Sir please add this no. To Akks HIKE group   9481023736
On 20 Mar 2016 10:24 am, "Mahabaleshwar Bhagwat" <[email protected]>
wrote:

> 💫 ಆಶಾವಾದದ ಸಕಾರಾತ್ಮಕ ಚಿಂತನೆ ಅಗತ್ಯ💫
>
> ಶಿಕ್ಷಣವೆಂದರೆ ಮಾನವನ ಬದುಕನ್ನು ರೂಪಿಸುವ ಕಲೆ. ಮಕ್ಕಳು ಬೆಳಗ್ಗೆ ಮನೆಯಿಂದ ಶಾಲೆಗೆ
> ಹೋದರೆ, ಸಂಜೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಾರೆ. ಬೆಳಗ್ಗೆ 10.00ರಿಂದ ಸಂಜೆ
> 5.00ರವರೆಗೆ ಶಾಲೆಯಲ್ಲಿದ್ದು ಸುಮಾರು ಏಳು ಗಂಟೆಗಳಷ್ಟು ಕಾಲ ಮಕ್ಕಳ ಮೇಲೆ ಶಾಲೆ ಮತ್ತು
> ಶಿಕ್ಷಕರ ಪ್ರಭಾವ ಬೀಳುತ್ತದೆ. ಆದರೆ ಉಳಿದ 17 ಗಂಟೆಗಳ ಕಾಲ ಮಕ್ಕಳ ಮೇಲೆ ಮನೆಯವರು ಮತ್ತು
> ಸಮಾಜ ಪ್ರಭಾವ ಬೀರುತ್ತದೆ.
>
> ಸನಿವಾಸ ಪದ್ಧತಿಯ ಶಿಕ್ಷಣ-ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ಕಡೆಗೆ
> ಶಿಕ್ಷಕರು ವಿಶೇಷ ಗಮನ ಕೊಡಲು ಸಾಧ್ಯವಾಗುತ್ತದೆ. ಪ್ರಾಚೀನ ಕಾಲದಲ್ಲಿ ಇದ್ದ ಗುರುಕುಲಗಳು
> ಇಂದಿನ ಸನಿವಾಸ-ಮಾದರಿಯವುಗಳೆನ್ನಬಹುದು. ಇವುಗಳಲ್ಲಿ ರಾಜ-ಮಹಾರಾಜರ ಮಕ್ಕಳೂ, ಜನಸಾಮಾನ್ಯರ
> ಮಕ್ಕಳೂ ಅಧ್ಯಯನ ಮಾಡುತ್ತಿದ್ದರು. ಅಂಥ ಗುರುಕುಲವೊಂದರಲ್ಲಿ ರಾಜಕುಮಾರರ ವ್ಯಕ್ತಿತ್ವವನ್ನು
> ಗುರುತಿಸಿ ಪರೀಕ್ಷಿಸುವ ಒಂದು ಸ್ವಾರಸ್ಯಕರ ಪ್ರಸಂಗ ಹೀಗಿದೆ:
>
> ಮಗಧ ರಾಜ್ಯದ ರಾಜನಾದ ಶೂರಸೇನನ ಅವಳಿ ರಾಜಕುಮಾರರು ಗುರುಕುಲದಲ್ಲಿ ಅಧ್ಯಯನ
> ಮಾಡುತ್ತಿದ್ದರು. 'ಇವರಿಬ್ಬರ ಪೈಕಿ ಮುಂದಕ್ಕೆ ಸಿಂಹಾಸನಕ್ಕೆ ಉತ್ತರಾಧಿಕಾರಿಯಾಗಲು ಸೂಕ್ತ
> ವ್ಯಕ್ತಿ ಯಾರು ?' ಎಂದು ರಾಜನು ಗುರುವಿನೊಡನೆ ಏಕಾಂತದಲ್ಲಿ ಪ್ರಶ್ನಿಸಿದ. ಗುರು ಈ
> ಪ್ರಶ್ನೆಗೆ ಉತ್ತರಿಸಲು ಅಸಮರ್ಥರಾದರು. ಏಕೆಂದರೆ ಶಿಕ್ಷಣದಲ್ಲಿ, ಪ್ರಾಯದಲ್ಲಿ,
> ಗುಣನಡತೆಯಲ್ಲಿ ಇಬ್ಬರೂ ಸಮಾನರಾಗಿದ್ದರು. ಇವರಿಬ್ಬರ ಪೈಕಿ ಯಾರು ಹೆಚ್ಚಿನ
> ಅರ್ಹತೆಯುಳ್ಳವನು ? ಎಂಬುದನ್ನು ಪರೀಕ್ಷಿಸಲು ಗುರು ಒಂದು ಉಪಾಯ ಹೇಳಿಕೊಟ್ಟರು. ಅಂತೆಯೇ
> ರಾಜನು ತನ್ನ ಇಬ್ಬರು ಪುತ್ರರಿಗೂ ಎರಡು ದೊಡ್ಡ ಚೀಲಗಳಲ್ಲಿ ಧಾನ್ಯದ ಹೊಟ್ಟು ತುಂಬಿಸಿ
> ಉಡುಗೊರೆಯಾಗಿ ಕೊಟ್ಟು ಹೋದನು.
>
> ಗುರುವು ರಾಜಕುಮಾರರ ಕೊಠಡಿಗಳ ಬಳಿ ಹೋಗಿ ಅವರ ಪ್ರತಿಕ್ರಿಯೆಗಳನ್ನು ಗಮನಿಸಿದರು. ಮೊದಲನೇ
> ರಾಜಕುಮಾರ ಸಿಟ್ಟಿನಿಂದ ಹೇಳುತ್ತಿದ್ದ- 'ನಮ್ಮ ತಂದೆಯವರು ನನಗೆ ಧಾನ್ಯದ ಹೊಟ್ಟು ತುಂಬಿದ
> ಚೀಲ ನೀಡಿ ಅಪಮಾನ ಮಾಡಿದ್ದಾರೆ. ಇದಕ್ಕೆ ಬೆಂಕಿ ಹಚ್ಚಿ ಬಿಡಬೇಕೆನಿಸುತ್ತದೆ. ಎರಡನೇ
> ರಾಜಕುಮಾರನ ಕೊಠಡಿ ಬಳಿ ಹೋದರೆ, ಆತ ಸಂತಸದಿಂದ ಕುಣಿಯುತ್ತಿದ್ದ- 'ಇಂದು ನಮ್ಮ ಅಪ್ಪಾಜಿ
> ಧಾನ್ಯದ ಹೊಟ್ಟು ಕಳಿಸಿದ್ದಾರೆ. ನಾಳೆ ಹಸುಗಳನ್ನು ಕಳಿಸುತ್ತಾರೆ. ನಾವೆಲ್ಲ ಹಸು
> ಸಾಕಣೆಯಿಂದ ದಷ್ಟ-ಪುಷ್ಟರಾಗಿ ಆರೋಗ್ಯವಂತರಾಗಬಹುದು. 'ಈ ಮಾತನ್ನು ಕೇಳಿದ ಗುರುವು
> ಸಕಾರಾತ್ಮಕ ಚಿಂತನೆಯುಳ್ಳ ಎರಡನೇ ರಾಜಕುಮಾರನೇ ಸಿಂಹಾಸನಕ್ಕೆ ಸೂಕ್ತ ಉತ್ತರಾಧಿಕಾರಿಯೆಂದು
> ರಾಜನಿಗೆ ವರದಿ ಮಾಡಿದರು. ರಾಜನಿಗೂ ಸೂಕ್ತ ಆಯ್ಕೆಯಿಂದ ಸಂತೋಷವಾಯಿತು.
>
> ಇಲ್ಲಿ ಇಡೀ ಮಾನವ ಸಮಾಜಕ್ಕೆ ಮಾರ್ಗದರ್ಶನ ನೀಡುವಂಥ ಒಂದು ಸಂದೇಶವಿದೆ. ಯಾವುದು ಒಂದು
> ಸಂದರ್ಭದಲ್ಲಿ ನಿರಾಶಾದಾಯಕವಾದ ನಕಾರಾತ್ಮಿಕ- ಚಿಂತನೆಗಳಿಂದ ಪ್ರಯೋಜನವಿಲ್ಲ. ಸಮಸ್ಯೆಗಳು
> ಬಂದಾಗ ಓಡಿ ಹೋಗುವ ಬದಲು, ಆಶಾವಾದಿಗಳಾಗಿ ಸಕಾರಾತ್ಮಕ ಚಿಂತನೆಗಳ ಮಾರ್ಗವನ್ನು
> ಅವಲಂಬಿಸುವುದರಿಂದ ಸಮಸ್ಯೆಗಳ ನಿವಾರಣೆ ಸಾಧ್ಯ.
>
> ಬನ್ನಿ ಗೆಳೆಯರೆ, ಆಶಾವಾದದ ಸಕಾರಾತ್ಮಕ ಚಿಂತನೆಗಳಿಂದ ಜೀವನದಲ್ಲಿ ಯಶಸ್ಸನ್ನು ಸಾಧಿಸೋಣ.
>
> -ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAKoy2JxWf%2BKLmEu77CpBcyhu4R2iGVTOktO-G4aMwx4D%2B%3DevTA%40mail.gmail.com
> <https://groups.google.com/d/msgid/socialsciencestf/CAKoy2JxWf%2BKLmEu77CpBcyhu4R2iGVTOktO-G4aMwx4D%2B%3DevTA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAPLG6vN1AxajyOsKZZBbRY8aamcu0xTPQawT2jc79MAWcKiq4w%40mail.gmail.com.
For more options, visit https://groups.google.com/d/optout.

Reply via email to