಅಳು ತಡೆಯಲಾರದೆ  ಕುಸಿದು ಕುಳಿತೆ
ಕಣ್ಣಿರು ಉಕ್ಕಿತು .ಅಮ್ಮನ  ನೆನೆದು

ಅಮ್ಮ 'ಅಂದ' ಒಂದು ನುಡಿ' ತಲೆಗೋಗಲಿಲ್ಲ . 'ತಲೆತಾಕಿ'ದಾಗ ಹೇಳಲಮ್ಮನಿಲ್ಲ.

 ಅಮ್ಮ ಹೇಳಿದ್ದೆಲ್ಲ ಇಲ್ಲೆ ಇತ್ತು.
ಅವಳು ಮಾಡಿದ್ದೆಲ್ಲ ಇಲ್ಲೆ ಬರೆದಿತ್ತು,ಪುಸ್ತಕದಲಿ!

ಅವಳದೆಲ್ಲ ಬರಿ ಕಾಯಕದ 'ಗೀತ.'

ಅವಳ ದಿನಚರಿಯಲ್ಲಿತ್ತು
ಸದ್ಧರ್ಮಸಾರ.
ಅವಳ ಕೆಲಸದಲ್ಲಿತ್ತು ವೇದಗಳ ಹಾರ

.ನಡೆಯೊಂದೇ ಅರಿತವಳು
ನುಡಿಯಲರಿಯದವಳು.
ಇತರರಿಗೆ ಒರೆಯುವ ಪರಿಯರಿಯದವಳು.

 ನುಡಿದಿದ್ದೇ ಸತ್ಯ ದುಡಿದಿದ್ದೇ ಕರ್ಮ
ನಡೆದಿದ್ದೇ ಧರ್ಮ.

 'ಲೋಕ-ಗೀಕದ' ಗೀಳು  ಇಲ್ಲದವಳು.
'ಸೇವೆ- ಗೀವೆಯ' 'ಸರಿ'ಗಳರಿಯದವಳು. ಸರ್ಟಿಫಿಕೇಟ್ ಗಳ ಹೆಸರೇ ಕೇಳಿಲ್ಲ ಅಮ್ಮ.

ಈ 'ಬಣ' 'ಬಣ್ಣ-ಗಿಣ್ಣಗಳ' ಗಂಧವರಿಯದವಳು.
ಏಕೆಂದರೆ ಶಾಲೆಯ ಮುಖ ಕಾಣಲಿಲ್ಲ.

 ಬೆಳಗಾಗೆ ಮಕತೊಳೆದು ಸೂರ್ಯನಿಗೆ ನಮಿಸಿ, 'ಬೆಂಕಿ' ದೇವನ ಮುಂದೆ ಕೈ ಕಾಲು 'ಊರುವಳು'.

ಇದ್ದಷ್ಟೆ ಕಾಳಿನಲಿ ನಮಗೆಲ್ಲ. ಸವಿಗೂಳು.
ಅವಳಿಗಿತ್ತೋ,ಇಲ್ಲೋ ನಮಗರಿಯದು
.'ಹಸಿವೆ' ಎಂದೂ ಅಮ್ಮ ನಮಗೇಳಲಿಲ್ಲ.

ಅಲ್ಲಿಂದ ,....

 ಅಂಗಳದ ಕಸಕ್ಕಿಲ್ಲ ಸಂಬಳದ ಆಳು: ಬಚ್ಚಲಿಗೆ ಬಯಲಿಗೆ, ಅಲ್ಲೂ ಅಮ್ಮ ನದೆ  'ಕಾರುಬಾರು'
ಅಮ್ಮನೇ ಬೇಕೆಂದು  ಹೊಸಎಮ್ಮೆ , ಹಸು ಕರು.

ದುಡಿವ ಪರಿ ಪರಿಯೊಂದೆ ಅವಳಿಗೆ ಗೊತ್ತು.
ಕರುಳ ಕುಡಿಗಳಿಗಾಗಿ ಬೆವರ 'ಬಿತ್ತು'.

ಬಯಸಲಿಲ್ಲ ತುಸು ಯಾರ ಉಮ್ಮೇದು
 ಹೇಳಲಿಲ್ಲ, ಮಾಡುವೆನೆಂದು'ಜಾದು'.
ಪಯಣಿಸಿದ್ದಳು ಮನೆಗೆ ಜೀವ ತೇದು.

ರಚನೆ:
ಶ್ರೀ ಮತಿ ಎನ್.ಕೆಜಯಲಕ್ಷ್ಮಮ್ಮ
ಸರ್ಕಾರಿ ಪ್ರೌಢಶಾಲೆ ಅರಳೇಪೇಟೆ ಬೆಂಗಳೂರು. ದ.ವ._೨

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/kannadastf/CA%2B_28BXjuyR2knSq-jsiuBC5v9fvCTJ%2BNgXF8vj%3DLreLXcRJsA%40mail.gmail.com.

Reply via email to