👉ಇದು ಹಿರಿಯ ದಂಪತಿಗಳ ಸಲ್ಲಾಪ,,

ಕನ್ನಡಕವನ್ನು ಒರೆಸುತ್ತಾ ಆ ಹಿರಿಯ ಜೀವ ತನ್ನ ಪತ್ನಿಗೆ ಹೇಳಿದ ಮಾತಿದು "ನಮ್ಮ ಕಾಲದಲ್ಲಿ
ಮೊಬೈಲ್ ಇರಲಿಲ್ಲ".
ಪತ್ನಿ "ಆದರೇ ಸರಿಯಾಗಿ 5 ಗಂಟೆ 55 ನಿಮಿಷಕ್ಕೆ ,ನಾನು ನೀರಿನ ಲೋಟ ಹಿಡಿದುಕೊಂಡು
ಬಾಗಿಲಿಗೆ ಬಂದು ನಿಲ್ಲುತ್ತಿದ್ದೆ.ಅದೇ ಸಮಯಕ್ಕೆ ಕೆಲಸ ಮುಗಿಸಿಕೊಂಡು ನೀವು,
ಬಾಗಿಲಲ್ಲಿ ಬಂದು ನಿಲ್ಲುತ್ತಿದ್ದಿರಿ".

ಪತಿ>>"ಹಾಂ!  ನಾನು ಮಾಡಿದ್ದು 30 ವರ್ಷಗಳ ನೌಕರಿಯಲ್ಲಿ ನನಗೆ ತಿಳಿಯದ ವಿಷಯ
ಅದೊಂದೇ,,,,ನೀನು ನೀರು ತರುತ್ತೀಯಾ ಎಂದು ನಾನು ಸಮಯಕ್ಕೆ ಸರಿಯಾಗಿ ಬರುತ್ತಿದ್ದೇನೊ
?ನಾನು ಬರುತ್ತೇನೆಂದು ನೀರು ತರುತ್ತಿದ್ದೆಯೋ ತಿಳಿಯದಾಯಿತು".

ಪತ್ನಿ>> "ನಿಮಗೆ ನೆನಪಿದೆಯಾ ? ನೀವು ರಿಟೈರ್ ಆಗುವ ಮುಂಚೆ,ನಿಮಗೆ ಡಯಾಬಿಟೀಸ್
ಇರಲಿಲ್ಲ.ಆಗ ನಾನು ಪಾಯಸ ಮಾಡಿದಾಗ ನೀವು ಹೇಳುತ್ತಿದ್ದಿರಿ,,,,ಇಂದು ಮಧ್ಯಾಹ್ನ ಅನಿಸಿತ್ತು
ಕಣೆ,, ಪಾಯಸ ತಿನ್ನಬೇಕಂತ"

ಪತಿ>>"ನಿಜಾ ಕಣೇ,,office ನಿಂದ ಹೊರಡುವಾಗ,,ನನ್ನ ಮನದ ಬಯಕೆ ಏನಿರುತ್ತಿತ್ತೋ ,,ಅದೇ
ಅಡುಗೆ ನೀನು ಮಾಡಿಟ್ಟಿರುತ್ತಿದ್ದೆ."

ಪತ್ನಿ>>"ನಿಮಗೆ ನೆನಪಿದೆಯಾ ? ನನ್ನ ಮೊದಲ ಡಿಲೆವರಿಗೆ ನಾನು ತವರಿಗೆ ಹೋಗಿದ್ದೆ.ನನಗೆ
ನೋವು ಶುರುವಾದಾಗ,ನನಗನಿಸುತ್ತಿತ್ತು ,ಅವರು ಈಗ ನನ್ನ ಜೊತೆ ಇದ್ದಿದ್ದರೇ ಎಷ್ಟೋ
ಸಮಾಧಾನವೆನಿಸುತ್ತಿತ್ತು .ಅಂತಾ ನಾನು ಅಂದುಕೊಂಡ ಒಂದು ಗಂಟೆಯಲ್ಲಿ ನೀವು ನಿಜವಾಗಿ
ಬಂದು,ನನ್ನ ತಲೆ ಸವರುತ್ತಿದ್ದಿರಿ".

ಪತಿ>> "ಅವತ್ತು ಯಾಕೋ ನಿನ್ನ ನೋಡಬೇಕು ಅಂತಾ ತುಂಬಾ ಅನಿಸಿತ್ತು ನನಗೆ."

ಪತ್ನಿ>>"ಒಮ್ಮೊಮ್ಮೆ ನೀವು ಕಣ್ಣಲ್ಲಿ ಕಣ್ಣಿಟ್ಟು ಕವಿತೆ ಹೇಳುತ್ತಿದ್ದಿರಿ,, ನೆನಪಿದೆಯಾ
?"

ಪತಿ>> "ಆಗ ನಾಚಿಕೆಯಿಂದ ನಿನ್ನ ಕಣ್ಣ ರೆಪ್ಪೆ ಮುಚ್ಚಿಕೊಳ್ಳುತ್ತಿತ್ತು.ಅದು ನೀನು
ಕವಿತೆಗೆ ಕೊಟ್ಟ like ಎಂದುಕೊಳ್ಳುತ್ತಿದ್ದೆ."

ಪತ್ನಿ>> "ನನಗೆ ನೆನಪಿದೆ ,,ಒಂದುಸಂಜೆ ಚಹಾ ಮಾಡುವಾಗ
ನಾನು ಕೈ ಸುಟ್ಟು ಕೊಂಡಿದ್ದೆ.ಅದೇ ಸಂಜೆ ನೀವು ಬರ್ನಾಲ್ ತಂದು ,,ಇದನ್ನು ಕಪಾಟಿನಲ್ಲಿಡು
ಅಂದಿದ್ದಿರಿ."

ಪತಿ>> "ನಾನು ನೋಡಿದ್ದೇ ಕಣೇ ಟ್ಯೂಬ್ ಖಾಲಿಯಾಗಿತ್ತು.
ಬೇಕಾಗುತ್ತೆ ಅಂತಾ ತಂದಿದ್ದೆ."

ಪತ್ನಿ>> "ಕೆಲವೊಮ್ಮೆ ನೀವು ಸಂಜೆ office hours ಮುಗಿದ ಮೇಲೆ ಮಾಮೂಲೀ ಜಾಗಕ್ಕೆ
ಬಾ,,ಇಬ್ಬರೂ cinema ನೋಡಿ , ಹೊರಗೆ ಊಟ ಮಾಡಿ ಬರೋಣ ಅಂತಾ."

ಪತಿ>> "ಹಾಗೇ ನಿನ್ನ ಕರೆದಾಗೆಲ್ಲಾ ನೀನು,,ನಾನು ಅಂದುಕೊಂಡ ಸೀರೆಯನ್ನೆ ತೊಟ್ಟು
ಬರುತ್ತಿದ್ದೆ".

ಆಗ ಪತ್ನೀ-ಪತಿಯ ಬಳಿ ಬಂದು,ಕೈ ಹಿಡಿದು ಹೇಳಿದಳು
"ನಿಜಾ ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ."

"ಆದರೇ,,,,,,,,,,,,,,,,,,,,,,,
ನಾವಿಬ್ಬರೂ ಇದ್ದೆವು ಜೊತೆಜೊತೆಯಾಗಿಯೇ."

ಪತ್ನಿ>> "ಇವತ್ತು ಮಗ-ಸೊಸೆ ಒಟ್ಟಿಗಿರುತ್ತಾರೆ.ಆದರೇ ಮಾತಿಲ್ಲ WhatsApp ಇದೆ.ನಂಟಿಲ್ಲ
Tag ಇದೆ.
Chemistry ಇಲ್ಲಾ Comment ಇದೆ.
Love ಇಲ್ಲಾ Like ಇದೆ.
ಮಧುರ ಮುನಿಸಿಲ್ಲ,Unfriend ಇದೆ.
ಅವರಿಗೆ ಮಕ್ಕಳು ಬೇಕಾಗಿಲ್ಲ,,ಬದಲಿಗೆ Candy crush saga ,Temple Run,Subway surface
ಬೇಕಾಗಿದೆ."

ಪತಿ>> "ಬಿಡು ಇದೆಲ್ಲಾ ಮಾತುಗಳನ್ನು ,ನಾವೀಗ vibrate mode ನಲ್ಲಿದ್ದೇವೆ.ನಮ್ಮ Battery
ಕೂಡ one line ಮಾತ್ರ ಉಳಿದಿದೆ.
,,,,,,,,,,,,ಎಲ್ಲಿ ಹೊರಟೇ ?"

ಪತ್ನಿ>> "Tea ಮಾಡೊದಕ್ಕೆ."

ಪತಿ>>" ನಾನೀಗ ಅದನ್ನೇ ಹೇಳಬೇಕೆಂದಿದ್ದೆ.ಚಹಾ ಮಾಡು ಅಂತಾ."

ಪತ್ನಿ>> "ಗೊತ್ತು ನನಗೆ,,ನಾನಿನ್ನೂ Coverage ನಲ್ಲೇ ಇದ್ದೀನಿ. Message ಕೂಡ ತಕ್ಷಣ
ತಲುಪುತ್ತೆ."

ಇಬ್ಬರೂ ನಗುತ್ತಾ ಹೇಳುತ್ತಾರೆ.
*****"ನಮ್ಮ ಕಾಲದಲ್ಲಿ ಮೊಬೈಲ್ ಇರಲಿಲ್ಲ"*****

ಕೃಪೆ -ಶೇಷಗಿರಿರಾವ್ ಸರ್ ವಾಯಾ ವಾಟ್ಸ್ ಅಪ್

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to