Super article very nice
On 26-Feb-2016 5:29 pm, "shyamala prabhu" <[email protected]> wrote:

> Thank u sir for such an interesting article
> On Feb 26, 2016 12:05 PM, "chandrika N" <[email protected]> wrote:
>
>> Nice article
>> On Feb 26, 2016 9:15 AM, "DORA CARMINE D'SILVA" <[email protected]>
>> wrote:
>>
>>> Vry nice article..thank u for sharing sir...
>>> On Feb 26, 2016 1:08 AM, "HAREESHKUMAR K Agasanapura" <
>>> [email protected]> wrote:
>>>
>>>> http://m.prajavani.net/article/2016_02_25/389899
>>>>
>>>> *ಮನುಕುಲದ ಕಿವಿ ತೆರೆಸಿದ ಗುರುತ್ವ ಕಂಪನ*
>>>>
>>>> 25 Feb, 2016
>>>>
>>>> ನಾಗೇಶ್ ಹೆಗಡೆ
>>>>
>>>>
>>>> <https://www.facebook.com/sharer/sharer.php?u=http%3A%2F%2Fgoo.gl%2FDhOIqD>
>>>> <https://twitter.com/intent/tweet?text=%E0%B2%AE%E0%B2%A8%E0%B3%81%E0%B2%95%E0%B3%81%E0%B2%B2%E0%B2%A6+%E0%B2%95%E0%B2%BF%E0%B2%B5%E0%B2%BF+%E0%B2%A4%E0%B3%86%E0%B2%B0%E0%B3%86%E0%B2%B8%E0%B2%BF%E0%B2%A6+%E0%B2%97%E0%B3%81%E0%B2%B0%E0%B3%81%E0%B2%A4%E0%B3%8D%E0%B2%B5+%E0%B2%95%E0%B2%82%E0%B2%AA%E0%B2%A8+http%3A%2F%2Fgoo.gl%2FDhOIqD>
>>>> <https://plus.google.com/share?url=http%3A%2F%2Fgoo.gl%2FDhOIqD>
>>>> <http://www.pinterest.com/pin/find/?url=http%3A%2F%2Fgoo.gl%2FDhOIqD>
>>>> <http://www.linkedin.com/shareArticle?mini=true&title=%E0%B2%AE%E0%B2%A8%E0%B3%81%E0%B2%95%E0%B3%81%E0%B2%B2%E0%B2%A6+%E0%B2%95%E0%B2%BF%E0%B2%B5%E0%B2%BF+%E0%B2%A4%E0%B3%86%E0%B2%B0%E0%B3%86%E0%B2%B8%E0%B2%BF%E0%B2%A6+%E0%B2%97%E0%B3%81%E0%B2%B0%E0%B3%81%E0%B2%A4%E0%B3%8D%E0%B2%B5+%E0%B2%95%E0%B2%82%E0%B2%AA%E0%B2%A8+&url=http%3A%2F%2Fgoo.gl%2FDhOIqD>
>>>>
>>>> ಕಳೆದ ಗುರುವಾರ ಈ ಭೂಮಿಯ ಮೇಲಿನ ಎಲ್ಲಭೌತ ವಿಜ್ಞಾನಿಗಳಿಗೆ ವಿಶೇಷ ಗುರುಬಲ ಬಂತು.
>>>> ನಾನಾ ದೇಶಗಳ ಸಾವಿರಾರು ವಿಜ್ಞಾನಿಗಳು ಏಕಕಾಲಕ್ಕೆ ’ಉಊಊಊಂವ್’ ಎಂದು ಗುರುತ್ವ ಅಲೆಗಳ
>>>> ನಾದವನ್ನು ಅನುಕರಿಸಿ  ಹರ್ಷೋದ್ಗಾರ ಹೊಮ್ಮಿಸಿದರು. ಅವರ ಸಂತಸಕ್ಕೆ ಕಾರಣವೇನೆಂದರೆ, ಈ
>>>> ವಿಶ್ವದಲ್ಲಿ ಗುರುತ್ವ ತರಂಗಗಳಿವೆ ಎಂಬುದು ಇದೇ ಮೊದಲ ಬಾರಿಗೆ ಸಾಬೀತಾಯಿತು. ಇಂಥ ತರಂಗಗಳು
>>>> ಇರಲೇಬೇಕೆಂದು ಆಲ್ಬರ್ಟ್ ಐನ್‌ಸ್ಟೀನ್ ಸರಿಯಾಗಿ ನೂರು ವರ್ಷಗಳ ಹಿಂದೆ ಗಣಿತ ಸೂತ್ರಗಳ
>>>> ಆಧಾರದಲ್ಲಿ ಪ್ರತಿಪಾದಿಸಿದ್ದು ಕೊನೆಗೂ ಸತ್ಯವಾಯಿತೆಂಬ ಸಂತಸದ ಅಲೆ ಅದಾಗಿತ್ತು.
>>>>
>>>> ಅಲೆ ಒಂದೆರಡಲ್ಲ; ನೊಬೆಲ್ ಪ್ರಶಸ್ತಿಗೆ ನೇರಾನೇರ ಅರ್ಹವಾಗಬಲ್ಲ ಸಂಶೋಧನೆ
>>>> ಸಾಧ್ಯವಾಯಿತೆಂದು ಕೆಲವರಲ್ಲಿ ಸಂಭ್ರಮದ ಅಲೆ ಹೊಮ್ಮಿದರೆ, ಇನ್ನು ಕೆಲವರಲ್ಲಿ ವಿಶ್ವದ
>>>> ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳಲು ಹೊಸದೊಂದು ಅಸ್ತ್ರ ಲಭಿಸಿತೆಂಬ ಆನಂದದ ಅಲೆಯನ್ನೂ ಅದು
>>>> ಹೊಮ್ಮಿಸಿತು. ಭೌತವಿಜ್ಞಾನದ ಘನ ಪಂಡಿತರಿಗೆ, ಉಪನ್ಯಾಸಕರಿಗೆ, ಚರ್ಚಾಪಟುಗಳಿಗೆ,
>>>> ಗ್ರಂಥಕರ್ತರಿಗೆ, ಪ್ರಕಾಶಕರಿಗೆ, ಹೊಸ ಅವಕಾಶಗಳ ಬಾಗಿಲು ತೆರೆದುಕೊಂಡಿತೆಂದು ಸಂತಸದ ಅಲೆ
>>>> ಹೊಮ್ಮಿತು. ಪಕ್ಕದ ಪಾಕಿಸ್ತಾನದಲ್ಲೂ ಸಂತಸದ ಅಲೆ ಎದ್ದಿತು; ಏಕೆಂದರೆ ಗುರುತ್ವ ತರಂಗವನ್ನು
>>>> ಪತ್ತೆ ಹಚ್ಚಿದ ತಂಡದಲ್ಲಿ ಪಾಕಿಸ್ತಾನಿ ಮೂಲದ ನೆರ್ಗಿಸ್ ಮಾವೆಲ್‌ವಾಲಾ ಎಂಬ ಸುಂದರ ಪಾರ್ಸಿ
>>>> ಯುವತಿಯೂ ಇದ್ದಳೆಂಬುದೇ ಅಲ್ಲಿನ ಪ್ರಜೆಗಳಿಗೆ ಉದ್ವೇಗದ ಸಂಗತಿಯಾಗಿತ್ತು.
>>>>
>>>> ನಿಜ ಹೇಳಬೇಕೆಂದರೆ, ಈ ಗುರುತ್ವ ತರಂಗ ಅಂದರೆ ಏನು, ಅದರಿಂದ ಏನೇನಾಗುತ್ತದೆ, ಅದರ
>>>> ಪ್ರಯೋಜನ ಏನು ಎನ್ನುವುದು ಯಾವ ಸಾಮಾನ್ಯ ಪಾಮರರಿಗೂ ಅರ್ಥವಾಗುವ ವಿಷಯ ಅಲ್ಲವೇ ಅಲ್ಲ. ಮೂರು
>>>> ವರ್ಷಗಳ ಹಿಂದೆ ಹಿಗ್ಸ್ ಬೋಸಾನ್ ಕಣಗಳು ಪತ್ತೆಯಾದಾಗ ‘ದೇವಕಣ’ಗಳೇ ಪ್ರತ್ಯಕ್ಷವಾದವು ಎಂದು
>>>> ಮಾಧ್ಯಮಗಳಲ್ಲಿ ಎಷ್ಟೊಂದು ಸಂಭ್ರಮ ಪ್ರಕಟವಾಗಿತ್ತಲ್ಲ? ವಿಜ್ಞಾನದ ಚಮತ್ಕಾರವೇ ಅಂಥದ್ದು.
>>>> ಗಹನ ನಿಗೂಢಗಳು ಅರ್ಥವಾಗದಿದ್ದರೇನು, ಅದರಿಂದ ಹೊಮ್ಮುವ ಸಂಭ್ರಮ ಏನಿದೆ, ಅದು ದೇಶ
>>>> ಕಾಲಗಳನ್ನು ಮೀರಿ ಗುರುತ್ವದ ಅಲೆಯ ಹಾಗೆ ಎಲ್ಲರನ್ನೂ ತಟ್ಟುತ್ತದೆ.
>>>>
>>>> ಸಾಮಾನ್ಯ ಅರ್ಥದಲ್ಲಿ ಗುರುತ್ವ ಎಂದರೆ ಏನೆಂಬುದು ನಮಗೆಲ್ಲ ಗೊತ್ತೇ ಇದೆ. ಮೇಲಕ್ಕೆ
>>>> ಎಸೆದ ಚಂಡು ಅಲ್ಲೇ ನಿಲ್ಲುವ ಬದಲು ಕೆಳಕ್ಕೆ ಏಕೆ ಬೀಳುತ್ತದೆ ಎಂದು ಕೇಳಿದರೆ, ‘ಭೂಮಿಗೆ
>>>> ಗುರುತ್ವಾಕರ್ಷಣೆ ಇದೆ, ಅದು ಎಲ್ಲ ವಸ್ತುಗಳನ್ನೂ ತನ್ನತ್ತ ಸೆಳೆಯುತ್ತದೆ’ ಎಂದು ಹೈಸ್ಕೂಲ್
>>>> ವಿದ್ಯಾರ್ಥಿಗಳೂ ಹೇಳುತ್ತಾರೆ. ಏಕೆಂದರೆ, ಐಸ್ಯಾಕ್ ನ್ಯೂಟನ್‌ನ ತಲೆಯ ಮೇಲೆ ಸೇಬು ಬಿದ್ದಾಗ
>>>> ಈ ಸಂಗತಿ ಆತನಿಗೆ ಹೊಳೆಯಿತೆಂದು ಹಿಂದಿನವರು ಹೇಳುತ್ತ ಬಂದಿದ್ದಾರೆ. ಸೇಬು ಆತನ ತಲೆಯ
>>>> ಮೇಲೆಯೇ ಬಿತ್ತೊ, ದೂರದಲ್ಲೊ ಅಥವಾ ಅವನ ಕನಸಿನಲ್ಲಿ ಬಿತ್ತೊ ಆ ವಿಷಯ ಹೇಗೂ ಇರಲಿ,
>>>> ಸಾಮಾನ್ಯರಿಗೆ ಹೊಳೆಯದ ಸಂಗತಿ ಅವನಿಗೆ ಹೊಳೆಯಿತು. ಅದೇ ಗುರುತ್ವ ಬಲದಿಂದಾಗಿಯೇ ಸೂರ್ಯನ
>>>> ಸುತ್ತ ಗ್ರಹಗಳು ಸುತ್ತುತ್ತವೆ ಎಂದು ನ್ಯೂಟನ್ ಹೇಳಿದ್ದನ್ನು ಎಲ್ಲರೂ ಒಪ್ಪಿಕೊಂಡಿದ್ದರು.
>>>>
>>>> ಐನ್‌ಸ್ಟೀನ್ ಮಂಡಿಸಿದ ಸಾಪೇಕ್ಷ ಸಿದ್ಧಾಂತದಲ್ಲಿ ಗುರುತ್ವಕ್ಕೆ ಬೇರೆಯದೇ ಆಯಾಮ ಬಂತು.
>>>> ಗುರುತ್ವ ಬಲ (ಗ್ರಾವಿಟಿ) ಎಂಬುದು ಜಾಳಿಗೆಯಂತೆ ಇಡೀ ವಿಶ್ವವನ್ನು ಆವರಿಸಿದೆ ಎಂದು ಆತ
>>>> ಪ್ರತಿಪಾದಿಸಿದ. ಎಲ್ಲೋ ದೂರದಲ್ಲಿ, ನಮ್ಮ ಸೌರಮಂಡಲಕ್ಕೆ ಸಂಬಂಧವೇ ಇಲ್ಲದಂತೆ ದೂರದ
>>>> ಗ್ಯಾಲಕ್ಸಿಯಲ್ಲಿ ಒಂದು ತಾರೆ ಸ್ಫೋಟಗೊಂಡರೂ ಆಗ ಏಳುವ ತುಮುಲಗಳು ಅಲೆಅಲೆಯಾಗಿ
>>>> ವಿಶ್ವಕ್ಕೆಲ್ಲ ಹರಡುತ್ತವೆ ಎಂದ.
>>>>
>>>> ಅಷ್ಟೇ ಅಲ್ಲ, ಈ ತರಂಗ ಸ್ಪೇಸ್‌ಟೈಮ್ (ದೇಶಕಾಲ) ಎಂಬ ನಾಲ್ಕನೇ ಆಯಾಮದಲ್ಲಿದೆ ಎಂತಲೂ
>>>> ಹೇಳಿದ. ಅದನ್ನು ಅರ್ಥ ಮಾಡಿಕೊಳ್ಳಲು ತಿಣುಕುವವರಿಗಾಗಿ ಒಂದು ರೂಪಕವೂ ಸಿದ್ಧವಾಯಿತು.
>>>> ಸರ್ಕಸ್ ಡೇರೆಗಳಲ್ಲಿ ಎತ್ತರಕ್ಕೆ ಒಂದು ಬಲೆಯನ್ನು ಬಿಗಿಯಾಗಿ ಕಟ್ಟಿರುತ್ತಾರೆ ತಾನೆ?
>>>> ಜೋಕಾಲಿ ಜೀಕುವವರು, ಜೋಕರ್‌ಗಳು ಅದರ ಮೇಲೆ ಕುಪ್ಪಳಿಸಿ ಲಾಗಾ ಹೊಡೆಯುತ್ತಿರುತ್ತಾರೆ.
>>>>
>>>> ಅಂಥ ಜಾಳಿಗೆಯ ಮೇಲೊಂದು ಭಾರವಾದ ಗುಂಡನ್ನು ಇಟ್ಟರೆ ಅಲ್ಲೊಂದು ಗುಳಿಯನ್ನು
>>>> ಸೃಷ್ಟಿಸಿಕೊಂಡು ಅದರಲ್ಲಿ ಕೂರುತ್ತದೆ. ಗುಂಡಿನ ಭಾರ ಹೆಚ್ಚಿದ್ದಷ್ಟೂ ಗುಳಿಯ ಆಳ ಹೆಚ್ಚಿಗೆ
>>>> ಇರುತ್ತದೆ. ಅದರತ್ತ ಇನ್ನೊಂದು ಚಿಕ್ಕ ಗುಂಡನ್ನು ಉರುಳಿಸಿದರೆ ಅದು ನೇರವಾಗಿ ಗುಳಿಯೊಳಕ್ಕೆ
>>>> ಹೋಗುವ ಬದಲು ವೃತ್ತಾಕಾರವಾಗಿ ಚಲಿಸುತ್ತ ಕ್ರಮೇಣ ಗುಳಿಯಲ್ಲಿನ ದೊಡ್ಡ ಗುಂಡಿನ ಬಳಿ
>>>> ಸೇರುತ್ತದೆ. ಹಾಗೇ ಭಾರೀ ನಕ್ಷತ್ರಗಳು ಅಥವಾ ಭಾರೀ ಗ್ಯಾಲಕ್ಸಿಗಳು ಇದ್ದಲ್ಲೆಲ್ಲ
>>>> ಸ್ಪೇಸ್‌ಟೈಮ್ ಜಾಲದಲ್ಲಿ ಇಂಥ ಗುಳಿಗಳು ಏರ್ಪಡುತ್ತವೆಂದೂ ಗ್ರಹಗಳು ಅಲ್ಲೇ ಗಿರಕಿ
>>>> ಹೊಡೆಯುತ್ತಿರುತ್ತವೆ ಎಂತಲೂ ಐನ್‌ಸ್ಟೀನ್ ಅನುಯಾಯಿಗಳು ತರ್ಕಿಸಿದರು.
>>>>
>>>> ಇಡೀ ವಿಶ್ವವನ್ನು ಸ್ಪೇಸ್‌ಟೈಮ್ ಜಾಳಿಗೆ ಆವರಿಸಿದೆ ಎಂಬುದಕ್ಕೆ ಪರೋಕ್ಷ ಉದಾಹರಣೆಗಳು
>>>> ಒಂದರ ನಂತರ ಒಂದರಂತೆ ಲಭಿಸುತ್ತ ಹೋದವು (ಹಾಗೆ ಸಾಕ್ಷ್ಯವನ್ನು ಒದಗಿಸಿದವರಿಗೆ
>>>> ಪಿಎಚ್‌ಡಿಗಳೂ ನೊಬೆಲ್‌ಗಳೂ ಲಭಿಸುತ್ತ ಬಂದವು). ಉದಾಹರಣೆಗೆ: ದೊಡ್ಡ ಗ್ಯಾಲಕ್ಸಿಯ
>>>> ಹಿಂಭಾಗದಲ್ಲಿ ಪ್ರಖರ ತಾರೆಗಳ ಇನ್ನೊಂದು ಗುಂಪು ಇದೆಯೆಂದುಕೊಳ್ಳಿ. ಅವುಗಳಿಂದ ಹೊರಟ ಬೆಳಕು
>>>> ನೇರವಾಗಿ ನಮ್ಮತ್ತ ಬರುವ ಬದಲು ತನ್ನೆದುರಿನ ಗ್ಯಾಲಕ್ಸಿಯ ಗುರುತ್ವ ಕುಳಿಯನ್ನು
>>>> ಸುತ್ತುಹೊಡೆದು ಬರುತ್ತದೆ ಎಂಬುದು ಗೊತ್ತಾಯಿತು.
>>>>
>>>> ಅಂದರೆ, ಗ್ಯಾಲಕ್ಸಿಗಳು ನಿರ್ಮಿಸಿಕೊಂಡ ಕುಳಿಯೇ ಒಂಥರಾ ಮಸೂರದಂತೆ ಇರುತ್ತದೆ ಎಂಬುದು
>>>> ಸಾಬೀತಾಯಿತು. ಅವುಗಳ ಹಿಂಭಾಗದಲ್ಲಿದ್ದ ತಾರೆಗಳ ದೂರವನ್ನು ನಿಖರವಾಗಿ ಅಳೆಯುವುದು
>>>> ಸಾಧ್ಯವಾಯಿತು. ನಮ್ಮದೇ ಬುಧ ಗ್ರಹ ನ್ಯೂಟನ್ ನಿಯಮವನ್ನು ಅನುಸರಿಸುತ್ತ ಸೂರ್ಯನನ್ನು
>>>> ಸುತ್ತುಹೊಡೆಯುವ ಬದಲು ತನ್ನ ಕಕ್ಷೆಯಲ್ಲಿ ಆಗಾಗ ಏಕೆ ತಳಕಾ ಬಳಕಾ ಆಗುತ್ತದೆ ಎಂಬುದು
>>>> ಹಿಂದೆಲ್ಲ ದೊಡ್ಡ ಪ್ರಶ್ನೆಯಾಗಿತ್ತು.
>>>>
>>>> ಯಾವುದೋ ಅಗೋಚರ ಇನ್ನೊಂದು ಗ್ರಹ ಅಲ್ಲಿರಬೇಕು ಎಂದು ಅದನ್ನು ಶೋಧಿಸಲು ಏನೆಲ್ಲ ವಿಫಲ
>>>> ಯತ್ನಗಳು ನಡೆದಿದ್ದವು. ಆದರೆ ಐನ್‌ಸ್ಟೀನ್‌ನ ಸ್ಪೇಸ್‌ಟೈಮ್ ಜಾಲದಲ್ಲಿ ಸೂರ್ಯನನ್ನು
>>>> ಸಿಲುಕಿಸಿ ನೋಡಿದಾಗ ಬುಧಗ್ರಹದ ಎರ್ರಾಬಿರ್ರಿ ಚಾಲನೆಗೆ ಉತ್ತರ ಸಿಕ್ಕಿತ್ತು.
>>>>
>>>> ಈ ಸ್ಪೇಸ್‌ಟೈಮ್ ಜಾಳಿಗೆ ಎಲ್ಲೆಡೆ ಹರಡಿರುವುದರಿಂದ ಇಬ್ಬರು ಜಟ್ಟಿಗಳು
>>>> ಗುದ್ದಾಡಿಕೊಂಡರೂ ಜಾಳಿಗೆ ಅದುರಿ ಗುರುತ್ವ ಅಲೆಗಳು ಏಳುತ್ತವೆ. ಗೊತ್ತೇ ಆಗುವುದಿಲ್ಲ.
>>>> ಗುರುಗ್ರಹಕ್ಕೆ ಧೂಮಕೇತು ಅಪ್ಪಳಿಸಿದಾಗಲೂ ಏಳುತ್ತವೆ. ಆದರೆ ’ಅವು ಪತ್ತೆ ಹಚ್ಚಲು
>>>> ಸಾಧ್ಯವಾಗದಷ್ಟು ಸೂಕ್ಷ್ಮವಾಗಿರುತ್ತವೆ’ ಎಂದು ಸ್ವತಃ ಐನ್‌ಸ್ಟೀನ್ 1916ರಲ್ಲೇ ಹೇಳಿದ್ದ.
>>>> ಬೃಹತ್ ತಾರೆಯೊಂದು ತಾನಾಗಿ ಉಬ್ಬಿ ಉಬ್ಬಿ ಆಸ್ಫೋಟಿಸಿ ಕುಸಿದು ಕಪ್ಪುರಂಧ್ರವಾದಾಗ ಜಾಳಿಗೆ
>>>> ಅಲ್ಲೋಲಕಲ್ಲೋಲವಾಗುತ್ತದೆ.
>>>>
>>>> ಗುರುತ್ವ ಕಂಪನ ಸುತ್ತೆಲ್ಲ ಹರಡುತ್ತದೆ. ಆಗ ಹೊಮ್ಮಿದ ಅಲೆಗಳು ಎಲ್ಲ ಗ್ರಹ, ತಾರೆ,
>>>> ಗ್ಯಾಲಕ್ಸಿಗಳ ಮೂಲಕ ಹಾಯುತ್ತ, ನಮ್ಮ ಶರೀರದಲ್ಲೂ ಹೊಕ್ಕು ಹೊರಟು ಹೋಗುತ್ತಿರುತ್ತವೆ.
>>>> ಭೂಮಿಯ ಮೂಲಕ ದೊಡ್ಡದ್ದೊಂದು ಅಲೆ ಹಾದು ಹೋಗುವಾಗ ಬೆಂಗಳೂರು ಮತ್ತು ಮಾಸ್ಕೊ ನಡುವಣ ಅಂತರ
>>>> ಒಂದು ಕೂದಲೆಳೆಯಷ್ಟು ಕಡಿಮೆ ಆಗಬಹುದು. ಇಲ್ಲಿನ ಗಡಿಯಾರಕ್ಕೂ ಮತ್ತು ಮಾಸ್ಕೊ ಗಡಿಯಾರಕ್ಕೂ
>>>> ಒಂದು ಮಿಲಿ ಸೆಕೆಂಡ್‌ನಷ್ಟು ವ್ಯತ್ಯಾಸ ಕಾಣಬಹುದು.
>>>>
>>>> ಅಂಥ ಸ್ಫೋಟ ತೀರಾ ತೀರಾ ದೂರದಲ್ಲಿ ಘಟಿಸುತ್ತದಾದ್ದರಿಂದ ನಮ್ಮಲ್ಲಿಗೆ ಬರುವಷ್ಟರಲ್ಲಿ
>>>> ಅಲೆಗಳೂ ತೀರ ದುರ್ಬಲವಾಗುತ್ತವೆ. ಅದೂ ಒಳ್ಳೆಯದೇ. ಇಲ್ಲಾಂದರೆ ಆ ವಿಶಾಲ ವಿಶ್ವದಲ್ಲಿ
>>>> ಒಂದಲ್ಲ ಒಂದು ಕಡೆ ಸ್ಫೋಟ, ಡಿಕ್ಕಿಗಳು ನಡೆಯುತ್ತಲೇ ಇರುವಾಗ ಅದರ ಕಂಪನದ ಅಲೆಗಳು ಇಲ್ಲಿಗೆ
>>>> ಪದೇ ಪದೇ ಜೋರಾಗಿ ತಟ್ಟುತ್ತಿದ್ದರೆ ನಮ್ಮ ಗಡಿಯಾರಗಳೆಲ್ಲ ಅಸ್ತವ್ಯಸ್ತ ಆಗುತ್ತಿದ್ದವು.
>>>> ಓಡುತ್ತಿರುವ ರೈಲು ಉದ್ದಗಿಡ್ಡ ಆಗಬಹುದಿತ್ತು. ಬಸ್ ಹತ್ತುವ ಮೊದಲೇ ಇಳಿಯುವ ತಾಣ
>>>> ಬಂದಿರುತ್ತಿತ್ತು.
>>>>
>>>> ವಿಜ್ಞಾನಿಗಳು ಗುರುತ್ವ ತರಂಗಗಳನ್ನು ಗುರುತಿಸಲು ಯಾಕೆ ಹೆಣಗುತ್ತಿದ್ದಾರೆ ಎಂದರೆ,
>>>> ಅಲೆ ಬಂದಿದ್ದು ಗೊತ್ತಾದರೆ, ಅದು ಎಲ್ಲಿಂದ ಬಂತು ಎಂದು ನೋಡಿ, ಅಲ್ಲಿ ಏನು ಘಟಿಸಿತು
>>>> ಎಂಬುದರ ಚಿತ್ರಣ ಪಡೆಯಬಹುದು. ವಿಶ್ವದ ವೈಚಿತ್ರ್ಯಗಳನ್ನು ತೋರಿಸುವ ಈಗಿನ ಸಾಧನಗಳೆಲ್ಲ
>>>> ಬೆಳಕು, ಎಕ್ಸ್‌ರೇ ಅಥವಾ ಇತರ ಇಲೆಕ್ಟ್ರೊಮೆಗ್ನೆಟಿಕ್ ತರಂಗಗಳನ್ನು ಆಧರಿಸಿವೆ. ಶ್ರವಣ
>>>> ಸಾಧನಗಳು ಯಾವುವೂ ಇಲ್ಲ. ಒಂದರ್ಥದಲ್ಲಿ ನಾವು ಕಣ್ಣಿದ್ದ ಕಿವುಡರಾಗಿದ್ದೇವೆ.
>>>>
>>>> ಈಗ ಗುರುತ್ವ ಜಾಳಿಗೆಯ ಅಲುಗಾಟದಿಂದ ಹೊಮ್ಮುವ ಅಲೆಗಳು ಶ್ರವಣಮಾಧ್ಯಮದ ಮೂಲಕವೂ
>>>> ಬ್ರಹ್ಮಾಂಡದ ಸುದ್ದಿಯನ್ನು ತರುವಂತಾದರೆ ಮನುಕುಲಕ್ಕೇ ಕಿವಿ ಬಂದಂತಾಗುತ್ತದೆ. ವಿರಾಟ್
>>>> ವಿಶ್ವದ ವಾದ್ಯಮೇಳ ನಮ್ಮ ಗ್ರಹಿಕೆಗೆ ಬಂದಂತಾಗುತ್ತದೆ. ಅದಕ್ಕೇ ಅಂಥ ಚಮತ್ಕಾರಿಕ ಅಲೆಗಳ
>>>> ಪತ್ತೆಗೆಂದೇ ಭಾರೀ ಸಂಕೀರ್ಣ ಸಲಕರಣೆಗಳನ್ನು ಹೂಡಿಟ್ಟುಕೊಂಡು ಸಾವಿರಾರು ಸಂಶೋಧಕರು
>>>> ಕಾಯುತ್ತಿದ್ದಾರೆ.
>>>>
>>>> ಗುರುತ್ವ ತರಂಗಗಳನ್ನು ಆಲಿಸಲೆಂದು ಅಮೆರಿಕದ ಎರಡು ಕಡೆ ‘ಲೈಗೊ’ ಹೆಸರಿನ
>>>> ಶೋಧಯಂತ್ರಗಳನ್ನು ಹೂಡಲಾಗಿದೆ. ಲೈಗೊ ಎಂಬುದು ‘ಲೇಸರ್ ಇಂಟರ್ಫೆರೊಮೀಟರ್ ಗ್ರಾವಿಟೇಶನಲ್-
>>>> ವೇವ್ ಒಬ್ಸರ್ವೇಟರಿ’ಯ ಸಂಕ್ಷಿಪ್ತ ಹೆಸರು. ಗಡಿಯಾರದಲ್ಲಿ ಸರಿಯಾಗಿ ಮೂರು ಗಂಟೆ (ಅಥವಾ 9
>>>> ಗಂಟೆ) ತೋರಿಸುವ ಎರಡು ಮುಳ್ಳುಗಳಂತೆ ಪರಸ್ಪರ ಲಂಬಕೋನದಲ್ಲಿ ನಾಲ್ಕು ನಾಲ್ಕು ಕಿಲೊಮೀಟರ್
>>>> ಉದ್ದದ ಎರಡು ನಿರ್ವಾತ ಕೊಳವೆಗಳನ್ನು ವಿಶಾಲ ಬಯಲಿನಲ್ಲಿ ಮಲಗಿಸಿದ್ದಾರೆ.
>>>>
>>>> ಈ ಕೊಳವೆಗಳ ಉದ್ದಳತೆಯಲ್ಲಿ ತುಸುವೇ ವ್ಯತ್ಯಾಸವಾದರೂ ಅಳೆಯಬಲ್ಲ ಅದ್ಭುತ ಲೇಸರ್
>>>> ಸಾಧನವನ್ನು ಅಲ್ಲಿ ಅಳವಡಿಸಲಾಗಿದೆ. ಲೇಸರ್ ಅದೆಷ್ಟು ಸೂಕ್ಷ್ಮವೆಂದರೆ 30 ಟ್ರಿಲಿಯನ್
>>>> ಕಿ.ಮೀ. ಆಚಿನ ನಕ್ಷತ್ರದ ದೂರವನ್ನು ಕೂಡ ಕೂದಲೆಳೆಯಷ್ಟೂ ವ್ಯತ್ಯಾಸ ಬಾರದಂತೆ ನಿಖರವಾಗಿ
>>>> ಅಳೆಯುತ್ತದೆ. ಗುರುತ್ವದ ಅಲೆ ಲೈಗೊಕ್ಕೆ ಅಪ್ಪಳಿಸಿದ್ದೇ ಆದರೆ ಒಂದು ಕೊಳವೆ ತುಸು
>>>> ಉದ್ದವಾಗುತ್ತದೆ, ಇನ್ನೊಂದು ತುಸು ಗಿಡ್ಡವಾಗುತ್ತದೆ. ಆಗಬೇಕು. ವೇಳೆಯೂ ಅದೇ ಪ್ರಮಾಣದಲ್ಲಿ
>>>> ಒಂದರಲ್ಲಿ ತುಸು ಹಿಗ್ಗುತ್ತದೆ ಇನ್ನೊಂದರಲ್ಲಿ ತುಸು ಕುಗ್ಗುತ್ತದೆ. ಕುಗ್ಗಬೇಕು. ಈ
>>>> ಪ್ರಯೋಗದ ವೀಕ್ಷಣೆಯಲ್ಲಿ ಭಾರತವೂ ಸೇರಿದಂತೆ 16 ದೇಶಗಳ ಒಂದು ಸಾವಿರ ವಿಜ್ಞಾನಿಗಳು
>>>> ಪಾಲ್ಗೊಂಡಿದ್ದು, ಲೇಸರ್ ವರದಿಯ ವಿಶ್ಲೇಷಣೆಯಲ್ಲಿ ತೊಡಗಿಕೊಂಡಿದ್ದಾರೆ.
>>>>
>>>> ಕಳೆದ ಸೆಪ್ಟೆಂಬರ್ 14ರಂದು ಕೊಳವೆಯ ಉದ್ದ ತುಸು ಹೆಚ್ಚಿತೆಂಬ ಸಿಗ್ನಲ್ ಬಂತು. ತುಸು
>>>> ಎಂದರೆ ಎಷ್ಟು ತುಸು? ಒಂದು ಪರಮಾಣುವಿನಲ್ಲಿರುವ ಒಂದು ಪ್ರೋಟಾನನ್ನು ಹತ್ತು ಸಾವಿರ ಭಾಗ
>>>> ಮಾಡಿದಾಗ ಒಂದು ಭಾಗ ಎಷ್ಟು ಉದ್ದ ಇರುತ್ತದೊ ಅಷ್ಟು! ಆ ಇನ್ನೊಂದು ಕೊಳವೆ ಅಷ್ಟೇ
>>>> ಪ್ರಮಾಣದಲ್ಲಿ ಸಂಕುಚಿತಗೊಂಡಿತು.
>>>>
>>>> ಗುರುತ್ವ ಅಲೆ ಅಪ್ಪಳಿಸಿದ್ದು ನಿಜವೆಂದು ನಂಬಬೇಕೆ? ಸಂಶಯಕ್ಕೆ ಆಸ್ಪದವಿದೆ. ಏಕೆಂದರೆ
>>>> ಎಲ್ಲೋ ಸಮೀಪದಲ್ಲಿ ಎರಡು ಲಾರಿಗಳು ಡಿಕ್ಕಿ ಹೊಡೆದರೂ ಅಂಥ ವ್ಯತ್ಯಾಸ ಆಗಬಹುದು. ನೂರಾರು
>>>> ಕಿ.ಮೀ. ಆಚೆ ಸಣ್ಣ ಭೂಕಂಪನ ಆಗಿದ್ದರೂ ಕೊಳವೆ ತುಸು ಕಂಪಿಸೀತು. ಅದಕ್ಕೇ ವಿಜ್ಞಾನಿಗಳು
>>>> ತಕ್ಷಣ ಅಲ್ಲಿಂದ ಮೂರು ಸಾವಿರ ಕಿ.ಮೀ. ದೂರದ ವಾಷಿಂಗ್ಟನ್‌ನಲ್ಲಿ ಹೂಡಲಾಗಿದ್ದ ಇನ್ನೊಂದು
>>>> ಅಂಥದ್ದೇ ಲೈಗೊ ಕೊಳವೆಗಳ ದಾಖಲೆ ನೋಡಿದರು. ಹೌದು, ಅಲ್ಲೂ ಅಷ್ಟೇ ಪ್ರಮಾಣದ ಗುರುತ್ವ ಅಲೆ
>>>> ದಾಖಲಾಗಿತ್ತು. ಅಂದಮೇಲೆ ಅದು ಅಸಲೀ ಅಲೆಯೇ ಇರಬೇಕು. ಅಬ್ಬ! ಕೊನೆಗೂ ಸಾಕ್ಷ್ಯ ಸಿಕ್ಕಿತು.
>>>>
>>>> ಈ ಅಲೆ ಬಂದಿದ್ದು ಎಲ್ಲಿಂದ? 130 ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಭಾರೀ
>>>> ಗಾತ್ರದ ಎರಡು ಕಪ್ಪುರಂಧ್ರಗಳು ಪರಸ್ಪರ ತೀರ ಸಮೀಪದಲ್ಲಿ ಘೋರಾಘೋರ ಆರ್ಭಟದೊಂದಿಗೆ
>>>> ಘರ್ಷಿಸುತ್ತಿದ್ದವು. ಅವು ತಿಕ್ಕಾಡುತ್ತ ಹಠಾತ್ತಾಗಿ ಒಂದಾದಾಗ ಭಾರೀ ದೊಡ್ಡ ಗುರುತ್ವ ಅಲೆ
>>>> ಹೊಮ್ಮಿತ್ತು. ನಮ್ಮ ಸೂರ್ಯನಿಗಿಂತ 65 ಪಟ್ಟು ಹೆಚ್ಚು ದ್ರವ್ಯಗಳಿದ್ದ ಆ ಜೋಡಿ ಕಾಯಗಳು
>>>> ವಿಲೀನಗೊಂಡಾಗ ಮೂರು ಸೂರ್ಯರಷ್ಟು ಶಕ್ತಿ ಒಮ್ಮೆಗೇ ಬಿಡುಗಡೆಯಾಗಿ ಸುತ್ತೆಲ್ಲ ಗುರುತ್ವ
>>>> ಅಲೆಗಳ ಸುನಾಮಿ ಎದ್ದಿತು. ಅದು ಬೆಳಕಲ್ಲ; ಕೊಳದಲ್ಲಿ ಡೈನಮೈಟ್ ಸಿಡಿದಾಗ ಹೊಮ್ಮುವಂತೆ
>>>> ಗ್ರಾವಿಟಿ ಅಲೆಗಳು ವೃತ್ತಾಕಾರವಾಗಿ ಬೆಳಕಿನ ವೇಗದಲ್ಲಿ ವಿಸ್ತರಿಸುತ್ತ ದಾರಿಯುದ್ದಕ್ಕೂ
>>>> ಕಾಲ ಮತ್ತು ಅವಕಾಶವನ್ನು ಹಿಗ್ಗಿಸಿ ಕುಗ್ಗಿಸುತ್ತ 130 ಕೋಟಿ ವರ್ಷಗಳ ನಂತರ ನಾವಿದ್ದ
>>>> ಸೌರಮಂಡಲಕ್ಕೂ 14.9.2015ರಂದು ಅಪ್ಪಳಿಸಿ, ಲೈಗೊ ತೋಳುಗಳನ್ನೂ ಝೂಂಂ ಎಂದು ತಟ್ಟಿ
>>>> ಹೊರಟುಹೋಯಿತು.
>>>>
>>>> ನಿಬ್ಬೆರಗಾದ ವಿಜ್ಞಾನಿಗಳು ಆ ಘಟನೆಯನ್ನು ಮತ್ತೆ ಮತ್ತೆ ಪರೀಕ್ಷಿಸಿ ನೋಡಿದರು.
>>>> ಖಚಿತವೆಂದು ಅಪ್ಪಟ ಖಾತ್ರಿಯಾದಾಗ ಕುಣಿದು ಕುಪ್ಪಳಿಸಿ, ಮಾಧ್ಯಮಗಳೆದುರು ಕಳೆದ ವಾರ
>>>> ಘೋಷಿಸಿದರು. ನಾಲ್ಕುನೂರು ವರ್ಷಗಳ ಹಿಂದೆ ಗೆಲಿಲಿಯೊ ಮೊದಲ ಬಾರಿ ದೂರದರ್ಶಕ ಕೊಳವೆಯನ್ನು
>>>> ಆಕಾಶಕ್ಕೆ ಕಣ್ಣಿಟ್ಟ ನಂತರ ವಿಶ್ವದ ಚಿತ್ರಣವೇ ಬದಲಾದ ಹಾಗೆ, ಈಗ ಎರಡನೆಯ ಬಾರಿ ಬೇರೊಂದು
>>>> ಜೋಡಿ ಕೊಳವೆಗಳು ಬ್ರಹ್ಮಾಂಡಕ್ಕೆ ಕಿವಿಗೊಟ್ಟಿವೆ. ಮನುಕುಲಕ್ಕೇ ಕಿವಿ ತೆರೆದಂತಾಗಿದೆ.
>>>>
>>>> Hareeshkumar K
>>>> AM(PCM)
>>>> GHS HUSKURU
>>>> MALAVALLI TQ
>>>> MANDYA DT 571475
>>>> mobile no 9880328224
>>>> email [email protected]
>>>>
>>>> --
>>>> 1. If a teacher wants to join STF, visit
>>>> http://karnatakaeducation.org.in/KOER/en/index.php/Become_a_STF_groups_member
>>>> 2. For STF training, visit KOER -
>>>> http://karnatakaeducation.org.in/KOER/en/index.php
>>>> 4. For Ubuntu 14.04 installation, visit
>>>> http://karnatakaeducation.org.in/KOER/en/index.php/Kalpavriksha
>>>> 4. For doubts on Ubuntu, public software, visit
>>>> http://karnatakaeducation.org.in/KOER/en/index.php/Frequently_Asked_Questions
>>>> 5. Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Why_public_software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ---
>>>> You received this message because you are subscribed to the Google
>>>> Groups "Maths & Science STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/mathssciencestf.
>>>> For more options, visit https://groups.google.com/d/optout.
>>>>
>>> --
>>> 1. If a teacher wants to join STF, visit
>>> http://karnatakaeducation.org.in/KOER/en/index.php/Become_a_STF_groups_member
>>> 2. For STF training, visit KOER -
>>> http://karnatakaeducation.org.in/KOER/en/index.php
>>> 4. For Ubuntu 14.04 installation, visit
>>> http://karnatakaeducation.org.in/KOER/en/index.php/Kalpavriksha
>>> 4. For doubts on Ubuntu, public software, visit
>>> http://karnatakaeducation.org.in/KOER/en/index.php/Frequently_Asked_Questions
>>> 5. Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Why_public_software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ---
>>> You received this message because you are subscribed to the Google
>>> Groups "Maths & Science STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/mathssciencestf.
>>> For more options, visit https://groups.google.com/d/optout.
>>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to