ಮಾನ್ಯರೇ , ಇತ್ತೀಚಿನ ದಿನಗಳಲ್ಲಿ ನಮ್ಮ ಎಸ್.ಟಿ.ಎಫ್.ನಲ್ಲಿ ಹೊಸ ಹೊಸ ಹೆಸರುಗಳು ಕಾಣಲು
ಸಿಗುತ್ತಿವೆ , ಅಂದರೆ ಹೆಚ್ಚು ಹೆಚ್ಚು ಶಿಕ್ಷಕರು ಹೊಸತಾಗಿ ನಮ್ಮೊಂದಿಗೆ
ಸೇರಿಕೊಳ್ಳುತ್ತಿದ್ದಾರೆ. ಇದು ತುಂಬಾ ಸಂತಸದ ಸಂಗತಿ. ಅದರಲ್ಲೂ ಶಿಕ್ಷಕಿಯರು (ಮಹಿಳೆಯರು)
ಭಾಗವಹಿಸುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಅಧ್ಯಾಪಕ
ವೃತ್ತಿಗೆ ಸೇರಿಕೊಳ್ಳುವವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಆಗಿರುವುದರಿಂದ ಈ
ಎಸ್.ಟಿ.ಎಫ್.ನಲ್ಲೂ ಕೂಡಾ ಅವರ ಭಾಗವಹಿಸುವಿಕೆ ಹೆಚ್ಚಬೇಕು.

ಮತ್ತೂ ಒಂದು ಸಂತೋಷದ ವಿಷಯ ಏನೆಂದರೆ , ಹೆಚ್ಚು ಹೆಚ್ಚು ಯುವ ಶಿಕ್ಷಕರ
ಸೇರ್ಪಡೆಯಾಗುತ್ತಿರುವುದು. ಅದರಲ್ಲೂ , ಉತ್ತಮ ಕಂಪ್ಯೂಟರ್ ಜ್ಞಾನ ಇರುವ ಶಿಕ್ಷಕರು
ಸೇರುತ್ತಿರುವುದು. ಅವರೇ ನಮ್ಮ ಎಸ್.ಟಿ.ಎಫ್.ನ ಆಸ್ತಿ , ಮುಂದೆ ಅವರೇ ಈ ಸಂಘಟನೆಯ
ಬೆನ್ನೆಲುಬು. ನಮ್ಮಂತಹ (ವಯಸ್ಸಾದ) ಶಿಕ್ಷಕರಿಗೆ ನಮ್ಮ ಮನಸ್ಸಿನೊಳಗೆ ನಾವು ಇನ್ನು Out of
date teachers ಎಂಬ ಭಾವನೆ ಬರತೊಡಗಿದೆ. ಆದ್ದರಿಂದ ನಾವು ಬದಿಗೆ ಸರಿದು ಆ ಯುವ
ಶಿಕ್ಷಕರಿಗೆ ದಾರಿ ಬಿಡಬೇಕಾಗಿದೆ.

ಹೀಗಾಗಿ, ಅಂತಹ ಯುವ ಕ್ರಿಯಾಶೀಲ ಶಿಕ್ಷಕರನ್ನು ಸ್ವಾಗತಿಸೋಣ , ಹುರಿದುಂಬಿಸೋಣ. ಅವರ
ಕೆಲಸಗಳನ್ನು ಮೆಚ್ಚೋಣ. ಅವರ ಕಂಪ್ಯೂಟರ್ ಜ್ಞಾನದ ಲಾಭವನ್ನು ಎಲ್ಲರೂ ಪಡೆಯೋಣ.

Harikrishna Holla G,
Brahmavara.

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to