Thanku
On Feb 27, 2016 8:59 PM, "mahaveer chougale" <chougalemahave...@gmail.com>
wrote:

> Hareeshkumar sir super mahiti
> On 26-Feb-2016 1:08 AM, "HAREESHKUMAR K Agasanapura" <
> harihusk...@gmail.com> wrote:
>
>> http://m.prajavani.net/article/2016_02_25/389899
>>
>> *ಮನುಕುಲದ ಕಿವಿ ತೆರೆಸಿದ ಗುರುತ್ವ ಕಂಪನ*
>>
>> 25 Feb, 2016
>>
>> ನಾಗೇಶ್ ಹೆಗಡೆ
>>
>>
>> <https://www.facebook.com/sharer/sharer.php?u=http%3A%2F%2Fgoo.gl%2FDhOIqD>
>> <https://twitter.com/intent/tweet?text=%E0%B2%AE%E0%B2%A8%E0%B3%81%E0%B2%95%E0%B3%81%E0%B2%B2%E0%B2%A6+%E0%B2%95%E0%B2%BF%E0%B2%B5%E0%B2%BF+%E0%B2%A4%E0%B3%86%E0%B2%B0%E0%B3%86%E0%B2%B8%E0%B2%BF%E0%B2%A6+%E0%B2%97%E0%B3%81%E0%B2%B0%E0%B3%81%E0%B2%A4%E0%B3%8D%E0%B2%B5+%E0%B2%95%E0%B2%82%E0%B2%AA%E0%B2%A8+http%3A%2F%2Fgoo.gl%2FDhOIqD>
>> <https://plus.google.com/share?url=http%3A%2F%2Fgoo.gl%2FDhOIqD>
>> <http://www.pinterest.com/pin/find/?url=http%3A%2F%2Fgoo.gl%2FDhOIqD>
>> <http://www.linkedin.com/shareArticle?mini=true&title=%E0%B2%AE%E0%B2%A8%E0%B3%81%E0%B2%95%E0%B3%81%E0%B2%B2%E0%B2%A6+%E0%B2%95%E0%B2%BF%E0%B2%B5%E0%B2%BF+%E0%B2%A4%E0%B3%86%E0%B2%B0%E0%B3%86%E0%B2%B8%E0%B2%BF%E0%B2%A6+%E0%B2%97%E0%B3%81%E0%B2%B0%E0%B3%81%E0%B2%A4%E0%B3%8D%E0%B2%B5+%E0%B2%95%E0%B2%82%E0%B2%AA%E0%B2%A8+&url=http%3A%2F%2Fgoo.gl%2FDhOIqD>
>>
>> ಕಳೆದ ಗುರುವಾರ ಈ ಭೂಮಿಯ ಮೇಲಿನ ಎಲ್ಲಭೌತ ವಿಜ್ಞಾನಿಗಳಿಗೆ ವಿಶೇಷ ಗುರುಬಲ ಬಂತು. ನಾನಾ
>> ದೇಶಗಳ ಸಾವಿರಾರು ವಿಜ್ಞಾನಿಗಳು ಏಕಕಾಲಕ್ಕೆ ’ಉಊಊಊಂವ್’ ಎಂದು ಗುರುತ್ವ ಅಲೆಗಳ ನಾದವನ್ನು
>> ಅನುಕರಿಸಿ  ಹರ್ಷೋದ್ಗಾರ ಹೊಮ್ಮಿಸಿದರು. ಅವರ ಸಂತಸಕ್ಕೆ ಕಾರಣವೇನೆಂದರೆ, ಈ ವಿಶ್ವದಲ್ಲಿ
>> ಗುರುತ್ವ ತರಂಗಗಳಿವೆ ಎಂಬುದು ಇದೇ ಮೊದಲ ಬಾರಿಗೆ ಸಾಬೀತಾಯಿತು. ಇಂಥ ತರಂಗಗಳು
>> ಇರಲೇಬೇಕೆಂದು ಆಲ್ಬರ್ಟ್ ಐನ್‌ಸ್ಟೀನ್ ಸರಿಯಾಗಿ ನೂರು ವರ್ಷಗಳ ಹಿಂದೆ ಗಣಿತ ಸೂತ್ರಗಳ
>> ಆಧಾರದಲ್ಲಿ ಪ್ರತಿಪಾದಿಸಿದ್ದು ಕೊನೆಗೂ ಸತ್ಯವಾಯಿತೆಂಬ ಸಂತಸದ ಅಲೆ ಅದಾಗಿತ್ತು.
>>
>> ಅಲೆ ಒಂದೆರಡಲ್ಲ; ನೊಬೆಲ್ ಪ್ರಶಸ್ತಿಗೆ ನೇರಾನೇರ ಅರ್ಹವಾಗಬಲ್ಲ ಸಂಶೋಧನೆ
>> ಸಾಧ್ಯವಾಯಿತೆಂದು ಕೆಲವರಲ್ಲಿ ಸಂಭ್ರಮದ ಅಲೆ ಹೊಮ್ಮಿದರೆ, ಇನ್ನು ಕೆಲವರಲ್ಲಿ ವಿಶ್ವದ
>> ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳಲು ಹೊಸದೊಂದು ಅಸ್ತ್ರ ಲಭಿಸಿತೆಂಬ ಆನಂದದ ಅಲೆಯನ್ನೂ ಅದು
>> ಹೊಮ್ಮಿಸಿತು. ಭೌತವಿಜ್ಞಾನದ ಘನ ಪಂಡಿತರಿಗೆ, ಉಪನ್ಯಾಸಕರಿಗೆ, ಚರ್ಚಾಪಟುಗಳಿಗೆ,
>> ಗ್ರಂಥಕರ್ತರಿಗೆ, ಪ್ರಕಾಶಕರಿಗೆ, ಹೊಸ ಅವಕಾಶಗಳ ಬಾಗಿಲು ತೆರೆದುಕೊಂಡಿತೆಂದು ಸಂತಸದ ಅಲೆ
>> ಹೊಮ್ಮಿತು. ಪಕ್ಕದ ಪಾಕಿಸ್ತಾನದಲ್ಲೂ ಸಂತಸದ ಅಲೆ ಎದ್ದಿತು; ಏಕೆಂದರೆ ಗುರುತ್ವ ತರಂಗವನ್ನು
>> ಪತ್ತೆ ಹಚ್ಚಿದ ತಂಡದಲ್ಲಿ ಪಾಕಿಸ್ತಾನಿ ಮೂಲದ ನೆರ್ಗಿಸ್ ಮಾವೆಲ್‌ವಾಲಾ ಎಂಬ ಸುಂದರ ಪಾರ್ಸಿ
>> ಯುವತಿಯೂ ಇದ್ದಳೆಂಬುದೇ ಅಲ್ಲಿನ ಪ್ರಜೆಗಳಿಗೆ ಉದ್ವೇಗದ ಸಂಗತಿಯಾಗಿತ್ತು.
>>
>> ನಿಜ ಹೇಳಬೇಕೆಂದರೆ, ಈ ಗುರುತ್ವ ತರಂಗ ಅಂದರೆ ಏನು, ಅದರಿಂದ ಏನೇನಾಗುತ್ತದೆ, ಅದರ
>> ಪ್ರಯೋಜನ ಏನು ಎನ್ನುವುದು ಯಾವ ಸಾಮಾನ್ಯ ಪಾಮರರಿಗೂ ಅರ್ಥವಾಗುವ ವಿಷಯ ಅಲ್ಲವೇ ಅಲ್ಲ. ಮೂರು
>> ವರ್ಷಗಳ ಹಿಂದೆ ಹಿಗ್ಸ್ ಬೋಸಾನ್ ಕಣಗಳು ಪತ್ತೆಯಾದಾಗ ‘ದೇವಕಣ’ಗಳೇ ಪ್ರತ್ಯಕ್ಷವಾದವು ಎಂದು
>> ಮಾಧ್ಯಮಗಳಲ್ಲಿ ಎಷ್ಟೊಂದು ಸಂಭ್ರಮ ಪ್ರಕಟವಾಗಿತ್ತಲ್ಲ? ವಿಜ್ಞಾನದ ಚಮತ್ಕಾರವೇ ಅಂಥದ್ದು.
>> ಗಹನ ನಿಗೂಢಗಳು ಅರ್ಥವಾಗದಿದ್ದರೇನು, ಅದರಿಂದ ಹೊಮ್ಮುವ ಸಂಭ್ರಮ ಏನಿದೆ, ಅದು ದೇಶ
>> ಕಾಲಗಳನ್ನು ಮೀರಿ ಗುರುತ್ವದ ಅಲೆಯ ಹಾಗೆ ಎಲ್ಲರನ್ನೂ ತಟ್ಟುತ್ತದೆ.
>>
>> ಸಾಮಾನ್ಯ ಅರ್ಥದಲ್ಲಿ ಗುರುತ್ವ ಎಂದರೆ ಏನೆಂಬುದು ನಮಗೆಲ್ಲ ಗೊತ್ತೇ ಇದೆ. ಮೇಲಕ್ಕೆ ಎಸೆದ
>> ಚಂಡು ಅಲ್ಲೇ ನಿಲ್ಲುವ ಬದಲು ಕೆಳಕ್ಕೆ ಏಕೆ ಬೀಳುತ್ತದೆ ಎಂದು ಕೇಳಿದರೆ, ‘ಭೂಮಿಗೆ
>> ಗುರುತ್ವಾಕರ್ಷಣೆ ಇದೆ, ಅದು ಎಲ್ಲ ವಸ್ತುಗಳನ್ನೂ ತನ್ನತ್ತ ಸೆಳೆಯುತ್ತದೆ’ ಎಂದು ಹೈಸ್ಕೂಲ್
>> ವಿದ್ಯಾರ್ಥಿಗಳೂ ಹೇಳುತ್ತಾರೆ. ಏಕೆಂದರೆ, ಐಸ್ಯಾಕ್ ನ್ಯೂಟನ್‌ನ ತಲೆಯ ಮೇಲೆ ಸೇಬು ಬಿದ್ದಾಗ
>> ಈ ಸಂಗತಿ ಆತನಿಗೆ ಹೊಳೆಯಿತೆಂದು ಹಿಂದಿನವರು ಹೇಳುತ್ತ ಬಂದಿದ್ದಾರೆ. ಸೇಬು ಆತನ ತಲೆಯ
>> ಮೇಲೆಯೇ ಬಿತ್ತೊ, ದೂರದಲ್ಲೊ ಅಥವಾ ಅವನ ಕನಸಿನಲ್ಲಿ ಬಿತ್ತೊ ಆ ವಿಷಯ ಹೇಗೂ ಇರಲಿ,
>> ಸಾಮಾನ್ಯರಿಗೆ ಹೊಳೆಯದ ಸಂಗತಿ ಅವನಿಗೆ ಹೊಳೆಯಿತು. ಅದೇ ಗುರುತ್ವ ಬಲದಿಂದಾಗಿಯೇ ಸೂರ್ಯನ
>> ಸುತ್ತ ಗ್ರಹಗಳು ಸುತ್ತುತ್ತವೆ ಎಂದು ನ್ಯೂಟನ್ ಹೇಳಿದ್ದನ್ನು ಎಲ್ಲರೂ ಒಪ್ಪಿಕೊಂಡಿದ್ದರು.
>>
>> ಐನ್‌ಸ್ಟೀನ್ ಮಂಡಿಸಿದ ಸಾಪೇಕ್ಷ ಸಿದ್ಧಾಂತದಲ್ಲಿ ಗುರುತ್ವಕ್ಕೆ ಬೇರೆಯದೇ ಆಯಾಮ ಬಂತು.
>> ಗುರುತ್ವ ಬಲ (ಗ್ರಾವಿಟಿ) ಎಂಬುದು ಜಾಳಿಗೆಯಂತೆ ಇಡೀ ವಿಶ್ವವನ್ನು ಆವರಿಸಿದೆ ಎಂದು ಆತ
>> ಪ್ರತಿಪಾದಿಸಿದ. ಎಲ್ಲೋ ದೂರದಲ್ಲಿ, ನಮ್ಮ ಸೌರಮಂಡಲಕ್ಕೆ ಸಂಬಂಧವೇ ಇಲ್ಲದಂತೆ ದೂರದ
>> ಗ್ಯಾಲಕ್ಸಿಯಲ್ಲಿ ಒಂದು ತಾರೆ ಸ್ಫೋಟಗೊಂಡರೂ ಆಗ ಏಳುವ ತುಮುಲಗಳು ಅಲೆಅಲೆಯಾಗಿ
>> ವಿಶ್ವಕ್ಕೆಲ್ಲ ಹರಡುತ್ತವೆ ಎಂದ.
>>
>> ಅಷ್ಟೇ ಅಲ್ಲ, ಈ ತರಂಗ ಸ್ಪೇಸ್‌ಟೈಮ್ (ದೇಶಕಾಲ) ಎಂಬ ನಾಲ್ಕನೇ ಆಯಾಮದಲ್ಲಿದೆ ಎಂತಲೂ
>> ಹೇಳಿದ. ಅದನ್ನು ಅರ್ಥ ಮಾಡಿಕೊಳ್ಳಲು ತಿಣುಕುವವರಿಗಾಗಿ ಒಂದು ರೂಪಕವೂ ಸಿದ್ಧವಾಯಿತು.
>> ಸರ್ಕಸ್ ಡೇರೆಗಳಲ್ಲಿ ಎತ್ತರಕ್ಕೆ ಒಂದು ಬಲೆಯನ್ನು ಬಿಗಿಯಾಗಿ ಕಟ್ಟಿರುತ್ತಾರೆ ತಾನೆ?
>> ಜೋಕಾಲಿ ಜೀಕುವವರು, ಜೋಕರ್‌ಗಳು ಅದರ ಮೇಲೆ ಕುಪ್ಪಳಿಸಿ ಲಾಗಾ ಹೊಡೆಯುತ್ತಿರುತ್ತಾರೆ.
>>
>> ಅಂಥ ಜಾಳಿಗೆಯ ಮೇಲೊಂದು ಭಾರವಾದ ಗುಂಡನ್ನು ಇಟ್ಟರೆ ಅಲ್ಲೊಂದು ಗುಳಿಯನ್ನು
>> ಸೃಷ್ಟಿಸಿಕೊಂಡು ಅದರಲ್ಲಿ ಕೂರುತ್ತದೆ. ಗುಂಡಿನ ಭಾರ ಹೆಚ್ಚಿದ್ದಷ್ಟೂ ಗುಳಿಯ ಆಳ ಹೆಚ್ಚಿಗೆ
>> ಇರುತ್ತದೆ. ಅದರತ್ತ ಇನ್ನೊಂದು ಚಿಕ್ಕ ಗುಂಡನ್ನು ಉರುಳಿಸಿದರೆ ಅದು ನೇರವಾಗಿ ಗುಳಿಯೊಳಕ್ಕೆ
>> ಹೋಗುವ ಬದಲು ವೃತ್ತಾಕಾರವಾಗಿ ಚಲಿಸುತ್ತ ಕ್ರಮೇಣ ಗುಳಿಯಲ್ಲಿನ ದೊಡ್ಡ ಗುಂಡಿನ ಬಳಿ
>> ಸೇರುತ್ತದೆ. ಹಾಗೇ ಭಾರೀ ನಕ್ಷತ್ರಗಳು ಅಥವಾ ಭಾರೀ ಗ್ಯಾಲಕ್ಸಿಗಳು ಇದ್ದಲ್ಲೆಲ್ಲ
>> ಸ್ಪೇಸ್‌ಟೈಮ್ ಜಾಲದಲ್ಲಿ ಇಂಥ ಗುಳಿಗಳು ಏರ್ಪಡುತ್ತವೆಂದೂ ಗ್ರಹಗಳು ಅಲ್ಲೇ ಗಿರಕಿ
>> ಹೊಡೆಯುತ್ತಿರುತ್ತವೆ ಎಂತಲೂ ಐನ್‌ಸ್ಟೀನ್ ಅನುಯಾಯಿಗಳು ತರ್ಕಿಸಿದರು.
>>
>> ಇಡೀ ವಿಶ್ವವನ್ನು ಸ್ಪೇಸ್‌ಟೈಮ್ ಜಾಳಿಗೆ ಆವರಿಸಿದೆ ಎಂಬುದಕ್ಕೆ ಪರೋಕ್ಷ ಉದಾಹರಣೆಗಳು
>> ಒಂದರ ನಂತರ ಒಂದರಂತೆ ಲಭಿಸುತ್ತ ಹೋದವು (ಹಾಗೆ ಸಾಕ್ಷ್ಯವನ್ನು ಒದಗಿಸಿದವರಿಗೆ
>> ಪಿಎಚ್‌ಡಿಗಳೂ ನೊಬೆಲ್‌ಗಳೂ ಲಭಿಸುತ್ತ ಬಂದವು). ಉದಾಹರಣೆಗೆ: ದೊಡ್ಡ ಗ್ಯಾಲಕ್ಸಿಯ
>> ಹಿಂಭಾಗದಲ್ಲಿ ಪ್ರಖರ ತಾರೆಗಳ ಇನ್ನೊಂದು ಗುಂಪು ಇದೆಯೆಂದುಕೊಳ್ಳಿ. ಅವುಗಳಿಂದ ಹೊರಟ ಬೆಳಕು
>> ನೇರವಾಗಿ ನಮ್ಮತ್ತ ಬರುವ ಬದಲು ತನ್ನೆದುರಿನ ಗ್ಯಾಲಕ್ಸಿಯ ಗುರುತ್ವ ಕುಳಿಯನ್ನು
>> ಸುತ್ತುಹೊಡೆದು ಬರುತ್ತದೆ ಎಂಬುದು ಗೊತ್ತಾಯಿತು.
>>
>> ಅಂದರೆ, ಗ್ಯಾಲಕ್ಸಿಗಳು ನಿರ್ಮಿಸಿಕೊಂಡ ಕುಳಿಯೇ ಒಂಥರಾ ಮಸೂರದಂತೆ ಇರುತ್ತದೆ ಎಂಬುದು
>> ಸಾಬೀತಾಯಿತು. ಅವುಗಳ ಹಿಂಭಾಗದಲ್ಲಿದ್ದ ತಾರೆಗಳ ದೂರವನ್ನು ನಿಖರವಾಗಿ ಅಳೆಯುವುದು
>> ಸಾಧ್ಯವಾಯಿತು. ನಮ್ಮದೇ ಬುಧ ಗ್ರಹ ನ್ಯೂಟನ್ ನಿಯಮವನ್ನು ಅನುಸರಿಸುತ್ತ ಸೂರ್ಯನನ್ನು
>> ಸುತ್ತುಹೊಡೆಯುವ ಬದಲು ತನ್ನ ಕಕ್ಷೆಯಲ್ಲಿ ಆಗಾಗ ಏಕೆ ತಳಕಾ ಬಳಕಾ ಆಗುತ್ತದೆ ಎಂಬುದು
>> ಹಿಂದೆಲ್ಲ ದೊಡ್ಡ ಪ್ರಶ್ನೆಯಾಗಿತ್ತು.
>>
>> ಯಾವುದೋ ಅಗೋಚರ ಇನ್ನೊಂದು ಗ್ರಹ ಅಲ್ಲಿರಬೇಕು ಎಂದು ಅದನ್ನು ಶೋಧಿಸಲು ಏನೆಲ್ಲ ವಿಫಲ
>> ಯತ್ನಗಳು ನಡೆದಿದ್ದವು. ಆದರೆ ಐನ್‌ಸ್ಟೀನ್‌ನ ಸ್ಪೇಸ್‌ಟೈಮ್ ಜಾಲದಲ್ಲಿ ಸೂರ್ಯನನ್ನು
>> ಸಿಲುಕಿಸಿ ನೋಡಿದಾಗ ಬುಧಗ್ರಹದ ಎರ್ರಾಬಿರ್ರಿ ಚಾಲನೆಗೆ ಉತ್ತರ ಸಿಕ್ಕಿತ್ತು.
>>
>> ಈ ಸ್ಪೇಸ್‌ಟೈಮ್ ಜಾಳಿಗೆ ಎಲ್ಲೆಡೆ ಹರಡಿರುವುದರಿಂದ ಇಬ್ಬರು ಜಟ್ಟಿಗಳು ಗುದ್ದಾಡಿಕೊಂಡರೂ
>> ಜಾಳಿಗೆ ಅದುರಿ ಗುರುತ್ವ ಅಲೆಗಳು ಏಳುತ್ತವೆ. ಗೊತ್ತೇ ಆಗುವುದಿಲ್ಲ. ಗುರುಗ್ರಹಕ್ಕೆ
>> ಧೂಮಕೇತು ಅಪ್ಪಳಿಸಿದಾಗಲೂ ಏಳುತ್ತವೆ. ಆದರೆ ’ಅವು ಪತ್ತೆ ಹಚ್ಚಲು ಸಾಧ್ಯವಾಗದಷ್ಟು
>> ಸೂಕ್ಷ್ಮವಾಗಿರುತ್ತವೆ’ ಎಂದು ಸ್ವತಃ ಐನ್‌ಸ್ಟೀನ್ 1916ರಲ್ಲೇ ಹೇಳಿದ್ದ. ಬೃಹತ್
>> ತಾರೆಯೊಂದು ತಾನಾಗಿ ಉಬ್ಬಿ ಉಬ್ಬಿ ಆಸ್ಫೋಟಿಸಿ ಕುಸಿದು ಕಪ್ಪುರಂಧ್ರವಾದಾಗ ಜಾಳಿಗೆ
>> ಅಲ್ಲೋಲಕಲ್ಲೋಲವಾಗುತ್ತದೆ.
>>
>> ಗುರುತ್ವ ಕಂಪನ ಸುತ್ತೆಲ್ಲ ಹರಡುತ್ತದೆ. ಆಗ ಹೊಮ್ಮಿದ ಅಲೆಗಳು ಎಲ್ಲ ಗ್ರಹ, ತಾರೆ,
>> ಗ್ಯಾಲಕ್ಸಿಗಳ ಮೂಲಕ ಹಾಯುತ್ತ, ನಮ್ಮ ಶರೀರದಲ್ಲೂ ಹೊಕ್ಕು ಹೊರಟು ಹೋಗುತ್ತಿರುತ್ತವೆ.
>> ಭೂಮಿಯ ಮೂಲಕ ದೊಡ್ಡದ್ದೊಂದು ಅಲೆ ಹಾದು ಹೋಗುವಾಗ ಬೆಂಗಳೂರು ಮತ್ತು ಮಾಸ್ಕೊ ನಡುವಣ ಅಂತರ
>> ಒಂದು ಕೂದಲೆಳೆಯಷ್ಟು ಕಡಿಮೆ ಆಗಬಹುದು. ಇಲ್ಲಿನ ಗಡಿಯಾರಕ್ಕೂ ಮತ್ತು ಮಾಸ್ಕೊ ಗಡಿಯಾರಕ್ಕೂ
>> ಒಂದು ಮಿಲಿ ಸೆಕೆಂಡ್‌ನಷ್ಟು ವ್ಯತ್ಯಾಸ ಕಾಣಬಹುದು.
>>
>> ಅಂಥ ಸ್ಫೋಟ ತೀರಾ ತೀರಾ ದೂರದಲ್ಲಿ ಘಟಿಸುತ್ತದಾದ್ದರಿಂದ ನಮ್ಮಲ್ಲಿಗೆ ಬರುವಷ್ಟರಲ್ಲಿ
>> ಅಲೆಗಳೂ ತೀರ ದುರ್ಬಲವಾಗುತ್ತವೆ. ಅದೂ ಒಳ್ಳೆಯದೇ. ಇಲ್ಲಾಂದರೆ ಆ ವಿಶಾಲ ವಿಶ್ವದಲ್ಲಿ
>> ಒಂದಲ್ಲ ಒಂದು ಕಡೆ ಸ್ಫೋಟ, ಡಿಕ್ಕಿಗಳು ನಡೆಯುತ್ತಲೇ ಇರುವಾಗ ಅದರ ಕಂಪನದ ಅಲೆಗಳು ಇಲ್ಲಿಗೆ
>> ಪದೇ ಪದೇ ಜೋರಾಗಿ ತಟ್ಟುತ್ತಿದ್ದರೆ ನಮ್ಮ ಗಡಿಯಾರಗಳೆಲ್ಲ ಅಸ್ತವ್ಯಸ್ತ ಆಗುತ್ತಿದ್ದವು.
>> ಓಡುತ್ತಿರುವ ರೈಲು ಉದ್ದಗಿಡ್ಡ ಆಗಬಹುದಿತ್ತು. ಬಸ್ ಹತ್ತುವ ಮೊದಲೇ ಇಳಿಯುವ ತಾಣ
>> ಬಂದಿರುತ್ತಿತ್ತು.
>>
>> ವಿಜ್ಞಾನಿಗಳು ಗುರುತ್ವ ತರಂಗಗಳನ್ನು ಗುರುತಿಸಲು ಯಾಕೆ ಹೆಣಗುತ್ತಿದ್ದಾರೆ ಎಂದರೆ, ಅಲೆ
>> ಬಂದಿದ್ದು ಗೊತ್ತಾದರೆ, ಅದು ಎಲ್ಲಿಂದ ಬಂತು ಎಂದು ನೋಡಿ, ಅಲ್ಲಿ ಏನು ಘಟಿಸಿತು ಎಂಬುದರ
>> ಚಿತ್ರಣ ಪಡೆಯಬಹುದು. ವಿಶ್ವದ ವೈಚಿತ್ರ್ಯಗಳನ್ನು ತೋರಿಸುವ ಈಗಿನ ಸಾಧನಗಳೆಲ್ಲ ಬೆಳಕು,
>> ಎಕ್ಸ್‌ರೇ ಅಥವಾ ಇತರ ಇಲೆಕ್ಟ್ರೊಮೆಗ್ನೆಟಿಕ್ ತರಂಗಗಳನ್ನು ಆಧರಿಸಿವೆ. ಶ್ರವಣ ಸಾಧನಗಳು
>> ಯಾವುವೂ ಇಲ್ಲ. ಒಂದರ್ಥದಲ್ಲಿ ನಾವು ಕಣ್ಣಿದ್ದ ಕಿವುಡರಾಗಿದ್ದೇವೆ.
>>
>> ಈಗ ಗುರುತ್ವ ಜಾಳಿಗೆಯ ಅಲುಗಾಟದಿಂದ ಹೊಮ್ಮುವ ಅಲೆಗಳು ಶ್ರವಣಮಾಧ್ಯಮದ ಮೂಲಕವೂ
>> ಬ್ರಹ್ಮಾಂಡದ ಸುದ್ದಿಯನ್ನು ತರುವಂತಾದರೆ ಮನುಕುಲಕ್ಕೇ ಕಿವಿ ಬಂದಂತಾಗುತ್ತದೆ. ವಿರಾಟ್
>> ವಿಶ್ವದ ವಾದ್ಯಮೇಳ ನಮ್ಮ ಗ್ರಹಿಕೆಗೆ ಬಂದಂತಾಗುತ್ತದೆ. ಅದಕ್ಕೇ ಅಂಥ ಚಮತ್ಕಾರಿಕ ಅಲೆಗಳ
>> ಪತ್ತೆಗೆಂದೇ ಭಾರೀ ಸಂಕೀರ್ಣ ಸಲಕರಣೆಗಳನ್ನು ಹೂಡಿಟ್ಟುಕೊಂಡು ಸಾವಿರಾರು ಸಂಶೋಧಕರು
>> ಕಾಯುತ್ತಿದ್ದಾರೆ.
>>
>> ಗುರುತ್ವ ತರಂಗಗಳನ್ನು ಆಲಿಸಲೆಂದು ಅಮೆರಿಕದ ಎರಡು ಕಡೆ ‘ಲೈಗೊ’ ಹೆಸರಿನ
>> ಶೋಧಯಂತ್ರಗಳನ್ನು ಹೂಡಲಾಗಿದೆ. ಲೈಗೊ ಎಂಬುದು ‘ಲೇಸರ್ ಇಂಟರ್ಫೆರೊಮೀಟರ್ ಗ್ರಾವಿಟೇಶನಲ್-
>> ವೇವ್ ಒಬ್ಸರ್ವೇಟರಿ’ಯ ಸಂಕ್ಷಿಪ್ತ ಹೆಸರು. ಗಡಿಯಾರದಲ್ಲಿ ಸರಿಯಾಗಿ ಮೂರು ಗಂಟೆ (ಅಥವಾ 9
>> ಗಂಟೆ) ತೋರಿಸುವ ಎರಡು ಮುಳ್ಳುಗಳಂತೆ ಪರಸ್ಪರ ಲಂಬಕೋನದಲ್ಲಿ ನಾಲ್ಕು ನಾಲ್ಕು ಕಿಲೊಮೀಟರ್
>> ಉದ್ದದ ಎರಡು ನಿರ್ವಾತ ಕೊಳವೆಗಳನ್ನು ವಿಶಾಲ ಬಯಲಿನಲ್ಲಿ ಮಲಗಿಸಿದ್ದಾರೆ.
>>
>> ಈ ಕೊಳವೆಗಳ ಉದ್ದಳತೆಯಲ್ಲಿ ತುಸುವೇ ವ್ಯತ್ಯಾಸವಾದರೂ ಅಳೆಯಬಲ್ಲ ಅದ್ಭುತ ಲೇಸರ್
>> ಸಾಧನವನ್ನು ಅಲ್ಲಿ ಅಳವಡಿಸಲಾಗಿದೆ. ಲೇಸರ್ ಅದೆಷ್ಟು ಸೂಕ್ಷ್ಮವೆಂದರೆ 30 ಟ್ರಿಲಿಯನ್
>> ಕಿ.ಮೀ. ಆಚಿನ ನಕ್ಷತ್ರದ ದೂರವನ್ನು ಕೂಡ ಕೂದಲೆಳೆಯಷ್ಟೂ ವ್ಯತ್ಯಾಸ ಬಾರದಂತೆ ನಿಖರವಾಗಿ
>> ಅಳೆಯುತ್ತದೆ. ಗುರುತ್ವದ ಅಲೆ ಲೈಗೊಕ್ಕೆ ಅಪ್ಪಳಿಸಿದ್ದೇ ಆದರೆ ಒಂದು ಕೊಳವೆ ತುಸು
>> ಉದ್ದವಾಗುತ್ತದೆ, ಇನ್ನೊಂದು ತುಸು ಗಿಡ್ಡವಾಗುತ್ತದೆ. ಆಗಬೇಕು. ವೇಳೆಯೂ ಅದೇ ಪ್ರಮಾಣದಲ್ಲಿ
>> ಒಂದರಲ್ಲಿ ತುಸು ಹಿಗ್ಗುತ್ತದೆ ಇನ್ನೊಂದರಲ್ಲಿ ತುಸು ಕುಗ್ಗುತ್ತದೆ. ಕುಗ್ಗಬೇಕು. ಈ
>> ಪ್ರಯೋಗದ ವೀಕ್ಷಣೆಯಲ್ಲಿ ಭಾರತವೂ ಸೇರಿದಂತೆ 16 ದೇಶಗಳ ಒಂದು ಸಾವಿರ ವಿಜ್ಞಾನಿಗಳು
>> ಪಾಲ್ಗೊಂಡಿದ್ದು, ಲೇಸರ್ ವರದಿಯ ವಿಶ್ಲೇಷಣೆಯಲ್ಲಿ ತೊಡಗಿಕೊಂಡಿದ್ದಾರೆ.
>>
>> ಕಳೆದ ಸೆಪ್ಟೆಂಬರ್ 14ರಂದು ಕೊಳವೆಯ ಉದ್ದ ತುಸು ಹೆಚ್ಚಿತೆಂಬ ಸಿಗ್ನಲ್ ಬಂತು. ತುಸು
>> ಎಂದರೆ ಎಷ್ಟು ತುಸು? ಒಂದು ಪರಮಾಣುವಿನಲ್ಲಿರುವ ಒಂದು ಪ್ರೋಟಾನನ್ನು ಹತ್ತು ಸಾವಿರ ಭಾಗ
>> ಮಾಡಿದಾಗ ಒಂದು ಭಾಗ ಎಷ್ಟು ಉದ್ದ ಇರುತ್ತದೊ ಅಷ್ಟು! ಆ ಇನ್ನೊಂದು ಕೊಳವೆ ಅಷ್ಟೇ
>> ಪ್ರಮಾಣದಲ್ಲಿ ಸಂಕುಚಿತಗೊಂಡಿತು.
>>
>> ಗುರುತ್ವ ಅಲೆ ಅಪ್ಪಳಿಸಿದ್ದು ನಿಜವೆಂದು ನಂಬಬೇಕೆ? ಸಂಶಯಕ್ಕೆ ಆಸ್ಪದವಿದೆ. ಏಕೆಂದರೆ
>> ಎಲ್ಲೋ ಸಮೀಪದಲ್ಲಿ ಎರಡು ಲಾರಿಗಳು ಡಿಕ್ಕಿ ಹೊಡೆದರೂ ಅಂಥ ವ್ಯತ್ಯಾಸ ಆಗಬಹುದು. ನೂರಾರು
>> ಕಿ.ಮೀ. ಆಚೆ ಸಣ್ಣ ಭೂಕಂಪನ ಆಗಿದ್ದರೂ ಕೊಳವೆ ತುಸು ಕಂಪಿಸೀತು. ಅದಕ್ಕೇ ವಿಜ್ಞಾನಿಗಳು
>> ತಕ್ಷಣ ಅಲ್ಲಿಂದ ಮೂರು ಸಾವಿರ ಕಿ.ಮೀ. ದೂರದ ವಾಷಿಂಗ್ಟನ್‌ನಲ್ಲಿ ಹೂಡಲಾಗಿದ್ದ ಇನ್ನೊಂದು
>> ಅಂಥದ್ದೇ ಲೈಗೊ ಕೊಳವೆಗಳ ದಾಖಲೆ ನೋಡಿದರು. ಹೌದು, ಅಲ್ಲೂ ಅಷ್ಟೇ ಪ್ರಮಾಣದ ಗುರುತ್ವ ಅಲೆ
>> ದಾಖಲಾಗಿತ್ತು. ಅಂದಮೇಲೆ ಅದು ಅಸಲೀ ಅಲೆಯೇ ಇರಬೇಕು. ಅಬ್ಬ! ಕೊನೆಗೂ ಸಾಕ್ಷ್ಯ ಸಿಕ್ಕಿತು.
>>
>> ಈ ಅಲೆ ಬಂದಿದ್ದು ಎಲ್ಲಿಂದ? 130 ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಭಾರೀ ಗಾತ್ರದ
>> ಎರಡು ಕಪ್ಪುರಂಧ್ರಗಳು ಪರಸ್ಪರ ತೀರ ಸಮೀಪದಲ್ಲಿ ಘೋರಾಘೋರ ಆರ್ಭಟದೊಂದಿಗೆ
>> ಘರ್ಷಿಸುತ್ತಿದ್ದವು. ಅವು ತಿಕ್ಕಾಡುತ್ತ ಹಠಾತ್ತಾಗಿ ಒಂದಾದಾಗ ಭಾರೀ ದೊಡ್ಡ ಗುರುತ್ವ ಅಲೆ
>> ಹೊಮ್ಮಿತ್ತು. ನಮ್ಮ ಸೂರ್ಯನಿಗಿಂತ 65 ಪಟ್ಟು ಹೆಚ್ಚು ದ್ರವ್ಯಗಳಿದ್ದ ಆ ಜೋಡಿ ಕಾಯಗಳು
>> ವಿಲೀನಗೊಂಡಾಗ ಮೂರು ಸೂರ್ಯರಷ್ಟು ಶಕ್ತಿ ಒಮ್ಮೆಗೇ ಬಿಡುಗಡೆಯಾಗಿ ಸುತ್ತೆಲ್ಲ ಗುರುತ್ವ
>> ಅಲೆಗಳ ಸುನಾಮಿ ಎದ್ದಿತು. ಅದು ಬೆಳಕಲ್ಲ; ಕೊಳದಲ್ಲಿ ಡೈನಮೈಟ್ ಸಿಡಿದಾಗ ಹೊಮ್ಮುವಂತೆ
>> ಗ್ರಾವಿಟಿ ಅಲೆಗಳು ವೃತ್ತಾಕಾರವಾಗಿ ಬೆಳಕಿನ ವೇಗದಲ್ಲಿ ವಿಸ್ತರಿಸುತ್ತ ದಾರಿಯುದ್ದಕ್ಕೂ
>> ಕಾಲ ಮತ್ತು ಅವಕಾಶವನ್ನು ಹಿಗ್ಗಿಸಿ ಕುಗ್ಗಿಸುತ್ತ 130 ಕೋಟಿ ವರ್ಷಗಳ ನಂತರ ನಾವಿದ್ದ
>> ಸೌರಮಂಡಲಕ್ಕೂ 14.9.2015ರಂದು ಅಪ್ಪಳಿಸಿ, ಲೈಗೊ ತೋಳುಗಳನ್ನೂ ಝೂಂಂ ಎಂದು ತಟ್ಟಿ
>> ಹೊರಟುಹೋಯಿತು.
>>
>> ನಿಬ್ಬೆರಗಾದ ವಿಜ್ಞಾನಿಗಳು ಆ ಘಟನೆಯನ್ನು ಮತ್ತೆ ಮತ್ತೆ ಪರೀಕ್ಷಿಸಿ ನೋಡಿದರು.
>> ಖಚಿತವೆಂದು ಅಪ್ಪಟ ಖಾತ್ರಿಯಾದಾಗ ಕುಣಿದು ಕುಪ್ಪಳಿಸಿ, ಮಾಧ್ಯಮಗಳೆದುರು ಕಳೆದ ವಾರ
>> ಘೋಷಿಸಿದರು. ನಾಲ್ಕುನೂರು ವರ್ಷಗಳ ಹಿಂದೆ ಗೆಲಿಲಿಯೊ ಮೊದಲ ಬಾರಿ ದೂರದರ್ಶಕ ಕೊಳವೆಯನ್ನು
>> ಆಕಾಶಕ್ಕೆ ಕಣ್ಣಿಟ್ಟ ನಂತರ ವಿಶ್ವದ ಚಿತ್ರಣವೇ ಬದಲಾದ ಹಾಗೆ, ಈಗ ಎರಡನೆಯ ಬಾರಿ ಬೇರೊಂದು
>> ಜೋಡಿ ಕೊಳವೆಗಳು ಬ್ರಹ್ಮಾಂಡಕ್ಕೆ ಕಿವಿಗೊಟ್ಟಿವೆ. ಮನುಕುಲಕ್ಕೇ ಕಿವಿ ತೆರೆದಂತಾಗಿದೆ.
>>
>> Hareeshkumar K
>> AM(PCM)
>> GHS HUSKURU
>> MALAVALLI TQ
>> MANDYA DT 571475
>> mobile no 9880328224
>> email harihusk...@gmail.com
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to