ಶಿಕ್ಷಕನ  ಸೃಜನಶೀಲತೆ  ಎಂದರೆ ಅವನ  ಬೋಧನಾ  ರೀತಿಯನ್ನು  ಮತ್ತು  ಮೌಲ್ಯಮಾಪನದ
 ರೀತಿಯನ್ನು  ವಿದ್ಯಾರ್ಥಿಯ  ಮನೋಸಾಮರ್ಥ್ಯಕ್ಕೆ  ತಕ್ಕಂತೆ  ರೂಪಿಸುವುದೇ  ಆಗಿದೆ.
ಒಟ್ಟಿನಲ್ಲಿ        ವಿದ್ಯಾರ್ಥಿಯ  ಸಾಮರ್ತ್ಯಕ್ಕೆ  ತಕ್ಕಂತೆ  ಚಟುವಟಿಕೆಯಲ್ಲಿ
ವೈವಿಧ್ಯತೆಯನ್ನು ಅಳವಡಿಸುವುದು. ವಿದ್ಯಾರ್ಥಿಯು  ತಾನಾಗಿಯೇ  ಕಲಿಕೆಯಲ್ಲಿ  ತೊಡಗುವಂತೆ
 ಮಾಡುವುದು.   ಕಲಿಕೆಯಲ್ಲಿ  ವಿದ್ಯಾರ್ಥಿ ನಿರೀಕ್ಷಿತ  ಪಲಿತಾಂಶ  ಪಡೆಯುತ್ತಿಲ್ಲ  ಅಥವಾ
 ಪಡೆದಿಲ್ಲಾ  ಎಂದಾದರೆ   ಅದಕ್ಕೆ  ಸಕಾರಣಗಳನ್ನು  ಕಂಡುಹಿಡಿಯುವುದು  ಮತ್ತು  ನಿರೀಕ್ಷಿತ
 ಕಲಿಕೆ  ಉಂಟುಮಾಡಲು  ಬೋಧನಾ  ಚಟುವಟಿಕೆಯನ್ನು  ಬದಲಾಯಿಸುವುದು. ಅದು  ವಿದ್ಯಾರ್ಥಿಯ
 ಮನೋಸಾಮರ್ಥ್ಯಕ್ಕೆ  ಸರಿಯಾಗಿ  ಇರಬೇಕಾಗುತ್ತದೆ. ಎಲ್ಲಾ  ವಿದ್ಯಾರ್ಥಿಗಳು  ಭಿನ್ನ
 ಮನೋಸಾಮರ್ಥ್ಯ  ಹೊಂದಿರುತ್ತಾರೆ  ಎಂದು  ಮನಸ್ಸಿನಲ್ಲಿಟ್ಟುಕೊಂಡು  ನಮ್ಮ  ಚಟುವಟಿಕೆಗಳು
 ರೂಪಿಸುವಂತಾಗಬೇಕು.
ಬುದ್ದಿವಂತರು  ಶಿಕ್ಷಕರನ್ನು  ಯಾಕೆ  ಬೊಟ್ಟು ಮಾಡಿ  ಹೇಳುತ್ತಾರೆ  ಎನ್ನುವ   ತಮ್ಮ
ಅಭಿಪ್ರಾಯ  ಒಪ್ಪಿಕೊಳ್ಳುವಂತದ್ದಲ್ಲ. ಹಾಗಾದರೆ  ಶಿಕ್ಷಕರ  ವಿರುದ್ದವಾಗಿ  ಅಭಿಪ್ರಾಯ
 ಹೇಳುವವರೆಲ್ಲಾ  ಹಳೆಯ  ಮನಸ್ಥಿತಿಯನ್ನು  ಇಟ್ಟುಕೊಂಡು  ಹೇಳುವವರು ಎಂದು  ತಿಳಿಯ
ಬೇಕಾಗುತ್ತದೆ. ಎಲ್ಲರೂ  ಹಾಗೆ  ಆಗಲು  ಸಾಧ್ಯವಿಲ್ಲ. ಬಡೇ  ಭಾರತ್   ವರದಿಯಲ್ಲಿಯೂ
 ಆದುನಿಕ  ಶಿಕ್ಷಣದ  ಕಲ್ಪನೆಯನ್ನು  ವ್ಯಕ್ತಪಡಿಸಿರುವುದು  ಕಂಡುಬರುತ್ತದೆ.
ಶಿಕ್ಷಣದಲ್ಲಿ ಕಾಯಕಲ್ಪ ತರಲೆಂದೇ ಅನೇಕ ವಿಷಯಗಳು ಜಾರಿಯಾಗುತ್ತಿವೆ. ಜಡ್ಡುಗಟ್ಟಿದ
ವ್ಯವಸ್ಥೆ ಹಳೆಯದಕ್ಕೆ ಜೋತು ಬಿದ್ದಾಗ ಹೊಸತು ಹೊರೆಯೆನಿಸುತ್ತದೆ. ಯಾವುದೇ ಕಾಯಕಲ್ಪ ತರುವ
ವಿಷಯ ಹೊಸತರಲ್ಲಿ ಪ್ರಯೋಗವೆಂದೇ ಎನಿಸಿಕೊಳ್ಳುತ್ತದೆ. ಅದನ್ನು ಗಟ್ಟಿಯಾಗಲು ಬಿಡದೇ ಹಳೆಯ
ಕಂಫರ್ಟ್ಝೋನ್ ಅನುಭವಿಸಿದವರು ಮತ್ತೆ ಹಳೆಯದಕ್ಕೆ ತೆರಳಿ ಪ್ರಸ್ತುತವನ್ನು
ಅಪ್ಪಿಕೊಳ್ಳದಿರುವುದು ಅಪಾಯಕಾರಿ ಬೆಳವಣಿಗೆ. ನಂತರ ಇರುವ ವ್ಯವಸ್ಥೆಯನ್ನೇ ಟೀಕಿಸುತ್ತಾ
ಶಪಿಸುತ್ತಾ ಇರುವುದೂ ಆಗುತ್ತದೆ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ
ಆಭಿಪ್ರಾಯ ಭೇದದ ಹಕ್ಕಿದೆ.
 ಒಮ್ಮೆ ಯೋಚಿಸೋಣ. ತಂದೆ ತಾಯಿಯರಾಗಿ ನಮ್ಮ ಮನೆಯಲ್ಲಿರುವ ಮಕ್ಕಳನ್ನು ನಾವು
ಅರ್ಥೈಸಿಕೊಳ್ಳಲು ಎಷ್ಟು ಪ್ರಯತ್ನಿಸಿದ್ದೇವೆ? ಶಿಕ್ಷಣದ ಕಾರಣಕ್ಕೆ ಹಾಸ್ಟೆಲ್ನಲ್ಲಿ
ಹನ್ನೆರಡು ವರ್ಷದ ಮಗು ಹೇಳಿದ್ದು ಹೀಗಿತ್ತು. 'ಮನೆಯಿಂದ ಫೋನ್ ಬಂದರೆ ಭಯವಾಗುತ್ತದೆ. ಕಾರಣ
ಪೋಷಕರಿಬ್ಬರೂ ಫೋನ್ ರಿಸೀವರ್ ಎತ್ತಿಕೊಂಡ ತಕ್ಷಣ ಕೇಳುವ ಮೊದಲನೇ ವಿಷಯ- ಹೇಗ್ ಒದ್ತಾ
ಇದ್ದೀಯ ಚಿನ್ನೂ.... ಮತ್ತು ಕೊನೆಯ ಮಾತು ಚೆನ್ನಾಗಿ ಓದಿಕೋ ಎಂಬುದು'. ಒಮ್ಮೆಯಾದರೂ ನನ್ನ
ಆಕಾಂಕ್ಷೆ, ಸ್ನೇಹಿತರು, ಸುತ್ತಾಟ, ಜೀವನ ಅಥವ ಒತ್ತಡಗಳಿಲ್ಲದ ಮಾತಾಡಿಲ್ಲ ಎಂದು
ನೊಂದುಕೊಂಡು ಹೇಳುವಾಗ ಮಕ್ಕಳೆಂದರೆ ಹಿರಿಯರಿಗೆ ಇಷ್ಟೇಯೇ?.
 ಇನ್ನು ಶಿಕ್ಷಕರಾಗಿ ಶಾಲೆಯಲ್ಲಿರುವ ಮಗುವನ್ನು ನಾವು ಅರ್ಥೈಸಿಕೊಳ್ಳಲು ಏನೆಲ್ಲಾ
ಪ್ರಯತ್ನಿಸುತ್ತೇವೆ? ಓದು-ಬರೆ.  ಅಷ್ಟೇ .     ಓದಿದ್ದನ್ನು ನೆನಪಿಟ್ಟುಕೊಂಡು ಅದನ್ನು
ಉತ್ತರ ಪತ್ರಿಕೆಯಲ್ಲಿ ವಾಂತಿ ಮಾಡಿದರೆ ಮಗು ಜ್ಞಾನ ಕಲಿತಂತೆಯೇ? ಖಂಡಿತವಾಗಿಯೂ ಇಲ್ಲ.
ಮಗುವಿನ   ಕಲಿಕೆ  ವಿವಿಧ  ಆಯಾಮಗಳಲ್ಲಿ ಅರ್ಥೈಸಿಕೊಳ್ಳುವುದು ಮುಖ್ಯ. ಮಗುವನ್ನು
ಮನುಷ್ಯನನ್ನಾಗಿ ನೋಡುವುದು ಮುಖ್ಯ. ಇದಕ್ಕೆ ಯಾವ ಅರ್.ಟಿ.ಇ ಬೇಡ. ಮಕ್ಕಳ ಅಗತ್ಯತೆ ಮತ್ತು
ಭಾವನೆಗಳಿಗೆ ಶಿಕ್ಷಕರ ಸಂವೇದನಾ ಶೀಲತೆಯೇ ಸಾಕು. ಇಲ್ಲಿಯವರೆಗೆ ಮಗುವಿನ ಪ್ರಗತಿಯನ್ನು
ಕೇವಲ ಜ್ಞಾನ ವಲಯಕ್ಕೆ ಸೀಮಿತಗೊಳಿಸಿ ಸ್ಮರಣೆಗೆ ನಿಲ್ಲಿಸಿ ಬಿಟ್ಟಿದ್ದೇವೆ. ಮಗುವಿನ
ಅಭಿವ್ಯಕ್ತಿ, ಆಸಕ್ತಿ, ಮನೋಧೋರಣೆ, ಮೌಲ್ಯಗಳು ಮತ್ತು ಸಹಪಠ್ಯ ಚಟುವಟಿಕೆಗಳಿಂದ ಅವರನ್ನು
ಅರ್ಥೈಸಿಕೊಳ್ಳುವ ಪ್ರಯತ್ನ ನಮ್ಮಲ್ಲಿ ಆಗಿಲ್ಲ. ನಿಜವಾಗಿಯೂ ಮಕ್ಕಳನ್ನು ಮನುಷ್ಯರನ್ನಾಗಿ
ಮಾಡುವ, ಅವರನ್ನು ಮನುಷ್ಯರನ್ನಾಗಿ ಅರ್ಥೈಸಿಕೊಳ್ಳುವ ಆಯಾಮಗಳು ಇವೇ ಆಗಿವೆ. ನಮ್ಮ
ಪರೀಕ್ಷೆಗಳು ಇವುಗಳನ್ನು ಗಮನಿಸುತ್ತಿಲ್ಲ. ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು
ಪರೀಕ್ಷಾಧಾರಿತವಾಗಿ, ವರ್ಷಾಂತ್ಯದಲ್ಲಿ ಮಾಡಿದ ಮೌಲ್ಯಮಾಪನದ ಫಲಿತಾಂಶದಿಂದ ಮಾತ್ರ
ನಿರ್ಧರಿಸಿ ಅಂಕಗಳ ಹಣೆಪಟ್ಟಿ ಹಾಕಿಬಿಡುತ್ತೇವೆ.ಉತ್ತೀರ್ನ ಅನುತ್ತೀರ್ನ  ನಿರ್ಧರಿಸಿ
ಬಿಡುತ್ತೇವೆ.  ಮಗು ಏಕೆ ಕಲಿಯಲಿಲ್ಲ, ಕಲಿಯದಿರಲು ನಾವೆಷ್ಟು ಕಾರಣ, ಹೋಗಲಿ ಕಲಿಯದೇ ಇರುವ
ಅಂಶಗಳಿಗೆ ಹಿಮ್ಮಾಹಿತಿ ನೀಡಿದ್ದೇವೆಯೇ ಎಂಬ ಈ ವಿಷಯಗಳೆಲ್ಲಾ ಲಿಖಿತ ಪರೀಕ್ಷಾ
ಪದ್ಧತಿಯಲ್ಲಿ ಸಿಗುವುದಿಲ್ಲ. ಪ್ರತಿ ಮಗುವಿನ ಕಲಿಕಾ ವೇಗವು ಅದರ ಬೌದ್ಧಿಕ, ಸಾಮಾಜಿಕ
ಹಿನ್ನೆಲೆಯನ್ನು ಆಧರಿಸಿರುವುದರಿಂದ ಪ್ರತಿ ಮಗುವೂ ಭಿನ್ನ ಚೈತನ್ಯವನ್ನು ಹೊಂದಿರುತ್ತದೆ.
ಪ್ರತಿ ಮಗುವೂ ವಿಶಿಷ್ಟವಾಗಿ ಕಲಿಯುತ್ತದೆ. ಶಿಕ್ಷಕರಾಗಿ ನಾವು ಹಾಕಿದ ಪ್ರಶ್ನೆಗೆ ನಮ್ಮ
ಮನಸ್ಸಿನಲ್ಲಿರುವಂತೆಯೇ ಉತ್ತರ ಕೊಡಬೇಕೆಂದು ಪ್ರತಿ ಮಗುವಿನಿಂದ ಬಯಸಿದರೆ ನಾವು ಅಷ್ಟರ
ಮಟ್ಟಿಗೆ ಪ್ರಜಾಸತ್ತಾತ್ಮಕವಾಗಿಲ್ಲವೆಂದಾಗುತ್ತದೆ.
ಹೀಗಾಗಿ  ಅನುತ್ತೀರ್ಣ ಪಧ್ಧತಿಯೇ  ಸರಿ  ಇಲ್ಲ  ಎಂದು  ಟೀಕಿಸುತ್ತಿದ್ದೇನೆ.


*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: [email protected]
blog:NammaBellare.blogspot.com
school blog:* gpucbellare.blogspot.com <http://gpucbellare.blogspot.com>*
mobile: 9449592475

2016-02-20 0:13 GMT+05:30 Nagaraj MK <[email protected]>:

> ನೀವು ಸೃಜನಶೀಲತೆ ಎಂದು ಪದೇ ಪದೇ ಹೇಳುತ್ತೀರಿ ಅದನ್ನು ಸ್ವಲ್ಪ ವಿವರವಾಗಿ ಹೇಳಿ
> ಚರ್ಚಿಸೋಣ. ನಮ್ಮಲ್ಲಿ ಶಿಕ್ಷಕನ ಕಡೆಯೇ ಬೊಟ್ಟು ಮಾಡುತ್ತಾರೆ ಕಾರಣ ಇಲ್ಲಿಯವರೆಗೂ
> ಅನುಸರಿಸಿದ್ದು ಶಿಕ್ಷಕ ಕೇಂದ್ರಿತ ಶಿಕ್ಷಣವನ್ನು, ಮಗುವನ್ನು ಅವರಿಗೆ ಒಪ್ಪಿಸಿದರೆ ಪೋಷಕರ
> ಕೆಲಸ ಮುಗಿದಂತೆ ಇಲ್ಲಿ. ಕಲಿಸುವ ರೀತಿ ಸಂಪೂರ್ಣವಾಗಿ ಶಿಕ್ಷಕನನ್ನೇ ಅವಲಂಬಿಸಿತ್ತು. ಅದೇ
> ಮನಸ್ಥಿತಿಯನ್ನು ಹೊಂದಿದವರು ಹಾಗೆ ಹೇಳುತ್ತಾರೆ. ಪದೇ ಪದೇ ಶಾಲೆಗೆ ಭೇಟಿ ನೀಡುವ
> ವ್ಯಕ್ತಿಗಳನ್ನು ಕೇಳಿ ಕೆಲವು ಮಕ್ಕಳ ಬಗ್ಗೆ ನೈಜ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಈಗ
> ಶಿಕ್ಷಕ ದಾರಿ ತೋರಿಸುವವನೇ ಹೋರತು ಕರೆದುಕೊಂಡು ಹೋಗುವವನಲ್ಲ. ಪ್ರತಿ ಮಗುವಿಗೆ ಪ್ರತ್ಯೇಕ
> ಗಮನ ಹರಿಸಲು ನಮ್ಮ ಈಗಿನ ವ್ಯವಸ್ಥೆಯಲ್ಲಿ ಸಾಧ್ಯವೇ ನೀವೇ ಯೋಚಿಸಿ
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CABq%3DhV6JTCSmH36-bn0NyxYisw3uN3JSzvwKgoN5S%2B0HVRNS7A%40mail.gmail.com
> <https://groups.google.com/d/msgid/socialsciencestf/CABq%3DhV6JTCSmH36-bn0NyxYisw3uN3JSzvwKgoN5S%2B0HVRNS7A%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABtYOUUG6CUm6Tdb3mbictH1Vqmwe4d5zbRp3DAt5oTiaf606g%40mail.gmail.com.
For more options, visit https://groups.google.com/d/optout.

Reply via email to