Very informative thank you sir On Feb 26, 2016 5:29 PM, "shyamala prabhu" <[email protected]> wrote:
> Thank u sir for such an interesting article > On Feb 26, 2016 12:05 PM, "chandrika N" <[email protected]> wrote: > >> Nice article >> On Feb 26, 2016 9:15 AM, "DORA CARMINE D'SILVA" <[email protected]> >> wrote: >> >>> Vry nice article..thank u for sharing sir... >>> On Feb 26, 2016 1:08 AM, "HAREESHKUMAR K Agasanapura" < >>> [email protected]> wrote: >>> >>>> http://m.prajavani.net/article/2016_02_25/389899 >>>> >>>> *ಮನುಕುಲದ ಕಿವಿ ತೆರೆಸಿದ ಗುರುತ್ವ ಕಂಪನ* >>>> >>>> 25 Feb, 2016 >>>> >>>> ನಾಗೇಶ್ ಹೆಗಡೆ >>>> >>>> >>>> <https://www.facebook.com/sharer/sharer.php?u=http%3A%2F%2Fgoo.gl%2FDhOIqD> >>>> <https://twitter.com/intent/tweet?text=%E0%B2%AE%E0%B2%A8%E0%B3%81%E0%B2%95%E0%B3%81%E0%B2%B2%E0%B2%A6+%E0%B2%95%E0%B2%BF%E0%B2%B5%E0%B2%BF+%E0%B2%A4%E0%B3%86%E0%B2%B0%E0%B3%86%E0%B2%B8%E0%B2%BF%E0%B2%A6+%E0%B2%97%E0%B3%81%E0%B2%B0%E0%B3%81%E0%B2%A4%E0%B3%8D%E0%B2%B5+%E0%B2%95%E0%B2%82%E0%B2%AA%E0%B2%A8+http%3A%2F%2Fgoo.gl%2FDhOIqD> >>>> <https://plus.google.com/share?url=http%3A%2F%2Fgoo.gl%2FDhOIqD> >>>> <http://www.pinterest.com/pin/find/?url=http%3A%2F%2Fgoo.gl%2FDhOIqD> >>>> <http://www.linkedin.com/shareArticle?mini=true&title=%E0%B2%AE%E0%B2%A8%E0%B3%81%E0%B2%95%E0%B3%81%E0%B2%B2%E0%B2%A6+%E0%B2%95%E0%B2%BF%E0%B2%B5%E0%B2%BF+%E0%B2%A4%E0%B3%86%E0%B2%B0%E0%B3%86%E0%B2%B8%E0%B2%BF%E0%B2%A6+%E0%B2%97%E0%B3%81%E0%B2%B0%E0%B3%81%E0%B2%A4%E0%B3%8D%E0%B2%B5+%E0%B2%95%E0%B2%82%E0%B2%AA%E0%B2%A8+&url=http%3A%2F%2Fgoo.gl%2FDhOIqD> >>>> >>>> ಕಳೆದ ಗುರುವಾರ ಈ ಭೂಮಿಯ ಮೇಲಿನ ಎಲ್ಲಭೌತ ವಿಜ್ಞಾನಿಗಳಿಗೆ ವಿಶೇಷ ಗುರುಬಲ ಬಂತು. >>>> ನಾನಾ ದೇಶಗಳ ಸಾವಿರಾರು ವಿಜ್ಞಾನಿಗಳು ಏಕಕಾಲಕ್ಕೆ ’ಉಊಊಊಂವ್’ ಎಂದು ಗುರುತ್ವ ಅಲೆಗಳ >>>> ನಾದವನ್ನು ಅನುಕರಿಸಿ ಹರ್ಷೋದ್ಗಾರ ಹೊಮ್ಮಿಸಿದರು. ಅವರ ಸಂತಸಕ್ಕೆ ಕಾರಣವೇನೆಂದರೆ, ಈ >>>> ವಿಶ್ವದಲ್ಲಿ ಗುರುತ್ವ ತರಂಗಗಳಿವೆ ಎಂಬುದು ಇದೇ ಮೊದಲ ಬಾರಿಗೆ ಸಾಬೀತಾಯಿತು. ಇಂಥ ತರಂಗಗಳು >>>> ಇರಲೇಬೇಕೆಂದು ಆಲ್ಬರ್ಟ್ ಐನ್‌ಸ್ಟೀನ್ ಸರಿಯಾಗಿ ನೂರು ವರ್ಷಗಳ ಹಿಂದೆ ಗಣಿತ ಸೂತ್ರಗಳ >>>> ಆಧಾರದಲ್ಲಿ ಪ್ರತಿಪಾದಿಸಿದ್ದು ಕೊನೆಗೂ ಸತ್ಯವಾಯಿತೆಂಬ ಸಂತಸದ ಅಲೆ ಅದಾಗಿತ್ತು. >>>> >>>> ಅಲೆ ಒಂದೆರಡಲ್ಲ; ನೊಬೆಲ್ ಪ್ರಶಸ್ತಿಗೆ ನೇರಾನೇರ ಅರ್ಹವಾಗಬಲ್ಲ ಸಂಶೋಧನೆ >>>> ಸಾಧ್ಯವಾಯಿತೆಂದು ಕೆಲವರಲ್ಲಿ ಸಂಭ್ರಮದ ಅಲೆ ಹೊಮ್ಮಿದರೆ, ಇನ್ನು ಕೆಲವರಲ್ಲಿ ವಿಶ್ವದ >>>> ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳಲು ಹೊಸದೊಂದು ಅಸ್ತ್ರ ಲಭಿಸಿತೆಂಬ ಆನಂದದ ಅಲೆಯನ್ನೂ ಅದು >>>> ಹೊಮ್ಮಿಸಿತು. ಭೌತವಿಜ್ಞಾನದ ಘನ ಪಂಡಿತರಿಗೆ, ಉಪನ್ಯಾಸಕರಿಗೆ, ಚರ್ಚಾಪಟುಗಳಿಗೆ, >>>> ಗ್ರಂಥಕರ್ತರಿಗೆ, ಪ್ರಕಾಶಕರಿಗೆ, ಹೊಸ ಅವಕಾಶಗಳ ಬಾಗಿಲು ತೆರೆದುಕೊಂಡಿತೆಂದು ಸಂತಸದ ಅಲೆ >>>> ಹೊಮ್ಮಿತು. ಪಕ್ಕದ ಪಾಕಿಸ್ತಾನದಲ್ಲೂ ಸಂತಸದ ಅಲೆ ಎದ್ದಿತು; ಏಕೆಂದರೆ ಗುರುತ್ವ ತರಂಗವನ್ನು >>>> ಪತ್ತೆ ಹಚ್ಚಿದ ತಂಡದಲ್ಲಿ ಪಾಕಿಸ್ತಾನಿ ಮೂಲದ ನೆರ್ಗಿಸ್ ಮಾವೆಲ್‌ವಾಲಾ ಎಂಬ ಸುಂದರ ಪಾರ್ಸಿ >>>> ಯುವತಿಯೂ ಇದ್ದಳೆಂಬುದೇ ಅಲ್ಲಿನ ಪ್ರಜೆಗಳಿಗೆ ಉದ್ವೇಗದ ಸಂಗತಿಯಾಗಿತ್ತು. >>>> >>>> ನಿಜ ಹೇಳಬೇಕೆಂದರೆ, ಈ ಗುರುತ್ವ ತರಂಗ ಅಂದರೆ ಏನು, ಅದರಿಂದ ಏನೇನಾಗುತ್ತದೆ, ಅದರ >>>> ಪ್ರಯೋಜನ ಏನು ಎನ್ನುವುದು ಯಾವ ಸಾಮಾನ್ಯ ಪಾಮರರಿಗೂ ಅರ್ಥವಾಗುವ ವಿಷಯ ಅಲ್ಲವೇ ಅಲ್ಲ. ಮೂರು >>>> ವರ್ಷಗಳ ಹಿಂದೆ ಹಿಗ್ಸ್ ಬೋಸಾನ್ ಕಣಗಳು ಪತ್ತೆಯಾದಾಗ ‘ದೇವಕಣ’ಗಳೇ ಪ್ರತ್ಯಕ್ಷವಾದವು ಎಂದು >>>> ಮಾಧ್ಯಮಗಳಲ್ಲಿ ಎಷ್ಟೊಂದು ಸಂಭ್ರಮ ಪ್ರಕಟವಾಗಿತ್ತಲ್ಲ? ವಿಜ್ಞಾನದ ಚಮತ್ಕಾರವೇ ಅಂಥದ್ದು. >>>> ಗಹನ ನಿಗೂಢಗಳು ಅರ್ಥವಾಗದಿದ್ದರೇನು, ಅದರಿಂದ ಹೊಮ್ಮುವ ಸಂಭ್ರಮ ಏನಿದೆ, ಅದು ದೇಶ >>>> ಕಾಲಗಳನ್ನು ಮೀರಿ ಗುರುತ್ವದ ಅಲೆಯ ಹಾಗೆ ಎಲ್ಲರನ್ನೂ ತಟ್ಟುತ್ತದೆ. >>>> >>>> ಸಾಮಾನ್ಯ ಅರ್ಥದಲ್ಲಿ ಗುರುತ್ವ ಎಂದರೆ ಏನೆಂಬುದು ನಮಗೆಲ್ಲ ಗೊತ್ತೇ ಇದೆ. ಮೇಲಕ್ಕೆ >>>> ಎಸೆದ ಚಂಡು ಅಲ್ಲೇ ನಿಲ್ಲುವ ಬದಲು ಕೆಳಕ್ಕೆ ಏಕೆ ಬೀಳುತ್ತದೆ ಎಂದು ಕೇಳಿದರೆ, ‘ಭೂಮಿಗೆ >>>> ಗುರುತ್ವಾಕರ್ಷಣೆ ಇದೆ, ಅದು ಎಲ್ಲ ವಸ್ತುಗಳನ್ನೂ ತನ್ನತ್ತ ಸೆಳೆಯುತ್ತದೆ’ ಎಂದು ಹೈಸ್ಕೂಲ್ >>>> ವಿದ್ಯಾರ್ಥಿಗಳೂ ಹೇಳುತ್ತಾರೆ. ಏಕೆಂದರೆ, ಐಸ್ಯಾಕ್ ನ್ಯೂಟನ್‌ನ ತಲೆಯ ಮೇಲೆ ಸೇಬು ಬಿದ್ದಾಗ >>>> ಈ ಸಂಗತಿ ಆತನಿಗೆ ಹೊಳೆಯಿತೆಂದು ಹಿಂದಿನವರು ಹೇಳುತ್ತ ಬಂದಿದ್ದಾರೆ. ಸೇಬು ಆತನ ತಲೆಯ >>>> ಮೇಲೆಯೇ ಬಿತ್ತೊ, ದೂರದಲ್ಲೊ ಅಥವಾ ಅವನ ಕನಸಿನಲ್ಲಿ ಬಿತ್ತೊ ಆ ವಿಷಯ ಹೇಗೂ ಇರಲಿ, >>>> ಸಾಮಾನ್ಯರಿಗೆ ಹೊಳೆಯದ ಸಂಗತಿ ಅವನಿಗೆ ಹೊಳೆಯಿತು. ಅದೇ ಗುರುತ್ವ ಬಲದಿಂದಾಗಿಯೇ ಸೂರ್ಯನ >>>> ಸುತ್ತ ಗ್ರಹಗಳು ಸುತ್ತುತ್ತವೆ ಎಂದು ನ್ಯೂಟನ್ ಹೇಳಿದ್ದನ್ನು ಎಲ್ಲರೂ ಒಪ್ಪಿಕೊಂಡಿದ್ದರು. >>>> >>>> ಐನ್‌ಸ್ಟೀನ್ ಮಂಡಿಸಿದ ಸಾಪೇಕ್ಷ ಸಿದ್ಧಾಂತದಲ್ಲಿ ಗುರುತ್ವಕ್ಕೆ ಬೇರೆಯದೇ ಆಯಾಮ ಬಂತು. >>>> ಗುರುತ್ವ ಬಲ (ಗ್ರಾವಿಟಿ) ಎಂಬುದು ಜಾಳಿಗೆಯಂತೆ ಇಡೀ ವಿಶ್ವವನ್ನು ಆವರಿಸಿದೆ ಎಂದು ಆತ >>>> ಪ್ರತಿಪಾದಿಸಿದ. ಎಲ್ಲೋ ದೂರದಲ್ಲಿ, ನಮ್ಮ ಸೌರಮಂಡಲಕ್ಕೆ ಸಂಬಂಧವೇ ಇಲ್ಲದಂತೆ ದೂರದ >>>> ಗ್ಯಾಲಕ್ಸಿಯಲ್ಲಿ ಒಂದು ತಾರೆ ಸ್ಫೋಟಗೊಂಡರೂ ಆಗ ಏಳುವ ತುಮುಲಗಳು ಅಲೆಅಲೆಯಾಗಿ >>>> ವಿಶ್ವಕ್ಕೆಲ್ಲ ಹರಡುತ್ತವೆ ಎಂದ. >>>> >>>> ಅಷ್ಟೇ ಅಲ್ಲ, ಈ ತರಂಗ ಸ್ಪೇಸ್‌ಟೈಮ್ (ದೇಶಕಾಲ) ಎಂಬ ನಾಲ್ಕನೇ ಆಯಾಮದಲ್ಲಿದೆ ಎಂತಲೂ >>>> ಹೇಳಿದ. ಅದನ್ನು ಅರ್ಥ ಮಾಡಿಕೊಳ್ಳಲು ತಿಣುಕುವವರಿಗಾಗಿ ಒಂದು ರೂಪಕವೂ ಸಿದ್ಧವಾಯಿತು. >>>> ಸರ್ಕಸ್ ಡೇರೆಗಳಲ್ಲಿ ಎತ್ತರಕ್ಕೆ ಒಂದು ಬಲೆಯನ್ನು ಬಿಗಿಯಾಗಿ ಕಟ್ಟಿರುತ್ತಾರೆ ತಾನೆ? >>>> ಜೋಕಾಲಿ ಜೀಕುವವರು, ಜೋಕರ್‌ಗಳು ಅದರ ಮೇಲೆ ಕುಪ್ಪಳಿಸಿ ಲಾಗಾ ಹೊಡೆಯುತ್ತಿರುತ್ತಾರೆ. >>>> >>>> ಅಂಥ ಜಾಳಿಗೆಯ ಮೇಲೊಂದು ಭಾರವಾದ ಗುಂಡನ್ನು ಇಟ್ಟರೆ ಅಲ್ಲೊಂದು ಗುಳಿಯನ್ನು >>>> ಸೃಷ್ಟಿಸಿಕೊಂಡು ಅದರಲ್ಲಿ ಕೂರುತ್ತದೆ. ಗುಂಡಿನ ಭಾರ ಹೆಚ್ಚಿದ್ದಷ್ಟೂ ಗುಳಿಯ ಆಳ ಹೆಚ್ಚಿಗೆ >>>> ಇರುತ್ತದೆ. ಅದರತ್ತ ಇನ್ನೊಂದು ಚಿಕ್ಕ ಗುಂಡನ್ನು ಉರುಳಿಸಿದರೆ ಅದು ನೇರವಾಗಿ ಗುಳಿಯೊಳಕ್ಕೆ >>>> ಹೋಗುವ ಬದಲು ವೃತ್ತಾಕಾರವಾಗಿ ಚಲಿಸುತ್ತ ಕ್ರಮೇಣ ಗುಳಿಯಲ್ಲಿನ ದೊಡ್ಡ ಗುಂಡಿನ ಬಳಿ >>>> ಸೇರುತ್ತದೆ. ಹಾಗೇ ಭಾರೀ ನಕ್ಷತ್ರಗಳು ಅಥವಾ ಭಾರೀ ಗ್ಯಾಲಕ್ಸಿಗಳು ಇದ್ದಲ್ಲೆಲ್ಲ >>>> ಸ್ಪೇಸ್‌ಟೈಮ್ ಜಾಲದಲ್ಲಿ ಇಂಥ ಗುಳಿಗಳು ಏರ್ಪಡುತ್ತವೆಂದೂ ಗ್ರಹಗಳು ಅಲ್ಲೇ ಗಿರಕಿ >>>> ಹೊಡೆಯುತ್ತಿರುತ್ತವೆ ಎಂತಲೂ ಐನ್‌ಸ್ಟೀನ್ ಅನುಯಾಯಿಗಳು ತರ್ಕಿಸಿದರು. >>>> >>>> ಇಡೀ ವಿಶ್ವವನ್ನು ಸ್ಪೇಸ್‌ಟೈಮ್ ಜಾಳಿಗೆ ಆವರಿಸಿದೆ ಎಂಬುದಕ್ಕೆ ಪರೋಕ್ಷ ಉದಾಹರಣೆಗಳು >>>> ಒಂದರ ನಂತರ ಒಂದರಂತೆ ಲಭಿಸುತ್ತ ಹೋದವು (ಹಾಗೆ ಸಾಕ್ಷ್ಯವನ್ನು ಒದಗಿಸಿದವರಿಗೆ >>>> ಪಿಎಚ್‌ಡಿಗಳೂ ನೊಬೆಲ್‌ಗಳೂ ಲಭಿಸುತ್ತ ಬಂದವು). ಉದಾಹರಣೆಗೆ: ದೊಡ್ಡ ಗ್ಯಾಲಕ್ಸಿಯ >>>> ಹಿಂಭಾಗದಲ್ಲಿ ಪ್ರಖರ ತಾರೆಗಳ ಇನ್ನೊಂದು ಗುಂಪು ಇದೆಯೆಂದುಕೊಳ್ಳಿ. ಅವುಗಳಿಂದ ಹೊರಟ ಬೆಳಕು >>>> ನೇರವಾಗಿ ನಮ್ಮತ್ತ ಬರುವ ಬದಲು ತನ್ನೆದುರಿನ ಗ್ಯಾಲಕ್ಸಿಯ ಗುರುತ್ವ ಕುಳಿಯನ್ನು >>>> ಸುತ್ತುಹೊಡೆದು ಬರುತ್ತದೆ ಎಂಬುದು ಗೊತ್ತಾಯಿತು. >>>> >>>> ಅಂದರೆ, ಗ್ಯಾಲಕ್ಸಿಗಳು ನಿರ್ಮಿಸಿಕೊಂಡ ಕುಳಿಯೇ ಒಂಥರಾ ಮಸೂರದಂತೆ ಇರುತ್ತದೆ ಎಂಬುದು >>>> ಸಾಬೀತಾಯಿತು. ಅವುಗಳ ಹಿಂಭಾಗದಲ್ಲಿದ್ದ ತಾರೆಗಳ ದೂರವನ್ನು ನಿಖರವಾಗಿ ಅಳೆಯುವುದು >>>> ಸಾಧ್ಯವಾಯಿತು. ನಮ್ಮದೇ ಬುಧ ಗ್ರಹ ನ್ಯೂಟನ್ ನಿಯಮವನ್ನು ಅನುಸರಿಸುತ್ತ ಸೂರ್ಯನನ್ನು >>>> ಸುತ್ತುಹೊಡೆಯುವ ಬದಲು ತನ್ನ ಕಕ್ಷೆಯಲ್ಲಿ ಆಗಾಗ ಏಕೆ ತಳಕಾ ಬಳಕಾ ಆಗುತ್ತದೆ ಎಂಬುದು >>>> ಹಿಂದೆಲ್ಲ ದೊಡ್ಡ ಪ್ರಶ್ನೆಯಾಗಿತ್ತು. >>>> >>>> ಯಾವುದೋ ಅಗೋಚರ ಇನ್ನೊಂದು ಗ್ರಹ ಅಲ್ಲಿರಬೇಕು ಎಂದು ಅದನ್ನು ಶೋಧಿಸಲು ಏನೆಲ್ಲ ವಿಫಲ >>>> ಯತ್ನಗಳು ನಡೆದಿದ್ದವು. ಆದರೆ ಐನ್‌ಸ್ಟೀನ್‌ನ ಸ್ಪೇಸ್‌ಟೈಮ್ ಜಾಲದಲ್ಲಿ ಸೂರ್ಯನನ್ನು >>>> ಸಿಲುಕಿಸಿ ನೋಡಿದಾಗ ಬುಧಗ್ರಹದ ಎರ್ರಾಬಿರ್ರಿ ಚಾಲನೆಗೆ ಉತ್ತರ ಸಿಕ್ಕಿತ್ತು. >>>> >>>> ಈ ಸ್ಪೇಸ್‌ಟೈಮ್ ಜಾಳಿಗೆ ಎಲ್ಲೆಡೆ ಹರಡಿರುವುದರಿಂದ ಇಬ್ಬರು ಜಟ್ಟಿಗಳು >>>> ಗುದ್ದಾಡಿಕೊಂಡರೂ ಜಾಳಿಗೆ ಅದುರಿ ಗುರುತ್ವ ಅಲೆಗಳು ಏಳುತ್ತವೆ. ಗೊತ್ತೇ ಆಗುವುದಿಲ್ಲ. >>>> ಗುರುಗ್ರಹಕ್ಕೆ ಧೂಮಕೇತು ಅಪ್ಪಳಿಸಿದಾಗಲೂ ಏಳುತ್ತವೆ. ಆದರೆ ’ಅವು ಪತ್ತೆ ಹಚ್ಚಲು >>>> ಸಾಧ್ಯವಾಗದಷ್ಟು ಸೂಕ್ಷ್ಮವಾಗಿರುತ್ತವೆ’ ಎಂದು ಸ್ವತಃ ಐನ್‌ಸ್ಟೀನ್ 1916ರಲ್ಲೇ ಹೇಳಿದ್ದ. >>>> ಬೃಹತ್ ತಾರೆಯೊಂದು ತಾನಾಗಿ ಉಬ್ಬಿ ಉಬ್ಬಿ ಆಸ್ಫೋಟಿಸಿ ಕುಸಿದು ಕಪ್ಪುರಂಧ್ರವಾದಾಗ ಜಾಳಿಗೆ >>>> ಅಲ್ಲೋಲಕಲ್ಲೋಲವಾಗುತ್ತದೆ. >>>> >>>> ಗುರುತ್ವ ಕಂಪನ ಸುತ್ತೆಲ್ಲ ಹರಡುತ್ತದೆ. ಆಗ ಹೊಮ್ಮಿದ ಅಲೆಗಳು ಎಲ್ಲ ಗ್ರಹ, ತಾರೆ, >>>> ಗ್ಯಾಲಕ್ಸಿಗಳ ಮೂಲಕ ಹಾಯುತ್ತ, ನಮ್ಮ ಶರೀರದಲ್ಲೂ ಹೊಕ್ಕು ಹೊರಟು ಹೋಗುತ್ತಿರುತ್ತವೆ. >>>> ಭೂಮಿಯ ಮೂಲಕ ದೊಡ್ಡದ್ದೊಂದು ಅಲೆ ಹಾದು ಹೋಗುವಾಗ ಬೆಂಗಳೂರು ಮತ್ತು ಮಾಸ್ಕೊ ನಡುವಣ ಅಂತರ >>>> ಒಂದು ಕೂದಲೆಳೆಯಷ್ಟು ಕಡಿಮೆ ಆಗಬಹುದು. ಇಲ್ಲಿನ ಗಡಿಯಾರಕ್ಕೂ ಮತ್ತು ಮಾಸ್ಕೊ ಗಡಿಯಾರಕ್ಕೂ >>>> ಒಂದು ಮಿಲಿ ಸೆಕೆಂಡ್‌ನಷ್ಟು ವ್ಯತ್ಯಾಸ ಕಾಣಬಹುದು. >>>> >>>> ಅಂಥ ಸ್ಫೋಟ ತೀರಾ ತೀರಾ ದೂರದಲ್ಲಿ ಘಟಿಸುತ್ತದಾದ್ದರಿಂದ ನಮ್ಮಲ್ಲಿಗೆ ಬರುವಷ್ಟರಲ್ಲಿ >>>> ಅಲೆಗಳೂ ತೀರ ದುರ್ಬಲವಾಗುತ್ತವೆ. ಅದೂ ಒಳ್ಳೆಯದೇ. ಇಲ್ಲಾಂದರೆ ಆ ವಿಶಾಲ ವಿಶ್ವದಲ್ಲಿ >>>> ಒಂದಲ್ಲ ಒಂದು ಕಡೆ ಸ್ಫೋಟ, ಡಿಕ್ಕಿಗಳು ನಡೆಯುತ್ತಲೇ ಇರುವಾಗ ಅದರ ಕಂಪನದ ಅಲೆಗಳು ಇಲ್ಲಿಗೆ >>>> ಪದೇ ಪದೇ ಜೋರಾಗಿ ತಟ್ಟುತ್ತಿದ್ದರೆ ನಮ್ಮ ಗಡಿಯಾರಗಳೆಲ್ಲ ಅಸ್ತವ್ಯಸ್ತ ಆಗುತ್ತಿದ್ದವು. >>>> ಓಡುತ್ತಿರುವ ರೈಲು ಉದ್ದಗಿಡ್ಡ ಆಗಬಹುದಿತ್ತು. ಬಸ್ ಹತ್ತುವ ಮೊದಲೇ ಇಳಿಯುವ ತಾಣ >>>> ಬಂದಿರುತ್ತಿತ್ತು. >>>> >>>> ವಿಜ್ಞಾನಿಗಳು ಗುರುತ್ವ ತರಂಗಗಳನ್ನು ಗುರುತಿಸಲು ಯಾಕೆ ಹೆಣಗುತ್ತಿದ್ದಾರೆ ಎಂದರೆ, >>>> ಅಲೆ ಬಂದಿದ್ದು ಗೊತ್ತಾದರೆ, ಅದು ಎಲ್ಲಿಂದ ಬಂತು ಎಂದು ನೋಡಿ, ಅಲ್ಲಿ ಏನು ಘಟಿಸಿತು >>>> ಎಂಬುದರ ಚಿತ್ರಣ ಪಡೆಯಬಹುದು. ವಿಶ್ವದ ವೈಚಿತ್ರ್ಯಗಳನ್ನು ತೋರಿಸುವ ಈಗಿನ ಸಾಧನಗಳೆಲ್ಲ >>>> ಬೆಳಕು, ಎಕ್ಸ್‌ರೇ ಅಥವಾ ಇತರ ಇಲೆಕ್ಟ್ರೊಮೆಗ್ನೆಟಿಕ್ ತರಂಗಗಳನ್ನು ಆಧರಿಸಿವೆ. ಶ್ರವಣ >>>> ಸಾಧನಗಳು ಯಾವುವೂ ಇಲ್ಲ. ಒಂದರ್ಥದಲ್ಲಿ ನಾವು ಕಣ್ಣಿದ್ದ ಕಿವುಡರಾಗಿದ್ದೇವೆ. >>>> >>>> ಈಗ ಗುರುತ್ವ ಜಾಳಿಗೆಯ ಅಲುಗಾಟದಿಂದ ಹೊಮ್ಮುವ ಅಲೆಗಳು ಶ್ರವಣಮಾಧ್ಯಮದ ಮೂಲಕವೂ >>>> ಬ್ರಹ್ಮಾಂಡದ ಸುದ್ದಿಯನ್ನು ತರುವಂತಾದರೆ ಮನುಕುಲಕ್ಕೇ ಕಿವಿ ಬಂದಂತಾಗುತ್ತದೆ. ವಿರಾಟ್ >>>> ವಿಶ್ವದ ವಾದ್ಯಮೇಳ ನಮ್ಮ ಗ್ರಹಿಕೆಗೆ ಬಂದಂತಾಗುತ್ತದೆ. ಅದಕ್ಕೇ ಅಂಥ ಚಮತ್ಕಾರಿಕ ಅಲೆಗಳ >>>> ಪತ್ತೆಗೆಂದೇ ಭಾರೀ ಸಂಕೀರ್ಣ ಸಲಕರಣೆಗಳನ್ನು ಹೂಡಿಟ್ಟುಕೊಂಡು ಸಾವಿರಾರು ಸಂಶೋಧಕರು >>>> ಕಾಯುತ್ತಿದ್ದಾರೆ. >>>> >>>> ಗುರುತ್ವ ತರಂಗಗಳನ್ನು ಆಲಿಸಲೆಂದು ಅಮೆರಿಕದ ಎರಡು ಕಡೆ ‘ಲೈಗೊ’ ಹೆಸರಿನ >>>> ಶೋಧಯಂತ್ರಗಳನ್ನು ಹೂಡಲಾಗಿದೆ. ಲೈಗೊ ಎಂಬುದು ‘ಲೇಸರ್ ಇಂಟರ್ಫೆರೊಮೀಟರ್ ಗ್ರಾವಿಟೇಶನಲ್- >>>> ವೇವ್ ಒಬ್ಸರ್ವೇಟರಿ’ಯ ಸಂಕ್ಷಿಪ್ತ ಹೆಸರು. ಗಡಿಯಾರದಲ್ಲಿ ಸರಿಯಾಗಿ ಮೂರು ಗಂಟೆ (ಅಥವಾ 9 >>>> ಗಂಟೆ) ತೋರಿಸುವ ಎರಡು ಮುಳ್ಳುಗಳಂತೆ ಪರಸ್ಪರ ಲಂಬಕೋನದಲ್ಲಿ ನಾಲ್ಕು ನಾಲ್ಕು ಕಿಲೊಮೀಟರ್ >>>> ಉದ್ದದ ಎರಡು ನಿರ್ವಾತ ಕೊಳವೆಗಳನ್ನು ವಿಶಾಲ ಬಯಲಿನಲ್ಲಿ ಮಲಗಿಸಿದ್ದಾರೆ. >>>> >>>> ಈ ಕೊಳವೆಗಳ ಉದ್ದಳತೆಯಲ್ಲಿ ತುಸುವೇ ವ್ಯತ್ಯಾಸವಾದರೂ ಅಳೆಯಬಲ್ಲ ಅದ್ಭುತ ಲೇಸರ್ >>>> ಸಾಧನವನ್ನು ಅಲ್ಲಿ ಅಳವಡಿಸಲಾಗಿದೆ. ಲೇಸರ್ ಅದೆಷ್ಟು ಸೂಕ್ಷ್ಮವೆಂದರೆ 30 ಟ್ರಿಲಿಯನ್ >>>> ಕಿ.ಮೀ. ಆಚಿನ ನಕ್ಷತ್ರದ ದೂರವನ್ನು ಕೂಡ ಕೂದಲೆಳೆಯಷ್ಟೂ ವ್ಯತ್ಯಾಸ ಬಾರದಂತೆ ನಿಖರವಾಗಿ >>>> ಅಳೆಯುತ್ತದೆ. ಗುರುತ್ವದ ಅಲೆ ಲೈಗೊಕ್ಕೆ ಅಪ್ಪಳಿಸಿದ್ದೇ ಆದರೆ ಒಂದು ಕೊಳವೆ ತುಸು >>>> ಉದ್ದವಾಗುತ್ತದೆ, ಇನ್ನೊಂದು ತುಸು ಗಿಡ್ಡವಾಗುತ್ತದೆ. ಆಗಬೇಕು. ವೇಳೆಯೂ ಅದೇ ಪ್ರಮಾಣದಲ್ಲಿ >>>> ಒಂದರಲ್ಲಿ ತುಸು ಹಿಗ್ಗುತ್ತದೆ ಇನ್ನೊಂದರಲ್ಲಿ ತುಸು ಕುಗ್ಗುತ್ತದೆ. ಕುಗ್ಗಬೇಕು. ಈ >>>> ಪ್ರಯೋಗದ ವೀಕ್ಷಣೆಯಲ್ಲಿ ಭಾರತವೂ ಸೇರಿದಂತೆ 16 ದೇಶಗಳ ಒಂದು ಸಾವಿರ ವಿಜ್ಞಾನಿಗಳು >>>> ಪಾಲ್ಗೊಂಡಿದ್ದು, ಲೇಸರ್ ವರದಿಯ ವಿಶ್ಲೇಷಣೆಯಲ್ಲಿ ತೊಡಗಿಕೊಂಡಿದ್ದಾರೆ. >>>> >>>> ಕಳೆದ ಸೆಪ್ಟೆಂಬರ್ 14ರಂದು ಕೊಳವೆಯ ಉದ್ದ ತುಸು ಹೆಚ್ಚಿತೆಂಬ ಸಿಗ್ನಲ್ ಬಂತು. ತುಸು >>>> ಎಂದರೆ ಎಷ್ಟು ತುಸು? ಒಂದು ಪರಮಾಣುವಿನಲ್ಲಿರುವ ಒಂದು ಪ್ರೋಟಾನನ್ನು ಹತ್ತು ಸಾವಿರ ಭಾಗ >>>> ಮಾಡಿದಾಗ ಒಂದು ಭಾಗ ಎಷ್ಟು ಉದ್ದ ಇರುತ್ತದೊ ಅಷ್ಟು! ಆ ಇನ್ನೊಂದು ಕೊಳವೆ ಅಷ್ಟೇ >>>> ಪ್ರಮಾಣದಲ್ಲಿ ಸಂಕುಚಿತಗೊಂಡಿತು. >>>> >>>> ಗುರುತ್ವ ಅಲೆ ಅಪ್ಪಳಿಸಿದ್ದು ನಿಜವೆಂದು ನಂಬಬೇಕೆ? ಸಂಶಯಕ್ಕೆ ಆಸ್ಪದವಿದೆ. ಏಕೆಂದರೆ >>>> ಎಲ್ಲೋ ಸಮೀಪದಲ್ಲಿ ಎರಡು ಲಾರಿಗಳು ಡಿಕ್ಕಿ ಹೊಡೆದರೂ ಅಂಥ ವ್ಯತ್ಯಾಸ ಆಗಬಹುದು. ನೂರಾರು >>>> ಕಿ.ಮೀ. ಆಚೆ ಸಣ್ಣ ಭೂಕಂಪನ ಆಗಿದ್ದರೂ ಕೊಳವೆ ತುಸು ಕಂಪಿಸೀತು. ಅದಕ್ಕೇ ವಿಜ್ಞಾನಿಗಳು >>>> ತಕ್ಷಣ ಅಲ್ಲಿಂದ ಮೂರು ಸಾವಿರ ಕಿ.ಮೀ. ದೂರದ ವಾಷಿಂಗ್ಟನ್‌ನಲ್ಲಿ ಹೂಡಲಾಗಿದ್ದ ಇನ್ನೊಂದು >>>> ಅಂಥದ್ದೇ ಲೈಗೊ ಕೊಳವೆಗಳ ದಾಖಲೆ ನೋಡಿದರು. ಹೌದು, ಅಲ್ಲೂ ಅಷ್ಟೇ ಪ್ರಮಾಣದ ಗುರುತ್ವ ಅಲೆ >>>> ದಾಖಲಾಗಿತ್ತು. ಅಂದಮೇಲೆ ಅದು ಅಸಲೀ ಅಲೆಯೇ ಇರಬೇಕು. ಅಬ್ಬ! ಕೊನೆಗೂ ಸಾಕ್ಷ್ಯ ಸಿಕ್ಕಿತು. >>>> >>>> ಈ ಅಲೆ ಬಂದಿದ್ದು ಎಲ್ಲಿಂದ? 130 ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಭಾರೀ >>>> ಗಾತ್ರದ ಎರಡು ಕಪ್ಪುರಂಧ್ರಗಳು ಪರಸ್ಪರ ತೀರ ಸಮೀಪದಲ್ಲಿ ಘೋರಾಘೋರ ಆರ್ಭಟದೊಂದಿಗೆ >>>> ಘರ್ಷಿಸುತ್ತಿದ್ದವು. ಅವು ತಿಕ್ಕಾಡುತ್ತ ಹಠಾತ್ತಾಗಿ ಒಂದಾದಾಗ ಭಾರೀ ದೊಡ್ಡ ಗುರುತ್ವ ಅಲೆ >>>> ಹೊಮ್ಮಿತ್ತು. ನಮ್ಮ ಸೂರ್ಯನಿಗಿಂತ 65 ಪಟ್ಟು ಹೆಚ್ಚು ದ್ರವ್ಯಗಳಿದ್ದ ಆ ಜೋಡಿ ಕಾಯಗಳು >>>> ವಿಲೀನಗೊಂಡಾಗ ಮೂರು ಸೂರ್ಯರಷ್ಟು ಶಕ್ತಿ ಒಮ್ಮೆಗೇ ಬಿಡುಗಡೆಯಾಗಿ ಸುತ್ತೆಲ್ಲ ಗುರುತ್ವ >>>> ಅಲೆಗಳ ಸುನಾಮಿ ಎದ್ದಿತು. ಅದು ಬೆಳಕಲ್ಲ; ಕೊಳದಲ್ಲಿ ಡೈನಮೈಟ್ ಸಿಡಿದಾಗ ಹೊಮ್ಮುವಂತೆ >>>> ಗ್ರಾವಿಟಿ ಅಲೆಗಳು ವೃತ್ತಾಕಾರವಾಗಿ ಬೆಳಕಿನ ವೇಗದಲ್ಲಿ ವಿಸ್ತರಿಸುತ್ತ ದಾರಿಯುದ್ದಕ್ಕೂ >>>> ಕಾಲ ಮತ್ತು ಅವಕಾಶವನ್ನು ಹಿಗ್ಗಿಸಿ ಕುಗ್ಗಿಸುತ್ತ 130 ಕೋಟಿ ವರ್ಷಗಳ ನಂತರ ನಾವಿದ್ದ >>>> ಸೌರಮಂಡಲಕ್ಕೂ 14.9.2015ರಂದು ಅಪ್ಪಳಿಸಿ, ಲೈಗೊ ತೋಳುಗಳನ್ನೂ ಝೂಂಂ ಎಂದು ತಟ್ಟಿ >>>> ಹೊರಟುಹೋಯಿತು. >>>> >>>> ನಿಬ್ಬೆರಗಾದ ವಿಜ್ಞಾನಿಗಳು ಆ ಘಟನೆಯನ್ನು ಮತ್ತೆ ಮತ್ತೆ ಪರೀಕ್ಷಿಸಿ ನೋಡಿದರು. >>>> ಖಚಿತವೆಂದು ಅಪ್ಪಟ ಖಾತ್ರಿಯಾದಾಗ ಕುಣಿದು ಕುಪ್ಪಳಿಸಿ, ಮಾಧ್ಯಮಗಳೆದುರು ಕಳೆದ ವಾರ >>>> ಘೋಷಿಸಿದರು. ನಾಲ್ಕುನೂರು ವರ್ಷಗಳ ಹಿಂದೆ ಗೆಲಿಲಿಯೊ ಮೊದಲ ಬಾರಿ ದೂರದರ್ಶಕ ಕೊಳವೆಯನ್ನು >>>> ಆಕಾಶಕ್ಕೆ ಕಣ್ಣಿಟ್ಟ ನಂತರ ವಿಶ್ವದ ಚಿತ್ರಣವೇ ಬದಲಾದ ಹಾಗೆ, ಈಗ ಎರಡನೆಯ ಬಾರಿ ಬೇರೊಂದು >>>> ಜೋಡಿ ಕೊಳವೆಗಳು ಬ್ರಹ್ಮಾಂಡಕ್ಕೆ ಕಿವಿಗೊಟ್ಟಿವೆ. ಮನುಕುಲಕ್ಕೇ ಕಿವಿ ತೆರೆದಂತಾಗಿದೆ. >>>> >>>> Hareeshkumar K >>>> AM(PCM) >>>> GHS HUSKURU >>>> MALAVALLI TQ >>>> MANDYA DT 571475 >>>> mobile no 9880328224 >>>> email [email protected] >>>> >>>> -- >>>> 1. If a teacher wants to join STF, visit >>>> http://karnatakaeducation.org.in/KOER/en/index.php/Become_a_STF_groups_member >>>> 2. For STF training, visit KOER - >>>> http://karnatakaeducation.org.in/KOER/en/index.php >>>> 4. For Ubuntu 14.04 installation, visit >>>> http://karnatakaeducation.org.in/KOER/en/index.php/Kalpavriksha >>>> 4. For doubts on Ubuntu, public software, visit >>>> http://karnatakaeducation.org.in/KOER/en/index.php/Frequently_Asked_Questions >>>> 5. Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Why_public_software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> --- >>>> You received this message because you are subscribed to the Google >>>> Groups "Maths & Science STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/mathssciencestf. >>>> For more options, visit https://groups.google.com/d/optout. >>>> >>> -- >>> 1. If a teacher wants to join STF, visit >>> http://karnatakaeducation.org.in/KOER/en/index.php/Become_a_STF_groups_member >>> 2. For STF training, visit KOER - >>> http://karnatakaeducation.org.in/KOER/en/index.php >>> 4. For Ubuntu 14.04 installation, visit >>> http://karnatakaeducation.org.in/KOER/en/index.php/Kalpavriksha >>> 4. For doubts on Ubuntu, public software, visit >>> http://karnatakaeducation.org.in/KOER/en/index.php/Frequently_Asked_Questions >>> 5. Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Why_public_software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> --- >>> You received this message because you are subscribed to the Google >>> Groups "Maths & Science STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/mathssciencestf. >>> For more options, visit https://groups.google.com/d/optout. >>> >> -- >> 1. If a teacher wants to join STF, visit >> http://karnatakaeducation.org.in/KOER/en/index.php/Become_a_STF_groups_member >> 2. For STF training, visit KOER - >> http://karnatakaeducation.org.in/KOER/en/index.php >> 4. For Ubuntu 14.04 installation, visit >> http://karnatakaeducation.org.in/KOER/en/index.php/Kalpavriksha >> 4. For doubts on Ubuntu, public software, visit >> http://karnatakaeducation.org.in/KOER/en/index.php/Frequently_Asked_Questions >> 5. Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Why_public_software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> --- >> You received this message because you are subscribed to the Google Groups >> "Maths & Science STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/mathssciencestf. >> For more options, visit https://groups.google.com/d/optout. >> > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
