Nice sir On Mar 20, 2016 10:24 AM, "Mahabaleshwar Bhagwat" <[email protected]> wrote:
> 💫 ಆಶಾವಾದದ ಸಕಾರಾತ್ಮಕ ಚಿಂತನೆ ಅಗತ್ಯ💫 > > ಶಿಕ್ಷಣವೆಂದರೆ ಮಾನವನ ಬದುಕನ್ನು ರೂಪಿಸುವ ಕಲೆ. ಮಕ್ಕಳು ಬೆಳಗ್ಗೆ ಮನೆಯಿಂದ ಶಾಲೆಗೆ > ಹೋದರೆ, ಸಂಜೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಾರೆ. ಬೆಳಗ್ಗೆ 10.00ರಿಂದ ಸಂಜೆ > 5.00ರವರೆಗೆ ಶಾಲೆಯಲ್ಲಿದ್ದು ಸುಮಾರು ಏಳು ಗಂಟೆಗಳಷ್ಟು ಕಾಲ ಮಕ್ಕಳ ಮೇಲೆ ಶಾಲೆ ಮತ್ತು > ಶಿಕ್ಷಕರ ಪ್ರಭಾವ ಬೀಳುತ್ತದೆ. ಆದರೆ ಉಳಿದ 17 ಗಂಟೆಗಳ ಕಾಲ ಮಕ್ಕಳ ಮೇಲೆ ಮನೆಯವರು ಮತ್ತು > ಸಮಾಜ ಪ್ರಭಾವ ಬೀರುತ್ತದೆ. > > ಸನಿವಾಸ ಪದ್ಧತಿಯ ಶಿಕ್ಷಣ-ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಕಡೆಗೆ > ಶಿಕ್ಷಕರು ವಿಶೇಷ ಗಮನ ಕೊಡಲು ಸಾಧ್ಯವಾಗುತ್ತದೆ. ಪ್ರಾಚೀನ ಕಾಲದಲ್ಲಿ ಇದ್ದ ಗುರುಕುಲಗಳು > ಇಂದಿನ ಸನಿವಾಸ-ಮಾದರಿಯವುಗಳೆನ್ನಬಹುದು. ಇವುಗಳಲ್ಲಿ ರಾಜ-ಮಹಾರಾಜರ ಮಕ್ಕಳೂ, ಜನಸಾಮಾನ್ಯರ > ಮಕ್ಕಳೂ ಅಧ್ಯಯನ ಮಾಡುತ್ತಿದ್ದರು. ಅಂಥ ಗುರುಕುಲವೊಂದರಲ್ಲಿ ರಾಜಕುಮಾರರ ವ್ಯಕ್ತಿತ್ವವನ್ನು > ಗುರುತಿಸಿ ಪರೀಕ್ಷಿಸುವ ಒಂದು ಸ್ವಾರಸ್ಯಕರ ಪ್ರಸಂಗ ಹೀಗಿದೆ: > > ಮಗಧ ರಾಜ್ಯದ ರಾಜನಾದ ಶೂರಸೇನನ ಅವಳಿ ರಾಜಕುಮಾರರು ಗುರುಕುಲದಲ್ಲಿ ಅಧ್ಯಯನ > ಮಾಡುತ್ತಿದ್ದರು. 'ಇವರಿಬ್ಬರ ಪೈಕಿ ಮುಂದಕ್ಕೆ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಲು ಸೂಕ್ತ > ವ್ಯಕ್ತಿ ಯಾರು ?' ಎಂದು ರಾಜನು ಗುರುವಿನೊಡನೆ ಏಕಾಂತದಲ್ಲಿ ಪ್ರಶ್ನಿಸಿದ. ಗುರು ಈ > ಪ್ರಶ್ನೆಗೆ ಉತ್ತರಿಸಲು ಅಸಮರ್ಥರಾದರು. ಏಕೆಂದರೆ ಶಿಕ್ಷಣದಲ್ಲಿ, ಪ್ರಾಯದಲ್ಲಿ, > ಗುಣನಡತೆಯಲ್ಲಿ ಇಬ್ಬರೂ ಸಮಾನರಾಗಿದ್ದರು. ಇವರಿಬ್ಬರ ಪೈಕಿ ಯಾರು ಹೆಚ್ಚಿನ > ಅರ್ಹತೆಯುಳ್ಳವನು ? ಎಂಬುದನ್ನು ಪರೀಕ್ಷಿಸಲು ಗುರು ಒಂದು ಉಪಾಯ ಹೇಳಿಕೊಟ್ಟರು. ಅಂತೆಯೇ > ರಾಜನು ತನ್ನ ಇಬ್ಬರು ಪುತ್ರರಿಗೂ ಎರಡು ದೊಡ್ಡ ಚೀಲಗಳಲ್ಲಿ ಧಾನ್ಯದ ಹೊಟ್ಟು ತುಂಬಿಸಿ > ಉಡುಗೊರೆಯಾಗಿ ಕೊಟ್ಟು ಹೋದನು. > > ಗುರುವು ರಾಜಕುಮಾರರ ಕೊಠಡಿಗಳ ಬಳಿ ಹೋಗಿ ಅವರ ಪ್ರತಿಕ್ರಿಯೆಗಳನ್ನು ಗಮನಿಸಿದರು. ಮೊದಲನೇ > ರಾಜಕುಮಾರ ಸಿಟ್ಟಿನಿಂದ ಹೇಳುತ್ತಿದ್ದ- 'ನಮ್ಮ ತಂದೆಯವರು ನನಗೆ ಧಾನ್ಯದ ಹೊಟ್ಟು ತುಂಬಿದ > ಚೀಲ ನೀಡಿ ಅಪಮಾನ ಮಾಡಿದ್ದಾರೆ. ಇದಕ್ಕೆ ಬೆಂಕಿ ಹಚ್ಚಿ ಬಿಡಬೇಕೆನಿಸುತ್ತದೆ. ಎರಡನೇ > ರಾಜಕುಮಾರನ ಕೊಠಡಿ ಬಳಿ ಹೋದರೆ, ಆತ ಸಂತಸದಿಂದ ಕುಣಿಯುತ್ತಿದ್ದ- 'ಇಂದು ನಮ್ಮ ಅಪ್ಪಾಜಿ > ಧಾನ್ಯದ ಹೊಟ್ಟು ಕಳಿಸಿದ್ದಾರೆ. ನಾಳೆ ಹಸುಗಳನ್ನು ಕಳಿಸುತ್ತಾರೆ. ನಾವೆಲ್ಲ ಹಸು > ಸಾಕಣೆಯಿಂದ ದಷ್ಟ-ಪುಷ್ಟರಾಗಿ ಆರೋಗ್ಯವಂತರಾಗಬಹುದು. 'ಈ ಮಾತನ್ನು ಕೇಳಿದ ಗುರುವು > ಸಕಾರಾತ್ಮಕ ಚಿಂತನೆಯುಳ್ಳ ಎರಡನೇ ರಾಜಕುಮಾರನೇ ಸಿಂಹಾಸನಕ್ಕೆ ಸೂಕ್ತ ಉತ್ತರಾಧಿಕಾರಿಯೆಂದು > ರಾಜನಿಗೆ ವರದಿ ಮಾಡಿದರು. ರಾಜನಿಗೂ ಸೂಕ್ತ ಆಯ್ಕೆಯಿಂದ ಸಂತೋಷವಾಯಿತು. > > ಇಲ್ಲಿ ಇಡೀ ಮಾನವ ಸಮಾಜಕ್ಕೆ ಮಾರ್ಗದರ್ಶನ ನೀಡುವಂಥ ಒಂದು ಸಂದೇಶವಿದೆ. ಯಾವುದು ಒಂದು > ಸಂದರ್ಭದಲ್ಲಿ ನಿರಾಶಾದಾಯಕವಾದ ನಕಾರಾತ್ಮಿಕ- ಚಿಂತನೆಗಳಿಂದ ಪ್ರಯೋಜನವಿಲ್ಲ. ಸಮಸ್ಯೆಗಳು > ಬಂದಾಗ ಓಡಿ ಹೋಗುವ ಬದಲು, ಆಶಾವಾದಿಗಳಾಗಿ ಸಕಾರಾತ್ಮಕ ಚಿಂತನೆಗಳ ಮಾರ್ಗವನ್ನು > ಅವಲಂಬಿಸುವುದರಿಂದ ಸಮಸ್ಯೆಗಳ ನಿವಾರಣೆ ಸಾಧ್ಯ. > > ಬನ್ನಿ ಗೆಳೆಯರೆ, ಆಶಾವಾದದ ಸಕಾರಾತ್ಮಕ ಚಿಂತನೆಗಳಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸೋಣ. > > -ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAKoy2JxWf%2BKLmEu77CpBcyhu4R2iGVTOktO-G4aMwx4D%2B%3DevTA%40mail.gmail.com > <https://groups.google.com/d/msgid/socialsciencestf/CAKoy2JxWf%2BKLmEu77CpBcyhu4R2iGVTOktO-G4aMwx4D%2B%3DevTA%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CALSqjPLkxXWhSKMS%2B6Z45sC2v2fa0rARzcHtKUix1L%3DSuvuzCw%40mail.gmail.com. For more options, visit https://groups.google.com/d/optout.
