Superb.....thank you
On 8 May 2016 11:14 am, "srinivasa d shetty" <[email protected]> wrote:

> ನನ್ನೊಳಗಿನ ಅವ್ವ ಸದಾ ಜಾಗೃತ
>
> ಅಂದು ಎಂದಿನಂತೆ ಶಾಲೆ ನಡೆಯುತ್ತಿರಲಿಲ್ಲ. ಕಾರಣ ಶಾಲೆಯ ಅರ್ಧಕ್ಕಿಂತ ಹೆಚ್ಚು
> ಶಿಕ್ಷಕರನ್ನು ತರಭೇತಿಗೆ ನಿಯೋಜಿಸಲಾಗಿತ್ತು. ನಾವು 4 ಮಂದಿ ಶಿಕ್ಷಕರು ಮಾತ್ರ ಶಾಲೆಯಲ್ಲಿ
> ಇದ್ದೆವು. ಒಂಭತ್ತು ವಿಭಾಗಗಳನ್ನು ನಿಭಾಯಿಸುವುದರಲ್ಲೇ ಸಮಯ ಕಳೆಯುತ್ತಿತ್ತೇ ಹೊರತು ಪಾಠ
> ಪ್ರವಚನಗಳು ಸಾಂಗವಾಗಿ ನಡೆಯುತ್ತಿರಲಿಲ್ಲ. ಮಧ್ಯಾಹ್ನದ ಊಟಕ್ಕೆ ಬಿಡುವ ಹೊತ್ತಿನಲ್ಲಿ
> ಇಬ್ಬರು ಹುಡುಗರು ಹೊಡೆದಾಡಿಕೊಂಡು ಒಬ್ಬನ ತಲೆಗೆ ಪೆಟ್ಟು ಬಿದ್ದು ಕುಸಿದು ಬಿದ್ದಿದ್ದ.
> ನನಗಂತೂ ಅವನ ಆಗಿನ ಸ್ಥಿತಿ ಕಂಡು ದುಃಖ ಒತ್ತರಿಸಿ ಬಂದು ತರಾತುರಿಯಲ್ಲೇ ಪ್ರಥಮ ಚಿಕಿತ್ಸೆ
> ಮಾಡಿ ಆಸ್ಪತ್ರೆಗೆ ಸಾಗಿಸಿದೆ. ಅವತ್ತು ನನಗೆ ಆ ವಿದ್ಯಾರ್ಥಿಯದೇ ಚಿಂತೆಯಾಗಿತ್ತು.
> ನನ್ನೊಳಗಿನ ತಾಯ್ತನದಿಂದಾಗಿ ಅವನ ಸ್ಥಿತಿಗೆ ಮರುಗಿ ನಿದ್ದೆ ಇಲ್ಲದೇ ಒದ್ದಾಡಿದೆ.
>
> ಇಂಥ ಘಟನೆಗಳು ಶಾಲೆಯಲ್ಲಿ ಮರುಕಳಿಸಿದಾಗಲೆಲ್ಲ ನನ್ನೊಳಗಿನ ಅವ್ವ ಜಾಗೃತಳಾಗುತ್ತಾಳೆ. ಅವಳ
> ಆರೈಕೆಯ ತದ್ರೂಪು ವಿದ್ಯಾರ್ಥಿಗಳಿಗೆ ವರ್ಗಾವಣೆಯಾಗುತ್ತದೆ. ಕರುಳ ಬಳ್ಳಿಯಲ್ಲದ ಮಕ್ಕಳಿಗೂ
> ತೋರುವ ಶಿಕ್ಷಕರ ತಾಯ್ತನ ತನ್ನದೇ ಮಕ್ಕಳಿಗೆ ನೀಡುವುದಕ್ಕಿಂತ ಹೆಚ್ಚು ಪ್ರಾಶಸ್ತ್ಯ
> ಪಡೆಯುತ್ತದೆ. ಅದಕ್ಕೆ ತಾನೆ ಮಕ್ಕಳಿಗೆ ಮೊದಲ ಗುರು 'ತಾಯಿ', ಎರಡನೇ ತಾಯಿ 'ಗುರು'
> ಎನ್ನುವುದು.
>
> ಬೆಳಿಗ್ಗೆಯಿಂದ ಸಂಜೆವರೆಗೂ ಶಾಲೆಯಲ್ಲಿ ಸಂಸಾರದ ಜಂಜಾಟವನ್ನೆಲ್ಲಾ ಮರೆತು ವಿದ್ಯಾರ್ಥಿಗಳೇ
> ನಮ್ಮ ಮಕ್ಕಳೆಂದು ಅವರು ಕಲಿತಾಗ ಹಿಗ್ಗಿ, ಕಲಿಯದಿದ್ದಾಗ ಮತ್ತೊಮ್ಮೆ ಅರ್ಥೈಸಿ, ಅವರ
> ನಡೆಗಳನ್ನು ತಿದ್ದಿ ತೀಡಿ ಏನೋ ಸಾಧಿಸಿದ ಭಾವದೊಂದಿಗೆ ಮನೆಗೆ ಹಿಂದಿರುಗುತ್ತೇವೆ. ಅವರವರ
> ಮನೆಯಲ್ಲಿ ತಾಯಿ ಅವರ ಮಕ್ಕಳ ಆರೈಕೆ ಮಾಡುವಳೋ ಅದನ್ನೆಲ್ಲಾ ಶಾಲಾ ಅವಧಿಯಲ್ಲಿ ಶಿಕ್ಷಕರು
> ಮಾಡುತ್ತಾರೆ. ಹೀಗಾಗಿ ಬೇರೆಲ್ಲಾ ಉದ್ಯೋಗಿಗಳಿಗಿಂತ ಶಿಕ್ಷಕರು ಮಾತೃ ಹೃದಯಿಯಾಗಿರುತ್ತಾರೆ.
>
> ತಂದೆ ತಾಯನ್ನು ಹೊರತುಪಡಿಸಿ ಮಕ್ಕಳ ತಪ್ಪುಗಳನ್ನು ತಿದ್ದುವವರು ಯಾರಾದರೂ ಇದ್ದರೆ ಅದು
> ಶಿಕ್ಷಕರು ಮಾತ್ರ. ಶಿಕ್ಷಕ ವೃತ್ತಿ ಪವಿತ್ರವೆಂದು ಹೇಳುವುದೇ ಇದಕ್ಕಾಗಿ. ಒಬ್ಬ ಶಿಕ್ಷಕ
> ಹಲವು ರೂಪಗಳಲ್ಲಿ ಮಕ್ಕಳಿಗೆ ಕಲಿಸಲು ಸನ್ನದ್ಧನಾಗಿರುತ್ತಾನೆ. ಗೆಳೆಯನಾಗಿ, ಅಣ್ಣನಾಗಿ,
> ವೈದ್ಯನಾಗಿ, ನ್ಯಾಯಾಧೀಶನಾಗಿ, ಗೂಢಾಚಾರನಾಗಿ ಅದೆಲ್ಲಕ್ಕೂ ಹೆಚ್ಚಾಗಿ ಅಮ್ಮನಾಗಿ ಕಾರ್ಯ
> ನಿರ್ವಹಿಸುತ್ತಾನೆ. ಅಮ್ಮನ ಹೃದಯವಿದ್ದರೆ ಮಾತ್ರ ಮಕ್ಕಳಿಗೆ ಕಲಿಸುವ ಪ್ರಕ್ರಿಯೆ ಬಹಳ
> ಸುಲಭವಾಗುತ್ತದೆ. ತಾಯ್ ಹೃದಯಿ ಶಿಕ್ಷಕರನ್ನೇ ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ. ಹಾಗೂ ಆ
> ಶಿಕ್ಷಕರು ಬೋಧಿಸುವ ವಿಷಯಗಳನ್ನು ಬೇಗ ಕಲಿಯುತ್ತಾರೆ.
>
> ಅಮ್ಮನ ಪ್ರೀತಿ ಉಂಡ ಯಾವ ಮಕ್ಕಳು ಅಮ್ಮನ ಆಸರೆಯನ್ನು ಇಷ್ಟಪಡುವುದಿಲ್ಲ ಹೇಳಿ? ಅಮ್ಮನ
> ಅಸಲಿ ತಾಕತ್ತು ಇರುವುದೇ ನಿಷ್ಕಲ್ಮಷ ಪ್ರೀತಿಯಲ್ಲಿ. ಮಕ್ಕಳು ರಚ್ಚೆ ಹಿಡಿದರೂ, ಕೋಪಗೊಂಡರೂ
> ಸಂತೈಸುವ ಕಲೆ ಅಮ್ಮನಿಗೆ ಕರಗತ ಹಾಗೆಯೇ ವಿವಿಧ ಬುದ್ಧಿಮಟ್ಟದ ಮಕ್ಕಳ ಗಮನ ಸೆಳೆದು
> ಕಲಿಸುವಲ್ಲಿ ಶಿಕ್ಷಕರಿಗೆ ಕರಗತವಾಗುತ್ತದೆ. ಅಮ್ಮನಂತ ಶಿಕ್ಷಕ ವೃತ್ತಿ ಪಡೆದವರೆಲ್ಲರೂ
> ಮಕ್ಕಳ ಪಾಲಿಗೆ 'ಎರಡನೇ ಅಮ್ಮ' ಎಂದರೆ ಅತಿಶಯೋಕ್ತಿ ಏನಲ್ಲ. ಅಮ್ಮನನ್ನು ಶಿಕ್ಷಕರ
> ನೆಪದಲ್ಲಿ ಮಾತ್ರ ನೆನಪಿಸಿಕೊಂಡರೆ ಸಮುದ್ರವನ್ನು ಅಂಗೈಯಲ್ಲಿ ಹಿಡಿದು ತೋರಿಸಿದಂತೆ. ಅಸಲಿ
> ಅಮ್ಮ ಎಂದರೆ ಒಡಲಲ್ಲಿ ವಿಶ್ವರೂಪ ಅಡಗಿಸಿಕೊಂಡಿರುವ ಮಾನವ ರೂಪದ ದೇವತೆ. Happy Mothers
> Day
>
> - ಶ್ರೀನಿವಾಸ ಡಿ. ಶೆಟ್ಟಿ
> ಶಿಕ್ಷಕರು, ಬಿ ಎಸ್ ಎಸ್ ಸ ಪ ಪೂ ಕಾಲೇಜು
> ಕೊಣನೂರು,ಅರಕಲಗೂಡು ತಾಲ್ಲೂಕು
> ಹಾಸನ ಜಿಲ್ಲೆ 573 130
> ದೂ : 8951261033
>
> ( ಇಂದಿನ ಜನಮಿತ್ರ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.)
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to