ಮೀಸಲಾತಿ ಬಡತನ ನರ್ಮೂಲನಾ ಯೋಜನೆಯಲ್ಲಾ ಇದು ಪ್ರಾತಿನಿದ್ಯ ನೀಡುವ ಮಾರ್ಗ ಮೀಸಲಾತಿ ವಿರೋಧಿಸುವುದು ಮೆರಿಟ್ ಗಳಿಸಲಾಗದವರ ಮಾತೆ ಹೊರತು ಅದು ಪ್ರಭುಧ್ದತೆಯಿಂದ ಬರುವ ಮಾತಲ್ಲಾ ಎಂಬುದು ನನ್ನ ಅಭಿಪ್ರಾಯ ನಿಜವಾಗಿ ಮೀಸಲಾತಿ ಏಕೆ ಏನು ಎಂಬುದರ ಬಗ್ಗೆ ಎಸ್ ಎಂ ಎಸ್ ಗಳಲ್ಲಿ ತಿಳಿಯಲು ಪ್ರಯತ್ನಿಸದಿರಿ ಅದರ ಬಗ್ಗೆ ಆಳ ಅದ್ಯಯನ ಮಾಡಿ ಯಾಕೆಂದರೆ ನಾವು ಶಿಕ್ಷಕರು ನಮ್ಮ ಅಭಿಪ್ರಾಯ ಮಕ್ಚಳ ಅಭಿಪ್ರಾಯವಾಗಿ ಮಾರ್ಪಾಡಾಗುತ್ತದೆ ಮೀಸಲಾತಿ ವಿರೋದಿಸು ವವರು ಎಂದಾದರು ಆ ಪ್ರಮಾಣದಲ್ಲಿ ಜಾತಿ ವ್ಯವಸ್ಥೆ ಅದರ ಸಮಸ್ಯೆ ಯನ್ನ ವಿರೋಧಿಸುತ್ತಾರೆ ಯೆ ?
Sent from my Samsung Galaxy smartphone. -------- Original message -------- From: "Basavaraja Naika H.D." <[email protected]> Date:02/07/2016 9:13 PM (GMT+05:30) To: [email protected] Cc: Subject: Re: [ss-stf '29475'] ಮೀಸಲಾತಿ. ಜಿಹಾದಿ ಭಯೊತ್ಪಾದಕರ ಯೋಚನೆ ನಿಮ್ಮ ಹಾಗೆಯೇ ಇರುತ್ತದೆ On 02-Jul-2016 8:45 pm, "prajwal nayak" <[email protected]> wrote:ಸ್ಪರ್ಧಯಲ್ಲಿ ಕ್ಷೇತ್ರ ಇರಬಾರದು ಎಲ್ಲರಿಗೂ ಸಮಾನ ಅವಕಾಶ ಇರಬೇಕು On 2 Jul 2016 20:41, "prajwal nayak" <[email protected]> wrote:ಸಾಮರ್ಥ್ಯ ಇದ್ದವರು ಹೋರಾಡಿ ಪಡೆಯುತ್ತಾರೆ ಇಲ್ಲದವರು ಪರ್ಯಾಯ ಮಾರ್ಗ ಹುಡುಕುತ್ತಾರೆ ಅಷ್ಟೇ On 2 Jul 2016 20:33, "Basavaraja Naika H.D." <[email protected]> wrote:ನೀವು ಉದ್ಯೋಗದಲ್ಲಿ, ಇನ್ನೊಬ್ಬರು, ರಾಜಕೀಯದಲ್ಲಿ, ಮತ್ತೊಬ್ಬರು, ಶುಲ್ಕ, ವಿದ್ಯಾರ್ಥಿವೇತನ, ಹೀಗೆ ಅವರವರಿಗೆ ಅನುಕೂಲವಾಗುವ ಕ್ಷೇತ್ರದಲ್ಲಿ ಬೇಡ ಎಂದು ಹೇಳುತ್ತಾರೆ ಮೀಸಲಾತಿ ಪ್ರತಿಯೊಬ್ಬರಿಗೂ ಅವರವರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ ಇದರಿಂದ ಯಾರಗೂ ತೊಂದರೆ ಇಲ್ಲ ಅರ್ಥ ವಾಗಿಲ್ಲ? ಅಷ್ಟೇ On 02-Jul-2016 7:24 pm, "prajwal nayak" <[email protected]> wrote:ನಾವು ಹೇಳೋದು ಉದ್ಯೋಗದಲ್ಲಿ ಮೀಸಲಾತಿ ಬೇಡ ಅಂತಾ ಅಷ್ಟೇ ಸರ್ On 2 Jul 2016 18:41, "Druva H" <[email protected]> wrote:👍 On 2 Jul 2016 06:16, "Siddaramappa s m Sri" <[email protected]> wrote: > > ಮೀಸಲಾತಿ: ಅಸಹನೆ,ಆತ್ಮವಂಚನೆ > 30 Jun, 2016ಎಚ್.ಕೆ.ಶರತ್ > > ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬೋಧಿಸುವ ಅಧ್ಯಾಪಕರಿಗೆಂದೇ ಇತ್ತೀಚೆಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ, ಪ್ರತಿಯೊಬ್ಬರೂ ಯಾವುದಾದರೂ ಸಾಮಾಜಿಕ ವಿಷಯದ ಕುರಿತು ಐದು ನಿಮಿಷ ಮಾತನಾಡಬೇಕೆಂದು ಸೂಚಿಸಲಾಯಿತು. ಬಡತನ, ಖಾಸಗೀಕರಣ, ನಿರುದ್ಯೋಗ ಹೀಗೆ ತಮಗೆ ಸೂಕ್ತವೆನಿಸಿದ ವಿಷಯ ಆಯ್ದುಕೊಂಡು ಎಲ್ಲರೂ ಮಾತನಾಡಿದರು. > > ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿದ ಅಧ್ಯಾಪಕರೊಬ್ಬರು, ‘ನಿರುದ್ಯೋಗ ಸಮಸ್ಯೆಗೆ ಮೀಸಲಾತಿಯೇ ಮುಖ್ಯ ಕಾರಣ. ಮೀಸಲಾತಿಯಿಂದಾಗಿ ಅರ್ಹರಿಗೆ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗದಲ್ಲಿ ಮೀಸಲಾತಿ ಕಿತ್ತೊಗೆಯಬೇಕು’ ಎಂದು ಗುಡುಗಿದರು. ಅವರ ಮಾತಿಗೆ ಅಲ್ಲಿ ನೆರೆದಿದ್ದ ಬಹುತೇಕ ಅಧ್ಯಾಪಕರು ತಲೆದೂಗುವ ಮೂಲಕ ತಮ್ಮ ಸಹಮತ ವ್ಯಕ್ತಪಡಿಸಿದರು. ಅಧ್ಯಾಪಕರು ವಿಚಾರ ಮಂಡಿಸುವ ಶೈಲಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದ ಸಂಪನ್ಮೂಲ ವ್ಯಕ್ತಿ, ‘ಮೀಸಲಾತಿಯಂತಹ ಸೂಕ್ಷ್ಮ ವಿಚಾರಗಳ ಕುರಿತು ಸಾರ್ವಜನಿಕವಾಗಿ ಮಾತನಾಡುವಾಗ ತುಂಬಾ ಎಚ್ಚರದಿಂದಿರಬೇಕು. ಇಲ್ಲೇನೊ ನಾವು ನಾವೇ ಇದ್ದೀವಿ ಪರವಾಗಿಲ್ಲ. ಆದ್ರೆ ಬೇರೆ ಕಡೆ ಈ ರೀತಿ ಮಾತಾಡಿದ್ರೆ ನೀವು ಸಮಸ್ಯೆಗೆ ಸಿಲುಕಿಕೊಳ್ತೀರಿ’ ಎಂದು ಹೇಳಿ, ಎಚ್ಚರಿಕೆ ರೂಪದ ಸಲಹೆ ನೀಡಿದರು. ಕೊನೆಗೆ ‘enough is enough ಅಲ್ವಾ... ಇದುವರೆಗೂ ಕೊಟ್ಟಾಗಿದೆ. ಇನ್ನು ಮುಂದೆನೂ ಕೊಡ್ಬೇಕಾ?’ ಎಂದು ಸೇರಿಸಿದರು. > > ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರದಂತಹ ವಿದ್ಯಮಾನಗಳಿಂದ ಹಿಡಿದು ನಿರುದ್ಯೋಗ, ಬಡತನಕ್ಕೂ ಮೀಸಲಾತಿಯೇ ಕಾರಣವೆಂದು ದೂಷಿಸುತ್ತ, ಇಂದಿಗೂ ನಾನಾ ನಮೂನೆಯಲ್ಲಿ ಜೀವಂತವಾಗಿರುವ ಜಾತಿ ಆಧಾರಿತ ಸಾಮಾಜಿಕ ತಾರತಮ್ಯದ ಪರ ಹಲವರು ವಕಾಲತ್ತು ವಹಿಸುವುದನ್ನು ಕಾಣಬಹುದು. > > ಮೀಸಲಾತಿಯ ಉದ್ದೇಶ ಬಡತನ ನಿರ್ಮೂಲನೆ ಎಂದೇ ಭಾವಿಸಿರುವ ಕೆಲವರು ಸಾಮಾನ್ಯ ವರ್ಗದಡಿ ಬರುವ ಜಾತಿಗಳಲ್ಲೂ ಬಡವರಿಲ್ಲವೇ ಎಂದು ಆಗಾಗ ಪ್ರಶ್ನಿಸುತ್ತಿರುತ್ತಾರೆ. ಹಿಂದೆ ನಮ್ಮ ಹಿರಿಯರು ಮಾಡಿದ ತಪ್ಪಿಗೆ ನಾವಿನ್ನೂ ಎಷ್ಟು ಕಾಲ ಶಿಕ್ಷೆ ಅನುಭವಿಸಬೇಕು ಎನ್ನುವ ಧಾಟಿಯಲ್ಲಿ ಅಳಲು ತೋಡಿಕೊಳ್ಳುವವರ ಸಂಖ್ಯೆ ಸಹ ಕಡಿಮೆ ಏನಿಲ್ಲ. ಮೀಸಲಾತಿ ಇರುವವರೆಗೂ ಜಾತಿ ವಿನಾಶವಾಗುವುದಿಲ್ಲ, ಕೆಳ ಜಾತಿಯವರ ಬಗೆಗಿನ ತಮ್ಮ ಅಸಹನೆಗೆ ಮೀಸಲಾತಿಯೇ ಪ್ರಮುಖ ಕಾರಣಎಂಬ ವಾದವನ್ನು ಕೆಲವರು ಮಂಡಿಸುತ್ತಿರುತ್ತಾರೆ. > > ಕಣ್ಣೆದುರಿನ ವಾಸ್ತವಗಳಿಗೆ ಬೆನ್ನು ತೋರಿದವರಷ್ಟೇ ಹೀಗೆಲ್ಲ ಮಾತನಾಡಲು ಸಾಧ್ಯವೇನೊ? ಬಾಳ ಸಂಗಾತಿ ಆರಿಸಿಕೊಳ್ಳಲು, ಬಾಡಿಗೆಗೆ ಮನೆ ನೀಡಲು ಯಾವುದೇ ಮೀಸಲಾತಿಯ ಒತ್ತಡವಿಲ್ಲದಿದ್ದರೂ ಏಕೆ ಬಹುತೇಕ ಮಂದಿ ತಮ್ಮ ಜಾತಿಯವರಿಗಷ್ಟೇ ಆದ್ಯತೆ ನೀಡುತ್ತಾರೆಂಬ ಸರಳ ಪ್ರಶ್ನೆ ಎದುರಿಟ್ಟುಕೊಂಡು ಪರಿಶೀಲಿಸಿದರೂ ಸಾಕು, ಜಾತಿಯ ವಿಷ ವರ್ತುಲ ಎಷ್ಟು ಪ್ರಬಲವಾಗಿದೆ ಎಂಬುದು ಮನದಟ್ಟಾಗುತ್ತದೆ. > ಪದವಿಗೆ ಪ್ರವೇಶ ಪಡೆಯುವ ಕಾಲಘಟ್ಟದಲ್ಲಿ ಮೀಸಲಾತಿಯಿಂದ ತಾವು ಅವಕಾಶ ವಂಚಿತರಾಗುತ್ತಿದ್ದೇವೆ ಎನ್ನುವ ಅನಿಸಿಕೆ ಮೇಲ್ವರ್ಗದ ವಿದ್ಯಾರ್ಥಿಗಳಲ್ಲಿ ಅನಾಯಾಸವಾಗಿ ಬೇರೂರಲಾರಂಭಿಸಿರುವುದನ್ನು ನಾವೆಲ್ಲ ಗಮನಿಸಬಹುದು. ಉದಾಹರಣೆಗೆ, ಸಿಇಟಿ ಮೂಲಕ ಎಂಜಿನಿಯರಿಂಗ್, ಮೆಡಿಕಲ್ ಸೀಟುಗಳನ್ನು ಹಂಚುವ ಪ್ರಕ್ರಿಯೆಯನ್ನು ಪರಿಗಣಿಸಬಹುದು. ‘ನಲ್ವತ್ತು ಐವತ್ತು ಸಾವಿರ ರ್‍ಯಾಂಕ್ ಗಳಿಸಿದ್ರೂ ಅವ್ರಿಗೆ ಒಳ್ಳೆ ಕಾಲೇಜ್‌ನಲ್ಲಿ ಸೀಟು ಸಿಗುತ್ತೆ. ನಮ್ಮ ರ್‍ಯಾಂಕ್ ಹತ್ತು ಸಾವಿರದೊಳಗಿದ್ರೂ ಬೇಕಾದ ಕಡೆ ಸೀಟು ದಕ್ಕುವುದಿಲ್ಲ. ನಮ್ಮ ಪ್ರತಿಭೆಗೆ ಬೆಲೆ ಇಲ್ವಾ?’ ಎಂದು ವಿದ್ಯಾರ್ಥಿಗಳು ಪ್ರಶ್ನಿಸುವುದನ್ನು ಗಮನಿಸಿದ್ದೇನೆ. ಉತ್ತಮ ರ್‍ಯಾಂಕ್ ಗಳಿಸಿಯೂ ಬಯಸಿದ ಸೀಟು ಸಿಗದಿರುವುದಕ್ಕೆ ಮೀಸಲಾತಿಯೇ ಕಾರಣವೆಂದು ದೂಷಿಸುವವರು, ಹಣವುಳ್ಳವರಿಗೆಂದೇ ಮೀಸಲಾಗುವ ಮ್ಯಾನೇಜ್‌ಮೆಂಟ್ ಕೋಟಾದೆಡೆಗೆ ಅದೇಕೊ ಅಸಹನೆ ತೋರುವುದಿಲ್ಲ. ತೋರಿದರೂ ಅದರ ತೀವ್ರತೆ ಮೀಸಲಾತಿಯೆಡೆಗಿನ ಅಸಹನೆಯಷ್ಟು ತೀವ್ರವಾಗಿರುವುದಿಲ್ಲ. > > ಪ್ರತಿ ಬಾರಿ ಪಿಯುಸಿ ಮತ್ತು ಸಿಇಟಿ ಫಲಿತಾಂಶ ಹೊರಬಿದ್ದ ನಂತರ ನಡೆಯುವ ಸರ್ಕಾರ ಮತ್ತು ಖಾಸಗಿ ಕಾಲೇಜುಗಳ ಒಕ್ಕೂಟದ ನಡುವಿನ ಮಾತುಕತೆ ಅಂತಿಮವಾಗಿ ಶುಲ್ಕ ಹೆಚ್ಚಳ, ಸರ್ಕಾರಿ ಕೋಟಾದಡಿಯ ಸೀಟುಗಳ ಕಡಿತದೊಂದಿಗೆ ಮುಗಿಯ�� -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/o26p30mnv4kb2pyqu9b7ngq9.1467557180120%40email.android.com. For more options, visit https://groups.google.com/d/optout.
