Hareeshkumar sir super mahiti On 26-Feb-2016 1:08 AM, "HAREESHKUMAR K Agasanapura" <[email protected]> wrote:
> http://m.prajavani.net/article/2016_02_25/389899 > > *ಮನುಕುಲದ ಕಿವಿ ತೆರೆಸಿದ ಗುರುತ್ವ ಕಂಪನ* > > 25 Feb, 2016 > > ನಾಗೇಶ್ ಹೆಗಡೆ > > <https://www.facebook.com/sharer/sharer.php?u=http%3A%2F%2Fgoo.gl%2FDhOIqD> > <https://twitter.com/intent/tweet?text=%E0%B2%AE%E0%B2%A8%E0%B3%81%E0%B2%95%E0%B3%81%E0%B2%B2%E0%B2%A6+%E0%B2%95%E0%B2%BF%E0%B2%B5%E0%B2%BF+%E0%B2%A4%E0%B3%86%E0%B2%B0%E0%B3%86%E0%B2%B8%E0%B2%BF%E0%B2%A6+%E0%B2%97%E0%B3%81%E0%B2%B0%E0%B3%81%E0%B2%A4%E0%B3%8D%E0%B2%B5+%E0%B2%95%E0%B2%82%E0%B2%AA%E0%B2%A8+http%3A%2F%2Fgoo.gl%2FDhOIqD> > <https://plus.google.com/share?url=http%3A%2F%2Fgoo.gl%2FDhOIqD> > <http://www.pinterest.com/pin/find/?url=http%3A%2F%2Fgoo.gl%2FDhOIqD> > <http://www.linkedin.com/shareArticle?mini=true&title=%E0%B2%AE%E0%B2%A8%E0%B3%81%E0%B2%95%E0%B3%81%E0%B2%B2%E0%B2%A6+%E0%B2%95%E0%B2%BF%E0%B2%B5%E0%B2%BF+%E0%B2%A4%E0%B3%86%E0%B2%B0%E0%B3%86%E0%B2%B8%E0%B2%BF%E0%B2%A6+%E0%B2%97%E0%B3%81%E0%B2%B0%E0%B3%81%E0%B2%A4%E0%B3%8D%E0%B2%B5+%E0%B2%95%E0%B2%82%E0%B2%AA%E0%B2%A8+&url=http%3A%2F%2Fgoo.gl%2FDhOIqD> > > ಕಳೆದ ಗುರುವಾರ ಈ ಭೂಮಿಯ ಮೇಲಿನ ಎಲ್ಲಭೌತ ವಿಜ್ಞಾನಿಗಳಿಗೆ ವಿಶೇಷ ಗುರುಬಲ ಬಂತು. ನಾನಾ > ದೇಶಗಳ ಸಾವಿರಾರು ವಿಜ್ಞಾನಿಗಳು ಏಕಕಾಲಕ್ಕೆ ’ಉಊಊಊಂವ್’ ಎಂದು ಗುರುತ್ವ ಅಲೆಗಳ ನಾದವನ್ನು > ಅನುಕರಿಸಿ ಹರ್ಷೋದ್ಗಾರ ಹೊಮ್ಮಿಸಿದರು. ಅವರ ಸಂತಸಕ್ಕೆ ಕಾರಣವೇನೆಂದರೆ, ಈ ವಿಶ್ವದಲ್ಲಿ > ಗುರುತ್ವ ತರಂಗಗಳಿವೆ ಎಂಬುದು ಇದೇ ಮೊದಲ ಬಾರಿಗೆ ಸಾಬೀತಾಯಿತು. ಇಂಥ ತರಂಗಗಳು > ಇರಲೇಬೇಕೆಂದು ಆಲ್ಬರ್ಟ್ ಐನ್‌ಸ್ಟೀನ್ ಸರಿಯಾಗಿ ನೂರು ವರ್ಷಗಳ ಹಿಂದೆ ಗಣಿತ ಸೂತ್ರಗಳ > ಆಧಾರದಲ್ಲಿ ಪ್ರತಿಪಾದಿಸಿದ್ದು ಕೊನೆಗೂ ಸತ್ಯವಾಯಿತೆಂಬ ಸಂತಸದ ಅಲೆ ಅದಾಗಿತ್ತು. > > ಅಲೆ ಒಂದೆರಡಲ್ಲ; ನೊಬೆಲ್ ಪ್ರಶಸ್ತಿಗೆ ನೇರಾನೇರ ಅರ್ಹವಾಗಬಲ್ಲ ಸಂಶೋಧನೆ > ಸಾಧ್ಯವಾಯಿತೆಂದು ಕೆಲವರಲ್ಲಿ ಸಂಭ್ರಮದ ಅಲೆ ಹೊಮ್ಮಿದರೆ, ಇನ್ನು ಕೆಲವರಲ್ಲಿ ವಿಶ್ವದ > ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳಲು ಹೊಸದೊಂದು ಅಸ್ತ್ರ ಲಭಿಸಿತೆಂಬ ಆನಂದದ ಅಲೆಯನ್ನೂ ಅದು > ಹೊಮ್ಮಿಸಿತು. ಭೌತವಿಜ್ಞಾನದ ಘನ ಪಂಡಿತರಿಗೆ, ಉಪನ್ಯಾಸಕರಿಗೆ, ಚರ್ಚಾಪಟುಗಳಿಗೆ, > ಗ್ರಂಥಕರ್ತರಿಗೆ, ಪ್ರಕಾಶಕರಿಗೆ, ಹೊಸ ಅವಕಾಶಗಳ ಬಾಗಿಲು ತೆರೆದುಕೊಂಡಿತೆಂದು ಸಂತಸದ ಅಲೆ > ಹೊಮ್ಮಿತು. ಪಕ್ಕದ ಪಾಕಿಸ್ತಾನದಲ್ಲೂ ಸಂತಸದ ಅಲೆ ಎದ್ದಿತು; ಏಕೆಂದರೆ ಗುರುತ್ವ ತರಂಗವನ್ನು > ಪತ್ತೆ ಹಚ್ಚಿದ ತಂಡದಲ್ಲಿ ಪಾಕಿಸ್ತಾನಿ ಮೂಲದ ನೆರ್ಗಿಸ್ ಮಾವೆಲ್‌ವಾಲಾ ಎಂಬ ಸುಂದರ ಪಾರ್ಸಿ > ಯುವತಿಯೂ ಇದ್ದಳೆಂಬುದೇ ಅಲ್ಲಿನ ಪ್ರಜೆಗಳಿಗೆ ಉದ್ವೇಗದ ಸಂಗತಿಯಾಗಿತ್ತು. > > ನಿಜ ಹೇಳಬೇಕೆಂದರೆ, ಈ ಗುರುತ್ವ ತರಂಗ ಅಂದರೆ ಏನು, ಅದರಿಂದ ಏನೇನಾಗುತ್ತದೆ, ಅದರ > ಪ್ರಯೋಜನ ಏನು ಎನ್ನುವುದು ಯಾವ ಸಾಮಾನ್ಯ ಪಾಮರರಿಗೂ ಅರ್ಥವಾಗುವ ವಿಷಯ ಅಲ್ಲವೇ ಅಲ್ಲ. ಮೂರು > ವರ್ಷಗಳ ಹಿಂದೆ ಹಿಗ್ಸ್ ಬೋಸಾನ್ ಕಣಗಳು ಪತ್ತೆಯಾದಾಗ ‘ದೇವಕಣ’ಗಳೇ ಪ್ರತ್ಯಕ್ಷವಾದವು ಎಂದು > ಮಾಧ್ಯಮಗಳಲ್ಲಿ ಎಷ್ಟೊಂದು ಸಂಭ್ರಮ ಪ್ರಕಟವಾಗಿತ್ತಲ್ಲ? ವಿಜ್ಞಾನದ ಚಮತ್ಕಾರವೇ ಅಂಥದ್ದು. > ಗಹನ ನಿಗೂಢಗಳು ಅರ್ಥವಾಗದಿದ್ದರೇನು, ಅದರಿಂದ ಹೊಮ್ಮುವ ಸಂಭ್ರಮ ಏನಿದೆ, ಅದು ದೇಶ > ಕಾಲಗಳನ್ನು ಮೀರಿ ಗುರುತ್ವದ ಅಲೆಯ ಹಾಗೆ ಎಲ್ಲರನ್ನೂ ತಟ್ಟುತ್ತದೆ. > > ಸಾಮಾನ್ಯ ಅರ್ಥದಲ್ಲಿ ಗುರುತ್ವ ಎಂದರೆ ಏನೆಂಬುದು ನಮಗೆಲ್ಲ ಗೊತ್ತೇ ಇದೆ. ಮೇಲಕ್ಕೆ ಎಸೆದ > ಚಂಡು ಅಲ್ಲೇ ನಿಲ್ಲುವ ಬದಲು ಕೆಳಕ್ಕೆ ಏಕೆ ಬೀಳುತ್ತದೆ ಎಂದು ಕೇಳಿದರೆ, ‘ಭೂಮಿಗೆ > ಗುರುತ್ವಾಕರ್ಷಣೆ ಇದೆ, ಅದು ಎಲ್ಲ ವಸ್ತುಗಳನ್ನೂ ತನ್ನತ್ತ ಸೆಳೆಯುತ್ತದೆ’ ಎಂದು ಹೈಸ್ಕೂಲ್ > ವಿದ್ಯಾರ್ಥಿಗಳೂ ಹೇಳುತ್ತಾರೆ. ಏಕೆಂದರೆ, ಐಸ್ಯಾಕ್ ನ್ಯೂಟನ್‌ನ ತಲೆಯ ಮೇಲೆ ಸೇಬು ಬಿದ್ದಾಗ > ಈ ಸಂಗತಿ ಆತನಿಗೆ ಹೊಳೆಯಿತೆಂದು ಹಿಂದಿನವರು ಹೇಳುತ್ತ ಬಂದಿದ್ದಾರೆ. ಸೇಬು ಆತನ ತಲೆಯ > ಮೇಲೆಯೇ ಬಿತ್ತೊ, ದೂರದಲ್ಲೊ ಅಥವಾ ಅವನ ಕನಸಿನಲ್ಲಿ ಬಿತ್ತೊ ಆ ವಿಷಯ ಹೇಗೂ ಇರಲಿ, > ಸಾಮಾನ್ಯರಿಗೆ ಹೊಳೆಯದ ಸಂಗತಿ ಅವನಿಗೆ ಹೊಳೆಯಿತು. ಅದೇ ಗುರುತ್ವ ಬಲದಿಂದಾಗಿಯೇ ಸೂರ್ಯನ > ಸುತ್ತ ಗ್ರಹಗಳು ಸುತ್ತುತ್ತವೆ ಎಂದು ನ್ಯೂಟನ್ ಹೇಳಿದ್ದನ್ನು ಎಲ್ಲರೂ ಒಪ್ಪಿಕೊಂಡಿದ್ದರು. > > ಐನ್‌ಸ್ಟೀನ್ ಮಂಡಿಸಿದ ಸಾಪೇಕ್ಷ ಸಿದ್ಧಾಂತದಲ್ಲಿ ಗುರುತ್ವಕ್ಕೆ ಬೇರೆಯದೇ ಆಯಾಮ ಬಂತು. > ಗುರುತ್ವ ಬಲ (ಗ್ರಾವಿಟಿ) ಎಂಬುದು ಜಾಳಿಗೆಯಂತೆ ಇಡೀ ವಿಶ್ವವನ್ನು ಆವರಿಸಿದೆ ಎಂದು ಆತ > ಪ್ರತಿಪಾದಿಸಿದ. ಎಲ್ಲೋ ದೂರದಲ್ಲಿ, ನಮ್ಮ ಸೌರಮಂಡಲಕ್ಕೆ ಸಂಬಂಧವೇ ಇಲ್ಲದಂತೆ ದೂರದ > ಗ್ಯಾಲಕ್ಸಿಯಲ್ಲಿ ಒಂದು ತಾರೆ ಸ್ಫೋಟಗೊಂಡರೂ ಆಗ ಏಳುವ ತುಮುಲಗಳು ಅಲೆಅಲೆಯಾಗಿ > ವಿಶ್ವಕ್ಕೆಲ್ಲ ಹರಡುತ್ತವೆ ಎಂದ. > > ಅಷ್ಟೇ ಅಲ್ಲ, ಈ ತರಂಗ ಸ್ಪೇಸ್‌ಟೈಮ್ (ದೇಶಕಾಲ) ಎಂಬ ನಾಲ್ಕನೇ ಆಯಾಮದಲ್ಲಿದೆ ಎಂತಲೂ > ಹೇಳಿದ. ಅದನ್ನು ಅರ್ಥ ಮಾಡಿಕೊಳ್ಳಲು ತಿಣುಕುವವರಿಗಾಗಿ ಒಂದು ರೂಪಕವೂ ಸಿದ್ಧವಾಯಿತು. > ಸರ್ಕಸ್ ಡೇರೆಗಳಲ್ಲಿ ಎತ್ತರಕ್ಕೆ ಒಂದು ಬಲೆಯನ್ನು ಬಿಗಿಯಾಗಿ ಕಟ್ಟಿರುತ್ತಾರೆ ತಾನೆ? > ಜೋಕಾಲಿ ಜೀಕುವವರು, ಜೋಕರ್‌ಗಳು ಅದರ ಮೇಲೆ ಕುಪ್ಪಳಿಸಿ ಲಾಗಾ ಹೊಡೆಯುತ್ತಿರುತ್ತಾರೆ. > > ಅಂಥ ಜಾಳಿಗೆಯ ಮೇಲೊಂದು ಭಾರವಾದ ಗುಂಡನ್ನು ಇಟ್ಟರೆ ಅಲ್ಲೊಂದು ಗುಳಿಯನ್ನು > ಸೃಷ್ಟಿಸಿಕೊಂಡು ಅದರಲ್ಲಿ ಕೂರುತ್ತದೆ. ಗುಂಡಿನ ಭಾರ ಹೆಚ್ಚಿದ್ದಷ್ಟೂ ಗುಳಿಯ ಆಳ ಹೆಚ್ಚಿಗೆ > ಇರುತ್ತದೆ. ಅದರತ್ತ ಇನ್ನೊಂದು ಚಿಕ್ಕ ಗುಂಡನ್ನು ಉರುಳಿಸಿದರೆ ಅದು ನೇರವಾಗಿ ಗುಳಿಯೊಳಕ್ಕೆ > ಹೋಗುವ ಬದಲು ವೃತ್ತಾಕಾರವಾಗಿ ಚಲಿಸುತ್ತ ಕ್ರಮೇಣ ಗುಳಿಯಲ್ಲಿನ ದೊಡ್ಡ ಗುಂಡಿನ ಬಳಿ > ಸೇರುತ್ತದೆ. ಹಾಗೇ ಭಾರೀ ನಕ್ಷತ್ರಗಳು ಅಥವಾ ಭಾರೀ ಗ್ಯಾಲಕ್ಸಿಗಳು ಇದ್ದಲ್ಲೆಲ್ಲ > ಸ್ಪೇಸ್‌ಟೈಮ್ ಜಾಲದಲ್ಲಿ ಇಂಥ ಗುಳಿಗಳು ಏರ್ಪಡುತ್ತವೆಂದೂ ಗ್ರಹಗಳು ಅಲ್ಲೇ ಗಿರಕಿ > ಹೊಡೆಯುತ್ತಿರುತ್ತವೆ ಎಂತಲೂ ಐನ್‌ಸ್ಟೀನ್ ಅನುಯಾಯಿಗಳು ತರ್ಕಿಸಿದರು. > > ಇಡೀ ವಿಶ್ವವನ್ನು ಸ್ಪೇಸ್‌ಟೈಮ್ ಜಾಳಿಗೆ ಆವರಿಸಿದೆ ಎಂಬುದಕ್ಕೆ ಪರೋಕ್ಷ ಉದಾಹರಣೆಗಳು > ಒಂದರ ನಂತರ ಒಂದರಂತೆ ಲಭಿಸುತ್ತ ಹೋದವು (ಹಾಗೆ ಸಾಕ್ಷ್ಯವನ್ನು ಒದಗಿಸಿದವರಿಗೆ > ಪಿಎಚ್‌ಡಿಗಳೂ ನೊಬೆಲ್‌ಗಳೂ ಲಭಿಸುತ್ತ ಬಂದವು). ಉದಾಹರಣೆಗೆ: ದೊಡ್ಡ ಗ್ಯಾಲಕ್ಸಿಯ > ಹಿಂಭಾಗದಲ್ಲಿ ಪ್ರಖರ ತಾರೆಗಳ ಇನ್ನೊಂದು ಗುಂಪು ಇದೆಯೆಂದುಕೊಳ್ಳಿ. ಅವುಗಳಿಂದ ಹೊರಟ ಬೆಳಕು > ನೇರವಾಗಿ ನಮ್ಮತ್ತ ಬರುವ ಬದಲು ತನ್ನೆದುರಿನ ಗ್ಯಾಲಕ್ಸಿಯ ಗುರುತ್ವ ಕುಳಿಯನ್ನು > ಸುತ್ತುಹೊಡೆದು ಬರುತ್ತದೆ ಎಂಬುದು ಗೊತ್ತಾಯಿತು. > > ಅಂದರೆ, ಗ್ಯಾಲಕ್ಸಿಗಳು ನಿರ್ಮಿಸಿಕೊಂಡ ಕುಳಿಯೇ ಒಂಥರಾ ಮಸೂರದಂತೆ ಇರುತ್ತದೆ ಎಂಬುದು > ಸಾಬೀತಾಯಿತು. ಅವುಗಳ ಹಿಂಭಾಗದಲ್ಲಿದ್ದ ತಾರೆಗಳ ದೂರವನ್ನು ನಿಖರವಾಗಿ ಅಳೆಯುವುದು > ಸಾಧ್ಯವಾಯಿತು. ನಮ್ಮದೇ ಬುಧ ಗ್ರಹ ನ್ಯೂಟನ್ ನಿಯಮವನ್ನು ಅನುಸರಿಸುತ್ತ ಸೂರ್ಯನನ್ನು > ಸುತ್ತುಹೊಡೆಯುವ ಬದಲು ತನ್ನ ಕಕ್ಷೆಯಲ್ಲಿ ಆಗಾಗ ಏಕೆ ತಳಕಾ ಬಳಕಾ ಆಗುತ್ತದೆ ಎಂಬುದು > ಹಿಂದೆಲ್ಲ ದೊಡ್ಡ ಪ್ರಶ್ನೆಯಾಗಿತ್ತು. > > ಯಾವುದೋ ಅಗೋಚರ ಇನ್ನೊಂದು ಗ್ರಹ ಅಲ್ಲಿರಬೇಕು ಎಂದು ಅದನ್ನು ಶೋಧಿಸಲು ಏನೆಲ್ಲ ವಿಫಲ > ಯತ್ನಗಳು ನಡೆದಿದ್ದವು. ಆದರೆ ಐನ್‌ಸ್ಟೀನ್‌ನ ಸ್ಪೇಸ್‌ಟೈಮ್ ಜಾಲದಲ್ಲಿ ಸೂರ್ಯನನ್ನು > ಸಿಲುಕಿಸಿ ನೋಡಿದಾಗ ಬುಧಗ್ರಹದ ಎರ್ರಾಬಿರ್ರಿ ಚಾಲನೆಗೆ ಉತ್ತರ ಸಿಕ್ಕಿತ್ತು. > > ಈ ಸ್ಪೇಸ್‌ಟೈಮ್ ಜಾಳಿಗೆ ಎಲ್ಲೆಡೆ ಹರಡಿರುವುದರಿಂದ ಇಬ್ಬರು ಜಟ್ಟಿಗಳು ಗುದ್ದಾಡಿಕೊಂಡರೂ > ಜಾಳಿಗೆ ಅದುರಿ ಗುರುತ್ವ ಅಲೆಗಳು ಏಳುತ್ತವೆ. ಗೊತ್ತೇ ಆಗುವುದಿಲ್ಲ. ಗುರುಗ್ರಹಕ್ಕೆ > ಧೂಮಕೇತು ಅಪ್ಪಳಿಸಿದಾಗಲೂ ಏಳುತ್ತವೆ. ಆದರೆ ’ಅವು ಪತ್ತೆ ಹಚ್ಚಲು ಸಾಧ್ಯವಾಗದಷ್ಟು > ಸೂಕ್ಷ್ಮವಾಗಿರುತ್ತವೆ’ ಎಂದು ಸ್ವತಃ ಐನ್‌ಸ್ಟೀನ್ 1916ರಲ್ಲೇ ಹೇಳಿದ್ದ. ಬೃಹತ್ > ತಾರೆಯೊಂದು ತಾನಾಗಿ ಉಬ್ಬಿ ಉಬ್ಬಿ ಆಸ್ಫೋಟಿಸಿ ಕುಸಿದು ಕಪ್ಪುರಂಧ್ರವಾದಾಗ ಜಾಳಿಗೆ > ಅಲ್ಲೋಲಕಲ್ಲೋಲವಾಗುತ್ತದೆ. > > ಗುರುತ್ವ ಕಂಪನ ಸುತ್ತೆಲ್ಲ ಹರಡುತ್ತದೆ. ಆಗ ಹೊಮ್ಮಿದ ಅಲೆಗಳು ಎಲ್ಲ ಗ್ರಹ, ತಾರೆ, > ಗ್ಯಾಲಕ್ಸಿಗಳ ಮೂಲಕ ಹಾಯುತ್ತ, ನಮ್ಮ ಶರೀರದಲ್ಲೂ ಹೊಕ್ಕು ಹೊರಟು ಹೋಗುತ್ತಿರುತ್ತವೆ. > ಭೂಮಿಯ ಮೂಲಕ ದೊಡ್ಡದ್ದೊಂದು ಅಲೆ ಹಾದು ಹೋಗುವಾಗ ಬೆಂಗಳೂರು ಮತ್ತು ಮಾಸ್ಕೊ ನಡುವಣ ಅಂತರ > ಒಂದು ಕೂದಲೆಳೆಯಷ್ಟು ಕಡಿಮೆ ಆಗಬಹುದು. ಇಲ್ಲಿನ ಗಡಿಯಾರಕ್ಕೂ ಮತ್ತು ಮಾಸ್ಕೊ ಗಡಿಯಾರಕ್ಕೂ > ಒಂದು ಮಿಲಿ ಸೆಕೆಂಡ್‌ನಷ್ಟು ವ್ಯತ್ಯಾಸ ಕಾಣಬಹುದು. > > ಅಂಥ ಸ್ಫೋಟ ತೀರಾ ತೀರಾ ದೂರದಲ್ಲಿ ಘಟಿಸುತ್ತದಾದ್ದರಿಂದ ನಮ್ಮಲ್ಲಿಗೆ ಬರುವಷ್ಟರಲ್ಲಿ > ಅಲೆಗಳೂ ತೀರ ದುರ್ಬಲವಾಗುತ್ತವೆ. ಅದೂ ಒಳ್ಳೆಯದೇ. ಇಲ್ಲಾಂದರೆ ಆ ವಿಶಾಲ ವಿಶ್ವದಲ್ಲಿ > ಒಂದಲ್ಲ ಒಂದು ಕಡೆ ಸ್ಫೋಟ, ಡಿಕ್ಕಿಗಳು ನಡೆಯುತ್ತಲೇ ಇರುವಾಗ ಅದರ ಕಂಪನದ ಅಲೆಗಳು ಇಲ್ಲಿಗೆ > ಪದೇ ಪದೇ ಜೋರಾಗಿ ತಟ್ಟುತ್ತಿದ್ದರೆ ನಮ್ಮ ಗಡಿಯಾರಗಳೆಲ್ಲ ಅಸ್ತವ್ಯಸ್ತ ಆಗುತ್ತಿದ್ದವು. > ಓಡುತ್ತಿರುವ ರೈಲು ಉದ್ದಗಿಡ್ಡ ಆಗಬಹುದಿತ್ತು. ಬಸ್ ಹತ್ತುವ ಮೊದಲೇ ಇಳಿಯುವ ತಾಣ > ಬಂದಿರುತ್ತಿತ್ತು. > > ವಿಜ್ಞಾನಿಗಳು ಗುರುತ್ವ ತರಂಗಗಳನ್ನು ಗುರುತಿಸಲು ಯಾಕೆ ಹೆಣಗುತ್ತಿದ್ದಾರೆ ಎಂದರೆ, ಅಲೆ > ಬಂದಿದ್ದು ಗೊತ್ತಾದರೆ, ಅದು ಎಲ್ಲಿಂದ ಬಂತು ಎಂದು ನೋಡಿ, ಅಲ್ಲಿ ಏನು ಘಟಿಸಿತು ಎಂಬುದರ > ಚಿತ್ರಣ ಪಡೆಯಬಹುದು. ವಿಶ್ವದ ವೈಚಿತ್ರ್ಯಗಳನ್ನು ತೋರಿಸುವ ಈಗಿನ ಸಾಧನಗಳೆಲ್ಲ ಬೆಳಕು, > ಎಕ್ಸ್‌ರೇ ಅಥವಾ ಇತರ ಇಲೆಕ್ಟ್ರೊಮೆಗ್ನೆಟಿಕ್ ತರಂಗಗಳನ್ನು ಆಧರಿಸಿವೆ. ಶ್ರವಣ ಸಾಧನಗಳು > ಯಾವುವೂ ಇಲ್ಲ. ಒಂದರ್ಥದಲ್ಲಿ ನಾವು ಕಣ್ಣಿದ್ದ ಕಿವುಡರಾಗಿದ್ದೇವೆ. > > ಈಗ ಗುರುತ್ವ ಜಾಳಿಗೆಯ ಅಲುಗಾಟದಿಂದ ಹೊಮ್ಮುವ ಅಲೆಗಳು ಶ್ರವಣಮಾಧ್ಯಮದ ಮೂಲಕವೂ > ಬ್ರಹ್ಮಾಂಡದ ಸುದ್ದಿಯನ್ನು ತರುವಂತಾದರೆ ಮನುಕುಲಕ್ಕೇ ಕಿವಿ ಬಂದಂತಾಗುತ್ತದೆ. ವಿರಾಟ್ > ವಿಶ್ವದ ವಾದ್ಯಮೇಳ ನಮ್ಮ ಗ್ರಹಿಕೆಗೆ ಬಂದಂತಾಗುತ್ತದೆ. ಅದಕ್ಕೇ ಅಂಥ ಚಮತ್ಕಾರಿಕ ಅಲೆಗಳ > ಪತ್ತೆಗೆಂದೇ ಭಾರೀ ಸಂಕೀರ್ಣ ಸಲಕರಣೆಗಳನ್ನು ಹೂಡಿಟ್ಟುಕೊಂಡು ಸಾವಿರಾರು ಸಂಶೋಧಕರು > ಕಾಯುತ್ತಿದ್ದಾರೆ. > > ಗುರುತ್ವ ತರಂಗಗಳನ್ನು ಆಲಿಸಲೆಂದು ಅಮೆರಿಕದ ಎರಡು ಕಡೆ ‘ಲೈಗೊ’ ಹೆಸರಿನ ಶೋಧಯಂತ್ರಗಳನ್ನು > ಹೂಡಲಾಗಿದೆ. ಲೈಗೊ ಎಂಬುದು ‘ಲೇಸರ್ ಇಂಟರ್ಫೆರೊಮೀಟರ್ ಗ್ರಾವಿಟೇಶನಲ್- ವೇವ್ > ಒಬ್ಸರ್ವೇಟರಿ’ಯ ಸಂಕ್ಷಿಪ್ತ ಹೆಸರು. ಗಡಿಯಾರದಲ್ಲಿ ಸರಿಯಾಗಿ ಮೂರು ಗಂಟೆ (ಅಥವಾ 9 ಗಂಟೆ) > ತೋರಿಸುವ ಎರಡು ಮುಳ್ಳುಗಳಂತೆ ಪರಸ್ಪರ ಲಂಬಕೋನದಲ್ಲಿ ನಾಲ್ಕು ನಾಲ್ಕು ಕಿಲೊಮೀಟರ್ ಉದ್ದದ > ಎರಡು ನಿರ್ವಾತ ಕೊಳವೆಗಳನ್ನು ವಿಶಾಲ ಬಯಲಿನಲ್ಲಿ ಮಲಗಿಸಿದ್ದಾರೆ. > > ಈ ಕೊಳವೆಗಳ ಉದ್ದಳತೆಯಲ್ಲಿ ತುಸುವೇ ವ್ಯತ್ಯಾಸವಾದರೂ ಅಳೆಯಬಲ್ಲ ಅದ್ಭುತ ಲೇಸರ್ > ಸಾಧನವನ್ನು ಅಲ್ಲಿ ಅಳವಡಿಸಲಾಗಿದೆ. ಲೇಸರ್ ಅದೆಷ್ಟು ಸೂಕ್ಷ್ಮವೆಂದರೆ 30 ಟ್ರಿಲಿಯನ್ > ಕಿ.ಮೀ. ಆಚಿನ ನಕ್ಷತ್ರದ ದೂರವನ್ನು ಕೂಡ ಕೂದಲೆಳೆಯಷ್ಟೂ ವ್ಯತ್ಯಾಸ ಬಾರದಂತೆ ನಿಖರವಾಗಿ > ಅಳೆಯುತ್ತದೆ. ಗುರುತ್ವದ ಅಲೆ ಲೈಗೊಕ್ಕೆ ಅಪ್ಪಳಿಸಿದ್ದೇ ಆದರೆ ಒಂದು ಕೊಳವೆ ತುಸು > ಉದ್ದವಾಗುತ್ತದೆ, ಇನ್ನೊಂದು ತುಸು ಗಿಡ್ಡವಾಗುತ್ತದೆ. ಆಗಬೇಕು. ವೇಳೆಯೂ ಅದೇ ಪ್ರಮಾಣದಲ್ಲಿ > ಒಂದರಲ್ಲಿ ತುಸು ಹಿಗ್ಗುತ್ತದೆ ಇನ್ನೊಂದರಲ್ಲಿ ತುಸು ಕುಗ್ಗುತ್ತದೆ. ಕುಗ್ಗಬೇಕು. ಈ > ಪ್ರಯೋಗದ ವೀಕ್ಷಣೆಯಲ್ಲಿ ಭಾರತವೂ ಸೇರಿದಂತೆ 16 ದೇಶಗಳ ಒಂದು ಸಾವಿರ ವಿಜ್ಞಾನಿಗಳು > ಪಾಲ್ಗೊಂಡಿದ್ದು, ಲೇಸರ್ ವರದಿಯ ವಿಶ್ಲೇಷಣೆಯಲ್ಲಿ ತೊಡಗಿಕೊಂಡಿದ್ದಾರೆ. > > ಕಳೆದ ಸೆಪ್ಟೆಂಬರ್ 14ರಂದು ಕೊಳವೆಯ ಉದ್ದ ತುಸು ಹೆಚ್ಚಿತೆಂಬ ಸಿಗ್ನಲ್ ಬಂತು. ತುಸು > ಎಂದರೆ ಎಷ್ಟು ತುಸು? ಒಂದು ಪರಮಾಣುವಿನಲ್ಲಿರುವ ಒಂದು ಪ್ರೋಟಾನನ್ನು ಹತ್ತು ಸಾವಿರ ಭಾಗ > ಮಾಡಿದಾಗ ಒಂದು ಭಾಗ ಎಷ್ಟು ಉದ್ದ ಇರುತ್ತದೊ ಅಷ್ಟು! ಆ ಇನ್ನೊಂದು ಕೊಳವೆ ಅಷ್ಟೇ > ಪ್ರಮಾಣದಲ್ಲಿ ಸಂಕುಚಿತಗೊಂಡಿತು. > > ಗುರುತ್ವ ಅಲೆ ಅಪ್ಪಳಿಸಿದ್ದು ನಿಜವೆಂದು ನಂಬಬೇಕೆ? ಸಂಶಯಕ್ಕೆ ಆಸ್ಪದವಿದೆ. ಏಕೆಂದರೆ > ಎಲ್ಲೋ ಸಮೀಪದಲ್ಲಿ ಎರಡು ಲಾರಿಗಳು ಡಿಕ್ಕಿ ಹೊಡೆದರೂ ಅಂಥ ವ್ಯತ್ಯಾಸ ಆಗಬಹುದು. ನೂರಾರು > ಕಿ.ಮೀ. ಆಚೆ ಸಣ್ಣ ಭೂಕಂಪನ ಆಗಿದ್ದರೂ ಕೊಳವೆ ತುಸು ಕಂಪಿಸೀತು. ಅದಕ್ಕೇ ವಿಜ್ಞಾನಿಗಳು > ತಕ್ಷಣ ಅಲ್ಲಿಂದ ಮೂರು ಸಾವಿರ ಕಿ.ಮೀ. ದೂರದ ವಾಷಿಂಗ್ಟನ್‌ನಲ್ಲಿ ಹೂಡಲಾಗಿದ್ದ ಇನ್ನೊಂದು > ಅಂಥದ್ದೇ ಲೈಗೊ ಕೊಳವೆಗಳ ದಾಖಲೆ ನೋಡಿದರು. ಹೌದು, ಅಲ್ಲೂ ಅಷ್ಟೇ ಪ್ರಮಾಣದ ಗುರುತ್ವ ಅಲೆ > ದಾಖಲಾಗಿತ್ತು. ಅಂದಮೇಲೆ ಅದು ಅಸಲೀ ಅಲೆಯೇ ಇರಬೇಕು. ಅಬ್ಬ! ಕೊನೆಗೂ ಸಾಕ್ಷ್ಯ ಸಿಕ್ಕಿತು. > > ಈ ಅಲೆ ಬಂದಿದ್ದು ಎಲ್ಲಿಂದ? 130 ಕೋಟಿ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಭಾರೀ ಗಾತ್ರದ > ಎರಡು ಕಪ್ಪುರಂಧ್ರಗಳು ಪರಸ್ಪರ ತೀರ ಸಮೀಪದಲ್ಲಿ ಘೋರಾಘೋರ ಆರ್ಭಟದೊಂದಿಗೆ > ಘರ್ಷಿಸುತ್ತಿದ್ದವು. ಅವು ತಿಕ್ಕಾಡುತ್ತ ಹಠಾತ್ತಾಗಿ ಒಂದಾದಾಗ ಭಾರೀ ದೊಡ್ಡ ಗುರುತ್ವ ಅಲೆ > ಹೊಮ್ಮಿತ್ತು. ನಮ್ಮ ಸೂರ್ಯನಿಗಿಂತ 65 ಪಟ್ಟು ಹೆಚ್ಚು ದ್ರವ್ಯಗಳಿದ್ದ ಆ ಜೋಡಿ ಕಾಯಗಳು > ವಿಲೀನಗೊಂಡಾಗ ಮೂರು ಸೂರ್ಯರಷ್ಟು ಶಕ್ತಿ ಒಮ್ಮೆಗೇ ಬಿಡುಗಡೆಯಾಗಿ ಸುತ್ತೆಲ್ಲ ಗುರುತ್ವ > ಅಲೆಗಳ ಸುನಾಮಿ ಎದ್ದಿತು. ಅದು ಬೆಳಕಲ್ಲ; ಕೊಳದಲ್ಲಿ ಡೈನಮೈಟ್ ಸಿಡಿದಾಗ ಹೊಮ್ಮುವಂತೆ > ಗ್ರಾವಿಟಿ ಅಲೆಗಳು ವೃತ್ತಾಕಾರವಾಗಿ ಬೆಳಕಿನ ವೇಗದಲ್ಲಿ ವಿಸ್ತರಿಸುತ್ತ ದಾರಿಯುದ್ದಕ್ಕೂ > ಕಾಲ ಮತ್ತು ಅವಕಾಶವನ್ನು ಹಿಗ್ಗಿಸಿ ಕುಗ್ಗಿಸುತ್ತ 130 ಕೋಟಿ ವರ್ಷಗಳ ನಂತರ ನಾವಿದ್ದ > ಸೌರಮಂಡಲಕ್ಕೂ 14.9.2015ರಂದು ಅಪ್ಪಳಿಸಿ, ಲೈಗೊ ತೋಳುಗಳನ್ನೂ ಝೂಂಂ ಎಂದು ತಟ್ಟಿ > ಹೊರಟುಹೋಯಿತು. > > ನಿಬ್ಬೆರಗಾದ ವಿಜ್ಞಾನಿಗಳು ಆ ಘಟನೆಯನ್ನು ಮತ್ತೆ ಮತ್ತೆ ಪರೀಕ್ಷಿಸಿ ನೋಡಿದರು. > ಖಚಿತವೆಂದು ಅಪ್ಪಟ ಖಾತ್ರಿಯಾದಾಗ ಕುಣಿದು ಕುಪ್ಪಳಿಸಿ, ಮಾಧ್ಯಮಗಳೆದುರು ಕಳೆದ ವಾರ > ಘೋಷಿಸಿದರು. ನಾಲ್ಕುನೂರು ವರ್ಷಗಳ ಹಿಂದೆ ಗೆಲಿಲಿಯೊ ಮೊದಲ ಬಾರಿ ದೂರದರ್ಶಕ ಕೊಳವೆಯನ್ನು > ಆಕಾಶಕ್ಕೆ ಕಣ್ಣಿಟ್ಟ ನಂತರ ವಿಶ್ವದ ಚಿತ್ರಣವೇ ಬದಲಾದ ಹಾಗೆ, ಈಗ ಎರಡನೆಯ ಬಾರಿ ಬೇರೊಂದು > ಜೋಡಿ ಕೊಳವೆಗಳು ಬ್ರಹ್ಮಾಂಡಕ್ಕೆ ಕಿವಿಗೊಟ್ಟಿವೆ. ಮನುಕುಲಕ್ಕೇ ಕಿವಿ ತೆರೆದಂತಾಗಿದೆ. > > Hareeshkumar K > AM(PCM) > GHS HUSKURU > MALAVALLI TQ > MANDYA DT 571475 > mobile no 9880328224 > email [email protected] > > -- > 1. If a teacher wants to join STF, visit > http://karnatakaeducation.org.in/KOER/en/index.php/Become_a_STF_groups_member > 2. For STF training, visit KOER - > http://karnatakaeducation.org.in/KOER/en/index.php > 4. For Ubuntu 14.04 installation, visit > http://karnatakaeducation.org.in/KOER/en/index.php/Kalpavriksha > 4. For doubts on Ubuntu, public software, visit > http://karnatakaeducation.org.in/KOER/en/index.php/Frequently_Asked_Questions > 5. Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Why_public_software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/mathssciencestf. > For more options, visit https://groups.google.com/d/optout. > -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/mathssciencestf. For more options, visit https://groups.google.com/d/optout.
