ಮನು ಸೃತಿಯಲ್ಲಿರುವ ಮಾನವತಾವಾದಕ್ಕೆ ವಿರೋದಾಬಾಸವಾದ ಕೆಲವು ಕೃರ ಸಂಗತಿಗಳು...

ಲೋಕಗಳ ಉದ್ದಾರಕ್ಕಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನ ನ್ನೂ , ಭುಜದಿಂದ
ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರ ನನ್ನೂ ಸೃಷ್ಟಿಸಿದನು (
ಅಧ್ಯಾಯ -1:31)

ಮಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳವರ್ಣಗಳ ( ಬ್ರಾಹ್ಮಣ, ಕ್ಷತ್ರಿಯ,
ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು ಆದೇಶಿಸಿದ್ದಾನೆ (ಅ- 1:91)

ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯಲ್ಲಿ ಆಳುವ ಅಧಿಕಾರ ಪಡೆದುಕೊಂಡು ಹುಟ್ಟಿರುತ್ತಾನೆ.
ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ ಜೀವಿಗಳ ಒಡೆಯನಾಗಿರುತ್ತಾನೆ (ಅ-1:99)

ಈ ಭೂಮಿಯಲ್ಲಿ ಸೇರಿರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿವೆ. ಬ್ರಾಹ್ಮಣ ನು
ಶ್ರೇಷ್ಡವಾದ ಜನ್ಮವನ್ನು ಪಡೆದದ್ದರಿಂದ ಇವೆಲ್ಲವನ್ನೂ ಹೊಂದಲು ಅವನೇ ಅರ್ಹನಾಗಿರುತ್ತಾನೆ
(ಅ-1:100)

ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ ಸೂಚಕವಾದ
ಹಾಗೂ ವೈಶ್ಯನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು (ಅ-2:31)

ಬ್ರಾಹ್ಮಣರಿಗೆ ಇಷ್ಟವಾಗುವ ಎಲ್ಲ ರುಚಿಕರ ಪದಾರ್ಥಗಳನ್ನು ಅವರಿಗೆ ನೀಡಬೇಕು. ಅವರ ಜೊತೆ
ಪರಬ್ರಹ್ಮ ವಿಚಾರವನ್ನು ಚರ್ಚಿಸಬೇಕು. ಇದರಿಂದ ಪಿತೃಗಳಿಗೆ  ಪ್ರೀತಿಯುಂಟಾಗುತ್ತದೆ
(ಅ-3:231)

ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಯ ಗಾಳಿ ತಾಕುವುದರಿಂದ, ನಾಯಿ ನೋಡುವುದರಿಂದ ಹಾಗೂ
ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ ( ಅ- 3:241)

ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ ವೇದವಿರೋಧಿಗಳಾದ ಪಾಷಂಡಿಗಳ
ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು ( ಅ-4:61)

ಶೂದ್ರನಿಗೆ ವಿದ್ಯೆ ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಕೊಡಬಾರದು. ಧರ್ಮೋಪದೇಶ
ಮಾಡಬಾರದು. ವ್ರತಾಚರಣೆ ಹೇಳಿಕೊಡಬಾರದು. (ಅ- 4:80)

ಬ್ರಾಹ್ಮಣರನ್ನು ವಧಿಸಲು ದ್ವಿಜಾತಿಯವರು ದಂಡಗಳನ್ನೆತ್ತಿದರೆ ಬರಿ ಎತ್ತಿದ ಮಾತ್ರಕ್ಕೆ
ನೂರು ವರ್ಷಗಳ ತನಕ ತಾಮಿಸ್ರವೆಂಬ ನರಕದಲ್ಲಿ ಬೀಳುತ್ತಾರೆ (ಅ- 4:165)

ಬೇಕು ಬೇಕೆಂದೇ ಯಾರಾದರೂ ಕೋಪಕೊಂಡು ಬ್ರಾಹ್ಮಣನಿಗೆ ಹೊಡೆದರೂ ಸಾಕು ಅವರು ಇಪ್ಪತ್ತೊಂದು
ಜನ್ಮ ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ (ಅ-4:166)

ಪುರಾಣಕಾಲದಲ್ಲಿ ಮಾಡಿದ ಯಜ್ಞಗಳಲ್ಲಿ ಬ್ರಾಹ್ಮಣ ಹಾಗೂ ಕ್ಷತ್ರಿಯರು ಮಾಡಿದಂತ ಯಾಗಗಳಲ್ಲಿ,
ಶಾಸ್ತ್ರ ಗಳಲ್ಲಿ ತಿನ್ನಬಹುದೆಂದು ಹೇಳಿದ ಮೃಗಪಕ್ಷಿಗಳನ್ನು ಬಲಿ‌ನೀಡಿ ಅವುಗಳ ಮಾಂಸದಿಂದ
ಪುರೋಡಾಶನವನ್ನು ( ಹವಿಸ್ಸನ್ನು) ಮಾಡಿದ್ದರು ( ಅ-5:23)

ಬ್ರಾಹ್ಮಣರಿಗೆ ಅಪೇಕ್ಷೆಯುಂಟಾದಾಗ ಯಜ್ಞವಿಧಿಗಳಲ್ಲಿ ಮಂತ್ರಜಲದಿಂದ ಪ್ರೋಕ್ಷಿತವಾದ
ಮಾಂಸವನ್ನು ಹಾಗೂ ಶಾಸ್ತ್ರವಿಧಿಗಳಲ್ಲಿ ಹೇಳಲಾದ ರೀತಿಯಿಂದ ಶ್ರಾದ್ಧದೂಟದಲ್ಲಿನ ಮಾಂಸವನ್ನು
ತಿನ್ನಬಹುದು. ಹಾಗೆಯೇ ಆಹಾರ ಸಿಗದೆ ಪ್ರಾಣ ಸಂಕಟ ಉಂಟಾದಾಗ ಅನಿವಾರ್ಯವಾಗಿ ಮಾಂಸವನ್ನು
ತಿನ್ನಬಹುದು (ಅ-5:27)

ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮ ಜೀವ ಜಂತುಗಳನ್ನು, ಚರಾಚರ ವಸ್ತುಗಳನ್ನು
ತಿನ್ನಲಿಕ್ಕೆಂದೇ ಪರಮಾತ್ಮ ನು ಸೃಷ್ಟಿಸಿದ್ದಾನೆ (ಅ- 5:28)

ಹೀಗೆ ಯಜ್ಞ, ಶ್ರಾದ್ಧ ಹಾಗೂ ಮಧುಪರ್ಕ ಇತ್ಯಾದಿ ಕಾರ್ಯಗಳಿಗಾಗಿ ಮಾತ್ರ ವೇದಜ್ಞನಾದ
ಬ್ರಾಹ್ಮಣ ನು ಪಶುವನ್ನು ಕೊಂದರೆ ಅವನು ತನ್ನ ಜತೆಗೆ ಆ ಪಶುವಿಗೂ ಉತ್ತಮ ಗತಿಯನ್ನು ಉಂಟು
ಮಾಡುತ್ತಾನೆ (ಅ- 5:42)

ಪತಿಯ‌ನಡತೆಯು ಚೆನ್ನಾಗಿಲ್ಲವಾದರೂ, ಅವನು‌ ಕಾಮಾತುರನಾಗಿ ಅನ್ಯ ಹೆಂಗಸಲ್ಲಿ ಮನಸ್ಸಿಟ್ಟರೂ,
ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಆ ಹೆಂಗಸು ಆ ತನ್ನ ಪತಿಯನ್ನು ದೇವರೆಂದೇ ಭಾವಿಸಿ ಅವನ
ಸೇವೆ ಮಾಡಬೇಕು ( ಅ- 5:154)

ವಿದ್ಯೆ ಕಲಿತು ಗುರುಕುಲದಿಂದ ಹೊರಬರುವ ಬ್ರಾಹ್ಮಣ ವಿದ್ವಾಂಸರನ್ನು ರಾಜನು ಸತ್ಕರಿಸಬೇಕು.
ವಿದ್ಯಾವಂತ‌ ಬ್ರಾಹ್ಮಣರಿಗೆ ನೀಡುವ ನಿಧಿಯು ಅಕ್ಷಯವಾದ ಫಲವನ್ನು ಉಂಟುಮಾಡುತ್ತದೆ (
ಅ-7:82)

ಯಾವ ರಾಜನ ನ್ಯಾಯಸಭೆಯಲ್ಲಿ ಶೂದ್ರನು ಧರ್ಮವಿಚಾರ ವಿಮರ್ಶೆ ಮಾಡುತ್ತಾನೋ, ಆ ರಾಜನ ದೇಶವು
ಕೆಸರಿನಲ್ಲಿ ಬಿದ್ದ ಹಸುವಿನಂತಾಗಿ ಬಿಡುತ್ತದೆ. ಅಂತಹ ರಾಜನು ನೋಡು ನೋಡುತ್ತಿದ್ದಂತೆಯೇ
ಕಷ್ಟ ಪಡುತ್ತಾನೆ (ಅ-8:21)

ಯಾವ ರಾಜ್ಯವು ಹೆಚ್ಚಾಗಿ ಶೂದ್ರರಿಂದ ತುಂಬಿರುತ್ತದೋ, ನಾಸ್ತಿಕರಿಂದ ಆಕ್ರಮಿಸಲ್ಪಡುತ್ತದೋ,
ಬ್ರಾಹ್ಮಣರಹಿತವಾಗಿರುತ್ತದೋ ಆ ರಾಜ್ಯವು ದುರ್ಭಿಕ್ಷ ರೋಗಗಳಿಂದ ಜರ್ಜರಿತವಾಗಿ ಬೇಗನೆ
ನಾಶವಾಗಿ ಬಿಡುತ್ತದೆ (ಅ-8:22)

ಪರಸ್ಪರ ವಿರುದ್ಧ ಸಾಕ್ಷಿಗಳು ಹೇಳಲ್ಪಟ್ಟಾಗ ರಾಜನು ಬಹುಮತದ ಅಭಿಪ್ರಾಯ ಮನ್ನಿಸಬೇಕು. ಸಮಾನ
ಇಬ್ಬರಲ್ಲಿ ಪರಸ್ಪರ ವಿರುದ್ಧ ಸಾಕ್ಷಿ ನುಡಿದರೆ ಗುಣವಂತನ ಸಾಕ್ಷಿ‌ ಮನ್ನಿಸಬೇಕು.
ಗುಣವಂತರಲ್ಲಿ ವಿರೋಧ ಸಾಕ್ಷಿ ಉಂಟಾದಾಗ ರಾಜನು‌ ಬ್ರಾಹ್ಮಣ ಶ್ರೇಷ್ಟನ ಸಾಕ್ಷಿ‌ನಂಬಬೇಕು
(ಅ-8:73)

ಬ್ರಾಹ್ಮಣನನ್ನು ಬೈದರೆ ಕ್ಷತ್ರಿಯನಿಗೆ ನೂರು ಪಣಗಳ ದಂಡ, ವೈಶ್ಯನಿಗೆ ನೂರೈವತ್ತು ಅಥವಾ
ಇನ್ನೂರು ಪಣಗಳ ದಂಡ. ಬ್ರಾಹ್ಮಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ (ಮರಣ ದಂಡನೆ)
ವಿಧಿಸಬೇಕು. (ಅ- 8:627)

ಉಪನಯನ ಸಂಸ್ಕಾರ ಹೊಂದಲು ಅರ್ಹತೆಯಿಲ್ಲದ ಶೂದ್ರನು ದ್ವಿಜಾತಿಯವರಾದ ಬ್ರಾಹ್ಮಣ ಕ್ಷತ್ರಿಯ
ವೈಶ್ಯರನ್ನು ಹೀನವಾದ ಕೆಟ್ಟ ಮಾತುಗಳಿಂದ ಬೈದರೆ ಕೆಳ ಜಾತಿಯಲ್ಲಿ ಹುಟ್ಟಿದ ಆ ಶೂದ್ರನ
ನಾಲಿಗೆಯನ್ನು ಛೇಧಿಸತಕ್ಕದ್ದು. ಏಕೆಂದರೆ ಅವನು‌ಕೆಳ ಜಾತಿಯವನು ( ಅ-8:270)

ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ ಬೈದಂತ ಆ
ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು (ಅ- 8:271)

ಬ್ರಾಹಣರಿಗೆ ಅಹಂಕಾರದಂದ ಧರ್ಮವನ್ನು ಬೋಧಿಸುವ ಶೂದ್ರನಿಗೆ ರಾಜನು ಬಾಯಲ್ಲಿ‌ಹಾಗೂ
ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಿಸಬೇಕು (ಅ-8:272)

ಬ್ರಾಹ್ಮಣ ಮೊದಲಾದ ಶ್ರೇಷ್ಟ ಜಾತಿಯವರನ್ನು ತನ್ನ ಕೈಕಾಲು ಮುಂತಾದ ಯಾವುದಾದರೂ ಅಂಗದಿಂದ
ಅಂತ್ಯಜನು ( ಶೂದ್ರನು) ಹೊಡೆದರೆ ಅವನ ಆ ಅಂಗವನ್ನು ( ಕೈ ಕಾಲು ಇತ್ಯಾದಿಯನ್ನು )
ಕತ್ತರಿಸಬೇಕು. ಇದು ಮನುವು ಹೇಳಿದ ಶಾಸನವು (ಅ-8:279)

ಬ್ರಾಹ್ಮಣನ ಜತೆಗೆ ಒಂದೇ ಆಸನದಲ್ಲಿ ಕುಳಿತ ಅಂತ್ಯಜನಿಗೆ ಅಥವಾ ಶೂದ್ರನಿಗೆ ಸೊಂಟದಲ್ಲಿ ಬರೆ
ಎಳೆದು ಊರಿನಿಂದ ಹೊರಗೆ ಹಾಕಬೇಕು ಅಥವಾ ಅವನ ಕುಂಡೆಯನ್ನು ಕತ್ತರಿಸಬೇಕು ( ಆಗ ಅವನು
ಸಾಯಬಾರದು) (ಅ- 8:281)

ಶೂದ್ರನು ಬೇಕೆಂತಲೇ ಸೊಕ್ಕಿನಿಂದ ಬ್ರಾಹ್ಮಣನ ಮೇಲೆ ಉಗುಳಿದರೆ ಅವನ ತುಟಿ ಕತ್ತರಿಸಬೇಕು.
ಮೂತ್ರ ಚೆಲ್ಲಿ ಅವಮಾಬಿಸಿದರೆ ಅವನ ಶಿಶ್ನ ಕತ್ತರಿಸಬೇಕು. ಬೇಕೆಂತಲೇ ಹೂಸು ಬಿಟ್ಟು
ಅವಮಾನಿಸಿದರೆ ಅವನ ಗುದವನ್ನು ಕತ್ತರಿಸಬೇಕು (ಅ-8:282)

ತನಗಿಂತ ಮೇಲು ಜಾತಿಯವನೊಡನೆ ಸಂಭೋಗ ಬಯಸಿ ಕೂಡಿಕೊಂಡ ಕನ್ಯೆಗೆ ದಂಡ ಹಾಕಬಾರದು. ತನಗಿಂತ
ಕೀಳು ಜಾತಿಯವನೊಡನೆ ಸಂಭೋಗ ಬಯಸಿದ ಕನ್ಯೆಯನ್ನು ಮನೆಯಲ್ಲಿಯೇ ಗೃಹಬಂಧನದಲ್ಲಿರಿಸಬೇಕು
(ಅ-8:365)

ಓರ್ವ ವೈಶ್ಯನು ಓರ್ವ ಬ್ರಾಹ್ಮಣ ಸ್ತ್ರೀಯನ್ನು ಭೋಗಿಸಿದರೆ ಅವರ ಸರ್ವಸ್ವವನ್ನೂ
ಕಸಿದುಕೊಂಡು ಅವನಿಗೆ ಒಂದು ವರ್ಷ ಸೆರೆಮನೆವಾಸ ವಿಧಿಸಬೇಕು. ಕ್ಷತ್ರಿಯನು ಬ್ರಾಹ್ಮಣ
ಸ್ತ್ರೀಯನ್ನು ಕೆಡಿಸಿದರೆ ಅವನ ತಲೆಗೆ ಮೂತ್ರ ಹಚ್ಚಿ ಬೋಳಿಸಬೇಕು (ಅ-8:375)

ಪತಿ ಮೊದಲಾದವರಿಂದ ರಕ್ಷಿತಳಾಗಿರುವ ಬ್ರಾಹ್ಮಣ ಸ್ತ್ರೀಯನ್ನು ಕ್ಷತ್ರಿಯ ವೈಶ್ಯರು
ಭೋಗಿಸಿದರೆ ಅವರಿಗೂ ಶೂದ್ರರಿಗೆ ವಿಧಿಸಿದಂತೆ ಸರ್ವಸ್ವಾಪರಹಾರದ ದಂಡ ಹಾಕಿ ಹುಲ್ಲಿನ
ಬಣವೆಯಲ್ಲಿಟ್ಟು ಬೆಂಕಿಹಚ್ಚಿ ಅವರನ್ನು ಸುಡಬೇಕು (ಅ-8:377)

ಇಂತಹ ಅಪರಾಧ ಮಾಡಿದ ಬ್ರಾಹ್ಮಣನಿಗೆ ತಲೆ ಬೋಳಿಸಿ ಅವಮಾನಿಸಿದರೆ ಸಾಕು. ಅದು ಅವನ ಮಟ್ಟಿಗೆ
ಮರಣದಂಡನೆಗೆ ಸಮನಾದ ಶಿಕ್ಷೆಯಾಗಿರುವುದು. ಉಳಿದವರಿಗೆ ಮಾತ್ರ ಮರಣದಂಡನೆಯನ್ನೇ ವಿಧಿಸಬೇಕು
(ಅ-8:379)

ಒಬ್ಬ ಬ್ರಾಹ್ಮಣನು ಎಲ್ಲ ವಿಧದ ಅಪರಾಧ, ಪಾಪ ಮಾಡಿದರೂ ಅವನನ್ನು ಕೊಲ್ಲಬಾರದು. ಅವನ
ಸರ್ವಸ್ವ ಅಪಹರಿಸಿ ಅವನನ್ನು ದೇಶದಿಂದ ಹೊರಕ್ಕೆ ಹಾಕಬೇಕು (ಅ-8:380)

ಶಯ್ಯೆ, ಆಸನ, ಅಲಂಕಾರ, ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ ಮತ್ತು
ದುರ್ನಡತೆ ಇವೆಲ್ಲಾ ಸಾಮಾನ್ಯವಾಗಿ ಸ್ತ್ರೀಯಲ್ಲಿರುವ ಸ್ವಾಭಾವಿಕ ಗುಣಗಳು (ಅ-9:17)

ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರ ಹೇಳುತ್ತದೆ.
ಇಂದ್ರಿಯಗಳನ್ನು ನಿಗ್ರಹಿಸಲು ಮಂತ್ರಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ
ಅವರು ಸದಾ ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ. (ಅ: 9:19)

ಮೂವತ್ತು ವಯಸಿನ ಪುರುಷ ಹನ್ನೆರಡು ವಯಸ್ಸಿನ ಸುಂದರ ಕನ್ಯೆಯನ್ನು ಮದುವೆಯಾಗಬೇಕು. ಇಲ್ಲವೇ
ಇಪ್ಪತ್ತನಾಲ್ಕು ವರ್ಷದವನು ಎಂಟು ವರ್ಷದ ಕನ್ಯೆಯನ್ನು ಮದುವೆ ಮಾಡಿಕೊಳ್ಳಬೇಕು. ಅದಕ್ಕಿಂತ
ಮೊದಲೇ ವಿವಾಹವಾದವನು ತೊಂದರೆ ಅನುಭವಿಸುತ್ತಾನೆ (ಅ: 9:94)

ರಾಜನು ತನ್ನ ಮೇಲೆ ಎಷ್ಟೇ ಸಂಕಷ್ಟಗಳ ಬಂದೆರಗಿದರೂ ಬ್ರಾಹ್ಮಣರ ಮೇಲೆ ಕೋಪಗೊಳ್ಳಬಾರದು.
ಏಕೆಂದರೆ ಬ್ರಾಹ್ಮಣನ ಶಾಪದಿಂದ ರಾಜನ ಸರ್ವಸ್ವವೂ ನಷ್ಟವಾಗಿಬಿಡುವುದು ( ಅ-9:313)

ಬ್ರಾಹ್ಮಣರು ಕೋಪಗೊಂಡರೆ ಹೊಸ ಲೋಕಗಳನ್ನೇ ಸೃಷ್ಟಿಸಬಲ್ಲರು. ಹೊಸ ಲೋಕಪಾಲರನ್ನು
ನೇಮಿಸಬಲ್ಲರು.‌ದೇವತೆಗಳ‌ ದೈವತ್ವವನ್ನೇ ಅಳಿಸಿಬಿಡಬಲ್ಲರು. ಅಂಥ ಬ್ರಾಹ್ಮಣರನ್ನು ರೇಗಿಸಿ
ಯಾವ ರಾಜ ತಾನೇ ಸಮೃದ್ಧಿ ಹೊಂದಬಲ್ಲನು? (ಅ-9:315)

ಬ್ರಾಹ್ಮಣನ ಸೇವೆಯೇ ಶೂದ್ರನ ವಿಶಿಷ್ಟ ಕರ್ತವ್ಯವಾಗಿದೆ. ಅವನು ಬೇರೆ ಕೆಲಸ ಮಾಡಿದರೆ
ಅವನಿಗೆ ಯಾವ ಫಲವೂ ಸಿಗುವುದಿಲ್ಲ (ಅ-10:123)

ಹಣ ಸಂಪಾದನೆ ಮಾಡುವ ಸಾಮರ್ಥ್ಯವು ಇದ್ದರೂ ಶೂದ್ರನು ಹಣ ಸಂಪಾದಿಸಬಾರದು. ಹಣ ಸಂಪಾದನೆ
ಮಾಡಿದರೆ ಶೂದ್ರನು ಬ್ರಾಹ್ಮಣರನ್ನು ಕಡೆಗಣಿಸುತ್ತಾನೆ (ಅ-10:129)

( ಹೆಚ್ಚಿನ ಆಸಕ್ತಿಯಿದ್ದವರು ಶೇಷ ನವರತ್ನ ಅವರು ಸಂಸ್ಕೃತದಿಂದ ಯಥಾವತ್ತಾಗಿ ಕನ್ನಡಕ್ಕೆ
ಅನುವಾದಿಸಿರುವ (ಸಂಸ್ಕೃತ ಶ್ಲೋಕಗಳ ಸಮೇತ) 200 ಪುಟಗಳ ಮನುಸ್ಮೃತಿ ಪುಸ್ತಕವನ್ನು
ತರಿಸಿಕೊಂಡು ಓದಬಹುದು)

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAOqaUt%3DR3BMWMN%3D%3DuP6NtLZK9Cekmf%2BF8CuYZr_vXki-G_vdEg%40mail.gmail.com.
For more options, visit https://groups.google.com/d/optout.

Reply via email to