ಎಡಪಂಥ ಬೇಡ,ಬಲಪಂಥ ಬೇಡ
ಆಗೋಣ ಮಾನವತಾವಾದಿ ಬೋಧಕ

ಎಂ.ಡಿ.ಚಂದ್ರೇಗೌಡ ,ಸ/ಶಿ, ಸರ್ಕಾರಿ- ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ :ಪಿನ್ 573119.
ಮೊ 8722199344
On May 24, 2016 2:32 AM, "H D Basavaraj Naik" <[email protected]> wrote:

> ಮನು ಸೃತಿಯಲ್ಲಿರುವ ಮಾನವತಾವಾದಕ್ಕೆ ವಿರೋದಾಬಾಸವಾದ ಕೆಲವು ಕೃರ ಸಂಗತಿಗಳು...
>
> ಲೋಕಗಳ ಉದ್ದಾರಕ್ಕಾಗಿ ಬ್ರಹ್ಮನು ತನ್ನ ಮುಖದಿಂದ ಬ್ರಾಹ್ಮಣನ ನ್ನೂ , ಭುಜದಿಂದ
> ಕ್ಷತ್ರಿಯನನ್ನೂ, ತೊಡೆಯಿಂದ ವೈಶ್ಯನನ್ನೂ, ಪಾದದಿಂದ ಶೂದ್ರ ನನ್ನೂ ಸೃಷ್ಟಿಸಿದನು (
> ಅಧ್ಯಾಯ -1:31)
>
> ಮಹಾಪ್ರಭುವಾದ ಬ್ರಹ್ಮನು, ಪ್ರಸ್ತುತ ಮೂರು ವರ್ಣಗಳವರ್ಣಗಳ ( ಬ್ರಾಹ್ಮಣ, ಕ್ಷತ್ರಿಯ,
> ವೈಶ್ಯ) ನಿಸ್ವಾರ್ಥ ಸೇವೆ ಮಾಡುವುದೇ ಶೂದ್ರನ ಕರ್ತವ್ಯವೆಂದು ಆದೇಶಿಸಿದ್ದಾನೆ (ಅ- 1:91)
>
> ಹುಟ್ಟುವಾಗಲೇ ಬ್ರಾಹ್ಮಣನು ಭೂಮಿಯಲ್ಲಿ ಆಳುವ ಅಧಿಕಾರ ಪಡೆದುಕೊಂಡು ಹುಟ್ಟಿರುತ್ತಾನೆ.
> ಮತ್ತು ಧರ್ಮ, ಸಂಪತ್ತಿನ ರಕ್ಷಣೆಗಾಗಿ ಅವನು ಸಕಲ ಜೀವಿಗಳ ಒಡೆಯನಾಗಿರುತ್ತಾನೆ (ಅ-1:99)
>
> ಈ ಭೂಮಿಯಲ್ಲಿ ಸೇರಿರುವುದೆಲ್ಲವೂ ಬ್ರಾಹ್ಮಣನಿಗೆ ಸೇರಿದ್ದಾಗಿವೆ. ಬ್ರಾಹ್ಮಣ ನು
> ಶ್ರೇಷ್ಡವಾದ ಜನ್ಮವನ್ನು ಪಡೆದದ್ದರಿಂದ ಇವೆಲ್ಲವನ್ನೂ ಹೊಂದಲು ಅವನೇ ಅರ್ಹನಾಗಿರುತ್ತಾನೆ
> (ಅ-1:100)
>
> ಬ್ರಾಹ್ಮಣನಿಗೆ ಶುಭ ಸೂಚಕವಾದ, ಕ್ಷತ್ರಿಯನಿಗೆ ಶಕ್ತಿ ಸೂಚಕವಾದ, ವೈಶ್ಯನಿಗೆ ಧನ ಸೂಚಕವಾದ
> ಹಾಗೂ ವೈಶ್ಯನಿಗೆ ಅಸಹ್ಯ ಸೂಚಕವಾದ ಹೆಸರುಗಳನ್ನು ಇಡಬೇಕು (ಅ-2:31)
>
> ಬ್ರಾಹ್ಮಣರಿಗೆ ಇಷ್ಟವಾಗುವ ಎಲ್ಲ ರುಚಿಕರ ಪದಾರ್ಥಗಳನ್ನು ಅವರಿಗೆ ನೀಡಬೇಕು. ಅವರ ಜೊತೆ
> ಪರಬ್ರಹ್ಮ ವಿಚಾರವನ್ನು ಚರ್ಚಿಸಬೇಕು. ಇದರಿಂದ ಪಿತೃಗಳಿಗೆ  ಪ್ರೀತಿಯುಂಟಾಗುತ್ತದೆ
> (ಅ-3:231)
>
> ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಯ ಗಾಳಿ ತಾಕುವುದರಿಂದ, ನಾಯಿ ನೋಡುವುದರಿಂದ ಹಾಗೂ
> ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ ( ಅ- 3:241)
>
> ಶೂದ್ರರಾಜನ ರಾಜ್ಯದಲ್ಲಿ, ಅಧರ್ಮಿಗಳಿರುವ ಪ್ರದೇಶದಲ್ಲಿ ವೇದವಿರೋಧಿಗಳಾದ ಪಾಷಂಡಿಗಳ
> ಪ್ರಾಂತದಲ್ಲಿ, ಅಂತ್ಯಜರ ಸನಿಹದಲ್ಲಿ ಬ್ರಾಹ್ಮಣರು ವಾಸ ಮಾಡಬಾರದು ( ಅ-4:61)
>
> ಶೂದ್ರನಿಗೆ ವಿದ್ಯೆ ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಕೊಡಬಾರದು. ಧರ್ಮೋಪದೇಶ
> ಮಾಡಬಾರದು. ವ್ರತಾಚರಣೆ ಹೇಳಿಕೊಡಬಾರದು. (ಅ- 4:80)
>
> ಬ್ರಾಹ್ಮಣರನ್ನು ವಧಿಸಲು ದ್ವಿಜಾತಿಯವರು ದಂಡಗಳನ್ನೆತ್ತಿದರೆ ಬರಿ ಎತ್ತಿದ ಮಾತ್ರಕ್ಕೆ
> ನೂರು ವರ್ಷಗಳ ತನಕ ತಾಮಿಸ್ರವೆಂಬ ನರಕದಲ್ಲಿ ಬೀಳುತ್ತಾರೆ (ಅ- 4:165)
>
> ಬೇಕು ಬೇಕೆಂದೇ ಯಾರಾದರೂ ಕೋಪಕೊಂಡು ಬ್ರಾಹ್ಮಣನಿಗೆ ಹೊಡೆದರೂ ಸಾಕು ಅವರು ಇಪ್ಪತ್ತೊಂದು
> ಜನ್ಮ ಕಳೆಯುವ ತನಕ ಹೀನಯೋನಿಗಳಲ್ಲಿ ಹುಟ್ಟುತ್ತಾನೆ (ಅ-4:166)
>
> ಪುರಾಣಕಾಲದಲ್ಲಿ ಮಾಡಿದ ಯಜ್ಞಗಳಲ್ಲಿ ಬ್ರಾಹ್ಮಣ ಹಾಗೂ ಕ್ಷತ್ರಿಯರು ಮಾಡಿದಂತ ಯಾಗಗಳಲ್ಲಿ,
> ಶಾಸ್ತ್ರ ಗಳಲ್ಲಿ ತಿನ್ನಬಹುದೆಂದು ಹೇಳಿದ ಮೃಗಪಕ್ಷಿಗಳನ್ನು ಬಲಿ‌ನೀಡಿ ಅವುಗಳ ಮಾಂಸದಿಂದ
> ಪುರೋಡಾಶನವನ್ನು ( ಹವಿಸ್ಸನ್ನು) ಮಾಡಿದ್ದರು ( ಅ-5:23)
>
> ಬ್ರಾಹ್ಮಣರಿಗೆ ಅಪೇಕ್ಷೆಯುಂಟಾದಾಗ ಯಜ್ಞವಿಧಿಗಳಲ್ಲಿ ಮಂತ್ರಜಲದಿಂದ ಪ್ರೋಕ್ಷಿತವಾದ
> ಮಾಂಸವನ್ನು ಹಾಗೂ ಶಾಸ್ತ್ರವಿಧಿಗಳಲ್ಲಿ ಹೇಳಲಾದ ರೀತಿಯಿಂದ ಶ್ರಾದ್ಧದೂಟದಲ್ಲಿನ ಮಾಂಸವನ್ನು
> ತಿನ್ನಬಹುದು. ಹಾಗೆಯೇ ಆಹಾರ ಸಿಗದೆ ಪ್ರಾಣ ಸಂಕಟ ಉಂಟಾದಾಗ ಅನಿವಾರ್ಯವಾಗಿ ಮಾಂಸವನ್ನು
> ತಿನ್ನಬಹುದು (ಅ-5:27)
>
> ಈ ಜಗತ್ತಿನಲ್ಲಿರುವ ಸಮಸ್ತ ಸ್ಥಾವರ ಜಂಗಮ ಜೀವ ಜಂತುಗಳನ್ನು, ಚರಾಚರ ವಸ್ತುಗಳನ್ನು
> ತಿನ್ನಲಿಕ್ಕೆಂದೇ ಪರಮಾತ್ಮ ನು ಸೃಷ್ಟಿಸಿದ್ದಾನೆ (ಅ- 5:28)
>
> ಹೀಗೆ ಯಜ್ಞ, ಶ್ರಾದ್ಧ ಹಾಗೂ ಮಧುಪರ್ಕ ಇತ್ಯಾದಿ ಕಾರ್ಯಗಳಿಗಾಗಿ ಮಾತ್ರ ವೇದಜ್ಞನಾದ
> ಬ್ರಾಹ್ಮಣ ನು ಪಶುವನ್ನು ಕೊಂದರೆ ಅವನು ತನ್ನ ಜತೆಗೆ ಆ ಪಶುವಿಗೂ ಉತ್ತಮ ಗತಿಯನ್ನು ಉಂಟು
> ಮಾಡುತ್ತಾನೆ (ಅ- 5:42)
>
> ಪತಿಯ‌ನಡತೆಯು ಚೆನ್ನಾಗಿಲ್ಲವಾದರೂ, ಅವನು‌ ಕಾಮಾತುರನಾಗಿ ಅನ್ಯ ಹೆಂಗಸಲ್ಲಿ
> ಮನಸ್ಸಿಟ್ಟರೂ, ದುರ್ಗುಣಿಯಾಗಿದ್ದರೂ ಸಾಧ್ವಿಯಾದ ಆ ಹೆಂಗಸು ಆ ತನ್ನ ಪತಿಯನ್ನು ದೇವರೆಂದೇ
> ಭಾವಿಸಿ ಅವನ ಸೇವೆ ಮಾಡಬೇಕು ( ಅ- 5:154)
>
> ವಿದ್ಯೆ ಕಲಿತು ಗುರುಕುಲದಿಂದ ಹೊರಬರುವ ಬ್ರಾಹ್ಮಣ ವಿದ್ವಾಂಸರನ್ನು ರಾಜನು ಸತ್ಕರಿಸಬೇಕು.
> ವಿದ್ಯಾವಂತ‌ ಬ್ರಾಹ್ಮಣರಿಗೆ ನೀಡುವ ನಿಧಿಯು ಅಕ್ಷಯವಾದ ಫಲವನ್ನು ಉಂಟುಮಾಡುತ್ತದೆ (
> ಅ-7:82)
>
> ಯಾವ ರಾಜನ ನ್ಯಾಯಸಭೆಯಲ್ಲಿ ಶೂದ್ರನು ಧರ್ಮವಿಚಾರ ವಿಮರ್ಶೆ ಮಾಡುತ್ತಾನೋ, ಆ ರಾಜನ ದೇಶವು
> ಕೆಸರಿನಲ್ಲಿ ಬಿದ್ದ ಹಸುವಿನಂತಾಗಿ ಬಿಡುತ್ತದೆ. ಅಂತಹ ರಾಜನು ನೋಡು ನೋಡುತ್ತಿದ್ದಂತೆಯೇ
> ಕಷ್ಟ ಪಡುತ್ತಾನೆ (ಅ-8:21)
>
> ಯಾವ ರಾಜ್ಯವು ಹೆಚ್ಚಾಗಿ ಶೂದ್ರರಿಂದ ತುಂಬಿರುತ್ತದೋ, ನಾಸ್ತಿಕರಿಂದ
> ಆಕ್ರಮಿಸಲ್ಪಡುತ್ತದೋ, ಬ್ರಾಹ್ಮಣರಹಿತವಾಗಿರುತ್ತದೋ ಆ ರಾಜ್ಯವು ದುರ್ಭಿಕ್ಷ ರೋಗಗಳಿಂದ
> ಜರ್ಜರಿತವಾಗಿ ಬೇಗನೆ ನಾಶವಾಗಿ ಬಿಡುತ್ತದೆ (ಅ-8:22)
>
> ಪರಸ್ಪರ ವಿರುದ್ಧ ಸಾಕ್ಷಿಗಳು ಹೇಳಲ್ಪಟ್ಟಾಗ ರಾಜನು ಬಹುಮತದ ಅಭಿಪ್ರಾಯ ಮನ್ನಿಸಬೇಕು.
> ಸಮಾನ ಇಬ್ಬರಲ್ಲಿ ಪರಸ್ಪರ ವಿರುದ್ಧ ಸಾಕ್ಷಿ ನುಡಿದರೆ ಗುಣವಂತನ ಸಾಕ್ಷಿ‌ ಮನ್ನಿಸಬೇಕು.
> ಗುಣವಂತರಲ್ಲಿ ವಿರೋಧ ಸಾಕ್ಷಿ ಉಂಟಾದಾಗ ರಾಜನು‌ ಬ್ರಾಹ್ಮಣ ಶ್ರೇಷ್ಟನ ಸಾಕ್ಷಿ‌ನಂಬಬೇಕು
> (ಅ-8:73)
>
> ಬ್ರಾಹ್ಮಣನನ್ನು ಬೈದರೆ ಕ್ಷತ್ರಿಯನಿಗೆ ನೂರು ಪಣಗಳ ದಂಡ, ವೈಶ್ಯನಿಗೆ ನೂರೈವತ್ತು ಅಥವಾ
> ಇನ್ನೂರು ಪಣಗಳ ದಂಡ. ಬ್ರಾಹ್ಮಣನನ್ನು ಬೈದ ಶೂದ್ರನಿಗೆ ವಧೆ ಶಿಕ್ಷೆ (ಮರಣ ದಂಡನೆ)
> ವಿಧಿಸಬೇಕು. (ಅ- 8:627)
>
> ಉಪನಯನ ಸಂಸ್ಕಾರ ಹೊಂದಲು ಅರ್ಹತೆಯಿಲ್ಲದ ಶೂದ್ರನು ದ್ವಿಜಾತಿಯವರಾದ ಬ್ರಾಹ್ಮಣ ಕ್ಷತ್ರಿಯ
> ವೈಶ್ಯರನ್ನು ಹೀನವಾದ ಕೆಟ್ಟ ಮಾತುಗಳಿಂದ ಬೈದರೆ ಕೆಳ ಜಾತಿಯಲ್ಲಿ ಹುಟ್ಟಿದ ಆ ಶೂದ್ರನ
> ನಾಲಿಗೆಯನ್ನು ಛೇಧಿಸತಕ್ಕದ್ದು. ಏಕೆಂದರೆ ಅವನು‌ಕೆಳ ಜಾತಿಯವನು ( ಅ-8:270)
>
> ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಇವರ ಜಾತಿಯ ಹೆಸರುಗಳನ್ನೆತ್ತಿ ಹೀನಾಮಾನವಾಗಿ ಬೈದಂತ ಆ
> ಶೂದ್ರನ ಬಾಯಲ್ಲಿ ಕಾದ ಕಬ್ಬಿಣದ ಹತ್ತಂಗುಲ ಉದ್ದದ ಸರಳನ್ನಿಡಬೇಕು (ಅ- 8:271)
>
> ಬ್ರಾಹಣರಿಗೆ ಅಹಂಕಾರದಂದ ಧರ್ಮವನ್ನು ಬೋಧಿಸುವ ಶೂದ್ರನಿಗೆ ರಾಜನು ಬಾಯಲ್ಲಿ‌ಹಾಗೂ
> ಕಿವಿಯಲ್ಲಿ ಕಾದ ಎಣ್ಣೆಯನ್ನು ಹಾಕಿಸಬೇಕು (ಅ-8:272)
>
> ಬ್ರಾಹ್ಮಣ ಮೊದಲಾದ ಶ್ರೇಷ್ಟ ಜಾತಿಯವರನ್ನು ತನ್ನ ಕೈಕಾಲು ಮುಂತಾದ ಯಾವುದಾದರೂ ಅಂಗದಿಂದ
> ಅಂತ್ಯಜನು ( ಶೂದ್ರನು) ಹೊಡೆದರೆ ಅವನ ಆ ಅಂಗವನ್ನು ( ಕೈ ಕಾಲು ಇತ್ಯಾದಿಯನ್ನು )
> ಕತ್ತರಿಸಬೇಕು. ಇದು ಮನುವು ಹೇಳಿದ ಶಾಸನವು (ಅ-8:279)
>
> ಬ್ರಾಹ್ಮಣನ ಜತೆಗೆ ಒಂದೇ ಆಸನದಲ್ಲಿ ಕುಳಿತ ಅಂತ್ಯಜನಿಗೆ ಅಥವಾ ಶೂದ್ರನಿಗೆ ಸೊಂಟದಲ್ಲಿ
> ಬರೆ ಎಳೆದು ಊರಿನಿಂದ ಹೊರಗೆ ಹಾಕಬೇಕು ಅಥವಾ ಅವನ ಕುಂಡೆಯನ್ನು ಕತ್ತರಿಸಬೇಕು ( ಆಗ ಅವನು
> ಸಾಯಬಾರದು) (ಅ- 8:281)
>
> ಶೂದ್ರನು ಬೇಕೆಂತಲೇ ಸೊಕ್ಕಿನಿಂದ ಬ್ರಾಹ್ಮಣನ ಮೇಲೆ ಉಗುಳಿದರೆ ಅವನ ತುಟಿ ಕತ್ತರಿಸಬೇಕು.
> ಮೂತ್ರ ಚೆಲ್ಲಿ ಅವಮಾಬಿಸಿದರೆ ಅವನ ಶಿಶ್ನ ಕತ್ತರಿಸಬೇಕು. ಬೇಕೆಂತಲೇ ಹೂಸು ಬಿಟ್ಟು
> ಅವಮಾನಿಸಿದರೆ ಅವನ ಗುದವನ್ನು ಕತ್ತರಿಸಬೇಕು (ಅ-8:282)
>
> ತನಗಿಂತ ಮೇಲು ಜಾತಿಯವನೊಡನೆ ಸಂಭೋಗ ಬಯಸಿ ಕೂಡಿಕೊಂಡ ಕನ್ಯೆಗೆ ದಂಡ ಹಾಕಬಾರದು. ತನಗಿಂತ
> ಕೀಳು ಜಾತಿಯವನೊಡನೆ ಸಂಭೋಗ ಬಯಸಿದ ಕನ್ಯೆಯನ್ನು ಮನೆಯಲ್ಲಿಯೇ ಗೃಹಬಂಧನದಲ್ಲಿರಿಸಬೇಕು
> (ಅ-8:365)
>
> ಓರ್ವ ವೈಶ್ಯನು ಓರ್ವ ಬ್ರಾಹ್ಮಣ ಸ್ತ್ರೀಯನ್ನು ಭೋಗಿಸಿದರೆ ಅವರ ಸರ್ವಸ್ವವನ್ನೂ
> ಕಸಿದುಕೊಂಡು ಅವನಿಗೆ ಒಂದು ವರ್ಷ ಸೆರೆಮನೆವಾಸ ವಿಧಿಸಬೇಕು. ಕ್ಷತ್ರಿಯನು ಬ್ರಾಹ್ಮಣ
> ಸ್ತ್ರೀಯನ್ನು ಕೆಡಿಸಿದರೆ ಅವನ ತಲೆಗೆ ಮೂತ್ರ ಹಚ್ಚಿ ಬೋಳಿಸಬೇಕು (ಅ-8:375)
>
> ಪತಿ ಮೊದಲಾದವರಿಂದ ರಕ್ಷಿತಳಾಗಿರುವ ಬ್ರಾಹ್ಮಣ ಸ್ತ್ರೀಯನ್ನು ಕ್ಷತ್ರಿಯ ವೈಶ್ಯರು
> ಭೋಗಿಸಿದರೆ ಅವರಿಗೂ ಶೂದ್ರರಿಗೆ ವಿಧಿಸಿದಂತೆ ಸರ್ವಸ್ವಾಪರಹಾರದ ದಂಡ ಹಾಕಿ ಹುಲ್ಲಿನ
> ಬಣವೆಯಲ್ಲಿಟ್ಟು ಬೆಂಕಿಹಚ್ಚಿ ಅವರನ್ನು ಸುಡಬೇಕು (ಅ-8:377)
>
> ಇಂತಹ ಅಪರಾಧ ಮಾಡಿದ ಬ್ರಾಹ್ಮಣನಿಗೆ ತಲೆ ಬೋಳಿಸಿ ಅವಮಾನಿಸಿದರೆ ಸಾಕು. ಅದು ಅವನ ಮಟ್ಟಿಗೆ
> ಮರಣದಂಡನೆಗೆ ಸಮನಾದ ಶಿಕ್ಷೆಯಾಗಿರುವುದು. ಉಳಿದವರಿಗೆ ಮಾತ್ರ ಮರಣದಂಡನೆಯನ್ನೇ ವಿಧಿಸಬೇಕು
> (ಅ-8:379)
>
> ಒಬ್ಬ ಬ್ರಾಹ್ಮಣನು ಎಲ್ಲ ವಿಧದ ಅಪರಾಧ, ಪಾಪ ಮಾಡಿದರೂ ಅವನನ್ನು ಕೊಲ್ಲಬಾರದು. ಅವನ
> ಸರ್ವಸ್ವ ಅಪಹರಿಸಿ ಅವನನ್ನು ದೇಶದಿಂದ ಹೊರಕ್ಕೆ ಹಾಕಬೇಕು (ಅ-8:380)
>
> ಶಯ್ಯೆ, ಆಸನ, ಅಲಂಕಾರ, ಇವುಗಳ ಮೋಹ, ಕಾಮ, ಕ್ರೋಧ, ಅಪ್ರಾಮಾಣಿಕತೆ, ಪತಿದ್ರೋಹ ಮತ್ತು
> ದುರ್ನಡತೆ ಇವೆಲ್ಲಾ ಸಾಮಾನ್ಯವಾಗಿ ಸ್ತ್ರೀಯಲ್ಲಿರುವ ಸ್ವಾಭಾವಿಕ ಗುಣಗಳು (ಅ-9:17)
>
> ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರ ಹೇಳುತ್ತದೆ.
> ಇಂದ್ರಿಯಗಳನ್ನು ನಿಗ್ರಹಿಸಲು ಮಂತ್ರಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ
> ಅವರು ಸದಾ ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ. (ಅ: 9:19)
>
> ಮೂವತ್ತು ವಯಸಿನ ಪುರುಷ ಹನ್ನೆರಡು ವಯಸ್ಸಿನ ಸುಂದರ ಕನ್ಯೆಯನ್ನು ಮದುವೆಯಾಗಬೇಕು. ಇಲ್ಲವೇ
> ಇಪ್ಪತ್ತನಾಲ್ಕು ವರ್ಷದವನು ಎಂಟು ವರ್ಷದ ಕನ್ಯೆಯನ್ನು ಮದುವೆ ಮಾಡಿಕೊಳ್ಳಬೇಕು. ಅದಕ್ಕಿಂತ
> ಮೊದಲೇ ವಿವಾಹವಾದವನು ತೊಂದರೆ ಅನುಭವಿಸುತ್ತಾನೆ (ಅ: 9:94)
>
> ರಾಜನು ತನ್ನ ಮೇಲೆ ಎಷ್ಟೇ ಸಂಕಷ್ಟಗಳ ಬಂದೆರಗಿದರೂ ಬ್ರಾಹ್ಮಣರ ಮೇಲೆ ಕೋಪಗೊಳ್ಳಬಾರದು.
> ಏಕೆಂದರೆ ಬ್ರಾಹ್ಮಣನ ಶಾಪದಿಂದ ರಾಜನ ಸರ್ವಸ್ವವೂ ನಷ್ಟವಾಗಿಬಿಡುವುದು ( ಅ-9:313)
>
> ಬ್ರಾಹ್ಮಣರು ಕೋಪಗೊಂಡರೆ ಹೊಸ ಲೋಕಗಳನ್ನೇ ಸೃಷ್ಟಿಸಬಲ್ಲರು. ಹೊಸ ಲೋಕಪಾಲರನ್ನು
> ನೇಮಿಸಬಲ್ಲರು.‌ದೇವತೆಗಳ‌ ದೈವತ್ವವನ್ನೇ ಅಳಿಸಿಬಿಡಬಲ್ಲರು. ಅಂಥ ಬ್ರಾಹ್ಮಣರನ್ನು ರೇಗಿಸಿ
> ಯಾವ ರಾಜ ತಾನೇ ಸಮೃದ್ಧಿ ಹೊಂದಬಲ್ಲನು? (ಅ-9:315)
>
> ಬ್ರಾಹ್ಮಣನ ಸೇವೆಯೇ ಶೂದ್ರನ ವಿಶಿಷ್ಟ ಕರ್ತವ್ಯವಾಗಿದೆ. ಅವನು ಬೇರೆ ಕೆಲಸ ಮಾಡಿದರೆ
> ಅವನಿಗೆ ಯಾವ ಫಲವೂ ಸಿಗುವುದಿಲ್ಲ (ಅ-10:123)
>
> ಹಣ ಸಂಪಾದನೆ ಮಾಡುವ ಸಾಮರ್ಥ್ಯವು ಇದ್ದರೂ ಶೂದ್ರನು ಹಣ ಸಂಪಾದಿಸಬಾರದು. ಹಣ ಸಂಪಾದನೆ
> ಮಾಡಿದರೆ ಶೂದ್ರನು ಬ್ರಾಹ್ಮಣರನ್ನು ಕಡೆಗಣಿಸುತ್ತಾನೆ (ಅ-10:129)
>
> ( ಹೆಚ್ಚಿನ ಆಸಕ್ತಿಯಿದ್ದವರು ಶೇಷ ನವರತ್ನ ಅವರು ಸಂಸ್ಕೃತದಿಂದ ಯಥಾವತ್ತಾಗಿ ಕನ್ನಡಕ್ಕೆ
> ಅನುವಾದಿಸಿರುವ (ಸಂಸ್ಕೃತ ಶ್ಲೋಕಗಳ ಸಮೇತ) 200 ಪುಟಗಳ ಮನುಸ್ಮೃತಿ ಪುಸ್ತಕವನ್ನು
> ತರಿಸಿಕೊಂಡು ಓದಬಹುದು)
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CAOqaUt%3DR3BMWMN%3D%3DuP6NtLZK9Cekmf%2BF8CuYZr_vXki-G_vdEg%40mail.gmail.com
> <https://groups.google.com/d/msgid/kannadastf/CAOqaUt%3DR3BMWMN%3D%3DuP6NtLZK9Cekmf%2BF8CuYZr_vXki-G_vdEg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAE6Pbr%3DZLyh8kzsjn5rqKXDrrUQnMKDhH%2B1--%3DQvhs3Jb4%2BZxw%40mail.gmail.com.
For more options, visit https://groups.google.com/d/optout.

Reply via email to