[ms-stf '76210'] ಇಜ್ಞಾನ ಡಾಟ್ ಕಾಮ್: ಕನ್ನಡ ತಂತ್ರಾಂಶ ಲೋಕಕ್ಕೆ ಎರಡು ಹೊಸ ಸೇರ್ಪಡೆ. ಕನ್ನಡ ತಂತ್ರಾಂಶ ಲೋಕಕ್ಕೆ ಎರಡು ಹೊಸ ಸೇರ್ಪಡೆ ಇಜ್ಞಾನ ವಾರ್ತೆ ಸದಾಕಾಲವೂ ಬದಲಾಗುತ್ತಲೇ ಇರುವುದು ತಂತ್ರಜ್ಞಾನ ಜಗತ್ತಿನ ಹೆಗ್ಗಳಿಕೆ. ಈ ಮೂಲಕ ಸೃಷ್

2017-07-31 Thread HAREESHKUMAR K Agasanapura
http://www.ejnana.com/2017/07/waze-and-lipikaar.html?m=1

Hareeshkumar K
GHS Huskuru
Malavalli TQ
Mandya Dt
9880328224

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.


[ms-stf '76064'] ಎರಡು ಧ್ರುವಗಳತ್ತ ಎರಡು ತಾರೆಗಳು | ಪ್ರಜಾವಾಣಿ

2017-07-26 Thread HAREESHKUMAR K Agasanapura
http://m.prajavani.net/article/2017_07_27/509119
*ಧ್ರುವಗಳತ್ತ ಎರಡು ತಾರೆಗಳು*

27 Jul, 2017

ನಾಗೇಶ್ ಹೆಗಡೆ








ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವ ಎರಡೂ ನಮ್ಮ ದೇಶದಲ್ಲಿ ಬೆಳೆಯಬೇಕೆಂದು ಜೀವನವಿಡೀ
ಶ್ರಮಿಸಿದ ಪ್ರೊ. ಯಶ್‌ಪಾಲ್ ಅವರ ನಿಧನದ ವಾರ್ತೆ ಮೊನ್ನೆ ಟಿವಿ ವಾರ್ತೆಗಳಲ್ಲಿ
ಬರುತ್ತಿತ್ತು. ಅದೇ ಸಂದರ್ಭದಲ್ಲಿ ಎನ್‌ಡಿಟಿವಿ ವಾಹಿನಿಯಲ್ಲಿ ಇನ್ನೊಂದು ದೃಶ್ಯಾವಳಿ
ಪ್ರಸಾರವಾಗುತ್ತಿತ್ತು: ಹೆರಿಗೆ ಸಮಯದಲ್ಲಿ ತಾಯಿ ಮಕ್ಕಳ ಆರೋಗ್ಯ ಚೆನ್ನಾಗಿರಲೆಂದು
ಹೈದರಾಬಾದ್‌ನ ಗಾಂಧೀ ಆಸ್ಪತ್ರೆಯ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಹರಿ ಅನುಪಮಾ ಅವರು
ಮಹಾಮೃತ್ಯುಂಜಯ ಹೋಮವನ್ನು ಆಸ್ಪತ್ರೆಯಲ್ಲೇ ಹಮ್ಮಿಕೊಂಡು ಯಜ್ಞಕುಂಡದ ಎದುರು
ಸಮಿತ್ತುಗಳನ್ನು ಬೆಂಕಿಗೆ ಎಸೆಯುತ್ತ ಕೂತಿದ್ದರು.

ಅತ್ತ ಮಧ್ಯಪ್ರದೇಶದ ಆಸ್ಪತ್ರೆಗಳಲ್ಲಿ ಕೇವಲ ಐದು ರೂಪಾಯಿ ಶುಲ್ಕ ನೀಡಿದರೆ ರೋಗಿಯ
ಹಣೆಬರಹವನ್ನು ಹೇಳಬಲ್ಲ ಜ್ಯೋತಿಷಿಗಳಿಗೆ ಸರ್ಕಾರವೇ ಜಾಗ ನೀಡಿ ಕೂರಿಸಿದ ಸುದ್ದಿ
ಬರುತ್ತಿತ್ತು. ಅಂದಹಾಗೆ, ಖರಗಪುರದ ಐಐಟಿಯಲ್ಲಿ ವಾಸ್ತುಶಾಸ್ತ್ರದ ಪಾಠ ಆರಂಭವಾಗುತ್ತಿದೆ.
ಅಗಲಿದ ಗಣ್ಯ ವಿಜ್ಞಾನಿಗಳಿಬ್ಬರ ಬಗ್ಗೆ ಶ್ರದ್ಧಾಂಜಲಿ ಟಿಪ್ಪಣಿ ಹೀಗೆ ಆರಂಭವಾಗಬೇಕಿತ್ತೆ?

ವಿಕ್ರಮ್ ಸಾರಾಭಾಯಿಯವರ ಕನಸನ್ನು ನನಸು ಮಾಡಹೊರಟ ಇಬ್ಬರು ವಿಜ್ಞಾನಿಗಳು- ಇಬ್ಬರೂ
ಭೌತವಿಜ್ಞಾನಿಗಳು, ಇಬ್ಬರೂ ಪದ್ಮವಿಭೂಷಣ ಸಮ್ಮಾನಿತರು- 36 ಗಂಟೆಗಳ ಅಂತರದಲ್ಲಿ ಗತಿಸಿದರು.
ಪ್ರೊ. ಯು.ಆರ್. ರಾವ್ ಮತ್ತು ಪ್ರೊ. ಯಶ್‌ಪಾಲ್ ಇಬ್ಬರೂ ಅಮೆರಿಕದಲ್ಲಿ ಉನ್ನತ ಅಧ್ಯಯನ
ಮಾಡಿ ಬಂದವರು. ಇಬ್ಬರೂ ಅಹ್ಮದಾಬಾದ್‌ನ ಭೌತವಿಜ್ಞಾನ ಕೇಂದ್ರದಲ್ಲಿ ಹೊಸ ಸಂಶೋಧನ
ಕ್ಷೇತ್ರಕ್ಕೆ ಕಾಲಿಟ್ಟವರು. ನಂತರದ ಅವರಿಬ್ಬರ ಕಾರ್ಯಕ್ಷೇತ್ರಗಳು ಬಾಹ್ಯಾಕಾಶಕ್ಕೆ
ಸಂಬಂಧಿಸಿದ್ದೇ ಆದರೂ ಪರಸ್ಪರ ವಿರುದ್ಧ ದಿಕ್ಕಿಗೆ ವಿಸ್ತರಿಸಿಕೊಂಡವು. ಯು.ಆರ್. ರಾವ್
ರಾಕೆಟ್‌ಗಳತ್ತ ಮುಖ ಮಾಡಿದರೆ, ಯಶ್‌ಪಾಲ್ ವಿಜ್ಞಾನ ಶಿಕ್ಷಣವನ್ನು ಸುಧಾರಿಸುವತ್ತ ಗಮನ
ಹರಿಸಿದರು.

ಯಶ್‌ಪಾಲ್ ಬಾಹ್ಯಾಕಾಶ ಕ್ಷೇತ್ರಕ್ಕೆ ಐದು ವರ್ಷ ಮೊದಲು ಕಾಲಿಟ್ಟರು. 1970ರ ಆರಂಭದಲ್ಲಿ
ಅಮೆರಿಕ ಮತ್ತು ಸೋವಿಯತ್ ಸಂಘ ಎರಡೂ ಬಾಹ್ಯಾಕಾಶ ಪೈಪೋಟಿಯಲ್ಲಿ ತೊಡಗಿದ್ದವು.
ಉಪಗ್ರಹಗಳನ್ನು ಸಂಪರ್ಕದ ಸಾಧನವಾಗಿ ಬಳಸುವ ಕೆಲಸ ಬೇರೆ ಯಾವ ದೇಶಗಳಲ್ಲೂ ಆರಂಭವಾಗಿರಲಿಲ್ಲ.
ಭಾರತಕ್ಕೆ ಉಪಗ್ರಹ ಸೇವೆಯನ್ನು ಎರವಲು ನೀಡಲು ಅಮೆರಿಕ ಮುಂದೆ ಬಂತು. ಅದನ್ನು ಹೇಗೆ
ಬಳಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಲೆಂದು ಅಹ್ಮದಾಬಾದ್‌ನಲ್ಲಿ ‘ಸ್ಪೇಸ್ ಅಪ್ಲಿಕೇಶನ್
ಸೆಂಟರ್’ ಆರಂಭವಾಯಿತು.

ದೂರದರ್ಶನ ಪ್ರಸಾರಕ್ಕೆ ಬಳಸಲು ಸಾಧ್ಯವಾಗುವುದಾದರೆ ಭಾರತದ ಹಳ್ಳಿಹಳ್ಳಿಗಳಿಗೂ ಜ್ಞಾನ
ಪ್ರಸಾರಕ್ಕೆ ಅದು ಬಹುಮುಖ್ಯ ಸಾಧನ ಆದೀತೆಂದು ಯಶ್‌ಪಾಲ್ ಸೂಚಿಸಿದರು. ಈ ವಿಚಾರ ಅಂದಿನ
ಮಟ್ಟಿಗೆ ಜಗತ್ತಿಗೇ ಹೊಸದಾಗಿತ್ತು. ಅಮೆರಿಕ ದೊಡ್ಡ ಮನಸ್ಸು ಮಾಡಿ ತನ್ನ ಉಪಗ್ರಹವನ್ನು
ಸ್ವಲ್ಪ ಈಚೆ ಸರಿಸಿ ಭಾರತದ ಟಿವಿ ಕಾರ್ಯಕ್ರಮಗಳ ಪ್ರಸಾರಕ್ಕೆಂದೇ ಒಂದು
ಟ್ರಾನ್ಸ್‌ಪಾಂಡರನ್ನು (ಕನ್ನಡಿ ಎಂದಿಟ್ಟುಕೊಳ್ಳಿ) ಭಾಗಶಃ ಮೀಸಲಾಗಿಡಲು ನಿರ್ಧರಿಸಿತು.

ಅಂದಿನ ದಿನಗಳಲ್ಲಿ ಭಾರತದಲ್ಲಿ ಟಿವಿ ಎಂದರೆ ದಿಲ್ಲಿ, ಕೋಲ್ಕತಾ ಮತ್ತು ಮುಂಬೈಯಲ್ಲಿ ಅದೂ
ದಿನಕ್ಕೆ ಒಂದೆರಡು ಗಂಟೆಗಳ ಕಾಲ ಕಪ್ಪು ಬಿಳುಪು ಕಾರ್ಯಕ್ರಮಗಳ ಬಿತ್ತರಣೆ ಆಗುತ್ತಿತ್ತು.
ಇಡೀ ದೇಶದ ಪ್ರತಿ ಹಳ್ಳಿಗೂ, ವಿಶೇಷವಾಗಿ ಶಾಲೆಗಳಿಗೆ ವಿಜ್ಞಾನ ಶಿಕ್ಷಣ ನೀಡುವ ಹಾಗೂ
ಪಂಚಾಯ್ತಿ ಕಟ್ಟೆಗಳಲ್ಲಿ ಮೂಢ ನಂಬಿಕೆಗಳ ನಿವಾರಣೆಗೆ ಕಾರ್ಯಕ್ರಮಗಳನ್ನು ರೂಪಿಸುವ ಹಾಗೂ
ಸೂಕ್ತ ಸವಲತ್ತು (ಹಾರ್ಡ್‌ವೇರ್) ಒದಗಿಸುವ ಹೊಣೆಗಾರಿಕೆ ಯಶ್‌ಪಾಲ್ ತಂಡದವರ ಹೆಗಲ ಮೇಲೆಯೇ
ಬಿತ್ತು.

ಟಿವಿಯಲ್ಲಿ ಬಿತ್ತರಣೆಗೆಂದು ಕಾರ್ಯಕ್ರಮಗಳನ್ನು ರೂಪಿಸಲೆಂದು ಹೈದರಾಬಾದ್‌ನಲ್ಲಿ ಪ್ರತ್ಯೇಕ
ಕೇಂದ್ರವನ್ನು ತೆರೆಯಲಾಯಿತು. ಪುಣೆಯ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಿಂದ ಬಂದವರಿಗೆ ಟಿವಿಗಾಗಿ
ಶೈಕ್ಷಣಿಕ ಸಾಕ್ಷ್ಯಚಿತ್ರಗಳ ನಿರ್ಮಾಣದ ತರಬೇತಿ ಆರಂಭವಾಯಿತು. ಇತ್ತ ಹಳ್ಳಿಗಳಿಗೆ ಹೋಗಿ
ನೋಡಿದರೆ ಅಲ್ಲಿ ಶಾಲೆಗಳೇ ಅಪರೂಪ; ವಿಜ್ಞಾನ ಬೋಧನೆಗೆ ಲ್ಯಾಬ್ ಹಾಗಿರಲಿ, ಕೆಲವೆಡೆ ಕಪಾಟೂ
ಇಲ್ಲ, ಕರಿಹಲಗೆಯೂ ಇಲ್ಲ. ವಿದ್ಯುತ್ ಇಲ್ಲ.

ಮಕ್ಕಳಿಗಾಗಿ ವಿಜ್ಞಾನ ಪಾಠಗಳನ್ನು ನಿರೂಪಿಸುವ ಸವಾಲು ಇವರಿಗೆ ಎದುರಾಯಿತು. ಯಾವುದೇ
ಪರಿಕರಗಳಿಲ್ಲದೆಯೂ ಮಕ್ಕಳು ಬೆಳೆಯುತ್ತಿರುವ ಪರಿಸರದ ಉದಾಹರಣೆಗಳಲ್ಲೇ ವಿಜ್ಞಾನ ಮತ್ತು
ವೈಜ್ಞಾನಿಕ ತತ್ವಗಳನ್ನು ತೋರಿಸಿ ವೈಜ್ಞಾನಿಕ ಮನೋಭಾವವನ್ನು ಬಿತ್ತುವ ಹೊಸ
ಪಠ್ಯಕ್ರಮಗಳನ್ನು ರೂಪಿಸುವ ಹೊಣೆಯನ್ನು ಯಶ್‌ಪಾಲ್ ಹೊತ್ತರು. ಅವನ್ನೆಲ್ಲ ಪ್ರಸಾರ ಮಾಡಲು
ಅಮೆರಿಕದ ಉಪಗ್ರಹಗಳನ್ನು ಅವಲಂಬಿಸುವ ಬದಲು ಭಾರತದ್ದೇ ಉಪಗ್ರಹವನ್ನು ರೂಪಿಸುವ ಹೊಣೆ
ಯು.ಆರ್. ರಾವ್ ಪಾಲಿಗೆ ಬಂತು. ಒಂದೇ ಸಂಸ್ಥೆಯ ಒಂದು ಕಡೆ ‘ಆರ್ಯಭಟ’ ಉಪಗ್ರಹದ ನೀಲನಕ್ಷೆ
ಸಿದ್ಧವಾಗುತ್ತಿದ್ದಾಗ ಇನ್ನೊಂದು ಕಡೆ ಅದರ ಪ್ರಯೋಜನವನ್ನು ಜನಸಾಮಾನ್ಯರಿಗೆ ತಲುಪಿಸುವ
ವಿಧಿ ವಿಧಾನಗಳ ನಕ್ಷೆ ಸಿದ್ಧವಾಗತೊಡಗಿತ್ತು.

ಮುಂದಿನ ಕತೆಯನ್ನು ಮತ್ತೆ ಹೇಳಬೇಕಾಗಿಲ್ಲ. ಇಬ್ಬರೂ ಮೇಲೇರುತ್ತ, ಭಾರತದ ಪ್ರತಿಭೆಗಳನ್ನು
ಹುಡುಕಿ ಮೇಲೆತ್ತುತ್ತ ಹೋದರು. ಉಪಗ್ರಹ ತಯಾರಾದರೆ ಸಾಲದು, ಅದನ್ನು ಮೇಲಕ್ಕೆ ಎತ್ತಿ
ಕೂರಿಸಲು ನಮ್ಮದೇ ರಾಕೆಟ್ಟನ್ನು ರೂಪಿಸುವತ್ತ ಯು.ಆರ್. ರಾವ್ ನೇತೃತ್ವದ ತಂಡ
ಸಜ್ಜಾಗುತ್ತಿತ್ತು. ಮಕ್ಕಳ ಪಾಠಕ್ರಮ ಬದಲಾದರೆ ಸಾಲದು, ಬೋಧನಾ ಕ್ರಮ ಕೂಡ ಬದಲಾಗಬೇಕು,
ಅಜ್ಞಾನ ನೀಗಿದರೆ ಸಾಲದು, ಸಮಾಜದಲ್ಲಿ ಹಾಸು ಹೊಕ್ಕಾಗಿ
ರುವ ಮೌಢ್ಯಗಳ ನಿವಾರಣೆಗೂ ಕ್ರಮ ಕೈಗೊಳ್ಳಬೇಕು ಎಂದು ಯಶ್‌ಪಾಲ್ ತಮ್ಮನ್ನು
ತೊಡಗಿಸಿಕೊಂಡರು. ವಿಜ್ಞಾನ ಶಿಕ್ಷಣಕ್ಕೆಂದೇ ಸಂಶೋಧನ ಸಂಸ್ಥೆಗಳನ್ನು ಕಟ್ಟಿದರು. ಮಕ್ಕಳಿಗೆ
ವಿಜ್ಞಾನ ಬೋಧಿಸುವ ಸರ್ಕಾರೇತರ ಸಂಘಟನೆಗಳನ್ನು ಪ್ರೋತ್ಸಾಹಿಸಿದರು.

ಕಾಲೇಜಿಗೆ ಪ್ರವೇಶಿಸುತ್ತಿರುವವರಿಗೆ ಪ್ರತಿಭಾ ಪುರಸ್ಕಾರ ಯೋಜನೆಗಳನ್ನು,
ವಿಶ್ವವಿದ್ಯಾಲಯಗಳಿಗೆ ಉನ್ನತ ಶಿಕ್ಷಣದ ಕೊಂಡಿಕೇಂದ್ರಗಳನ್ನು ಪ್ರಾರಂಭಿಸಿದರು.
ಬಾಹ್ಯಾಕಾಶದ ಶಾಂತಿಯುತ ಬಳಕೆಗಾಗಿ 

[ms-stf '75505'] ಬೂದಿಯೇ ಕೆಂಡವಾಗುವ ಅಕ್ಷಯ ಮಾಯಾದಂಡ | ಪ್ರಜಾವಾಣಿ

2017-07-12 Thread HAREESHKUMAR K Agasanapura
http://m.prajavani.net/article/2017_07_13/505658

*ಬೂದಿಯೇ ಕೆಂಡವಾಗುವ ಅಕ್ಷಯ ಮಾಯಾದಂಡ*

13 Jul, 2017

ನಾಗೇಶ್ ಹೆಗಡೆ








‘ಮಂಗಳಯಾನ’ಕ್ಕಿಂತ ಅದೆಷ್ಟೊ ಪಟ್ಟು ದೊಡ್ಡ, ಅದೆಷ್ಟೊ ಪಟ್ಟು ಕ್ಲಿಷ್ಟ ತಾಂತ್ರಿಕ
ಸಾಧನೆಯೊಂದನ್ನು ಭಾರತದ ವಿಜ್ಞಾನಿಗಳು ಸದ್ಯದಲ್ಲೇ ಜಗತ್ತಿಗೆ ಪ್ರದರ್ಶಿಸಲಿದ್ದಾರೆ. ಏಳು
ವರ್ಷಗಳ ಹಿಂದೆಯೇ ಅದನ್ನು ತೋರಿಸಬೇಕಿತ್ತು. ಆದರೆ ಒಂದಲ್ಲ ಒಂದು ತಾಂತ್ರಿಕ ಅಡಚಣೆ
ಎದುರಾಗುತ್ತಿತ್ತು. ಈಗ ಅವೆಲ್ಲ ನಿವಾರಣೆಯಾಗಿ, ಪಟಾಕಿ ಸಜ್ಜಾಗಿದೆ. ಇನ್ನೇನು ಯಾವ
ಕ್ಷಣದಲ್ಲಾದರೂ ಕಡ್ಡಿ ಗೀರಲು ಅಣಿಯಾಗಿದ್ದೇವೆ ಎಂಬರ್ಥದಲ್ಲಿ ಅಣುಶಕ್ತಿ ಇಲಾಖೆ (ಡಿಎಇ)
ಹೇಳಿದೆ.
ಆ ಪಟಾಕಿಯ ಹೆಸರು ‘ಫಾಸ್ಟ್ ಬ್ರೀಡರ್’ ಪರಮಾಣು ಸ್ಥಾವರ. ಅದು ಮಾಮೂಲು ಅಣುಸ್ಥಾವರಗಳಿಗಿಂತ
ಭಿನ್ನವಾದದ್ದು. ಚೆನ್ನೈ ಬಳಿಯ ಕಲ್ಪಾಕ್ಕಮ್‌ನ ಇಂದಿರಾ ಗಾಂಧಿ ಸಂಶೋಧನ ಕೇಂದ್ರದಲ್ಲಿ ಕಳೆದ
30 ವರ್ಷಗಳಿಂದ ಅದನ್ನು ಕಟ್ಟಿ ನಿಲ್ಲಿಸುವ ಯತ್ನ ನಡೆದಿದೆ. ಅಮೆರಿಕ, ಬ್ರಿಟನ್,
ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ದೇಶಗಳು ಫಾಸ್ಟ್ ಬ್ರೀಡರ್ ತಂತ್ರಜ್ಞಾನವನ್ನು ಕರಗತ
ಮಾಡಲೆಂದು ಸಾವಿರಾರು ಕೋಟಿ ಹಣವನ್ನು ವ್ಯಯಿಸಿ, ಕೊನೆಗೂ ಅದು ತೀರಾ ಅಪಾಯಕಾರಿ ಎಂದು
ಕೈಬಿಟ್ಟಿವೆ. ರಷ್ಯ ದೇಶವೊಂದೇ ಈಗ ಫಾಸ್ಟ್ ಬ್ರೀಡರ್ ತಂತ್ರಜ್ಞಾನದಿಂದ ವಿದ್ಯುತ್
ಉತ್ಪಾದನೆ ಮಾಡುತ್ತಿದೆ. ಚೀನಾ ತಾನೂ ಒಂದು ಕೈ ನೋಡುತ್ತೇನೆಂದು ಕಳೆದ ಹತ್ತು ವರ್ಷಗಳಿಂದ
ಪ್ರಯೋಗದಲ್ಲಿ ನಿರತವಾಗಿದೆ. ಆದರೆ ಅದಕ್ಕೆ ಇನ್ನೂ ಹತ್ತಾರು ವರ್ಷಗಳು ಬೇಕಾಗಿದ್ದು ರಷ್ಯ
ಬಿಟ್ಟರೆ ನಾವೇ ಈಗ ಮುಂಚೂಣಿಯಲ್ಲಿದ್ದೇವೆ. ಕೊನೇ ನಿಮಿಷದ ಚೆಕಪ್ ನಡೆಯುತ್ತಿದೆ.

ಈ ತಂತ್ರಜ್ಞಾನ ಅಪಾಯಕಾರಿ, ದುಬಾರಿ ಎಂದು ಗೊತ್ತಿದ್ದರೂ ಅಣುತಂತ್ರಜ್ಞರು ಅದನ್ನು ಪಳಗಿಸಲು
ಹೆಣಗುವುದೇಕೆ? ಅದಕ್ಕೆ ಕೆಲವು ವಿಶೇಷ ಕಾರಣಗಳಿವೆ: ಫಾಸ್ಟ್ ಬ್ರೀಡರ್ ಯಶಸ್ವಿಯಾದರೆ ಅದು
ತಾನು ಉರಿಸಿದ ಇಂಧನಕ್ಕಿಂತ ಹೆಚ್ಚು ಇಂಧನವನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತಿದೆ.
ಅಂದರೆ ಹತ್ತು ಕಿಲೊ ಕೆಂಡದಿಂದ 17 ಕಿಲೊ ಇದ್ದಿಲನ್ನು ಪಡೆದ ಹಾಗೆ. ವಿಜ್ಞಾನದ ತತ್ವಗಳ
ಪ್ರಕಾರ ಅದು ಎಂದಿಗೂ ಸಾಧ್ಯವಾಗಲಾರದು. ಆದರೆ ತಮ್ಮ ಅನುಕೂಲಕ್ಕಾಗಿ ವಿಜ್ಞಾನಿಗಳು ಒಂದು
ಸಣ್ಣ ತಿದ್ದುಪಡಿ ಮಾಡಿಕೊಂಡಿದ್ದಾರೆ. ಹತ್ತು ಕಿಲೊ ಪರಮಾಣು ಇದ್ದಿಲನ್ನು ಸುಡುವಾಗ
ಅದರೊಂದಿಗೆ ಒಂದಿಷ್ಟು ಇಂಧನವಲ್ಲದ ಥೋರಿಯಂ ಮರಳನ್ನು ಸೇರಿಸಿರುತ್ತಾರೆ. ಇದ್ದಿಲು
ಉರಿಯುತ್ತ ಹೋದಂತೆ ಈ ಮರಳು ಕೂಡ ಇದ್ದಿಲಾಗುತ್ತದೆ. ಅದನ್ನು ಮತ್ತೆ ಉರಿಸಬಹುದು. ಎರಡನೆಯ
ಮುಖ್ಯ ಕಾರಣ ಏನೆಂದರೆ, ಥೋರಿಯಂ ಎಂಬ ಮೂಲವಸ್ತು ಮರಳಿನ ರೂಪದಲ್ಲಿ ನಿರುಪಯುಕ್ತವೆಂಬಂತೆ
ನಮ್ಮಲ್ಲಿ ಹೇರಳವಾಗಿ ಹಾಸಿಬಿದ್ದಿದೆ. ಹೇರಳ ಎಂದರೆ ನಮ್ಮಲ್ಲಿದ್ದಷ್ಟು ಥೋರಿಯಂ ಜಗತ್ತಿನ
ಬೇರೆ ಯಾವ ದೇಶದಲ್ಲೂ ಇಲ್ಲ! ಕೇರಳದಿಂದ ಹಿಡಿದು ತಮಿಳುನಾಡು, ಆಂಧ್ರ, ಒಡಿಶಾ,
ಬಂಗಾಳದವರೆಗೂ ಕಡಲಂಚಿನ ಮರಳರಾಶಿಯಲ್ಲಿ ಅದರದ್ದೇ ದರ್ಬಾರು. ಅದನ್ನು ಅಣು ಇಂಧನವನ್ನಾಗಿ
ಕುಲುಮೆಯಲ್ಲಿ ಪರಿವರ್ತನೆ ಮಾಡುತ್ತಿದ್ದರೆ ಮುಂದೆ ನೂರಿನ್ನೂರು ವರ್ಷಗಳ ಕಾಲ
ವಿದ್ಯುತ್ತನ್ನು ಉತ್ಪಾದಿಸುತ್ತಿರಬಹುದು. ಮೂರನೆಯ ಮುಖ್ಯ ಕಾರಣ ಎಂದರೆ, ಪರಮಾಣು
ತ್ಯಾಜ್ಯಗಳನ್ನೇ ಉರಿಸಿ ಶಕ್ತಿ ಪಡೆಯುವುದರಿಂದ ತ್ಯಾಜ್ಯದ ವಿಲೆವಾರಿಯ ಸಮಸ್ಯೆಯೇ
ಇರುವುದಿಲ್ಲ. ಅಂತೂ ಎಲ್ಲ ದೃಷ್ಟಿಯಿಂದಲೂ ಸೂಪರ್ ಸೂಪರ್.

ಫಾಸ್ಟ್ ಬ್ರೀಡರ್ ತಂತ್ರವನ್ನು ಸರಳವಾಗಿ ಹೀಗೆ ಹೇಳಬಹುದು: ಮಾಮೂಲು ಅಣುಸ್ಥಾವರಗಳಲ್ಲಿ
ಯುರೇನಿಯಂ ಸರಳುಗಳನ್ನು ನೀರಲ್ಲಿ ಅಥವಾ ಭಾರಜಲದಲ್ಲಿ ಉರಿಸಿ, ಉಗಿಯಿಂದ ಚಕ್ರ ತಿರುಗಿಸಿ
ವಿದ್ಯುತ್ ಉತ್ಪಾದಿಸುತ್ತಾರೆ. ಉರಿದ ಸರಳುಗಳು ಪ್ಲುಟೋನಿಯಂ ಎಂಬ ಪ್ರಳಯಾಂತಕ ರೂಪ
ತಾಳುತ್ತವೆ. ಅದನ್ನು ಹೊರಕ್ಕೆ ತೆಗೆದು ಆ ಜಾಗದಲ್ಲಿ ಹೊಸದಾಗಿ ಯುರೇನಿಯಂ ಸರಳುಗಳನ್ನು
ತೂರಿಸಬೇಕು.  ಹಾಗೆ ತೆಗೆದ ಪ್ಲುಟೋನಿಯಂ ಭಾರೀ ವಿಕಿರಣ ಸೂಸುತ್ತದೆ. ಅದನ್ನು ಆಸಿಡ್‌ನಲ್ಲಿ
ಮುಳುಗಿಸಿಟ್ಟು ಲಕ್ಷಾಂತರ ವರ್ಷ ಸುರಕ್ಷಿತ ಕಾಪಾಡಬೇಕು ಅಥವಾ ಬಾಂಬ್ ತಯಾರಿಕೆಗೆ ಬಳಸಬೇಕು.
ಎರಡೂ ಅಪಾಯಕಾರಿಯೇ. ಅದು ಈಗ ಎಲ್ಲೆಡೆ ಚಾಲ್ತಿಯಲ್ಲಿರುವ ತಂತ್ರಜ್ಞಾನ. ಫಾಸ್ಟ್ ಬ್ರೀಡರ್
ತಂತ್ರದಲ್ಲಿ ಇದೇ ನಿಗಿನಿಗಿ ಪ್ಲುಟೋನಿಯಮ್ಮಿಗೆ ಒಂದಿಷ್ಟು ಥೋರಿಯಂ ಮರಳು ಸೇರಿಸಿ ನೀರಿನ
ಬದಲು ಸೋಡಿಯಂ ದ್ರವದಲ್ಲಿ ಮುಳುಗಿಸುತ್ತಾರೆ. ಆ ಮಿಶ್ರ ಇಂಧನ ಇನ್ನೂ ‘ಫಾಸ್ಟ್’ ಆಗಿ
ಉರಿಯುತ್ತ (ವಿದ್ಯುತ್ ಉತ್ಪಾದಿಸುತ್ತಲೇ) ಹೊಸ ಇಂಧನವನ್ನು ‘ಬ್ರೀಡ್’ ಮಾಡುತ್ತದೆ.
ಅರ್ಥಾತ್ ‘ಶೀಘ್ರ ಹೆರುತ್ತದೆ’. ಒರಟಾಗಿ ಹೇಳಬೇಕೆಂದರೆ ಅಲ್ಲಿ ರಕ್ತ ಬೀಜಾಸುರನ ಸಂತತಿ
ಚಾಲೂ ಆಗುತ್ತದೆ. ಆದರೆ ಆ ಹೆರಿಗೆ ಮನೆಯೇ ಸಮಸ್ಯೆಗಳ ಗೂಡಾಗಿರುತ್ತದೆ. ಪ್ಲುಟೋನಿಯಂ
ಸ್ಪರ್ಶದಿಂದ ಸೋಡಿಯಂ ಕುದಿತಾಪದಲ್ಲಿರುವಾಗ ಅದರೊಳಗೆ ಸುರುಳಿ ಕೊಳವೆಯ ಮೂಲಕ ನೀರನ್ನು
ಹಾಯಿಸಬೇಕು. ನೀರು ಉಗಿಯಾಗಿ ದೂರ ಹೋಗಿ ಚಕ್ರವನ್ನು ತಿರುಗಿಸಿ ವಿದ್ಯುತ್ ಉತ್ಪಾದಿಸಬೇಕು.
ಸೋಡಿಯಂ ದ್ರವದಲ್ಲಿರುವ ನೀರಿನ ಕೊಳವೆ ತುಸುವೇ ಸೀಳು ಬಿಟ್ಟರೂ ಗೊತ್ತಲ್ಲ, ಸೋಡಿಯಂ
ಸಿಡಿಯುತ್ತದೆ. ಹೀಗೆ ಅತಿ ಶಾಖ, ಅತಿ ಒತ್ತಡ, ಅತಿ ವಿಕಿರಣದ ಬಗ್ಗಡವನ್ನು ದೂರ
ನಿಯಂತ್ರಣದಲ್ಲೇ ನಿಭಾಯಿಸಬೇಕು. ಚೂರೇಚೂರು ಹೆಚ್ಚುಕಮ್ಮಿಯಾಗಿ ಬೆಂಕಿ ಹೊತ್ತಿಕೊಂಡಿತೊ,
ಎಲ್ಲವನ್ನೂ ಶಟ್‌ಡೌನ್ ಮಾಡಿ, ಇಡೀ ವ್ಯವಸ್ಥೆ ತಂಪಾಗಲು ತಿಂಗಳುಗಟ್ಟಲೆ ಕಾದು, ಬಿರುಕಿಗೆ
ದೂರದಿಂದಲೇ ಬೆಸುಗೆ ಹಾಕಿ ಮತ್ತೆ ಚಾಲೂ ಮಾಡಬೇಕು.

ಸುಧಾರಿತ ದೇಶಗಳಲ್ಲಿ ಫಾಸ್ಟ್‌ಬ್ರೀಡರ್ ಎಂತೆಂಥ ಮಹಾನ್ ವೈಫಲ್ಯಗಳ ಖೆಡ್ಡಾಗುಂಡಿಯಾಗಿದೆ
ಎಂಬುದನ್ನು ನೋಡಿದರೆ ನಮ್ಮ ಯಶಸ್ವಿಗೆ ಅದೆಂಥ ಪ್ರಭಾವಳಿ ಬರಲಿದೆ ಎಂಬುದು ಗೊತ್ತಾಗುತ್ತದೆ.
ಜಪಾನ್ ಮೇಲೆ ಬಾಂಬ್ ಬೀಳಿಸಿ ಅಮೆರಿಕ ಛೀಥೂ ಎನ್ನಿಸಿಕೊಂಡ ಮರುವರ್ಷವೇ ಈ ಅಣುರಾಕ್ಷಸನನ್ನು
ಸೇವಕನನ್ನಾಗಿ ಪರಿವರ್ತಿಸುವ ಕನಸನ್ನು ಅದು ಎಲ್ಲೆಡೆ ಹಂಚಿತು. ಮೀಟರೇ ಅನಗತ್ಯವೆಂಬಷ್ಟು
ಅಗ್ಗದಲ್ಲಿ ವಿದ್ಯುತ್ ಶಕ್ತಿಯನ್ನು ಕೊಡಬಹುದು ಎಂದು ಹೇಳಿ ಅಣುಸ್ಥಾವರ ಹೂಡಲು ಕಂಡಕಂಡ
ದೇಶಗಳಲ್ಲಿ ತಂತ್ರಜ್ಞರು ಗುಮ್ಮಟ ಕಟ್ಟಿದರು. ಆದರೆ ಹಾಗೆ ಮಾಡಿದರೆ ಎಲ್ಲ ದೇಶಗಳಿಗೂ
ಸಾಲುವಷ್ಟು ಯುರೇನಿಯಂ ಇಂಧನ ಈ ಪ್ರಪಂಚದಲ್ಲಿಲ್ಲ ಎಂಬುದು ಗೊತ್ತಾಯಿತು. ಆಗ ಫಾಸ್ಟ್
ಬ್ರೀಡರ್ ಎಂಬ ಮಂತ್ರದಂಡ ಗೋಚರಿಸಿತು. ಥೋರಿಯಂ ಎಂಬ ಅತ್ಯಲ್ಪ ವಿಕಿರಣವುಳ್ಳ 

[ms-stf '75493'] ಜಲ ಮತ್ತು ಅನಿಲ ಮಾಲಿನ್ಯ ಸೆರೆಗೆ 'ನ್ಯಾನೊ' ತಂತ್ರಜ್ಞಾನ - sudhindra haldodderi - Vijaya Karnataka

2017-07-12 Thread HAREESHKUMAR K Agasanapura
http://m.vijaykarnataka.com/edit-oped/columns/sudhindra-haldodderi/articleshow/59536669.cms
*ಜಲ ಮತ್ತು ಅನಿಲ ಮಾಲಿನ್ಯ ಸೆರೆಗೆ 'ನ್ಯಾನೊ' ತಂತ್ರಜ್ಞಾನ*

Updated Jul 12, 2017, 09:58 AM IST

AAA

-*ಸುಧೀಂದ್ರ ಹಾಲ್ದೊಡ್ಡೇರಿ*

ಇಡೀ ದೇಹವನ್ನು ಪರಮಾಣುಗಳ ಹಂತಕ್ಕೆ ವಿಭಜಿಸಿ ಒಂದೊಂದೇ ಪರಮಾಣುವನ್ನು ಮತ್ತೆ ಮರುಜೋಡಣೆ
ಮಾಡ ಹೊರಟರೆ ಯಾರು ಬೇಕಾದರೂ , ಐನ್‌ಸ್ಟೀನ್‌, ಸ್ಫೀಫನ್‌ ಹಾಕಿಂಗ್‌, ನೋಮ್‌ ಚಾಮ್ಸ್‌ಕಿ
 ಆಗಬಹುದು ಆದರೆ ಅವರೆಲ್ಲರ ರಚನೆ ಪರಮಾಣುಗಳ ಹಂತದಲ್ಲಿಯೇ ನಿಖರವಾಗಿ ಗೊತ್ತಿದ್ದರೆ
ಮಾತ್ರ ಇದು ಸಾಧ್ಯ! ಜತೆಗೆ ನಮ್ಮೆಲ್ಲರ ಕಲ್ಪನೆಗೂ ಮೀರಿದ 'ನ್ಯಾನೊ ತಂತ್ರಜ್ಞ'ರು ಈ
ಕಾರ್ಯದ ನೇತೃತ್ವ ವಹಿಸಿಕೊಂಡಿರಬೇಕು. ಚೆನ್ನೈನಲ್ಲಿರುವ 'ಭಾರತೀಯ ತಂತ್ರಜ್ಞಾನ ಮಂದಿರ
(ಐ.ಐ.ಟಿ.) - ಮದ್ರಾಸ್‌ನ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಟಿ.ಪ್ರದೀಪ್‌
ಅವರ ಪ್ರಕಾರ ಅಮೀಬಾದಿಂದ ಆನೆಯವರೆಗೆ ಪ್ರಕೃತಿಯಲ್ಲಿ ಎಲ್ಲವೂ ನಿರ್ಮಾಣವಾಗಿರುವುದು
ಒಂದೊಂದೇ ಪರಮಾಣುಗಳು ನಿರ್ದಿಷ್ಟ ಸೂತ್ರದಂತೆ ಒಗ್ಗೂಡಿರುವುದರಿಂದ. ಪ್ರತಿಯೊಂದು ಪರಮಾಣು
ಜೋಡಣೆಯೂ ನ್ಯಾನೊ ತಂತ್ರಜ್ಞಾನದ ಪ್ರಾತ್ಯಕ್ಷಿಕೆ.

ಒಂದು 'ಸಿಲ್ಕ್‌' (ರೇಶಿಮೆ) ಎಳೆ ನಮ್ಮ ಕಣ್ಣಿಗೆ ಸ್ಪಷ್ಟವಾಗಿ ಕಂಡಿತೆಂದರೆ ಅದರ ಅಗಲ
ಮಿಲಿಮೀಟರ್‌ನ ಹತ್ತನೆಯ ಒಂದು ಭಾಗ. ಅದೇ ಎಳೆಯನ್ನು ಮೊದಲು ಒಂದು ನೂರು ಸಮ
ಭಾಗಗಳನ್ನಾಗಿಸಿ. ಮೈಕ್ರೊಮೀಟರ್‌ ಅಳತೆ ನಿಮ್ಮ ಕಲ್ಪನೆಗೆ ಸಿಕ್ಕಿತು. ಅಂಥ ಪುಟ್ಟ
ಅಳತೆಯನ್ನು ಮತ್ತೆ ಒಂದು ಸಹಸ್ರ ಹೋಳುಗಳನ್ನಾಗಿಸಿದರೆ 'ಇಲ್ಲಿ ನಾನೆ ನ್ಯಾನೊ' ಎಂದು ನಿಮ್ಮ
ಅಂಗೈ ಮೇಲೆ ಕುಳಿತಿರುತ್ತದೆ. ಆದರೆ ಈ 'ನ್ಯಾನೊ' ಅಳತೆಯ ಒಂದು ಲಕ್ಷ ಎಳೆಗಳನ್ನು
ಹೂಬತ್ತಿಯಂತೆ ಹೊಸೆದಿಟ್ಟರೆ ಮಾತ್ರ ನಮ್ಮ ಬರಿಗಣ್ಣಿಗದು ಗೋಚರವಾಗಬಲ್ಲದು. ಇಂಥ ಸೂಕ್ಷ ್ಮ
ಅಳತೆ ಸ್ಪಷ್ಟವಾಗಿ ಕಾಣದಿರಲು ಕಾರಣವೂ ಸ್ಪಷ್ಟ. ಸೀರೆಯಿಂದೆದ್ದು ಬಂದ ರೇಶಿಮೆ ಎಳೆಯನ್ನು
ನೂರು ಕಿಲೋಮೀಟರ್‌ ಉದ್ದದ ಹೈವೇಯಲ್ಲಿ ಎಸೆದರೆ, ಅದರ ಇರುವಿಕೆ ಯಾವ ದಾರಿಹೋಕನ ಕಣ್ಣಿಗೆ
ಬಿದ್ದೀತು? ಹಾಗೆಂದ ಮಾತ್ರಕ್ಕೆ ನ್ಯಾನೊ ತಂತ್ರಜ್ಞರೆಲ್ಲ ಅಷ್ಟು ಸೂಕ್ಷ್ಮಾತಿ ಸೂಕ್ಷ ್ಮ
ಅಳತೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಯಬಾರದು. ಹತ್ತರಿಂದ ನೂರು ನ್ಯಾನೊ ಮೀಟರ್‌
ಅಳತೆಯಲ್ಲಿ ನಿರ್ಮಿಸುವ ಯಾವುದೇ ಸಾಮಗ್ರಿ ನ್ಯಾನೊ ತಂತ್ರಜ್ಞಾನದ ವ್ಯಾಪ್ತಿಗೆ ಬರುತ್ತದೆ.

ಜಪಾನ್‌ ದೇಶದ ದೊಡ್ಡ ಕಾರು ನಿರ್ಮಾಣ ಸಂಸ್ಥೆ ಟೊಯೊಟಾ ನಿಮಗೆ ಗೊತ್ತು. ಅಲ್ಲಿನ ಸಂಶೋಧನೆ
ಮತ್ತು ಅಭಿವೃದ್ಧಿ ಕೇಂದ್ರದ ವಿಜ್ಞಾನಿಗಳು ಹೊರಗೆಡವಿರುವ ಸುದ್ದಿ ನಿಜಕ್ಕೂ
ಸ್ವಾರಸ್ಯಕರವಾಗಿದೆ. ಆ ಕೇಂದ್ರದ ಪ್ರಧಾನ ವಿಜ್ಞಾನಿ ಅನಿಲ್‌ ಕೆ. ಸಿನ್ಹಾ ಮತ್ತು ಸಹಚರರು
ನ್ಯಾನೊ ತಂತ್ರಜ್ಞಾನದ ಮೂಲಕ ವಾಯು ಮಾಲಿನ್ಯವನ್ನು ತಡೆಗಟ್ಟುವ ಬಗ್ಗೆ ಮಂಡಿಸಿರುವ ಪ್ರೌಢ
ಪ್ರಬಂಧವೊಂದು ನ್ಯಾನೊ ತಂತ್ರಜ್ಞರಿಗಷ್ಟೇ ಅಲ್ಲ, ಪರಿಸರ ಮಾಲಿನ್ಯ ನಿವಾರಣೆಯಲ್ಲಿ
ತೊಡಗಿಸಿಕೊಂಡವರಲ್ಲೂ ಕುತೂಹಲ ಮೂಡಿಸಿದೆ.

ಚಳಿಗಾಲದಲ್ಲಿ ಮಂಜು ಧರೆಗಿಳಿಯುವುದು ನಿಮಗೆ ಗೊತ್ತು. ಹೆಚ್ಚು ಶೀತಲ ಪ್ರದೇಶಗಳಲ್ಲಿ
ಮುಂದಿನ ದಾರಿ ಕಾಣದಷ್ಟು ಮಂಜು ದಟ್ಟವಾಗಿ ಚಾಲಕರನ್ನು ಕಂಗೆಡಿಸುವುದುಂಟು. ವಾತಾವರಣದಲ್ಲಿನ
ಮಾಲಿನ್ಯಕರ ಅಂಶಗಳಾದ ಧೂಳು ಹಾಗೂ ಹೊಗೆ ಈ ಮಂಜಿನೊಂದಿಗೆ ಬೆರೆತರೆ 'ಸ್ಮಾಗ್‌'
(ಸ್ಮೋಕ್‌+ಫಾಗ್‌ = ಸ್ಮಾಗ್‌) ಎಂಬ ದಟ್ಟ ಅಪಾರದರ್ಶಕ ತೆರೆ ಇಡೀ ರಸ್ತೆಯನ್ನು
ಆವರಿಸಿಕೊಳ್ಳುತ್ತದೆ. ವಾಹನಗಳು, ಕಾರ್ಖಾನೆಗಳು ಹೊರಗುಗುಳುವ ಧೂಮದಲ್ಲಿ ವಿಷಕಾರಿ
ಅನಿಲಗಳಾದ ಸಾರಜನಕದ ಆಕ್ಸೈಡ್‌ಗಳು, ಗಂಧಕದ ಆಕ್ಸೈಡ್‌ಗಳು ಹಾಗೂ ಆವಿಯಾಗಬಲ್ಲ ರಾಸಾಯನಿಕ
ಸಂಯುಕ್ತಗಳು ಸೇರಿಹೋಗಿರುತ್ತವೆ. ಜತೆಗೆ ಇವು ಕೆಳಮಟ್ಟದಲ್ಲಿ ಆಮ್ಲಜನಕವನ್ನು ಓಝೋನ್‌
ಅನಿಲವನ್ನಾಗಿ ಪರಿವರ್ತಿಸಿಬಿಡುತ್ತವೆ. ಉಸಿರಾಟದ ಸಮಯದಲ್ಲಿ ದೇಹಕ್ಕೆ ಸೇರಬಲ್ಲ ಈ ಅನಿಲಗಳು
ಅತ್ಯಂತ ಅಪಾಯಕಾರಿ. ಸದ್ಯಕ್ಕೆ ಬಳಕೆಯಲ್ಲಿರುವ ಆಧುನಿಕ ವಾಯು ಶುದ್ಧೀಕರಣ ವ್ಯವಸ್ಥೆಗಳು
'ಬೆಳಕಿಗೆ ಪ್ರತಿಸ್ಪಂದಿಸಬಲ್ಲ ರಾಸಾಯನಿಕ ವೇಗವರ್ಧಕಗಳು (Phಟಠಿಟ್ಚaಠಿa್ಝysಠಿs),
ಕ್ರಿಯಾಶೀಲ ಇದ್ದಿಲು ಮುಂತಾದವುಗಳನ್ನು ಬಳಸಿಕೊಳ್ಳುತ್ತವೆ. ಇವುಗಳ ನ್ಯೂನತೆಯೇನೆಂದರೆ
ಸಾಮಾನ್ಯ ತಾಪಮಾನದಲ್ಲಿ ಮಾಲಿನ್ಯಕಾರಕ ರಾಸಾಯನಿಕಗಳನ್ನು ಅವು ವಿಭಜಿಸಲಾರವು. ಸಾರಜನಕದ
ಆಕ್ಸೈಡ್‌ಗಳು, ಗಂಧಕದ ಆಕ್ಸೈಡ್‌ಗಳು ಹಾಗೂ ಆವಿಯಾಗಬಲ್ಲ ರಾಸಾಯನಿಕ ಸಂಯುಕ್ತಗಳಂಥ
ವಿಷಪೂರಿತ ಅನಿಲಗಳನ್ನು ಸಾಮಾನ್ಯ ತಾಪಮಾನದಲ್ಲಿಯೇ ಮೂಲ ವಸ್ತುಗಳನ್ನಾಗಿ ವಿಭಜಿಸಿ, ವಾಯು
ಶುದ್ಧೀಕರಣ ಮಾಡಬಲ್ಲ ಹೊಸ ಸಾಮಗ್ರಿಯೊಂದನ್ನು ಜಪಾನ್‌ ದೇಶದ ಸಂಶೋಧಕರು
ಆವಿಷ್ಕರಿಸಿದ್ದಾರೆ. ವಾಯು ಶುದ್ಧೀಕರಣಕ್ಕೆ ಸಾಮಾನ್ಯವಾಗಿ ಬಳಸುವ ಮ್ಯಾಂಗನೀಸ್‌
ಆಕ್ಸೈಡ್‌ನ ವಿರಳ ಮಿಶ್ರಣದಲ್ಲಿ ಬಂಗಾರದ ನ್ಯಾನೊ ಗಾತ್ರದ ತುಣಕುಗಳನ್ನು ಬೆರೆಯುವಂತೆ
ಮಾಡಿ ಹೊಸ ಬಗೆಯ ಶುದ್ಧೀಕರಣ ವ್ಯವಸ್ಥೆಯನ್ನು ಅನಿಲ್‌ ಸಿನ್ಹಾ ನೇತೃತ್ವದ ವಿಜ್ಞಾನಿಗಳ
ತಂಡವು ನಿರ್ಮಿಸಿದೆ. ಈ ರಾಸಾಯನಿಕ ವೇಗವರ್ಧಕವನ್ನು ಅಸಿಟಾಲ್ಡಿಹೈಡ್‌, ಟೌಲೀನ್‌ ಹಾಗೂ
ಹೆಕ್ಸೇನ್‌ಗಳಂಥ ಸಾಮಾನ್ಯ ಮಾಲಿನ್ಯಕಾರಕ ವಿಷವಸ್ತುಗಳ ನಿವಾರಣೆಗೆ ಬಳಸಿಕೊಳ್ಳಲಾಗಿದೆ.
ಪ್ರಯೋಗಶಾಲೆಯಲ್ಲಿನ ಅವರ ಪ್ರಯತ್ನಗಳು ಬಹುತೇಕ ಯಶಸ್ವಿಯಾಗಿವೆ.

ಇಲ್ಲಿ ಮ್ಯಾಂಗನೀಸ್‌ ಆಕ್ಸೈಡ್‌ ಪುಡಿಯ ವಿರಳ ಮಿಶ್ರಣವೆಂದರೆ ಹೆಚ್ಚು ಸರಂಧ್ರಗಳಿರುವಂಥದು
(pಟ್ಟಟ್ಠs). ಅಂದರೆ ಈ ಮಿಶ್ರಣದಲ್ಲಿ ಪೊಳ್ಳು ಭಾಗ ಹೆಚ್ಚಿದ್ದು ಗಾಳಿಯಾಡಲು ಅವಕಾಶ
ಕೊಡುವ, ಸಾಮಾನ್ಯವಾಗಿ ಬರಿಗಣ್ಣಿಗೆ ಕಾಣಿಸದ ಸಣ್ಣ ರಂಧ್ರಗಳಿರುತ್ತವೆ. ಈ ರಂಧ್ರಗಳಲ್ಲಿ
ಆವಿಯಾಗಬಲ್ಲ ರಾಸಾಯನಿಕಗಳು ತುಂಬಿಕೊಳ್ಳಲು ಹೆಚ್ಚಿನ ಸ್ಥಳಾವಕಾಶವಿರುತ್ತದೆ.
ಆಮ್ಲಜನಕದೊಡನೆ ಸಂಯೋಗ ಹೊಂದಿದ ರಾಸಾಯನಿಕಗಳು ಚಿನ್ನದ ಹುಡಿಯ ಮೇಲೆ ಮರು-ವಿಭಜನೆಗೊಂಡು
ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಈ ಎಲ್ಲ ಕಾರ್ಯಗಳನ್ನೂ ಅಚ್ಚುಕಟ್ಟಾಗಿ ನಡೆಸಲು
ಮ್ಯಾಂಗನೀಸ್‌ ಆಕ್ಸೈಡ್‌ನ ಪ್ರಮಾಣ ನಿಖರವಾಗಿರಬೇಕು ಹಾಗೂ ಚಿನ್ನದ ಹುಡಿ ಅದರೊಂದಿಗೆ
ಬೆರೆಯುವ ವಿಧಾನ ನಿರ್ದಿಷ್ಟ ರೀತಿಯಲ್ಲಿರಬೇಕು. ಅನಿಲ್‌ ಸಿನ್ಹಾ ಅವರ ತಂಡವು
ವಿನ್ಯಾಸಗೊಳಿಸಿರುವ ಈ ವ್ಯವಸ್ಥೆಯಲ್ಲಿ ಹೆಚ್ಚಿನ ಕಾರ್ಯಕ್ಷ ಮತೆಯಿಂದ ವಿಷ ರಾಸಾಯನಿಕಗಳು
ನಿರ್ಮೂಲವಾಗುತ್ತವೆ.

ನ್ಯಾನೊ ಅಳತೆಯ ಸಾಮಗ್ರಿಗಳ ನಿರ್ಮಾಣ ಹೆಚ್ಚು ತುಟ್ಟಿಯ ಬಾಬ್ತು. ನಮ್ಮಂಥ ದೇಶಗಳ ಸಾಮಾನ್ಯ
ಬಳಕೆಗೆ ನ್ಯಾನೊ ಸಾಮಗ್ರಿಗಳನ್ನು ನಿರ್ಮಿಸುವುದು ಸಾಧುವೆ, ಸಾಧ್ಯವೆ? ಎಂಬುದು ಪ್ರಶ್ನೆ.
ಸಾಮಗ್ರಿಯೊಂದನ್ನು ಕುಲುಮೆಯಲ್ಲಿ ದಹನ ಮಾಡಿದರೆ ಬೂದಿಯ ಕಣಗಳನ್ನು ನ್ಯಾನೊ
ಅಳತೆಯಲ್ಲಿರುವಂತೆ ನೋಡಿಕೊಳ್ಳಬಹುದು. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ರಸಾಯನ
ವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ.ಸಿ.ಪಾಟೀಲ್‌ ಈ ಬಗ್ಗೆ ಅತ್ಯುನ್ನತ
ಸಂಶೋಧನೆಗಳನ್ನು ನಡೆಸಿದ್ದಾರೆ. ನ್ಯಾನೊ ಬೂದಿಯನ್ನು ಪಡೆಯುವ ಒಂದು ವಿನೂತನ
ತಂತ್ರಜ್ಞಾನವನ್ನು ಪಾಟೀಲರು ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಹಾಗೂ ರಕ್ಷ
ಣಾ ಸಂಶೋಧನಾ ಸಂಸ್ಥೆಗಳಿಗೆ ವರ್ಗಾಯಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಸಂಶೋಧನಾ
ಕಾರ್ಯಗಳನ್ನು ಕೈಗೊಂಡ ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನ ರಸಾಯನ ವಿಜ್ಞಾನ ವಿಭಾಗದ
ಪ್ರಾಧ್ಯಾಪಕ ಟಿ.ಚಂದ್ರಪ್ಪನವರು ನೀರಿನ ಶುದ್ಧೀಕರಣಕ್ಕೆ ನ್ಯಾನೊ ಗಾತ್ರದ ರಾಸಾಯನಿಕ
ಹರಳುಗಳನ್ನು ಬಳಸುವೆಡೆ ತಮ್ಮ ಅಧ್ಯಯನ ಮುಂದುವರಿಸಿದ್ದಾರೆ. ಪ್ರಸ್ತುತ ನ್ಯಾನೊ
ಸಂಶೋಧನೆಗಳಿಗೆಂದೇ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಶ್ವವಿದ್ಯಾಲಯ ಧನಸಹಾಯ
ಆಯೋಗಗಳು 

[ms-stf '75119'] ನೆಟ್ ನೋಟ: ರೆಡಿಯಾಗುತ್ತಿದೆ ನೋವನ್ನು ಅಳೆಯುವ ಮೀಟರ್‌ - sudheendra haldodderi - Vijaya Karnataka

2017-07-02 Thread HAREESHKUMAR K Agasanapura
http://m.vijaykarnataka.com/edit-oped/columns/sudheendra-haldodderi/articleshow/59338851.cms

*ನೆಟ್ ನೋಟ: ರೆಡಿಯಾಗುತ್ತಿದೆ ನೋವನ್ನು ಅಳೆಯುವ ಮೀಟರ್‌*

Updated Jun 27, 2017, 07:21 PM IST

AAA

** ನೆಟ್ ನೋಟ: ಸುಧೀಂದ್ರ ಹಾಲ್ದೊಡ್ಡೇರಿ*

ಹೊಟ್ಟೆನೋವೆಂದು ವೈದ್ಯರ ಬಳಿ ಹೋಗಿರುತ್ತೀರಿ. ಪ್ರಾಥಮಿಕ ಪರೀಕ್ಷೆಯಲ್ಲಿ ವೈದ್ಯರು
ನಿಮ್ಮ ಹೊಟ್ಟೆಯ ವಿವಿಧ ಭಾಗಗಳನ್ನು ಒತ್ತುತ್ತಾ, ನೋವಿನ ತೀವ್ರತೆ ಎಲ್ಲಿದೆಯೆಂದು
ಗುರುತಿಸುವ ಪ್ರಯತ್ನ ಮಾಡುತ್ತಾರೆ. ಎಷ್ಟೋ ಬಾರಿ ತೀವ್ರ ನೋವಿನ ಭಾಗವನ್ನು ನಿಖರವಾಗಿ
ಗುರುತಿಸಲಾಗುವುದಿಲ್ಲ. ಕಾರಣ, ಮಿದುಳಿನಲ್ಲಿ ನೋವಿನ ಸಂವೇದನೆ ಹಾಗೂ ಸ್ಪರ್ಶ ಸಂವೇದನೆಗಳ
ನಡುವೆ ಸರಿಯಾಗಿ ತಾಳೆ ಹಾಕಲು ಸಾಧ್ಯವಾಗುವುದಿಲ್ಲ. ಮತ್ತೂ ಒಂದು ಪ್ರಬಲ ಕಾರಣವೆಂದರೆ,
ನೋವು ತೀವ್ರವಾಗಿದ್ದಾಗ ಯಾವುದೇ ಭಾಗದ ಸ್ಪರ್ಶವೂ ಒಂದೇ ಬಗೆಯ ನೋವಿನ ಸ್ಪಂದನ
ನೀಡುತ್ತಿರುವಂತೆ ಭಾಸವಾಗುತ್ತದೆ. ಹಲ್ಲು ನೋವಿನ ತಪಾಸಣೆಯ ಸಂದರ್ಭದಲ್ಲಿ ಈ ಬಗೆಯ
ಅನುಭವಗಳು ನಿಮಗಾಗಿರಬಹುದು.

ಜ್ವರ ಬಂದರೆ ತಾಪಮಾನ ಅಳೆಯುವ ಸಾಧನವಿದೆ. ರಕ್ತದೊತ್ತಡದ ಏರುಪೇರನ್ನು ಗುರುತಿಸಲು
ಅಳತೆಗೋಲಿದೆ. ನಾಡಿಮಿಡಿತವನ್ನು ಎಣಿಸಲೂ ಬಹುದು. ನೋವೆಂಬ ಬಾಧೆಯನ್ನು ಗಣನೆ ಮಾಡುವ
ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು, ಅಲ್ಲವೆ? ನೋವಿನ ತೀವ್ರತೆಯನ್ನು ಪರೋಕ್ಷ ವಾಗಿ
ಗುರುತಿಸಬಹುದು. ಉದಾಹರಣೆಗೆ ಕಿರುಚಾಟದ ತೀವ್ರತೆ ನೋವಿನ ತೀವ್ರತೆಗೆ ಅನುಗುಣವಾಗಿರಬಹುದು.
ಆದರೆ, ನಾಟಕೀಯವಾಗಿ ಅಬ್ಬರಿಸುವವರು ವೈದ್ಯರನ್ನು ದಿಕ್ಕೆಡಿಸಬಹುದು. ಹಾಗೆಯೇ, ನೋವನ್ನು
ತಡೆದುಕೊಳ್ಳಬಲ್ಲ ಸತ್ಯಾಗ್ರಹಿಗಳು ವೈದ್ಯರನ್ನು ಗೊಂದಲಕ್ಕೀಡು ಮಾಡಬಹುದು. ಹೀಗಾಗಿ ನೋವು
ನಿವಾರಕ ಮದ್ದಿನ ಪ್ರಮಾಣವನ್ನು ನಿಗದಿ ಪಡಿಸುವುದರಲ್ಲಿ ಹೆಚ್ಚೂ-ಕಮ್ಮಿಯಾಗುತ್ತದೆ. ಬಹುತೇಕ
ನೋವು ನಿವಾರಕ ಮದ್ದುಗಳು ಅಡ್ಡ ಪರಿಣಾಮಗಳನ್ನುಂಟು ಮಾಡುವುದರಿಂದ, ಅಗತ್ಯಕ್ಕಿಂತಲೂ
ಹೆಚ್ಚಿನ ಪ್ರಮಾಣದ ಸೇವನೆ ಅಪಾಯಕರ. ಇಷ್ಟು ನೋವಿಗೆ ಇಷ್ಟೇ ಪ್ರಮಾಣದ ಮದ್ದು ನೀಡುವ ಮೂಲಕ
ಇಂಥ ತೊಂದರೆಗಳನ್ನು ನಿವಾರಿಸಬಹುದೆನೋ ನಿಜ. ಆದರೆ ಒಬ್ಬೊಬ್ಬರ ದೇಹ ಪ್ರಕೃತಿಯೂ
ಭಿನ್ನವಾಗಿರುವ ಕಾರಣ ಯಾವುದೇ ರಾಸಾಯನಿಕದ ಪರಿಣಾಮಗಳು ಒಂದೇ ಬಗೆಯದಾಗಿರುವುದಿಲ್ಲ. ನೋವಿನ
ತೀವ್ರತೆಯನ್ನು ನಿಖರವಾಗಿ ಗುರುತಿಸುವ ಮೂಲಕ ಸರಾಸರಿ ಮದ್ದಿನ ಪ್ರಮಾಣವನ್ನು
ಲೆಕ್ಕಹಾಕಬಹುದೆಂದು ವೈದ್ಯವಿಜ್ಞಾನಿಗಳು ಆಲೋಚಿಸುತ್ತಿದ್ದಾರೆ.

ಅಮೆರಿಕದ ಸ್ಟಾನ್‌ಫರ್ಡ್‌ ವಿಶ್ವವಿದ್ಯಾಲಯದ ಸ್ಕೂಲ್‌ ಆಫ್‌ ಮೆಡಿಸನ್‌ನಲ್ಲಿ ನೋವನ್ನು
ಗುರುತಿಸುವ, ತೀವ್ರತೆಯನ್ನು ಅಳೆಯುವ ಮಾಪನವೊಂದು ಸಿದ್ಧವಾಗುತ್ತಿದೆ. ಕೆಲವೊಂದು ದೈಹಿಕ
ನ್ಯೂನತೆಗಳಿಂದಾಗಿ ನೋವನ್ನು ಗುರುತಿಸಲು ಅಶಕ್ತರಾದವರ ನೋವನ್ನು ಈ ಯಂತ್ರವು
ಅಳೆಯಬಲ್ಲದೆಂದು ವಿಜ್ಞಾನ ಪತ್ರಿಕೆಗಳು ವರದಿ ಮಾಡಿವೆ. ಇದಕ್ಕಾಗಿ ಅತ್ಯಾಧುನಿಕ ತಪಾಸಣಾ
ವಿಧಾನವಾದ 'ಫಂಕ್ಷ ನಲ್‌ ಮ್ಯಾಗ್ನೆಟಿಕ್‌ ರೆಸೊನೆನ್ಸ್‌ ಇಮೇಜಿಂಗ್‌' ಅನ್ನು ಬಳಸಲಾಗಿದೆ.
ಸಾಮಾನ್ಯವಾಗಿ ಮಿದುಳಿಗೆ ಸಂಬಂಧಿಸಿದ ಆಘಾತಗಳಾದಲ್ಲಿ ವೈದ್ಯರು 'ಎಂ.ಆರ್‌.ಐ.
ಸ್ಕ್ಯಾ‌ನ್‌' ಮಾಡಿಸಿ ಎಂದು ಸಲಹೆ ನೀಡುತ್ತಾರಲ್ಲವೆ? ನರತಂತುಗಳ ವ್ಯೂಹದಲ್ಲಿ ರಕ್ತದ
ಚಟುವಟಿಕೆಗಳನ್ನು ಗುರುತಿಸುವ ತಪಾಸಣಾ ವಿಧಾನವಿದು. ಚಟುವಟಿಕೆಗಳಿಗೆ ಬೇಕಾದ ಗ್ಲುಕೋಸ್‌
ಹಾಗೂ ರಕ್ತ ಸಂಪರ್ಕಕ್ಕೆಂದು ನರತಂತುಗಳಲ್ಲಿ ವಿಶೇಷ ಚೀಲಗಳಿರುವುದಿಲ್ಲ. ಸಂದರ್ಭಕ್ಕೆ
ತಕ್ಕಂತೆ ಚಟುವಟಿಕೆಗಳು ಹೆಚ್ಚಿರುವ ಪ್ರದೇಶದಲ್ಲಿ ರಕ್ತಪರಿಚಲನೆ ಹೆಚ್ಚಾಗುತ್ತದೆ. ಇಂಥ
ವಿಶೇಷವಾದ, ಅಂದರೆ ಅಸಾಮಾನ್ಯ ರಕ್ತಪರಿಚಲನೆಯನ್ನು ಆ ಪ್ರದೇಶದ ಕಾಂತ ಸ್ಪಂದನವನ್ನು ಅಳೆಯುವ
ಮೂಲಕ ಗುರುತಿಸಬಹುದು. ವಿಕಿರಣ ರಹಿತ ಹಾಗೂ ಕೆಲವೇ ಸೆಕೆಂಡುಗಳ ಚಟುವಟಿಕೆಯನ್ನೂ ನಿಖರವಾಗಿ
ಗುರುತಿಸಬಲ್ಲ ವಿಧಾನವಾಗಿರುವುದರಿಂದ 'ಫಂಕ್ಷ ನಲ್‌ ಎಂ.ಆರ್‌.ಐ.' ಹೆಚ್ಚು ಜನಪ್ರಿಯವಾದ
ಮಿದುಳು ತಪಾಸಣಾ ಸೌಲಭ್ಯವಾಗಿದೆ.

ಸ್ಟಾನ್‌ಫರ್ಡ್‌ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು, ಅರಿವಳಿಕೆ ತಜ್ಞರು ಹಾಗೂ 'ನೋವು
ಪರಿಣತ'ರಾದ ಶಾನ ಮೆಕೇಯ್‌ ನೇತೃತ್ವದ ವೈದ್ಯವಿಜ್ಞಾನಿಗಳ ತಂಡವು 'ಎಫ್‌.ಎಂ.ಆರ್‌.ಐ.'
ತಪಾಸಣಾ ವಿಧಾನದಿಂದ ದಕ್ಕಿದ ಮಾಹಿತಿಯನ್ನು ವಿಶೇಷವಾಗಿ ರೂಪಿಸಿದ ಕಂಪ್ಯೂಟರ್‌
ಸೂತ್ರಗಳೊಂದಿಗೆ ವಿಶ್ಲೇಷಣೆ ಮಾಡಿದೆ. ಈ ಮೂಲಕ ನೋವಿಗೊಂದು ಅಳತೆಗೋಲು ಸಿಕ್ಕಂತಾಗಿದೆ.
ನೋವು ಗ್ರಹಿಸುವ ಮಿದುಳಿನ ಭಾಗದಲ್ಲಾಗುವ ಸೂಕ್ಷ ್ಮ ಬದಲಾವಣೆಗಳನ್ನು ಗ್ರಹಿಸಿ, ಚಿತ್ರ
ವಿಶ್ಲೇಷಣೆಯ ಮೂಲಕ ನೋವಿನ ತೀವ್ರತೆಯೆಷ್ಟು ಎಂಬುದನ್ನು ತಿಳಿಯಬಹುದಾಗಿದೆ. ಇದುವರೆಗೂ
ನೋವಿನಿಂದ ಬಳಲುವವರ ಹೇಳಿಕೆಯ ಆಧಾರದ ಮೇಲೆ ವೈದ್ಯರು ನೋವಿನ ತೀವ್ರತೆಯನ್ನು ಅಂದಾಜು
ಮಾಡುತ್ತಿದ್ದರು. ಸೂಕ್ಷ ್ಮ ಸಂವೇದನೆಯನ್ನು ಹೊಂದಿರುವವರು ಅಥವಾ ತೊಂದರೆಯನ್ನು
ಹೇಳಿಕೊಳ್ಳಲು ನಾಚದವರು ತಮ್ಮ ಹೇಳಿಕೆ ಅಥವಾ ನಡೆವಳಿಕೆಯ ಮೂಲಕ ತೀವ್ರತೆ ಹೆಚ್ಚಾಗಿದೆಯೆಂದು
ಮನವರಿಕೆ ಮಾಡಿಕೊಡುತ್ತಿದ್ದರು.

ನೋವಿನ ತೀವ್ರತೆಯನ್ನು 'ಎಫ್‌.ಎಂ.ಆರ್‌.ಐ.' ಸಂಕೇತಗಳ ಮೂಲಕ ಗ್ರಹಿಸಿದ ನಂತರ ವಿಶ್ಲೇಷಣೆ
ಮಾಡುವ ಕಂಪ್ಯೂಟರ್‌ ಸೂತ್ರಗಳನ್ನು ರಚಿಸುವಲ್ಲಿ ಶಾನ್‌ ಮೆಕೇಯ್‌ ಅವರಿಗೆ ನೆರವಾದವರು,
ನೀಲ್‌ ಚಟರ್ಜಿ. ಪ್ರಸ್ತುತ ಮೆಕೇಯ್‌ ಅವರ ಮಾರ್ಗದರ್ಶನದಲ್ಲಿ ಚಟರ್ಜಿ ಡಾಕ್ಟರೇಟ್‌ ಅಧ್ಯಯನ
ನಡೆಸುತ್ತಿದ್ದಾರೆ. ಈ ಹಿಂದೆ 1995ರಲ್ಲಿಯೇ ನೋವಿನ ಅಳತೆಗೋಲೊಂದು ಕಂಪ್ಯೂಟರ್‌ ಸೂತ್ರವಾಗಿ
ನಿರ್ಮಾಣವಾಗಿತ್ತು. ಅದನ್ನು ಓರ್ವ ವ್ಯಕ್ತಿಯ ಹೇಳಿಕೆಯ ಆಧಾರದ ಮೇಲೆ ರೂಪಿಸಲಾಗಿತ್ತು.
ಚಟರ್ಜಿ ಅವರ ತಂಡವು ನಿರ್ಮಿಸಿದ ಯಂತ್ರವನ್ನು ಮೊದಲು ನೋವಿನಿಂದ ಬಳಲುವ ಓರ್ವ ವ್ಯಕ್ತಿಯ
'ಎಫ್‌.ಎಂ.ಆರ್‌.ಐ.' ಸಂಕೇತ, ಆತನ ನೋವಿನ ತೀವ್ರತೆಯ ಬಗೆಗಿನ ಹೇಳಿಕೆಗಳಿಗೆ
ಹೊಂದಿಸಲಾಯಿತು. ವಿವಿಧ ದಿನಗಳ, ವಿವಿಧ ಸಮಯಗಳಲ್ಲಿ ದಾಖಲಿಸಿದ ಮಾಹಿತಿಯ ಆಧಾರದ ಮೇಲೆ ಆ
ಯಂತ್ರವು ವ್ಯಕ್ತಿಯೊಬ್ಬನ ನೋವಿನ ತೀವ್ರತೆಯನ್ನು ಗ್ರಹಿಸಿ ಅದಕ್ಕೊಂದು ಸೂಚ್ಯಂಕ
ನೀಡುವಲ್ಲಿ ಯಶಸ್ವಿಯಾಯಿತು. ಬಹುದಿನಗಳ ಪರಿಶೀಲನೆಯಲ್ಲಿ ಯಂತ್ರವು ಪ್ರತಿಶತ ಎಂಬತ್ತೊಂದು
ಬಾರಿ ಸರಿಯುತ್ತರ ನೀಡಿತ್ತು. ಇಂಥ ಯಶಸ್ಸಿನಿಂದ ಉತ್ತೇಜಿತರಾದ ಸ್ಟಾನ್‌ಫರ್ಡ್‌
ವೈದ್ಯವಿಜ್ಞಾನಿಗಳು ಅದೇ ಯಂತ್ರವನ್ನು ವಿವಿಧ ವ್ಯಕ್ತಿಗಳಿಗೆ ಅಳವಡಿಸಿ ನೋವಿಗೆ
ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿದರು. ಯಂತ್ರದ ತಂತ್ರಾಂಶ ಅಥವಾ ಸಾಫ್ಟ್‌ವೇರ್‌
ಅನ್ನು ಇಂಥ ದಾಖಲೆಗಳ ಸರಾಸರಿ ಸೂಚ್ಯಂಕವನ್ನು ನೀಡುವಂತೆ ಮಾರ್ಪಡಿಸಿದರು.

ಅಸಲಿಗೆ ಇಂಥ ಯೋಚನೆ ಸ್ಟಾನ್‌ಫರ್ಡ್‌ ವಿಜ್ಞಾನಿಗಳಿಗೆ ಬಂದದ್ದು ಹೇಗೆ? ಎಂಬ ಕುತೂಹಲ
ನಿಮ್ಮಂತೆಯೇ ನನಗೂ ಇತ್ತು. ಅಲ್ಲಲ್ಲಿ ತಲಾಷು ಮಾಡಿದಾಗ ಸಿಕ್ಕ ಮಾಹಿತಿ ಬೆರಗು
ಹುಟ್ಟಿಸುವಂತಿತ್ತು. ಸ್ಟಾನ್‌ಫರ್ಡ್‌ ವಿಶ್ವವಿದ್ಯಾಲಯದ ಆವರಣದಲ್ಲಿಯೇ ಕಾನೂನು ಕಲಿಸುವ
ಶಾಲೆಯಿದೆ. ಇಲ್ಲಿ ಕೆಲ ವರ್ಷಗಳ ಹಿಂದೆ ಜರುಗಿದ ಸಮ್ಮೇಳನಕ್ಕೆ ನರವಿಜ್ಞಾನಿಗಳಿಗೂ
ಆಹ್ವಾನವಿತ್ತು. ನೋವಿನ ತೀವ್ರತೆಯನ್ನು ವೈಜ್ಞಾನಿಕವಾಗಿ ಅಳೆಯಲು ಸಾಧ್ಯವಾಗದ ಕಾರಣ
ನ್ಯಾಯಾಲಯಗಳಲ್ಲಿ ಅಪರಾಧಿಗಳು ನೋವಿನ ನೆಪ ಹೂಡಿ ಶಿಕ್ಷೆ ತಪ್ಪಿಸಿಕೊಳ್ಳುವ
ಸಾಧ್ಯತೆಯಿದೆಯೆಂಬುದರ ಬಗ್ಗೆ ವಾದ-ವಿವಾದಗಳಾದವು. ಹಾಗಿದ್ದಲ್ಲಿ 'ಪೇಯ್ನ್‌ಮೀಟರ್‌'
ಒಂದನ್ನು ರೂಪಿಸಬಾರದೇಕೆ? ಎಂಬ ಆಲೋಚನೆ ಮೆಕೇಯ್‌ ಅವರಲ್ಲಿ ಮೂಡಿತು. ಅದರ ಫಲವೇ ಇದೀಗ
ಸೃಷ್ಟಿಯಾಗಿರುವ 'ನೋವಿನ ಅಳತೆಗೋಲು'.

ತೀವ್ರ ತಲೆನೋವೆಂದು ಪರಿಗಣಿತವಾದ 'ಮೈಗ್ರೇನ್‌' ನಿವಾರಣೆಗೆ ನೂರಾರು ಮದ್ದುಗಳು
ಮಾರುಕಟ್ಟೆಯಲ್ಲಿವೆ. ನೋವು ಅನುಭವಿಸುವವರ, ನೋವನ್ನು ಅಳೆಯುವವರ ನಡುವೆ ತೀವ್ರತೆಯ ಬಗ್ಗೆ

[ms-stf '74985'] ಹಿಮದಗ್ನಿಯನ್ನು ಬಿಗಿದಪ್ಪುವ ತವಕ ನಾಗೇಶ್ ಹೆಗಡೆ-ವಿಜ್ಙಾನ ವಿಶೇಷ

2017-06-29 Thread HAREESHKUMAR K Agasanapura
 ಹಿಮದಗ್ನಿಯನ್ನು ಬಿಗಿದಪ್ಪುವ ತವಕ

ವಿಜ್ಙಾನ ವಿಶೇಷ
29 Jun, 2017

ಒಂದೂವರೆ ಕಿಲೊಮೀಟರ್ ಆಳದಲ್ಲಿ ಅತಿಶೀತಲ ಸ್ಥಿತಿಯಲ್ಲಿ ಮಂಜಿನ ಗಡ್ಡೆಯಂತೆ ಕೂತಿದ್ದ
ಮೀಥೇನ್ ಸ್ಫಟಿಕವನ್ನು ಅವರು ಮೊದಲ ಬಾರಿಗೆ ಹೊರಕ್ಕೆಳೆದರು. ಗಾಳಿಗೆ ಸ್ಪರ್ಶವಾದದ್ದೇ ತಡ,
ಸ್ಫಟಿಕ ಒಡೆಯಿತು. ಕಿಡಿಯ ಸ್ಪರ್ಶವಾಗಿದ್ದೇ ತಡ ಬೆಂಕಿ ಸ್ಫೋಟಿಸಿತು. ಹೊರತೆಗೆದ ಆ
ವಸ್ತುವಿಗೆ ‘ಹಿಮದಗ್ನಿ’ ಎಂದರು, ‘ಬರ್ಫದಬೆಂಕಿ’ ಎಂದರು, ‘ಬೆಂಕಿಗಟ್ಟಿ’ ಎಂದರು...
ಹಿಮದಗ್ನಿಯನ್ನು ಬಿಗಿದಪ್ಪುವ ತವಕ

ಬೆಂಗಳೂರಿನ ನಡುವಣ ಬೆಳ್ಳಂದೂರಿನ ಕೆರೆಯಲ್ಲಿ ಹೊಗೆ, ಬೆಂಕಿ ಚಿಮ್ಮಿದಾಗ ಅಗ್ನಿಶಾಮಕ
ದಳದವರು ಧಾವಿಸಿ ನೀರಿನ ಕಾರಂಜಿಯನ್ನು ಚಿಮ್ಮಿಸಿದ್ದು ನೆನಪಿದೆ ತಾನೆ? ಸುಮಾರು ಅದೇ
ಕಾಲಕ್ಕೆ, ಅದನ್ನೇ ನೆನಪಿಸುವಂತೆ ಚೀನೀಯರು ಸಮುದ್ರದ ನಡುವೆ ಹೊಗೆ, ಉಗಿ, ಬೆಂಕಿಯನ್ನು
ಸೃಷ್ಟಿಸಿ ಕುಣಿದು ಕುಪ್ಪಳಿಸಿದರು. ಜಗತ್ತಿನಲ್ಲೇ ಮೊದಲ ಬಾರಿ ಎಂಬಂತೆ ಅವರು ಸಾಗರ ತಳದಿಂದ
ಹೊಸ ಇಂಧನವೊಂದನ್ನು ಹೊರ ತೆಗೆದಿದ್ದರು.

ಒಂದೂವರೆ ಕಿಲೊಮೀಟರ್ ಆಳದಲ್ಲಿ ಅತಿಶೀತಲ ಸ್ಥಿತಿಯಲ್ಲಿ ಮಂಜಿನ ಗಡ್ಡೆಯಂತೆ ಕೂತಿದ್ದ
ಮೀಥೇನ್ ಸ್ಫಟಿಕವನ್ನು ಅವರು ಮೊದಲ ಬಾರಿಗೆ ಹೊರಕ್ಕೆಳೆದರು. ಗಾಳಿಗೆ ಸ್ಪರ್ಶವಾದದ್ದೇ ತಡ,
ಸ್ಫಟಿಕ ಒಡೆಯಿತು. ಕಿಡಿಯ ಸ್ಪರ್ಶವಾಗಿದ್ದೇ ತಡ ಬೆಂಕಿ ಸ್ಫೋಟಿಸಿತು. ಹೊರತೆಗೆದ ಆ
ವಸ್ತುವಿಗೆ ‘ಹಿಮದಗ್ನಿ’ ಎಂದರು, ‘ಬರ್ಫದಬೆಂಕಿ’ ಎಂದರು, ‘ಬೆಂಕಿಗಟ್ಟಿ’ ಎಂದರು.

ಅಲ್ಲೊಂದೇ ಅಲ್ಲ, ನಮ್ಮ ಮಂಗಳೂರಿನ ಆಚಿನ ಸಮುದ್ರತಳದಲ್ಲೂ ಮೀಥೇನ್ ಗುಳ್ಳೆಗಳು ಆಳ ಕೆಸರಿನ
ಆಳದಲ್ಲಿ ಭಾರೀ ಒತ್ತಡದಲ್ಲಿ ಹೆಪ್ಪುಗಟ್ಟಿದ ರೂಪದಲ್ಲಿ ಹೇರಳ ಪ್ರಮಾಣದಲ್ಲಿ ಇವೆಯೆಂದು
ಎಂದೋ ಅಂದಾಜು ಮಾಡಲಾಗಿದೆ. ಅವಕ್ಕೆ ‘ಕ್ಲಾಥ್ರೇಟ್’ ಅಥವಾ ‘ಹೈಡ್ರೇಟ್ಸ್’ ಎನ್ನುತ್ತಾರೆ.

ಕೆಲವು ಕಡೆ ಬರೀ ಮೀಥೇನ್ ಇದ್ದರೆ, ಇನ್ನು ಕೆಲವು ತಾಣಗಳಲ್ಲಿ ಅಂಟಿನ ಉಂಡೆಯಂಥ
‘ನೊಡ್ಯೂಲ್ಸ್’ ಜೊತೆಗೆ ಮೀಥೇನ್ ಚಂಡುಗಳು ಸಿಗುತ್ತವೆ. ಅದೃಷ್ಟ ಖುಲಾಯಿಸಿದರೆ
ಪ್ಲಾಟಿನಮ್ಮಿಗಿಂತ ಹೆಚ್ಚಿನ ಬೆಲೆ ಬಾಳುವ ಯಿಟ್ರಿಯಂ, ನಿಯೊಡಿಯಂ, ಟೆಲ್ಯುರಿಯಂ ಮುಂತಾದ
ವಿರಳಲೋಹಗಳೂ ಸಿಗಬಹುದು. ಆದರೆ ಅನಿಲ ಗುಳ್ಳೆಗಳಿಂದ ಕೂಡಿದ ಕೆಸರಿನ ಮುದ್ದೆಯನ್ನು ಹೊರಕ್ಕೆ
ತೆಗೆಯುವುದು ತೈಲವನ್ನು ತೆಗೆದಷ್ಟು ಸುಲಭ ಅಲ್ಲ. ಅದು ತೀರಾ ತೀರಾ ಸವಾಲಿನ ಕೆಲಸ.

ಅಷ್ಟು ಆಳದಲ್ಲಿ ಪಾತಾಳಗರಡಿ ಇಳಿಸಿದ ತಕ್ಷಣ ಗುಳ್ಳೆ ಪಕ್ಕಕ್ಕೆ ಸರಿದು ಜಾರಿಕೊಳ್ಳುತ್ತದೆ.
ಕೆಸರಿನ ತಳದಿಂದ ಪಾರಾಗಿ ಅದು ಹಿಗ್ಗುತ್ತ ಮೇಲಕ್ಕೆ ಬಂದು ಬೃಹದಾಕಾರ ತಾಳಿ ಗಾಳಿಗೆ
ಬಂದಾಕ್ಷಣ ಒಡೆದು ಆಕಾಶಕ್ಕೆ ಸೇರಿ ಬಿಡುತ್ತದೆ. ಅದೆಷ್ಟೇ ನಾಜೂಕಾಗಿ ಪೀಪಾಯಿಗಳಲ್ಲಿ ತುಂಬಿ
ಮೇಲಕ್ಕೆ ತಂದರೂ ತೆರೆದು ನೋಡಿದರೆ ಬರೀ ಕೆಸರುಗಸಿ. ನಸೀಬಿದ್ದರೆ ಕೆಲವು ವಿರಳಲೋಹ
ಸಿಗಬಹುದು.

ಚೀನೀಯರು ಎಂಥ ತಂತ್ರವನ್ನು ಬಳಸಿದರೊ, ಅಂತೂ ಹಿಮದಗ್ನಿ ಹಡಗಿನ ಮೇಲೆ ಬಂದು ಹೊಗೆ
ಕಕ್ಕಿದ್ದನ್ನು ಜಗತ್ತಿನ ಎಲ್ಲ ವಾರ್ತಾ ಏಜೆನ್ಸಿಗಳಿಗೂ ರವಾನಿಸಿದರು. ಭೂಮಿಯ ಆಳದಲ್ಲಿ
ಹೊಸದೊಂದು ಸಂಪತ್ತಿನ ಮೇಲೆ ತಮ್ಮ ಧ್ವಜವನ್ನು ನೆಟ್ಟೆವೆಂದು ಘೋಷಿಸಿದರು. ಅದೇ ತಂತ್ರವನ್ನು
ಅವರು ಇನ್ನಷ್ಟು ಮತ್ತಷ್ಟು ಸುಧಾರಿಸಿ ಕ್ರಮೇಣ ತಾಂತ್ರಿಕ ಏಕಸ್ವಾಮ್ಯವನ್ನು
ಸ್ಥಾಪಿಸುತ್ತಾರೆ. ಮುಂದೆ ಎಲ್ಲ ದೇಶಗಳೂ ಸಮುದ್ರ ತಳಕ್ಕೆ ಲಗ್ಗೆ ಹಾಕಲು ಬಯಸಿದರೆ ಅಂಥ
ಸಾಹಸಕ್ಕೆ ಚೀನೀಯರೇ ತಾಂತ್ರಿಕ ನಾಯಕರಾಗಿರುತ್ತಾರೆ. ಚೀನೀಯರೇ ಕಾಲಾಳುಗಳೂ ಆಗಿರುತ್ತಾರೆ.

ಆ ಭವಿಷ್ಯ ತೀರ ದೂರದಲ್ಲೇನೂ ಇಲ್ಲ. ಸಮುದ್ರದ ತಳದಲ್ಲಿರುವ ಸಂಪತ್ತಿನ ಮೇಲೆ ಎಲ್ಲ
ರಾಷ್ಟ್ರಗಳೂ ಕಣ್ಣಿಟ್ಟು ಕೂತಿವೆ. ನಾವು ಮನುಷ್ಯರು ಮಂಗಳ, ಬುಧ ಎಂದೆಲ್ಲ ಬಾಹ್ಯಶೋಧಕ್ಕೆ
ಹಣ ಸುರಿಯುವ ಬದಲು ಸಮುದ್ರಶೋಧಕ್ಕೆ ಸುರಿದಿದ್ದರೆ ಪರಿಸ್ಥಿತಿ ಬೇರೆಯೇ ಆಗಿರುತ್ತಿತ್ತು.
ಭೂಮಿಯ ಶೇಕಡಾ 60ರಷ್ಟು ಪ್ರದೇಶವನ್ನು ಸಮುದ್ರ ಆಕ್ರಮಿಸಿದ್ದು, ಅದರ ಶೇಕಡಾ 5ರಷ್ಟು
ಭಾಗವನ್ನೂ ನಾವು ಶೋಧ ಮಾಡಿಲ್ಲ.

ಅಂಚಂಚಿನ ತೈಲವನ್ನಷ್ಟು ಎತ್ತಿ ಖಾಲಿ ಮಾಡುತ್ತಿದ್ದೇವೆ. ಆಳದಲ್ಲಿ ಅಪಾರ ಪ್ರಮಾಣದ ಖನಿಜ
ದ್ರವ್ಯಗಳು ಇವೆ ಎಂಬುದಂತೂ ನಿಜ. ನೆಲದ ಮೇಲೆ ದಕ್ಷಿಣ ಆಫ್ರಿಕದ ಸಡ್‌ಬರಿಯಲ್ಲಿ, ಪೆರುವಿನ
ಯನಕೋಚಾದಲ್ಲಿ, ಮೊಂಗೋಲಿಯಾದ ಖಾಂಬೋಜ್‌ನಲ್ಲಿ, ಸೈಬೀರಿಯಾದ ಮಿರ್ನಿಯಲ್ಲಿ, ಚಿಲಿಯ
ಚಿಕ್ಕಿಕಾಮಾತಾದಲ್ಲಿ, ಕೆನಡಾದ ಡೈವಿಕ್‌ನಲ್ಲಿ, ನಮ್ಮ ಕೋಲಾರದಲ್ಲಿ, ಚಿನ್ನ, ಬೆಳ್ಳಿ,
ವಜ್ರ, ತಾಮ್ರ, ನಿಕೆಲ್, ಕೊಬಾಲ್ಟ್ ಎಲ್ಲ ಸಿಗುವುದಾದರೆ ಸಮುದ್ರದಲ್ಲೂ ಅವು ಅಲ್ಲೆಲ್ಲೋ
ಇರಬೇಕಲ್ಲ.

ಇಲ್ಲಿಗಿಂತ ಮೂರು ಪಟ್ಟು ಹೆಚ್ಚಿಗೆ ಇರಬಹುದು. ನಮ್ಮ ಎಲ್ಲ ಎಲೆಕ್ಟ್ರಾನಿಕ್
ಗ್ಯಾಜೆಟ್‌ಗಳಿಗೆ, ಬ್ಯಾಟರಿಗಳಿಗೆ, ಸೌರಫಲಕಗಳಿಗೆ ಬೇಕಾದ ವಿರಳಧಾತುಗಳೂ ಅಲ್ಲಿ ಅಲ್ಲಲ್ಲಿ
ಸಂಚಯಿತ ರೂಪದಲ್ಲೇ ಇರಲೂಬಹುದು. ಏಕೆಂದರೆ ಭೂಮಿಯ ಮೇಲಿದ್ದಂತೆ ಅವು ಜಡಿಮಳೆಗೆ, ನೀರಿಗೆ,
ಗಾಳಿಗೆ ಅವು ಕದಲದೇ ನಿಂತಿವೆ.

ಆಸೆಯೇನೊ ಬೆಟ್ಟದಷ್ಟು. ಆದರೆ ಆಳ ಹೇಳತೀರದಷ್ಟು! ಅಲ್ಲಿಗೆ ಕೈಹಾಕುವುದೆಂದರೆ ಸವಾಲುಗಳ
ಸರಮಾಲೆಯೇ ಎದುರಾಗುತ್ತದೆ. ಅಲ್ಲೂ ಬೆಟ್ಟಗಳಿವೆ, ಐದಾರು ಕಿಲೊಮೀಟರ್ ಆಳ ಕಣಿವೆಗಳಿವೆ,
ವಿಶಾಲ ಬಯಲುಗಳಿವೆ, ಪರ್ವತ ಶ್ರೇಣಿಗಳಿವೆ. ಶಾಂತ ಸಾಗರದ ಪರ್ವತಗಳನ್ನು ಬಾಚಿದರೂ ಭೂಮಿಯ
ಮೇಲೆ ಇರುವುದಕ್ಕಿಂತ 22 ಪಟ್ಟು ಹೆಚ್ಚು ಟೆಲ್ಯೂರಿಯಂ ಇದೆ ಎಂದು ಅಂದಾಜು ಮಾಡಲಾಗಿದೆ.

ಸೌರಫಲಕಗಳ ನಿರ್ಮಾಣಕ್ಕೆ ಟೆಲ್ಯೂರಿಯಂ ಬೇಕೇ ಬೇಕು. ಏನೆಲ್ಲ ಇವೆ, ಆದರೆ ಎಲ್ಲವೂ ರಹಸ್ಯದ
ಮುಸುಕು ಹೊದ್ದು ಮಲಗಿವೆ. ಶೋಧಕ್ಕೆಂದು ಆಳಕ್ಕೆ ಹೋದ ಹಾಗೆಲ್ಲ ಕತ್ತಲು ಹೆಚ್ಚುತ್ತದೆ,
ಒತ್ತಡವೂ ಹೆಚ್ಚುತ್ತ ಹೋಗುತ್ತದೆ. ಒಂದು ಕಿ.ಮೀ ಆಳದಲ್ಲೂ ಶೋಧ ಯಂತ್ರಗಳನ್ನು
ಇಳಿಸುವುದೆಂದರೆ ಅಪಾರ ಶಕ್ತಿ ಮತ್ತು ಪ್ರಖರ ಬೆಳಕು ಬೇಕು.

ಅತಿ ಚಳಿಯಿಂದಾಗಿ ಯಾಂತ್ರಿಕ ಸಲಕರಣೆಗಳು ಕೈಕೊಡುತ್ತವೆ. ಎಲ್ಲಕ್ಕಿಂತ ಮುಖ್ಯ ಅಡೆತಡೆ
ಎಂದರೆ ಅಲ್ಲಿನ ಪರಿಸರ ಸಮತೋಲವನ್ನು ಹಾಳು ಮಾಡದೆ ಗಣಿಗಾರಿಕೆ ಸಾಧ್ಯವೇ ಇಲ್ಲವಾಗುತ್ತದೆ.
ಏಕೆಂದರೆ ತಳದ ಗಸಿ ತುಸುವೇ ಕದಡಿದರೂ ಅಲ್ಲಿನ ಜೀವಲೋಕ ಅಲ್ಲೋಲ ಕಲ್ಲೋಲ ಆಗುತ್ತದೆ.

ನಾವಿನ್ನೂ ಅಲ್ಲಿಯ ಜೀವಲೋಕದ ಕಾಲುಭಾಗವನ್ನೂ ನೋಡಿಲ್ಲ. ಹತ್ತು ಕಿ.ಮೀ. ಆಳದಲ್ಲಿ
ಜ್ವಾಲಾಮುಖಿ ಇವೆ. ತಲೆಕೆಳಗಾದ ಜಲಪಾತಗಳಿವೆ. ಬಿಸಿನೀರನ್ನು, ಕಪ್ಪು ಗಂಧಕವನ್ನು
ಚಿಮಣಿಯಂತೆ ನಿರಂತರ ಕಕ್ಕುವ ಡೊಂಬಗಳಿವೆ. ಸೂರ್ಯರಷ್ಮಿಯ ನೆರವಿಲ್ಲದೆ ವಿಕಾಸಗೊಂಡ ವಿಲಕ್ಷಣ
ಜೀವಸಂತತಿಗಳಿವೆ. ಅನ್ಯಗ್ರಹಗಳಲ್ಲಿ ಇರಬಹುದೆಂದು ಊಹಿಸಿಕೊಳ್ಳುವ ಏನೆಲ್ಲ ಇಲ್ಲೇ ಇವೆ.

ಅವನ್ನೆಲ್ಲ ಸಮೀಕ್ಷೆ ಮಾಡಲು ಸಮರ್ಥ ಯಂತ್ರಸಾಮಗ್ರಿಗಳು ಈಗಿನ್ನೂ ವಿಕಾಸಗೊಳ್ಳಬೇಕಿದೆ.
ಆದರೆ ಅದಕ್ಕಿಂತ ಮೊದಲೇ ಅಲ್ಲಿನ ಖನಿಜ ಸಂಪತ್ತು, ಶಕ್ತಿ ಸಂಪತ್ತಿನ ಮೇಲೆ ಕಣ್ಣಿಟ್ಟು
ಲಾಖ್ಹೀಡ್ ಮಾರ್ಟಿನ್‌ನಂಥ ಕಂಪನಿಗಳು ಖನಿಜಶೋಧಕ್ಕೆಂದು ಜಲಾಂತರ್ಗಾಮಿ ಡೋಝರ್‌ಗಳನ್ನು
ನಿರ್ಮಿಸುತ್ತಿವೆ.

ಪಾಪುವಾ ನ್ಯೂಗಿನಿಯ ಬಳಿ ಒಂದು ಕಿಲೊಮೀಟರ್ ಆಳದಲ್ಲಿ ತರಾವರಿ ಖನಿಜಗಳು ಒಂದೇ ತಾಣದಲ್ಲಿ
ಸಿಗುತ್ತವೆ ಎಂಬುದನ್ನು ಅರಿತು ಅಲ್ಲಿಗೆ ಲಗ್ಗೆ ಹಾಕಲು ಸಿದ್ಧತೆ ನಡೆಸಿವೆ. ಅದನ್ನು
ತಡೆಗಟ್ಟಲು ಪರಿಸರ ಸಂರಕ್ಷಣ ಸಂಸ್ಥೆಗಳು ಸಜ್ಜಾಗುತ್ತಿವೆ. ಈ ಮಧ್ಯೆ ಉತ್ತರ ಧ್ರುವದ
ಆರ್ಕ್‌ಟಿಕ್ ಬಳಿಯ ತೆಳ್ಳನ್ನ ಹಿಮದಲ್ಲಿ ತೈಲ ಬಾವಿ ಕೊರೆಯಲು ಹೊರಟ ನಾರ್ವೆ ಸರಕಾರದ
ವಿರುದ್ಧ ಅಲ್ಲಿನದೇ ನಾಗರಿಕರು ನ್ಯಾಯದ ಕಟ್ಟೆಗೆ ಏರಿದ್ದಾರೆ.

ದೂರದ ಸಂಪತ್ತು ನಮ್ಮದೆಂದು ಉದ್ದುದ್ದ ತೋಳಿನವರು ಬರ್ಮಾದ ಕಾಡಿನಲ್ಲೊ ಅಂಟಾರ್ಕ್‌ಟಿಕಾದ
ಹಿಮಖಂಡದಲ್ಲೊ ಅದರಾಚಿನ ಗ್ರಹದಲ್ಲೆಲ್ಲೊ ಧ್ವಜ ಊರಿ ಬರುವುದು ಹಿಂದಿನಿಂದಲೂ ರೂಢಿಯಲ್ಲಿದೆ.
ರಷ್ಯನ್ನರು 2007ರಲ್ಲಿ ಆರ್ಕ್‌ಟಿಕ್ ಬಳಿ 

[ms-stf '74312'] ನೆಟ್ ನೋಟ: ಕಿಟಕಿಗೆ ಎಳೆದ ಬಣ್ಣ, ಸೌರಶಕ್ತಿಯನು ಸೆಳೆಯಿತಣ್ಣ ! - sudhindra haldodderi - Vijaya Karnataka

2017-06-13 Thread HAREESHKUMAR K Agasanapura
http://m.vijaykarnataka.com/edit-oped/columns/sudhindra-haldodderi/articleshow/59127424.cms

*ನೆಟ್ ನೋಟ: ಕಿಟಕಿಗೆ ಎಳೆದ ಬಣ್ಣ, ಸೌರಶಕ್ತಿಯನು ಸೆಳೆಯಿತಣ್ಣ !*

Updated Jun 13, 2017, 08:01 PM IST

AAA

** ನೆಟ್ ನೋಟ: ಸುಧೀಂದ್ರ ಹಾಲ್ದೊಡ್ಡೇರಿ*

ಸೂರ್ಯನ ಕಿರಣಗಳನ್ನು ಹೀರಿಕೊಳ್ಳುವಂತೆ ಮಾಡಿ ಕಿಟಕಿ ಗಾಜುಗಳಿಂದ ವಿದ್ಯುತ್‌
ಉತ್ಪಾದಿಸಬಹುದು.

ಬೆಂಗಳೂರಿನ ಬಹುಮಹಡಿ ವಾಣಿಜ್ಯ ಕಟ್ಟಡಗಳತ್ತ ನೋಟ ಹರಿಸಿದಾಗ ನಿಮ್ಮ ಕಣ್ಣನ್ನು ಮೊದಲು
ಕುಕ್ಕುವುದು ಬಣ್ಣದ ಗಾಜುಗಳು. ಇವು ಕೇವಲ ಕಟ್ಟಡಗಳ ಸೌಂದರ್ಯವನ್ನಷ್ಟೇ
ಹೆಚ್ಚಿಸುವುದಿಲ್ಲ. ಬಿದ್ದ ಬಿಸಿಲಿನ ಕಿರಣಗಳನ್ನು ಆಚೆಗಟ್ಟುತ್ತವೆ. ಒಳಗಿನ ವಾತಾನುಕೂಲಿ
ಯಂತ್ರಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರ ಮೂಲಕ ವಿದ್ಯುತ್‌ ಬಳಕೆಯಲ್ಲಿ ಮಿತವ್ಯಯ
ಸಾಧಿಸುತ್ತವೆ. ಅಥವಾ ಹಾಗೆಂದು ನಾವು ನಂಬುತ್ತೇವೆ. ಕಿಟಕಿ ಬಾಗಿಲುಗಳನ್ನು ತೆರೆದಿಟ್ಟರೆ
ಈ ಕಟ್ಟಡಗಳಿಗೆ ಅಗತ್ಯವಿರುವ ಗಾಳಿ-ಬೆಳಕಿನ ಬಹುಪಾಲು ಪುಕ್ಕಟೆಯಾಗಿಯೇ ಸಿಗುತ್ತಿದ್ದವು.
ಒಟ್ಟಾರೆ ವಿದ್ಯುತ್‌ ಬಳಕೆಯಲ್ಲಿ ಹೆಚ್ಚಿನ ಉಳಿತಾಯ ಮಾಡಬಹುದಿತ್ತು. ವಿಶ್ವೇಶ್ವರಯ್ಯನವರು
ಇಂದೇನಾದರೂ ಬದುಕಿದ್ದು ಈ ಕಟ್ಟಡಗಳನ್ನು ಕಂಡಿದ್ದರೆ 'ಎಷ್ಟೊಂದು ಸಂಪನ್ಮೂಲ
ವ್ಯರ್ಥವಾಗುತ್ತಿದೆ' ಎಂದು ಖಂಡಿತವಾಗಿಯೂ ಉದ್ಗರಿಸುತ್ತಿದ್ದರು - ಜೋಗ ಜಲಪಾತದಲ್ಲಿ
ಸುಮ್ಮನೆ ಧುಮ್ಮಿಕ್ಕುತ್ತಿದ್ದ ನೀರನ್ನು ಮೊದಲು ಕಂಡಾಗ 'ಎಷ್ಟೊಂದು ಶಕ್ತಿ
ವ್ಯರ್ಥವಾಗುತ್ತಿದೆ' ಎಂದು ಪೇಚಾಡಿಕೊಂಡಂತೆ. ಜೋಗದಲ್ಲಿ ವಿದ್ಯುತ್‌ ಉತ್ಪಾದನೆಯಾದ
ದಿನದಿಂದ ಬೆಂಗಳೂರು ಸಾಕಷ್ಟು (ಸಾಕಾಗುವಷ್ಟು?) ಬೆಳವಣಿಗೆ ಕಂಡಿದೆ. ಶರಾವತಿ ಕಣಿವೆ
ಕರ್ನಾಟಕವನ್ನು ವಿದ್ಯುತ್‌ ಶಕ್ತಿಯಿಂದ ಬೆಳಗಿಸಿದಂತೆ ಬೆಂಗಳೂರು ತಂತ್ರಜ್ಞಾನ ಶಕ್ತಿಯಿಂದ
ಜಗತ್ತಿನ ಸಿಲಿಕಾನ್‌ ಕಣಿವೆಗಳ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಬೆಂಗಳೂರಿನ ಎಲ್ಲ
ಹಿರಿಮೆಗಳ ಹಿಂದೆ ಶರಾವತಿ ಕಣಿವೆಯ ವಿದ್ಯುತ್‌ ಹಾಗೂ ವಿಶ್ವೇಶ್ವರಯ್ಯನವರ
ದೂರದರ್ಶಿತ್ವವನ್ನು ಕಾಣಬಹುದು.

ಹಾಗಿದ್ದರೆ ಸೂರ್ಯನಿಂದ ಪುಕ್ಕಟೆಯಾಗಿ ಸಿಗುವ ಶಾಖ ಹಾಗೂ ಬೆಳಕಿನ ಶಕ್ತಿಯನ್ನು ನೇರವಾಗಿ
ಬಳಸಬಹುದಲ್ಲವೆ ಅಥವಾ ಈ ಶಕ್ತಿ ಮೂಲಗಳನ್ನು ವಿದ್ಯುತ್‌ ಆಗಿ ಪರಿವರ್ತಿಸಬಹುದಲ್ಲವೆ?
ಎಂಬುದು ನಿಮ್ಮ ಪ್ರಶ್ನೆ. ಅಂಗೈಯಲ್ಲಿ ಹಿಡಿದು ಲೆಕ್ಕಾಚಾರ ನಡೆಸುವ ಕ್ಯಾಲ್‌ಕ್ಯುಲೇಟರ್‌,
ಬಚ್ಚಲ ಮನೆಯಲ್ಲಿ ನೀರು ಕಾಯಿಸುವ ವ್ಯವಸ್ಥೆಗಳಿಂದ ಹಿಡಿದು ನಮಗೆ ದೂರಸಂಪರ್ಕವನ್ನು
ಸುಲಭವಾಗಿಸಿರುವ ಅಂತರಿಕ್ಷ ದಲ್ಲಿನ ಕೃತಕ ಉಪಗ್ರಹಗಳ ಕಾರ್ಯಾಚರಣೆ ವ್ಯವಸ್ಥೆಯ ತನಕ ಇಂದು
ಸೌರಶಕ್ತಿ ಎಲ್ಲೆಡೆ ಬಳಕೆಯಾಗುತ್ತಿದೆ. ಅಷ್ಟೇ ಅಲ್ಲ, ಸೌರಶಕ್ತಿಯನ್ನು ವಿದ್ಯುತ್‌
ಶಕ್ತಿಯನ್ನಾಗಿ ಪರಿವರ್ತಿಸಿ ಬ್ಯಾಟರಿಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ತಂತ್ರಜ್ಞಾನವೂ
ನಮಗೆ ಕರಗತವಾಗಿದೆ. ಇಲ್ಲಿ ಪ್ರಧಾನವಾಗಿ ಬಳಕೆಯಾಗುವುದು 'ಫೋಟೊ ವೋಲ್ಟಾಯಿಕ್‌ ಸೆಲ್‌ -
ಸೌರ ವಿದ್ಯುತ್‌ ಕೋಶ'ಗಳು. ಇವುಗಳನ್ನು 'ಅರೆವಾಹಕ'ಗಳೆಂದು ನಾವು ಗುರುತಿಸುವ
ಸಿಲಿಕಾನ್‌ನಂಥ ವಿಶೇಷ ಸಾಮಗ್ರಿಗಳಿಂದ ನಿರ್ಮಿಸಲಾಗುತ್ತದೆ. 'ಅರೆವಾಹಕ'ಗಳು ನಿಮಗೆ
ಗೊತ್ತು. ಇತ್ತ ಪೂರ್ಣವಾಗಿ ವಿದ್ಯುತ್‌ ವಾಹಕವಲ್ಲದ ಹಾಗೆಯೇ ಅತ್ತ ಪೂರ್ಣ ವಿದ್ಯುತ್‌
ನಿರೋಧಕವೂ ಅಲ್ಲದ ಈ ಎಂಜಿನಿಯರಿಂಗ್‌ ಸಾಮಗ್ರಿಗಳು ಕಂಪ್ಯೂಟರ್‌ ಸೇರಿದಂತೆ ಅನೇಕ
ವಿದ್ಯುನ್ಮಾನ ಸಾಧನ-ಸಲಕರಣೆಗಳ ನಿರ್ಮಾಣಕ್ಕೆ ಅತ್ಯಗತ್ಯವಾದ ಬಿಡಿಭಾಗಗಳು. ಸೌರ ವಿದ್ಯುತ್‌
ಕೋಶಗಳಲ್ಲಿ ಬಳಸುವ ಅರೆವಾಹಕಗಳ ವಿಶೇಷತೆ ಏನೆಂದರೆ, ಸೂರ್ಯನಿಂದ ಚಿಮ್ಮುವ ಬೆಳಕಿನ ಕಣಗಳಾದ
'ಪ್ರೊಟಾನ್‌' ಅನ್ನು ಸ್ವೀಕರಿಸಿದೊಡನೆ ಅವುಗಳ ಪರಮಾಣುವಿನ ಹೊರ ಪರಿಧಿಯಲ್ಲಿ ಸುತ್ತುವ
ಎಲೆಕ್ಟ್ರಾನ್‌ ಕಣಗಳು ಬಂಧದಿಂದ ಬಿಡುಗಡೆಯಾಗುತ್ತವೆ. ಹೀಗೆ ಹೊರಬಂದ ಎಲೆಕ್ಟ್ರಾನ್‌ಗಳು
ನಿರ್ದಿಷ್ಟ ಪಥದಲ್ಲಿ ಚಲಿಸುತ್ತವೆ. ಅಂದರೆ ವಿರುದ್ಧ ದಿಕ್ಕಿನಲ್ಲಿ ವಿದ್ಯುತ್‌
ಹರಿಯುತ್ತದೆ. ಇದನ್ನು ಅಗತ್ಯ ಬಿದ್ದೆಡೆ ಬಳಸಲು ಲೋಹದ ವಾಹಕದ ಕಿರು ಫಲಕಗಳನ್ನು ಸೌರ
ವಿದ್ಯುತ್‌ ಕೋಶದ ಬದಿಗಳಲ್ಲಿ ಇರಿಸಬೇಕು. ಇದು ಸೌರ ವಿದ್ಯುತ್‌ ಕೋಶಗಳ ಕೆಲಸದ ವೈಖರಿ.
ಹಾಗೆಯೇ ಸೌರ ಶಾಖವನ್ನು ಸಂಗ್ರಹಿಸಿಟ್ಟುಕೊಳ್ಳುವ ಫಲಕಗಳೂ ಸಹಾ ಸೌರ ವಿದ್ಯುತ್‌ ಕೋಶಗಳನ್ನು
ಹೊಂದಿರುತ್ತವೆ. ನಿರ್ದಿಷ್ಟ ಕೋನದಲ್ಲಿಟ್ಟ ಕನ್ನಡಿಗಳಂತೆ ಇಂಥ ಫಲಕಗಳು ಕೊಳವೆಗಳ ಮೇಲೆ ಸೌರ
ಬೆಳಕನ್ನು ಮರು ಕೇಂದ್ರೀಕರಿಸಿದರೆ, ನೀರನ್ನು ಕಾಯುವಂತೆ/ಕುದಿಯುವಂತೆ ಮಾಡಬಹುದು. ಗೃಹ
ಹಾಗೂ ಕಾರ್ಖಾನೆಗಳಲ್ಲಿ ಬಳಸುವ ಸೌರ ಶಾಖೋತ್ಪನ್ನ ವ್ಯವಸ್ಥೆಗಳು ಹೀಗೆ ಕೆಲಸ ಮಾಡುತ್ತವೆ.

ಸದ್ಯಕ್ಕೆ ಅಭಿವೃದ್ಧಿಯಾಗಿರುವ ತಂತ್ರಜ್ಞಾನದಲ್ಲಿ ಕೆಲವೊಂದು ಸಮಸ್ಯೆಗಳಿವೆ. ಸೌರ
ವಿದ್ಯುತ್‌ ಕೋಶಗಳ ಸಂಸ್ಕರಣೆ ಹಾಗೂ ನಿರ್ಮಾಣ ಅತ್ಯಂತ ತುಟ್ಟಿಯ ಬಾಬ್ತು. ಜತೆಗೆ
ಪರಿವರ್ತನೆಯಾದ ವಿದ್ಯುತ್‌ ಅನ್ನು ಸಂಗ್ರಹಿಸಿಟ್ಟುಕೊಳ್ಳುವ ಬ್ಯಾಟರಿಗಳ ಬೆಲೆಯೂ ಹೆಚ್ಚು.
ಆರಂಭಿಕ ಹೂಡಿಕೆಯ ಹೆಚ್ಚಳದಿಂದಾಗಿ ಸೌರ ವಿದ್ಯುತ್‌ ಅಥವಾ ಸೌರ ಶಾಖ ವ್ಯವಸ್ಥೆಗಳು
ಜನಮನ್ನಣೆಯನ್ನು ಹೆಚ್ಚಾಗಿ ಗಳಿಸಿಲ್ಲ. ಇದಕ್ಕೆ ಮತ್ತೂ ಒಂದು ಕಾರಣವಿದೆ. ಇಂಥ ವ್ಯವಸ್ಥೆಯ
ಸ್ಥಾಪನೆಗೆ ಸ್ಥಳಾವಕಾಶ ಹೆಚ್ಚು ಬೇಕಾಗುತ್ತದೆ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಬಳಸಿ
ಬಿಸಾಡಬಲ್ಲ ಸೌರ ವಿದ್ಯುತ್‌/ಶಾಖ ಫಲಕಗಳನ್ನು ನಿರ್ಮಿಸಬೇಕೆಂಬ ಹಂಬಲದಿಂದ ತಂತ್ರಜ್ಞರು
ಸಂಶೋಧನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ನಾವು ಧರಿಸುವ ಬಟ್ಟೆ-ಬರೆ, ಕಾರಿನ ಮೇಲು
ಹೊದಿಕೆ, ಕಟ್ಟಡಗಳ ಗೋಡೆಗಳಿಗೆ ಅಳವಡಿಸಬಹುದಾದ ತೆಳು ಫಲಕಗಳು, ದೋಣಿಯ ಮೇಲಿನ ಹಾಯಿ ಮುಂತಾದ
ಸಾಮಗ್ರಿಗಳ ಮೇಲೆ ಸೌರ ವಿದ್ಯುತ್‌ ಕೋಶಗಳನ್ನು ನೇಯುವ ಅಥವಾ ಲೇಪಿಸುವ ಇಲ್ಲವೆ ಹೊಲಿಯುವ
ಬಹಳಷ್ಟು ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ.

ಈ ನಿಟ್ಟಿನಲ್ಲಿ ವಿಜ್ಞಾನಿಗಳ ಕಲ್ಪನೆಯ ಮೂಸೆಯಲ್ಲಿರುವ ಹೊಸ ತಂತ್ರಜ್ಞಾನವೆಂದರೆ ಕಚೇರಿ
ಹಾಗೂ ಮನೆಯ ಕಿಟಕಿ ಗಾಜುಗಳನ್ನು ಸೌರ ವಿದ್ಯುತ್‌ ಫಲಕಗಳನ್ನಾಗಿ ಪರಿವರ್ತಿಸುವುದು. ಹಾಗೆಯೇ
ಇಂಥ ಪರಿವರ್ತನೆ ಅಗ್ಗದ ದರದಲ್ಲಾಗಬೇಕು. ಇದು ಹೇಗೆ ಸಾಧ್ಯ? ಎಂಬುದು ನಿಮ್ಮ ಪ್ರಶ್ನೆ.
ಸದ್ಯಕ್ಕೆ ಬಳಕೆಯಲ್ಲಿರುವ ವ್ಯವಸ್ಥೆಯಲ್ಲಿ ಕನ್ನಡಿಗಳು ಹಾಗೂ ಮಸೂರಗಳು ಹೇರಳವಾಗಿವೆ.
ಇವುಗಳು ಸಾಮಾನ್ಯ ಗಾಜಿನ ಫಲಕಗಳಿಗಿಂತಲೂ ಹೆಚ್ಚಿನ ಬೆಲೆಯುಳ್ಳವು. ಜತೆಗೆ
ಬಾಗುವಿಕೆಯಿಂದಾಗಿ ಸಪಾಟಾದ ಫಲಕಗಳಿಗಿಂತಲೂ ವಿಸ್ತೀರ್ಣ ಕಡಿಮೆ ಹೊಂದಿರುತ್ತವೆ, ತೂಕ
ಹೆಚ್ಚಾಗಿರುತ್ತದೆ. ಅಂತೆಯೇ ಅವುಗಳ ಸೌರ ಶಕ್ತಿಯನ್ನು ಗ್ರಹಿಸುವ ಪ್ರಮಾಣ
ಕಡಿಮೆಯಾಗಿರುತ್ತವೆ. ಇಲ್ಲಿ ಎದುರಾಗುವ ಮತ್ತೊಂದು ಸಮಸ್ಯೆಯೆಂದರೆ ಗೋಡೆ, ಕಿಟಕಿಯ ಗಾಜುಗಳು
ಪಾರದರ್ಶಕವಾಗಿರುವುದು. ಪಾರದರ್ಶಕತೆಯ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ
ಸೌರಶಕ್ತಿಯನ್ನು ಇವು ಹಿಡಿದಿಟ್ಟುಕೊಳ್ಳಲಾರವು. ಇಂದು ಹೆಚ್ಚು ಬಳಕೆಯಲ್ಲಿರುವ
ಸೌರಕೋಶಗಳನ್ನು ಕ್ರಿಸ್ಟಲೈನ್‌ ಸಿಲಿಕಾನ್‌ (ಅಂದರೆ ಹರಳುರೂಪದ ಸಿಲಿಕಾನ್‌) ಸಾಮಗ್ರಿಯಿಂದ
ತಯಾರಿಸಲಾಗುತ್ತದೆ. ಇವುಗಳನ್ನು ಪಾರದೀಪಕವಾಗಿ (ಅಂದರೆ ಬೆಳಕನ್ನು ಭಾಗಶಃ ಚದುರಿಸುತ್ತಲೇ
ಅದನ್ನು ತನ್ನ ಮೂಲಕ ಹಾಯಿಬಿಡುವಂಥದ್ದು) ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿಯನ್ನು
ಹಿಡಿದಿಟ್ಟುಕೊಳ್ಳಬಹುದು. ಆದರೆ ಇಂಥ ಸಾಮಗ್ರಿಯನ್ನು ಸೌರಕೋಶಗಳಾಗಿ ರೂಪಿಸುವುದು ಕಷ್ಟದ
ಕೆಲಸ. ಇದರ ಬದಲು ವಿಜ್ಞಾನಿಗಳು ಸೌರಕೋಶಗಳನ್ನು ಅರೆಪಾರದರ್ಶಕ ಸಾಮಗ್ರಿಗಳಿಂದ ರೂಪಿಸುವುದು
ಸೂಕ್ತವೆಂದು ಯೋಚಿಸಿದರು. ಈ ಕಾರ್ಯಕ್ಕಾಗಿ ಸೌರಕೋಶಗಳಲ್ಲಿ ವರ್ಣದ್ರವ್ಯವನ್ನು ಸೇರಿಸಿ
ಪ್ರಯೋಗಗಳನ್ನು ನಡೆಸಿದರು. ಇವು ಕ್ರಿಸ್ಟಲೈನ್‌ ಸಿಲಿಕಾನ್‌ ಸೌರಕೋಶಗಳಷ್ಟು 

[ms-stf '73735'] ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ-–ಮಯ | ಪ್ರಜಾವಾಣಿ

2017-06-01 Thread HAREESHKUMAR K Agasanapura
http://m.prajavani.net/article/2017_06_01/495707

*ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ-–ಮಯ*

1 Jun, 2017

ನಾಗೇಶ್ ಹೆಗಡೆ








ವಧೆಗಾಗಿ ದನಕರುಗಳನ್ನು ಮಾರದಂತೆ ಪ್ರತಿಬಂಧಿಸುವ ‘ವಿಶೇಷ ಅಧಿಸೂಚನೆ’ಗೆ ಸಹಿ ಹಾಕಿದ ಯಾರೂ
ದನಕರುಗಳನ್ನು ಸಾಕಿರಲಿಕ್ಕಿಲ್ಲ. ಮೇವಿನ ಹಿಂಡಿ, ಹುಲ್ಲು ಅಥವಾ ದನಗಳ ಮಾರಾಟದ ದಲ್ಲಾಳಿ
ಆಗಿರಲಿಕ್ಕಿಲ್ಲ. ಗೋಮಾಂಸ ತಿನ್ನುವವರೂ ಅಲ್ಲ, ಮಾಂಸದ ರಫ್ತಿನ ವಹಿವಾಟಿನಲ್ಲಿ ಭಾಗಿಗಳೂ
ಆಗಿರಲಿಕ್ಕಿಲ್ಲ. ಸತ್ತ ದನದ ಚರ್ಮ ಸುಲಿಯುವ ಅಥವಾ ಚರ್ಮೋದ್ಯಮದ ಕಾರ್ಮಿಕರಂತೂ ಅಲ್ಲ;
ಪಶುವೈದ್ಯರೂ ಆಗಿರಲಿಕ್ಕಿಲ್ಲ, ಮನುಷ್ಯರ ವೈದ್ಯರೂ ಇರಲಿಕ್ಕಿಲ್ಲ. ಮೃಗಾಲಯದ
ವ್ಯವಸ್ಥಾಪಕರಂತೂ ಅಲ್ಲವೇ ಅಲ್ಲ. ಹೀಗೆ, ಪಶುಸಂಬಂಧಿ ವಹಿವಾಟುಗಳ ಯಾವ ತುಮುಲಗಳೂ ಅವರಿಗೆ
ನೇರ ತಟ್ಟುವ ಸಂಭವ ತೀರ ಕಡಿಮೆ. ಆದರೆ ಅವರು ದಿನವೂ ಬಳಸುವ ಅದೆಷ್ಟೊ ಜೈವಿಕ ಸರಕು ಮತ್ತು
ಸೇವೆಗಳಿಗಾಗಿ ದನಗಳನ್ನು ಅವಲಂಬಿಸಿದ್ದಾರೆ. ಹೇಗೆಂದು ನೋಡೋಣವೆ? ಆ ಅಧಿಸೂಚನೆಗೆ ಸಹಿ
ಹಾಕುವ ಮುನ್ನ ನಡೆದ ಸುದೀರ್ಘ ಚರ್ಚೆಯಲ್ಲಿ ಆಗಾಗ ಟೀ, ಕಾಫಿ, ಪೇಯದಲ್ಲಿ ಬಳಕೆಯಾದ
ಸಕ್ಕರೆಯಿಂದಲೇ ಆರಂಭಿಸೋಣ.

ಸಕ್ಕರೆ ಅಷ್ಟೊಂದು ಬೆಳ್ಳಗೆ ಕಾಣಲು ಕಾರಣವೇನು ಗೊತ್ತೆ? ಪ್ರಾಣಿಗಳ ಮೂಳೆಪುಡಿಯಿಂದ
ತಯಾರಿಸಿದ ಬೋನ್ ಚಾರ್ ಎಂಬ ಫಿಲ್ಟರ್ ಮೂಲಕ ಬೆಲ್ಲದ ಪಾಕವನ್ನು ಸೋಸುತ್ತಾರೆ. ಸಕ್ಕರೆ
ಖರೀದಿಸಲೆಂದು ನೀವು ಬಸ್ ಅಥವಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರೆ ಮೃತ ದನಗಳ ಮೇಲೆಯೇ
ಸವಾರಿ ಮಾಡುತ್ತಿದ್ದೀರೆಂದು ಹೇಳಬಹುದು. ಟಯರ್‌ಗಳಿಗೆ ಸ್ಟೀರಿಕ್ ಆಸಿಡ್ ಎಂಬ ಪ್ರಾಣಿಜನ್ಯ
ದ್ರವವನ್ನು ಸೇರಿಸದೆ ಇದ್ದರೆ ಅದು ಯಾವ ಕ್ಷಣದಲ್ಲಾದರೂ ಢಮ್ಮೆನ್ನಬಹುದು. ಬೆದರಿ ಬ್ರೇಕ್
ಹಾಕಲು ಹೊರಟಿರಾ? ಹೈಡ್ರಾಲಿಕ್ ಬ್ರೇಕಿಗೆ ಬಳಸಿದ ಎಣ್ಣೆಯೂ ದನದ ದೇಹದಿಂದ ತೆಗೆದಿದ್ದೇ
ಆಗಿರುತ್ತದೆ. ಬ್ರೇಕ್ ಮತ್ತು ಸ್ಟೀರಿಂಗ್ ಎಂದೂ ಮುರಿಯದ ಹಾಗೆ ವಿಶೇಷವಾಗಿ ತಯಾರಿಸಲಾದ
ಉಕ್ಕಿನ ಕಂಬಿಗೂ ಮೂಳೆ ಪುಡಿಯನ್ನು ಸೇರಿಸಿರುತ್ತಾರೆ.

ನಿಮ್ಮದು ಭಾರೀ ದುಬಾರಿ ಕಾರ್ ಆಗಿದ್ದರೆ ಸೀಟಿನ ಲೆದರ್ ಹೊದಿಕೆಯಂತೂ ದನದ್ದೇ ಬಿಡಿ. ತೀರ
ಅನುಕೂಲಸ್ಥ ಧನಿಕರೂ ಆಢ್ಯ ಸ್ವಾಮೀಜಿಗಳೂ ಬಳಸುವ ಕಾರಿನಲ್ಲಿ ಅಂಥ ಐಷಾರಾಮಿ ಸೀಟುಗಳು
ಇರುತ್ತವೆ. ಲೆದರ್ ಆಗಿರಲಿ, ರೆಕ್ಸಿನ್ನಿನದ್ದೇ ಹೊದಿಕೆ ಆಗಿರಲಿ, ಅದರ ಪ್ರತಿಯೊಂದು
ಭಾಗವನ್ನೂ ಜೋಡಿಸಲು ಬಳಸಿದ ಅಂಟು ಕೂಡ ದನದ ಪ್ರೊಟೀನಿನಿಂದ ತಯಾರಿಸಿದ್ದೇ ಆಗಿರುತ್ತದೆ.
ಸ್ಟೀರಿಂಗ್ ಚಕ್ರ ನಿಮ್ಮ ಮುಷ್ಟಿಯಿಂದ ಜಾರದಂತೆ ಗಪ್ಪಾಗಿ ಕೂರಲೂ ಅದೇ ಅಂಟನ್ನು
ಬಳಸಿರುತ್ತಾರೆ. ದುಬಾರಿ ಕಾರುಗಳಲ್ಲಿ ಅಗ್ನಿಶಾಮಕ ಪುಟ್ಟ ಸಿಲಿಂಡರನ್ನು ಜೋಡಿಸಿರುತ್ತಾರೆ.
ಅದನ್ನು ಅಮುಕಿದರೆ ಹೊರಬರುವ ನೊರೆಯಲ್ಲಿ ದನದ ರಕ್ತದಿಂದಲೇ ತೆಗೆದ ಬೆಂಕಿನಿರೋಧಕ ರಸಾಯನ
ಇರುತ್ತದೆ. ತೀರ ಚಳಿ ಬಿದ್ದಾಗ ಕಾರಿನ ಎಂಜಿನ್ ಸಲೀಸಾಗಿ ಚಾಲೂ ಆಗುವಂತೆ ಇಂಧನಕ್ಕೆ
ಹೆಪ್ಪುನಿರೋಧಕವಾಗಿ ಬಳಸುವ ಗ್ಲಿಸರೀನ್ ಎಂಬ ವಸ್ತು ದನಗಳ ಶರೀರದಿಂದಲೇ ಬಂದಿರುತ್ತದೆ.
ಪೇಂಟ್‌ನ ಹೊಳಪನ್ನು ಹೆಚ್ಚಿಸಲೆಂದು ಕೂಡ ಗ್ಲಿಸರೀನ್ ಹಚ್ಚಿರುತ್ತಾರೆ. ಕಾರುಗಳು ಸಲೀಸಾಗಿ
ಚಲಿಸಲೆಂದು ರಸ್ತೆಗೆ ಡಾಂಬರು ಹಾಕಿರುತ್ತಾರಲ್ಲ, ಅದು ಅತ್ತಿತ್ತ ಕಿತ್ತು ಹೋಗದಂತೆ ಅದಕ್ಕೂ
ದನಗಳ ಕೊಬ್ಬನ್ನೇ ಸೇರಿಸಿರುತ್ತಾರೆ. ರಸ್ತೆ ನಿರ್ಮಾಣಕ್ಕೆ ಮೊದಲು ಬಂಡೆಗಳನ್ನು ಸ್ಫೋಟಿಸಲು
ಜಿಲೆಟಿನ್ ಕಡ್ಡಿಗಳನ್ನು ಬಳಸುತ್ತಾರೆ. ಅದರಲ್ಲಿ ಗ್ಲಿಸರೀನ್ ಇಲ್ಲದಿದ್ದರೆ ಸ್ಫೋಟವೇ
ಆಗುವುದಿಲ್ಲ. ಹೀಗೆ ರಸ್ತೆ, ರಸ್ತೆಯ ಮೇಲಿನ ಚಕ್ರ, ಚಕ್ರವನ್ನು ನಿಯಂತ್ರಿಸುವ ಬ್ರೇಕ್,
ಬ್ರೇಕನ್ನು ಆಗಾಗ ಒತ್ತುವ ನಿಮ್ಮ ಕಾಲಿನ ಪಾದರಕ್ಷೆ, ಡ್ರೈವರ್ ಸೀಟಿನ ಮೆತ್ತೆ ಎಲ್ಲವೂ
ಗೋ-ಮಯ.

ಚರ್ಮದ ಸೋಫಾ ಮೇಲೆ ಕೂರುವ ಬದಲು ಸಾದಾ ಕುರ್ಚಿಯ ಮೇಲೆ ಕೂರಲು ಹೊರಟರೆ ಅಲ್ಲೂ ನೀವು ದನಕ್ಕೆ
ಅಂಟಿಕೊಳ್ಳುತ್ತೀರಿ. ಏಕೆಂದರೆ ಕುರ್ಚಿಗೆ ಬಳಸಿದ ಕಟ್ಟಿಗೆಪುಡಿಯ ಹಲಗೆಯ ಮೇಲೆ ಹೊಳಪಿನ
ಪ್ಲೈವುಡ್ ಹಾಳೆಯನ್ನು ಅಂಟಿಸಿರುತ್ತಾರಲ್ಲ, ಅಲ್ಲಿ ದನಗಳ ರಕ್ತದ ಒಣಪುಡಿಯ ಗೋಂದನ್ನೇ
ಬಳಸಿರುತ್ತಾರೆ. ಕುರ್ಚಿ ಬೇಡ, ನೆಲಕ್ಕೆ ಕೂತೇ ಊಟ ಮಾಡುತ್ತೇನೆಂದರೆ ಆಹಾರ ಉತ್ಪಾದನೆಗೆ
ಬಳಸಿದ ಬಹುಪಾಲು ರಸಗೊಬ್ಬರದಲ್ಲಿ ದನದ ರಕ್ತದ ಪುಡಿಯನ್ನು ಸಾರಜನಕ ಸಂವರ್ಧನೆಗೆಂದು
ಸೇರಿಸಿರುತ್ತಾರೆ. ಇನ್ನು ಕ್ಯಾಲ್ಸಿಯಂ ಮತ್ತು ರಂಜಕದಂಥ ಸಸ್ಯ ಪೋಷಕ ದ್ರವ್ಯಗಳನ್ನು ದನದ
ಮೂಳೆಪುಡಿಯಿಂದ ಸಂಗ್ರಹಿಸಲಾಗುತ್ತದೆ.  ಕೃಷಿ ಕೆಲಸದಲ್ಲಿ ದುಡಿಮೆ ಮಾಡುವ ಮಹಿಳೆ
ರಕ್ತಹೀನತೆಯಿಂದ ಬಳಲುತ್ತಿದ್ದರೆ ಸರ್ಕಾರ ಉಚಿತವಾಗಿ ಆಕೆಗೆ ವಿತರಿಸುವ ಐರನ್
ಮಾತ್ರೆಗಳಲ್ಲೂ ದನದ ರಕ್ತದಿಂದ ತೆಗೆದ ಕಬ್ಬಿಣದ ಅಂಶವೇ ಇರುತ್ತದೆ.

ದನಗಳೆಂದರೆ ಕೇಳಿದ್ದನ್ನು ಕೊಡುವ ಕಾಮಧೇನು. ವೈದ್ಯಕೀಯ ರಂಗಕ್ಕೆ ಬಂದರೆ ದನದ ದೇಹದ ಮೂಗಿನ
ತುದಿಯಿಂದ ಹಿಡಿದು ಬಾಲದವರೆಗಿನ ಭಾಗಗಳಿಂದ ಪಡೆದ ಅಸಂಖ್ಯ ಔಷಧ ದ್ರವ್ಯಗಳನ್ನು ಪಟ್ಟಿ
ಮಾಡಬಹುದು. ದನದ ಮೂಗಿನ ಹೊರಳೆಗಳ ನಡುವಣ ಮೃದ್ವಸ್ಥಿಯಿಂದ ತೆಗೆದ ‘ಕೊಂಡ್ರಾಯ್ಟಿನ್’ ಎಂಬ
ವಸ್ತುವನ್ನು (ಗ್ಲೂಕೊಸಮೈನ್) ಎಲ್ಲ ಬಗೆಯ ಕೀಲುನೋವುಗಳಿಗೂ ಔಷಧವಾಗಿ ಬಳಸುತ್ತಾರೆ. ದನದ
ಶ್ವಾಸನಾಳ ಮತ್ತು ಶ್ವಾಸಕೋಶದ ಒಳಪೊರೆಯಿಂದ ತೆಗೆದ ಹೆಪಾರಿನ್ ಎಂಬ ಔಷಧ ದ್ರವ್ಯವನ್ನು
ಶಸ್ತ್ರಚಿಕಿತ್ಸೆಗೆ ಮೊದಲು ರೋಗಿಯ ರಕ್ತಕ್ಕೆ ಸೇರಿಸುತ್ತಾರೆ. ಆಗ ರಕ್ತ
ಹೆಪ್ಪುಗಟ್ಟುವುದಿಲ್ಲ (ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕಂಡುಬರುವ ಇಂಬಳಗಳು ಕಚ್ಚಿದಾಗ ಇದೇ
ಹೆಪಾರಿನ್ ನಮ್ಮ ರಕ್ತನಾಳಕ್ಕೆ ಸೇರುತ್ತದೆ. ಇಂಬಳವನ್ನು ಕಿತ್ತು ತೆಗೆದ ನಂತರವೂ ರಕ್ತ
ಹೆಪ್ಪುಗಟ್ಟದೆ ಹರಿಯುತ್ತಲೇ ಇರುತ್ತದೆ. ಇಂಬಳದ ಕಡಿತ ಮಾರಕವೇನಲ್ಲ; ಆದರೆ ಝೆಕ್ ದೇಶದ
ನರ್ಸ್ ಒಬ್ಬಳು ಬೇಕೆಂತಲೇ ಜಾಸ್ತಿ ಹೆಪಾರಿನ್ ಚುಚ್ಚಿ ಏಳು ರೋಗಿಗಳ ಕೊಲೆ ಮಾಡಿದ್ದಳು;
ಇನ್ನೂ ಹತ್ತು ಮಂದಿಗೆ ಚುಚ್ಚುವ ಮೊದಲೇ ಸಿಕ್ಕಿಬಿದ್ದಳು).

ಭಾರತದಲ್ಲಿ ಆರು ಕೋಟಿಗೂ ಹೆಚ್ಚಿನ ಸಕ್ಕರೆ ರೋಗಿಗಳಿದ್ದು ಇದನ್ನು ಮಧುಮೇಹಿಗಳ ಸಂತೆಯೆಂದೇ
ವರ್ಣಿಸಲಾಗುತ್ತಿದೆ. ಇವರು ಔಷಧ ರೂಪದಲ್ಲಿ ದನಗಳ ಮೇದೋಜೀರಕ ಗ್ರಂಥಿಗಳಿಂದ ತೆಗೆದ
ಇನ್ಸೂಲಿನನ್ನೇ ಬಳಸುತ್ತಾರೆ. ರಕ್ತದ ಒತ್ತಡ ತೀರ ಕಡಿಮೆ ಆದರೆ ಅದನ್ನು ಹೆಚ್ಚಿಸಲೆಂದು ದನದ
ಆಡ್ರಿನಾಲಿನ್ ಗ್ರಂಥಿಯಿಂದ ತೆಗೆದ ಎಪಿನಾಫ್ರಿನ್ ಎಂಬ ಔಷಧವನ್ನೇ ಡಾಕ್ಟರ್‌ಗಳು ಶಿಫಾರಸು
ಮಾಡುತ್ತಾರೆ. 

[ms-stf '73418'] ಫಲಿತಾಂಶ ಕೊರತೆಯೂ ಬಡ್ತಿ ಕಡಿತವೂ | ಪ್ರಜಾವಾಣಿ

2017-05-25 Thread HAREESHKUMAR K Agasanapura
http://m.prajavani.net/article/2017_05_22/493076

*ಫಲಿತಾಂಶ ಕೊರತೆಯೂ ಬಡ್ತಿ ಕಡಿತವೂ*

22 May, 2017

ಬಿಂಡಿಗನವಿಲೆ ಭಗವಾನ್








‘ಶಿಕ್ಷಕರಿಗೆ ಇನ್‌ಕ್ರಿಮೆಂಟ್ ಕಡಿತ’  ವರದಿ (ಪ್ರ.ವಾ., ಮೇ 18) ಗಮನಿಸಿದೆ. ರಾಜಕುಮಾರನ
ವಿದ್ಯಾರ್ಜನೆಯ ಪ್ರಗತಿ ತಿಳಿಯಲು ರಾಜಸಭೆಯಲ್ಲಿ ಮಂತ್ರಿ ಅವನಿಗೆ ಬಗೆ ಬಗೆಯಾಗಿ
ಪ್ರಶ್ನಿಸುತ್ತಾನೆ. ರಾಜಕುಮಾರ ಉತ್ತರಿಸದ ಒಂದೊಂದು ಪ್ರಶ್ನೆಗೂ ರಾಜಗುರುವಿಗೆ ಒಂದೊಂದು
ಬಾರಿ ಥಳಿಸಲಾಗುತ್ತದೆ!

ಬಿ.ಬಿ.ಎಂ.ಪಿ. ತನ್ನ ವ್ಯಾಪ್ತಿಯ ಶಾಲಾ– ಕಾಲೇಜುಗಳಲ್ಲಿನ ಶಿಕ್ಷಕರಿಗೆ ಪರೀಕ್ಷೆಗಳಲ್ಲಿ
ಫಲಿತಾಂಶ ‘ಕುಸಿತ’ಕ್ಕೆ ವೇತನ ಬಡ್ತಿ ಕಡಿತಗೊಳಿಸುವ ನಿರ್ಧಾರ ಹಳೆಯ ಪೌರಾಣಿಕ ಸಿನಿಮಾವೊಂದರ
ಈ ಹಾಸ್ಯ ಸನ್ನಿವೇಶವನ್ನು ನೆನಪಿಸುತ್ತದೆ.



ಶಿಕ್ಷಕರು ಚೆನ್ನಾಗಿ ಪೂರ್ವತಯಾರಿ ನಡೆಸಿ ಆಯಾ ತರಗತಿ ನಿರ್ವಹಿಸಬೇಕು, ಅವರ ಬೋಧನೆ ಎಲ್ಲ
ವಿದ್ಯಾರ್ಥಿಗಳನ್ನೂ ತಲುಪಬೇಕು ಎನ್ನುವುದು ಸರಿಯೇ. ಆದರೆ ಪರೀಕ್ಷೆಯಲ್ಲಿ ಇಂತಿಷ್ಟು ಮಂದಿ
ವಿದ್ಯಾರ್ಥಿಗಳನ್ನು  ತೇರ್ಗಡೆಯಾಗಿಸುತ್ತೇನೆಂದು ಶಿಕ್ಷಕರು ಭರವಸೆ ನೀಡಲು ಸಾಧ್ಯವೇ?



ಮಕ್ಕಳು ಪರೀಕ್ಷೆಗಳಲ್ಲಿ ಗಳಿಸುವ ಗ್ರೇಡ್, ದರ್ಜೆ, ಅಂಕಗಳನ್ನು ಒಂದು ಉತ್ಪನ್ನವಾಗಿ
ಪರಿಗಣಿಸಲಾಗದು. ಪಾಠವನ್ನು ಮಕ್ಕಳಿಗೆ ಒಂದೇ ಸೂರಿನಡಿ ಬೋಧಿಸಲಾಗುತ್ತದೆ. ಒಬ್ಬೊಬ್ಬ
ವಿದ್ಯಾರ್ಥಿಯ ಏಕಾಗ್ರತೆ, ಗ್ರಹಣಶಕ್ತಿ, ಆಸಕ್ತಿ ಒಂದೇ ತೆರನಾಗಿರದು. ಆಯಾ ವಿಷಯದಲ್ಲಿ
ಮಾಸ್ತರರು ಎಷ್ಟೇ ಹೊಣೆಗಾರಿಕೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿದರೂ ತರಗತಿಯಲ್ಲಿರುವವರೆಲ್ಲ
ಸರಿಸುಮಾರು ಒಂದೇ ಅಂಕ ಪಡೆಯುವುದಿರಲಿ ತೇರ್ಗಡೆಯಾಗುವುದು ಸಹ ಅಸಂಭವ.



ಶಿಕ್ಷಕರ ಸಂವಹನಕ್ಕೂ ಇತಿಮಿತಿಗಳಿರುತ್ತವೆ. ಕುದುರೆಯನ್ನು ನೀರಿನ ತನಕ ಕರೆದೊಯ್ಯಬಹುದು.
ನೀರು ಕುಡಿಯಬೇಕಾದ್ದು ಕುದುರೆಯೇ.  ಮಕ್ಕಳ ವಯೋಸಹಜವೆನ್ನಬಹುವಾದ ಕೀಟಲೆ, ಗದ್ದಲ, ಗೌಜು,
ಅಶಿಸ್ತು, ತಂಟೆಗಳೊಂದಿಗೆ ಸೆಣಸಾಡುತ್ತಲೇ ಪಾಠ ಮಾಡಬೇಕಾಗುತ್ತದೆ.



ಅಚ್ಚುಕಟ್ಟಾಗಿ ಬೋಧಿಸಬೇಕು, ವಿದ್ಯಾರ್ಥಿಗಳು ಚೆನ್ನಾಗಿ ಕಲಿಯಬೇಕು ಎನ್ನುವ ಆಶಯ ಎಲ್ಲ
ಶಿಕ್ಷಕರಿಗೂ ಇರುತ್ತದೆ. ಹಾಗಾಗಿಯೇ ಅವರು  ಮಕ್ಕಳಲ್ಲಿ, ಸಹೋದ್ಯೋಗಿಗಳಲ್ಲಿ, ಪೋಷಕರಲ್ಲಿ
ತಮ್ಮ ಬೋಧನೆ ಹೇಗಿದೆ ಎಂದು ಅಭಿಪ್ರಾಯಗಳನ್ನು ಕುತೂಹಲದಿಂದ ಕಲೆಹಾಕುತ್ತಾರೆ.
ಕೊರತೆಯಿದ್ದರೆ ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.



ಅಧ್ಯಾಪಕರ ಬೋಧನೆಯ ಪಕ್ವತೆ, ಶ್ರೇಷ್ಠತೆಯನ್ನು ಮೂರು ತಾಸುಗಳ ಅವಧಿಯ ಪರೀಕ್ಷೆಯಲ್ಲಿ
ವಿದ್ಯಾರ್ಥಿಗಳು ಬರೆಯುವ ಉತ್ತರಗಳಿಗೆ ಸೀಮಿತವಾಗಿಸುವುದು ಅತಾರ್ಕಿಕ. ಬೋಧನೆ ಮಕ್ಕಳನ್ನು
ನೇರವಾಗಿ ಪ್ರಭಾವಿಸಬಹುದು, ಕೆಲವೊಮ್ಮೆ ಪ್ರಭಾವ ಬೀರದೆಯೂ ಇರಬಹುದು.  ಕಾಲಾಂತರದಲ್ಲಿ ಅದರ
ಪ್ರಭಾವ ಅವರ ಮಿದುಳಿನಲ್ಲಿ ಕುಡಿಯೊಡೆಯುವುದೇ ಸಹಜ ಶಿಕ್ಷಣ.



ಮಕ್ಕಳು ಪರೀಕ್ಷೆ ಎದಿರುಸುವಲ್ಲಿ ಪೋಷಕರ ಪಾತ್ರವೂ ಇದೆಯೆನ್ನುವುದನ್ನು ಮರೆಯಬಾರದು. ಮಕ್ಕಳ
ಮಿತಿ–ಸಾಮರ್ಥ್ಯ ಅರಿತು ಅದಕ್ಕೆ ತಕ್ಕಂತೆ ಸ್ಪಂದಿಸಬೇಕು. ಮಾರ್ಗದರ್ಶನ ನೀಡಬೇಕು.
ಮಕ್ಕಳನ್ನು ಸೆಳೆಯುವ ಮೊಬೈಲು, ಟಿ.ವಿ., ವಿಡಿಯೊ ಗೇಮ್‌ಗಳಂಥ ಆಕರ್ಷಣೆಗಳಿಗೆ  ಪರೀಕ್ಷಾ
ದಿನಗಳು ಸಮೀಪಿಸುತ್ತಿರುವಾಗಲಾದರೂ ಕಡಿವಾಣ ಹಾಕಬಹುದಲ್ಲವೇ? ಮಕ್ಕಳ ಮನವೊಲಿಸುವ ಮೂಲಕವೇ ಈ
ಕೆಲಸ ಮಾಡಬಹುದು.



‘ಇಂತಿಷ್ಟು ಫಲಿತಾಂಶ ತರಿಸಬೇಕು ನೋಡಿ’ ಎಂದು ಶಿಕ್ಷಕರ ಮೇಲೆ ಒತ್ತಡವೇರಿದರೆ ಅವರ ಚಿತ್ತ
ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಪಡಿಸುವುದರತ್ತ ಮಾತ್ರ ಹರಿಯುವಂತೆ
ಪ್ರೇರೇಪಿಸಿದಂತಾಗುತ್ತದೆ. ಅದರಿಂದ ನೈಜ ಬೋಧನೆ ಹಾಗೂ ಕಲಿಕೆಗೆ ಅವಕಾಶ ಕಡಿಮೆಯಾಗುತ್ತದೆ.
‘ಹೇಗಾದರೂ ಸರಿ’ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆಗೆ ಕನಿಷ್ಠ ಅಂಕಗಳನ್ನು
ಪಡೆಯಬೇಕು ಎನ್ನುವ ಗುರಿ ಆತಂಕಕಾರಿ. ಅರಿವು, ವಿವೇಕ ಗೌಣವಾಗಿ ಅಂಕಮಲ್ಲತನ ಅದೇ
ಪ್ರತಿಭೆಯೇನೊ ಎನ್ನುವಂತೆ ಮೆರೆಯುತ್ತದೆ.



ತಮಗೆ ಪರೀಕ್ಷೆಗಿಂತ ಗುರು ಸಾನ್ನಿಧ್ಯ, ತಿಳಿವಳಿಕೆ, ಸಹಪಾಠಿಗಳ ಒಡನಾಟ, ಆಟೋಟ, ಗ್ರಂಥಾಲಯ,
ವಿದ್ಯಾಲಯದ ಪರಿಸರ ಮುಖ್ಯ ಎನ್ನುವ ಎಳೆಯ ಮನಸ್ಸುಗಳು ಅಪರೂಪಕ್ಕಾದರೂ ಉಂಟು ತಾನೆ?  ಅನೇಕ
ಸಂದರ್ಭಗಳಲ್ಲಿ ವಿದ್ಯಾರ್ಥಿಗಳ  ಕೋರ್ಸ್, ಕಲಿಕಾ ವಿಷಯಗಳ ಆಯ್ಕೆಯೇ ಸರಿ ಇರುವುದಿಲ್ಲ.
ಅವರು ಒಲುಮೆಯಿಂದ ‘ಇದನ್ನೇ ಕಲಿಯುವೆ’ ಎಂದಿರುವುದಿಲ್ಲ.



ತಮಗೆ ಅಷ್ಟಾಗಿ ಆಸಕ್ತಿಯಿರದ ಕೋರ್ಸ್‌ ಅನ್ನು ಪೋಷಕರ ಒತ್ತಾಯಕ್ಕೆ ಮಣಿದು  ಕೆಲವರು
ಆರಿಸಿಕೊಂಡಿರುತ್ತಾರೆ.  ಇನ್ನು ಪೋಷಕರೋ ಘನತೆ ಎಂದು ಭಾವಿಸಿಯೋ ಅಥವಾ ಯಾರನ್ನೋ ಮೆಚ್ಚಿಸಲು
ತಮ್ಮ ಮಕ್ಕಳಿಗೆ ಇಂಥದ್ದನ್ನು ವ್ಯಾಸಂಗ ಮಾಡಿ ಎಂದಿರುತ್ತಾರೆ. ಒಲ್ಲದ್ದನ್ನು ಓದು,
ಅದರಲ್ಲಿ ಯಶಸ್ಸು ಸಾಧಿಸು ಎನ್ನುವುದು ಅವರ ಪಾಲಿಗೆ ದೊಡ್ಡ ಶಿಕ್ಷೆಯಾದೀತು.


ಎಳೆಗೂಸಿಗೂ ಕಲಿಕೆಯಲ್ಲಿ ಅದರದೇ ಆಸಕ್ತಿ ಇರುತ್ತದೆ. ಫಲಿತಾಂಶ ಕೇಂದ್ರಿತ ಬೋಧನೆಯು
ಪಠ್ಯಕ್ಕಷ್ಟೇ ಅಂಟಿಕೊಳ್ಳುತ್ತದೆ. ಅದರ ಪರಿಣಾಮವಾಗಿ ಸ್ವಾರಸ್ಯ  ಕಳೆದುಕೊಳ್ಳುತ್ತದೆ.
ಶಿಕ್ಷಕರು-ವಿದ್ಯಾರ್ಥಿಗಳ ನಡುವಿನ ಸಂವಾದದ ನೆಲೆಯಾಗಬೇಕಾದ ತರಗತಿಯಲ್ಲಿ ವಿಷಯದ ಬಗ್ಗೆ
ಪ್ರಶ್ನೆಗಳಿಗೆ ಆಸ್ಪದವೇ ಇಲ್ಲವಾಗುತ್ತದೆ. ಅಲ್ಲಿ ಏನಿದ್ದರೂ ‘ಈ ಅಧ್ಯಾಯ ಪರೀಕ್ಷೆಗೆ
ಮುಖ್ಯವೇ?’ ‘ಈ ಪ್ರಶ್ನೆ ಎಂದೂ ಕೇಳಿಲ್ಲವಲ್ಲ?’



‘ಯಾವ ಅಧ್ಯಾಯವನ್ನು ಈ ಬಾರಿ ಓದದೆ ಬಿಡಬಹುದು?’- ಇವೇ ಸಂದೇಹಗಳಾಗುತ್ತವೆ! ಒಂದು
ವಿಷಯದಲ್ಲಿನ ಫಲಿತಾಂಶವನ್ನು ಇನ್ನೊಂದು ವಿಷಯದ ಫಲಿತಾಂಶಕ್ಕೆ ಹೋಲಿಸಲಾಗದು. ಏಕೆಂದರೆ
ಸಾಮಾನ್ಯವಾಗಿ ವಿದ್ಯಾರ್ಥಿಗಳು ಐಚ್ಛಿಕ ವಿಷಯಗಳಿಗಿಂತ ಭಾಷಾ ವಿಷಯಗಳಲ್ಲಿ ಹೆಚ್ಚಿನ ಅಂಕ
ಪಡೆಯುತ್ತಾರೆ.



ಶೈಕ್ಷಣಿಕ ಪ್ರಕ್ರಿಯೆಯ ಒಂದು ಭಾಗವಷ್ಟೇ ಆದ ಫಲಿತಾಂಶದ ಕೊರತೆಯೆಂದ ಮಾತ್ರಕ್ಕೆ ಮಕ್ಕಳ
ಜ್ಞಾನ, ಬುದ್ಧಿ ಶಕ್ತಿಯ ಕೊರತೆ ಎಂದು ತೀರ್ಮಾನಿಸುವ ಅಗತ್ಯವಿಲ್ಲ. ಶಿಕ್ಷಕರಿಗೆ ಸೇವಾ
ಭದ್ರತೆ, ಆಗಿಂದಾಗ್ಗೆ ಅದರಲ್ಲೂ ವಿಶೇಷವಾಗಿ ಪಠ್ಯ ವಿಷಯ ಮಾರ್ಪಾಡಾದಾಗ ಅಧ್ಯಾಪಕರಿಗೆ
ಸೂಕ್ತ ತರಬೇತಿ, ಪುನರ್‌ಮನನ ಕಮ್ಮಟಗಳನ್ನು ಏರ್ಪಡಿಸುವುದು, ಶೈಕಣಿಕ ವರ್ಷಾರಂಭಕ್ಕೆ ಮೊದಲೇ
ಮಕ್ಕಳಿಗೆ ಪಠ್ಯ ಪುಸ್ತಕಗಳ ಪೂರೈಕೆ, ಸರಳ ಸಮವಸ್ತ್ರ, ಭಾರವೆನ್ನಿಸದ ಪುಸ್ತಕ ಚೀಲ ಮುಂತಾದ
ಕ್ರಮಗಳು ಪರಿಣಾಮಕಾರಿಯಾಗಬಲ್ಲ ಫಲಿತಾಂಶದ ಉತ್ತಮೀಕರಣದ ದಿಟ್ಟ ಹೆಜ್ಜೆಗಳು.


ಮಕ್ಕಳಲ್ಲಿ ಪುಸ್ತಕ ಪ್ರೀತಿ ಮೂಡಿಸಿ, ಅವರಲ್ಲಿ ಸ್ವಅಧ್ಯಯನ ಪ್ರವೃತ್ತಿ ಬೆಳೆಸಬೇಕಿದೆ.
ಶಿಕ್ಷಕರನ್ನು 

[ms-stf '73345'] ಇಜ್ಞಾನ ಡಾಟ್ ಕಾಮ್: ಗೂಗಲ್ ಗುರುವಿನ ಒಂದಷ್ಟು ಗುಟ್ಟುಗಳು

2017-05-22 Thread HAREESHKUMAR K Agasanapura
http://www.ejnana.com/2017/05/google-guru.html?m=1

*ಗೂಗಲ್ ಗುರುವಿನ ಒಂದಷ್ಟು ಗುಟ್ಟುಗಳು*

*ಟಿ. ಜಿ. ಶ್ರೀನಿಧಿ*



ವಿಶ್ವವ್ಯಾಪಿ ಜಾಲದಲ್ಲಿ ಏನು ಮಾಹಿತಿ ಬೇಕಿದ್ದರೂ ಅದನ್ನು ಗೂಗಲ್‌ನಲ್ಲಿ
ಹುಡುಕಿಕೊಳ್ಳುವುದು ನಮ್ಮೆಲ್ಲರ ಅಭ್ಯಾಸ. ಹೀಗೆ ಹುಡುಕಲು ಹೊರಟಾಗ ನಾವು ಟೈಪ್
ಮಾಡುತ್ತೇವಲ್ಲ ಪದಗಳು, ಅವನ್ನು ಕೀವರ್ಡ್‌ಗಳೆಂದು (ಕನ್ನಡದಲ್ಲಿ 'ಹುಡುಕುಪದ')
ಕರೆಯುತ್ತಾರೆ. ನಾವು ಹುಡುಕುತ್ತಿರುವ ವಿಷಯವನ್ನು ಆದಷ್ಟೂ ನಿಖರವಾಗಿ ಪ್ರತಿನಿಧಿಸುವ
ಕೀವರ್ಡ್‌ಗಳನ್ನು ಆರಿಸಿಕೊಂಡರೆ ನಮಗೆ ಸರಿಯಾದ ಮಾಹಿತಿ ಸಿಗುವ ಸಾಧ್ಯತೆ ಜಾಸ್ತಿ. ಅಷ್ಟೇ
ಅಲ್ಲ, ಪಠ್ಯ-ಚಿತ್ರ-ವೀಡಿಯೋ ಮುಂತಾದ ಹಲವು ರೂಪಗಳ ಪೈಕಿ ನಾವು ಯಾವ ಬಗೆಯ ಮಾಹಿತಿಯನ್ನು
ಹುಡುಕುತ್ತಿದ್ದೇವೆ ಎನ್ನುವುದನ್ನೂ ನಾವು ಗೂಗಲ್‌ಗೆ ಹೇಳಬಹುದು.

ಗೂಗಲ್ ತಾಣದಲ್ಲಿ ನಾವು ಕೀವರ್ಡ್‌ಗಳನ್ನು ಟೈಪಿಸುವ ಸರ್ಚ್ ಪಟ್ಟಿ ಇದೆಯಲ್ಲ, ಅದು ಇನ್ನೂ
ಕೆಲ ಪ್ರಶ್ನೆಗಳಿಗೆ ಉತ್ತರ ಒದಗಿಸಬಲ್ಲದು. ಗಣಿತದ ಸಮಸ್ಯೆ, ವಿದೇಶಿ ವಿನಿಮಯ ಲೆಕ್ಕಾಚಾರ,
ಏಕಮಾನಗಳ ಬದಲಾವಣೆ, ಬೇರೆ ದೇಶದಲ್ಲಿ ಸದ್ಯದ ಸಮಯ - ಇಂತಹ ಹಲವು ಪ್ರಶ್ನೆಗಳನ್ನು ಸರ್ಚ್
ಪಟ್ಟಿಯಲ್ಲಿ ದಾಖಲಿಸಿ ಉತ್ತರ ಪಡೆದುಕೊಳ್ಳುವುದು ಸಾಧ್ಯ. ಹತ್ತು ಇಂಟು ಹನ್ನೆರಡು ಎನ್ನುವ
ಸರಳ ಲೆಕ್ಕ ಇರಬಹುದು (10*8), ೨೦ ಡಾಲರು ಎಷ್ಟು ರೂಪಾಯಿಗೆ ಸಮ (20 us dollars in
rupees) ಎನ್ನುವ ಕುತೂಹಲವಿರಬಹುದು ಇಲ್ಲವೇ ಹ್ಯಾರಿಸ್‌ಬರ್ಗ್‌ನಲ್ಲಿ ಈಗ ಸಮಯವೆಷ್ಟು
(local time in harrisburg) ಎನ್ನುವ ಪ್ರಶ್ನೆಯಿರಬಹುದು - ಇದಕ್ಕೆಲ್ಲ ಗೂಗಲ್ ಗುರು
ಉತ್ತರ ನೀಡಬಲ್ಲ.

ನಮಗೆ ಬೇಕಿರುವ ಮಾಹಿತಿ ಕುರಿತ ಹುಡುಕುಪದಗಳನ್ನು ಗೂಗಲ್‌ನಲ್ಲಿ ಟೈಪಿಸುತ್ತೇವಲ್ಲ, ಅವು
ನಿಖರವಾಗಿದ್ದಷ್ಟೂ ನಮಗೆ ದೊರಕುವ ಫಲಿತಾಂಶ ಉತ್ತಮವಾಗಿರುವುದು ಸಾಧ್ಯ. ನಮ್ಮ ಅಗತ್ಯವನ್ನು
ಆದಷ್ಟೂ ನಿಖರವಾಗಿ ಹೇಳಲು ಮೈನಸ್ (-), ಪ್ಲಸ್ (+) ಮುಂತಾದ ಚಿಹ್ನೆಗಳನ್ನೂ ಬಳಸಬಹುದು.
ಉದಾಹರಣೆಗೆ ವರಕವಿ ಬೇಂದ್ರೆಯವರನ್ನು ಕುರಿತ ಮಾಹಿತಿ ಹುಡುಕುವಾಗ ಸೋನಾಲಿ ಬೇಂದ್ರೆ ಕುರಿತ
ಮಾಹಿತಿ ಬೇಡವೆಂದರೆ 'bendre -sonali' ಎಂದು ಟೈಪಿಸಿದರೆ ಆಯಿತು. ಅದೇರೀತಿ ಬೇಂದ್ರೆಯವರು
ಹಾಗೂ ಧಾರವಾಡ ಎರಡೂ ವಿಷಯಗಳ ಪ್ರಸ್ತಾಪವಿರುವ ತಾಣಗಳನ್ನು ಪತ್ತೆಮಾಡಲು 'bendre
+dharwad' ಎಂದು ಹುಡುಕಬಹುದು. ಬೇಂದ್ರೆಯವರ ಬಗ್ಗೆ ಅಥವಾ ಧಾರವಾಡದ ಬಗ್ಗೆ ಮಾಹಿತಿ ಬೇಕು
ಎನ್ನುವುದಾದರೆ 'bendre OR dharwad' ಬಳಸುವುದು ಸಾಧ್ಯ.

ಮಾಹಿತಿಯನ್ನು ಯಾವ ತಾಣದಲ್ಲಿ ಹುಡುಕಬೇಕು (ಅಥವಾ ಹುಡುಕಬಾರದು) ಎಂದು ಸೂಚಿಸಲೂ ಇದೇ
ತಂತ್ರವನ್ನು ಬಳಸಬಹುದು. ಹುಡುಕುಪದದ ನಂತರ 'site:' ಎಂದು ನಮೂದಿಸಿ ಜಾಲತಾಣದ ವಿಳಾಸ
ಹಾಕಿದರೆ (ಉದಾ: 'ವೈರಸ್ site:www.ejnana.com') ಎಂದು ಟೈಪಿಸಿದರೆ ಗೂಗಲ್ ನಾವು
ಸೂಚಿಸಿದ ತಾಣದಲ್ಲಿರುವ ಮಾಹಿತಿಯನ್ನು ಮಾತ್ರ ಹುಡುಕಿಕೊಡುತ್ತದೆ. 'ವೈರಸ್ -site:
www.ejnana.com' ಎಂದರೆ ನಾವು ಸೂಚಿಸಿದ ತಾಣದಲ್ಲಿರುವ ಮಾಹಿತಿಯನ್ನು ಸರ್ಚ್
ಫಲಿತಾಂಶದಿಂದ ಹೊರಗಿಡಲಾಗುತ್ತದೆ. ಒಂದೇ ಪದದ ಬದಲು ಪದಪುಂಜ ಅಥವಾ ನುಡಿಗಟ್ಟನ್ನು ಬಳಸುವ
ಪ್ರಮೇಯ ಬಂದರೆ (ಉದಾ: "ಕಂಪ್ಯೂಟರ್ ವೈರಸ್") ಅದನ್ನು ಉದ್ಧರಣ ಚಿಹ್ನೆಯೊಳಗೆ (ಡಬಲ್
ಕೋಟ್ಸ್) ನೀಡಬೇಕು.

*ಮೇ ೧೩, ೨೦೧೬ ಹಾಗೂ ಜನವರಿ ೪, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಬರಹಗಳ ಸಂಯುಕ್ತರೂಪ*

Hareeshkumar K
GHS Huskuru
Malavalli TQ
Mandya Dt
9880328224

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.


[ms-stf '73217'] 'ವನ್ನಾಕ್ರೈ' ಕುತಂತ್ರಾಂಶ: ಸೈಬರ್ ದಾಳಿಯನ್ನು ಎದುರಿಸುವುದು ಹೇಗೆ? | ಪ್ರಜಾವಾಣಿ

2017-05-15 Thread HAREESHKUMAR K Agasanapura
http://m.prajavani.net/article/2017_05_15/491630





*'ವನ್ನಾಕ್ರೈ' ಕುತಂತ್ರಾಂಶ: ಸೈಬರ್ ದಾಳಿಯನ್ನು ಎದುರಿಸುವುದು ಹೇಗೆ?*

15 May, 2017

ಪ್ರಜಾವಾಣಿ ವಾರ್ತೆ








*ನವದೆಹಲಿ:* ಹ್ಯಾಕರ್‌ಗಳು ‘ವನ್ನಾಕ್ರೈ’ ಎಂಬ ಕುತಂತ್ರಾಂಶ ಬಳಸಿ ಶುಕ್ರವಾರ ಆರಂಭಿಸಿದ್ದ
ಸೈಬರ್‌ ದಾಳಿ, ಭಾರಿ ಪ್ರಮಾಣದಲ್ಲಿ ವಿಸ್ತರಿಸಿದೆ. ಈಗಾಗಲೇ 150 ದೇಶಗಳಲ್ಲಿ ದಾಳಿ
ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

 ಈ ದಾಳಿ ನಡೆಸಿದ ಹ್ಯಾಕರ್‍ಗಳು ‘ಕಂಪ್ಯೂಟರ್‌ಗಳಲ್ಲಿನ ಎಲ್ಲಾ ಕಡತಗಳನ್ನು
ಅಳಿಸಿಹಾಕುವುದಾಗಿಯೂ ಹಣ ಪಾವತಿ ಮಾಡಿದರೆ ಈ ಸಮಸ್ಯೆ ಪರಿಹಾರವಾಗುತ್ತದೆ' ಎಂದು
 ಬೆದರಿಕೆಯನ್ನೊಡ್ಡಿದ್ದರು.

ವನ್ನಾಕ್ರೈ ಅಥವಾ ವನ್ನಾಕ್ರೆಪ್ಟ್ ಎಂಬ ಹೆಸರಿರುವ ಈ ಕುತಂತ್ರಾಶವು ಬ್ರಿಟನ್‍ನ ಹಾಸ್ಪಿಟಲ್
ನೆಟ್‍ವರ್ಕ್, ಜರ್ಮನಿಯ ರಾಷ್ಟ್ರೀಯ ರೈಲ್ವೆ ಮತ್ತು ಕೆಲವು ರಾಷ್ಟ್ರೀಯ ಸಂಸ್ಥೆ ಮತ್ತು
ಕಂಪನಿಗಳ ನೆಟ್‍ವರ್ಕ್‍ನ್ನು ಬುಡಮೇಲು ಮಾಡಿದೆ.

ಸೈಬರ್‌ ದಾಳಿಗೆ ತುತ್ತಾಗದಂತೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಭಾರತೀಯ
ಕಂಪ್ಯೂಟರ್ ತುರ್ತು ಸ್ಪಂದನಾ ತಂಡ (ಸಿಇಆರ್‌ಟಿ–ಐಎನ್) ಸಲಹೆ ನೀಡಿದೆ. ಕೇಂದ್ರ ಮತ್ತು
ರಾಜ್ಯ ಸರ್ಕಾರದ ಇಲಾಖೆಗಳು, ರಕ್ಷಣೆ, ಭದ್ರತೆ, ಬಾಹ್ಯಾಕಾಶ ಸಂಶೋಧನೆ ಮತ್ತು ಶೈಕ್ಷಣಿಕ
ಸಂಸ್ಥೆಗಳಿಗೆ ಈ ಬಗ್ಗೆ ಸಿಇಆರ್‌ಟಿ ಪತ್ರ ರವಾನಿಸಿದೆ.

*ವನ್ನಾಕ್ರೈ  ಸೈಬರ್ ದಾಳಿಯನ್ನು ಎದುರಿಸುವುದು ಹೇಗೆ?*
* ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣೆ ವ್ಯವಸ್ಥೆಯ (ಒಎಸ್) ಸುರಕ್ಷತಾ ಸೌಲಭ್ಯದ (ಸೆಕ್ಯುರಿಟಿ
ಪ್ಯಾಚ್‌) ಪರಿಷ್ಕೃತ ಆವೃತ್ತಿ ಅಳವಡಿಸಿಕೊಳ್ಳಿ.

* ಆ್ಯಂಟಿ ವೈರಸ್ ಸಾಫ್ಟ್‌ವೇರ್ ಅಪ್‍ಡೇಟ್ ಮಾಡಿಕೊಳ್ಳಿ

* ಪ್ರಮುಖ ಕಡತಗಳ  ಆಫ್‍ಲೈನ್ ಡೇಟಾಬೇಸ್ ನಿರಂತರವಾಗಿ ಅಪ್‍ಡೇಟ್ ಮಾಡಿ. ಬೇರೆ
ಡಿವೈಸ್‍ಗಳಲ್ಲಿ ಬ್ಯಾಕ್ ಅಪ್ ಡೇಟಾ ಇರಿಸುವುದು ಉತ್ತಮ.

* ಎಂಟರ್‍‍ಪ್ರೈಸ್ ಎಡ್ಜ್ ಅಥವಾ ಪೆರಿಮೀಟರ್ ನೆಟ್ವರ್ಕ್ ಡಿವೈಸ್ [UDP 137, 138 and TCP
139, 445] ನ ಮೂಲಕ ಇಂಟರ್‍‍ನೆಟ್ ಸಂಪರ್ಕ ಹೊಂದಿದ್ದರೆ  SMB ಪೋರ್ಟ್‍ಗಳನ್ನು ಬ್ಲಾಕ್
ಮಾಡಿ ಇಲ್ಲವೇ SMBv1 ನಿಷ್ಕ್ರಿಯ ಮಾಡಿ.

* ವಿಂಡೋಸ್ ಎಕ್ಸ್ ಪಿ, ವಿಸ್ಟಾ, ಸರ್ವರ್  2008 ಮತ್ತು ಸರ್ವರ್ 2003 ಆಪರೇಟಿಂಗ್ ಸಿಸ್ಟಂ
ಬಳಸುತ್ತಿದರೆ ಈ ಆಪರೇಟಿಂಗ್ ಸಿಸ್ಟಂ ಅನ್ನು ಅಪ್‍ಡೇಟ್ ಮಾಡಿ.

*ಕುತಂತ್ರಾಂಶಗಳಿಂದಾಗುವ ದಾಳಿಯಿಂದ ರಕ್ಷಿಸಲು ಇರುವ ಪ್ರೋಗ್ರಾಂಗಳು*

- Sophos: Hitman.Pro

- Malwarebytes Anti-Ransomware (formally Crypto Monitor)

- Trendmicro Ransomware Screen Unlocker

- Microsoft Enhanced Mitigation Experience Toolkit

*ನಿಮ್ಮ ಕಂಪ್ಯೂಟರ್ ಸೈಬರ್ ದಾಳಿಗೊಳಗಾಗಿದೆ ಎಂಬುದು ತಿಳಿಯುವುದು ಹೇಗೆ? ದಾಳಿಗೊಳಗಾದರೆ
ಏನು ಮಾಡಬೇಕು?*

* ನಿಮ್ಮ ಕಂಪ್ಯೂಟರ್‍‍ನಲ್ಲಿರುವ ಕಡತಗಳ ಎಕ್ಸ್‌ಟೆನ್ಶನ್ ಉದಾಹರಣೆಗೆ ನೋಟ್ ಪ್ಯಾಡ್
ಕಡತಗಳಿಗೆ .txt,  ಮೈಕ್ರೋಸಾಫ್ಟ್  ವರ್ಡ್ ಕಡತಕ್ಕೆ .doc ಎಂದಿರುವುದು (*.wnry) ಎಂದು
ಬದಲಾಗಿದ್ದರೆ ನಿಮ್ಮ ಕಂಪ್ಯೂಟರ್  ವೈರಸ್ ದಾಳಿಗೆ ತುತ್ತಾಗಿದೆ ಎಂಬುದು ಖಚಿತ.

* ಕುತಂತ್ರಾಂಶ ಮೂಲಕ ಸೈಬರ್ ದಾಳಿ ನಡೆಸುವ ಹ್ಯಾಕರ್‍‍ಗಳು ಹಣಕ್ಕಾಗಿ ಬೇಡಿಕೆಯೊಡ್ಡಿದರೆ
ಯಾವುದೇ ಕಾರಣಕ್ಕೂ ಹಣ ಪಾವತಿ ಮಾಡಬೇಡಿ. ಹಣ ಪಾವತಿ ಮಾಡಿದ ನಂತರ ಸಮಸ್ಯೆ
ಪರಿಹಾರವಾಗುತ್ತದೆ ಎಂಬ ಯಾವುದೇ ಭರವಸೆ ಇಲ್ಲ. ಈ ರೀತಿಯ ವಂಚನೆ ಕಂಡು ಬಂದರೆ ಸಿಇಆರ್‍‍ಟಿ
ಮತ್ತು  ಕಾನೂನು ಜಾರಿ ಸಂಸ್ಥೆಗೆ ಮಾಹಿತಿ ನೀಡಿ.

* ಎಲ್ಲ ನೆಟ್ವರ್ಕ್ ಕನೆಕ್ಷನ್‍ಗಳನ್ನು ಮತ್ತು ಎಕ್ಸ್‌ಟರ್ನಲ್ ಸ್ಟೋರೇಜ್ ಡಿವೈಸ್ ಗಳ
ಸಂಪರ್ಕ ಕಡಿತಗೊಳಿಸಿ.

* ನಿಮ್ಮ ಕಂಪ್ಯೂಟರ್‌‍ನ್ನು Shut down  ಮಾಡಿ ನಿಮ್ಮ ಸಂಸ್ಥೆಯ ಐಟಿ ವಿಭಾಗಕ್ಕೆ ಮಾಹಿತಿ
ನೀಡಿ.

* ನಿಮ್ಮ ಕಡತಗಳ ಬ್ಯಾಕ್‍ಅಪ್ ಇಟ್ಟುಕೊಳ್ಳಿ

*ನಿಮ್ಮ ಕಂಪ್ಯೂಟರ್‍ ನಲ್ಲಿರುವ ದತ್ತಾಂಶಗಳನ್ನು ಸುರಕ್ಷಿತವಾಗಿರಿಸಲು ಸಲಹೆ ಸೂಚನೆಗಳು*

* ಇಮೇಲ್ ದೃಢೀಕರಣ ವ್ಯವಸ್ಥೆ  (email validation system) ಅಳವಡಿಸಿಕೊಳ್ಳಿ. ಇದು
ಸ್ಪಾಮ್‍ಗಳಿಂದ ಮುಕ್ತಿ ನೀಡುವುದಲ್ಲದೆ ಫಿಶಿಂಗ್ ಇಮೇಲ್‍ಗಳನ್ನು ಪತ್ತೆ ಹಚ್ಚುತ್ತದೆ.

* ನಿಮ್ಮ  mailboxನಲ್ಲಿರುವ ಸ್ಪಾಮ್ ಮೇಲ್‍ಗಳನ್ನು ಬ್ಲಾಕ್ ಅಥವಾ ನಿಷ್ಕ್ರಿಯ ಮಾಡಿ.
ಅನುಮಾನಾಸ್ಪದ ಅಟ್ಯಾಚ್‍ಮೆಂಟ್‍ಗಳಿರುವ ಇಮೇಲ್‍ಗಳನ್ನು ತೆರೆಯಲೇ ಬೇಡಿ.ನಿಮ್ಮ ಸ್ನೇಹಿತರೇ
ಯಾವುದಾದರೂ  ಇಮೇಲ್ ಮೂಲಕ URL ಲಿಂಕ್ ಕಳಿಸಿದ್ದರೆ ಅದನ್ನು ಕ್ಲಿಕ್ ಮಾಡಬೇಡಿ.  ಒಂದು
ವೇಳೆ ಆ ಲಿಂಕ್ ಕ್ಲಿಕ್ ಮಾಡಲೇ ಬೇಕೆಂದು ಇದ್ದರೆ, ಮೊದಲು ಇಮೇಲ್ ಲಾಗ್  ಔಟ್ ಆಗಿ.

* ನಿಮ್ಮ ನೆಟ್ವರ್ಕ್ ನಲ್ಲಿ ವೆಬ್ ಮತ್ತು ಇಮೇಲ್ ಫಿಲ್ಟರ್‍‍ಗಳನ್ನಿರಿಸಿ. ಡೊಮೇನ್, ಮೂಲ
ಮತ್ತು ವಿಳಾಸಗಳನ್ನು ಪತ್ತೆ ಹಚ್ಚಿ ಸ್ಕ್ಯಾನ್ ಮಾಡುವಂತೆ ಈ ಫಿಲ್ಟರ್‍‍ಗಳನ್ನು ಕಾನ್ಫಿಗರ್
ಮಾಡಿ. ಇಂಥಾ ವಿಳಾಸಗಳಿಂದ ಬರುವ ಇಮೇಲ್‍ಗಳನ್ನು ಸ್ವೀಕರಿಸದಂತೆ ಮತ್ತು ಡೌನ್‍ಲೋಡ್
ಮಾಡದಂತೆ ಸೆಟ್ಟಿಂಗ್ಸ್ ಮಾಡಿಕೊಳ್ಳಿ. ಎಲ್ಲ ಇಮೇಲ್, ಅಟ್ಯಾಚ್‍ಮೆಂಟ್, ಡೌನ್‍ಲೋಡ್
‍ಗಳನ್ನು ಸ್ಕ್ಯಾನ್ ಮಾಡಿಕೊಳ್ಳಿ.

* ಮೈಕ್ರೋಸಾಫ್ಟ್  ಆಫೀಸ್ ಪ್ರಾಡೆಕ್ಟ್ ಗಳಲ್ಲಿ ಮ್ಯಾಕ್ರೋಸ್ ನಿಷ್ಕ್ರಿಯಗೊಳಿಸಿ.

* ಕಡತ, ಡೈರೆಕ್ಟರಿ ಮತ್ತು ನೆಟ್ವರ್ಕ್‍ಗಳ ಬಳಕೆಗೆ ನಿಯಂತ್ರಣವೇರ್ಪಡಿಸಿ
*   exe|pif |tmp |url|vb|vbe|scr|reg|
cer|pst|cmd|com|bat|dll|dat|hlp|hta|js|wsf - ಈ ರೀತಿ ಎಕ್ಸ್‌ಟೆನ್ಶನ್ ಇರುವ

[ms-stf '73190'] ‘ಗ್ರಹಾಂತರ’ಕ್ಕೆ ನೂರು ವರ್ಷಗಳ ಗಡುವು | ಪ್ರಜಾವಾಣಿ

2017-05-13 Thread HAREESHKUMAR K Agasanapura
http://m.prajavani.net/article/2017_05_12/490677



*‘ಗ್ರಹಾಂತರ’ಕ್ಕೆ ನೂರು ವರ್ಷಗಳ ಗಡುವು*

12 May, 2017

ಪೃಥ್ವಿ ದತ್ತ ಚಂದ್ರ ಶೋಭಿ








ಮನುಕುಲದ ಬದುಕುಳಿಯುವಿಕೆಗೆ ಮುಂದಿನ ನೂರು ವರ್ಷಗಳೊಳಗೆ ಬೇರೆ ಗ್ರಹವೊಂದಕ್ಕೆ ಮಾನವರು
ವಲಸೆ ಹೋಗುವುದು ಅನಿವಾರ್ಯ ಎಂದು ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಹೇಳುತ್ತಾರೆ. ಈ
ಎಚ್ಚರಿಕೆಯನ್ನು ಅವರು ನೀಡಿದ್ದು ಬಿಬಿಸಿಯಲ್ಲಿ ಪ್ರಸಾರವಾಗಲಿರುವ ‘ಎಕ್ಸ್‌ಪೆಡಿಶನ್ ನ್ಯೂ
ಅರ್ಥ್’ (ಹೊಸ ಭೂಮಿಯ ಮೇಲೆ ದಂಡಯಾತ್ರೆ) ಎಂಬ ಸಾಕ್ಷ್ಯಚಿತ್ರ ಸರಣಿಗೆ. ಹವಾಮಾನ
ವೈಪರೀತ್ಯಗಳು, ಬಾಹ್ಯಾಕಾಶದಲ್ಲಿ ಚಲಿಸುತ್ತಿರುವ ಕ್ಷುದ್ರಗ್ರಹಗಳು ಭೂಮಿಯ ಮೇಲೆ ಬೀಳುವ
ಸಾಧ್ಯತೆ, ಸಾಂಕ್ರಾಮಿಕ ರೋಗಗಳು ಮತ್ತು ಜನಸಂಖ್ಯಾ ಹೆಚ್ಚಳಗಳ ಕಾರಣದಿಂದ ಭೂಮಿಯ ಮೇಲೆ
ಮನುಷ್ಯನ ಬದುಕು ದಿನೇ ದಿನೇ ಹೆಚ್ಚು ಅನಿಶ್ಚಿತವಾಗುತ್ತಿದೆ ಎಂದು ಹಾಕಿಂಗ್
ವಾದಿಸುತ್ತಾರೆ. ಇವುಗಳ ಜೊತೆಗೆ ತುಂಬ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಟಿಫಿಶಿಯಲ್
ಇಂಟಲಿಜೆನ್ಸ್ (ಕೃತಕ ಬುದ್ಧಿವಂತಿಕೆ) ಈಗ ಅಸ್ತಿತ್ವದಲ್ಲಿರುವ ಏಕೈಕ ಮನುಷ್ಯ ವರ್ಗವಾದ
ಸೇಪಿಯನ್ನರ ಭವಿಷ್ಯಕ್ಕೆ ಅತ್ಯಂತ ದೊಡ್ಡ ಕಂಟಕವಾಗಿ ಹೊರಹೊಮ್ಮುತ್ತಿದೆ.

ಮನುಕುಲ ಎದುರಿಸುತ್ತಿರುವ ಇಂತಹ ಅಪಾಯಗಳ ಬಗ್ಗೆ ಹಾಕಿಂಗ್ ಹಿಂದೆಯೂ ಹಲವಾರು ಬಾರಿ
ಮಾತನಾಡಿದ್ದಾರೆ. ಕೇವಲ ಆರು ತಿಂಗಳ ಹಿಂದೆ, 2016ರ ನವೆಂಬರ್‌ನಲ್ಲಿ ಆಕ್ಸಫರ್ಡ್
ವಿಶ್ವವಿದ್ಯಾಲಯದ ಯೂನಿಯನ್‌ನಲ್ಲಿ ಮಾತನಾಡುತ್ತ, ಮನುಕುಲದ ಭವಿಷ್ಯದ ನೆಲೆಯಾಗಿ ಇನ್ನೊಂದು
ಗ್ರಹವನ್ನು ಹುಡುಕಿ ಅಲ್ಲಿ ನೆಲೆಸಲು ವ್ಯವಸ್ಥೆ ಮಾಡಲು ಸುಮಾರು ಒಂದು ಸಾವಿರ ವರ್ಷಗಳಷ್ಟು
ಸಮಯವಿದೆ ಎಂದಿದ್ದರು. ನಂತರದ ಆರು ತಿಂಗಳಲ್ಲಿ ನೂರು ವರ್ಷಗಳ ಹೊಸ ಗಡುವನ್ನು ಹಾಕಿಂಗ್
ನೀಡುವಂತೆ ಮಾಡುವ ಹೊಸ ಅನ್ವೇಷಣೆಗಳು ಅಥವಾ ಬೆಳವಣಿಗೆಗಳು ಭೂಮಿಯ ಮೇಲೇನೂ ಆಗಿಲ್ಲ. ಆದರೂ
ನಮ್ಮ ಕಾಲದ ಅತ್ಯಂತ ಬುದ್ಧಿವಂತ ಮನುಷ್ಯನೆಂದು ಗುರುತಿಸಲಾಗುವ 74 ವರ್ಷ ವಯಸ್ಸಿನ ಹಾಕಿಂಗ್
ಅವರ ಮಾತುಗಳನ್ನು, ಅವು ಎಷ್ಟೇ ಪ್ರಚೋದನಕಾರಿ ಹಾಗೂ ವಿವಾದಾತ್ಮಕವಾಗಿದ್ದರೂ, ವಕ್ರನೊಬ್ಬನ
ಹುಚ್ಚು ನುಡಿಗಳೆಂದು ತಳ್ಳಿಹಾಕುವಂತಿಲ್ಲ.

ಹಾಗಾದರೆ ಈಗ ನಮ್ಮ ಮಕ್ಕಳ ಜೀವಿತಾವಧಿಯೊಳಗೆಯೇ ಭೂಮಿಯಾಚೆಗಿನ ವಸಾಹತನ್ನು ಮನುಷ್ಯರು
ಹುಡುಕಿಕೊಳ್ಳಬೇಕಾದ ಅನಿವಾರ್ಯ ಇದೆ ಎಂದು ಹಾಕಿಂಗ್ ಹೇಳುತ್ತಿದ್ದಾರೆಯೇ? ಭೂಮಿಯ ಮೇಲೆ
ಮನುಷ್ಯನ ಭವಿಷ್ಯ ವೈಜ್ಞಾನಿಕ ಕಥನ (ಸೈನ್ಸ್ ಫಿಕ್ಷನ್) ಚಲನಚಿತ್ರವೊಂದರ ರೀತಿಯಲ್ಲಿ
ಕಾಣಿಸಿಕೊಳ್ಳುತ್ತಿರುವುದು ಏಕೆ? ಈ ಹಿಂದೆಯೂ ಭೂಮಿಯ ಪರಿಸರ ನಾಟಕೀಯವಾಗಿ ಬದಲಾಗಿದೆ,
ಪರಿಸರ ದುರಂತಗಳು ಸಂಭವಿಸಿವೆ. ಭೂಮಿಯ ಮೇಲೆ ವಾಸಿಸುತ್ತಿದ್ದ ಡೈನಾಸೋರ್‌ಗಳಂತಹ ಪ್ರಬಲ
ಜೀವಿಗಳು ಅಳಿದಿವೆ. ಹಿಂದಿನ ಈ ವಿಪತ್ತುಗಳಿಗೂ ಇಂದಿನ ಬಿಕ್ಕಟ್ಟುಗಳಿಗೂ ಇರುವ ಸಾಮ್ಯತೆ
ಅಥವಾ ವ್ಯತ್ಯಾಸಗಳೇನು?

ಈ ಯಾವ ಪ್ರಶ್ನೆಗಳಿಗೂ ಸುಲಭ, ಸರಳವಾದ ಉತ್ತರಗಳು, ಪರಿಹಾರಗಳು ಇಲ್ಲ. ನಾನು ವಿಜ್ಞಾನ
ಮತ್ತು ತಂತ್ರಜ್ಞಾನಗಳ
ಸಂಶೋಧಕನಲ್ಲ. ನಾಗರಿಕತೆಗಳ ಇತಿಹಾಸವನ್ನು ಅಭ್ಯಾಸ ಮಾಡುವ ನಾನು, ನಮ್ಮ ಅಸ್ತಿತ್ವಕ್ಕೆ
ಕುತ್ತು ಬರುವಂತಹ ಇಂದಿನ ಸವಾಲುಗಳನ್ನು ಹೇಗೆ ಗ್ರಹಿಸಬೇಕು ಎನ್ನುವ ಪ್ರಶ್ನೆಯನ್ನು
ಕೇಳಿಕೊಳ್ಳುತ್ತಿದ್ದೇನೆ. ಇದಕ್ಕೆ  ತಾತ್ಕಾಲಿಕ ಉತ್ತರವಾಗಿ ಕೆಳಗಿನ ಕಥನವನ್ನು ನೀಡಬಹುದು
ಎನ್ನಿಸುತ್ತಿದೆ.
ಸುಮಾರು ಎಪ್ಪತ್ತು ಸಾವಿರ ವರ್ಷಗಳಿಂದೀಚೆಗೆ ಸೇಪಿಯನ್ನರು ಭೂಮಿ ಹಾಗೂ ಅದರಲ್ಲಿರುವ ಇತರ
ಜೀವಿಗಳ ಮೇಲೆ ನಿಯಂತ್ರಣ ಸಾಧಿಸಿದರು. ಈ ನಂತರದ ಸಹಸ್ರಮಾನಗಳಲ್ಲಿ ಕ್ಷಾಮ, ಸಾಂಕ್ರಾಮಿಕ
ರೋಗಗಳು ಮತ್ತು ಯುದ್ಧಗಳು ಅವರು ಎದುರಿಸಿದ ಮುಖ್ಯ ಸವಾಲುಗಳು. ಇವುಗಳನ್ನು ಕೃಷಿ ಕ್ರಾಂತಿ
ಹಾಗೂ ಕೈಗಾರಿಕಾ ಕ್ರಾಂತಿಗಳಂತಹ ವಿದ್ಯಮಾನಗಳ ಮೂಲಕ ಕಳೆದ ಹತ್ತು ಸಾವಿರ ವರ್ಷಗಳಲ್ಲಿ
ಪರಿಹರಿಸಿಕೊಳ್ಳಬಹುದಾದ ತಾಂತ್ರಿಕ ಸಮಸ್ಯೆಗಳನ್ನಾಗಿ ಸೇಪಿಯನ್ನರು ಪರಿವರ್ತಿಸಿಕೊಂಡರು.
ಅಂದರೆ ಇಂದು ಕ್ಷಾಮ, ಸಾಂಕ್ರಾಮಿಕ ರೋಗಗಳು ಮತ್ತು ಯುದ್ಧಗಳು ಸಂಭವಿಸಿದರೆ ಅವುಗಳಿಗೆ
ನಮ್ಮಲ್ಲಿ ಅಗತ್ಯ ಪರಿಹಾರಗಳಿವೆ. ಅವುಗಳನ್ನು ನಾವು ಬಳಸದಿದ್ದರೆ, ಅದರ ಫಲವಾಗಿ ಪ್ರಪಂಚದ
ಯಾವುದೋ ಮೂಲೆಯಲ್ಲಿ ಒಂದು ಸಮುದಾಯವು ತೊಂದರೆಗೀಡಾದರೆ, ಆಗ ತೊಂದರೆಯಲ್ಲಿದ್ದವರಿಗೆ ಇತರ
ಸೇಪಿಯನ್ನರು ಸಹಾಯ ಮಾಡಲಿಲ್ಲ ಎಂದು ಮಾತ್ರ ಅರ್ಥ. ಹೀಗೆ ಪ್ರಾಕೃತಿಕ ವಿಕಸನ ಪ್ರಕ್ರಿಯೆಯ
ಪ್ರಭಾವವಲಯದಿಂದ ಬಹುಮಟ್ಟಿಗೆ ಹೊರಗೆ ಬರುವಲ್ಲಿ, ಪ್ರಕೃತಿಯ ಮೇಲೆ ನಿಯಂತ್ರಣ ಸಾಧಿಸುವಲ್ಲಿ
ಸೇಪಿಯನ್ನರಾದ ನಾವು ಗಣನೀಯ ಯಶಸ್ಸನ್ನು ಕಂಡಿದ್ದೇವೆ. ಇದು ಕಳೆದ ಹತ್ತು ಸಾವಿರ
ವರ್ಷಗಳಲ್ಲಿ ಭೂಮಿಯ ಮೇಲೆ ಸೇಪಿಯನ್ನರು ಮಾತ್ರ ಮನುಕುಲದ ಪ್ರತಿನಿಧಿಗಳಾಗಿ ಉಳಿದ ಮೇಲೆ
ನಾವು ಮಾಡಿರುವ ಸಾಧನೆ.

ಈ ಹಂತದಲ್ಲಿ ಎರಡು ಟಿಪ್ಪಣಿಗಳನ್ನು ನೀಡಬೇಕು. ಮೊದಲಿಗೆ, ಸೇಪಿಯನ್ನರ ಯಶಸ್ಸು ಗಣನೀಯವಾದ
ಪ್ರಮಾಣದಲ್ಲಿ ಭೂಮಿಯ ಪರಿಸರಕ್ಕೆ ಹಾನಿಯನ್ನು ಮಾಡಿದೆ ಎನ್ನುವುದು ನಿಜ. ಹಾಕಿಂಗ್‌ ಅವರ
ಎಚ್ಚರಿಕೆಯ ಮಾತುಗಳಿಗೆ ಪರಿಸರಹಾನಿಯೂ ಕಾರಣ ಎನ್ನುವುದನ್ನು ಯಾರೂ ಅಲ್ಲಗಳೆಯುವುದಿಲ್ಲ.
ಎರಡನೆಯದಾಗಿ, ಪರಿಸರದ ಹಾನಿ ಸಂಭವಿಸಿರುವುದು ಆಧುನಿಕತೆಯ ಸಂದರ್ಭದ ಬೆಳವಣಿಗೆಗಳಿಂದ
ಮಾತ್ರವಲ್ಲ. ಅರಿವಿನ ಕ್ರಾಂತಿಯ ನಂತರ ಮನುಷ್ಯ ಭೂಮಿಯ ಯಾವ ಭಾಗಕ್ಕೆ ವಲಸೆ ಹೋದರೂ,
ಅಲ್ಲೆಲ್ಲ ದೊಡ್ಡ ಪ್ರಮಾಣದಲ್ಲಿ ಜೀವ ನಾಶವಾಗಿದೆ, ಪರಿಸರದ ಬದಲಾವಣೆಯಾಗಿದೆ. ಜೊತೆಗೆ,
ಸೇಪಿಯನ್ನರಿಗೆ ಆಹಾರಭದ್ರತೆಯನ್ನು ಒದಗಿಸಿದ ಕೃಷಿಕ್ರಾಂತಿಯೂ ಮನುಷ್ಯರನ್ನು ವಿಕಸನ
ಪ್ರಕ್ರಿಯೆಯಿಂದ ಹೊರಗಿರಿಸುವಲ್ಲಿ ದೊಡ್ಡಪಾತ್ರ ನಿರ್ವಹಿಸಿತು. ಹಾಗಾಗಿ ನಾವು ಇಂದು
ಎದುರಿಸುತ್ತಿರುವ ಪರಿಸರ ಅಸಮತೋಲನದ ಸಮಸ್ಯೆಗಳು ಆಧುನಿಕತೆ, ಕೈಗಾರಿಕಾ ಕ್ರಾಂತಿ,
ಜಾಗತೀಕರಣ ಮತ್ತು ಕೊಳ್ಳುಬಾಕ ಸಂಸ್ಕೃತಿಯ ಫಲವಾಗಿ ಮಾತ್ರ ಉತ್ಪನ್ನವಾಗಿಲ್ಲ. ಇಸ್ರೇಲಿ
ಇತಿಹಾಸಕಾರ ಯುವಾಲ್ ಹರಾರಿಯವರ ಪ್ರಭಾವಶಾಲಿ ಕಥನದ ಬಹುಮುಖ್ಯ ಒಳನೋಟಗಳಲ್ಲಿ ಈ ಅಂಶವೂ
ಒಂದು. ಆದರೆ ಆಧುನಿಕತೆ ಇತ್ಯಾದಿಗಳು ಪರಿಸರದ ಮೇಲಿನ ಆಕ್ರಮಣವನ್ನು ಮತ್ತಷ್ಟು
ತೀವ್ರಗೊಳಿಸಿದವು ಎನ್ನುವುದರಲ್ಲಿ ಅನುಮಾನವಿಲ್ಲ.

ಇಷ್ಟಾದರೂ ಕಳೆದ ಎಪ್ಪತ್ತು ವರ್ಷಗಳಲ್ಲಿ ಮನುಷ್ಯನ ಮೂಲಗುಣದಲ್ಲಿ, ಅರಿವಿನ 

[ms-stf '73144'] ಎಸ್ಸೆಸ್ಸೆಲ್ಸಿ ನಂತರ: ಸ್ವಾವಲಂಬನೆಗೆ ನೆರವಾಗುವ ಪಶುಸಂಗೋಪನೆ ಡಿಪ್ಲೊಮಾ | ಪ್ರಜಾವಾಣಿ

2017-05-12 Thread HAREESHKUMAR K Agasanapura
http://m.prajavani.net/article/2017_05_12/490881

*ಎಸ್ಸೆಸ್ಸೆಲ್ಸಿ ನಂತರ: ಸ್ವಾವಲಂಬನೆಗೆ ನೆರವಾಗುವ ಪಶುಸಂಗೋಪನೆ ಡಿಪ್ಲೊಮಾ*

12 May, 2017








*ಬೀದರ್: *ಪೈಪ್‌ಲೈನ್‌ ಮೂಲಕ ಸರಬರಾಜು ಮಾಡುವಷ್ಟು ಹಾಲನ್ನು ಬೀದರ್‌ ಜಿಲ್ಲೆಯಲ್ಲಿ
ಉತ್ಪಾದನೆ ಮಾಡಲು ಸಾಧ್ಯವಿದೆ.
ಹೀಗೆಂದು ಕ್ಷೀರಕ್ರಾಂತಿ ಹರಿಕಾರ, ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ (GCMMF)ದ
ಸಂಸ್ಥಾಪಕ ಅಧ್ಯಕ್ಷ ವರ್ಗಿಸ್ ಕುರಿಯನ್ ಅವರು ಬೀದರ್ ಜಿಲ್ಲೆಗೆ ಭೇಟಿ ನೀಡಿದ್ದ
ಸಂದರ್ಭದಲ್ಲಿ  ಹೇಳಿದ್ದರು. ಕಲಬುರ್ಗಿ, ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟಕ್ಕೆ ಬೀದರ್‌
ಜಿಲ್ಲೆಯಿಂದ ಪೂರೈಕೆಯಾಗುತ್ತಿರುವ ಹಾಲಿನ ಪ್ರಮಾಣವನ್ನು ಅವಲೋಕಿಸಿದರೆ ಕುರಿಯನ್‌ ಹೇಳಿಕೆ
ಸತ್ಯ ಎನ್ನುವುದು ಮನವರಿಕೆಯಾಗುತ್ತದೆ.

ಜಿಲ್ಲೆಯಲ್ಲಿ  ಹೈನೋದ್ಯಮ ಹಾಗೂ ಪಶು ಸಂಗೋಪನೆಗೆ ಸಾಕಷ್ಟು ಅವಕಾಶಗಳಿವೆ. ಈ ಅಂಶವನ್ನು
ಗಮನದಲ್ಲಿಟ್ಟುಕೊಂಡು ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ
ವಿಶ್ವವಿದ್ಯಾಲಯವು ಶಿಗ್ಗಾವಿ ಮತ್ತು ತಿಪಟೂರು ಸಮೀಪದ ಕೊನೆಹಳ್ಳಿಯಲ್ಲಿ ಪಶುಸಂಗೋಪನೆ
ಡಿಪ್ಲೊಮಾ ಪರಿಚಯಿಸಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಯಾದಗಿರಿ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯಲ್ಲೂ
ಪಶುಸಂಗೋಪನೆ ಡಿಪ್ಲೊಮಾ ಆರಂಭಿಸುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದೆ.
ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳ ಬಯಸುವವರಿಗೆ ಹಾಗೂ ಕೃಷಿ ಜಮೀನು ಇರುವವರಿಗೆ  ಈ ಕೋರ್ಸ್
ಅನುಕೂಲವಾಗಿದೆ.

ಏನಿದು ಪಶುಸಂಗೋಪನೆ ಡಿಪ್ಲೊಮಾ ?: ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಎರಡು
ವರ್ಷದ ಪಶುಸಂಗೋಪನೆ ಡಿಪ್ಲೊಮಾ ಮಾಡಬಹುದಾಗಿದೆ.  ರಾಜ್ಯಮಟ್ಟದಲ್ಲಿ ಮೆರಿಟ್ ಆಧಾರದ ಮೇಲೆ
ಪ್ರವೇಶ ದೊರೆಯುತ್ತದೆ.

ವಿದ್ಯಾರ್ಥಿಗಳು ಕಡ್ಡಾಯವಾಗಿ 1 ರಿಂದ 10ನೇ ತರಗತಿ ವರೆಗೆ ಗ್ರಾಮೀಣ ಪ್ರದೇಶದಲ್ಲಿಯೇ
ವ್ಯಾಸಂಗ ಮಾಡಿರಬೇಕು. 2 ವರ್ಷದ  ಡಿಪ್ಲೊಮಾ ಅವಧಿಯಲ್ಲಿ ಪ್ರತೀ ತಿಂಗಳು  ₹1,000
ಶಿಷ್ಯವೇತನ ನೀಡಲಾಗುತ್ತದೆ.  ಎಸ್ಸೆಸ್ಸೆಲ್ಸಿ ನಂತರ ಶಿಕ್ಷಣ ಮುಂದುವರಿಸಲು ಸಾಧ್ಯವಾಗದವರು
ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅನುಕೂಲವಾಗಿದೆ. ಈ
ಕೋರ್ಸ್‌ನಲ್ಲಿ ಕುರಿ, ಮೇಕೆ, ಕೋಳಿ ಸಾಕಾಣಿಕೆ ಕುರಿತು ತರಬೇತಿ ಹಾಗೂ ಮಾಹಿತಿ
ನೀಡಲಾಗುತ್ತದೆ. ಪಶು ಆಹಾರ, ಪೌಷ್ಟಿಕ ಆಹಾರ, ವೈಜ್ಞಾನಿಕ ರೀತಿಯಲ್ಲಿ ಪಶುಪಾಲನೆ ಕುರಿತು
ಪ್ರಾಯೋಗಿಕವಾಗಿ ಮಾಹಿತಿ ನೀಡಲಾಗುತ್ತಿದೆ.

ಬೀದರ್ ಜಿಲ್ಲೆಗೆ ಪ್ರತ್ಯೇಕ ಒಕ್ಕೂಟ ರಚನೆಯಾದರೆ ಐದು ಲಕ್ಷ ಲೀಟರ್‌ ವರೆಗೂ ಹಾಲು
ಉತ್ಪಾದನೆ ಮಾಡಬಹುದಾಗಿದೆ. ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣಕ್ಕೂ ಹಾಲು ಪೂರೈಸಬಹುದು.
ಜಾನುವಾರು ಪಾಲನೆಗೆ ಅಗತ್ಯವಿರುವ ಸೂಕ್ತ ಹವಾಗುಣ ಹಾಗೂ ಪರಿಸರ ಜಿಲ್ಲೆಯಲ್ಲಿದೆ.
‘ಪಶುಸಂಗೋಪನೆ ಡಿಪ್ಲೊಮಾ ನಂತರ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ
ವಿಶ್ವವಿದ್ಯಾಲಯದ ಸುಜಲಾ–3 ಪ್ರಾಜೆಕ್ಟ್‌ನಲ್ಲಿ ಕ್ಷೇತ್ರ ಪರಿವೀಕ್ಷಕ ಹುದ್ದೆಗೆ
ನೇಮಕಗೊಂಡಿದ್ದೇನೆ.

₹ 11,400 ಮೂಲವೇತನ ಹಾಗೂ ಇತರೆ ಭತ್ಯೆ ದೊರೆಯುತ್ತಿದೆ. ಗ್ರಾಮಗಳಿಗೆ ತೆರಳಿ ರೈತರಿಗೆ
ಒಣಮೇವು ಪೌಷ್ಟಿಕರಣ, ರಸ ಮೇವು, ಜಾನವಾರು ರೋಗ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು
ತಿಳಿವಳಿಕೆ ನೀಡುತ್ತಿದ್ದೇನೆ. ರಾಜ್ಯದ ಏಳು ಜಿಲ್ಲೆಯಲ್ಲಿ ಜಾರಿಯಲ್ಲಿರುವ ಈ ಯೋಜನೆಗೆ
ಪಶುಸಂಗೋಪನೆ ಡಿಪ್ಲೊಮಾ ಅಭ್ಯರ್ಥಿಗಳನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ
ಹಳೆಯ ವಿದ್ಯಾರ್ಥಿ ಶಿಗ್ಗಾವಿಯ ಸುನೀಲ್‌ ರೊಳ್ಳಿ.

*ಸರ್ಕಾರಿ ನೇಮಕಾತಿಯಲ್ಲೂ ಅವಕಾಶ*
‘ಸರ್ಕಾರದ ಇಲಾಖೆಗಳಲ್ಲಿ ಈವರೆಗೆ ಪಶುಸಂಗೋಪನೆ ಡಿಪ್ಲೊಮಾ ಮಾಡಿದವರ ನೇಮಕ ಆಗಿಲ್ಲ. ಆದರೆ
ಪಶು ಸಂಗೋಪನಾ ಇಲಾಖೆಯಲ್ಲಿನ ಕ್ಷೇತ್ರ ಸಹಾಯಕ ಹುದ್ದೆಗೆ ಪಶುಸಂಗೋಪನೆ ಡಿಪ್ಲೊಮಾ ಶಿಕ್ಷಣ
ಪಡೆದವರನ್ನು ನೇಮಕಾತಿ ಮಾಡಿಕೊಳ್ಳುವಂತೆ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ.
ಸರ್ಕಾರ ಶೀಘ್ರದಲ್ಲೇ ಆದೇಶ ಹೊರಡಿಸುವ ನಿರೀಕ್ಷೆ  ಇದೆ’  ಎನ್ನುತ್ತಾರೆ ಪಶು ವೈದ್ಯಕೀಯ
ವಿಶ್ವವಿದ್ಯಾಲಯದ ವಿಸ್ತರಣಾಧಿಕಾರಿ ಡಾ.ಎಸ್‌.ಎಂ.ಶಿವಪ್ರಕಾಶ.
-*ಚಂದ್ರಕಾಂತ ಮಸಾನಿ*

Hareeshkumar K
GHS Huskuru
Malavalli TQ
Mandya Dt
9880328224

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 

[ms-stf '73115'] ಇಜ್ಞಾನ ಡಾಟ್ ಕಾಮ್: ಹೂ ಇಸ್ WHOIS?

2017-05-11 Thread HAREESHKUMAR K Agasanapura
http://www.ejnana.com/2017/05/WHOIS.html?m=1
*ಹೂ ಇಸ್ WHOIS?*

*ಟಿ. ಜಿ. ಶ್ರೀನಿಧಿ*



ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಅಪಾರ ಸಂಖ್ಯೆಯ ಜಾಲತಾಣಗಳಿವೆ.
ಹೊರಪ್ರಪಂಚದ ಸೈಟುಗಳಂತೆಯೇ ವೆಬ್‌ಲೋಕದ ಈ ಸೈಟುಗಳಿಗೂ ಮಾಲೀಕರಿರುತ್ತಾರೆ. ಮನೆಕಟ್ಟಲು
ಸೈಟು ಕೊಳ್ಳುವಾಗ ಮಾಡುವಂತೆ ಜಾಲತಾಣವನ್ನು ನೋಂದಾಯಿಸುವಾಗಲೂ ಅದನ್ನು ಕೊಳ್ಳುತ್ತಿರುವವರು
ಯಾರು ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕಾದ್ದು ಕಡ್ಡಾಯ.
ಜಾಲತಾಣಗಳನ್ನು ನಮ್ಮ ಹೆಸರಿಗೆ ನೋಂದಾಯಿಸಿಕೊಡುವ 'ರಿಜಿಸ್ಟ್ರಾರ್'ಗಳೆಂಬ ಸಂಸ್ಥೆಗಳು 'ದಿ
ಇಂಟರ್‌ನೆಟ್ ಕಾರ್ಪೊರೇಶನ್ ಫಾರ್ ಅಸೈನ್ಡ್ ನೇಮ್ಸ್ ಆಂಡ್ ನಂಬರ್ಸ್' (ಐಕ್ಯಾನ್) ಎಂಬ
ಜಾಗತಿಕ ಸಂಘಟನೆಯ ಪರವಾಗಿ ಈ ಮಾಹಿತಿಯನ್ನು ಸಂಗ್ರಹಿಸಿ ಶೇಖರಿಸಿಡುತ್ತವೆ.

ಹೀಗೆ ಸಂಗ್ರಹವಾಗುತ್ತದಲ್ಲ ಮಾಹಿತಿ, ಅಂತರಜಾಲದ ಮುಕ್ತ ಸ್ವರೂಪಕ್ಕೆ ಅನುಗುಣವಾಗಿ ಅದನ್ನೂ
ಮುಕ್ತವಾಗಿ ತೆರೆದಿಡಲಾಗುತ್ತದೆ. ಅಂದರೆ, ಯಾವುದೇ ಜಾಲತಾಣ ಯಾರ ಹೆಸರಿನಲ್ಲಿ
ನೋಂದಣಿಯಾಗಿದೆ - ಅವರ ಸಂಪರ್ಕ ವಿವರಗಳೇನು ಎನ್ನುವುದನ್ನೆಲ್ಲ ಯಾರು ಬೇಕಾದರೂ ತಿಳಿಯುವುದು
ಸಾಧ್ಯ. ಈ ಸೌಲಭ್ಯವನ್ನು ಒದಗಿಸಿಕೊಡುವ ವ್ಯವಸ್ಥೆಯೇ 'ಹೂ ಈಸ್' (WHOIS).

ಐಕ್ಯಾನ್ ಸಂಸ್ಥೆ ನಿರ್ವಹಿಸುವ whois.icann.orgಗೆ ಭೇಟಿನೀಡಿ ಅಲ್ಲಿ ನಾವು
ತಿಳಿಯಬೇಕೆಂದಿರುವ ತಾಣದ ವಿಳಾಸ ದಾಖಲಿಸಿದರೆ ಸಾಕು, ಅದರ ನೋಂದಣಿ ಕುರಿತ ವಿವರಗಳನ್ನು
ಪಡೆದುಕೊಳ್ಳುವುದು ಸಾಧ್ಯ.

ಹೀಗೆ ದೊರಕುವ ಮಾಹಿತಿಯನ್ನು ಸ್ಪಾಮ್ ಸಂದೇಶಗಳನ್ನು ಕಳಿಸಲು, ಫಿಶಿಂಗ್ ಪ್ರಯತ್ನಗಳನ್ನು
ನಡೆಸಲು ಬಳಸುವ ಸಾಧ್ಯತೆ ಇರುತ್ತದಲ್ಲ, ಹಾಗಾಗಿ ಹೂ ಈಸ್ ಜಾಲತಾಣದಲ್ಲಿ ಸಾಕಷ್ಟು ಸುರಕ್ಷತಾ
ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ, ಈ ವ್ಯವಸ್ಥೆಯ ಮೂಲಕ ನಮ್ಮ ಖಾಸಗಿ ಮಾಹಿತಿ
ಎಲ್ಲರಿಗೂ ಕಾಣದಂತೆ ಮಾಡುವ 'ಡೊಮೈನ್ ಪ್ರೈವಸಿ' ಸೌಲಭ್ಯವನ್ನೂ ಹಲವು ರಿಜಿಸ್ಟ್ರಾರ್‌ಗಳು
ಪರಿಚಯಿಸಿದ್ದಾರೆ (ಬಹಳಷ್ಟು ಸಾರಿ ಇದಕ್ಕಾಗಿ ಹೆಚ್ಚುವರಿ ಶುಲ್ಕ ನೀಡಬೇಕಾಗುತ್ತದೆ).

Hareeshkumar K
GHS Huskuru
Malavalli TQ
Mandya Dt
9880328224

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.


[ms-stf '73059'] ಬುದ್ಧಿಮತ್ತೆ ಪರೀಕ್ಷೆ: ಐನ್‌ಸ್ಟೀನ್‌, ಹಾಕಿಂಗ್‌ರನ್ನು ಹಿಂದಿಕ್ಕಿದ ಭಾರತದ ಬಾಲಕಿ | ಪ್ರಜಾವಾಣಿ

2017-05-06 Thread HAREESHKUMAR K Agasanapura
http://m.prajavani.net/article/2017_05_06/489619#
*ಬುದ್ಧಿಮತ್ತೆ ಪರೀಕ್ಷೆ: ಐನ್‌ಸ್ಟೀನ್‌, ಹಾಕಿಂಗ್‌ರನ್ನು ಹಿಂದಿಕ್ಕಿದ ಭಾರತದ ಬಾಲಕಿ*

6 May, 2017

ಪಿಟಿಐ








*ಲಂಡನ್‌: *ಇಂಗ್ಲೆಂಡಿನ ಬ್ರಿಟೀಷ್‌ ಮೆನ್ಸಾ ಸಂಸ್ಥೆ ನಡೆಸುವ ಬುದ್ಧಿಮತ್ತೆ
ಪರೀಕ್ಷೆಯಲ್ಲಿ 162 ಅಂಕ ಪಡೆಯುವ ಮೂಲಕ ಭಾರತ ಮೂಲದ 12ವರ್ಷದ ಬಾಲಕಿ ರಾಜ್‌ಗೌರಿ ಪವಾರ್‌
ಖ್ಯಾತ ಭೌತಶಾಸ್ತ್ರಜ್ಞ ಆಲ್ಬರ್ಟ್‌ ಐನ್‌ಸ್ಟೀನ್‌ ಹಾಗೂ ವಿಜ್ಞಾನಿ ಸ್ಟೀಫನ್‌
ಹಾಕಿಂಗ್‌ರನ್ನು ಹಿಂದಿಕ್ಕಿದ ಸಾಧನೆ ಮಾಡಿದ್ದಾರೆ.

ಕಳೆದ ತಿಂಗಳು ನಡೆದಿದ್ದ ಪರೀಕ್ಷೆಯಲ್ಲಿ ಪವಾರ್‌ 162 ಅಂಕಗಳನ್ನು ಪಡೆದಿದ್ದರು. ಇದು 18
ವರ್ಷಕ್ಕಿಂತ ಕೆಳವಯಸ್ಸಿನವರಲ್ಲಿ ಕಂಡು ಬರಬಹುದಾದ ಗರಿಷ್ಟ ಬುದ್ಧಿಮತ್ತೆಗೆ ಸಮಾನವಾಗಿದೆ.

ಈ ಪರೀಕ್ಷೆಯಲ್ಲಿ ಭಾಗವಹಿಸುವ ನೂರರಲ್ಲಿ ಒಬ್ಬ ವಿದ್ಯಾರ್ಥಿಯಷ್ಟೇ ಈ ಸಾಧನೆ ಮಾಡಲು
ಸಾಧ್ಯವಿದ್ದು, ಅಂತಹ ಅಪರೂಪದ ಸಾಧನೆಯನ್ನು ಚೆಷೈರ್‌
ಜಿಲ್ಲೆಯಿಂದ ಭಾಗವಹಿಸಿದ್ದ ಪವಾರ್‌ ಮಾಡಿದ್ದಾರೆ. ಅತ್ಯಂತ ಪ್ರತಿಭಾಶಾಲಿಯಾದವರು ತನ್ನ
140ನೇ ವಯಸ್ಸಿನಲ್ಲಿ ಗಳಿಸಲು ಸಾಧ್ಯವಿರುವ 162 ಅಂಕಗಳನ್ನು ಇವರು ಕೇವಲ 12ರ ಹರೆಯದಲ್ಲೇ
ಗಳಿಸಿದ್ದು, ಇದು ಆಲ್ಬರ್ಟ್ ಐನ್‌ಸ್ಟೀನ್‌ ಹಾಗೂ ಸ್ಟೀಫನ್‌ ಹಾಕಿಂಗ್‌ ಅವರು
ಗಳಿಸಿದ್ದಕ್ಕಿಂತಲೂ ಎರಡು ಅಂಕ ಹೆಚ್ಚಾಗಿದೆ.

ಈ ಸಾಧನೆಯನ್ನು ಮಾಡಲು ವಿಶ್ವದಾದ್ಯಂತ ಇರುವ ಕೇವಲ 20,000 ಜನರಿಗಷ್ಟೇ ಸಾಧ್ಯ ಎಂದು
ಮೆನ್ಸಾ ಸಂಸ್ಥೆ ಹೇಳಿಕೊಂಡಿದೆ.

‘ಪರೀಕ್ಷೆಗೂ ಮೊದಲು ಸ್ವಲ್ಪ ಗಾಬರಿಯಾಗಿದ್ದೆ. ಆದರೆ ಅತ್ಯುತ್ತಮವಾಗಿ ಪರೀಕ್ಷೆ
ಮುಗಿಸಿರುವುದಕ್ಕೆ ಬಹಳ ಸಂತಸವಾಗಿದೆ’ ಎಂದು ಪರೀಕ್ಷೆ ನಂತರ ಪವಾರ್‌ ಹೇಳಿಕೊಂಡಿದ್ದಾರೆ.

ಪವಾರ್‌ ಸಾಧನೆಯ ಬಗ್ಗೆ ಮಾತನಾಡಿರುವ ಆಕೆಯ ತಂದೆ ಸುರಾಜ್‌ಕುಮಾರ್‌ ಪವಾರ್‌, ‘ನನ್ನ ಮಗಳು
ಪ್ರತಿದಿನ ಶಾಲೆಯಲ್ಲಿ ಸಂತಸದಾಯಕವಾಗಿ ಕಲಿಯಲು ಆಕೆಯ ಶಿಕ್ಷಕರು ವಹಿಸಿದ ಶ್ರಮ ಮತ್ತು
ಪ್ರೋತ್ಸಾಹ ನೀಡದೆ ಇದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ’ ಎಂದು ಅಭಿಪ್ರಾಯ
ಪಟ್ಟಿದ್ದಾರೆ.

ಸದ್ಯ ಬಾಲಕಿ ಅಲ್ಟ್ರಿಂಚಮ್‌ ಬಾಲಕಿಯರ ವ್ಯಾಕರಣ ಶಾಲೆಯಲ್ಲಿ ಕಲಿಯುತ್ತಿದ್ದು, ಶಾಲೆಯ
ಶಿಕ್ಷಕ ವರ್ಗದಿಂದಲೂ ಪವಾರ್‌ ಸಾಧನೆಗೆ ಹರ್ಷ ವ್ಯಕ್ತವಾಗಿದೆ.

‘ಎಲ್ಲರಿಗೂ ಸಂತಸವಾಗಿದೆ. ಪವಾರ್‌ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದು ನಾವು ಆಕೆಯಿಂದ
ಇನ್ನಷ್ಟು ಶ್ರೇಷ್ಟ ಸಾಧನೆಗಳನ್ನು ಬಯಸುತ್ತೇವೆ’ ಎಂದು ಶಾಲೆಯ ಗಣಿತ ಶಿಕ್ಷಕ ಆ್ಯಂಡ್ರೋ
ಬ್ಯಾರ್ರಿ ಸಂತಸ ವ್ಯಕ್ತಪಡಿಸಿದ್ದಾರೆ.

ಸಾಧನೆಯ ಬಳಿಕ ಪವಾರ್‌ಗೆ ಬ್ರಿಟಿಷ್‌ ಮೆನ್ಸಾ ಬುದ್ಧಿಮತ್ತೆ ಸಂಸ್ಥೆಯಲ್ಲಿ ಗಣ್ಯ ಸದಸ್ಯತ್ವ
ಸ್ಥಾನಮಾನ ಕಲ್ಪಿಸಲಾಗಿದೆ.

Hareeshkumar K
GHS Huskuru
Malavalli TQ
Mandya Dt
9880328224

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.


[ms-stf '73028'] ಇಜ್ಞಾನ ಡಾಟ್ ಕಾಮ್: ಹೆದರಿಸುವ ವ್ಯವಹಾರ

2017-05-03 Thread HAREESHKUMAR K Agasanapura
http://www.ejnana.com/2017/05/blog-post.html?m=1

*ಹೆದರಿಸುವ ವ್ಯವಹಾರ*

*ಟಿ. ಜಿ. ಶ್ರೀನಿಧಿ*



"ನಿಮ್ಮ ಕಂಪ್ಯೂಟರಿಗೆ ವೈರಸ್ ಬಂದಿದೆ", "ನಿಮ್ಮ ಫೋನಿನ ಮಾಹಿತಿ ಸುರಕ್ಷಿತವಾಗಿಲ್ಲ"
ಎಂದೆಲ್ಲ ಹೆದರಿಸುವ ಜಾಹೀರಾತುಗಳು ಹಲವು ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದನ್ನು ನೀವು
ಗಮನಿಸಿರಬಹುದು. ನಾವು ಬಳಸುತ್ತಿರುವ ಆಂಟಿವೈರಸ್
 ತಂತ್ರಾಂಶ ಇಂತಹುದೊಂದು ಸಂದೇಶ
ಪ್ರದರ್ಶಿಸಿದರೆ ಓಕೆ, ಆದರೆ ಯಾವುದೋ ಜಾಲತಾಣದಲ್ಲಿ ಕಾಣಿಸಿಕೊಳ್ಳುವ ಜಾಹೀರಾತಿಗೆ ನಮ್ಮ
ಕಂಪ್ಯೂಟರಿನ ಆರೋಗ್ಯ ಕೆಟ್ಟಿದ್ದು ಗೊತ್ತಾಗುವುದು ಹೇಗೆ?

ವಿಷಯ ಇರುವುದು ಅಲ್ಲೇ. ಹೀಗೆಲ್ಲ ಸಂದೇಶಗಳನ್ನು ತೋರಿಸಿ ಬಳಕೆದಾರರನ್ನು ಹೆದರಿಸುವುದು
ಆನ್‌ಲೈನ್ ಜಗತ್ತಿನ ದೊಡ್ಡ ಹಗರಣಗಳಲ್ಲೊಂದು. ಕಂಪ್ಯೂಟರಿಗೆ ಅಥವಾ ಸ್ಮಾರ್ಟ್‌ಫೋನಿಗೆ
ವೈರಸ್ ಬಂದಿದೆ ಎಂದು ಹೆದರಿಸಿ ನಿಷ್ಪ್ರಯೋಜಕ, ಅಥವಾ ದುರುದ್ದೇಶಪೂರಿತ ತಂತ್ರಾಂಶವನ್ನು
ಬಳಕೆದಾರರಿಗೆ ನೀಡುವ ಹಾಗೂ ಅದಕ್ಕಾಗಿ ಅವರಿಂದ ಹಣವನ್ನೂ ವಸೂಲಿಮಾಡುವುದು ಈ ಹಗರಣದ
ಮೂಲಮಂತ್ರ.

ಬಳಕೆದಾರರನ್ನು ಹೆದರಿಸಿ ದುಡ್ಡುಕೀಳುವುದೇ ಇಂತಹ ತಂತ್ರಾಂಶಗಳ ಮುಖ್ಯ ಉದ್ದೇಶವಾದ್ದರಿಂದ
ಇವುಗಳನ್ನು 'ಸ್ಕೇರ್‌ವೇರ್'ಗಳೆಂದು ಕರೆಯುತ್ತಾರೆ. ಬೆದರುಬೊಂಬೆಗಳ ಹಾಗೆ ಸುಖಾಸುಮ್ಮನೆ
ಹೆದರಿಸುವುದೇ ಇವುಗಳ ಕೆಲಸವಾದ್ದರಿಂದ ನಾವು ಇವನ್ನು ಬೆದರು ತಂತ್ರಾಂಶ ಎಂದೂ ಕರೆಯಬಹುದು.

ಇಂತಹ ಸಂದೇಶಗಳನ್ನು ನಂಬಿ ಯಾವಯಾವುದೋ ತಂತ್ರಾಂಶಗಳನ್ನು ಕೊಂಡರೆ ದುಡ್ಡು ಹಾಳಾಗುವುದೊಂದೇ
ಅಪಾಯವಲ್ಲ; ಅವರು ಹಣಪಡೆದು ನೀಡುವ ತಂತ್ರಾಂಶ ದುರುದ್ದೇಶಪೂರಿತವಾಗಿರುವ ಹಾಗೂ ಅವುಗಳ
ಮೂಲಕವೇ ನಮ್ಮ ಕಂಪ್ಯೂಟರ್-ಸ್ಮಾರ್ಟ್‌ಫೋನುಗಳಿಗೆ ತೊಂದರೆ ಎದುರಾಗುವ ಸಾಧ್ಯತೆಯೂ ಇರುತ್ತದೆ.

ಈ ಅಪಾಯಗಳಿಂದ ಪಾರಾಗುವ ವಿಧಾನ ಸರಳ: ನಂಬಲರ್ಹವಾದ ಆಂಟಿವೈರಸ್ ತಂತ್ರಾಂಶಗಳನ್ನಷ್ಟೇ
ಬಳಸುವುದು, ಅವನ್ನು ಆಗಿಂದಾಗ್ಗೆ ಅಪ್‌ಡೇಟ್ ಮಾಡುತ್ತಿರುವುದು ಹಾಗೂ ಸುಖಾಸುಮ್ಮನೆ
ಹೆದರಿಸುವ ಜಾಹೀರಾತುಗಳನ್ನು ನಂಬದಿರುವುದು!

Hareeshkumar K
GHS Huskuru
Malavalli TQ
Mandya Dt
9880328224

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.


[ms-stf '73027'] ಪಾತಾಳಗಂಗೆಯ ಕೂಲಂಕಲ್ಮಷ ಕಥನಗಳು | ಪ್ರಜಾವಾಣಿ

2017-05-03 Thread HAREESHKUMAR K Agasanapura
http://m.prajavani.net/article/2017_05_04/488866

*ಪಾತಾಳಗಂಗೆಯ ಕೂಲಂಕಲ್ಮಷ ಕಥನಗಳು*

4 May, 2017

ನಾಗೇಶ್ ಹೆಗಡೆ








ಗೂಗಲ್ ಉಪಗ್ರಹ ನಕಾಶೆಯಲ್ಲಿ ಸೌದಿ ಅರೇಬಿಯಾದ ತೂಬರ್ಜಲ್ (Tubarjal)  ಎಂಬ ಪಟ್ಟಣದ ಮೇಲೆ
ಒಮ್ಮೆ ಸುತ್ತಾಡಿ. ಅದು ಜೋರ್ಡನ್ ದೇಶದ ಗಡಿಯ ಸಮೀಪ ಇದೆ. ಪಟ್ಟಣದ ಸುತ್ತೆಲ್ಲ
ಹಪ್ಪಳಗಳನ್ನು ಒಣಗಿಸಿದಂತೆ ಅಥವಾ ಸಿಡಿ ತಟ್ಟೆಗಳನ್ನು ಹರಡಿದಂತೆ ನೂರಾರು ವೃತ್ತಾಕಾರದ
ಬಿಂಬಗಳು ಕಾಣುತ್ತವೆ. ಹೆಚ್ಚಿನವೆಲ್ಲ ಕಂದು ಬಣ್ಣದ ಒಣ ಹಪ್ಪಳಗಳಂತೆ ಇದ್ದು, ಅಪರೂಪಕ್ಕೆ
ಒಂದೋ ಎರಡೊ ಅರೆಹಸುರು ಬಣ್ಣದ ತಟ್ಟೆಗಳಿವೆ. ಅವುಗಳ ಹಿಂದೆ ಒಂದು ದುರಂತ ಕತೆಯಿದೆ.


ಈ ತಟ್ಟೆಗಳೆಲ್ಲ ಒಂದೊಂದೂ ಅರ್ಧ ಕಿಲೊಮೀಟರ್ ವ್ಯಾಸದ ಸಪಾಟು ವೃತ್ತಗಳಾಗಿದ್ದು ಪ್ರತಿಯೊಂದರ
ನಟ್ಟ ನಡುವೆ ಕೊಳವೆ ಬಾವಿ ಇದೆ. ಅಲ್ಲಿಂದ ಒಂದೂವರೆ, ಎರಡು ಕಿಲೊಮೀಟರ್ (ಐದಾರು ಸಾವಿರ
ಅಡಿ) ಆಳಕ್ಕೆ ಬೋರ್ ಕೊರೆದು ಅಲ್ಲಿದ್ದ ‘ಪಾತಾಳ ಗಂಗೆ’ಯನ್ನು ಮೇಲೆತ್ತಿ ಹಸುರು ಕ್ರಾಂತಿ
ಮಾಡಲೆಂದು 1980ರ ದಶಕದಲ್ಲಿ ಸೌದಿ ಅರೇಬಿಯಾ ಸರ್ಕಾರ ದೊಡ್ಡ ಯೋಜನೆ ಆರಂಭಿಸಿತು.



ಬಿಸಿಬಿಸಿ ನೀರೇನೊ ಭರ್ಜರಿ ಬಂತು. ಅದನ್ನು ಅರ್ಧ ಕಿಲೊಮೀಟರ್ ಮೇಲಕ್ಕೆತ್ತಿ ನೆಲದಾಳದಲ್ಲೇ
ತಂಪು ಮಾಡಿ, ಮತ್ತೆ ಒಂದು-ಒಂದೂವರೆ ಕಿಮೀ ಮೇಲಕ್ಕೆತ್ತಬೇಕು. ಆ ನೀರಲ್ಲಿ ಅತಿಯಾದ ಲವಣಾಂಶ
ಇರುತ್ತದೆ. ಸೋಸುಯಂತ್ರದಲ್ಲಿ ಲವಣಗಳನ್ನು ಪ್ರತ್ಯೇಕಿಸಿ ಶುದ್ಧ ನೀರನ್ನು ಬೋರ್‌ವೆಲ್
ಸುತ್ತ ಗಾಣದಂತೆ ತಿರುಗುವ ಪೈಪ್‌ಗಳ ಮೂಲಕ ಚಿಮುಕಿಸುತ್ತಾರೆ.



ಗೋಧಿ ಬಿತ್ತನೆ ಮಾಡಿ, ಹೂಡಿಕೆದಾರರು ನೀರಿನ ಪೈಪಿಗೇ ರಸಗೊಬ್ಬರ ಸೇರಿಸಿ ಭರ್ಜರಿ ಬೆಳೆ
ತೆಗೆದರು. ಸುಮಾರು 15–20 ವರ್ಷ ಸೌದಿ ಅರೇಬಿಯಾ ಗೋಧಿಯನ್ನು ರಫ್ತು ಮಾಡಿತು. ಆಮೇಲೆ
ಒಂದೊಂದಾಗಿ ಕೊಳವೆ ಬಾವಿಗಳು ಖಾಲಿಯಾದವು. ಹೂಡಿಕೆದಾರರೆಲ್ಲ ಒಬ್ಬೊಬ್ಬರಾಗಿ ಕಾಲ್ತೆಗೆದರು.



ಇಂದು ತೂಬರ್ಜಲ್ ಸುತ್ತಮುತ್ತ ಸಾವಿರಾರು ಒಣವೃತ್ತಗಳನ್ನು, ಜಲವಿಲ್ಲದ ಖಾಲಿ ತೂಬುಗಳನ್ನು
ನೋಡುತ್ತೀರಿ. ತುಕ್ಕು ಹಿಡಿದ ಯಂತ್ರೋಪಕರಣಗಳು ಅಲ್ಲಲ್ಲೇ ಬಿದ್ದಿವೆ. ವಿಷಕಾರಿ ಲವಣದ ರಾಶಿ
ಸುತ್ತೆಲ್ಲ ಚದುರಿದೆ. ಊರಿಗೆ ಊರೇ ಬಿಕೋ ಎನ್ನುತ್ತಿದೆ.



ಗೋಧಿಯ ರಫ್ತಿನಲ್ಲಿ ಒಂದು ಕಾಲಕ್ಕೆ ಜಗತ್ತಿನ ಆರನೇ ಶ್ರೇಯಾಂಕದಲ್ಲಿದ್ದ ಸೌದಿ ಅರೇಬಿಯಾ ಈಗ
ಪಾತಾಳಕ್ಕೇ ಕುಸಿದಂತಾಗಿದೆ. ಗೋಧಿಯನ್ನು ಆಮದು ಮಾಡಿಕೊಳ್ಳುವ ಹಂತಕ್ಕೆ ಬಂದಿದೆ.



ಗೋಧಿಯಿಂದ ಧನಿಕರಾದ ಹೂಡಿಕೆದಾರರೆಲ್ಲ ಬೇರೆ ಬೇರೆ ಖಂಡಗಳಲ್ಲಿ, (ಉತ್ತರ ಅಮೆರಿಕಾ,
ಆಫ್ರಿಕಾ, ಲ್ಯಾಟಿನ್ ಅಮೆರಿಕಾ) ಬೇರೆ ಬೇರೆ ದೇಶಗಳಲ್ಲಿ (ಥಾಯ್ಲೆಂಡ್, ಇಂಡೊನೇಶ್ಯ)
ಕೃಷಿಗಾಗಿ ಭೂಮಿಯನ್ನು ಖರೀದಿಸುತ್ತ, ಅಂತರ್ಜಲವನ್ನೂ ತಾತ್ಕಾಲಿಕ ಲಾಭವನ್ನೂ ಎತ್ತುತ್ತ
ಸುತ್ತುತ್ತಿದ್ದಾರೆ.



ನಮ್ಮ ಕರ್ನಾಟಕ ಸರಕಾರವೂ ಅಂಥದ್ದೇ ಘನಂದಾರಿ ಕೆಲಸಕ್ಕೆ ಕೈಹಾಕಲು ಹೊರಟಿದೆ. ದಕ್ಷಿಣ ಭಾರತದ
ಶಿಲಾರಚನೆಯೇ ಗೊತ್ತಿಲ್ಲದ ಕಂಪನಿಯೊಂದಕ್ಕೆ ಅದು ‘ಪಾತಾಳ ಗಂಗೆ’ಯನ್ನು ಮೇಲೆತ್ತುವ
ಗುತ್ತಿಗೆ ಕೊಡುತ್ತಿದೆ. ಬೇರೆ ಕೆಲವು ಭೂಖಂಡಗಳಲ್ಲಿ ಹೀಗೆ ಅಲ್ಲಲ್ಲಿ ‘ಪಳೆಯುಳಿಕೆ ನೀರು’
ಸಿಗುತ್ತದೆ ನಿಜ. ಅದಕ್ಕೆ ‘ಫಾಸಿಲ್ ವಾಟರ್’ ಅಥವಾ ‘ಪೇಲಿಯೊ ವಾಟರ್’ (ಪುರಾತನ ಜಲ)
ಎನ್ನುತ್ತಾರೆ.



ಲಕ್ಷಾಂತರ ವರ್ಷಗಳ ಹಿಂದೆ, ಭೂಮಿಯ ಬಹುಭಾಗ ಹಿಮಯುಗದಲ್ಲಿದ್ದಾಗ ಕೆಲವೆಡೆ ನೆಲದಾಳದಲ್ಲಿ
ನೀರು ಜಿನುಗಿ ಅಲ್ಲಲ್ಲಿ ಸ್ಪಂಜಿನಂತೆ ನೀರಿನ ಭಾರೀ ಖಜಾನೆ ಶೇಖರವಾಗಿದ್ದು ಹೌದು.
ಅವೆಲ್ಲವೂ ಭೂಮಿಯ ಆಳದಲ್ಲಿರುವ ಮರಳುಶಿಲೆ ಅಥವಾ ಕಣಶಿಲೆಗಳಲ್ಲಿ ಸಂಚಯವಾಗಿರುತ್ತವೆ. ಉತ್ತರ
ಭಾರತದಲ್ಲಿ ಗಂಗಾ-ಸಿಂಧೂ ಬಯಲಿನಲ್ಲಿ ಕಿಲೊಮೀಟರ್ ಆಳದಲ್ಲೂ ಅಂಥ ಶಿಲೆಗಳಿವೆ.



ಆದರೆ ದಕ್ಷಿಣ ಭಾರತದಲ್ಲಿ ಅಂಥ ಹಳೇಕಾಲದ ಕಣಶಿಲೆಗಳು ಇಲ್ಲ. ಇಲ್ಲಿ ಹೆಚ್ಚೆಂದರೆ
ಗ್ರಾನೈಟ್‌ನ ಬಿರುಕುಗಳಲ್ಲಿ, ಭಗ್ನಶಿಲೆಗಳ ಸೀಳುಗಳಲ್ಲಿ ಪುರಾತನ ನೀರು ಸಂಚಯವಾಗಿರುತ್ತದೆ.
ಅದು ನದಿಯಂತೆ ಹರಿಯುವುದೂ ಇಲ್ಲ.



ಸರ್ಕಾರಕ್ಕೆ ‘ಪಾತಾಳ ಗಂಗೆ’ಯ ಹುಚ್ಚು ಹಿಡಿಸಿದ ‘ವಾಟರ್‌ಕ್ವೆಸ್ಟ್’ ಕಂಪನಿಗೆ ಭೂವಿಜ್ಞಾನದ
ಪರಿಜ್ಞಾನವೇ ಇಲ್ಲವೆಂಬುದಕ್ಕೆ ಅದರ ಜಾಲತಾಣದಲ್ಲೇ ಸಾಕಷ್ಟು ಸಾಕ್ಷ್ಯಗಳು ಸಿಗುತ್ತವೆ.
ಯಾರೋ ಹೈಸ್ಕೂಲ್ ಹುಡುಗರು ಬರೆದಂತೆ ಕಾಣುವ ಪಾತಾಳದ ಭೂಚಿತ್ರಣ ಇದೆ. ಸಮುದ್ರದಿಂದ
ಉಪ್ಪುನೀರು ನೆಲದ ಕಡೆಗಿನ ಪಾತಾಳದಲ್ಲಿ ಇಳಿದು ಅಲ್ಲಿನ ಶಾಖಕ್ಕೆ ಕುದಿಯುತ್ತದಂತೆ. ಅದು
ಆವಿಯಾಗಿ ಉಪ್ಪಿನಂಶವನ್ನೆಲ್ಲ ಅಲ್ಲೇ ಬಿಟ್ಟು, ಬಿರುಕುಗಳ ಮೇಲೇಳುತ್ತ ಶುದ್ಧ
ನೀರಾಗುತ್ತದಂತೆ. ತುಸು ಮೇಲೆ ಬಂದು (ನೆಲದಿಂದ ಸಾವಿರ ಮೀಟರ್ ಆಳದಲ್ಲಿ) ಮಡುಗಟ್ಟಿ
ಹರಿಯುತ್ತದಂತೆ. ಎಲ್ಲವೂ ಶುದ್ಧ ಬೊಗಳೆ.



ವಿಜ್ಞಾನದ ನಿಯಮಗಳ ಪ್ರಕಾರ, ಪಾತಾಳದಲ್ಲಿ ಅದೆಷ್ಟೇ ಶಾಖವಿದ್ದರೂ ನೀರು ಕುದಿಯಲಾರದು; ಅದು
ವಾತಾವರಣಕ್ಕೆ ತೆರೆದುಕೊಂಡರೆ ಮಾತ್ರ ಆವಿಯಾಗುತ್ತದೆ. ಇಲ್ಲಾಂದರೆ ಅತಿಶಾಖದ ದ್ರವವಾಗಿ
ಅಲ್ಲೇ ಇರುತ್ತದೆ. ಅದು ಪ್ರವಾಹವಾಗಿ ಹರಿಯುವುದಿಲ್ಲ. ಸಮುದ್ರದ ನೀರೇ ಆಗಿದ್ದರೆ ಅದರ ಮಟ್ಟ
ಸಮುದ್ರ ಪಾತಳಿಗಿಂತ ಕೆಳಕ್ಕೆ ಇಳಿಯುವುದೂ ಇಲ್ಲ, ಅದಕ್ಕಿಂತ ತೀರ ಮೇಲಕ್ಕೆ ಏರುವುದೂ ಇಲ್ಲ.



ಇನ್ನು ಈ ಕಂಪನಿಯ ಸಂಶೋಧನೆಗೆ ಕೊರಿಯಾದಲ್ಲಿ ನಡೆದ ‘ಇಂಟರ್‌ನ್ಯಾಶನಲ್ ಇನ್‌ವೆನ್‌ಶನ್
ಮೇಳ’ದಲ್ಲಿ ಗೋಲ್ಡ್ ಪ್ರೈಝ್ ಸಿಕ್ಕಿದೆಯೆಂಬ ಸರ್ಟಿಫಿಕೇಟ್ ಇದೆ. ಮೇಳ ನಡೆದಲ್ಲೇ
ಪಾತಾಳಕ್ಕೆ ಬೋರ್ ಕೊರೆದು ನೀರನ್ನಂತೂ ಉಕ್ಕಿಸಿರಲಿಕ್ಕಿಲ್ಲ. ಹೆಚ್ಚೆಂದರೆ ಒಂದಿಷ್ಟು
ಭಿತ್ತಿಚಿತ್ರಗಳು, ವಿಡಿಯೊ ಪ್ರದರ್ಶನ, ನಕಾಶೆಗಳ ಪ್ರದರ್ಶನ ಮಾಡಿರಬಹುದು. ಅದನ್ನು ಯಾರೂ
ಕೂತಲ್ಲೇ ಜೋಡಿಸಬಹುದು. ಭಾರತದ ನಕಾಶೆಯ ಮೇಲೆ ಅವರು ತೋರಿಸಿದ ಭೂಜಲದ ರೇಖೆಗಳಂತೂ
ನಗೆಪಾಟಲಿನದು. ಕಂಡಕಂಡಲ್ಲಿ ಉದ್ದ ಅಡ್ಡ ನೀಲಿ ರೇಖೆ ಎಳೆದಿದ್ದಾರೆ ಅಷ್ಟೆ.



ಈ ಕಂಪನಿಯದೆಂದು ಹೇಳಲಾದ ‘ವಾಟರ್‌ಕ್ವೆಸ್ಟ್ ರಿಸೋರ್ಸಸ್’ ಮತ್ತು ‘ಸ್ಕೈಕ್ವೆಸ್ಟ್’
ಜಾಲತಾಣಗಳಲ್ಲಿ ಮಾಹಿತಿಗಳೂ ಅಸ್ಪಷ್ಟವಾಗಿವೆ. ಯುರೋಪ್ ಮತ್ತು ಅರಬ್ ಎಮಿರೇಟ್ಸ್‌ನಲ್ಲಿ ಈ
ಕಂಪನಿಯದೆಂಬಂತೆ ಕೆಲವು ಕೊಳವೆ ಬಾವಿಗಳ ಚಿತ್ರಗಳನ್ನು ಕೂರಿಸಲಾಗಿದೆ.



ಆಳವಾದ ಬೋರ್ ಕೊರೆಯಬಲ್ಲ ವಿಶೇಷ ಡ್ರಿಲ್ಲಿಂಗ್ ಸಲಕರಣೆಗಳ ಚಿತ್ರ ಕೂಡ ಇದೆ. ವಿವರಗಳೇನೂ
ಇಲ್ಲ. ಅಲ್ಲಿ ಕೆಲವೆಡೆ ಪೆಟ್ರೋಲಿಗೆಂದು ಬಾವಿ ಕೊರೆಯುವಾಗ ನೀರು ಉಕ್ಕುವುದು ಸಹಜ.
ನೀರಿಗೆಂದೇ ಕಿಲೊಮೀಟರ್‌ಗಟ್ಟಲೆ ಕೊರೆದಿದ್ದೂ ಇರಬಹುದು. 

[ms-stf '72886'] ಹೀಗೊಂದು ಗಣಿತ ಲೋಕ | ಪ್ರಜಾವಾಣಿ

2017-04-25 Thread HAREESHKUMAR K Agasanapura
http://m.prajavani.net/article/2017_04_25/486738#

CONGRATS YAKUB SIR

*ಹೀಗೊಂದು ಗಣಿತ ಲೋಕ*

25 Apr, 2017

ಚನ್ನಬಸಪ್ಪ ರೊಟ್ಟಿ








ಸಾಮಾನ್ಯವಾಗಿ ಗಣಿತವೆಂದರೆ ‘ಕಲಿಯಲು ಬಲು ಕ್ಲಿಷ್ಟ ವಿಷಯ’ ಎಂಬ ಭಾವನೆ ವಿದ್ಯಾರ್ಥಿ,
ಪೋಷಕರು ಹಾಗೂ ಶಿಕ್ಷಕರಲ್ಲೂ ಇದೆ. ಆದರೆ ಗಣಿತ ಕಲಿಕೆಯನ್ನು ಸುಲಭವಾಗಿಸುವ ಅಗಣಿತ
ಸಾಧ್ಯತೆಗಳನ್ನು ತೆರೆದಿಟ್ಟ ಸಾಧಕ ಯಾಕೂಬ್ ಎಸ್. ಕೊಯ್ಯೂರು.



ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ
ಗಣಿತ ಶಿಕ್ಷಕರಾಗಿರುವ ಇವರು ₹ 13 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ತಮ್ಮ ಕಲ್ಪನೆಯ ಕೂಸು
‘ಗಣಿತ ಲೋಕ’ ಸೃಷ್ಟಿಸಿದ ಸಾಧನೆ ಬೆರಗು ಮೂಡಿಸುವಂಥದು. ಇಂದು ರಾಜ್ಯಮಟ್ಟದ ಗಣಿತ ಸಂಪನ್ಮೂಲ
ವ್ಯಕ್ತಿಗಳಲ್ಲಿ ಒಬ್ಬರಾಗಿ ಇವರು ಗುರುತಿಸಿಕೊಂಡಿದ್ದಾರೆ.


‘ನಡ’ ಒಂದು ಪುಟ್ಟ ಹಳ್ಳಿ. ಇಲ್ಲಿನ ಪ್ರೌಢಶಾಲೆಯಲ್ಲಿ 21 ವರ್ಷಗಳಿಂದ ಗಣಿತ ಶಿಕ್ಷಕರಾಗಿ
ಸೇವೆ ಸಲ್ಲಿಸುತ್ತಿರುವ ಯಾಕೂಬ್ ತಮ್ಮ ಪರಿಶ್ರಮದಿಂದ 2015ರಲ್ಲಿ ಅತ್ಯಾಧುನಿಕ ತಂತ್ರಜ್ಞಾನ
ಆಧರಿತ ‘ಗಣಿತ ಲೋಕ’ ಸೃಷ್ಟಿಸಿ, ಈ ಹಳ್ಳಿಗೆ ರಾಜ್ಯ ಮಟ್ಟದ ಮಾನ್ಯತೆ ದೊರಕಿಸಿದ್ದಾರೆ.



ಶಾಲೆಯ ಹಿರಿಯ ವಿದ್ಯಾರ್ಥಿಗಳು, ಪೋಷಕರು, ಸಹೋದ್ಯೋಗಿಗಳ ನೆರವು ಹಾಗೂ ಮಾರ್ಗದರ್ಶನದಲ್ಲಿ
ಪ್ರಯೋಗಶಾಲೆ ಸಹಿತ ‘ಗಣಿತ ಲೋಕ’ವನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಗಣಿತ
ಲೋಕದಲ್ಲಿರುವ ಶೇ 60ರಷ್ಟು ಪರಿಕಲ್ಪನೆಗಳನ್ನು ಸ್ವತಃ ಯಾಕೂಬ್ ಅವರೇ ರೂಪಿಸಿದ್ದು,
ಇನ್ನುಳಿದವುಗಳನ್ನು ಇತರ ಸಂಪನ್ಮೂಲ ವ್ಯಕ್ತಿಗಳು, ಅಂತರ್ಜಾಲ ಆಧರಿತ ಮಾಹಿತಿಯ ನೆರವಿನಿಂದ
ಸಾಕಾರಗೊಳಿಸಿದ್ದಾರೆ.





*ಗಣಿತ ಲೋಕದಲ್ಲಿ ಏನೇನಿದೆ?*

ನಡ ಸರ್ಕಾರಿ ಪ್ರೌಢಶಾಲೆಯ ಆವರಣಕ್ಕೆ ಕಾಲಿಡುತ್ತಿದ್ದಂತೆ ನಿಮ್ಮನ್ನು ‘ಗಣಿತ ಲೋಕ’
ಬರಮಾಡಿಕೊಳ್ಳುತ್ತದೆ. ಶಾಲಾ ಆವರಣದಲ್ಲಿರುವ ‘ಗಣಿತ ತೋಟ’ದಲ್ಲಿ ವೃತ್ತ, ವಿವಿಧ ಬಗೆಯ
ತ್ರಿಭುಜಗಳು, ಷಟ್ಕೋನ, ಅಷ್ಟ ಭುಜಾಕೃತಿ, ಆಯತ, ಚೌಕ ಇತ್ಯಾದಿ ರೇಖಾಗಣಿತದ ಮಾದರಿಗಳು
ಇಟ್ಟಿಗೆ, ಸಿಮೆಂಟ್ ನಿರ್ಮಾಣದಲ್ಲಿ ಮೈದಳೆದಿವೆ. ಅವುಗಳ ವಿಸ್ತೀರ್ಣ, ಎತ್ತರ, ಅಗಲ,
ಸುತ್ತಳತೆ... ಇತ್ಯಾದಿ ಪರಿಕಲ್ಪನೆಗಳ ಪ್ರತ್ಯಕ್ಷ ಕಲಿಕೆಗೆ ಇಲ್ಲಿ ಅನುಕೂಲ
ಕಲ್ಪಿಸಲಾಗಿದೆ. ಅಲ್ಲಿರುವ ಪುಟ್ಟ ನೀರಿನ ಟ್ಯಾಂಕ್‌ನಲ್ಲಿ ವಿದ್ಯಾರ್ಥಿಗಳು ‘ನೀರಿನ
ಘನಫಲ’ವನ್ನು ಪ್ರಾಯೋಗಿಕವಾಗಿ ಅಳೆಯಲು ಅವಕಾಶ ಕಲ್ಪಿಸಲಾಗಿದೆ. ತೋಟದಲ್ಲಿರುವ ಸೋಲಾರ್
ಗಡಿಯಾರವೂ ಆಕರ್ಷಕವಾಗಿದೆ.


‘ಗಣಿತ ತೋಟಕ್ಕೆ’ ಅಂಟಿಕೊಂಡಿರುವ ‘ಗಣಿತ ಪ್ರಯೋಗಾಲಯ’ಕ್ಕೆ ಕಾಲಿಟ್ಟರೆ ಗಣಿತದ ಅಗಣಿತ
ಸಾಧ್ಯತೆಗಳು ನಿಮ್ಮೆದುರು ತೆರೆದುಕೊಳ್ಳುತ್ತವೆ. ಗಣಿತವನ್ನು ಇಷ್ಟು ಸುಲಭ, ಆಕರ್ಷಕ ಹಾಗೂ
ಪ್ರಾಯೋಗಿಕವಾಗಿ ಕಲಿಸಬಹುದು ಮತ್ತು ಕಲಿಯಬಹುದು ಎಂಬ ಅರಿವಿನ ಜತೆ ಯಾಕೂಬ್ ಅವರ ಪರಿಶ್ರಮದ
ಕುರಿತು ಮೆಚ್ಚುಗೆಯೂ ನಿಮ್ಮಲ್ಲಿ ಮೂಡದಿರದು.


*ಆಧುನಿಕ ತಂತ್ರಜ್ಞಾನದ ಬಳಕೆ*

ಗಣಿತ ಪ್ರಯೋಗಾಲಯದಲ್ಲಿ ಸೆಲ್ಕೋ ಸೋಲಾರ್, ರೋಟರಿ ಬೆಳ್ತಂಗಡಿ ಮತ್ತು ಬಾರ್ ಅಸೋಸಿಯೇಷನ್
ಕೊಡುಗೆ ನೀಡಿದ ‘ಸೋಲಾರ್ ಪ್ರೊಜೆಕ್ಟರ್’ ಅಳವಡಿಸಲಾಗಿದೆ. ‘ಮೆಂಡಾ ಫೌಂಡೇಶನ್’ ನೀಡಿರುವ
ತಂತ್ರಾಂಶದಲ್ಲಿ 8,9 ಮತ್ತು 10ನೇ ತರಗತಿಗೆ ಸಂಬಂಧಿಸಿದ ಪಠ್ಯ ಹಾಗೂ ಪಠ್ಯಪೂರಕ ಪಾಠಗಳನ್ನು
ಸುಲಭ ಕಲಿಕೆಗೆ ಅನುಕೂಲವಾಗುವಂತೆ ಅಳವಡಿಸಲಾಗಿದೆ. ‘ಕ್ರಮಾನುಗತ ಬೋಧನೆ’ ಪರಿಕಲ್ಪನೆ
ಆಧರಿಸಿ ವಿದ್ಯಾರ್ಥಿಗಳೇ ತಮಗೆ ಲಭ್ಯವಿರುವ ಸಮಯದಲ್ಲಿ ಇಲ್ಲಿ ಸ್ವಯಂ ಅಧ್ಯಯನ ಕೈಗೊಳ್ಳಲು
ಅವಕಾಶವಿದೆ.


ಪ್ರಯೋಗಶಾಲೆಯಲ್ಲಿ ಅಳವಡಿಸಿರುವ ಅತ್ಯಾಧುನಿಕ ‘ಐರಿಸ್ ಡಿವೈಸ್’ ತಂತ್ರ ಬಳಸಿ ಗಣಿತದ
ಪರಿಕಲ್ಪನೆಗಳನ್ನು ಡಿಜಿಟಲ್ ಪರದೆಯ ಮೇಲೆ ಮೂಡಿಸಬಹುದಾಗಿದೆ. ಈ ತಂತ್ರಜ್ಞಾನದಲ್ಲಿ
ಪಾಠವನ್ನು ರೆಕಾರ್ಡ್ ಮಾಡುವ ಸೌಲಭ್ಯವೂ ಇದೆ. ಪರದೆ ಮೇಲೆ ನೇರವಾಗಿ ಅಂತರ್ಜಾಲ
ಬಳಸಿಕೊಳ್ಳುವ ಅನುಕೂಲವೂ ಇದ್ದು, ಈ ಮೂಲಕ ಯಾವುದೇ ಪಾಠವನ್ನು ವಿದ್ಯಾರ್ಥಿಗಳ ಪೋಷಕರಿಗೆ ಈ
ಮೇಲ್ ಮೂಲಕ ಕಳುಹಿಸಬಹುದಾಗಿದೆ. ಇವುಗಳ ಜತೆ ಎಲ್ಇಡಿ ಟಿ.ವಿಯನ್ನು ಕೂಡ ಇಲ್ಲಿ
ಅಳವಡಿಸಲಾಗಿದೆ.



*ಹಲವು ಸಂಪನ್ಮೂಲ, ಚಟುವಟಿಕೆಯುತ ಕಲಿಕೆ: *ಗಣಿತ ಪ್ರಯೋಗಶಾಲೆ ಸಂಪೂರ್ಣ
ಹವಾನಿಯಂತ್ರಿತವಾಗಿದೆ. ಇಲ್ಲಿ ತಂತ್ರಜ್ಞಾನ ಆಧರಿತ ಬೋಧನೆಯ ಜತೆ ಸಾಮಾನ್ಯ ತರಗತಿಯಲ್ಲೂ
ಬಳಸಬಹುದಾದ ಅನೇಕ ಮಾದರಿಗಳನ್ನು ತಯಾರಿಸಿ ಇಡಲಾಗಿದೆ. ಗಣಿತ ಬೋಧನೆ– ಕಲಿಕೆಗೆ
ಪೂರಕವಾಗಿರುವ ಸಂಪನ್ಮೂಲ ಪುಸ್ತಕ, ಆಕರ ಗ್ರಂಥಗಳನ್ನು ಒದಗಿಸಲಾಗಿದೆ.


ಗಣಿತ ಪ್ರಯೋಗಶಾಲೆಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ಸೂಕ್ತ ಚಟುವಟಿಕೆ ನೀಡುವ
‘ರೋಬೋಟಿಕ್ ಕಿಟ್’ ಇದ್ದು, ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ತಮಗೆ ಇಷ್ಟ ಬಂದಂತೆ
‘ರೋಬೋಟ್’ ಮಾದರಿ ತಯಾರಿಸಲು ಅವಕಾಶವಿದೆ. ಗಣಿತದ ವಿವಿಧ ಪರಿಕಲ್ಪನೆಗಳನ್ನು ಚಟುವಟಿಕೆ
ಮೂಲಕ ಕಲಿಯಲು ವೇದಿಕೆ ಒದಗಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಗಣಿತ ಪ್ರಯೋಗಶಾಲೆಗೆ
ಹೋಗಬೇಕೆನ್ನುವ ತವಕ ಹೆಚ್ಚಿದ್ದು ಅವರು ಗಣಿತವನ್ನು ಮತ್ತಷ್ಟು ಇಷ್ಟಪಡುವಂತಾಗಿದೆ.



ಫಲಿತಾಂಶ ಹೆಚ್ಚಳ: ಗಣಿತದ ಸುಲಭ ಕಲಿಕೆಯ ಸಾಧ್ಯತೆಗಳನ್ನು ತೆರೆದಿಟ್ಟಿರುವ ‘ಗಣಿತ ಲೋಕ’
ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಗಣಿತ ವಿಷಯದಲ್ಲಿ ಶಾಲೆಯ ಮಕ್ಕಳ ಸರಾಸರಿ
ಸಾಧನೆ 2013–14ರಲ್ಲಿ ಶೇ 69 ಹಾಗೂ 2014–15ರಲ್ಲಿ ಶೇ 77ರಷ್ಟು ಇದ್ದದ್ದು 2015–16ರಲ್ಲಿ
ಶೇ 95ಕ್ಕೆ ಏರಿದೆ. ಹೀಗೆ ಗಣಿತ ಮಾತ್ರವಲ್ಲದೆ ಇತರ ವಿಷಯಗಳಲ್ಲೂ ವಿದ್ಯಾರ್ಥಿಗಳು ಉತ್ತಮ
ಸಾಧನೆ ಮಾಡುತ್ತಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಉತ್ತಮ ಫಲಿತಾಂಶ ಲಭಿಸಿದೆ.



*ಸಾಮಾಜಿಕ ಜಾಲತಾಣಗಳ ಯಶಸ್ವಿ ಬಳಕೆ*

ಯಾಕೂಬ್ ಅವರ ಯಶೋಗಾಥೆ ಇಷ್ಟಕ್ಕೇ ನಿಲ್ಲುವುದಿಲ್ಲ. ಹತ್ತನೆಯ ತರಗತಿಯ ಗಣಿತ ವಿಷಯದ
ಆಕರ್ಷಕ, ಗುಣಮಟ್ಟದ ನೋಟ್ಸ್‌ ತಯಾರಿಸಿ ಗಣಿತ–ವಿಜ್ಞಾನ ವಿಷಯ ಶಿಕ್ಷಕರ ಕೂಟಗಳಲ್ಲಿ
(Subject Teacher Forum) ಅದನ್ನು ಶೇರ್ ಮಾಡಿದ್ದಾರೆ.



ಅಲ್ಲದೇ ತಮ್ಮ ಪರಿಶ್ರಮದ ಲಾಭ ಇತರ ಶಿಕ್ಷಕರಿಗೂ ಲಭಿಸಬೇಕೆಂದು ಸಾಮಾಜಿಕ ಜಾಲತಾಣಗಳಾದ
ವಾಟ್ಸ್‌ಆಪ್, ಫೇಸ್‌ಬುಕ್, ಟ್ವಿಟರ್, ಬ್ಲಾಗ್, ಹೈಕ್ ಗ್ರೂಪ್‌ಗಳಲ್ಲೂ ನೋಟ್ಸ್ ಶೇರ್
ಮಾಡಿದ್ದಾರೆ. ಇವರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಶೆರ್ ಮಾಡಿರುವ ನೋಟ್ಸ್ ಸದ್ಯ 5
ಸಾವಿರ ಪುಟಗಳನ್ನು ಮೀರಿದೆ! ಇದಲ್ಲದೇ ಗಣಿತವನ್ನು ಆಪ್ಯಾಯಮಾನವಾಗಿಸುವ ಉದ್ದೇಶದಿಂದ ಗಣಿತ
ಸಂಬಂಧಿತ 100ಕ್ಕೂ ಹೆಚ್ಚು ವಿಡಿಯೊಗಳನ್ನು ತಯಾರಿಸಿ ಯೂಟೂಬ್‌ಗೆ ಅಪಲೋಡ್ ಮಾಡಿದ ಹಿರಿಮೆಯೂ
ಇವರದ್ದಾಗಿದೆ.


ಎಸ್ಸೆಸ್ಸೆಲ್ಸಿ ಮಕ್ಕಳು ಸುಲಭವಾಗಿ ಅಂಕ ಗಳಿಸಲು ಅನುಕೂಲವಾಗುವಂತೆ ‘ಪಾಸಿಂಗ್ ಪ್ಯಾಕೇಜ್’
ತಯಾರಿಸಿದ್ದಾರೆ. 

[ms-stf '72196'] ಕೋಟಿ ಮಿದುಳುಗಳ ಬೆಸೆಯುವ ಕೆಲಸ | ಪ್ರಜಾವಾಣಿ

2017-04-06 Thread HAREESHKUMAR K Agasanapura
http://m.prajavani.net/article/2017_04_06/482139

*ಕೋಟಿ ಮಿದುಳುಗಳ ಬೆಸೆಯುವ ಕೆಲಸ*

6 Apr, 2017

ನಾಗೇಶ್ ಹೆಗಡೆ








ಮರೆಗುಳಿ ಡಾಕ್ಟರ್‌ಗಳ ಬಗ್ಗೆ ಸಾಕಷ್ಟು ಕೇಳಿರುತ್ತೇವೆ. ಆದರೆ ‘ಮರಗಳ ಡಾಕ್ಟರ್’ ಬಗ್ಗೆ
ಗೊತ್ತೆ?

ಬೆಂಗಳೂರಿನಲ್ಲಿ ಅಲ್ಲಲ್ಲಿ ಮರಗಳಿಗೆ ರಂಧ್ರ ಕೊರೆದು ಆಸಿಡ್ ತುಂಬುವ ವೃತ್ತಿಪರ
ಕೊಲೆಗಡುಕರು ಇದ್ದಾರೆ. ಸುಪಾರಿ ಕೊಟ್ಟರೆ ಎಂಥದ್ದೇ ದೊಡ್ಡ ಮರವನ್ನಾದರೂ ಎರಡು ವಾರಗಳಲ್ಲಿ
ಒಣಗಿಸಬಲ್ಲ ದುರುಳರು ಇವರು. ದಷ್ಟಪುಷ್ಟ ಮರ ಒಣಗುತ್ತಿದೆಯೆಂದು ದಾರಿಹೋಕರು ದೂರು ಕೊಟ್ಟರೆ
ಚಿಕಿತ್ಸೆ ನೀಡಲು ‘ಟ್ರೀ ಡಾಕ್ಟರ್’ ಧಾವಿಸಿ ಬರುತ್ತಾರೆ. ಮರದ ಕಾಂಡವನ್ನು ಕೂಲಂಕಷ
ಪರೀಕ್ಷಿಸಿ ಆಸಿಡ್ ರಂಧ್ರವನ್ನು ಗುರುತಿಸಿ, ಗಾಯವನ್ನು ತೊಳೆದು, ಔಷಧ ತುಂಬಿ, ಕ್ಷಾರದ
ಮುಲಾಮು ಸವರುತ್ತಾರೆ. ದೂರು ಕೊಟ್ಟವರಿಗೆ ಧನ್ಯವಾದ ಹೇಳಿ ಯಾವ ಶುಲ್ಕವನ್ನೂ ಪಡೆಯದೆ ಬೈಕ್
ಹತ್ತಿ ಹೊರಡುತ್ತಾರೆ. ಆಗಾಗ ಬಂದು ಅದೇ ಮರದ ಸ್ಥಿತಿಯ ಅಧ್ಯಯನ ವರದಿ ತಯಾರಿಸಿ ತಮ್ಮದೇ
ಅಂತರಜಾಲ ಪುಟಗಳಿಗೆ ಸೇರಿಸುತ್ತಾರೆ.

ಇವರು ಅಪ್ಪಟ ವಿಜ್ಞಾನಿಗಳೇನಲ್ಲ. ಸಂಬಳ ಪಡೆಯುವ ಅರಣ್ಯರಕ್ಷಕರೂ ಅಲ್ಲ; ಆದರೆ ಸಾಮಾಜಿಕ
ಕಾಯಿಲೆಗಳಿಗೆ ಮುಲಾಮು ಹಚ್ಚಬೇಕೆಂಬ ಸ್ವಯಂ ಪ್ರೇರಣೆಯಿಂದ ವಿಜ್ಞಾನದ ಅಆಇಈ ಕಲಿತವರು.
ಹೆಚ್ಚಿನ ಮಾಹಿತಿಗಾಗಿ ಆಗಾಗ ತಜ್ಞ ವಿಜ್ಞಾನಿಗಳನ್ನು ಕಾಡುತ್ತ ತಮ್ಮ ಜ್ಞಾನವನ್ನು
ನವೀಕರಿಸಿಕೊಳ್ಳುವವರು. ಇಂಥವರಿಗೆ ಜನವಿಜ್ಞಾನಿಗಳು (ಸಿಟಿಝನ್ ಸೈಂಟಿಸ್ಟ್) ಎನ್ನುತ್ತಾರೆ.
ಅವರ ಕೊಡುಗೆ ಸಮಾಜಕ್ಕೆ, ವಿಜ್ಞಾನ ರಂಗಕ್ಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲವು
ಅಂಥ ಉದಾಹರಣೆಗಳನ್ನು ನೋಡೋಣ:

ಅಂತರಜಾಲದಲ್ಲಿ ಪ್ಲಾನೆಟ್‌ಫೋರ್ planetfour.org  ಎಂಬ ತಾಣ ಇದೆ. ಸೂರ್ಯನಿಂದ ನಾಲ್ಕನೆಯ
ಗ್ರಹ ಎನಿಸಿದ ಮಂಗಳನ ನೆಲದ ಸಮೀಕ್ಷೆ ಮಾಡುವ ಕೆಲಸ ಇದರದ್ದು. ತಾಣವನ್ನು ತೆರೆದರೆ
ಉಪಗ್ರಹವೊಂದು ಮಂಗಳಕ್ಕೆ ತೀರ ಸಮೀಪದಲ್ಲಿ ಸುತ್ತುತ್ತಿರುವ ದೃಶ್ಯವಿದೆ. ಮಂಗಳ ನೆಲದ
ಚಿತ್ರವನ್ನು ಹಿಗ್ಗಿಸಿ, ಇನ್ನೂ ದೊಡ್ಡದಾಗಿ ಹಿಗ್ಗಿಸಿ, ಮೇಜಿನಗಲದ ಭಾಗವನ್ನು ಬಾಚುತ್ತ ಆ
ಕೆಂಪುಗ್ರಹದ ವೈಚಿತ್ರ್ಯಗಳನ್ನು ನೋಡುತ್ತ ದಾಖಲಿಸುತ್ತ ಹೋಗಬೇಕು. ವಿಜ್ಞಾನಿಗಳೇ ಆ
ಕೆಲಸವನ್ನು ಮಾಡುತ್ತ ಕೂತರೆ  ಇಡೀ ಮಂಗಳನ ನಕ್ಷೆಯನ್ನು ರೂಪಿಸಲು ನೂರಾರು ತಜ್ಞರಿಗೆ
ನೂರಾರು ವರ್ಷಗಳೇ ಬೇಕು. ಆ ಕೆಲಸವನ್ನು ಈಗ ಲಕ್ಷೋಪಲಕ್ಷ ಜನವಿಜ್ಞಾನಿಗಳು ಒಟ್ಟಾಗಿ
ಮಾಡುತ್ತಿದ್ದಾರೆ. ಮಂಗಳನೆಲದ ನಾನಾ ಬಗೆಯ ಲಕ್ಷಣಗಳ ವೀಕ್ಷಕ ವರದಿ ನೀಡುತ್ತಿದ್ದಾರೆ. ಜೇಡರ
ಕಣಿವೆಯಂತೆ, ಇಂಕಾ ನಗರವಂತೆ, ಬೀಸಣಿಕೆ ದಿಬ್ಬವಂತೆ, ಉಲ್ಕಾ ಕೊಳ್ಳವಂತೆ... ಅವನ್ನೆಲ್ಲ
ಗುರುತಿಸಲು ವಿಶೇಷ ಜ್ಞಾನವೇನೂ ಬೇಕಾಗಿಲ್ಲ. ಜಾಲತಾಣದಲ್ಲಿ ನೀಡಲಾದ ಸರಳ ಸೂಚನೆಗಳನ್ನು
ಪಾಲಿಸಿದರೆ ಆಮೇಲೆಲ್ಲ ಕುತೂಹಲ, ತನ್ಮಯತೆ ಎರಡೇ ಸಾಕು. ಹಿಂದೆ ಬ್ರಿಟಿಷರು ಕುದುರೆ
ಸವಾರಿಯಲ್ಲಿ ಭಾರತದ ತುಂಬೆಲ್ಲ ಓಡಾಡಿ ನೆಲವನ್ನೆಲ್ಲ ಅಳೆದು ಸರ್ವೆ ನಂಬರ್ ಕೊಟ್ಟ ಹಾಗೆ ಈಗ
ವಿವಿಧ ದೇಶಗಳಲ್ಲಿ ಹವ್ಯಾಸಿಗಳು ಕಂಪ್ಯೂಟರ್ ಮೌಸ್ ಹಿಡಿದು ಮಂಗಳನ ನಕಾಶೆ
ತಯಾರಿಸುತ್ತಿದ್ದಾರೆ.

ಅದಕ್ಕಿಂತ ಕುತೂಹಲಕಾರಿ ತಾಣವೆಂದರೆ ಐವೈಯರ್ eyewire.org. ಇದರಲ್ಲಿ ಮೋಜಿನ ಆಟವಾಡುತ್ತಲೇ
ವಿಜ್ಞಾನಿಗಳಿಗೆ ನೆರವಾಗಬಹುದು. ನಮ್ಮ ಮಿದುಳಿನಲ್ಲಿ ಕಮ್ಮಿ ಎಂದರೂ 8500 ಕೋಟಿ
ನರಕೋಶಗಳಿವೆ. ಅವು ಒಂದು ಲಕ್ಷ ಶತಕೋಟಿ (ಒಂದರ ಮುಂದೆ 14 ಸೊನ್ನೆ ಇಟ್ಟಷ್ಟು)
ಸಂಪರ್ಕಬಿಂದುಗಳ ಮೂಲಕ ನರಮಂಡಲ ಜಾಲವನ್ನು ನಿರ್ಮಿಸಿಕೊಂಡು ಸಂದೇಶ ರವಾನೆ
ಮಾಡುತ್ತಿರುತ್ತವೆ. ಅವುಗಳ ನಕ್ಷೆ ತಯಾರಿಸಿ ಸೂಪರ್ ಕಂಪ್ಯೂಟರಿಗೆ ಕೊಟ್ಟರೆ ನಮ್ಮ ಅದ್ಭುತ
ಮಿದುಳಿನ ಸಂಪೂರ್ಣ ಚಿತ್ರಣ ನಮಗೇ ಸಿಕ್ಕಂತಾಗುತ್ತದೆ. ಕವಿಗಳು, ಅಂಧರು, ದಡ್ಡರು,
ಇಚ್ಚಿತ್ತ ರೋಗಿಗಳು, ಯೋಗಿಗಳು, ಜೂಜುಕೋರರು, ಕಲಾವಿದರು, ಗಣಿತ ತಜ್ಞರು, ಚಟದಾಸರು,
ಶಿಶುಕಾಮಿಗಳು, ಭ್ರಮಾಧೀನರು, ಸುಳ್ಳುಗಾರರು- ಹೀಗೆ ಯಾರದೇ ಮಿದುಳನ್ನು ಸ್ಕ್ಯಾನ್ ಮಾಡಿ
ಎಲ್ಲಿ ಯಾವ ಭಾಗದ ನರಕೋಶಗಳು ಭಿನ್ನವಾಗಿ ವರ್ತಿಸುತ್ತಿವೆ ಎಂಬುದರ ನೇರ ಚಿತ್ರಣವನ್ನು
ಕರಾರುವಾಕ್ಕಾಗಿ ಪಡೆಯಬಹುದು. ಅದರ ಪ್ರಯೋಜನ ಯಾರಿಗೆ ಮುಂದೆ ಹೇಗೆ ಆಗಲಿದೆ ಎಂಬುದು ಬೇರೆ
ವಿಷಯ. ನರಮಂಡಲದ ಅಂಥ ಚಿತ್ರಣವನ್ನು ಪಡೆಯುವ ದಿಕ್ಕಿನಲ್ಲಿ ವಿಜ್ಞಾನರಂಗದಲ್ಲಿ ಭಾರೀ
ಆಸಕ್ತಿ ಮೂಡಿದೆ.

*ಇಲ್ಲೂ ಅಷ್ಟೆ:* ಅಷ್ಟೊಂದು ನರಕೋಶಗಳ ಸರ್ವೆ ಮಾಡಲು ವಿಜ್ಞಾನಿಗಳಿಗೆ ಲಕ್ಷಗಟ್ಟಲೆ ವರ್ಷ
ಬೇಕು. ಅದರ ಬದಲು ಕಂಪ್ಯೂಟರ್ ಮುಂದೆ ಆಕಳಿಸುತ್ತ ಕೂತಿರುವ ಜನರೆಲ್ಲ ಆಟದ ರೂಪದಲ್ಲಿ
ನರಕೋಶಗಳನ್ನು ಜೋಡಿಸುತ್ತ ಹೋದರೆ? ಅದಕ್ಕೆಂದೇ ಮೊದಲು ಮಿದುಳಿನ ಒಂದು ಚಿಕ್ಕಭಾಗದ (ಕಣ್ಣಿನ
ಅಕ್ಷಿಪಟಲದ) ನರಕೋಶಗಳ ಜಾಲದ ನಕ್ಷೆಯನ್ನು ಬಿಡಿಸುವ ಆಟವೊಂದನ್ನು ರೂಪಿಸಲಾಗಿದೆ. ಅಮೆರಿಕದ
ಪ್ರತಿಷ್ಠಿತ ಎಮ್‌ಐಟಿ ಮತ್ತು ಪ್ರಿನ್ಸ್‌ಟನ್ ವಿಜ್ಞಾನಿಗಳು ಕಣ್ಣಿನ ನರಮಂಡಲದ
ಇಲೆಕ್ಟ್ರಾನ್ ಸೂಕ್ಷ್ಮದರ್ಶಕದ ಚಿತ್ರ ತೆಗೆದು ಅದರ ಥ್ರೀಡಿ ಕೊಂಡಿಗಳನ್ನು ಆಟದ ರೂಪದಲ್ಲಿ
ನೀಡಿದ್ದಾರೆ. ಈ eyewire ಆಟದಲ್ಲಿ ಸದ್ಯಕ್ಕೆ 133 ದೇಶಗಳ 70 ಸಾವಿರ ಜನರು
ಪಾಲ್ಗೊಂಡಿದ್ದಾರೆ. ಆಗಾಗ ಅವರ ಸಂಖ್ಯೆ ಒಂದೂವರೆ ಲಕ್ಷಕ್ಕೆ ಏರುತ್ತದೆ. ಒಬ್ಬೊಬ್ಬರು
ಒಂದೊಂದು ಆಟವನ್ನು ಗೆದ್ದಾಗಲೆಲ್ಲ, ಸೂಪರ್ ಕಂಪ್ಯೂಟರಿನಲ್ಲಿ ನರಕೋಶದ ಒಂದೊಂದು ಕೊಂಡಿಯ
ಒಳರಚನೆ ಸ್ಪಷ್ಟವಾಗಿ ಮೂಡುತ್ತ ಹೋಗುತ್ತಿದೆ. ಆಟ ಗೆದ್ದವರಿಗೆ ಅಂಕಗಳು ಸಿಗುತ್ತವೆ.
ಅಜ್ಜ-ಅಜ್ಜಿಯರಿಂದ ಹಿಡಿದು ಹೈಸ್ಕೂಲ್ ವಿದ್ಯಾರ್ಥಿಗಳೂ ಆಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಒಂದರ್ಥದಲ್ಲಿ ಅಷ್ಟೊಂದು ಮಾನವ ಮಿದುಳುಗಳು ಏಕತ್ರಗೊಂಡು ಮಿದುಳಿನ ನಿಗೂಢವನ್ನು
ಬಿಚ್ಚಿನೋಡಲು ಹೊರಟಂತಾಗಿದೆ. ಇಂಟರ್‌ನೆಟ್ ಸಂಪರ್ಕ ಚೆನ್ನಾಗಿದ್ದರೆ ನೀವೂ ಈ ಆಟದಲ್ಲಿ
ಪಾಲ್ಗೊಳ್ಳಬಹುದು. ಒಂದು ಮಹಾನ್ ಸಂಶೋಧನೆಗೆ ನೆರವಾಗಬಹುದು.

ನಮ್ಮೊಳಗಿನ ಬ್ರಹ್ಮಾಂಡವನ್ನು ನೋಡಿದರೆ ಸಾಕೆ? ಇಡೀ ವಿಶ್ವಕ್ಕೇ ಪ್ರಜ್ಞೆ ಇದೆ ಎಂದು
ಪರಿಭಾವಿಸಿದರೆ ಆಚಿನ ಆ ಲೋಕವನ್ನೂ ಅರ್ಥ ಮಾಡಿಕೊಳ್ಳಬೇಕಲ್ಲ? ಅದಕ್ಕೂ ‘ಝೂನಿವರ್ಸ್’
ಹೆಸರಿನ ಒಂದು ಜಾಲತಾಣವನ್ನು ಸೃಷ್ಟಿಸಲಾಗಿದೆ. ಯಾರು ಬೇಕಾದರೂ ಆಕಾಶದ ಒಂದೊಂದೇ ಉದ್ದಿನ
ಕಾಳಿನಷ್ಟು ಜಾಗವನ್ನು ಆಯ್ದುಕೊಂಡು, ಆ ಭಾಗದ ನಕ್ಷತ್ರಗಳನ್ನು ವರ್ಗೀಕರಿಸಬಹುದು.
ತಾರಾಶರಧಿಯ ಆ ಆಳದಲ್ಲಿ ಜೀವಿಗಳಿರುವ ಗ್ರಹವೇನಾದರೂ ಸಿಕ್ಕರೆ ನಿಮಗೆ ಲಾಟರಿ ಹೊಡೆದಂತೆ.
zooniverse.org ತಾಣದಲ್ಲಿ ಭಾಷೆ, ಚರಿತ್ರೆ, 

[ms-stf '72176'] ‘ಸಂತೋಷ ಶ್ರೇಯಾಂಕ’ದಲ್ಲೂ ನಾವೇಕೆ ಕಳಪೆ? | ಪ್ರಜಾವಾಣಿ

2017-03-31 Thread HAREESHKUMAR K Agasanapura
http://m.prajavani.net/article/2017_03_23/479353

*‘ಸಂತೋಷ ಶ್ರೇಯಾಂಕ’ದಲ್ಲೂ ನಾವೇಕೆ ಕಳಪೆ?*

23 Mar, 2017

ನಾಗೇಶ್ ಹೆಗಡೆ








ಕಳೆದ ಮೂರು ದಿನಗಳಿಂದ ಸಾಲುಗಟ್ಟಿ ‘ಅಂತರರಾಷ್ಟ್ರೀಯ ದಿನಾಚರಣೆ’ಗಳು ಬಂದವು: ಮಾರ್ಚ್ 20-
ಸಂತಸ ದಿನ, 21- ಅರಣ್ಯ ದಿನ, 22- ಜಲದಿನ. ಆ ಸಾಲಿನಲ್ಲಿ ನಾಲ್ಕನೆಯದಾಗಿ ಇಂದು, 23-
ಹವಾಮಾನ ದಿನ ಬಂದಿದೆ.



ಇವುಗಳಲ್ಲಿ ಒಂದಾದರೂ ಸಂಭ್ರಮ ಆಚರಿಸುವ ದಿನವೆ? ಹವಾಮಾನ ದಿನದಿನಕ್ಕೆ ಹದಗೆಡುತ್ತಿದೆ;
ನೀರಿನ ಹಾಹಾಕಾರ ಎಲ್ಲ ಕಡೆಗಳಿಂದಲೂ ಕೇಳಬರುತ್ತಿದೆ. ಇನ್ನು ಅರಣ್ಯಗಳ ಸ್ಥಿತಿಗತಿಯಂತೂ
ಕೇಳುವುದೇ ಬೇಡ. ಮತ್ತೆ, ಮಾರ್ಚ್ 20ರ ‘ಅಂತರಾಷ್ಟ್ರೀಯ ಸಂತಸ ದಿನ’- ಅದೊಂದಾದರೂ ಸಂತಸದ
ದಿನ ಆಗಿರಬೇಕಲ್ಲ?



*ಅದನ್ನೇ ತುಸು ವಿವರವಾಗಿ ನೋಡೋಣ:*ದುಡ್ಡು ಕಾಸು, ಬಂಗ್ಲೊ, ಕಾರುಗಳೇ ಶ್ರೀಮಂತಿಕೆಯ
ಸೂಚಿಯಲ್ಲ ಎಂಬುದು ನಮಗೆಲ್ಲ ಗೊತ್ತಿದೆ. ಈ ಮನುಷ್ಯನೆಂಬ ಪ್ರಾಣಿ ಇಂಥ ಬರೀ ಭೋಗಲಾಲಸೆಯ
ಬೆನ್ನಟ್ಟಿದ್ದರಿಂದಲೇ ಪ್ರಪಂಚದ ಎಲ್ಲ ಜೀವಿಗಳ ಬದುಕೂ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂಬುದು
ವಿಶ್ವಮಟ್ಟದ ಚಿಂತಕರಿಗೂ ಈಗ ಗೊತ್ತಾಗಿದೆ.



ಅಭಿವೃದ್ಧಿಯ, ಜಿಡಿಪಿಯ ಮಂತ್ರವನ್ನು ಜಪಿಸುತ್ತ ಸಾಮೂಹಿಕ ವಿನಾಶದತ್ತ ಚಲಿಸುವ ಬದಲು
‘ಸಂತಸ’ವನ್ನೇ ಸಾಮಾಜಿಕ ಪ್ರಗತಿಯ ಅಳತೆಗೋಲಾಗಿ ಬಳಸುವ ಸಾಧ್ಯತೆಗಳ ಬಗ್ಗೆ ಚರ್ಚೆ
ನಡೆಯುತ್ತಿದೆ. ನಮ್ಮ ಪಕ್ಕದ ಭೂತಾನ್ ದೇಶ ಕಳೆದ ಮೂರು ದಶಕಗಳಿಂದ ‘ಜಿಡಿಪಿ’ ಎಂಬ
ಅಭಿವೃದ್ಧಿ ಸೂಚ್ಯಂಕದ ಬದಲು ‘ಸಂತಸ ಸೂಚ್ಯಂಕ’ವನ್ನೇ ಬಳಸುತ್ತಿದೆ.



ಅದೇ ಮಾದರಿಯನ್ನು ಮುಂದಿಟ್ಟುಕೊಂಡು 2012ರಲ್ಲಿ ವಿಶ್ವಸಂಸ್ಥೆಯ ಉನ್ನತ ಮಟ್ಟದ ತಜ್ಞರು ಸಭೆ
ನಡೆಸಿದ್ದರು. ಹಣಕಾಸಿನ ಶ್ರೀಮಂತಿಕೆಯ ಹೊರತಾಗಿ ಬದುಕಿನಲ್ಲಿ ನೆಮ್ಮದಿ ಕೊಡಬಲ್ಲ ಬೇರೆ
ಏನೇನು ಅಂಶಗಳಿವೆ ಎಂಬುದನ್ನು ವೈಜ್ಞಾನಿಕವಾಗಿ ಅಳೆದು ನೋಡಲು ಸಾಧ್ಯವೇ ಎಂಬುದನ್ನು
ಚರ್ಚಿಸಿದ್ದರು.



ಅಂದಿನಿಂದ ಪ್ರತಿ ವರ್ಷ ‘ವಿಶ್ವ ಸಂತಸ ವರದಿ’ಯನ್ನು (ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟನ್ನು)
ಮಾರ್ಚ್ 20ರಂದು ವಿಶ್ವಸಂಸ್ಥೆ ಬಿಡುಗಡೆ ಮಾಡುತ್ತ ಬಂದಿದೆ. ವಿವಿಧ ಬಗೆಯ ಮಾನದಂಡಗಳನ್ನು
ಆಧರಿಸಿ ಯಾವ ದೇಶದ ಪ್ರಜೆಗಳು ಎಷ್ಟರಮಟ್ಟಿಗೆ ಸಂತೋಷದಿಂದ ಇದ್ದಾರೆ ಎಂಬುದನ್ನು ಸೂಚಿಸುವ
‘ಸಂತಸ ಶ್ರೇಯಾಂಕ’ ಪಟ್ಟಿಯನ್ನು ಕೂಡ ಅದೇ ವರದಿಯ ಜೊತೆಯಲ್ಲಿ ಅದೇ ದಿನ ವಿಶ್ವಸಂಸ್ಥೆ
ಬಿಡುಗಡೆ ಮಾಡುತ್ತಿದೆ. ಆ ದಿನವನ್ನು ‘ಹ್ಯಾಪಿನೆಸ್ ಡೇ ಎಂದು ಆಚರಿಸೋಣ’ ಎಂತಲೂ ಅದು ಕರೆ
ನೀಡಿದೆ. ಮೊನ್ನೆ ಬಿಡುಗಡೆ ಮಾಡಿದ್ದು ಈ ಸರಣಿಯ 5ನೇ ‘ಸಂತಸ ಶ್ರೇಯಾಂಕ’ ಪಟ್ಟಿ.



ಒಟ್ಟು 155 ದೇಶಗಳ ಸಮೀಕ್ಷೆ ಮಾಡಿ ತಯಾರಿಸಲಾದ ಈಗಿನ ಶ್ರೇಯಾಂಕ ಪಟ್ಟಿಯ ಪ್ರಕಾರ ನಾರ್ವೆ
ದೇಶ ಜಗತ್ತಿನಲ್ಲಿ ಮೊದಲನೆಯ ಸ್ಥಾನದಲ್ಲಿದೆ. ಇಂಡಿಯಾ 122ನೇ ಸ್ಥಾನದಲ್ಲಿದೆ. ಹಿಂದಿನ
ಬಾರಿ ಅಳೆದು ನೋಡಿದಾಗ ನಾಲ್ಕನೆಯ ಸ್ಥಾನದಲ್ಲಿದ್ದ ನಾರ್ವೆ ಈಗ ಮೊದಲ ಸ್ಥಾನಕ್ಕೆ ಏರಿದೆ.
ನಾವು ನಾಲ್ಕು ಸ್ಥಾನ ಕಳೆದುಕೊಂಡಿದ್ದೇವೆ.



ನಮ್ಮ ಅಕ್ಕಪಕ್ಕದ ಶ್ರೀಲಂಕಾ, ಬಾಂಗ್ಲಾದೇಶ, ಚೀನಾ, ನೇಪಾಳ, ಮಯಾನ್ಮರ್, ಕೊನೆಗೆ
ಪಾಕಿಸ್ತಾನವೂ ನಮಗಿಂತ ತುಸು ಸಂತಸ ತುಂಬಿದ ದೇಶವೆಂದು ಈ ಪಟ್ಟಿಯಲ್ಲಿ ಹೇಳಲಾಗಿದೆ. ಅವರಿವರ
ಸುದ್ದಿ ಹಾಗಿರಲಿ, ಇರಾಕ್ ಕೂಡ ನಮಗಿಂತ ಮೇಲಿದೆ. ಹೀಗೆ, ನಮ್ಮ ಆಚೀಚಿನ ಎಲ್ಲರಿಗಿಂತ ನಾವು
ಅಸಂತುಷ್ಟಿಗಳೆಂಬ ಮಾಹಿತಿಯೇ ನಮ್ಮನ್ನು ಈ ಪಟ್ಟಿಯಲ್ಲಿ ಇನ್ನೂ ಕೆಳಕ್ಕೆ ತಳ್ಳಬಹುದೇನೊ.



ಸಂತಸ ಸಮೀಕ್ಷೆಯಲ್ಲಿ ಆಯಾ ದೇಶದ ಪ್ರಜೆಯ ಆದಾಯ, ಆರೋಗ್ಯವಂತ ಬದುಕಿನ ನಿರೀಕ್ಷೆ,
ಸಂಕಷ್ಟದಲ್ಲಿ ನೆರವಿಗೆ ಬರುವವರ ನಿರೀಕ್ಷೆ, ಧಾರಾಳತನ, ಸ್ವಾತಂತ್ರ್ಯ ಮತ್ತು ವಿಶ್ವಾಸ ಈ
ಆರು ಸೂಚಕಗಳನ್ನು ಬಳಸಲಾಗಿತ್ತು. ಭಾರತದ ಮಟ್ಟಿಗೆ ಆದಾಯ ನಿರಂತರವಾಗಿ ಏರುತ್ತಿದೆಯಾದರೂ
ಇತರ ರಂಗಗಳಲ್ಲೆಲ್ಲ ಕುಸಿತ ಹೆಚ್ಚಾಗಿ ಕಂಡಿದ್ದರಿಂದ ನಮ್ಮ ದೇಶದ ಒಟ್ಟಾರೆ ಶ್ರೇಯಾಂಕದಲ್ಲೂ
ಕುಸಿತವಾಗಿದೆ; ಹಣವೊಂದೇ ನೆಮ್ಮದಿ ತರಲಾರದು ಎಂಬುದು ಅಲ್ಲೂ ಸಾಬೀತಾಗಿದೆ.



ನಾರ್ವೆ ದೇಶ ಏಕೆ ಇತರ 154 ದೇಶಗಳಿಗಿಂತ ಹೆಚ್ಚು ಸಂತಸದಲ್ಲಿದೆ? ‘ನಮ್ಮ ಶಾಲೆಗಳು,
ಆಸ್ಪತ್ರೆ, ಪೊಲೀಸ್ ಮತ್ತು ಆಡಳಿತ ವ್ಯವಸ್ಥೆ ಎಲ್ಲವೂ ಪ್ರಜೆಗಳನ್ನು ಗೌರವದಿಂದ
ನೋಡುತ್ತವೆ. ನಮ್ಮ ಬೆಂಬಲಕ್ಕೆ ಎಷ್ಟೊಂದು ಮಂದಿ ಇದ್ದಾರಲ್ಲ ಎಂಬ ಭರವಸೆ ನಮಗಿರುತ್ತದೆ-
ಅದೇ ನಮ್ಮ ಸಂತಸದ ಗುಟ್ಟು’ ಎಂದು ನಾರ್ವೆಯ ಪ್ರಜೆಗಳು ಹೇಳುತ್ತಾರೆ.



ವಿಶ್ವಸಂಸ್ಥೆಯ ವರದಿ ಬೇರೊಂದು ಗುಟ್ಟನ್ನು ಹೇಳುತ್ತದೆ: ನಾರ್ವೆಯಲ್ಲಿ ಭಾರಿ ದೊಡ್ಡ
ತೈಲನಿಕ್ಷೇಪ ಇದೆ. ಅದನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಎತ್ತಿ ಹಣ ಗಳಿಸುವ ಬದಲು
ನಾರ್ವೆ ಬೇಕಂತಲೇ ಕಡಿಮೆ ತೈಲವನ್ನು ಮೇಲೆತ್ತುತ್ತಿದೆ. ಹಾಗೆ ಎತ್ತಿದ್ದನ್ನೂ ಅದು ಇಂದಿನ
ತುರ್ತಿಗಾಗಿ ಬಳಸುವ ಬದಲು ಭವಿಷ್ಯದ ಭದ್ರತೆಗಾಗಿ ಹೂಡಿಕೆ ಮಾಡುತ್ತಿದೆ. ತೈಲಬೆಲೆ ಇಳಿದರೂ
ಅದರ ಬಿಸಿ ತಟ್ಟದಂತೆ ರಕ್ಷಾಕೋಟೆಯನ್ನು ನಿರ್ಮಿಸಿಕೊಂಡಿದೆ. ‘ಪರಸ್ಪರ ನಂಬಿಕೆ, ವಿಶ್ವಾಸ
ತುಂಬಿರುವ ಪ್ರಜಾಸ್ತೋಮದಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ’ ಎಂದು ವರದಿಯಲ್ಲಿ
ಹೇಳಲಾಗಿದೆ.



ಉತ್ತರ ಯುರೋಪ್‌ನ ಸುಮಾರು ಎಲ್ಲ ದೇಶಗಳೂ, ಅಂದರೆ ಫಿನ್ಲೆಂಡ್, ಐಸ್ಲೆಂಡ್,
ಸ್ವಿತ್ಸರ್ಲೆಂಡ್, ಡೆನ್ಮಾರ್ಕ್ ಎಲ್ಲವೂ ಮೊದಲ ಹತ್ತು ಶ್ರೇಯಾಂಕದಲ್ಲೇ ಬರುತ್ತವೆ. ಅಷ್ಟೇ
ಅಲ್ಲ, ಇತರೆಲ್ಲ ಅಭಿವೃದ್ಧಿ ಸೂಚ್ಯಂಕಗಳಲ್ಲೂ ಅವು ಅತ್ಯುನ್ನತ ಶ್ರೇಣಿಯಲ್ಲಿವೆ. ಸಮಾನತೆ
ಜಾಸ್ತಿ ಇದೆ, ಭ್ರಷ್ಟಾಚಾರ ಇಲ್ಲ, ಪರಿಸರ ನಾಶ ಇಲ್ಲ, ಪೊಲೀಸರಿಗೆ ಜಾಸ್ತಿ ಕೆಲಸ ಇಲ್ಲ,
ಗಡಿ ಜಗಳ ಇಲ್ಲ, ಆಡಳಿತ ಸುಗಮವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಮುದಾಯಗಳಲ್ಲಿ ಒಗ್ಗಟ್ಟಿದೆ.



ನೆರೆಹೊರೆಯ ಜನರು ಆಗಾಗ ಸೇರಿ ಊರೊಟ್ಟಿನ ಕೆಲಸಗಳಲ್ಲಿ ನಿರತರಾಗುತ್ತಾರೆ. ಅಲ್ಲಿನ
ದೇಶಗಳಿಗೆ ಹೋಲಿಸಿದರೆ ಅಮೆರಿಕ ಕಳೆದ ವರ್ಷ 13ನೇ ಸ್ಥಾನದಲ್ಲಿದ್ದುದು ಈಗ 14ಕ್ಕೆ
ಇಳಿದಿದೆ. ‘ನಾವು ಅಮೆರಿಕನ್ನರು ದಿನಗಳೆದಂತೆ ಸ್ವಾರ್ಥಿಗಳಾಗುತ್ತಿದ್ದೇವೆ. ಸರ್ಕಾರದಲ್ಲಿ
ಭ್ರಷ್ಟಾಚಾರ ಹೆಚ್ಚುತ್ತಿದೆ; ಸಮಾಜದಲ್ಲಿ ಅಸಮಾನತೆ ಹೆಚ್ಚುತ್ತಿದೆ’ ಎನ್ನುತ್ತಾರೆ ಈ
‘ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್‌’ನ ಸಹಲೇಖಕರಾದ ಕೊಲಂಬಿಯಾ ವಿಶ್ವವಿದ್ಯಾಲಯದ ಆರ್ಥಿಕ
ತಜ್ಞ ಜೆಫ್ರಿ ಸ್ಯಾಕ್ಸ್.




[ms-stf '71986'] adding to english stf

2017-03-23 Thread HAREESHKUMAR K Agasanapura
please add following mail id of my colleague to english stf
 GAYITHRI M C
ENGLISH LANGUAGE TEACHER
E MAIL ID - gayithrim...@gmail.com


-- 
Hareeshkumar k
GHS HUSKURU
MALAVALLITQ
9880328224
e-mail_ harihusk...@gmail.com

-- 
---
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
---
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
For more options, visit https://groups.google.com/d/optout.


[ms-stf '71067'] ಸುಳ್ಳು ಶೋಧನೆಯ ವಿಧಿ ಹಾಗೂ ವಿಜ್ಞಾನ!

2017-02-24 Thread HAREESHKUMAR K Agasanapura
http://m.vijaykarnataka.com/edit-oped/columns/sudhindra-haldodderi/articleshow/57272099.cms

Updated Feb 21, 2017, 04.53 PM IST

Whatsapp Facebook Google Plus
Twitter Email
SMS 
*ಸುಳ್ಳು ಶೋಧನೆಯ ವಿಧಿ ಹಾಗೂ ವಿಜ್ಞಾನ!*

AAA

ಸುಧೀಂದ್ರ ಹಾಲ್ದೊಡ್ಡೇರಿ

ಪಕ್ಷ ದ ಕೇಂದ್ರ ಕಚೇರಿಗಳಿಗೆ ಕಪ್ಪ-ಕಾಣಿಕೆಗಳು ಸಂದಾಯವಾಗುತ್ತಿವೆ ಎಂಬ ಪ್ರತಿಪಕ್ಷ ದ
ಆರೋಪ, ಅದಕ್ಕೊಂದು ಪ್ರತ್ಯಾರೋಪದ ವರದಿಗಳನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೀರಿ. ಆರೋಪ
ಮಾಡಿದವರ 'ಮಂಪರು ಪರೀಕ್ಷೆ' ನಡೆಯಲಿ ಎಂದು, ಅದಕ್ಕೆ 'ನಾವು ಸಿದ್ಧ', 'ನೀವು ಸಿದ್ಧರೆ'?
ಎಂದು ವೀರಾವೇಷದಿಂದ ರಾಜಕಾರಣಿಗಳು ಕಣಕ್ಕಿಳಿದಿದ್ದಾರೆ. ರಾಜಕಾರಣಿಗಳೆಂದರೆ ನಿಮಗೆ
ಗೊತ್ತು. ತಮ್ಮದಿರಲಿ, ಬ್ರಹ್ಮ ಬರೆದ ನಮ್ಮೆಲ್ಲರ ಹಣೆ ಬರಹಗಳನ್ನೇ ಸುಳ್ಳು ಮಾಡಬಲ್ಲಂಥ
ಚಾಣಕ್ಷ ರು. ಚುನಾವಣೆ ಹತ್ತಿರ ಬಂದಂತೆ ಸ್ವತಃ ಗೋಸುಂಬೆಗಳೇ ನಾಚುವಷ್ಟು ವೇಗದಲ್ಲಿ ಬಣ್ಣ
ಬದಲಾಯಿಸಬಲ್ಲ ಪ್ರೊಫೆಷನಲ್‌ ನಟರಿವರು. ಇಂಥ ಪರಿಸ್ಥಿತಿಯಲ್ಲಿ ಚುನಾವಣಾ ಕಣಕ್ಕೆ
ಹರಿಶ್ಚಂದ್ರನೇನಾದರೂ ಬಂದರೆ ಮಾತುಗಳನ್ನು ಕೇಳದೆಯೇ ಅವನನ್ನು 'ಸುಳ್ಳ' ಎನ್ನಬಹುದು.
ಏಕೆಂದರೆ ರಾಜಕೀಯವೆಂಬ ಕಪಟ ನಾಟಕದಲ್ಲಿ ಸೂತ್ರ-ಕಮ್‌-ಪಾತ್ರಧಾರಿಗಳೆಲ್ಲರೂ ಸುಳ್ಳರೇ ಎಂಬ
ವಿಷಯ ನಮಗೆ ಖಚಿತವಾಗಿಬಿಟ್ಟಿದೆ. ಆದರೆ ಅವರೆಲ್ಲರ ಸುಳ್ಳುಗಳನ್ನು ವೈಜ್ಞಾನಿಕವಾಗಿ
ಸಾಬೀತು ಮಾಡಲು ಇನ್ನೂ ಅಸಮರ್ಥರಿದ್ದೇವೆ. ಕಾರಣ, ಅವಕಾಶ ಕೊಟ್ಟರೆ 'ಮಂಪರು ಪರೀಕ್ಷಾ
ಯಂತ್ರ'ಗಳಿಗೇ ಮಂಕುಬೂದಿ ಎರಚಬಲ್ಲ ಚತುರತೆ ಅವರದು. ಅಂಥ ಯಂತ್ರವೂ ಸೇರಿದಂತೆ ಸುಳ್ಳು
ಶೋಧಕಗಳ ಆವಿಷ್ಕಾರಕ್ಕೆ ಆಧುನಿಕ ತಂತ್ರಜ್ಞಾನ ನೆರವಾಗಿದೆ. ಆದರೂ 'ಕ್ರಿಮಿ-ನಲ್‌'ಗಳ ಬಾಯಿ
ಬಿಡಿಸುವ ಕೆಲಸ ಅಷ್ಟು ಸುಲಭದ್ದಲ್ಲ. ಮನೋವಿಜ್ಞಾನದ ಹತ್ತು ಹಲವಾರು ತಂತ್ರಗಳನ್ನು ಬಳಕೆ
ಮಾಡಿಕೊಂಡು ಸೆರೆಸಿಕ್ಕವನ ಹೇಳಿಕೆಗಳು ಸತ್ಯವೆ, ಸುಳ್ಳೆ ಎಂದು ಪೊಲೀಸರು
ನಿರ್ಧರಿಸಬೇಕಾಗುತ್ತದೆ. ವ್ಯಕ್ತಿಯ ಹಣೆಯ ಬೆವರು, ಏರಿದ ರಕ್ತದೊತ್ತಡ, ನಡುಕ, ತೊದಲು,
ಅಸಂಬದ್ಧ ಹೇಳಿಕೆ ... ಮುಂತಾದ ಸಾಕ್ಷ ್ಯಗಳು ಸುಳ್ಳಿನ ಸುಳಿವನ್ನು ನೀಡುತ್ತವೆ. ಇಂಥ
ಪರೀಕ್ಷೆಗಳಲ್ಲಿ ನಪಾಸಾದ ಶಂಕಿತ ವ್ಯಕ್ತಿಗಳಿಗೆ ಪೊಲೀಸರ 'ಆರೈಕೆ' ಸಿಕ್ಕರೆ ಸತ್ಯ
ಹೊರಬೀಳುವ ಸಾಧ್ಯತೆಗಳು ಹೆಚ್ಚು. ಕಳೆದ ಐವತ್ತು ವರ್ಷಗಳಿಂದ ಜಗತ್ತಿನಾದ್ಯಂತ
ಮನೋವಿಜ್ಞಾನಿಗಳ ನೆರವಿನಿಂದ ನಡೆಸುತ್ತಿದ್ದ ಸುಳ್ಳು ಶೋಧಕದ ಹೆಸರು - ಪಾಲಿಗ್ರಾಫ್‌.
ಆರೋಪಿಯನ್ನು ಸರಣಿ ಪ್ರಶ್ನೆಗಳಿಗೊಳಪಡಿಸಿ, ಆತ/ಆಕೆ ಉತ್ತರಿಸುವಾಗ ದೇಹದಲ್ಲಾಗುವ ಚರ್ಮದ
ವಿದ್ಯುತ್‌ ವಾಹಕತ್ವ, ಹೃದಯ ಬಡಿತದ ವೇಗ ಹಾಗೂ ಉಸಿರಾಟದ ರಭಸಗಳ ಬದಲಾವಣೆಗಳನ್ನು
ದಾಖಲಿಸುವುದು. ಅನುಮಾನ ಬಂದೆಡೆ, ಕೇಳಿದ ಪ್ರಶ್ನೆಗಳನ್ನೇ ತಿರುಗಿಸಿ ಕೇಳಿ, ಉತ್ತರಿಸುವ
ಸಂದರ್ಭದಲ್ಲಿ ಜೈವಿಕ ಚಟುವಟಿಕೆಗಳಲ್ಲಾಗುವ ಬದಲಾವಣೆಗಳನ್ನು ಗುರುತಿಸಿ ಹಿಂದಿನ
ಮಾಪನಗಳೊಂದಿಗೆ ತಾಳೆ ನೋಡುವುದು. ಇದರ ಜತೆಗೆ ಮನೋವೈಜ್ಞಾನಿಕ ಅಧ್ಯಯನದ ನೆರವಿನಿಂದ ಆರೋಪಿ
ಹೇಳುತ್ತಿರುವುದು ಸುಳ್ಳು ಅಥವಾ ನಿಜ ಎಂದು ಗುರುತಿಸುವ ಪರಿಪಾಠ. ಇದೊಂದು ಗುಣಾತ್ಮಕ
ಅಧ್ಯಯನವಾಗಿರುವುದರಿಂದ ಚಾಣಕ್ಷ ಅಥವಾ ಸುಳ್ಳು ಹೇಳುವುದರಲ್ಲಿ ನಿಪುಣರಾದವರು
'ಪಾಲಿಗ್ರಾಫ್‌' ಯಂತ್ರಕ್ಕೆ ಮೋಸ ಮಾಡಬಹುದು. ಇಂಥ ಸಮಸ್ಯೆಗಳಿಂದ ಪಾರಾಗಲು
ಅತ್ಯವಶ್ಯವಾಗಿರುವ 'ಗ್ಯಾಜೆಟ್‌' ಎಂದರೆ ಚುರುಕಾದ ಸುಳ್ಳು ಶೋಧಕ. ಇದನ್ನು
ಆವಿಷ್ಕರಿಸಲೆಂದೇ ಜಗತ್ತಿನ ಅನೇಕ ವಿಜ್ಞಾನಿ ತಂಡಗಳು ಶ್ರಮಿಸುತ್ತಿವೆ. ಈ ಕಾರ್ಯದಲ್ಲಿ
ತೊಡಗಿಕೊಂಡಿದ್ದ ಅಮೆರಿಕದ ಸ್ಟಾನ್‌ಫರ್ಡ್‌ ವಿಶ್ವವಿದ್ಯಾಲಯದ ನರವಿಜ್ಞಾನಿಗಳು ಮಿದುಳಿನ
ಎಫ್‌.ಎಂ.ಆರ್‌.ಐ. ಚಿತ್ರೀಕರಣದ ಮೂಲಕ ಸುಳ್ಳಿನ ಪತ್ತೆಗೊಂದು ಮಾರ್ಗ ಕಂಡುಕೊಂಡಿದ್ದಾರೆ.
ಆಯಸ್ಕಾಂತೀಯ ಅಲೆಗಳನ್ನು ಕಳುಹಿಸಿ ಅವುಗಳ ಪ್ರತಿಸ್ಪಂದನದ ಚಿತ್ರೀಕರಣಕ್ಕೆ ಎಂ.ಆರ್‌.ಐ
ಎಂಬ ಹೆಸರಿದೆ. ದೇಹದೊಳಗಿನ ನ್ಯೂನತೆಗಳನ್ನು ಪತ್ತೆ ಮಾಡುವಲ್ಲಿ ಇದು ನೆರವಾಗುತ್ತದೆ. ಆದರೆ
ಸದಾ ಕಾಲ ಚಟುವಟಿಕೆಯಲ್ಲಿಯೇ ಇರುವ ಮಿದುಳಿನ ಚಿತ್ರೀಕರಣದ ಸಂದರ್ಭದಲ್ಲಿ ಕಾರ್ಯನಿರತ
ಎಂ.ಆರ್‌.ಐ ತಂತ್ರಜ್ಞಾನ ನೆರವಾಗುತ್ತದೆ. ಇದನ್ನು ಎಫ್‌.ಎಂ.ಆರ್‌.ಐ ಎಂದು ದೇಹ ತಪಾಸಣಾ
ತಂತ್ರಜ್ಞರು ಗುರುತಿಸುತ್ತಾರೆ. ಆರೋಪಿಯ ಹೇಳಿಕೆಗಳನ್ನು ಪಡೆಯುವಾಗ ಆತನ/ಆಕೆಯ ಮಿದುಳಿನ
ನಿರ್ದಿಷ್ಟ ಭಾಗಗಳಲ್ಲಾಗುವ ಬದಲಾವಣೆಗಳನ್ನು ಎಫ್‌.ಎಂ.ಆರ್‌.ಐ ಮೂಲಕ ಗ್ರಹಿಸಿ, ಹೇಳಿಕೆ
ನೈಜವೆ, ಸುಳ್ಳೆ ಎಂಬುದನ್ನು ಅರಿಯಬಹುದೆಂಬ ನಂಬಿಕೆ ಅಲ್ಲಿನ ನರವೈದ್ಯ ಆಂಥೋಣಿ
ವ್ಯಾಗ್ನರ್‌ ಅವರದು. ಆರೋಪಿಯು ಸುಳ್ಳು ಹೇಳುತ್ತಿರುವ ಸಮಯದಲ್ಲಿ ಮಿದುಳಿನೊಳಗಿನ
ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗುವ ಭಾಗವು ಚಟುವಟಿಕೆಯಲ್ಲಿರುತ್ತದೆ.
ಎಫ್‌.ಎಂ.ಆರ್‌.ಐ ವಿಶ್ಲೇಷಣಾ ಚಿತ್ರದಲ್ಲಿ ಈ ಭಾಗಗಳು ಪ್ರಜ್ವಲಿಸುತ್ತವೆ. ಈ ಹಿಂದೆ
ಕೆನಡಾದ ಡಾಲ್‌ಹೌಸಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಸುಳ್ಳು ಪತ್ತೆ ಕಾರ್ಯದಲ್ಲಿ ಕೊಂಚ
ಯಶಸ್ಸು ಸಾಧಿಸಿದ್ದರು. ವೃತ್ತಿಪರ ಸುಳ್ಳುಗಾರರು ಸಾಮಾನ್ಯ ಶೋಧಕಗಳನ್ನು 'ಏಮಾರಿಸುವ'
ಪರಿಣತಿ ಹೊಂದಿರುತ್ತಾರೆ. ಉದಾಹರಣೆಗೆ ಹೇಳಿಕೆಗಳನ್ನು ನೀಡುವಾಗ ಸುಳ್ಳಿನ ಕುರುಹುಗಳಾದ
ಕಣ್ಣ ನೋಟ ಬದಲಾವಣೆ, ಹುಬ್ಬಿನ ಮೇಲಿನ ಬೆವರು, ಮೂಗಿನ ಅರಳುವಿಕೆಗಳನ್ನು ಮರೆಮಾಚಬಲ್ಲ
ಚಾಕಚಕ್ಯತೆಯನ್ನು ಕೆಲವರು ಹೊಂದಿರುತ್ತಾರೆ. ಹಾಗೆಯೇ ಇವಿಷ್ಟೇ ಕುರುಹುಗಳಿಂದ
ವ್ಯಕ್ತಿಯೊಬ್ಬ ಸುಳ್ಳು ಹೇಳುತ್ತಿದ್ದಾನೆ ಎಂದು ನಿರ್ಧರಿಸುವುದೂ ತಪ್ಪಾಗುತ್ತದೆ. ಇದು
ವಿಧಿವಿಜ್ಞಾನಕ್ಕೆ (ಫೊರೆನ್ಸಿಕ್‌) ಸಂಬಂಧಿಸಿದ ಮಾನಸಿಕ ಅಧ್ಯಯನಗಳಿಗೆಂದೇ ಮೀಸಲಾದ ಕೆನಡಾ
ದೇಶದ ಯೂನಿವರ್ಸಿಟಿ ಆಫ್‌ ಬ್ರಿಟಿಷ್‌ ಕೊಲಂಬಿಯಾ ಒಕಾಂಗನ್‌ನಲ್ಲಿನ ಪ್ರಯೋಗಶಾಲೆಯ
ಪ್ರಾಧ್ಯಾಪಕ ಸ್ಟೀಫನ್‌ ಪೋರ್ಟರ್‌ ಅವರ ಅಭಿಪ್ರಾಯ. ಇಡೀ ದೇಹಕ್ಕೆ ಹೋಲಿಸಿದರೆ
ಮುಖವೊಂದರಲ್ಲೇ ಬದಲಾಗುವ ಭಾವ ಚಹರೆಗಳ ಸಂಖ್ಯೆ ಹೆಚ್ಚು. ಇವುಗಳನ್ನು ಅತ್ಯಂತ ಸೂಕ್ಷ
್ಮವಾಗಿ ವಿಶ್ಲೇಷಿಸಬಲ್ಲ ತಂತ್ರಜ್ಞಾನ ಕರಗತವಾದಲ್ಲಿ ಶಂಕಿತನ ಹೇಳಿಕೆಗಳಲ್ಲಿ '
ಸುಳ್ಳು'ಗಳು ಎಲ್ಲಿವೆ ಎಂದು ಗುರುತಿಸಬಹುದು. ಪೋರ್ಟರ್‌ ಅವರ ಪಟ್ಟ ಶಿಷ್ಯರಾದ ಲೀಯನ್‌
ಬ್ರಿಂಕ್‌ ಹೇಳುವಂತೆ ಧಿ - '' ಮುಖದಲ್ಲಿನ ಕೆಲವು ಸ್ನಾಯುಗಳ ಚಲನೆಯನ್ನು
ಸ್ವಯಂಪ್ರೇರಿತವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಇಂಥ ಸ್ನಾಯುಗಳ ಚಲನೆಯನ್ನು ಸೂಕ್ಷ
್ಮವಾಗಿ ಗುರುತಿಸಲು ಸಾಧ್ಯವಾದರೆ ಅರ್ಧ ಕೆಲಸ ಸಿದ್ಧಿಸಿದಂತೆ. ಇಲ್ಲಿ ಮುಖ್ಯವಾದ
ಅಂಶವೊಂದಿದೆ. ಸುಳ್ಳು ಹೇಳುವಾಗ ಯಾವ ಸ್ನಾಯುಗಳು ಯಾವ ಮುಖಭಾವ ಚಹರೆಗಳನ್ನು ಬದಲಿಸುತ್ತವೆ
ಎಂಬ ವಿಷಯ ತಿಳಿದಿರಬೇಕು''. ಉದಾಹರಣೆಗೆ ಕೆಲವು ಕಪಟರಹಿತ ಭಾವನೆಗಳನ್ನು ಪ್ರದರ್ಶಿಸುವಾಗ
ನಿರ್ದಿಷ್ಟ ಸ್ನಾಯುಗಳಲ್ಲಿ ಚಲನೆಯಿರುವುದಿಲ್ಲ. ಅಂದರೆ ಹೇಳಿಕೆಯೊಂದನ್ನು ಸತ್ಯವಾಗಿಯೇ
ನೀಡಲು ನಿರ್ಧರಿಸಿದಾಗ ನಿರ್ದಿಷ್ಟ ಸ್ನಾಯುಗಳು ತೆಪ್ಪಗಿರುತ್ತವೆ. ಈ ಸ್ನಾಯುಗಳ ಚಲನೆಯ
ಮೇಲೆ ವೈದ್ಯ-ವಿಜ್ಞಾನಿಗಳು ತಮ್ಮ ಗಮನ ಕೇಂದ್ರೀಕರಿಸಿದಲ್ಲಿ ಶಂಕಿತನ ತಪ್ಪೊಪ್ಪಿಗೆ
ಹೇಳಿಕೆಗಳು ಎಷ್ಟರ ಮಟ್ಟಿಗೆ ಸತ್ಯ ಎಂದು ಗುರುತಿಸಬಹುದು.

ಬ್ರಿಟಿಷ್‌ ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂಥ ಸಂಕೀರ್ಣ ವಿಷಯದ ಬಗ್ಗೆ
ಹಲವಾರು ವರ್ಷಗಳಿಂದ ನಿರಂತರ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ತಮ್ಮ ಅಧ್ಯಯನಕ್ಕೆ
ಶಂಕಿತ ಅಪರಾಧಿಗಳ ಹೇಳಿಕೆಗಳ ವೀಡಿಯೋ ತುಣಕುಗಳನ್ನು ಬಳಸಿಕೊಂಡಿದ್ದಾರೆ. ಬ್ರಿಟನ್‌,

[ms-stf '71066'] ಸರ್ಜನರ, ದುರ್ಜನರ ಕೈಯಲ್ಲಿ ಸ್ಟೆಂಟ್ | ಪ್ರಜಾವಾಣಿ

2017-02-24 Thread HAREESHKUMAR K Agasanapura
http://m.prajavani.net/article/2017_02_23/473614

*ಸರ್ಜನರ, ದುರ್ಜನರ ಕೈಯಲ್ಲಿ ಸ್ಟೆಂಟ್*

23 Feb, 2017

ನಾಗೇಶ್ ಹೆಗಡೆ








ವಜ್ರಗಳ ರಾಜಧಾನಿ ಎನಿಸಿದ ಸೂರತ್ ನಗರದ ಒಂದು ಫ್ಯಾಕ್ಟರಿಯ ಹಿಂಬಾಗಿಲ ದೃಶ್ಯ: ವಜ್ರದ
ಬೆಂಡೋಲೆಯನ್ನು ಇಡಬಹುದಾದ ಪುಟ್ಟ ಪುಟ್ಟ  ಡಬ್ಬಗಳ ಪ್ಯಾಕಿಂಗ್ ಕೆಲಸ ನಡೆಯುತ್ತಿರುತ್ತದೆ.
ಇಬ್ಬರು ಗನ್‌ಮೆನ್ ಮತ್ತು ವಿಮಾ ಕಂಪನಿಯ ಇಬ್ಬರು ಅಧಿಕಾರಿಗಳ ಕಣ್ಗಾವಲಿನಲ್ಲಿ ಒಂದೊಂದೇ
ಡಬ್ಬದ ತಪಶೀಲು ನಡೆಯುತ್ತದೆ. ಎಲ್ಲವೂ ಐರೋಪ್ಯ ಮಾನದಂಡದ ಪ್ರಕಾರ ಶ್ರೇಷ್ಠ ಗುಣಮಟ್ಟದ್ದೇ
ಆಗಿರಬೇಕು.

ತಪಾಸಣೆ ಮುಗಿದ ಮೇಲೆ ಚಿಕ್ಕ ಬ್ರೀಫ್‌ಕೇಸ್‌ನಲ್ಲಿ 12-12 ಡಬ್ಬಗಳನ್ನು ಜೋಡಿಸಲಾಗುತ್ತದೆ.
ಬ್ರೀಫ್‌ಕೇಸ್ ಹಿಡಿದು ಸಾದಾ ಡ್ರೆಸ್‌ನ ಅಧಿಕಾರಿ ಆ ಕಚೇರಿಯ ಹೊರಗೆ ನಿಂತ ಸಾದಾ
ಕಾರಿನಲ್ಲಿ  ವಿಮಾನ ನಿಲ್ದಾಣಕ್ಕೆ ಹೊರಡುತ್ತಾನೆ. ಗನ್ ಹಿಡಿದ ಭದ್ರತಾ ಅಧಿಕಾರಿಗಳು
ಹಿಂಬಾಲಿಸುತ್ತಾರೆ.

ಡಬ್ಬಗಳಲ್ಲಿ ಏನಿವೆ, ವಜ್ರಗಳೆ? ಅಲ್ಲ, ಅವು ಸ್ಟೆಂಟ್ (Stent) ಎಂಬ ವೈದ್ಯಕೀಯ ಸಾಧನಗಳು.
ಅವು ನಮ್ಮ ಬಾಲ್ ಪಾಯಿಂಟ್ ಪೆನ್ ಒಳಗಿನ ರೀಫಿಲ್ ಕೊಳವೆಗೆ ಸಿಕ್ಕಿಸುವಂಥ ಸ್ಪ್ರಿಂಗನ್ನು
ಹೋಲುತ್ತವೆ. ಆದರೆ ಅದಕ್ಕಿಂತ ಚಿಕ್ಕದು, ಅದಕ್ಕಿಂತ ಮಿದು. ಒಂದು ಬೆಂಕಿಕಡ್ಡಿಯನ್ನು
ನಾಲ್ಕಾಗಿ ಸೀಳಿದರೆ ಕಾಣುವಷ್ಟು ಸಪೂರ. ಆದರೆ ಸ್ಪ್ರಿಂಗ್ ಅಲ್ಲ, ಜಗ್ಗಿದರೆ ಹಿಗ್ಗಬಲ್ಲ
ಜಾಳಿಗೆ. ಅದರೊಳಗೆ ಇಡೀ ಬೆಂಕಿಕಡ್ಡಿಯನ್ನು ತೂರಿಸಬಹುದು.

ಒಂದು ಜಾಳಿಗೆಯ ಬೆಲೆ ಒಂದೂವರೆ ಲಕ್ಷ ರೂಪಾಯಿ. ಒಂದು ಬ್ರೀಫ್‌ಕೇಸಿನಲ್ಲಿ ಐದು ಕೋಟಿ
ರೂಪಾಯಿ ಮೌಲ್ಯದ ಸ್ಟೆಂಟ್‌ಗಳನ್ನು ಸಾಗಿಸಬಹುದು. ವೈದ್ಯಕೀಯ ತಂತ್ರಜ್ಞಾನದ ಪವಾಡವೇ
ಇದರಲ್ಲಿದೆ. ಜೇಡನ ಬಲೆಯ ಸಪೂರ ಎಳೆಯ ಗಾತ್ರದ ಉಕ್ಕು, ನಿಕ್ಕೆಲ್, ಟೈಟಾನಿಯಂ ಮಿಶ್ರಲೋಹದ
ತಂತಿಯ ತುಂಡುಗಳನ್ನು ನೂರಾರು ಕುಣಿಕೆಗಳ ಮೂಲಕ ಜಾಳಿಗೆಯಂತೆ ಹೆಣೆದಿರುತ್ತಾರೆ.

ಒಮ್ಮೆ ಹಿಗ್ಗಿಸಿದರೆ ಅದು ಸುಲಭಕ್ಕೆ ಕುಗ್ಗುವುದಿಲ್ಲ. ಮತ್ತೆ ಅದರಲ್ಲೂ ವೈವಿಧ್ಯಗಳಿವೆ:
ಪಾಲಿಯೆಸ್ಟರ್ ಸ್ಟೆಂಟ್, ಔಷಧವನ್ನು ಜಿನುಗಿಸಬಲ್ಲ ಸ್ಟೆಂಟ್, ಸ್ಮರಣಶಕ್ತಿಯುಳ್ಳ ಸ್ಟೆಂಟ್
ಇವೆ. ರಕ್ತದಲ್ಲಿ ತಾನಾಗಿ ಕ್ರಮೇಣ ಕರಗಿ ಕಣ್ಮರೆಯಾಗಬಲ್ಲ ಜೈವಿಕ ಸ್ಟೆಂಟ್ ಇದೆ.

ನಿಮ್ಮ ರಕ್ತದಲ್ಲಿ ಕೊಲೆಸ್ಟೆರಾಲ್ ಜಾಸ್ತಿ ಇದ್ದರೆ, ಹೃದಯದ ಸ್ನಾಯುಗಳ ಮಧ್ಯೆ ಸಾಗುವ
ಆರ್ಟರಿ (ಅಪಧಮನಿ) ಎಂಬ ಶುದ್ಧ ರಕ್ತನಾಳದಲ್ಲಿ ಅದು ಗರಣೆಗಟ್ಟಿ ಕೂರಬಹುದು. ರಕ್ತ ಸಲೀಸಾಗಿ
ಹೃದಯಕ್ಕೆ ಹೋಗಲಾರದು. ಹೃದಯ ಬಡಿತ ಆಗಾಗ ತಾಳ ತಪ್ಪುತ್ತಿರಬಹುದು. ಸುಸ್ತು, ಕಣ್ಣುಮಂಜು,
ಎದೆನೋವು ಬರುತ್ತಿರಬಹುದು. ನಾಳ ಪೂರ್ತಿ ಕಟ್ಟಿಕೊಂಡಾಗ ಹಠಾತ್ ಹಾರ್ಟ್‌ಫೇಲ್ ಆಗಬಹುದು,
ಇಲ್ಲವೆ ಲಕ್ವ ಹೊಡೆಯಬಹುದು.

ಕೊಲೆಪಾತಕ ಕೊಲೆಸ್ಟೆರಾಲನ್ನು ಕರಗಿಸಬಲ್ಲ ಔಷಧಗಳೂ ಕೆಲಸ ಮಾಡದಿದ್ದರೆ ಡಾಕ್ಟರರು
ಆಂಜಿಯೊಪ್ಲಾಸ್ಟಿ ಮಾಡುತ್ತಾರೆ. ಅಂದರೆ, ಕಾಲಿನ ಅಥವಾ ತೋಳಿನ ರಕ್ತನಾಳದೊಳಕ್ಕೆ ಸಪೂರ
ಕೊಳವೆಯನ್ನು ತೂರಿಸಿ ತಳ್ಳುತ್ತಾರೆ. ಅದು ಹೃದಯದ ಬಳಿಯ ಆರ್ಟರಿಯಲ್ಲಿ ಕಿಲುಬುಗಟ್ಟಿದ
ಜಾಗಕ್ಕೆ ಬಂದಾಗ, ಕೊಳವೆಯ ತುದಿಯನ್ನು ಬಲೂನಿನಂತೆ ಉಬ್ಬಿಸಬಹುದು.

ಆರ್ಟರಿಯಲ್ಲಿ ಗಂಟಾಗಿ ನಿಂತಿದ್ದ ಜಿಡ್ಡು ಅತ್ತಿತ್ತ ಚದುರುತ್ತದೆ. ರಕ್ತಸಂಚಾರ
ಸುಗಮವಾಗುತ್ತದೆ. ಆದರೆ ಕೆಲವು ದಿನಗಳ ಬಳಿಕ ಮತ್ತೆ ಅಲ್ಲಿ ಜಿಡ್ಡುಗಟ್ಟಬಹುದು. ಕೊಳವೆಯ
ತುದಿಯಲ್ಲಿ ಸ್ಟೆಂಟ್ ಜಾಳಿಗೆಯನ್ನು ಸಿಕ್ಕಿಸಿದ್ದರೆ ಅದರ ಕತೆಯೇ ಬೇರೆ. ಬಲೂನಿನಂತೆ
ಕೊಳವೆತುದಿ ಉಬ್ಬಿದಾಗ ಸ್ಟೆಂಟ್ ಅರಳುತ್ತದೆ. ಅಲ್ಲೇ ಆರ್ಟರಿಯ ಭಿತ್ತಿಯನ್ನು ಅಗಲಿಸಿ
ಹಿಡಿದು ಹಾಗೇ ನಿಂತಿರುತ್ತದೆ. ರಕ್ತಸಂಚಾರ ಸಲೀಸು. ಇಡೀ ಚಿಕಿತ್ಸೆಯೂ ಸಲೀಸು. ಸರ್ಜರಿ
ಬೇಡ, ರಕ್ತದಾನಿಗಳ ಮರ್ಜಿ ಬೇಡ, ಆಸ್ಪತ್ರೆಯಲ್ಲಿ ದೀರ್ಘಾವಧಿ ವಾಸ ಬೇಡ.

ಆದರೆ ಸ್ಟೆಂಟ್ ತುಂಬಾ ದುಬಾರಿಯಾಗಿತ್ತು. ಆರೇಳು ಸಾವಿರ ಮೌಲ್ಯದ ಸ್ಟೆಂಟ್ ಒಂದೂವರೆ ಎರಡು
ಲಕ್ಷ ರೂಪಾಯಿವರೆಗೆ ಬೆಲೆ ಹಿಗ್ಗಿಸಿಕೊಂಡೇ ರೋಗಿಯ ಆರ್ಟರಿಯೊಳಕ್ಕೆ ಹಿಗ್ಗಿ
ಕೂರುತ್ತಿತ್ತು. ಬೆಲೆಯನ್ನು ನಿಯಂತ್ರಣದಲ್ಲಿ ಇಡಬೇಕಿದ್ದ ‘ಜೀವ ಉಳಿಸುವ ಔಷಧಗಳ ರಾಷ್ಟ್ರೀಯ
ಪಟ್ಟಿ’ಯಲ್ಲಿ ಇದುವರೆಗೆ ಔಷಧಗಳ ಹೆಸರುಗಳು ಮಾತ್ರ ಇದ್ದವು. ಸ್ಟೆಂಟ್ ಎಂಬುದು ಔಷಧ
ಅಲ್ಲವಲ್ಲ? ಕಳೆದ ಫೆಬ್ರುವರಿ 14ರಂದು ಸರ್ಕಾರ ಸ್ಟೆಂಟ್‌ಗಳ ಬೆಲೆಯ ಮೇಲೆ ಲಗಾಮು
ಹಾಕುವುದಾಗಿ ಘೋಷಿಸಿತು.

ಮರುದಿನವೇ ಪ್ರಧಾನಿ ಮೋದಿಯವರು ಉತ್ತರ ಪ್ರದೇಶದ ಚುನಾವಣಾ ರ‍್ಯಾಲಿಯೊಂದರಲ್ಲಿ ಎತ್ತರದ
ದನಿಯಲ್ಲಿ ‘ಈ ಸ್ಟೆಂಟ್ ಏನಿದೆ, ಅದನ್ನು ಸರ್ಕಾರದ ಔಷಧ ನಿಯಂತ್ರಣ ಇಲಾಖೆಯೊಳಗೆ
ತೂರಿಸಿಬಿಟ್ಟೆವು. ಅದರ ಬೆಲೆ 45 ಸಾವಿರ ರೂಪಾಯಿ ಇದ್ದುದು ಇನ್ನು ಮೇಲೆ ಅದನ್ನು ಕೇವಲ
ಎಂಟು ಸಾವಿರ ರೂಪಾಯಿಗೆ ಮಾರಾಟ ಮಾಡಬೇಕಾಗುತ್ತದೆ. ಕಡುಬಡವರಿಗೂ ಅದು ನೆರವಿಗೆ ಬರುತ್ತದೆ’
ಎಂದು ಹೇಳಿದರು. ಮೊದಲೇ ಲೆಕ್ಕ ಹಾಕಿಟ್ಟಂತೆ ‘ಪ್ರೇಮಿಗಳ ದಿನ’ದಂದೇ ಬೆಲೆ ಬಿಗಿತವನ್ನು
ಘೋಷಿಸಿ, ಅತ್ತ ಔಷಧ ಸಚಿವ ಅನಂತಕುಮಾರ್ ಕೂಡ ‘ಇದೊಂದು ಹೃದಯ ತುಂಬಿದ ನಿರ್ಣಯ’ ಎಂದರು.

ಸಹಜವಾಗಿ ಲಾಭಕೋರ ಖಾಸಗಿ ಆಸ್ಪತ್ರೆಗಳಿಗೆ ಗಂಟಲು ಕಟ್ಟಿದಂತಾಯಿತು. ಕೋರ್ಟಿನಿಂದ
ತಡೆಯಾಜ್ಞೆ ತರುವ ಹಾಗೂ ಇಲ್ಲ. ಔಷಧಗಳಾಗಿದ್ದರೆ ಕತೆ ಬೇರೆ ಇರುತ್ತಿತ್ತು. ಕಳೆದ ವರ್ಷ 344
ಬಗೆಯ ಅಕ್ರಮ ಕಾಂಬಿನೇಶನ್ ಔಷಧಗಳಿಗೆ ಸರ್ಕಾರ ನಿಷೇಧ ಹಾಕಿದಾಗ ಎಲ್ಲ ಕಂಪನಿಗಳೂ ಒಂದಾಗಿ
ತಡೆಯಾಜ್ಞೆ ತಂದು ಕೂತಿವೆ. ಇಲ್ಲಿ ಹಾಗಲ್ಲ. ಸರ್ಕಾರ ನಿಷೇಧ ಹಾಕಲಿಲ್ಲ. ಮೂಲ ಬೆಲೆಯ ಮೇಲಿನ
ಲಾಭಕ್ಕೆ ಖೋತಾ ಇಲ್ಲ.

ಹಾಗಾಗಿ ಸ್ಟೆಂಟ್ ಉತ್ಪಾದಿಸುವ ಕಂಪನಿಗಳು ಉಸಿರೆತ್ತುವಂತಿಲ್ಲ. ಆದರೆ ರೋಗಿಯ ಮಂಚದ ಬಳಿ
ಸ್ಟೆಂಟ್  ಬೆಲೆ ಹಿಗ್ಗಾಮುಗ್ಗಾ ಏರುತ್ತಿತ್ತು. ಈಗ ಸ್ಟೆಂಟ್ ಬೆಲೆ ಹಠಾತ್ ಇಳಿದಾಗ
ಡಾಕ್ಟರ್‌ಗಳ, ಆಡಳಿತವರ್ಗದ ಹೃದಯ ಬಡಿತ ಜೋರಾಗಿದೆ. ಸದ್ಯಕ್ಕೇನೋ ‘ಸ್ಟಾಕ್ ಇಲ್ಲ’ ಎಂದು
ರೋಗಿಗಳನ್ನು ವಾರ್ಡ್‌ಗಳಲ್ಲಿ ಕೂರಿಸಿದ್ದಾರೆ. ವಾರ್ಡ್‌ಶುಲ್ಕದಲ್ಲೇ ಗಳಿಕೆ ಹೆಚ್ಚಿಸಬೇಕೆ
ವಿನಾ ಬೇರೆ ಏನೂ ಸ್ಟಂಟ್ ಮಾಡುವ ಹಾಗಿಲ್ಲ.

ಸ್ಟೆಂಟ್ ಬೆಲೆ ಏರುತ್ತಿರುವುದರ ವಿರುದ್ಧ  2012ರಲ್ಲೇ ದಿಲ್ಲಿಯ ವೀರೇಂದ್ರ ಸಾಂಗ್ವಾನ್
ಎಂಬ ವಕೀಲ ಹೈಕೋರ್ಟ್‌ನಲ್ಲಿ ಜನಹಿತ ಮೊಕದ್ದಮೆ ದಾಖಲಿಸಿದ್ದರು. ಮೂಲ ಬೆಲೆಗಿಂತ ಶೇ
654ರಷ್ಟು ಹೆಚ್ಚಾಗಿರುವುದು, ಆಮದು ಮಾಡಿಕೊಂಡ ಐದು ಸಾವಿರ ರೂಪಾಯಿಗಳ ಸ್ಟೆಂಟ್ 

[ms-stf '70387'] Sudhindra Haldodderi - Vijaya Karnataka

2017-02-07 Thread HAREESHKUMAR K Agasanapura
http://m.vijaykarnataka.com/edit-oped/columns/sudhindra-haldodderi/articleshow/57021050.cms

*ಕೃತಕ ಪ್ಲಾಸ್ಟಿಕ್‌ ಎಲೆಗಳ ಅಲುಗಾಟದಿಂದ 'ಎಲೆ'ಕ್ಟ್ರಿಸಿಟಿ*

Updated Feb 7, 2017, 06.26 PM IST

Whatsapp Facebook Google Plus
Twitter Email
SMS 

AAA

ಸುಧೀಂದ್ರ ಹಾಲ್ದೊಡ್ಡೇರಿ

'ಪ್ರಕೃತಿಯಿಂದಲೇ ನಮಗೆ ಮೊದಲ ಪಾಠ' ಎಂಬ ಮಾತನ್ನು ನೀವು ಶಾಲಾ ದಿನಗಳಿಂದಲೂ
ಕೇಳಿರುತ್ತೀರಿ. ಅಂದಿನಿಂದ ಇಂದಿನವರೆಗೆ ನೀವು ಕಲಿತ ಹೊಸ ವಿಷಯಗಳಲ್ಲಿ ಬಹುಪಾಲು
ನಿಸರ್ಗದತ್ತವಾಗಿ ಸಿಕ್ಕ ಕೊಡುಗೆಯೆಂದರೆ ಉತ್ಪ್ರೇಕ್ಷೆಯಲ್ಲ. ಹಿಂದೆ ಇದೇ ಅಂಕಣದಲ್ಲಿ
ಎಲೆಗಳನ್ನೇ ಇಂಧನ ಸೆಲೆಗಳನ್ನಾಗಿ ಬಳಸಿಕೊಳ್ಳುವ ಕುರಿತು ಜರಗುತ್ತಿರುವ ಸಂಶೋಧನೆಗಳ ಬಗ್ಗೆ
ಓದಿದ್ದು ನೆನಪಿರಬಹುದು. ಸೂರ್ಯನ ಬೆಳಕನ್ನು ಹೀರಿ 'ದ್ಯುತಿ ಸಂಶ್ಲೇಷಣೆ'ಯ ಮೂಲಕ
ಅತ್ಯುತ್ತಮ ಕಾರ್ಯದಕ್ಷ ತೆಯಲ್ಲಿ ಶಕ್ತಿ ಉತ್ಪಾದಿಸಿಕೊಳ್ಳಬಲ್ಲ ಕೃತಕ ಎಲೆಗಳ ನಿರ್ಮಾಣದ
ಬಗ್ಗೆ ಆಗ ಪ್ರಸ್ತಾಪಿಸಲಾಗಿತ್ತು. ಆ ತಂತ್ರಜ್ಞಾನವು ಇಂದಿನ ಅದೆಷ್ಟೋ ಸೌರ ಫಲಕಗಳನ್ನು
ಉತ್ತಮಗೊಳಿಸಿದೆ. ವಿದ್ಯುತ್‌ ಉತ್ಪಾದನಾ ವೆಚ್ಚವನ್ನು ತಗ್ಗಿಸುತ್ತಿದೆ. ಅತ್ಯಂತ ಕಡಿಮೆ
ಶಕ್ತಿ ಬಳಸಿಕೊಂಡು ಹಾರಾಡುವ ಪಕ್ಷಿಗಳೇ ಇಂದಿನ ವಿಮಾನಗಳ ವಾಯುಚಲನ ವಿಜ್ಞಾನದ ಅಭಿವೃದ್ಧಿಗೆ
ನೆರವಾಗಿವೆ. ಹಾಗೆಯೇ ಸಣ್ಣ ಪುಟ್ಟ ಕೀಟಗಳ ಕಾರ್ಯೋದ್ದೇಶಿ ಹಾರಾಟಗಳು ಚಾಲಕರಹಿತ ಪುಟಾಣಿ
ವಿಮಾನಗಳ ನಿರ್ಮಾಣಕ್ಕೆ ಸ್ಫೂರ್ತಿ ನೀಡಿವೆ. ವಸ್ತುವೊಂದನ್ನು ಅದುಮಿ, ತಿರುಚಿ ಆ
ಸಂದರ್ಭದಲ್ಲಿ ವರ್ಗಾವಣೆಯಾದ ಯಾಂತ್ರಿಕ ಶಕ್ತಿಯನ್ನು ವಿದ್ಯುತ್‌ ಶಕ್ತಿಯನ್ನಾಗಿ
ಪರಿವರ್ತಿಸುವ ವಿಷಯ ನಿಮಗೆ ಗೊತ್ತಿರಬಹುದು. 'ಪೀಝೋ-ಎಲೆಕ್ಟ್ರಿಕ್‌' ಸಾಮಗ್ರಿಗಳೆಂದೇ
ಹೆಸರಾದ ಇಂಥ ವಸ್ತುಗಳಿಂದ ನೆಲಗಂಬಳಿ ಅಥವಾ ಮಂಡಿ ಕವಚಗಳನ್ನು ನಿರ್ಮಿಸಿ, ಪ್ರತಿಯೊಂದು
ಹೆಜ್ಜೆ ಅಥವಾ ಚಲನೆಯಲ್ಲಿ ವ್ಯಯವಾಗುವ ಶಕ್ತಿಯನ್ನು ವಿದ್ಯುತ್‌ ಶಕ್ತಿಯಾಗಿ ಪರಿವರ್ತಿಸುವ
ನೂರಾರು ಪ್ರಯೋಗಗಳು ನಡೆದಿವೆ. ಇಂದಿನ ಅನೇಕ ಗ್ಯಾಜೆಟ್ಟುಗಳಲ್ಲಿ, ಕಂಪ್ಯೂಟರ್‌ ಚಿಪ್‌ಗಳು
ಮಿಳಿತವಾದ ದಿರಿಸುಗಳಲ್ಲಿ ಇಂಥ ಸಾಧನಗಳನ್ನು ಈಗಾಗಲೇ ಅಳವಡಿಸಲಾಗಿದೆ. ಇದೀಗ
ಪ್ರಸ್ತಾಪಿಸುತ್ತಿರುವ ವಿಷಯ ಕೃತಕ ಪ್ಲಾಸ್ಟಿಕ್‌ ಎಲೆಗಳಿಂದ ಸಮೃದ್ಧವಾದ ಕಂಬವೊಂದನ್ನು
ಗಾಳಿ ಬೀಸುವೆಡೆ ನೆಡುವುದು, ಬೀಸು ಗಾಳಿಗೆ ಅಲ್ಲಾಡುವ ಎಲೆಗಳು ರಭಸಕ್ಕನುಗುಣವಾಗಿ
ವಿದ್ಯುತ್‌ ಉತ್ಪಾದಿಸುವುದು, ಒಟ್ಟಾರೆ ಉತ್ಪತ್ತಿಯಾದ ವಿದ್ಯುತ್‌ ಶಕ್ತಿಯನ್ನು ಕಂಬವು
ಶೇಖರಿಸಿಕೊಳ್ಳುವುದು, ಅಗತ್ಯವಿದ್ದೆಡೆ ಈ ವಿದ್ಯುತ್‌ ಶಕ್ತಿಯನ್ನು ಸಾಗಿಸುವುದು -
ಇವಿಷ್ಟೂ ಇದೀಗ ಪ್ರಸ್ತಾಪಿಸುತ್ತಿರುವ ವಿಷಯದ ತಿರುಳು.

ಶರತ್ಕಾಲದಲ್ಲಿ ತಮ್ಮ ಬಹುತೇಕ ಎಲೆಗಳನ್ನುದುರಿಸುವ ಗಿಡಮರಗಳನ್ನು ಸಸ್ಯವಿಜ್ಞಾನದಲ್ಲಿ
'ಪತನಶೀಲ' (ಡೆಸಿಡ್ಯುವಸ್‌) ಎಂಬ ಗುಂಪಿಗೆ ವರ್ಗೀಕರಿಸುವ ಪರಿಪಾಠವಿದೆ. 'ಕಾಟನ್‌ವುಡ್‌'
ಎಂಬ ಎಲೆತುಂಬಿದ ಪತನಶೀಲ ಮರಗಳು ಉತ್ತರ ಅಮೆರಿಕದಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಈ ಮರಗಳ
ಎಲೆ ಮತ್ತು ಟೊಂಗೆಗಳನ್ನು ಬಹುತೇಕವಾಗಿ ಹೋಲುವ ಕೃತಕ ಮರಗಳನ್ನು ಅಮೆರಿಕದ 'ಅಯೋವಾ
ಸ್ಟೇಟ್‌ ಯೂನಿವರ್ಸಿಟಿ'ಯ ವಿಜ್ಞಾನಿಗಳು ವಿನ್ಯಾಸಗೊಳಿಸಿದ್ದಾರೆ. ಇದರ ಮುಖ್ಯ ಉದ್ದಿಶ್ಯ
ಗಾಳಿ ಬಂದಾಗ ಅಲುಗಾಡುವ ಎಲೆ ಮತ್ತು ಟೊಂಗೆಗಳ ಮೂಲಕ ವಿದ್ಯುತ್‌ ಶಕ್ತಿಯನ್ನು
ಉತ್ಪಾದಿಸುವುದು. ಅರೆ, ನಮ್ಮೂರ ಚಿತ್ರದುರ್ಗವೂ ಸೇರಿದಂತೆ ತಮಿಳುನಾಡಿನ ಸಾಕಷ್ಟು ತೀರ
ಪ್ರದೇಶಗಳಲ್ಲಿ ಬೃಹದಾಕಾರದ 'ಪವನ ವಿದ್ಯುತ್‌' ಯಂತ್ರಗಳು ಇದೇ ಕೆಲಸ ಮಾಡುತ್ತಿವೆಯಲ್ಲ ಎಂಬ
ಪ್ರಶ್ನೆ ನಿಮ್ಮ ಮುಂದಿರಬಹುದು. ಹೌದು, ಪವನ ವಿದ್ಯುತ್‌ ಯಂತ್ರಗಳು ತಮ್ಮ ಬೃಹದಾಕಾರದ
ರೆಕ್ಕೆಗಳ ತಿರುಗಾಟದ ಮೂಲಕ ವಿದ್ಯುತ್‌ ತಯಾರಿಸುತ್ತವೆ, ಆದರೆ ಇಂಥ ಯಂತ್ರಗಳ
ಕಾರ್ಯನಿರ್ವಹಣೆಗೆ ಎತ್ತರದ ಪ್ರದೇಶವಿರಬೇಕು, ಸಾಕಷ್ಟು ವೇಗದಲ್ಲಿ ಗಾಳಿ ಬೀಸಬೇಕು ಹಾಗೂ
ಇವುಗಳ ನಿರ್ವಹಣೆಗೆ ಸಾಕಷ್ಟು ಜಾಗ ಬೇಕು. ಜತೆಗೆ ಒಂದೇ ಯಂತ್ರ ಸ್ಥಾಪಿಸುವುದರಿಂದ ಹೆಚ್ಚು
ಲಾಭವಿಲ್ಲ, ಒಂದಷ್ಟು ಯಂತ್ರಗಳನ್ನು ನಿರ್ದಿಷ್ಟ ಮಾದರಿಯಲ್ಲಿ ನೆಟ್ಟರೆ ಮಾತ್ರ ಹೂಡಿಕೆಯ
ಹಣಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಇನ್ನು, ಗಾಳಿ ಬೀಸುವಾಗ ತಿರುಗುವ ಈ ಬೃಹದಾಕಾರದ
ರೆಕ್ಕೆಗಳ ನಡುವೆ ಹಕ್ಕಿ-ಪಕ್ಷಿಗಳು ಸಿಲುಕುವ ಸಂಭವ ಹೆಚ್ಚು. ಇದು ಪರಿಸರ ಪ್ರೇಮಿಗಳ
ಕೋಪಕ್ಕೂ ಕಾರಣವಾಗುತ್ತದೆ. ಇಂಥ ಪವನ ಯಂತ್ರಗಳ ಕಾರ್ಯಾಚರಣೆಗೆ ಗಾಳಿಯ ವೇಗ ನಿರ್ದಿಷ್ಟ
ಪ್ರಮಾಣದಲ್ಲಿರಬೇಕು, ಇಲ್ಲದಿದ್ದರೆ ಅವುಗಳ ತಿರುಗಾಟ ವ್ಯರ್ಥ. ಈ ಬಗೆಯ ಸಮಸ್ಯೆಯ
ನಿವಾರಣೆಗೆ ಗಾತ್ರದಲ್ಲಿ ಚಿಕ್ಕದಾದ ಆದರೆ ಬೀಸುಗಾಳಿಗೆ ಸಮಾನಾಂತರವಾಗಿ (ಭೂಚಕ್ರದಂತೆ)
ತಿರುಗುವ ಗಾಳಿಯಂತ್ರಗಳು ಆವಿಷ್ಕಾರವಾಗಿವೆ. ಹಾಗೆಯೇ ಯುರೋಪ್‌ ದೇಶಗಳಲ್ಲಿ
ಗಿರಗಿಟ್ಟಲೆಯಂತೆ ಮನೆಯ ಕಿಟಕಿಗೆ ಸಿಕ್ಕಿಸಬಹುದಾದ ಪುಟಾಣಿ ಗಾಳಿ ಯಂತ್ರಗಳೂ ಬಳಕೆಯಲ್ಲಿವೆ.
ಇದರಿಂದ ಸ್ಫೂರ್ತಿಗೊಂಡ ನಮ್ಮ ಕರ್ನಾಟಕ ರಾಜ್ಯದ ಕೆಲ ವಿದ್ಯಾರ್ಥಿಗಳು ಕಂಪ್ಯೂಟರಿನೊಳಗೆ
ಅಳವಡಿಸುವ ಪುಟಾಣಿ ಫ್ಯಾನಿಗೆ ಮಕ್ಕಳಾಟಿಕೆಯ ಗಿರಗಿಟ್ಟಲೆಯನ್ನು ಸಿಲುಕಿಸಿ, ಆ ವ್ಯವಸ್ಥೆಗೆ
ಬ್ಯಾಟರಿ ಜೋಡಿಸಿ ಮೊಬೈಲ್‌ ಫೋನ್‌ ಚಾರ್ಜ್‌ ಮಾಡಬಲ್ಲ ಯಂತ್ರವನ್ನು ರೂಪಿಸಿದ್ದರು.
ಇವುಗಳೆಲ್ಲದಕ್ಕೂ ಹೊರತಾದ, ಗಾಳಿಯ ಮೆಲು ಅಲುಗಾಟಕ್ಕೇ ಸ್ಪಂದಿಸುವ ಎಲೆ-ಟೊಂಗೆಗಳಂತೆ
ತೋರುವ ಯಂತ್ರಗಳ ಮೂಲಕ ವಿದ್ಯುತ್‌ ಉತ್ಪಾದಿಸುವ ಹೊಸ ಯೋಜನೆ ಅಯೋವಾ ಸ್ಟೇಟ್‌
ಯೂನಿವರ್ಸಿಟಿಯದು.

ಈ ಯೋಜನೆಯ ಮುಖ್ಯಸ್ಥರಾದ ಮೆಕ್‌ಕ್ಲೋಸ್ಕೇ ಅವರಿಗೆ ಇಂಥದೊಂದು ಆಲೋಚನೆ ಬಂದುದರ ಹಿನ್ನೆಲೆ
ಸ್ವಾರಸ್ಯಕರವಾಗಿದೆ. ಬೃಹತ್‌ ಗಾಳಿ ಯಂತ್ರಗಳಂತೆ ನಮ್ಮ ಮೊಬೈಲ್‌ ಫೋನ್‌ ಟವರ್‌ಗಳೂ ನಮ್ಮ
ಹೆದ್ದಾರಿಗಳಲ್ಲಿ, ಹೊಲ-ಗದ್ದೆ ತೋಟಗಳಲ್ಲಿ ಕಣ್ಣಿಗೆ ಢಾಳಾಗಿ ಕಾಣುತ್ತವೆ. ನಮ್ಮ ಪ್ರಕೃತಿ
ಸೌಂದರ್ಯದ ನೋಟಕ್ಕೆ ಅವು ಸದಾ ಎರವಾಗುತ್ತವೆ. ಇದನ್ನು ಮನಗಂಡ ಅಮೆರಿಕದ ಲಾಸ್‌
ವೇಗಾಸ್‌ನಗರದ ಆಯೋಜಕರು, ತಮ್ಮೂರ ಮೊಬೈಲ್‌ ಫೋನ್‌ ಟವರ್‌ಗಳಿಗೆ ಕೃತಕ ಎಲೆಗಳ
ಹೊದಿಕೆಯನ್ನು ಹಬ್ಬಿಸಿದ್ದಾರೆ. ದೂರದ ನೋಟಕ್ಕೆ ಅವುಗಳು ಎತ್ತರದ ಹಸಿರೆಲೆ ಮರಗಳಂತೆ
ಭಾಸವಾಗುತ್ತವೆ, ಅಂತೆಯೇ ನಗರ ಸೌಂದರ್ಯಕ್ಕೆ ಅವು ಅಡ್ಡಿ ತರುವುದಿಲ್ಲ. ಇಂಥ ದೃಶ್ಯಗಳನ್ನು
ಕಂಡಿದ್ದ ಮೆಕ್‌ಕ್ಲೋಸ್ಕೇ ಅವರು ಈ ಕೃತಕ ಎಲೆಗಳು ವಿದ್ಯುತ್‌ ಉತ್ಪಾದಿಸುವಂತಾದರೆ,
ಮೊಬೈಲ್‌ ಫೋನ್‌ ಟವರ್‌ನ ಕಾರ್ಯನಿರ್ವಹಣೆಗೇ ಬಳಸಬಹುದು ಎಂದು ಆಲೋಚಿಸಿದರು. ನಮ್ಮ
ವಿಶ್ವೇಶ್ವರಯ್ಯನವರು ಜೋಗ ಜಲಪಾತವನ್ನು ಕಂಡು 'ನೀರು ಧುಮುಕುವಾಗ ಎಷ್ಟೊಂದು ಶಕ್ತಿ
ವ್ಯರ್ಥವಾಗುತ್ತಿದೆ' ಎಂದು ಉದ್ಗರಿಸಿದರು, ಆನಂತರ ಜಲವಿದ್ಯುತ್‌ ಯೋಜನೆಯ ಕರಡನ್ನು
ಸಿದ್ಧಪಡಿಸಿದರು. ಇದೇ ರೀತಿ ಮೆಕ್‌ಕ್ಲೋಸ್ಕೇ ಅವರು ತಮ್ಮ ಕೃತಕ ಎಲೆ-ಟೊಂಗೆಗಳ ಮರ
ಸೃಷ್ಟಿಸುವ ಆಲೋಚನೆಗೆ ಚಾಲನೆ ನೀಡಿದರು. ಈ ಯಂತ್ರದ ಮೊದಲ ಮಾದರಿಯನ್ನು ಪ್ರಯೋಗಶಾಲೆಯಲ್ಲಿ
ನಿರ್ಮಿಸಲು ಸಹೋದ್ಯೋಗಿ ಕರ್ಟಿಸ್‌ ಮೋಶರ್‌ ನೆರವಾದರು. ಸದ್ಯಕ್ಕೆ ಈ ಯಂತ್ರದಲ್ಲಿ
ಹತ್ತಾರು ಎಲೆಗಳಿದ್ದು, ಮುಂದಿನ ದಿನಗಳಲ್ಲಿ ಇಡೀ ಮರದ ತುಂಬ ಸಹಸ್ರಾರು ಎಲೆಗಳನ್ನು ಹೊತ್ತ
ಕಾಂಡಗಳನ್ನು ಕಾಣಬಹುದೆಂಬ ವಾಗ್ದಾನ ಅವರದು. ಇಡೀ ವ್ಯವಸ್ಥೆಯ ಕಾರ್ಯದಕ್ಷ ತೆಯನ್ನು
ಹೆಚ್ಚಿಸಲು ಟೊಂಗೆಗಳ ಆಕಾರ-ಗಾತ್ರ-ಕೋನ ಮತ್ತು ಎಲೆಗಳ ಸೂಕ್ಷ ್ಮ ನಿರ್ಮಾಣದತ್ತ ಒತ್ತು
ನೀಡಬೇಕು. ಈ ನಿಟ್ಟಿನಲ್ಲಿ ಮುಂದುವರಿಯಲು ವಿಜ್ಞಾನಿ-ದ್ವಯರು 'ಕಾಟನ್‌ವುಡ್‌' ಮರದ ಟೊಂಗೆ

[ms-stf '70295'] ಮುಂದಿನ ವರ್ಷದಿಂದ ಕನಿಷ್ಠ ಕಲಿಕಾ ಮಟ್ಟ ಕಡ್ಡಾಯ | ಪ್ರಜಾವಾಣಿ

2017-02-05 Thread HAREESHKUMAR K Agasanapura
http://m.prajavani.net/article/2017_02_06/470438

*ಮುಂದಿನ ವರ್ಷದಿಂದ ಕನಿಷ್ಠ ಕಲಿಕಾ ಮಟ್ಟ ಕಡ್ಡಾಯ*

6 Feb, 2017

ಪ್ರಜಾವಾಣಿ ವಾರ್ತೆ








*ನವದೆಹಲಿ:* ಮುಂದಿನ ಶೈಕ್ಷಣಿಕ ವರ್ಷದಿಂದ (2017–18) ಎಲ್ಲ ಖಾಸಗಿ ಮತ್ತು ಸರ್ಕಾರಿ
ಶಾಲೆಗಳ ಪ್ರಾಥಮಿಕ ತರಗತಿಗಳ ವಿದ್ಯಾರ್ಥಿಗಳು ವರ್ಷದ ಕೊನೆಗೆ ಕೇಂದ್ರ ಮಾನವ ಸಂಪನ್ಮೂಲ
ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ  ನಿಗದಿಪಡಿಸಿರುವ ಕನಿಷ್ಠ ಕಲಿಕಾ ಮಟ್ಟವನ್ನು
ಹೊಂದುವುದು ಕಡ್ಡಾಯ.

‘ಶಾಲೆಗಳು, ಪೋಷಕರು ಮತ್ತು ಸಂಬಂಧಿಸಿದವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಪ್ರಾಥಮಿಕ ಶಾಲಾ
ವಿದ್ಯಾರ್ಥಿಗಳು (1ರಿಂದ 8ನೇ ತರಗತಿವರೆಗೆ) ಹೊಂದಿರಬೇಕಾದ ಕನಿಷ್ಠ ಕಲಿಕಾ ಮಟ್ಟವನ್ನು
ನಿಗದಿ ಪಡಿಸಿದ್ದೇವೆ. ಇದನ್ನು ಶಿಕ್ಷಣ ಹಕ್ಕು (ಆರ್‌ಟಿಇ) ನಿಯಮಗಳ ಭಾಗವನ್ನಾಗಿ
ಮಾಡುತ್ತೇವೆ. 2017–18ರಿಂದ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಹೊಸ ನಿಯಮವನ್ನು
ಪಾಲಿಸುವುದು ಕಡ್ಡಾಯ’ ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್‌ ಜಾವಡೇಕರ್‌ ಭಾನುವಾರ ಹೇಳಿದರು.

‘ಉತ್ತಮ ಜ್ಞಾನ ಸಂಪಾದನೆಗಾಗಿ  ಗುಣಮಟ್ಟದ ಶಿಕ್ಷಣ ಪಡೆಯಲು ಇದು ವಿದ್ಯಾರ್ಥಿಗಳಿಗೆ
ನೆರವಾಗಲಿದೆ. ಮಕ್ಕಳಿಗೆ ಬೋಧಿಸುವ ಶಿಕ್ಷಕರಿಗೂ ಸಹಕಾರಿಯಾಗಲಿದೆ. ಇದು ಆರ್‌ಟಿಇ ನಿಯಮದ
ಭಾಗವಾಗಿರಲಿರುವುದರಿಂದ ಶೈಕ್ಷಣಿಕ ವರ್ಷದ ಕೊನೆಗೆ ಪ್ರತಿ ವಿದ್ಯಾರ್ಥಿ/ನಿ ಕನಿಷ್ಠ ಕಲಿಕಾ
ಮಟ್ಟವನ್ನು ಸಾಧಿಸುವಂತೆ ಶಾಲೆಗಳು ಮಾಡಬೇಕಾಗುತ್ತದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು
‘ಪ್ರಜಾವಾಣಿ’ಗೆ ತಿಳಿಸಿದರು.

* ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಕನಿಷ್ಠ
ಕಲಿಕಾ ಮಟ್ಟದ ಮಾನದಂಡ ನಿಗದಿಪಡಿಸಿದೆ. ಇದಕ್ಕಾಗಿ 118 ಪುಟಗಳ ವರದಿಯನ್ನು ಅದು
ಸಿದ್ಧಪಡಿಸಿದೆ.
* ಪರಿಸರ ಅಧ್ಯಯನ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಹಿಂದಿ, ಇಂಗ್ಲಿಷ್‌ ಮತ್ತು ಉರ್ದು
ವಿಷಯಗಳಲ್ಲಿ 1ರಿಂದ 8ರವರೆಗಿನ ಪ್ರತಿ ತರಗತಿಗೆ ಕಲಿಕಾ ಮಟ್ಟ ನಿಗದಿಪಡಿಸಲಾಗಿದೆ.

*ಕನಿಷ್ಠ ಕಲಿಕಾ ಮಟ್ಟ ಮಾನದಂಡ*
* ಎಂಟನೇ ತರಗತಿವರೆಗಿನ ಶಿಕ್ಷಣ ಮುಗಿಸುವ ಹೊತ್ತಿಗೆ ವಿದ್ಯಾರ್ಥಿ/ನಿಗೆ  ರಾಜಕೀಯ,
ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಬೇಕು ಮತ್ತು ಇವು
ತನ್ನ ನಿತ್ಯ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಗುರುತಿಸಬೇಕು

* ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ, ರಾಜ್ಯ ಮತ್ತು ಕೇಂದ್ರ ಮಟ್ಟಗಳಲ್ಲಿ ಅದರ
ಕಾರ್ಯನಿರ್ವಹಣೆ ಬಗ್ಗೆ ಜ್ಞಾನ ಪಡೆದಿರಬೇಕು.

* ಲೋಕಸಭಾ ಚುನಾವಣಾ ಪ್ರಕ್ರಿಯೆ ಸೇರಿದಂತೆ ಸಾಮಾಜಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ
ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಮಾಜದ ವಿವಿಧ ವರ್ಗಗಳ ಕೊಡುಗೆಗಳನ್ನು
ಗುರುತಿಸಬೇಕು.

* ಎಂಟನೇ ತರಗತಿಯ ವಿದ್ಯಾರ್ಥಿಗಳು ಸಂವಿಧಾನದ ಮೌಲ್ಯಗಳನ್ನು ಗ್ರಹಿಸುವಂತೆ ಶಿಕ್ಷಕರು
ಮಾಡಬೇಕು. ಅವರ ಕುಟುಂಬ ಹಾಗೂ ಸರ್ಕಾರ ನಿರ್ವಹಿಸುವ ಸಾಮಾಜಿಕ–ಆರ್ಥಿಕ ಪಾತ್ರದ ಬಗ್ಗೆಯೂ
ಅವರಿಗೆ ತಿಳಿ ಹೇಳಬೇಕು.

Hareeshkumar K
GHS Huskuru
Malavalli TQ
Mandya Dt
9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


Re: [ms-stf '70284'] IT Calculator for the year2016-17

2017-02-05 Thread HAREESHKUMAR K Agasanapura
thanks girish sir, usefull

On Sun, Feb 5, 2017 at 8:27 PM, Ramesh H N 
wrote:

> Nice sir
>
> On 04-Feb-2017 5:05 pm, "Girish Vismaya" 
> wrote:
>
>> Hi Friends
>>  here by I am uploading the simple *IT CALCULATOR SOFTWARE 2016-17.* plz
>> make use of it. Iam looking forward u r feed back/comments/suggestions.it
>> help me to improve it in coming days.
>>
>> with regards
>> Girish KP
>> asst teacher
>> GJC Besagarahalli, Maddur tq,Mandya.
>>
>> --
>> 1. If a teacher wants to join STF, visit http://karnatakaeducation.org.
>> in/KOER/en/index.php/Become_a_STF_groups_member
>> 2. For STF training, visit KOER - http://karnatakaeducation.org.
>> in/KOER/en/index.php
>> 4. For Ubuntu 14.04 installation, visit http://karnatakaeducation.org.
>> in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequentl
>> y_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>



-- 
Hareeshkumar k
GHS HUSKURU
MALAVALLITQ
9880328224
e-mail_ harihusk...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '70036'] ನ್ಯಾಶ್, ವಿಲ್‌ರನ್ನು ರಾಮಾನುಜನ್‌ಗೆ ಹೋಲಿಸಬಹುದು ಎನ್ನುವುದಾದರೆ ನಮ್ಮ ರಾಮಾನುಜನ್ ಎಂಥ ಮಹಾನ್ ವ್ಯಕ್ತಿಯಿದ್ದಿರಬಹುದು?! – ವಿಶ್ವವಾಣಿ

2017-01-28 Thread HAREESHKUMAR K Agasanapura
https://www.vishwavani.news/%e0%b2%a8%e0%b3%8d%e0%b2%af%e0%b2%be%e0%b2%b6%e0%b3%8d-%e0%b2%b5%e0%b2%bf%e0%b2%b2%e0%b3%8d%e2%80%8c%e0%b2%b0%e0%b2%a8%e0%b3%8d%e0%b2%a8%e0%b3%81-%e0%b2%b0%e0%b2%be%e0%b2%ae%e0%b2%be%e0%b2%a8/

*ನ್ಯಾಶ್, ವಿಲ್‌ರನ್ನು ರಾಮಾನುಜನ್‌ಗೆ ಹೋಲಿಸಬಹುದು ಎನ್ನುವುದಾದರೆ ನಮ್ಮ ರಾಮಾನುಜನ್ ಎಂಥ
ಮಹಾನ್ ವ್ಯಕ್ತಿಯಿದ್ದಿರಬಹುದು?!*

 Saturday, 24.12.2016 ಪ್ರತಾಪ್ ಸಿಂಹ
 No Comments




Share


Posted In : ಅಂಕಣಗಳು , ಬೆತ್ತಲೆ
ಜಗತ್ತು 

“He can be compared to a great mathematician like Srinivasa
Ramanujan!’ಹಾಗಂತ ಅಮೆರಿಕದ ಖ್ಯಾತ ಗಣಿತಶಾಸ್ತ್ರಜ್ಞ ಜಾನ್ ಫೋರ್ಬ್‌ಸ್‌ ನ್ಯಾಶ್
ಅವರನ್ನು ಉಲ್ಲೇಖಿಸಿ “Beautiful Mind’ ಎಂಬ ಅವರ ಜೀವನಚರಿತ್ರೆಯಲ್ಲಿ ಹೇಳಲಾಗುತ್ತದೆ.
1997ರಲ್ಲಿ ಬಿಡುಗಡೆಯಾದ “Good Will Hunting’  ಎಂಬ ಚಿತ್ರದಲ್ಲೂ ಅದರ ಮುಖ್ಯ
ಪಾತ್ರಧಾರಿ ವಿಲ್ ಹಂಟಿಂಗ್ ಬಗ್ಗೆ  “Will might have the potential to be as great
a mathematician as the legendary Srinivasa Ramanujan’  ಎಂಬ ಹೋಲಿಕೆ ಬರುತ್ತದೆ!
ಅಂದರೆ ನಮ್ಮ ಶ್ರೀನಿವಾಸ ರಾಮಾನುಜನ್ ಎಂಥ ಮಹಾನ್ ವ್ಯಕ್ತಿಯಾಗಿದ್ದಿರಬಹುದು? ನೀವೇ ಯೋಚನೆ
ಮಾಡಿ, ‘ಸಚಿನ್ ತೆಂಡೂಲ್ಕರ್‌ನನ್ನು ಡಾನ್ ಬ್ರಾಡ್ಮನ್‌ಗೆ ಹೋಲಿಸಬಹುದು ಅಂದರೆ’ ಡಾನ್
ಬ್ರಾಡ್ಮನ್  Bench mark ಎಂದಂತಾಯಿತು. ಅದನ್ನೇ ಸರಳವಾಗಿ ಹೇಳುವುದಾದರೆ 100 ಅಂಕಗಳಿಗೆ
ಪರೀಕ್ಷೆ ನಡೆಯುತ್ತಿದೆ ಎಂದಾದರೆ ಗರಿಷ್ಠ ಮಿತಿಯಾದ ‘100’  Bench mark! ಅಷ್ಟಕ್ಕೂ
ನೂರಕ್ಕಿಂತ ಹೆಚ್ಚು ಅಂಕ ಪಡೆಯಲು ಸಾಧ್ಯವಿಲ್ಲ.

ಹಾಗಿರುವಾಗ ‘ಗುಡ್ ವಿಲ್ ಹಂಟಿಂಗ್’ ಚಿತ್ರದಲ್ಲಿ ಬರುವ ಯುವ ಗಣಿತಶಾಸ್ತ್ರಜ್ಞ ವಿಲ್
ಹಂಟಿಂಗ್‌ನದ್ದು ಕಾಲ್ಪನಿಕ ಪಾತ್ರವೇ ಆಗಿದ್ದರೂ ಆತ ಶ್ರೀನಿವಾಸ ರಾಮಾನುಜನ್ ಅವರಂಥ ಮಹಾನ್
ಗಣಿತಶಾಸ್ತ್ರಜ್ಞನಾಗುವ ಶಕ್ಯತೆ ಹೊಂದಿದ್ದಾನೆ ಎನ್ನುತ್ತಾರೆಂದರೆ ರಾಮಾನುಜನ್ ಅವರೇ
 Bench mark ಎಂದಾಗುತ್ತದಲ್ಲವೆ? ಅಷ್ಟೇ ಅಲ್ಲ, 1994ರಲ್ಲಿ ಅರ್ಥಶಾಸ್ತ್ರಕ್ಕಾಗಿ ನೊಬೆಲ್
ಪ್ರಶಸ್ತಿ ಪಡೆದ ಮ್ಯಾಥಮೆಟೀಶಿಯನ್ ಜಾನ್ ನ್ಯಾಶ್ ಅವರನ್ನು ‘ಮಹಾನ್ ಗಣಿತಜ್ಞ
ರಾಮಾನುಜನ್‌ರಿಗೆ ಹೋಲಿಸಬಹುದು’ಎನ್ನುತ್ತಾರೆಂದರೆ ರಾಮಾನುಜನ್ ಎಷ್ಟು ಗ್ರೇಟ್ ಇರಬಹುದು?
ಅಬ್ಬಾ! ಅವರದ್ದು ಗಣಿತದ ಇತಿಹಾಸದಲ್ಲೇ ಅತ್ಯಂತ ಕುತೂಹಲಕಾರಿ ಕಥೆ. ಇಂಗ್ಲೆಂಡಿನ
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿದ್ದ ಜಿ.ಎಚ್. ಹಾರ್ಡಿಂಗ್ ಅದಾಗಲೇ ವಿಶ್ವವಿಖ್ಯಾತ
ಗಣಿತ ಶಾಸ್ತ್ರಜ್ಞನೆನಿಸಿಕೊಂಡಿದ್ದರು. ಅಂಥ ಗಣಿತಶಾಸ್ತ್ರಜ್ಞರಿಗೆ ಉತ್ತರ ಬಯಸಿ ಪತ್ರಗಳು
ಬರುವುದು ಸಹಜ.

ಭಾರತದಿಂದಲೂ ಒಂದು ಪತ್ರ ಬಂದಿತ್ತು. ಮದ್ರಾಸ್ ಪೋರ್ಟ್ ಟ್ರಸ್ಟ್ ನಲ್ಲಿ ಗುಮಾಸ್ತರಾಗಿರುವ
ಶ್ರೀನಿವಾಸ ರಾಮಾನುಜನ್ ಎಂಬ ಹೆಸರಿನಲ್ಲಿ ಬಂದಿದ್ದ ಆ ಹತ್ತು ಪುಟಗಳ ಪತ್ರದಲ್ಲಿ 120
ಥೇರಮ್‌ಗಳಿದ್ದವು ಹಾಗೂ ಅವುಗಳನ್ನು ರೂಪಿಸಿದ್ದು ತಾನೇ ಎಂದು ಪ್ರತಿಪಾದಿಸಲಾಗಿತ್ತು.
ನಿರಾಸಕ್ತಿಯಿಂದಲೇ ಅವುಗಳತ್ತ ಕಣ್ಣುಹಾಯಿಸಿದ ಹಾರ್ಡಿ ಪತ್ರವನ್ನು ಪಕ್ಕಕ್ಕೆ ಹಾಕಿದರು.
ಆದರೆ ಆ ಪತ್ರದಲ್ಲಿ ಗಣಿತದ ಸೂತ್ರಗಳ ಬಗ್ಗೆ ಬರೆಯಲಾಗಿದ್ದ ವಿಷಯಗಳು ಹಾರ್ಡಿಯವರು ಮತ್ತೆ
ಅದರತ್ತ ದೃಷ್ಟಿಹಾಯಿಸುವಂತೆ ಮಾಡಿದವು. ಈ ಬಾರಿ ಸಹ ಗಣಿತಶಾಸ್ತ್ರಜ್ಞ ಜೆ.ಇ. ಲಿಟ್ಲಿ‌ವುಡ್
ಅವರನ್ನೂ ಬರಮಾಡಿಕೊಂಡ ಹಾರ್ಡಿ, ರಾಮಾನುಜನ್ ಕಳುಹಿಸಿದ್ದ ಪತ್ರವನ್ನು ಕೂಲಂಕಷವಾಗಿ
ಪರಾಮರ್ಶೆ ಮಾಡಿದರು. 1913ರಲ್ಲಿ ನಡೆದ ಈ ಘಟನೆ ಗಣಿತ ಜಗತ್ತಿನ ಹೊಸ ಮೈಲುಗಲ್ಲು.
ರಾಮಾನುಜನ್ ವಿವರಿಸಿದ್ದ ಕೆಲವು ಥೇರಮ್‌ಗಳು ವಿಚಿತ್ರವಾಗಿ ಕಾಣುತ್ತಿದ್ದರೂ ಅವುಗಳಲ್ಲಿ
ನಿಜಾಂಶ ವಿಲ್ಲದೇ ಹೋಗಿದ್ದರೆ ಅವುಗಳನ್ನು ಸೃಷ್ಟಿಸುವ ಕಲ್ಪನೆಯೇ ಹೊಳೆಯುತ್ತಿರಲಿಲ್ಲ
ಎಂಬುದು ಹಾರ್ಡಿಯವರಿಗೆ ಮನವರಿಕೆ ಯಾಯಿತು.

ಹೀಗೆ ಮದ್ರಾಸ್‌ನ ಯಾವುದೋ ಮೂಲೆಯಲ್ಲಿ ಕೊಳೆಯುತ್ತಿದ್ದ ಪ್ರತಿಭೆಗೆ ಜಾಗತಿಕ ಮನ್ನಣೆ
ದೊರೆಯು ವಂತಾಯಿತು. 1887, ಡಿಸೆಂಬರ್ 22ರಂದು ತಮಿಳುನಾಡಿನಲ್ಲಿ ಜನಿಸಿದ ರಾಮಾನುಜನ್
ಅವರದ್ದು ತೀರಾ ಬಡ ಕುಟುಂಬ. ಕುಂಬಕೋಣಂನಲ್ಲಿ ಅಕೌಂಟೆಂಟ್ ಆಗಿದ್ದ ಅವರ ತಂದೆಗೆ
ಬರುತ್ತಿದ್ದ ಸಂಬಳದಲ್ಲಿ ಕುಟುಂಬ ನಿರ್ವಹಣೆಯೇ ಕಷ್ಟವಾಗಿತ್ತು. ಆದರೆ ಓದಿನಲ್ಲಿ ಮುಂದಿದ್ದ
ರಾಮಾನುಜನ್, 1903ರಲ್ಲಿ ನಡೆದ ಹೈಸ್ಕೂಲ್‌ನ ಅಂತಿಮ ಪರೀಕ್ಷೆಯಲ್ಲಿ ಮೊದಲಿಗರಾಗಿ ಪಾಸಾದ
ಕಾರಣ ಕಾಲೇಜಿಗೆ ಸೇರಲು ಸ್ಕಾಲರ್‌ಶಿಪ್ ಸಿಕ್ಕಿತು. ಅದರಲ್ಲೂ A Synopsis of Elementary
Results in Pure and Applied Mathematics  ಎಂಬ ಪುಸ್ತಕ ರಾಮಾನುಜನ್ ಅವರನ್ನು
ಚಿಂತೆಗೆ ಹಚ್ಚಿತು.

ಆ ಪುಸ್ತಕ ಗಣಿತದ ಲೆಕ್ಕಗಳ ಫಲಿತಾಂಶವನ್ನೇನೋ ನೀಡುತ್ತಿತ್ತು. ಆದರೆ ಅದರಲ್ಲಿ ಪ್ರೂಫ್‌ಗಳೇ
ಇರಲಿಲ್ಲ. ಅಂದರೆ ತರ್ಕ ಸಮೇತ ವಿವರಿಸುವ ಬದಲು ಬರೀ ಫಲಿತಾಂಶಗಳನ್ನಷ್ಟೇ ನೀಡಲಾಗಿತ್ತು.
ಹಾಗಾಗಿ ಸ್ವತಃ ಲಾಜಿಕ್ ಹುಡುಕಲು ಹೊರಟ ರಾಮಾನುಜನ್ ಗಣಿತದೊಳಗೇ ಮುಳುಗಿಹೋದರು. ಹಾಗೆ
ಗಣಿತದಲ್ಲಿ ಅತಿ ಹೆಚ್ಚು ಅಂಕ ಪಡೆದರೂ ಇತರ ಸಬ್ಜೆಕ್ಟ್‌ಗಳನ್ನು ನಿರ್ಲಕ್ಷಿಸಿದ ಕಾರಣ
ಪರೀಕ್ಷೆಯಲ್ಲಿ ಪಲ್ಟಿ ಹೊಡೆದರು. 

[ms-stf '69396'] ಮುರಿದು ಕಟ್ಟಬನ್ನಿ ಹೊಸ ನಾಳೆಗಳನು | ಪ್ರಜಾವಾಣಿ

2017-01-13 Thread HAREESHKUMAR K Agasanapura
http://m.prajavani.net/article/2017_01_12/465171

*ಮುರಿದು ಕಟ್ಟಬನ್ನಿ ಹೊಸ ನಾಳೆಗಳನು*

12 Jan, 2017

ನಾಗೇಶ್ ಹೆಗಡೆ








ಬೆಳಕು ನೀಡುವ ಮರಗಳ ಬಗ್ಗೆ ಗೊತ್ತೆ? ಬೀದಿಯ ಎರಡೂ ಬದಿಗೆ ಅಂಥದ್ದೇ ಮರಗಳನ್ನು ಬೆಳೆಸಿದರೆ
ವಿದ್ಯುತ್ ದೀಪಗಳೇ ಬೇಕಾಗಿಲ್ಲ. ವಿಜ್ಞಾನಿಗಳು ಇಪ್ಪತ್ತು ವರ್ಷಗಳ ಹಿಂದೆಯೇ ಪುಟ್ಟ ಸಸ್ಯಗಳ
ಮೇಲೆ ಈ ಪ್ರಯೋಗವನ್ನು ನಡೆಸಿದ್ದರು. ಮಿಂಚು ಹುಳದ ಗುಣಾಣುವನ್ನು ತೆಗೆದು ಅದನ್ನು ತಂಬಾಕಿನ
ಸಸ್ಯದ ಡಿಎನ್‌ಎಯೊಳಕ್ಕೆ ತೂರಿಸಿ ಕತ್ತಲಲ್ಲೂ ಪಳಪಳಿಸಬಲ್ಲ ಹೊಸ ಸಸ್ಯಗಳನ್ನು ರೂಪಿಸಿದ್ದರು.

ಅಷ್ಟೇಕೆ, ಕೋತಿಯ ಭ್ರೂಣಕ್ಕೂ ಅದೇ ಜೀನನ್ನು ಸೇರಿಸಿ ಮರಿಕೋತಿಯನ್ನೂ ಮಿನುಗಿಸಿದ್ದರು. ಈಗ
ಅದೇ ತಂತ್ರವನ್ನು ಇನ್ನಷ್ಟು ಸುಧಾರಿಸಿ, ಹೂಕುಂಡಗಳಲ್ಲಿ ಬೆಳೆಸಬಹುದಾದ ವಿವಿಧ ಸಸ್ಯಗಳಲ್ಲಿ
ಬೆಳಕು ಮಿಂಚುವಂತೆ ಮಾಡಿದರು. ಎಲೆ, ಮೊಗ್ಗುಗಳಷ್ಟೇ ಅಲ್ಲ, ಹೂಗಳೂ ಕತ್ತಲಲ್ಲಿ
ಮಿನುಗುತ್ತಿದ್ದರೆ ಎಷ್ಟು ಚೆನ್ನಾಗಿರುತ್ತದೆ. ಕುಂಡಗಳಿಗೆ ಬಂದ ಚಂದ ಆಮೇಲೆ ಮರಗಳಿಗೆ
ಬಾರದೆ?

ಎತ್ತರ ಬೆಳೆಯಬಲ್ಲ ವೃಕ್ಷಗಳ ಜೀವಕೋಶದಲ್ಲೂ ಮಿಂಚುಹುಳದ ಲೂಸಿಫೆರೇಸಿ ಜೀನನ್ನು ತೂರಿಸಿದರೆ,
ಅಹಾ, ಕೊಂಬೆರೆಂಬೆಗಳಲ್ಲಿ ತಾರಾಲೋಕ. ಮಿನುಗುವ ಕೋತಿಗಳನ್ನೂ ಅಂಥ ಮರಕ್ಕೇರಿಸಿ
ಸ್ವಪ್ನನಗರಿಯನ್ನೇ ನಿರ್ಮಿಸಬಹುದು. ಕತ್ತಲಲ್ಲಿ ಬೀದಿ ಬೆಳಗಿಸಿ ವಿದ್ಯುತ್ ವೆಚ್ಚವನ್ನು
ಉಳಿಸಿ, ಕಳ್ಳಕಾಕರ ಮತ್ತು ಬೀದಿ ಕಾಮಣ್ಣರ ಕನಸುಗಳನ್ನೆಲ್ಲ ಮಣ್ಣುಪಾಲು ಮಾಡಬಹುದು.

ಇಂಥ ಹೊಸ ಹೊಸ ಐಡಿಯಾಗಳಿಗೆ ‘ಮುರಿದು ಕಟ್ಟುವ ತಂತ್ರಜ್ಞಾನ’ (ಡಿಸ್ರಪ್ಟಿವ್ ಇನ್ನೊವೇಶನ್)
ಎನ್ನುತ್ತಾರೆ. ಬೀದಿಬದಿಯ ಹಳೇ ಮರಗಳನ್ನೆಲ್ಲ ಮುರಿದು ಕೆಡವಿ ಹೊಸ ಮರಗಳನ್ನು ಬೆಳೆಸುವ
ವಿಷಯ ಇಲ್ಲಿ ಉದಾಹರಣೆಯಾಗಿ ಬಂದಿದೆ ಅಷ್ಟೆ. ವಿಜ್ಞಾನ ತಂತ್ರಜ್ಞಾನ ಲೋಕದಲ್ಲಿ ಹೀಗೆ
ಮುರಿದು ಕಟ್ಟುವ ಸಾಹಸಗಳು ಚರಿತ್ರೆಯುದ್ದಕ್ಕೂ ಕಾಣಸಿಗುತ್ತವೆ.

1879ರಲ್ಲಿ ಕಾರ್ಲ್ ಬೆಂಝ್ ಎಂಬಾತ ಮೋಟಾರು ಗಾಡಿಗೆ ಪೇಟೆಂಟ್ ಪಡೆದಿದ್ದೇ ಕುದುರೆಗಾಡಿ,
ಸಾರೋಟುಗಳು ಮೂಲೆಗುಂಪಾದವು. ಕಂಪ್ಯೂಟರ್ ಬಂದಮೇಲೆ ಟೈಪ್‌ರೈಟರ್‌ಗಳ ಇತಿಶ್ರೀಯಾಯಿತು;
ಇಂಟರ್‌ನೆಟ್ ಬಂದಮೇಲೆ ಅಂಚೆಪೆಟ್ಟಿಗೆಗಳು ಕಾಣೆಯಾದವು.

ಸ್ಮಾರ್ಟ್ ಫೋನ್ ಬಂದಮೇಲೆ ರೇಡಿಯೊ, ಹ್ಯಾಮ್ ರೇಡಿಯೊ, ಅಲಾರ್ಮ್ ಗಡಿಯಾರ, ಡೈರಿ,
ಕ್ಯಾಲೆಂಡರು, ಕೊನೆಗೆ ಕಂಪ್ಯೂಟರೂ ನಿರುಪಯುಕ್ತ ಎನ್ನುವಲ್ಲಿಗೆ ಬಂದು ಮುಟ್ಟಿದೆ
(1876ರಲ್ಲಿ ಅಲೆಕ್ಸಾಂಡರ್ ಗ್ರಹಾಂ ಬೆಲ್ ಎಂಬಾತ ಟೆಲಿಫೋನನ್ನು ರೂಪಿಸಿ ಸಂಪರ್ಕ
ಕ್ರಾಂತಿಗೆ ನಾಂದಿ ಹಾಡಿದ್ದು, 1903ರಲ್ಲಿ ರೈಟ್ ಸಹೋದರರು ಹಾರುವ ಯಂತ್ರವನ್ನು ರೂಪಿಸಿ
ಇಡೀ ಮನುಕುಲಕ್ಕೇ ರೆಕ್ಕೆ ಮೂಡಿಸಿದ್ದು- ಇವೆಲ್ಲ ಕ್ರಾಂತಿಕಾರಿ ಸಂಗತಿಗಳೇ ಹೌದಾದರೂ ಇವು
ಆಗ ಅಸ್ತಿತ್ವದಲ್ಲಿದ್ದ ಯಾವುದನ್ನೂ ಭಗ್ನ ಮಾಡಲಿಲ್ಲ; ಹಾಗಾಗಿ ಮುರಿದು ಕಟ್ಟಿದ ಶ್ರೇಯ
ಅವಕ್ಕಿಲ್ಲ). ಈಗಂತೂ ತಂತ್ರಜ್ಞಾನಕ್ಕೆ ಅದೆಂಥ ವೇಗ ಬಂದಿದೆ ಎಂದರೆ ಭವಿಷ್ಯ ನಮ್ಮ ಮೇಲೆ
ಹೇಗೆ ಮುಗಿಬೀಳಲಿದೆ ಎಂದು ಊಹಿಸಲೂ ಸಾಧ್ಯವಿಲ್ಲ.

ಅದಕ್ಕೇ ಕಳೆದವಾರ ತಿರುಪತಿಯಲ್ಲಿ ನಡೆದ 104ನೇ ಸೈನ್ಸ್ ಕಾಂಗ್ರೆಸ್ ಮೇಳದಲ್ಲಿ ಪ್ರಧಾನಿ
ಮೋದಿಯವರು ‘ಅಂಥ ಭಗ್ನಕಾರಕ ತಂತ್ರಜ್ಞಾನದ ಮೇಲೆ ಕಣ್ಣಿಡಿ’ ಎಂದು ಭಾರತೀಯ ವಿಜ್ಞಾನಿಗಳಿಗೆ
ಸಲಹೆ ನೀಡಿದರು (ಅವರೇ ಸ್ವತಃ ನಿರ್ಮನೀಕರಣದ ಮಂತ್ರದಂಡವನ್ನು ಪ್ರಯೋಗಿಸಿ ಇಡೀ ದೇಶದ
ಗೃಹಿಣಿಯರ ಒಬ್ಬಜ್ಜಿ ಉಳಿತಾಯಗಳನ್ನೆಲ್ಲ ಭಗ್ನ ಮಾಡಿದ್ದನ್ನು ಇಲ್ಲಿ ಕಡೆಗಣಿಸೋಣ). ಇಂದಿನ
ಗಣಕ ತಂತ್ರಶಕ್ತಿ ಮತ್ತು ಯಂತ್ರಜಗತ್ತು- ಈ ಎರಡರ ವಿರಾಟ್ ಬೆಸುಗೆಯ ಬಗ್ಗೆ
ಎಚ್ಚರಾಗಿರಬೇಕೆಂದು ಅಲ್ಲಿ ನೆರೆದಿದ್ದ ಆರು ಸಾವಿರ ವಿಜ್ಞಾನ ಪ್ರತಿನಿಧಿಗಳಿಗೆ ಕರೆ
ಕೊಟ್ಟರು.

ಅವರು ಅಲ್ಲಿ ಈ ಮಾತುಗಳನ್ನು ಹೇಳುತ್ತಿರುವಾಗ ಅಮೆರಿಕದ ಲಾಸ್ ವೆಗಾಸ್ ನಗರದಲ್ಲಿ ನಾಳಿನ
ತಂತ್ರಜ್ಞಾನಗಳ ವಿಶ್ವಮೇಳ ಅದೇ ತಾನೆ ಆರಂಭವಾಗಿತ್ತು. ಜಗತ್ತಿನ ಎಲ್ಲ ಹೈಟೆಕ್ ಕಂಪನಿಗಳು
ತಂತಮ್ಮ ಸಾಧನ ಸಲಕರಣೆಗಳನ್ನು ಅಲ್ಲಿ ಪ್ರದರ್ಶನಕ್ಕೆ ತಂದಿದ್ದರು. ಅಲ್ಲೊಂದು ಮಾಯಾವಾಸ್ತವ,
ಅತಿವಾಸ್ತವ ಲೋಕವೇ ಮೈದಳೆದಿತ್ತು. ಕ್ಯಾಲೆಂಡಿರನ ಹಾಗೆ ಸುರುಳಿ ಬಿಚ್ಚಿ ತೂಗು ಹಾಕಬಹುದಾದ
ಟಿ.ವಿ ಇತ್ತು.

ಓಡಾಡುತ್ತ ಮಾತಾಡುವ ಫ್ರಿಜ್ ಇತ್ತು. ‘ನುಗ್ಗೇಕಾಯಿ ಕೂಟು ಮಾಡುವುದು ಹೇಗೆ?’ ಎಂದು ನೀವು
ಕೂತಲ್ಲೇ ಆ ತಂಗಳು ಪೆಟ್ಟಿಗೆಯತ್ತ ತಿರುಗಿ ಕೇಳಿದರೆ ಸಾಕು, ಅದು ತಾನಾಗಿ ಜಾಲತಾಣಗಳನ್ನು
ಹುಡುಕಿ, ರಿಸಿಪಿ ತೆಗೆದು ಉತ್ತರ ಹೇಳುತ್ತದೆ ಅಥವಾ ಬೇಕಿದ್ದ ಸಾಮಗ್ರಿ ಏನೇನೆಂದು ಪಟ್ಟಿ
ಮಾಡಿ ತನ್ನ ಬಾಗಿಲ ಮೇಲೆಯೇ ಮೂಡಿಸುತ್ತದೆ. ಪೆಟ್ಟಿಗೆಯೊಳಗೆ ನುಗ್ಗೇಕಾಯಿ ಇದೆಯೊ ಇಲ್ಲವೊ,
ಉದ್ದಿನ ಬೇಳೆಯ ಸ್ಟಾಕ್ ಎಷ್ಟಿದೆ ಎಂಬುದನ್ನು ಹೇಳುತ್ತದೆ. ಅಷ್ಟರಲ್ಲಿ ನಿಮ್ಮ ಮೂಡ್
ಬದಲಾಗಿದ್ದರೆ ಸಮೀಪದ ದರ್ಶಿನಿ ಹೊಟೆಲ್‌ನ ನಂಬರನ್ನು ಡಯಲ್ ಮಾಡುತ್ತಿತ್ತೇನೊ.

ಲಾಸ್‌ವೆಗಾಸ್‌ನ ಸಿಇಎಸ್ ಮೇಳದಲ್ಲಿ ಪ್ರದರ್ಶನಕ್ಕಿರುವ ತರಾವರಿ ರೋಬಾಟ್‌ಗಳಂತೂ
ಕೇಳಲೇಬೇಡಿ. ತೊಟ್ಟಿಲ ಮಗುವಿನಿಂದ ಹಿಡಿದು ಲಕ್ವ ಹೊಡೆದ ಅಜ್ಜನವರೆಗೆ ಎಲ್ಲರ ಸೇವೆ
ಮಾಡಬಲ್ಲ, ಕತೆ ಹೇಳಿ ರಂಜಿಸಬಲ್ಲ, ನೀರು-ವಿದ್ಯುತ್ತಿನ ಬಿಲ್ ಸಂದಾಯ ಮಾಡಬಲ್ಲ
ರೋಬಾಟ್‌ಗಳು. ಇವೆಲ್ಲವುಗಳ ಜೊತೆ, ನಾಳಿನ ಬುದ್ಧಿವಂತ ಮನೆಗಳೂ ಅಲ್ಲಿದ್ದವು.

ಅದರೊಳಕ್ಕೆ ಹೋಗಿ ಅಲ್ಲಿದ್ದ ಒಂದೇ ಒಂದು ರಿಮೋಟ್‌ನಿಂದ ಮನೆಯೊಳಗಿನ ಎಲ್ಲವಕ್ಕೂ ಚಾಲನೆ
ಕೊಡುವ ವ್ಯವಸ್ಥೆ ಇತ್ತು. ಟಿ.ವಿ, ಮಿಕ್ಸಿ, ಫ್ರಿಜ್, ದೀಪದ ಬಲ್ಬ್, ಕಿಟಕಿ ಪರದೆ, ಕೊನೆಗೆ
ಮುಚ್ಚಿದ ಬಾಗಿಲತ್ತ ಅದೇ ರಿಮೋಟ್ ಹಿಡಿದರೆ ಹೊರಗಡೆಯ ತಾಪಮಾನ ಎಷ್ಟಿದೆ, ಯಾರು ಭೇಟಿಗೆ
ಬಂದಿದ್ದಾರೆ ಎಲ್ಲವೂ ಗೊತ್ತಾಗುತ್ತಿತ್ತು.

ಇನ್ನು ತೊಡುವ, ಧರಿಸುವ ಕಂಪ್ಯೂಟರ್‌ಗಳ ಕತೆಯೇ ಬೇರೆ. ವಾಚು, ಅಂಗಿಬಟನ್ನು, ಪಾದರಕ್ಷೆ,
ತೋಳಿನ ತ್ವಚೆಗೇ ಅಂಟಿಕೂರಬಲ್ಲ ಪ್ಯಾಚು ಎಲ್ಲವೂ ಡಿಜಿಟಲ್ ಆಗಿರುತ್ತವೆ. ಕನ್ನಡಕದ ಫ್ರೇಮಿನ
ಮೂಲೆಯಲ್ಲೇ ಪುಟ್ಟ ಬಿಂದುವಿನಂತೆ ಕೂತು ನಿಮ್ಮ ಕಣ್ಣಿನ ಅಕ್ಷಿಪಟದ ಹಿಂದಿನ ರಕ್ತನಾಳಗಳನ್ನೂ
ಗಮನಿಸುತ್ತ ನಿಮ್ಮ ಆರೋಗ್ಯದ ಮೇಲೆ ಕಣ್ಣಿಡುವ (ಕಣ್‌ಡಾಕ್ಟರ್) ಬೇಕೆ?

ನಿಮಗೆ ಬೇಡವಾಗಿದ್ದರೆ ಮನೆಯಲ್ಲಿ ಒಬ್ಬಳೇ ಕೂತಿರಬೇಕಾದ ನಿಮ್ಮ ಅಸ್ವಸ್ಥ ಅಮ್ಮನಿಗೆ ಅದನ್ನು
ತೊಡಿಸಿ ನೀವು ಕೆಲಸಕ್ಕೆ ಹೋಗಬಹುದಲ್ಲ? ಅಥವಾ ಸರಿರಾತ್ರಿಯಲ್ಲಿ ವಾಹನ ಓಡಿಸಬೇಕಾದ ಚಾಲಕ
ತಾನು ಕೂತಲ್ಲೇ ತೂಕಡಿಸದ ಹಾಗೆ 

[ms-stf '69013'] ಗಡಿಯೊಳಗಿನ ವೈರಿಯತ್ತ ಅಕ್ಷೋಹಿಣಿ ಕ್ಷಿಪಣಿ | ಪ್ರಜಾವಾಣಿ

2017-01-02 Thread HAREESHKUMAR K Agasanapura
http://m.prajavani.net/article/2016_12_29/462300

*ಗಡಿಯೊಳಗಿನ ವೈರಿಯತ್ತ ಅಕ್ಷೋಹಿಣಿ ಕ್ಷಿಪಣಿ*

29 Dec, 2016

ನಾಗೇಶ್ ಹೆಗಡೆ








ಹೊಸ  ವರ್ಷದ ಸ್ವಾಗತಕ್ಕೆ ಆರು ದಿನ ಬಾಕಿ ಇದ್ದಾಗಲೇ ಭಾರತ ಭರ್ಜರಿ ಪಟಾಕಿಯನ್ನು ಆಕಾಶಕ್ಕೆ
ಹಾರಿಸಿ ಹರ್ಷದ ಹೊನಲನ್ನೇ ಚಿಮ್ಮಿಸಿದೆ. ತಲೆಯಲ್ಲಿ ಪರಮಾಣು ಬಾಂಬನ್ನು ಹೊತ್ತು ವಾಯುಮಂಡಲದ
ಆಚೆಗೆ ಏರಿ ಹೋಗಿ ಅಲ್ಲಿಂದ ಬೇಕೆಂದ ದಿಕ್ಕಿಗೆ ಗುಂಡುಕಲ್ಲಿನಂತೆ ಬೀಳಬಲ್ಲ ‘ಅಗ್ನಿ-5’
(ಅಂದರೆ ‘ಅಗ್ನಿ’ಯ ಐದನೇ ಅವತಾರ, ‘ಅಗ್ನಿಪಂಚಮ’) ಕ್ಷಿಪಣಿ ಸಾಧನೆ ಮತ್ತೊಮ್ಮೆ ಸಾಬೀತಾಗಿದೆ.

ಈ ಹಿಂದೆ ಮೂರು ಬಾರಿಯೂ ಇದು ಪ್ರಯೋಗಾರ್ಥ ಯಶಸ್ವಿಯಾಗಿ ನೆಗೆದು ಸಾವಿರಾರು ಕಿ.ಮೀ. ಆಚಿನ
ಸಮುದ್ರಕ್ಕೆ ಬಿದ್ದಿತ್ತು. ಈ ಬಾರಿಯ ವಿಶೇಷ ಏನೆಂದರೆ, ಅದನ್ನು ದೊಡ್ಡ ಪಿಪಾಯಿಯಂತೆ ಟ್ರಕ್
ಮೇಲೆ ಕೂರಿಸಿ ಹಾರಿಸಿದ್ದರು. ದಿಲ್ಲಿಯ ಗಣತಂತ್ರ ಪರೇಡಿನ ಟ್ಯಾಬ್ಲೊ ಮೇಲೆ ಕೂತಂತೇ ಹಾರಿದ
ಹಾಗೆ.

ಹೀಗೆ ಸಂಚಾರಿ ವಾಹನದಲ್ಲಿ ಇಟ್ಟು ಹಾರಿಸಲು ಕಾರಣ ಇಷ್ಟೆ: ಭಾರತ ಎಂದೂ ತಾನಾಗಿ ಮೊದಲ
ಪರಮಾಣು ಶಸ್ತ್ರವನ್ನು ಬಳಸುವುದಿಲ್ಲ ಎಂದು ಪಣ ತೊಟ್ಟಿದೆ. ಹಾಗೆಂದು, ಬೇರೆ ಯಾರಾದರೂ ನಮ್ಮ
ಮೇಲೆ ಅಣ್ವಸ್ತ್ರ ಪ್ರಯೋಗಿಸಿದರೆ ‘ನಾವು ಸರ್ವನಾಶವಾದರೂ ನಿಮ್ಮನ್ನು ಸುಡುತ್ತೇವೆ’ ಎಂಬ
ಎಚ್ಚರಿಕೆಯನ್ನು ಅಕ್ಕಪಕ್ಕದವರಿಗೆ ಬಿಂಬಿಸಬೇಕಿದೆ.

ಇದಕ್ಕೆ ‘ಮರುದಾಳಿ ಸಾಮರ್ಥ್ಯ’ ಎನ್ನುತ್ತಾರೆ. ನಮ್ಮ ಪರಮಾಣು ಕ್ಷಿಪಣಿಗಳು ಮೊದಲ ದಾಳಿಯ
ನಂತರವೂ ಸುರಕ್ಷಿತ ಉಳಿದರೆ ಮಾತ್ರ ಅದು ಸಾಧ್ಯವಾಗುತ್ತದೆ. ಅಂದರೆ, ನಮ್ಮ ಅಣ್ವಸ್ತ್ರ
ಎಲ್ಲಿದೆ ಎಂಬುದು ಗೊತ್ತಾಗಬಾರದು. ಇಂದು ಇಲ್ಲಿದೆ, ನಾಳೆ ಇನ್ನೆಲ್ಲೋ ಇದೆ
ಅನ್ನುವಂತಿರಬೇಕು. ನಮ್ಮ ‘ಅಗ್ನಿ ಪಂಚಮ’ ಈಗ ಎಲ್ಲೆಂದರಲ್ಲಿ ಠಿಕಾಣಿ ಹೂಡಬಲ್ಲ ಜಂಗಮ ಬಾಂಬ್
ಎಂಬುದನ್ನೂ ತೋರಿಸಿದಂತಾಗಿದೆ.

ಅಗ್ನಿ ಮಾದರಿಯನ್ನು ‘ಗುಂಡು ಕ್ಷಿಪಣಿ’ (ಬ್ಯಾಲಿಸ್ಟಿಕ್ ಮಿಸೈಲ್) ಎನ್ನುತ್ತಾರೆ.  ದೊಡ್ಡ
ಗುಂಡನ್ನು ಮೇಲಕ್ಕೆ, ಗಗನದಾಚೆಗೆ ಎಸೆದು ಅದು ತನ್ನ ತೂಕದಿಂದಾಗಿಯೇ ಕೆಳಕ್ಕೆ ಬೀಳುವಂತೆ
ಮಾಡುವ ತಂತ್ರವದು. ನಿಂತಲ್ಲಿಂದ ಎತ್ತರಕ್ಕೆ ನೆಗೆಯುವ ಸಾಮರ್ಥ್ಯ ಅದಕ್ಕೆ ಮುಖ್ಯವೇ
ಶಿವಾಯ್, ಗುರಿ ಅಷ್ಟೊಂದು ನಿಖರವಾಗಿರುವುದಿಲ್ಲ. ಕ್ಷಿಪಣಿ ನಿಂತಿರುವ ಕೋನವನ್ನು ಕೊಂಚ
ಬದಲಿಸಿದರೆ ಅದು ಹಾರಿಸಿದ ಗುಂಡು ಬೀಜಿಂಗ್ ಬದಲು ಟೋಕಿಯೊ ಇಲ್ಲವೆ ಮಾಸ್ಕೊ ಇಲ್ಲವೆ
ಮೊಂಗೋಲಿಯಾದ ರಾಜಧಾನಿ ಉಲಾನ್‌ಬಾತರ್ ಅಥವಾ ಈಜಿಪ್ತಿನ ಪಿರಮಿಡ್ಡೊ ಎಲ್ಲೋ ಬೀಳಬಹುದು.

ಗುಂಡುಕ್ಷಿಪಣಿಯ ಬದಲು ವಿಮಾನದಂತೆ ನೆಲಕ್ಕೆ ಸಮಾನಾಂತರವಾಗಿ ದಿಕ್ಕನ್ನು ಬದಲಿಸುತ್ತ ಸಾಗುವ
ಕ್ಷಿಪಣಿಗೆ ‘ಕ್ರೂಸ್ ಮಿಸೈಲ್’ ಎನ್ನುತ್ತಾರೆ. ಇದಕ್ಕೆ ವಿಮಾನದಂತೆ ಪುಟ್ಟ ರೆಕ್ಕೆ, ಚಿಕ್ಕ
ಚುಕ್ಕಾಣಿ ಕೂಡ ಇರುತ್ತದೆ. ನೆಲ, ಜಲ, ವಾಯು ಮೂರರಿಂದಲೂ ಇದನ್ನು ಚಿಮ್ಮಿಸಬಹುದು. ಏಳೆಂಟು
ನೂರು ಕಿ.ಮೀ. ದೂರದವರೆಗೆ ಚಲಿಸಿಯೂ ನಿರ್ದಿಷ್ಟ ಗುರಿ ತಲುಪುವಂತಿರಬೇಕು.

ಪರಮಾಣು ಬಾಂಬನ್ನು ಹೊತ್ತು ಸಾಗಬಲ್ಲ ‘ನಿರ್ಭಯ’ ಹೆಸರಿನ ಅಂಥ ಕ್ರೂಸ್ ಕ್ಷಿಪಣಿಯನ್ನು
ತಯಾರಿಸಲು ನಮ್ಮ ವಿಜ್ಞಾನಿಗಳು ಶ್ರಮಿಸುತ್ತಲೇ ಇದ್ದಾರೆ. ಹಿಂದಿನ ಮೂರು ಯತ್ನಗಳು
ವಿಫಲವಾಗಿದ್ದವು. ಮೊನ್ನೆ ಅಗ್ನಿಯನ್ನು ಉಡಾಯಿಸುವ ಎರಡು ದಿನ ಮೊದಲು ಅದೇ ಒಡಿಶಾ
ಕರಾವಳಿಯಲ್ಲಿ ‘ನಿರ್ಭಯ’ವನ್ನು ಹಾರಿಸುವ ನಾಲ್ಕನೆಯ ಯತ್ನ ನಡೆದಿತ್ತು. ಅದೂ ದಿಕ್ಕು ತಪ್ಪಿ
ಚಿಮ್ಮಿದ್ದರಿಂದ ಎರಡೇ ನಿಮಿಷಗಳಲ್ಲಿ ಅದನ್ನು ಸ್ಫೋಟಿಸಲಾಯಿತು.

ಅಣ್ವಸ್ತ್ರ ಹೊತ್ತಿರುವ ಕ್ರೂಸ್ ಕ್ಷಿಪಣಿ ಅತ್ಯಂತ ಕರಾರುವಾಕ್ಕಾಗಿ ಕೆಲಸ ಮಾಡಬೇಕು. ವೈರಿಯ
ರಡಾರ್‌ಗೆ ಗೊತ್ತಾಗದ ಹಾಗೆ ನೆಲಕ್ಕೆ ಸಮೀಪದಲ್ಲೇ ಅತಿ ವೇಗದಲ್ಲಿ ಸಾಗಬೇಕಾದ ಇದು ದಿಕ್ಕು
ತಪ್ಪಿ ನಮ್ಮ ರಾಷ್ಟ್ರದಲ್ಲೇ ಸಿಡಿದರೆ? ಪಾಕಿಸ್ತಾನದ ಬಳಿ ‘ಬಾಬರ್’ ಕ್ರೂಸ್
ಕ್ಷಿಪಣಿಗಳಿವೆ. ರಷ್ಯ ಮತ್ತು ಚೀನಾದ ತಂತ್ರಜ್ಞಾನದಿಂದ ತಯಾರಾಗಿದ್ದು. ಅವು ದಾರಿಯಲ್ಲಿ
ಸಾಗುತ್ತಲೆ ಕಿರು ರೆಕ್ಕೆಗಳನ್ನು ಬಿಚ್ಚಿಕೊಂಡು 700 ಕಿ.ಮೀ. ದೂರ ಬಂದು ಸ್ಫೋಟವಾಗುತ್ತವೆ.

ನಮ್ಮಲ್ಲೂ ರಷ್ಯದ ನೆರವಿನಿಂದ ನಿರ್ಮಸಲಾದ ‘ಬ್ರಹ್ಮೋಸ್’ ಕ್ರೂಸ್ ಕ್ಷಿಪಣಿ ಇದೆ
(ಬೆಂಗಳೂರಿನ ಬಸವನಗುಡಿ ನ್ಯಾಶನಲ್ ಕಾಲೇಜಿನ ಮೈದಾನದಲ್ಲಿ ನಾಳೆಯಿಂದ ನಾಲ್ಕು ದಿನ ಅವುಗಳ
ಮಾಡೆಲ್‌ಗಳನ್ನು ನೋಡಬಹುದು; ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಲ್ಲಿ ವಿವಿಧ ಏರೋಸ್ಪೇಸ್
ಸಾಧನ ಸಾಧನೆಗಳ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ).

ನಾವು ಪಾಕಿಸ್ತಾನಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮದೇ ‘ಅರಿಹಂತ್’ ಪರಮಾಣು ಇಂಧನ
ಚಾಲಿತ ಜಲಾಂತರ್ಗಾಮಿಯನ್ನು ನಿರ್ಮಿಸಿ ಈ ವರ್ಷ ಆಗಸ್ಟ್‌ನಲ್ಲಿ ಚಾಲನೆ ಕೊಟ್ಟಿದ್ದೇವೆ.
ರಷ್ಯದಿಂದ ಖರೀದಿಸಿದ ‘ಚಕ್ರ’ ಜಲಾಂತರ್ಗಾಮಿಯ ಮಾದರಿಯಲ್ಲಿ ನಾವೇ ಸ್ವಂತ ನಿರ್ಮಿಸಿದ್ದು.
ಆಳ ಸಮುದ್ರದಿಂದ ಆಕಾಶಕ್ಕೆ ನೆಗೆಯಬಲ್ಲ ಪರಮಾಣು ಗುಂಡು ಕ್ಷಿಪಣಿಯನ್ನು ಅದರಲ್ಲಿ
ಹೂಡಿಡಬಹುದು. ಕ್ರೂಸ್ ಕ್ಷಿಪಣಿಯ ಹಾಗೆ ನೀರೊಳಕ್ಕೇ ಸಾಗಬಲ್ಲ ಟಾರ್ಪಿಡೊ ಇವೆಯಾದರೂ ವೈರಿ
ಹಡಗುಗಳ ನಿರ್ನಾಮವಷ್ಟೇ ಅವುಗಳ ಗುರಿ ಆಗಿರುವುದರಿಂದ ಅದರಲ್ಲಿ ಅಣ್ವಸ್ತ್ರ
ಹೂಡಿರುವುದಿಲ್ಲ.

ಒಂದು ದೇಶದ ನೆಲಸೇನೆ, ಜಲಸೇನೆ, ವಾಯುಸೇನೆ ಹೀಗೆ ಮೂರರ ಬಳಿಯೂ ಪರಮಾಣು ಶಸ್ತ್ರಾಸ್ತ್ರ
ಇದ್ದರೆ ಅದಕ್ಕೆ ‘ತ್ರಿಬಲ’ ಮಿಲಿಟರಿ ಎನ್ನುತ್ತಾರೆ. ನಮ್ಮಲ್ಲಿ ವೈರಿಯ ಮೇಲೆ ಬಾಂಬ್
ಹಾಕಬಲ್ಲ ವಿಮಾನಗಳಿವೆ, ಜಲಾಂತರ್ಗಾಮಿ ಇದೆ. ನೆಲದಿಂದಲೇ ಚಿಮ್ಮಿಸಬಲ್ಲ ಅಣ್ವಸ್ತ್ರ ತನಗೂ
ಬೇಕೆಂದು ನಮ್ಮ ಆರ್ಮಿ ಒತ್ತಡ ಹಾಕುತ್ತಿದೆ. ಅದಕ್ಕೆ ‘ನಿರ್ಭಯ’ ಸದ್ಯಕ್ಕಿಲ್ಲ.

ಮಿಲಿಟರಿ ತಂತ್ರಜ್ಞಾನವನ್ನು ಬದಿಗಿಡಿ; ತೋಳ್‌ಬಲ ಎಷ್ಟೇ ಇದ್ದರೂ ಅದರ ಅಂತಿಮ ಗುರಿ
ವಿನಾಶವೇ ತಾನೆ? ಮನುಷ್ಯನ ಬುದ್ಧಿಶಕ್ತಿಯ ಪರಾಕಾಷ್ಠೆಯನ್ನು ತೋರಿಸಬಲ್ಲ ಅದ್ಭುತ ಸಾಧನೆಗಳು
2016ರಲ್ಲಿ ಸಾಕಷ್ಟು ಆಗಿವೆ. ಅವುಗಳಲ್ಲಿ ಅತ್ಯಂತ ಮಹತ್ವದ ವೈಜ್ಞಾನಿಕ ಸಾಧನೆ ಎಂದರೆ ಜೀನ್
ಎಡಿಟಿಂಗ್.

ಯಾವುದೇ ಜೀವಿಯ ಹುಟ್ಟುಗುಣವನ್ನು ಅದು ಹುಟ್ಟುವ ಮೊದಲೇ ತಿದ್ದುಪಡಿ (ಎಡಿಟ್) ಮಾಡಬಲ್ಲ
ಸಾಮರ್ಥ್ಯ ಮನುಷ್ಯನಿಗೆ ಎಟಕಿದೆ. ಉದಾಹರಣೆಗೆ, ಮನುಷ್ಯರಿಗೆ ಅನುಕೂಲವಾಗುವಂತೆ ಸೊಳ್ಳೆಯ
ಗುಣಾಣುವನ್ನು ತಿದ್ದುಪಡಿ 

[ms-stf '68401'] ಮಗು ಮೊದಲ ವಿಜ್ಞಾನಿ | ಪ್ರಜಾವಾಣಿ

2016-12-16 Thread HAREESHKUMAR K Agasanapura
http://m.prajavani.net/article/2016_11_21/453594

*ಮಗು ಮೊದಲ ವಿಜ್ಞಾನಿ*

21 Nov, 2016

ಎಂ. ಆರ್‌. ನಾಗರಾಜು








ವಿಜ್ಞಾನಿಗಿರಬೇಕಾದ ಅನೇಕ ಲಕ್ಷಣಗಳನ್ನು ನಾವು ಕಲಿಸಬೇಕಾಗಿಯೇ ಇಲ್ಲ. ಅವೆಲ್ಲವೂ ಅವರು
ಹುಟ್ಟುವಾಗಲೇ ಹೊತ್ತು ತಂದಿರುತ್ತಾರೆ. ಅವರು ಅದನ್ನು ಕಳೆದುಕೊಳ್ಳದ ಹಾಗೆ ನಾವು
ನೋಡಿಕೊಳ್ಳಬೇಕು; ಅಷ್ಟೇ. ಕುತೂಹಲ, ಅದಮ್ಯ ಉತ್ಸಾಹ ಸ್ವಸಾಮರ್ಥ್ಯಗಳಿಸಿಕೊಳ್ಳುವ,
ಗಳಿಸಿಕೊಂಡಿದ್ದನ್ನು ಸಾಧಿಸಿ ತೋರಿಸುವ ಕುತೂಹಲ ಕಲಿಕೆಯಿಂದ ಬಂದದ್ದಲ್ಲ. ಅದು ನಿಸರ್ಗ
ನಮಗೆ, ನಿಮೆಗೆಲ್ಲರಿಗೂ ನೀಡಿದ ಬಳುವಳಿ. ದೇಹದ ಒಂದಂಗ ಊನವಾದರೂ ಉಳಿದ ಅಂಗಗಳಿಂದ ಅದನ್ನು
ಸರಿದೂಗಿಸಿಕೊಳ್ಳುವ ಕೌಶಲವೂ ಹುಟ್ಟಿನಿಂದ ನಮಗೆ ಬಂದಿದೆ. ಸದುದ್ದೇಶದಿಂದಲೋ,
ದುರುದ್ದೇಶದಿಂದಲೋ ಯಾರೋ ಮಾಡುವ ಅವಹೇಳನವನ್ನೇ ನಂಬಿ ನಾವು ನಿಸರ್ಗದ ಕಾಣಿಕೆಯನ್ನು ಕಣ್ಮರೆ
ಮಾಡಿದ್ದೇವೆ.

ಮಕ್ಕಳು ಐನ್‌ಸ್ಟೈನರಂತಹ ಖ್ಯಾತ ವಿಜ್ಞಾನಿಗಳೊಡನೆ ಯಾವುದೇ ಕೀಳರಿಮೆ / ಮೇಲರಿಮೆಗಳ
ಪರಿವೆಯೇ ಇಲ್ಲದೆ ಬೆರೆಯುತ್ತಿದ್ದುದು ನಿಜ. ಇದರಲ್ಲಿ ವಿಜ್ಞಾನಿಯ ಸೌಜನ್ಯದ ಪಾತ್ರದ
ಹಾಗೆಯೇ ಕಿರಿಯರ ಕುತೂಹಲದ ಪಾತ್ರವೂ ಇದೆ. ಐನ್‌ಸ್ಟೈನ್‌ರನ್ನು ನೋಡಿ ಮಗುವೊಂದು ಕಿಟಾರನೆ
ಕಿರುಚಿದಾಗ ಪೋಷಕರು ಕಂಗಾಲಾದರು. ಐನ್‌ಸ್ಟೈನ್ ತಪ್ಪು ತಿಳಿವರೆಂಬ ಅಂಜಿಕೆ ಅವರನ್ನು
ಬಾಧಿಸಿತು. ನಿಜವಾಗಿ, ಪ್ರಾಮಾಣಿಕ ಪ್ರತಿಕ್ರಿಯೆಯನ್ನು ತೋರಿದವನು ನೀನೇ ಎಂದು ಮಗುವಿನತ್ತ
ನೋಡಿ ಮುಗುಳು ನಕ್ಕರು ವಿಜ್ಞಾನಿ.

ಹೌದು, ಮಕ್ಕಳು ವಿಜ್ಞಾನಿಗಳೊಡನೆ ಇರಬಯಸುವಷ್ಟೇ ತೀವ್ರತೆಯಿಂದ ವಿಜ್ಞಾನಿಗಳೂ
ಬೆರೆಯುತ್ತಾರೆ. ಸಾರ್ವಜನಿಕರು ಹೋಗಲು ಸಂಕೋಚಪಡುತಿದ್ದ ರಾಯಲ್ ಸೊಸೈಟಿಯ ಬಾಗಿಲನ್ನು ಮಕ್ಕಳ
ಭೇಟಿಗಾಗಿ ತೆರೆದ ಕೀರ್ತಿ ಮೈಕೇಲ್ ಫ್ಯಾರೆಡೆಗೆ ಸಲ್ಲುತ್ತದೆ. ಅವರನ್ನು ಕರೆಸಿ, ಉಪನ್ಯಾಸ
ನೀಡಿ, ಪ್ರಯೋಗಗಳನ್ನು ಮಾಡಿ ತೋರಿಸಿದ ಈ ವಿಜ್ಞಾನಿ ಮಕ್ಕಳ ತಂದೆಯಲ್ಲ ಎಂಬುದು ವಿಪರ್ಯಾಸ.
‘ನೀವು ಈ ಪ್ರಯೋಗಶಾಲೆಗೆ ಭೇಟಿ ನೀಡುವ ಮೂಲಕ ವಿಜ್ಞಾನ, ಸಂಶೋಧನೆ, ಮತ್ತು ವಿಜ್ಞಾನಿಗಳಿಗೆ
ಮಾನ್ಯ ಮಾಡಿ ನನಗೆ ಸಂತಸ ಮೂಡಿಸಿದ್ದೀರಿ’ ಎಂಬುದು ಅವರು ಮಕ್ಕಳಿಗೆ ಉಪನ್ಯಾಸ ನೀಡುವಾಗಿನ
ಮೊದಲ ಸಾಲು.

ಲೂಯಿ ಪಾಸ್ತರ್ ಅವರು ತಮ್ಮ ವಿಜ್ಞಾನದ ಸಂಶೋಧನೆಯ ಸಾಧನೆಯನ್ನು ಗುರುತಿಸಿದಾಗ ಅದು ಮುಗ್ಧ
ಶಿಶುವಿನ ಹಾಗೆ ನಿಸರ್ಗವನ್ನು ಬೆರೆಗುಗಣ್ಣಿನಿಂದ ನೋಡುವುದು – ಎಂದು ವಿವರಿಸಿದ್ದಾರೆ.
ನಿಸರ್ಗ ನೀಡಿದ ಕಾಣಿಕೆಯನ್ನು ಕೆಡದ ಹಾಗೆ ಸಂರಕ್ಷಿಸಿಕೊಳ್ಳುವುದೇ ವಿಜ್ಞಾನಿಗಳ ಆಶಯ.

ನನಗೆ ಮಕ್ಕಳು ಬರೆವ ಪತ್ರದಲ್ಲಿ ಅನೇಕ ಬಾರಿ ಕಾಣಿಸಿಕೊಂಡಿರುವ ಪ್ರಶ್ನೆ ಮೊದಲ ವಿಜ್ಞಾನಿ
ಯಾರು?
ಮೊದಲು ಈ ಪ್ರಶ್ನೆಗೆ ಉತ್ತರ ತಿಳಿಯದೆಂದು ಬರೆದೆ. ಅದು ಮಕ್ಕಳಿಗೂ, ನನಗೂ ನಿರಾಶೆ
ಮೂಡಿಸಿತು. ಅನಂತರ ಈ ಪ್ರಶ್ನೆಗೆ ಉತ್ತರಿಸಲು ಏಕೆ ಕಷ್ಟವೆಂದು ವಿವರಿಸಿದೆ. ಅದೂ
ಮಕ್ಕಳಿಗೆ/ನನಗೆ ಸಮಾಧಾನ ನೀಡಿದ ಉತ್ತರವಾಗಲಿಲ್ಲ. ಮತ್ತೆ ಅದೇ ಪ್ರಶ್ನೆಗೆ ಉತ್ತರ
ಬರೆಯಬೇಕಾದಾಗ ಧೈರ್ಯ ಮಾಡಿ ಉತ್ತರ ನೀಡಿದೆ: ಮೊದಲ ವಿಜ್ಞಾನಿ ಮಗು!

ಹೀಗೆ ಹೇಳಿದ್ದಾದರೂ ಹೇಗೆ? ವಿಜ್ಞಾನಿಗಳ ಜೀವನಚರಿತ್ರೆ ಅಧ್ಯಯನ ಮಾಡಿದಾಗ (ಈಗಂತೂ ಅದು
ವಿಜ್ಞಾನಿಗಳ ವಿಶ್ವಕೋಶವಾಗಿ ಲಭ್ಯವಾಗಿದೆ) ಅವರು ಸಂಶೋಧನೆ ಕೈಗೊಂಡು ವಿಜ್ಞಾನಿ
ಎನಿಸಿಕೊಳ್ಳುವ ಎಷ್ಟೋ ಮೊದಲೇ ವಿಜ್ಞಾನಿಗಿರಬೇಕಾದ ಲಕ್ಷಣಗಳನ್ನು ತಮ್ಮ ಶಾಲಾ ಪೂರ್ವ
ದಿನಗಳಲ್ಲಿ / ಶಾಲೆಯಲ್ಲಿ ಅನೇಕ ರೀತಿಯಿಂದ ಮೆರೆದಿರುವುದು ಕಂಡುಬಂದಿತು. ಇವನ್ನು ಅಧ್ಯಯನ
ಮಾಡಿ, ಈ ಕುರಿತು ಶಾಲೆಗಳಲ್ಲಿ ಉಪನ್ಯಾಸ ನೀಡಿದಾಗ, ಮಕ್ಕಳು, ತಾವೂ ಈ ವರ್ತನೆ ತೋರಿದ
ಬಗ್ಗೆ ಅವರ ಅನುಭವವನ್ನು ಹೇಳಿಕೊಳ್ಳುತ್ತಿದ್ದರು.

ಹೀಗಾಗಿ ಈ ಸಾರ್ವತ್ರಿಕ ಲಕ್ಷಣ ಶಾಲಾ ಕಲಿಕೆಯ ಫಲವಲ್ಲ. ಶಾಲಾ ಕಲಿಕೆಗೆ ಸೇರ್ಪಡೆಯಾಗುವ ಈ
ವಿಜ್ಞಾನದ ಹುಡುಕಾಟಗಳು - ಶಾಲೆ, ಪ್ರಯೋಗಾಲಯ, ಗ್ರಂಥಾಲಯಗಳಿಗೆ ಬಂದು ಸೇರುವ ಮೊದಲೇ
ಶಾಲೆಗೆ ಹೋಗದವರೇ ಅದನ್ನು ರೂಪಿಸಿರಬೇಕು. ಚಿನ್ನವನ್ನು ಕೀಳುಲೋಹಗಳಿಂದ ತಯಾರಿಸುವ ಪ್ರಯತ್ನ
ಶಾಲಾ ಕಲಿಕೆಯ ಫಲವೇನೂ ಅಲ್ಲ. ಅಂದ ಮೇಲೆ, ಕಲಿಕೆಯಿಂದ ಕೌಶಲ, ಮತ್ತು ಶಿಸ್ತು ಕೊಡುಕೊಳ್ಳುವ
ಬಗ್ಗೆ ಎರಡು ಮಾತಿಲ್ಲ. ಆದರೆ ಆ ಶಿಸ್ತನ್ನು ರೂಪಿಸಿದ್ದು ಯಾರು?

ಮಕ್ಕಳಿಗೆ, ಸಾರ್ವಜನಿಕರಿಗೆ (ಸಾರ್ವಜನಿಕರೂ ವಿಜ್ಞಾನಕ್ಷೇತ್ರದ ಬಗ್ಗೆ ಭಯ ಮಿಶ್ರಿತ
ಕುತೂಹಲ ಇರುವ ಮಕ್ಕಳೇ) ವಿಜ್ಞಾನದ ಬೆಳವಣಿಗೆಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಗಳನ್ನು
ಕೆಲವು ಅಪವಾದಗಳನ್ನು ಹೊರತುಪಡಿಸಿ - ಎಲ್ಲ ವಿಜ್ಞಾನಿಗಳೂ ಮಾಡಿದ್ದಾರೆ. ಈ ವಿಜ್ಞಾನಿಗಳ
ಸಂಖ್ಯಾ ಕೊರತೆಯನ್ನು ನೀಗಿಸಲೇನೋ ಎನ್ನುವ ಹಾಗೆ ತಜ್ಞರೂ ಅಜ್ಞರೂ ವಿನಿಮಯ ಮಾಡಿಕೊಳ್ಳುವ
ಒಂದು ತಂಡವೇ ಭಾರತದ ಎಲ್ಲಾ ಭಾಷಾವಾರು ಪ್ರಾಂತ್ಯದಲ್ಲೂ ರೂಪುಗೊಂಡಿದೆ.

ಭಾರತದ ಮಾಜಿ ರಾಷ್ಟ್ರಪತಿಯವರೂ ತಮ್ಮ ಸೂಕ್ಷ್ಮ ಗ್ರಹಿಕೆಯಿಂದ ಮಕ್ಕಳಲ್ಲಿ ಭವಿಷ್ಯದ ಬಗೆಗೆ
ಕಾರ್ಮೋಡ ಆವರಿಸಿ ಕಂಗಾಲಾಗಿರುವುದನ್ನು ಗಮನಿಸಿ, ಅವರಿಗೆ ಸ್ಫೂರ್ತಿ ತುಂಬಲು ಮುಂದಾದರು.
ಮಕ್ಕಳ ದಿನಾಚರಣೆಗೆ ಪೂರಕವಾದ ಮತ್ತೊಂದು ಕಾರ್ಯಾಚರಣೆ. ಮಾಧ್ಯಮಗಳಲ್ಲಿ ವರದಿ ಆಗುವ
ನಕಾರಾತ್ಮಕ ಅಂಶಗಳನ್ನೇ ಹಿಮ್ಮೆಟ್ಟಿಸುವ ಸಕಾರಾತ್ಮಕ ಅಲೆಯನ್ನು ರೂಪಿಸಿ ಪಸರಿಸಿದ್ದು ಅವರ
ಸಾಧನೆ. ಅವರನ್ನೂ ಮಕ್ಕಳು ಕೇಳಿದ ಪ್ರಶ್ನೆ: ‘ಮೊದಲ ವಿಜ್ಞಾನಿ ಯಾರು?’

ಈ ಲೇಖಕನ ಧನ್ಯಭಾವವೆಂದರೆ, ಡಾ. ಕಲಾಮ್ ಅವರೂ ‘ಮಾನವಶಿಶು’ ಎಂದೇ ಉತ್ತರಿಸಿದ್ದು. ಈ ಉತ್ತರ
ಸೋಜಿಗ ಉಂಟು ಮಾಡಲು ಕಾರಣವನ್ನು ಅವರೇ ಹೇಳಿದರು: ಇಂದಿನ ವಿಜ್ಞಾನಿಯ ಮಾದರಿ (ರೋಲ್
ಮಾಡೆಲ್) ಪ್ರಯೋಗಾಲಯದಲ್ಲಿ ಉಪಕರಣಗಳೊಡನೆ ಬಡಿದಾಡುತ್ತಿರುವ ವ್ಯಕ್ತಿ. ಅಂತಹ
ವಿಜ್ಞಾನಿಯನ್ನು ಅವರು ಕಲ್ಪಿಸಿಕೊಂಡಿದ್ದಾರೆ. ಆದ್ದರಿಂದ ಮೂಲಸೆಲೆಯಾದ ಮಾನವ ಕೌತುಕವನ್ನು
ಉಪೇಕ್ಷಿಸಿದ್ದಾರೆ. ಮಲಿನಗೊಳ್ಳದ ಕೌತುಕವು ಗರಿಷ್ಠಮಟ್ಟದಲ್ಲಿರುವುದು ಕಿರಿಯರಲ್ಲೇ ಎಂದು
ಮನೋವಿಜ್ಞಾನಿಗಳೂ ಒಪ್ಪುತ್ತಾರೆ.

ಅದೇನೆ ಇರಲಿ, ಭಾರತದ ಭವಿತವ್ಯದ ಭವ್ಯಭವನ ನಿಂತಿರುವುದು ಭಾರತದ ನೆಲದ ಮೇಲೆ ಅಲ್ಲ. ಭಾವಿ
ಭಾರತದ ಪ್ರಜೆಗಳು ಈ ದೇಶ/ಸಮಾಜದ ಮೇಲೆ ಇರಿಸಿರುವ ಭರವಸೆಯ ಬುನಾದಿಯ ಮೇಲೆ. ಈ ಭರವಸೆ
ಭಗ್ನವಾಗದಂತೆ ನಾವೆಲ್ಲರೂ ವಿಶೇಷ ಗಮನ ಹರಿಸಬೇಕಾದ ತುರ್ತು ಈಗಲೂ ಇದೆ.

Hareeshkumar K
GHS Huskuru
Malavalli TQ
Mandya Dt
9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation, 

[ms-stf '67892'] ಸ್ಪಿರುಲಿನಾ ಮಾಂತ್ರಿಕ ಮಾತ್ರೆ ದೇವೋಭವ | ಪ್ರಜಾವಾಣಿ

2016-12-01 Thread HAREESHKUMAR K Agasanapura
http://m.prajavani.net/article/2016_12_01/455789
*ಸ್ಪಿರುಲಿನಾ ಮಾಂತ್ರಿಕ ಮಾತ್ರೆ ದೇವೋಭವ*

1 Dec, 2016

ನಾಗೇಶ್ ಹೆಗಡೆ








ನವೆಂಬರ್ ಮುಗಿಯಿತೆಂದರೆ ಕನ್ನಡ ಭಾಷೆಯಲ್ಲಿ ವಿಶಿಷ್ಟ ಸಾಧನೆಗಾಗಿ ಗೌರವ ಸನ್ಮಾನ ಪಡೆದವರ
ಮನೆಗಳಲ್ಲಿ ಶಾಲು, ಸ್ಮರಣ ಫಲಕ, ಹಣ್ಣಿನ ಬುಟ್ಟಿ, ಪೇಟಾ ಮತ್ತು ಬಣ್ಣದ ಮಾಲೆಗಳ ಹೊಸ ಮಾಲು
ಬಂದಿರುತ್ತದೆ. ಹಳತು ಅಟ್ಟಕ್ಕೊ ಗುಜರಿಗೊ ಸೇರುತ್ತವೆ. ಈಚೆಗೆ ಸೇಡಂ ಪಟ್ಟಣದ ‘ಅಮ್ಮ
ಪ್ರಶಸ್ತಿ’ಯ ಗೌರವವನ್ನು ಪಡೆದವರ ಅನುಭವ ಭಿನ್ನವಾಗಿತ್ತು. ಎಂದಿನಂತೆ ಶಾಲು, ಮಾಲೆ, ಸ್ಮರಣ
ಫಲಕಗಳ ಜೊತೆಗೆ ಹಣ್ಣಿನ ಬುಟ್ಟಿಯ ಬದಲಿಗೆ ತಲಾ ಎರಡೆರಡು ಕಿಲೊ ತೊಗರಿ ಬೇಳೆಯನ್ನು
ನೀಡಲಾಯಿತು.

ಕಲಬುರ್ಗಿ ಜಿಲ್ಲೆ ಎಂದರೆ ತೊಗರಿಯ ತವರು ತಾನೆ? ಸೇಡಮ್ಮಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲ ಈ
ದಿನಗಳಲ್ಲಿ ತೊಗರಿಯ ಕಡ್ಡಿಯೇ ಕಾಣುತ್ತದೆ. ಬಡವರ ಗುಡಿಸಲ ಬಳಿಯ ಸೌದೆರಾಶಿ, ಸೂರು, ಕಸ
ಗುಡಿಸುವ ಪೊರಕೆ, ತುಂಟ ಮಕ್ಕಳಿಗೆ ಛಡಿಯೇಟು ಎಲ್ಲಕ್ಕೂ ತೊಗರಿಯ ಕಡ್ಡಿ. ರಸ್ತೆಯ ಪಕ್ಕದ
ಜಾಹೀರಾತು ಫಲಕಗಳಲ್ಲೂ ತೊಗರಿ ಬೆಳೆಗೆ ಎರಚುವ ವಿಷವಸ್ತುಗಳ ಆಕರ್ಷಕ ಜಾಹೀರಾತು;
ತಳ್ಳುಗಾಡಿಯಲ್ಲಿ ಕಳ್ಳೇಪುರಿ ಅಳೆಯಲಿಕ್ಕೂ ಅದೇ ವಿಷದ ಖಾಲಿ ಡಬ್ಬಿಗಳು. ಶಾಲಾ ಮಕ್ಕಳ
ಪಠ್ಯಗಳಲ್ಲಿ ಮಾತ್ರ ತೊಗರಿಯ ಬಗ್ಗೆ ಒಂದೇ ಒಂದು ಪಾಠವೂ ಇಲ್ಲ ಅನ್ನೋದನ್ನು ಬಿಟ್ಟರೆ,
ಮಿಕ್ಕೆಲ್ಲ ಕಡೆ ತೊಗರಿಯದೇ ಸಾಹಿತ್ಯ.

ಹಣ್ಣಿನ ಬುಟ್ಟಿಯಲ್ಲಿ ಸೇಬು, ಸಪೋಟ, ಪಪಾಯಾ, ಪೈನಾಪಲ್ ಮುಂತಾದ ಪರಂಗಿ/ ಫಿರಂಗಿ ಫಲಗಳನ್ನು
ತುಂಬುವ ಬದಲು ತಂತಮ್ಮ ಊರಿನ ವಿಶಿಷ್ಟ ಫಸಲನ್ನು ಅತಿಥಿಗಳಿಗೆ ಉಡುಗೊರೆಯ ರೂಪದಲ್ಲಿ ನೀಡುವ
ಸಂಪ್ರದಾಯ ಮಲೆನಾಡಿನ ಜಿಲ್ಲೆಗಳಲ್ಲಿ ಹಿಂದಿನಿಂದಲೂ ಜಾರಿಯಲ್ಲಿದೆ. ದೂರದ ಗಣ್ಯರಿಗೆ
ಏಲಕ್ಕಿ, ಕಾಳುಮೆಣಸು, ಲವಂಗ, ದಾಲಚಿನ್ನಿಯನ್ನು ಉಡುಗೊರೆಯಾಗಿ ನೀಡುತ್ತಾರೆ. ಈಚೆಗೆ ವಸಂತ
ಪ್ರಕಾಶನದವರು ಬೆಂಗಳೂರಿನಲ್ಲಿ ಒಟ್ಟಿಗೆ ಎಂಟು ವೈದ್ಯ ಸಾಹಿತ್ಯ ಕೃತಿಗಳ ಬಿಡುಗಡೆಯ
ಸಮಾರಂಭದಲ್ಲಿ ಗಣ್ಯರಿಗೆಲ್ಲ ಸುಂದರ ಪೊಟ್ಟಣಗಳಲ್ಲಿ ನವಣೆ, ಆರಕ, ಕೊರಲು, ಬರಗು ಮುಂತಾದ
ಸಿರಿಧಾನ್ಯಗಳನ್ನು ನೀಡಿದ್ದರು. ಪ್ರತಿ ಪೊಟ್ಟಣದ ಮೇಲೂ ಆಯಾ ಧಾನ್ಯದ ಗುಣವಿಶೇಷಗಳನ್ನು
ಮುದ್ರಿಸಲಾಗಿತ್ತು.

ಸನ್ಮಾನಿತರಿಗೆ ಒಂದರ್ಧ ಕಿಲೊಗ್ರಾಂ ಸ್ಪಿರುಲಿನಾ ಮಾತ್ರೆಗಳನ್ನು ಎಲ್ಲಾದರೂ ನೀಡಿದ ಪ್ರಸಂಗ
ಇದೆಯೆ? ಇರಲಿಕ್ಕಿಲ್ಲ. ಸಿನೆಮಾ ತಾರೆಯರು, ಧನಿಕರು ಸೇವಿಸುವ ದುಬಾರಿ ವಸ್ತು ಅದು. ಈಚೆಗೆ
ಕರ್ನಾಟಕದಲ್ಲಿ ತೀರಾ ಕಡುಬಡ ಮಕ್ಕಳು, ಗರ್ಭಿಣಿಯರಿಗೆ ಉಚಿತವಾಗಿ ಸಿಕ್ಕ ಗೋಲಿಭಾಗ್ಯವೂ
ಹೌದು. ಇದು ಈ ದಿನಗಳಲ್ಲಿ ಸಂಡೂರಿನಿಂದ ಹಿಡಿದು ದಿಲ್ಲಿಯವರೆಗೂ ಸುದ್ದಿಯಲ್ಲಿದೆ.

ಸ್ಪಿರುಲಿನಾ ಎಂದರೆ ಜೌಗು ನೀರಿನಲ್ಲಿ ಬೆಳೆಯುವ ಹಸುರು ನೀಲಿ ಪಾಚಿ ಅಥವಾ ಹಾವಸೆ.
ಬ್ಯಾಕ್ಟೀರಿಯದ ವರ್ಗಕ್ಕೆ ಸೇರಿದ ಏಕಕೋಶ ಜೀವಿ. ಅದು ದಟ್ಟವಾಗಿ ಬೆಳೆದ ನೀರಲ್ಲಿ
ಕೈಹಾಕಿದರೆ ಹಸುರು ಬಟ್ಟೆಯಂತೆ ಪಾಚಿ ಕೈಗೆಲ್ಲ ಮೆತ್ತಿಕೊಳ್ಳುತ್ತದೆ. ನಾರಿನ ಎಳೆಗಳಂತೆ
ಸಿಂಬೆ ಸುತ್ತಿಕೊಂಡು ಬೆಳೆಯುವ ಇದನ್ನು ಸೂಕ್ಷ್ಮದರ್ಶಕದಲ್ಲಿ ನೋಡಿದರೆ ಸುರುಳಿ
ಸ್ಪ್ರಿಂಗ್‌ನಂತೆ ಕಾಣುತ್ತದೆ. ಸಿಂಬೆಯನ್ನು ನೀರಿನಿಂದ ಮೇಲೆತ್ತಿ ಹಿಂಡಿ ಒಣಗಿಸಿ
ಕೇಕ್‌ನಂತೆ, ಇಲ್ಲವೆ ಕುಟ್ಟಿ ಪುಡಿ ಮಾಡಿ ಗಾಳಿಸಿ, ಉಂಡೆ ಮಾಡಬಹುದು.

ಪಾಚಿಗಳಲ್ಲಿ ಸಾವಿರಾರು ಬಗೆಗಳಿವೆ. ನೀರಲ್ಲಿ, ಉಪ್ಪುನೀರಲ್ಲಿ, ಬಂಡೆಗಳ ಮೇಲೆ, ಮರಗಳ
ಕಾಂಡಗಳ ಮೇಲೆಲ್ಲ ಅವು ಬೆಳೆಯುತ್ತವೆ. ನೀರಲ್ಲಿ ಬೆಳೆಯುವ ನೀಲಿ ಹಸುರಿನ ಸ್ಪಿರುಲಿನಾ ಕೂಡ
ಅದೇ ವರ್ಗಕ್ಕೆ ಸೇರಿದ ಅನಾದಿ ಕಾಲದ, ಹುಟ್ಟು-ಸಾವು ಇಲ್ಲದ ಚಿರಂಜೀವಿ. ತನ್ನನ್ನೇ
ಇಬ್ಭಾಗಿಸಿಕೊಳ್ಳುತ್ತ ಬೆಳೆಯುತ್ತದೆ. ವಿಶೇಷ ಗುಣ ಏನೆಂದರೆ ಇದರಲ್ಲಿ ಪ್ರೊಟೀನು ತುಂಬ
ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಆಫ್ರಿಕದ ಕೆನೆಂಬು ಮೂಲ ನಿವಾಸಿಗಳು, ಮೆಕ್ಸಿಕೊದ
ಆಜ್ಟೆಕ್ ಜನರು ಅನಾದಿ ಕಾಲದಿಂದಲೂ ಸ್ಪಿರುಲಿನಾ ಪಾಚಿಯನ್ನು ಆಹಾರವಾಗಿ ಬಳಸುತ್ತಿದ್ದರು.

ಸಾಕುಪ್ರಾಣಿಗಳಿಗೆ ಮೇವಾಗಿ ತಿನ್ನಿಸುತ್ತಿದ್ದರು. ಬೆಲ್ಜಿಯನ್ ವಿಜ್ಞಾನಿ ಝರ್ರೊಕ್ ಎಂಬಾತ
ಐವತ್ತು ವರ್ಷಗಳ ಹಿಂದೆ 1966ರಲ್ಲಿ ಅದನ್ನೇ ತನ್ನ ಪಿಎಚ್‌.ಡಿ ಅಧ್ಯಯನಕ್ಕೆ ಆಯ್ದುಕೊಂಡ. ಈ
ಪಾಚಿಯಲ್ಲಿ ಶೇ 60- 65ರಷ್ಟು ಪ್ರೊಟೀನು ಇದೆ, ಖನಿಜಾಂಶಗಳೂ ಸೂಕ್ಷ್ಮ ಪೋಷಕಾಂಶಗಳೂ ಆದರ್ಶ
ಪ್ರಮಾಣದಲ್ಲಿವೆ ಎಂದು ಪ್ರಕಟಿಸಿದ ಮೇಲೆ ಸ್ಪಿರುಲಿನಾಕ್ಕೆ ಶುಕ್ರದೆಸೆ ಬಂತು. ಮರುವರ್ಷವೇ
ಅದನ್ನೊಂದು ‘ಚಮತ್ಕಾರಿಕ ಆಹಾರ’ ಎಂದು ಸೂಕ್ಷ್ಮಜೀವ ವಿಜ್ಞಾನಿಗಳು ಘೋಷಿಸಿದರು. ಅದನ್ನು
ಕೆರೆ ಹೊಂಡಗಳಲ್ಲಿ ಕೃತಕವಾಗಿ ಬೆಳೆಸುವ ಉದ್ಯಮಗಳು ನಾಯಿಕೊಡೆಗಳ ಹಾಗೆ ತಲೆ ಎತ್ತಿದವು.

ಈಗಂತೂ ಅದೊಂದು ಬಹುಕೋಟಿ ದಂಧೆಯಾಗಿ ಬೆಳೆದಿದೆ. ಗೂಗಲಿಸಿದರೆ ಹತ್ತಾರು ಸಾವಿರ ಪುಟಗಳ
ಪ್ರಚಾರ ಸಾಮಗ್ರಿಗಳು, ಜಾಹೀರಾತುಗಳು, ಸಂಶೋಧನಾ ಅಂಕಿಸಂಖ್ಯೆಗಳು, ವೈದ್ಯಭಾಷೆಯ ಲೇಖನಗಳು
ಸಾಲುಗಟ್ಟಿ ಬರುತ್ತವೆ. ಸಣಕಲು ದೇಹದವರನ್ನು ದಪ್ಪ ಮಾಡುವುದಕ್ಕೂ ಸ್ಪಿರುಲಿನಾ; ದಪ್ಪ
ವ್ಯಕ್ತಿಗಳನ್ನು ಸಣಕಲು ಮಾಡಲಿಕ್ಕೂ ಸ್ಪಿರುಲಿನಾ! ಮೊಡವೆ, ತಲೆಹೊಟ್ಟಿನಿಂದ ಹಿಡಿದು
ಹೊಟ್ಟೆಹುಳದವರೆಗಿನ ಎಲ್ಲ ಬಗೆಯ ಕಿರಿಕಿರಿಗಳ ನಿವಾರಣೆಗೆ ಸ್ಪಿರುಲಿನಾ ಕ್ರೀಮು, ಲೇಹ್ಯ,
ಪೇಸ್ಟು, ತೈಲ ಅದಂತೆ ಇದಂತೆ. ಯಾವುದು ವೈಜ್ಞಾನಿಕ ಸತ್ಯ, ಯಾವುದು ಉತ್ಪ್ರೇಕ್ಷೆ ಎಂಬುದೇ
ಗೊತ್ತಾಗದಷ್ಟು ಗೋಜಲು ಅದರಲ್ಲಿದೆ. ಬೆಲೆಗೂ ಲಂಗುಲಗಾಮಿಲ್ಲ. ಉತ್ಪಾದನಾ ವೆಚ್ಚ ಟನ್ನಿಗೆ
ಗರಿಷ್ಠ ಹತ್ತು ಸಾವಿರ ರೂಪಾಯಿ ಇದ್ದರೂ ಒಂದು ಗ್ರಾಂ ತೂಕದ ಮಾತ್ರೆಗೆ ಒಂದು ರೂಪಾಯಿ
ಲೆಕ್ಕದಲ್ಲಿ ಟನ್ನಿಗೆ 10 ಲಕ್ಷ ರೂಪಾಯಿ ಗಳಿಸಬಹುದು.

ಇಂಥ ಮಾಂತ್ರಿಕ ಮಾತ್ರೆಯನ್ನು ಅನುಕೂಲಸ್ಥರು ನಾನಾ ವಿಧದಲ್ಲಿ ಸೇವಿಸುತ್ತಾರೆ. ಅದನ್ನೇ
ಸರ್ಕಾರಿ ವೆಚ್ಚದಲ್ಲಿ ಬಡ ಮಹಿಳೆಯರಿಗೆ, ಮಕ್ಕಳಿಗೆ ಕೊಟ್ಟರೆ ಅಪೌಷ್ಟಿಕತೆಯ ನಿವಾರಣೆ
ಸಾಧ್ಯವಾದೀತಲ್ಲವೆ? ನಮ್ಮ ರಾಷ್ಟ್ರದಲ್ಲಿ ಹಸಿವೆ, ಅರೆಹೊಟ್ಟೆಯಿಂದ ಬಳಲುವ ಕುಪೋಷಿತರ
ಸಂಖ್ಯೆ ಜಗತ್ತಿನ ಇತರೆಲ್ಲ 

[ms-stf '67889'] Fwd: World Computer Literacy Day

2016-12-01 Thread HAREESHKUMAR K Agasanapura
Hareeshkumar K
GHS Huskuru
Malavalli TQ
Mandya Dt
9880328224
-- Forwarded message --
From: "HAREESHKUMAR K Agasanapura" <harihusk...@gmail.com>
Date: 02-Dec-2016 7:49 am
Subject: World Computer Literacy Day
To: <itatschools...@googlegroups.com>
Cc:

World Computer Literacy Day – December 2
<http://tut2learn.com/2014/11/world-computer-literacy-day-december-2/>

Nov 27th, 2014 @ 09:44 am › tut2learn

Every year December 2 is observed as Computer Literacy Day. Its launched to
create awareness and increase access to information technology for all
disadvantaged communities. Able to access computer and mobile skill is used
to access internet and communicate throughout the world.

<http://tut2learn.com/wp-content/uploads/2014/11/world-computer-literacy-day.jpg>

World Computer Literacy Day

*Computer literacy* is defined as the knowledge and ability to access
computers and related technology efficiently.  Computer literacy can also
refer to the comfort level someone has with using computer programs and
other applications that are associated with computers. Another valuable
component is understanding how computers work and operate.

Computer Education to improve digital literacy and transform education for
disadvantaged and marginalized communities particularly in Africa, by
providing access to affordable technology, in addition to training
teachers. Education is only to solution to remove poverty from poors. So
far this year, 7,616 computers have been dispatched to disadvantaged
communities all over the world, bringing digital literacy to 159,936 people.

Hareeshkumar K
GHS Huskuru
Malavalli TQ
Mandya Dt
9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '67466'] ವಿಜ್ಞಾನವನ್ನೂ ಬಿಟ್ಟಿಲ್ಲ ರಾಜಕೀಯದ ಭೂತ! – ವಿಶ್ವವಾಣಿ

2016-11-22 Thread HAREESHKUMAR K Agasanapura
https://www.vishwavani.news/political-devil-dint-leave-science/

*ವಿಜ್ಞಾನವನ್ನೂ ಬಿಟ್ಟಿಲ್ಲ ರಾಜಕೀಯದ ಭೂತ!*

 Tuesday, 22.11.2016 ಶಾಂತಾರಾಮ್‌
 No Comments




Share


Posted In : ಸಂಗಮ ,
ಸಾಗರೋತ್ತರ 

ಯಾವ ದೇಶದಲ್ಲಿಯೇ ಆಗಲಿ ಅಥವಾ ಯಾವುದೇ ಸಮಯದಲ್ಲಾಗಲಿ ರಾಜಕಾರಣಿಗಳಿಗೆ ಹಾಗೂ ಜನ
ಸಾಮಾನ್ಯರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಅಂದರೆ ಅಸಡ್ಡೆ. 21ನೆ ಶತಮಾನದ ಅತ್ಯಂತ
narrow but highly specialized ಯುಗದಲ್ಲಿ ಒಂದು ವಿಷಯದ ವಿಜ್ಞಾನಿ, ವಿಜ್ಞಾನದ
ಇನ್ನೊಂದು ವಿಷಯದ ಬಗ್ಗೆ ಅರ್ಥೈಸಿಕೊಳ್ಳುವುದೇ ಕಷ್ಟವಾಗುತ್ತಿರುವಾಗ, ಜನರನ್ನು ಆ ಕುರಿತು
ಕೇಳಲೇಬಾರದು. ವಿಜ್ಞಾನ ಮತ್ತು ತಂತ್ರಜ್ಞಾನವಿಲ್ಲದ ಜೀವನವನ್ನು ಊಹಿಸುವುದೂ
ಅಸಾಧ್ಯವಾಗಿದ್ದರೂ ಯಾರಾದರು ಆಧುನಿಕ ತಂತ್ರಜ್ಞಾನವನ್ನು ದೂರಿದರೆ, ನಿಜ ಎಂದು ಜನ
ತಲೆದೂಗುತ್ತಾರೆ.

ಕಬ್ಬಿಣದ ಕಡಲೆಯಂತಿರುವ ವಿಜ್ಞಾನದ ಬಗ್ಗೆ ತಿಳಿವಳಿಕೆ ಮೂಡಿಸುವಲ್ಲಿ ವಿಜ್ಞಾನಿಗಳು
ಸೋತಿದ್ದಾರೆ. ಜನರಿಗೆ ವಿಜ್ಞಾನದ ಮಾಹಿತಿಯನ್ನು ತಲುಪಿಸುವುದಕ್ಕೆ ವಿಜ್ಞಾನಿಗಳು
ಮುಂದಾಗಬೇಕು. ರಾಜಕಾರಣಿಗಳಂತೂ ವಿಜ್ಞಾನದ ಬಗ್ಗೆ ಮಾತನಾಡಿದರೆ ಮುಖ ಕಿವುಚುತ್ತಾರೆ. ಆದರೆ
ತಂತ್ರಜ್ಞಾನವನ್ನು ವಿರೋಧಿಸಿ ಬೀದಿಗಿಳಿಯುವ ಅಜ್ಞಾನಿಗಳ ಮಾತಿಗೆ ಹೂಗುಡುತ್ತಾರೆ. ಇನ್ನು
ವಿಜ್ಞಾನಿಗಳಂತೂ ಬೀದಿಗಿಳಿದು ಹೋರಾಡುವುದೇ ಇಲ್ಲ. ಅದು ಅವರ ಜಾಯಮಾನವೂ ಅಲ್ಲ. ಹಾಗಾಗಿ,
ವಿಜ್ಞಾನಿಗಳ ಮಾತುಗಳನ್ನು ಯಾವ ರಾಜಕಾರಣಿಯೂ ಕೇಳಿಸಿಕೊಳ್ಳುವುದಿಲ್ಲ. ವಿಜ್ಞಾನಿಗಳು ಮತ
ಭಂಡಾರವೂ ಅಲ್ಲ. ವಿಜ್ಞಾನದ ಏಳಿಗೆಗೆ ಬೇಕಾದ ಹಣ ಮತ್ತು ಪ್ರೋತ್ಸಾಹವನ್ನು ಸರಕಾರವೇ
ಕೊಡಬೇಕು.

ಭಾರತದಂಥ ದೇಶದಲ್ಲಿ ಶೇ.95ರಿಂದ ಶೇ.98ರಷ್ಟು ವಿಜ್ಞಾನಿಗಳು ಸರಕಾರಿ ಸಂಸ್ಥೆಗಳಲ್ಲೇ ಕೆಲಸ
ಮಾಡಬೇಕು ಮತ್ತು ಪ್ರತಿಭಟನೆ ನಡೆಸಲೂ ಸರಕಾರದಿಂದ ಅನುಮತಿ ಪಡೆಯಬೇಕು. ವಿಜ್ಞಾನದ
ವಿರೋಧಿಗಳಿಗೆ ಈ ವಿಚಾರ ಚೆನ್ನಾಗಿಯೇ ಗೊತ್ತು. ಹಾಗಾಗಿ ವಿರೋಧಿ ಗುಂಪುಗಳು ವಿಜ್ಞಾನದ
ಬಗ್ಗೆ ನಿರಕ್ಷರಕುಕ್ಷಿಗಳಾದ ರಾಜಕಾರಣಿಗಳನ್ನು ತಮ್ಮಿಷ್ಟಕ್ಕೆ ಬಂದಂತೆ ಕುಣಿಸುತ್ತಾರೆ.
ವಿಜ್ಞಾನದ ಅಜ್ಞಾನ ಯಾವ ಪಂಥದ ರಾಜಕಾರಣಿಗಳನ್ನೂ ಬಿಟ್ಟಿಲ್ಲ. ಬಿಜೆಪಿ, ಕಾಂಗ್ರೆಸ್,
ಸಮಾಜವಾದಿ ಪಕ್ಷ ಅಥವಾ ಕಮ್ಯುನಿಸ್ಟ್‌ರಾಗಲಿ ಅಣುತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ
ಬಗೆಗಿರುವ ರಾಜಕೀಯ ಪ್ರೇರಿತ ಅಭಿಪ್ರಾಯಗಳನ್ನು ಏನಾದರೂ ಬದಲಿಸಿಕೊಳ್ಳುವುದಿಲ್ಲ.
ಸಮಾಜವಾದಿಗಳು ಒಂದು ರೀತಿಯಲ್ಲಿ ಅಘೋಷಿತ ಅಥವಾ ಬಹಿರಂಗ ಕಮ್ಯುನಿಸ್ಟರು. ಯಾವ ರೀತಿ
ವಾಮಪಂಥೀಯ ಸಂಘಟನೆಗಳು ಕೋಡಂಕುಲಂ ಅಣು ಸ್ಥಾವರವನ್ನು ವಿರೋಧಿಸಿ ಗಬ್ಬೆಬ್ಬಿಸಿದರೆಂದು
ಗೊತ್ತೇ ಇದೆ. ಕುಲಾಂತರಿ ತಂತ್ರಜ್ಞಾನವನ್ನೂ ಇದೇ ರೀತಿ ವಾಮಪಂಥದ ಕಡೆಗೆ ತಿರುಗಿಸಿ
ಕುಲಾಂತರಿ ಬೆಳೆಗಳನ್ನು ಬೆಳೆಯುವುದಕ್ಕೆ ಅವಕಾಶವನ್ನೇ ಕೊಟ್ಟಿಲ್ಲ.

ಈಗ ಕೇರಳದ ಕಮ್ಯುನ್ಟ್‌ ಸರಕಾರದ ವಿತ್ತ ಮಂತ್ರಿ, ‘ಕುಲಾಂತರಿ ಅಂದರೆ Monsanto, Monsanto
ಅಂದರೆ ಕುಲಾಂತರಿ. Monsanto ಕಮ್ಯುನಿಸ್ಟರ ಪರಮ ವೈರಿಯಾದ ಅಮೆರಿಕದ ಬಹುರಾಷ್ಟ್ರೀಯ
ಕಂಪನಿ. ಹಾಗಾಗಿ ನಮಗೆ ಕುಲಾಂತರಿ ತಂತ್ರಜ್ಞಾನ ಬೇಡವೇ ಬೇಡ’ ಎಂದಿದ್ದಾರೆ! ಚೀನಾದವರು
ಜೈವಿಕ ತಂತ್ರಜ್ಞಾನದ ದೈತ್ಯ ಕಂಪನಿಯಾಗಿರುವ Syngenta ವನ್ನು ಖರೀದಿಸಿ ಕುಲಾಂತರಿ
ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಸಚಿವರ ಪ್ರಕಾರ ಇದು ನಮಗೆ ಬೇಡವಾದ ವಿಷಯ.
ಇದೇ ನೋಡಿ ಈ ಕಮ್ಯುನಿಸ್ಟರ ದ್ವಂದ್ವ ನೀತಿ. ಉಳಿದೆಲ್ಲಾ ರಾಜಕೀಯ ವಿಷಯಗಳಿಗೆ ಚೀನಾದ
ಕಮ್ಯುನಿಸಂನ ಉತ್ತೇಜನ ಬೇಕು. ವೈಜ್ಞಾನಿಕವಾಗಿ ಮಾತ್ರ ಚೀನಾ ಮಾದರಿಯಲ್ಲ! ಬಹುತೇಕ
ರಾಷ್ಟ್ರಗಳಲ್ಲಿ ರಾಜಕೀಯದಲ್ಲಿ ವಿಜ್ಞಾನದ ಜ್ಞಾನವುಳ್ಳವರು ಬಹು ವಿರಳ. ನಮ್ಮ
ಅದೃಷ್ಟವೆಂದರೆ ಪ್ರಧಾನಿ ನೆಹರು ನಂತರ ಪ್ರಧಾನಿ ಮೋದಿಯವರಿಗೆ ವಿಜ್ಞಾನ ಮತ್ತು
ತಂತ್ರಜ್ಞಾನದ ಬಗ್ಗೆ ಅತ್ಯಂತ ಕಾಳಜಿ ಇದೆ. ವಾಜಪೇಯಿ ಪ್ರಧಾನಿಯಾಗಿದ್ದಾಗ ವಿಜ್ಞಾನ
ಮಂತ್ರಿಯಾಗಿದ್ದ ಡಾ. ಮುರಳಿಮೋಹನ ಜೋಶಿಯವರಿಗಿದ್ದ ವೈಜ್ಞಾನಿಕ ಸಂತುಲನದ ಬಗ್ಗೆ
ವಿಶಿಷ್ಟವಾಗಿ ಹೇಳಬೇಕಿಲ್ಲ.

ಇವೆಲ್ಲದರ ಮಧ್ಯೆ ವಿಜ್ಞಾನ ವಿರೋಧಿ ಗುಂಪುಗಳು ತಮ್ಮದೇ ಆದ ಒಂದು ಸಮಾನಾಂತರ ವಿಜ್ಞಾನವನ್ನು
ರೂಪಿಸಿಕೊಂಡು ನೈಜ ವಿಜ್ಞಾನಕ್ಕೆ ಸೆಡ್ಡು ಹೊಡೆಯುತ್ತಿವೆ. ಕಳೆದ ತಿಂಗಳು ಕುಲಾಂತರಿ
ವಿರೋಧಿಗಳು ದೆಹಲಿಯಲ್ಲಿ ಫ್ರಾನ್ಸನ ಎರಿಕ್ ಸೆರಾಲಿನಿ ಎಂಬ ವಿಜ್ಞಾನಿಯನ್ನು ಕರೆಸಿದ್ದರು.
ಯಾಕೆ ಕುಲಾಂತರಿ ಸಾಸಿವೆಯನ್ನು ಬೆಳೆಯಬಾರದೆಂದು ಆತ ಹತ್ತಾರು ರಾಜಕಾರಣಿಗಳ ಕಿವಿಯೂದಿ
ಹೋಗಿದ್ದಾನೆ. ಬಾಸುದೇಬ ಆಚಾರಿಯ ಎಂಬ ಕಮ್ಯುನ್ಟ್‌ ಸಂಸದ ತಾನು ಕೃಷಿ ಕ್ಷೇತ್ರದ ಸಂಸದೀಯ
ಕಮಿಟಿ ಅಧ್ಯಕ್ಷನಾಗಿದ್ದಾಗ ‘ಗ್ರೀನ್ ಪೀಸ್’ ಎಂಬ ವಿರೋಧಿ ಗುಂಪಿನ ಕೈಯಲ್ಲಿ 400 ಪೇಜಿನ
ವರದಿಯನ್ನು ಬರೆಸಿ ತನ್ನ ಕಮಿಟಿಯ 30 ಸಂಸದರಿಂದ ಸಹಿ ಹಾಕಿಸಿ ಸಂಸತ್ತಿಗೆ ಸಲ್ಲಿಸಿಯೇ
ಬಿಟ್ಟ. ಸಂಸದ ಮಹಾಶಯರು ಆ ವರದಿಯನ್ನು ಓದದೆಯೇ ಸಹಿ ಹಾಕಿದ್ದನ್ನು ಸ್ವತಃ
ಒಪ್ಪಿಕೊಂಡಿದ್ದಾರೆ. ಅವರೆಲ್ಲರ ಪ್ರಕಾರ, ವಿಜ್ಞಾನದ ವರದಿಯನ್ನು ಓದಿದರೆ ತಲೆ ಚಿಟ್ಟು
ಹಿಡಿಯುತ್ತದೆ. ಕಮಿಟಿಯ ಅಧ್ಯಕ್ಷರು ಏನು ಹೇಳುತ್ತಾರೋ ಅದಕ್ಕೆ ಕಣ್ಣು ಮುಚ್ಚಿಕೊಂಡು ಸಹಿ
ಹಾಕುತ್ತಾರೆ. ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ಅನಾಹುತಗಳು ನಡೆಯುತ್ತವೆ.

ವಿರೋಧಿಗಳು ಹೇಳುವುದೇನೆಂದರೆ, ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳಲ್ಲಿ ಏನೇ ನಿರ್ಧಾರ
ತೆಗೆದುಕೊಳ್ಳಬೇಕಾದರೂ ಜನಪ್ರತಿನಿಧಿಗಳಿಂದ ಒಮ್ಮತ ಪಡೆದು ತೆಗೆದುಕೊಳ್ಳಬೇಕು. ವಿಜ್ಞಾನಿಗಳ
ಸಲಹೆಯನ್ನು ಅಗತ್ಯವಿದ್ದರಷ್ಟೇ ತೆಗೆದುಕೊಂಡರೆ ಸಾಕು. ಅದರಲ್ಲೂ, ರಾಜಕಾರಣಿಗಳು ತಮಗೆ
ಬೇಕಾದ (ವಿರೋಧಿಗಳಿಗೆ ಬೇಕಾದ) ವಿಜ್ಞಾನಿಗಳಿಂದ ಮಾತ್ರ ಸಲಹೆ ಪಡೆಯುತ್ತಾರೆ.

ಆದರೆ ಜನರ ಅಧಿಕಮತಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ನಿರ್ಧಾರ
ತೆಗೆದುಕೊಳ್ಳುವುದು ಸಾಧುವಲ್ಲ. ವಿಜ್ಞಾನಿಗಳಿಂದ ಅಭಿಪ್ರಾಯ ಪಡೆದು ದೇಶದ ಒಳಿತನ್ನು ಮತ್ತು
ಸಾಧಕ-ಬಾಧಕಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ಡಾ.
ಮನಮೋಹನ್ ಸಿಂಗ್ ಸರಕಾರ ಕೂಡಂಕುಲಂ ಅಣು ಸ್ಥಾವರದ ಬಗ್ಗೆ ಖಚಿತವಾದ ನಿರ್ಧಾರವನ್ನು
ತೆಗೆದುಕೊಂಡಿತು. ಅದೇ ರೀತಿ ಡಾ. ಸಿಂಗ್ ಕುಲಾಂತರಿ ಬಗ್ಗೆ ಸಾಕಷ್ಟು ಬಾರಿ ಜೈರಾಮ್
ರಮೇಶ್‌ಗೆ ತಿಳಿವಳಿಕೆ ನೀಡಿದರೂ ಆ ಮನುಷ್ಯ ಪರಿಸರವಾದಿಗಳನ್ನು ಮತ್ತು ಸೋನಿಯಾ ಗಾಂಧಿಯನ್ನು
ಮೆಚ್ಚಿಸಲು ತನ್ನ ನಿಲುವನ್ನು ಬದಲಿಸಲೇ ಇಲ್ಲ.

ಇದಕ್ಕೆಲ್ಲಾ ಮುಖ್ಯ ಕಾರಣ NAC ಎಂಬ ಸೂಪರ್ ಕ್ಯಾಬಿನೆಟ್ 

[ms-stf '67351'] ಕನ್ನಡ ಓದಬಲ್ಲ ಕನ್ನಡಕದ ಕತೆ | ಪ್ರಜಾವಾಣಿ

2016-11-19 Thread HAREESHKUMAR K Agasanapura
http://m.prajavani.net/article/2016_11_13/451674

ನಾಗೇಶ್ ಅಜ್ಜನ ಪತ್ರ ಓದಿ

*ಕನ್ನಡ ಓದಬಲ್ಲ ಕನ್ನಡಕದ ಕತೆ*

13 Nov, 2016

ನಾಗೇಶ ಹೆಗಡೆ








*ಪ್ರಿಯ ಮಗೂ,*
ನನಗೆ ಗೊತ್ತು, ನೀನು ಈ ಪತ್ರವನ್ನು ಓದಲಾರೆ. ಎಂಥ ಕತೆ ನೋಡು! ‘ಕನ್ನಡ ಕನ್ನಡ’ ಎಂದು ಈ
ನವೆಂಬರಿನಲ್ಲಿ ಎಲ್ಲರೂ ಭಜನೆ ಮಾಡುತ್ತಿರುತ್ತಾರೆ. ಕನ್ನಡವನ್ನು ಓದಲಾರದ ನಿನಗೆ ಈ
ಪತ್ರವನ್ನು ನಿನ್ನ ಮಾತೃಭಾಷೆಯಲ್ಲೇ ಬರೆಯಬೇಕಾಗಿ ಬಂದಿದೆ. ನಿನ್ನ ಅಮ್ಮ ಅಥವಾ ಅಪ್ಪನಿಂದ
ಇದನ್ನು ಓದಿಸು. ಅಥವಾ ಅವರಿಬ್ಬರಿಗೂ ಬಿಡುವಿಲ್ಲದಿದ್ದರೆ ಅಜ್ಜ ಅಥವಾ ಅಜ್ಜಿಯಿಂದ ಇದನ್ನು
ಓದಿಸುತ್ತೀಯೆಂದು ಆಶಿಸುತ್ತೇನೆ.
ಓಡಬೇಡ, ನಿಲ್ಲು ಮಗೂ. ಇದರಲ್ಲಿ ಒಂದು ರೋಚಕ ಕತೆಯಿದೆ. ಕೊನೆಯಲ್ಲಿ ನಿನ್ನದೇ ಒಂದು ಕತೆ
ಇದೆ.

ನನ್ನ ತಲೆಮಾರಿನ ಜನರು ಹೇಗೆ ನಿನಗೆ ಏನೆಲ್ಲವನ್ನೂ ಕೊಟ್ಟಿದ್ದಾರೆ ನೋಡು. ನಿನ್ನ ಕೈಯಲ್ಲಿ
ಅಮ್ಮನ ಮೊಬೈಲ್ ಇದೆ. ಅದರಲ್ಲಿ ಎಷ್ಟೊಂದು ಬಗೆಯ ಗೇಮ್ಸ್ ಆಡ್ತೀಯ. ಅದರಲ್ಲೇ ಕ್ಯಾಲೆಂಡರು,
ಗಡಿಯಾರ, ಅಲಾರ್ಮ್, ಲೆಕ್ಕ ಮಾಡುವ ಕ್ಯಾಲ್ಕುಲೇಟರ್, ಫೋನ್ ಬುಕ್, ಕ್ಯಾಮೆರಾ ಎಲ್ಲ ಇವೆ.
ಎದುರಿಗೆ ಟೀವಿ ಇದೆ. ನೂರಾರು ಚಾನೆಲ್‌ಗಳಲ್ಲಿ ಮಾಯಾಪ್ರಪಂಚವಿದೆ. ಅಪ್ಪನ
ಲ್ಯಾಪ್‌ಟಾಪ್‌ನಲ್ಲಿ ಕಾರ್ಟೂನು, ಲೈವ್‌ಬ್ಯಾಂಡ್ ಸ್ಟ್ರೀಮಿಂಗ್, ಸಂಗೀತ ಎಲ್ಲ ಇದೆ.
ಬೇಕೆಂದಾಗ ಬೇಕಾದ ಸಿನೆಮಾ ನೋಡಬಹುದು. ಅಡುಗೆಮನೆಯ ಫ್ರಿಜ್‌ನಲ್ಲಿ ಅಂಟಾರ್ಕ್ಟಿಕದ ಹಿಮದ
ಹಲ್ಲೆಗಳೂ ಕೂತಿವೆ. ಅಮ್ಮ ಚಿಟಿಕೆ ಹೊಡೆಯುವಷ್ಟರಲ್ಲಿ ಒಲೆಯ ಮೇಲೆ ಪುಟ್ಟ ನೀಲಿ
ಜ್ವಾಲಾಮುಖಿಯನ್ನೂ ಸೃಷ್ಟಿಸುತ್ತಾಳೆ. ಟೂ ಮಿನಿಟ್ಸ್ – ನೂಡ್ಲ್ ರೆಡಿ!

ನಾವು ಚಿಕ್ಕವರಿದ್ದಾಗ ಕನಸಿನಲ್ಲಿ ದೇವರು ಬಂದರೆ ಇವನ್ನೆಲ್ಲ ವರವಾಗಿ ಕೇಳಬಹುದೆಂಬ ಕಲ್ಪನೆ
ನಮಗೆ ಇರಲಿಲ್ಲ. ಇಂಥಾದ್ದನ್ನೆಲ್ಲ ವರವಾಗಿ ಕೊಡಬಹುದೆಂಬ ಕಲ್ಪನೆ ಅವನಿಗೂ ಇರಲಿಲ್ಲ!
ಭಕ್ತರಿಗೆ ಆತ ಬೇರೆ ಏನೇನೋ ಬೇಕುಬೇಕಾದ ವರ ಕೊಡುತ್ತಿದ್ದ. ಚಿರಂಜೀವಿಯಾಗು, ವಜ್ರಕಾಯನಾಗು,
ಚಕ್ರವರ್ತಿಯಾಗು... ಹೀಗೆ. ಆದರೆ ಚಕ್ರವರ್ತಿ ಆದವನು ಕೂಡ ದೂರ ಎಲ್ಲಾದರೂ ಹೋಗಬೇಕೆಂದರೆ
ಟಾರ್ ರಸ್ತೆ ಇರಲಿಲ್ಲ; ಏಸಿ ಕಾರು ಇರಲಿಲ್ಲ.

ಕುದುರೆಯ ಮೇಲೋ ರಥದ ಮೇಲೊ ಮೈಕೈ ನಜ್ಜುಗುಜ್ಜು ಮಾಡಿಕೊಂಡು ಇಡೀ ದಿನ ಪ್ರಯಾಣ
ಮಾಡಬೇಕಿತ್ತು. ಉರಿಸೆಕೆಯಲ್ಲಿ ಅಥವಾ ಮಳೆಗಾಲದಲ್ಲಿ ಹೊರಕ್ಕೆ ಹೋಗುವಂತೆ ಕೂಡ ಇರಲಿಲ್ಲ.
ಕತ್ತಲಾದರೆ ದೊಂದಿ ಹಚ್ಚಿ ಸೊಳ್ಳೆ ಹೊಡೆಯುತ್ತ ಕೂರಬೇಕು. ಅರಮನೆಯೆಲ್ಲ ಕಮಟು ವಾಸನೆ, ಕರೀ
ಮಸಿ.

ಆಚಿನ ಊರಿಗೆ ವೈರಿ ದಂಡೆತ್ತಿ ಬಂದರೆ ಗೊತ್ತೂ ಆಗ್ತಾ ಇರಲಿಲ್ಲ. ಗಡಿರಕ್ಷಕರ ಜೊತೆ ಮಾತಾಡಲು
ಫೋನ್ ಕೂಡ ಇರಲಿಲ್ಲ. ಸೈನ್ಯಕ್ಕೆ ಕಮಾಂಡ್ ಕೊಡಲು ಧ್ವನಿವರ್ಧಕ ಇರಲಿಲ್ಲ. ಯುದ್ಧದಲ್ಲಿ
ಮಂಡಿಚಿಪ್ಪು ಕಿತ್ತು ಹೋದರೆ ಜೀವನವಿಡೀ ಕುಂಟಬೇಕಿತ್ತು. ವೈರಿ ದಾಳಿಗೆ ಜಗ್ಗದವನು ವೈರಾಣು
ದಾಳಿಗೆ ಸಿಕ್ಕು ಪ್ಲೇಗು, ಸಿಡುಬಿನಿಂದ ಮಟಾಷ್ ಆಗುತ್ತಿದ್ದ. ಇನ್ನು ನನ್ನ ಹಾಗೆ
ವಯಸ್ಸಾಗಿದ್ದರಂತೂ ಕೃತಕ ಹಲ್ಲು ಇರಲಿಲ್ಲ. ಉಂಡೆ ತಿನ್ನುವಂತಿಲ್ಲ!

ಕಣ್ಣಿಗೆ ಕನ್ನಡಕ ಇರಲಿಲ್ಲ. ಧೂಮಕೇತು ಬಂತೆಂದು ಜ್ಯೋತಿಷಿ ಹೇಳಿದರೆ ಬೆದರಿ, ಯಾರದೋ
ಮಕ್ಕಳನ್ನು ಬಲಿಕೊಟ್ಟು ಪಾಪನಾಶನ ಹೋಮಹವನ ಮಾಡಿಸಬಹುದಿತ್ತೆ ವಿನಾ ದೂರದರ್ಶಕದಲ್ಲಿ ಆ
ಅಚ್ಚರಿಯನ್ನು ನೋಡಿ ಆನಂದಿಸುವ ಅದೃಷ್ಟ ಅವನಿಗಿರಲಿಲ್ಲ. ಆತನಿಗೆ ಸುರಿನಾಮ್ ಚೆರಿ, ಜಪಾನೀ
ಸ್ಟ್ರಾಬೆರಿ ರುಚಿ ನೋಡುವ ಅದೃಷ್ಟ ಇರಲಿಲ್ಲ. ಅವು ಅಲ್ಲಿಂದ ಬಂದರೂ
ಕೊಳೆತುಹೋಗಿರುತ್ತಿತ್ತು. ನೀನಾದರೋ ದೂರದ ಆಕ್ಲೆಂಡ್‌ನಿಂದ ಬಂದ ಕಿವೀ ಹಣ್ಣನ್ನು ಕೂಡ
ತಿಂದಿದ್ದೀಯ. ಆಗಿನ ಅರಸು ಮಕ್ಕಳಿಗೆ ಆಡಲು ಪುಟಿಯುವ ಚೆಂಡೂ ಇರಲಿಲ್ಲ. ನಿನ್ನ ಕೈಯಲ್ಲೋ
ಅಮೆರಿಕದ ಬಾರ್ಬಿ ಡಾಲ್ ಇದ್ದಾಳೆ; ಜಪಾನಿನ ತಾಮಾಗುಚಿ, ಚೀನಾದ ಟಾಯ್‌ಗನ್ ಇದೆ.

ನಿನ್ನ ಅಪ್ಪ ಬಸ್ ಡ್ರೈವರ್ ಆಗಿದ್ದರೂ ಹಿಂದಿನ ಕಾಲದ ರಾಜರಿಗೆ ಇದ್ದುದಕ್ಕಿಂತ ಹೆಚ್ಚಿನ
ಸೌಕರ್ಯ ನಿಮಗಿದೆ. ನಿನ್ನದು ಹೊಸ ರಾಜವಂಶ ಮಗೂ!
ಸುಖದ ವಿಚಾರವನ್ನು ಹೇಳಿದೆ. ಇನ್ನು ಇದರ ಇನ್ನೊಂದು ಮಗ್ಗುಲನ್ನು ಹೇಳುತ್ತೇನೆ. ಇಷ್ಟೊಂದು
ಸುಖಕ್ಕಾಗಿ ಹಾಗೂ ಇನ್ನೂ ಬೇಕೆಂಬ ಮಹದಾಸೆಗಾಗಿ ನಿನ್ನಿಂದ ಏನೇನನ್ನು ಕಸಿದಿದ್ದೇವೆ
ಗೊತ್ತಾ? ಚೀಂವ್ ಚೀಂವ್ ಎಂದು ಮನೆಯೊಳಗೇ ಕುಪ್ಪಳಿಸಿ ಮುದ ನೀಡುತ್ತಿದ್ದ ಗುಬ್ಬಿಯನ್ನು
ನಿನಗೆ ನಾನು ತೋರಿಸಲಾರೆ. ಜುಳುಜುಳು ತೊರೆಯಲ್ಲಿ ಕಾಲಿಗೆ ಕಚಗುಳಿ ಇಡುವ ಮೀನುಗಳನ್ನು
ತೋರಿಸೋಣವೆಂದರೆ ನೀರಿನ ಬದಲು ಕೊಳಕು ಮಡು ಅಲ್ಲಿದೆ.

ವಿಮಾನದಂತೆ ಆಕಾಶದಿಂದ ಇಳಿದು ಬರುತ್ತಿದ್ದ ರಣಹದ್ದುಗಳನ್ನು ತೋರಿಸಲಾರೆ. ನಗರದಲ್ಲಿರುವ
ನಿನಗೆ ಕರಿಬಾನಲ್ಲಿ ಮಿನುಗುವ ನಕ್ಷತ್ರಗಳನ್ನೂ ತೋರಿಸಲಾರೆ. ಕ್ಷಮಿಸು ಮಗೂ. ಬಾವಿಯಲ್ಲಿ
ಚಂದ್ರನ ಪ್ರತಿಬಿಂಬವನ್ನು ಸಿಂಹಕ್ಕೆ ತೋರಿಸುವ ಮೊಲದ ಕತೆಯ ಹೇಳೋಣವೆಂದರೆ ನೀರಿದ್ದ
ಬಾವಿಗಳೇ ಉಳಿದಿಲ್ಲ. ಬಾವಿಗಳನ್ನಷ್ಟೇ ಅಲ್ಲ, ಚಂದದ ನೀತಿಕತೆಗಳ ಬಾಯಿಗಳನ್ನೂ ನಾವು
ಮುಚ್ಚಿಬಿಟ್ಟಿದ್ದೇವೆ.

ಒಂದು ಖರೇ ಕತೆ ಹೇಳಲೆ? ತಪ್ಪು ಮಾಡಿದವರನ್ನು ಹೊತ್ತು ಮೆರೆಯುವ ಹೊತ್ತು ಇದು. ಊರ
ಸುತ್ತಲಿನ ಸಂಪತ್ತನ್ನೆಲ್ಲ ಲೂಟಿ ಮಾಡಿ, ಸಾವಿರಾರು ಜನರ ಊಟವನ್ನು ಕಸಿದು ತಾನು ಚಿನ್ನದ
ಬಟ್ಟಲಲ್ಲಿ ಊಟ ಮಾಡುವವರು ಹೀರೋ ಆಗುತ್ತಾರೆ. ಜೈಲಿಗೆ ಹೋದ ಆತನಿಗೆ ಜನ ಜೈಕಾರ
ಹಾಕುತ್ತಾರೆ. ಅಲ್ಲಿಂದ ತಾತ್ಕಾಲಿಕ ರಜೆ ಪಡೆದು ಹೊರಕ್ಕೆ ಬಂದರೆ ನಗರವೆಲ್ಲ
ಸಿಂಗಾರಗೊಳ್ಳುತ್ತದೆ. ಪೊಲೀಸರು ಅವನ ರಥಕ್ಕೆ ದಾರಿ ಮಾಡಿಕೊಡಲು ರಸ್ತೆಗಳನ್ನು ಖಾಲಿ
ಮಾಡಿಸುತ್ತಾರೆ. ಅವನನ್ನು ಹೊಗಳಿ ಕವಿಗಳು ಸ್ವಾಗತಗೀತೆ ಬರೆಯುತ್ತಾರೆ. ಮಂತ್ರಿ ಮಹೋದಯರು,
ಮಠಾಧೀಶರು ಮತ್ತು ವಿದ್ವಜ್ಜನರು ಆ ಅಪರಾಧಿಯ ಮನೆಯ ಊಟಕ್ಕೆ ಹಾತೊರೆಯುತ್ತಾರೆ.

ಇದು ಹೊಸ ಕಾಲ ಮಗೂ! ಇಲ್ಲಿ ಕವಿಗಳು, ಸಾಹಿತಿಗಳು ತಮ್ಮ ನೀತಿಕತೆಗಳನ್ನು ರದ್ದಿಗೆ
ಮಾರುತ್ತಾರೆ. ಪೊಲೀಸರ ಸಮವಸ್ತ್ರ ಉಲ್ಟಾ ಆಗಿದೆ. ಒಳ್ಳೆಯವರಿಗೆ ಒದೆ, ಉಳ್ಳವರಿಗೆ ಮಣೆ.
ಇನ್ನು ದೊಡ್ಡ ದೊಡ್ಡ ರಣಹದ್ದುಗಳೇ ಇಲ್ಲವೆಂದೆನಲ್ಲ? ಇವೆ, ರೆಕ್ಕೆಗಳಿಲ್ಲದ ಹೊಸ ರೂಪದವು
ಬಂದಿವೆ. ಹಸಿದವರನ್ನು ಪಕ್ಕಕ್ಕೆ ತಳ್ಳಿ ಕೇಕೆ ಹಾಕಿ ಕುಣಿದು ಸ್ವಂತದ ವಿಮಾನ ಏರಿ
ವಿಜೃಂಭಿಸುತ್ತವೆ. ಜನ ಅವಕ್ಕೂ ಜೈಕಾರ ಹಾಕುತ್ತಾರೆ.

ನಿನಗೆ ಗೊತ್ತಿಲ್ಲ ಮಗೂ! ನಿನ್ನನ್ನು ಕೃತಕ ಜಗತ್ತಿಗೆ ಸೇರಿಸಲು ಸಿದ್ಧತೆ ನಡೆದಿದೆ. ನಿನ್ನ
ಪುಟ್ಟ ಕಾಲುಗಳಿಗೆ ಹಸಿಮಣ್ಣಿನ ಸ್ಪರ್ಶ ಆಗಬಾರದು. ನಿನ್ನ ಕಿವಿಗೆ ಮರಿದುಂಬಿಯ ಝೇಂಕಾರ
ಕೇಳಬಾರದು. ನಿನ್ನ ಕಣ್ಣಿಗೆ ಮಿಂಚುಹುಳಗಳ ಮಿಣಿಬೆಳಕು ಬೀಳಬಾರದು. ನಿನ್ನ 

[ms-stf '67275'] ವಿಓಎಲ್‌ಟಿಇ (VoLTE) ಎಂದರೇನು? ರಿಲಯನ್ಸ್ ಜಿಯೊ ಹೇಗೆ ಕೆಲಸ ಮಾಡುತ್ತದೆ? | ಪ್ರಜಾವಾಣಿ

2016-11-16 Thread HAREESHKUMAR K Agasanapura
http://m.prajavani.net/article/2016_11_17/452604

17 Nov, 2016

ಯು.ಬಿ. ಪವನಜ








₹500 ಮತ್ತು ₹1000 ನೋಟುಗಳನ್ನು ಬದಲಿಸಲು ಜನರು ದೊಡ್ಡ ದೊಡ್ಡ ಸಾಲುಗಳಲ್ಲಿ ನಿಲ್ಲುವ
ಮೊದಲು ಜನರು ಇದೇ ರೀತಿ ಸಾಲು ನಿಂತಿದ್ದು ರಿಲಯನ್ಸ್ ಜಿಯೊ ಸಿಮ್ ಪಡೆಯಲು. ಇದರ ಪ್ರಮುಖ
ಆಕರ್ಷಣೆ ಎಂದರೆ ಡಿಸೆಂಬರ್ 31ರ ತನಕ ಎಲ್ಲ ಕರೆ ಮತ್ತು ಅಂತರಜಾಲ ಸಂಪರ್ಕ ಸಂಪೂರ್ಣ ಉಚಿತ.
ಅಷ್ಟೇ ಆಗಿದ್ದರೆ ಅದರ ಬಗೆ ಒಂದು ಅಂಕಣ ಬರೆಯಬೇಕಾಗಿರಲಿಲ್ಲ. ಈ ಸಂಚಿಕೆಯಲ್ಲಿ ರಿಲಯನ್ಸ್
ಜಿಯೊ ವ್ಯವಹಾರದ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಬದಲಿಗೆ ಅದು ಬಳಸುತ್ತಿರುವ, ಭಾರತಕ್ಕೆ
ಹೊಸದಾಗಿರುವ, ವಿಓಎಲ್‌ಟಿಇ (VoLTE) ತಂತ್ರಜ್ಞಾನದ ಬಗ್ಗೆ ಸ್ವಲ್ಪ ವಿವರ ತಿಳಿಯಲು
ಪ್ರಯತ್ನಿಸೋಣ.

ಗ್ಯಾಜೆಟ್‌ಲೋಕದ ಮಾರ್ಚ್ 5, 2015ರ ಸಂಚಿಕೆಯಲ್ಲಿ 4ಜಿ ತಂತ್ರಜ್ಞಾನದ ಬಗ್ಗೆ
ಬರೆಯಲಾಗಿತ್ತು. ಅದರಲ್ಲಿ ಇತರೆ ತಂತ್ರಜ್ಞಾನಗಳ ಬಗೆಗೂ ಚುಟುಕಾಗಿ ವಿವರಿಸಲಾಗಿತ್ತು.
ಗ್ಯಾಜೆಟ್‌ಲೋಕದ ಹಳೆಯ ಸಂಚಿಕೆಗಳನ್ನು bitly.com/gadgetloka ಜಾಲತಾಣದಲ್ಲಿ ಓದಬಹುದು.
ಆದರೂ ಚುಟುಕಾಗಿ ಕೆಲವು ವಿಷಯಗಳನ್ನು ಇನ್ನೊಮ್ಮೆ ಪ್ರಸ್ತಾಪಿಸುತ್ತಿದ್ದೇನೆ.

ಮೊಬೈಲ್ ಫೋನ್ ಮೂಲಕ ಬಳಸುವ ಅಂತರಜಾಲ ಸಂಪರ್ಕದಲ್ಲಿ ಹಲವು ತಲೆಮಾರುಗಳಿವೆ. 2ಜಿ ಎಂದರೆ
ಎರಡನೆಯ ತಲೆಮಾರು (2G=second generation), 3ಜಿ ಎಂದರೆ ಮೂರನೆಯ ಮತ್ತು 4ಜಿ ಎಂದರೆ
ನಾಲ್ಕನೆಯ ತಲೆಮಾರು ಎಂದು ಅರ್ಥ. 3ಜಿಯಲ್ಲಿ ಸುಮಾರು 21 ಎಂಬಿಪಿಎಸ್ (mbps=mega bits
per second) ತನಕ ಮಾಹಿತಿಪ್ರವಾಹದ (ಡೌನ್‌ಲೋಡ್) ವೇಗ ದೊರೆಯಬೇಕು. ಸಾಮಾನ್ಯವಾಗಿ
ದೊರೆಯುವುದು ಸುಮಾರು 2-7 ಎಂಬಿಪಿಎಸ್. 4ಜಿ ಎಂದರೆ ನಾಲ್ಕನೆಯ ತಲೆಮಾರಿನ ಸಂಪರ್ಕ. ಇದರ
ಡೌನ್‌ಲೋಡ್ ವೇಗ 100 ಎಂಬಿಪಿಎಸ್ ತನಕ ಇರಬಹುದು. ಆದರೆ ಪ್ರಾಯೋಗಿಕವಾಗಿ ಸುಮಾರು 35
ಎಂಬಿಪಿಎಸ್ ತನಕದ ವೇಗ ದೊರೆಯುತ್ತದೆ. 4ಜಿಗೆ ಹಲವು ಮಾನಕಗಳಿವೆ. ಸದ್ಯ ಭಾರತದಲ್ಲಿರುವ 4ಜಿ
ಎಲ್‌ಟಿಇ (LTE = long term evolution) ಆಗಿದೆ. ಭಾರತದಲ್ಲಿ ಏರ್‌ಟೆಲ್ ಅಲ್ಲದೆ ಇತರೆ
ಕೆಲವು ಕಂಪೆನಿಗಳೂ 4ಜಿ ಸಂಪರ್ಕ ನೀಡಲು ಪರವಾನಗಿ ಪಡೆದಿವೆ.

ವಿಓಎಲ್‌ಟಿಇ ಎಂದರೆ Voice over LTE ಎಂದು ಅರ್ಥ. ಇದು ಬಹುಮಟ್ಟಿಗೆ ವಿಓಐಪಿಗೆ (VOIP=
Voice Over Internet Protocol) ಸಮೀಪವಾಗಿದೆ. ವಿಓಐಪಿಯಲ್ಲಿ ಅಂತರಜಾಲದ ಮೂಲಕ
ಕರೆಗಳನ್ನು ಹಾಗೂ ವಿಡಿಯೊ ಕರೆಗಳನ್ನು ಮಾಡಬಹುದು. ಸ್ಕೈಪ್ ಇದಕ್ಕೆ ಉತ್ತಮ ಉದಾಹರಣೆ.
ಇಲ್ಲೂ ಎರಡು ನಮೂನೆಗಳಿವೆ. ಎರಡು ಬದಿಗಳಲ್ಲೂ ಸ್ಕೈಪ್ ಬಳಸಿ ಕರೆ ಮಾಡುವುದು ಅಥವಾ ವಿಡಿಯೊ
ಚಾಟ್ ಮಾಡುವುದು. ಇನ್ನೊಂದು ನಮೂನೆಯಲ್ಲಿ ಸ್ಕೈಪ್ ಮೂಲಕ ಮಾಮೂಲಿ ದೂರವಾಣಿಗೆ
(ಸ್ಥಿರವಾಣಿಗೆ) ಕರೆ ಮಾಡುವುದು. ವಿಓಎಲ್‌ಟಿಇ ಮೂಲಕ ಕರೆ ಅಥವಾ ವಿಡಿಯೊ ಕರೆ ಮಾಡುವುದೂ
ಅಂತರಜಾಲದ ಮೂಲಕವೇ. ಒಂದು ವಿಓಎಲ್‌ಟಿಇ ಫೋನಿನಿಂದ ಇನ್ನೊಂದು ವಿಓಎಲ್‌ಟಿಇ ಫೋನಿಗೆ ಅಥವಾ
ಮಾಮೂಲಿ ಫೋನಿಗೆ ಕರೆ ಮಾಡಬಹುದು. ಎರಡು ಬದಿಗಳಲ್ಲೂ ವಿಓಎಲ್‌ಟಿಇ ಇದ್ದಲ್ಲಿ ಕರೆಯ ಗುಣಮಟ್ಟ
ಅತ್ಯುತ್ತಮವಾಗಿರುತ್ತದೆ. ಇದಕ್ಕೆ ತಾಂತ್ರಿಕ ಪರಿಭಾಷೆಯಲ್ಲಿ HD ಎಂದರೆ ಹೈಡೆಫಿನಿಶನ್ ಕರೆ
ಎನ್ನುತ್ತಾರೆ.

ರಿಲಯನ್ಸ್ ಜಿಯೊ ಬಳಸುವುದು ವಿಓಎಲ್‌ಟಿಇ ಅನ್ನು. ವಿಓಎಲ್‌ಟಿಇ ಸೌಲಭ್ಯ ಎಲ್ಲ ಫೋನ್‌ಗಳಲ್ಲೂ
ಇರುತ್ತದೆಯಾ? ಇಲ್ಲ. ಹಾಗಿದ್ದರೆ ವಿಓಎಲ್‌ಟಿಇ ಸೌಲಭ್ಯ ಇಲ್ಲದ ಫೋನ್‌ಗಳಲ್ಲಿ ಜಿಯೊ ಸಿಮ್
ಬಳಸುವ ಹಾಗಿಲ್ಲವಾ? ಉತ್ತರ ಹೌದು ಮತ್ತು ಇಲ್ಲ. ನಿಮ್ಮ ಫೋನ್‌ನಲ್ಲಿ 4ಜಿ ಎಲ್‌ಟಿಇ (4G
LTE) ಇದ್ದಲ್ಲಿ ನೀವು ಜಿಯೊ ಸಿಮ್ ಬಳಸಬಹುದು. ಆದರೆ ಕರೆಗಳನ್ನು ಮಾಡಲು ನೀವು Jio4GVoice
ಎಂಬ ಆ್ಯಪ್ ಅನ್ನು ಹಾಕಿಕೊಳ್ಳಬೇಕು. ಈ  ಆ್ಯಪ್ ಅನ್ನು ಯಾವಾಗಲೂ ಆನ್ ಆಗಿ
ಇಟ್ಟುಕೊಳ್ಳಬೇಕು. ನಿಮ್ಮ ಫೋನ್‌ನಲ್ಲಿ 4ಜಿ ಇಲ್ಲವಾದಲ್ಲಿ ಜಿಯೊ ಸಿಮ್ ಕೆಲಸ ಮಾಡಲಾರದು.

ವಿಓಎಲ್‌ಟಿಇ ತಂತ್ರಜ್ಞಾನ ಕರೆಗಳ ಗುಣಮಟ್ಟವನ್ನು ಮಾತ್ರ ಹೆಚ್ಚಿಸುವುದಲ್ಲ. ಅಂತರಜಾಲ
ಸಂಪರ್ಕದ ವೇಗವೂ ಉತ್ತಮವಾಗಿರುತ್ತದೆ. ಆದರೆ ಸದ್ಯ ಭಾರತದಲ್ಲಿ ರಿಲಯನ್ಸ್ ಜಿಯೊ ಇನ್ನೂ
ಪೂರ್ತಿಯಾಗಿ ತನ್ನ ಗುಣಮಟ್ಟವನ್ನು ಸ್ಥಿರಗೊಳಿಸಿಲ್ಲ. ಕರ್ನಾಟಕದಲ್ಲಂತೂ ಅದು ತುಂಬ
ಕೆಳಮಟ್ಟದಲ್ಲಿದೆ. ಮುಂಬಯಿಯಲ್ಲಿ 70 ಎಂಬಿಪಿಎಸ್ ತನಕ ಡೌನ್‌ಲೋಡ್ ವೇಗ ಪಡೆಯುತ್ತಿದ್ದಾರೆ.
ಕರ್ನಾಟಕದಲ್ಲಿ ನನಗೆ 7 ಎಂಬಿಪಿಎಸ್‌ಗಿಂತ ಮೇಲೆ ಹೋಗಿಲ್ಲ. ಕರೆಗಳೂ ಅಷ್ಟೆ. ದಿನದ ಕೆಲವು
ಸಮಯಗಳಲ್ಲಿ ಮಾತ್ರ ಜಿಯೊ ಅಲ್ಲದ ಇತರೆ ಫೋನ್‌ಗಳಿಗೆ ಕರೆ ಮಾಡಲು ಸಾಧ್ಯವಾಗುತ್ತದೆ.
ಜಿಯೊದಿಂದ ಇನ್ನೊಂದು ಜಿಯೊಗೆ ಯಾವ ಸಮಯದಲ್ಲೂ ಕರೆ ಮಾಡಲು ಸಾಧ್ಯವಾಗುತ್ತಿದೆ. ವಿಓಎಲ್‌ಟಿಇ
ಮತ್ತು ಇತರೆ ಮೊಬೈಲ್ ತಂತ್ರಜ್ಞಾನಗಳಿಗೆ ಇರುವ ಒಂದು ಪ್ರಮುಖ ವ್ಯತ್ಯಾಸವೆಂದರೆ
ವಿಓಎಲ್‌ಟಿಇನಲ್ಲಿ ಎಲ್ಲವೂ ಅಂತರಜಾಲದ ಮೂಲಕವೇ ಆಗುತ್ತವೆ. 2/3/4ಜಿ ತಂತ್ರಜ್ಞಾನಗಳಲ್ಲಿ
ಕರೆ ಮತ್ತು ಮಾಹಿತಿ ಪ್ರತ್ಯೇಕವಾಗಿರುತ್ತವೆ. ವಿಓಎಲ್‌ಟಿಇ ಬಳಸುವ ಜಿಯೊ ಸಿಮ್‌ನಲ್ಲಿ ನೀವು
ಅಂತರಜಾಲಕ್ಕೆ ಮಾತ್ರ ಹಣ ನೀಡಬೇಕು. ಕರೆಗಳು ಉಚಿತ.  ಇವು ಸದ್ಯದ ಪರಿಸ್ಥಿತಿ. ಅವರ
ಜಾಲತಾಣದಲ್ಲಿ ಆ ರೀತಿ ಬರೆದಿದ್ದಾರೆ. ಆದರೆ ಜನವರಿಯಿಂದ ಯಾವ ರೀತಿ ದರ ನಿಗದಿ ಮಾಡುತ್ತಾರೆ
ಎಂಬ ಬಗ್ಗೆ ಭರವಸೆಯಿಲ್ಲ.

*ವಿಓಎಲ್‌ಟಿಇ ತಂತ್ರಜ್ಞಾನದ ಸಾಧಕಗಳು*
1. ಹೈಡೆಫಿನಿಶನ್ ಕರೆಗಳು. ಕರೆಗಳ ಗುಣಮಟ್ಟ ಅತ್ಯುತ್ತಮವಾಗಿರುತ್ತವೆ. ಎರಡು ಬದಿಗಳಲ್ಲೂ
ವಿಓಎಲ್‌ಟಿಇ ಇದ್ದಾಗ ಮಾತ್ರ ಇದು ಸಾಧ್ಯ.
2. ಅಂತರಜಾಲಾಧರಿತ ಹಲವು ಸೇವೆಗಳ ಲಭ್ಯತೆ. ಉದಾಹರಣೆ ವಿಡಿಯೊ ಕರೆ, ಫೈಲ್ ವರ್ಗಾವಣೆ,
ಚಾಟ್, ದೂರದರ್ಶನ ಪ್ರಸಾರ, ಇತ್ಯಾದಿ.
3. ಕರೆ ಮಾಡುವಾಗ ಕೂಡಲೇ ಸಂಪರ್ಕ ಸಾಧ್ಯ. ದೂರವಾಣಿ ಸಂಖ್ಯೆಯನ್ನು ಒತ್ತಿದ ಕೂಡಲೇ ಸಂಪರ್ಕ
ಆಗುತ್ತದೆ. 

[ms-stf '66782'] ಉಳಿಸಬೇಕಿದೆ ‘ವಿಜ್ಞಾನ ರಾಜಧಾನಿ’ ಪಟ್ಟ! | ಪ್ರಜಾವಾಣಿ

2016-11-03 Thread HAREESHKUMAR K Agasanapura
http://m.prajavani.net/article/2016_11_04/449610

*ಉಳಿಸಬೇಕಿದೆ ‘ವಿಜ್ಞಾನ ರಾಜಧಾನಿ’ ಪಟ್ಟ!*

ಭಾರತೀಯ ವಿಜ್ಞಾನ ಸಂಸ್ಥೆಯ ಕಟ್ಟಡ

Previous Next


4 Nov, 2016

ಪ್ರಜಾವಾಣಿ ವಾರ್ತೆ








*ಕನ್ನಡದಲ್ಲೇ ಬೇಕು ಮಾಧ್ಯಮಿಕ ಶಿಕ್ಷಣ*
*ಮಾತೃಭಾಷೆಯಲ್ಲಿ ಓದಿದರೆ ವಿಜ್ಞಾನ ರಂಗಕ್ಕೆ ಧುಮುಕುವುದು ಕಷ್ಟ ಎಂಬ ಅಭಿಪ್ರಾಯ ಬಹುತೇಕ
ಪಾಲಕರಲ್ಲಿದೆ. ಆದರೆ, ಇಂತಹ ಆತಂಕಕ್ಕೆ ಯಾವುದೇ ಕಾರಣವಿಲ್ಲ. ಮಾಧ್ಯಮಿಕ ಶಿಕ್ಷಣದವರೆಗೆ
ಮಾತೃಭಾಷೆಯೇ ಕಲಿಕಾ ಮಾಧ್ಯಮವಾದರೆ ಮಕ್ಕಳಿಗೆ ಗ್ರಹಿಕೆ ಸುಲಭ. ನಾನು ವಿಜ್ಞಾನದಲ್ಲಿ
ಇವತ್ತು ಏನಾದರೂ ಸಾಧನೆ ಮಾಡಿದ್ದರೆ ಮಾಧ್ಯಮಿಕ ಶಿಕ್ಷಣದವರೆಗೆ ನನಗೆ ಮಾತೃಭಾಷೆಯಾದ
ಕನ್ನಡದಲ್ಲಿ ಶಿಕ್ಷಣ ದೊರೆತದ್ದೇ ಕಾರಣ ಎಂದು ಘಂಟಾಘೋಷವಾಗಿ ಹೇಳಬಲ್ಲೆ. ಹೈಸ್ಕೂಲ್‌ ಹೆಡ್‌
ಮಾಸ್ಟರ್‌ ಆಗಿದ್ದ ನಮ್ಮಪ್ಪ, ‘ಇಂಗ್ಲಿಷ್‌ ಭಾಷೆಯನ್ನು ಕಲಿತುಕೊ. ಆದರೆ, ಕನ್ನಡ
ಮಾಧ್ಯಮದಲ್ಲೇ ಓದು’ ಎಂದು ಹೇಳಿದ್ದರು. ರಾಜ್ಯದ ಜನರಿಗೆ ನನ್ನ ಹಿತವಚನವೂ ಅದೇ: ಮಕ್ಕಳಿಗೆ
ಇಂಗ್ಲಿಷ್‌ ಭಾಷೆಯನ್ನು ಖಂಡಿತವಾಗಿ ಕಲಿಸಿ, ಹೈಸ್ಕೂಲ್‌ವರೆಗೆ ಕನ್ನಡದಲ್ಲೇ ಶಿಕ್ಷಣ
ಕೊಡಿಸಿ. ವಿಜ್ಞಾನದ ಆಳವನ್ನು ಅರಗಿಸಿಕೊಳ್ಳಲು ತಕ್ಕ ಬುನಾದಿಯನ್ನು ಅದು ಹಾಕುತ್ತದೆ.*



ನಮ್ಮ ರಾಜ್ಯದ ಭೌಗೋಳಿಕ ವಿಸ್ತೀರ್ಣದಲ್ಲಿ ಎರಡು ‘ದಕ್ಷಿಣ ಕೊರಿಯಾ’ಗಳನ್ನೇ ಸೃಷ್ಟಿಸಬಹುದು,
ಗೊತ್ತೆ? ಆದರೆ, ಆ ಪುಟ್ಟ ದೇಶ ಸಂಶೋಧನಾ ಕ್ಷೇತ್ರದ ಹೂಡಿಕೆಯಲ್ಲಿ ‘ನೂರಾರು ಕರ್ನಾಟಕ’ಗಳ
ಸಾಧನೆಯನ್ನು ಮೀರಿ ನಿಂತಿದೆ. ವಿಜ್ಞಾನ ಕ್ಷೇತ್ರದಲ್ಲಿ ನಾವು ಹಿಂದೆ ಬಿದ್ದಿದ್ದೇವೆ
ಎನ್ನುವ ಮಾತು ಕೇಳಿಬಂದಾಗಲೆಲ್ಲ ಈ ಎರಡೂ ಅಂತರಗಳ ಚಿತ್ರಣ ಮನದಂಗಳದಲ್ಲಿ ಥಟ್ಟಂತ
ಮೂಡುತ್ತದೆ.



‘ರಾಜ್ಯದಲ್ಲಿ ವಿಜ್ಞಾನದ ಅಭಿವೃದ್ಧಿಗೆ ನಾವೀಗ ಏನು ಮಾಡಬೇಕು’ ಎನ್ನುವ ಪ್ರಶ್ನೆಗೆ ಬಳಿಕ
ಬರೋಣ. ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ; ರಾಜ್ಯದಲ್ಲಿ ಆಧುನಿಕ ವಿಜ್ಞಾನಕ್ಕೆ ನೂರು
ವರ್ಷಗಳ ಇತಿಹಾಸ ಉಂಟು. ಭಾರತದಲ್ಲಿ ವಿಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ಜಮ್‌ಶೆಡ್‌ಜಿ
ಟಾಟಾ ಅವರು ಬ್ರಿಟಿಷ್‌ ಆಡಳಿತದ ಮುಂದೆ ಪ್ರಸ್ತಾವ ಇಟ್ಟಾಗ, ಸಾರಾಸಗಟಾಗಿ
ತಿರಸ್ಕರಿಸಲಾಯಿತು. ಆದರೆ, ಟಾಟಾ ಅಷ್ಟಕ್ಕೆ ಬಿಡಲಿಲ್ಲ. ಮತ್ತೆ ಮನವಿ ಸಲ್ಲಿಸಿದರು. ಆ
ಮನವಿ ಕುರಿತಂತೆ ಪರಿಶೀಲಿಸಲು ರಾಯಲ್‌ ಸೊಸೈಟಿಯ ಸದಸ್ಯರಾಗಿದ್ದ ಸರ್‌ ವಿಲಿಯಂ ರಾಮ್ಸೆ ಅವರ
ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಲಾಯಿತು.



ಭಾರತಕ್ಕೆ ವಿಜ್ಞಾನ ಸಂಸ್ಥೆಯೊಂದರ ಅಗತ್ಯವಿದೆ ಎಂಬ ವರದಿಯನ್ನು ಆ ಸಮಿತಿ ನೀಡಿತು.
ಹಾಗಾದರೆ ಆ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸುವುದು ಎಂಬ ಪ್ರಶ್ನೆ ಎದುರಾದಾಗ, ಬೆಂಗಳೂರಿನ
ಜತೆಗೆ ಸ್ಪರ್ಧೆ ಒಡ್ಡಿದ್ದು ಈಗಿನ ಉತ್ತರಾಖಂಡದ ರೂರ್ಕಿ. ರಾಜರ್ಷಿ ನಾಲ್ವಡಿ ಕೃಷ್ಣರಾಜ
ಒಡೆಯರ್‌ ಅವರು ಬೆಂಗಳೂರಿನಲ್ಲಿ 371 ಎಕರೆ ಭೂಮಿ ಕೊಟ್ಟಿದ್ದಲ್ಲದೆ ನೀರು–ವಿದ್ಯುತ್‌
ಸೌಲಭ್ಯವನ್ನೂ ಕಲ್ಪಿಸಲು ಮುಂದೆ ಬಂದಿದ್ದರಿಂದ ದೇಶದ ಪ್ರತಿಷ್ಠಿತ ಸಂಶೋಧನಾ ಕೇಂದ್ರವಾದ
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಕನ್ನಡ ನಾಡಿನಲ್ಲಿ ತಲೆ ಎತ್ತುವಂತಾಯಿತು. ಈ
ಹೆಮ್ಮೆಯ ಕೇಂದ್ರದ ಮಕ್ಕಳಂತೆ ದೇಶದ ಹಲವೆಡೆ ವಿವಿಧ ಸಂಶೋಧನಾ ಸಂಸ್ಥೆಗಳು
ಸ್ಥಾಪನೆಯಾಗಿದ್ದು ಈಗ ಇತಿಹಾಸ.



ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿಬಂದಿದ್ದ ಬಿ.ಎ. ರಾವ್‌ ಎಂಬುವರು ಮೈಸೂರು
ಸಂಸ್ಥಾನದ ಆರೋಗ್ಯ ಇಲಾಖೆಯಲ್ಲಿದ್ದರು. ಮೈಸೂರು ರಾಜ್ಯದಲ್ಲಿ ಮಲೇರಿಯಾ ಉಲ್ಬಣಿಸಿದಾಗ
ಲಾರ್ವಾಗಳನ್ನು ನಾಶಮಾಡಲು ವಿಶೇಷ ತಳಿಯ ಮೀನು ತರಿಸಿ ಪ್ರತಿ ಹಳ್ಳಿಯ ಕೆರೆಗೂ ಬಿಟ್ಟರು.
ಮಲೇರಿಯಾ ನಿರ್ಮೂಲನಾ ಅಧಿಕಾರಿಯಾಗಿ ದೇಶದ ತುಂಬಾ ಹೆಸರು ಮಾಡಿದರು.

ಸರಿಸುಮಾರು ಅದೇ ಸಂದರ್ಭದಲ್ಲಿ ಮೈಸೂರು ಸಂಸ್ಥಾನ ಕುಟುಂಬ ಯೋಜನೆಯನ್ನೂ ಜಾರಿಗೊಳಿಸಿತು.
ಸಿ.ವಿ. ನಟರಾಜನ್‌ ಎಂಬುವರನ್ನು ಈ ಯೋಜನೆಗೆ ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಲಾಯಿತು.
ಸರ್‌ ಎಂ. ವಿಶ್ವೇಶ್ವರಯ್ಯನವರು ಕಾಗದ ಕಾರ್ಖಾನೆ, ಕಬ್ಬಿಣ ಹಾಗೂ ಉಕ್ಕಿನ ಕಾರ್ಖಾನೆ,
ಕನ್ನಂಬಾಡಿ ಅಣೆಕಟ್ಟು ಕಟ್ಟಿದರು. ಮೊದಲ ಬಾರಿಗೆ ಜಲ ವಿದ್ಯುತ್‌ ಉತ್ಪಾದನೆ ಆರಂಭಿಸಿದ್ದು
ಸಹ ಇದೇ ಸಂಸ್ಥಾನದಲ್ಲಿ. ಈ ಸಂಗತಿಗಳಲ್ಲಿ ದೊಡ್ಡ ವಿಜ್ಞಾನವೇನೂ ಇಲ್ಲ. ಆದರೆ, ಆಗಿನ
ಆಡಳಿತಗಾರರು ತೋರಿದ ವೈಜ್ಞಾನಿಕ ಮನೋಭಾವ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿತ್ತು.



ಬೆಂಗಳೂರು ಹಿಂದೆಯೂ ದೇಶದ ‘ವಿಜ್ಞಾನ ರಾಜಧಾನಿ’ಯಾಗಿತ್ತು. ಈಗಲೂ ಅದೇ ಕಿರೀಟ ತೊಟ್ಟಿದೆ.
ಮತ್ತೆ, ಸದ್ಯದ ಭವಿಷ್ಯದಲ್ಲಿ ಆ ಪಟ್ಟ ಅಬಾಧಿತ. ನಾನು ವಿದ್ಯಾರ್ಥಿಯಾಗಿದ್ದಾಗ ಇಡೀ ಮೈಸೂರು
ಸಂಸ್ಥಾನದಲ್ಲಿ ವಿಜ್ಞಾನ ಪದವಿ ಅಧ್ಯಯನಕ್ಕಾಗಿ ಇದ್ದ ಏಕೈಕ ವಿದ್ಯಾಕೇಂದ್ರವಾಗಿತ್ತು
ಸೆಂಟ್ರಲ್‌ ಕಾಲೇಜು. ತಮ್ಮ ದೈನಂದಿನ ಕೆಲಸ–ಕಾರ್ಯಗಳಿಗೆ ಬೇಕಾದ ವಿದ್ಯಾವಂತರನ್ನು ತಯಾರು
ಮಾಡುವುದಷ್ಟೇ ಬ್ರಿಟಿಷ್‌ ಆಡಳಿತಗಾರರ ಉದ್ದೇಶವಾಗಿತ್ತು. ವಿಜ್ಞಾನಿಗಳನ್ನು ಬೆಳೆಸುವಂತಹ
ವ್ಯವಸ್ಥೆ ಕಲ್ಪಿಸಿ ನಮ್ಮನ್ನೆಲ್ಲ ಉದ್ಧಾರ ಮಾಡುವಷ್ಟು ಔದಾರ್ಯ ಆಗ ಎಲ್ಲಿತ್ತು?



ಸ್ವಾತಂತ್ರ್ಯ ಸಿಕ್ಕ ಹೊಸತರಲ್ಲಿ ನಾನು ಸೆಂಟ್ರಲ್‌ ಕಾಲೇಜಿನ ವಿದ್ಯಾರ್ಥಿ. ನನಗಿನ್ನೂ
ಚೆನ್ನಾಗಿ ನೆನಪಿದೆ. ‘ಕರ್ನಾಟಕ ಏಕೀಕರಣ ಬೇಕೇ, ಬೇಡವೇ’ ಎಂಬ ವಿಷಯವಾಗಿ ಆಗ ಚರ್ಚಾಕೂಟ
ನಡೆದಿತ್ತು. ಅದರಲ್ಲಿ ನಾನೂ ಪಾಲ್ಗೊಂಡು ರಾಜ್ಯ ಪರಿಕಲ್ಪನೆಯ ಕುರಿತು ನನ್ನ
ಪಾಂಡಿತ್ಯವನ್ನು ಪ್ರದರ್ಶಿಸಿದ್ದೆ. ಅದೇ 1956ರಲ್ಲಿ ರಾಜ್ಯ ಉದಯವಾಗುವ ವೇಳೆಗೆ ನಾನು
ಅಮೆರಿಕದಲ್ಲಿ ಓದುತ್ತಿದ್ದೆ!



‘ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಬೇಕು’ ಎಂಬ ಪ್ರಶ್ನೆಯನ್ನು ನಾವೀಗ
ಎತ್ತಿಕೊಳ್ಳೋಣ. ಯಾವುದೇ ಕ್ಷೇತ್ರದಲ್ಲಿ ಹಣ ತೊಡಗಿಸುವಾಗ ಮುಂದಿನ ನೂರು ವರ್ಷಗಳ ಗುರಿ
ಇರಬೇಕು. ಅನುಮಾನವೇ ಇಲ್ಲ, ಶಿಕ್ಷಣ ಹಾಗೂ ಸಂಶೋಧನೆಯಿಂದ ಮಾತ್ರ ಅಪೇಕ್ಷಿತ ಬದಲಾವಣೆ ತರಲು
ಸಾಧ್ಯ. ಈ ಕ್ಷೇತ್ರಗಳೇ ನಮ್ಮ ಆದ್ಯತಾ ವಲಯಗಳಾಗಬೇಕು. ನಮ್ಮ ಆದ್ಯತೆ ಗುರುತಿಸುವಲ್ಲಿ
ವಿಫಲವಾಗಿದ್ದರಿಂದ ಕಳೆದ 60 ವರ್ಷಗಳಲ್ಲಿ ರಾಜ್ಯದಲ್ಲಿ, ಅಷ್ಟೇ ಏಕೆ, ದೇಶದಲ್ಲಿ ವಿಜ್ಞಾನ
ಸಹಜ 

[ms-stf '66225'] ಬಾಹ್ಯಾಕಾಶದಲ್ಲಿ ಹೊಸ ರಾಷ್ಟ್ರದ ನಿರ್ಮಾಣ | ಪ್ರಜಾವಾಣಿ

2016-10-19 Thread HAREESHKUMAR K Agasanapura
http://m.prajavani.net/article/2016_10_20/446147

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '66017'] ಇಂಟರ್ನೆಟ್ ನಿರ್ವಹಣೆಯಲ್ಲೊಂದು ಐತಿಹಾಸಿಕ ಪಲ್ಲಟ | ಪ್ರಜಾವಾಣಿ

2016-10-12 Thread HAREESHKUMAR K Agasanapura
http://m.prajavani.net/article/2016_10_12/444294

*ಇಂಟರ್ನೆಟ್ ನಿರ್ವಹಣೆಯಲ್ಲೊಂದು ಐತಿಹಾಸಿಕ ಪಲ್ಲಟ*

12 Oct, 2016

ಎನ್.ಎ.ಎಂ. ಇಸ್ಮಾಯಿಲ್








ಸೆಪ್ಟೆಂಬರ್ ತಿಂಗಳ ಕೊನೆಯ ದಿನ ಇಂಟರ್ನೆಟ್‌ನ ಇತಿಹಾಸದಲ್ಲಿ ಒಂದು ಮಹತ್ತರ ಪಲ್ಲಟ
ಸಂಭವಿಸಿತು. ಏನೀ ಪಲ್ಲಟ? ತಾಂತ್ರಿಕ ಪಾರಿಭಾಷಿಕ ಪದಗಳನ್ನು ಬಳಸದೇ ಹೇಳಬೇಕೆಂದರೆ 2016ರ
ಸೆಪ್ಟೆಂಬರ್ 30ಕ್ಕೆ ಇಂಟರ್ನೆಟ್‌ನ ಬೆನ್ನೆಲುಬಾದ ವಿಳಾಸ ಪುಸ್ತಕದ ಮೇಲಿದ್ದ ಅಮೆರಿಕ
ಸರ್ಕಾರ ನಿಯಂತ್ರಣ ಕೊನೆಗೊಂಡಿತು. ಇನ್ನು ಮುಂದೆ ಇದನ್ನು ಯಾವುದೇ ಸರ್ಕಾರದ ನಿಯಂತ್ರಣದಿಂದ
ಹೊರತಾದ, ಜಾಗತಿಕ ಇಂಟರ್ನೆಟ್ ಬಳಕೆದಾರರ ವಿವಿಧ ವರ್ಗಗಳನ್ನು ಪ್ರತಿನಿಧಿಸುವ ಸ್ವತಂತ್ರ
ಸಮುದಾಯವೊಂದು ನಿಯಂತ್ರಿಸಲಿದೆ.

ಎಷ್ಟೇ ಸರಳವಾಗಿ ಹೇಳಿದರೂ ಇದೊಂದು ಒಗಟಿನಂತೆ ಕಾಣುವ ವಿಚಾರ. ಇಂಟರ್ನೆಟ್ ಎಂಬುದು ಯಾವುದೋ
ಒಂದು ಸರ್ಕಾರ ಅಥವಾ ಒಂದು ಕಂಪೆನಿ ಅಥವಾ ಕಂಪೆನಿಗಳ ಕೂಟವೊಂದು ನಡೆಸುತ್ತಿರುವ
ವ್ಯವಸ್ಥೆಯಲ್ಲ. ಇದು ಜಗತ್ತಿನಾದ್ಯಂತ ಹರಡಿರುವ ಕಂಪ್ಯೂಟರ್‌ಗಳ ಜಾಲ. ಇದು ಯಶಸ್ವಿಯಾಗಿ
ಕಾರ್ಯ ನಿರ್ವಹಿಸುವುದಕ್ಕೆ ಒಂದು ಸರಿಯಾದ ವಿಳಾಸ ವ್ಯವಸ್ಥೆ ಇರಬೇಕು. ಉದಾಹರಣೆಗೆ ವಿಶ್ವದ
ಯಾವ ಮೂಲೆಯಲ್ಲಿ ಕುಳಿತು ಇಂಟರ್ನೆಟ್ ಸಂಪರ್ಕವಿರುವ ಯಾವುದೇ ಉಪಕರಣದಲ್ಲಿ ‘prajavani.net’
ಎಂದು ಟೈಪಿಸಿದರೆ ಅದು ‘ಪ್ರಜಾವಾಣಿ’ ಪತ್ರಿಕೆಯ ಅಂತರ್ಜಾಲ ತಾಣವನ್ನು ನಿಮ್ಮ ಎದುರು
ತೆರೆದಿಡುತ್ತದೆ.

ಇದು ಸಾಧ್ಯವಾಗುವುದು ಡೊಮೈನ್ ನೇಮ್ ಸಿಸ್ಟಂ ಅಥವಾ ಡಿಎನ್‌ಎಸ್ ಎಂದು ಕರೆಯುವ ವಿಳಾಸ
ವ್ಯವಸ್ಥೆಯಿಂದ. ಪ್ರತಿಯೊಂದು ಜಾಲ ತಾಣಕ್ಕೂ ಒಂದು ವಿಶಿಷ್ಟವಾದ ಸಂಖ್ಯಾ
ಸಂಜ್ಞೆಯಿರುತ್ತದೆ. ಬಳಕೆದಾರರು ನಿರ್ದಿಷ್ಟವಾದ ವಿಳಾಸವನ್ನು ಬ್ರೌಸರ್‌ನಲ್ಲಿ ಟೈಪಿಸಿದಾಗ
ಈ ವ್ಯವಸ್ಥೆ ಆ ನಿರ್ದಿಷ್ಟ ವಿಳಾಸ ಯಾವ ಸರ್ವರ್‌ನಲ್ಲಿದೆ ಎಂದು ಪತ್ತೆ ಹಚ್ಚಿ ಅಲ್ಲಿಗೆ
ಕೊಂಡೊಯ್ಯುತ್ತದೆ.

ಈ ವ್ಯವಸ್ಥೆ ಏಕೆ ಬೇಕು? ಒಂದು ಸರಳ ಉದಾಹರಣೆಯೊಂದಿಗೆ ಈ ಪ್ರಶ್ನೆಗೆ ಉತ್ತರ ನೀಡಬಹುದು.
ಒಂದು ಊರಿನ ಬೀದಿಗಳ ಹೆಸರು ಮತ್ತು ಮನೆಯ ಸಂಖ್ಯೆಯನ್ನು ಪ್ರತಿಯೊಬ್ಬರೂ ತಮಗೆ ತೋಚಿದಂತೆ
ಇಟ್ಟುಕೊಂಡರೆ ಏನಾಗಬಹುದು. ಒಂದೇ ಬೀದಿಯಲ್ಲಿ ಒಂದೇ ವಿಳಾಸವಿರುವ ಹತ್ತಾರು ಜನರು. ಒಂದು
ಊರಿನಲ್ಲಿ ಒಂದೇ ಹೆಸರಿನ ಹತ್ತಾರು ಬೀದಿಗಳು ಕಾಣಿಸಿಕೊಂಡು ವಿಳಾಸ ಎಂಬ ಪರಿಕಲ್ಪನೆಯೇ
ಅರ್ಥಹೀನವಾಗುತ್ತದೆ. ನಗರಗಳಲ್ಲಿ ಇದನ್ನು ನಗರಾಡಳಿತ ಸಂಸ್ಥೆಗಳು ನಿರ್ವಹಿಸುತ್ತವೆ.

ಇಂಟರ್ನೆಟ್ ಎಂಬ ಮಹಾಜಗತ್ತಿನಲ್ಲಿ ಇದನ್ನು ನಿಯಂತ್ರಿಸುವುದಕ್ಕೆ ಇರುವ ವ್ಯವಸ್ಥೆಯೇ
ಐಕ್ಯಾನ್ (ಐಸಿಎಎನ್ಎನ್=ಇಂಟರ್‌ನೆಟ್ ಕಾರ್ಪೊರೇಷನ್ ಫಾರ್ ಅಸೈನ್ಡ್ ನೇಮ್ಸ್ ಅಂಡ್
ನಂಬರ್‍ಸ್). ಇದರ ಅಂಗ ಸಂಸ್ಥೆಯಾದ ಐಎಎನ್ಎ ಅಥವಾ ಇಂಟರ್ನೆಟ್ ಅಸೈನ್ಡ್ ನಂಬರ್ಸ್ ಅಥಾರಿಟಿ
ಎಂಬ ಸಂಸ್ಥೆಯೊಂದು ವಿಳಾಸ ಪುಸ್ತಕದ ನಿರ್ವಹಣೆ ನಡೆಸುತ್ತದೆ.

ಇದಕ್ಕೂ ಮೊದಲು ಈ ಜವಾಬ್ದಾರಿಯನ್ನು ಇಂಟರ್ನೆಟ್‌ನ ಆದಿಮ ರೂಪವಾದ ‘ಅರ್ಪಾನೆಟ್‌’
ಸೃಷ್ಟಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಜಾನ್ ಪೋಸ್ಟೆಲ್ ಎಂಬ ವಿಜ್ಞಾನಿ
ನೋಡಿಕೊಳ್ಳುತ್ತಿದ್ದರು. ಜಾನ್ ಪೋಸ್ಟೆಲ್ ಮೊದಲಿಗೆ ಲಾಸ್ ಏಂಜಲಿಸ್‌ನ  ಕ್ಯಾಲಿಫೋರ್ನಿಯ
ವಿಶ್ವವಿದ್ಯಾಲಯದ ಪರವಾಗಿ ಈ ಕೆಲಸ ಮಾಡುತ್ತಿದ್ದರು. ಆಮೇಲೆ ಅಮೆರಿಕದ ರಕ್ಷಣಾ ಇಲಾಖೆಯು
ಯೂನಿವರ್ಸಿಟಿ ಆಫ್ ಸದರನ್ ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪಿಸಿದ್ದ ಮಾಹಿತಿ ವಿಜ್ಞಾನ
ಸಂಸ್ಥೆಯ ಪರವಾಗಿ ಈ ಕೆಲಸ ಮಾಡುತ್ತಿದ್ದರು.

ಹಾಗೆ ನೋಡಿದರೆ ಇಂಟರ್ನೆಟ್‌ನ ಪರಿಕಲ್ಪನೆಯೇ ಅಮೆರಿಕದ ರಕ್ಷಣಾ ಇಲಾಖೆಯ ಪ್ರಯೋಗಾಲಯಗಳಲ್ಲಿ
ಹುಟ್ಟಿಕೊಂಡದ್ದು. ಇದು ಅರ್ಪಾನೆಟ್ ಆಗಿ ಹೊರಜಗತ್ತಿಗೆ ಬಂದು ಅಲ್ಲಿಂದ ವಿಶ್ವವ್ಯಾಪಿಯಾದ
ನಂತರ ಇದನ್ನು ನಿರ್ವಹಿಸುವವರು ಯಾರು ಎಂಬ ಸಮಸ್ಯೆ ಹುಟ್ಟಿಕೊಂಡಿತು. ಮಾಹಿತಿ ವಿನಿಮಯದ ಜಾಲ
ವ್ಯಾಪರಕ್ಕಾಗಿಯೂ ಬಳಕೆಯಾಗ ತೊಡಗಿದ ನಂತರ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂಟರ್ನೆಟ್‌ನ ವಿಳಾಸ
ಪುಸ್ತಕವನ್ನು ನಿರ್ವಹಿಸುವ ಹೊಣೆಯನ್ನು ನಿರ್ವಹಿಸುವುದು ಕಷ್ಟವಾಗುತ್ತಿತ್ತು.

ಈ ಎಲ್ಲಾ ಕಾರಣಗಳಿಂದ ಅಮೆರಿಕದ ವಾಣಿಜ್ಯ ಇಲಾಖೆಯ ಅಡಿಯಲ್ಲಿರುವ ನ್ಯಾಷನಲ್
ಟೆಲಿಕಮ್ಯುನಿಕೇಷನ್ ಅಂಡ್ ಇನ್ಫಾರ್ಮೇಷನ್ ಅಡ್ಮಿನಿಸ್ಟ್ರೇಷನ್ ಎಂಬ ಸಂಸ್ಥೆ ಇಂಟರ್ನೆಟ್‌ನ
ವಿಳಾಸ ಪುಸ್ತಕವನ್ನು ಹೇಗೆ ನಿರ್ವಹಿಸಬೇಕು ಎಂಬ ಪ್ರಸ್ತಾವನೆಯೊಂದನ್ನು ಮುಂದಿಟ್ಟಿತು.
ಇದಕ್ಕೆ ಬಂದ ಪ್ರತಿಕ್ರಿಯೆಗಳನ್ನು ಅನುಲಕ್ಷಿಸಿ 1998ರಲ್ಲಿ ಐಕ್ಯಾನ್‌ನ ಸ್ಥಾಪನೆಯಾಯಿತು.
ಅಮೆರಿಕದ ವಾಣಿಜ್ಯ ಇಲಾಖೆ ಐದು ವರ್ಷಗಳ ಅವಧಿಗೆ ಇಂಟರ್ನೆಟ್ ವಿಳಾಸ ಪುಸ್ತಕದ
ನಿರ್ವಹಣೆಯನ್ನು ಈ ಸಂಸ್ಥೆ ಮಾಡಬಹುದು ಎಂಬ ಕರಾರು ಮಾಡಿಕೊಂಡು ಅನುಮತಿ ನೀಡಿತು.

ಐಕ್ಯಾನ್ ಆಗಲೂ ಮತ್ತು ಈಗಲೂ ಒಂದು ಕ್ಯಾಲಿಫೋರ್ನಿಯಾ ರಾಜ್ಯದ ಕಾನೂನಿನ ಅಡಿಯಲ್ಲಿ
ರೂಪುಗೊಂಡಿದ್ದ ಸರ್ಕಾರೇತರ ಸಂಸ್ಥೆ. ಐದು ವರ್ಷಗಳಲ್ಲಿ ಇದು ಜಾಗತಿಕ ಬಹುಪಾಲುದಾರರ
ನಿಯಂತ್ರಣವಿರುವ ಸಂಸ್ಥೆಯಾಗಿ ಬದಲಾಗಬೇಕು ಎಂಬುದನ್ನು ಅಂದೇ ನಿರ್ಧರಿಸಲಾಗಿತ್ತಾದರೂ
ಅಮೆರಿಕದ ರಾಜಕಾರಣದೊಳಗಿನ ಎಳೆದಾಟಗಳು ಇದನ್ನು ಸಾಧ್ಯ ಮಾಡಲೇ ಇಲ್ಲ.

ಇಂಟರ್ನೆಟ್‌ನ ವಿಳಾಸ ಪುಸ್ತಕವನ್ನು ನಿಯಂತ್ರಿಸುವಲ್ಲಿ ಅಮೆರಿಕದ್ದೇ ಕೊನೆಯ ಮಾತಾಗಿರುವುದು
ಸರಿಯಲ್ಲ ಎಂಬ ಅಭಿಪ್ರಾಯ ಆಗಿನಿಂದಲೂ ಇತ್ತು. ಇದಕ್ಕೆ ನಿಜವಾದ ವೇಗ ದೊರೆತದ್ದು ಅಮೆರಿಕದ
ಗುಪ್ತಚರ ಸಂಸ್ಥೆಗಳು ಹೇಗೆ ಇಂಟರ್ನೆಟ್‌ನಲ್ಲಿ ನಡೆಯುತ್ತಿರುವ ಸಂವಹನದ ಮೇಲೆ ನಿಗಾ
ಇಡುತ್ತಿವೆ ಎಂಬ ವಿವರಗಳು ಬಯಲಾದ ನಂತರ. ಎಡ್ವರ್ಡ್ ಸ್ನೋಡೆನ್ ಈ ವಿವರಗಳನ್ನು ಬಹಿರಂಗ
ಪಡಿಸಿದ ನಂತರ ಐಕ್ಯಾನ್ ಅಮೆರಿಕ ಸರ್ಕಾರದ ನಿಯಂತ್ರಣದಲ್ಲಿ ಇರಬಾರದು ಎಂಬ ವಾದ ಹೆಚ್ಚು
ಪ್ರಬಲವಾಯಿತು.

ಭಾರತ, ಬ್ರೆಝಿಲ್ ಮತ್ತು ಚೀನಾಗಳು ಈ ವಿಷಯದಲ್ಲಿ ಬಹಳ ಕಠಿಣವಾದ ನಿಲುವನ್ನೇ ತಳೆದವು.
ಎಲ್ಲಿಯ ತನಕ ಎಂದರೆ ಇಂಟರ್ನೆಟ್‌ನ ಜಾಗತಿಕ ವಿಳಾಸ ಪುಸ್ತಕದ ಪರಿಕಲ್ಪನೆಯನ್ನೇ ಅಡಿಮೇಲು
ಮಾಡಿಬಿಡುವ ತನಕ ಈ ವಿರೋಧ ಬೆಳೆಯಿತು. ಈ ಎಲ್ಲಾ ಒತ್ತಡಗಳಿಂದ ಅಮೆರಿಕ ಕೂಡಾ
ಬಗ್ಗಬೇಕಾಯಿತು. ಇದೊಂದು ರಾಜತಾಂತ್ರಿಕ 

[ms-stf '65894'] ಉಡಿಯ ಕಿಡಿ ಸಿಡಿದರೆ ಅರ್ಧ ಜಗವೇ ನಾಶ | ಪ್ರಜಾವಾಣಿ

2016-10-05 Thread HAREESHKUMAR K Agasanapura
http://m.prajavani.net/article/2016_10_06/443141

*ಉಡಿಯ ಕಿಡಿ ಸಿಡಿದರೆ ಅರ್ಧ ಜಗವೇ ನಾಶ*

6 Oct, 2016

ನಾಗೇಶ್ ಹೆಗಡೆ








ಚರಿತ್ರೆಯಲ್ಲಿ ತೀರ ಅಪರೂಪಕ್ಕೆ ಹೀಗಾಗುತ್ತದೆ: ನೀರಿನ ವಿಷಯದಲ್ಲಿ ಕರ್ನಾಟಕ ಮತ್ತು ಭಾರತ
ಒಂದೇ ಬಗೆಯ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿವೆ. ನಮಗೆ ಇಲ್ಲಿ ಕಾವೇರಿ ಇದ್ದ ಹಾಗೆ,
ಭಾರತಕ್ಕೆ ಅಲ್ಲಿ ಕಾಶ್ಮೀರಿ ಕಣಿವೆಯಲ್ಲಿ ಸಿಂಧೂ ನದಿ ಇದೆ. ನಮ್ಮದೇ ನದಿಯಾದರೂ ನಮ್ಮ
ಇಚ್ಛೆಗೆ ತಕ್ಕಂತೆ ಅದನ್ನು ಬಳಸುವ ಹಾಗಿಲ್ಲ.

ಇಲ್ಲಿ ಕಾವೇರಿ ನೀರಿನ ಬಗ್ಗೆ ತಮಿಳುನಾಡು ನಮಗೆ ನಿರ್ಬಂಧ ಹಾಕುವ ಹಾಗೆ ಪಾಕಿಸ್ತಾನ ಅಲ್ಲಿ
ಭಾರತಕ್ಕೆ ನಿರ್ಬಂಧ ಹಾಕಿದೆ. ಹಾಗೆಂದು ನಾವು ಗೊಣಗುವಂತಿಲ್ಲ, ಏಕೆಂದರೆ ಜಗತ್ತಿನ ಎಲ್ಲ
ಕಡೆ ಇದೇ ನಿಯಮ ಇದೆ. ನದಿಯ ಉಗಮಸ್ಥಾನದ ಬಳಕೆದಾರರು ಕೆಳ ಹರಿವಿನ ಬಳಕೆದಾರರಿಗೆ ತೊಂದರೆ
ಮಾಡಬಾರದು. ಕೆಳಹರಿವಿನ ಜನರು ನೀರನ್ನು ಹೇಗೆ ಬೇಕಾದರೂ ಬಳಸಬಹುದು; ಆದರೆ ಉಗಮಸ್ಥಾನದವರ
ಸ್ವಾತಂತ್ರ್ಯಕ್ಕೆ ನಿರ್ಬಂಧಗಳಿವೆ.

ಕಾಶ್ಮೀರದ ಸಿಂಧೂ (ಇಂಡಸ್) ಕಣಿವೆಗೆ ಬನ್ನಿ. ಒಪ್ಪಂದದ ಪ್ರಕಾರ ಪಾಕಿಸ್ತಾನಕ್ಕೆ ಹೋಗುವ
ಆರು ಉಪನದಿಗಳಲ್ಲಿ ರಾವಿ, ಬಿಯಾಸ್ ಮತ್ತು ಸತ್ಲೆಜ್ ಈ ಮೂರು ಉಪನದಿಗಳಷ್ಟೆ ನಮ್ಮ
ಬಳಕೆಗಿವೆ. ಇನ್ನಿತರ ಮೂರು-ಸಿಂಧೂ, ಝೆಲಮ್ ಮತ್ತು ಚಿನಾಬ್ ನದಿಗಳಿಂದ ಹೆಚ್ಚೆಂದರೆ ಶೇ
20ರಷ್ಟು ನೀರನ್ನು ಮಾತ್ರ ಬಳಸಿಕೊಳ್ಳಬಹುದು. ಈ ಆರೂ ಉಪನದಿಗಳು ಮುಂದೆ ಪಾಕಿಸ್ತಾನದಲ್ಲಿ
ಒಂದಾಗಿ ಸಿಂಧೂ ನದಿಯೇ ಆಗುತ್ತವೆ.

ಪಾಕಿಸ್ತಾನಕ್ಕೆ ಇರುವುದು ಅದೊಂದೇ ನದಿ. 1960ರ ಈ ಒಪ್ಪಂದಕ್ಕೆ ಆಸ್ಟ್ರೇಲಿಯಾ,
ನ್ಯೂಝಿಲ್ಯಾಂಡ್, ಬ್ರಿಟನ್, ಅಮೆರಿಕ ಮತ್ತು ಕೆನಡಾ ದೇಶಗಳ ಸಾಕ್ಷಿ ಸಹಿ ಇದೆ. ಭಾರತ ಈಗ
ಅದನ್ನು ಧಿಕ್ಕರಿಸಿದರೆ, ಅಂದರೆ ಸಿಂಧೂ ಉಪನದಿಗಳ ನೀರಿಗೆ ತಡೆಯೊಡ್ಡಿದರೆ ಪಾಕಿಸ್ತಾನದ
ಕನಿಷ್ಠ ಎರಡು ಕೋಟಿ ಜನರು ಸಿಡಿದೆದ್ದು ಪಾಕಿಸ್ತಾನ ಯುದ್ಧ ಸಾರುತ್ತದೆ. ಮೇಲಾಗಿ ಆ ಆರೂ
ಸಾಕ್ಷಿರಾಷ್ಟ್ರಗಳು ಭಾರತಕ್ಕೆ ದಿಗ್ಬಂಧನ ಹಾಕಬಹುದು.

ಭಾರತ ಸಿಂಧೂ ಕಣಿವೆಯ ಗೊಡವೆಗೆ ಹೋಗಲೇ ಇಲ್ಲ. ಚಿಕ್ಕಪುಟ್ಟ ಯೋಜನೆಗಳಿಂದಾಗಿ
ವಿವಾದಗಳೆದ್ದರೂ ಅಲ್ಲಲ್ಲೇ ಬಗೆಹರಿದಿವೆ. ಪಾಕಿಸ್ತಾನದೊಂದಿಗಿನ ಕಳೆದ ಮೂರು ಯುದ್ಧಗಳ
ಸಮಯದಲ್ಲೂ ಸಿಂಧೂ- ಝೆಲಮ್- ಚಿನಾಬ್‌ನ ನೀರನ್ನು ಅಡ್ಡ ತಿರುಗಿಸುವ ಬಗ್ಗೆ ಮಾತಾಡಲಿಲ್ಲ.
ಅಡ್ಡ ತಿರುಗಿಸುವುದು ಸುಲಭವೂ ಅಲ್ಲ; ಲಕ್ಷ ಕೋಟಿ ಅಲ್ಲ, ಕೋಟಿ ಕೋಟಿ ಹಣ ಸುರಿದರೂ ಒಂದೆರಡು
ದಶಕಗಳಲ್ಲಿ ಆಗುವ ಕೆಲಸವೂ ಅದಲ್ಲ. ಆದರೆ ಈಗ ಅದರ ಪ್ರಸ್ತಾಪ ಮತ್ತೆ ಮತ್ತೆ ಆಗುತ್ತಿದೆ.

ಸಿಂಧೂ ಎಂದಾಕ್ಷಣ ಪಾಕಿಸ್ತಾನ ಮುಟ್ಟಿದರೆ ಮುನಿದೇಳುತ್ತದೆ. ಕಳೆದ ವಾರ ‘ಇಂಡಿಯಾ ಟುಡೇ’
ಚಾನೆಲ್‌ನ ರಾಹುಲ್ ನೀಲಕಮಲ್ ಹೇಗೊ ಷಿಕ್ಯಾಗೊದಲ್ಲಿರುವ ಮಾಜಿ ಪಾಕ್ ಅಧ್ಯಕ್ಷ ಜನರಲ್
ಮುಷರ್ರಫ್‌ರನ್ನು ಮಾತಿಗೆಳೆದರು.

ಪಾಕಿಸ್ತಾನವನ್ನು ಭಾರತ ಶಿಕ್ಷಿಸಬಹುದಾದ ವಿವಿಧ ವಿಧಾನಗಳ ಬಗೆಗಿನ ಪ್ರಶ್ನೆಗಳಿಗೆ
ಸಮಾಧಾನದಿಂದಲೇ ಉತ್ತರ ಕೊಟ್ಟ ಮುಷರ್ರಫ್, ಸಿಂಧೂ ಕಣಿವೆಯ ನೀರನ್ನು ನಿಲ್ಲಿಸುವ ಮಾತು
ಬಂದಾಗ ಮಾತ್ರ ಭುಗಿಲೆದ್ದರು. ‘ಏನು ಏನಂತೀರಿ ರಾಹುಲ್! ಪಾಕಿಸ್ತಾನದಂಥ ಅಣ್ವಸ್ತ್ರ
ಸನ್ನದ್ಧ ದೇಶಕ್ಕೆ ನೀರು ಸಿಗದಂತೆ ಮಾಡುತ್ತೀರಾ? ಅದು ತೀರಾ ತೀರಾ ಗಂಭೀರ ವಿಷಯ. ಅದರ
ಸೊಲ್ಲೆತ್ತಬೇಡಿ’ ಎಂದು ಗದರಿದರು.

ಆದರೆ ನಮ್ಮಲ್ಲಿಯೇ ಸಡಿಲ ನಾಲಗೆಯ ಕೆಲವು ತೀವ್ರವಾದಿಗಳು ಮಾಧ್ಯಮಗಳ ಎದುರು ಅಣ್ವಸ್ತ್ರ
ಪ್ರಯೋಗದ ಬಗ್ಗೆ ಮನ ಬಂದಂತೆ ಮಾತಾಡುತ್ತಾರೆ. ಚಾನೆಲ್‌ಗಳೂ ಅಹೋರಾತ್ರಿ ಯುದ್ಧದ ಭಜನೆ
ಮಾಡುತ್ತಿವೆ. ಅಣ್ವಸ್ತ್ರವೆಂದರೆ ಅದೇನೊ ಆಟವೆಂಬಂತೆ, ಹಬ್ಬದ ಪಟಾಕಿಯೆಂಬಂತೆ ಅದನ್ನೆತ್ತಿ
ಪಾಕಿಸ್ತಾನದ, ಉಗ್ರರ ಶಾಶ್ವತ ದಮನದ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿವೆ.

‘ನಮ್ಮ ಹತ್ತು ಕೋಟಿ ಜನರು ಪಾಕಿಸ್ತಾನದ ಅಣುಬಾಂಬ್‌ಗೆ ತಲೆಯೊಡ್ಡಿದರೆ ನಾವು ಇಡೀ
ಪಾಕಿಸ್ತಾನವನ್ನು ದೂಳೀಪಟ ಮಾಡಬಹುದು’ ಎಂಬರ್ಥದ ಸುಬ್ರಹ್ಮಣ್ಯ ಸ್ವಾಮಿಯ ಹೇಳಿಕೆ
ಲಂಗುಲಗಾಮಿಲ್ಲದೆ ಹರಿದಾಡುತ್ತದೆ.

ಭಾರತ- ಪಾಕಿಸ್ತಾನದ ನಡುವೆ ಪರಮಾಣು ಯುದ್ಧ ಸಂಭವಿಸೀತೆ? ಭಾರತದ ಮಿಲಿಟರಿಯಂತೂ ತಾನು ಮೊದಲು
ಬಟನ್ ಒತ್ತುವುದಿಲ್ಲವೆಂದು ಎಂದೋ ಘೋಷಿಸಿದೆ.ಆದರೆ ನಾವು ಮಾಮೂಲು ದಾಳಿಯನ್ನು ನಡೆಸಿ
ಪಾಕಿಸ್ತಾನದ ಗಡಿಯೊಳ್ಳಕ್ಕೆ ನುಗ್ಗುತ್ತ ಹೋದರೆ ಪಾಕಿಸ್ತಾನ ತನ್ನ ಮೊದಲ ಅಣ್ವಸ್ತ್ರ
ಪ್ರಯೋಗ ಮಾಡುತ್ತದೆಂದು ಅಲ್ಲಿನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ. ಅಂಥ ಮೊದಲ
ಅಸ್ತ್ರವಾಗಿ ‘ನಾಸ್ರ್’ ಕ್ಷಿಪಣಿ ಅಲ್ಲಿಂದ ಬಂದೀತು. ಅದು ಹೆಚ್ಚೆಂದರೆ 60 ಕಿಲೊಮೀಟರ್ ದೂರ
ಬರುತ್ತದೆ.

ತನ್ನದೇ ಭೂಪ್ರದೇಶ ನಾಶವಾದರೂ ಚಿಂತೆಯಿಲ್ಲ, ಅಲ್ಲಿಗೆ ಬಂದ ಭಾರತೀಯ ಸೈನ್ಯವನ್ನು ಹೊಸಕಿ
ಹಾಕಲು ಅದು ಯತ್ನಿಸಬಹುದು. ಅಥವಾ ಒಂದೊಮ್ಮೆ ಪಾಕಿಸ್ತಾನ ಆಗಲೂ ಸಂಯಮವನ್ನು
ಪ್ರದರ್ಶಿಸಿದರೆ, ಅಂದರೆ ಅಣ್ವಸ್ತ್ರ ಪ್ರಯೋಗ ಮಾಡದೇ ಇದ್ದರೂ, ಅಲ್ಲಿನ ಉಗ್ರರು ಕೈಕಟ್ಟಿ
ಕೂರಲಿಕ್ಕಿಲ್ಲ. ವರದಿಗಳ ಪ್ರಕಾರ, ಈ ಹಿಂದೆ ನಾಲ್ಕು ಬಾರಿ ಉಗ್ರರು ಪಾಕಿಸ್ತಾನದ್ದೇ
ಅಣ್ವಸ್ತ್ರ ತಯಾರಿಕೆಯ ನೆಲೆಗಳ ಮೇಲೆ ದಾಳಿ ಮಾಡಿದ್ದಾರೆ.

ಬಾಂಬ್ ತಯಾರಿಕೆಗೆ ಬೇಕಿದ್ದ ದ್ರವ್ಯಗಳನ್ನು ಅವರು ಕದ್ದಿರಬಹುದು, ಬಾಂಬನ್ನೇ ಕದ್ದಿರಬಹುದು
ಅಥವಾ ಬಾಂಬನ್ನು ಹೂಡಿಟ್ಟ ಕ್ಷಿಪಣಿಯನ್ನೇ ಕದ್ದು ಸಾಗಿಸಿರಬಹುದು. ನಮ್ಮಲ್ಲಿರುವಷ್ಟು
ಅಚ್ಚುಕಟ್ಟಾದ ಯುದ್ಧವ್ಯವಸ್ಥೆ ಪಾಕಿಸ್ತಾನದಲ್ಲಿಲ್ಲ. ಅಲ್ಲಿ ಸರ್ಕಾರ ಮತ್ತು ಮಿಲಿಟರಿ
ನಡುವೆ ಹೊಂದಾಣಿಕೆ ಕಮ್ಮಿ. ಉಗ್ರರು ಎಲ್ಲೆಲ್ಲೋ ತೂರಿಕೊಂಡಿದ್ದಾರೆ.

ಹೀಗಾಗಿ ಎರಡು ದೇಶಗಳ ನಡುವೆ ಚಿಕ್ಕದೊಂದು ಸಂಘರ್ಷವೂ (ಅಥವಾ ಮುಷರ್ರಫ್ ಹೇಳಿದ ಹಾಗೆ,
ಸಿಂಧೂ ನದಿಗೆ ದಿಗ್ಬಂಧನ ಹಾಕುವ ಸಿದ್ಧತೆಯೂ) ಅಣ್ವಸ್ತ್ರ ಪ್ರಯೋಗಕ್ಕೆ
ಕಾರಣವಾಗಬಹುದು. ಆಗೇನಾದರೂ ಭಾರತ ಪ್ರತೀಕಾರ ಭಾವದಿಂದ ತನ್ನ ಅಣ್ವಸ್ತ್ರವನ್ನು
ಚಿಮ್ಮಿಸಿದ್ದೇ ಆದರೆ ಪಾಕಿಸ್ತಾನದಿಂದ ಮಧ್ಯದೂರದ ಕ್ಷಿಪಣಿಗಳು ನಮ್ಮತ್ತ ತೂರಿ ಬರಬಹುದು.
ಅದಕ್ಕೆ ಪ್ರತಿಯಾಗಿ ನಾವೂ ಠೇಂಕರಿಸಲೇಬೇಕು.

ಅಮೆರಿಕದ ‘ಬುಲ್ಲೆಟಿನ್ ಆಫ್ ಅಟಾಮಿಕ್ ಸೈಂಟಿಸ್ಟ್ಸ್’ ಪತ್ರಿಕೆಯ 2015 ವರದಿಯ ಪ್ರಕಾರ
ಪಾಕಿಸ್ತಾನದ ಬಳಿ ಎಫ್-ಸಿಕ್ಸ್‌ಟೀನ್ ಮತ್ತು ಮಿರಾಜ್ ವಿಮಾನಗಳಲ್ಲಿ 36 ಅಣುಬಾಂಬ್‌ಗಳಿವೆ;
ಘಝ್ನವಿ, ಶಹೀನ್, ಘಾವ್ರಿ ಮತ್ತು ನಾಸ್ರ್ ಹೆಸರಿನ ಕ್ಷಿಪಣಿಗಳಲ್ಲಿ 86 ಬಾಂಬ್‌ಗಳಿವೆ.
ದೂರಗಾಮಿ 

[ms-stf '64955'] ಇಜ್ಞಾನ ಡಾಟ್ ಕಾಮ್: ಕನ್ನಡ ಪುಸ್ತಕಗಳ ಇ-ಅವತಾರ

2016-09-14 Thread HAREESHKUMAR K Agasanapura
http://www.ejnana.com/2016/09/blog-post_14.html?m=1

*ಕನ್ನಡ ಪುಸ್ತಕಗಳ ಇ-ಅವತಾರ*

*ಟಿ. ಜಿ. ಶ್ರೀನಿಧಿ*



ತಂತ್ರಜ್ಞಾನ ಹಾಗೂ ಪುಸ್ತಕ ಸಂಸ್ಕೃತಿಯ ಮಾತು ಒಟ್ಟಿಗೆ ಕೇಳಿಬಂದಾಗಲೆಲ್ಲ ನಮಗೆ ಪರಸ್ಪರ
ವಿರುದ್ಧವಾದ ಎರಡು ವಾದಗಳು ಕೇಳಸಿಗುತ್ತವೆ. "ಟೆಕ್ನಾಲಜಿಯಿಂದಾಗಿ ಪುಸ್ತಕ ಓದುವ ಹವ್ಯಾಸವೇ
ಕಡಿಮೆಯಾಗುತ್ತಿದೆ" ಎಂದು ಕೆಲವರು ಹೇಳಿದರೆ "ಪುಸ್ತಕ ಸಂಸ್ಕೃತಿ ಉಳಿಯಬೇಕಾದರೆ
ತಂತ್ರಜ್ಞಾನದ ಸಹಾಯ ಬೇಕೇಬೇಕು" ಎಂದು ಇನ್ನು ಕೆಲವರು ಹೇಳುತ್ತಾರೆ. ಸಂತೋಷದ ವಿಷಯವೆಂದರೆ
ಇಷ್ಟೆಲ್ಲ ಮಾತನಾಡುವವರ ನಡುವೆ ಸದ್ದಿಲ್ಲದೆ ಕೆಲಸಮಾಡುವವರೂ ಅನೇಕರಿದ್ದಾರೆ, ಹಾಗೂ ಅವರ
ಪ್ರಯತ್ನಗಳ ಫಲವಾಗಿ ಇಂದು ಕನ್ನಡ ಪುಸ್ತಕಗಳೂ ಇ-ಅವತಾರದಲ್ಲಿ ಕಾಣಿಸಿಕೊಳ್ಳುತ್ತಿವೆ.
ಓದುಗ, ಪ್ರಕಾಶಕ, ತಂತ್ರಜ್ಞ ಹಾಗೂ ಸರಕಾರ - ಹೀಗೆ ನಾಲ್ಕೂ ನಿಟ್ಟಿನಿಂದ ನಡೆದ
ಪ್ರಯತ್ನಗಳಿಂದಾಗಿ ಕನ್ನಡ ಪುಸ್ತಕಗಳು ಡಿಜಿಟಲ್ ಲೋಕದಲ್ಲಿ ತಮ್ಮ ಸ್ಥಾನ
ಕಂಡುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಸದ್ಯದ ಪರಿಸ್ಥಿತಿಯ ಒಂದು ಅವಲೋಕನ ಇಲ್ಲಿದೆ.

*ಆ ಪುಸ್ತಕ ಇ ಪುಸ್ತಕ* *ಪ್ರಕಟವಾದ ಒಳ್ಳೆಯ ಪುಸ್ತಕಗಳೆಲ್ಲ ನಮಗೆ ಸಿಗುವುದಿಲ್ಲ, ಸಿಕ್ಕರೂ
ಎಲ್ಲವನ್ನೂ ಕೊಂಡಿಟ್ಟುಕೊಳ್ಳಲು ಮನೆಯಲ್ಲಿ ಜಾಗ ಇರುವುದಿಲ್ಲ. ಈ ಸಮಸ್ಯೆ ತಪ್ಪಿಸಲು
ಹುಟ್ಟಿಕೊಂಡದ್ದೇ ವಿದ್ಯುನ್ಮಾನ ಪುಸ್ತಕ, ಅಂದರೆ ಇ-ಬುಕ್‌ಗಳ ಪರಿಕಲ್ಪನೆ. ಪುಸ್ತಕದ
ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು ಅದರ ಭೌತಿಕ ರೂಪವನ್ನು ಡಿಜಿಟಲ್ ರೂಪಕ್ಕೆ
ಪರಿವರ್ತಿಸುವುದು ಇ-ಪುಸ್ತಕಗಳ ವೈಶಿಷ್ಟ್ಯ. ಇವನ್ನು ಓದಲೆಂದೇ ಇ-ಬುಕ್ ರೀಡರ್‌ಗಳೆಂಬ
ಪ್ರತ್ಯೇಕ ಸಾಧನಗಳು ರೂಪುಗೊಂಡಿವೆ. ಅಂತಹುದೊಂದು ಸಾಧನವಿದ್ದರೆ ಸಾಕು, ಆ ಪುಸ್ತಕಗಳಂತೆ
ಇ-ಪುಸ್ತಕದಲ್ಲೂ ಪುಟ ತಿರುಗಿಸಬಹುದು, ಬುಕ್‌ಮಾರ್ಕ್ ಇಡಬಹುದು! ಪ್ರತ್ಯೇಕವಾಗಿ ಇ-ಬುಕ್
ರೀಡರನ್ನೇಕೆ ಕೊಳ್ಳಬೇಕು ಎನ್ನುವವರೂ ಚಿಂತಿಸಬೇಕಿಲ್ಲ. ಅಪಾರ ಸಂಖ್ಯೆಯ ವಿದ್ಯುನ್ಮಾನ
ಪುಸ್ತಕಗಳನ್ನು ನಮ್ಮ ಮೊಬೈಲ್ ಹಾಗೂ ಟ್ಯಾಬ್ಲೆಟ್ಟುಗಳಲ್ಲೇ ಒದಗಿಸುವ ಅನೇಕ ಆಪ್‌ಗಳೂ ಇವೆ.
ಇಂತಹ ಯಾವುದೇ ಸೌಲಭ್ಯ ಬಳಸಿ ನಾವೂ ಇ-ಪುಸ್ತಕಗಳಿಗೆ ತೆರೆದುಕೊಳ್ಳಬಹುದು.*


*ಓದುಗ ಮೆಚ್ಚಿದ ಡಿಜಿಟಲ್ ರೂಪ*
ಹೊಸ ಅವಕಾಶಗಳನ್ನು ಅರಸಿ ದೂರದ ನಾಡುಗಳಿಗೆ ಹೋದರೂ ಕನ್ನಡ ಪುಸ್ತಕಗಳಿಂದ ದೂರವಾಗದ ಅನೇಕ
ಮಂದಿ ಇದ್ದಾರೆ. ಇವರಿಗೆಲ್ಲ ಹೊಸ ಪುಸ್ತಕಗಳನ್ನು ಪಡೆಯುವ ಸುಲಭ ಅವಕಾಶವಿದ್ದದ್ದು
ರಜೆಯಲ್ಲಿ ಊರಿಗೆ ಹೋದಾಗ ಅಥವಾ ಊರಿನಿಂದ ಯಾರಾದರೂ ಬಂದಾಗ ಮಾತ್ರ. ಇಂಗ್ಲಿಷಿನ
ಇ-ಪುಸ್ತಕಗಳನ್ನು ನೋಡಿದಾಗಲೆಲ್ಲ ನಮ್ಮ ಭಾಷೆಯಲ್ಲೂ ಈ ಸೌಲಭ್ಯವೇಕಿಲ್ಲ ಎನ್ನುವ ಪ್ರಶ್ನೆ
ಇವರನ್ನು ಕಾಡುತ್ತಿತ್ತು. ಎಲ್ಲರೂ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುತ್ತಿದ್ದಂತೆ ಈ
ಪ್ರಶ್ನೆ ನಮ್ಮ ಊರುಗಳಲ್ಲೂ ಕೇಳಿಸಲು ಶುರುವಾಯಿತು. ಮೊಬೈಲಿನಲ್ಲೋ ಟ್ಯಾಬ್ಲೆಟ್ಟಿನಲ್ಲೋ
ನೂರಾರು ಇಂಗ್ಲಿಷ್ ಪುಸ್ತಕಗಳನ್ನು ಇಟ್ಟುಕೊಂಡು ಸುಲಭವಾಗಿ ಓದಬಹುದಾದರೆ ಅದು ಅದು ಕನ್ನಡ
ಪುಸ್ತಕಗಳಿಗೂ ಯಾಕೆ ಅನ್ವಯವಾಗಬಾರದು?

ಈ ಪ್ರಶ್ನೆಗೆ ಮೊದಲ ಉತ್ತರ ದೊರೆತದ್ದು, ಬಹುಶಃ, ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ
(ಡಿಎಲ್‌ಐ) ಹಾಗೂ ಒಸ್ಮಾನಿಯ ಯೂನಿವರ್ಸಿಟಿ ಡಿಜಿಟಲ್ ಲೈಬ್ರರಿ (ಓಯುಡಿಎಲ್) ಜಾಲತಾಣಗಳಿಂದ.
ಈ ತಾಣಗಳ ಮೂಲಕ ಉಚಿತವಾಗಿ ಲಭ್ಯವಾದ ಹಲವಾರು ಕನ್ನಡ ಪುಸ್ತಕಗಳು ಅದೆಷ್ಟೋ ಜನರ ಓದಿನ
ಹಸಿವಿಗೆ ಮೇವುಣಿಸಿದವು. ಇಲ್ಲಿ ಪುಸ್ತಕಗಳನ್ನು ಹುಡುಕುವುದು, ಡೌನ್‌ಲೋಡ್
ಮಾಡಿಕೊಳ್ಳುವುದು ಕಷ್ಟವೆನಿಸಿದರೂ ಅದು ಓದುಗರ ಉತ್ಸಾಹಕ್ಕೇನೂ ಭಂಗತರಲಿಲ್ಲ. ಕೆಲವು
ಆಸಕ್ತರ ಉತ್ಸಾಹದಿಂದ ಪುಸ್ತಕಗಳನ್ನು ಸುಲಭವಾಗಿ ಹುಡುಕುವ - ಡೌನ್‌ಲೋಡ್ ಮಾಡುವ
ವ್ಯವಸ್ಥೆಗಳೂ ರೂಪುಗೊಂಡವು.

ಇವೆರಡೂ ಡಿಜಿಟಲ್ ಲೈಬ್ರರಿಗಳಲ್ಲಿ ಲಭ್ಯವಿದ್ದವು ಬಹುತೇಕ ಹಳೆಯ ಪುಸ್ತಕಗಳು ಮಾತ್ರ
(ಕಾಪಿರೈಟ್ ಇನ್ನೂ ಚಾಲ್ತಿಯಲ್ಲಿರುವ ಕೆಲ ಪುಸ್ತಕಗಳೂ ಅಲ್ಲಿದ್ದದ್ದು ಬೇರೆ ವಿಷಯ).
ಅವನ್ನೆಲ್ಲ ಓದಿ ಮುಗಿಯುವಷ್ಟರಲ್ಲಿ ಹೊಸ ಪುಸ್ತಕಗಳ ಇ-ಆವೃತ್ತಿ ಏಕಿಲ್ಲ ಎನ್ನುವ ಪ್ರಶ್ನೆ
ಬಂತು. ಪ್ರಕಾಶಕರ ಅನುಮತಿಯಿಲ್ಲದೆ ಹೊಸ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಹಂಚಿಕೊಂಡ
ಘಟನೆಗಳೂ ನಡೆಯುವಮಟ್ಟಿಗೆ ಓದುಗರ ಆಸಕ್ತಿ ಕಾಣಿಸಿತು.

ಕನ್ನಡ ಪುಸ್ತಕಗಳು ಪಿಡಿಎಫ್ ರೂಪದಲ್ಲಿ ಸಿಕ್ಕಿದ್ದೇನೋ ಸರಿ, ಆದರೆ ಪಿಡಿಎಫ್ ಕಡತಗಳನ್ನು
ಎಲ್ಲ ಸಾಧನಗಳಲ್ಲೂ ಸರಾಗವಾಗಿ ಓದಲು ಸಾಧ್ಯವಾಗುತ್ತಿರಲಿಲ್ಲ. ಮೊಬೈಲಿನ ಪುಟ್ಟ ಪರದೆಯಲ್ಲಿ
ದೊಡ್ಡಗಾತ್ರದ ಪುಸ್ತಕದ ಪುಟಗಳನ್ನು ಓದುವುದು ಹಾಗಿರಲಿ, ಸರಿಯಾಗಿ ನೋಡುವುದೇ
ಕಷ್ಟವೆನಿಸುತ್ತಿತ್ತು. ಪರದೆಯ ಗಾತ್ರಕ್ಕೆ ತಕ್ಕಷ್ಟು ಸಾಲುಗಳನ್ನು ಮಾತ್ರವೇ ಪ್ರದರ್ಶಿಸುವ
ಇ-ಪುಸ್ತಕಗಳು ಕನ್ನಡಕ್ಕೂ ಬಂದಿದ್ದು ಈ ಪರಿಸ್ಥಿತಿಯಲ್ಲಿ. ಕನ್ನಡದ ಎಷ್ಟೋ ಓದುಗರಿಗೆ
ಇ-ಪುಸ್ತಕದ ಪರಿಚಯವಾಗುವ ವೇಳೆಗಾಗಲೇ ಇ-ಪುಸ್ತಕ ಒದಗಿಸುವ ಹಲವು ಸಂಸ್ಥೆಗಳು ತಮ್ಮ ಕೆಲಸ
ಶುರುಮಾಡಿದ್ದವು.

ಇ-ಪುಸ್ತಕದ ಸಾಧ್ಯತೆಗಳ ಅರಿವು ಹೆಚ್ಚಿದಂತೆ ಓದುಗರಲ್ಲಿ ಅವುಗಳನ್ನು ಕುರಿತ ಆಸಕ್ತಿ
ಇನ್ನಷ್ಟು ಹೆಚ್ಚಿತು. ಗೂಗಲ್‌ನಲ್ಲಿ ಕನ್ನಡ ಇ-ಪುಸ್ತಕಗಳನ್ನು ಹುಡುಕುವವರ ಸಂಖ್ಯೆ
ಇದಕ್ಕೊಂದು ನಿದರ್ಶನ ಎಂದು ಸಕ್ರಿಯ ಓದುಗ-ಬರಹಗಾರ ವಿಕಾಸ ಹೆಗಡೆ ಹೇಳುತ್ತಾರೆ. ಕನ್ನಡದ
ಇ-ಪುಸ್ತಕಗಳ ಬಗ್ಗೆ ಅವರ ಬ್ಲಾಗಿನಲ್ಲಿ ಬರೆದ ಲೇಖನವನ್ನು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು
ಬಾರಿ ಓದಲಾಗಿದೆಯಂತೆ!

*ಕೊರತೆ ತಂತ್ರಜ್ಞಾನದ್ದಲ್ಲ, ಆಸಕ್ತಿ-ಪ್ರೋತ್ಸಾಹಗಳದ್ದು!*
ಕೆಲವರ್ಷಗಳ ಹಿಂದಿನ ಕತೆ. ಮೊದಲಿಗೆ ಕಂಪ್ಯೂಟರಿನಲ್ಲಿ, ಆನಂತರ ಮೊಬೈಲ್ ಫೋನುಗಳಲ್ಲಿ ಕನ್ನಡ
ಅಕ್ಷರಗಳನ್ನು ಮೂಡಿಸುವುದೇ ಆಗಿನ ಮಟ್ಟಿಗೆ ದೊಡ್ಡ ಸವಾಲಾಗಿತ್ತು. ಯುನಿಕೋಡ್ ಬೆಂಬಲವಿಲ್ಲದ
ಸಾಧನಗಳಿಂದಾಗಿ ಸ್ಥಳೀಯ ಭಾಷೆಗಳ ಸಾಧ್ಯತೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು
ಕಷ್ಟಸಾಧ್ಯವಾಗಿದ್ದ ಸನ್ನಿವೇಶ ಅದು.

ಆದರೆ ಈಗ ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿದೆ. ಡಿಜಿಟಲ್ ಲೋಕದಲ್ಲಿ ಕನ್ನಡ ಬಳಸಲು ಇದ್ದ
ಬಹುತೇಕ ಎಲ್ಲ ತಾಂತ್ರಿಕ ತೊಡಕುಗಳೂ ನಿವಾರಣೆಯಾಗಿವೆ. ಇದರ ಪರಿಣಾಮವಾಗಿ
ಕಂಪ್ಯೂಟರಿನಲ್ಲಿ-ಮೊಬೈಲುಗಳಲ್ಲಿ ದೊರಕುತ್ತಿರುವ ಕನ್ನಡಕ್ಕೆ ಸಂಬಂಧಪಟ್ಟ ಸೌಲಭ್ಯಗಳೂ
ಹೆಚ್ಚುತ್ತಿವೆ.

ಇಂತಹ ಸೌಲಭ್ಯಗಳ ಪೈಕಿ ಕನ್ನಡದ ಇ-ಪುಸ್ತಕಗಳಿಗೂ ಮಹತ್ವದ ಸ್ಥಾನವಿದೆ. ತಮ್ಮ ಜಾಲತಾಣ ಅಥವಾ
ಮೊಬೈಲ್ ಆಪ್‌ಗಳ ಮೂಲಕ ಇ-ಪುಸ್ತಕಗಳನ್ನು ಓದುಗರಿಗೆ ತಲುಪಿಸುತ್ತಿರುವ ಹಲವು ಸಣ್ಣ-ದೊಡ್ಡ
ಸಂಸ್ಥೆಗಳು ಇದೀಗ ಸಕ್ರಿಯವಾಗಿವೆ. ಇಂತಹ ಸಂಸ್ಥೆಗಳ ಮೂಲಕ ಲಭ್ಯವಿರುವ ಕನ್ನಡ
ಇ-ಪುಸ್ತಕಗಳಲ್ಲಿ ನಾವು ಮೂರು ವಿಧಗಳನ್ನು ಗುರುತಿಸಬಹುದು: ಉಚಿತವಾಗಿ ದೊರಕುವ ಪುಸ್ತಕಗಳು,
ಬಾಡಿಗೆಗೆ ದೊರಕುವವು ಹಾಗೂ ಖರೀದಿಗೆ ದೊರಕುವವು.

ಈ ಪೈಕಿ ಬಾಡಿಗೆಗೆ ಪಡೆದ ಪುಸ್ತಕಗಳನ್ನು ನಿರ್ದಿಷ್ಟ ಅವಧಿಯವರೆಗೆ ಮಾತ್ರ ನಾವು ನೋಡಬಹುದು;
ಉಳಿದೆರಡು ವಿಧದ ಪುಸ್ತಕಗಳನ್ನು ಯಾವಾಗ ಬೇಕಾದರೂ ಓದಿಕೊಳ್ಳಬಹುದು. ನಮಗೆ ಪುಸ್ತಕ
ಕೊಟ್ಟಿರುವ ಸಂಸ್ಥೆಯ ಜಾಲತಾಣ ಅಥವಾ ಆಪ್ ಮೂಲಕವಷ್ಟೇ ಓದಬಹುದು, ಡೌನ್‌ಲೋಡ್
ಮಾಡಿಕೊಳ್ಳುವುದು - ಇತರರೊಡನೆ ಹಂಚಿಕೊಳ್ಳುವುದು - ಮುದ್ರಿಸುವುದು ಸಾಧ್ಯವಿಲ್ಲ
ಎನ್ನುವುದಷ್ಟು ನಿರ್ಬಂಧಗಳು.

ಉಚಿತ ಪುಸ್ತಕಗಳನ್ನು ಜನ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದರೂ ಹಣ ಕೊಟ್ಟು ಅವನ್ನು
ಬಾಡಿಗೆಗೆ ಪಡೆಯುವ - ಖರೀದಿಸುವ ಅಭ್ಯಾಸ ಹೆಚ್ಚು ವ್ಯಾಪಕವಾಗಿಲ್ಲ ಎನ್ನುವುದು ಈ
ಕ್ಷೇತ್ರದಲ್ಲಿ ಕೇಳಸಿಗುತ್ತಿರುವ ಸಾಮಾನ್ಯ ಅಭಿಪ್ರಾಯ. ಈ 

[ms-stf '64927'] ನೆಟ್‌ ನೋಟ: ವಿಮಾನದ ಜಿಜಿ ಪದದಿಂದ ಜೋಜೋ ಲಾಲಿಗೆ ಭಂಗ!

2016-09-13 Thread HAREESHKUMAR K Agasanapura
http://m.vijaykarnataka.com/edit-oped/columns/net-nota-by-sudheendra-haldodderi/articleshow/54310758.cms

*ನೆಟ್‌ ನೋಟ: ವಿಮಾನದ ಜಿಜಿ ಪದದಿಂದ ಜೋಜೋ ಲಾಲಿಗೆ ಭಂಗ!*

Sep 14, 2016, 04.00 AM IST

Whatsapp Facebook Google Plus
Twitter Email
SMS 

war-flight

AAA

* ಸುಧೀಂದ್ರ ಹಾಲ್ದೊಡ್ಡೇರಿ ಮೊನ್ನೆ ಸೋಮವಾರ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ
ಅಚಾನಕ್ಕಾಗಿ ಕಣ್ಣಿಗೆ ಬಿದ್ದವರು ಕನ್ನಡ ಪ್ರಾಧ್ಯಾಪಕರಾದ ನಮ್ಮ ಎಂ.ಕೃಷ್ಣೇಗೌಡರು. ವಿಮಾನ
ತಡವಾಗಿ ಹೊರಡಲಿದೆಯೆಂಬ ಸುದ್ದಿ ಬಂದೊಡನೆ ಮಾತು ಸುಗ್ಗಿಯ ಸುರಿಮಳೆಯಂತಾಯಿತು. ''ಕಳೆದ
ಬಾರಿಯ ಪಯಣದಲ್ಲಿ ಟರ್ಬು್ಯಲೆನ್ಸಿಗೆ ಸಿಕ್ಕ ವಿಮಾನ ತೂರಾಡ್ತು. ಸಹ ಪಯಣಿಗರನೇಕರು
ಕಿರಿಚಿಕೊಂಡ್ರು. ಈ ಟರ್ಬು್ಯಲೆನ್ಸ್‌ ಹೇಗಾಗತ್ತೆ, ಅದನ್ನು ವಿಮಾನಗಳು ಹೆಂಗೆ
ತಡೆದುಕೊಳ್ಳತ್ವೆ' ಎಂಬ ಪ್ರಶ್ನೆಗಳೊಂದಿಗೆ ನಮ್ಮಿಬ್ಬರ ಮಾತುಕತೆ ವಿಮಾನದ ಸುತ್ತ ಗಿರಕಿ
ಹೊಡೆಯತೊಡಗಿತು. 'ವಾಯುಚಲನೆ ಸಪೂರವಾಗಿದ್ದಲ್ಲಿ ವಿಮಾನ ಪಯಣ ಎಷ್ಟು ಹಿತಕರವಾಗಿರುತ್ತದೋ,
ಅದು ಕ್ಷೋಭೆಗೊಳಗಾದಾಗ ಅಸಹನೀಯವೆನಿಸುತ್ತದೆ. ಆಗಸದಲ್ಲಿ ಚಿತ್ತಾರಗಳನ್ನೆಬ್ಬಿಸುತ್ತಾ,
ಕಣ್ಮುಚ್ಚಿ ಬಿಡುವಷ್ಟರಲ್ಲಿ ಜಿಗಿದಿಳಿಯುವ ಯುದ್ಧ ವಿಮಾನಗಳಲ್ಲಿ ಸಾಮಾನ್ಯ ವಿಮಾನ ಪಯಣಿಗರು
ಕಲ್ಪಿಸಿಕೊಳ್ಳಲೂ ಆಗದಂಥ ಗಿರಗಿಟ್ಟಲೆಯಿರುತ್ತದೆ. ವಾತಾವರಣದಲ್ಲಿ ದಿಢೀರನೆ ಬದಲಾಗುವ
ಒತ್ತಡ, ಬೀಸುಗಾಳಿ, ತಾಪಮಾನ ಕುಸಿತಗಳು ವಾಯುಚಲನೆಯ ಕ್ಷೋಭೆಯನ್ನು ಹೆಚ್ಚಿಸುತ್ತವೆ,''
ಎಂದೆ. ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸುವುದೆಂದರೆ ತಮಾಷೆಯ ಮಾತಲ್ಲ. ಅಸಲಿಗೆ ನಮ್ಮ ದೇಹ
ಊಹೆಗೂ ನಿಲುಕದ ಒತ್ತಡಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಅಲ್ಲಿನ ಅನುಭವಗಳು
ಎಂಥದಿರಬಹುದು? ಮೋಜಿಗೆಂದು ನೀವೆಂದಾದರೂ ದೊಡ್ಡ 'ಜಯಂಟ್‌ ವೀಲ್‌'ನಲ್ಲಿ
ಕುಳಿತುಕೊಂಡಿದ್ದರೆ ವಿಶಿಷ್ಟ ಅನುಭವವೊಂದು ನಿಮಗಾಗಿರುತ್ತದೆ. ವೇಗವಾಗಿ ಮೇಲೇರಿ,
ಕೆಳಗಿಳಿಯುತ್ತಿದ್ದರೆ ಒಮ್ಮೆ ನಿಮ್ಮ ದೇಹ 'ತೂಕ ರಹಿತ'ವಾದಂತೆ, ಮಗದೊಮ್ಮೆ 'ತೂಕ
ಹೆಚ್ಚಾದ'ಂತೆ ಅನ್ನಿಸಿರುತ್ತದೆ. ಇಂಥದೇ ಅನುಭವಗಳು ವೇಗದಿಂದ ಕೆಳಗಿಳಿಯುವ
'ಲಿಫ್ಟ್‌'ಗಳಲ್ಲಿ ಪಯಣಿಸುವಾಗ, ಇಲ್ಲವೇ ಮೋಜಿನ 'ವಾಟರ್‌ ಪಾರ್ಕ್‌'ಗಳಲ್ಲಿ ಮೇಲೆ ಕೆಳಗೆ
ತೂಯ್ದಾಡುವಾಗ, ತಿರುಗಣೆಯಲ್ಲಿ ವೇಗವಾಗಿ ಸುತ್ತುವಾಗಲೂ ಹೃದಯ ಬಾಯಿಗೆ ಬಂದಂತಾಗಿರುತ್ತದೆ.
ಇದೆಲ್ಲ 'ಭೂಮಿಯ ಗುರುತ್ವಾಕರ್ಷಣೆ'ಯ ಕರಾಮತ್ತು. ನಾವಿಂದು ಭೂಮಿಯ ಮೇಲೆ ಭದ್ರವಾಗಿ ಕಾಲೂರಿ
ನಿಲ್ಲಲು ಸಾಧ್ಯವಾಗಿರುವುದು ಈ ಸೆಳೆತದಿಂದಲೇ. ಮೇಲೆಸೆದ ಚೆಂಡೊಂದು ಕೆಳಗೆ ಬೀಳಲು ಇದೇ
ಗುರುತ್ವ ಕಾರಣ. ವೇಗವೆಂದರೆ ನಿಮಗೆ ಗೊತ್ತು. ನಿರ್ದಿಷ್ಟ ಸಮಯದಲ್ಲಿ ವಸ್ತುವೊಂದು ಎಷ್ಟು
ದೂರ ಕ್ರಮಿಸಿದೆಯೆಂದು ಅಳೆಯುವ ಮಾಪನ. ಈ ವೇಗ ಏರುತ್ತಲೋ ಅಥವಾ ಇಳಿಯತ್ತಲೋ ಹೋಗಬಹುದು. ಭೌತ
ವಿಜ್ಞಾನದಲ್ಲಿ ಈ ವೇಗ ಬದಲಾವಣೆಯ ದರವನ್ನು 'ವೇಗೋತ್ಕರ್ಷ' ಎಂದು ಗುರುತಿಸಲಾಗಿದೆ.
ಉದಾಹರಣೆಗೆ ನಮ್ಮ ಭೂಮಿಯ ಗುರುತ್ವ ಸೆಳೆತದ ವೇಗೋತ್ಕರ್ಷ ಪ್ರತಿ ಸೆಕೆಂಡ್‌-ಸೆಕೆಂಡ್‌ಗೆ
ಸುಮಾರು 981 ಸೆಂಟಿಮೀಟರ್‌. ಅಂದರೆ ಪ್ರತಿ ಸೆಕೆಂಡ್‌ಗೆ ಭೂಮಿಯತ್ತ ಸೆಳೆಯುವ ವೇಗ
ಸೆಕೆಂಡ್‌ಗೆ 981 ಸೆಂಟಿಮೀಟರ್‌ನಷ್ಟು ಹೆಚ್ಚಾಗುತ್ತದೆ. ಕೆಳಗೆ ಬೀಳುತ್ತಿರುವ ವಸ್ತುವೊಂದು
ಭೂಮಿಯನ್ನು ಸಮೀಪಿಸುತ್ತಿದ್ದಂತೆ ಪ್ರತಿ ಸೆಕೆಂಡ್‌ಗೂ ಅದರ ವೇಗ ಹೆಚ್ಚಾಗುತ್ತಾ ಹೋಗುವ
ಪರಿಯಿದು. ಇದನ್ನು ಪುಟ್ಟದಾಗಿ 'g' ಎಂದು ಕರೆಯುವ ವಾಡಿಕೆಯಿದೆ. ಸ್ವಲ್ಪ ತಾಳಿ,
ನಿಮ್ಮನ್ನು 'ಜಿ' ವಿಷಯದತ್ತ ಸ್ವಲ್ಪ ವೇಗೋತ್ಕರ್ಷ ಹೆಚ್ಚಿಸುತ್ತಾ ಸೆಳೆಯಲು
ಪ್ರಯತ್ನಿಸುತ್ತಿದ್ದೇನೆ. ಆರಾಮ ಕುರ್ಚಿಯಲ್ಲಿ ಸದ್ಯಕ್ಕೆ ಕುಳಿತಿರುವ ನಿಮ್ಮ ದೇಹವನ್ನು
ಗುರುತ್ವ ಸೆಕೆಂಡ್‌-ಸೆಕೆಂಡ್‌ಗೆ 981 ಸೆಂಟಿಮೀಟರ್‌ನಷ್ಟು ವೇಗೋತ್ಕರ್ಷದಲ್ಲಿ ಸೆಳೆಯುತ್ತಾ
ಇದೆ. ಈಗ ನಿಮ್ಮ ತೂಕ ಎಪ್ಪತ್ತು ಕಿಲೋಗ್ರಾಂ. ಈ ವೇಗೋತ್ಕರ್ಷ ಅರ್ಧ ಅಂದರೆ
ಸೆಕೆಂಡ್‌-ಸೆಕೆಂಡ್‌ಗೆ 490 ಸೆಂಟಿಮೀಟರ್‌ ಆಗಿಬಿಟ್ಟರೆ ನಿಮ್ಮ ತೂಕ ಮೂವತ್ತೈದೇ ಕೇಜಿ.
ಅದು ದುಪ್ಪಟ್ಟಾಗಿಬಿಟ್ಟರೆ ನೀವು ನೂರನಲವತ್ತು ಕೇಜಿ ತೂಗುತ್ತೀರಿ. ವೇಗೋತ್ಕರ್ಷ ಅಂದರೆ
'g' ಹೆಚ್ಚಿದಂತೆಲ್ಲ ನಿಮ್ಮ ತೂಕ ಹೆಚ್ಚುತ್ತಾ ಹೋಗುತ್ತದೆ. ಟೀವಿ ಚಾನೆಲ್‌ನಲ್ಲಿ
ಆಗಿಂದಾಗ್ಗೆ ಯುದ್ಧ ವಿಮಾನಗಳ ಪರಿಚಯ ಮಾಡಿಕೊಡುವ ಕಾರ್ಯಕ್ರಮಗಳು ಬರುತ್ತವೆ. ಹಾಗೆಯೇ
ತಲ್ಲಣಗೊಳಿಸುವ ಯುದ್ಧ ವಿಮಾನಗಳ ವೀಡಿಯೋ ಚಿತ್ರಗಳನ್ನು ಟೀವಿಯ ಅನೇಕ ಇಂಗ್ಲಿಷ್‌
ಚಾನೆಲ್‌ಗಳಲ್ಲಿ ನೋಡಿದ ನೆನಪು ಸಹಾ ನಿಮಗಿರಬಹುದು. ಯುದ್ಧದ ಆ ಕ್ಷಣದಲ್ಲಿ ಯಾರ ವಿಮಾನ
ಚಾಕಚಕ್ಯತೆಯಿಂದ ಅಸ್ತ್ರಗಳನ್ನು ತೂರಿ ಮೇಲುಗೈ ಸಾಧಿಸುವುದೋ ಅವರ ವಿ'ಮಾನ'ದ ಜೊತೆಗೆ
ಚಾಲಕನ ಪ್ರಾಣವೂ ಉಳಿಯಬಲ್ಲದು. ಬೆಂಗಳೂರಿನಲ್ಲಿ ಎರಡು ವರ್ಷಗಳಿಗೊಮ್ಮೆ ಫೆಬ್ರವರಿ ತಿಂಗಳು
ನಡೆಯುವ 'ಏರೋ ಇಂಡಿಯ' ಮೇಳಗಳಲ್ಲಿ ನೀವು ಭಾಗವಹಿಸಿದ್ದರೆ ಯುದ್ಧ ವಿಮಾನಗಳ ಚಮತ್ಕಾರವನ್ನು
ಕಂಡು ಆನಂದಿಸಿರುತ್ತೀರಿ. ಒಂಬತ್ತು 'ಸೂರ್ಯ ಕಿರಣ'ಗಳು ಗಗನದಲ್ಲಿ ಬಿಡಿಸಿದ ವರ್ಣರಂಜಿತ
ಚಿತ್ತಾರಗಳನ್ನು ಕಂಡು ನೀವು ಬೆರಗಾಗಿರಬಹುದು. ಇಂಥ ಅವಕಾಶ ಸಿಕ್ಕಿಲ್ಲದವರು ಟೀವಿಯಲ್ಲೊ,
ಪತ್ರಿಕೆಗಳಲ್ಲೊ ಆ ವಿಮಾನಗಳು ಚೆಲ್ಲಿದ ತ್ರಿವರ್ಣ ಧೂಮ ಸಿಂಚನದಿಂದ ಸಂತಸಗೊಂಡಿರಬಹುದು.
ಪ್ರೇಮಿಗಳಿಗೆಂದೇ ಸೃಷ್ಟಿಸಿದ ಹೃದಯಾಕಾರ, ಅದರೊಳಗೆ ತೂರಿ ಬಂದ ಪ್ರೇಮ ಬಾಣ ...
ವಿಮಾನಗಳು ಇಷ್ಟೆಲ್ಲ ಕಸರತ್ತು ಮಾಡಬಲ್ಲವೆ? ಅದರಲ್ಲೂ ಅಪ್ಪಟ ಸ್ವದೇಶಿ ವಿಮಾನದಲ್ಲಿ ಕುಳಿತ
ನಮ್ಮ ಚಾಲಕರು ಕಣ್ಣು ಮಿಟಕಿಸುವಷ್ಟರಲ್ಲಿ ಇಷ್ಟೆಲ್ಲ ಚಮತ್ಕಾರ ತೋರಿದರೆಂದರೆ? ...
ತಲೆಕೆಳಗಾಗಿ, ಓರೆಯಾಗಿ, ಏರಿದ ಮರುಕ್ಷ ಣದಲ್ಲೇ ಇಳಿಯುತ್ತ, ಯಾವುದೇ ಹಕ್ಕಿಯನ್ನೂ
ನಾಚಿಸುತ್ತಿದ್ದ ಈ ವಿಮಾನಗಳು ನಮ್ಮ ದೇಶದ ರಕ್ಷಣಾ ಪಡೆಯ ಅಚ್ಚುಮೆಚ್ಚಿನ ಹಾರುಯಂತ್ರಗಳು. ಈ
ಕಸರತ್ತು ನಡೆಸುವಾಗ ವಿಮಾನದಲ್ಲಿ ಕುಳಿತ ಚಾಲಕನ ಪಾಡೇನು? ಈ ಪ್ರಶ್ನೆಯನ್ನು ಕ್ಷಣ
ಕ್ಷಣಕ್ಕೆ ಏರುಪೇರಾಗುವ 'g' ಸಾಹೇಬರನ್ನೇ ಕೇಳಬೇಕು. ಧಸಕ್ಕೆಂದು ಎರಡು 'g' ಗಳಷ್ಟು
ವೇಗೋತ್ಕರ್ಷದಲ್ಲಿ ವಿಮಾನ ಮೇಲೇರಿದರೆ ಆ ಕ್ಷ ಣದಲ್ಲಿ ವಿಮಾನ ಮತ್ತದರ ಚಾಲಕ ಅನುಭವಿಸುವ
ಸೆಳೆತ ಎರಡು 'g' ಗಳಷ್ಟು. ಅಂದರೆ ಅವನ ತೂಕ ಏಕಾಏಕಿ ಎರಡರಷ್ಟಾಗಿರುತ್ತದೆ.
ಗಿರಗಿಟ್ಟಲೆಯಂತೆ ವಿಮಾನ ಸುತ್ತುಹಾಕಿದಾಗಲೂ ಇಂಥ ಬಲಪ್ರಯೋಗ ಆತನ ಮೇಲಾಗುತ್ತದೆ. ಈ
ಸಂದರ್ಭದಲ್ಲಿ ಹೆಚ್ಚಾದ ಗುರುತ್ವಾಕರ್ಷಣೆಯ ಸೆಳೆತದಿಂದ ಇಡೀ ದೇಹದ ರಕ್ತ ಕೇವಲ ಕಾಲಿನತ್ತಲೇ
ಹರಿಯ ತೊಡಗುತ್ತದೆ. ಒಂದೆಡೆ ಮಿದುಳು, ಶ್ವಾಸಕೋಶ, ಕೈಗಳಿಗೆ ರಕ್ತದ ಕೊರತೆ
ಹೆಚ್ಚಾಗತೊಡಗುತ್ತದೆ. ದೇಹದೆಲ್ಲೆಡೆ ರಕ್ತ ಪರಿಚಲನೆಗೆ ಅನುವು ಮಾಡುವ ಹೃದಯವೆಂಬ
'ಪಂಪ್‌'ಗೆ ಹೆಚ್ಚುವರಿ ಎಳೆಯುವ ಕೆಲಸ. ಕಣ್ಣು ಕತ್ತಲೆಯಿಟ್ಟುಕೊಳ್ಳುವುದರ ಜೊತೆಗೆ,
ಕ್ಷಣಗಣನೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಚೈತನ್ಯ ಮಿದುಳು ಕಳೆದುಕೊಳ್ಳುತ್ತದೆ. ಈ
'g' ತಾಳಿಕೆ ಅಂದರೆ ಬದಲಾದ ಹೆಚ್ಚುವರಿ ವೇಗೋತ್ಕರ್ಷವನ್ನು ತಡೆದುಕೊಳ್ಳಬಲ್ಲ
ಚೈತನ್ಯವನ್ನು ಪ್ರಯೋಗಶಾಲೆಗಳಲ್ಲಿ ಅಳೆಯಬಹುದು. ವಿಮಾನ ಚಾಲಕ ಅಥವಾ ಅವನೊಂದಿಗೆ ಪಯಣಿಸುವ
ಎಂಜಿನಿಯರ್‌ಗೆ ಸಾಮಾನ್ಯರಿಗಿಂತ ಹೆಚ್ಚಿನ 'g' ತಾಳಿಕೆಯಿರಬೇಕು. ಈ-16 ಸೇರಿದಂತೆ ಇಂದಿನ
ಆಧುನಿಕ ಯುದ್ಧ ವಿಮಾನಗಳು ಕನಿಷ್ಟವೆಂದರೂ ಒಂಭತ್ತು ಪಟ್ಟು 'g' ಒತ್ತಡವನ್ನು
ತಾಳಿಕೊಳ್ಳಬಲ್ಲವು. ಹಾಗಿದ್ದರೆ ಹೆಚ್ಚಾಗುವ ತೂಕ ಮತ್ತು ಕಮ್ಮಿಯಾಗುವ ರಕ್ತಪರಿಚಲನೆಯನ್ನು

[ms-stf '64592'] ಪಂಚಗವ್ಯದಿಂದಲೂ ಬಂದೀತು ಬ್ರುಸೆಲ್ಲಾ ಪಂಚಕಂಟಕ | ಪ್ರಜಾವಾಣಿ

2016-09-07 Thread HAREESHKUMAR K Agasanapura
http://m.prajavani.net/article/2016_09_08/436415

ಪಂಚಗವ್ಯದಿಂದಲೂ ಬಂದೀತು ಬ್ರುಸೆಲ್ಲಾ ಪಂಚಕಂಟಕ

8 Sep, 2016

ನಾಗೇಶ್ ಹೆಗಡೆ

ವಿಧಿ ಎಂದರೆ ಇದೇ ಇರಬೇಕು: ಗೋವುಗಳನ್ನು ಕೊಲ್ಲಕೂಡದೆಂದು ಏನೆಲ್ಲ ಒತ್ತಡದ ಪ್ರಚಾರ ನಡೆದ
ಕರ್ನಾಟಕದಲ್ಲಿ ಬ್ರುಸೆಲ್ಲಾ ಎಂಬ ಸೂಕ್ಷ್ಮಜೀವಿಯೊಂದು ಗೋವುಗಳನ್ನು ಬಾಧಿಸತೊಡಗಿದೆ. ಅಂಥ
ರೋಗಪೀಡಿತ ಗೋವುಗಳನ್ನು ಪತ್ತೆ ಮಾಡಿ ಹತ್ಯೆ ಮಾಡಿ ಹೂಳಲೇಬೇಕಾದ ಅಪ್ರಿಯ ಸನ್ನಿವೇಶ
ಸರ್ಕಾರಕ್ಕೆ ಎದುರಾಗಿದೆ.

ಶಾಸಕ ವರ್ತೂರು ಪ್ರಕಾಶ್ ಅವರ ಡೇರಿಯಲ್ಲಿನ 58 ಹಸುಗಳಿಗೆ ಬ್ರುಸೆಲ್ಲೊಸಿಸ್ ರೋಗ
ಬಂದಿರುವುದರಿಂದ ಆ ಎಲ್ಲವನ್ನೂ ಕೊಲ್ಲಬೇಕೆಂದು ಪಶುಸಂಗೋಪನ ಇಲಾಖೆ ತೀರ್ಮಾನಿಸಿದೆ.
ವಿಜ್ಞಾನ, ಧಾರ್ಮಿಕ ನಂಬಿಕೆ, ಪ್ರಾಣಿದಯೆ, ಲಾಭನಷ್ಟ, ವೈದ್ಯಕೀಯ, ರಾಜಕೀಯ ಎಲ್ಲವೂ
ಒಂದರೊಳಗೊಂದು ತಳಕು ಹಾಕಿಕೊಂಡು ಗೋಜಲು ಸೃಷ್ಟಿಯಾಗಿದೆ.

ಬ್ರುಸೆಲ್ಲಾ ಎಂಬುದು ಅತಿಸೂಕ್ಷ್ಮ ಕಡ್ಡಿಯಂಥ ಏಕಾಣುಜೀವಿ. ಹಸುವಿಗೆ ಅದರ ಸೋಂಕು
ತಗುಲಿತೆಂದರೆ ಅದಕ್ಕೆ ಔಷಧವಿಲ್ಲ. ಹಸು ಸಾಯುವುದಿಲ್ಲ ನಿಜ. ಅದಕ್ಕೆ ಗರ್ಭ
ನಿಲ್ಲುವುದಿಲ್ಲ, ಆರೇಳನೆ ತಿಂಗಳಿಗೆ ಅಬಾರ್ಶನ್ ಆಗುತ್ತದೆ. ಎರಡನೆಯ ಬಾರಿ ಗರ್ಭ ಕಟ್ಟಿದರೆ
ಅದೂ ಬಿದ್ದುಹೋಗಬಹುದು.

ಮೂರನೆಯ ಬಾರಿ ಗರ್ಭ ನಿಲ್ಲುತ್ತದೆ. ಆದರೆ ತಾಯಿ ಹಸುವಿನ ಹಾಲಿನಲ್ಲಿ ರೋಗಾಣು ಇರುತ್ತದೆ.
ಅಂಥ ಹಾಲನ್ನು ಕಾಯಿಸದೇ ಸೇವಿಸಿದರೆ ಕೆಲವರಿಗೆ ಬ್ರುಸೆಲ್ಲೊ ಸಿಸ್ ರೋಗ ಬರಬಹುದು.
ಗೋಮಾಂಸವನ್ನು ಅರೆಬರೆ ಬೇಯಿಸಿ ತಿಂದರೂ ರೋಗ ಬಂದೀತು. ರೋಗ ನಿರೋಧಕ ಶಕ್ತಿ ಚೆನ್ನಾಗಿದ್ದರೆ
ರೋಗ ಬರಲಿಕ್ಕಿಲ್ಲ. ಬಂದರೆ ಮಾತ್ರ ಮಹಾ ಕಿರಿಕಿರಿ.

ಮನುಷ್ಯರಿಗೆ ಬ್ರುಸೆಲ್ಲೊಸಿಸ್ ರೋಗ ಬಂದರೆ ಸಾವು ಬರುವುದಿಲ್ಲ. ಆದರೆ ಬಿಟ್ಟು ಬಿಟ್ಟು
ಜ್ವರ ಬರುತ್ತದೆ. ಮೈಕೈ ಸ್ನಾಯುಗಳಲ್ಲಿ ವಿಪರೀತ ನೋವು ಇರುತ್ತದೆ. ಜ್ವರ 102-103
ಡಿಗ್ರಿಗೂ ಏರಿ, ಸನ್ನಿ ಅಥವಾ ಭಾವೋನ್ಮಾದವೂ ಆಗಿ ಜ್ವರ ಇಳಿಯುತ್ತದೆ. ತೀರಾ ತೀರಾ
ಅಪರೂಪಕ್ಕೆ ಸಾವು ಬಂದೀತು. ಪದೇ ಪದೇ ಹಾಗೆ ಜ್ವರ ಬಾರದಂತೆ ಔಷಧ ಇದೆ; ಆದರೆ ಐದಾರು
ತಿಂಗಳುಗಳ ಕಾಲ ಮಾತ್ರೆ ಸೇವಿಸಬೇಕು. ಅದಕ್ಕಿಂತ ದೊಡ್ಡ ಫಜೀತಿ ಏನೆಂದರೆ ಜ್ವರಪೀಡಿತ ಗಂಡಸರ
ವೃಷಣದಲ್ಲಿ ಭಾರೀ ಹಿಂಸೆಯಾಗುತ್ತದೆ. ಹೇಳುವಂತಿಲ್ಲ, ಬಿಡುವಂತಿಲ್ಲ. ಕ್ರಮೇಣ ಕೆಲವರಿಗೆ
ಷಂಡತನ ಬರುತ್ತದೆ. ರೋಗಾಣುಭರಿತ ಹಸಿ ಹಾಲನ್ನು ಸೇವಿಸಿದ ಹೆಂಗಸರಲ್ಲೂ ಕೆಲವರು
ಬಂಜೆಯಾಗುತ್ತಾರೆ.

ಬ್ರುಸೆಲ್ಲಾ ರೋಗಾಣು ಭಾರೀ ಸಾಂಸರ್ಗಿಕವಂತೂ ಹೌದು. ಅಂದರೆ ಅದರ ಸೆಗಣಿ, ಗಂಜಳ, ಅದು ತಿಂದು
ಬಿಟ್ಟ ಮೇವು, ಅದರ ಮೈತೊಳೆದ ನೀರು ಎಲ್ಲವನ್ನೂ ಪ್ರತ್ಯೇಕ ಇಡದಿದ್ದರೆ ಅಕ್ಕಪಕ್ಕದ ಇತರ
ಹಸು, ಎಮ್ಮೆ, ಹೋರಿ ಎಲ್ಲವಕ್ಕೂ ರೋಗ ಬರುತ್ತದೆ. ಡೇರಿಯಲ್ಲಿ ಒಂದಕ್ಕೆ ಬ್ರುಸೆಲ್ಲೊಸಿಸ್
ಬಂದರೆ ಅದರ ಲಕ್ಷಣಗಳು ಗೊತ್ತಾಗುವ ಮೊದಲೇ ಇತರ ಹಸುಗಳೆಲ್ಲ ರೋಗಗ್ರಸ್ತ ಆಗಬಹುದು.
ಗೊತ್ತಾದರೂ ಏನೂ ಮಾಡುವಂತಿಲ್ಲ.

ಈ ಕಾಯಿಲೆಗೆ ಔಷಧಿ ಇಲ್ಲ. ಕರುಗಳಿಗೆ ರೋಗ ತಗುಲದ ಹಾಗೆ ಲಸಿಕೆ ಹಾಕಿಸಬಹುದು. ಆದರೆ ಲಸಿಕೆ
ಹಾಕಿಸುವ ಮೊದಲೇ ರೋಗಾಣುಗಳು ಅದರ ದೇಹದಲ್ಲಿದ್ದರೆ ಏನೂ ಮಾಡುವಂತಿಲ್ಲ. ಆ ರೋಗ ಬೇರೆಡೆ
ಹರಡದ ಹಾಗೆ ದಯಾಮರಣ ಕೊಡಿಸಬಹುದು.

ಚುಚ್ಚುಮದ್ದು ಕೊಟ್ಟು ಸಾಯಿಸಿದರೂ ದನದ ಕಳೇವರವನ್ನು ಸುಟ್ಟು ಹುಷಾರಾಗಿ ದಫನ ಮಾಡಬೇಕು.
ಅದರ ಮಾಂಸ, ಕೊಂಬು, ಗೊರಸು, ಚರ್ಮ ಯಾವುದೂ ಯಾವುದೇ ದನದ ಸಂಪರ್ಕಕ್ಕೆ ಬರದಂತೆ ಆಳವಾಗಿ
ಹೂಳಬೇಕು. ಸತ್ತ ದನವನ್ನು ಗುಂಡಿಗೆ ಹಾಕಿದ ಜೆಸಿಬಿಯನ್ನೂ ಚೊಕ್ಕಟ ತೊಳೆಯಬೇಕು. ನಂತರ
ಕೊಟ್ಟಿಗೆಯನ್ನು ಸಂಪೂರ್ಣ ಶುದ್ಧಗೊಳಿಸಬೇಕು. ಅಲ್ಲಿನ ಇತರ ಹಸು ಅಥವಾ ಹೋರಿಗಳನ್ನು
ಪ್ರತ್ಯೇಕವಾಗಿ ಇಟ್ಟು ಅವುಗಳ ರಕ್ತ ಪರೀಕ್ಷೆ ಮಾಡಿ... ರಗಳೆ ಒಂದೆರಡಲ್ಲ. ಹಳ್ಳಿಯವರು
‘ಕಂದ್‌ರೋಗ’ ಬಂದ ಅಂಥ ಹಸುಗಳನ್ನು ಉಪಾಯವಾಗಿ ಬೇರೆಯವರಿಗೆ ಮಾರಿ ಕೈತೊಳೆದುಕೊಳ್ಳುತ್ತಾರೆ.

ವರ್ತೂರು ಪ್ರಕಾಶರ ಹಸುಗಳನ್ನು ಸಾಯಿಸಬೇಕೆ ಬೇಡವೆ? ಇಲ್ಲಿ ಹಣಾಹಣಿ ಶುರುವಾಗುತ್ತದೆ. ನೀವು
ಗೋವಿನ ಪಕ್ಷದವರಾಗಿದ್ದರೆ ‘ಖಂಡಿತ ಸಾಯಿಸಕೂಡದು’ ಎಂದು ವಾದಿಸುತ್ತೀರಿ. ‘ಇದು ಹೊಸ ಕಾಯಿಲೆ
ಏನಲ್ಲ. ಹಿಂದಿನಿಂದಲೂ ನಮ್ಮಲ್ಲಿದೆ; ನಮ್ಮ ರಾಜ್ಯದ ಶೇಕಡ 30ರಷ್ಟು ಹಸುಗಳಲ್ಲಿ ಈ ರೋಗಾಣು
ಇದೆ. ನಾವೆಲ್ಲ ಅದಕ್ಕೆ ಒಗ್ಗಿಕೊಂಡಿದ್ದೇವೆ’ ಎನ್ನುತ್ತಾರೆ, ಸಾಗರದಲ್ಲಿ ಪಶುಸಂಗೋಪನೆ
ಮಾಡುತ್ತಿರುವ ಕೃಷಿ ವಿಜ್ಞಾನಿ ಎ.ಎಸ್.ಆನಂದ.

ಇವರು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾವಯವ ಕೃಷಿ ಮಿಶನ್‌ನ ಮುಖ್ಯಸ್ಥರೂ
ಆಗಿದ್ದವರು. ‘ನಾವು ಪಂಚಾಮೃತ, ಪಂಚಗವ್ಯಕ್ಕೆ ಹಸೀ ಹಾಲನ್ನೇ ಹಾಕಿ ದೇವರಿಗೆ ನೈವೇದ್ಯ ಮಾಡಿ
ಅದನ್ನು ಸ್ವೀಕರಿಸುತ್ತೇವೆ- ನಮಗೆ ಏನೂ ಆಗಿಲ್ಲ’ ಎನ್ನುತ್ತಾರೆ.

ಅಷ್ಟೇಅಲ್ಲ ‘ನಾನು ಮಹಾರಾಷ್ಟ್ರ, ರಾಜಸ್ತಾನ, ಮಧ್ಯಪ್ರದೇಶದ ಅದೆಷ್ಟೊ ಅಲೆಮಾರಿ ಗೋವಳರನ್ನು
ಸಮೀಪದಿಂದ ನೋಡಿದ್ದೇನೆ. ಹಾಲು ಮಾರಿ ಜೀವಿಸುವ ಅವರು ಕ್ಯಾಂಪ್ ಹಾಕಿದಲ್ಲೆಲ್ಲ ದಿನವೂ
ಸೆಜ್ಜೆರೊಟ್ಟಿ, ಹಸಿ ಹಾಲನ್ನೇ ಸೇವಿಸುತ್ತಾರೆ. ನಾಲ್ಕಾರು ಮಕ್ಕಳಿಗೂ ಜನ್ಮ ನೀಡುತ್ತಾರೆ.
ಭಾರತೀಯರ ರೋಗ ನಿರೋಧಕ ಶಕ್ತಿ ಚೆನ್ನಾಗಿಯೇ ಇದೆ’ ಎನ್ನುತ್ತಾರೆ ಆನಂದ.

ರೋಗಿಷ್ಠ ಹಸುಗಳನ್ನು ಸಾಕಿಟ್ಟುಕೊಳ್ಳಬೇಕೆ, ಕೊಲ್ಲಬೇಕೆ? ಪಶುವೈದ್ಯರು ಖಚಿತ ಏನನ್ನೂ
ಹೇಳಲು ಹಿಂದೇಟು ಹಾಕುತ್ತಾರೆ. ‘ಹಿಂದೆಯೂ ಹೆಸರುಘಟ್ಟದ ಡೇರಿ ಫಾರ್ಮ್‌ನಲ್ಲಿ ಅಂಥ
ಹಸುಗಳಿಗೆ ದಯಾಮರಣ ಕೊಟ್ಟಿದ್ದುಂಟು’ ಎನ್ನುತ್ತಾರೆ  ರಾಷ್ಟ್ರೀಯ ಡೇರಿ ಸಂಶೋಧನಾ ಸಂಸ್ಥೆಯ
ಮುಖ್ಯಸ್ಥ ಡಾ. ಕೆ.ಪಿ.ರಮೇಶ್. ‘ನಮ್ಮ ದೇಶದ ಕೆಲವರಲ್ಲಿ ಬ್ರುಸೆಲ್ಲೊಸಿಸ್ ರೋಗ ನಿರೋಧಕ
ಶಕ್ತಿ ಇರಲೂಬಹುದು.

ಆಗಾಗ ಒಂದರ್ಧ ಚಮಚ ಪಂಚಗವ್ಯ ಸೇವನೆ ಮಾಡಿದ್ದರಿಂದಲೇ ರೋಗ ನಿರೋಧಕ ಶಕ್ತಿ ಬಂದಿರಲೂಬಹುದು.
ಭಾರತದ ಅಪ್ಪಟ ನಾಟಿ ದನಗಳಿಗೆ ಬ್ರುಸೆಲ್ಲೊಸಿಸ್ ರೋಗ ಬರುವುದಿಲ್ಲ. ಆದರೆ ಈಗೀಗ ಎಲ್ಲೆಲ್ಲೂ
ಸಂಕರ ತಳಿಗಳೇ ಕಾಣುತ್ತವೆ. ಗಿರ್ ಹಸುಗಳಲ್ಲೂ ಈ ಕಾಯಿಲೆ ಪತ್ತೆಯಾಗಿದೆ.

ಕಟ್ಟುನಿಟ್ಟಾಗಿ ಡೇರಿಗಳನ್ನು ಚೊಕ್ಕಟ ಇಟ್ಟುಕೊಳ್ಳಲೇಬೇಕು. ರೋಗಗ್ರಸ್ತ ಹಸುಗಳನ್ನು
ಪ್ರತ್ಯೇಕಿಸಲೇಬೇಕು. ಕೃತಕ ಗರ್ಭಾಧಾನ ಮಾಡಿಸಿದ ಮೇಲೂ ಹೋರಿಗಳನ್ನು ಹಾಯಿಸುವ ಪದ್ಧತಿ
ಕೆಲವೆಡೆ ಇದೆ. ರೋಗಿಷ್ಠ ಹೋರಿಗಳನ್ನು ಗುರುತಿಸಿ ಬೀಜ ತೆಗೆಸುವ ಕ್ರಮ ವ್ಯಾಪಕವಾಗಿ
ಆಗಬೇಕು’ ಎಂದು ಅವರು ಹೇಳುತ್ತಾರೆ.

ಬ್ರುಸೆಲ್ಲೊಸಿಸ್ ರೋಗದ ಬಗ್ಗೆ ಸುದೀರ್ಘ ಅಧ್ಯಯನ ಮಾಡಿ, ಅದರಲ್ಲೇ ಡಾಕ್ಟರೇಟ್ ಪಡೆದು
ಹೆಬ್ಬಾಳದ ವೆಟರಿನರಿ ಕಾಲೇಜಿನ ಸಹಪ್ರಾಧ್ಯಾಪಕರಾಗಿರುವ ಡಾ. ಶ್ರೀಕೃಷ್ಣ ಇಸಳೂರ್ ಕೂಡ
ಕಟ್ಟುನಿಟ್ಟಿನ ಶುಚಿತ್ವದ ಬಗ್ಗೆ ಒತ್ತಿ ಹೇಳುತ್ತಾರೆ. ಕೆಲವರ ಹೊಣೆಗೇಡಿತನದಿಂದ ಡೇರಿ
ಉದ್ಯಮಿಗಳಿಗೂ ಸಾಕಷ್ಟು ನಷ್ಟವಾಗುತ್ತಿದೆ, ಡೇರಿ ಹಾಲಿನ ವಿಶ್ವಾಸಾರ್ಹತೆ ಕೂಡ
ಬಳಕೆದಾರರಲ್ಲಿ ಕಡಿಮೆಯಾಗುತ್ತದೆ; ಪಶುವೈದ್ಯರಿಗೂ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ.

ಶಿರಸಿಯ ಸರ್ಕಾರಿ ಪಶುವೈದ್ಯ ಡಾ. ಗಣೇಶ ನೀಲೇಸರ ಸ್ವತಃ ಬ್ರುಸೆಲ್ಲೊಸಿಸ್ ಕಾಯಿಲೆಗೆ
ಸಿಕ್ಕು ಅನೇಕ ಬಾರಿ ನರಳಿದವರು. ಜ್ವರ ತಾರಕಕ್ಕೇರಿ ವಿಭ್ರಮೆಯುಂಟಾದಾಗಿನ ತಮ್ಮ
ಅನುಭವವನ್ನು ತುಂಬ ಸ್ವಾರಸ್ಯಕರವಾಗಿ ಅವರು ‘ಡೇರಿ ಡಾಕ್ಟರ್, ಹೋರಿ ಮಾಸ್ಟರ್’
ಪುಸ್ತಕದಲ್ಲಿ  ಬರೆದಿದ್ದಾರೆ.

ಹಸುಗಳು ಸಾಲುಸಾಲಾಗಿ ಈ ಕಾಯಿಲೆಗೆ ಸಿಕ್ಕು ಒಂದರ ಮೇಲೊಂದು ಗರ್ಭಸ್ರಾವವಾಗಿ ಇಡೀ ಡೇರಿ
ಫಾರ್ಮ್ ದಿವಾಳಿ ಆಗಿರುವ ಉದಾಹರಣೆಯೂ ಅವರ ಕಥನದಲ್ಲಿದೆ. ಅದಕ್ಕೆ ‘ಗರ್ಭಸ್ರಾವದ ಬಿರುಗಾಳಿ’
(ಸ್ಟಾರ್ಮ್ ಆಫ್ ಅಬಾರ್ಶನ್) ಎಂಬ ಗುಣವಾಚಕವೇ ಇದೆಯಂತೆ. ಅದು ಹಾಗಿರಲಿ, ‘ಪಂಚಗವ್ಯ ಸೇವನೆ
ಮಾಡಿ ಬ್ರುಸೆಲ್ಲೊಸಿಸ್ ಕಾಯಿಲೆಗೆ ಸಿಕ್ಕು ನರಳಿದ ವೈದಿಕರೂ ನನಗೆ ಗೊತ್ತು’ ಎಂದು ಅವರು
ಹೇಳುತ್ತಾರೆ.

[ms-stf '64499'] :ಗ್ಯಾಜೆಟ್ ಜಗತ್ತಿಗೂ ಬಂದ ಟೂ-ಇನ್-ಒನ್

2016-09-06 Thread HAREESHKUMAR K Agasanapura
http://www.ejnana.com/2016/09/blog-post.html?m=1

*ಗ್ಯಾಜೆಟ್ ಜಗತ್ತಿಗೂ ಬಂದ ಟೂ-ಇನ್-ಒನ್*

*ಟಿ. ಜಿ. ಶ್ರೀನಿಧಿ*



ಹಿಂದಿನ ಕಾಲದಲ್ಲಿ ರೇಡಿಯೋ ಪ್ರತಿಷ್ಠೆಯ ಸಂಕೇತವಾಗಿತ್ತಂತೆ. ಇಷ್ಟು ದೊಡ್ಡ ರೇಡಿಯೋ
ಮನೆಯಲ್ಲಿದೆ ಎನ್ನುವುದೇ ಅಂದಿನ ಮಟ್ಟಿಗೆ ವಿಶೇಷವಾದ ಸಂಗತಿಯಾಗಿದ್ದಿರಬೇಕು.

ಆಮೇಲೆ ಯಾವಾಗಲೋ ಟೇಪ್ ರೆಕಾರ್ಡರ್ ಮಾರುಕಟ್ಟೆಗೆ ಬಂತು. ಅದರೊಡನೆ ರೇಡಿಯೋ ಸ್ಟೇಶನ್ನಿನವರು
ಪ್ರಸಾರ ಮಾಡುವ ಹಾಡನ್ನಷ್ಟೇ ಕೇಳಬೇಕಾದ ಅನಿವಾರ್ಯತೆಯೂ ಹೋಯಿತು; ನಮಗಿಷ್ಟವಾದ ಹಾಡನ್ನು
ಬೇಕಾದಾಗ ಬೇಕಾದಷ್ಟು ಸಲ ಕೇಳುವುದು ಸಾಧ್ಯವಾಯಿತು.

ರೇಡಿಯೋ ಜೊತೆಗೆ ಈ ಹೊಸ ಸಾಧನವನ್ನೂ ಮನೆಯಲ್ಲಿಟ್ಟುಕೊಳ್ಳುವುದು ಒಂದಷ್ಟು ದಿನದ ಮಟ್ಟಿಗೆ
ಫ್ಯಾಶನಬಲ್ ಅನಿಸಿತೇನೋ ಸರಿ; ಆದರೆ ಕೊಂಚ ಸಮಯದ ನಂತರ ಎರಡೆರಡು ಪೆಟ್ಟಿಗೆಗಳೇಕಿರಬೇಕು
ಎನ್ನುವ ಯೋಚನೆ ಶುರುವಾಯಿತು. ಆಗ ಬಂದದ್ದು ರೇಡಿಯೋ ಸೌಲಭ್ಯವೂ ಇರುವ ಟೇಪ್‌ರೆಕಾರ್ಡರ್,
ಅರ್ಥಾತ್ 'ಟೂ-ಇನ್-ಒನ್'.

ಗ್ಯಾಜೆಟ್ ಜಗತ್ತಿನ ಸದ್ಯದ ಪರಿಸ್ಥಿತಿಯೂ ಹೆಚ್ಚೂಕಡಿಮೆ ಹೀಗೆಯೇ ಇದೆ. ನಮ್ಮ ಬಹಳಷ್ಟು
ಕೆಲಸಗಳು ಇದೀಗ ಮೊಬೈಲ್ ಮೂಲಕವೇ ಆಗುತ್ತಿವೆ. ಮೊಬೈಲಿಗಿಂತ ಕೊಂಚ ದೊಡ್ಡ ಪರದೆ ಬೇಕಾದರೆ
ಟ್ಯಾಬ್ಲೆಟ್ ಇದೆ. ಒಟ್ಟಿನಲ್ಲಿ ಟಚ್‌ಸ್ಕ್ರೀನ್ ಸಾಧನಗಳಿಗೆ ನಾವು ಚೆನ್ನಾಗಿಯೇ
ಒಗ್ಗಿಕೊಂಡಿದ್ದೇವೆ. ವಾಟ್ಸಾಪ್‌ನಲ್ಲಿ ಟೈಪಿಸಲಿಕ್ಕೆ, ಬ್ರೌಸಿಂಗ್ ಮಾಡಲಿಕ್ಕೆಲ್ಲ
ಸ್ಮಾರ್ಟ್‌ಫೋನ್ ಉಪಯೋಗ ನಮಗೆ ಬಹಳ ಸಲೀಸು. ಸೋಫಾಗೆ ಒರಗಿಕೊಂಡೋ ಮಂಚದ ಮೇಲೆ ಮಲಗಿಕೊಂಡೋ
ಯೂಟ್ಯೂಬ್ ನೋಡುವುದಕ್ಕೆ-ಕತೆಪುಸ್ತಕ ಓದುವುದಕ್ಕೂ ಸರಿಯೇ, ಟ್ಯಾಬ್ಲೆಟ್ಟುಗಳು ಹೇಳಿ
ಮಾಡಿಸಿದ ಜೋಡಿ. ಪ್ರತ್ಯೇಕ ಟ್ಯಾಬ್ಲೆಟ್ ಇಲ್ಲದಿದ್ದರೂ ಪರವಾಗಿಲ್ಲ, ದೊಡ್ಡ ಪರದೆಯ
ಫೋನುಗಳೇ ಇವೆಯಲ್ಲ!

ಆದರೆ ಉದ್ದನೆಯದೊಂದು ಇಮೇಲ್ ಬರೆಯಬೇಕೆಂದೋ, ಆಫೀಸಿನ ಕಡತಗಳನ್ನು ಸಿದ್ಧಪಡಿಸಬೇಕೆಂದೋ ಹೇಳಿ
ನೋಡಿ, ಮೊಬೈಲು-ಟ್ಯಾಬ್ಲೆಟ್ಟುಗಳ ಕಟ್ಟಾ ಅಭಿಮಾನಿಗಳಿಗೂ ಒಂದು ಕೀಬೋರ್ಡ್ ಇದ್ದರೆ
ಚೆನ್ನಾಗಿತ್ತಲ್ಲ ಎನ್ನಿಸಲು ಶುರುವಾಗುತ್ತದೆ.

ನಿಜ, ಹೆಚ್ಚಿನ ಟೈಪಿಂಗ್ ನಿರೀಕ್ಷಿಸುವ ಕೆಲಸಗಳಿಗೆ ಮೊಬೈಲು-ಟ್ಯಾಬ್ಲೆಟ್ಟುಗಳನ್ನು
ಬಳಸುವುದು ಎಷ್ಟೇ ಪರಿಣತ ಬಳಕೆದಾರರಿಗಾದರೂ ಕಿರಿಕಿರಿಯ ಕೆಲಸವೇ ಸರಿ. ಹಾಗಾಗಿಯೇ ಬಹಳಷ್ಟು
ಜನ ಅವುಗಳ ಜೊತೆಗೆ ಲ್ಯಾಪ್‌ಟಾಪನ್ನೂ  ಬಳಸುತ್ತಾರೆ: ಇಂತಿಷ್ಟು ಕೆಲಸಕ್ಕೆ ಫೋನು (ಅಥವಾ
ಟ್ಯಾಬೆಟ್ಟು), ಮಿಕ್ಕಿದ್ದಕ್ಕೆ ಲ್ಯಾಪ್‌ಟಾಪು ಎನ್ನುವುದು ಅನೇಕರು ಪಾಲಿಸುವ ಸೂತ್ರ.
ಹಿಂದಿನಕಾಲದ ರೇಡಿಯೋ-ಟೇಪ್ ರೆಕಾರ್ಡರ್ ಜೋಡಿಯಂತೆ.

ರೇಡಿಯೋ-ಟೇಪ್‌ರೆಕಾರ್ಡರುಗಳಾದರೆ ಮನೆಯ ಮೂಲೆಯಲ್ಲೊಂದು ಕಡೆ ಕುಳಿತಿರುತ್ತಿದ್ದವು. ಆದರೆ
ಇಂದಿನ ಗ್ಯಾಜೆಟ್‌ಗಳು ಹಾಗಲ್ಲವಲ್ಲ - ನಾವು ಹೋದಕಡೆಗೆಲ್ಲ ಅವನ್ನೂ ಕೊಂಡೊಯ್ಯುವುದು ನಮಗೆ
ಅಭ್ಯಾಸವಾಗಿಬಿಟ್ಟಿದೆ. ಬರಿಯ ಗ್ಯಾಜೆಟ್‌ಗಳನ್ನಷ್ಟೇ ಏಕೆ, ಅವುಗಳ ಚಾರ್ಜರುಗಳನ್ನೂ
ಹೊತ್ತುಕೊಂಡು ಹೋಗಬೇಕು. ಮೊಬೈಲಿನ ಚಾರ್ಜರ್ ಆದರೇನೋ ಸರಿ, ಲ್ಯಾಪ್‌ಟಾಪಿನ ಚಾರ್ಜರ್ ಅಂತೂ
ಹೆಚ್ಚೂಕಡಿಮೆ ಅರ್ಧ ಲ್ಯಾಪ್‌ಟಾಪಿನಷ್ಟೇ ಭಾರವಿರುತ್ತದೆ. ಒಂದುಸಮಯ ಮೊಬೈಲಿನ ಚಾರ್ಜರನ್ನು
ಬೇರೆಯವರಿಂದ ಕೇಳಿಕೊಂಡು ಬಳಸಬಹುದು; ಆದರೆ ಲ್ಯಾಪ್‌ಟಾಪಿಗೆ ಅದರದೇ ಚಾರ್ಜರ್ ಆಗಬೇಕು!

ಪ್ರತ್ಯೇಕ ರೇಡಿಯೋ ಹಾಗೂ ಟೇಪ್ ರೆಕಾರ್ಡರುಗಳನ್ನು ಬಳಸುವ ಅನಿವಾರ್ಯತೆಯನ್ನು
'ಟೂ-ಇನ್-ಒನ್' ತಪ್ಪಿಸಿತಲ್ಲ, ಅಂಥದ್ದೇನಾದರೂ ಗ್ಯಾಜೆಟ್ ಲೋಕದಲ್ಲೂ ಬಂದರೆ ಈ ಸಮಸ್ಯೆ
ಪರಿಹಾರವಾಗಬಹುದೇ?

*ಹೈಬ್ರಿಡ್ ಕಂಪ್ಯೂಟರ್ *



ಖಂಡಿತಾ. ಈ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನವಾಗಿ ಟೂ-ಇನ್-ಒನ್‌ಗಳು ಗ್ಯಾಜೆಟ್
ಜಗತ್ತಿಗೆ ಈಗಾಗಲೇ ಪ್ರವೇಶಿಸಿಬಿಟ್ಟಿವೆ. ಹೈಬ್ರಿಡ್ ಕಂಪ್ಯೂಟರ್ ಅಥವಾ
'ಟ್ಯಾಬ್ಲೆಟ್-ಲ್ಯಾಪ್‌ಟಾಪ್ ಹೈಬ್ರಿಡ್'ಗಳೆಂದೂ ಕರೆಸಿಕೊಳ್ಳುವ ಈ ಸಾಧನಗಳು ಟ್ಯಾಬ್ಲೆಟ್
ಹಾಗೂ ಲ್ಯಾಪ್‌ಟಾಪ್ ಕಂಪ್ಯೂಟರುಗಳ ನಡುವಿನ ವ್ಯತ್ಯಾಸವನ್ನು ನಿಧಾನಕ್ಕೆ ಹೋಗಲಾಡಿಸುತ್ತಿವೆ.

ಲ್ಯಾಪ್‌ಟಾಪ್ ಕಂಪ್ಯೂಟರಿನಲ್ಲಿ ಅನುಕೂಲಕರ ಗಾತ್ರದ (ಸುಮಾರು ೧೦ರಿಂದ ೧೫ ಇಂಚು)
ಪರದೆಯಿರುತ್ತದೆ, ಕೀಲಿಮಣೆಯೂ ಇರುತ್ತದೆ. ಇವೆರಡನ್ನೂ ಬೇಕೆಂದಾಗ ಬೇರೆಮಾಡುವಂತಿದ್ದರೆ?
ಸಿನಿಮಾ ನೋಡುವಾಗ ಪರದೆಯನ್ನಷ್ಟೆ (ಟ್ಯಾಬ್ಲೆಟ್ಟಿನಂತೆ) ಬಳಸಿ ಇಮೇಲ್ ಟೈಪಿಸುವಾಗ
ಕೀಲಿಮಣೆಯನ್ನು ಜೋಡಿಸಿಕೊಳ್ಳಬಹುದು. ಇಮೇಲ್ ಮುಗಿಸಿದ ಮೇಲೆ ಕೀಲಿಮಣೆ ಕಿತ್ತಿಟ್ಟರಾಯಿತು,
ಆವರೆಗೂ ಲ್ಯಾಪ್‌ಟಾಪ್ ಆಗಿದ್ದದ್ದು ಟ್ಯಾಬ್ಲೆಟ್ ಆಗಿ ಬದಲಾಗಿಬಿಡುತ್ತದೆ! ಅಷ್ಟೇ ಅಲ್ಲ,
ಸಾಮಾನ್ಯವಾಗಿ ಲ್ಯಾಪ್‌ಟಾಪ್‌ಗಳಲ್ಲಷ್ಟೆ ಇರುವ ಸಂಸ್ಕರಣಾ ಸಾಮರ್ಥ್ಯ, ಮತ್ತು ಅವುಗಳಲ್ಲಿ
ನಾವು ಬಳಸುವ ತಂತ್ರಾಂಶದ ಸವಲತ್ತುಗಳು ಟ್ಯಾಬ್ಲೆಟ್ಟಿನಲ್ಲೂ ದೊರಕುವುದು ಸಾಧ್ಯವಾಗುತ್ತದೆ.

ಟೂ-ಇನ್-ಒನ್ ಕಂಪ್ಯೂಟರುಗಳ ಸೃಷ್ಟಿಯ ಹಿಂದಿರುವುದು ಇದೇ ಆಲೋಚನೆ. ಇಂತಹ ಕಂಪ್ಯೂಟರುಗಳಲ್ಲಿ
ಸಾಮಾನ್ಯ ಟ್ಯಾಬ್ಲೆಟ್ಟುಗಳಿಗಿಂತ ಕೊಂಚ ದೊಡ್ಡ ಗಾತ್ರದ (ಹಾಗೂ ಲ್ಯಾಪ್‌ಟಾಪ್‌ಗಿಂತ ಕೊಂಚ
ಸಣ್ಣದಾದ) ಪರದೆ ಇರುವುದು ಸಾಮಾನ್ಯ. ಕೆಲವು ಮಾದರಿಗಳಲ್ಲಿ ಪ್ರತ್ಯೇಕ ಕೀಲಿಮಣೆ ಇದ್ದರೆ
ಇನ್ನು ಕೆಲವು ಮಾದರಿಗಳಲ್ಲಿ ಪರದೆಯನ್ನು ಮುಚ್ಚುವ ಕವಚದಲ್ಲೇ (ಟ್ಯಾಬ್ಲೆಟ್ ಕವರ್)
ಕೀಲಿಮಣೆಯೂ ಅಡಕವಾಗಿರುತ್ತದೆ. ಪ್ರತ್ಯೇಕ ಕೀಲಿಮಣೆ ಇರುವ ಮಾದರಿಗಳಲ್ಲಿ ಟ್ಯಾಬ್ಲೆಟ್‌ನಂತೆ
ಬಳಸುವ ಭಾಗವನ್ನು ಕೀಲಿಮಣೆಯ ಮೇಲೆ (ಲ್ಯಾಪ್‌ಟಾಪ್ ಪರದೆಯಂತೆ) ಜೋಡಿಸಿಕೊಳ್ಳುವುದು ಸಾಧ್ಯ.
ಕವಚದಲ್ಲಿ ಅಡಕವಾಗಿರುವ ತೆಳುವಾದ ಕೀಲಿಮಣೆಗೆ ಈ ಸಾಮರ್ಥ್ಯವಿರುವುದಿಲ್ಲವಲ್ಲ, ಅಂತಹ
ಮಾದರಿಗಳಲ್ಲಿ ಟ್ಯಾಬ್ಲೆಟ್‌ಗೊಂದು ಪ್ರತ್ಯೇಕ ಸ್ಟಾಂಡ್ ಇರುತ್ತದೆ.

*ನೋಶನ್ ಇಂಕ್ ಏಬಲ್*



ಟೂ-ಇನ್-ಒನ್ ಪರಿಕಲ್ಪನೆ ಬಹಳಷ್ಟು ಬಳಕೆದಾರರಿಗೆ ಇಷ್ಟವಾಗಲಿದೆ ಎನ್ನುವ ನಿರೀಕ್ಷೆಯಲ್ಲಿ
ಯಂತ್ರಾಂಶ ತಯಾರಕರೆಲ್ಲ ಇಂತಹ ಕಂಪ್ಯೂಟರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.
ವಿಶ್ವವಿಖ್ಯಾತ ಸಂಸ್ಥೆಗಳಿಂದ ಪ್ರಾರಂಭಿಸಿ ಪ್ರಾದೇಶಿಕ ಉತ್ಪಾದಕರವರೆಗೆ ಎಲ್ಲ ಬಗೆಯ
ಸಂಸ್ಥೆಗಳ ಉತ್ಪನ್ನಗಳನ್ನೂ ನಾವು ಟೂ-ಇನ್-ಒನ್ ಮಾರುಕಟ್ಟೆಯಲ್ಲಿ ಇದೀಗ ಕಾಣಬಹುದು.

ಈ ಪೈಕಿ ಭಾರತೀಯ ಸಂಸ್ಥೆಗಳೂ ಇವೆ. ನಮ್ಮ ಬೆಂಗಳೂರಿನ ನೋಶನ್ ಇಂಕ್ ಡಿಸೈನ್ ಲ್ಯಾಬ್ಸ್
ಕೆಲವು ವಿಶಿಷ್ಟ ಮಾದರಿಯ ಟೂ-ಇನ್-ಒನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ
ಗಮನಸೆಳೆದಿದೆ.

ಈ ಸಂಸ್ಥೆ ಇತ್ತೀಚೆಗಷ್ಟೆ ಬಿಡುಗಡೆಗೊಳಿಸಿದ ಮಾದರಿಯೇ 'ನೋಶನ್ ಇಂಕ್ ಏಬಲ್'. ರೂ. ೨೪,೯೯೦
ಬೆಲೆಯ ಈ ಟೂ-ಇನ್-ಒನ್ ಹಲವು ಆನ್‌ಲೈನ್ ತಾಣಗಳ ಮೂಲಕ ಲಭ್ಯವಿದೆ.

ಪುಟಾಣಿ ಲ್ಯಾಪ್‌ಟಾಪ್‌ನಂತೆ ಕಾಣುವ ಈ ಕಂಪ್ಯೂಟರ್ ತನ್ನ ಆಕರ್ಷಕ ವಿನ್ಯಾಸದಿಂದ ಮೊದಲ
ನೋಟದಲ್ಲೇ ಗಮನಸೆಳೆಯುತ್ತದೆ. ಹತ್ತಿಂಚಿನ ಟಚ್‌ಸ್ಕ್ರೀನ್ ಪರದೆ, ವಿಂಡೋಸ್ ಕಾರ್ಯಾಚರಣ
ವ್ಯವಸ್ಥೆ, ೧.೮೪ ಗಿಗಾಹರ್ಟ್ಸ್ ಸಾಮರ್ಥ್ಯದ ಇಂಟೆಲ್ ಚೆರಿ ಟ್ರೇಲ್ ಕ್ವಾಡ್ ಕೋರ್
ಪ್ರಾಸೆಸರ್, ೪ ಜಿಬಿ ರ್‍ಯಾಮ್, ೬೪ ಜಿಬಿ ಶೇಖರಣಾ ಸಾಮರ್ಥ್ಯ, ಹೆಚ್ಚುವರಿಯಾಗಿ ೧೨೮
ಜಿಬಿವರೆಗಿನ ಮೆಮೊರಿ ಕಾರ್ಡ್ ಬಳಸುವ ಅವಕಾಶ, ಅಂತರಜಾಲ ಸಂಪರ್ಕ ಪಡೆದುಕೊಳ್ಳಲು ತ್ರೀಜಿ

[ms-stf '64497'] ಜಡ್ಜ್‌ ಮಗಳು ಸರಕಾರಿ ಶಾಲೆ ವಿದ್ಯಾರ್ಥಿನಿ !

2016-09-05 Thread HAREESHKUMAR K Agasanapura
http://m.vijaykarnataka.com/district/mandya/jmfc-court-judge-daughter-studying-at-govt-school/articleshow/54007687.cms

*ಜಡ್ಜ್‌ ಮಗಳು ಸರಕಾರಿ ಶಾಲೆ ವಿದ್ಯಾರ್ಥಿನಿ !*

ವಿಕ ಸುದ್ದಿಲೋಕ | Sep 5, 2016, 09.00 AM IST

Whatsapp Facebook Google Plus
Twitter Email
SMS 

govt-school

AAA

ಚನ್ನಮಾದೇಗೌಡ ಪಾಂಡವಪುರ(ಮಂಡ್ಯ): ಸರಕಾರಿ ನೌಕರರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ
ಸೇರಿಸಲು ಮೂಗು ಮುರಿಯುವ ದಿನಗಳಲ್ಲಿ ನ್ಯಾಯಾಧೀಶರೊಬ್ಬರು ತಮ್ಮ ಪುತ್ರಿ ಹಾಗೂ ಕುಟುಂಬದ
ಮತ್ತೊಬ್ಬ ಬಾಲಕಿಯನ್ನು ಸರಕಾರಿ ಶಾಲೆಗೆ ಸೇರಿಸಿದ್ದಾರೆ. ಪಾಂಡವಪುರದ ಜೆಎಂಎಫ್‌ಸಿ
ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಧೀಶ ಜಗದೀಶ್‌ ಬಿಸೆರೊಟ್ಟಿ ಅವರೇ ತಮ್ಮ ಮಗಳು
ನೀಲಮ್ಮಳನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಿದ್ದಾರೆ. ಜಡ್ಜ್‌ ಕುಟುಂಬದ
ಮತ್ತೊಬ್ಬ ಬಾಲಕಿ ವಿದ್ಯಾ ಈರಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಮೂಲತಃ
ಧಾರವಾಡದ ಜಗದೀಶ್‌ ಬಿಸೆರೊಟ್ಟಿ ಅವರು 2 ತಿಂಗಳ ಹಿಂದೆಯಷ್ಟೇ ಪಾಂಡವಪುರ ಜೆಎಂಎಫ್‌ಸಿ
ನ್ಯಾಯಾಲಯಕ್ಕೆ ಹಿರಿಯ ಶ್ರೇಣಿ ನ್ಯಾಯಾಧೀಶರಾಗಿ ವರ್ಗಾವಣೆಗೊಂಡಿದ್ದಾರೆ. ಪಟ್ಟಣದ ಶಾಂತಿ
ನಗರದಲ್ಲಿ ವಾಸವಾಗಿದ್ದಾರೆ. ಪಾಂಡವಪುರದಲ್ಲಿ 10ಕ್ಕೂ ಹೆಚ್ಚು ಖಾಸಗಿ ಶಾಲೆಗಳಿದ್ದರೂ,
ತಾವು ವಾಸವಿರುವ ಬಡಾವಣೆಯಲ್ಲೇ ಇರುವ ಶಾಂತಿನಗರ ಸರಕಾರಿ ಶಾಲೆಗೆ ಮಕ್ಕಳನ್ನು
ದಾಖಲಿಸಿದ್ದಾರೆ. ನ್ಯಾಯಾಧೀಶರ ಪುತ್ರಿ 7 ವರ್ಷದ ನೀಲಮ್ಮ 2ನೇ ತರಗತಿಯಲ್ಲಿ ಹಾಗೂ ವಿದ್ಯಾ
ಈರಪ್ಪ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಾಂತಿನಗರ ಬಡಾವಣೆಯಲ್ಲಿ ಇರುವ
ಸರಕಾರಿ ಶಾಲೆಯಲ್ಲಿ ಸುತ್ತಮುತ್ತಲ ಬಡ ಹಾಗೂ ಕಡು ಬಡತನವುಳ್ಳ ಕುಟುಂಬಸ್ಥರ ಮಕ್ಕಳು
ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸಾಮಾಜಿಕ,ಆರ್ಥಿಕ ಹಾಗೂ ಶೈಕ್ಷ ಣಿಕವಾಗಿ ತೀರ
ಹಿಂದುಳಿದಿರುವ ಹಿಂದೂ, ಕ್ರೈಸ್ತ ಹಾಗೂ ಮುಸ್ಲಿಂ ಧರ್ಮಕ್ಕೆ ಸೇರಿದ ಕುಟುಂಬಸ್ಥರ ಮಕ್ಕಳು
ಇಲ್ಲಿ ಹೆಚ್ಚಾಗಿ ದಾಖಲಾಗಿದ್ದಾರೆ. ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ
ಎಂದೇ ನ್ಯಾಯಾಧೀಶರು ಇಲ್ಲಿಗೆ ಸೇರಿಸಿದ್ದಾರಂತೆ. ಸರಕಾರ ಶಾಲೆಯಲ್ಲಿ ಉಚಿತವಾಗಿ ಸಿಗುವ
ಪಠ್ಯ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಸೇರಿದಂತೆ ಪ್ರೋತ್ಸಾಹ
ಯೋಜನೆಗಳು ಎಲ್ಲಾ ಮಕ್ಕಳಂತೆ ನ್ಯಾಯಾಧೀಶರ ಮನೆಯ ಮಕ್ಕಳಿಗೂ ಸಿಗುತ್ತಿವೆ. ''ನ್ಯಾಯಾಧೀಶರ
ಮಗಳು ನಮ್ಮ ಶಾಲೆಯಲ್ಲಿ ಕಲಿಯುತ್ತಿರುವುದು ಸಂತೋಷಕರ ಸಂಗತಿ. ಸಮಾಜದ ಗೌರವಾನ್ವಿತ
ಸ್ಥಾನದಲ್ಲಿರುವ ವೈದ್ಯರು, ಎಂಜಿನಿಯರ್‌ಗಳು, ಪೊಲೀಸರು, ಅಧ್ಯಾಪಕರು, ವಕೀಲರು,
ಪತ್ರಕರ್ತರು ತಮ್ಮ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿದರೆ, ಅವುಗಳನ್ನು ಮುಚ್ಚುವ
ಪರಿಸ್ಥಿತಿಯೇ ಬರುವುದಿಲ್ಲ'' ಎನ್ನುತ್ತಾರೆ ಶಾಲೆಯ ಸಹ ಶಿಕ್ಷ ಕಿ ವಿ.ಭಾರತಿ. ಪ್ರಸ್ತುತ
ಸಂದರ್ಭದಲ್ಲಿ ರಾಜ್ಯದ ಅನೇಕ ಸರಕಾರಿ ಶಾಲೆಗಳಲ್ಲಿನ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ
ಕೊರತೆಯಿಂದಾಗಿ ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸಂದರ್ಭದಲ್ಲಿ ನ್ಯಾಯಾಧೀಶರ ಈ
ನಿರ್ಧಾರ ರಾಜ್ಯಕ್ಕೆ ಮಾದರಿಯಾಗಿದೆ. ಸರಕಾರದ ಉನ್ನತ ಹುದ್ದೆಯಲ್ಲಿರುವ ನ್ಯಾಯಾಧೀಶರು ತಮ್ಮ
ಮಕ್ಕಳ ಭವಿಷ್ಯ ರೂಪಿಸುವುದಕ್ಕಾಗಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವ ಮೂಲಕ
ಸರಕಾರಿ ಶಾಲೆಗಳೇ ಗುಣಮಟ್ಟದ ಶಿಕ್ಷ ಣ ನೀಡುತ್ತವೆ ಎನ್ನುವ ಸಂದೇಶವನ್ನು ಸಮಾಜಕ್ಕೆ
ಸಾರಿದ್ದಾರೆ. ನ್ಯಾಯಾಧೀಶರು ಮಗಳು ಹಾಗೂ ಇವರ ಕುಟುಂಬಸ್ಥರ ಮಗಳನ್ನು ನಮ್ಮ ಶಾಲೆಗೆ
ಸೇರಿಸಿರುವುದು ನಮ್ಮ ಶಾಲೆಗೆ ಕೀರ್ತಿ ಬಂದಂತಾಗಿದೆ. -ಎಚ್‌.ಎನ್‌.ಜಗದೀಶ್‌, ಪ್ರಭಾರ
ಮುಖ್ಯ ಶಿಕ್ಷ ಕ, ಸರಕಾರಿ ಪ್ರೌಢಶಾಲೆ ಶಾಂತಿನಗರ. ಶಾಲೆ ಉಳಿಸಿ ಬೆಳೆಸಬೇಕೆಂದು ಸರಕಾರ
ಸಾಕಷ್ಟು ಪ್ರಯತ್ನಿಸುತ್ತಿರುವ ದಿನಗಳಲ್ಲಿ ನ್ಯಾಯಾಧೀಶರು ತಮ್ಮ ಮಗಳನ್ನು ಸರಿಕಾರಿ ಶಾಲೆಗೆ
ಸೇರಿಸಿರುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸರಕಾರಿ ಕೆಲಸದಲ್ಲಿರುವ ನೌಕರರೇ ತಮ್ಮ
ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಹಿಂದೆ ಸರಿಯುವ ದಿನಗಳಲ್ಲಿ ನ್ಯಾಯಾಧೀಶರ ಈ ಚಿಂತನೆ
ನಮ್ಮ ಶಾಲೆಗೆ ಹಾಗೂ ನಮ್ಮ ಇಲಾಖೆಗೆ ಗೌರವವನ್ನು ಹೆಚ್ಚಿಸಿದಂತಾಗಿದೆ. ಮುಂದಿನ ದಿನಗಳಲ್ಲಿ
ಎಲ್ಲರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಬೇಕು ಎನ್ನುವುದೇ ನಮ್ಮ ಆಶಯ.
-ಬಿ.ಚಂದ್ರಶೇಖರ್‌, ಕ್ಷೇತ್ರ ಶಿಕ್ಷ ಣಾಧಿಕಾರಿ.

Hareeshkumar K
GHS HUSKURU
MALAVALLI TQ
MANDYA DT
MOB 9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '64369'] ಶಿಕ್ಷಕ ವೃತ್ತಿಗೆ ಬೇಕಿದೆ ಆಕರ್ಷಣೆ | ಪ್ರಜಾವಾಣಿ

2016-09-03 Thread HAREESHKUMAR K Agasanapura
http://m.prajavani.net/article/2016_09_03/435591

*ಶಿಕ್ಷಕ ವೃತ್ತಿಗೆ ಬೇಕಿದೆ ಆಕರ್ಷಣೆ*

3 Sep, 2016

ಡಾ. ಎಚ್.ಬಿ.ಚಂದ್ರಶೇಖರ್








ಒಂದು ತರಗತಿಯಲ್ಲಿನ ಮಕ್ಕಳಿಗೆ ‘ನೀವು ಮುಂದೇನಾಗಬೇಕೆಂದು ಬಯಸುವಿರಿ’ ಎಂದು ಪ್ರಶ್ನಿಸಿದರೆ
ಹೆಚ್ಚಿನ ಮಕ್ಕಳ ಉತ್ತರ ಡಾಕ್ಟರ್, ಎಂಜಿನಿಯರ್, ಐಎಎಸ್ ಅಧಿಕಾರಿ ಎಂದಿದ್ದರೆ, ಎಲ್ಲೋ
ಒಬ್ಬಿಬ್ಬರು ಮಾತ್ರ ಶಿಕ್ಷಕರಾಗುತ್ತೇವೆ ಎನ್ನುತ್ತಾರೆ.

ಅದರಲ್ಲೂ ಗ್ರಾಮೀಣ ಪ್ರದೇಶದ ವಿವಿಧ ವೃತ್ತಿಗಳ ಪರಿಚಯವಿಲ್ಲದ ಹೆಚ್ಚಿನ ಮಕ್ಕಳ ಆಯ್ಕೆ
ಶಿಕ್ಷಕ ವೃತ್ತಿಯಾಗಿದ್ದರೆ, ವಿವಿಧ ವೃತ್ತಿಗಳ ಜ್ಞಾನವಿರುವ ಮಕ್ಕಳ ಆಯ್ಕೆ ಬೇರೆಯದೇ
ಆಗಿರುವ ಸಾಧ್ಯತೆಯಿರುತ್ತದೆ.

ಇನ್ನು ತಮ್ಮ ಮಕ್ಕಳು ಶಿಕ್ಷಕರಾಗಬೇಕೆಂದು ಬಯಸುವ ಪೋಷಕರ ಸಂಖ್ಯೆಯೂ ಹೆಚ್ಚಿಲ್ಲ. ಇದು
ಶಿಕ್ಷಕ ವೃತ್ತಿಯೆಡೆಗೆ ಇರುವ ಸಾಮಾಜಿಕ ಮನ್ನಣೆಯ ಪ್ರತಿಫಲನವಲ್ಲವೇ? ಮತ್ತೊಂದು ಶಿಕ್ಷಕ
ದಿನಾಚರಣೆಯ ವೇಳೆ ಶಿಕ್ಷಕ ವೃತ್ತಿಯ ಸ್ಥಾನ, ಗೌರವಗಳ ಕುರಿತು ಒಂದಷ್ಟು ಚಿಂತಿಸುವುದು
ಔಚಿತ್ಯಪೂರ್ಣವೆನಿಸುತ್ತದೆ.

ಕೊಠಾರಿ ಶಿಕ್ಷಣ ಆಯೋಗವು (1964) ‘ಶಿಕ್ಷಣದ ಗುಣಮಟ್ಟವನ್ನು ಪ್ರಭಾವಿಸುವ ಅನೇಕ ಅಂಶಗಳಲ್ಲಿ
ಶಿಕ್ಷಕರ ಗುಣಮಟ್ಟ, ಸಾಮರ್ಥ್ಯ ಮತ್ತು ಚಾರಿತ್ರ್ಯಗಳು ಸಂಶಯಾತೀತವಾಗಿ ಅತ್ಯಂತ
ಮಹತ್ವಪೂರ್ಣವಾಗಿವೆ’ ಎಂದಿದೆ.

ಈ ನಿಟ್ಟಿನಲ್ಲಿನ ಪ್ರಥಮ ಹೆಜ್ಜೆಯೆಂದರೆ ಅತ್ಯುತ್ತಮ ವಿದ್ಯಾರ್ಹತೆ ಹಾಗೂ ಅಗಾಧ
ಪ್ರತಿಭೆಯಿರುವವರನ್ನು ಶಿಕ್ಷಣ ಕ್ಷೇತ್ರವು ಸೆಳೆಯಬೇಕು. ಹೆಚ್ಚಿನ ವೇತನ ನೀಡಿಕೆಯಿಂದ
ಮಾತ್ರ ಪ್ರತಿಭಾವಂತರನ್ನು ಶಿಕ್ಷಣ ಕ್ಷೇತ್ರದೆಡೆಗೆ ಸೆಳೆಯಲು ಸಾಧ್ಯ ಎನ್ನಲಾಗದು.

ಜೊತೆಗೆ ಶಿಕ್ಷಕ ವೃತ್ತಿಯನ್ನು ಆಕರ್ಷಕ ಹಾಗೂ ಸಂತೃಪ್ತಿಯ ಉದ್ಯೋಗವನ್ನಾಗಿ
ಪರಿವರ್ತಿಸಿದಲ್ಲಿ ಮಾತ್ರ ಪ್ರತಿಭಾವಂತರು ಈ ಕ್ಷೇತ್ರದೆಡೆಗೆ ಆಕರ್ಷಿತರಾಗಬಹುದು.

ಶಿಕ್ಷಕ ವೃತ್ತಿಯ ಕುರಿತಾಗಿ ಇರುವ ಸ್ಥಾನ, ಗೌರವಗಳೇನು ಎಂಬ ಬಗ್ಗೆ 2013ರಲ್ಲಿ ವಿಶ್ವದ 21
ರಾಷ್ಟ್ರಗಳಲ್ಲಿ ನಡೆದ ಸಮೀಕ್ಷೆಯು ಕುತೂಹಲಕಾರಿಯಾಗಿದೆ.

ಪ್ರತಿಷ್ಠಿತ ಹುದ್ದೆಗಳಿಗೆ ಹೋಲಿಸಿದಲ್ಲಿ ಶಿಕ್ಷಕ ಹುದ್ದೆಗಿರುವ ಸ್ಥಾನ, ಶಿಕ್ಷಕರಿಗೆ
ನೀಡಬಹುದಾದ ವೇತನದ ಸ್ವರೂಪ, ತಮ್ಮ ಮಕ್ಕಳನ್ನು ಶಿಕ್ಷಕ ಹುದ್ದೆಗೆ ಕಳುಹಿಸಲು
ಇಚ್ಛಿಸಲಾಗುತ್ತದೆಯೇ ಇತ್ಯಾದಿಗಳ ಬಗ್ಗೆ ಆ ದೇಶಗಳ ನಾಗರಿಕರನ್ನು ಪ್ರಶ್ನಿಸಲಾಯಿತು.

ಚೀನಾ ಶಿಕ್ಷಕರಿಗೆ ಅತ್ಯುನ್ನತ ಸ್ಥಾನ ನೀಡಿದ್ದರೆ, ದಕ್ಷಿಣ ಕೊರಿಯಾ, ಈಜಿಪ್ಟ್, ಟರ್ಕಿ,
ಸಿಂಗಪುರಗಳು ನಂತರದ ಸ್ಥಾನದಲ್ಲಿವೆ. ಇಸ್ರೇಲ್, ಬ್ರೆಜಿಲ್ ಕೊನೆಯ ಸ್ಥಾನದಲ್ಲಿದ್ದರೆ,
ಇಂಗ್ಲೆಂಡ್, ಅಮೆರಿಕ ಮಧ್ಯದಲ್ಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಅಗ್ರಗಣ್ಯ ರಾಷ್ಟ್ರ
ಫಿನ್ಲೆಂಡ್ 13ನೇ ಸ್ಥಾನದಲ್ಲಿದೆ. ಚೀನಾದ ಜನರು ಶಿಕ್ಷಕ ಹುದ್ದೆಯನ್ನು ವೈದ್ಯರ ಹುದ್ದೆಗೆ
ಸರಿಸಮನಾಗಿ ಪರಿಗಣಿಸುತ್ತಾರೆ.

ಚೀನಾ, ದಕ್ಷಿಣ ಕೊರಿಯಾ, ಈಜಿಪ್ಟ್, ಟರ್ಕಿ ದೇಶಗಳ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಕ
ಉದ್ಯೋಗಕ್ಕೆ ಕಳುಹಿಸಲು ಇಚ್ಛೆ ವ್ಯಕ್ತಪಡಿಸುತ್ತಾರೆ.

ಎಲ್ಲಾ ದೇಶಗಳ ಬಹುಪಾಲು ಜನರು ಶಿಕ್ಷಕ ವೃತ್ತಿಗೆ ಇನ್ನೂ ಹೆಚ್ಚಿನ ವೇತನ ನೀಡಬೇಕು ಹಾಗೂ
ನೀಡಬೇಕಾದ ವೇತನವು ಮಕ್ಕಳ ಕಲಿಕೆಯನ್ನು ಅವಲಂಬಿಸಿರಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ.
ನಮ್ಮ ದೇಶವು ಸಮೀಕ್ಷೆಯಲ್ಲಿ ಒಳಗೊಳ್ಳದಿದ್ದರೂ ಶಿಕ್ಷಕ ವೃತ್ತಿಯು ನಮ್ಮಲ್ಲಿ ಆದ್ಯತೆಯ
ವೃತ್ತಿಯೆನಿಸುವುದಿಲ್ಲ.

ಶಿಕ್ಷಕ ವೃತ್ತಿಯನ್ನು ಉನ್ನತ ಹಂತಕ್ಕೇರಿಸುವುದು ಹೇಗೆ? ನೂರಿನ್ನೂರು ವರ್ಷಗಳ ಹಿಂದೆ ಗುರು
ಸ್ಥಾನವನ್ನು ಪೂಜ್ಯವಾಗಿ ಪರಿಗಣಿಸಲಾಗಿತ್ತು. ಆಧುನಿಕ ಕಾಲದಲ್ಲಿ ಶಿಕ್ಷಕರ ವೇತನ ಹಾಗೂ
ಸೌಲಭ್ಯಗಳನ್ನು ಹೆಚ್ಚಿಸಿದಾಗ್ಯೂ ಶಿಕ್ಷಕ ವೃತ್ತಿಯು ಬಹುಪಾಲು ಜನರ ಆಯ್ಕೆಯಾಗದಿರಲು
ಕಾರಣಗಳೇನು ಎಂಬ ಬಗ್ಗೆ ಪರಾಮರ್ಶಿಸಬೇಕಾಗುತ್ತದೆ.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ವೇತನವು ಅತ್ಯುತ್ತಮವಿದ್ದಾಗ್ಯೂ ಸಮಾಜದಲ್ಲಿನ
ವೈದ್ಯ, ಎಂಜಿನಿಯರ್, ಐಎಎಸ್ ಹುದ್ದೆಗಳಂತೆ ಮೇಧಾವಿ ವಿದ್ಯಾರ್ಥಿಗಳ ನೆಚ್ಚಿನ ಆಯ್ಕೆ
ಶಿಕಕ್ಷ ಹುದ್ದೆಯಾಗಿಲ್ಲ.

ಇನ್ನು ಪ್ರಾಥಮಿಕ ಮತ್ತು ಪ್ರೌಢಹಂತದ ಶಿಕ್ಷಕ ಹುದ್ದೆಯನ್ನು ಪಡೆಯಲು ವಿಪರೀತ
ಬೇಡಿಕೆಯಿದ್ದರೂ ಶಿಕ್ಷಕರ ಶಿಕ್ಷಣದ ಕೋರ್ಸ್‌ಗಳನ್ನು ಪೂರೈಸಿದವರಲ್ಲಿ ವೈದ್ಯ,
ಎಂಜಿನಿಯರಿಂಗ್, ಸಿ.ಎ.ಗಳಂತಹ ಕೋರ್ಸ್‌ಗಳಿಗೆ ದಾಖಲಾತಿ ಸಿಗದವರೇ ಹೆಚ್ಚಿನ
ಪ್ರಮಾಣದಲ್ಲಿರುತ್ತಾರೆ.

ಶಿಕ್ಷಕರ ಶಿಕ್ಷಣದ ಕೋರ್ಸ್‌ಗೆ ಪ್ರತಿಭಾವಂತರನ್ನು ಆಯ್ಕೆ ಮಾಡುವ ಕ್ರಮ ಇದ್ದಾಗ್ಯೂ ಶಿಕ್ಷಕ
ವೃತ್ತಿಗೆ ಬೇಕಾದ ಸೆಳೆತ, ಪ್ರೀತಿಗಳು ಅವರಲ್ಲಿವೆಯೇ ಎಂಬುದನ್ನು ಕಂಡುಕೊಂಡು, ಅವರಿಗೆ
ಪ್ರವೇಶ ನೀಡುವ ಕ್ರಮ ರೂಢಿಯಲ್ಲಿಲ್ಲ.

ಈ ಕಾರಣದಿಂದ ಕೋರ್ಸ್ ಪೂರೈಸಿದ ಪ್ರತಿಭಾವಂತರು ಪರಿಣಾಮಕಾರಿ ಶಿಕ್ಷಕರಾಗಿ ಮಾರ್ಪಾಡಾಗದೆ
ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ.

ಉತ್ತಮ ಬೋಧಕರನ್ನು ರೂಪಿಸಲು ಇರುವ ವ್ಯವಸ್ಥೆಯು ಇನ್ನೂ ಸಾಕಷ್ಟು ಬಲಿಷ್ಠವಾಗದೇ ಇರುವುದು
ಸಹ ಪ್ರಮುಖ ತೊಡಕೆನ್ನಬಹುದು. ಪ್ರಸ್ತುತ ಶಿಕ್ಷಕರಿಗೆ ನೀಡುವ ತರಬೇತಿಗಳೇ ಅವರಿಗಿರುವ
ವೃತ್ತಿಪರ ಬೆಳವಣಿಗೆಯ ಪ್ರಮುಖ ವಿಧಾನವಾಗಿವೆ.

ಇದನ್ನು ಹೊರತುಪಡಿಸಿ, ಶಿಕ್ಷಕರು ಪಡೆಯುವ ಹೆಚ್ಚುವರಿ ವಿದ್ಯಾರ್ಹತೆ, ನಾವೀನ್ಯ, ಅವರ
ವೃತ್ತಿ ನೈಪುಣ್ಯಕ್ಕೆ ಮನ್ನಣೆ ಇಲ್ಲವೆಂದೇ ಹೇಳಬೇಕಾಗುತ್ತದೆ.

ಇನ್ನು ಶಿಕ್ಷಕರ ಸ್ಥಾನಮಾನ ಕುರಿತಂತೆ ಯುನೆಸ್ಕೊ 1966ರಲ್ಲಿ ಮಾಡಿರುವ ಶಿಫಾರಸುಗಳು ಈಗಲೂ
ಪ್ರಸ್ತುತವಿದ್ದು, ಅನುಷ್ಠಾನ ಯೋಗ್ಯವಾಗಿವೆ. ಶಿಕ್ಷಕ ಕ್ಷೇತ್ರ  ಪ್ರವೇಶಿಸುವವರಿಗೆ
ಇರಬೇಕಾದ ಅರ್ಹತೆ, ಶಿಕ್ಷಕರ ಕರ್ತವ್ಯ, ವೃತ್ತಿ ಬೆಳವಣಿಗೆಗೆ ಇರುವ ಅವಕಾಶ ಕುರಿತ
ಅತ್ಯುತ್ತಮ ಅಂಶಗಳು ಈ ಶಿಫಾರಸಿನಲ್ಲಿವೆ.

ಶಿಕ್ಷಕರು ಮೌಲ್ಯಯುತವಾದ ತಜ್ಞರಾದ ಕಾರಣ ಅವರ ಶ್ರಮ ಮತ್ತು ಸಮಯ ವ್ಯರ್ಥವಾಗದಂಥ ವ್ಯವಸ್ಥೆ
ರೂಪಿಸಬೇಕೆಂಬ ಮಹತ್ವದ ಅಂಶ ಇದೆ. ಗ್ರಾಮೀಣ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ
ಉತ್ತಮ ವಸತಿ ವ್ಯವಸ್ಥೆ ಹಾಗೂ ವಿಶೇಷ ಭತ್ಯೆಗಳನ್ನು ನೀಡುವ ಪ್ರಸ್ತಾವವಿದೆ.

ಶಿಕ್ಷಕರ ಪರಿಣಾಮಕಾರಿ ಕಲಿಕೆಯನ್ನು ಉತ್ತೇಜಿಸಲು ಹಾಗೂ ಅವರು ವೃತ್ತಿಸಂಬಂಧಿ ಕಾರ್ಯಗಳಲ್ಲಿ
ಸಮರ್ಥವಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುವ
ಪರಿಸರವಿರಬೇಕೆಂಬ ಪ್ರಮುಖ ಅಂಶವು ಈ ಶಿಫಾರಸಿನಲ್ಲಿರುವುದು ಗಮನಾರ್ಹ.


Re: [ms-stf '64344'] D.K ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಶೋಭಿತ ಯಾಕೂಬ್....

2016-09-03 Thread HAREESHKUMAR K Agasanapura
Congrats sir, you are a worth person

Hareeshkumar K
GHS HUSKURU
MALAVALLI TQ
MANDYA DT
MOB 9880328224
On Sep 3, 2016 6:57 PM, "Gireesha HP"  wrote:

> ಆತ್ಮೀಯರೇ
>
> ಯಾಕೂಬ್ ಅಂದರೆ ಬಹುತೇಕ ಗಣಿತ ಶಿಕ್ಷಕರಿಗೆ ಪರಿಚಿತ ವ್ಯಕ್ತಿ  .ಉತ್ತಮ ಮಟ್ಟದ ಗಣಿತ
> ಪ್ರಯೋಗಶಾಲೆ ನಿರ್ಮಿಸಿ ಗಣಿತ ಶಿಕ್ಷಕರಿಗೆ ಹತ್ತಿರ ಆದವರು..ಅಲ್ಲದೇ ಉತ್ತಮ ಗುಣಮಟ್ಟದ
> ನೋಟ್ಸ್ ತಯಾರಿಸಿ ರಾಜ್ಯ ಮಟ್ಟಕ್ಕೆ ಪಸರಿಸಿದವರು
>
> ಇಂತಹ ಪರಿಶ್ರಮಿ ಶಿಕ್ಷಕರು ಈಗ  ದಕ್ಷಿಣಕನ್ನಡ ಜಿಲ್ಲಾ ಉತ್ತಮ  ಶಿಕ್ಷಕ ಪ್ರಶಸ್ತಿಗೆ
> ಭಾಜನರಾಗಿದ್ದಾರೆ
>
> ಖಂಡಿತ ಇದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ .
>
> I wish Mr.Yakoob all the best and congratulations Yakoob ji . 
>
> Gireesha.HP
>
> --
> 1. If a teacher wants to join STF, visit http://karnatakaeducation.org.
> in/KOER/en/index.php/Become_a_STF_groups_member
> 2. For STF training, visit KOER - http://karnatakaeducation.org.
> in/KOER/en/index.php
> 4. For Ubuntu 14.04 installation, visit http://karnatakaeducation.org.
> in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/
> Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '64331'] ಶಾಲೆ: ಸೆಮಿಸ್ಟರ್‌ ಕೈಬಿಡಲು ಸಲಹೆ | ಪ್ರಜಾವಾಣಿ

2016-09-02 Thread HAREESHKUMAR K Agasanapura
http://m.prajavani.net/article/2016_09_03/435641





ರಾಜ್ಯ

*ಶಾಲೆ: ಸೆಮಿಸ್ಟರ್‌ ಕೈಬಿಡಲು ಸಲಹೆ*

3 Sep, 2016

ವಿರೂಪಾಕ್ಷ ಹೊಕ್ರಾಣಿ








ಬೆಂಗಳೂರು: ‘ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೆಮಿಸ್ಟರ್‌ ಪದ್ಧತಿ ಕೈಬಿಡಬೇಕು. 1 ರಿಂದ
10ನೇ ತರಗತಿ ವರೆಗೆ ಏಕರೂಪದ ವಾರ್ಷಿಕ ಪರೀಕ್ಷಾ ಪದ್ಧತಿ ಅನುಸರಿಸಬೇಕು’ ಎಂದು ಪಠ್ಯಪುಸ್ತಕ
ಪರಿಷ್ಕರಣಾ ಸಮಿತಿ ಶಿಫಾರಸು ಮಾಡಿದೆ.

ಪ್ರೊ.ಬರಗೂರು ರಾಮಚಂದ್ರಪ್ಪ ಸರ್ವಾಧ್ಯಕ್ಷತೆಯ ಈ ಸಮಿತಿ ಈಗಾಗಲೇ ಹಲವು ಸಭೆಗಳನ್ನು
ಪೂರ್ಣಗೊಳಿಸಿದ್ದು, ಅಂತಿಮ ವರದಿ ಸಿದ್ಧಪಡಿಸುತ್ತಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರ ಜತೆ ಸಮಿತಿ ನಡೆಸಿದ ಸಭೆಯ
ವಿವರಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಸೆಮಿಸ್ಟರ್‌ ಬದಲು ಏಕರೂಪದ ವಾರ್ಷಿಕ ಪದ್ಧತಿ ಮತ್ತು ಪಠ್ಯಪುಸ್ತಕ ಇರಬೇಕು ಎಂದು ಸಮಿತಿ
ಸಲಹೆಗೆ ಸಚಿವರು ಒಪ್ಪಿಗೆ ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗುವ
ನಿರೀಕ್ಷೆ ಇದೆ.

1 ರಿಂದ 5ನೇ ತರಗತಿವರೆಗೆ ಪ್ರಾಥಮಿಕ ವಿಭಾಗ ಎಂದು ಪರಿಗಣಿಸಲಾಗಿದೆ. ಸದ್ಯ 1ರಿಂದ 4ನೇ
ತರಗತಿವರೆಗೆ ವಾರ್ಷಿಕ ಪದ್ಧತಿ ಮತ್ತು 5ನೇ ತರಗತಿಗೆ ಸೆಮಿಸ್ಟರ್‌ ಪದ್ಧತಿ ಇದೆ. ಒಂದೇ
ವಿಭಾಗದ ತರಗತಿಗಳಲ್ಲಿ ಎರಡು ರೀತಿಯ ಪರೀಕ್ಷೆ ನಡೆಸುತ್ತಿರುವುದಕ್ಕೂ ಆಕ್ಷೇಪ
ವ್ಯಕ್ತವಾಗಿದೆ.

*ಪ್ರತ್ಯೇಕ ಪುಸ್ತಕ:*  ಸದ್ಯ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ
ಮತ್ತು ಸಮಾಜ ವಿಜ್ಞಾನ ವಿಷಯಗಳನ್ನು ಒಳಗೊಂಡಂತೆ ಒಂದೇ ಪುಸ್ತಕ ನೀಡಲಾಗಿದೆ. ಹೀಗಾಗಿ,
ಇದರಲ್ಲಿ ಯಾವುದೇ ಒಂದು ವಿಷಯದ ತರಗತಿ ಇಲ್ಲದಿದ್ದರೂ ವಿದ್ಯಾರ್ಥಿಗಳು ಇಡೀ ಪುಸ್ತಕವನ್ನು
ಶಾಲೆಗೆ ಹೊತ್ತುಕೊಂಡು ಹೋಗಬೇಕಿದೆ. ಇದನ್ನು ಬದಲಿಸಿ ಮೂರೂ ವಿಷಯಗಳಿಗೆ ಪ್ರತ್ಯೇಕ ಪುಸ್ತಕ
ಮುದ್ರಿಸಲು ನಿರ್ಧರಿಸಲಾಗಿದೆ.

ಪುಸ್ತಕ ಅಳತೆ ಬದಲಾವಣೆ: ಕೇಂದ್ರೀಯ ಪಠ್ಯಕ್ರಮದ ಪುಸ್ತಕಗಳು 1/4 ಡೆಮಿ ಅಳತೆಯಲ್ಲಿವೆ.
ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರದಲ್ಲೂ ಇದೇ ಅಳತೆಯಲ್ಲಿಯೇ ಪಠ್ಯಪುಸ್ತಕಗಳು
ಮುದ್ರಣ ಆಗುತ್ತಿವೆ.

ರಾಜ್ಯದಲ್ಲಿ ಮಾತ್ರ 1/4 ಕ್ರೌನ್‌ ಅಳತೆಯಲ್ಲಿ ಪಠ್ಯಪುಸ್ತಕ ಮುದ್ರಿಸಲಾಗುತ್ತಿದೆ.
ಪಠ್ಯಪುಸ್ತಕದ ಅಳತೆ ಬದಲಾಯಿಸುವ ಪ್ರಸ್ತಾವನೆ ಹಿಂದೆ ಬಂದಿತ್ತು. ಆದರೆ, ಜಾರಿಯಾಗಿರಲಿಲ್ಲ.
ಈಗ ಸಮಿತಿಯ ಪ್ರಸ್ತಾಪಕ್ಕೆ ಸಚಿವರೂ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು
ಖಚಿತಪಡಿಸಿವೆ. ಅಲ್ಲದೆ, ಪಠ್ಯಪುಸ್ತಕಗಳಿಗೆ 60 ಜಿಎಸ್‌ಎಂ ಗುಣಮಟ್ಟದ ಕಾಗದ ಬಳಕೆ
ಮಾಡಲಾಗುತ್ತಿದೆ.

ಮುದ್ರಣ ಗುಣಮಟ್ಟ ಹೆಚ್ಚಿಸಲು 70 ಜಿಎಸ್‌ಎಂ ಕಾಗದ ಬಳಸುವಂತೆಯೂ ಶಿಫಾರಸು ಮಾಡಲಾಗಿದೆ.
ಕಾಗದ ಬದಲಾವಣೆಯಿಂದ ವಾರ್ಷಿಕ ₹13 ಕೋಟಿ ಹೆಚ್ಚುವರಿ ಹೊರೆ ಬೀಳುತ್ತದೆ. ಇದಕ್ಕೆ
ಮುಖ್ಯಮಂತ್ರಿ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ
ಪ್ರಕಟಿಸುವುದಾಗಿ ಸಚಿವರು ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಿಬಿಎಸ್‌ಸಿ ಗುಣಮಟ್ಟದಂತೆ ರಾಜ್ಯ ಪಠ್ಯಕ್ರಮ: ‘ತಮ್ಮ ಮಕ್ಕಳು ಕೇಂದ್ರೀಯ ಪಠ್ಯಕ್ರಮದ
(ಸಿಬಿಎಸ್‌ಇ) ಶಾಲೆಗಳಲ್ಲಿ ಓದಬೇಕು ಎಂದು ಬಯಸುವ ಹೆಚ್ಚಿನ ಪೋಷಕರು ಖಾಸಗಿ ಶಾಲೆಗಳಿಗೆ
ಮಕ್ಕ ಳನ್ನು ಸೇರಿಸುತ್ತಾರೆ. ಸರ್ಕಾರಿ ಶಾಲೆಗಳ ಪಠ್ಯಕ್ರಮವನ್ನು ಸಿಬಿಎಸ್‌ಇಗೆ ಕಡಿಮೆ
ಇಲ್ಲದಂತೆ ಪರಿಷ್ಕರಿಸಲಾಗುತ್ತಿದೆ’.

‘ವಿಜ್ಞಾನ, ಗಣಿತ ಮತ್ತು ಸಮಾಜ ವಿಜ್ಞಾನ ವಿಷಯಗಳ ಪಠ್ಯ ಸಿದ್ಧಪಡಿಸಲು ಪ್ರತ್ಯೇಕ ಸಮಿತಿ
ರಚಿಸಲಾಗಿದೆ. ಅದು ಎರಡೂ ಪಠ್ಯಕ್ರಮಗಳನ್ನು ಪರಿಶೀಲಿಸಿ ಉತ್ತಮ ಅಂಶಗಳನ್ನು ಸೇರಿಸಿಕೊ
ಳ್ಳಲಿದೆ’ ಎಂದು ಮೂಲಗಳು ವಿವರಿಸಿವೆ.

ಅಕ್ಟೋಬರ್‌ ವೇಳೆಗೆ ಪರಿಷ್ಕರಣೆ ಪೂರ್ಣ: ‘ಸಾಮಾಜಿಕ, ಧಾರ್ಮಿಕ, ಜಾತ್ಯತೀತ ಮತ್ತು
ಪ್ರಾದೇಶಿಕ ಸಮಾನತೆ ಯಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ಮತ್ತು ಪುನಾರಚನೆ ಮಾಡಲಾಗುತ್ತಿದೆ.
ಈ ಹಿಂದಿನ ಪಠ್ಯಪುಸ್ತಕಗಳ ಪರಿಷ್ಕರಣೆ ನಂತರ ಸಾವಿರಕ್ಕೂ ಹೆಚ್ಚು ಆಕ್ಷೇಪಣೆ ಗಳು ಬಂದಿವೆ.
ಅಕ್ಟೋಬರ್‌ ವೇಳೆಗೆ ಪರಿಷ್ಕರಣೆ ಪೂರ್ಣಗೊಳಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು
ಬರಗೂರು ರಾಮಚಂದ್ರಪ್ಪ ಹೇಳಿದರು.

‘ನಮ್ಮ ಸಲಹೆಗಳಿಗೆ ಶಿಕ್ಷಣ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇಂದ್ರೀಯ ಶಾಲೆ
ಗುಣಮಟ್ಟಕ್ಕೆ ರಾಜ್ಯದ ಪಠ್ಯಕ್ರಮವೂ ಇರುವಂತೆ ಹೊಸ ರೂಪದಲ್ಲಿ ಹೊರಬರುತ್ತದೆ. 2005ರ
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಮತ್ತು ಸಂವಿಧಾನದ ಆಶಯ ಆಧರಿಸಿ ಪರಿಷ್ಕರಣೆ
ಮಾಡಲಾಗುತ್ತಿದೆ’ ಎಂದರು.

Hareeshkumar K
GHS HUSKURU
MALAVALLI TQ
MANDYA DT
MOB 9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '64165'] ವಿಜ್ಞಾನ ಮತ್ತು ಪರಂಪರೆಯ ಜ್ಞಾನ

2016-08-29 Thread HAREESHKUMAR K Agasanapura
http://m.prajavani.net/article/2016_08_30/434709

*ವಿಜ್ಞಾನ ಮತ್ತು ಪರಂಪರೆಯ ಜ್ಞಾನ*

30 Aug, 2016

ಬಿಂಡಿಗನವಿಲೆ ಭಗವಾನ್








‘ವಿಜ್ಞಾನ ಮತ್ತು ಪರಂಪರೆಯ ಜ್ಞಾನ’ ಬರಹದಲ್ಲಿ (ಸಂಗತ, ಆ. 19) ಡಾ. ರಾಜೇಗೌಡ ಹೊಸಹಳ್ಳಿ
ಅವರು ಪ್ರಸ್ತಾಪಿಸಿರುವ ವಿಪರ್ಯಾಸಗಳನ್ನು ಗಮನಿಸುತ್ತಲೇ ವಿಶ್ವಮಾನ್ಯ ವಿಜ್ಞಾನಿ ಆಲ್ಬರ್ಟ್
ಐನ್‌ಸ್ಟೀನ್‌ರ ನುಡಿ ‘ಧರ್ಮರಹಿತ ವಿಜ್ಞಾನ ಕುಂಟು. ವಿಜ್ಞಾನರಹಿತ ಧರ್ಮ ಕುರುಡು’ ಅದೆಷ್ಟು
ದಿಟ ಅನ್ನಿಸಿತು. ಇಲ್ಲಿ ‘ಧರ್ಮ’ ಎಂದರೆ ಮಾನವ ಧರ್ಮ ಎಂದು ಭಾವಿಸುವುದೇ ಯುಕ್ತ.

ಮಾನವನ ಇತಿಹಾಸದುದ್ದಕ್ಕೂ ಜಗತ್ತಿನೆಲ್ಲೆಡೆ ಸಂಸ್ಕೃತಿಗಳು ನಿಸರ್ಗದ ಬಗೆಗೆ ವಿವಿಧ
ಗ್ರಹಿಕೆಗಳನ್ನು ತಳೆಯುತ್ತ ಬಂದಿವೆ. ಅವುಗಳಲ್ಲಿ ಹಲವು ನಂಬಿಕೆ, ಆಚರಣೆಗಳಲ್ಲಿ
ಬೇರುಬಿಟ್ಟಿವೆ. ಮೌಖಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಪ್ರವಹಿಸಿವೆ.

ವಿಜ್ಞಾನದ ಪ್ರಗತಿಯನ್ನು ಪಾರಂಪರಿಕ ಜ್ಞಾನದೊಂದಿಗೆ ಸಮನ್ವಯಿಸಿ ಮನುಷ್ಯನ ಒಳಿತಿಗೆ ಆವಕ
ಮಾಡಿಕೊಳ್ಳುವುದು ಹೊಸ ಆವಿಷ್ಕಾರಗಳಿಗಿಂತಲೂ ಹೆಚ್ಚು ಕಠಿಣತಮ ಹೊಣೆಗಾರಿಕೆ. ಈ ಸವಾಲು
ಎದುರಿಸಲು ನಿಸರ್ಗ ಮತ್ತು ಸಮಾಜ ಕುರಿತ ಗಾಢ ಅರಿವು, ತನ್ಮೂಲಕ ಪ್ರಸ್ತುತ ಹಾಗೂ ಭಾವಿ
ಪೀಳಿಗೆಗಳ ಬದುಕಿಗೆ ಅನುವು ಮಾಡಿಕೊಡುವ ಬದ್ಧತೆ ಮೆರೆಯಬೇಕಾಗುತ್ತದೆ.

ಪರಂಪರೆಯ ಜ್ಞಾನವನ್ನು ವಿಜ್ಞಾನದೊಳಗಿಟ್ಟು ತಕ್ಕಡಿಯಲ್ಲಿ ತೂಗಿ ನೋಡಬೇಕೆನ್ನುವಾಗ ಒಂದು
ನಿದರ್ಶನ ನೆನಪಾಗುತ್ತದೆ. ನೀರನ್ನು ಮಡಕೆಯಲ್ಲಿರಿಸಿದರೆ ತಂಪಾಗಿರುತ್ತದೆ. ತಲೆಮಾರಿನಿಂದ
ತಲೆಮಾರಿಗೆ ವರ್ಗಾವಣೆಯಾಗಿ ಬಂದ ಸಮಷ್ಟಿ ವಿವೇಕಕ್ಕೆ ಒಂದು ಉದಾಹರಣೆಯಿದು. ಹೌದು, ಏಕೆ
ಮಡಕೆಯೊಳಗೆ ನೀರು ತಂಪು ಎನ್ನುವುದನ್ನು ವಿವರಿಸಿ ಹೇಳಿದ್ದರೆ ಎಷ್ಟು ಸೊಗಸಿತ್ತು
ಎನ್ನಿಸುವುದು ಸಹಜ.

ಫ್ರಿಜ್‌ನ ಕೊರತೆ ತುಂಬಲು ಇದು ಸರಳ ಉಪಾಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಮಡಕೆಯೊಳಗಿನ
ಶಾಖವನ್ನು ಬಳಸಿಕೊಂಡು ನೀರು ಆವಿಯಾಗಿ ಸಣ್ಣ ಸಣ್ಣ ರಂಧ್ರಗಳ ಮೂಲಕ ಹೊರಹೋಗಲು
ಹವಣಿಸುತ್ತದೆ. ಇದುವೆ ನೀರು ತಣ್ಣಗಿರುವ ರಹಸ್ಯ ಎಂದು ಕಾರ್ಯಕಾರಣ ನಂಟನ್ನು
ಬಿಡಿಸಿಟ್ಟಾಗಲೇ ಜ್ಞಾನಕ್ಕೆ ಗರಿ ಮೂಡುತ್ತದೆ. ವಿಶಿಷ್ಟವಾಗಿ ಅದು ವಿಜ್ಞಾನವಾಗುತ್ತದೆ.

ಏಕೆ, ಏನು, ಹೇಗೆ ಎಂದು ವಿವರಿಸದೆ ಕೇವಲ ಅದು ಹಾಗೆ, ನಂಬು, ತಿಳಿ ಎಂದರೆ ಅಷ್ಟರಮಟ್ಟಿಗೆ
ಅರಿವು ಅಪೂರ್ಣವೆನ್ನಿಸುತ್ತದೆ. ಪೂರ್ಣತೆಯಿಲ್ಲದ ತಿಳಿವು ಉಪಯಕ್ತವಾಗದು. ಕೆಲವೊಮ್ಮೆ ಅಪಾಯ
ಕೂಡ. ಕಟ್ಟಿಗೆಯಲ್ಲಿ ಬೆಂಕಿ ಇದೆ ಎನ್ನುವುದು ಜ್ಞಾನ. ಅದನ್ನು ಉರಿಸಿ ಅಡುಗೆ
ತಯಾರಿಸಿಕೊಂಡು ಊಟ ಮಾಡುವುದು ವಿಜ್ಞಾನ.

‘ಜ್ಞಾನವು ವಿಜ್ಞಾನ ಸಮೇತ’ ಎಂಬ ಮಾತಿದೆ. ಹಿರಿಯರ ಮಾರ್ಗದರ್ಶನಗಳು ಅನುಭವಜನ್ಯ.
ಅವುಗಳಲ್ಲಿ ವ್ಯಾಪ್ತಿ, ವೈಭವವಿದೆ. ಆದರೆ ತಕ್ಕ ಸಮಜಾಯಿಷಿ ಬಯಸುತ್ತವೆ. ಸಾಂಬಾರು
ತಯಾರಿಸುವಾಗ ತರಕಾರಿ, ಬೇಳೆಕಾಳುಗಳು ಬೆಂದ ನಂತರವೇ ಉಪ್ಪು, ಹುಳಿ, ಖಾರ
ಬೆರೆಸಬೇಕೆನ್ನುವುದು ಸಾಂಪ್ರದಾಯಿಕ ವಿಧಾನ. ಕಾರಣವಿಷ್ಟೆ. ಅವನ್ನು ಮೊದಲೇ ಬೆರೆಸಿದರೆ
ನೀರಿನ ಶಾಖದ ಸಾಮರ್ಥ್ಯ ಕಡಿಮೆಯಾಗುತ್ತದೆ. ತರಕಾರಿ, ಬೇಳೆ ಕಾಳು ಬೇಯುವುದು ನಿಧಾನವಾದೀತು.

ಅಲ್ಯೂಮಿನಿಯಂ ಪಾತ್ರೆಯಲ್ಲಿ ಉಪ್ಪೂ ಸೇರಿದಂತೆ ಯಾವುದೇ ಆಹಾರ ವಸ್ತುವನ್ನೂ  ಇಡಬಾರದೆನ್ನುವ
ಕಿವಿಮಾತಿನಲ್ಲಿ ವಿಜ್ಞಾನವಿಲ್ಲದಿಲ್ಲ. ದವಸ, ಧಾನ್ಯ, ಹಣ್ಣು, ತರಕಾರಿ, ಸೊಪ್ಪು
ವಗೈರೆಗಳಲ್ಲಿನ ಪೌಷ್ಟಿಕಾಂಶಗಳು ಮತ್ತು ಖನಿಜಾಂಶಗಳನ್ನು ಪರಿಣಾಮಹೀನಗೊಳಿಸುವ ಗುಣ
ಅಲ್ಯೂಮಿನಿಯಂಗಿದೆ.  ಎಷ್ಟಾದರೂ ಮನೆಯಲ್ಲಿ ಅಡುಗೆಮನೆ ಎನ್ನುವುದೊಂದು ಅನುಪಮ ಪ್ರಯೋಗಾಲಯ.

ಅಂತೆಯೆ ಮುಸ್ಸಂಜೆಯಲ್ಲಿ ಕಸ ಗುಡಿಸಬಾರದೆಂಬ ಪಾರಂಪರಿಕ ಹಿತವಚನದಲ್ಲಿ ಆಕಸ್ಮಿಕವಾಗಿ ಬೆಲೆ
ಬಾಳುವ ಸಣ್ಣ ಪುಟ್ಟ ನಾಣ್ಯ, ಒಡವೆಗಳು ತ್ಯಾಜ್ಯದೊಂದಿಗೆ ಬೆರೆತು ವಿಲೇವಾರಿಯಾಗದಿರಲೆಂಬ
ಸದಾಶಯವಿದೆ.

ಪರಂಪರೆ ಮರೆತರೆ ಹೊಸತನ ಕಂಡುಕೊಳ್ಳಲಾಗದು. ‘ಹಳೆ ಬೇರು, ಹೊಸ ಚಿಗುರು’ ಸಾರ್ವಕಾಲಿಕವಾಗಿ
ಸಲ್ಲುವ ಇರಾದೆ.  ಬಹುಮುಖ್ಯವೆಂದರೆ ವೃಥಾ ಎಲ್ಲಕ್ಕೂ ಬಾಲಿಶವಾಗಿ ಸಮಜಾಯಿಷಿಗಳನ್ನು
ಪೋಣಿಸಬಾರದಷ್ಟೆ! ವೈಚಾರಿಕತೆ ಹೈರಾಣಾಗಬಾರದು. ವಿಜ್ಞಾನಕ್ಕೆ ಹುಸಿ ವೈಭವೀಕರಣದ
ಅಗತ್ಯವಿಲ್ಲ.

ಮೈಸೂರಿನಲ್ಲಿ ನಾವು ಶಾಲಾ ಹುಡುಗರಿದ್ದಾಗ ನಮ್ಮ ಬೈಸಿಕಲ್ ದುರಸ್ತಿ ಮಾಡಿಕೊಡುತ್ತಿದ್ದವ
ತನ್ನ ಇತಿಮಿತಿಯಲ್ಲಿ ಮನಮುಟ್ಟುವಂತೆ ನಮಗೆ ಬೈಸಿಕಲ್ಲಿನ ಪ್ರತಿ ಬಿಡಿ ಭಾಗ, ಅದರ
ಕಾರ್ಯಕ್ಷಮತೆ ವಿವರಿಸುತ್ತಿದ್ದ ಪರಿ ನೆನಪಾಗುತ್ತದೆ. ‘ನೋಡಿ ಇದೇ ಫ್ರೀವೀಲ್.

ಇದು ನಾವು ಪೆಡಲ್ ಮಾಡಿದ ಶಕ್ತಿಯನ್ನು ತನ್ನಲ್ಲಿ ಶೇಖರಿಸಿಕೊಂಡು ನಿಧಾನವಾಗಿ ಬಿಡುಗಡೆ
ಮಾಡುತ್ತದೆ. ಬೈಸಿಕಲ್ಲಿನ ಹೃದಯವೆ ಇದು. ಮುಂದಿನ ಗಾಲಿಯ ಬ್ರೇಕ್ ಒಂದನ್ನೇ ಹಾಕೀರಿ ಜೋಕೆ’
ಎನ್ನುವ ವೈಜ್ಞಾನಿಕ ಎಚ್ಚರಿಕೆ ಬೇರೆ ಅವನಿಂದ.

ಅಬ್ಬ! ಎಂಥ ಬಹೂಪಯೋಗಿ ವಾಹನ. ಆದರೂ ಅತಿ ಸರಳ. ‘ಬೈಸಿಕಲ್ಲಿನ ಪಿತಾಮಹ ಸ್ಕಾಟ್ಲೆಂಡಿನ
ಮ್ಯಾಕ್ಮಿಲನ್ ಎಂಬ ಮಹಾನುಭಾವನಿಗೆ ಎಷ್ಟು ಋಣಿಯಾಗಿದ್ದರೂ ಸಾಲದು ತಾನೆ’ ಅಂತ ಆತ ನಮಗೆ
ತರಗತಿಯನ್ನೇ ತೆಗೆದುಕೊಂಡುಬಿಡುತ್ತಿದ್ದ. ಆಗಿಂದಾಗ್ಗೆ ವಾಹನದ ಅದ್ಭುತ ಮೆಚ್ಚಲು
ಉತ್ತೇಜಿಸುತ್ತಿದ್ದ. ಹಾಗಾಗಿ ಪ್ರತಿ ಬಾರಿ ರಿಪೇರಿ ಸಲುವಾಗಿ ಅವನ ಬೈಸಿಕಲ್ ಶಾಪಿಗೆ
ಹೋಗುವುದೇ ಶಿಕ್ಷಣವೆನ್ನಿಸುತ್ತಿತ್ತು.

ಟಿ.ವಿ. ರಿಪೇರಿಯಿರಲಿ, ರೈಲು ಚಾಲನೆಯಿರಲಿ ಅಥವಾ ವಿಮಾನ ಹಾರಿಸುವುದಿರಲಿ ಅದನ್ನು
ಕೈಗೊಳ್ಳುವವರು ಈ ಮಾಹಿತಿ ದಿನಮಾನಗಳಲ್ಲಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದಷ್ಟು
ಕನಿಷ್ಠ ತಿಳಿವನ್ನು ರೂಢಿಸಿಕೊಳ್ಳುವುದು ಅಪೇಕ್ಷಣೀಯ.

ಹಡಗಿನ ಕ್ಯಾಪ್ಟನ್ ಈ ದೊಡ್ಡ ವಾಹನ ನೀರಿನಲ್ಲಿ ಮುಳುಗದೆ ಹೇಗೆ ತೇಲುತ್ತದೆ ಎನ್ನುವುದು
ಕಟ್ಟಿಕೊಂಡು ನನಗೇನಾಗಬೇಕಿದೆ ಎಂದೋ ಕಟ್ಟಡದ ಗುತ್ತಿಗೆದಾರ ಸಿಮೆಂಟ್ ನೀರು ಹೀರಿದಷ್ಟೂ
ಗಟ್ಟಿ ಹೇಗೆನ್ನುವುದು ತನಗೆ ಸಂಬಂಧಿಸಿದ್ದಲ್ಲ ಎಂದೋ ಮೂಗೆಳೆದರೆ ಏನು ಚಂದ?
ಅರಿವೆನ್ನುವುದು ಸಾಟಿಯಿಲ್ಲದ ಬೆಳಕು.

ಪರಂಪರೆಯ ಜ್ಞಾನವನ್ನು ಸಂಗ್ರಹಿಸುವ, ವಿಂಗಡಿಸುವ ಮತ್ತು ಸಮರ್ಪಕವಾಗಿ ವ್ಯಾಖ್ಯಾನಿಸುವ
ವ್ಯವಸ್ಥೆಯಿರಬೇಕು. ಈ ನಿಟ್ಟಿನಲ್ಲಿ ಜನಸಾಮಾನ್ಯರನ್ನು ಅದರಲ್ಲೂ ವಿಶೇಷವಾಗಿ ಸಂಪನ್ಮೂಲಗಳ
ನಿಧಿಗಳೇ ಆದ ಆದಿವಾಸಿಗಳನ್ನು 

[ms-stf '64010'] ಕೋಣೆಗೆ ಬಂದಿರುವ ಆನೆ ಕಾಣದೇಕೆ? | ಪ್ರಜಾವಾಣಿ

2016-08-25 Thread HAREESHKUMAR K Agasanapura
http://m.prajavani.net/article/2016_08_25/433460
*ಕೋಣೆಗೆ ಬಂದಿರುವ ಆನೆ ಕಾಣದೇಕೆ?*

25 Aug, 2016

ನಾಗೇಶ್ ಹೆಗಡೆ








ನಮ್ಮ ದೇಶದ ಯಾವುದಾದರೂ ಒಬ್ಬ ಪ್ರಖ್ಯಾತ ರಾಕೆಟ್ ವಿಜ್ಞಾನಿಯ ಹೆಸರನ್ನು ಹೇಳಬಲ್ಲಿರಾ?
ಮಕ್ಕಳಿಗೆ ಈ ಪ್ರಶ್ನೆಯನ್ನು ಕೇಳಿದರೆ ಪಟಪಟನೆ ಹತ್ತಾರು ಸರಿ ಉತ್ತರಗಳು ಬರುತ್ತವೆ. ನಮ್ಮ
ದೇಶದ ಪ್ರಸಿದ್ಧ ಪರಮಾಣು ವಿಜ್ಞಾನಿಯ ಹೆಸರು ಗೊತ್ತಿದೆಯೆ? ಅದಕ್ಕೂ ಪಟಪಟನೆ ನಾಲ್ಕಾರು ಸರಿ
ಉತ್ತರಗಳು ಬರುತ್ತವೆ.

ಬಹಳಷ್ಟು ಬಾರಿ ಆ ಪ್ರಶ್ನೆಯ ಉತ್ತರವೇ ಈ ಪ್ರಶ್ನೆಯ ಉತ್ತರವೂ ಆಗಿರುತ್ತದೆ. ಹಾಗಿದ್ದರೆ,
ನಮ್ಮ ದೇಶದ ಪ್ರಸಿದ್ಧ ಹವಾಮಾನ ವಿಜ್ಞಾನಿಯ ಹೆಸರನ್ನು ಹೇಳಬಲ್ಲಿರಾ? ಈಗ ಎಲ್ಲೆಡೆ ಮೌನ
ಆವರಿಸುತ್ತದೆ. ತಪ್ಪು ಉತ್ತರ ಕೊಡಲಿಕ್ಕೂ ಮಕ್ಕಳಿಗೆ ಒಂದು ಹೆಸರು ಹೊಳೆಯುವುದಿಲ್ಲ.

ನಮ್ಮ ದೇಶದ ಕ್ರೀಡಾರಂಗಕ್ಕೂ ವಿಜ್ಞಾನರಂಗಕ್ಕೂ ತುಂಬ ಹೋಲಿಕೆಗಳಿವೆ. ಒಲಿಂಪಿಕ್ಸ್ ಪದಕ
ಪಡೆಯುವಲ್ಲಿ ನಮ್ಮ ಸ್ಥಾನಮಾನ ಎಷ್ಟಿದೆಯೊ ಅಷ್ಟೇ ಕಳಪೆಯ ಸ್ಥಾನಮಾನ ವಿಜ್ಞಾನದ ನೊಬೆಲ್ ಪದಕ
ಪಡೆಯುವಲ್ಲಿಯೂ ಇದೆ.

ಕ್ರೀಡಾರಂಗದಲ್ಲಿ ಕ್ರಿಕೆಟ್, ಟೆನ್ನಿಸ್‌ಗಳಿಗೆ ಇನ್ನಿಲ್ಲದ ಮಾನ್ಯತೆ, ಪ್ರಭಾವಳಿ ಇದೆ.
ಆದರೆ ತೀರ ಸಾಮಾನ್ಯ ಶಾಲಾ ಮಕ್ಕಳ ಕೈಗೆಟುಕಬಹುದಾದ ಓಟ, ಜಿಗಿದಾಟ (ಜಿಮ್ನಾಸ್ಟಿಕ್)ಗಳಿಗೆ
ಮಾನ್ಯತೆ ಇಲ್ಲ. ವಿಜ್ಞಾನದಲ್ಲೂ ಅಷ್ಟೆ: ಪರಮಾಣು ವಿಜ್ಞಾನಕ್ಕೆ, ಕ್ಷಿಪಣಿ
ತಂತ್ರಜ್ಞಾನಕ್ಕೆ ಸಿಗುವ ಮಾನ್ಯತೆ ಹವಾಮಾನ ವಿಜ್ಞಾನಕ್ಕೆ ಇಲ್ಲ. ಹವಾಮಾನ ಅಧ್ಯಯನಕ್ಕೆ
ಬೇಕಾದ ಸಲಕರಣೆಗಳನ್ನು ಶಾಲಾ ಮಕ್ಕಳೇ ಹೊಂದಿಸಿಕೊಳ್ಳಬಹುದು, ಅಥವಾ ಅಲ್ಪವೆಚ್ಚದಲ್ಲಿ
ಖರೀದಿಸಿ ತರಬಹುದು. ಆದರೆ ಅದರ ಮಹತ್ವವನ್ನು ಗ್ರಹಿಸಲು ಬೇಕಾದ ಅಆಇಈ ತರಬೇತಿ ಕೂಡ ನಮ್ಮ
ಶಿಕ್ಷಕರಿಗೆ ಇಲ್ಲ.

ಹವಾಮಾನ ದಿನದಿನಕ್ಕೆ ಕ್ರೂರವಾಗುತ್ತಿದೆ. ಬರ- ನೆರೆ ಎಂಬಂಥ ಕನಿಷ್ಠ ಗರಿಷ್ಠಗಳ ಅಂಚಿನ
ಹೊಯ್ದಾಟವೇ ನಿತ್ಯದ ಸುದ್ದಿಯಾಗುತ್ತಿದೆ. ದಾಖಲೆಗಳ ಪ್ರಕಾರ ಕಳೆದ ಜುಲೈ ತಿಂಗಳಲ್ಲಿ
ಜಾಗತಿಕ ಸರಾಸರಿ ಉಷ್ಣತೆ ಹಿಂದಿನ ಎಲ್ಲ ಜುಲೈ ತಿಂಗಳ ದಾಖಲೆಗಳನ್ನೂ ಮೆಟ್ಟಿ ನಿಂತಿದೆ.
ಎಲ್ಲ ಜುಲೈಗಳಷ್ಟೇ ಅಲ್ಲ, ನಾಸಾ ವರದಿಯ ಪ್ರಕಾರ, 1880ರಿಂದ ಭೂಮಿಯ ತಾಪಮಾನದ ದಾಖಲೆ ಇಡುವ
ಪ್ರಕ್ರಿಯೆ ಆರಂಭವಾದಾಗಿನಿಂದ ಭೂತಾಪ ಇಷ್ಟು ಏರಿಕೆ ಆಗಿದ್ದು ಇದೇ ಮೊದಲು. ಈ ಏರಿಕೆ
ಹಠಾತ್ತಾಗಿ ಆಗಿದ್ದೇನೂ ಇಲ್ಲ.

ಕಳೆದ ಒಂದು ತಲೆಮಾರಿನಿಂದ ಆಗುತ್ತಲೇ ಇದೆ. ಹಿಂದಿನ 14 ವರ್ಷಗಳಲ್ಲಿ ಒಟ್ಟೂ 12 ವರ್ಷ
ಅತ್ಯಧಿಕ ಉಷ್ಣತೆಯ ವರ್ಷಗಳೇ ಆಗಿದ್ದವು. ಬುಂದೇಲಖಂಡದಲ್ಲಿ ಸತತ ಮೂರು ಬರವರ್ಷಗಳಿಂದಾಗಿ
ಶ್ರಮಜೀವಿಗಳು ನಿರಾಶ್ರಿತರಾಗಿ ದಿಲ್ಲಿಯ ಮೇಲುಸೇತುವೆಗಳ ಕೆಳಗೆ, ಕೊಳಕು ಕೊಳ್ಳಗಳ ಅಂಚಿಗೆ
ಸಂತೆ ನೆರೆದಿದ್ದಾರೆ.

ನೀರಿನ ರೈಲಿಗಾಗಿ ಕಾದುನಿಂತ ಮರಾಠಾವಾಡಾದ ಜನರ ಸ್ಥಿತಿಯಂತೂ ಗೊತ್ತೇ ಇದೆ. ಛತ್ತೀಸಗಢದಲ್ಲಿ
ಅರಣ್ಯಗಳ ಮಧ್ಯೆ ಬರಗಾಲ ಬಂದಿದೆ. ಅಲ್ಲಿ ಜೇನು ಮತ್ತು ಮಹುವಾ ಇಳುವರಿ ಕುಸಿದಿದ್ದರಿಂದ
ಕೋಟಿಗಟ್ಟಲೆ ಆದಿವಾಸಿಗಳು ತತ್ತರಿಸಿದ್ದಾರೆ. ಇದೀಗ ಉತ್ತರ ಭಾರತದಲ್ಲಿ ಗಂಗೆ, ಯಮುನೆ,
ಸೋನ್ ನದಿಗಳು ಧ್ವಂಸಧಾರೆಯನ್ನೇ ಹರಿಸುತ್ತಿವೆ.

ಬಿಹಾರದಲ್ಲಿ ಎಂದಿಗಿಂತ ಕಡಿಮೆ ಮಳೆಯಾದರೂ ಏಳು ನದಿಗಳ ನೆರೆ ಹಾವಳಿಯಿಂದ ಜನಸ್ತೋಮ
ನಲುಗುತ್ತಿದೆ. ಕರ್ನಾಟಕದಲ್ಲಿ 74 ತಾಲ್ಲೂಕುಗಳಲ್ಲಿ ಬರ ಸಿಡಿಲಿನಂತೆ ಎರಗಿದೆ. ಆಲಮಟ್ಟಿ
ತುಂಬಿದ್ದರೂ 50 ಕಿ.ಮೀ ಆಚೆ ರೈತರ ಸೇಂಗಾ ಬೆಳೆ ಒಣಗುತ್ತಿದೆ. ಚೆನ್ನೈಯಲ್ಲಿ ನೆರೆ ಹಾವಳಿಯ
ಮಧ್ಯೆ ನಿಂತ ಜಯಲಲಿತಾ ಕಾವೇರಿಯ ನೀರು ಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ
ಇಡುತ್ತಿದ್ದಾರೆ.

ನಮ್ಮೆಲ್ಲರ ನೆಮ್ಮದಿಯನ್ನು ಹಿಂಡಿ ಹಿಪ್ಪೆ ಮಾಡಿ ಎಸೆಯಬಲ್ಲ ಈ ಹವಾಮಾನ ವಿದ್ಯಮಾನ ನಮ್ಮ
ಸಾಹಿತಿಗಳಿಗೆ, ಕಲಾವಿದರಿಗೆ, ಸಿನೆಮಾ ಮಂದಿಗೆ, ಚಿಂತಕರಿಗೆ, ಧಾರ್ಮಿಕ ಮುಖಂಡರಿಗೆ,
ಶಿಕ್ಷಣತಜ್ಞರಿಗೆ, ಯೋಜನಾ ಧುರಂಧರರಿಗೆ ಕಾಣುತ್ತಿಲ್ಲ ಏಕೆ? ವಿಶೇಷವಾಗಿ ನಿನ್ನೆ ಮತ್ತು
ನಾಳೆಗಳನ್ನು ಗ್ರಹಿಸಿ, ಮಥಿಸಿ ಸಮಾಜಕ್ಕೆ ದಾರಿದೀಪವಾಗಬಲ್ಲ (ರವಿ ಕಾಣದ್ದನ್ನೂ ಕಾಣುವ)
ಕವಿಗಳು, ಸಾಹಿತಿಗಳು ಯಾಕೆ ಇದನ್ನು ಗ್ರಹಿಸುತ್ತಿಲ್ಲ?

ಈ ಪ್ರಶ್ನೆಯನ್ನು ಕೇಳಿದವರು ಭಾರತದ ಪ್ರಖ್ಯಾತ ಇಂಗ್ಲಿಷ್ ಕಾದಂಬರಿಕಾರ ಅಮಿತಾವ್ ಘೋಷ್.
ಅವರು ಈಚೆಗಷ್ಟೆ ಬರೆದ ‘ದಿ ಗ್ರೇಟ್ ಡಿರೇಂಜ್‌ಮೆಂಟ್- ಕ್ಲೈಮೇಟ್ ಚೇಂಜ್ ಅಂಡ್ ದಿ
ಅನ್‌ಥಿಂಕಬಲ್’ ಹೆಸರಿನ ಗ್ರಂಥ ಈಗ ಸಾಕಷ್ಟು ಶ್ಲಾಘನೆಗೆ, ಚರ್ಚೆಗೆ ಗ್ರಾಸವಾಗುತ್ತಿದೆ
(ಡಿರೇಂಜ್‌ಮೆಂಟ್ ಅಂದರೆ ಅಸ್ತವ್ಯಸ್ತ, ಕ್ರಮಭಂಗ, ಅಲ್ಲೋಲಕಲ್ಲೋಲ).

ಈಗ ಕಾಣುತ್ತಿರುವ ವ್ಯಾಪಕ ಹವಾಗುಣ ಬದಲಾವಣೆ ನಮ್ಮ ಭೂಗೋಲ, ಸಂಸ್ಕೃತಿ, ವಾಣಿಜ್ಯಗಳಿಗಷ್ಟೇ
ಅಲ್ಲ, ಸ್ವಾತಂತ್ರ್ಯದ ಪರಿಕಲ್ಪನೆಗೇ ಸವಾಲು ಹಾಕುತ್ತಿದೆ; ಇಡೀ ಮನುಕುಲವೇ ಹೇಗೆ ಹೊಸದೊಂದು
ಪ್ರಪಾತದ ಅಂಚಿನಲ್ಲಿ ತೊನೆದಾಡುತ್ತಿದೆ ಎಂಬುದರ ಒಳನೋಟ ಈ ಕೃತಿಯಲ್ಲಿದೆ. ಆಕ್ಸ್‌ಫರ್ಡ್,
ಅಲೆಕ್ಸಾಂಡ್ರಿಯಾಗಳಲ್ಲಿ ಓದಿದ ಅಮಿತಾವ್ ಘೋಷ್ ತಮ್ಮ ‘ದ ಹಂಗ್ರಿ ಟೈಡ್’, ‘ಫ್ಲಡ್ ಆಫ್
ಫಾಯರ್’, ‘ರಿವರ್ ಆಫ್ ಸ್ಮೋಕ್’, ‘ದ ಗ್ಲಾಸ್ ಪ್ಯಾಲೇಸ್’ ಮುಂತಾದ ಕಾದಂಬರಿಗಳಿಗೆ ಅನೇಕ
ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದವರು.

ವಿಜ್ಞಾನದ ಸಾಮಾಜಿಕ ಮುಖಗಳನ್ನು ತಮ್ಮ ಕಾದಂಬರಿಗಳಲ್ಲಿ ಸಾಕಷ್ಟು ಅನಾವರಣ ಮಾಡಿದ ಇವರು
(ತಮ್ಮ ‘ಕಲ್ಕತ್ತಾ ಕ್ರೊಮೊಸೋಮ್’ ವೈಜ್ಞಾನಿಕ ಕಾದಂಬರಿಗೆ ಆರ್ಥರ್ ಸಿ.ಕ್ಲಾರ್ಕ್
ಪ್ರಶಸ್ತಿಯನ್ನು ಪಡೆದಿದ್ದಾರೆ) ಈಗಿನ ಬಿಸಿಪ್ರಳಯ, ಅದರಿಂದಾಗುತ್ತಿರುವ ಅಂತರರಾಷ್ಟ್ರೀಯ
ಬಿಕ್ಕಟ್ಟು, ಪ್ಯಾರಿಸ್ ಒಪ್ಪಂದ ಮುಂತಾದ ವಿಷಯಗಳ ಮೇಲೆ ಪ್ರಬುದ್ಧ ಚಿಂತನೆ ಮಾಡುತ್ತಾರೆ.

ಅವರ ‘ಡಿರೇಂಜ್‌ಮೆಂಟ್’ ಕೃತಿ ಹೊರಬಂದ ನಂತರ ಅನೇಕ ಇಂಗ್ಲಿಷ್ ಪತ್ರಿಕೆಗಳಲ್ಲಿ,
ಚಾನೆಲ್‌ಗಳಲ್ಲಿ ಅವರ ಸಂದರ್ಶನ ನಡೆಯುತ್ತಿದೆ. ಕೆಲವನ್ನು ಯೂಟ್ಯೂಬ್‌ನಲ್ಲ್ಲೂ ನೋಡಬಹುದು.
ವಿಜ್ಞಾನ ಮತ್ತು ಪರಿಸರ ಕುರಿತ ‘ಡೌನ್ ಟು ಅರ್ಥ್’ ಪಾಕ್ಷಿಕ ಈಚಿನ ಸಂಚಿಕೆಯಲ್ಲಿ ಅವರ
ಕೃತಿಯ ಸಾರಾಂಶ ಮತ್ತು ಸಂದರ್ಶನವನ್ನು ಆದ್ಯತೆಯ ವಿಷಯವಾಗಿ ಪ್ರಕಟಿಸಿದೆ. ಮುಂದಿನ ಕೆಲವು
ಪರಿಚ್ಛೇದಗಳು ಅವರ ದೃಷ್ಟಿಕೋನವನ್ನು ಧ್ವನಿಸುತ್ತವೆ:

ಈಗಿನ ಈ ಸಂಕಷ್ಟಗಳಿಗೆ ಮೂಲ ಕಾರಣ ಎನಿಸಿದ ಕಾರ್ಬನ್ ಹಿಂದೆಲ್ಲ ಅಸಲೀ ಸಂಪತ್ತೆನಿಸಿತ್ತು.
ಯಾರು ಜಾಸ್ತಿ ಕಾರ್ಬನ್ನಿನ (ಅಂದರೆ ಕಲ್ಲಿದ್ದಲು, ಪೆಟ್ರೋಲು) ಯಜಮಾನಿಕೆ ಪಡೆಯುತ್ತಾರೊ
ಅವರೇ ಶ್ರೀಮಂತರೆನ್ನಿಸಿದರು. ಅಂಥ ದೇಶವೇ ಧನಿಕ ದೇಶವೆನ್ನಿಸಿತ್ತು. 

[ms-stf '63950'] ತಟ್ಟೆ, ಚಮಚೆ, ತಿಂಡಿ ಪೊಟ್ಟಣವನ್ನೂ ಮೆಲ್ಲಬಹುದು!

2016-08-24 Thread HAREESHKUMAR K Agasanapura
http://m.vijaykarnataka.com/edit-oped/columns/net-nota-sudhindra-haldodderi/articleshow/53827378.cms

*ನೆಟ್ ನೋಟ: ತಟ್ಟೆ, ಚಮಚೆ, ತಿಂಡಿ ಪೊಟ್ಟಣವನ್ನೂ ಮೆಲ್ಲಬಹುದು!*

Aug 24, 2016, 04.00 AM IST

Whatsapp Facebook Google Plus
Twitter Email
SMS 

bng-2308-2-2-food

AAA

ನೆಟ್ ನೋಟ: ಸುಧೀಂದ್ರ ಹಾಲ್ದೊಡ್ಡೇರಿ ಮೊನ್ನೆ ಮದುವೆ ಮನೆಯೊಂದರಲ್ಲಿ ಊಟ
ಮಾಡುತ್ತಿದ್ದಾಗ, ಬದನೆಕಾಯಿಯ ದಪ್ಪನೆಯ ಹೋಳೊಂದನ್ನು ಪ್ಲಾಸ್ಟಿಕ್‌ ಚಮಚೆಯಿಂದ ನಾನು
ತುಂಡರಿಸುವಷ್ಟರಲ್ಲಿ ಅದು ಮುರಿದುಬಿತ್ತು. ತಟ್ಟೆಯಲ್ಲಿಯೇ ಗಟ್ಟಿಯಾಗಿದ್ದ ಹಲಸಿನ ಹಪ್ಪಳದ
ಚೂರುಗಳೆರಡು ನನ್ನ ಊಟಕ್ಕೆ ಚಮಚೆಯ ನೆರವು ನೀಡಿತು. ಪಕ್ಕದಲ್ಲಿದ್ದ ಭೌತವಿಜ್ಞಾನ
ಪ್ರಾಧ್ಯಾಪಕರು ಇನ್ನು ಮುಂದೆ ಊಟದ ಜತೆಗೆ ತಿಂದು ಮುಗಿಸಬಲ್ಲ ಚಮಚೆಗಳು ಬಳಕೆಗೆ
ಬರಬೇಕೆಂದರು. ಕಳೆದ ವಾರವಷ್ಟೇ ಔತಣಕೂಟವೊಂದರಲ್ಲಿ ತಟ್ಟೆಯೊಂದಿಗೆ ಸಿಕ್ಕ ಸ್ಟೇನ್ಲೆಸ್‌
ಸ್ಟೀಲ್‌ ಲೇಪನವಿದ್ದ ಪ್ಲಾಸ್ಟಿಕ್‌ ಚಮಚ ನನ್ನನ್ನು ಬೇಸ್ತು ಬೀಳಿಸಿತ್ತು. ಸಮೋಸ ತಿಂದು
ಮುಗಿಸುವಷ್ಟರಲ್ಲಿ ಚಮಚೆಯ ಮೇಲಿನ ಬಣ್ಣದ ಲೇಪನದ ಅರ್ಧ ಭಾಗ ನನ್ನ ಹೊಟ್ಟೆಯನ್ನು ಸೇರಿತ್ತು.
ಪರಿಸರ ಕಾಳಜಿಯ ಊಟದ ಮನೆಗಳಲ್ಲಿ ಇದೀಗ ಅಡಿಕೆ ಹಾಳೆಯ ತಟ್ಟೆ ಮತ್ತು ದೊನ್ನೆಗಳು ಪ್ರವೇಶ
ಮಾಡಿವೆ. ಆದರೆ ಪ್ಲಾಸ್ಟಿಕ್‌ ಚಮಚೆಯ ಸ್ಥಾನವನ್ನು ಪಲ್ಲಟಗೊಳಿಸಲು ಸಾಧ್ಯವಾಗಿಲ್ಲ. ದಿನಸಿ
ಮಳಿಗೆಗೆ ನೀವು ಭೇಟಿ ಕೊಟ್ಟಾಗ ಗಮನಿಸಿರಬಹುದು. ಬೆಣ್ಣೆ, ಗಿಣ್ಣು, ಚೀಸ್‌, ಮಾಂಸ,
ಬ್ರೆಡ್‌, ಕತ್ತರಿಸಿದ ಹಣ್ಣು, ಚಾಕೊಲೇಟ್‌ ಸೇರಿದಂತೆ ಬಹುತೇಕ ಆಹಾರ ಸಾಮಗ್ರಿಗಳನ್ನು
ತೆಳುವಾದ ಪಾರದರ್ಶಕ ಪ್ಲಾಸ್ಟಿಕ್‌ ಹಾಳೆಗಳಿಂದ ಸುತ್ತಿರಲಾಗುತ್ತದೆ. ಮರುಬಳಸಲಾಗದ ಈ ತೆಳು
ಪ್ಲಾಸ್ಟಿಕ್‌ ಹಾಳೆಗಳು ಎಂದಿಗೂ ಕೊಳೆಯದ ಕಸದ ರಾಶಿಗಳಲ್ಲಿ ಸೇರ್ಪಡೆಯಾಗುತ್ತವೆ. ಹಾಗೆಯೇ
ತೀರಾ ತೆಳುವಾದ ಇದರ ಮೇಲ್ಮೈಗೆ ಮೆತ್ತಿಕೊಳ್ಳುವ ಆಹಾರ ಪದಾರ್ಥಗಳು ಬಳಕೆಯಾಗದೆಯೇ
ವ್ಯರ್ಥವಾಗುತ್ತವೆ. ಕರ್ನಾಟಕದಲ್ಲಿ ಈ ಹಿಂದೆ ನಲವತ್ತು ಮೈಕ್ರಾನ್‌ಗಿಂತಲೂ ಕಡಿಮೆ ದಪ್ಪದ
ಪ್ಲಾಸ್ಟಿಕ್‌ ಬಳಸುವಂತಿರಲಿಲ್ಲ. ಇದೀಗ ಕರ್ನಾಟಕವು ಪ್ಲಾಸ್ಟಿಕ್‌ ಮುಕ್ತ ರಾಜ್ಯವಾಗುವತ್ತ
ಹೆಜ್ಜೆ ಹಾಕುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನದ ತೆಳು ಪ್ಲಾಸ್ಟಿಕ್‌ ಹಾಳೆಗಳು ಸಹಾ
ಕೆಲವೊಮ್ಮೆ ತಮ್ಮೊಡಲೊಳಗಿನ ವಿಷ ಪದಾರ್ಥಗಳನ್ನು ಆಹಾರಕ್ಕೆ ನಿಧಾನಗತಿಯಲ್ಲಿ
ರವಾನಿಸುತ್ತಿರುತ್ತವೆ. ಇದು ಕೇವಲ ಭಾರತಕ್ಕಷ್ಟೇ ಸೀಮಿತವಾದ ಸಮಸ್ಯೆಯಲ್ಲ. ಜನಸಂಖ್ಯೆ
ಕಡಿಮೆಯಿದ್ದರೂ ತಲಾ ಪ್ಲಾಸ್ಟಿಕ್‌ ಬಳಕೆ ಹೆಚ್ಚಿರುವ ಅಮೆರಿಕ ಹಾಗೂ ಯುರೋಪ್‌ ದೇಶಗಳಲ್ಲಿ
ಇದು ಉಲ್ಬಣಗೊಳ್ಳುತ್ತಿರುವ ತೊಂದರೆಯಾಗಿದೆ. ಆಹಾರ ಪದಾರ್ಥಗಳು ಕೆಡಲು ಮುಖ್ಯ ಕಾರಣ
ವಾತಾವರಣದ ಆಮ್ಲಜನಕೊಂದಿಗಿನ ಅವುಗಳ ಸಂಯೋಗ. ಗಾಳಿ ಅದರಲ್ಲೂ ವಿಶೇಷವಾಗಿ ಆಮ್ಲಜನಕದೊಂದಿಗಿನ
ಸಂಪರ್ಕ ತಪ್ಪಿಸಲೆಂದೇ ಪ್ಲಾಸ್ಟಿಕ್‌ ಹಾಳೆ ಸೇರಿದಂತೆ ಅನೇಕ ಸಾಮಗ್ರಿಗಳ ಕವಚಗಳನ್ನು ಆಹಾರದ
ಮೇಲೆ ಹೊದಿಸಲಾಗುತ್ತದೆ. ಇವುಗಳ ಬದಲಾಗಿ ನಿರ್ಮಾಣಗೊಳ್ಳುವ ಯಾವುದೇ ಕವಚವು ಆಹಾರವನ್ನು
ಕೆಡದಂತೆ ಕಾಪಾಡಬೇಕು, ಕಾಲಾಂತರದಲ್ಲಿ ಪರಿಸರಕ್ಕೆ ತ್ಯಾಜ್ಯದ ಹೊರೆಯಾಗಬಾರದು, ಬಳಸಲು ಸುಲಭ
ಹಾಗೂ ತಯಾರಿಸಲು ಅಗ್ಗವಾಗಿರಬೇಕು. ಅಮೆರಿಕದ ಕೃಷಿ ಇಲಾಖೆಯ ವಿಜ್ಞಾನಿಗಳು ಆಹಾರ ಬಳಕೆಯ
ನಂತರ ಅದಕ್ಕೆ ಹೊದಿಸಿದ ಹಾಳೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ಕುರಿತು ಅನೇಕ
ಸಂಶೋಧನೆಗಳನ್ನು ನಡೆಸಿದ್ದಾರೆ. ಕಳೆದ ಗುರುವಾರ 'ಅಮೆರಿಕನ್‌ ಕೆಮಿಕಲ್‌ ಸೊಸೈಟಿ'ಯ
ವಾರ್ಷಿಕ ವಿಜ್ಞಾನ ಮೇಳದಲ್ಲಿ ಆ ವಿಜ್ಞಾನಿಗಳು ಮಂಡಿಸಿರುವ ಪ್ರೌಢ ಪ್ರಬಂಧ ಆಹಾರ ತಜ್ಞರ
ಗಮನ ಸೆಳೆದಿದೆ. ಅವರ ಸಂಶೋಧನೆಗಳ ಪ್ರಕಾರ ಪ್ರೊಟೀನ್‌-ಆಧರಿತ ತೆಳು ಹಾಳೆಗಳು ಆಮ್ಲಜನಕದ
ಪ್ರವೇಶವನ್ನು ಸಮರ್ಥವಾಗಿ ತಡೆಗಟ್ಟಬಲ್ಲವು. ಇದರಿಂದಾಗಿ ಪ್ರೊಟೀನ್‌-ಆಧರಿತ ಹಾಳೆಗಳೊಳಗೆ
ಅಡಕವಾಗಿರುವ ಆಹಾರ ಪದಾರ್ಥಗಳು ಹೆಚ್ಚು ಕಾಲ ಕೆಡಲಾರವು. ಈ ಸಂಶೋಧನಾ ತಂಡದ ನೇತೃತ್ವ
ವಹಿಸಿರುವ ಡಾ. ಪೆಗ್ಗಿ ಟೊಮಸುಲ ಅವರ ಪ್ರಕಾರ ಇಂಥ ತೆಳು ಹಾಳೆಗಳ ಬಳಕೆಯಿಂದ ಆಹಾರ ಸಂರಕ್ಷ
ಣೆಯಾಗುವುದರ ಜತೆಗೆ ಪೆಟ್ರೋಲಿಯಂ-ಆಧರಿತ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ
ಹಾಕಿದಂತಾಗುತ್ತದೆ. ಬಹುತೇಕ ಸ್ತನಿಗಳ ಹಾಲಿನಲ್ಲಿ ಲಭ್ಯವಿರುವ ಕೆಸೀನ್‌ ಎಂಬ ಪ್ರಮುಖ
ಪ್ರೊಟೀನ್‌ ಬಗ್ಗೆ ನೀವು ಕೇಳಿರಬಹುದು. ಆಕಳ ಹಾಲಿನ ಪ್ರತಿಶತ ಎಂಬತ್ತರಷ್ಟು ಭಾಗ ಈ
ಪ್ರೊಟೀನ್‌ ಅಂಶವಿರುತ್ತದೆ. ಮೊಲೆಯೂಡಿಸುವ ತಾಯಂದಿರ ಹಾಲಿನಲ್ಲಿ ಇದರ ಪ್ರಮಾಣ
ಇಪ್ಪತ್ತರಿಂದ ನಲವತ್ತೈದು ಪ್ರತಿಶತವಿರುತ್ತದೆ. ಆಕಳ ಹಾಲಿನ ಕೆಸೀನ್‌ ಅನ್ನು 'ಚೀಸ್‌'
ತಯಾರಿಕೆಯಲ್ಲಿ ಹೆಚ್ಚು ಬಳಸಲಾಗುತ್ತದೆ. ಕೆಲವೊಂದು ಆಹಾರಗಳಲ್ಲಿ ಪೌಷ್ಠಿಕಾಂಶದ ಸೇರ್ಪಡೆಗೂ
ಇದೇ ಪ್ರೊಟೀನ್‌ ಉಪಯುಕ್ತವಾಗಿದೆ. ಈ ಪ್ರೊಟೀನಿನ ಮುಖ್ಯ ಅಂಶಗಳೆಂದರೆ ಅಮೈನೊ ಆಮ್ಲಗಳು,
ಕಾರ್ಬೊಹೈಡ್ರೇಟ್‌ಗಳು, ಕ್ಯಾಲ್ಶಿಯಂ ಮತ್ತು ಪೊಟಾಶಿಯಂ. ಹೀಗಾಗಿ ಮಕ್ಕಳ ಬೆಳವಣಿಗೆಯಲ್ಲಿ
ಈ ಪ್ರೊಟೀನಿನ ಪಾತ್ರ ಮಹತ್ವದ್ದು. ವಿಶೇಷ ಸಂಗತಿಯೆಂದರೆ ಬಣ್ಣ ಮತ್ತು ಅಂಟುಗಳ
ತಯಾರಿಕೆಯಲ್ಲಿ ಯೂ ಈ ಪ್ರೊಟೀನನ್ನು ಬಹಳ ಬಳಸಲಾಗುತ್ತಿದೆ. ಕಲಾವಿದರು ಬಳಸುವ ನೀರಿನಲ್ಲಿ
ಕರಗುವ ಬಣ್ಣಗಳಲ್ಲಿ ಕೆಸೀನ್‌ ಸೇರಿಸಿದಲ್ಲಿ, ಬಣ್ಣದ ಬರಹ ಅಥವಾ ಲೇಪನ ಅತ್ಯಂತ ಶೀಘ್ರವಾಗಿ
ಒಣಗುತ್ತದೆ. ಅಕ್ರಿಲಿಕ್‌ ಹೊಳಪಿನ ಬಣ್ಣಗಳು ಬಳಕೆಗೆ ಬಂದಂತೆ ಕೆಸೀನ್‌ ಮಿಶ್ರಣದ ಬಣ್ಣಗಳ
ಉಪಯೋಗ ಕಡಿಮೆಯಾಯಿತು. ಆದರೆ ಮರಗೆಲಸದಲ್ಲಿ ಬಳಸುವ ಅಂಟಿನಲ್ಲಿ, ವಿಶೇಷವಾಗಿ
ಪ್ರಯೋಗಾಲಯಗಳಲ್ಲಿ ನಿರ್ಮಿಸುವ ವಿಮಾನ ಮಾದರಿಗಳ ಬಿಡಿಭಾಗಗಳ ಜೋಡಣೆಯ ಗೋಂದಿನಲ್ಲಿ ಕೇಸಿನ್‌
ಪ್ರೊಟೀನಿನ ಉಪಯೋಗ ಹೆಚ್ಚು. ಅಷ್ಟೇಕೆ, ನಮ್ಮ ನಿತ್ಯ ಬಳಕೆಯ ಬೆಂಕಿ ಕಡ್ಡಿಗಳಲ್ಲಿ
ಮದ್ದಿನಂಶವನ್ನು ಕೂರಿಸುವಲ್ಲಿಯೂ ಕೇಸಿನ್‌ ನೆರವಾಗುತ್ತದೆ. ಬಹಳ ಹಿಂದೆ ಹಲ್ಲಿನ ರಿಪೇರಿ
ಕಾರ್ಯದಲ್ಲಿಯೂ ಇದೇ ಪ್ರೊಟೀನ್‌ ಅನ್ನು ಬಳಸಲಾಗುತ್ತಿತ್ತು. ಆರಂಭದ ದಿನಗಳ ಪ್ಲಾಸ್ಟಿಕ್‌
ನೂಲುಗಳು ಮತ್ತು ಹಾಳೆಗಳ ತಯಾರಿಕೆಯಲ್ಲಿಯೂ ಇದರ ಉಪಯೋಗವಿತ್ತು. ಮತ್ತೆ, ನಮ್ಮ ಆಹಾರ
ಹೊದಿಕೆಯ ವಿಷಯಕ್ಕೆ ಬರುವುದಾದರೆ, ಡಾ. ಟೊಮಸುಲ ಅವರ ನೇತೃತ್ವದ ತಂಡವು ಹಾಲಿನ ಕೇಸಿನ್‌
ಅನ್ನು ಬಳಸಿಕೊಂಡ ತೆಳು ಹಾಳೆಗಳ ಮೇಲೆ ಸುದೀರ್ಘ ಕಾಲದ ಪ್ರಯೋಗಗಳನ್ನು ನಡೆಸಿದೆ. ಸಾಮಾನ್ಯ
ಬಳಕೆಯ ಪ್ಲಾಸ್ಟಿಕ್‌ ತೆಳು ಹಾಳೆಗೊಳೊಂದಿಗಿನ ತುಲನಾತ್ಮಕ ಅಧ್ಯಯನದಲ್ಲಿ ಅದು ಕಂಡುಕೊಂಡ
ವಿಷಯವೇನೆಂದರೆ, ಆಮ್ಲಜನಕವನ್ನು ತಡೆಗಟ್ಟುವ ಸಾಮರ್ಥ್ಯದಲ್ಲಿ ಕೇಸಿನ್‌ ಹಾಳೆಗಳು ಐದು ನೂರು
ಪಟ್ಟು ಹೆಚ್ಚು ಉತ್ತಮ. ಹಾಲು ಮೂಲ ದ್ರವ್ಯವಾಗಿರುವುದರಿಂದ ಈ ಹಾಳೆಗಳು ಪರಿಸರದಲ್ಲಿ
ಸುಲಭವಾಗಿ ಲೀನವಾಗಬಲ್ಲವು. ಎಲ್ಲಕ್ಕೂ ಮಿಗಿಲಾಗಿ ಇವು ಖಾದ್ಯ ಪದಾರ್ಥಗಳಾಗಿರುವುದರಿಂದ,
ಬಿಸುಡುವ ಬದಲು ಇವನ್ನು ನೇರವಾಗಿ ತಿನ್ನಲೂಬಹುದು. ಸದ್ಯಕ್ಕೆ ಬಳಕೆಯಲ್ಲಿರುವ ತಿನ್ನಬಹುದಾದ
ಹೊದಿಕೆಗಳನ್ನು ಪಿಷ್ಟದಿಂದ ನಿರ್ಮಿಸಲಾಗುತ್ತಿದೆ. ಕೇಸಿನ್‌ಗೆ ಹೋಲಿಸಿದರೆ ಪಿಷ್ಟವು
ಹೆಚ್ಚು ಜಾಳು ಜಾಳಾಗಿರುತ್ತದೆ. ಅಂದರೆ ಪಿಷ್ಟದಿಂದ ತಯಾರಿಸಿದ ಹಾಳೆಯಲ್ಲಿನ ಸೂಕ್ಷ ್ಮ
ರಂಧ್ರಗಳು ಆಮ್ಲಜನಕದ ಹರಿದಾಟಕ್ಕೆ ಅನುವು ಮಾಡಿಕೊಡುತ್ತದೆ. ಆದರೆ, ಕೇಸಿನ್‌ನ ಹಾಳೆಯಲ್ಲಿ
ರಂಧ್ರಗಳ ಗಾತ್ರ ಅತ್ಯಂತ ಕಿರಿದಾಗಿರುವುದರಿಂದ ಆಮ್ಲಜನಕವು ಸುಲಭವಾಗಿ ಪ್ರವೇಶಿಸಲು
ಸಾಧ್ಯವಿಲ್ಲ. ಕೇಸಿನ್‌ ಬಳಸಿ ನಿರ್ಮಿಸಿದ ಹಾಳೆಗಳು ಮೊದಲ ಮಾದರಿ ಪರೀಕ್ಷೆಗಳಲ್ಲಿ ಸಾಕಷ್ಟು
ಸವಾಲುಗಳನ್ನು 

[ms-stf '63748'] ಲೀನಕ್ಸ್ ಕಲಿಕೆ | ಪ್ರಜಾವಾಣಿ

2016-08-19 Thread HAREESHKUMAR K Agasanapura
http://m.prajavani.net/news/article/2016/08/18/431610.html

*ಲೀನಕ್ಸ್ ಕಲಿಕೆ*

18 Aug, 2016








ಜಗತ್ತಿನ ಶೇಕಡಾ 94ರಷ್ಟು ಸೂಪರ್ ಕಂಪ್ಯೂಟರ್‌ಗಳ ಆಪರೇಟಿಂಗ್ ಸಿಸ್ಟಂ ಯಾವುದು? ಅದು
ಮೈಕ್ರೋಸಾಫ್ಟ್‌ನ ವಿಂಡೋಸ್ ಅಲ್ಲ. ಆಪಲ್ ಮ್ಯಾಕಿಂಟೋಶ್ ಬಳಸುವ ಆಪರೇಟಿಂಗ್ ಸಿಸ್ಟಂ ಅಲ್ಲ.

ಅದು ಲೀನಕ್ಸ್ ಎಂಬ ಮುಕ್ತ ಮತ್ತು ಸ್ವತಂತ್ರ ಆಪರೇಟಿಂಗ್ ಸಿಸ್ಟಂ. ಇದನ್ನು ತಂತ್ರಜ್ಞರ
ಸಮುದಾಯವೊಂದು ನಿರಂತರವಾಗಿ ಅಭಿವೃದ್ಧಿಪಡಿಸುತ್ತಿದೆಯೇ ಹೊರತು ಇದು ಯಾರದೇ ಮಾಲೀಕತ್ವದ
ತಂತ್ರಾಂಶವಲ್ಲ. ಸಾಮಾನ್ಯರು ಲೀನಕ್ಸ್ ಬಳಕೆಯಲ್ಲಿ ಹಿಂದುಳಿದಿದ್ದರೂ ತಂತ್ರಜ್ಞರ ವಲಯದಲ್ಲಿ
ಇದು ಭಾರೀ ಜನಪ್ರಿಯ.

ತಂತ್ರಾಂಶಗಳ ಉತ್ಪಾದಕರು, ಇಂಟರ್ನೆಟ್ ಸರ್ವರ್‌ಗಳೆಲ್ಲವೂ ನಡೆಯುವುದು ಈ ತಂತ್ರಾಂಶದ
ಮೇಲೆಯೇ. ಇನ್ನು ಮೊಬೈಲ್ ಫೋನ್‌ಗಳ ಕ್ಷೇತ್ರಕ್ಕೆ ಬಂದರೆ ಲೀನಕ್ಸ್ ಬಹಳ ಜನಪ್ರಿಯ.
ಸಾಮಾನ್ಯರು ಮತ್ತು ತಂತ್ರಜ್ಞರೆಲ್ಲರಿಗೂ ಇದು ಪ್ರಿಯ. ಗೂಗಲ್ ನೇತೃತ್ವದ ತಂತ್ರಜ್ಞರ ಬಳಗ
ನಿರ್ವಹಿಸುತ್ತಿರುವ ‘ಆಂಡ್ರಾಯ್ಡ್’ ತಂತ್ರಾಂಶ ಕೂಡ ಲೀನಕ್ಸ್‌ನ ಒಂದು ಬಗೆಯ ವಿತರಣೆ.

ಅಷ್ಟೇ ಅಲ್ಲ ಕಂಪ್ಯೂಟರ್ ಕ್ಷೇತ್ರದಲ್ಲಿ ಉದ್ಯೋಗವನ್ನು ನಿರೀಕ್ಷಿಸುವವರಿಗೆ ಈ ತಂತ್ರಾಂಶದ
ಕುರಿತ ಅರಿವು ಇರಲೇಬೇಕೆಂಬ ಅನಿವಾರ್ಯತೆ ಈಗ ಇದೆ. ವಿಂಡೋಸ್ ಅಥವಾ ಮ್ಯಾಕ್ ಓಎಸ್‌ನಂತೆಯೇ
ಇದನ್ನು ಬಳಸುತ್ತಲೇ ಕಲಿಯಬಹುದು. ಆದರೆ ಹೆಚ್ಚಿನವರು ಆ ಧೈರ್ಯ ಮಾಡುವುದಿಲ್ಲ. ಅಂಥವರಿಗಾಗಿ
ಲೀನಕ್ಸ್ ಫೌಂಡೇಶನ್ ಒಂದು ಮುಕ್ತ ಕೋರ್ಸ್ ಆರಂಭಿಸಿದೆ.

ನಿಮ್ಮದೇ ವೇಗದಲ್ಲಿ ಕಲಿಯಬಹುದಾದ ಈ ಕೋರ್ಸ್‌ ಎಂಟು ವಾರಗಳ ಅವಧಿಯದ್ದು. ಇದರಲ್ಲಿ ನೀಡುವ
ಎಲ್ಲಾ ಮಾಹಿತಿಗಳನ್ನು ಕರಗತಗೊಳಿಸಿಕೊಳ್ಳಲು ಸುಮಾರು 60 ಗಂಟೆಗಳ ಅಧ್ಯಯನ ಸಾಕು ಎಂದು ಈ
ತನಕ ಈ ಕೋರ್ಸ್‌ನಲ್ಲಿ ತರಬೇತಿ ಪಡೆದವರು ಹೇಳುತ್ತಾರೆ.

ಲೀನಕ್ಸ್ ತಂತ್ರಾಂಶವನ್ನು ಹೇಗೆ ಬಳಸಬೇಕು ಎಂಬಲ್ಲಿಂದ ಆರಂಭಿಸಿ ಅದರ ವಿವಿಧ ವಿತರಣೆಗಳ
ತನಕದ ಸಂಪೂರ್ಣ ಮಾಹಿತಿಯನ್ನು ಈ ಕೋರ್ಸ್ ಒದಗಿಸುವುದರ ಜೊತೆಗೆ ಲೀನಕ್ಸ್ ಕೌಶಲಗಳನ್ನೂ
ಕಲಿಸುತ್ತದೆ. ಇದಕ್ಕೆ ಸೇರಿಕೊಳ್ಳಲು ಇಚ್ಛಿಸುವವರು ಇಲ್ಲಿರುವ ಕೊಂಡಿಯನ್ನು ಬಳಸಬಹುದು:
https://goo.gl/Z0nrOZ

Hareeshkumar K
GHS HUSKURU
MALAVALLI TQ
MANDYA DT
MOB 9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '63513'] ವಿಶ್ವವಿದ್ಯಾಲಯವೂ ಮೂಢನಂಬಿಕೆಯೂ | Mobile Site

2016-08-11 Thread HAREESHKUMAR K Agasanapura
http://m.prajavani.net/article/2016_08_11/430071

*ವಿಶ್ವವಿದ್ಯಾಲಯವೂ ಮೂಢನಂಬಿಕೆಯೂ*

11 Aug, 2016

ಎಂ. ಅಬ್ದುಲ್ ರೆಹಮಾನ್ ಪಾಷ








ವಿಜ್ಞಾನದ ಯಾವುದೇ ಸಿದ್ಧಾಂತಗಳನ್ನು ಆಧರಿಸದೆ ‘ಪ್ರಾಚೀನ’ ಎಂಬ ಬಿರುದಿನ ಮೌಢ್ಯವನ್ನು
ಹಗಲು ರಾತ್ರಿ ಬಿತ್ತುವ ಜನ ಈಗ ಒಂದು ಹೊಸ ಸೋಗನ್ನು ಹಾಕತೊಡಗಿದ್ದಾರೆ. ಅವರು ತಮ್ಮ
ಶಾಸ್ತ್ರೀಯವಾದ ಮಾತುಗಳಲ್ಲಿ, ‘ಪಾಸಿಟಿವ್ ಎನರ್ಜಿ’, ‘ಕಾಸ್ಮಿಕ್ ಇಫೆಕ್ಟ್’
‘ಅಟ್ರ್ಯಾಕ್ಷನ್’ ಇತ್ಯಾದಿ ವಿಜ್ಞಾನದ ಪರಿಭಾಷೆಯನ್ನು ಬಳಸತೊಡಗಿದ್ದಾರೆ. ‘ಇದನ್ನು
ವಿಜ್ಞಾನಿಗಳೇ ಒಪ್ಪಿದ್ದಾರೆ’, ‘ಇದು ವೈಜ್ಞಾನಿಕವಾಗಿ ಪ್ರೂವ್ ಆಗಿದೆ’ ಎಂದೆಲ್ಲ ಹೇಳಿ,
ಮೊದಲೇ ಅಮಾಯಕರಾದ ಜನರನ್ನು ಇನ್ನಷ್ಟು ರುಚಿಕಟ್ಟಾಗಿ ಮೋಸಗೊಳಿಸುತ್ತಾರೆ. ಜನರಿಗೆ ತಮ್ಮ
‘ಮೌಢ್ಯ’ವೂ ‘ವೈಜ್ಞಾನಿಕ’ವಾಗಿದೆ ಎಂಬ ಸಮಾಧಾನ.

ಇತ್ತೀಚೆಗೆ ಇನ್ನೊಂದು ಆಧುನಿಕ ಕಾಯಿಲೆ ಶುರು ಆಗಿದೆ. ಇದು  ಹೆಚ್ಚಿನಂಶ ಚಿಕ್ಕ ಪಟ್ಟಣಗಳ
ವಿಜ್ಞಾನ ಶಿಕ್ಷಕರು, ಉಪನ್ಯಾಸಕರಲ್ಲಿ, ಸಾಮಾಜಿಕ ಜಾಲಿಗರಾದ ಅತ್ಯಾಧುನಿಕ ಯುವಜನರಲ್ಲಿ
ಕಂಡುಬಂದಿದೆ. ಇವರು ತಮ್ಮ ಅರೆಬೆಂದ ವಿಜ್ಞಾನ ಮಾಹಿತಿಯನ್ನು ಮೂಢಾಚರಣೆಗಳಿಗೆ ‘ವೈಜ್ಞಾನಿಕ
ಕಾರಣ’ ಹುಡುಕುವಲ್ಲಿ ದುಡಿಸಿಕೊಳ್ಳುತ್ತಿದ್ದಾರೆ. ಸಾಂಪ್ರದಾಯಿಕ ಆಚರಣೆಗಳನ್ನು ನಂಬಿ
ಅನುಸರಿಸಿದರೆ ಯಾರೂ ಬೇಡವೆನ್ನುವುದಿಲ್ಲ. ಆದರೆ ಈ ಕುರಿತು ತಮಗೇ ದ್ವಂದ್ವ  ಇರುವ ಈ ಮಂದಿ
ಕಷ್ಟಪಟ್ಟು ತಮ್ಮ ದುಂಡನೆಯ ಮೌಢ್ಯಕ್ಕೆ ತರ್ಕದ ಚೌಕ ತೊಡಿಸಲು ನೋಡಿ ದಯನೀಯವಾಗಿ
ಸೋಲುತ್ತಾರೆ.

ಉದಾಹರಣೆಗೆ, ಊಟದ ಎಲೆಯ ಸುತ್ತ ನೀರನ್ನು ಚೆಲ್ಲಿ, ಒಂದೆರಡು ತುತ್ತು ಆಹಾರವನ್ನು ಎಲೆಯ
ಹೊರಗೆ ಇಡುವ ಪದ್ಧತಿಯನ್ನು ತೆಗೆದುಕೊಳ್ಳಿ. ಇದು ವೈಜ್ಞಾನಿಕವೋ ಮೂಢಾಚರಣೆಯೋ? ಎರಡೂ ಹೌದು.
ಯಾವ ಕಾಲದಲ್ಲಿ ಜನ ನೆಲದ ಮೇಲೆ ಕುಳಿತು, ತೆಳ್ಳನೆಯ ಎಲೆಗಳ ಮೇಲೆ ಅನ್ನವನ್ನು ಬಡಿಸಿಕೊಂಡು
ಊಟ ಮಾಡುತ್ತಿದ್ದರೋ ಆ ಕಾಲದಲ್ಲಿ ಇದು ಅತ್ಯಂತ ವೈಜ್ಞಾನಿಕವಾದ ವಿಧಾನ. ಇದಕ್ಕೆ ನೆಲದ ಮೇಲೆ
ಓಡಾಡುವ ಕ್ರಿಮಿಕೀಟಗಳು ಎಲೆಯ ಮೇಲೆ ಬರದಂತೆ ತಡೆಯುವ ಉದ್ದೇಶವಿತ್ತು.

ಆದರೆ, ಇಂದು, ಯಾವುದೇ ಕ್ರಿಮಿಕೀಟಗಳಿಲ್ಲದ ಮನೆಗಳಲ್ಲಿ ಫಿನೈಲ್ ಹಾಕಿ ಒರೆಸಿದ ಎತ್ತರದ
ಟೇಬಲ್ ಮೇಲೆ ಅಂಚಿರುವ ತಟ್ಟೆಯಲ್ಲಿ ಊಟ ಮಾಡುವ ಸನ್ನಿವೇಶದಲ್ಲಿಯೂ ಈ ಪದ್ಧತಿಯನ್ನು
ಅನುಸರಿಸಿದರೆ, ಅದು ಮೂಢಾಚರಣೆ. ಏಕೆಂದರೆ ಅದಕ್ಕೆ ಯಾವುದೇ ತಾರ್ಕಿಕ ಉದ್ದೇಶ ಇಲ್ಲ. ಹೀಗೆ
ಅನೇಕ ಆಚರಣೆಗಳು ಆಯಾ ಕಾಲದ ಮಾಹಿತಿ, ಅರಿವು, ಅಗತ್ಯ ಆಧರಿಸಿ ಜಾರಿಗೆ ಬಂದಿರುತ್ತವೆ. ಆಗಿನ
ಕಾಲಕ್ಕೆ ಅವು ಜ್ಞಾನ, ವಿಜ್ಞಾನ. ಆದರೆ ಆ ಸನ್ನಿವೇಶಗಳು ಬದಲಾದ ನಂತರ, ಮಾಹಿತಿ, ಅರಿವು,
ಅಗತ್ಯಗಳು ಬದಲಾದಾಗ ಅವುಗಳ ಸಂಗತತೆಯೂ ಹೊರಟು ಹೋಗುತ್ತದೆ.

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿದ್ವಾಂಸರು ಮಾಡಿರುವುದು ಇದನ್ನೇ.
‘ವೈಜ್ಞಾನಿಕ ಮನೋವೃತ್ತಿ, ಮಾನವೀಯತೆ, ಜಿಜ್ಞಾಸೆ ಮತ್ತು ಸುಧಾರಣಾ ಪ್ರವೃತ್ತಿ
ಬೆಳೆಸಿಕೊಳ್ಳುವುದನ್ನು’ ಸಂವಿಧಾನವು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವನ್ನಾಗಿ
ಮಾಡಿದೆ. ಪ್ರತಿಯೊಂದನ್ನೂ ಪ್ರಶ್ನಿಸಿಯೇ ತಿಳಿದುಕೊಳ್ಳುವ, ಪ್ರಯೋಗಗಳಿಂದ ಸಿದ್ಧವಾದ,
ಲೌಕಿಕದಲ್ಲಿಯೇ ಕಾರ್ಯಕಾರಣ ಸಂಬಂಧವಿರುವ ಸಂಗತಿಗಳನ್ನು ಮಾತ್ರ ಒಪ್ಪಿಕೊಳ್ಳುವ ವೈಜ್ಞಾನಿಕ
ಮನೋವೃತ್ತಿಗೂ ಮೂಢಾಚರಣೆಗಳಿಗೂ ಸಂಬಂಧವೇ ಇಲ್ಲ. ಮೂಢನಂಬಿಕೆಗಳು, ಅವುಗಳನ್ನು ಆಧರಿಸಿದ
ಆಚರಣೆಗಳು ಸಮಾಜದಲ್ಲಿ ಇರುವುದು ಸತ್ಯ. ಆದರೆ ಅವುಗಳನ್ನು ಯಾವುದೇ ನೆಲೆಯಲ್ಲಿ ವೈಜ್ಞಾನಿಕ
ಎಂದು ನಿರೂಪಿಸುವುದು ದುಸ್ಸಾಹಸವೇ ಸರಿ.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಇಟ್ಟಿರುವ ಸಾಹಿತ್ಯ
ಪಠ್ಯದಲ್ಲಿನ ರಾ.ಯ. ಧಾರವಾಡಕರರು ಬರೆದ, ‘ಮೂಢನಂಬಿಕೆಗಳು’ ಎಂಬ ಪ್ರಬಂಧ ಇಂಥ
ವೈಪರೀತ್ಯಕ್ಕೆ ಕಾರಣವಾಗಿದೆ (ಇಲ್ಲಿ ಭಾಷಾ ವಿಜ್ಞಾನಿಯಾದ ಧಾರವಾಡಕರರ ಹೆಸರನ್ನು ಚರ್ಚೆಗೆ
ಎಳೆಯುತ್ತಿಲ್ಲ). ಪ್ರಬಂಧದಲ್ಲಿ ಬರುವ ಕೆಲವು ಸಾಲುಗಳನ್ನು ನೋಡಿ. ‘ಮೂಢನಂಬಿಕೆ ನಮ್ಮ
ಹಿರಿಯರು ನಮಗೆ ಬಳುವಳಿಯಾಗಿ ಕೊಟ್ಟ ದೊಡ್ಡ ಆಸ್ತಿ. ಅದು ನಮ್ಮ ಜೀವನದ ಹಾಸು-ಹೊಕ್ಕು.
ಪ್ರಾಚೀನ ಜ್ಞಾನಸುಧೆ, ಜೀವನದಾಯಿಯಾದ ಕಾಂತಾಸಮ್ಮಿತಿ, ಭಾವ ಜೀವಿಯ ಅಭಯಹಸ್ತ, ಸುಸಂಸ್ಕೃತ
ಹೃದಯದ ಪರಿಪಕ್ವತೆ, ಮಾನವ್ಯದ ಪಕ್ವತೆಯ ಹೆಗ್ಗುರುತು, ಕಾವ್ಯದ ನೆಲೆಗಟ್ಟು, ಇದಕ್ಕೂ
ಹೆಚ್ಚಿಗೆ ಏನು ಬೇಕು?’

ಅವರು ಹೇಳಿರುವುದೆಲ್ಲಾ ಕೇವಲ ಕಾವ್ಯಾತ್ಮಕವಾದಂಥ ಅಭಿಪ್ರಾಯ. ವೈಜ್ಞಾನಿಕ ಅವಲೋಕನ ಅಲ್ಲ.
ಅವರೇ ಇವುಗಳನ್ನು ‘ಮೂಢನಂಬಿಕೆ’ ಎಂದು ಕರೆದಿರುವುದನ್ನು ಗಮನಿಸಿ. ದೊಡ್ಡ ವಿದ್ವಾಂಸರು
ಹೇಳಿದ್ದಾರೆ ಎನ್ನುವ ಕಾರಣಕ್ಕಾಗಿ ಅವುಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಕಲಿಸಿದರೆ ಅದು
ಕೇವಲ ಅಸಂಗತವಾಗುತ್ತದೆ; ಆಯಾ ವಿದ್ವಾಂಸರಿಗೂ ಅವಮಾನವೇ ಸರಿ.

ಚಂದ್ರಶೇಖರ ಪಾಟೀಲರ ಈ ಸಾಲುಗಳನ್ನು ಗಮನಿಸಿ: ‘ಹೋಗಿ ಬರುತೇನಜ್ಜ, ನಿನ್ನ ಪಾದದಾ ಧೂಳಿ
ನನ್ನ ತಲೆಯ ಮೇಲಿರಲಿ, ಆದರದು ಕಣ್ಣಿಗೆ ಬೀಳದಿರಲಿ’. ಅಂದರೆ ಪ್ರಾಚೀನ ಜ್ಞಾನವನ್ನು
ಗೌರವಿಸಬೇಕು, ಹಿರಿಯರನ್ನು ಆದರದಿಂದ ಕಾಣಬೇಕು, ಅವರ ಆಶೀರ್ವಾದ ನಮ್ಮ ಮೇಲಿರಬೇಕು; ಅದರೆ
ಅವರು ಹೇಳಿದ್ದೆಲ್ಲ ವೈಜ್ಞಾನಿಕ ಸತ್ಯವೆಂದು ಪ್ರತಿಪಾದಿಸುವುದು ಮಾತ್ರ ಮೌಢ್ಯ.

ಚೆನ್ನಮ್ಮ ವಿ.ವಿ. ಆಯ್ಕೆ ಮಾಡಿರುವ ಪ್ರಬಂಧವನ್ನು ವಿಜ್ಞಾನದ ವಿದ್ಯಾರ್ಥಿಗಳಿಗಲ್ಲ; ಯಾವ
ವಿದ್ಯಾರ್ಥಿಗಳಿಗೆ ಇಟ್ಟರೂ ಅದು ಘೋರ ಅನ್ಯಾಯವೆ. ಈ ಪ್ರಬಂಧದ ಕವಿ ಪರಿಚಯದಲ್ಲಿ ಹೇಳಿರುವ ಈ
ಮಾತನ್ನು ಗಮನಿಸಿ: ‘ಇವತ್ತು ವಿಜ್ಞಾನ ನಾಗಾಲೋಟದಿಂದ ದಾಪುಗಾಲಿಟ್ಟರೂ ಮನುಷ್ಯ ಮಾತ್ರ
ಮೌಢ್ಯಗಳಿಗೆ ಜೋತುಬಿದ್ದಿದ್ದಾನೆ... ಎಷ್ಟೇ ಓದಿದ್ದರೂ ವಿದ್ವಾಂಸರೆನಿಸಿಕೊಂಡಿದ್ದರೂ
ಮೂಢನಂಬಿಕೆಗಳಲ್ಲಿ ವಿಶ್ವಾಸವಿಟ್ಟಿದ್ದಾರೆ...’ ಎಲ್ಲೋ ಒಂದು ರೀತಿಯಲ್ಲಿ ಇದು
ರಾ.ಯ.ಧಾರವಾಡಕರರ ಬಗ್ಗೆಯೇ ಟಿಪ್ಪಣಿ ಇದ್ದಂತಿದೆ. ಆದರೆ ಸಂಪಾದಕರು ಮುಂದುವರಿದು,
‘...ಆದರೆ, ಪ್ರತೀ ಮೌಢ್ಯದ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ. ಈ ನಿಟ್ಟಿನಲ್ಲಿ ನಾವು
ಯಾರೂ ಆಲೋಚನೆ ಮಾಡುವುದೇ ಇಲ್ಲ’ ಎಂದಿರುವಲ್ಲಿ ತಮ್ಮ ಗೊಂದಲವನ್ನು ಸಾಬೀತುಪಡಿಸುತ್ತಾರೆ.

‘ಪ್ರಜಾವಾಣಿ’ ವರದಿಯ (ಆ.10) ಪ್ರಕಾರ, ವಿಶ್ವವಿದ್ಯಾಲಯದ ಅಭ್ಯಾಸ ಮಂಡಳಿ ಅಧ್ಯಕ್ಷ ಡಾ.
ಗಂಗಾಧರಯ್ಯನವರು ‘ನಾವು ಈ ಪ್ರಬಂಧವನ್ನು ಹೇಗೆ ಅರ್ಥೈಸಿಕೊಳ್ಳುತ್ತೇವೆ ಎನ್ನುವುದರ ಮೇಲೆ
ಅದು ಮೂಢನಂಬಿಕೆ ಪರವೋ ವಿರೋಧವೋ ಎಂಬುದು 

[ms-stf '63461'] ನಮಗೀಗ ವಕೀಲರಲ್ಲ, ವಿಜ್ಞಾನಿಗಳು ಬೇಕು

2016-08-10 Thread HAREESHKUMAR K Agasanapura
http://m.prajavani.net/article/2016_08_11/430078

*ನಮಗೀಗ ವಕೀಲರಲ್ಲ, ವಿಜ್ಞಾನಿಗಳು ಬೇಕು*

11 Aug, 2016

ನಾಗೇಶ್ ಹೆಗಡೆ








ಮಹಾದಾಯಿಯ ನೀರಿಗಾಗಿ ಹುಬ್ಬಳ್ಳಿ- ಧಾರವಾಡದ ಜೋಡಿ ನಗರದಲ್ಲಿ ಹಳೇ ಟಯರ್‌ಗಳು ಹೊತ್ತಿ
ಉರಿಯುತ್ತಿದ್ದಾಗ ಅಲ್ಲೇ ಹೊರವಲಯದಲ್ಲಿ ಕಂಟ್ರಿ ಕ್ಲಬ್‌ನ ಜಲರಂಜನ ಉದ್ಯಾನದಲ್ಲಿ ನೀರು
ಜಲಪಾತದಂತೆ ಭೋರ್ಗರೆದು ಚಿಮ್ಮಿ ಚೆಲ್ಲಾಡುತ್ತಿತ್ತು. ಪೆಪ್ಸಿ ಫ್ಯಾಕ್ಟರಿಯಲ್ಲಿ
ಅಂತರ್ಜಲವನ್ನು ಮೇಲಕ್ಕೆತ್ತಿ ಸಿಹಿಪೇಯದ ಬಾಟಲಿಗಳನ್ನು ತುಂಬಿಸುವ ಕೆಲಸ ನಿರಂತರ
ನಡೆಯುತ್ತಿತ್ತು. ತುಸುದೂರದ ಸಕ್ಕರೆ ಕಾರ್ಖಾನೆಗಳಲ್ಲಿ ಪಂಪ್‌ಗಳು ತೆರಪಿಲ್ಲದೆ
ದುಡಿಯುತ್ತಿದ್ದವು. ಅವೆಲ್ಲಕ್ಕಿಂತ ಮುಖ್ಯ ಸಂಗತಿ ಏನೆಂದರೆ, ಇತ್ತ ಟಿವಿ ಚಾನೆಲ್‌ಗಳಲ್ಲಿ
ನೀರಿನ ವಿಷಯವಾಗಿ ರಾಜಕೀಯ ಕೆಸರೆರಚಾಟ ನಡೆಯುತ್ತಿದ್ದಾಗ ಕನಿಷ್ಠ ಆರು ಕೋಟಿ ಲೀಟರ್ ಕೊಳಚೆ
ನೀರು ಆ ಜೋಡಿ ನಗರದ ಸುತ್ತಲಿನ ಹಳ್ಳಕೊಳ್ಳಗಳ ಚಾನೆಲ್‌ಗಳಲ್ಲಿ ದುರ್ನಾತ ಧಾರೆಯಾಗಿ ದಿನವೂ
ಹರಿಯುತ್ತಿತ್ತು. ಅದರಲ್ಲಿ ಕೆಲಪಾಲು ಉಣಕಲ್ ಕೆರೆಗೂ ಹೋಗಿ, ಕಣ್ಣು ಹಾಯಿಸಿದಷ್ಟು ದೂರಕ್ಕೂ
ಕೆರೆಯಲ್ಲಿ ಜಲಕಳೆ ತುಂಬಿತ್ತು.

ಆಧುನಿಕ ನಾಗರಿಕತೆ ಎಂದರೆ ಜಲಕ್ರೀಡೆ ಬೇಕು, ತಂಪುಪೇಯ ಬೇಕು, ಸಕ್ಕರೆ- ಮದ್ಯಸಾರ ಎಲ್ಲ
ಬೇಕೇಬೇಕು. ಜೊತೆಗೆ ನಲ್ಲಿಯಲ್ಲಿ ನೀರು ಬೇಕು. ಅದನ್ನು ಎಲ್ಲಿಂದಾದರೂ ಹೇಗಾದರೂ ತರಿಸಿ
ಕೊಡುವಂತೆ ಪ್ರಖ್ಯಾತ ವಕೀಲರನ್ನು ಮುಂದಿಟ್ಟುಕೊಂಡು ಹೋರಾಡಬೇಕು. ಹೋರಾಡುವಂತೆ ಜನತೆಗೆ
ಕುಮ್ಮಕ್ಕು ನೀಡಬೇಕು. ಮತ್ತೆ ಅವರನ್ನು ನಿಯಂತ್ರಿಸಲು ಪೊಲೀಸರನ್ನು ಕಳಿಸಬೇಕು.

ನಮೀಬಿಯಾದ ರಾಜಧಾನಿ ವಿಂಢೋಕ್ ನಗರಕ್ಕೆ ಬನ್ನಿ. ಆಫ್ರಿಕಾದ ಕ್ರೂರ ಮರುಭೂಮಿ ಇರುವ ದೇಶ
ನಮೀಬಿಯಾ. ಕುರುಚಲು ಗಿಡಗಂಟಿಗಳ ನಡುವೆ ಹೇರಳ ವನ್ಯಜೀವಿಗಳು, ಅವನ್ನು ನೋಡಲು ಬರುವ
ಪ್ರವಾಸಿಗರೇ ಅಲ್ಲಿನ ಪ್ರಮುಖ ಆದಾಯ ಮೂಲ. ವಿಂಢೋಕ್ ಸುತ್ತಮುತ್ತ ಮಳೆ ತೀರಾ ಕಮ್ಮಿ. ನಮ್ಮ
ಹುಬ್ಬಳ್ಳಿ-ಧಾರವಾಡ ಅಥವಾ ಕೋಲಾರಕ್ಕೆ ಹೋಲಿಸಿದರೆ ಅರ್ಧದಷ್ಟು ಮಳೆ ಅಷ್ಟೆ; ನದಿ ಗಿದಿ ಏನೂ
ಇಲ್ಲ. ಅಲ್ಲಿನ ನೀರಿನ ನೇರ ಮರುಬಳಕೆ ವ್ಯವಸ್ಥೆ ಇಡೀ ಜಗತ್ತಿಗೇ ಮಾದರಿಯಾಗಿದೆ.
ಎಷ್ಟೆಂದರೆ, ಕಳೆದ ಮಾರ್ಚ್ 22ರಂದು ‘ವಿಶ್ವ ಜಲದಿನ’ದ ಸಂದರ್ಭದಲ್ಲಿ ಅಲ್ಲಿ ಜಾಗತಿಕ
ಸಮ್ಮೇಳನ ಏರ್ಪಡಿಸಲಾಗಿತ್ತು.

ಬಳಸಿ ಚೆಲ್ಲಿದ ಕೊಳಚೆ ನೀರನ್ನು ಶುದ್ಧೀಕರಿಸಿ ಮತ್ತೆ ಕುಡಿಯುವ ನೀರಿಗೇ ಸೇರಿಸುವ
ವ್ಯವಸ್ಥೆ ಅಲ್ಲಿದೆ. ಚರಂಡಿಯಲ್ಲಿ ಹರಿಯುವ ಕಕ್ಕಸು ನೀರನ್ನು ಮರುಬಳಕೆ ಮಾಡಲು ಅನೇಕ
ವಿಧಾನಗಳಿವೆ. ಸಾಕಷ್ಟು ಶುದ್ಧಗೊಳಿಸಿ, ವಾಹನ ತೊಳೆಯಲು ಅಥವಾ ಉದ್ಯಾನ ಬೆಳೆಸಲು ಬಳಸಬಹುದು.
ಅಥವಾ ನದಿಯಂತೆ ಹರಿಸಿ, ಕೆರೆಗೆ ತುಂಬಿಸಿ ಕೃಷಿಗೆ, ಕೊಳವೆ ಬಾವಿಗಳಿಗೆ ಮರುಪೂರಣಕ್ಕೆ
ನೀಡಬಹುದು. ‘ನೇರ ಮರುಬಳಕೆ’ ಎಂದರೆ ಅದು ಆದರ್ಶದ ಪರಮೋಚ್ಚ ವಿಧಾನ. ಈ ವಿಧಾನದಲ್ಲಿ
ವಿಂಢೋಕ್ ನಗರ ಜಗತ್ತಿನ ನಂಬರ್ 1 ಸ್ಥಾನಕ್ಕೇರಿದರೆ, ಎರಡನೆಯ ಸ್ಥಾನವೂ ಅಲ್ಲೇ ಪಕ್ಕದ
ದಕ್ಷಿಣ ಆಫ್ರಿಕಾದ ಬ್ಯೂಫೋರ್ಟ್ ಪಟ್ಟಣದಲ್ಲಿದೆ. ನಂತರದ ಸ್ಥಾನ ಸಿಂಗಪೂರ್‌ಗೆ. ಅಲ್ಲಿ
ನೀರಿನ ಬೇಡಿಕೆಯ ಮೂರರಲ್ಲೊಂದು ಪಾಲು ಕಕ್ಕಸು ಚರಂಡಿಯಿಂದಲೇ ಬರುತ್ತದೆ. ಅದು ನಿಜವಾದ
ಮಲ-ಪ್ರಭಾ! ನಂತರದ ಸ್ಥಾನಗಳಲ್ಲಿ ಇಸ್ರೇಲಿನ ಹೈಫಾ, ಕ್ಯಾಲಿಫೋರ್ನಿಯಾದ ಆರೇಂಜ್ ಕೌಂಟಿ
ಇತ್ಯಾದಿ ನೂರಾರಿವೆ.

ಮಹಾದಾಯಿಯ ನೀರು ನಮಗೆ ಏಕೆ ಬೇಕೆಂದರೆ ನಮ್ಮ ಮಲಪ್ರಭಾದ ನೀರು ನಮಗೆ ಸಾಲುತ್ತಿಲ್ಲವಂತೆ.
ಯಾಕೆ ಸಾಲುತ್ತಿಲ್ಲ ಎಂದರೆ, ಸಕ್ಕರೆ ಕಾರ್ಖಾನೆಗಳಿಗಾಗಿ ಕಬ್ಬು ಬೆಳೆಯಲೆಂದು ಭಾರೀ
ಪ್ರಮಾಣದ ನೀರು ಬಳಕೆಯಾಗುತ್ತಿದೆ. ಬೈಲಹೊಂಗಲದ ಸುತ್ತಮುತ್ತ ಕಬ್ಬಿನ ಹೊಲಗಳೇ ಕಾಣುತ್ತವೆ.
ಅಲ್ಲಿನ ರೈತರಿಗೆ ನೀರಿನ ಯುಕ್ತ ಬಳಕೆಯ ವಿಧಾನ ಕಲಿಸಿದ್ದೇವೆಯೆ? ಒಂದು ಕಿಲೊ ಸಕ್ಕರೆ
ತಯಾರಿಸಲು ನಮ್ಮಲ್ಲಿ 2,450 ಲೀಟರ್ ನೀರು ವೆಚ್ಚವಾಗುತ್ತಿದೆ. ವಿಶ್ವ ಜಲಸಂಸ್ಥೆ ಪ್ರಕಾರ
1,500 ಲೀಟರ್ ನೀರು ಧಾರಾಳ ಸಾಕು. ಪ್ರತಿ ಕಿಲೊ ಸಕ್ಕರೆಗೆ ನಾವು ಸಾವಿರ ಲೀಟರ್ ಹೆಚ್ಚುವರಿ
ನೀರನ್ನು ಬಳಸಿ ಆಕಾಶಕ್ಕೆ ತೂರುತ್ತಿದ್ದೇವೆ.

ಲಖ್ನೋದಲ್ಲಿರುವ ಭಾರತೀಯ ಕಬ್ಬು ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ನೀರಿನ ಉಳಿತಾಯದ
ಎಷ್ಟೊಂದು ಕ್ರಮಗಳನ್ನು ಸೂಚಿಸಿದ್ದಾರೆ. ಲೇಸರ್ ಮೀಟರ್ ಬಳಸಿ ನೆಲ ಸಪಾಟು ಮಾಡಿ, ಆಮೇಲೆ
ಕಬ್ಬಿನ ಪಾತಿ ಮಾಡಿ. ಎಲ್ಲ ಪಾತಿಗಳಿಗೂ ಒಮ್ಮೆಗೇ ನೀರು ಹರಿಸುವ ಬದಲು ಪಾತಿ ಬಿಟ್ಟು
ಪಾತಿಗೆ ಪಾಳಿಯಲ್ಲಿ ನೀರುಣಿಸಿ. ನೀರು ಆವಿಯಾಗದಂತೆ ದಟ್ಟ ಮುಚ್ಚಿಗೆ ಮಾಡಿ; ಹನಿ ನೀರಾವರಿ
ವ್ಯವಸ್ಥೆ ಮಾಡಿಕೊಳ್ಳಿ; ನೆನಪಿಡಿ- ಕಮ್ಮಿ ನೀರಿನಲ್ಲಿ ಬೆಳೆದ ಕಬ್ಬಿನಲ್ಲಿ ಸಕ್ಕರೆ ಅಂಶ
ಹೆಚ್ಚಿರುತ್ತದೆ. ಶೇ 30ರಷ್ಟು ಹೆಚ್ಚಿನ ಆದಾಯ ಸಿಗುತ್ತದೆ. ನಮ್ಮ ರೈತರಿಗೆ ಇದನ್ನು
ಮನದಟ್ಟು ಮಾಡಿದ್ದೇವೆಯೆ? ಕಬ್ಬಿನಲ್ಲಿ ಸಕ್ಕರೆ ಅಂಶ ಎಷ್ಟಿದೆಯೆಂದು ನೋಡಿ ಬೆಲೆ ನಿಗದಿ
ಮಾಡುವ ವ್ಯವಸ್ಥೆ ನಮ್ಮ ಕಾರ್ಖಾನೆಗಳಲ್ಲಿ ಇದೆಯೆ? ರೈತರ ನೀರಿನ ಬಳಕೆ ವೈಖರಿ ನೋಡಿ ಸಾಲ
ನೀಡುವ ವ್ಯವಸ್ಥೆ ಬ್ಯಾಂಕುಗಳಲ್ಲಿದೆಯೆ?

ಮಲಪ್ರಭಾ ಜಲಾಶಯ ತುಂಬುತ್ತಲೇ ಇಲ್ಲ ಎಂದು ಮಳೆರಾಯನನ್ನು ಶಪಿಸಿದ್ದೇವೆ. ಆದರೆ ನೈಜ ಸಂಗತಿ
ಬೇರೆಯದೇ ಇದೆ. ಜಲಾಶಯದ ಕಡೆ ನೀರನ್ನು ಸಾಗಿಸಿ ತರಬೇಕಾದ ಎಲ್ಲ ಹಳ್ಳಕೊಳ್ಳಗಳ ಸುತ್ತ ಕಳೆದ
30 ವರ್ಷಗಳಲ್ಲಿ ಪಂಪ್‌ಸೆಟ್ ಮತ್ತು ಕೊಳವೆ ಬಾವಿಗಳ ಸಂಖ್ಯೆ ಅಪಾರವಾಗಿ ಹೆಚ್ಚಾಗಿದೆ.
ಅಲ್ಲೆಲ್ಲ ನೀರಿನ ಮಿತ ಬಳಕೆ ಸಾಧ್ಯವಿತ್ತು. ಕಡಿಮೆ ನೀರನ್ನು ಬಳಸಿ ಜಾಸ್ತಿ ಫಸಲು ತೆಗೆಯುವ
ಎಷ್ಟೊಂದು ಸುಧಾರಿತ ವಿಧಾನಗಳ ಬಗ್ಗೆ, ಬದಲೀ ಬೆಳೆಗಳ ಬಗ್ಗೆ ಹೈದರಾಬಾದಿನಲ್ಲಿರುವ
ಇಕ್ರಿಸ್ಯಾಟ್ ಎಂಬ ಅಮೆರಿಕನ್ ಸಂಸ್ಥೆ ರೈತರಿಗಾಗಿ ಜ್ಞಾನವನ್ನು ಇಂಗ್ಲಿಷಿನಲ್ಲಿ
ಸೃಷ್ಟಿಸಿದೆ.

ಅವೆಲ್ಲ ರೈತ ಮಕ್ಕಳನ್ನು ತಲುಪಬೇಕಿತ್ತು. ಶಾಲಾ ಪಠ್ಯಗಳಲ್ಲಂತೂ ಅದರ ಬಗ್ಗೆ ಚಕಾರ ಇಲ್ಲ.
ಬೀಜ, ಗೊಬ್ಬರ ಕಂಪನಿಗಳು ಹಳ್ಳಿಗಳಲ್ಲಿ ಬಾನೆತ್ತರ ಜಾಹೀರಾತಿಗೆ ಸುರಿಯುವ ಹಣದ ಒಂದು
ಪಾಲನ್ನು ರೈತ ಮಕ್ಕಳ ಮೇಲೆ ಸುರಿಸಬಹುದಿತ್ತು. ನೀರಿನ ಉಳಿತಾಯದ ಚಂದದ ಪುಸ್ತಕಗಳನ್ನು ನೀಡಿ
ಎಪಿಎಮ್‌ಸಿಗಳು ಮಕ್ಕಳಿಗೆ ರಸಪ್ರಶ್ನೆ ಹಬ್ಬ ಮಾಡಬಹುದಿತ್ತು. ನೀರಿನ ತುಟಾಗ್ರತೆಯಲ್ಲೂ
ಸಮೃದ್ಧ ಬೆಳೆ ಬೆಳೆದ ರೈತನನ್ನು ಗುರುತಿಸಿ ಮೆರೆಸಬಹುದಿತ್ತು.

ಸಮುದ್ರಕ್ಕೂ ಮಹಾದಾಯಿ ನೀರು ಬೇಕು ಎಂದಾಗ ನಾವೆಲ್ಲ ನಕ್ಕಿದ್ದೇವೆ. 

[ms-stf '62709'] ವಿಜ್ಞಾನ ಲೋಕ Magazine ಕುರಿತು

2016-07-29 Thread HAREESHKUMAR K Agasanapura
ಆತ್ಮೀಯ ವಿಜ್ಞಾನ ಆಸಕ್ತರೇ , ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (KSTA) ಯು
ವಿಜ್ಞಾನ ಲೋಕ ಎಂಬ ದ್ವೈ ಮಾಸಿಕ ಪ್ರಕಟ ಮಾಡುತ್ತಿದೆ. ಈಗ ವಿಶೇಸ ದಶಮಾನೋತ್ಸವ ಸಂಚಿಕೆ
ಪ್ರಕಟ ಮಾಡಿದೆ. ಉತ್ತಮ ಲೇಖನ ಇವೆ. ಹಿಂದಿನ ಸಂಚಿಕೆ ಅಕಾಡೆಮಿ ಜಾಲತಾಣ   ದಲ್ಲಿ ಲಭ್ಯ.
ಒಮ್ಮೆ ಓದಿರಿ.

Hareeshkumar K
GHS HUSKURU
MALAVALLI TQ
MANDYA DT
MOB 9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '62439'] ವಿಜ್ಞಾನ ಸಾಕ್ಷರತೆಗೆ ಸಂವಹನದ್ದೇ ಕೊರತೆ | Mobile Site

2016-07-25 Thread HAREESHKUMAR K Agasanapura
http://m.prajavani.net/article/2016_07_25/425956

*ವಿಜ್ಞಾನ ಸಾಕ್ಷರತೆಗೆ ಸಂವಹನದ್ದೇ ಕೊರತೆ*

25 Jul, 2016

ಬಿಂಡಿಗನವಿಲೆ ಭಗವಾನ್








ವಿಜ್ಞಾನ ಜನವಿಜ್ಞಾನವಾಗಬೇಕಾದರೆ ವಿಜ್ಞಾನಿಗಳು  ದಂತಗೋಪುರದಿಂದ ಕೆಳಗಿಳಿದು ವಿಜ್ಞಾನ
ಸಾಕ್ಷರತೆ ಹೆಚ್ಚಿಸುವ ಕೈಂಕರ್ಯದಲ್ಲಿ  ತೊಡಗಬೇಕು

‘ದೇವರಿಗೂ ದೇವಕಣಕ್ಕೂ ಸಂಬಂಧವಿಲ್ಲ’ (ಪ್ರ.ವಾ., ಜುಲೈ 21) ವರದಿ ಗಮನಿಸಿದೆ. ‘ಹಿಗ್ಸ್
ಬೋಸಾನ್’ ಕಂಡುಹಿಡಿದು ನಾಲ್ಕು ವರ್ಷಗಳು ಸಂದರೂ ವಿಜ್ಞಾನ ಶಿಕ್ಷಕರಿಗೆ ಬಿ.ಎಸ್. ಶೈಲಜಾ ಈ
ಸ್ಪಷ್ಟೀಕರಣ ನೀಡಬೇಕಾದುದೇ ವಿಪರ್ಯಾಸ. ಸ್ವತಃ ಹಿಗ್ಸ್ ಕೂಡ ‘ದೇವಕಣ’ ಎಂಬ ನಾಮಕರಣ ಅಗಮ್ಯ,
ಬೇಡ ಎಂದಿದ್ದರು.

  ‘ಹಿಗ್ಸ್ ಬೋಸಾನ್’ ಭೌತದ್ರವ್ಯವನ್ನು ಒಟ್ಟುಗೂಡಿಸುವ ‘ಮರವಜ್ರ’! ವಿಶ್ವದ ರಚನೆಯ ಅತಿ
ಪ್ರಮುಖ ಮೂಲಭೂತ ಕಣಗಳಲ್ಲಿ ಒಂದು.
ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಳು, ಆವಿಷ್ಕಾರಗಳು ನಿರಂತರ. ಆಗಿಂದಾಗಿನ ಬೌದ್ಧಿಕ
ಸಾಧನೆಗಳು ಮತ್ತು ಆ ಬಗೆಗಿನ ವರದಿ,

ಮಾಹಿತಿಗಳು ಇಂಗ್ಲಿಷ್ ಭಾಷೆಯ ಮೂಲಕವೇ ನಮಗೆ ಪೂರೈಕೆ ಆಗಬೇಕಾದ ಅನಿವಾರ್ಯ ತಿಳಿದಿದ್ದೆ.
ಪಠ್ಯದಲ್ಲಿ ‘ದೇವಕಣ’ ಎಂಬ ಉಲ್ಲೇಖ ಕಂಡುಹಿಡಿಯಲಾಗಿರುವ ಕಣ ನಿಜಕ್ಕೂ  ದೇವರಿಗೆ
ಸಂಬಂಧಿಸಿದ್ದೇ ಎಂದು ಪ್ರಶ್ನಿಸುವ ಮಟ್ಟಿಗೆ ಗೊಂದಲ ಸೃಷ್ಟಿಸಿದೆ.

ಯಾವುದೇ ವಿಷಯವನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವಾಗ ‘ಪದಕ್ಕೆ ಪದ’
ಎನ್ನುವಂತೆ ಯಾಂತ್ರಿಕತೆಗೆ ಸೀಮಿತಗೊಂಡರೆ ಎಡವಟ್ಟಾಗುತ್ತದೆ. ‘ನನ್ನ ಹೊಟ್ಟೆ ಉರಿಸಬೇಡ’
ಎನ್ನುವುದು ‘ಡೋಂಟ್ ಮೇಕ್ ಮೈ ಸ್ಟೊಮಕ್ ಬರ್ನ್’ ಎನ್ನುವಂತಾದರೆ?!

ಇಂಗ್ಲಿಷಿನಲ್ಲೇ ಬೋಧಿಸುವ ಹಂಬಲಕ್ಕೆ ಬಿದ್ದ ವಿಜ್ಞಾನ ಶಿಕ್ಷಕರೊಬ್ಬರು ಪ್ರಯೋಗಾಲಯದಲ್ಲಿ
ಪ್ರಾತ್ಯಕ್ಷಿಕೆ ನೀಡುತ್ತಿದ್ದರು. ನೀರನ್ನು ಸ್ವಲ್ಪ ಕಾಯಿಸಿ, ಹೆಚ್ಚು ಕಾಯಿಸಿ ಎನ್ನಲು
ಹೀಟ್ ಇಟ್, ಹೀಟ್ ಇಟ್ ಎಂದರಂತೆ!  ವಿಜ್ಞಾನ ಸಾಹಿತಿ ಪ್ರೊ.ಜೆ.ಆರ್.ಲಕ್ಷ್ಮಣ ರಾವ್
‘ಬರವಣಿಗೆಯ ವ್ಯಾಧಿ’ ಪುಸ್ತಕದಲ್ಲಿ ಭಾಷಾಂತರದಲ್ಲಿ ಆಗಬಹುದಾದ ನ್ಯೂನತೆಗಳನ್ನು
ಸ್ವಾರಸ್ಯಕರವಾಗಿ ಉದಾಹರಿಸಿದ್ದಾರೆ.

ಮಕ್ಕಳು ಕೇಳುವ ಪ್ರಶ್ನೆಗಳು ಶಿಕ್ಷಕರ ಕಲಿಕಾಸಕ್ತಿಯನ್ನು ಕೂಡ ಹೆಚ್ಚಿಸುವಂತಿರುತ್ತವೆ.
ಸಿಹಿ ನೀರಿನ ಅಷ್ಟೊಂದು ನದಿಗಳು ಬಂದು ಸೇರಿದರೂ ಸಾಗರದ ನೀರೇಕೆ ಉಪ್ಪು? ಬಿಸಿ ನೀರು
ಸಿಂಪಡಿಸಿದರೂ ಬೆಂಕಿ ಶಮನವಾದೀತು ಹೇಗೆ? ಮುಳುಗುವ ಸೂರ್ಯ ರಶ್ಮಿಗಳು ಕಣ್ಣು
ಕುಕ್ಕವೇಕೆ?-ಹೀಗೆ ಒಂದೇ? ಎರಡೇ? ಶಿಕ್ಷಕರು ಅವರ ಜ್ಞಾನತೃಷೆ ತಣಿಸುವಷ್ಟು ತಮ್ಮ ಸಾಮರ್ಥ್ಯ
ವೃದ್ಧಿಸಿಕೊಳ್ಳುತ್ತಿರಬೇಕು.

ನಾವು ನಮ್ಮ ಸಂದರ್ಭಕ್ಕನುಗುಣವಾಗಿ ವಿಷಯ ಕರಗತವಾಗಿಸಿಕೊಳ್ಳುವುದು ಮೊದಲ ಹಂತ. ಎರಡನೆಯದು
ಸಂವಹನ ಕ್ರಿಯೆ. ಅಂದರೆ
ಜನಸಾಮಾನ್ಯರಿಗೂ ನಿಲುಕುವಂತೆ ಸಾಹಿತ್ಯ ರಚನೆ.  ಕನ್ನಡದಲ್ಲೇ ಆಲೋಚಿಸಿ ಕನ್ನಡದಲ್ಲಿ
ಬರೆದರೆ ಯಾವುದೇ ತಬ್ಬಿಬ್ಬುಗಳಿಗೆ ಆಸ್ಪದವಿರದು.

ಅರ್ಥವಾಗುವಂತೆ ಬರೆಯಲಾರೆ ಅಂತ ಯಾರಾದರೂ ಉದ್ಗರಿಸಿದರೆ ತನಗೇನೆ ಅರ್ಥವಾಗಿಲ್ಲ ಎಂದೇ
ಆದೀತು! ಎಂಥದ್ದೆ ಜಟಿಲವೂ ತಾಂತ್ರಿಕವೂ ಆದ ಅಂಶಗಳನ್ನು ಕನ್ನಡದಲ್ಲಿ ನಿವೇದಿಸಲು ಸಾಧ್ಯ.
ಮುಖ್ಯವಾಗಿ ಬೇಕಿರುವುದು ಆಸ್ಥೆ.

ಅದರಲ್ಲೂ ವಿಜ್ಞಾನ ಪ್ರಸರಣ ಅಭಿಯಾನದಲ್ಲಂತೂ ತಿಳಿಸುವ ಹಾಗೂ ತಿಳಿಯುವವರ ಆಸಕ್ತಿ,
ಕುತೂಹಲವೇ ನಿರ್ಣಾಯಕ.  ಆಕರ್ಷಕ ಬರವಣಿಗೆಯ ಶೈಲಿ, ಸರಳದಿಂದ ಸಂಕೀರ್ಣಕ್ಕೆ ಅರಿವಿನ ಯಾನ
ಅತ್ಯಂತ ಫಲಪ್ರದ.

ಇಂಗ್ಲಿಷಿನಲ್ಲಿ ‘ಗಾಡ್ ಓನ್ಲಿ ನೋಸ್’, ‘ಗಾಡ್ ಇಸ್ ಗ್ರೇಟ್’ , ‘ಲಿವ್ ಇಟ್ ಟು ಗಾಡ್’
ಪದೋಕ್ತಿಗಳುಂಟು. ಅವಕ್ಕೆ ಅನುಕ್ರಮವಾಗಿ ‘ಯಾರಿಗೂ ಗೊತ್ತಿಲ್ಲ’, ‘ಯಾರೂ ದೊಡ್ಡವರಲ್ಲ’,
‘ಅದರಷ್ಟಕ್ಕೆ ಬಿಡು’ ಎಂದರ್ಥವೆ ಹೊರತು ಅವು ‘ದೇವರ’ನ್ನು ಕುರಿತದ್ದಲ್ಲ. ‘ವಿಜ್ಞಾನಂ
ಬ್ರಹ್ಮೇತಿ ವ್ಯಜಾನಾತ್’- ವಿಜ್ಞಾನವನ್ನು ಬ್ರಹ್ಮನೆಂದು ಭಾವಿಸು ಎಂದೂ ಹೇಳುವುದಿದೆ.
ಬ್ರಹ್ಮ ಸೃಷ್ಟಿಕರ್ತ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಈ ಉಕ್ತಿ.

1960ರಲ್ಲಿ ಪೀಟರ್ ಹಿಗ್ಸ್ ಅವರಿಗೆ ಅಂಥದ್ದೊಂದು ಗುಮಾನಿಯಿತ್ತು. ಕ್ವಾರ್ಕ್,
ಎಲೆಕ್ಟ್ರಾನ್‌ಗಳಂಥ ಕಣಗಳಿಗೆ ದ್ರವ್ಯರಾಶಿಯುಂಟು. ಆದರೆ ಬೆಳಕು ಹೊತ್ತು ಸಾಗುವ
ಪ್ರೋಟಾನುಗಳಿಗೇಕಿಲ್ಲ ಎಂದು. ವಿಶ್ವ ಅಥವಾ ಬ್ರಹ್ಮಾಂಡ ಕಾಂತಕ್ಷೇತ್ರದಂತೆ ಅಗೋಚರ
ಕ್ಷೇತ್ರದಲ್ಲಿ ಮಿಂದಿದೆ.

ಎಲ್ಲ ಕಣಗಳಿಗೂ ‘ಹಿಗ್ಸ್ ಕ್ಷೇತ್ರ’ ಎಂಬ ಈ ಕ್ಷೇತ್ರದ ಅನುಭವ ಕೊಂಚಮಟ್ಟಿಗೆ ಆಗುತ್ತದೆ.
ಒಂದು ಕಣ ‘ಹಿಗ್ಸ್ ಕ್ಷೇತ್ರ’ದ ಮೂಲಕ ಸಾಗುವಾಗ ಗಮನಾರ್ಹವಾಗಿ ಪ್ರಭಾವಕ್ಕೊಳಗಾದರೆ ಅದು
ದ್ರವ್ಯರಾಶಿ ಹೊಂದಿರಲೇಬೇಕು. ವಾಸ್ತವವಾಗಿ 1924ರಲ್ಲೇ ಭಾರತದ ಭೌತಶಾಸ್ತ್ರಜ್ಞ
ಸತ್ಯೇಂದ್ರನಾಥ್ ಬೋಸ್, ಐನ್‌ಸ್ಟೀನ್‌ರ ಜೊತೆಗೂಡಿ ನಡೆಸಿದ ಈ ನಿಟ್ಟಿನ ಸಂಶೋಧನೆಗಳದ್ದು
ಇದೇ ಷರಾ.

ಅಂತೂ  2012ರ ಜುಲೈ 4ರಂದು ಬೃಹತ್ ಪ್ರಯೋಗದಿಂದ ಬೃಹತ್ ಫಲ. ಜಗತ್ತಿನ ನಾನಾ ದೇಶದ
ವಿಜ್ಞಾನಿಗಳು ಕೈ ಜೋಡಿಸಿದ್ದ ಸ್ವಿಸ್-ಫ್ರೆಂಚ್ ಗಡಿ ಪ್ರದೇಶದಲ್ಲಿ ನಿರ್ಮಿಸಿದ
ಸುರಂಗದಲ್ಲಿ ಬೆಳಕಿನದರ  ಸಮೀಪದ ವೇಗದಲ್ಲಿ ಪರಮಾಣುಗಳನ್ನು ಪರಸ್ಪರ ತಾಡಿಸಿದ ಮಹಾಯಜ್ಞ.
ಅಲ್ಲಿ ವಿಶ್ವಸೃಷ್ಟಿಯ ಆರಂಭದ ಕ್ಷಣಗಳನ್ನೇ ಸೃಜಿಸಲಾಗಿತ್ತೆನ್ನಿ.

ದ್ರವಗಳಿಗೆ ಮೇಲ್ಮುಖ ಒತ್ತಡ ಇರುವುದರಿಂದ ಅವು ಅವಕ್ಕೂ ಕಡಿಮೆ ಸಾಂದ್ರತೆಯುಳ್ಳ
ವಸ್ತುಗಳನ್ನು ತೇಲಿಸುತ್ತವೆ. ಈ ವಾಸ್ತವ ಗ್ರಹಿಸದ್ದರ ಫಲಶ್ರುತಿಯೇ ಮೂರ್ತಿ ಹಾಲು
ಕುಡಿಯುವುದು ಎನ್ನುವ ಭ್ರಮೆ! ತೆಂಗಿನ ಮರದ ಬುಡಕ್ಕೆ ಸುರಿದ ನೀರು ಮೇಲೇರಿ ಎಳನೀರಾಗಿದ್ದು
ಅಥವಾ ದೀಪದ ಎಣ್ಣೆ ಬತ್ತಿಯ ತುದಿಗೇರಿ  ಉರಿದಿದ್ದು ಪವಾಡವೆನ್ನಿಸುತ್ತದೆ.

ನಿಸರ್ಗದ ಯಾವುದೇ ವಿದ್ಯಮಾನ ಪವಾಡವಲ್ಲ. ಪ್ರತಿಯೊಂದಕ್ಕೂ ಸಮಜಾಯಿಷಿ ಲಭ್ಯ. ಮುಖ್ಯ
ಗ್ರಹಿಸಬೇಕಷ್ಟೆ. ನಮ್ಮ ಚಿಕ್ಕಪ್ಪ  ಸುಲಭವಾಗಿ ಹತ್ತಿ ಉರಿಯುವ ಮಿಥೇನ್‌ನಂಥ ಜೌಗು ಅನಿಲ
(ಮಾರ್ಶ್ ಅನಿಲ) ನೋಡಿ ‘ಕೊಳ್ಳಿ ದೆವ್ವ’ ಎಂದು ಜನ ಬೆದರುತ್ತಾರೆ ಎಂದು
ವಿವರಿಸುತ್ತಿದ್ದುದು ಇಂದಿಗೂ ಕಿವಿಯಲ್ಲಿ ರಿಂಗಣಿಸುತ್ತಿದೆ. ಕಬ್ಬಿಣದ ಕಡಲೆ, ತಲೆ ಬೇನೆ
ಎಂದೆಲ್ಲ ಕರೆಯಿಸಿಕೊಳ್ಳುವ ಗಣಿತಕ್ಕೆ ವಿಜ್ಞಾನಗಳ ರಾಜ ಎಂಬ ಹೆಸರಿದೆ.

ವಿಜ್ಞಾನದ ಬೆನ್ನೆಲುಬೇ ಆದ ಗಣಿತ ಮೊಗೆದಂತೆ ರಮಣೀಯವೆ ಹೌದು. ಕನ್ನಡದ ಸಂದರ್ಭದಲ್ಲಿ
‘ವೃತ್ತವೆಂದರೆ ಸ್ಥಿರ ಬಿಂದುವಿನಿಂದ 

Re: [ms-stf '62302']

2016-07-23 Thread HAREESHKUMAR K Agasanapura
Very fine sir, please continue your contributions

Hareeshkumar K
GHS HUSKURU
MALAVALLI TQ
MANDYA DT
MOB 9880328224
On Jul 24, 2016 3:48 AM, "Nagaraju Netkal"  wrote:

> ಆತ್ಮೀಯ ಎಸ್.ಟಿ.ಎಫ್ ಸ್ನೇಹಿತರೆ , 10 ನೇತರಗತಿ ವಿಜ್ಞಾನ ವಿಷಯದ ಎಲ್ಲಾ 24
> ಅಧ್ಯಾಯಗಳಿಗೆ ಪಿಪಿಟಿ ಸಿದ್ದಪಡಿಸುವ ನನ್ನ ಕನಸು ಇಂದು ನನಸಾಗಿದೆ.ಈ ಪಿಪಿಟಿಗಳನ್ನು pdf
> ಹಾಗೂ ppsx ಮಾದರಿಯಲ್ಲಿ ಸಿದ್ಧಪಡಿಸಿ ಗ್ರೂಪ್ಗೆ upload ಮಾಡಿರುತ್ತೇನೆ.ತಮ್ಮ ಶಾಲೆಯಲ್ಲಿ
> projector ಬಳಸಿ ಬೋಧನೆ ಮಾಡುವ ಶಿಕ್ಷಕರು ppsx format PPT ಗಳನ್ನು download
> ಮಾಡಿಕೊಂಡು ಉಪಯೋಗಿಸಿ ,ಏಕೆಂದರೆ ,ಈ ಮಾದರಿಯ pptಗಳಲ್ಲಿ animations work
> ಅಗುತ್ತವೆ.ಆಂಡ್ರಾಯಿಡ್ phoneಗಳಲ್ಲಿ ನೋಡಬಯಸುವ ಶಿಕ್ಷಕರು pdf ಮಾದರಿ ppt ಗಳನ್ನು
> download ಮಾಡಿಕೊಳ್ಳಿ.ಈಗಾಗಲೇ ಈ ಗ್ರೂಪ್ನಲ್ಲಿರುವ ಕೆಲವು ಸ್ನೇಹಿತರು ಪಿಪಿಟಿಗಳನ್ನು
> ತಯಾರಿಸಿ ಗ್ರೂಪ್ನಲ್ಲಿ ಹಾಕಿರುತ್ತಾರೆ.ಇದಕ್ಕೂ ಮೊದಲು ಕೆಲವು ಅಧ್ಯಾಯಗಳಿಗೆ ನಾನೇ ಪಿಪಿಟಿ
> ಸಿದ್ಧಪಡಿಸಿ ಅಪ್ಲೋಡ್ ಮಾಡಿದ್ದೆ.ಸ್ನೇಹಿತರೆ,ಇವುಗಳಲ್ಲಿ ನಿಮಗೆ ಯಾವುದು ಇಷ್ಟವೋ ಅದನ್ನು
> down load ಮಾಡಿಕೊಂಡು ಉಪಯೋಗಿಸಿ.ನನ್ನ ಈ ಸಾಧನೆಗೆ ಸ್ಪೂರ್ತಿಯಾದವರು I T for Change
> team & ALL STF Friends ,Thank u all.
> ಆಕರ ಗ್ರಂಥಗಳು
> stf  friends& ppts ,Internet,10th science book
> ನಿಮ್ಮಗಳ ಅನಿಸಿಕೆ ಅಭಿಪ್ರಾಯಗಳಿಗೆ ನಾನು ಕಾಯುತ್ತಿರುತ್ತೇನೆ.ಏಕೆಂದರೆ ನಿಮ್ಮಗಳ ಸಲಹೆ
> ,ಪ್ರಶಂಸೆ,ವಿಮಶೆ೵ಯೇ ನನಗೆ ಶ್ರೀರಕ್ಷೆ.
> ಇಂತಿ ನಿಮ್ಮ ಎಸ್ ಟಿ ಎಫ್ ಸ್ನೇಹಿತ
> ನಾಗರಾಜು ವಿಜ್ಞಾನ ಶಿಕ್ಷಕರು
> ಸ||ಪ್ರೌಢಶಾಲೆ ಕೂಳಗೆರೆ ಗೇಟ್
> ಮದ್ದೂರು ತಾ|| ಮಂಡ್ಯ ಜಿಲ್ಲೆ
> 9964248656
>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '62249'] ಗೋಧಿಯ ಕುರಿತು ಗೊಂದಲ ಬೇಕಿಲ್ಲ

2016-07-23 Thread HAREESHKUMAR K Agasanapura
http://www.ejnana.com/2016/07/blog-post_22.html?m=1

*ಗೋಧಿಯ ಕುರಿತು ಗೊಂದಲ ಬೇಕಿಲ್ಲ*

*ಡಾ. ಶರಣಬಸವೇಶ್ವರ ಅಂಗಡಿ*



ಗೆಳೆಯ ಗೋವಿಂದ ಒಮ್ಮೆ ತಮಾಷೆಗೆ 'ಗೋಧಿ ಅದೇ ವ್ಹೀಟ್‌ನಲ್ಲಿ ಹೀಟ್ ಇದೆ, ರೈಸ್‌ನಲ್ಲಿ ಐಸ್
ಇದೆ, ಅದಕ್ಕೇ ಚಪಾತಿ ತಿಂದರೆ ಉಷ್ಣ, ಅನ್ನವುಂಡರೆ ತಂಪು' ಅಂದಿದ್ದ. ಮೊನ್ನೆ, ತಮ್ಮನ್ನು
ಯೋಗಗುರು ಎಂದು ಕರೆದುಕೊಳ್ಳುವ ಅನಂತ್‌ಜಿ ಎನ್ನುವ ವ್ಯಕ್ತಿ ಗೋಧಿಯನ್ನು
ನಿಂದಿಸುವುದಲ್ಲದೇ, ಅಕ್ಕಿಯನ್ನು ಅನಿಷ್ಟವೆಂದದ್ದು, ದೇಶದ ಕೃಷಿಯನ್ನು, ಹಸಿರು
ಕ್ರಾಂತಿಯನ್ನು ನಿರಾಧಾರವಾಗಿ, ಅವೈಜ್ಞಾನಿಕವಾಗಿ ಹಿಗ್ಗಾಮುಗ್ಗಾ ಟೀಕಿಸಿದ್ದನ್ನು ಕೇಳಿದಾಗ
ಗೋವಿಂದನ ಹಳೆಯ ಜೋಕ್ ನೆನಪಾಯ್ತು. ಹಿಂದೊಮ್ಮೆ ಇದೇ ಅನಂತ್‌ಜಿ ಗೋಧಿಯನ್ನು ದುಷ್ಟ
ಧಾನ್ಯವೆಂದಿದ್ದು ಸುದ್ದಿಯಾಗಿತ್ತು. ಅದಕ್ಕೆ(ಅವರೇ ಹೇಳಿದ್ದು) ಬಂದ ಸಾವಿರಾರು ಫೋನ್
ಕರೆಗಳಿಗೆ, ಮತ್ತು ಮಿಸ್ಡ್‌ಕಾಲ್‌ಗಳಿಗೆ ಪ್ರತಿಕ್ರಿಯೆಯಾಗಿ ಸುಮಾರು ಅರ್ಧಗಂಟೆಯ ಒಂದು
ಆಡಿಯೋ ಕ್ಲಿಪ್ ತೇಲಿಬಿಟ್ಟಿದ್ದಾರೆ. ಅದನ್ನು ವಾಟ್ಸಾಪ್‌ನಲ್ಲಿ ಕೇಳುವ ಅವಕಾಶ ನನಗೂ
ಸಿಕ್ಕಿತು. ಅವರ ಆ 'ಜ್ಞಾನ'ದಲ್ಲಿ ಹೇರಳ ತಪ್ಪುಗಳಿವೆ. ಅದು ಜನಸಾಮಾನ್ಯರಿಗೆ ತಿಳಿದಿರಲಿ
ಎಂದು ಈ ಲೇಖನದ ಉದ್ದೇಶ.

ಮೊದಲನೆಯದಾಗಿ ವೇದ ಕಾಲದಲ್ಲಿ, 'ಪುರಾಣಗಳಲ್ಲಿ ಗೋಧಿಯನ್ನು ಗೋಧುಮ ಎಂದು
ಉಲ್ಲೇಖಿಸಿದೆಯಲ್ಲ?' ಎನ್ನುವ ಓದುಗರೊಬ್ಬರ ಪ್ರಶ್ನೆಗೆ ಉತ್ತರವಾಗಿ ತಾನು ಹಳಿದದ್ದು
ಪುರಾತನ ಕಾಲದ, ದೇಶೀಯ ಗೋಧಿ ಅಥವಾ ಗೋಧುಮವನ್ನಲ್ಲ. ಅದು ಒಳ್ಳೆಯದೇ. ಅದು ಗೋಧಿಯಲ್ಲ ಜವೆ
ಗೋಧಿ. ತಾನು ವಿರೋಧಿಸುವುದು ಹೊರದೇಶಗಳಿಂದ ಬಂದಿರುವ ಕುಲಾಂತರಿ ಗೋಧಿಯನ್ನು ಎನ್ನುತ್ತಾರೆ.

ವಾಸ್ತವಾಂಶ ಹೀಗಿದೆ: ಜವೆಗೋಧಿ ಗೋಧಿಯಲ್ಲ. ಅದು ಬಾರ್ಲಿ. ದೇಶೀಯ ತಳಿ ಎಂಬುದೂ ತಪ್ಪು.
ಗೋಧಿಯ ಉಗಮಸ್ಥಾನ ಭಾರತ ಅಲ್ಲ. ಆದ್ದರಿಂದ ದೇಶೀಯ ತಳಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಟರ್ಕಿ, ಲೆಬನಾನ್, ಸಿರಿಯ, ಇಸ್ರೇಲ್, ಇಜಿಪ್ತ್ ಮತ್ತು ಇಥಿಯೊಪಿಯ ದೇಶಗಳ ಭಿನ್ನ
ಭಾಗಗಳಲ್ಲಿ ಉದಿಸಿದ ವನ್ಯ ಗೋಧಿ, ಟರ್ಕಿಯಲ್ಲಿ ಕ್ರಿ.ಪೂ. ೯೦೦೦ರ ಹೊತ್ತಿಗೆ ಪಳಗಿ ಐನ್
ಕಾರ್ನ(ಟ್ರಿಟಿಕಮ್ ಮೊನೊಕಾಕ್ಕಮ್) ಗೋಧಿಯಾಯ್ತು. ಕ್ರಿ.ಪೂ. ೮೦೦೦ರ ವೇಳೆಗೆ ಫರ್ಟೈಲ್
ಕ್ರೆಸೆಂಟ್(ಸಿರಿಯ, ಲೆಬನಾನ್, ಪಾಲೆಸ್ತೀನ್, ಜೊರ್ಡಾನ್, ಇಸ್ರೇಲ್ ಪ್ರದೇಶಗಳನ್ನು
ಕ್ರಮಿಸಿ ಉತ್ತರ ಇಜಿಪ್ತಿನ ಫಲವತ್ತಾದ ಭಾಗದವರೆಗೆ ಹಬ್ಬಿರುವ ಅರ್ಧಚಂದ್ರಾಕೃತಿಯ ಫಲವತ್ತಿನ
ಪ್ರದೇಶ)ದಲ್ಲಿ ಬೇಸಾಯಗೊಂಡಿತು. ನಂತರ ಪ್ರಕೃತಿಯ ಸಹಜ ಸಂಕರ ಕ್ರಿಯೆಯಿಂದ ಎಮ್ಮರ್
ಗೋಧಿ(ಟ್ರಿಟಿಕಮ್ ಡೈಕಾಕ್ಕಮ್) ಅವತರಿಸಿತು. ಈ ಎರಡನ್ನು ಗೋಧಿಯ ಪ್ರಾಚೀನ
ತಳಿಗಳೆನ್ನುತ್ತಾರೆ. ಇವು ಭಾರತಕ್ಕೆ ಪ್ರವೇಶಿಸಿದ್ದು ಕ್ರಿ.ಪೂ. ೫೦೦೦ರ ವೇಳೆಗೆ,
ವೇದಕಾಲದಲ್ಲಿ. ಅದಷ್ಟೇ ಅಲ್ಲ ಜೋಳ, ರಾಗಿ, ನವಣೆ ಎಲ್ಲವೂ ಬೇರೆಬೇರೆ ದೇಶಗಳಲ್ಲಿ ಉಗಮಿಸಿ
ನಮ್ಮಲ್ಲಿ ನೆಲೆಗೊಂಡಿವೆ. ಅವೆಲ್ಲವನ್ನೂ ದೇಶೀಯ ಎನ್ನುವುದಾದರೆ ಗೋಧಿ ಯಾಕೆ ಪರದೇಶಿ?
ಕುಲಾಂತರಿ ಪದ(ಅರ್ಥಗೊತ್ತಿದ್ದೋ ಗೊತ್ತಿಲ್ಲದೆಯೋ)ವನ್ನು ಬೇಜವಾಬ್ದಾರಿಯಿಂದ
ಬಳಸಿರುವುದಷ್ಟೇ ಅಲ್ಲ ಅದನ್ನು ಮತ್ತೆಮತ್ತೆ ಹೇಳಿದ್ದಾರೆ. ಕುಲಾಂತರಿ ಅಂದರೆ
ಟ್ರಾನ್ಸ್‌ಜೆನಿಕ್, ಜೆನೆಟಿಕಲಿ ಮಾಡಿಫಾಯ್ಡ್ ಅರ್ಥಾತ್ ಜಿಎಮ್ ತಳಿಗಳು. ತೀರಾ ವಿಭಿನ್ನ
ಜೀವಿಗಳ ಗುಣಾಣು ಸೇರಿಸಿ ವರ್ಧಿಸಲ್ಪಟ್ಟ ಕುಲಾಂತರಿಯ ಉದಾಹರಣೆ ಮಣ್ಣಿನ ಬ್ಯಾಕ್ಟೀರಿಯದ ಗುಣ
ಹೊಂದಿರುವ ಬಿಟಿ ಹತ್ತಿ. ಗೋಧಿಯಲ್ಲಿ ಕುಲಾಂತರಿ ತಳಿ ಇಲ್ಲಿಯವರೆಗೆ ಬೇಸಾಯಗೊಂಡಿಲ್ಲ.
ಆದ್ದರಿಂದ ಅವರು ಹೇಳಿರುವುದು ಸಂಪೂರ್ಣ ತಪ್ಪು. ಪ್ರಾಯಶಃ ಅವರು ತಳಿ ಸಂವರ್ಧನೆಯಿಂದ
ರೂಪಿಸಿದ ಹೈಬ್ರಿಡ್ ಅಥವಾ ಸಂಕರ ತಳಿಗಳನ್ನು ಕುಲಾಂತರಿ ಎಂದಿರಬಹುದು ಎನ್ನುವುದಾದರೆ ಅದೂ
ತಪ್ಪಾಗುತ್ತದೆ. ಸಂಕರ ತಳಿಗಳನ್ನು ರೂಪಿಸುವುದು ಅಧಿಕ ಇಳುವರಿ, ಸುಧಾರಿತ ಪೌಷ್ಟಿಕತೆ, ರೋಗ
ನಿರೋಧಕತೆ ಇತ್ಯಾದಿ ಉತ್ತಮ ಗುಣಗಳನ್ನು ಒಗ್ಗೂಡಿಸಲು. ಅನಿಷ್ಟ ಗುಣಗಳನ್ನಲ್ಲ.

ಗೋಧಿ ಪಾಶ್ಚಾತ್ಯದೇಶಗಳಿಗೆ ಸರಿ, ಯಾಕೆಂದರೆ ಅಲ್ಲಿ ಹಿಮ ಬೀಳುತ್ತದೆ, ನಮ್ಮಲ್ಲಿ ಹಿಮಪಾತ
ಆಗುವದಿಲ್ಲವಾದ್ದರಿಂದ ನಮಗದು ಹೊಂದುವುದಿಲ್ಲ ಎಂದಿರುವುದು ಬಾಲಿಶವಾಗಿದೆ. ಗೋಧಿಯಲ್ಲಿನ
ಗ್ಲುಟೆನ್ ಪ್ರೋಟೀನು ಕರುಳಿಗೆ ಅಂಟಿದರೆ ಹಾನಿ, ಮಲಬದ್ಧತೆಗೆ ಮೂಲ, ಸಕ್ಕರೆಕಾಯಿಲೆಗೆ ಕಾರಣ
ಎನ್ನುತ್ತ, ವಿದೇಶಿ ಔಷಧಿ ಕಂಪನಿಗಳ ಲಾಭಕೋರತನ, ರೈತ ಶೋಷಣೆಯ ಹುನ್ನಾರಗಳ್ನು
ಅಪ್ರಾಸಂಗಿಕವಾಗಿ ಎಳೆದುತಂದಿರುವುದು ಹಾಸ್ಯಾಸ್ಪದ. ಅದಕ್ಕೆ ತಮ್ಮ ರೈತಪರಿವಾರದ ಹಿನ್ನೆಲೆ
ಸೇರಿಸಿರುವುದು ಅಸಂಬದ್ಧ. ಅವರ ಈ ತೀವ್ರ ಟೀಕೆ ಬಹುಶಃ ಕಳೆದ ಕೆಲ ವರ್ಷಗಳಿಂದ
ಪ್ರಚಾರದಲ್ಲಿರುವ ಗೋಧಿಯ ಬಗೆಗಿನ ಮಿಥ್ಯಾರೋಪಗಳಿಂದ ಪ್ರೇರಿತಗೊಂಡಿರಬಹುದು. ಹೌದು 'ಗೋಧಿ
ಸುರಕ್ಷಿತವೇ?', 'ಅದರ ಉಪಯೋಗ ಮುಂದುವರಿಸಬಹುದೇ?', 'ಗೋಧಿ ಸೇವನೆ ಯಾಕೆ ಒಳ್ಳೆಯದಲ್ಲ?'
ಎಂಬಿತ್ಯಾದಿ ಪ್ರಚೋದಕ ತಲೆಬರಹಗಳಡಿಯಲ್ಲಿ ಸಾಕಷ್ಟು ಅಪಪ್ರಚಾರ ಅಂತರ್ಜಾಲದಲ್ಲಿ ನಡೆದಿದೆ.
ಗ್ಲುಟೆನ್ ಅಲರ್ಜಿಯನ್ನು ಬೃಹದಾಕಾರವಾಗಿ ಬಿಂಬಿಸಿ ಸೃಷ್ಟಿಸಿರುವ ಸುಮಾರು ೧೬೦ ಕೋಟಿ
ಮೌಲ್ಯದ ಗ್ಲುಟೆನ್‌ಮುಕ್ತ ಆಹಾರದ ಮಾರುಕಟ್ಟೆಯಲ್ಲಿ ಗೋಧಿಯ ಐನ್ಕಾರ್ನ ಮತ್ತು ಎಮ್ಮರ್
ಪ್ರಾಚೀನ ತಳಿಗಳ ಉತ್ಪನ್ನಗಳನ್ನು ದುಬಾರಿ ಬೆಲೆಯಲ್ಲಿ ಪ್ರಮೋಟ್ ಮಾಡಲಾಗುತ್ತಿದೆ. ಇದು
ಒಂದು ತೆರನಾದ ಸೆನ್ಸೇಷನ್ ಉಂಟುಮಾಡುವ ಆಹಾರದ ರಾಜಕಾರಣ. ಮತ್ತಿನ್ನೇನೂ ಅಲ್ಲ. ಅದರಲ್ಲಿ
ವಾಸ್ತವಾಂಶವಿಲ್ಲ. ಎಲ್ಲ ಮಿಥ್ಯಾರೋಪಗಳನ್ನು ವ್ಯವಸ್ಥಿತವಾದ ವಿವರವಾದ ಸಂಶೋಧನೆಗಳ
ಆಧಾರದಿಂದ ಅಲ್ಲಗಳೆದೂ ಆಗಿದೆ. ದುರದೃಷ್ಟವಶಾತ್ ಅನಂತ್‌ಜಿ ಅವನ್ನು ಗಮನಿಸಿದಂತಿಲ್ಲ.

ವಾಸ್ತವಾಂಶ: ಗೋಧಿಯಲ್ಲಿನ ಅಲ್ಬ್ಯುಮಿನ್, ಗ್ಲೊಬ್ಯುಲಿನ್, ಗ್ಲಯಡಿನ್ ಮತ್ತು ಗ್ಲುಟೆನಿನ್
(ಗ್ಲುಟೆನ್) ಪ್ರೊಟೀನುಗಳು ಕೆಲವರಲ್ಲಿ ಉಸಿರಾಟದ ತೊಂದರೆ, ಹೊಟ್ಟೆಯುಬ್ಬರ, ವಾಕರಿಕೆ,
ಚರ್ಮದ ದದ್ದುಗಳು ಮುಂತಾದ ಅಲರ್ಜಿಕ್ ಪ್ರತಿಕ್ರಿಯೆಯನ್ನು ಉಂಟುಮಾಡುವುದಿದೆ. ಹೆಚ್ಚಿನಂಶ
ಅಲರ್ಜಿ ಅಲ್ಬ್ಯುಮಿನ್, ಗ್ಲೊಬ್ಯುಲಿನ್ ಪ್ರೊಟೀನುಗಳಿಗೆ ಸಂಬಂಧಿಸಿದ್ದು. ಗ್ಲಯಡಿನ್ ಮತ್ತು
ಗ್ಲುಟೆನ್ ಅಲರ್ಜಿ ವಿರಳ. ಜಗತ್ತಿನ ಕೇವಲ ಶೇಕಡಾ ಒಂದರಷ್ಟು ಜನರಿಗಷ್ಟೇ ಗ್ಲುಟೆನ್
ಅಲರ್ಜಿಯಿದೆ. ಅದನ್ನು ಎಲ್ಲರಿಗೂ ಅನ್ವಯಿಸಲಾಗದು. ಹಾಗೆನೋಡಿದರೆ ನಾವು ಸೇವಿಸುವ
ಪ್ರತಿಯೊಂದು ಆಹಾರಧಾನ್ಯ, ತರಕಾರಿ, ಹಣ್ಣುಹಂಪಲುಗಳಲ್ಲಿ ಒಂದಲ್ಲಒಂದು ಹಾನಿಕಾರಕ
ಅಂಶವಿದ್ದೇಇದೆ. ಯಾವುದೂ ಸಂಪೂರ್ಣ ಸುರಕ್ಷಿತವಲ್ಲ. ಗೋಧಿ ಬಹುಜನರ ಪ್ರಧಾನ
ಆಹಾರವಾಗಿರುವುದರಿಂದ ಅದರ ಅಲರ್ಜಿ ದೊಡ್ಡದಾಗಿ ಬಿಂಬಿತವಾಗಿದೆ ಅಷ್ಟೆ. ಅಲರ್ಜಿ ಇರುವವರು
ಗೋಧಿ ತಿನ್ನದಿದ್ದರಾಯ್ತು. ಬದಲಿಗೆ 'ಯಾರೂ ಗೋಧಿ ತಿನ್ನಬೇಡಿ' ಎಂದು ನಿರ್ಬಂಧ ಹೇರುವುದು
ಸರಿಯಲ್ಲ. ಅವರೇ ಶಿಫಾರಸು ಮಾಡುವ ಜೋಳ, ರಾಗಿ, ಆರ್ಕ, ನವಣೆ, ಬೂರುಗ ಇತ್ಯಾದಿ
ಧಾನ್ಯಗಳಲ್ಲೂ ಅನಿಷ್ಟ ಪದಾರ್ಥಗಳು ಹಾನಿಕಾರಕ ಎನ್ಜೈಮು(ಕಿಣ್ವ) ಇವೆ. ಅವೆಲ್ಲವನ್ನೂ
ಕಡೆಗಣಿಸಿ ಗೋಧಿಯ ಮೇಲಷ್ಟೇ ಗೂಬೆಕೂರಿಸಿದ್ದು ಸರಿಯಲ್ಲ. ಬೆರಳೆಣಿಕೆಯಷ್ಟು ಜನರಿಗೆ ಬೇಡವಾದ
ಗ್ಲುಟೆನ್‌ನಿಂದಾಗಿಯೇ ಗೋಧಿ ವೈವಿಧ್ಯಮಯ ಆಹಾರ ತಯಾರಿಕೆಗೆ ಪ್ರಶಸ್ತವೆನ್ನಿಸಿದೆ.
ಗೋಧಿಯಿಂದ ತಯಾರಿಸಬಹುದಾದಷ್ಟು ತರಹೇವಾರಿ ತಿನಿಸುಗಳನ್ನು ಬೇರಾವುದೇ ಆಹಾರಧಾನ್ಯದಿಂದ
ತಯಾರಿಸಲಾಗದು. ಗೋಧಿಯಲ್ಲಿರುವ ಪುಷ್ಕಳ ನಾರಿನಂಶ ಮಲಬದ್ಧತೆಯನ್ನು ದೂರಾಗಿಸುತ್ತದೆ.
ವಿಟಮಿನ್ ಮತ್ತು ಖನಿಜಾಂಶ ಭರಿತ ಗೋಧಿ ಸಸ್ಯಾಹಾರಿಗಳಿಗೆ 

[ms-stf '62245'] ತಂತ್ರಲೋಕ: ಇ-ಅಂಚೆಯಲ್ಲಿರಬಹುದು ಸಂಚು-ವಂಚನೆ!

2016-07-23 Thread HAREESHKUMAR K Agasanapura
http://m.vijaykarnataka.com/edit/columns/janamukhi-tantraloka-by-c-p-ravikumar/articleshow/53346073.cms

*ಜನಮುಖಿ ತಂತ್ರಲೋಕ: ಇ-ಅಂಚೆಯಲ್ಲಿರಬಹುದು ಸಂಚು-ವಂಚನೆ!*

Jul 23, 2016, 04.00 AM IST

Whatsapp Facebook Google Plus
Twitter Email


postal

AAA

* ಸಿ. ಪಿ. ರವಿಕುಮಾರ್

ಗಾಯಕಿ ಲತಾ ಮಂಗೇಶ್ಕರ್ ಒಮ್ಮೆ ಹೀಗೆ ಚಟಾಕಿ ಹಾರಿಸಿದರು: ''ಹಿಂದೆ ಚಿತ್ರಗೀತೆಗಳಲ್ಲಿ
ಗಾಯನ ಮುಖ್ಯವಾಗಿತ್ತು - ನಾವು ಹಾಡುವುದನ್ನು ನಿಲ್ಲಿಸಿದಾಗ ಆರ್ಕೆಸ್ಟ್ರಾದವರು ವಾದ್ಯ
ನುಡಿಸುತ್ತಿದ್ದರು. ಈಗ ಆರ್ಕೆಸ್ಟ್ರಾ ಅಬ್ಬರವೇ ಜಾಸ್ತಿ - ಅವರು ನಿಲ್ಲಿಸಿದಾಗ ನಾವು
ಗಾಯಕರು ಹಾಡುತ್ತೇವೆ!'' ಇದೇ ಮಾತು ಇ-ಅಂಚೆಗೂ ಅನ್ವಯಿಸುತ್ತದೆ. ಹಿಂದೊಮ್ಮೆ ಅಂಚೆಡಬ್ಬಿಗೆ
ಬಂದ ಸಂದೇಶಗಳಲ್ಲಿ ಒಂದೋ ಎರಡೋ ಜಾಹೀರಾತು ಮಾದರಿಯ ಸ್ಪ್ಯಾಮ್ (SPAM) ಅಥವಾ
ಅನಿಷ್ಟ-ಅಂಚೆಗಳು ಬರುತ್ತಿದ್ದವು. ಇಂದು ಅನಿಷ್ಟ ಅಂಚೆಗಳ ನಡುವೆ ನಮಗೆ ನಿಜಕ್ಕೂ ಮುಖ್ಯವಾದ
ಅಂಚೆಗಳನ್ನು ಹೆಕ್ಕಿಕೊಳ್ಳಬೇಕಾಗಿದೆ. ಅಂಚೆ ಎಂಬುದು ''ಹಂಸ'' ಎಂಬ ಪದದ ತದ್ಭವರೂಪ.
ಹಿಂದೊಮ್ಮೆ ಹಂಸಗಳು ಸಂದೇಶಗಳನ್ನು ಕೊಂಡೊಯ್ಯುತ್ತಿದ್ದುದರಿಂದ ಈ ಹೆಸರು ಬಂದಿದೆ. ಹಂಸಗಳ
ವಿಷಯದಲ್ಲಿ ಇನ್ನೊಂದು ಪ್ರತೀತಿ ಇದೆ. ಹಾಲು ಮತ್ತು ನೀರು ಬೆರೆಸಿಟ್ಟರೆ ಹಂಸವು ಹಾಲನ್ನು
ಮಾತ್ರ ಕುಡಿದು ನೀರನ್ನು ಹಾಗೇ ಬಿಡುತ್ತವಂತೆ! ಅಂಚೆ-ಕ್ಷೀರ ನ್ಯಾಯವು ಇಂದಿನ ಬಹುಮುಖ್ಯ
ಅಗತ್ಯಗಳಲ್ಲಿ ಒಂದು!

ಅಂತರ್ಜಾಲದ ಪ್ರಾರಂಭಿಕ ದಿನಗಳಲ್ಲಿ ಇ-ಮೇಲ್ ಪ್ರಮುಖ ಸಂವಹನ ಸಾಧನವಾಗಿ ಜನಪ್ರಿಯವಾಗಿತ್ತು.
ಇಂದಿನ ಫೇಸ್‌ಬುಕ್ ಮಾದರಿಯ ನ್ಯೂಸ್ ಗ್ರೂಪ್ ಅಥವಾ ವಾರ್ತಾಸಮೂಹ ಎಂಬ ಸಾಧನವೂ ನಂತರ
ಜನಪ್ರಿಯವಾಯಿತು. ಆಗ ಈ ಸಾಧನಗಳ ಬಳಕೆದಾರರು ವಿಶ್ವವಿದ್ಯಾಲಯ ಮತ್ತು ಸಂಶೋಧನಾಲಯಗಳಿಗೆ
ಮಾತ್ರ ಸೀಮಿತವಾಗಿದ್ದರು. ಹೀಗಾಗಿ ಗಂಭೀರವಾದ ಚರ್ಚೆಗಳಿಗೆ ಮಾತ್ರ ಈ ಸಾಧನಗಳು
ಬಳಕೆಯಾಗುತ್ತಿದ್ದವು. ಈ ಸಂಸ್ಥೆಗಳು ಅಂತರ್ಜಾಲ ಬಳಕೆಗೆ ಯಾವ ಶುಲ್ಕವನ್ನೂ
ಕೊಡಬೇಕಾಗಿರಲಿಲ್ಲ! ಮುಂದೆ ಅಂತರ್ಜಾಲವು ವ್ಯಾಪಾರಕ್ಕಾಗಿ ಬಳಕೆಯಾಗತೊಡಗಿದಾಗ ಒಮ್ಮೆಲೇ
ಸೈಬರ್ ವಿಶ್ವದ ರಂಗು ಬದಲಾಗಿಹೋಯಿತು. 1988-1990 ಅವಧಿಯಲ್ಲಿ ನ್ಯೂಸ್ ಗ್ರೂಪ್
ಬಳಕೆದಾರನಾಗಿ ನಾನು ಕನ್ನಡ ಸಾಹಿತ್ಯದ ಕುರಿತು ಬರೆಯುತ್ತಿದ್ದೆ. ಸದಭಿರುಚಿಯ ನೂರಾರು
ಓದುಗರೂ ನನಗಿದ್ದರು. 1990ರಲ್ಲಿ ಒಮ್ಮೆಲೇ ವಾರ್ತಾಸಮೂಹಗಳಲ್ಲಿ ಸ್ಪ್ಯಾಮ್ ಏರಿತು.
ಧರ್ಮದ್ವೇಷ, ಪರಸ್ಪರ ದೂಷಣೆ, ಜಾಹೀರಾತು ಇತ್ಯಾದಿ ಹೆಚ್ಚಿದವು. ಇಂಥ ಸಂದೇಶಗಳನ್ನು ತೊಡೆದು
ಹಾಕಲು ಫಿಲ್ಟರ್ ಎಂಬ ತಂತ್ರಾಂಶ ಲಭ್ಯವಾಗಿದೆ. ಅಂಚೆ-ಕ್ಷೀರ ನ್ಯಾಯಕ್ಕೆ ಫಿಲ್ಟರ್ ಎಂಬುದು
ಮೊದಲ ಸಾಧನ. ಆರಂಭದಲ್ಲಿ ಫಿಲ್ಟರ್‌ಗಳನ್ನು ಅಳವಡಿಸುವುದು ಸಂಪೂರ್ಣವಾಗಿ ಬಳಕೆದಾರನ
ಹೊಣೆಯಾಗಿತ್ತು. ಆದರೆ ಅನಿಷ್ಟ ಅಂಚೆಗಳ ಸಂಖ್ಯೆ ಹೆಚ್ಚಾಗಿದ್ದಲ್ಲದೆ ಅವುಗಳಲ್ಲಿ ವೈರಸ್
ಮೊದಲಾದ ಹಾನಿಕಾರಕ ಅಂಶಗಳೂ ಸೇರತೊಡಗಿದಾಗ ಅಂಚೆಯನ್ನು ಹಂಚುವ ಸರ್ವರ್ ತಂತ್ರಾಂಶ ತಾನೇ
ಮುಂದುವರೆದು ಅಂಚೆಗಳನ್ನು ವಿಂಗಡಿಸುವ ಕಾರ್ಯದಲ್ಲಿ ಭಾಗವಹಿಸಬೇಕಾಗಿ ಬಂತು. ಇದರಿಂದ ಎರಡು
ಕಿರಿಕಿರಿಗಳು ಉಂಟಾಗಬಹುದು. ಬಳಕೆದಾರನಿಗೆ ಮುಖ್ಯವಾದದ್ದನ್ನು ಅನಿಷ್ಟವೆಂದು ಸರ್ವರ್
ಕಸದಬುಟ್ಟಿಗೆ ಹಾಕಬಹುದು. ಆಗಾಗ ಈ ಕಸದಬುಟ್ಟಿಯನ್ನು ಹುಡುಕಾಡಿ ಅದನ್ನು ಖಾಲಿ ಮಾಡುವುದು
ಬಳಕೆದಾರನ ಕರ್ತವ್ಯ. ಸರ್ವರ್ ಎಷ್ಟೇ ಜಾಣ್ಮೆಯಿಂದ ವಿಂಗಡಿಸಿದರೂ ರಂಗೋಲೆಯ ಕೆಳಗೆ ತೂರಿ
ಬರುವ ಜಾಣ್ಮೆಯನ್ನು ಸ್ಪ್ಯಾಮ್ ಜನಕರು ತೋರುತ್ತಿರುವುದು ಇನ್ನೊಂದು ಸಂಕಷ್ಟ.

ಇಂಥ ಇ-ಮೇಲ್ ನಿಮಗೂ ಬಂದಿರಬಹುದು. ನಾನು ಇಂಥ ದೇಶದ ರಾಜಕುಮಾರಿ, ಒಬ್ಬ ಸರ್ವಾಧಿಕಾರಿ
ದೇಶದಿಂದ ಉಚ್ಚಾಟಿಸಿದ್ದಾನೆ, ನನ್ನ ಸಂಪತ್ತು ಅಪಾರವಾದದ್ದು, ಆದರೆ ಇದು ಹೊರದೇಶದ
ಬ್ಯಾಂಕಿನಲ್ಲಿ ಸಿಕ್ಕಿಹಾಕಿಕೊಂಡಿದೆ, ನೀವು ಕಿಂಚಿತ್ ಧನಸಹಾಯ ಮಾಡಿದರೆ ನನ್ನ ಸಂಪತ್ತನ್ನು
ದಕ್ಕಿಸಿಕೊಂಡು ನಿಮಗೆ ಅದರಲ್ಲಿ ದೊಡ್ಡ ಮೊತ್ತವನ್ನು ಸಂದಾಯ ಮಾಡುತ್ತೇನೆ, ಇತ್ಯಾದಿ.
ಕಥೆಗಳು ವಿಭಿನ್ನವಾದರೂ ಇವುಗಳ ಸಾರಾಂಶ ಇಷ್ಟೇ- ನೀವು ಸಾವಿರವೋ ಲಕ್ಷವೋ ಸಹಾಯ ಮಾಡಿದರೆ
ನಿಮಗೆ ಕೋಟ್ಯಾನುಕೋಟಿ ಲಾಭ! ನೈಜೀರಿಯಾ ದೇಶದಲ್ಲಿ ಇಂಟರ್‌ನೆಟ್ ಕೆಫೆಯಲ್ಲಿ ಕುಳಿತು
ವಂಚಕರು ಪ್ರತಿನಿತ್ಯ ಇಂಥ ಸಹಸ್ರಾರು ಅಂಚೆಗಳನ್ನು ವಿಶ್ವದ ಉದ್ದಗಲಕ್ಕೂ ಕಳಿಸುತ್ತಾರೆ
ಎನ್ನಲಾಗಿದೆ. ನೂರರಲ್ಲಿ ಒಬ್ಬ ಬಲಿಪಶು ಸಿಕ್ಕರೂ ಒಂದು ದಿನದ ಕೆಲಸಕ್ಕೆ ಸಾಕಷ್ಟು ಪ್ರತಿಫಲ
ಸಿಕ್ಕಿದಂತೆ. ಕೈಯಲ್ಲಿ ಮೊಬೈಲ್ ಹಿಡಿದು ಹೇಗೋ ಸಂಪಾದಿಸಿದ ಟೆಲಿಫೋನ್ ಸಂಖ್ಯೆಗಳಿಗೆ ಒಂದಾದ
ನಂತರ ಒಂದು ಕಾಲ್ ಮಾಡುತ್ತಾ ಅವರಿಗೆ ಏನಾದರೂ ಆಮಿಷ ನೀಡುತ್ತಾ ನಾಜೂಕಿನಿಂದ ಅವರ ಬ್ಯಾಂಕ್
ವಿವರಗಳನ್ನು ಅಥವಾ ಅವರ ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದುಕೊಂಡು ಗುಪ್ತವಾಗಿ
ಖಾತೆಯನ್ನು ದರೋಡೆ ಮಾಡುವವರ ಜಾಲವು ಬ್ಯಾಂಕುಗಳಿಗೆ ತಲೆನೋವಾಗಿದೆ. ನಿಮ್ಮ ಇ-ಮೇಲ್
ವಿತರಕರಿಂದ ಅಥವಾ ಬ್ಯಾಂಕ್‌ನಿಂದ ''ಕೂಡಲೇ ನಿಮ್ಮ ಪ್ರವೇಶಪದ ಬದಲಾಯಿಸಿ'' ಎಂಬ ಸಂದೇಶ
ಬಂದಾಗ ಸೂಕ್ಷ್ಮವಾಗಿ ಅವಲೋಕಿಸಿ. ಅದನ್ನು ಕಳಿಸಿದವರು ಯಾರೋ ಬೇರೆಯವರು. ಅವರು ಕೊಟ್ಟ
ಲಿಂಕ್ ಅನುಸರಿಸಿ ನಿಮ್ಮ ರಹಸ್ಯಪದ ಬದಲಾಯಿಸುವಾಗ ನಿಮ್ಮ ಈಗಿನ ರಹಸ್ಯಪದ ತಿಳಿಸಲು
ಕೋರಲಾಗುತ್ತದೆ. ವಂಚಕರ ಕೈಗೆ ನೀವೇ ಖುದ್ದಾಗಿ ಕೀಲಿಕೈ ಕೊಟ್ಟಹಾಗಾಯಿತು. ಈ ಬಗೆಯ ಮೋಸ
ಎಷ್ಟು ಪ್ರಚಲಿತವಾಗಿದೆಯೆಂದರೆ ಫಿಷಿಂಗ್ (Phishing) ಎಂಬ ಹೆಸರೇ ಅದಕ್ಕಿದೆ. ಯಾವುದೇ
ಕಾರಣಕ್ಕಾಗಿ ಅಂಚೆಯ ಮೂಲಕವಾಗಲಿ ಅಥವಾ ಫೋನ್ ಮೂಲಕವಾಗಲಿ ಪ್ರವೇಶಪದ, ಪಿನ್, ಸಿವಿವಿ
ಮೊದಲಾದ ವಿವರಗಳನ್ನು ನೀಡುವುದು ಖಂಡಿತವಾಗಿಯೂ ಅಪಾಯಕರ.

ಹೊಸಹೊಸ ಪಟ್ಟುಗಳನ್ನು ವಂಚಕರು ಕಲಿಯುತ್ತಿದ್ದಾರೆ. ನಿಮ್ಮ ಮಿತ್ರರಿಂದಲೇ ನಿಮಗೆ ಅಂಚೆ
ಬರುತ್ತದೆ - ''ನಾನು ಹೊರದೇಶದಲ್ಲಿದ್ದೇನೆ. ನನಗೆ ಅಪಘಾತವಾಗಿದೆ (ಅಥವಾ ನನ್ನ ಹಣ
ಕಳೆದುಕೊಂಡಿದ್ದೇನೆ). ತುರ್ತಾಗಿ ನನಗೆ ಹಣದ ಅವಶ್ಯಕತೆ ಇದೆ.'' ನಿಮ್ಮ ಸ್ನೇಹಿತರ
ಅಂಚೆಖಾತೆ ದರೋಡೆಯಾಗಿದೆ ಎಂದೇ ಇದರ ಅರ್ಥ. ಅವರ ಸ್ನೇಹಿತರ ಇ-ಅಂಚೆ ವಿಳಾಸಗಳನ್ನು ಕದ್ದು
ಅವರಿಗೆಲ್ಲಾ ಇದೇ ಮಾದರಿಯ ಸಂದೇಶ ಕಳಿಸುವ ಕೆಲಸವನ್ನು ತಂತ್ರಾಂಶಗಳೇ ಮಾಡಬಲ್ಲವು! ಇನ್ನೂ
ಒಂದು ಹೆಜ್ಜೆ ಮುಂದೆ ಹೋಗಿ ನಿಮ್ಮ ಮೆಚ್ಚಿನ ಜನನಾಯಕರಿಂದಲೋ ಅಥವಾ ಧಾರ್ಮಿಕ ಗುರುಗಳಿಂದಳೋ
ಇಂಥ ಯಾಚನಾಪೂರ್ಣ ಅಂಚೆ ಬಂದರೆ ನಿಮ್ಮ ಮನಸ್ಸು ಕರಗಿ ನೀವು ಧನಸಹಾಯ ಮಾಡಲು ಮುಂದಾಗಬಹುದು!
ಸಣ್ಣಪುಟ್ಟ ಮೀನುಗಳ ಬದಲು ತಿಮಿಂಗಲಕ್ಕೇ ಬಲೆ ಬೀಸುವವರೂ ಇದ್ದಾರೆ! ಕಂಪನಿಯ ಮುಖ್ಯಸ್ಥರ
ಸೋಗು ಹಾಕಿಕೊಂಡು ಕಳಿಸಲಾದ ಸಂದೇಶದಲ್ಲಿ ''ಈ ವಿಷಯ ಯಾರಿಗೂ ತಿಳಿಸಬಾರದು- ಬಹಳ ಗುಪ್ತ
ಕಾರಣಗಳಿಗಾಗಿ ಇಂಥ ಆಕೌಂಟಿಗೆ ತುರ್ತಾಗಿ ನಮ್ಮ ಕಂಪನಿಯ ಖಾತೆಯಿಂದ ಇಷ್ಟು ಹಣ ಸಂದಾಯ
ಮಾಡು,'' ಎಂಬ ಸಂದೇಶ ಬಂದರೆ ಅವರ ಕೈಕೆಳಗೆ ಕೆಲಸ ಮಾಡುವ ಅಧಿಕಾರಿಗಳು ಆಜ್ಞೆಯನ್ನು
ಪಾಲಿಸಿಯೇ ಬಿಡಬಹುದು! ಇಂಥ ಮೋಸದಿಂದ ಕೋಟ್ಯಂತರ ಧನರಾಶಿಯನ್ನು ಕಳೆದುಕೊಂಡ ಕಂಪನಿಗಳೂ ಇವೆ.
ಹಣವಷ್ಟೇ ಅಲ್ಲ ಕಂಪನಿಗಳಿಂದ ಅಮೂಲ್ಯವಾದ ರಹಸ್ಯ ಮಾಹಿತಿಯನ್ನೂ ಇದೇ ಬಗೆಯ ಮೋಸದಿಂದ ಕದ್ದ
ಪ್ರಕರಣಗಳೂ ಇವೆ.

''ನಿಮ್ಮ ಮಗಳು ನಮ್ಮ ಬಳಿ ಇದ್ದಾಳೆ. ಅವಳನ್ನು ಬಿಡುಗಡೆ ಮಾಡಲು ಇಷ್ಟು ಹಣವನ್ನು
ಪಾವತಿಸಬೇಕು. ಯಾರಿಗೂ ವಿಷಯ ತಿಳಿಸದಿದ್ದರೆ ನಿಮ್ಮ ಮಗಳು ಉಳಿಯುತ್ತಾಳೆ. ನಿಮಗೆ ನಂಬಿಕೆ
ಬಾರದಿದ್ದಲ್ಲಿ ಮಗಳ ಫೋನಿಗೆ ಕರೆ ಮಾಡಿ,'' ಎಂದು ಇ-ಮೇಲ್ ಸಂದೇಶ ಒಬ್ಬರಿಗೆ ಬಂತು. ಅವರು
ಗಾಬರಿಯಾಗಿ ಮಗಳ ಮೊಬೈಲ್ ಫೋನಿಗೆ ಕರೆ 

[ms-stf '61905'] ವಿದ್ಯೆಯಿಂದ ವಿನಯ ಬರಲಿ | Mobile Site

2016-07-17 Thread HAREESHKUMAR K Agasanapura
http://m.prajavani.net/article/2016_07_11/422787

*ಅವಮಾನ, ಸ್ವಾಭಿಮಾನ ಮತ್ತು ಆತ್ಮಹತ್ಯೆ*

14 Jul, 2016

ನಾಗೇಶ್ ಹೆಗಡೆ








ಕಳೆದ ಎರಡು ವಾರಗಳಲ್ಲಿ ಸಂಭವಿಸಿದ ನಾಲ್ಕೂ ಆತ್ಮಹತ್ಯೆಗಳಲ್ಲಿ ಕಂಡುಬಂದ ಒಂದು ಸಮಾನ ಅಂಶ
ಏನು ಗೊತ್ತೆ? ಅಪಮಾನ. ಹದಿನಾಲ್ಕರ ಹರೆಯದ ಹೈಸ್ಕೂಲ್ ವಿದ್ಯಾರ್ಥಿ ರೌನಕ್ ಬ್ಯಾನರ್ಜಿ
ಶಾಲೆಯಿಂದ ಬಂದವನೇ 19ನೇ ಅಂತಸ್ತಿನ ತನ್ನ ಮನೆಯ ಬಾಲ್ಕನಿಯಿಂದ ಕೆಳಕ್ಕೆ ಜಿಗಿದು ಪ್ರಾಣ
ಕಳೆದುಕೊಂಡ.

‘ಕಿಲಾಡಿ ಹುಡುಗರ ಒಂದಿಡೀ ತಂಡ ಪ್ರತಿದಿನವೂ ನನ್ನನ್ನು ಛೇಡಿಸಿ ಅವಮಾನ ಮಾಡುತ್ತಿದೆ.
ನನ್ನಿಂದ ಇನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂಬ ಅರ್ಥದ ಚೀಟಿಯೊಂದು ಅವನ
ಬ್ಯಾಗಿನಲ್ಲಿತ್ತು. ಇನ್ನು, ಡಿವೈಎಸ್‌ಪಿ ಕಲ್ಲಪ್ಪ ಹಂಡೀಬಾಗ ಮತ್ತು ಇನ್ನೊಬ್ಬ
ಡಿವೈಎಸ್‌ಪಿ ಎಂ.ಕೆ.ಗಣಪತಿ ಕೂಡ ತಮ್ಮ ಆತ್ಮಹತ್ಯೆಗೆ ಯಾವ ಸಂದರ್ಭಗಳು ಕಾರಣ ಎಂಬುದರ ದಾಖಲೆ
ಉಳಿಸಿಯೇ ನೇಣಿಗೆ ತಲೆ ಕೊಟ್ಟಿದ್ದಾರೆ.

ರೌನಕ್ ಮಾದರಿಯಲ್ಲಿ ತನಗೆ ಅಪಮಾನವಾಗಿದೆ ಎಂದು ನೇರವಾಗಿ ಹೇಳಿಲ್ಲವಾದರೂ ಮೇಲಿನವರ ಎದುರು
ತನಗೆ ಮುಖಭಂಗವಾಗಿದೆ, ತನ್ನ ವ್ಯಕ್ತಿತ್ವದ ಅವಹೇಳನವಾಗಿದೆ ಎಂಬುದರ ಬಗ್ಗೆ ಧಾರಾಳ
ಸಾಕ್ಷ್ಯಗಳನ್ನು ಬಿಟ್ಟು ಹೋಗಿದ್ದಾರೆ.

ಈ ಘಟನೆಗಳ ಕುರಿತು ಚರ್ಚೆ ನಡೆಯುತ್ತಿದ್ದಾಗಲೇ, ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ
ಓದುತ್ತಿದ್ದ 23ರ ಯುವತಿ ಸೋಫಿಯಾ ಜುಲೈ 10ರಂದು ತನ್ನ ಹಾಸ್ಟೆಲಿನಲ್ಲಿ ನೇಣು ಹಾಕಿಕೊಂಡಳು.
ಅವಳು ತರಗತಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಸಂಗತಿ ಅಮ್ಮನಿಗೆ ಗೊತ್ತಾಗಿತ್ತು.

ಮಾಧ್ಯಮಗಳ ವರದಿಯ ಪ್ರಕಾರ, ಮಗಳ ಶಿಕ್ಷಣ ಶುಲ್ಕವನ್ನು ಕಟ್ಟಲೆಂದು ಎರಡು ದಿನಗಳ ಹಿಂದೆ
ಕಾಲೇಜಿಗೆ ಬಂದ ಅಮ್ಮ ಎಲ್ಲ ವಿದ್ಯಾರ್ಥಿನಿಯರ ಎದುರು ಸೋಫಿಯಾಗೆ ಬೈದಿದ್ದಳು. ಅದನ್ನೇ
ಮನಸ್ಸಿಗೆ ಹಚ್ಚಿಕೊಂಡ ಯುವತಿ ಅದೆಷ್ಟು ಹಿಂಸೆಪಟ್ಟಳೊ, ಇಹಲೋಕ ತ್ಯಜಿಸಿದಳು. ಅಪಮಾನ
ಎಂಬುದು ಅಷ್ಟೊಂದು ತೀವ್ರವಾಗಿ ಮನಸ್ಸನ್ನು ಘಾಸಿ ಮಾಡುತ್ತದೆಯೆ?

ಎಚ್ಚರವಿದ್ದಷ್ಟು ಹೊತ್ತೂ ನಮ್ಮ ಮನಸ್ಸು ನಾನಾ ಘಟನೆಗಳನ್ನು ಮೆಲುಕು ಹಾಕುತ್ತಿರುತ್ತದೆ.
ಸಂತಸ, ಉದ್ವೇಗ, ಜಿಗುಪ್ಸೆ, ಕಾತರ, ಶಂಕೆ, ಚಿಂತೆ, ಉಮ್ಮಳ, ಅಪಮಾನ, ಹೆಮ್ಮೆ, ನಾಚಿಕೆ,
ದುಃಖ, ಭಯ, ಅಸೂಯೆ, ಲಜ್ಜೆ, ಕೋಪ, ಹತಾಶೆ, ಸಂತೃಪ್ತಿ ಹೀಗೆ ನಾನಾ ಬಗೆಯ ಭಾವನೆಗಳು
ಮಿದುಳಿನಲ್ಲಿ ಮೂಡುತ್ತಿರುತ್ತವೆ. ಕೆಲವು ಮೂಡುತ್ತವೆ, ಮತ್ತೆ ಹಾಗೇ ಮಾಯವಾಗುತ್ತವೆ.

ಕೆಲವು ಘಟನೆಗಳನ್ನು ಮನಸ್ಸು ಮತ್ತೆ ಮತ್ತೆ ಮಥಿಸುತ್ತಿರುತ್ತದೆ. ಮನೋವಿಜ್ಞಾನಿಗಳ ಪ್ರಕಾರ
ಈ ಹತ್ತು ಹಲವು ಭಾವನೆಗಳಲ್ಲಿ ಅಪಮಾನವೇ ಎಲ್ಲಕ್ಕಿಂತ ಹೆಚ್ಚು ಹೊತ್ತು ಮನಸ್ಸಿನಲ್ಲಿ
ಕೂತಿರುತ್ತದೆ. ಮತ್ತೆ ಮತ್ತೆ ಮನಸ್ಸನ್ನು ಕಲಕುತ್ತಿರುತ್ತದೆ, ಕಾಡುತ್ತಿರುತ್ತದೆ.
ಪ್ರತೀಕಾರಕ್ಕೆ ಹಪಹಪಿಸುತ್ತದೆ. ಅದಕ್ಕೆ ಅವಕಾಶ ಇಲ್ಲದ ಸಂದರ್ಭದಲ್ಲಿ ಮನಸ್ಸು ಇಡೀ
ದೇಹವನ್ನೇ ದಂಡಿಸುತ್ತದೆ. ಆತ್ಮಘಾತುಕ ಕೃತ್ಯಕ್ಕೆ ದೇಹವನ್ನು ತಳ್ಳುತ್ತದೆ.

ಅದನ್ನು ವಿಜ್ಞಾನಿಗಳೇ ಹೇಳಬೇಕೆಂದೇನಿಲ್ಲ. ನಾಲ್ಕು ಜನರ ಎದುರಿಗೆ ಆಗುವ ಅವಮಾನದ ನೋವು
ಎಷ್ಟೆಂಬುದು ನಮಗೂ ಗೊತ್ತಿದೆ. ವೈರಿಯ ದೇಹಕ್ಕೆ ಗಾಯ ಮಾಡುವುದಕ್ಕಿಂತ ಆತನ/ಆಕೆಯ ಮನಸ್ಸಿಗೆ
ಗಾಯ ಮಾಡಿದರೇ ಹೆಚ್ಚು ನೋವಾಗುತ್ತದೆ ಎಂಬುದು ಎಲ್ಲ ಸಮಾಜದ ಎಲ್ಲರಿಗೂ ಗೊತ್ತಿದೆ.

ವೈರಿಯ ದೇಹವನ್ನು ಇರಿಯಲು ಬಳಸುವ ಶಸ್ತ್ರಾಸ್ತ್ರಗಳಿಗಿಂತ ಅದೆಷ್ಟೋ ಪಟ್ಟು ವೈವಿಧ್ಯಮಯ
ಶಸ್ತ್ರಗಳು ಬೈಗುಳಗಳ ರೂಪದಲ್ಲಿ ವಿಕಾಸಗೊಂಡಿವೆ (ಅದನ್ನು ನಾವು ಈಗಿನ ವಿಧಾನ ಸಭೆಯ
ಅಧಿವೇಶನದಲ್ಲಿ, ಅದರಲ್ಲೂ ಆತ್ಮಹತ್ಯೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲೇ ನೋಡುತ್ತಿದ್ದೇವೆ).

ಮುಕ್ತ ಸಮಾಜದಲ್ಲಿ ಅಂಥ ‘ಹರಿತ ನಾಲಗೆ’ಗೆ ಪೂರಕವಾಗಿ ಚಪ್ಪಲು, ಮಸಿ, ಮೂತ್ರ, ಅರೆಮುಂಡನ,
ಕತ್ತೆ ಮೆರವಣಿಗೆಯೇ ಮುಂತಾದ ಅಷ್ಟೇನೂ ದೇಹಕ್ಕೆ ಅಪಾಯಕಾರಿಯಲ್ಲದ, ಆದರೆ ಆತ್ಮಗೌರವವನ್ನು
ಕ್ರೂರವಾಗಿ ಘಾಸಿಗೊಳಿಸಬಲ್ಲ ನಾನಾ ಬಗೆಯ ಶಸ್ತ್ರಗಳು ರೂಪುಗೊಂಡಿವೆ.

ಈಗೀಗಂತೂ ವರದಿಯಾಗುವ ಬಹಳಷ್ಟು ಆತ್ಮಹತ್ಯೆ ಪ್ರಕರಣಗಳಿಗೆ ಅವಮಾನವೇ ಮುಖ್ಯ ಕಾರಣ
ಇದ್ದೀತೆಂದು ಯಾರೂ ತರ್ಕಿಸಬಹುದಾಗಿದೆ. ವರದಕ್ಷಿಣೆ ಪೀಡನೆಯಿಂದ ಹೆಣ್ಣುಮಗಳೊಬ್ಬಳು ಬೆಂಕಿ
ಹಚ್ಚಿಕೊಂಡು ಸಾವಪ್ಪಿದಳೆಂದು ದಾಖಲಾದರೂ ಯಾವುದೋ ಕ್ಷಣದಲ್ಲಿ ತನ್ನ ತವರಿನ ಪ್ರತಿಷ್ಠೆಗೆ
ಧಕ್ಕೆ ಬಂತೆಂದೋ, ತನ್ನ ಪ್ರೀತಿಯ ಅಪ್ಪನಿಗೆ ಅಪಮಾನ ಮಾಡಿದರೆಂದೋ ಮನಸ್ಸು ತೀರಾ
ಘಾಸಿಗೊಂಡಿರುತ್ತದೆ.

ರೈತರ ಆತ್ಮಹತ್ಯೆಯಲ್ಲೂ ಸಾಲದ ಹೊರೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಸ್ವಯಂ
ಪ್ರತಿಷ್ಠೆಗೆ, ಸ್ವಾಭಿಮಾನಕ್ಕೆ ಧಕ್ಕೆ ಬರುವಂಥ ಎಂಥದ್ದೋ ಮಾತು ಯಾರದ್ದೋ ಬಾಯಿಂದ
ಬಂದಿದ್ದೇ ಮುಖ್ಯ ಕಾರಣ ಇದ್ದೀತು. ಇಷ್ಟಕ್ಕೂ ಅಪಮಾನ ಬೇರೆಯವರಿಂದಲೇ ಆಗಬೇಕಿಲ್ಲ.
ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮ ಆತ್ಮಗೌರವವನ್ನು ತಾವೇ
ಅಪಮೌಲ್ಯಗೊಳಿಸಿಕೊಳ್ಳುತ್ತಾರೆ. ಆತ್ಮಹತ್ಯೆಯ ದಾರಿ ಹುಡುಕುತ್ತಾರೆ.

ಕಳೆದ ಮಾರ್ಚ್ 1ರಂದು, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ನೇಹಾ ರೆಡ್ಡಿ ಎಂಬ
ಯುವತಿ ತನ್ನ ಬಾಯ್‌ಫ್ರೆಂಡ್ ಭೇಟಿಗೆ ಹೋಗಿ ಅದೆಂಥ ಅವಮಾನವಾಯಿತೊ, ಆತನ ಮನೆಯ ಛಾವಣಿಯಿಂದ
ಕೆಳಕ್ಕೆ ಧುಮುಕಿ ಆತ್ಮಾರ್ಪಣೆ ಮಾಡಿಕೊಂಡಳು. ಅದೇ ತಿಂಗಳು 30ರಂದು ಬೆಂಗಳೂರಿನ ಕೇಂಬ್ರಿಜ್
ಸ್ಕೂಲಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಪಾರ್ಥಿಬನ್ ಎಂಬ ಹುಡುಗ ಮನೆಗೆ ಬಂದವನೇ ನೇಣು
ಹಾಕಿಕೊಂಡ.

‘ನಿಮ್ಮ ಮಗನಿಗೆ ಬೇರೆ ಯಾವುದಾದರೂ ಶಾಲೆಯನ್ನು ನೋಡಿಕೊಳ್ಳಿ. ಇಷ್ಟೊಂದು ವಿಷಯಗಳಲ್ಲಿ ಫೇಲ್
ಆಗುವ ಆತ ನಮಗೆ ಬೇಡ’ ಎಂದು ಶಾಲೆಯವರು ಪಾಲಕರಿಗೆ ಬರೆದಿದ್ದ ಪತ್ರ ಆತನ ಚೀಲದಲ್ಲಿತ್ತು.

ಇವೆಲ್ಲ ಅವಮಾನದ ಮೇಲ್ನೋಟಗಳಾದವು. ಆದರೆ ಅವಮಾನಿತ ಮಿದುಳಲ್ಲಿ ಏನಾಗುತ್ತದೆ ಎಂಬ ಚಿತ್ರಣ
ಬೇಕಲ್ಲ? ಅವಮಾನವೇ ಅತಿ ಕ್ರೂರ ಮನೋದಂಡನೆ ಹೌದೆ ಅಲ್ಲವೇ ಎಂಬುದನ್ನು ಅಳೆದು ನೋಡಬೇಕಲ್ಲ?
ಆಮ್‌ಸ್ಟರ್ಡಾಮ್ ವಿಶ್ವವಿದ್ಯಾಲಯದ ಇಬ್ಬರು ಮನೋವಿಜ್ಞಾನಿಗಳು ಅದನ್ನು ಅಳೆಯಲು ಹೊರಟರು.

ಪ್ರಯೋಗಕ್ಕೆ ತಲೆಯೊಡ್ಡಲು ಬಂದ ಯುವಕ, ಯುವತಿಯರ ತಲೆಗೆ ಇಇಜಿ ಬಿಲ್ಲೆಗಳನ್ನು ಅಂಟಿಸಿ ಕೈಗೆ
ಕತೆ ಪುಸ್ತಕ ಕೊಟ್ಟರು. ಕತೆಯಲ್ಲಿ ಬರುವ ವ್ಯಕ್ತಿ ತಾನೇ ಎಂದು ಪರಿಗಣಿಸಿ ಮನಸ್ಸು ಕೊಟ್ಟು
ಓದಲು ಹೇಳಿದರು. ದುಃಖ, ನಿರಾಸೆ, ಅವಮಾನ, ಕೋಪ ಬರುವಂಥ 

[ms-stf '61791'] ಅವಮಾನ, ಸ್ವಾಭಿಮಾನ ಮತ್ತು ಆತ್ಮಹತ್ಯೆ

2016-07-16 Thread HAREESHKUMAR K Agasanapura
http://m.prajavani.net/article/2016_07_14/423603

*ಅವಮಾನ, ಸ್ವಾಭಿಮಾನ ಮತ್ತು ಆತ್ಮಹತ್ಯೆ*

14 Jul, 2016

ನಾಗೇಶ್ ಹೆಗಡೆ








ಕಳೆದ ಎರಡು ವಾರಗಳಲ್ಲಿ ಸಂಭವಿಸಿದ ನಾಲ್ಕೂ ಆತ್ಮಹತ್ಯೆಗಳಲ್ಲಿ ಕಂಡುಬಂದ ಒಂದು ಸಮಾನ ಅಂಶ
ಏನು ಗೊತ್ತೆ? ಅಪಮಾನ. ಹದಿನಾಲ್ಕರ ಹರೆಯದ ಹೈಸ್ಕೂಲ್ ವಿದ್ಯಾರ್ಥಿ ರೌನಕ್ ಬ್ಯಾನರ್ಜಿ
ಶಾಲೆಯಿಂದ ಬಂದವನೇ 19ನೇ ಅಂತಸ್ತಿನ ತನ್ನ ಮನೆಯ ಬಾಲ್ಕನಿಯಿಂದ ಕೆಳಕ್ಕೆ ಜಿಗಿದು ಪ್ರಾಣ
ಕಳೆದುಕೊಂಡ.

‘ಕಿಲಾಡಿ ಹುಡುಗರ ಒಂದಿಡೀ ತಂಡ ಪ್ರತಿದಿನವೂ ನನ್ನನ್ನು ಛೇಡಿಸಿ ಅವಮಾನ ಮಾಡುತ್ತಿದೆ.
ನನ್ನಿಂದ ಇನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂಬ ಅರ್ಥದ ಚೀಟಿಯೊಂದು ಅವನ
ಬ್ಯಾಗಿನಲ್ಲಿತ್ತು. ಇನ್ನು, ಡಿವೈಎಸ್‌ಪಿ ಕಲ್ಲಪ್ಪ ಹಂಡೀಬಾಗ ಮತ್ತು ಇನ್ನೊಬ್ಬ
ಡಿವೈಎಸ್‌ಪಿ ಎಂ.ಕೆ.ಗಣಪತಿ ಕೂಡ ತಮ್ಮ ಆತ್ಮಹತ್ಯೆಗೆ ಯಾವ ಸಂದರ್ಭಗಳು ಕಾರಣ ಎಂಬುದರ ದಾಖಲೆ
ಉಳಿಸಿಯೇ ನೇಣಿಗೆ ತಲೆ ಕೊಟ್ಟಿದ್ದಾರೆ.

ರೌನಕ್ ಮಾದರಿಯಲ್ಲಿ ತನಗೆ ಅಪಮಾನವಾಗಿದೆ ಎಂದು ನೇರವಾಗಿ ಹೇಳಿಲ್ಲವಾದರೂ ಮೇಲಿನವರ ಎದುರು
ತನಗೆ ಮುಖಭಂಗವಾಗಿದೆ, ತನ್ನ ವ್ಯಕ್ತಿತ್ವದ ಅವಹೇಳನವಾಗಿದೆ ಎಂಬುದರ ಬಗ್ಗೆ ಧಾರಾಳ
ಸಾಕ್ಷ್ಯಗಳನ್ನು ಬಿಟ್ಟು ಹೋಗಿದ್ದಾರೆ.

ಈ ಘಟನೆಗಳ ಕುರಿತು ಚರ್ಚೆ ನಡೆಯುತ್ತಿದ್ದಾಗಲೇ, ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ
ಓದುತ್ತಿದ್ದ 23ರ ಯುವತಿ ಸೋಫಿಯಾ ಜುಲೈ 10ರಂದು ತನ್ನ ಹಾಸ್ಟೆಲಿನಲ್ಲಿ ನೇಣು ಹಾಕಿಕೊಂಡಳು.
ಅವಳು ತರಗತಿಗೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಸಂಗತಿ ಅಮ್ಮನಿಗೆ ಗೊತ್ತಾಗಿತ್ತು.

ಮಾಧ್ಯಮಗಳ ವರದಿಯ ಪ್ರಕಾರ, ಮಗಳ ಶಿಕ್ಷಣ ಶುಲ್ಕವನ್ನು ಕಟ್ಟಲೆಂದು ಎರಡು ದಿನಗಳ ಹಿಂದೆ
ಕಾಲೇಜಿಗೆ ಬಂದ ಅಮ್ಮ ಎಲ್ಲ ವಿದ್ಯಾರ್ಥಿನಿಯರ ಎದುರು ಸೋಫಿಯಾಗೆ ಬೈದಿದ್ದಳು. ಅದನ್ನೇ
ಮನಸ್ಸಿಗೆ ಹಚ್ಚಿಕೊಂಡ ಯುವತಿ ಅದೆಷ್ಟು ಹಿಂಸೆಪಟ್ಟಳೊ, ಇಹಲೋಕ ತ್ಯಜಿಸಿದಳು. ಅಪಮಾನ
ಎಂಬುದು ಅಷ್ಟೊಂದು ತೀವ್ರವಾಗಿ ಮನಸ್ಸನ್ನು ಘಾಸಿ ಮಾಡುತ್ತದೆಯೆ?

ಎಚ್ಚರವಿದ್ದಷ್ಟು ಹೊತ್ತೂ ನಮ್ಮ ಮನಸ್ಸು ನಾನಾ ಘಟನೆಗಳನ್ನು ಮೆಲುಕು ಹಾಕುತ್ತಿರುತ್ತದೆ.
ಸಂತಸ, ಉದ್ವೇಗ, ಜಿಗುಪ್ಸೆ, ಕಾತರ, ಶಂಕೆ, ಚಿಂತೆ, ಉಮ್ಮಳ, ಅಪಮಾನ, ಹೆಮ್ಮೆ, ನಾಚಿಕೆ,
ದುಃಖ, ಭಯ, ಅಸೂಯೆ, ಲಜ್ಜೆ, ಕೋಪ, ಹತಾಶೆ, ಸಂತೃಪ್ತಿ ಹೀಗೆ ನಾನಾ ಬಗೆಯ ಭಾವನೆಗಳು
ಮಿದುಳಿನಲ್ಲಿ ಮೂಡುತ್ತಿರುತ್ತವೆ. ಕೆಲವು ಮೂಡುತ್ತವೆ, ಮತ್ತೆ ಹಾಗೇ ಮಾಯವಾಗುತ್ತವೆ.

ಕೆಲವು ಘಟನೆಗಳನ್ನು ಮನಸ್ಸು ಮತ್ತೆ ಮತ್ತೆ ಮಥಿಸುತ್ತಿರುತ್ತದೆ. ಮನೋವಿಜ್ಞಾನಿಗಳ ಪ್ರಕಾರ
ಈ ಹತ್ತು ಹಲವು ಭಾವನೆಗಳಲ್ಲಿ ಅಪಮಾನವೇ ಎಲ್ಲಕ್ಕಿಂತ ಹೆಚ್ಚು ಹೊತ್ತು ಮನಸ್ಸಿನಲ್ಲಿ
ಕೂತಿರುತ್ತದೆ. ಮತ್ತೆ ಮತ್ತೆ ಮನಸ್ಸನ್ನು ಕಲಕುತ್ತಿರುತ್ತದೆ, ಕಾಡುತ್ತಿರುತ್ತದೆ.
ಪ್ರತೀಕಾರಕ್ಕೆ ಹಪಹಪಿಸುತ್ತದೆ. ಅದಕ್ಕೆ ಅವಕಾಶ ಇಲ್ಲದ ಸಂದರ್ಭದಲ್ಲಿ ಮನಸ್ಸು ಇಡೀ
ದೇಹವನ್ನೇ ದಂಡಿಸುತ್ತದೆ. ಆತ್ಮಘಾತುಕ ಕೃತ್ಯಕ್ಕೆ ದೇಹವನ್ನು ತಳ್ಳುತ್ತದೆ.

ಅದನ್ನು ವಿಜ್ಞಾನಿಗಳೇ ಹೇಳಬೇಕೆಂದೇನಿಲ್ಲ. ನಾಲ್ಕು ಜನರ ಎದುರಿಗೆ ಆಗುವ ಅವಮಾನದ ನೋವು
ಎಷ್ಟೆಂಬುದು ನಮಗೂ ಗೊತ್ತಿದೆ. ವೈರಿಯ ದೇಹಕ್ಕೆ ಗಾಯ ಮಾಡುವುದಕ್ಕಿಂತ ಆತನ/ಆಕೆಯ ಮನಸ್ಸಿಗೆ
ಗಾಯ ಮಾಡಿದರೇ ಹೆಚ್ಚು ನೋವಾಗುತ್ತದೆ ಎಂಬುದು ಎಲ್ಲ ಸಮಾಜದ ಎಲ್ಲರಿಗೂ ಗೊತ್ತಿದೆ.

ವೈರಿಯ ದೇಹವನ್ನು ಇರಿಯಲು ಬಳಸುವ ಶಸ್ತ್ರಾಸ್ತ್ರಗಳಿಗಿಂತ ಅದೆಷ್ಟೋ ಪಟ್ಟು ವೈವಿಧ್ಯಮಯ
ಶಸ್ತ್ರಗಳು ಬೈಗುಳಗಳ ರೂಪದಲ್ಲಿ ವಿಕಾಸಗೊಂಡಿವೆ (ಅದನ್ನು ನಾವು ಈಗಿನ ವಿಧಾನ ಸಭೆಯ
ಅಧಿವೇಶನದಲ್ಲಿ, ಅದರಲ್ಲೂ ಆತ್ಮಹತ್ಯೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲೇ ನೋಡುತ್ತಿದ್ದೇವೆ).

ಮುಕ್ತ ಸಮಾಜದಲ್ಲಿ ಅಂಥ ‘ಹರಿತ ನಾಲಗೆ’ಗೆ ಪೂರಕವಾಗಿ ಚಪ್ಪಲು, ಮಸಿ, ಮೂತ್ರ, ಅರೆಮುಂಡನ,
ಕತ್ತೆ ಮೆರವಣಿಗೆಯೇ ಮುಂತಾದ ಅಷ್ಟೇನೂ ದೇಹಕ್ಕೆ ಅಪಾಯಕಾರಿಯಲ್ಲದ, ಆದರೆ ಆತ್ಮಗೌರವವನ್ನು
ಕ್ರೂರವಾಗಿ ಘಾಸಿಗೊಳಿಸಬಲ್ಲ ನಾನಾ ಬಗೆಯ ಶಸ್ತ್ರಗಳು ರೂಪುಗೊಂಡಿವೆ.

ಈಗೀಗಂತೂ ವರದಿಯಾಗುವ ಬಹಳಷ್ಟು ಆತ್ಮಹತ್ಯೆ ಪ್ರಕರಣಗಳಿಗೆ ಅವಮಾನವೇ ಮುಖ್ಯ ಕಾರಣ
ಇದ್ದೀತೆಂದು ಯಾರೂ ತರ್ಕಿಸಬಹುದಾಗಿದೆ. ವರದಕ್ಷಿಣೆ ಪೀಡನೆಯಿಂದ ಹೆಣ್ಣುಮಗಳೊಬ್ಬಳು ಬೆಂಕಿ
ಹಚ್ಚಿಕೊಂಡು ಸಾವಪ್ಪಿದಳೆಂದು ದಾಖಲಾದರೂ ಯಾವುದೋ ಕ್ಷಣದಲ್ಲಿ ತನ್ನ ತವರಿನ ಪ್ರತಿಷ್ಠೆಗೆ
ಧಕ್ಕೆ ಬಂತೆಂದೋ, ತನ್ನ ಪ್ರೀತಿಯ ಅಪ್ಪನಿಗೆ ಅಪಮಾನ ಮಾಡಿದರೆಂದೋ ಮನಸ್ಸು ತೀರಾ
ಘಾಸಿಗೊಂಡಿರುತ್ತದೆ.

ರೈತರ ಆತ್ಮಹತ್ಯೆಯಲ್ಲೂ ಸಾಲದ ಹೊರೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಸ್ವಯಂ
ಪ್ರತಿಷ್ಠೆಗೆ, ಸ್ವಾಭಿಮಾನಕ್ಕೆ ಧಕ್ಕೆ ಬರುವಂಥ ಎಂಥದ್ದೋ ಮಾತು ಯಾರದ್ದೋ ಬಾಯಿಂದ
ಬಂದಿದ್ದೇ ಮುಖ್ಯ ಕಾರಣ ಇದ್ದೀತು. ಇಷ್ಟಕ್ಕೂ ಅಪಮಾನ ಬೇರೆಯವರಿಂದಲೇ ಆಗಬೇಕಿಲ್ಲ.
ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಲ್ಲಿ ಕೆಲವರು ತಮ್ಮ ಆತ್ಮಗೌರವವನ್ನು ತಾವೇ
ಅಪಮೌಲ್ಯಗೊಳಿಸಿಕೊಳ್ಳುತ್ತಾರೆ. ಆತ್ಮಹತ್ಯೆಯ ದಾರಿ ಹುಡುಕುತ್ತಾರೆ.

ಕಳೆದ ಮಾರ್ಚ್ 1ರಂದು, ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ನೇಹಾ ರೆಡ್ಡಿ ಎಂಬ
ಯುವತಿ ತನ್ನ ಬಾಯ್‌ಫ್ರೆಂಡ್ ಭೇಟಿಗೆ ಹೋಗಿ ಅದೆಂಥ ಅವಮಾನವಾಯಿತೊ, ಆತನ ಮನೆಯ ಛಾವಣಿಯಿಂದ
ಕೆಳಕ್ಕೆ ಧುಮುಕಿ ಆತ್ಮಾರ್ಪಣೆ ಮಾಡಿಕೊಂಡಳು. ಅದೇ ತಿಂಗಳು 30ರಂದು ಬೆಂಗಳೂರಿನ ಕೇಂಬ್ರಿಜ್
ಸ್ಕೂಲಿನಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ಪಾರ್ಥಿಬನ್ ಎಂಬ ಹುಡುಗ ಮನೆಗೆ ಬಂದವನೇ ನೇಣು
ಹಾಕಿಕೊಂಡ.

‘ನಿಮ್ಮ ಮಗನಿಗೆ ಬೇರೆ ಯಾವುದಾದರೂ ಶಾಲೆಯನ್ನು ನೋಡಿಕೊಳ್ಳಿ. ಇಷ್ಟೊಂದು ವಿಷಯಗಳಲ್ಲಿ ಫೇಲ್
ಆಗುವ ಆತ ನಮಗೆ ಬೇಡ’ ಎಂದು ಶಾಲೆಯವರು ಪಾಲಕರಿಗೆ ಬರೆದಿದ್ದ ಪತ್ರ ಆತನ ಚೀಲದಲ್ಲಿತ್ತು.

ಇವೆಲ್ಲ ಅವಮಾನದ ಮೇಲ್ನೋಟಗಳಾದವು. ಆದರೆ ಅವಮಾನಿತ ಮಿದುಳಲ್ಲಿ ಏನಾಗುತ್ತದೆ ಎಂಬ ಚಿತ್ರಣ
ಬೇಕಲ್ಲ? ಅವಮಾನವೇ ಅತಿ ಕ್ರೂರ ಮನೋದಂಡನೆ ಹೌದೆ ಅಲ್ಲವೇ ಎಂಬುದನ್ನು ಅಳೆದು ನೋಡಬೇಕಲ್ಲ?
ಆಮ್‌ಸ್ಟರ್ಡಾಮ್ ವಿಶ್ವವಿದ್ಯಾಲಯದ ಇಬ್ಬರು ಮನೋವಿಜ್ಞಾನಿಗಳು ಅದನ್ನು ಅಳೆಯಲು ಹೊರಟರು.

ಪ್ರಯೋಗಕ್ಕೆ ತಲೆಯೊಡ್ಡಲು ಬಂದ ಯುವಕ, ಯುವತಿಯರ ತಲೆಗೆ ಇಇಜಿ ಬಿಲ್ಲೆಗಳನ್ನು ಅಂಟಿಸಿ ಕೈಗೆ
ಕತೆ ಪುಸ್ತಕ ಕೊಟ್ಟರು. ಕತೆಯಲ್ಲಿ ಬರುವ ವ್ಯಕ್ತಿ ತಾನೇ ಎಂದು ಪರಿಗಣಿಸಿ ಮನಸ್ಸು ಕೊಟ್ಟು
ಓದಲು ಹೇಳಿದರು. ದುಃಖ, ನಿರಾಸೆ, ಅವಮಾನ, ಕೋಪ ಬರುವಂಥ 

[ms-stf '61296'] ಸಾವಯವ ಸೌರಕೋಶ ಅಭಿವೃದ್ಧಿ!

2016-07-06 Thread HAREESHKUMAR K Agasanapura
http://m.prajavani.net/article/2016_07_07/421959

*ಸಾವಯವ ಸೌರಕೋಶ ಅಭಿವೃದ್ಧಿ!*

Previous Next


7 Jul, 2016

ಎಸ್‌. ರವಿಪ್ರಕಾಶ್‌








*ಬೆಂಗಳೂರು:* ವಾಟರ್‌ ಹೀಟರ್‌, ಸೋಲಾರ್‌ ಪಂಪ್‌ಸೆಟ್‌, ಬೀದಿ ದೀಪ ಸೇರಿದಂತೆ ವಿವಿಧ ಬಗೆಯ
ಬಳಕೆಗೆ ಉಪಯೋಗಿಸುವ ಸಿಲಿಕಾನ್ ಆಧಾರಿತ ವಿದ್ಯುತ್‌ ಉತ್ಪಾದನಾ ಸೌರ ಕೋಶಗಳ ಫಲಕಗಳ
(ಸೋಲಾರ್‌ ಸೆಲ್ಸ್‌) ಜಾಗವನ್ನು ಇನ್ನು ಮುಂದೆ ‘ಸಾವಯವ ಮತ್ತು ಪಾಲಿಮೆರಿಕ್‌ ಸೌರ
ವಿದ್ಯುತ್‌ ಕೋಶ’ಗಳು ಆಕ್ರಮಿಸಲಿವೆ!

ಸೂರ್ಯನ ಬೆಳಕು ಹೀರಿ ವಿದ್ಯುತ್‌ ಉತ್ಪಾದಿಸುವ ಸಾವಯವ ಸೌರ ಕೋಶಗಳನ್ನು ಅತ್ಯಂತ ಕಡಿಮೆ
ವೆಚ್ಚದಲ್ಲಿ ತಯಾರಿಸಬಹುದು ಮತ್ತು ಪರಿಸರ ಸ್ನೇಹಿ. ಇಂತಹದ್ದೊಂದು ನವೀನ   ಬೆಂಗಳೂರಿನ
ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಐಐಎಸ್‌ಸಿಯ ‘ಸಾಲಿಡ್‌ ಸ್ಟೇಟ್‌ ಮತ್ತು ರಚನಾ ರಸಾಯನ ವಿಜ್ಞಾನ’ ವಿಭಾಗದ  ಡಾ. ಸತೀಶ್‌
ಪಾಟೀಲ ನೇತೃತ್ವದ ವಿಜ್ಞಾನಿಗಳ ತಂಡ ಸಾವಯವ ಮತ್ತು ಪಾಲಿಮೆರಿಕ್ ಆಧಾರಿತ ಸೌರ ಕೋಶಗಳನ್ನು
ಅಭಿವೃದ್ಧಿಪಡಿಸಿದೆ

ಈ  ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸತೀಶ್‌ ಅವರು, ‘ ಸೂರ್ಯನ ಬೆಳಕನ್ನು ಹೀರಿ
ವಿದ್ಯುತ್‌ ಉತ್ಪಾದಿಸುವ ಸೌರಕೋಶಗಳನ್ನು ತಯಾರಿಸಲು ಸಾಧ್ಯವಾಗಬಲ್ಲ ಸಾವಯವ ಮತ್ತು
ಪಾಲಿಮೆರಿಕ್ ವಸ್ತುವನ್ನು ಪ್ರಯೋಗಾಲಯದಲ್ಲಿಯೇ  ಅಭಿವೃದ್ಧಿಪಡಿಸಲಾಗಿದೆ.  ಅತ್ಯಂತ ಕಡಿಮೆ
ವೆಚ್ಚದಲ್ಲಿ ಪರಿಸರಸ್ನೇಹಿ ಸೌರಕೋಶ ಗಳನ್ನುತಯಾರಿಸಬಹುದಾಗಿದೆ’ ಎಂದರು.

‘ಸೂರ್ಯನ ಬೆಳಕನ್ನು ಪಡೆದು  ವಿದ್ಯುತ್‌ ಉತ್ಪಾದಿಸುವ ಮೂರನೇ ತಲೆಮಾರಿನ ಸೌರಕೋಶ ಇದಾಗಿದೆ.
ವೈವಿಧ್ಯ ಬಳಕೆಯ ಮೂಲಕ ಕೋಟಿಗಟ್ಟಲೆ ಗ್ರಾಮೀಣ ಜನರ ಮನೆಗಳನ್ನು ಬೆಳಗುವ ಸಾಮರ್ಥ್ಯ
ಇದಕ್ಕಿದೆ.

ನಾವು ಸಿಲಿಕಾನ್‌ ಸೌರಕೋಶಗಳಿಗೆ ಪರ್ಯಾಯ ಸೌರಕೋಶ ಅಭಿವೃದ್ಧಿಪಡಿಸುವ ಸಂಶೋಧನೆಯನ್ನು
ಆರಂಭಿಸಿದ್ದೆವು. ಅದೀಗ ಕೈಗೂಡಿದೆ. ಈ ತಂತ್ರಜ್ಞಾನವನ್ನು ಇನ್ನಷ್ಟು ಉನ್ನತೀಕರಿಸಬೇಕಿದೆ’
ಎಂದು ಅವರು ಹೇಳಿದರು.

ಹೊಸ ಸೌರಕೋಶಗಳು ಸಾಂಪ್ರದಾಯಿಕ ಸೌರ ಕೋಶಗಳಂತೆಯೇ ಕಾರ್ಯ ನಿರ್ವಹಿಸುತ್ತದೆಯಾದರೂ ಸದ್ಯಕ್ಕೆ
ಇದರ  ಕ್ಷಮತೆ ಸಿಲಿಕಾನ್‌ ಆಧಾರಿತ ಸೌರ ಕೋಶಗಳಿಗಿಂತ ಕಡಿಮೆಯೇ ಇದೆ. ಇದಕ್ಕಿರುವ
ಪರಿಹಾರವೆಂದರೆ, ರಾಸಾಯನಿಕ ಬಂಧದಲ್ಲಿ ಮಾರ್ಪಾಡು ಮಾಡುವುದು. ಈ ರೀತಿ ಮಾರ್ಪಾಡು
ಮಾಡುವುದರಿಂದ ಕೋಶಗಳ ಕ್ಷಮತೆ ಯನ್ನು ಹೆಚ್ಚಿಸಬಹುದು ಎನ್ನುತ್ತಾರೆ ಸತೀಶ್‌ ಪಾಟೀಲ.

ಹೊಸ ಬಗೆಯ ಸಾವಯವ ಸೌರಕೋಶಗಳು ರಚನೆಯು ಇಂಗಾಲಾಮ್ಲವನ್ನು ಒಳಗೊಂಡಿರುತ್ತವೆ. ಇದು ಸಾವಯವ
ವಸ್ತುವಿನ ಅವಿಭಾಜ್ಯ ಅಂಗವೇ ಆಗಿರುವುದರಿಂದ ಸೌರ ಕೋಶಗಳನ್ನು ಸುಲಭವಾಗಿ ಕೆಳದರ್ಜೆಗೆ
ಇಳಿಸಬಹುದಾಗಿದೆ.

*ಕೋಶಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ*
ಸಾಮಾನ್ಯ ಅರೆವಾಹಕ ಆಧಾರಿತ (ಸೆಮಿಕಂಡಕ್ಟರ್‌)  ವಿದ್ಯುದಂಶಗಳು (ಧನ ಅಥವಾ ಋಣ) ವಿದ್ಯುತ್‌
ಶಕ್ತಿಯನ್ನು ತಯಾರಿಸುತ್ತವೆ.  ಸ್ವತಂತ್ರವಾಗಿ ಚಲಿಸುವ ವಿದ್ಯುದಂಶಗಳು ಸೌರಕೋಶದ ಮೇಲೆ
ಬೀಳುವ ಸೂರ್ಯನ ಕಿರಣಗಳಿಂದ ಉಂಟಾಗುತ್ತವೆ.

ಸಾವಯವ ಸೌರಕೋಶಗಳಲ್ಲಿ ಕೋಶವೇ ಸೂರ್ಯನ ಬೆಳಕನ್ನು ಹೀರಿಕೊಂಡಾಗ ದಾನಿ ಮತ್ತು ಸ್ವೀಕೃತ
ಸಾವಯವ ವಸ್ತುಗಳು ‘ಉದ್ಯುಕ್ತ ಸ್ಥಿತಿ‘ಯನ್ನು (exite)ತಲುಪುತ್ತವೆ. ಇದರಿಂದ ಧನ ಮತ್ತು ಋಣ
ವಿದ್ಯುದಂಶವು ಉಂಟಾಗುತ್ತದೆ. ಇದು ಎಕ್ಸಿಟಾನ್‌ ಎಂಬ ಸ್ಥಿತಿಯಲ್ಲಿ ಬಂಧಿಯಾಗಿರುತ್ತದೆ.

ಈ ಎಕ್ಸಿಟಾನ್‌ಗಳು ಪ್ರತ್ಯೇಕ ವಿದ್ಯುದಂಶಗಳಾಗಿ ಒಡೆಯುವ ಪ್ರಕ್ರಿಯೆಯಿಂದ ವಿದ್ಯುತ್‌
ಉತ್ಪಾದನೆ ಆಗುತ್ತದೆ. ಸಾಮಾನ್ಯವಾಗಿ ವಿರುದ್ಧ ವಿದ್ಯುದಂಶಗಳನ್ನು ಬಂಧಿಸುವ ಶಕ್ತಿ
ಎಷ್ಟಿರುತ್ತದೆ ಎಂದರೆ, ಕೋಶವು ಕಡಿಮೆ ಶಕ್ತಿ ಪರಿವರ್ತನೆಯ ಸಾಮರ್ಥ್ಯವನ್ನು
ತೋರ್ಪಡಿಸುತ್ತದೆ.

ಡಾ. ಪಾಟೀಲ ಮತ್ತು ಸಂಗಡಿಗರು, ಈ ಬಂಧ ಶಕ್ತಿಯನ್ನು ಕಡಿಮೆ ಮಾಡುವ  ವಿಧಾನವನ್ನು
ಕಂಡುಹಿಡಿದಿದ್ದಾರೆ. ಇದು ಸಾವಯವ ವಸ್ತುಗಳ ಇತರ ಕಾರ್ಯಗಳಿಗೆ ತೊಂದರೆ ಆಗದಂತೆ ರಾಸಾಯನಿಕ
ಪರಿವರ್ತನೆಯನ್ನು ತರುತ್ತದೆ.

*ಸಿಲಿಕಾನ್‌ ಬಳಕೆ  ಪರಿಸರಕ್ಕೆ ಮಾರಕ*
ಸಿಲಿಕಾನ್‌ ಆಧಾರಿತ  ಸೌರಕೋಶ ಅರೆವಾಹಕ ಸಾಧನವಾಗಿದೆ. ಇಂತಹ ಸೌರ ಕೋಶ ಸಾಧನವನ್ನು
ತಯಾರಿಸಲು ಭಾರಿ ಪ್ರಮಾಣದ ಶುದ್ಧ ಸಿಲಿಕಾನ್‌ ಖನಿಜವನ್ನು ಬಳಸಲಾಗುತ್ತದೆ. ಒಂದು ಕಡೆ ಅಪಾರ
ಪ್ರಮಾಣದ ಸಿಲಿಕಾನ್‌ ಅಗತ್ಯವಿದ್ದರೆ, ಇದಕ್ಕಾಗಿ ಅಪಾರ ಹಣವೂ ಬೇಕಾಗುತ್ತದೆ.

ಹರಳುಗಟ್ಟಿದ ಸಿಲಿಕಾನ್‌ ಅನ್ನು ಕೆಳ ದರ್ಜೆಗೆ ಇಳಿಸುವುದೂ ಕಷ್ಟ. ಇದರ ಉತ್ಪಾದನಾ
ಪ್ರಕ್ರಿಯೆಯಲ್ಲಿ ಅಪಾಯಕಾರಿ ರಾಸಾಯನಿಕವನ್ನು ಬಳಸಲಾಗುತ್ತದೆ. ಆದರೆ, ಸಾವಯವ ಆಧಾರಿತ
ಸೌರಕೋಶಗಳ ತಯಾರಿಕೆ ಇವೆಲ್ಲ ಸಮಸ್ಯೆ ಇಲ್ಲ.

Hareeshkumar K
GHS HUSKURU
MALAVALLI TQ
MANDYA DT
MOB 9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit 

[ms-stf '60942'] ನಿಮ್ಮ ಇ-ಪುಸ್ತಕ ನೀವೇ ಪ್ರಕಟಿಸಿ!

2016-06-30 Thread HAREESHKUMAR K Agasanapura
http://m.prajavani.net/article/2016_06_30/420312

*ನಿಮ್ಮ ಇ-ಪುಸ್ತಕ ನೀವೇ ಪ್ರಕಟಿಸಿ!*

30 Jun, 2016

ದಯಾನಂದ








ಬರೆದ ಪುಸ್ತಕಕ್ಕೆ ಪ್ರಕಾಶಕರು ಸಿಗುತ್ತಿಲ್ಲ ಎಂಬುದು ಬರಹಗಾರರ ಸಾಮಾನ್ಯ ಕೊರಗು.
ಹಸ್ತಪ್ರತಿ ಹಿಡಿದು ಹಲವು ಪ್ರಕಾಶಕರ ಕಚೇರಿ/ಮನೆಗಳಿಗೆ ಅಲೆದರೂ, ಹಲವರಿಗೆ ಇ-ಮೇಲ್‌ ಮಾಡಿ
ಕಾದರೂ ಪುಸ್ತಕಕ್ಕೆ ಪ್ರಕಟಣೆಯ ಭಾಗ್ಯ ಸಿಗುವುದು ಸುಲಭದ ಮಾತಂತೂ ಅಲ್ಲ. ಹೊಸ ಬರಹಗಾರರ
ಮಾತು ಒತ್ತಟ್ಟಿಗಿರಲಿ ಹೆಸರು ಮಾಡಿದ ಬರಹಗಾರರೂ ತಮ್ಮ ಪುಸ್ತಕ ಪ್ರಕಟವಾಗಲು ಸರದಿ
ಕಾಯಬೇಕಾದ ಸ್ಥಿತಿ ಇದೆ.

ಬರೆದ ಪುಸ್ತಕ ಹಳೆಯದಾಗುತ್ತಾ ಕೊಳೆಯುವ ಬದಲು ಪುಸ್ತಕ ‘ಇ-ಬುಕ್‌’ನ ಅವತಾರದಲ್ಲಿ
ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡಲು ಸಾಧ್ಯವಿದೆ. ಹಸ್ತಪ್ರತಿಯ ಪಿಡಿಎಫ್‌ ಫೈಲ್‌ ನಿಮ್ಮ
ಬಳಿ ಇದ್ದರೆ ಸಾಕು, ನಿಮಿಷದಲ್ಲೇ ನೀವು ಇ-ಬುಕ್‌ ಪ್ರಕಟಿಸಬಹುದು. ಪ್ರಕಟಿಸಿದ
ಇ-ಪುಸ್ತಕವನ್ನು ಕ್ಷಣದಲ್ಲೇ ಗೆಳೆಯರೊಂದಿಗೆ ಹಂಚಿಕೊಳ್ಳಲೂಬಹುದು.

ಇ-ಪುಸ್ತಕ ಪ್ರಕಟಣೆಗೆ ಹಲವು ಸಾಫ್ಟ್‌ವೇರ್‌ಗಳು ಲಭ್ಯವಿವೆ. ಆದರೆ ಆನ್‌ಲೈನ್‌ನಲ್ಲಿ
ಸುಲಭವಾಗಿ ಇ-ಪುಸ್ತಕ ಪ್ರಕಟಿಸಲು issuu.com ಬಳಕೆದಾರ ಸ್ನೇಹಿಯಾದ ಉಚಿತ ಅಂತರ್ಜಾಲ
ವೇದಿಕೆ.

ನಿಮ್ಮ ಹಸ್ತಪ್ರತಿಯ ಪಿಡಿಎಫ್‌ ಫೈಲ್‌ ಕೆಲವೇ ಹಂತಗಳನ್ನು ಪೂರೈಸಿ ಇ-ಪುಸ್ತಕದ ರೂಪ ಪಡೆಯಲು
ಈ ಜಾಲತಾಣ ಸಹಕಾರಿ. ಸರಳ ಹಂತಗಳಲ್ಲಿ ಇ-ಪುಸ್ತಕ ಪ್ರಕಟಿಸಲು ಸಾಧ್ಯವಿರುವ ಈ ಜಾಲತಾಣದ ಮೂಲಕ
ಈವರೆಗೆ ಲಕ್ಷಾಂತರ ಪುಸ್ತಕಗಳು ‘ಇ’ ಸ್ವರೂಪ ಪಡೆದುಕೊಂಡಿವೆ.

issuu.comಗೆ ಹೋಗಿ ನಿಮ್ಮ ಹೆಸರು, ಇ-ಮೇಲ್‌ ವಿಳಾಸ ನಮೂದಿಸಿ, ನಿಮಗೆ ಬೇಕಾದ
ಪಾಸ್‌ವರ್ಡ್‌ ನೀಡಿ ಸೈನ್‌ಇನ್‌ ಆದರೆ ಸಾಕು, ಇ-ಪ್ರಕಟಣೆಯ ಅಸ್ತ್ರ ನಿಮ್ಮ
ಕೈಯಲ್ಲಿದ್ದಂತೆಯೆ. ನಿಮ್ಮ ಹಸ್ತಪ್ರತಿಯ ಪಿಡಿಎಫ್‌ ಫೈಲ್‌ ಸೆಲೆಕ್ಟ್‌ ಮಾಡಿ, ಅಪ್‌ಲೋಡ್‌
ಮಾಡಿ, ಪಬ್ಲಿಷ್‌ ಕ್ಲಿಕ್ಕಿಸಿದರೆ ಮುಗಿಯಿತು, ನಿಮ್ಮ ಹಸ್ತಪ್ರತಿ ಇ-ಪುಸ್ತಕವಾಗಿ
ನಿಮ್ಮೆದುರು ತೆರೆದುಕೊಳ್ಳುತ್ತದೆ.

ಪುಸ್ತಕ ಮಾತ್ರವಲ್ಲ, ನಿಮ್ಮ ರಚನೆಯ ಚಿತ್ರಗಳ ಸಂಕಲನ, ಗ್ರಾಫ್‌ಗಳ ಪಿಡಿಎಫ್‌ ಫೈಲ್‌ಗಳಿಗೂ
ನೀವು ಇ-ಪುಸ್ತಕದ ರೂಪ ನೀಡಬಹುದು. ಖಾಸಗಿ ಪ್ರಕಟಣೆಯ ನಿಯತಕಾಲಿಕೆಗಳು, ಕಾಲೇಜಿನ ವಾರ್ಷಿಕ
ಸಂಚಿಕೆ, ಕಿರುಪತ್ರಿಕೆಗಳಿಗೆ ಹಾಗೂ ಮುದ್ರಣವಾಗುವ ಪುಸ್ತಕಕ್ಕೂ ‘ಇ’ರೂಪ ನೀಡುವುದು
issuu.com ಮೂಲಕ ಸುಲಭ.

ಪ್ರಕಟಿಸಿದ ಇ-ಪುಸ್ತಕವನ್ನು ಮತ್ತೆ ಎಡಿಟ್‌ ಕೂಡ ಮಾಡಬಹುದು. ಅಪ್‌ಲೋಡ್‌ ಆದ ಪುಸ್ತಕವನ್ನು
ಫೇಸ್‌ಬುಕ್‌, ಟ್ವಿಟರ್‌ ಖಾತೆಗಳಲ್ಲಿ ಹಂಚಿಕೊಳ್ಳಬಹುದು. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲೂ
ನಿಮ್ಮಇ-ಪುಸ್ತಕ ಹರಿದಾಡುವಂತೆ ಮಾಡಲು ಸಾಧ್ಯವಿದೆ.

ಉಚಿತವಾಗಿ ಬೇಸಿಕ್‌ ಟೂಲ್‌ಗಳಷ್ಟೇ ಲಭ್ಯವಿರುವ issuu.comನ ಪ್ರೀಮಿಯಂದಾರರು ನೀವಾದರೆ
ಇ-ಪುಸ್ತಕದ ಅಂದ ಹೆಚ್ಚಿಸುವ ಇನ್ನಷ್ಟು ಪಬ್ಲಿಷಿಂಗ್‌ ಟೂಲ್‌ಗಳು ನಿಮ್ಮದಾಗುತ್ತವೆ.

ಅದಕ್ಕಾಗಿ ನೀವು ತಿಂಗಳಿಗಿಷ್ಟು ಎಂದು ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಪ್ರೀಮಿಯಂ
ಗೊಡವೆ ಬೇಡವೆಂದರೆ ಉಚಿತವಾಗಿಯೇ ಇ-ಪುಸ್ತಕ ಪ್ರಕಟಿಸುವ ಅವಕಾಶವಂತೂ ಇದೆ.

ಇನ್ನೇಕೆ ತಡ, ಪುಸ್ತಕ ಪ್ರಕಟವಾಗಲಿಲ್ಲ ಎಂದು ಬೇಸರಿಸಿಕೊಳ್ಳುವ ಬದಲು ನೀವೇ ನಿಮ್ಮ ಪುಸ್ತಕ
ಪ್ರಕಟಣೆಗೆ ಸಿದ್ಧರಾಗಿ. ಅಂದಹಾಗೆ ನಿಮ್ಮ ಪುಸ್ತಕ ‘ಇ’ಸ್ವರೂಪ ಪಡೆಯಲು ಯೋಗ್ಯವಾಗಿದೆಯೇ
ಎಂಬುದನ್ನು ನಾಲ್ಕಾರು ಬಾರಿ ಯೋಚಿಸಿ ಪ್ರಕಟಣೆ ನಿರ್ಧಾರಕ್ಕೆ ಮುಂದಾಗಿ. ಇಲ್ಲವಾದರೆ ‘ಇ’
ವೇದಿಕೆಯಲ್ಲೂ ಜೊಳ್ಳು ಹೆಚ್ಚಾಗುವ ಅಪಾಯವಂತೂ ಇದ್ದೇಇದೆ.

Hareeshkumar K
GHS HUSKURU
MALAVALLI TQ
MANDYA DT
MOB 9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '60522'] ಇಜ್ಞಾನ ಡಾಟ್ ಕಾಮ್: ಮೀನಿನ ಬ್ಯಾಟರಿ!

2016-06-22 Thread HAREESHKUMAR K Agasanapura
http://www.ejnana.com/2016/06/blog-post_21.html?m=1

*ಮೀನಿನ ಬ್ಯಾಟರಿ!*

*ಕೊಳ್ಳೇಗಾಲ ಶರ್ಮ*



ಈ ವಾರ ಮೀನಿನದ್ದೇ ಸುದ್ದಿ. ಮೊನ್ನೆ ನಮ್ಮೂರ ಐಯಂಗಾರ್ ಬೇಕರಿಯಲ್ಲಿಯೂ ಮಂಗಳೂರಿನಿಂದ
ಮೀನಿನ ಸರಬರಾಜು ಕಡಿಮೆಯಾಗಿರುವ ಬಗ್ಗೆ ಭಯಂಕರ ಚರ್ಚೆ ನಡೆದಿತ್ತು. ಈ ವರ್ಷ ಮಳೆರಾಯ
ಕಾಲಿಡಲು ಹಿಂಜರಿಯುತ್ತಿರುವ ಕಾರಣ ಕಡಲಮೀನಿನ ಸಂತತಿಯೂ ಕಡಿಮೆಯಾಗಿದೆ ಎನ್ನುವುದು ಚರ್ಚೆ.
ಇದರ ಬೆನ್ನಲ್ಲೇ ಇನ್ನೊಂದು ಸುದ್ದಿ. ಮೀನುಗಳು ಮನುಷ್ಯರ ಮುಖಚರ್ಯೆಯನ್ನು
ಗುರುತಿಸಬಲ್ಲುವಂತೆ. ಅಂದರೆ ಅವು ನಮ್ಮನ್ನೂ, ನಿಮ್ಮನ್ನೂ ಬೇರೆ ಬೇರೆ ವ್ಯಕ್ತಿಗಳೆಂದು
ಗುರುತಿಸಬಲ್ಲವು ಎನ್ನುವ ಸುದ್ದಿ. ಇದಷ್ಟೇ ಸಾಲದು ಎನ್ನುವಂತೆ ಇನ್ನೊಂದು ಸುದ್ದಿಯೂ
ಬಂದಿದೆ. ಅದೆಂದರೆ ನಮ್ಮ, ನಿಮ್ಮ ಮೊಬೈಲು ಫೋನುಗಳನ್ನು ಚಾಲಿಸುವಂತಹ ಬ್ಯಾಟರಿ
ತಯಾರಿಸುವುದು.

ಷಾಕ್ ಆಯಿತೇ! ಇದೇನು ‘ನಾನ್-ವೆಜ್’ ಬ್ಯಾಟರಿ ಎಂದಿರಾ?
ಹೌದು. ಇದು ಮೀನಿನ ಮಾಂಸವಿರುವ ಬ್ಯಾಟರಿ. ಆದರೆ ಅಪ್ಪಟ ಪರಿಸರಸ್ನೇಹಿ. ಗಾಳಿ ಸೇರಿದರೆ
ನಮ್ಮ ಉಸಿರುಗಟ್ಟಿಸುವ ಸೀಸ, ಇದ್ದಕ್ಕಿದ್ದ ಹಾಗೆ ಸ್ಫೋಟಿಸುವ ನಿಕ್ಕಲ್-ಕ್ಯಾಡ್ಮಿಯಂ, ಅಥವಾ
ಅಪಾಯಕಾರಿ ಆಮ್ಲಗಳಾವುವು ಇಲ್ಲದ ಅಪ್ಪಟ ನೈಸರ್ಗಿಕ ಬ್ಯಾಟರಿ. ಸಮುದ್ರಜೀವಿ, ವಿದ್ಯುತ್-ರೇ
ಮೀನಿನ ಅಂಗದಿಂದ ಮಾಡಿದ ಬ್ಯಾಟರಿ. ಈಗ ನೀವು ಊಹಿಸಿದ್ದು ನಿಜ. ಸಮುದ್ರದಿಂದಲೇ ಎಲ್ಲವನ್ನೂ
ಪಡೆಯಬೇಕಾದ ಅನಿವಾರ್ಯತೆ ಇರುವ ಪುಟ್ಟ ದ್ವೀಪಗಳ ದೇಶ, ತಂತ್ರಜ್ಞಾನದ ಮುಂದಾಳು
ಜಪಾನಿನಲ್ಲದೆ ಬೇರಾರು ಈ ರೀತಿಯ ಸಾಧನೆ ಮಾಡುತ್ತಾರೆ ಹೇಳಿ. ಜಪಾನಿನ ಒಸಾಕಾದಲ್ಲಿರುವ
ಕ್ವಾಂಟಿಟೇಟಿವ್ ಬಯಾಲಜಿ ಸೆಂಟರ್ ನ ವಿಜ್ಞಾನಿ ಯೊ ತನಾಕ ಟೋಕಿಯೊ ದಂಕಿ ಹಾಗೂ ಟೋಕಿಯೋ
ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಜೊತೆಗೂಡಿ ಇಲೆಕ್ಟ್ರಿಕ್ ರೇ ಕುಟುಂಬಕ್ಕೆ ಸೇರಿದ ನಾರ್ಕೆ
ಜಪಾನಿಕ (Narke japonica) ವಿದ್ಯುತ್ ಮೀನುಗಳ ವಿಶೇಷ ಅಂಗಗಳನ್ನು ಬಳಸಿ ಬ್ಯಾಟರಿಗಳನ್ನು
ರೂಪಿಸಿದ್ದಾರೆ. ಈ ರೀತಿಯಲ್ಲಿಯೂ ವಿದ್ಯುತ್ತನ್ನು ತಯಾರಿಸುವ ಸಾಧ್ಯತೆಗಳತ್ತ ಬೆರಳು
ತೋರಿದ್ದಾರೆ. ಇವರ ಸಂಶೋಧನೆಯ ವಿವರಗಳು ನೇಚರ್ ಸೈಂಟಿಫಿಕ್ ರಿಪೋರ್ಟರ್ ಪತ್ರಿಕೆಯ
ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿವೆ.

ವಿದ್ಯುತ್ ಉತ್ಪಾದಿಸುವ ಜೀವಿಗಳೇ ಎಂದು ಅಚ್ಚರಿಯಾಗಬೇಕಿಲ್ಲ. ನಮ್ಮ, ನಿಮ್ಮಲ್ಲೂ ವಿದ್ಯುತ್
ಉತ್ಪಾದನೆಯಾಗುತ್ತಲೇ ಇರುತ್ತದೆ. ಈ ಲೇಖನವನ್ನು ನೀವು ನೋಡುವಾಗಲೂ ನಿಮ್ಮ ಕಣ್ಣಿನಿಂದ
ಮಿದುಳಿಗೆ ಒಂದು ವಿದ್ಯುತ್ ಹರಿವು ಇದ್ದೇ ಇರುತ್ತದೆ. ಪುಟ ತಿರುವುವಾಗಲೂ ನಿಮ್ಮ
ಮಿದುಳಿನಿಂದ ಪುಟ ತಿರುವುವ ಬೆರಳಿನವರೆಗೆ ವಿದ್ಯುತ್ ಹರಿದು ಕೈಯನ್ನು ಚಾಲಿಸುತ್ತದೆ.
ನರಕೋಶಗಳೆಂದರೆ ಒಂದು ರೀತಿ ವಿದ್ಯುತ್ ಬ್ಯಾಟರಿಗಳೇ. ಅವುಗಳೊಳಗಿನ ಲವಣಗಳು ಹೊರ ಹರಿದೋ, ಒಳ
ಹರಿದೋ ವಿದ್ಯುತ್ ಆವೇಶವುಂಟಾಗುತ್ತದೆ. ಇದು ಒಂದು ಕೋಶದಿಂದ ಇನ್ನೊಂದು ಕೋಶಕ್ಕೆ ಹರಿದು
ವಿದ್ಯುತ್ ಪ್ರವಾಹವಾಗುತ್ತದ. ಆದರೆ ಈ ವಿದ್ಯುತ್ತಿನ ಪ್ರಮಾಣ ಅತ್ಯಲ್ಪ. ನರಕೋಶಗಳ  ಈ
ಶಕ್ತಿಯನ್ನೇ ತಮ್ಮ ಅಸ್ತ್ರವನ್ನಾಗಿಸಿಕೊಂಡಿರುವ ಹಲವು ಜೀವಿಗಳಿವೆ.

ಇವುಗಳೆಲ್ಲವೂ ಜಲಜೀವಿಗಳೆನ್ನುವುದು ಒಂದು ವಿಚಿತ್ರವಾದರೂ ಸತ್ಯ. ಅದರಲ್ಲೂ ಟಾರ್ಪೆಡೋ
ಕುಟುಂಬದ ಮೀನುಗಳು ವಿದ್ಯುತ್ ಉತ್ಪಾದನೆಯಲ್ಲಿ ವಿಶೇಷಜ್ಞರು. ಇವುಗಳಲ್ಲಿ ವಿದ್ಯುತ್
ಉತ್ಪಾದಿಸಲೆಂದೇ ವಿಶೇಷ ಅಂಗವೊಂದಿದೆ. ಈ ಅಂಗದಲ್ಲಿ ಜೀವಕೋಶಗಳು ತೆಳು ಹಾಳೆಗಳಂತೆ
(ಇಲೆಕ್ಟ್ರೊಸೈಟ್) ಜೋಡಣೆಯಾಗಿವೆ. ಸಾವಿರಾರು ಇಂತಹ ಇಲೆಕ್ಟ್ರೊಸೈಟ್ ಗಳು ಒಂದಿನ್ನೊಂದರ
ಮೇಲೆ ಜೋಡಿಸಲ್ಪಟ್ಟಿವೆ. ಇವೆಲ್ಲವೂ ಒಟ್ಟಾಗಿ ವಿದ್ಯುತ್ ಅಂಗವಾಗುತ್ತದೆ. ಇಲೆಕ್ಟ್ರೊಸೈಟ್
ಗಳ ನಡುವಿರುವ ರಸವೇ ಈ ಜೈವಿಕ ಬ್ಯಾಟರಿಯಲ್ಲಿನ ಆಮ್ಲ. ಮೀನಿಗೆ ಚುರುಕು ತಾಗಿದಾಗ  ಈ
ಇಲೆಕ್ಟ್ರೊಸೈಟ್ ಗಳೊಳಗಿಂದ ಲವಣಗಳು ಹೊರ ಹರಿದು ಒಂದು ಬದಿ ಧನ ಧ್ರುವವಾಗಿಯೂ, ಮತ್ತೊಂದು
ಬದಿ ಋಣವಾಗಿಯೂ ರೂಪುಗೊಳ್ಳುತ್ತವೆ. ಆ ಕ್ಷಣದಲ್ಲಿ ಇದನ್ನು ಮುಟ್ಟಿದಿರೆನ್ನಿ ಭಯಂಕರ ಷಾಕ್
ಹೊಡೆಯುವುದು ಗ್ಯಾರಂಟಿ. ಇಲೆಕ್ಟ್ರಿಕ್ ರೇಗಳು ಸುಮಾರು ಎಂಟು ವೋಲ್ಟ್ ನಿಂದ 200 ವೋಲ್ಟ್
ವರೆಗಿನ (ನಮ್ಮ ಮನೆಯೊಳಗೆ ಹರಿಯುವ ವಿದ್ಯುತ್)ಷ್ಟು ವಿದ್ಯುತ್ತನ್ನು ಬೇಕೆಂದ ಹಾಗೆ
ಸೂಸಬಲ್ಲವು.

ಮೀನುಗಳ ಈ ಷಾಕ್ ಮನುಷ್ಯರನ್ನು ಕೊಂದ ಬಗ್ಗೆ ಇದುವರೆಗೂ ಯಾವ ವರದಿಯೂ ಇಲ್ಲ. ಆದರೆ ಮೀನುಗಳು
ಷಾಕ್ ನೀಡಿ ತಮ್ಮ ಬೇಟೆಗಳನ್ನು ದಂಗುಬಡೆಸುತ್ತವೆ. ಆಹಾರ ಸಂಪಾದಿಸಿಕೊಳ್ಳುತ್ತವೆ. ಅಥವಾ
ವೈರಿಗಳನ್ನು ಬಡಿದೋಡಿಸುತ್ತವೆ. ಇಂತಹ ವಿದ್ಯುತ್ ಅಂಗಗಳನ್ನು ನಮ್ಮ ಅನುಕೂಲಕ್ಕೆ
ಬಳಸಿಕೊಳ್ಳುವುದು ಸಾಧ್ಯ ಎನ್ನುತ್ತಾರೆ ತನಾಕ. ಇದಕ್ಕಾಗಿ ಇವರು ಮಾಡಿರುವುದು ಇಷ್ಟೆ.
ಇಲೆಕ್ಟ್ರೊಸೈಟ್ ಗಳನ್ನು ಸಣ್ಣ ತುಣುಕುಗಳನ್ನಾಗಿ ಮಾಡಿ, ಬ್ಯಾಟರಿಗಳಂತೆ ಜೋಡಿಸಿದ್ದಾರೆ.
ತದನಂತರ ಅವುಗಳನ್ನು ಪ್ರಚೋದಿಸಿದ್ದಾರೆ. ಈ ಪ್ರಚೋದನೆಗೆ ಪ್ರತಿಯಾಗಿ ಇಲೆಕ್ಟ್ರೊಸೈಟುಗಳು
ವಿದ್ಯುತ್ ಉತ್ಪಾದಿಸಿವೆ. ಈ ವಿದ್ಯುತ್ ಪ್ರಮಾಣ ಕಡಿಮೆ ಇರುವುದರಿಂದ ಅದನ್ನು ಸಂಗ್ರಹಿಸಲು
ಕೆಪ್ಯಾಸಿಟರ್ ಗಳನ್ನು ಜೋಡಿಸಿದ್ದಾರೆ. ಹೀಗೆ ಮಾಡಿದ ವಿದ್ಯುತ್ ಸರ್ಕೀಟಿನಲ್ಲಿ
ಟಾರ್ಚಿನಲ್ಲಿರುವ ಒಂದು ಎಲ್ ಇ ಡಿ ದೀಪವನ್ನು ಬೆಳಗಿಸುವಷ್ಟು ವಿದ್ಯುತ್ ಉತ್ಪಾದಿಸಿದ್ದಾರೆ.
ನಾನು ಹೇಳಿದ್ದು ಬಲು ಸರಳ ವಿಧಾನ. ವಾಸ್ತವವಾಗಿ ಇಲೆಕ್ಟ್ರೊಲೈಟುಗಳನ್ನು ಅಡ್ಡಾದಿಡ್ಡಿ
ಪ್ರಚೋದಿಸಿದರೆ ವಿದ್ಯುತ್ ಪ್ರವಾಹವೂ ಹಾಗೆಯೇ ಇರುತ್ತದೆ. ಅವಶ್ಯಕವಾದಷ್ಟು ವಿದ್ಯುತ್
ಉತ್ಪಾದನೆಯಾಗಬೇಕಾದರೆ ಎಲ್ಲ ಇಲೆಕ್ಟ್ರೊಲೈಟುಗಳೂ ಏಕತಾನದಂತೆ ಒಮ್ಮೆಲೇ ತುಡಿಯಬೇಕು.
ಇದಕ್ಕಾಗಿ ತನಾಕ ಇಲೆಕ್ಟ್ರೊಲೈಟುಗಳ ನಡುವೆ ಇರುವ ದ್ರವದ ಒತ್ತಡವನ್ನು ಏರಿಳಿಸಿದ್ದಾರೆ.
ದ್ರವದ ಒತ್ತಡ ಏರಿದಾಗ ಇಲೆಕ್ಟ್ರೊಲೈಟುಗಳು ವಿದ್ಯುತ್ ಸೂಸುತ್ತವೆ.

ಈ ಇಲೆಕ್ಟ್ರೊಲೈಟುಗಳ ನಡುವಣ ದ್ರವವಾದರೂ ಎಷ್ಟಿರುತ್ತದೆ? ಅದುವೂ ಜೀವಕೋಶಗಳಂತೆಯೇ ಅತಿ
ಅಲ್ಪ ಪ್ರಮಾಣದಲ್ಲಿರುವಂಥದ್ದು. ಅದನ್ನು ಅತಿಯಾಗಿ ಒತ್ತಿದರೂ, ಕಡಿಮೆ ಒತ್ತಿದರೂ ಬೇಕಿದ್ದ
ಕೆಲಸ ಆಗುವಂತಿಲ್ಲ.  ಈ ಕಾರಣದಿಂದ ತನಾಕ ಇಲೆಕ್ಟ್ರೊಲೈಟುಗಳ ಮೇಲೆ ಅತಿ ಸೂಕ್ಷ್ಮವಾದ
ಸೂಜಿಗಳ ಮೊನೆಯ ಚಾಪೆಯನ್ನು ಹಾಸಿದ್ದಾರೆ. ಈ ಸೂಜಿಗಳೊಳಗೆ ಅಸಿಟೈಲ್ ಕೋಲಿನ್ ಎನ್ನುವ
ರಾಸಾಯನಿಕವಿರುವ ದ್ರವವನ್ನು ತುಂಬಿದ್ದಾರೆ. ಅಸಿಟೈಲ್ ಕೋಲಿನ್ ನರಕೋಶಗಳು ಸೂಸುವ ಒಂದು
ವಿಶೇಷ ವಸ್ತು. ಇದು ಇತರೆ ಜೀವಕೋಶಗಳನ್ನು, ಅದರಲ್ಲೂ ವಿಶೇಷವಾಗಿ ನರಕೋಶಗಳನ್ನು,
ಪ್ರಚೋದಿಸುತ್ತದೆ. ಇಲೆಕ್ಟ್ರೊಲೈಟುಗಳಲ್ಲಿ ಇದುವೇ ವಿದ್ಯುತ್ ಉತ್ಪಾದನೆಗೆ ಪ್ರೇರಕ.

ಮುಳ್ಳಿನ ಚಾಪೆಯನ್ನು ಪ್ಲಾಸ್ಟಿಕ್ ಡಬ್ಬಿಯೊಂದರ ಮುಚ್ಚಳದ ತಳದಲ್ಲಿ ಹುದುಗಿಸಿ,
ಡಬ್ಬಿಯೊಳಗೆ ಇಲೆಕ್ಟ್ರೊಸೈಟುಗಳ ತುಣುಕನ್ನು ಇರಿಸಿದ್ದಾರೆ. ಡಬ್ಬಿಯೊಳಗೆ
ಇಲೆಕ್ಟ್ರೊಸೈಟುಗಳಿಗೆ ಶಕ್ತಿಯೊದಗಿಸುವ ಸಕ್ಕರೆಭರಿತ ದ್ರವವಿರುತ್ತದೆ. ಡಬ್ಬಿಯ ತಳ ಹಾಗೂ
ಮುಚ್ಚಳವನ್ನು ವಿದ್ಯುತ್ ಹರಿಯುವ ತಂತಿಗಳಿಂದ ಕೂಡಿಸಿದರೆ ಸರ್ಕೀಟು ಪೂರ್ಣವಾಗುವಂತೆ ಈ
ಡಬ್ಬಿಯನ್ನು ರಚಿಸಲಾಗಿದೆ.  ಟಾರ್ಚಿನಲ್ಲಿ ಹಲವು ಬ್ಯಾಟರಿಗಳನ್ನು ಜೋಡಿಸಿ ಹೆಚ್ಚು
ವಿದ್ಯುತ್ ಪಡೆಯುವಂತೆ, ಇವರೂ ಹಲವು ಇಂತಹ ಡಬ್ಬಿಗಳನ್ನು ಸರಣಿಯಲ್ಲಿ ಜೋಡಿಸಿದ್ದಾರೆ. ಈ
ವಿಧಾನವನ್ನು ಬಳಸಿದಾಗ ಡಬ್ಬಿಯೊಳಗೆ ತುಸು ಹೆಚ್ಚು ದ್ರವವನ್ನು ಒತ್ತಿದರೆ ಸಾಕು
ಇಲೆಕ್ಟ್ರೊಲೈಟುಗಳನ್ನು ಪ್ರಚೋದಿಸಬಹುದು. ವಿದ್ಯುತ್ ಉತ್ಪಾದಿಸಬಹುದು.

ತನಾಕ ಮತ್ತು ತಂಡದವರು ನಾರ್ಕೆ ಜಪಾನಿಕಾದ ಇಲೆಕ್ಟ್ರೊಸೈಟುಗಳನ್ನು ಈ ರೀತಿಯ ಬ್ಯಾಟರಿಯಲ್ಲಿ
ಬಳಸಿ 

[ms-stf '60102'] ಸೀನಿನ ಲೆಕ್ಕಾಚಾರ!

2016-06-18 Thread HAREESHKUMAR K Agasanapura
 ಸೀನಿನ ಲೆಕ್ಕಾಚಾರ!
*ಕೊಳ್ಳೇಗಾಲ ಶರ್ಮ*



ನಾನು ಸೀನಿದಾಗಲೆಲ್ಲ ಕೇಳುತ್ತಿದ್ದ ಮಾತು. “ಅಯ್ಯೋ. ಒಂಟಿ ಸೀನು ಸೀನಿಬಿಟ್ಟೆಯಲ್ಲೋ?
ಇನ್ನೊಂದು ಸೀನು ಸೀನಿಬಿಡು.” ಇದು ಅಮ್ಮ ಸೀನಿನಿಂದ ನಾನು ಪಡುತ್ತಿದ್ದ ಅವಸ್ಥೆಯನ್ನು ಕಂಡು
ತಮಾಷೆ ಮಾಡಲು ಹೇಳುತ್ತಿದ್ದಳೋ, ಅಥವಾ ಸೀನಿದ್ದರಿಂದಾದ ಮುಜುಗರ ಕಡಿಮೆಯಾಗುವಂತೆ ಸಮಾಧಾನ
ಮಾಡಲು ಹೇಳುತ್ತಿದ್ದಳೋ ಗೊತ್ತಿಲ್ಲ. ಒಟ್ಟಾರೆ ಸೀನುವುದು ಎಂದರೆ ಕಸಿವಿಸಿಯ ವಿಷಯ
ಎನ್ನುವುದಂತೂ ಮನಸ್ಸಿನಲ್ಲಿ ಗಟ್ಟಿಯಾಗಿ ನೆಲೆಯಾಗಿ ಬಿಟ್ಟಿದೆ. ಅಮ್ಮ ಏನೋ ಇನ್ನೊಮ್ಮೆ
ಸೀನು ಎಂದು ಬಿಡುತ್ತಿದ್ದಳು. ಆದರೆ ಹಾಗೆ ಬೇಕೆಂದ ಹಾಗೆ, ಬೇಕಾದಷ್ಟು ಬಾರಿ ಸೀನಲು ಆದೀತೇ?
ಅದೇನು ನಮ್ಮ ಮಾತು ಕೇಳುವ ವಿದ್ಯಮಾನವೇ?

ಹೀಗೆಂದು ನಾವು ನೀವು ಹೇಳಿಬಿಡಬಹುದು. ಆದರೆ ಅಮೆರಿಕದ ತಂತ್ರಜ್ಞಾನದ ಕಾಶಿ ಮಸ್ಯಾಚುಸೆಟ್ಸ್
ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಯಲ್ಲಿ ಭೌತವಿಜ್ಞಾನಿಯಾಗಿರುವ ಲಿಡಿಯಾ
ಬೋರೊಯಿಬಾ ಹೀಗೆನ್ನುವುದಿಲ್ಲ. ಹಾಗಂತ ಆಕೆಗೆ ಸದಾ ಸೀನುವ ಖಾಯಿಲೆ ಇದೆ ಎನ್ನಬೇಡಿ. ಆಕೆ
ಸೀನಿನ ಭೌತಶಾಸ್ತ್ರವನ್ನು ಲೆಕ್ಕ ಹಾಕುತ್ತಿರುವ ವಿಜ್ಞಾನಿ ಅಷ್ಟೆ. ಬೇಕೆಂದಾಗ ನಿಮಗೆ ಸೀನು
ತರಿಸಿ, ನೀವು ಸೀನುವ ಸಂದರ್ಭದಲ್ಲಿ ನಡೆಯುವ ವಿದ್ಯಮಾನವನ್ನು ಕೂಲಂಕಷವಾಗಿ ಲೆಕ್ಕಾಚಾರ
ಹಾಕುವ ಕೆಲಸದಲ್ಲಿ ಲಿಡಿಯಾ ನಿರತೆ. ಈಕೆಯ ಪ್ರಕಾರ ಸೀನುವ ಬಗ್ಗೆ ನಮಗೆ ಹೆಚ್ಚೇನೂ
ತಿಳಿದಿಲ್ಲವಂತೆ.

ನಿಜ. ಮೂಗಿಗೆ ಒಂದಿಷ್ಟು ಕಿರಿಕಿರಿಯಾದಾಗ ಫಟಾರನೆ ಆಗುವ ಮಹಾಸ್ಫೋಟವೇ ಸೀನು.
ಮೆಣಸಿನ ಪುಡಿ, ದೂಳಿನಂತಹ ಕಿರಿಕಿರಿಯುಂಟು ಮಾಡುವ ವಸ್ತುಗಳು ಮೂಗಿನೊಳಗೆ ಹೊಕ್ಕಾಗ ಅವನ್ನು
ಹೊರದೂಡಲು ನಮಗೆ ಪ್ರಕೃತಿ ನೀಡಿರುವ ವರ ಇದು ಎನ್ನುತ್ತಾರೆ ಜೀವಿವಿಜ್ಞಾನಿಗಳು. ಸೀನಲು
ಕಾರದ ಪುಡಿಯೋ, ನಶ್ಯವೋ ಇರಲೇ ಬೇಕೆಂದಿಲ್ಲ. ಉಸಿರಾಟದ ಅಂಗಗಳಿಗೆ ಸೂಕ್ಷ್ಮಾಣುಗಳು ಸೋಂಕಿ
ಕಾಯಿಲೆಯಾದಾಗಲೂ ಸೀನು ಬರುವುದುಂಟು. ಸಾಮಾನ್ಯವಾಗಿ ನೆಗಡಿ, ಫ್ಲೂ, ಮುಂತಾದ
ಸೋಂಕುಗಳಾದಾಗಲೂ ಸೀನುವುದು ಇದ್ದದ್ದೇ. ಸೀನಿನ ಹಾಗೆಯೇ ಕೆಮ್ಮೂ ಕೂಡ ಸ್ಫೋಟಕ ವಿದ್ಯಮಾನ.
ಎರಡೂ ಸಂದರ್ಭಗಳಲ್ಲಿ ಬಲೂನು ಒಡೆದಂತೆ ಇದ್ದಕ್ಕಿದ್ದ ಹಾಗೆ ಗಾಳಿ ಎದೆಯೊತ್ತಿಕೊಂಡು ಬಂದು
ಹೊರಗಡೆಗೆ ಸ್ಫೋಟಿಸುತ್ತದೆ. ಜೊತೆಗೆ ಮೂಗಿನಲ್ಲಿರುವ ಸಣ್ಣ ಕಣಗಳನ್ನೂ, ಹನಿಗಳನ್ನೂ ಹೊತ್ತು
ಬರುತ್ತದೆ. ಇದುವೇ ಸೀನು. ಬಾಯಿಯಿಂದ ಬಂದಾಗ ಅದು ಕೆಮ್ಮು.

ಕೆಮ್ಮು ಮತ್ತು ಸೀನಿನ ಬಗ್ಗೆ ವೈದ್ಯರಿಗೆ ಬಲು ಕಾಳಜಿ. ಏಕೆಂದರೆ ಹಲವು ರೋಗಗಳು
ಹರಡುವುದಕ್ಕೆ ಇವು ಮುಖ್ಯ ಕಾರಣವೆಂದು ಅವರು ನಂಬಿಕೆ. ಸೀನಿದಾಗ ಗಾಳಿಯ ಜೊತೆ ಹೊರಬೀಳುವ
ಸಣ್ಣ ಹನಿಗಳು ರೋಗಾಣುಗಳನ್ನು ಹೊತ್ತೊಯ್ಯುತ್ತವೆ. ಗಾಳಿಯಲ್ಲಿ ಹರಡುತ್ತವೆ. ಜೊತೆಗೇ
ಹನಿಗಳು ಸೂಕ್ಷ್ಮವಾಗಿದ್ದಷ್ಟೂ ಹೆಚ್ಚೆಚ್ಚು ದೂರಕ್ಕೆ ಪಸರಿಸುತ್ತವೆ ಎನ್ನುವುದು ವೈದ್ಯರ
ನಂಬಿಕೆ. ಆದ್ದರಿಂದಲೇ ನೆಗಡಿಯಾದವರ ಬಳಿ ಹೋಗಬೇಡಿ ಎನ್ನುವ ಸಲಹೆ. ಸಮೀಪ ಹೋಗಬೇಡಿ ಎಂದರೆ
ಎಷ್ಟು ಸಮೀಪ? ಕೋಣೆಯ ಈ ತುದಿಯಲ್ಲಿ ಕುಳಿತುಕೊಂಡು ಆ ತುದಿಯಲ್ಲಿರುವ ಕೆಮ್ಮಿನ ರೋಗಿಯನ್ನು
ಮಾತನಾಡಿಸಿದರೆ ಕ್ಷೇಮವಿರಬಹುದೇ? ಅಥವಾ ಇನ್ನೂ ಹತ್ತಿರ ಹೋದರೆ ತೊಂದರೆಯಿಲ್ಲವೇ? ಈ
ಪ್ರಶ್ನೆಗಳಿಗೆ ಬಹುಶಃ ವೈದ್ಯರೂ ಉತ್ತರ ಹೇಳರು. ಲಿಡಿಯಾಳ ಸಂಶೋಧನೆಯ ಗಮನವೆಲ್ಲವೂ ಇಂತಹ
ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರತ್ತ ಎಂದರೆ ತಪ್ಪೇನಿಲ್ಲ.

ಲಿಡಿಯಾ ಪ್ರಕಾರ ಸೀನು ಮತ್ತು ಕೆಮ್ಮು ದ್ರವಚಲನೆಯ ವಿದ್ಯಮಾನಗಳು. ಅರ್ಥಾತ್, ದ್ರವ
ಪದಾರ್ಥಗಳು ಗಾಳಿಯಲ್ಲಿ ಚಲಿಸುವ ಘಟನೆಗಳು. ಚಿಲುಮೆಯಿಂದ ಚಿಮ್ಮುವ ನೀರಿನ ಹನಿಗಳು
ಚಲಿಸುವಂತೆಯೇ ಇಲ್ಲಿಯೂ ಹನಿಗಳು ಚಲಿಸುತ್ತವೆ. ಆದ್ದರಿಂದ ಈ ಹನಿಗಳ ಚಲನೆಗೂ ಸೀನುವಾಗ
ಉಂಟಾಗುವ ಸ್ಫೋಟ (ಗಾಳಿಯ ಒತ್ತಡ) ದ ಬಲ ಹಾಗೂ ಉಸಿರಿನಲ್ಲಿರುವ ದ್ರವದ ಪ್ರಮಾಣಕ್ಕೂ
ಸಂಬಂಧವಿರಬೇಕು. ಇದನ್ನು ಅಧ್ಯಯನ ಮಾಡಿದರೆ ಬಹುಶಃ ಸೀನಿದಾಗ ಹನಿಗಳೆಷ್ಟು ದೂರ
ಹಾರಿಯಾವೆಂದು ಊಹಿಸಬಹುದು? ಅದಕ್ಕೆ ತಕ್ಕಂತೆ ರೋಗಿಗಳಿಂದ ದೂರವಿರಲೂ ಪ್ರಯತ್ನಸಿಬಹುದು.

ನಿಜ. ಇದು ದ್ರವಚಲನೆಯ ವಿದ್ಯಮಾನ. ಆದರೆ ಇಲ್ಲಿರುವ ದ್ರವದ ಹನಿಗಳು ಮಳೆಯ ಹನಿಗಳಂತೆಯೋ,
ಚಿಲುಮೆಯಿಂದ ಸಿಂಪರಿಸುವ ಹನಿಗಳಂತೆಯೇ ಏಕರೂಪದವಲ್ಲ. ನೀರಿನಂತಹ ಉಗುಳು, ಅಂಟಿನಂತಹ ಸಿಂಬಳ
ಮತ್ತು ಗಾಳಿ ಇವೆಲ್ಲವೂ ಕೂಡಿ ಉಂಟಾದ ವಿಶಿಷ್ಟ ದ್ರವ. ಈ ದ್ರವದ ಚಲನೆಯ ವೈಶಿಷ್ಟ್ಯವೇನೆಂದು
ತಿಳಿದಲ್ಲಿ ಅವು ಚಲಿಸುವ ದಿಕ್ಕು, ದೂರವನ್ನೆಲ್ಲ ಊಹಿಸಬಹುದು. ಹೀಗೆಂದು ಆಲೋಚಿಸಿರುವ
ಲಿಡಿಯಾ ಬೇಕೆಂದಾಗ ಸೀನುವಂತೆ ಮಾಡಿ ಸೀನಿನ ವೀಡಿಯೊ ಚಿತ್ರಣ ತೆಗೆಯುತ್ತಾರೆ. ಪ್ರತಿ
ಸೆಕೆಂಡಿಗೆ ನೂರಕ್ಕೂ ಹೆಚ್ಚು ಚಿತ್ರ ತೆಗೆಯುವ ತೀವ್ರಗತಿಯ ಛಾಯಾಗ್ರಹಣ ತಂತ್ರವನ್ನು ಈಕೆ
ಬಳಸುತ್ತಾರೆ. ಹೀಗೆ ದೊರೆತ ವೀಡಿಯೋ ಚಿತ್ರದಲ್ಲಿ ಸೀನಿದಾಗ ಉಂಟಾಗುವ ಕಣಗಳು ಹೇಗೆ
ಹರಡಿಕೊಳ್ಳುತ್ತವೆ ಎನ್ನುವುದನ್ನು ಗಮನಿಸಿ, ಅದಕ್ಕಾಗಿ ಒಂದು ಗಣೀತೀಯ ಮಾದರಿ (ಸೂತ್ರ)
ವನ್ನು ರೂಪಿಸಿದ್ದಾರೆ. ಈ ಮಾದರಿ ಸೀನಿದಾಗ ಬಾಯಿಯಿಂದ ಹೊರಬಂದ ಹನಿಗಳು ಎತ್ತ ಮತ್ತು ಹೇಗೆ
ಪಸರಿಸುತ್ತವೆ ಎಂದು ಲೆಕ್ಕ ಹಾಕಬಲ್ಲವು. ಸೀನಿನ ಸ್ಪಷ್ಟ ಚಿತ್ರವನ್ನು ತೋರಬಲ್ಲವು.

ಸೀನು ಎಂದರೆ ಒಂದು ಮಹಾಸ್ಫೋಟವಷ್ಟೆ. ಎದೆಯೊಳಗಿನ ಗಾಳಿಯ ಒತ್ತಡ ಇದ್ದಕ್ಕಿದ್ದ ಹಾಗೆ
ಹೆಚ್ಚಿ, ಥಟ್ಟನೆ ಬಾಯಿ-ಮೂಗಿನಿಂದ ಹೊರ ಚಿಮ್ಮುತ್ತದೆ. ಹೀಗೆ ಒತ್ತಡ ಹೆಚ್ಚಾಗುವಂತೆ ಮಾಡುವ
ದೇಹದ ಕ್ರಿಯೆಗಳ ಕಥೆಯೇ ಬೇರೆ. ಅದು ಇಲ್ಲಿ ಬೇಡ. ಆದರೆ ಸ್ಫೋಟಗೊಂಡು ಹೊರ ಬಂದ ಸೀನಿನ ಗಾಳಿ
ಮೊದಲಿಗೆ ದುಂಡಗಿನ ಬಲೂನಿನಂತೆಯೇ ಇರುತ್ತದೆ. ಕ್ರಮೇಣ ಸುತ್ತಲಿನ ಗಾಳಿಯ ಒತ್ತಡಕ್ಕೆ
ಅನುಗುಣವಾಗಿ ದೊಡ್ಡದಾಗುತ್ತದೆ. ಹಾಗೆಯೇ ಸುತ್ತಲಿನ ಗಾಳಿಯನ್ನು ಒಳಗೆ ಸೆಳೆದುಕೊಂಡು
ಒಡೆಯುತ್ತದೆ. ಹಲವು ಬಲೂನುಗಳಾಗುತ್ತದೆ.

ಈ ಹಿಂದೆಯೂ ಇಂತಹ ಚಿತ್ರಗಳನ್ನು ತೆಗೆಯಲಾಗಿತ್ತು. ಆದರೆ ಹನಿಗಳ ಚಲನೆಯನ್ನು ಲಿಡಿಯಾ
ಮಾಡಿರುವಂತೆ ಕೂಲಂಕಷವಾಗಿ ಮಾಡಿರಲಿಲ್ಲ. ಬಾಯಿ-ಮೂಗಿನಿಂದ ಹೊರ ಬಂದ ಹನಿಗಳು ಬಿಡಿ,
ಬಿಡಿಯಾಗಿ ಹರಡಿಕೊಳ್ಳುತ್ತವೆಂದು ಇದುರವೆಗೂ ತಿಳಿಯಲಾಗಿತ್ತು. ಆದರೆ ಲಿಡಿಯಾ ತೆಗೆದಿರುವ
ವೀಡಿಯೋಗಳು ತಿಳಿಸುವುದೇ ಬೇರೆ. ಎಲ್ಲ ಹನಿಗಳೂ ಬಿಡಿಯಾಗಿರುವುದಿಲ್ಲ. ಸಿಂಬಳದ ಅಂಟುತನ
ಇದನ್ನು ತಡೆಗಟ್ಟುತ್ತದೆ. ಜೇಡರಬಲೆಯ ಮೇಲೆ ಹನಿಗಳು ಮುತ್ತುಗಳಂತೆ ಸಂಗ್ರಹವಾಗಿರುವುದನ್ನು
ಕಂಡಿರುತ್ತೀರಲ್ಲ? ಇಲ್ಲಿಯೂ ಹಾಗೆಯೇ ಹನಿಗಳು ಸಿಂಬಳದ ಎಳೆಗಳ ಮೇಲೆ ಹರಡಿಕೊಂಡಿರುತ್ತವೆ.

ಇದರ ಪರಿಣಾಮ: ಸಣ್ಣ ಹನಿಗಳು ಕೂಡ ದೊಡ್ಡದಾಗಿ ಬೆಳೆಯಬಲ್ಲವು. ದೊಡ್ಡ ಹನಿಗಳು ಕೂಡ
ಸಿಂಬಳದೆಳೆಯ ಆಸರೆಯಲ್ಲಿ ಬಲು ದೂರ ಚಲಿಸಬಲ್ಲುವು. ಕೈಯಳತೆಯ ದೂರದಲ್ಲಿದ್ದರೆ ಸೋಂಕು
ತಗುಲುವುದಿಲ್ಲವೆನ್ನುವಂತಿಲ್ಲ ಎನ್ನುತ್ತಾರೆ ಲಿಡಿಯಾ. ಕೆಲವರು ಕೈ ಕುಲುಕದೆಯೇ ಕೈ ಜೋಡಿಸಿ
ನಮಸ್ತೆ ಹೇಳುತ್ತಾರೆ. ಕೈ ಕುಲುಕಿದಾಗ ಬಲು ಸಮೀಪವಿರುತ್ತೇವೆಯಾದ್ದರಿಂದ ಸೋಂಕುಂಟಾಗುವ
ಸಾಧ್ಯತೆ ಜಾಸ್ತಿ. ನಮಸ್ತೆ ಎಂದು ಕೈ ಜೋಡಿಸಿದರೆ ಹೀಗಾಗದು ಎನ್ನುವುದು ಇವರ ತರ್ಕ. ಫ್ಲೂ
ಹಾಗೂ ಕಳೆದ ವರ್ಷ ಭಾರಿ ಸುದ್ದಿ ಮಾಡಿದ್ದ ಇಬೊಲಾ ವೈರಸ್ ಗಳು ಈ ತೆರನಾಗಿ ದೇಹ
ಸಂಪರ್ಕದಿಂದಲೇ ದಾಟಿ ಬರುತ್ತವೆ. ಅಂತಹ ಸಂದರ್ಭದಲ್ಲಿ ‘ನಮಸ್ತೆ’ ನೆರವಾಗಬಹುದು. ಆದರೆ
ನೆಗಡಿ ಹಾಗೂ ಹಂದಿಜ್ವರ ಅಥವಾ ಕೋಳಿಜ್ವರಗಳ ಸಂದರ್ಭದಲ್ಲಿ ಕೋಣೆಯಿಂದ ಹೊರ ಹೋದರೂ ಸೋಂಕು
ಬೆಂಬತ್ತಿ ಬರಬಹುದು ಎನ್ನುತ್ತದೆ ಲಿಡಿಯಾ ರವರ ಸಂಶೋಧನೆಗಳು.

ಇದರಿಂದೇನು ಪ್ರಯೋಜನ ಎನ್ನಬೇಡಿ. ಲಿಡಿಯಾರ ಸೂತ್ರಗಳಂತೆಯೇ ಎಲ್ಲ ಸೀನಿನ 

[ms-stf '60071'] ಇಜ್ಞಾನ ಡಾಟ್ ಕಾಮ್: ಹೀಗೊಂದು ಗಣಿತದ ಕತೆ: ಶಿಷ್ಯರ ಬುದ್ಧಿವಂತಿಕೆ

2016-06-17 Thread HAREESHKUMAR K Agasanapura
http://www.ejnana.com/2016/06/blog-post_16.html?m=1

*ಹೀಗೊಂದು ಗಣಿತದ ಕತೆ: ಶಿಷ್ಯರ ಬುದ್ಧಿವಂತಿಕೆ*

*ರೋಹಿತ್ ಚಕ್ರತೀರ್ಥ*



ಛಲ ಬಿಡದ ತ್ರಿವಿಕ್ರಮನು, ಮತ್ತೆ, ಆ ಹಳೇ ಮರದ ಕೊಂಬೆಗೆ ಹಾರಿಹೋಗಿ ತಲೆಕೆಳಗಾಗಿ
ನೇತುಬಿದ್ದಿದ್ದ ಬೇತಾಳವನ್ನು ಇಳಿಸಿ ಬೆನ್ನಿಗೆ ಹಾಕಿಕೊಂಡು ಕಾಡಿನ ದಾರಿಯಲ್ಲಿ
ನಡೆಯತೊಡಗಿದನು. ಆಗ ಬೇತಾಳವು, "ರಾಜಾ, ಮರಳಿ ಯತ್ನವ ಮಾಡು ಎಂಬ ಮಾತಿನಲ್ಲಿ ನೂರಕ್ಕೆ
ನೂರರಷ್ಟು ನಂಬಿಕೆ ಇಟ್ಟು ದೃಢ ಮನಸ್ಸಿನಿಂದ ಕೆಲಸ ಮಾಡುತ್ತಿರುವ ನಿನ್ನ ಅವಸ್ಥೆಯನ್ನು
ಕಂಡಾಗ ಮೆಚ್ಚುಗೆಯೂ ಕನಿಕರವೂ ಒಟ್ಟಿಗೇ ಮೂಡುತ್ತವೆ. ಒಂದೇ ಕೆಲಸವನ್ನು ಮತ್ತೆಮತ್ತೆ ಮಾಡುವ
ಸಂದರ್ಭ ಬಂದಾಗ, ಅದನ್ನು ಸರಳಗೊಳಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆಯಾದರೂ ನೀನು
ಯೋಚಿಸುವುದು ಬೇಡವೇ? ಅದಕ್ಕೆ ತಕ್ಕ ಹಾಗೆ ಒಂದು ಕತೆ ನನಗೆ ನೆನಪಾಗುತ್ತಿದೆ. ಗಮನವಿಟ್ಟು
ಕೇಳು" ಎಂದು ತನ್ನ ಕತೆಯ ಬುಟ್ಟಿ ಬಿಚ್ಚಿತು.

ಅದು ಮೂರನೇ ತರಗತಿ. ಕ್ಲಾಸಿನೊಳಗೆ ಬಂದ ಮೇಸ್ಟ್ರಿಗೆ ಅಂದೇಕೋ ಮಹಾಜಾಡ್ಯ ಆವರಿಸಿದಂತಿದೆ. ಈ
ಮಕ್ಕಳಿಗೆ ಸುಲಭಕ್ಕೆ ಬಿಡಿಸಲಾಗದ ಲೆಕ್ಕ ಕೊಟ್ಟು ಅರ್ಧ-ಮುಕ್ಕಾಲು ಗಂಟೆ
ಒದ್ದಾಡಿಸಿಬಿಟ್ಟರೆ ತನ್ನ ಪೀರಿಯಡ್ಡು ಮುಗಿಯುತ್ತದೆ ಎಂಬ ಹಂಚಿಕೆ ಹಾಕಿದವರೇ "ಒಂದರಿಂದ
ನೂರರವರೆಗಿನ ಎಲ್ಲ ಸಂಖ್ಯೆಗಳ ಮೊತ್ತ ಎಷ್ಟು ಹುಡುಕಿ ನೋಡುವಾ" ಎಂದು ಸವಾಲು ಹಾಕಿ
ಕುರ್ಚಿಯಲ್ಲಿ ಸುಖಾಸೀನರಾಗಿದ್ದಾರೆ. ಮೇಸ್ಟ್ರು ಕಾಲ ಅಂಗುಷ್ಠದಲ್ಲಿ ಹೇಳಿದ್ದನ್ನು
ಭಕ್ತಿಯಿಂದ ಶಿರಸಾವಹಿಸಿ ಮಾಡುವ ಮಕ್ಕಳು ಕೂಡಲೇ ಹಲಗೆ ಬಳಪ ಎತ್ತಿಕೊಳ್ಳುತ್ತಾರೆ. ತಮ್ಮ
ಶಕ್ತ್ಯಾನುಸಾರ ಪ್ರಶ್ನೆಯ ಚಕ್ರವ್ಯೂಹವನ್ನು ಭೇದಿಸಲು ಸನ್ನದ್ಧರಾಗುತ್ತಾರೆ.

ಮೊದಲನೆಯದಾಗಿ ಇವರಲ್ಲಿ ನಾರಾಯಣ ಏನು ಮಾಡಿದ ನೋಡುವಾ. ಕ್ಲಾಸಿನ ಹುಡುಗರಲ್ಲೇ ಮಹಾಶಿಸ್ತಿನ
ಹುಡುಗ, ಪ್ರಾಮಾಣಿಕ ಮತ್ತು ಭೋಳೆ ಎಂದು ಶಿಕ್ಷಕರಿಂದ ಏಕಪ್ರಕಾರವಾಗಿ ಹೊಗಳಿಸಿಕೊಂಡ ಈ
ಹುಡುಗ ಸ್ಲೇಟು ಎತ್ತಿಕೊಂಡು ತನ್ನ ಮಹಾಕಾವ್ಯಕ್ಕೆ ಶುರುವಿಟ್ಟುಕೊಳ್ಳುತ್ತಾನೆ. ಗಣಿತದಲ್ಲಿ
ಯಾವುದೇ ಪ್ರಶ್ನೆಯನ್ನು ಪರಿಹರಿಸಬೇಕಾದರೂ ಮೊದಲು ದತ್ತ ಎಂದು ಬರೆದು ಪ್ರಶ್ನೆಯಲ್ಲಿ ಏನು
ಮಾಹಿತಿ ಕೊಟ್ಟಿದ್ದಾರೋ ಅದನ್ನು ಬರೆದುಕೊಳ್ಳಬೇಕು. ಇಲ್ಲಿ ದತ್ತ ಏನು? ಒಂದರಿಂದ ನೂರು
ಅಲ್ಲವೇ? ಹಾಗಾಗಿ ಆ ಅಷ್ಟೂ ಸಂಖ್ಯೆಗಳನ್ನು ಬರೆದುಕೊಳ್ಳುವುದು ತನ್ನ ಮೊದಲ ಕೆಲಸ ಎಂದು
ಬಗೆದು ಗುದ್ದಲಿಪೂಜೆ ಮಾಡಿ ಕೆಲಸ ಶುರು ಮಾಡುತ್ತಾನೆ. ಅಷ್ಟನ್ನು ಬರೆದುಕೊಂಡ ಮೇಲೆ
ಅವುಗಳನ್ನು ಒಂದೊಂದಾಗಿ ಕೂಡಿಸಬೇಕು. ಇದು ಚಕ್ರವ್ಯೂಹದೊಳಗೆ ಎದೆಯುಬ್ಬಿಸಿ ನುಗ್ಗಿ
ಶತ್ರುಗಳನ್ನು ಒಬ್ಬೊಬ್ಬರನ್ನಾಗಿ ತರಿದುಹಾಕಿ ಜೀವಂತ ಹೊರಬರಬೇಕಾದ ಸಾಹಸದ ಕೆಲಸ. ಮೋಡ
ಮುಚ್ಚಿದ ಕತ್ತಲ ದಾರಿ. ಭಗವಂತನ ಮೇಲೆ ಭಾರ ಹಾಕಿ ಒಂದೊಂದಾಗಿ ಹೆಜ್ಜೆ ಇಟ್ಟು
ಮುಂದುವರಿಯಬೇಕು. ನಡುವೆ ಅಂಕೆಗಳು ಚಿತ್ರಾನ್ನವಾಗಿ ಮೊತ್ತ ಕಲಸಿಹೋದರೆ ಮತ್ತೆ ಮೊದಲಿಂದ
ಶುರುಮಾಡಬೇಕು. ಅಥವಾ, ತಪ್ಪು ಮೊತ್ತವನ್ನು ಅಲ್ಲಲ್ಲೇ ಕಳೆದು, ಸರಿಯಾದ ಸಂಖ್ಯೆಗಳನ್ನು
ಸೇರಿಸಿಕೊಂಡು ಮುಂದುವರಿಯಬೇಕು. ನಾರಾಯಣ, ಒಂದು ಕೂಡಿಸು ಎರಡು ಕೂಡಿಸು ಮೂರು ಕೂಡಿಸು ಎಂದು
ಅಷ್ಟೋತ್ತರ ನಾಮಾವಳಿ ಹೇಳುತ್ತ, ಬಂದದ್ದೆಲ್ಲಾ ಬರಲಿ ಎಂದು ಧೈರ್ಯ ಒಗ್ಗೂಡಿಸಿಕೊಂಡು
ಸಂಖ್ಯಾಪ್ರವಾಹದಲ್ಲಿ ಈಜತೊಡಗಿದ. ನಾಲ್ಕು ಕೂಡಿಸು ಐದು ಎಂದು ಬರುವ ಹೊತ್ತಿಗೆ ಅವನ ಕೈ
ಬೆರಳುಗಳು ಮುಗಿದವು. ಆರು ಕೂಡಿಸು ಏಳು ಎನ್ನುವಷ್ಟರಲ್ಲಿ ಕಾಲಿನ ಬೆರಳುಗಳೂ ಮುಗಿದವು!
ಇನ್ನು ಮುಂದಿನದೆಲ್ಲ ಅಯೋಮಯ. ತನ್ನ ಮನಸ್ಸಿನಲ್ಲಿ ಮೂಡಿಸಿಕೊಂಡ ಬೆರಳುಗಳನ್ನು ಮಡಚುತ್ತ
ಲೆಕ್ಕ ಮಾಡುತ್ತ ಮುಂದುವರಿಯಬೇಕಾದ ವಿಷಮ ಪರಿಸ್ಥಿತಿ. ಈ ದಾರಿಯಲ್ಲಿ ಪ್ರಾಮಾಣಿಕವಾಗಿ
ಹೆಜ್ಜೆ ಹಾಕುತ್ತ ಹೋದರೆ ಇವೊತ್ತಲ್ಲಾ ನಾಳೆ ಉತ್ತರ ಸಿಗುವ ಭರವಸೆಯಂತೂ ಇದೆ. ಆ ಆಶಾದೀಪವೇ
ನಾರಾಯಣನ ಪ್ರಯತ್ನವನ್ನು ಜೀವಂತವಾಗಿಟ್ಟಿದೆ.

ಇವನ ಪಕ್ಕದಲ್ಲಿ ಕೂತಿರುವ ಗೋವಿಂದ ಈ ವಿಷಯಗಳಲ್ಲಿ ಸ್ವಲ್ಪ ಕಿಲಾಡಿ. ನಾರಾಯಣನ ಹಾಗೆ
ಮೊದಮೊದಲಿಗೆ ಮಂಜು ಕವಿದ ಮಸುಕು ದಾರಿಯಲ್ಲೇ ಈತನ ಪ್ರಯಾಣ ಶುರುವಾದರೂ, ಈ ಹುಡುಗ,
ಹತ್ತಿರದಲ್ಲೆಲ್ಲಾದರೂ ಅಡ್ಡದಾರಿ ಸಿಕ್ಕುತ್ತದೋ ನೋಡೋಣ ಎಂದು ಅತ್ತಿತ್ತ ತನ್ನ ಹದ್ದಿನ
ಕಣ್ಣು ಇಟ್ಟೇ ಇರುತ್ತಾನೆ. ಗೋವಿಂದನೂ ನಾರಾಯಣನಂತೆ ೧ + ೨ + ೩ + ೪ ... ಎನ್ನುತ್ತಾ
ಶುರುಮಾಡಿದ. ೯ + ೧೦ ಎಂಬಲ್ಲಿಗೆ ಬರುವ ಹೊತ್ತಿಗೆ ೫೫ ಎಂದು ಉತ್ತರ ಬಂತು. ಅದನ್ನು ಮೊದಲ
ಕಂಬ ಸಾಲಿನ ಕೆಳಗೆ ಬರೆದುಕೊಂಡು ಎರಡನೇ ಸಾಲಿಗೆ ಹಾರಿದ. ೧೧ + ೧೨ + ೧೩ ಎಂದು ಮತ್ತೆ
ಮಂತ್ರ ಶುರು ಮಾಡಿ ಸ್ವಲ್ಪ ಸಮಯ ಕಳೆದಿತ್ತಷ್ಟೇ; ಅವನಿಗೊಂದು ಅನುಮಾನ ಹುಟ್ಟಿತು. ಅರರೆ,
ಇದು ಈಗಷ್ಟೇ ಹೇಳಿ ಮುಗಿಸಿದ ಮೊದಲ ಸಾಲಿನ ಹಾಗೇ ಉಂಟಲ್ಲ? ೧೧ ಎಂದರೆ ೧೦+೧. ಹಾಗೆಯೇ ೧೨
ಎಂದರೆ ೧೦+೨. ಮುಂದಿನದ್ದು ೧೦+೩. ಹೀಗೇ ಹೋದರೆ ೨೦ನ್ನು ೧೦+೧೦ ಎಂದು ಒಡೆಯಬಹುದು. ಅಂದರೆ
ಈ ಕಂಬ ಸಾಲಲ್ಲಿ ೧೦ ಎನ್ನುವ ಸಂಚಿತ ಠೇವಣಿ ಹತ್ತು ಸಲ ಬಂದಿದೆ. ಕೂಡಿಸು ಚಿಹ್ನೆಯ ಬಲ
ಭಾಗದಲ್ಲಿ ಬಂದಿರುವ ಸಂಖ್ಯೆಗಳೆಲ್ಲ ಈಗಾಗಲೇ ಕೂಡಿ ಬದಿಗಿಟ್ಟಿರುವ ಬಾಲಂಗೋಚಿಗಳೇ. ಅವುಗಳ
ಮೊತ್ತ ೫೫ ಎನ್ನುವುದು ಸ್ಪಷ್ಟ. ಹಾಗಾದರೆ ಒಟ್ಟು ಮೊತ್ತ ಎಷ್ಟು? ೧೦ ಹತ್ತು ಸಲ
ಬಂದಿರುವುದರಿಂದ ಹತ್ತ್‌ಹತ್ಲಿ ನೂರು. ಕೂಡಿಸು ೫೫. ಒಟ್ಟು ೧೫೫. ಅದನ್ನು ಎರಡನೇ ಕಂಬ
ಸಾಲಿನ ಕೆಳಗೆ ಬರೆದ. ಮೂರನೇ ಸಾಲಿಗೆ ಹೋಗುವ ಹೊತ್ತಿಗೆ ಹುಡುಗನಿಗೆ ಆತ್ಮವಿಶ್ವಾಸ
ಇಮ್ಮಡಿಯಾಗಿತ್ತು. ೨೧ನ್ನು ಮತ್ತೆ ೨೦+೧ ಎಂದು ಒಡೆದ. ಆ ಸಾಲಲ್ಲಿ ೨೦ ಹತ್ತು ಸಲ
ಬಂದಿತ್ತು. ಅಲ್ಲಿಗೆ ಮೊತ್ತ ೨೦೦ + ೫೫ = ೨೫೫ ಆಯಿತು! ಇಡೀ ಪ್ರಶ್ನೆಯನ್ನೇ ಸುಲಭವಾಗಿ
ಪರಿಹರಿಸುವ ಅದ್ಭುತವಾದ ಒಳದಾರಿಯೊಂದು ಹುಡುಗನಿಗೆ ಈಗ ಕಾಣಿಸತೊಡಗಿತು. ಪ್ರತೀ ಕಂಬ
ಸಾಲಲ್ಲೂ ೫೫ ಎಂಬ ಮ್ಯಾಜಿಕ್ ಸಂಖ್ಯೆ ಬಂದೇ ಬರುವುದರಿಂದ ಮತ್ತು ಅಲ್ಲಿ ಒಟ್ಟು ಹತ್ತು ಕಂಬ
ಸಾಲುಗಳಿರುವುದರಿಂದ, ಐವತ್ತೈದ್ ಹತ್ಲಿ ಎಂದು ಒಂದೇ ಸಲಕ್ಕೆ ಗುಣಿಸಿ ೫೫೦ ಎಂದು ಬರೆಯಬಹದು.
ಇನ್ನು ೧೦೦, ೨೦೦, ೩೦೦ ಎನ್ನುತ್ತ ಪ್ರತಿ ಸಾಲಲ್ಲೂ ಹೆಚ್ಚುವರಿ ಮೂಟೆಗಳು ಸಿಗುತ್ತಾ
ಹೋಗುತ್ತವೆ. ಕೊನೆಯ ಸಾಲಲ್ಲಿ ಸಿಗುವುದು ೯೦೦. ಇವೆಲ್ಲವನ್ನೂ ೧೦೦ + ೨೦೦ + ೩೦೦ ++
೯೦೦ ಎಂದು ಬರೆಯಬಹುದು. ಇಲ್ಲೂ, ೧೦೦ ಎಂಬ ಸಾಮಾನ್ಯ ಗುಣಕವನ್ನು ಹೊರತೆಗೆದರೆ ೧೦೦ * (೧ +
೨ + ೩ + .. + ೯) ಎನ್ನುವ ಸಾಲು ಸಿಗುತ್ತದೆ. ಒಂದರಿಂದ ಹತ್ತರವರೆಗಿನ ಸಂಖ್ಯೆಗಳ ಮೊತ್ತ
೫೫ ಎನ್ನುವುದು ಗೊತ್ತಿದೆ. ಹಾಗಾದರೆ ಒಂಬತ್ತರವರೆಗಿನ ಸಂಖ್ಯೆಗಳ ಮೊತ್ತ ಎಷ್ಟು? ೫೫ಕ್ಕೆ
೧೦ ಕಡಿಮೆ. ಅಂದರೆ ೪೫. ಇದಕ್ಕೆ ೧೦೦ನ್ನು ಗುಣಿಸಿರುವುದರಿಂದ, ಉತ್ತರ - ೪೫೦೦. ಈಗ ಇವೆರಡು
ಸಂಖ್ಯೆಗಳ ಮೊತ್ತ ನೋಡಿಬಿಟ್ಟರೆ ಕೆಲಸ ಖತಂ! ಅರ್ಥಾತ್, ೪೫೦೦ + ೫೫೦ = ೫೦೫೦. ಇದು
ಮೇಸ್ಟ್ರಿಗೆ ಬೇಕಾದ ಉತ್ತರ! ಗೋವಿಂದನ ಖುಷಿಗೆ ಎಲ್ಲಿದೆ ಪಾರ!



ಅವನಾಚೆ ಕೂತಿರುವ ನರಹರಿ ಸ್ವಲ್ಪ ಶಾಣ್ಯಾ. ಈ ಹುಡುಗ ಯಾವ ಕೆಲಸವನ್ನೂ ನೆಟ್ಟಗೆ ಮಾಡೋನಲ್ಲ
ಎಂದು ಶಿಕ್ಷಕರು ಹೇಳುವಾಗ, ನರಹರಿಯ ತಂದೆಗೆ ಇದೇನು ಹೊಗಳಿಕೆಯೋ ಬಯ್ಗುಳವೋ ಎಂದು
ಕನ್‌ಫ್ಯೂಸ್ ಆಗಿಬಿಟ್ಟಿತ್ತು! ಅಂತಹ ನರಹರಿ ಏನು ಮಾಡಿದ ಗೊತ್ತಾ? ಸಮಸ್ಯೆಯ ಮೊದಲ ಸಂಖ್ಯೆ
೧ನ್ನು ತೆಗೆದುಕೊಂಡ. ಅದನ್ನು ೨ರ ಜೊತೆಗೆ ಕೂಡುವುದಕ್ಕಿಂತ, 

[ms-stf '59597'] ಹರಿಯಾಣ: ಶಿಕ್ಷಕರಿಗೆ ಜೀನ್ಸ್‌ ನಿಷೇಧ

2016-06-11 Thread HAREESHKUMAR K Agasanapura
http://m.prajavani.net/article/2016_06_12/416133

*ಹರಿಯಾಣ: ಶಿಕ್ಷಕರಿಗೆ ಜೀನ್ಸ್‌ ನಿಷೇಧ*

12 Jun, 2016








*ಚಂಡೀಗಡ (ಪಿಟಿಐ):* ಶಿಕ್ಷಕರು ಶಾಲೆಯಲ್ಲಿರುವಾಗ ಜೀನ್ಸ್ ಪ್ಯಾಂಟ್ ಧರಿಸಬಾರದು ಎಂದು
ಹರಿಯಾಣದ ಶಿಕ್ಷಣ ಇಲಾಖೆ ನಿಷೇಧ ಹೇರಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಶಾಲೆಗಳಲ್ಲಿ ಮಕ್ಕಳು ಶಿಕ್ಷಕರನ್ನು ಗಮನಿಸುತ್ತಿರುತ್ತಾರೆ. ಹೀಗಾಗಿ ಶಿಕ್ಷಕರು
ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು. ಶಿಕ್ಷಕರು ಸಭ್ಯ ಉಡುಪು ಧರಿಸಬೇಕು. ಒಂದು ವೇಳೆ
ಜೀನ್ಸ್ ಪ್ಯಾಂಟ್ ಧರಿಸಿದರೆ ಅದನ್ನು ಅನುಚಿತ ಉಡುಪು ಎಂದು ಪರಿಗಣಿಸಲಾಗುವುದು ಎಂದು ಇಲಾಖೆ
ಹೇಳಿದೆ.

ಅಲ್ಲದೇ, ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಫಾರ್ಮಲ್ ಉಡುಗೆಯಲ್ಲಿ ಬರಬೇಕು ಎಂದು ಇಲಾಖೆ
ಆದೇಶ ಹೊರಡಿಸಿದೆ. ಹರಿಯಾಣ ವಿದ್ಯಾಲಯ ಶಿಕ್ಷಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಇಲಾಖೆಯ
ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿವೆ.

‘ಇದು ಇಲಾಖೆಯ ತಪ್ಪು ನಿರ್ಧಾರವಾಗಿದೆ. ಶಿಕ್ಷಕರ ಉಡುಪಿನ ಮೇಲೆ ಸರ್ಕಾರ ನಿರ್ಬಂಧ
ಹೇರಿರುವುದು ಸರಿಯಲ್ಲ. ಬೋಧನೆ ಮಾಡುವುದು ಶಿಕ್ಷಕರ ಕೆಲಸ. ಅವರು ಯಾವ ಉಡುಪು ಧರಿಸಿ ಪಾಠ
ಮಾಡುತ್ತಾರೆ ಎಂಬುವುದು ಮುಖ್ಯವಲ್ಲ’ ಎಂದು ಸಂಘದ ಅಧ್ಯಕ್ಷ ವಾಝೀರ್‌ ಸಿಂಗ್ ಹೇಳಿದ್ದಾರೆ.

Hareeshkumar K
GHS HUSKURU
MALAVALLI TQ
MANDYA DT
MOB 9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '58480'] ಇಜ್ಞಾನ ಡಾಟ್ ಕಾಮ್: ಎಂಬಿಪಿಎಸ್ ಎಂದರೇನು?

2016-05-24 Thread HAREESHKUMAR K Agasanapura
http://www.ejnana.com/2016/05/blog-post_23.html?m=1
*ಎಂಬಿಪಿಎಸ್ ಎಂದರೇನು?*



ಒಂದಲ್ಲ ಒಂದು ಸಾಧನದ ಮೂಲಕ ನಾವು ಸದಾಕಾಲ ಅಂತರಜಾಲ ಸಂಪರ್ಕವನ್ನು ಬಳಸುತ್ತಲೇ
ಇರುತ್ತೇವಲ್ಲ, ಹಾಗೆ ಬಳಸುವಾಗ ಸಂಪರ್ಕದ ವೇಗದ ಬಗೆಗೂ ಕೇಳಿರುತ್ತೇವೆ: ೮ ಎಂಬಿಪಿಎಸ್, ೧೬
ಎಂಬಿಪಿಎಸ್, ೫೦ ಎಂಬಿಪಿಎಸ್... ಹೀಗೆ.

ಎಂಬಿ ಅಂದರೆ ಮೆಗಾಬೈಟ್ ಸರಿ, ಆದರೆ ಇದೇನಿದು ಎಂಬಿಪಿಎಸ್?

ಯಾವುದೇ ದೂರಸಂಪರ್ಕ ವ್ಯವಸ್ಥೆಯ ಮೂಲಕ ಒಂದು ನಿರ್ದಿಷ್ಟ ಅವಧಿಯಲ್ಲಿ ಹಾದುಹೋಗುವ ದತ್ತಾಂಶದ
(ಡೇಟಾ) ಸರಾಸರಿ ಪ್ರಮಾಣವನ್ನು ಡೇಟಾ ರೇಟ್ ಎಂದು ಕರೆಯುತ್ತಾರೆ. ಒಂದಷ್ಟು ದತ್ತಾಂಶವನ್ನು
ತೆಗೆದುಕೊಂಡರೆ ಅದು ಒಂದು ಸ್ಥಳದಿಂದ ಮತ್ತೊಂದಕ್ಕೆ ಎಷ್ಟು ವೇಗವಾಗಿ ತಲುಪಬಲ್ಲದು
ಎನ್ನುವುದನ್ನು ಈ ಡೇಟಾ ರೇಟ್ ಸೂಚಿಸುತ್ತದೆ.

ದತ್ತಾಂಶದ ರವಾನೆಗೆ ನಾವು ಯಾವುದೇ ಮಾರ್ಗ ಆಯ್ದುಕೊಂಡಾಗ ಅದರ ಮೂಲಕ ಒಂದು ನಿರ್ದಿಷ್ಟ
ಅವಧಿಯಲ್ಲಿ ನಿಗದಿತ ಪ್ರಮಾಣದ ದತ್ತಾಂಶವಷ್ಟೆ ಹಾದುಹೋಗುವುದು ಸಾಧ್ಯ. ಇದನ್ನು ಆ ಮಾರ್ಗದ
ಬ್ಯಾಂಡ್‌ವಿಡ್ತ್ ಎಂದು ಕರೆಯುತ್ತಾರೆ. ಬ್ಯಾಂಡ್‌ವಿಡ್ತ್ ಹೆಚ್ಚಿದ್ದಷ್ಟೂ ಡೇಟಾ ರೇಟ್ ಕೂಡ
ಹೆಚ್ಚಾಗಿರುವುದು ಸಾಧ್ಯ.

ಡೇಟಾ ರೇಟ್ ಅನ್ನು ಅಳೆಯುವ ಏಕಮಾನವೇ ಡೇಟಾ ರೇಟ್ ಯುನಿಟ್. ಎಂಬಿಪಿಎಸ್ ಎನ್ನುವುದು
ಇಂತಹುದೇ ಒಂದು ಡೇಟಾ ರೇಟ್ ಯುನಿಟ್. ಯಾವುದೋ ಅಂತರಜಾಲ ಸಂಪರ್ಕದಲ್ಲಿ ಪ್ರತಿ ಸೆಕೆಂಡಿಗೆ
ಹತ್ತು ಲಕ್ಷ ಬಿಟ್‌ನಷ್ಟು ದತ್ತಾಂಶದ ಹರಿವು ಸಾಧ್ಯವಾದರೆ ಅದನ್ನು ೧ ಮೆಗಾಬಿಟ್ ಪರ್
ಸೆಕೆಂಡ್ (ಎಂಬಿಪಿಎಸ್) ಸಂಪರ್ಕವೆಂದು ಗುರುತಿಸಲಾಗುತ್ತದೆ.

*ಮೇ ೨೩, ೨೦೧೬ರ 'eಜ್ಞಾನ' ಅಂಕಣದಲ್ಲಿ (ವಿಜಯವಾಣಿ) ಪ್ರಕಟವಾದ ಬರಹ*

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '58479'] ಇಸ್ರೊದ ‘ಸ್ವದೇಶಿ’ ವಾಹನ ಪರೀಕ್ಷೆ ಯಶಸ್ವಿ

2016-05-24 Thread HAREESHKUMAR K Agasanapura
http://m.prajavani.net/article/2016_05_24/411342

*ಇಸ್ರೊದ ‘ಸ್ವದೇಶಿ’ ವಾಹನ ಪರೀಕ್ಷೆ ಯಶಸ್ವಿ*

ಶ್ರೀಹರಿಕೋಟಾದಲ್ಲಿ ಸೋಮವಾರ ಉಡಾವಣೆಯಾದ ಇಸ್ರೊ ಮರು ಬಳಕೆ ಉಡಾವಣಾ ವಾಹನ

ಸೋಮವಾರ ಪರೀಕ್ಷಿಸಲಾದ ಮರುಬಳಕೆ ಬಾಹ್ಯಾಕಾಶ ವಾಹನ

Previous Next


24 May, 2016








*ಬೆಂಗಳೂರು (ಪಿಟಿಐ):* ಬಾಹ್ಯಾಕಾಶಕ್ಕೆ ಉಪಗ್ರಹಗಳನ್ನು ಕಳುಹಿಸಲು ಮರುಬಳಕೆಯ ರಾಕೆಟ್‌
ಅಭಿವೃದ್ಧಿಯ ನಿಟ್ಟಿನಲ್ಲಿ ಇಸ್ರೊ ಒಂದು ಹೆಜ್ಜೆ ಮುಂದಿಟ್ಟಿದೆ. ‘ಸ್ವದೇಶಿ’ ಎಂಬ ಹೆಸರಿನ
ಮರುಬಳಕೆಯ ಉಡಾವಣಾ ವಾಹನದ ಪರೀಕ್ಷೆ ಸೋಮವಾರ ಯಶಸ್ವಿಯಾಗಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಬೆಳಗ್ಗೆ 7 ಗಂಟೆಗೆ
ಮರುಬಳಕೆ ಉಡಾವಣಾ ವಾಹನವನ್ನು (ರಿಯೂಸೆಬಲ್‌ ಲಾಂಚ್‌ ವೆಹಿಕಲ್‌ –ಟೆಕ್ನಾಲಜಿ
ಡೆಮಾನ್‌ಸ್ಟ್ರೇಟರ್‌– ಆರ್‌ಎಲ್‌ವಿ–ಟಿಡಿ) ಹಾರಿಸಲಾಯಿತು. 65 ಕಿ.ಮೀ. ಎತ್ತರಕ್ಕೆ ಹಾರಿದ
ವಾಹನವು ಬಾಹ್ಯಾಕಾಶ ತಲುಪಿತು. ನಂತರ ಅದು  ವಾತಾವರಣಕ್ಕೆ ಹಿಂದಿರುಗಿ ಬಂಗಾಳ ಕೊಲ್ಲಿಗೆ
ಬಿತ್ತು.

ವಾತಾವರಣಕ್ಕೆ ಮರು ಪ್ರವೇಶಿಸುವಾಗ ಉಂಟಾಗುವ ಅತಿಯಾದ ಶಾಖವನ್ನು ತಾಳಿಕೊಳ್ಳುವುದಕ್ಕಾಗಿ
ವಿಶೇಷವಾದ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ವಾಹನವು ಶ್ರೀಹರಿಕೋಟಾದಿಂದ
450 ಕಿ.ಮೀ ದೂರದಲ್ಲಿ ಬಂಗಾಳಕೊಲ್ಲಿಯಲ್ಲಿ ನಿಗದಿಪಡಿಸಲಾಗಿದ್ದ ಸ್ಥಳದಲ್ಲಿಯೇ ಬಿತ್ತು.
ನೀರಿನ ಮೇಲೆ ಅಪ್ಪಳಿಸಿದ ರಭಸಕ್ಕೆ ವಾಹನವು ಛಿದ್ರವಾಗಿದೆ. ವಾಹನವು ನೀರಿಗೆ ಬಿದ್ದಾಗ
ತೇಲುವ ರೀತಿಯಲ್ಲಿ ವಿನ್ಯಾಸ ಮಾಡದಿರುವುದು ಇದಕ್ಕೆ ಕಾರಣ ಎಂದು ವಿಜ್ಞಾನಿಗಳು
ತಿಳಿಸಿದ್ದಾರೆ. ಉಡಾವಣಾ ವಾಹನಕ್ಕೆ ಯಾವುದೇ ಹಾನಿ ಆಗದ ರೀತಿಯಲ್ಲಿ ವಾಹನವನ್ನು ಇಳಿಸುವ
ಪರೀಕ್ಷೆ ಮುಂದಿನ ಹಂತಗಳಲ್ಲಿ ನಡೆಯಲಿದೆ.

ಶ್ರೀಹರಿಕೋಟಾದ ಉಡಾವಣಾ ಕೇಂದ್ರ ಮತ್ತು ಹಡಗೊಂದರಲ್ಲಿ ಸ್ಥಾಪಿಸಲಾಗಿದ್ದ ಕೇಂದ್ರದ ಮೂಲಕ
ಹಾರಾಟದ ಮೇಲೆ ನಿಗಾ ಇರಿಸಲಾಗಿತ್ತು. ಒಟ್ಟು 770 ಸೆಕೆಂಡ್‌ನಲ್ಲಿ ಕಾರ್ಯಾಚರಣೆ
ಮುಕ್ತಾಯಗೊಂಡಿತು.

*ಇಸ್ರೊದಲ್ಲಿ ಎನ್‌ಎಎಲ್‌ ಪಾತ್ರ (ಬೆಂಗಳೂರಿನಿಂದ ಪ್ರಜಾವಾಣಿ ವರದಿ):*ಭಾರತೀಯ ಬಾಹ್ಯಾಕಾಶ
ಸಂಶೋಧನಾ ಸಂಸ್ಥೆ (ಇಸ್ರೊ) ಮರು ಬಳಕೆ ಉಡಾವಣಾ ವಾಹನದ ಯಶಸ್ಸಿನಲ್ಲಿ  ರಾಷ್ಟ್ರೀಯ ವೈಮಾನಿಕ
ಪ್ರಯೋಗಾಲಯದ ಮಹತ್ವದ ಪಾತ್ರವಿದೆ.

ಉಡಾವಣಾ ವಾಹನದ ಏರೋ ಡೈನಮಿಕ್‌ ಮತ್ತು ಶಬ್ದ ಪರೀಕ್ಷೆಯನ್ನು ಸಿಎಸ್‌ಐಆರ್‌- ಎನ್‌ಎಎಲ್‌
ಪ್ರಯೋಗಾಲಯದಲ್ಲಿ ಕೈಗೊಳ್ಳಲಾಯಿತು.  ಉಡಾವಣಾ ವಾಹನವು ನಭಕ್ಕೆ ಚಿಮ್ಮುವ ಸಂದರ್ಭದಲ್ಲಿ
ಗಾಳಿಯನ್ನು ಸೀಳಿ ಮುನ್ನುಗುವಾಗ ಅದರ ಶಬ್ದ ಮತ್ತು ಭಾರದ ಸಾಮರ್ಥ್ಯವನ್ನು ಏಕೀಕೃತಗೊಳಿಸುವ
ದಿಸೆಯಲ್ಲಿ ಪರೀಕ್ಷೆನಡೆಸಲಾಗುತ್ತದೆ.

ವಾಹನದ ವಿನ್ಯಾಸವು ವೇಗೋತ್ಕರ್ಷಕ್ಕೆ ಅಡ್ಡಿ ಉಂಟಾಗುವಂತಿದ್ದರೆ ಅದನ್ನು ಬದಲಿಸಲು
ಅವಕಾಶವಿರುತ್ತದೆ.  ಈ ಪರೀಕ್ಷೆ 1.2 ಮೀಟರ್‌ ವಿಂಡ್‌ ಟನೆಲ್‌ನಲ್ಲಿ ನಡೆಸಲಾಗುತ್ತದೆ.
ಭಾರತೀಯ ಬಾಹ್ಯಾಕಾಶ ಯೋಜನೆಗಿರುವ ಅತ್ಯಂತ ಮಹತ್ವ ಪರೀಕ್ಷಾ ಕೇಂದ್ರ ಇದು. ಇಲ್ಲಿ ಗಾಳಿಯ
ವೇಗವು ಶಬ್ದದ ವೇಗಕ್ಕಿಂತ ನಾಲ್ಕು ಪಟ್ಟು ಅಧಿಕವಾಗಿರುತ್ತದೆ ಎಂದು  ಸಿಎಸ್‌ಐಆರ್‌-
ಎನ್‌ಎಎಲ್‌ ನಿರ್ದೇಶಕ ಶ್ಯಾಮ್‌ ಚೆಟ್ಟಿ ತಿಳಿಸಿದ್ದಾರೆ.

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '58250'] ಇಜ್ಞಾನ ಡಾಟ್ ಕಾಮ್: ಆಪ್‌ಬರ್ಗರ್!

2016-05-20 Thread HAREESHKUMAR K Agasanapura
http://www.ejnana.com/2016/05/blog-post_16.html?m=1
*ಆಪ್‌ಬರ್ಗರ್!*



ಸ್ಮಾರ್ಟ್‌ಫೋನುಗಳು ಸರ್ವಾಂತರ್ಯಾಮಿಯಾಗಿರುವ ಈ ಕಾಲದಲ್ಲಿ ಆಪ್‌ಗಳ (ಮೊಬೈಲ್ ತಂತ್ರಾಂಶ)
ವಿಷಯ ನಮಗೆಲ್ಲ ಗೊತ್ತು. ಬನ್‌ನ ಎರಡು ತುಣುಕುಗಳ ನಡುವೆ ಕರಿದ / ಬೇಯಿಸಿದ ತಿಂಡಿಯನ್ನೂ
ತರಕಾರಿ-ಬೆಣ್ಣೆ-ಚೀಸ್ ಇತ್ಯಾದಿಗಳನ್ನೂ ಇಟ್ಟು ತಯಾರಿಸುವ ಬರ್ಗರ್ ಪರಿಚಯವೂ ಇದೆ. ಆದರೆ
ಆಪ್‍ಗೂ ಬರ್ಗರ್‌ಗೂ ಎತ್ತಣಿಂದೆತ್ತ ಸಂಬಂಧ?

ಮೊಬೈಲ್ ಆಪ್ ಹಾಗೂ ಕೆಲವು ವೆಬ್‌ಸೈಟುಗಳಲ್ಲಿ ಪರದೆಯ ಒಂದು ಮೂಲೆಯಲ್ಲಿ ಮೂರು ಅಡ್ಡಗೆರೆಗಳ
ಒಂದು ಚಿತ್ರ (ಐಕನ್) ಇರುವುದನ್ನು ನೀವು ನೋಡಿರಬಹುದು. ಸಾಫ್ಟ್‌ವೇರ್‌ಗೂ ಬರ್ಗರ್‌ಗೂ
ಸಂಬಂಧ ಕಲ್ಪಿಸುವುದು ಈ ಚಿತ್ರ; ಇದರ ಹೆಸರೇ 'ಹ್ಯಾಮ್‌ಬರ್ಗರ್ ಐಕನ್.'



ಮೊಬೈಲಿನ ಪರದೆಯ ಮೇಲೆ ಲಭ್ಯವಿರುವ ಜಾಗ ಕಡಿಮೆಯಲ್ಲ, ಕಂಪ್ಯೂಟರ್ ಪರದೆಯಲ್ಲಿ ಮಾಡಿದಂತೆ
ತಂತ್ರಾಂಶದ ನೂರೆಂಟು ಆಯ್ಕೆಗಳನ್ನೆಲ್ಲ (ಮೆನು) ಅಲ್ಲಿ ವಿವರವಾಗಿ ಪ್ರದರ್ಶಿಸುವುದು ಕಷ್ಟ.
ಅಂತಹ ಆಯ್ಕೆಗಳನ್ನು ಹಿನ್ನೆಲೆಯಲ್ಲಿಟ್ಟು ಬಳಕೆದಾರ ಬೇಕೆಂದಾಗ ಮಾತ್ರ ಕಾಣಿಸುವಂತೆ ಮಾಡಲು
ಈ ಐಕನ್ ಬಳಕೆಯಾಗುತ್ತದೆ. ಇದರಲ್ಲಿರುವ ಮೂರು ಅಡ್ಡಗೆರೆಗಳು ಬರ್ಗರ್ ರಚನೆಯನ್ನು
ನೆನಪಿಸುವುದರಿಂದ ಅದಕ್ಕೆ ಹಾಗೆ ಹೆಸರು ಬಂದಿದೆ.

ಮೊಬೈಲುಗಳ ಮೂಲಕವೇ ಜನಪ್ರಿಯವಾದ ಈ ಐಕನ್ ಈಗ ಹಲವು ಜಾಲತಾಣಗಳ ಡೆಸ್ಕ್‌ಟಾಪ್ ಆವೃತ್ತಿಯಲ್ಲೂ
ಕಾಣಿಸಿಕೊಳ್ಳುತ್ತಿದೆ, ಮೆನು ಬೇಕಿದ್ದರೆ ಈ ಚಿತ್ರವನ್ನು ಕ್ಲಿಕ್ ಮಾಡಬೇಕೆನ್ನುವುದು
ಬಳಕೆದಾರರಿಗೂ ಪರಿಚಯವಾಗುತ್ತಿದೆ.

*ಮೇ ೧೬, ೨೦೧೬ರ 'eಜ್ಞಾನ' ಅಂಕಣದಲ್ಲಿ (ವಿಜಯವಾಣಿ) ಪ್ರಕಟವಾದ ಬರಹ*

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '58248'] ಇಜ್ಞಾನ ಡಾಟ್ ಕಾಮ್: ಕಂಪ್ಯೂಟರಿನ ಪುಟಾಣಿ ರೂಪ

2016-05-20 Thread HAREESHKUMAR K Agasanapura
http://www.ejnana.com/2016/05/blog-post_19.html?m=1

*ಕಂಪ್ಯೂಟರಿನ ಪುಟಾಣಿ ರೂಪ*

*ಟಿ. ಜಿ. ಶ್ರೀನಿಧಿ*



ಕಂಪ್ಯೂಟರುಗಳು ಮೊದಲಿಗೆ ಕಾಣಿಸಿಕೊಂಡಿದ್ದು ಬೆರಳೆಣಿಕೆಯಷ್ಟು ಸಂಶೋಧನಾಲಯಗಳಲ್ಲಿ,
ಪ್ರತಿಷ್ಠಿತ ಕಾಲೇಜು-ವಿವಿಗಳಲ್ಲಿ, ದೊಡ್ಡದೊಡ್ಡ ಸಂಸ್ಥೆಗಳಲ್ಲಿ ಮಾತ್ರವೇ. ಒಂದೊಂದು
ಕಂಪ್ಯೂಟರು ಒಂದೊಂದು ಕೋಣೆಯ ತುಂಬ ತುಂಬಿಕೊಂಡಿರುತ್ತಿದ್ದ ಕಾಲ ಅದು. ಪೂರ್ತಿ ಕಂಪ್ಯೂಟರಿನ
ಮಾತು ಹಾಗಿರಲಿ, ಅವರ ಕಚೇರಿಯಲ್ಲಿದ್ದ ಹಾರ್ಡ್ ಡಿಸ್ಕು - ಬರಿಯ ಎರಡು ಜಿಬಿ ಸಾಮರ್ಥ್ಯದ್ದು
- ಹಳೆಯ ವಾಶಿಂಗ್ ಮಶೀನಿನಷ್ಟು ದೊಡ್ಡದಾಗಿತ್ತು ಎಂದು ಹಿರಿಯ ಬ್ಯಾಂಕ್ ಅಧಿಕಾರಿ ಶ್ರೀಧರ
ಈಚೆಗಷ್ಟೆ ನೆನಪಿಸಿಕೊಳ್ಳುತ್ತಿದ್ದರು.

ಆ ದಿನಗಳಿಂದ ಇಂದಿನವರೆಗೆ ಕಂಪ್ಯೂಟರ್ ಜಗತ್ತಿನಲ್ಲಿ ಅಸಂಖ್ಯ ಬದಲಾವಣೆಗಳಾಗಿವೆ.
ಕಂಪ್ಯೂಟರಿನ ಸಾಮರ್ಥ್ಯ - ದತ್ತಾಂಶ ಸಂಸ್ಕರಿಸುವುದಾಗಲಿ, ಸಂಸ್ಕರಿಸಿದ ಮಾಹಿತಿಯನ್ನು
ಉಳಿಸಿಟ್ಟುಕೊಳ್ಳುವುದಾಗಲಿ - ಅಪಾರವಾಗಿ ಹೆಚ್ಚಿದೆ. ಸಾಮರ್ಥ್ಯ ಹೆಚ್ಚಾಗಿರುವುದರ ಜೊತೆಗೆ
ಕಂಪ್ಯೂಟರಿನ ಗಾತ್ರವೂ ಗಮನಾರ್ಹವಾಗಿ ಕುಗ್ಗಿದೆ. ಗಾತ್ರದ ಹೋಲಿಕೆಯಲ್ಲಿ ಅಂದಿನ
ಕೋಣೆಗಾತ್ರದ ಕಂಪ್ಯೂಟರುಗಳೆಲ್ಲಿ, ಇಂದಿನ ಲ್ಯಾಪ್‌ಟಾಪುಗಳೆಲ್ಲಿ!?

ಲ್ಯಾಪ್‌ಟಾಪ್ ಕಂಪ್ಯೂಟರುಗಳಿಗಿಂತ ಚಿಕ್ಕಗಾತ್ರದ ಟ್ಯಾಬ್ಲೆಟ್‌ಗಳು, ಅದಕ್ಕೂ ಸಣ್ಣದಾದ
ಮೊಬೈಲುಗಳು ಕೂಡ ಹೆಚ್ಚೂಕಡಿಮೆ ಕಂಪ್ಯೂಟರುಗಳೇ ಆಗಿಬಿಟ್ಟಿವೆ ನಿಜ. ಆದರೆ ಕೀಬೋರ್ಡು -
ಮೌಸ್ ಹಿಡಿದು ಪತ್ರವೊಂದನ್ನು ಟೈಪಿಸಲಿಕ್ಕೋ ಆದಾಯ-ವೆಚ್ಚದ ಲೆಕ್ಕಾಚಾರ ಹಾಕಲಿಕ್ಕೋ ಅವನ್ನು
ಬಳಸುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗಾಗಿ ಇಂದಿಗೂ ನಮ್ಮಲ್ಲಿ ಅನೇಕರು ಮೊಬೈಲು -
ಟ್ಯಾಬ್ಲೆಟ್ಟುಗಳ ಜೊತೆಗೆ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಕಂಪ್ಯೂಟರನ್ನೂ ಬಳಸುತ್ತೇವೆ.

ಮನೆಯಲ್ಲೋ ಕಚೇರಿಯಲ್ಲೋ ಒಂದು ಕಡೆಯಲ್ಲಿ ಮಾತ್ರವೇ ಬಳಸಬೇಕೆಂದರೆ ಡೆಸ್ಕ್‌ಟಾಪ್ ಕಂಪ್ಯೂಟರ್
ಉತ್ತಮ ಆಯ್ಕೆ ಎಂದು ಅನೇಕರು ಹೇಳುತ್ತಾರೆ. ಅದು ನಿಜವೂ ಹೌದು. ಟೇಬಲ್ ಮುಂದೆ ಕುಳಿತು,
ಪೂರ್ಣಗಾತ್ರದ ಕೀಬೋರ್ಡ್-ಮೌಸ್ ಬಳಸಿ ಕೆಲಸಮಾಡುವುದು ನಿಜಕ್ಕೂ ಅನುಕೂಲಕರವೇ.
ಲ್ಯಾಪ್‌ಟಾಪಿನಂತೆ ಎತ್ತಿಕೊಂಡು ತಿರುಗಾಡುವ ತಂಟೆಯೂ ಇಲ್ಲ.

ಆದರೆ ಇಂದಿನ ಮನೆಗಳಲ್ಲಿ ರಿಯಲ್ ಎಸ್ಟೇಟ್ ಸಮಸ್ಯೆ ವ್ಯಾಪಕವಾಗಿದೆಯಲ್ಲ,
ಡೆಸ್ಕ್‌ಟಾಪ್‌ಗಾಗಿ ಪ್ರತ್ಯೇಕ ಸ್ಥಳ, ಮೇಜು-ಕುರ್ಚಿಗಳನ್ನೆಲ್ಲ ಹೊಂದಿಸುವುದು ಕಷ್ಟ.
ಹಾಗೆಂದು ಕಂಪ್ಯೂಟರ್ ಇಲ್ಲದೆ ನಿಭಾಯಿಸುವುದೂ ಕಷ್ಟವೇ.

ಈ ಸಮಸ್ಯೆ ಪರಿಹರಿಸಿಕೊಳ್ಳಲು ದಿವಾನಖಾನೆಯ ಟೀವಿಯನ್ನು ಬಳಸಿದರೆ ಹೇಗೆ?



ನಿಜ, ಬಹುತೇಕ ಎಲ್ಲರ ಮನೆಯಲ್ಲೂ ಟೀವಿ ಇರುತ್ತದೆ. ಈಗ ಅದು ಎಲ್‌ಸಿಡಿ/ಎಲ್‌ಇಡಿ
ಟೀವಿಯಾಗಿರುವ ಸಾಧ್ಯತೆಯೇ ಹೆಚ್ಚು. ಹೀಗಿರುವಾಗ ಆ ಟೀವಿಯನ್ನೇ ಪಾರ್ಟ್-ಟೈಮ್ ಕಂಪ್ಯೂಟರ್
ಆಗಿ ಬದಲಿಸಿಬಿಡಬಹುದಲ್ಲ!

ಇಂತಹುದೊಂದು ಆಲೋಚನೆಯ ಪರಿಣಾಮವಾಗಿ ಹೊಸಬಗೆಯ ಕಂಪ್ಯೂಟರುಗಳು ರೂಪುಗೊಂಡಿವೆ. ಡೆಸ್ಕ್‌ಟಾಪ್
ಕಂಪ್ಯೂಟರಿನ ಜೊತೆಗಿರುತ್ತದಲ್ಲ, ಕ್ಯಾಬಿನೆಟ್ ಎಂಬ ದಪ್ಪನೆಯ ಡಬ್ಬ, ಅದರ ಕೆಲಸವನ್ನು
ಇಲ್ಲಿ ಪುಟಾಣಿ ಸಾಧನವೊಂದು ಮಾಡುತ್ತದೆ. ಅದೆಷ್ಟು ಪುಟಾಣಿ ಎಂದರೆ ಆ ಸಾಧನದ ಗಾತ್ರ ಸಾಧಾರಣ
ಪೆನ್‌ಡ್ರೈವ್‌ಗಿಂತ ಕೊಂಚವೇ ದೊಡ್ಡದು ಅಷ್ಟೆ!

'ಮೈಕ್ರೋ ಪಿಸಿ'ಗಳೆಂದೂ ಕರೆಸಿಕೊಳ್ಳುವ ಈ ಪುಟ್ಟ ಕಂಪ್ಯೂಟರುಗಳನ್ನು ಎಚ್‌ಡಿಎಂಐ ಪೋರ್ಟ್
(ಎಚ್‌ಡಿ ಸೆಟ್‌ಟಾಪ್ ಬಾಕ್ಸ್ ಜೋಡಿಸಲು ಬಳಕೆಯಾಗುತ್ತದಲ್ಲ, ಯುಎಸ್‌ಬಿ ಪೋರ್ಟ್‌ನಂತಹುದೇ
ಕಿಂಡಿ) ಇರುವ ಯಾವುದೇ ಟೀವಿಗೆ ಸುಲಭವಾಗಿ ಜೋಡಿಸಬಹುದು. ಈ ಸಾಧನ, ಅಂತರಜಾಲ ಸಂಪರ್ಕ ಹಾಗೂ
ಕೀಬೋರ್ಡ್ - ಮೌಸ್ ಇದ್ದರೆ ಸಾಕು, ಮನೆಯ ಟೀವಿಯೇ ಕಂಪ್ಯೂಟರ್ ಆಗಿ ಬದಲಾಗುತ್ತದೆ.

ಮೈಕ್ರೋ ಪಿಸಿಯ ಕಲ್ಪನೆ ಕೊಂಚಮಟ್ಟಿಗೆ ಹೊಸತೇ ನಿಜ. ಆದರೆ ಹಲವಾರು ಸಂಸ್ಥೆಗಳು ಈ ಬಗೆಯ
ಸಾಧನಗಳ ಉತ್ಪಾದನೆಯನ್ನು ಈಗಾಗಲೇ ಪ್ರಾರಂಭಿಸಿವೆ, ಹಾಗಾಗಿ ಅನೇಕ ಮಾದರಿಯ ಮೈಕ್ರೋ ಪಿಸಿಗಳು
ಈಗಾಗಲೇ ಮಾರುಕಟ್ಟೆಯಲ್ಲಿ ದೊರಕುತ್ತಿವೆ.

ಇಂಟೆಲ್ ಸಂಸ್ಥೆಯ 'ಕಂಪ್ಯೂಟ್ ಸ್ಟಿಕ್' ವಿನ್ಯಾಸ ಆಧರಿಸಿದ ಉತ್ಪನ್ನಗಳನ್ನು ಇಲ್ಲಿ
ಉದಾಹರಿಸಬಹುದು.



ಇಂತಹ ಸಾಧನಗಳನ್ನು ರೂಪಿಸುತ್ತಿರುವ ಸಂಸ್ಥೆಗಳಲ್ಲಿ ನಮ್ಮ ದೇಶದ ಪನಾಶ್ ಕೂಡ ಒಂದು. ಈ
ಸಂಸ್ಥೆಯ 'ಏರ್ ಪಿಸಿ' ಸುಮಾರು ಹನ್ನೊಂದು ಸೆಂಟೀಮೀಟರ್ ಉದ್ದ, ನಾಲ್ಕು ಸೆಂಟೀಮೀಟರ್ ಅಗಲ,
ಐವತ್ತು ಗ್ರಾಮ್ ತೂಕದ ಕಂಪ್ಯೂಟರ್! ೧.೩೩ ಗಿಗಾಹರ್ಟ್ಸ್‌ನ ಕ್ವಾಡ್ ಕೋರ್ ಪ್ರಾಸೆಸರ್,
ವಿಂಡೋಸ್ ೧೦ ಕಾರ್ಯಾಚರಣ ವ್ಯವಸ್ಥೆ, ಎರಡು ಜಿಬಿ ರ್‍ಯಾಮ್, ೧೬/೩೨ ಜಿಬಿ ಶೇಖರಣಾ
ಸಾಮರ್ಥ್ಯ, ೧೨೮ ಜಿಬಿವರೆಗೆ ಮೆಮೊರಿ ಕಾರ್ಡ್ ಬಳಸುವ ಸೌಲಭ್ಯಗಳೆಲ್ಲ ಇರುವ ಈ ಸಾಧನ ವೈ-ಫಿ
ಮೂಲಕ ಅಂತರಜಾಲ ಸಂಪರ್ಕ ಪಡೆದುಕೊಳ್ಳಬಲ್ಲದು. ಮೈಕ್ರೋಸಾಫ್ಟ್ ಆಫೀಸ್‌ನಂತಹ
ತಂತ್ರಾಂಶಗಳನ್ನು ಅಂತರಜಾಲ ಆಧರಿತವಾಗಿ (ಕ್ಲೌಡ್) ಬಳಸುವುದು ಅನಿವಾರ್ಯ; ಆದರೆ
ಸಣ್ಣಗಾತ್ರದ ಕೆಲ ತಂತ್ರಾಂಶಗಳನ್ನು (ಉದಾ: ಬರಹ-ನುಡಿ ಮುಂತಾದ ಕನ್ನಡ ಪದಸಂಸ್ಕಾರಕಗಳು)
ಇನ್‌ಸ್ಟಾಲ್ ಮಾಡಿಕೊಳ್ಳುವುದೂ ಸಾಧ್ಯ. ರೂ. ೧೦೯೯೯ ಮುಖಬೆಲೆಯ ಈ ಸಾಧನ (೨೦೧೬ರ ಮೇ
ಮಧ್ಯಭಾಗದಲ್ಲಿದ್ದಂತೆ) ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಎಂಟರಿಂದ ಒಂಬತ್ತು ಸಾವಿರ
ರೂಪಾಯಿಗಳ ಆಸುಪಾಸಿನಲ್ಲಿ ದೊರಕುತ್ತಿದೆ.

*ಪನಾಶ್ ಏರ್ ಪಿಸಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ*



'ಕಂಪ್ಯೂಟ್ ಸ್ಟಿಕ್'ನಂತಹುದೇ ಇನ್ನೊಂದು ವಿನ್ಯಾಸ ಗೂಗಲ್ ಸಂಸ್ಥೆಯ 'ಕ್ರೋಮ್ ಬಿಟ್'ನದು.

ಗೂಗಲ್ ಸಂಸ್ಥೆಯ 'ಕ್ರೋಮ್ ಓಎಸ್' ಕಾರ್ಯಾಚರಣ ವ್ಯವಸ್ಥೆಯನ್ನು ಬಳಸುವುದು ಈ ಸಾಧನದ
ವೈಶಿಷ್ಟ್ಯ. ಕ್ರೋಮ್ ಓಎಸ್ ಅಂತರಜಾಲ ಆಧರಿತವಾಗಿ (ಕ್ಲೌಡ್) ಕೆಲಸಮಾಡುವುದರಿಂದ ಅದನ್ನು
ಬಳಸುವ ಸಾಧನಗಳಲ್ಲಿ ಯಾವುದೇ ತಂತ್ರಾಂಶವನ್ನು ಇನ್‌ಸ್ಟಾಲ್ ಮಾಡುವುದಾಗಲಿ ಅಪ್‌ಡೇಟ್
ಮಾಡುವುದಾಗಲಿ ಬೇಕಿಲ್ಲ. ವೈ-ಫಿ ಸಂಪರ್ಕ ಕಲ್ಪಿಸಿಕೊಂಡು ಗೂಗಲ್ ಕ್ರೋಮ್ ಬ್ರೌಸರ್ ಜೊತೆ
ದೊರಕುವ ಆಪ್‌ಗಳನ್ನು ಉಪಯೋಗಿಸಿದರೆ ಅಷ್ಟೇ ಸಾಕು. ರೂಪಿಸಿದ ಕಡತಗಳನ್ನು ಉಳಿಸಿಡಲು,
ಹಂಚಿಕೊಳ್ಳಲೂ ಅಷ್ಟೆ: ಗೂಗಲ್ ಡ್ರೈವ್ ಇದೆಯಲ್ಲ!



೧.೮ ಗಿಗಾಹರ್ಟ್ಸ್ ಪ್ರಾಸೆಸರ್, ಎರಡು ಜಿಬಿ ರ್‍ಯಾಮ್, ೧೬ ಜಿಬಿ ಶೇಖರಣಾ ಸಾಮರ್ಥ್ಯ,
ಬ್ಲೂಟೂತ್ ಹಾಗೂ ವೈ-ಫಿ ಸೌಲಭ್ಯಗಳಿರುವ ಒಂದು ಕ್ರೋಮ್‌ಬಿಟ್ ಮಾದರಿಯನ್ನು ಏಸಸ್ ಸಂಸ್ಥೆ
ರೂಪಿಸಿದೆ. ಈ ಸಾಧನದ ಜೊತೆಗೆ ಬ್ಲೂಟೂತ್ ಕೀಬೋರ್ಡನ್ನೂ ಬಳಸುವುದು ಸಾಧ್ಯವಿದೆ. ಬಳಸಬಹುದಾದ
ತಂತ್ರಾಂಶಗಳ ಆಯ್ಕೆ ಮಾತ್ರ ಕ್ರೋಮ್ ವೆಬ್ ಸ್ಟೋರಿನಲ್ಲಿ ಎಷ್ಟು ಲಭ್ಯವಿವೆಯೋ ಅಷ್ಟಕ್ಕೇ
ಸೀಮಿತ. ಈ ಪೈಕಿ ಕೆಲ ತಂತ್ರಾಂಶಗಳು ಅಂತರಜಾಲ ಸಂಪರ್ಕವಿಲ್ಲದೆಯೂ ಕೆಲಸಮಾಡುತ್ತವೆ.  ಕೇವಲ
ಹನ್ನೆರಡು ಸೆಂಟೀಮೀಟರ್ ಉದ್ದದ ಈ ಸಾಧನ ಆನ್‌ಲೈನ್ ಅಂಗಡಿಗಳಲ್ಲಿ ಸದ್ಯ 

[ms-stf '58220'] ರೈಲಿನ ಮೂಲಕ ನೀರಷ್ಟೇ ಅಲ್ಲ ವಿದ್ಯುತ್ತೂ...

2016-05-19 Thread HAREESHKUMAR K Agasanapura
ರೈಲಿನ ಮೂಲಕ ನೀರಷ್ಟೇ ಅಲ್ಲ ವಿದ್ಯುತ್ತೂ...

 187 reads
Thu, 05/19/2016 - 01:00

ಅಮೆರಿಕದ ನೆವಾಡಾ ಮರುಭೂಮಿಯಲ್ಲಿ ಒಂದು ಹೊಸಬಗೆಯ ಟ್ರೇನ್ ಓಡಾಡಲಿದೆ. ಇದು
ಪ್ರಯಾಣಿಕರನ್ನು ಸಾಗಿಸುವುದಿಲ್ಲ. ಹಾಗಂತ ಅದುರು, ನೀರು, ಪೆಟ್ರೋಲಿನಂಥ ಸರಕು
ಸಾಮಗ್ರಿಗಳನ್ನೂ ಸಾಗಿಸುವುದಿಲ್ಲ. ಇದರ ಓಡಾಟದ ಉದ್ದೇಶ ಏನೆಂದರೆ ಶಕ್ತಿಯ ಸಂಗ್ರಹ
ಮತ್ತು ಪೂರೈಕೆ ಮಾಡುವುದು. ಒಂದರ್ಥದಲ್ಲಿ ಇದು ಓಡಾಡುವ ಬ್ಯಾಟರಿಯಂತೆ ಕೆಲಸ
ಮಾಡುತ್ತದೆ. ಎತ್ತರದ ನಿಲ್ದಾಣದಿಂದ ಕೆಳಕ್ಕೆ ಸಾಗುವಾಗ ಅದು ವಿದ್ಯುತ್ ಶಕ್ತಿಯನ್ನು
ಉತ್ಪಾದಿಸುತ್ತದೆ. ಕೆಳಗಿನ ನಿಲ್ದಾಣದಿಂದ ಮೇಲಕ್ಕೆ ಬರುವಾಗ ಶಕ್ತಿಯನ್ನು
ಬಳಸಿಕೊಳ್ಳುತ್ತದೆ. ಇದರ ಪ್ರಾಯೋಗಿಕ ಓಡಾಟಕ್ಕೆ ಸಿದ್ಧತೆಗಳು ನಡೆದಿದ್ದು, ಶಕ್ತಿ
ಸಂಚಲನದ ವಿಚಾರದಲ್ಲಿ ಜಗತ್ತಿಗೆ ಹೊಸ ಬೆಳಕನ್ನು ನೀಡಲಿದೆ.

ನಮಗೆಲ್ಲ ಗೊತ್ತೇ ಇದೆ, ನೀರು ನಮ್ಮೆಲ್ಲರ ಮೊಟ್ಟ ಮೊದಲಿನ ಬೇಡಿಕೆಯಾದರೆ, ಶಕ್ತಿ
ಎರಡನೆಯ ಮೂಲಭೂತ ಅಗತ್ಯ ಎನ್ನಿಸಿದೆ. ಎರಡಕ್ಕೂ ಪರಸ್ಪರ ಸಂಬಂಧವೂ ಇದೆ. ನೀರು
ಲಭ್ಯವಿದ್ದರೂ ಅದನ್ನು ಮೇಲಕ್ಕೆತ್ತಲು ಶಕ್ತಿ ಸಿಗದಿದ್ದರೆ ನೀರಿದ್ದೂ ನಿರರ್ಥಕವೇ
ತಾನೆ? ನಮ್ಮಲ್ಲಂತೂ ಈ ಎರಡರ ಸಂಬಂಧ ಇನ್ನೂ ಗಾಢವಾಗಿದೆ. ತುಂಗಭದ್ರೆಯಲ್ಲಿ ಸಾಕಷ್ಟು
ನೀರು ಇಲ್ಲವೆಂದು ಈ ವರ್ಷ ರಾಯಚೂರಿನ ಕಲ್ಲಿದ್ದಲ ಉಷ್ಣ ಸ್ಥಾವರದಲ್ಲಿ ವಿದ್ಯುತ್
ಉತ್ಪಾದನೆಗೆ ಕಂಟಕ ಬಂದಿತ್ತು. ವಿದ್ಯುತ್ತಿಗೆಂದೇ ದೊಡ್ಡ ದೊಡ್ಡ ಅಣೆಕಟ್ಟು
ಕಟ್ಟಿದ್ದರೂ ಅಂಥ ಜಲಾಶಯಗಳು ಬರಿದಾದಾಗ ಆಕಾಶ ನೋಡುವ ಸ್ಥಿತಿ ನಮ್ಮದು. ಕೆಲವು
ವರ್ಷಗಳ ಹಿಂದೆ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಸಲೆಂದು ಹೋಮ ಹವನ ಮಾಡಿ
ಕಾಷ್ಠಸಂಪತ್ತಿನ ಹೊಗೆ ಹಾಯಿಸಿದ್ದರು.

ನೀರಿನ ಅಭಾವವಿದ್ದರಂತೂ ವಿದ್ಯುತ್ತಿಗೆ ಕಂಟಕ; ಮೋಡ ದಟ್ಟಣಿಸಿ ಮಳೆ ಗಾಳಿಯ ರಭಸ
ಹೆಚ್ಚಾದರೆ ಆಗಲೂ ವಿದ್ಯುತ್ ಪೂರೈಕೆಗೆ ಕಂಟಕ ಒದಗುತ್ತದೆ. ಕರಾವಳಿ ಮತ್ತು ಮಲೆನಾಡಿನ
ಜಿಲ್ಲೆಗಳಲ್ಲಿ ಈಗಾಗಲೇ ಈ ಅತಿರೇಕ ಕಾಣತೊಡಗಿದೆ. ಅಂತೂ ‘ಬರ ನಿರೋಧಕ’ ಎಂದರೆ ಕೇವಲ
ನೀರಿನ ಬರವಷ್ಟೇ ಅಲ್ಲ, ಶಕ್ತಿಯ ಬರವೂ ನಮಗೆ ತಾಗದಂತೆ ಹೊಸ ಹೊಸ ತಂತ್ರಜ್ಞಾನವನ್ನು
ರೂಢಿಸಿಕೊಳ್ಳಬೇಕಾಗಿದೆ.

ಹೊಸ ತಂತ್ರಜ್ಞಾನ ನಮ್ಮ ಹಿತ್ತಿಲಿಗೂ ಬರುತ್ತಿದೆ. ದೊಡ್ಡ ಪ್ರಮಾಣದಲ್ಲೇ ಬರುತ್ತಿದೆ.
ಪಾವಗಡ ತಾಲ್ಲೂಕಿನಲ್ಲಿ 12 ಸಾವಿರ ಎಕರೆ ಪ್ರದೇಶದಲ್ಲಿ ಬಿಸಿಲನ್ನೇ ಹೀರಿಕೊಂಡು ಎರಡು
ಸಾವಿರ ಮೆಗಾವಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಯೋಜನೆಯ ಆರಂಭವನ್ನು
ನಿನ್ನೆಯಷ್ಟೆ ಸಚಿವ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ದೇಶದ ಅತಿ ದೊಡ್ಡ ವಿದ್ಯುತ್
ಸ್ಥಾವರ ಅದಾಗಲಿದೆಯಂತೆ. ಅಂದರೆ, ಲಿಂಗನಮಕ್ಕಿ ಜಲಾಶಯದ ಮೂಲಕ ಲಭಿಸುವ ಗರಿಷ್ಠ
ವಿದ್ಯುತ್ತಿಗಿಂತ ಹೆಚ್ಚಿನ ಪ್ರಮಾಣದ ಶಕ್ತಿ ಇಲ್ಲಿ ಬಿಸಿಲಿನ ಮೂಲಕ ಉತ್ಪಾದನೆ
ಆಗಲಿದೆ; ಅದೂ ಕೇವಲ ಎರಡೇ ವರ್ಷಗಳಲ್ಲಿ. ಈ ಯೋಜನೆಗೆ ಮಳೆಯೂ ಬೇಕಾಗಿಲ್ಲ, ನೀರೂ
ಬೇಕಾಗಿಲ್ಲ. ಮೋಡಗಟ್ಟಿದಾಗ ವಿದ್ಯುತ್ ಉತ್ಪಾದನೆ ಕೊಂಚ ಕಮ್ಮಿ ಆಗುತ್ತದಾದರೂ
ಪಾವಗಡದಂಥ ಪ್ರದೇಶದಲ್ಲಿ ಮೋಡಕ್ಕೇ ಬರಗಾಲ ಇರುವಾಗ ಮತ್ತಿನ್ನೇನು, ಅದನ್ನೇ ವರದಾನ
ಎಂದು ಪರಿಗಣಿಸಬೇಕು.

ಸೌರ ವಿದ್ಯುತ್ತನ್ನು ರೈತರು ತಮ್ಮ ಹೊಲದಲ್ಲಿ, ಮನೆವಾಸಿಗಳು ತಮ್ಮ ಛಾವಣಿಯಲ್ಲಿ
ಉತ್ಪಾದಿಸಲೆಂದು  ಕರ್ನಾಟಕ ಸರ್ಕಾರ ಖಾಸಗಿ ಜನರಿಗೆ ಉತ್ತೇಜನ ನೀಡುತ್ತಿದ್ದು, ಅಂಥ
ಹೆಚ್ಚುವರಿ ವಿದ್ಯುತ್ತನ್ನು ಗ್ರಿಡ್‌ಗೆ ಮಾರುವ ಅವಕಾಶವನ್ನೂ ನೀಡಲಾಗಿದೆ. ಜನರ
ಉತ್ಸಾಹವನ್ನು ನೋಡಿ ಸರ್ಕಾರ ದಂಗಾಯಿತೊ ಏನೊ, ಗಡಬಡಿಸಿ ವಿದ್ಯುತ್ ಖರೀದಿ ದರವನ್ನು
ಇದೀಗ ತಗ್ಗಿಸಿದೆ. ಅದೇನೇ ಇರಲಿ, ಸೌರಶಕ್ತಿಗೆ ಹಿಂದೆಂದೂ ಕಾಣದ ಆದ್ಯತೆ
ಸಿಕ್ಕಿರುವುದಂತೂ ನಿಜ. ಎಷ್ಟೆಂದರೆ, ಬಳ್ಳಾರಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ
ಕಾರ್ಖಾನೆಯನ್ನು ಸ್ಥಾಪಿಸಲೆಂದು ಎರಡೂವರೆ ಸಾವಿರ ಎಕರೆ ಜಮೀನನ್ನು ಪಡೆದ ಆರ್ಸೆಲಾರ್
ಮಿತ್ತಲ್ ಕಂಪನಿ ಈಗ ಉಕ್ಕನ್ನು ಕೈಬಿಟ್ಟು ಇಲ್ಲಿ ಸೌರ ವಿದ್ಯುತ್ತಿಗೇ ನೆಲ ಬಳಕೆ
ಮಾಡಲು ಇತ್ತೀಚೆಗೆ ಸರ್ಕಾರದ ಅನುಮತಿ ಕೋರಿದೆ.

ಮಿತ್ತಲ್ ಬರಲಿ, ಬಿಲ್ ಗೇಟ್ಸ್ ಬರಲಿ, ಸೌರ ವಿದ್ಯುತ್ತಿನ ಹಣೆಬರಹ ಏನೆಂದರೆ ಅದು
ಕಚೇರಿ ವೇಳೆಯಲ್ಲೇ ಕೆಲಸ ಮಾಡುತ್ತದೆ. ನೈನ್ ಟು ಫೈವ್ ಡ್ಯೂಟಿ ಅದರದ್ದು. ಅದಕ್ಕೆ
ಪರ್ಯಾಯವಾಗಿ ಚಿತ್ರದುರ್ಗ, ದಾವಣಗೆರೆ ಬಳ್ಳಾರಿಯುದ್ದಕ್ಕೂ ಗಾಳಿಯಂತ್ರಗಳು
ತಲೆಯೆತ್ತಿವೆ. ಅಂಥ ಗಿರಗಿಟ್ಟೆಗಳೂ ಗಾಳಿ ಇದ್ದಾಗಲಷ್ಟೇ ಕೆಲಸ ಮಾಡುತ್ತವೆ. ಈ
ಯಂತ್ರಗಳು ಅದೆಷ್ಟೇ ವೇಗವಾಗಿ ಸುತ್ತಿದರೂ, ನಮಗೆ ಬೇಕೆಂದಾಗ ವಿದ್ಯುತ್ ಸಿಗುತ್ತದೆಂಬ
ಖಾತ್ರಿ ಇಲ್ಲ. ಬೇಡವೆಂದಾಗ ಹಾಗೆಲ್ಲ ಅತಿ ದೊಡ್ಡ ಪ್ರಮಾಣದಲ್ಲಿ ಸೌರ ವಿದ್ಯುತ್ ಅಥವಾ
ಗಾಳಿ ವಿದ್ಯುತ್ ಉತ್ಪಾದನೆ ಆಗುತ್ತಿದ್ದರೆ ಜರ್ಮನಿಯಲ್ಲಿ ಆದಂತೆ ಗ್ರಿಡ್ ಕುಸಿತ
ಉಂಟಾಗಿ ಭಾರೀ ಕೋಲಾಹಲವಾಗುತ್ತದೆ.

ಇದು ವಿಜ್ಞಾನಕ್ಕೆ ಎದುರಾಗಿರುವ ಬಹುದೊಡ್ಡ ಸವಾಲು: ಬಿಸಿಲನ್ನಾಗಲೀ ಗಾಳಿಯನ್ನಾಗಲೀ
ದುಡಿಸಿಕೊಂಡು ಅದರಿಂದ ವಿದ್ಯುತ್ ಶಕ್ತಿಯನ್ನು ಹೊಮ್ಮಿಸಿದರೆ ಸಾಲದು; ಅದನ್ನು
ಶೇಖರಿಸಿ ನಮಗೆ ಬೇಕಿದ್ದಾಗ ಅಥವಾ ಬೇಡಿಕೆ ತೀರಾ ಹೆಚ್ಚಾದಾಗ (ಪೀಕ್ ವೇಳೆಯಲ್ಲಿ) ಅದು
ಸಿಗುವಂತಾಗಬೇಕು. ಈ ಸವಾಲನ್ನು ಕೈಗೆತ್ತಿಕೊಂಡು ಪರಿಹಾರ ಹುಡುಕುವವರಿಗೆ ಬಹುದೊಡ್ಡ
ಬಿಸಿನೆಸ್ ಅವಕಾಶವೂ ಲಭಿಸಿದಂತಾಗುತ್ತದೆ. ಆದ್ದರಿಂದಲೇ ನೆವಾಡಾ ಮರುಭೂಮಿಯಲ್ಲಿ ಇದೀಗ
ಟ್ರೇನ್ ಪರೀಕ್ಷೆಯಲ್ಲಿ ತೊಡಗಿರುವ ಏಸಿಸ್ ಕಂಪನಿಯು ರೈಲು ಬಿಡುತ್ತಿದೆ ಎಂದು ಯಾರೂ
ಭಾವಿಸುತ್ತಿಲ್ಲ. ಅದರ ಪ್ರಯೋಗಗಳನ್ನು ಶಕ್ತಿ ತಂತ್ರಜ್ಞರು ಆಸಕ್ತಿಯಿಂದ
ನೋಡುತ್ತಿದ್ದಾರೆ. ಸೌರಫಲಕ ಮತ್ತು ಗಾಳಿಯಂತ್ರಗಳಿಂದ ಹಗಲು ವೇಳೆ ಉತ್ಪಾದನೆಯಾಗುವ
ವಿದ್ಯುತ್ ಶಕ್ತಿಯನ್ನು ಬಳಸಿಕೊಂಡು ರೈಲು ಘಟ್ಟದ ತಳದಿಂದ ಮೇಲಕ್ಕೆ ಬರುತ್ತದೆ.
ರಾತ್ರಿ ಅಥವಾ ಬೆಳಿಗ್ಗೆ ವಿದ್ಯುತ್ತಿಗೆ ಬೇಡಿಕೆ ಹೆಚ್ಚಿದ್ದಾಗ ಸರ್ರೆಂದು
ಇಳಿಜಾರಿನಲ್ಲಿ ತನ್ನಷ್ಟಕ್ಕೆ ಓಡುತ್ತ ಕರೆಂಟ್ ಉತ್ಪಾದನೆ ಮಾಡುತ್ತದೆ.

ಒಂದರ್ಥದಲ್ಲಿ ಇದು ಲಿಂಗನಮಕ್ಕಿ ಜಲಾಶಯದ ನೀರಿನ ಹಾಗೆಯೇ ಕೆಲಸ ಮಾಡುತ್ತದೆ. ನೀರು
ಕೆಳಕ್ಕೆ ಧುಮುಕುವಾಗ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಕ್ಕೆ ನಾವು ಜಲವಿದ್ಯುತ್
ಎನ್ನುತ್ತೇವೆ. ಆದರೆ ನಿಜಕ್ಕೂ ಅದು ಗುರುತ್ವ ಬಲವನ್ನು ವಿದ್ಯುತ್ ಶಕ್ತಿಯನ್ನಾಗಿ
ಪರಿವರ್ತಿಸುತ್ತದೆ. ಎತ್ತರದಿಂದ ನೀರೊಂದೇ ಅಲ್ಲ, ಏನನ್ನೇ ಬೀಳಿಸಿದರೂ ಅಪಾರ
ಶಕ್ತಿಯೊಂದಿಗೆ ಅದು ಬೀಳುತ್ತದೆ. ನೀರಿನ ಬದಲು ಒಣ ಮರಳನ್ನು ಬೀಳಿಸಿದರೂ ಅಂಥ ಧಾರೆಗೆ
ಅಡ್ಡಲಾಗಿ ಚಕ್ರವನ್ನು ಇಟ್ಟರೆ ಅದು ತಿರುಗುತ್ತ ವಿದ್ಯುತ್ ಉತ್ಪಾದನೆ ಸಾಧ್ಯವಿದೆ.

ಒಂದು ಬಂಡೆಯನ್ನೇ ಎತ್ತರದಿಂದ ಕೆಳಕ್ಕೆ ತಳ್ಳಿದರೂ ಗುರುತ್ವ ಬಲದಿಂದಾಗಿ ಹೆಚ್ಚು
ಹೆಚ್ಚು ಶಕ್ತಿಯನ್ನು ಸಂಚಯಿಸಿಕೊಳ್ಳುತ್ತ ಸಾಗುತ್ತಿರುತ್ತದೆ. ಎತ್ತರ
ಹೆಚ್ಚಿದ್ದಷ್ಟೂ ಬೀಳುವ ರಭಸ ಹೆಚ್ಚಿಗೆ ಇರುತ್ತದೆ (ಈ ತತ್ವವನ್ನು ತಮಿಳುನಾಡಿನ
ಅಮ್ಮಾವ್ರಿಗೆ ಅನ್ವಯಿಸಲು ಈಗಲೇ ಹೋಗಬೇಡಿ. ಆಲದ ಮರ ಬಿದ್ದಾಗ ಅದರ ಕೆಳಗಿನ
ಚಿಕ್ಕಪುಟ್ಟ ಜೀವಿಗಳು ಅಪ್ಪಚ್ಚಿಯಾಗುವುದು ಸಹಜವೆಂದು ಇಂದಿರಾ ಗಾಂಧಿಯ ಹತ್ಯೆಯ
ತರುವಾಯದ ಸಿಖ್ ಮಾರಣ ಹೋಮದ ಸಂದರ್ಭದಲ್ಲಿ ಹೇಳಿದ್ದನ್ನೂ ಸದ್ಯಕ್ಕೆ ಬದಿಗಿಡೋಣ).
ತಿರುಳು ಏನೆಂದರೆ, ಹೀಗೆ ಕೆಳಮುಖಕ್ಕೆ ಸಾಗುವ ವಸ್ತುವಿನಿಂದ ಶಕ್ತಿ ಹೊಮ್ಮುತ್ತದೆ.
ನೆವಾಡಾದ ಟ್ರೇನು ಹೆಚ್ಚು ಹೆಚ್ಚು ಶಕ್ತಿಯನ್ನು ಹೊಮ್ಮಿಸಲೆಂದು ಅದರ ಡಬ್ಬಿಗಳಲ್ಲಿ
ಗ್ರಾನೈಟ್ ತೊಲೆಗಳನ್ನು, ಕಾಂಕ್ರೀಟ್ ಕಂಬಗಳನ್ನು ತುಂಬಿರುತ್ತಾರೆ.

ಹಾಗಿದ್ದರೆ ಅದೇ ಟ್ರೇನು ಘಟ್ಟದ ತಳದಿಂದ ಹಿಮ್ಮೊಗವಾಗಿ ಮೇಲಕ್ಕೆ ಬರುವಾಗ ಶಕ್ತಿಯ
ವ್ಯಯವಾಗುತ್ತದಲ್ಲ? ಆಗಲಿ, ಅಲ್ಲೂ ಜಲವಿದ್ಯುತ್ತಿನ ತತ್ವವನ್ನೇ 

[ms-stf '57970'] KSCST : Regional Centre - Gulbarga Conducting computer training for govt servants from 20/05/2016

2016-05-14 Thread HAREESHKUMAR K Agasanapura
http://www.kscst.iisc.ernet.in/regcentre_kalaburagi.html

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '57795'] ಇಜ್ಞಾನ ಡಾಟ್ ಕಾಮ್: ಇಜ್ಞಾನ ವಿಶೇಷ ಲೇಖನ: 'ವಸುಧೈವ ಕುಟುಂಬಕಮ್'

2016-05-12 Thread HAREESHKUMAR K Agasanapura
http://googleweblight.com/?lite_url=http://www.ejnana.com/2016/05/blog-post_12.html%3Fm%3D1=en-IN=1=534=www.google.co.in=1463065227=APY536zCHqAiyayUFeOhwe6wufTwP3Rm9A

*ಇಜ್ಞಾನ ವಿಶೇಷ ಲೇಖನ: 'ವಸುಧೈವ ಕುಟುಂಬಕಮ್'*

*ರೋಹಿತ್ ಚಕ್ರತೀರ್ಥ*



ಕೆಲವು ವರ್ಷಗಳ ಹಿಂದೆ ರಾಮಕೃಷ್ಣ ಬೆಳ್ಳೂರು ಎಂಬವರು ಒಂದು ಚಿತ್ರಸರಣಿ ಮಾಡಿದ್ದರು.
ಮಹಾವಿಜ್ಞಾನಿ ಐನ್‌ಸ್ಟೈನ್‌ರನ್ನೂ ಕನ್ನಡದ ಸಾಹಿತ್ಯಮೇರು ಶಿವರಾಮ ಕಾರಂತರನ್ನೂ
ಅಕ್ಕಪಕ್ಕದಲ್ಲಿಟ್ಟು ನೋಡಿದರೆ ಅವರೇ ಇವರಾ ಎಂದು ಗೊಂದಲವಾಗುವಷ್ಟು ಅವರಿಬ್ಬರ ಚಹರೆಗಳೂ
ಹೋಲುವುದನ್ನು ತೋರಿಸಿ "ಎಷ್ಟೊಂದು ಸೇಮ್ ಇದ್ದಾರಲ್ವಾ?" ಎಂದು ಕೇಳಿದ್ದರು. ಗಡ್ಡ-ಮೀಸೆ
ಬಿಟ್ಟ ಕೆ.ಎಸ್. ಅಶ್ವಥ್‌ರನ್ನು ಗೆಲಿಲಿಯೋ ಪಕ್ಕದಲ್ಲಿ ಕೂರಿಸಿದರೂ ಇದೇ ಗೊಂದಲ. ಕರ್ನಾಟಕದ
ರಾಜ್ಯಪಾಲರಾಗಿದ್ದ ಖುರ್ಷಿದ್ ಆಲಂ ಖಾನ್ ಮತ್ತು ಚಿತ್ರನಟ ಬ್ರಹ್ಮಾವರ ಸದಾಶಿವ ರಾವ್ ನೋಡಲು
ಒಂದೇ ರೀತಿ ಇದ್ದರು. ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ ಸುಬ್ಬಾ ರಾವ್‌ರನ್ನು ನಮ್ಮ
"ಥಟ್ ಅಂತ ಹೇಳಿ" ಖ್ಯಾತಿಯ ಡಾ. ನಾ. ಸೋಮೇಶ್ವರ ಪಕ್ಕದಲ್ಲಿ ನಿಲ್ಲಿಸಿದರೆ
ನಿಜವ್ಯಕ್ತಿಯೊಬ್ಬರು ತನ್ನ ಮೇಣದ ಪ್ರತಿಮೆಯೊಂದಿಗೆ ನಿಂತಿದ್ದಾರೋ ಎಂದು ಭಾಸವಾಗುತ್ತದೆ.
ನಿತಿನ್ ಮುಖೇಶ್ ಎಂಬ ಹಾಡುಗಾರನನ್ನು ಟಿ.ಎಂ. ಕೃಷ್ಣ ಎಂಬ ಕರ್ನಾಟಕ ಸಂಗೀತಗಾರರ ಪಕ್ಕದಲ್ಲಿ
ಕೂರಿಸಿದರೆ ಇವರೇನು ಅವಳಿ-ಜವಳೀನಾ ಅಂತ ಕೇಳುವಷ್ಟು ಅವರಿಬ್ಬರೂ ಸೇಮ್‌ಸೇಮ್. ನಮ್ಮ ನಡುವಿನ
ಹೆಮ್ಮೆಯ ವಿಜ್ಞಾನಿ ರೊದ್ದಂ ನರಸಿಂಹ ತಮ್ಮ ಎಂದಿನ ಕೋಟು ಪ್ಯಾಂಟಿನ ಪೋಷಾಕು ತೆಗೆದು ಪಟ್ಟೆ
ಪೀತಾಂಬರ ಉಟ್ಟುಕೊಂಡರೆ ಯಾರಾದರೂ "ವಿದ್ಯಾಭೂಷಣರೇ, ಒಂದು ಹಾಡು ಹಾಡಿ" ಅಂತ ಪೀಡಿಸಿಯಾರು!
ಹಾಗೇನೇ ಭಯೋತ್ಪಾದಕರ ಜೊತೆಗಿನ ಸಮರದಲ್ಲಿ ಮಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್‌ರಿಗೂ
ತಮಿಳು ನಟ ವಿಕ್ರಂಗೂ ಅದೇನು ಹೋಲಿಕೆ ಅಂತೀರಿ! ಕ್ರಾಂತಿಕಾರಿ ಕ್ಯೂಬಾ ನಾಯಕ ಚೆಗೆವಾರನ
ಮೇಲೆ ಸಿನೆಮಾ ತೆಗೆಯುವುದಾದರೆ ಅದಕ್ಕೆ ಕನ್ನಡ ಚಿತ್ರನಟ ಮುರಳಿಯಷ್ಟು ಪರ್‌ಫೆಕ್ಟ್ ಆಗಿ
ಹೋಲುವ ಮುಖ ಬೇರೆ ಇಲ್ಲ. ಹಾಗೇನೇ ಆಂಧ್ರದ ರಾಜಕಾರಣಿ ಜಗನ್‌ಮೋಹನ ರೆಡ್ಡಿ ಮತ್ತು
ಲೀಲಾವತಿಯವರ ಮಗ, ಕನ್ನಡ ನಟ ವಿನೋದ್ ನಿಮ್ಮನ್ನು ಸಖತ್ ಗೊಂದಲದಲ್ಲಿ ಮುಳುಗಿಸಿಬಿಡುತ್ತಾರೆ
ಒಂದು ಕ್ಷಣ.

ಜಗತ್ತಿನಲ್ಲಿ ನಮ್ಮನ್ನು ಹೋಲುವ ಕನಿಷ್ಠ ಆರು ಜನ ಇರುತ್ತಾರೆಂಬ ನಂಬಿಕೆ ಇದೆ. ನಮ್ಮ ಚಹರೆ,
ವರ್ತನೆಗಳನ್ನು ಹೋಲುವ ವ್ಯಕ್ತಿಗಳು ಗುರುತು-ಪರಿಚಯವಿಲ್ಲದ ಜಾಗದಲ್ಲಿ ನಮಗೆದುರಾದಾಗ ಈ
ಮಾತನ್ನು ನೆನಪಿಸಿಕೊಳ್ಳಬೇಕು. ಯಾಕೆಂದರೆ ಇಂಥದೊಂದು ತರ್ಕಕ್ಕೆ ಮೀರಿದ ಮಾತಿನ ಬಲವನ್ನು
ಬಿಟ್ಟರೆ ಮತ್ಯಾವ ರೀತಿಯಲ್ಲೂ ಈ ಹೋಲಿಕೆಯನ್ನು ಸಮರ್ಥಿಸಿಕೊಳ್ಳುವ ದಾರಿಯಿಲ್ಲ. ಇದೇನೋ
ಬಾಹ್ಯ ಚಹರೆಯ ಹೋಲಿಕೆಯ ಮಾತಾಯಿತು. ಬರಾಕ್ ಒಬಾಮನಿಗೂ ನರೇಂದ್ರ ಮೋದಿಗೂ ಏನಾದರೂ ಸಂಬಂಧ
ಇದೆಯಾ? ಅವರಿಬ್ಬರೂ ಒಂದೇ ಕುಟುಂಬದ ಸದಸ್ಯರಾಗಿರುವ ಸಾಧ್ಯತೆ ಇದೆಯಾ? ಎಂದು ಕೇಳಿದರೆ ಏನು
ಹೇಳುತ್ತೀರಿ? ವಾಟ್ ರಬ್ಬಿಷ್! ಮೋದಿ ಎಲ್ಲಿ ಒಬಾಮಾ ಎಲ್ಲಿ! ಮುಖಗಳೂ ಹೋಲುವುದಿಲ್ಲ;
ಎತ್ನಿಸಿಟಿಯೂ ಹೋಲುವುದಿಲ್ಲ. ಇನ್ನು ಅವರಿಬ್ಬರೂ ಒಂದೇ ಕುಟುಂಬದಿಂದ ಬರೋದಕ್ಕೆ ಅದ್ಯಾವ
ಸೀಮೆ ಸಿದ್ಧಾಂತದ ಮೂಲಕ ಸಾಧ್ಯ ಎಂದು ಪ್ರಶ್ನೆ ಮಾಡುತ್ತೀರಿ ತಾನೆ? ಆದರೆ ಕೊಂಚ
ಯೋಚಿಸಿನೋಡಿ. ಈ ಜಗತ್ತಿನಲ್ಲಿ ಈಗ ನಡೆದಾಡುತ್ತಿರುವ ವ್ಯಕ್ತಿಗೆ ಇರುವ ತಂದೆತಾಯಿಗಳು
ಇಬ್ಬರು, ಅಜ್ಜ ಅಜ್ಜಿಯರು ನಾಲ್ಕು ಜನ, ಮುತ್ತಜ್ಜ-ಮುತ್ತಜ್ಜಿಯರು ಒಟ್ಟು ಎಂಟು ಮಂದಿ.
ಹೀಗೆ ಪ್ರತಿ ಜನರೇಷನ್ನಿಗೂ ಸಂಖ್ಯೆ ದುಪ್ಪಟ್ಟಾಗುತ್ತಾ ಹೋಗುವುದರಿಂದ ೬೪
ಜನರೇಶನ್ನುಗಳಲ್ಲಿ ಬಂದುಹೋದ ಒಟ್ಟು ಜನರ ಸಂಖ್ಯೆ ಒಂದು ಕ್ವಿಂಟಿಲಿಯನ್ ಅನ್ನು ಮೀರುತ್ತದೆ.
ಅಷ್ಟೆಂದರೆ ಎಷ್ಟು? ಒಂದರ ಮುಂದೆ ಹದಿನೆಂಟು ಸೊನ್ನೆಗಳಾಗುವಷ್ಟು ಬೃಹತ್ ಸಂಖ್ಯೆ!
ಭೂಮಿಯಲ್ಲಿ ಕಳೆದ ಹಲವು ಸಹಸ್ರಾರು ವರ್ಷಗಳಿಂದ ಹುಟ್ಟಿ ನಡೆದಾಡಿ ಮಡಿದ ಒಟ್ಟು ಮಾನವರ
ಸಂಖ್ಯೆಗಿಂತಲೂ ಇದು ದೊಡ್ಡದು. ಹಾಗಾದರೆ ೬೪ ವಂಶಾವಳಿಗಳನ್ನು ದಾಟಿ ಹಿಂದೆ ಹೋದರೆ ಸಿಗುವ
ರೋಮನ್ ಚಕ್ರಾಧಿಪತ್ಯದ ಸಮಯದಲ್ಲಿ ನಮ್ಮೆಲ್ಲರ ಪ್ರಪಿತಾಮಹರೂ ಒಂದೇ ಕುಟುಂಬಕ್ಕೆ
ಸೇರಿರಬೇಕಲ್ಲ? ಹೌದು ಎನ್ನುತ್ತದೆ ಗಣಿತ. ಕ್ರಿಸ್ತಪೂರ್ವ ೩೦೦ರಲ್ಲಿ ಬದುಕಿದ್ದ ಕನಿಷ್ಠ
ಒಬ್ಬ ವ್ಯಕ್ತಿ, ಈಗ ಜಗತ್ತಿನಲ್ಲಿರುವ ಎಲ್ಲ ೭೦೦ ಕೋಟಿ ಜನರಿಗೂ ಸಂಬಂಧಿಕನಾಗಿದ್ದ
ಎನ್ನುತ್ತದದು! ಅಷ್ಟೆಲ್ಲ ಬೇಡ, ನೀವು ಒಂದುವೇಳೆ ನಿಮ್ಮದೇ ದೇಶದ ನಿಮ್ಮದೇ ಜನಾಂಗದಲ್ಲಿ
ಒಬ್ಬರನ್ನು ಮದುವೆಯಾಗಿದ್ದರೆ, ಇಬ್ಬರ ವಂಶಾವಳಿಯಲ್ಲೂ ಹತ್ತು ಹೆಜ್ಜೆ ಹಿಂದೆ ಹೋದರೆ
ಅಲ್ಲೆಲ್ಲೋ ಇಬ್ಬರ ಕುಟುಂಬಗಳಲ್ಲೂ ಬಂದುಹೋದ ಸಾಮಾನ್ಯ ಸಂಬಂಧಿ ಸಿಕ್ಕೇ ಸಿಗುತ್ತಾನೆ ಎಂಬ
ಸಿದ್ಧಾಂತವೇ ಇದೆ! ಇಷ್ಟೆಲ್ಲ ಗಣಿತ ತರದೆ ನೇರವಾಗಿ ಹೇಳುವುದಾದರೆ, ವಿಷಯ ಇಷ್ಟೆ:
ಜಗತ್ತಿನಲ್ಲಿ ಕುಲ, ಗೋತ್ರ ಎಲ್ಲವೂ ಭಿನ್ನವಾಗಿರುವ ಇಬ್ಬರು ವ್ಯಕ್ತಿಗಳಿರಲು ಸಾಧ್ಯವಿಲ್ಲ.
ಯಾವುದೋ ಎರಡು ಮೂಲೆಗಳಿಂದ ಇಬ್ಬರನ್ನು ಆಯ್ದು ತೆಗೆದರೂ, ಅವರಿಬ್ಬರೂ ಸಂಬಂಧಿಗಳೇ
ಆಗಿರುತ್ತಾರೆ! ಹಸಿರೆಲೆಗೂ ಮಣ್ಣಂಟಿಸಿಕೊಂಡ ಬೇರಿಗೂ ರೂಪದಲ್ಲಿ ವ್ಯತ್ಯಾಸವಿದ್ದೀತೇನೋ,
ಆದರೆ ಎರಡಕ್ಕೂ ಸಂಬಂಧವಿದೆಯಲ್ಲ, ಹಾಗೇನೇ ಇದೂ. ಹಾಗಾಗಿ ಒಬಾಮಾನಿಗೂ ಮೋದಿಗೂ ಸಂಬಂಧವಿದೆ!
ಬ್ರಿಟನ್ ರಾಣಿ ಎಲಿಜಬೆತ್‌ಳೂ ನಮ್ಮ ಬೀದಿಯಲ್ಲಿ ಸೊಪ್ಪು ನಿಂಬೇಕಾಯಿ ಮಾರುವ ಸುಬ್ಬಮ್ಮನೂ
ಸಂಬಂಧಿಗಳೇ ಹೌದು! ಇದನ್ನೇ ವಿಜ್ಞಾನಿ ಬಿಲ್ ಬ್ರೈಸನ್ ಸೂಕ್ಷ್ಮವಾಗಿ ಹೀಗೆ ಹೇಳುತ್ತಾನೆ: ಈ
ಜಗತ್ತಿನಲ್ಲಿ ಬಹಳಷ್ಟು ಇನ್‌ಸೆಸ್ಟ್ (ಅಂದರೆ ರಕ್ತಸಂಬಂಧಿಗಳೊಳಗೆ ಲೈಂಗಿಕ ಸಂಪರ್ಕ)
ನಡೆದಿದೆ. ಸ್ವಲ್ಪವಲ್ಲ, ದೊಡ್ಡ ಪ್ರಮಾಣದಲ್ಲೇ ನಡೆದಿದೆ, ನಡೆಯುತ್ತಿದೆ. ಯಾಕೆಂದರೆ
ನಾವೆಲ್ಲ ಒಂದಿಲ್ಲೊಂದು ರೀತಿಯಲ್ಲಿ ರಕ್ತಸಂಬಂಧಿಗಳೇ ಆಗಿದ್ದೇವೆ.

ಹಿಂದೆ ಜೆಂಗಿಸ್ ಖಾನ್ ಎಂಬ ಮಂಗೋಲಿಯನ್ ರಾಜನಿದ್ದ ಕತೆ ಓದಿರಬಹುದು ನೀವು. ಈತ
ಮಂಗೋಲಿಯದಿಂದ ಹೊರಟು ಏಷ್ಯಾದ ಬಹುತೇಕ ಭಾಗಗಳನ್ನೆಲ್ಲ ಆಕ್ರಮಣ ಮಾಡಿ ಗೆದ್ದ ಭೂಭಾಗದಲ್ಲಿ
ವ್ಯಾಪಕವಾದ ಅತ್ಯಾಚಾರ ನಡೆಸಿದನಂತೆ. ಅದೆಷ್ಟು ಸಾವಿರ ಹೆಂಗಸರ ಬಸಿರಿಗೆ ಕಾರಣನಾದನೋ
ಲೆಕ್ಕವಿಲ್ಲ. ಹಾಗಾಗಿ, ಜಗತ್ತಿನಲ್ಲಿ ಹುಟ್ಟಿದ ಮೂರನೇ ಎರಡರಷ್ಟು ಮಕ್ಕಳ ವಂಶಾವಳಿಯಲ್ಲಿ
ಹಿಂದೆ-ಹಿಂದಕ್ಕೆ ಹೋದರೆ ಎಲ್ಲೋ ಒಂದು ಕಡೆ ಆ ಮಗು ಜೆಂಗಿಸ್ ಖಾನನಿಗೆ
ರಕ್ತಸಂಬಂಧಿಯಾಗಿರುವುದು ಸಾಧ್ಯ - ಎಂಬ ಮಾತಿದೆ. ಇದನ್ನೇ ಬೇರೆ ರೀತಿಯಲ್ಲಿ, ನಮ್ಮ
ದೇಹದೊಳಗೆ ಜೆಂಗಿಸ್ ಖಾನನ ರಕ್ತದ ಒಂದು ತೊಟ್ಟು ಇದೆ ಎಂದು ಹೇಳುತ್ತಾರೆ. ಇನ್ನು ನಾವು
ಬರೆದಿಡುವ ವಂಶಾವಳಿಯ ಚರಿತ್ರೆಯಾದರೂ ನಿಜವೇ? ಅಲ್ಲಿ ಬೂಟಿನ ಲೇಸ್‌ನಂತೆ ಅದೆಷ್ಟು
ಸಂಬಂಧಗಳು ಚಕ್ಕಳಮಕ್ಕಳ ಹೋಗಿವೆಯೋ ಯಾರು ಬಲ್ಲರು? ವಂಶವೃಕ್ಷದ ಶ್ರೋತ್ರಿಗಳಂತೆ
ಸತ್ಯದರ್ಶನವಾಗುವುದು ಕೆಲವರಿಗೆ ಮಾತ್ರ. ಉಳಿದವರೆಲ್ಲರೂ ನಮ್ಮ ವಂಶಾವಳಿಯ ಕತೆ ಹೀಗೆ ಎಂದು
ನೂರೆಂಟು ಸುಳ್ಳುಗಳನ್ನೇ ಸತ್ಯವೆಂದು ನಂಬಿ ತಮ್ಮ ಜೀವನ ಮುಗಿಸಿಬಿಡುತ್ತಾರೆ. ಹೆರಿಗೆ
ಆಸ್ಪತ್ರೆಗಳಲ್ಲಿ ಅದಲುಬದಲಾಗುವ ಮಕ್ಕಳಿಗೇನು ಕಡಿಮೆಯೇ? ಒಂದು ಪ್ರಸಿದ್ಧ ಕತೆ
ಉಲ್ಲೇಖಿಸಬೇಕೆಂದರೆ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹುಟ್ಟಿದಾಗ ದಾದಿ ಆತನನ್ನು ಇನ್ನಾವುದೋ
ತಾಯಿಯ ಪಕ್ಕದಲ್ಲಿ ಮಲಗಿಸಿ, 

[ms-stf '57641'] ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿಸಬಹುದೇ?

2016-05-10 Thread HAREESHKUMAR K Agasanapura
http://m.vijaykarnataka.com/edit/columns/net-nota-by-sudhindhra-haldodderi/articleshow/52204909.cms
*ನೆಟ್ ನೋಟ: ಸಮುದ್ರದ ನೀರನ್ನು ಕುಡಿಯುವ ನೀರನ್ನಾಗಿಸಬಹುದೇ?*

May 11, 2016, 04.00 AM IST

Whatsapp Facebook Google Plus
Twitter Email


salt-filter

AAA

* ಸುಧೀಂದ್ರ ಹಾಲ್ದೊಡ್ಡೇರಿ 'ಕೂಡಂಗುಲಂ' ಎಂದೊಡನೆಯೇ ಅದಕ್ಕಂಟಿದ್ದ ವಿವಾದಗಳೇ ನಮಗೆ
ನೆನಪಿಗೆ ಬರುತ್ತದೆ. ತಮಿಳುನಾಡಿನಲ್ಲಿರುವ ಈ ಪರಮಾಣು ವಿದ್ಯುತ್‌ ಸ್ಥಾವರ ಮೊನ್ನೆ ಒಳ್ಳೆಯ
ಸುದ್ದಿಯೊಂದಿಗೆ ಹೆಸರು ಮಾಡಿದೆ. ಆರ್ಭಟದ ಮಾಧ್ಯಮಗಳಂತೂ ಭವಿಷ್ಯತ್ತಿನಲ್ಲಿ ನಮಗೆ ನೀರಿನ
ಬರಗಾಲವೇ ಇರುವುದಿಲ್ಲ ಎಂದು ಘೋಷಿಸಿವೆ. ವಿಷಯವೇನೆಂದರೆ ಪರಮಾಣು ವಿಜ್ಞಾನಕ್ಕೆ ಸಂಬಂಧಿಸಿದ
'ಭಾಭಾ ಅಟಾಮಿಕ್‌ ರೀಸರ್ಚ್‌ ಸೆಂಟರ್‌'ನ ತಂತ್ರಜ್ಞರು ಯುರೇನಿಯಂ ಅಥವಾ ಆರ್ಸೆನಿಕ್‌
ವಿಷಗಳಿಂದ ಕಲುಷಿತವಾದ ಅಂತರ್ಜಲವನ್ನು ಕುಡಿಯಲು ಯೋಗ್ಯವಾಗುವಂತೆ ಶುದ್ಧೀಕರಿಸಬಲ್ಲ
ಫಿಲ್ಟರ್‌ಗಳನ್ನು ಶೋಧಿಸಿದ್ದಾರೆ. ಈ ತಂತ್ರಜ್ಞಾನದ ಮೂಲಕ ಶುದ್ಧ ಕುಡಿಯುವ ನೀರನ್ನು
ತಯಾರಿಸಲು ವಿದ್ಯುಚ್ಛಕ್ತಿ ಬೇಕಾಗಿಲ್ಲ, ಬೈಸಿಕಲ್‌ ಚಕ್ರಗಳಿಗೆ ಹೊಂದಿಸಿದ ಯಂತ್ರವನ್ನು
ಪೆಡಲ್‌ ತುಳಿಯುವ ಮೂಲಕ ನಡೆಸಬಹುದು. ಈಗಾಗಲೇ ಪಶ್ಚಿಮಬಂಗಾಳ, ರಾಜಾಸ್ಥಾನ, ಪಂಜಾಬ್‌ ಮತ್ತು
ಮಹಾರಾಷ್ಟ್ರಗಳಲ್ಲಿರುವ ಪರಮಾಣು ವಿದ್ಯುತ್‌ ಸಂಶೋಧನಾ ಕೇಂದ್ರಗಳಲ್ಲಿ ಈ ಬಗೆಯ
ಯಂತ್ರಗಳನ್ನು ಸ್ಥಾಪಿಸಲಾಗಿದೆ. ರಾಸಾಯನಿಕವಾಗಿ ಮಿಶ್ರಗೊಂಡಿರದ ಯಾವುದೇ ಕಲಬೆರಕೆಯನ್ನು
ದ್ರವಗಳಿಂದ ಸೋಸಿ ತೆಗೆಯಬಹುದು. ಉದಾಹರಣೆಗೆ ಕುಡಿಯುವ ನೀರಿನಲ್ಲಿ ಸೇರಿಕೊಂಡ
ಕಲ್ಲು-ಮಣ್ಣಿನಂಶ, ಎಣ್ಣೆಗೆ ಬಿದ್ದ ಕಸದ ಚೂರುಗಳು, ಕಾಸಿದ ಹಾಲಿನ ಕೆನೆಪದರ, ಕುದಿವ
ನೀರಿನಲ್ಲಿನ ಚಹದ ಎಲೆಯ ಪುಡಿ, ಸುಡುವ ಸಿಗರೇಟಿನ ಟಾರಿನಂಶ ... ಇತ್ಯಾದಿ. ಇಂಥ ಯಾವುದೇ
'ಇತ್ಯಾದಿ'ಗಳನ್ನು ಹೊರ ತೆಗೆಯಲು ವಿವಿಧ ಅಳತೆಯ ರಂಧ್ರಗಳಿರುವ 'ಸೋಸುಕ -
ಫಿಲ್ಟರ್‌'ಗಳನ್ನು ಬಳಸಲಾಗುತ್ತದೆ. ನಮ್ಮ ದಕ್ಷಿಣ ಭಾರತೀಯರಿಗಂತೂ 'ಫಿಲ್ಟರ್‌
ಕಾಫಿ'ಯಿಲ್ಲದೆ ಬೆಳಗಾಗುವುದಿಲ್ಲ. ಇನ್ನು 'ಫಿಲ್ಟರ್‌ ವಾಟರ್‌', 'ಫಿಲ್ಟರ್‌
ಸಿಗರೇಟ್‌'ಗಳಲ್ಲಿ ದೇಹಕ್ಕೆ ತಲುಪುವ ಕೆಟ್ಟ ಅಂಶಗಳಲ್ಲಿ ನಿಜವಾಗಲೂ ಎಷ್ಟು 'ಫಿಲ್ಟರ್‌'
ಆಗಿರುತ್ತದೆಂಬುದನ್ನು ಅವುಗಳ ಸೃಷ್ಟಿಕರ್ತರೇ ಹೇಳಬೇಕು, ಅವರು ಹೇಳಿದ್ದನ್ನು ನಾವು
ನಂಬಬೇಕು. ಸೂಕ್ಷ್ಮಾತಿ ಸೂಕ್ಷ ್ಮ ಫಿಲ್ಟರ್‌ಗಳ ಬಗ್ಗೆ ಪ್ರಸ್ತಾಪ ಮಾಡುವಾಗ ನಮ್ಮ ನೆನಪಿಗೆ
ಬರುವುದು ವಿಮಾನದ ಇಂಧನ ವ್ಯವಸ್ಥೆ, ಹೈಡ್ರಾಲಿಕ್‌ ನಿಯಂತ್ರಣ ವ್ಯವಸ್ಥೆ, ಕೀಲೆಣ್ಣೆ
ಪ್ರಸರಣಾ ವ್ಯವಸ್ಥೆ. ಕಾರ್ಯಾಚರಣೆ ಅತ್ಯಂತ ನಿಖರವಾಗಿರಬೇಕಾದ ಈ ಎಂಜಿನಿಯರಿಂಗ್‌
ವ್ಯವಸ್ಥೆಗಳಲ್ಲಿ ಬಳಸುವ ಸೋಸುಕಗಳ ರಂಧ್ರಗಳು 'ಮೈಕ್ರಾನ್‌' ಅಳತೆಯಲ್ಲಿರುತ್ತವೆ.
'ಮೈಕ್ರಾನ್‌'ಗಳೆಂದರೆ ಗೊತ್ತಲ್ಲ? ಮೀಟರ್‌ ಒಂದನ್ನು ಸಹಸ್ರ ಸಮಭಾಗಗಳನ್ನಾಗಿ ಮಾಡಿದರೆ
ಸಿಗುವ ಅಳತೆ 'ಮಿಲಿ' ಮೀಟರ್‌. ಇಂಥ ಪ್ರತಿಯೊಂದು 'ಮಿಲಿ' ಮೀಟರ್‌ಗಳನ್ನು ತಲಾ ಸಹಸ್ರ ಸಮ
ಹೋಳುಗಳನ್ನಾಗಿಸಿದರೆ ನಿಮಗೆ 'ಮೈಕ್ರೋ' ಮೀಟರ್‌ ಲಭ್ಯ. ವಿಮಾನಗಳಲ್ಲಿ ದ್ರವಗಳು
ಆರಂಭದಿಂದ ಕೊನೆಯ ತನಕ ವಿವಿಧ ಹಂತಗಳಲ್ಲಿ ಹತ್ತರಿಂದ ನೂರು 'ಮೈಕ್ರಾನ್‌' ಅಳತೆಯ ರಂಧ್ರಗಳ
ಮೂಲಕ ತಮ್ಮ ಹರಿದಾಡುತ್ತವೆ. ಮೊದಲು ದೊಡ್ಡ ಗಾತ್ರದಲ್ಲಿ ಶೋಧಗೊಂಡು ಕ್ರಮೇಣ ಪುಟ್ಟ ಅಳತೆಯ
ಸೋಸುಕಗಳಲ್ಲಿ ದ್ರವಗಳು ತಮ್ಮ ಕಲ್ಮಶಗಳನ್ನು ತೊಡೆದು ಹಾಕುತ್ತವೆ. ಆದರೆ ವಿಜ್ಞಾನಿಗಳು
ಮತ್ತು ತಂತ್ರಜ್ಞರುಗಳು 'ಮೈಕ್ರಾನ್‌' ಅಳತೆಯಿಂದ ತೃಪ್ತರಾಗಿಲ್ಲ. ಅದರ ಸಹಸ್ರದ ಒಂದನೇ
ಭಾಗವಾದ 'ನ್ಯಾನೊ ಮೀಟರ್‌' ಮೇಲೆ ಅವರ ಕಣ್ಣು. ಎಲ್ಲ ಎಂಜಿನೀರಿಂಗ್‌ ಕ್ಷೇತ್ರಗಳಲ್ಲಿ
'ನ್ಯಾನೊ' ಅಳತೆಯ ತಂತ್ರಜ್ಞಾನವನ್ನು ಪ್ರಸರಿಸಬೇಕೆಂಬ ಅದಮ್ಯ ಬಯಕೆ ಅವರದು. ಸೂಕ್ಷ್ಮಾತಿ
ಸೂಕ್ಷ ್ಮ ತಂತ್ರಜ್ಞಾನಗಳು ಕರಗತವಾದಂತೆ ಸೋಸುಕಗಳ ರಂಧ್ರಗಳನ್ನೂ ಹತ್ತು ಹದಿನೈದು
'ನ್ಯಾನೊ' ಮೀಟರ್‌ ಅಳತೆಯಷ್ಟು ಕಿರಿದಾಗಿಸುವ ಪ್ರಯತ್ನ ನಡೆಸಿದ್ದಾರೆ. ಇಷ್ಟು ಸಣ್ಣ ಸಣ್ಣ
ರಂಧ್ರಗಳ ಸೋಸುಕಗಳು ಎಲ್ಲಿ ಬಳಕೆಯಾಗುತ್ತವೆ? ಎಂಬ ಪ್ರಶ್ನೆ ನಿಮ್ಮದಾಗಿದ್ದರೆ
'ಮೈಕ್ರೊಫ್ಲೂಯಿಡಿಕ್ಸ್‌' ತಂತ್ರಜ್ಞಾನವನ್ನು ನೆನಪಿಸಿಕೊಳ್ಳಬೇಕು.
'ಮೈಕ್ರೊಫ್ಲೂಯಿಡಿಕ್ಸ್‌' ಅಂದರೆ ಒತ್ತಡದಲ್ಲಿನ ಸೂಕ್ಷ ್ಮ ಅಳತೆಯ ದ್ರವಗಳ ಹರಿದಾಟದ ಮೂಲಕ
ನಿಯಂತ್ರಣ ವ್ಯವಸ್ಥೆಯೊಂದನ್ನು ರೂಪಿಸುವುದು. ವಿಮಾನಗಳಲ್ಲಿನ ಅತ್ಯಂತ ಪುಟ್ಟದಾದ ನಿಯಂತ್ರಣ
ವ್ಯವಸ್ಥೆಗಳ ಕಾರ್ಯನಿರ್ವಹಣೆಗೆ ಇಂಥ ತಂತ್ರಜ್ಞಾನಗಳು ಬಳಕೆಯಾಗುತ್ತವೆ. ಕಂಪ್ಯೂಟರ್‌
ಚಿಪ್‌ಗಳ ತಾಪಮಾನವನ್ನು ಕಡಿಮೆ ಮಾಡಲು 'ಮೈಕ್ರೊಫ್ಲೂಯಿಡಿಕ್ಸ್‌' ತಂತ್ರಜ್ಞಾನವು
ನೆರವಾಗುತ್ತದೆ. ಈ ಬಗೆಯ ಸೂಕ್ಷ್ಮಾತಿ ಸೂಕ್ಷ ್ಮ ಯಂತ್ರ ವ್ಯವಸ್ಥೆ ನಿಖರವಾಗಿ
ಕಾರ್ಯನಿರ್ವಹಿಸಲು, ಅದರೊಳಗೆ ಹರಿದಾಡುವ ಒತ್ತಡದ ದ್ರವ ಪರಿಶುದ್ಧವಾಗಿರಬೇಕು. ಅಂಥ
ಪರಿಶುದ್ಧತೆಯನ್ನು ಕಾಪಾಡಲು ಅತ್ಯಂತ ಸೂಕ್ಷ ್ಮ ರಂಧ್ರಗಳಿರುವ ಸೋಸುಕಗಳು ಬೇಕಾಗುತ್ತವೆ.
ರೋಚೆಸ್ಟರ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಿಲಿಕಾನ್‌ ಸಾಮಗ್ರಿಯಿಂದ ಕೇವಲ ಹದಿನೈದು
ನ್ಯಾನೊ ಮೀಟರ್‌ ಅಳತೆಯ ರಂಧ್ರಗಳಿರುವ ಸೋಸು ಬಟ್ಟೆಯನ್ನು ನೇಯ್ದಿದ್ದಾರೆ. ಸಾಮಾನ್ಯವಾಗಿ
ಸೋಸು ಬಟ್ಟೆಯನ್ನು ದ್ರವ ಹರಿದಾಟದ ವ್ಯಾಪ್ತಿಯಲ್ಲಿ ಅಡ್ಡ ಹಾಕಿದರೆ ಹರಿವಿನ ವೇಗ
ತಗ್ಗುತ್ತದೆ. ರೋಚೆಸ್ಟರ್‌ ವಿಶ್ವವಿದ್ಯಾಲಯದ ಪ್ರಯೋಗಶಾಲೆಯಲ್ಲಿ ರೂಪುಗೊಂಡಿರುವ ಸೋಸುಕ, ಈ
ಹಿಂದೆ ನಿರ್ಮಿಸಲಾದ ಇಂಥ ಅಳತೆಯ ಸೋಸುಕಕ್ಕಿಂತ ಹತ್ತು ಪಟ್ಟು ಉತ್ತಮ ಕಾರ್ಯಕ್ಷ ಮತೆ
ಹೊಂದಿದೆ. ಇಂಥದೊಂದು ಅದ್ಭುತ ಎಂಜಿನಿಯರಿಂಗ್‌ ಸೃಷ್ಟಿ ಸಾಧ್ಯವಾದದ್ದು ಹೇಗೆ? ಎಂಬ
ಪ್ರಶ್ನೆಗೆ ಸಂಶೋಧನೆಯ ನೇತೃತ್ವ ವಹಿಸಿದ್ದ ರೋಚೆಸ್ಟರ್‌ ವಿಶ್ವವಿದ್ಯಾಲಯದ ವಿದ್ಯುತ್‌
ಹಾಗೂ ಗಣಕ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾದ ಫಿಲಿಪ್‌ ಫೌಶೆಟ್‌ ಉತ್ತರಿಸುವುದು
ಹೀಗೆ. ಹಿಂದೆ ಬಳಕೆಯಲ್ಲಿದ್ದ ಸೋಸುಕಗಳ ರಂಧ್ರಗಳು ಅಳತೆಯಲ್ಲಿ ಚಿಕ್ಕವಾಗಿದ್ದರೂ ಸೋಸುಕದ
ಒಟ್ಟಾರೆ ದಪ್ಪ ಹಲವು ಮೈಕ್ರೋಮೀಟರ್‌ಗಳಷ್ಟಿರುತ್ತಿತ್ತು. ಗಾತ್ರ ಕಡಿಮೆಯಾಗುತ್ತಾ ಬರುವ
ರಂಧ್ರಗಳುಳ್ಳ ಪದರಗಳನ್ನು ಒಂದರ ಮೇಲೊಂದು ಕೂಡಿಸಿ ಸೋಸುಕವನ್ನು ನಿರ್ಮಿಸುವ ಪರಿಪಾಠ
ಹಿಂದಿನ ತಂತ್ರಜ್ಞಾನದ್ದಾಗಿತ್ತು. ಇದರಿಂದಾಗುತ್ತಿದ್ದ ತೊಂದರೆಯೆಂದರೆ ದ್ರವದ ಹರಿದಾಟ
ನಿಧಾನವಾಗುತ್ತಿತ್ತು, ಅಂತೆಯೇ ಅದನ್ನು ಬಳಸಿಕೊಳ್ಳುವ ಯಂತ್ರದ ನಿಯಂತ್ರಣ ಕಾರ್ಯಾಚರಣೆಯೂ
ತಡೆದು ತಡೆದು ಸಾಗುತ್ತಿತ್ತು. ಇಡೀ ಯಂತ್ರದ ಒಟ್ಟಾರೆ ಕಾರ್ಯಕ್ಷ ಮತೆ ಕುಗ್ಗುತ್ತಿತ್ತು.
ಸೂಕ್ಷ್ಮಾತಿ ಸೂಕ್ಷ ್ಮ ರಂಧ್ರಗಳನ್ನು ಕೊರೆಯುವ, ಅಂಥ ರಂಧ್ರಗಳುಳ್ಳ ಸೋಸುಕಗಳನ್ನು ನೇಯುವ
ತಂತ್ರಜ್ಞಾನ ಕರಗತವಾದಂತೆ ಕಾರ್ಯಕ್ಷ ಮತೆ ಕುಗ್ಗುವ ತೊಂದರೆಯನ್ನು ನಿವಾರಿಸುವುದು
ಸುಲಭವಾಯಿತು. ಕೇವಲ ಹತ್ತು-ಹದಿನೈದು ನ್ಯಾನೊ ಮೀಟರ್‌ ದಪ್ಪದ ಸೋಸುಕ ಯಶಸ್ವಿಯಾಗಿ
ನಿರ್ಮಾಣವಾಯಿತು. ಅಂದರೆ ಬಳಕೆಯಲ್ಲಿದ್ದ ಸೋಸುಕಗಳಿಗಿಂತ ದಪ್ಪದಲ್ಲಿ ನೂರರಿಂದ ಸಹಸ್ರ
ಪಟ್ಟು ಇಳಿಕೆ! ಔಷಧವನ್ನು ರಾಸಾಯನಿಕಗಳ ಅಣುವಿನ ಹಂತದಲ್ಲಿ ಸಂಸ್ಕರಿಸುವ ಕಾಲವಿದು. ಅಂತೆಯೇ
ಪರಿಶುದ್ಧತೆಗೆ ಇಲ್ಲಿ ಪ್ರಾಧಾನ್ಯ. ಇಲ್ಲಿ ಪರಮಾಣು ಮಟ್ಟದಲ್ಲಿ ಶುದ್ಧತೆಯನ್ನು
ಕಾಪಾಡಿಕೊಳ್ಳಬೇಕಾದರೆ ಬಳಸುವ ಸೋಸುಕಗಳು ನ್ಯಾನೊ ಅಳತೆಯಲ್ಲಿ ನಿರ್ಮಿತವಾಗಿರಬೇಕು.
ಜೀವಿಯೊಂದರ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸುವ 'ಪ್ರೋಟೀನ್‌'ಗಳು ನಿಮಗೆ
ಗೊತ್ತು. ಪ್ರಯೋಗಕ್ಕೆ ಬಳಸಿಕೊಳ್ಳುವ 

[ms-stf '57444'] ಖಗೋಳ ವಿಸ್ಮಯ: ಅಪೂರ್ವ ‘ಬುದ್ಧ ಸಂಕ್ರಮಣ’

2016-05-07 Thread HAREESHKUMAR K Agasanapura
http://m.prajavani.net/article/2016_05_04/406562

*ಖಗೋಳ ವಿಸ್ಮಯ: ಅಪೂರ್ವ ‘ಬುದ್ಧ ಸಂಕ್ರಮಣ’*

4 May, 2016

ಪ್ರೊ. ಎಸ್‌.ಎ. ಮೋಹನ್‌ ಕೃಷ್ಣ








ಖಗೋಳ ವಿಜ್ಞಾನವು (astronomy) ಅತ್ಯಂತ ಕುತೂಹಲಕರ ಹಾಗೂ  ಕೌತುಕಮಯ ವಿಷಯ.
ಅನಾದಿಕಾಲದಿಂದಲೂ  ಮಾನವ ಆಕಾಶಕಾಯಗಳ ಬಗ್ಗೆ ಸಂಶೋಧನೆ  ಮಾಡುತ್ತಲೇ ಬಂದಿದ್ದಾನೆ. ಇವನ
ತಾಳ್ಮೆ, ಸಹನೆ ಹಾಗೂ ಪ್ರಯತ್ನಕ್ಕೆ ಒಳ್ಳೆಯ ಫಲವೂ ಸಿಕ್ಕಿದೆ. ಖಗೋಳ ವಿಜ್ಞಾನಿಗಳಾದ
ಮವರಾಹಾ ಮಿಹಿರ, ಆರ್ಯಭಟ,  ಬ್ರಹ್ಮಗುಪ್ತ, ನಿಕೊಲಾಸ್‌ ಕೋಪರ್‌ನಿಕಸ್‌, ಯೊಹಾನೆಸ್‌
ಕೆಪ್ಲರ್‌ ಗೆಲಿಲಿಯೊ  ಗೆಲಿಲಿ, ಸರ್‌ ಐಸಾಕ್‌ ನ್ಯೂಟನ್‌, ಎಡ್ಮಂಡ್‌ ಹ್ಯಾಲಿ, ಟೈಕೋ
ಬ್ರಾಹೆ  ಮತ್ತಿತರರು ಮಾಡಿರುವ ಸಾಧನೆಗಳು ನಿಜಕ್ಕೂ ಶ್ಲಾಘನೀಯ.

ಇವರೆಲ್ಲರ ಪರಿಶ್ರಮದಿಂದಾಗಿ ಪ್ರತಿಯೊಂದು ಆಕಾಶಕಾಯಗಳ ಬಗ್ಗೆ ಅನೇಕ ಮಾಹಿತಿಗಳು ಬಹಳ
ಸುಲಭವಾಗಿ ದೊರಕುತ್ತದೆ. ಬಹುತೇಕರಿಗೆ ಆಕಾಶಕಾಯಗಳಾದ ನಕ್ಷತ್ರ, ಗ್ರಹ, ಉಲ್ಕೆ, ಧೂಮಕೇತು,
ಕ್ಷುದ್ರಗ್ರಹಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಬಹಳ ಆಸೆ ಇರುತ್ತದೆ. ಇದಲ್ಲದೆ, ಪ್ರಮುಖ
ಖಗೋಳ ಘಟನೆಗಳಾದ ಗ್ರಹಣ, ಸಂಕ್ರಮಣ ಹಾಗೂ ಗ್ರಹಗಳ ಸಂಯೋಜನೆ ಅತ್ಯಂತ  ವಿಸ್ಮಯಕಾರಿಯಾದ
ವಿದ್ಯಮಾನ.

ಈ ರೀತಿಯ  ಅದ್ಭುತಗಳಲ್ಲಿ, ಮೇ 9ರಂದು  ವಿಶಿಷ್ಟ ಖಗೋಳ ಘಟನೆಯೊಂದು ಸಂಭವಿಸಲಿದೆ. ಸಂಜೆಯ
ವೇಳೆಯಲ್ಲಿ  ‘ಬುಧ’  ಗ್ರಹವು ಸೂರ್ಯನ ಮುಂದೆ ಹಾದು ಹೋಗಲಿದೆ. ಈ ಒಂದು ಅಪೂರ್ವ ಘಟನೆಯ
ಹೆಸರು ‘ಬುಧ ಸಂಕ್ರಮಣ’ (transit of Mercury). ಇದು ಈ ವರ್ಷದ ಅತ್ಯಂತ, ರೋಮಾಂಚಕಾರಿ
ಘಟನೆಯೆಂದರೆ ತಪ್ಪಾಗಲಾರದು. ಬುಧ ಗ್ರಹವು ಸೂರ್ಯನ ಮುಂದೆ ಹಾದು ಹೋಗುವ ದೃಶ್ಯ ನಿಜಕ್ಕೂ
ಕುತೂಹಲಕಾರಿ!

2004 ಹಾಗೂ 2012 ರಲ್ಲಿ ಸಂಭವಿಸಿದ ‘ಶಕ್ರ ಸಂಕ್ರಮಣ’ (transit of  Venus) ಎಲ್ಲರಿಗೂ
ಜ್ಞಾಪಕವಿರಲೇಬೇಕು. ಶುಕ್ರ ಗ್ರಹವು ಸೂರ್ಯನ ಮುಂದೆ ಹಾದು ಹೋಗಿ, ಒಂದು ಕಪ್ಪು ಚುಕ್ಕೆಯಂತೆ
ಕಂಡದ್ದು ಅವಿಸ್ಮರಣೀಯ. ಇದೇ ರೀತಿ ಮೇ 9 ರಂದು ಬುಧ ಗ್ರಹವು ಕಪ್ಪು ಚುಕ್ಕಿಯಂತೆ ಕಾಣಲಿದೆ.

ಸೌರಮಂಡಲದಲನ ಗ್ರಹಗಳ ಹೆಸರುಗಳು ಗೊತ್ತಿದ್ದರೂ, ಲಕ್ಷಾಂತರ ಗ್ರಹ ಹಾಗೂ ಉಪಗ್ರಹಗಳಿರುವ
ವಿಚಾರ ಅನೇಕರಿಗೆ ಗೊತ್ತಿಲ್ಲ. ಸೂರ್ಯನಿಗೆ ಬಹಳ ಸಮೀಪದಲ್ಲಿರುವ ಗ್ರಹವೆಂದರೆ ‘ಬುಧ’.
ಸೂರ್ಯನ ಆಪ್ತಮಿತ್ರನೆಂದರೂ ತಪ್ಪಾಗಲಾರದು. ಇದರ  ರಚನೆ ವಿಶಿಷ್ಟ ಮತ್ತು  ನಿಗೂಢವಾಗಿಯೂ
ಇದೆ. ಇದರ ಚಲನ–ವಲನ ಸ್ಪಷ್ಟವಾಗಿದ್ದರೂ, ಇದು ಬರಿ  ಕಣ್ಣಿಗೆ ಕಾಣುವುದು ಬಹಳ ಕಷ್ಟ.

ಕಂದು ಬಣ್ಣಹೊಂದಿದ್ದು, ಭೂಮಿಗೆ ಹೋಲಿಸಿದರೆ ಇದರ ಗಾತ್ರ ಚಿಕ್ಕದು. ‘ಮೆಸೆಂಜರ್‌’
ಉಪಗ್ರಹವು ಇದರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದೆ. ಇದರ ರಚನೆ, ಚಲನವಲನ,
ಆವರ್ತನಾ ಹಾಗೂ ಪರಿಭ್ರಮಣೆಯ ಅವಧಿ, ಕಕ್ಷಾವೇಗ, ಉಷ್ಣಾಂಶ, ಬಣ್ಣ, ಕೋನ ಹಾಗೂ ಗಾತ್ರಗಳ
ಬಗ್ಗೆ ಖಚಿತ ಮಾಹಿತಿ ದೊರಕಿದೆ.

ವಿಶ್ವದ ಹುಟ್ಟು ನಿಗೂಢವಾಗಿರುವಾಗ, ಇನ್ನು  ಗ್ರಹಗಳು, ಧೂಮಕೇತುಗಳ ಉಗಮ ಊಹಿಸಲೂ
ಸಾಧ್ಯವಿಲ್ಲ. ಗ್ರಹಗಳ ಬಗ್ಗೆ ತೀವ್ರವಾದ ಸಂಶೋಧನೆ ಹಾಗೂ ಅನ್ವೇಷಣೆ ಪ್ರಾರಂಭವಾಗಿ
ಸಾವಿರಾರು ವರ್ಷಗಳೇ ಕಳೆದಿವೆ. ಆದರೆ ನಿರ್ದಿಷ್ಟವಾದ ಮಾಹಿತಿಗಳು ದೊರಕಲು
ಪ್ರಾರಂಭವಾಗಿದ್ದು ವರಾಹಾ ಮಿಹಿರ ಹಾಗೂ ಆರ್ಯಭಟರ ಕಾಲದಲ್ಲಿ.

ಗಣಿತ ಲೆಕ್ಕಾಚಾರದ ಪ್ರಕಾರ ಗ್ರಹಗಳ ಪಥ, ಚಲನ–ವಲನ, ಕಕ್ಷೆ ಹಾಗೂ ಇನ್ನಿತರ ವಿವರಗಳನ್ನು
ಇವರು ನೀಡಿದ್ದಾರೆ. ಸರ್‌ ಐಸ್ಯಾಕ್‌ ನ್ಯೂಟನ್‌, ಗೆಲಿಲಿಯೊ ಗೆಲಿಲಿ, ಯೊಹಾನೆಸ್‌
ಕೆಪ್ಲರ್‌, ಟೈಕೊ ಬ್ರಾಹೆ ಇವರುಗಳು ಸಹ  ಅನೇಕ ಗಣನೀಯ ಸಾಧನೆಗಳನ್ನು ಮಾಡಿದ್ದಾರೆ.
ಇವರುಗಳಲ್ಲದೇ, ಹಲವಾರು ಖಗೋಳ ವಿಜ್ಞಾನಿಗಳು ಗ್ರಹಗಳ ಬಗ್ಗೆ, ಧೂಮಕೇತು, ಗ್ರಹಣ,
ಸಂಕ್ರಮಣಗಳ ವಿಚಾರವಾಗಿ ಸಂಶೋಧನೆ ನಡೆಸಿದ್ದಾರೆ.

*ಸಂಕ್ರಮಣ:ಇತಿಹಾಸ*
‘ಸಂಕ್ರಮಣ’ ಎಂದರೆ ಅನೇಕರಿಗೆ  ಗೊಂದಲ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಪ್ರಮುಖ ಗ್ರಹಗಳಾದ
ಬುಧ ಹಾಗೂ ಶುಕ್ರ, ಸೂರ್ಯನ ಮುಂದೆ ಹಾದು ಹೋಗುವುದು ವಾಡಿಕೆ.   ಸಂಕ್ರಮಣ ಹಾಗೂ
ಗ್ರಹಣಗಳಲ್ಲಿ ವ್ಯತ್ಯಾಸ ಇದೆ.  ಸಂಕ್ರಮಣವು ಗ್ರಹಣಕ್ಕಿಂತಲೂ ಕುತೂಹಲಕಾರಿ. ಸೂರ್ಯನ ಮುಂದೆ
ಗ್ರಹಗಳಾದ ‘ಬುಧ’ ಹಾಗೂ‘ಶುಕ್ರ’ ಹಾದು ಹೋದರೆ, ಈ ಪ್ರಕ್ರಿಯೆಯೇ ‘ಸಂಕ್ರಮಣ.’

ಖಗೋಳ ವಿಜ್ಞಾನಿಗಳು ಸಂಕ್ರಮಣಗಳ ಬಗ್ಗೆ ಸುಧೀರ್ಘ ಆಲೋಚನೆ ಮಾಡಲು ಪ್ರಾರಂಭಿಸಿದ್ದು 1631
ರಲ್ಲಿ. ನವೆಂಬರ್ 7, 1631 ರಂದು ಖಗೋಳ ತಜ್ಞ ಪಿಯರಿ ಗೆಸೆಂಡಿ (1592–1655) ಮೊಟ್ಟಮೊದಲ
ಬಾರಿಗೆ ಬುಧ ಸಂಕ್ರಮಣದ ಬಗ್ಗೆ ಅನ್ವೇಷಣೆ ಮಾಡಿದ. 1639 ರಲ್ಲಿ ಜೆರಿಮಿಯಾ ಹೊರೊಕ್‌್ಸ
ಶುಕ್ರ ಸಂಕ್ರಮಣವನ್ನು ಮೊಟ್ಟಮೊದಲಿಗೆ ವೀಕ್ಷಿಸಿದ. ಇವರುಗಳ ಜೊತೆಗೆ ಎಡ್ಮಂಡ್‌ ಹ್ಯಾಲಿ
ಹಾಗೂ ಯೊಹಾನೆಸ್‌ ಕೆಪ್ಲರ್‌ ಕೈ ಜೋಡಿಸಿದರು. ಅಂದಿನಿಂದ ಇಂದಿನವರೆಗೂ, ಬುಧ ಮತ್ತು ಶುಕ್ರ
ಸಂಕ್ರಮಣಗಳ ಬಗ್ಗೆ ವೀಕ್ಷಣೆ ನಡೆಯುತ್ತಲೇ ಬಂದಿದೆ.

ಖಗೋಳ ಶಾಸ್ತ್ರಜ್ಞರ ಪ್ರಕಾರ ‘ಬುಧ ಸಂಕ್ರಮಣ’ವು 7, 13 ಹಾಗೂ 33 ವರ್ಷಗಳಿಗೊಮ್ಮೆ ಮತ್ತು
ಶುಕ್ರ ಸಂಕ್ರಮಣವು 8 ಹಾಗೂ 121 ವರ್ಷಗಳಿಗೊಮ್ಮೆ ಸಂಭವಿಸುತ್ತದೆ.

ಒಂದು ಶತಮಾನದಲ್ಲಿ ಬುಧ ಸಂಕ್ರಮಣವು 13 ರಿಂದ 14 ಸಲ ಸಂಭವಿಸುತ್ತದೆ. ಬುಧ ಸಂಕ್ರಮಣವು
ಕಳೆದ ಬಾರಿ 2006 ರಲ್ಲಿ ಸಂಭವಿಸಿತ್ತು.

*ಬುಧ ಸಂಕ್ರಮಣ*
ಬುಧ ಗ್ರಹವು ಸೂರ್ಯನಿಗಿರುವ ಅತ್ಯಂತ ಸಮೀಪ ಗ್ರಹ. ಇದರ ವ್ಯಾಸ 4,848 ಕಿ.ಮೀ. ಹಾಗೂ
ಸೂರ್ಯನಿಂದ ಇದರ ಅಂತರ  80 ದಶಲಕ್ಷ ಕಿ.ಮೀ. ಮೇ 9 ರಂದು ಹಲವಾರು ದೇಶಗಳಲ್ಲಿ ಈ ಅದ್ಭುತ
ಖಗೋಳ ಘಟನೆ ಸಂಭವಿಸಲಿದೆ. ಸಂಪೂರ್ಣ ಸಂಕ್ರಮಣವು ಅಮೆರಿಕ, ಆಫ್ರಿಕಾ, ಗ್ರೀನ್‌ ಲ್ಯಾಂಡ್‌,
ಫೆಸಿಪಿಕ್‌ ಮತ್ತು ಅಟ್ಲಾಂಟಿಕ್‌ ಮಹಾಸಾಗರಗಳ ಸಮೀಪ ಗೋಚರಿಸಲಿದೆ.

ಆದರೆ ಭಾರತದ ಎಲ್ಲಾ ಭಾಗಗಳಲ್ಲಿ ಸಂಕ್ರಮಣದ ಪ್ರಾರಂಭಿಕ ಹಂತವು ಮಾತ್ರ ಗೋಚರಿಸುತ್ತದೆ.
ಅಂತ್ಯದ ಭಾಗ ಗೋಚರಿಸಲು ಅಸಾಧ್ಯ ಏಕೆಂದರೆ, ಬೇರೆ ದೇಶಗಳಲ್ಲಿ ಘಟನೆ ಸಂಭವಿಸುತ್ತಿರುವಾಗಲೇ
ಭಾರತದಲ್ಲಿ ಸೂರ್ಯಾಸ್ತವಾಗಿರುತ್ತದೆ.

ಮೇ 9 ರಂದು ಭಾರತದ ಎಲ್ಲಾ ಭಾಗಗಳಲ್ಲಿ ಬುಧ ಸಂಕ್ರಮಣದ ಪ್ರಾರಂಭಿಕ ಘಟ್ಟವನ್ನು ಮಾತ್ರ
ವೀಕ್ಷಿಸಬಹುದು.  ಬುಧ ಸಂಕ್ರಮಣವು ಅಂದು ಸಂಜೆ 4 ಗಂಟೆ 42 ನಿಮಿಷಕ್ಕೆ ಸೂರ್ಯನ ಮುಂದೆ
ಕಪ್ಪು ಚುಕ್ಕೆಯಂತೆ ಗೋಚರಿಸುತ್ತದೆ. ಆದರೆ, ಮಧ್ಯದ ಹಾಗೂ ಕೊನೆಯ ಭಾಗಗಳು 

[ms-stf '57400'] ಐಎಂಪಿಎಸ್: ಹಣ, ತಕ್ಷಣ!

2016-05-07 Thread HAREESHKUMAR K Agasanapura
ಐಎಂಪಿಎಸ್: ಹಣ, ತಕ್ಷಣ!

by ವಿಜಯವಾಣಿ ನ್ಯೂಸ್  · May 6, 2016
[image: CINIVANI 01]

*|ಟಿ.ಜಿ. ಶ್ರೀನಿಧಿ*

ಯಾರಿಗಾದರೂ ಹಣ ಪಾವತಿಸಬೇಕಾದಾಗ ಚೆಕ್ ಅಥವಾ ಡಿಮಾಂಡ್ ಡ್ರಾಫ್ಟ್ ನೀಡುವ ಅಭ್ಯಾಸ ಬಹಳ
ಹಳೆಯದು. ಈ ವಿಧಾನದಲ್ಲಿ ಹಣ ಅವರ ಕೈಸೇರಲು ಬೇಕಾದ ಸಮಯವೂ ಹೆಚ್ಚು. ಇದರ ಬದಲು ಹಣವನ್ನೇ
ಕೊಂಡೊಯ್ಯುತ್ತೇವೆಂದರೆ ಸುರಕ್ಷತೆಯ ತಲೆನೋವು ನಮ್ಮನ್ನು ಕಾಡುತ್ತದೆ.

ಈ ಸಮಸ್ಯೆಗೆ ಮೊದಲ ಪರಿಹಾರ ‘ಎನ್​ಇಎಫ್​ಟಿ’ (ನ್ಯಾಷನಲ್ ಇಲೆಕ್ಟ್ರಾನಿಕ್
ಫಂಡ್ಸ್ ಟ್ರಾನ್ಸ್​ಫರ್) ವ್ಯವಸ್ಥೆ. ಈ ವ್ಯವಸ್ಥೆ ಮೂಲಕ ದೇಶದ ಯಾವುದೇ ಬ್ಯಾಂಕ್ ಗ್ರಾಹಕ
ಯಾವುದೇ ಬ್ಯಾಂಕಿನ ಮತ್ತೊಬ್ಬ ಗ್ರಾಹಕನ ಖಾತೆಗೆ ಹಣ ವರ್ಗಾಯಿಸುವುದು ಸಾಧ್ಯ. ಆದರೆ
ಎನ್​ಇಎಫ್​ಟಿ ಮೂಲಕ ಹಣ ವರ್ಗಾವಣೆಯಾಗುವುದು ಬ್ಯಾಂಕ್ ಕೆಲಸದ ದಿನಗಳಲ್ಲಿ, ಅದೂ ನಿರ್ದಿಷ್ಟ
ಸಮಯದಲ್ಲಿ ಮಾತ್ರ.

ಇಂತಹ ಯಾವುದೇ ನಿರ್ಬಂಧವಿಲ್ಲದೆ ಯಾವಾಗ ಬೇಕಾದರೂ ಥಟ್ಟನೆ ಹಣ ವರ್ಗಾಯಿಸಲು ಇರುವ
ವ್ಯವಸ್ಥೆಯೇ ಐಎಂಪಿಎಸ್ (ಇಮ್ಮಿಡಿಯೇಟ್ ಪೇಮೆಂಟ್ ಸರ್ವೀಸ್). ನ್ಯಾಷನಲ್ ಪೇಮೆಂಟ್ಸ್
ಕಾರ್ಪೆರೇಷನ್ ಆಫ್ ಇಂಡಿಯಾ (ಎನ್​ಪಿಸಿಐ) ಸಂಸ್ಥೆ ರೂಪಿಸಿರುವ ಈ ವ್ಯವಸ್ಥೆ ಬಳಸಿ
ನೆಟ್​ಬ್ಯಾಂಕಿಂಗ್ ಮೂಲಕವಷ್ಟೇ ಅಲ್ಲ, ಮೊಬೈಲ್ ಮೂಲಕವೂ ಹಣವನ್ನು ವರ್ಗಾಯಿಸುವುದು ಸಾಧ್ಯ.
ಈ ಕುರಿತ ಹೆಚ್ಚಿನ ವಿವರಗಳಿಗೆ ನಿಮ್ಮ ಬ್ಯಾಂಕನ್ನು ಸಂರ್ಪಸಬಹುದು.


-- 
Hareeshkumar K
Govt High School
Huskuru vi & po
Malavalli Tq
Mandya Dt
mob. 9880328224
e-mail harihusk...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '57399'] ಜಾಲತಾಣದ ವಿಳಾಸ, ನಮ್ಮದೇ ಭಾಷೆಯಲ್ಲಿ

2016-05-07 Thread HAREESHKUMAR K Agasanapura
ಜಾಲತಾಣದ ವಿಳಾಸ, ನಮ್ಮದೇ ಭಾಷೆಯಲ್ಲಿ

by ವಿಜಯವಾಣಿ ನ್ಯೂಸ್  · May 7, 2016
[image: CINIVANI 01]

*|ಟಿ.ಜಿ. ಶ್ರೀನಿಧಿ*

ಅಂತರ್ಜಾಲ ಬಳಸುವವರಿಗೆಲ್ಲ ಜಾಲತಾಣಗಳು (ವೆಬ್​ಸೈಟ್) ಗೊತ್ತು. ನಿರ್ದಿಷ್ಟ ಜಾಲತಾಣಗಳನ್ನು
ಗುರುತಿಸಲು ಬಳಸುವ ವಿಳಾಸವಿದೆಯಲ್ಲ – ವಿಜಯವಾಣಿ ಡಾಟ್ ನೆಟ್, ಇಜ್ಞಾನ ಡಾಟ್ ಕಾಮ್
ಇತ್ಯಾದಿ – ಅದನ್ನು ಡೊಮೈನ್ ನೇಮ್ ಎಂದು ಕರೆಯುತ್ತಾರೆ (
http://vijayavani.net/?p=1771121) ಎನ್ನುವಂತಹ ರೂಪದ ಪೂರ್ಣವಿಳಾಸಕ್ಕೆ ಯೂನಿಫಾಮ್ರ್
ರಿಸೋರ್ಸ್ ಲೊಕೇಟರ್ ಅಥವಾ ಯುಆರ್​ಎಲ್ ಎಂದು ಹೆಸರು; ಡೊಮೈನ್ ನೇಮ್ ಎನ್ನುವುದು
ಯುಆರ್​ಎಲ್​ನ ಒಂದು ಭಾಗ).

ಜಾಲತಾಣದಲ್ಲಿರುವ ಮಾಹಿತಿ ಯಾವ ಭಾಷೆಯದೇ ಆದರೂ ಅದರ ವಿಳಾಸ ಮಾತ್ರ ಇಂಗ್ಲಿಷಿನಲ್ಲೇ
ಇರುವುದನ್ನು ನಾವು ನೋಡುತ್ತೇವಲ್ಲ, ಈ ಪರಿಸ್ಥಿತಿ ಇದೀಗ ಬದಲಾಗುತ್ತಿದೆ.
ಜಾಲತಾಣದಲ್ಲಿರುವ ಮಾಹಿತಿಯಂತೆ ಅದರ ವಿಳಾಸದಲ್ಲೂ ನಮ್ಮ ಆಯ್ಕೆಯ ಭಾಷೆಯನ್ನು ಬಳಸಲು
ಅನುವುಮಾಡಿಕೊಡುವ ‘ಇಂಟರ್​ನ್ಯಾಷನಲೈಸ್ಡ್ ಡೊಮೈನ್ ನೇಮ್​ಗಳು (ಐಡಿಎನ್) ಇದೀಗ ಬಳಕೆಗೆ
ಬರುತ್ತಿವೆ.

ದೇವನಾಗರಿ, ಬಂಗಾಳಿ, ಪಂಜಾಬಿ, ತಮಿಳು, ತೆಲುಗು ಸೇರಿದಂತೆ ಹಲವು ಭಾರತೀಯ ಲಿಪಿಗಳಲ್ಲಿ
ಡೊಮೈನ್ ನೇಮ್ಳನ್ನು ರೂಪಿಸಿಕೊಳ್ಳುವುದು ಈಗಾಗಲೇ ಸಾಧ್ಯವಾಗಿದೆ. ಜಾಲತಾಣದ ಹೆಸರು ಸ್ಥಳೀಯ
ಲಿಪಿಯಲ್ಲಿರುವುದಷ್ಟೇ ಅಲ್ಲ; ಡಾಟ್ ಕಾಮ್ ಡಾಟ್ ನೆಟ್​ಗಳ ಜಾಗದಲ್ಲಿ ಜಾಲತಾಣದ
ವಿಶೇಷಣವನ್ನು (ಟಾಪ್​ಲೆವೆಲ್ ಡೊಮೈನ್ ಅಥವಾ ಟಿಎಲ್​ಡಿ) ಕೂಡ ಅದೇ ಲಿಪಿಯಲ್ಲಿ ‘ಡಾಟ್
ಭಾರತ’ ಎಂದು ಬರೆಯಬಹುದು. ಈ ಸೌಲಭ್ಯವಿರುವ ಭಾರತೀಯ ಭಾಷೆಗಳ ಸಾಲಿಗೆ ಕನ್ನಡವೂ
ಇಷ್ಟರಲ್ಲೇ ಸೇರಲಿದೆ ಎನ್ನುವುದು ವಿಶೇಷ.

-- 
Hareeshkumar K
Govt High School
Huskuru vi & po
Malavalli Tq
Mandya Dt
mob. 9880328224
e-mail harihusk...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '57397'] ಇಂಟಿಗ್ರೇಟೆಡ್ ಸರ್ಕ್ಯ್

2016-05-07 Thread HAREESHKUMAR K Agasanapura
ಇಂಟಿಗ್ರೇಟೆಡ್ ಸರ್ಕ್ಯ್

by ವಿಜಯವಾಣಿ ನ್ಯೂಸ್  · Apr 25, 2016
[image: vittavani 5]

ಕಂಪ್ಯೂಟರ್ ಅಷ್ಟೇ ಅಲ್ಲ, ಯಾವ ವಿದ್ಯುನ್ಮಾನ ಉಪಕರಣವನ್ನು ತೆಗೆದುಕೊಂಡರೂ ಅದರ
ಮಿದುಳು-ಹೃದಯದ ಕೆಲಸವನ್ನೆಲ್ಲ ಮಾಡಲು ಕನಿಷ್ಠ ಒಂದಾದರೂ ಇಂಟಿಗ್ರೇಟೆಡ್ ಸರ್ಕ್ಯ್ (ಐಸಿ)
ಇರುತ್ತದೆ; ಕಂಪ್ಯೂಟರಿನಲ್ಲಿ ಪ್ರಾಸೆಸರ್ ಇರುತ್ತದಲ್ಲ, ಹಾಗೆ. ಈ ಐಸಿಗಳಲ್ಲಿ ಬೇಕಾದಷ್ಟು
ಟ್ರಾನ್ಸಿಸ್ಟರುಗಳಿರುತ್ತವೆ. ಸಾವಿರಗಳಷ್ಟೆ ಏಕೆ, ಲಕ್ಷಗಟ್ಟಲೆ ಟ್ರಾನ್ಸಿಸ್ಟರುಗಳು ಇಂತಹ
ಐಸಿಗಳೊಳಗೆ ಅಡಕವಾಗಿರುತ್ತವೆ. ಒಂದು ಐಸಿಯಲ್ಲಿ ಹೆಚ್ಚುಹೆಚ್ಚು ಟ್ರಾನ್ಸಿಸ್ಟರುಗಳನ್ನು
ಸೇರಿಸುವುದು ಸಾಧ್ಯವಾದಷ್ಟೂ ಆ ಐಸಿ ಬಳಸುವ ಉಪಕರಣದ ಗಾತ್ರ ಚಿಕ್ಕದಾಗುತ್ತದೆ; ಅಷ್ಟೇ
ಅಲ್ಲ, ಅದರ ಕಾರ್ಯಕ್ಷಮತೆ ಕೂಡ ಹೆಚ್ಚುತ್ತದೆ.

ಏಪ್ರಿಲ್ 1965ರ ಇಲೆಕ್ಟ್ರಾನಿಕ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ
ಪ್ರತಿಯೊಂದು ಐಸಿಯಲ್ಲಿ ಅಡಕವಾಗುವ ಟ್ರಾನ್ಸಿಸ್ಟರುಗಳ ಸಂಖ್ಯೆಯ ಬಗೆಗೊಂದು ಹೇಳಿಕೆ
ದಾಖಲಾಗಿತ್ತು. ಆ ಲೇಖನ ಬರೆದವರು ಇಂಟೆಲ್ ಸಂಸ್ಥೆಯ ಸ್ಥಾಪಕರಲ್ಲೊಬ್ಬರಾದ ಗಾರ್ಡನ್ ಮೂರ್.
ಐಸಿಗಳಲ್ಲಿರುವ ಟ್ರಾನ್ಸಿಸ್ಟರುಗಳ ಸಂಖ್ಯೆ ಸರಿಸುಮಾರು ಎರಡು ವರ್ಷಗಳಿಗೊಮ್ಮೆಯಂತೆ
ದ್ವಿಗುಣಗೊಳ್ಳುತ್ತದೆ ಎನ್ನುವ ಈ ಹೇಳಿಕೆಯೇ ಮುಂದೆ ‘ಮೂರ್ ನಿಯಮ’ (Mಟಟ್ಟಛಿ’ಠ ಔಚಡಿ)
ಎಂದು ವಿಖ್ಯಾತವಾಯಿತು. ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯ ವೇಗವನ್ನು ಅತ್ಯಂತ ಸಮರ್ಥವಾಗಿ
ಅಂದಾಜಿಸಿದ್ದು ಈ ನಿಯಮದ ಹೆಚ್ಚುಗಾರಿಕೆ.


-- 
Hareeshkumar K
Govt High School
Huskuru vi & po
Malavalli Tq
Mandya Dt
mob. 9880328224
e-mail harihusk...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '57229'] ಸ್ಟಾಕ್‌ಹೋಮ್ ಗೆ ಬೇಕಂತೆ ನೀರಿನ ಹೊಸ ಐಡಿಯಾ

2016-05-05 Thread HAREESHKUMAR K Agasanapura
http://m.prajavani.net/article/2016_05_05/406826

*ಸ್ಟಾಕ್‌ಹೋಮ್ ಗೆ ಬೇಕಂತೆ ನೀರಿನ ಹೊಸ ಐಡಿಯಾ*

5 May, 2016

ನಾಗೇಶ್ ಹೆಗಡೆ








‘ಅಜ್ಜ-ಅಜ್ಜೀನ್ನ ನೋಡೋಕೆ ಅಂತ ಇಂಡಿಯಾಕ್ಕೆ ಹೋಗಿದ್ದೆ. ಅಲ್ಲಿನ ನೀರಿನ ಸಮಸ್ಯೆ ನೋಡಿ
ತುಂಬಾ ಬೇಜಾರಾಯ್ತು. ನೀರಿನ ಶುದ್ಧೀಕರಣದ ಬಗ್ಗೆ ಏನಾದರೂ ಹೊಸ ಸಂಶೋಧನೆ ಮಾಡಬೇಕು ಅಂತ
ಆಗಲೇ ನಿರ್ಧಾರ ಮಾಡಿದೆ...’

-ಕಳೆದ ವರ್ಷ, 2015ರ ‘ಸ್ಟಾಕ್‌ಹೋಮ್ ಜೂನಿಯರ್ ವಾಟರ್ ಪ್ರೈಝ್’ ಎಂಬ ಪ್ರತಿಷ್ಠಿತ
ಪ್ರಶಸ್ತಿಯನ್ನು ಪಡೆದ ಅಮೆರಿಕದ ಹದಿ ಹುಡುಗ ಪೆರ್ರಿ ಅಳಗಪ್ಪನ್ ಹೇಳಿದ ಮಾತು ಇದು.

ಕುತೂಹಲದ ಸಂಗತಿ ಏನೆಂದರೆ, ಇದೇ ಅರ್ಥದ ಮಾತನ್ನು ಒಂದು ವರ್ಷ ಮುಂಚೆ, 2014ರಲ್ಲಿ ದೀಪಿಕಾ
ಕುರುಪ್ ಎಂಬ ಅಮೆರಿಕದ ಹದಿಹುಡುಗಿಯೂ ಹೇಳಿದ್ದಳು. ಅವಳಿಗೂ ಚೆನ್ನೈಯಲ್ಲಿ ಅಜ್ಜನ ಮನೆಯ
ಆಸುಪಾಸಿನ ಕೊಳಕು ನೀರಿನ ಪರಿಸರವೇ ಹೊಸ ಸಂಶೋಧನೆಗೆ ಪ್ರೇರಣೆ ನೀಡಿತು.

ನೀರಿನ ಶುದ್ಧೀಕರಣಕ್ಕೆ ಅವಳು ರೂಪಿಸಿದ ಸಾಧನಕ್ಕೆ ಆ ವರ್ಷ ಅಮೆರಿಕದ ‘ಸ್ಟಾಕ್‌ಹೋಮ್
ಜೂನಿಯರ್ ವಾಟರ್ ಪ್ರೈಝ್’ ಲಭಿಸಿತ್ತು. ಅಂದಹಾಗೆ, ದೊಡ್ಡವರಿಗೆ ನೀಡುವ ಸ್ಟಾಕ್‌ಹೋಮ್
ವಾಟರ್ ಪ್ರೈಝ್ (ಅದಕ್ಕೆ ‘ನೀರಿನ ನೊಬೆಲ್’ ಎಂತಲೇ ಕರೆಯುತ್ತಾರೆ) ಕೂಡ ಭಾರತದ ರಾಜೇಂದ್ರ
ಸಿಂಗ್ ಅವರಿಗೆ ಕಳೆದ ವರ್ಷ ಲಭಿಸಿದೆ.

ರಾಜೇಂದ್ರ ಅವರೇನೂ ಅಜ್ಜ-ಅಜ್ಜಿಯ ಮನೆಗೆ ಹೋಗಿರಲಿಲ್ಲ. ಆದರೆ ನೀರು ಅವರನ್ನು ಹೇಗೆ
ತನ್ನತ್ತ ಸೆಳೆದುಕೊಂಡಿತು ಎಂಬುದು ಕುತೂಹಲಕಾರಿ ಕತೆಯೇ ಆಗಿದೆ. ಈ ವಾರ ಈ ಮೂವರ ಸುತ್ತ
ತುಸು ಗಿರಕಿ ಹೊಡೆಯೋಣ.

ನೀರನ್ನು ನಾವು ಜೀವಜಲ ಎನ್ನುತ್ತೇವಾದರೂ, ಅದು ಅಶುದ್ಧವಾಗಿದ್ದರೆ ನಮ್ಮ ಬದುಕಿಗೆ ನಂಬರ್ 1
ಖಳನಾಯಕ ಆಗುತ್ತದೆ. ನೀರಿನಿಂದ ಹಬ್ಬುವ ರೋಗರುಜಿನಗಳೇ ಹಿಂದೆಲ್ಲ ಜಗತ್ತಿನ ಜನಸಂಖ್ಯೆಯನ್ನು
ನಿಯಂತ್ರಣದಲ್ಲಿ ಇಟ್ಟಿರುತ್ತಿದ್ದವು.

ಕಳೆದ ನೂರು ವರ್ಷಗಳಲ್ಲಿ ವೈದ್ಯಕೀಯ ಕ್ರಾಂತಿಯಿಂದಾಗಿಯೇ ಮನುಷ್ಯನ ಜೀವಿತಾವಧಿ
ಹೆಚ್ಚಿತೆಂದು ಹೇಳುತ್ತಾರಾದರೂ ಅಸಲೀ ವಿಷಯ ಏನೆಂದರೆ ನಲ್ಲಿಯ ಮೂಲಕ ಶುದ್ಧ ನೀರಿನ ಪೂರೈಕೆ
ವ್ಯವಸ್ಥೆ ಜಾರಿಗೆ ಬಂದಿದ್ದೇ ಕೋಟ್ಯಂತರ ಮಕ್ಕಳ ಜೀವ ಉಳಿಸಿದೆ.

ಅವರೆಲ್ಲ ದೊಡ್ಡವರಾಗಿ ವಂಶೋದ್ಧಾರಕರಾಗಲು ನೀರೇ ನೆರವಿಗೆ ಬಂದಿದೆ. ಆದರೆ ಈಗಲೂ ಹಿಂದುಳಿದ
ಪ್ರಜೆಗಳಿಗೆ ಶುದ್ಧ ನೀರು ಸಿಗುತ್ತಿಲ್ಲ. ಕೊಳಕು ನೀರನ್ನು ಶುದ್ಧ ಮಾಡಬೇಕೆಂದರೆ
ಕೋಟಿಗಟ್ಟಲೆ ಬಂಡವಾಳ ಬೇಕು; ವಿದ್ಯುತ್ ವ್ಯವಸ್ಥೆ ಬೇಕು. ಆಡಳಿತ ಯಂತ್ರವೂ ಸುವ್ಯವಸ್ಥಿತ
ಇರಬೇಕು. ಎಲ್ಲಕ್ಕಿಂತ ಮುಖ್ಯ ಏನೆಂದರೆ ಶುದ್ಧ ಮಾಡಲೆಂದು ಒಂದಷ್ಟು ನೀರು ಇರಬೇಕು.

ಅಮೆರಿಕದಲ್ಲಿ ಜನಿಸಿದ ಮಲೆಯಾಳಿ ಹುಡುಗಿ ದೀಪಿಕಾ ಕುರುಪ್ 2012ರಲ್ಲಿ ರಜೆ ಕಳೆಯಲು ಬಂದಾಗ
ಇಲ್ಲಿನ ಕೊಳೆಗೇರಿಗಳ ನೀರಿನ ಅಧ್ವಾನವನ್ನು ನೋಡಿ ಹೌಹಾರಿದ್ದಳು. ಮರಳಿ
ನ್ಯೂಹ್ಯಾಂಪ್‌ಶೈರ್‌ಗೆ ಹೋಗಿ ತನ್ನ ಹೈಸ್ಕೂಲ್‌ನ ಸಂಶೋಧನಾ ಪ್ರಾಜೆಕ್ಟ್‌ಗೆ ನೀರಿನ
ಶುದ್ಧೀಕರಣವನ್ನೇ ಆಯ್ದುಕೊಂಡಳು.

ಬಿಸಿಲಿನ ಶಕ್ತಿಯಿಂದಲೇ ನೀರಲ್ಲಿರುವ ಸೂಕ್ಷ್ಮ ಏಕಾಣು ಜೀವಿಗಳನ್ನೂ ಕೊಳಕು ದ್ರವ್ಯಗಳನ್ನೂ
ಧ್ವಂಸ ಮಾಡಬಲ್ಲ ಫಿಲ್ಟರನ್ನು ರೂಪಿಸಿದಳು. ಬಹುರಾಷ್ಟ್ರೀಯ ಕಂಪನಿಗಳ ವಿಶ್ವಮಾನ್ಯ
ಫಿಲ್ಟರ್‌ಗಳಿಗಿಂತ ಇದು ಹೆಚ್ಚಿನ ದಕ್ಷತೆಯ ಹಾಗೂ ಅಗ್ಗದ ಸಾಧನ; ಅಷ್ಟೇ ಅಲ್ಲ, ಯಾವುದೇ
ಬಗೆಯ ಕೆಮಿಕಲ್ ವಸ್ತುಗಳನ್ನು ನೀರಿಗೆ ಸೇರಿಸಬೇಕಾದ ಅಗತ್ಯ ಇಲ್ಲ.

ಅಮೆರಿಕದಲ್ಲಿ ಪಿಯುಸಿ ಸ್ತರದ ವಿದ್ಯಾರ್ಥಿಗಳಿಗಾಗಿ ನಡೆಸುವ ರಾಷ್ಟ್ರಮಟ್ಟದ ‘ಯಂಗ್
ಸೈಂಟಿಸ್ಟ್’ ಸ್ಪರ್ಧೆಯ 25 ಸಾವಿರ ಡಾಲರ್‌ಗಳ ಮೊದಲ ಸ್ಥಾನವನ್ನು ದೀಪಿಕಾ ಪಡೆದಳು.

ಸ್ಟಾಕ್‌ಹೋಮ್ ಜೂನಿಯರ್ ಜಲ ಪ್ರಶಸ್ತಿಗಾಗಿ ರಾಷ್ಟ್ರಮಟ್ಟದಲ್ಲಿ ಮೀಸಲಿರುವ 10 ಸಾವಿರ
ಡಾಲರ್ ಬಹುಮಾನ ಪಡೆದಳು. ನಂತರದ ಎರಡು ವರ್ಷಗಳಲ್ಲಿ ಇದೇ ಫಿಲ್ಟರನ್ನು ಇನ್ನಷ್ಟು ಸುಧಾರಿಸಿ
ಶ್ವೇತಭವನದ ಸನ್ಮಾನ, ನ್ಯಾಷನಲ್ ಜಿಯಾಗ್ರಫಿಕ್‌ನ ‘ಗೂಗಲ್ ಸೈನ್ಸ್ ಫೇರ್’ ಪ್ರಶಸ್ತಿ
ಪಡೆದದ್ದೂ ಅಲ್ಲದೆ, ಫೋರ್ಬ್ಸ್‌ನ ‘30ರೊಳಗಿನ 30’ ಅಗ್ರಮಾನ್ಯ ಸಂಶೋಧಕರ ಪಟ್ಟಿಯಲ್ಲೂ
ಸೇರ್ಪಡೆಯಾದಳು.

ಪೆರ್ರಿ ಅಳಗಪ್ಪನ್ ಕತೆ ಇದಕ್ಕಿಂತ ತುಸು ಭಿನ್ನವಾದುದು. ಅಮೆರಿಕದ ಟೆಕ್ಸಾಸ್‌ನಲ್ಲಿ
ಓದುತ್ತಿರುವ ಈ ಹುಡುಗ ಕೂಡ ಅಜ್ಜನ ಮನೆಗೆ ಬಂದಾಗ ನಗರದಂಚಿನ ಕೊಳಕು ಪರಿಸರವನ್ನು ನೋಡಿದ್ದ.
ಕೊಳೆಗೇರಿಗಳಲ್ಲಿ ನೀರಿನ ಗುಣಮಟ್ಟ ಅವನನ್ನು ಕಂಗೆಡಿಸಿತ್ತು. ಅಲ್ಲೆಲ್ಲ ಗುಜರಿ
ವಸ್ತುಗಳಿಂದ ಇಲೆಕ್ಟ್ರಾನಿಕ್ ಬಿಡಿಭಾಗಗಳನ್ನು ಬೇರ್ಪಡಿಸುವ ಕೆಲಸ ನಡೆಯುತ್ತಿತ್ತು.

ನಮ್ಮದಷ್ಟೇ ಅಲ್ಲ, ಜಗತ್ತಿನ ನಾನಾ ದೇಶಗಳಲ್ಲಿ ಕೆಟ್ಟು ಕೆರ ಹಿಡಿದ ಟಿವಿ, ಕಂಪ್ಯೂಟರ್,
ಮೊಬೈಲ್‌ಗಳೆಲ್ಲ ನಜ್ಜುಗುಜ್ಜಾಗಿ ಹಡಗು ಏರಿ ಚೀನಾಕ್ಕೆ ಇಲ್ಲವೆ ಭಾರತಕ್ಕೆ ಬರುತ್ತವೆ.
ಇಲ್ಲಿನ ಚಿಂದಿ ಕಾರ್ಮಿಕರು ಅವುಗಳನ್ನು ಬೇರ್ಪಡಿಸುವಾಗ ವಿಷಕಾರಿ ಲೋಹದ ಸಂಯುಕ್ತಗಳು ಆಸಿಡ್
ವಾಶ್‌ನಲ್ಲಿ ಬೇರ್ಪಟ್ಟು, ಕೊಳಕು ಚರಂಡಿಗಳ ಮೂಲಕ ಕೆರೆಗೋ ಹಳ್ಳಕ್ಕೋ ಸೇರುತ್ತವೆ.

ಕ್ರಮೇಣ ಜಲಚರಗಳಿಗೆ, ಪ್ರಾಣಿಪಕ್ಷಿಗಳಿಗೆ, ಕೊನೆಗೆ ಮೇವಿನ ಮೂಲಕ ಜಾನುವಾರುಗಳ ಹೊಟ್ಟೆಗೆ
ಸೇರುತ್ತವೆ ಮತ್ತು ಕೊಳವೆ ಬಾವಿಗಳ ಮೂಲಕ ಅಥವಾ ನೇರವಾಗಿ ಮನುಷ್ಯರ ಶರೀರದಲ್ಲೂ
ಸಂಗ್ರಹವಾಗುತ್ತವೆ. ಕುಡಿಯುವ ನೀರು ಅದೆಷ್ಟೋ ಬಾರಿ ಸ್ಫಟಿಕ ಶುದ್ಧವಾಗಿ ಕಂಡರೂ ಅದರಲ್ಲಿ
ಏಕಾಣು ಜೀವಿಗಳ ಲವಲೇಶವೂ ಇಲ್ಲದಿದ್ದರೂ ಆ ನೀರು ವಿಷಮಯ ಆಗಿರಬಹುದು. ಅದರಲ್ಲಿ ಕಣ್ಣಿಗೆ
ಕಾಣದ ಭಾರಲೋಹಗಳ ಸಂಯುಕ್ತಗಳು ಲೀನವಾಗಿರಬಹುದು.

ಅಂಥ ನೀರಲ್ಲಿ ಸೇರ್ಪಡೆಯಾಗಿರುವ ಕ್ರೋಮಿಯಂ, ಕ್ಯಾಡ್ಮಿಯಂ, ವೆನಾಡಿಯಂ, ಪಾದರಸ ಮುಂತಾದ
ವಿಷಕಾರಿ ಭಾರಲೋಹಗಳನ್ನು ಹೀರಿ ತೆಗೆಯುವುದು ಹೇಗೆಂಬ ಬಗ್ಗೆ 17 ವರ್ಷದ ಪೆರ್ರಿ ಅಮೆರಿಕದ
ಟೆಕ್ಸಾಸ್‌ನಲ್ಲಿ ಅಧ್ಯಯನ ನಡೆಸಿದ. ಬಳಕೆಯಲ್ಲಿದ್ದ ಎಲ್ಲ ವಿಧಾನಗಳೂ ತೀರ ದುಬಾರಿ, ತೀರ
ಕ್ಲಿಷ್ಟವಾಗಿದ್ದವು. ವಿಶ್ವಾಸಾರ್ಹತೆ ಇರಲೇ ಇಲ್ಲ.

ಅಮೆರಿಕಕ್ಕೆ ಮರಳಿದ ಮೇಲೆ, ಈ ಯುವಕ ಗ್ರಾಫೀನ್ ನ್ಯಾನೊ ಕೊಳವೆಗಳ ಒಂದು ಸೋಸು ಪರದೆಯನ್ನು
ತಯಾರಿಸಿದ. ಅದರ ಮೂಲಕ ಇಂಥ ಕೊಳೆನೀರನ್ನು ಹಾಯಿಸಿ ನೋಡಿದ. ಕೆಲವು ವಿಫಲ ಪ್ರಯತ್ನಗಳ ನಂತರ
ನೂರಕ್ಕೆ ನೂರರಷ್ಟು ಚೊಕ್ಕಟವಾಗಿ ನೀರನ್ನು ಸೋಸಬಲ್ಲ ಅಲ್ಪವೆಚ್ಚದ ಸೋಸು ಪರದೆ
ಸಿದ್ಧವಾಯಿತು. 

[ms-stf '56917'] ಇಜ್ಞಾನ ಡಾಟ್ ಕಾಮ್: 'eಜ್ಞಾನ' ತಂದ ಸಂತೋಷ

2016-05-01 Thread HAREESHKUMAR K Agasanapura
http://www.ejnana.com/2016/04/e.html?m=1

*'eಜ್ಞಾನ' ತಂದ ಸಂತೋಷ*



ಕಳೆದ ಗುರುವಾರದಿಂದ (ಏಪ್ರಿಲ್ ೨೧, ೨೦೧೬) ವಿಜಯವಾಣಿಯಲ್ಲಿ ಪ್ರಕಟವಾಗುತ್ತಿರುವ 'eಜ್ಞಾನ'
ಅಂಕಣದ ಮೊದಲ ಮೂರು ಕಂತುಗಳನ್ನು ಈ ವಾರದ 'ಇಫ್ರೆಶ್'ನಲ್ಲಿ ಖುಷಿಯಿಂದ
ಪ್ರಕಟಿಸುತ್ತಿದ್ದೇವೆ. ಈ ಅಂಕಣ ಕುರಿತ ಹಲವು ಪ್ರತಿಕ್ರಿಯೆಗಳು ಬಂದಿವೆ, ಬರುತ್ತಿವೆ.
ಇಂತಹ ಪ್ರತಿಕ್ರಿಯೆಗಳೇ ಬರವಣಿಗೆಗೆ ಸ್ಫೂರ್ತಿತುಂಬುವ ಸಂಗತಿಗಳು. ನಿಮ್ಮ
ಅನಿಸಿಕೆ-ಅಭಿಪ್ರಾಯಗಳನ್ನು ದಯಮಾಡಿ ಹೀಗೆಯೇ ಹಂಚಿಕೊಳ್ಳುತ್ತಿರಿ, ಬರಹಗಳು ಹೇಗಿದ್ದರೆ
ನಿಮಗಿಷ್ಟ ಎಂದು ಹೇಳುವುದನ್ನೂ ಮರೆಯದಿರಿ.

*ಬಿಟ್-ಬೈಟ್ ಸಮಾಚಾರ *
ನಾವು ಟೈಪ್ ಮಾಡಿದ ಮಾಹಿತಿ - ಡೌನ್‌ಲೋಡ್ ಮಾಡಿ ತಂದ ಕಡತಗಳೆಲ್ಲ ಕಂಪ್ಯೂಟರಿನ
ಮೆಮೊರಿಯಲ್ಲಿರುತ್ತವಲ್ಲ, ಅದೆಲ್ಲ ಕಂಪ್ಯೂಟರಿಗೆ ಅರ್ಥವಾಗಬೇಕಾದರೆ ಮೊದಲಿಗೆ ದ್ವಿಮಾನ
ಪದ್ಧತಿಯ ಅಂಕಿಗಳಾಗಿ (೧ ಅಥವಾ ೦) ಬದಲಾದಾಗಬೇಕಾದ್ದು ಅನಿವಾರ್ಯ.

ದ್ವಿಮಾನ ಸಂಖ್ಯೆಯ ಆಂಗ್ಲ ಹೆಸರು ಬೈನರಿ ಡಿಜಿಟ್; ಈ ಹೆಸರಿನ ಮೊದಲ ಎರಡು ಹಾಗೂ
ಕೊನೆಯದೊಂದು ಅಕ್ಷರಗಳನ್ನು ಸೇರಿಸಿ ಬಿಟ್ ಎಂಬ ಹೆಸರು ರೂಪಗೊಂಡಿದೆ. ಇದು ಮಾಹಿತಿಯ ಪ್ರಮಾಣ
ಅಳೆಯಲು ಬಳಕೆಯಾಗುವ ಅತ್ಯಂತ ಸಣ್ಣ ಏಕಮಾನ.

ಎಂಟು ಬಿಟ್‌ಗಳು ಸೇರಿದಾಗ ಒಂದು ಬೈಟ್ ಆಗುತ್ತದೆ. ಇಂಗ್ಲಿಷಿನ ಅಕ್ಷರವನ್ನೋ
ಅಂಕಿ-ಲೇಖನಚಿಹ್ನೆಯನ್ನೋ ಕಂಪ್ಯೂಟರಿನ ಮೆಮೊರಿಯಲ್ಲಿ ಉಳಿಸಿಡಲು ಒಂದು ಬೈಟ್ ಸ್ಥಳಾವಕಾಶ
ಬೇಕು. ಮೆಗಾಬೈಟ್, ಗಿಗಾಬೈಟ್, ಟೆರಾಬೈಟುಗಳೆಲ್ಲ ಇದೇ ಬೈಟ್‌ನ ಗುಣಕಗಳು. ೧೦೨೪ ಬೈಟ್‌ಗಳು
ಒಂದು ಕಿಲೋಬೈಟ್‌ಗೆ (ಕೆಬಿ), ೧೦೨೪ ಕೆಬಿ ಒಂದು ಮೆಗಾಬೈಟ್‌ಗೆ (ಎಂಬಿ), ೧೦೨೪ ಎಂಬಿ ಒಂದು
ಗಿಗಾಬೈಟ್‌ಗೆ (ಜಿಬಿ) ಹಾಗೂ ೧೦೨೪ ಜಿಬಿ ಒಂದು ಟೆರಾಬೈಟ್‌ಗೆ (ಟಿಬಿ) ಸಮಾನ.

*ಕಂಪ್ಯೂಟರ್ ನೆಟ್‌ವರ್ಕ್*



ಒಂದಕ್ಕಿಂತ ಹೆಚ್ಚು ಸಂಖ್ಯೆಯ ಕಂಪ್ಯೂಟರುಗಳ ನಡುವೆ ಸಂಪರ್ಕ ಏರ್ಪಡಿಸಿ ಆ ಮೂಲಕ ಮಾಹಿತಿ
ಹಾಗೂ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಅನುವುಮಾಡಿಕೊಡುವ ವ್ಯವಸ್ಥೆಯನ್ನು ಕಂಪ್ಯೂಟರ್
ನೆಟ್‌ವರ್ಕ್ (ಜಾಲ) ಎಂದು ಕರೆಯುತ್ತಾರೆ.

ಯಾವುದೇ ಜಾಲದಲ್ಲಿರುವ ಕಂಪ್ಯೂಟರುಗಳು ಒಂದೇ ಕೋಣೆಯಲ್ಲಿರಬಹುದು, ಪ್ರಪಂಚದ ವಿವಿಧ
ಮೂಲೆಗಳಲ್ಲೂ ಇರಬಹುದು. ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಅವುಗಳ ಹೆಸರುಗಳು
ಬದಲಾಗುತ್ತವೆ: ನಿರ್ದಿಷ್ಟ ಮಿತಿಯಲ್ಲಿ - ಒಂದು ಕಟ್ಟಡ ಅಥವಾ ಆವರಣದ ಒಳಗೆ -
ಅಸ್ತಿತ್ವದಲ್ಲಿರುವ ಜಾಲಗಳಿಗೆ ಲೋಕಲ್ ಏರಿಯಾ ನೆಟ್‌ವರ್ಕ್ (ಲ್ಯಾನ್) ಎಂದು ಹೆಸರು; ಇನ್ನೂ
ಹೆಚ್ಚಿನ ಭೌಗೋಳಿಕ ವ್ಯಾಪ್ತಿಯಿರುವ ಜಾಲ ವೈಡ್ ಏರಿಯಾ ನೆಟ್‌ವರ್ಕ್ (ವ್ಯಾನ್).

ಇಂತಹ ಅಸಂಖ್ಯ ಜಾಲಗಳು ಹಾಗೂ ವೈಯಕ್ತಿಕ ಕಂಪ್ಯೂಟರುಗಳ ಜೋಡಣೆಯಿಂದ 'ಇಂಟರ್‌ನೆಟ್'
(ಅಂತರಜಾಲ) ರೂಪುಗೊಳ್ಳುತ್ತದೆ. ಪ್ರಪಂಚದ ಯಾವುದೇ ಮೂಲೆಯಲ್ಲಿರುವವರಾದರೂ ಈ ಜಾಲದ ಸಂಪರ್ಕ
ಪಡೆದುಕೊಳ್ಳುವುದು ಸಾಧ್ಯ.

ನಿರ್ದಿಷ್ಟ ಗುಂಪುಗಳ (ಉದಾ: ಒಂದು ಸಂಸ್ಥೆಯ ಉದ್ಯೋಗಿಗಳು, ನಿರ್ದಿಷ್ಟ ಸೇವೆಯ ಗ್ರಾಹಕರು,
ಯಾವುದೋ ಸಂಘಟನೆಯ ಸದಸ್ಯರು ಇತ್ಯಾದಿ) ಬಳಕೆಗಾಗಿ ಮಾತ್ರವೇ ಮೀಸಲಿರುವ ಜಾಲಗಳೂ ಇವೆ.
ಅವನ್ನು 'ಇಂಟ್ರಾನೆಟ್'ಗಳೆಂದು ಕರೆಯುತ್ತಾರೆ.

*ಐಪಿ ಅಡ್ರೆಸ್*
ಅಂತರಜಾಲದ ವ್ಯಾಪ್ತಿ ವಿಸ್ತರಿಸುತ್ತ ಹೋದಂತೆ ಹೆಚ್ಚುಹೆಚ್ಚು ಸಾಧನಗಳು ಅದರ ಸಂಪರ್ಕಕ್ಕೆ
ಬರುತ್ತಿವೆ. ಹೀಗೆ ಅಂತರಜಾಲದ ಸಂಪರ್ಕದಲ್ಲಿರುವ ಪ್ರತಿಯೊಂದು ಸಾಧನವನ್ನೂ ಪ್ರತ್ಯೇಕವಾಗಿ
ಗುರುತಿಸಲು ಬಳಕೆಯಾಗುವ ವಿಳಾಸವನ್ನು ಐಪಿ ಅಡ್ರೆಸ್ ಎಂದು ಕರೆಯುತ್ತಾರೆ. ಈ
ಹೆಸರಿನಲ್ಲಿರುವ 'ಐಪಿ', ಇಂಟರ್‌ನೆಟ್ ಪ್ರೋಟೊಕಾಲ್ ಎನ್ನುವುದರ ಹ್ರಸ್ವರೂಪ.

ಅಂತರಜಾಲದಲ್ಲಿ ವಿವಿಧ ಬಗೆಯ ಸಾಧನಗಳ ನಡುವೆ ವಿನಿಮಯವಾಗುವ ಮಾಹಿತಿ ಎಲ್ಲಿಂದ ಎಲ್ಲಿಗೆ
ಹೋಗುತ್ತಿದೆ ಎಂದು ಗುರುತಿಸಲು ಈ ವಿಳಾಸ ಬಳಕೆಯಾಗುತ್ತದೆ.

ಬರೆದ ಪತ್ರವನ್ನು ಅಂಚೆಗೆ ಹಾಕುವ ಮೊದಲು ಲಕೋಟೆಯ ಮೇಲೆ ಅದು ತಲುಪಬೇಕಾದ ವಿಳಾಸ ಹಾಗೂ
ಅದನ್ನು ಕಳುಹಿಸುತ್ತಿರುವವರ ವಿಳಾಸ ಬರೆಯುತ್ತೇವಲ್ಲ, ಇದೂ ಹಾಗೆಯೇ.

ನೀವು ಗೂಗಲ್ ಸರ್ಚ್ ಮಾಡಲು ಹೊರಟಿದ್ದೀರಿ ಎಂದುಕೊಳ್ಳೋಣ. ನೀವು ಹೋಗಬೇಕಾದ್ದು ಗೂಗಲ್‌ಗೆ
ಎಂದು ಕಂಪ್ಯೂಟರಿಗೆ ಗೊತ್ತಾಗುವುದು ಅದರ ವಿಳಾಸ, ಅಂದರೆ ಯುಆರ್‌ಎಲ್‌ನಿಂದ. ಪ್ರತಿ
ಯುಆರ್‌ಎಲ್ ಹಿಂದೆಯೂ ಒಂದು ಐಪಿ ವಿಳಾಸ ಇರುತ್ತದೆ.  ಹುಡುಕಾಟದ ಫಲಿತಾಂಶವನ್ನು
ಕಳುಹಿಸಬೇಕಾದ್ದು ನಿಮಗೆ ಎಂದು ಗೂಗಲ್‌ಗೆ ಗೊತ್ತಾಗುವುದೂ ಅಷ್ಟೆ, ನಿಮ್ಮ ಕಂಪ್ಯೂಟರಿನ ಐಪಿ
ವಿಳಾಸದಿಂದ!


Hareeshkumar K
AM(PCM)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '56771'] IRNSS-1G launch 'gift to people from scientists' says Modi | ಐಆರ್​ಎನ್​ಎಸ್​ಎಸ್ 1ಜಿ ಉಡಾವಣೆ, ಜನರಿಗೆ ವಿಜ್ಞಾನಿಗಳು ನೀಡಿದ ಉಡುಗೊರೆ: ಮೋದಿ | Kannadaprabha.com

2016-04-28 Thread HAREESHKUMAR K Agasanapura
http://www.kannadaprabha.com/nation/irnss-1g-launch-gift-to-people-from-scientists-says-modi/274550.html

*ಐಆರ್​ಎನ್​ಎಸ್​ಎಸ್ 1ಜಿ ಉಡಾವಣೆ, ಜನರಿಗೆ ವಿಜ್ಞಾನಿಗಳು ನೀಡಿದ ಉಡುಗೊರೆ: ಮೋದಿ*

ಐಆರ್​ಎನ್​ಎಸ್​ಎಸ್ 1ಜಿ ಉಡಾವಣೆ: ವಿಜ್ಞಾನಿಗಳ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

Published: 28 Apr 2016 04:18 PM IST | Updated: 28 Apr 2016 04:31 PM IST

ಪ್ರಧಾನಮಂತ್ರಿ ನರೇಂದ್ರ ಮೋದಿ

*ನವದೆಹಲಿ: **ಐಆರ್​ಎನ್​ಎಸ್​ಎಸ್ 1ಜಿ ಉಪಗ್ರಹ ಉಡಾವಣೆ ಮಾಡಿದ ವಿಜ್ಞಾನಿಗಳ ಸಾಧನೆಯನ್ನು
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಶ್ಲಾಘಿಸಿದ್ದಾರೆ.*

ಇಸ್ರೋ ಉಡಾಯಿಸಿದ ಐಆರ್ ಎನ್ ಎಸ್ಎಸ್ 1ಜಿ ಉಪಗ್ರಹ ಉಡಾವಣೆಯನ್ನು ಪ್ರಧಾನಮಂತ್ರಿ ನರೇಂದ್ರ
ಮೋದಿಯವರು ವೀಕ್ಷಿಸಿದ್ದು, ವಿಜ್ಞಾನಿಗಳ ಸಾಧನೆಯನ್ನು ಹೊಗಳಿದ್ದಾರೆ. ಅಲ್ಲದೆ, ಉಪಗ್ರಹ
ಉಡಾವಣೆಯೊಂದು ವಿಜ್ಞಾನಿಗಳು ಜನರಿಗೆ ನೀಡಿರುವ ಉಡುಗೊರೆಯಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರವು ಸ್ಥಳೀಯ ತಂತ್ರಜ್ಞಾನದ ಮೂಲಕ ತನ್ನದೇ ದಾರಿಯನ್ನು ಕಂಡುಕೊಳ್ಳಲು ಇದು
ಸಹಕಾರಿಯಾಗಲಿದೆ. ಜನರಿಗೆ ವಿಜ್ಞಾನಿಗಳು ನೀಡಿರುವ ದೊಡ್ಡ ಉಡುಗೊರೆ ಇದಾಗಿದೆ. ಇಂತಹ
ಉಡುಗೊರೆ ನೀಡಿದ ವಿಜ್ಞಾನಿಗಳಿಗೆ ದೊಡ್ಡ ಧನ್ಯವಾದವನ್ನು ಹೇಳುತ್ತೇನೆಂದು ಹೇಳಿದ್ದಾರೆ.

Hareeshkumar K
AM(PCM)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


Re: [ms-stf '56957'] ಮಹಾನಗರದಲ್ಲೊಂದು ಪುಟ್ಟ ಅರಣ್ಯ

2016-04-13 Thread HAREESHKUMAR K Agasanapura
Aitjiyaa

Hareeshkumar K
AM(PCM)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com
On Apr 13, 2016 6:55 AM, "Harsha" <hardeepmys...@gmail.com> wrote:

> Nice article sir
>
> Sent from my iPhone
>
>
> On 12-Apr-2016, at 11:51 PM, HAREESHKUMAR K Agasanapura <
> harihusk...@gmail.com> wrote:
>
> http://m.prajavani.net/article/2016_04_12/401109
>
> *ಮಹಾನಗರದಲ್ಲೊಂದು ಪುಟ್ಟ ಅರಣ್ಯ’*
>
> ಕಿರು ಅರಣ್ಯದ ಸಂಪೂರ್ಣ ಮಾಹಿತಿಯುಳ್ಳ ಫಲಕ
>
> ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಮರ
>
> ಐಐಎಸ್‌ಸಿ ಸಂಸ್ಥೆಗೆ ನೂರು ವರ್ಷ ತುಂಬಿದಾಗ ನಿರ್ಮಿಸಿದ ಕೊಳ
>
> ಹಾಲೇಕಾಯಿ ಬಳ್ಳಿ
>
> ಟಿ.ವಿ. ರಾಮಚಂದ್ರ
>
> Previous <http://m.prajavani.net/article/2016_04_12/401109#>Next
> <http://m.prajavani.net/article/2016_04_12/401109#>
>
> 12 Apr, 2016
>
> ಅನಿತಾ ಈ.
>
> <https://www.facebook.com/sharer/sharer.php?u=http%3A%2F%2Fgoo.gl%2Fxjp8pr>
> <https://twitter.com/intent/tweet?text=%E0%B2%AE%E0%B2%B9%E0%B2%BE%E0%B2%A8%E0%B2%97%E0%B2%B0%E0%B2%A6%E0%B2%B2%E0%B3%8D%E0%B2%B2%E0%B3%8A%E0%B2%82%E0%B2%A6%E0%B3%81+%E0%B2%AA%E0%B3%81%E0%B2%9F%E0%B3%8D%E0%B2%9F+%E0%B2%85%E0%B2%B0%E0%B2%A3%E0%B3%8D%E0%B2%AF%E2%80%99+http%3A%2F%2Fgoo.gl%2Fxjp8pr>
> <https://plus.google.com/share?url=http%3A%2F%2Fgoo.gl%2Fxjp8pr>
> <http://www.pinterest.com/pin/find/?url=http%3A%2F%2Fgoo.gl%2Fxjp8pr>
> <http://www.linkedin.com/shareArticle?mini=true=%E0%B2%AE%E0%B2%B9%E0%B2%BE%E0%B2%A8%E0%B2%97%E0%B2%B0%E0%B2%A6%E0%B2%B2%E0%B3%8D%E0%B2%B2%E0%B3%8A%E0%B2%82%E0%B2%A6%E0%B3%81+%E0%B2%AA%E0%B3%81%E0%B2%9F%E0%B3%8D%E0%B2%9F+%E0%B2%85%E0%B2%B0%E0%B2%A3%E0%B3%8D%E0%B2%AF%E2%80%99+=http%3A%2F%2Fgoo.gl%2Fxjp8pr>
>
> ಸೂರ್ಯ ನೆತ್ತಿಗೇರುವ ಮೊದಲೇ ಬಿಸಿಲ ತಾಪ. ಎಲ್ಲಿಯಾದರೂ ಚಿಕ್ಕ ಮರ ಕಂಡರೂ ತುಸು ಹೊತ್ತು
> ನಿಂತು ದಣಿವಾರಿಸಿಕೊಳ್ಳುವ ಪ್ರಯತ್ನ. ಸಿಗ್ನಲ್‌ ಬಿಡುವ ಮೊದಲೇ ವಾಹನ ನುಗ್ಗಿಸುವ ಜನರು
> ಸಿಗ್ನಲ್‌ನಲ್ಲಿ ಮರದ ನೆರಳಿಗಾಗಿ ಹುಡುಕಾಡುತ್ತಾರೆ.  ಸದ್ಯ ಮರಗಳಿಲ್ಲದೆ ಬೋಳಾಗಿರುವ
> ಪ್ರತಿಯೊಂದು ನಗರಗಳ ಪರಿಸ್ಥಿತಿ ಇದು.
>
> ನೆತ್ತಿಗೇರಿದ ಸೂರ್ಯನ ಉರಿ ಬಿಸಿಲಿನಲ್ಲೇ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಭಾರತೀಯ
> ವಿಜ್ಞಾನ ಸಂಸ್ಥೆಯತ್ತ (ಐಐಎಸ್‌ಸಿ) ಬೆಳೆಸಿದ ಪಯಣ. ಗಿಜಿಗುಡುವ ವಾಹನ, ಅವುಗಳು ಹೊರ ಹಾಕುವ
> ಕೆಟ್ಟ ಹೊಗೆಯನ್ನೇ ಉಸಿರಾಡುತ್ತಾ  ಐಐಎಸ್‌ಸಿ ತಲುಪುವಷ್ಟರಲ್ಲಿ ಜೀವನವೇ ಸಾಕೆನಿಸಿತ್ತು.
> ಆದರೆ ಎಲೆಮರೆ ಕಾಯಿಯಂತೆ ಬೆಳೆದಿರುವ ಕಿರು ಅರಣ್ಯವನ್ನು ನೋಡುವ ತವಕ ಇದನ್ನೆಲ್ಲ ಸಹಿಸುವ
> ಶಕ್ತಿ ನೀಡಿತ್ತು.
>
> ಐಐಎಸ್‌ಸಿ ಆವರಣದೊಳಗೆ ಕಾಲಿಡುತ್ತಿದ್ದಂತೆಯೇ ಮರಗಳ ನೆರಳು, ತಂಪಾದ ಗಾಳಿ, ಉದುರಿರುವ ಹೂ,
> ಎಲೆಗಳು ಮೆಲ್ಲನೆ ಹಾರುತ್ತ ಕಾಲ ಬಳಿ ಬಂದು ಕೋರಿದ ಸ್ವಾಗತ ಒಮ್ಮೆಲೆ ಎಲ್ಲವನ್ನೂ
> ಮರೆಸುವಂತೆ ಮಾಡಿತ್ತು. ಮಾರ್ಗದುದ್ದಕ್ಕೂ ಸಾಲು ಮರಗಳ ನೆರಳಿನಲ್ಲಿ ಸುಮಾರು ಎರಡೂವರೆ
> ಕಿ.ಮೀ. ನಡೆದರೂ ಸ್ವಲ್ಪವೂ ಬೆವರಿಳಿಯಲಿಲ್ಲ. ರಸ್ತೆ ಬದಿ ಜೊತೆಯಲ್ಲೇ ಹೆಜ್ಜೆ ಹಾಕಿದ
> ಬೆಳ್ಳಕ್ಕಿಗಳ ಜೊತೆಗೆ ಇಂಪಾದ ಹಕ್ಕಿಗಳ ಕಲರವ ಮನಸ್ಸು ಬೇರೆಡೆ ಹೋಗದಂತೆ ಮಾಡಿತ್ತು.
>
> ಸುಮಾರು 400 ಎಕರೆ ಪ್ರದೇಶದಲ್ಲಿರುವ ಐಐಎಸ್‌ಸಿ ಆವರಣದಲ್ಲಿ ‘ಕಿರು ಅರಣ್ಯ’
> ಸಮೀಪಿಸುತ್ತಿದ್ದಂತೆಯೇ ತಂಪಾದ ಗಾಳಿ ಮೈಸೋಕುವ ಅನುಭವ. ಎತ್ತರದ ಮರಗಳು, ಪೊದೆಗಳು,
> ಬಿದಿರಿನ ಗುಂಪು, ಬಳ್ಳಿಗಳಿಂದ ಕೂಡಿದ ಗಿಡಗಂಟೆಗಳು. ಅರಣ್ಯದೊಳಗೆ ಕಾಲಿಡಲು ಭಯವಾಗುವ
> ವಾತಾವರಣ. ನಿಜಕ್ಕೂ ನಗರ ಹೃದಯ ಭಾಗದಲ್ಲಿ ಇಂತಹ ಅನುಭವ ಇದೇ ಮೊದಲು. 22 ಸಾವಿರ ಮರಗಳಿರುವ
> ಐಐಎಸ್‌ಸಿಯಲ್ಲಿ 500 ಉತ್ತರ ಕನ್ನಡದ ಮರಗಳಿವೆ. ಈ ಪ್ರದೇಶ ಶೇಕಡ 55ರಷ್ಟು ಹಸಿರಿನಿಂದ
> ಕೂಡಿದ್ದು, ಇಲ್ಲಿನ ಉಷ್ಣಾಂಶ ನಗರದ ಬೇರೆ ಪ್ರದೇಶಕ್ಕೆ ಹೋಲಿಸಿದರೆ ಎರಡು ಡಿಗ್ರಿಯಷ್ಟು
> ಕಡಿಮೆ.
>
> *ಕಿರು ಅರಣ್ಯದ ಹುಟ್ಟು*
> ದೇಶದಲ್ಲಿನ ಸಸ್ಯ ವರ್ಗದಲ್ಲಿ ತುಂಬಾ ವೈವಿಧ್ಯವಿದೆ. ಸಣ್ಣ, ದೊಡ್ಡ ಗಿಡಗಳು, ಎಲೆ
> ಉದುರಿಸುವ ಗಿಡಗಳು, ವರ್ಷ ಪೂರ್ತಿ ಹಸಿರಾಗಿರುವ ನಿತ್ಯ ಹರಿದ್ವರ್ಣ ಸೇರಿದಂತೆ ವಿವಿಧ
> ಪ್ರಭೇದಗಳ ಸಸ್ಯ ವರ್ಗವಿದೆ. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಸ್ಥಳೀಯ ಸಸ್ಯ
> ಪ್ರಭೇದಗಳ ಮರು ಹುಟ್ಟು ಪ್ರಕ್ರಿಯೆಗೆ ಅಡಚಣೆಯಾಗಿ ಸಸ್ಯಗಳ ವಿವಿಧತೆಗೆ ಕುಂದು
> ಉಂಟಾಗುತ್ತಿತ್ತು.
>
> ಈ ಹಿನ್ನೆಲೆಯಲ್ಲಿ ವನ್ಯ ಮತ್ತು ಸ್ಥಳೀಯ ಪ್ರಭೇದಗಳನ್ನು ದೇಶದ ಬೇರೆ ಬೇರೆ ಭಾಗಗಳಲ್ಲಿ
> ಬೆಳೆಸುವ ಅಗತ್ಯ ತಲೆದೋರಿತ್ತು. ಈ ವಿಷಯವನ್ನು ಗಮನದಲ್ಲಿ ಇರಿಸಿಕೊಂಡು ಐಐಎಸ್‌ಸಿಯ ಪರಿಸರ
> ವಿಜ್ಞಾನ ವಿಭಾಗ ಈ ‘ಕಿರು ಅರಣ್ಯ’ ಯೋಜನೆ ಕೈಗೆತ್ತಿಕೊಂಡಿತ್ತು. 30 ವರ್ಷಗಳ ಹಿಂದೆ
> ಐಐಎಸ್‌ಸಿಯ ಆವರಣದಲ್ಲಿ ಅಧ್ಯಯನಕ್ಕಾಗಿ 1.5 ಹೆಕ್ಟೇರ್‌ ಪ್ರದೇಶದಲ್ಲಿ ಈ ಮಿನಿ ಫಾರೆಸ್ಟ್‌
> ನಿರ್ಮಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ‘ಸಿ ಇಎಸ್ ಫೀಲ್ಡ್‌ ಸೇಷ್ಟನ್‌
> ನರ್ಸರಿ’ಯಿಂದ ಪಶ್ಚಿಮಘಟ್ಟದಲ್ಲಿ ಬೆಳೆಯುವ 49 ಪ್ರಭೇದಗಳ 500 ವನ್ಯ ಗಿಡಗಳನ್ನು ತಂದು
> ನೆಡಲಾಗಿತ್ತು.
>
> ಪಶ್ಚಿಮ ಘಟ್ಟದಲ್ಲಿ ಬೆಳೆಯುವ ಸಸ್ಯ ಪ್ರಭೇದಗಳು ದಖ್ಖನ್‌ ಪ್ರಸ್ಥಭೂಮಿಯ ವಾತಾವರಣದಲ್ಲಿ
> ಬೆಳೆಯಬಲ್ಲವೇ ಎಂದು ಅಧ್ಯಯನ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆಗ
> ಪರಿಸರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿ ಸಿ.ಎನ್‌.ಆರ್‌. ರಾವ್‌ ಅವರ
> ನೇತೃತ್ವದಲ್ಲಿ ಈ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಆಗಿನ ಸಮಯದಲ್ಲಿ ಕೇವಲ
> ಪಾರ್ಥೇನಿಯಂನಿಂದ ಕೂಡಿದ್ದ ಈ ಸ್ಥಳದಲ್ಲಿ ಗಿಡಗಳು ಬೆಳೆಯುತ್ತಿದ್ದಂತೆಯೇ ಪಾರ್ಥೇನಿಯಂ
> ಸಂಪೂರ್ಣವಾಗಿ ಮಾಯವಾಗಿತ್ತು.
>
> ‘ಪಶ್ಚಿಮ ಘಟ್ಟಗಳು ಯುನೈಟೆಡ್‌ ನೇಷನ್ಸ್‌ ಗುರುತಿಸಿರುವ 34 ‘ಬಯೊ ಡೈವರ್ಸಿಟಿ ಹಾಟ್‌
> ಸ್ಪಾಟ್‌’ಗಳಲ್ಲಿ ಒಂದು. ಅತೀ ಸೂಕ್ಷ್ಮ ಪರಿಸರ ಹೊಂದಿರುವ ಈ ಪ್ರದೇಶದಲ್ಲಿ ನಿತ್ಯ
> ಹರಿದ್ವರ್ಣ, ಎಲೆ ಉದುರುವ ಕಾಡು, ಗಿಡಗಂಟೆ ಪೊದೆಗಳ ರೀತಿ ಸಸ್ಯಗಳು, ಶೋಲಾ ಕಾಡು,
> ಹುಲ್ಲುಗಾವಲು, ವರ್ಷದಲ್ಲಿ ಕೆಲ ಕಾಲ ಮಾತ್ರ ಹಸಿರಾಗಿರುವ ಸಸ್ಯ ಪ್ರಭೇದಗಳಿವೆ. ಇಲ್ಲಿ
> ಬಿಸಿಲು, ಮಳೆ, ಆರ್ದ್ರತೆ, ಸಮುದ್ರ ಮಟ್ಟಕ್ಕಿಂತ ಎತ್ತರ, ಟೊಪೊಗ್ರಫಿಯ ಅನನ್ಯ ಸಂಯೋಜನೆ
> ಇರುವುದರಿಂದ ಜೀವ ಹಾಗೂ ಸಸ್ಯಗಳಲ್ಲಿ ವೈವಿಧ್ಯ ಇದೆ. ಈ ಕಾರಣದಿಂದಲೇ ಇಂತಹ ಪರಿಸರದಲ್ಲಿ
> ಬೆಳೆಯುವ ಸಸ್ಯ ವರ್ಗ ತದ್ವಿರುದ್ಧವಾಗಿರುವ ಪರಿಸರದಲ್ಲಿ ಜೀವಿಸಬಲ್

Re: [ms-stf '56957'] ಮಹಾನಗರದಲ್ಲೊಂದು ಪುಟ್ಟ ಅರಣ್ಯ

2016-04-13 Thread HAREESHKUMAR K Agasanapura
)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com
On Apr 13, 2016 6:55 AM, "Harsha" <hardeepmys...@gmail.com> wrote:
>
> Nice article sir
>
> Sent from my iPhone
>
>
> On 12-Apr-2016, at 11:51 PM, HAREESHKUMAR K Agasanapura <
harihusk...@gmail.com> wrote:
>
>> http://m.prajavani.net/article/2016_04_12/401109
>>
>> ಮಹಾನಗರದಲ್ಲೊಂದು ಪುಟ್ಟ ಅರಣ್ಯ’
>>
>> ಕಿರು ಅರಣ್ಯದ ಸಂಪೂರ್ಣ ಮಾಹಿತಿಯುಳ್ಳ ಫಲಕ
>>
>> ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಮರ
>>
>> ಐಐಎಸ್‌ಸಿ ಸಂಸ್ಥೆಗೆ ನೂರು ವರ್ಷ ತುಂಬಿದಾಗ ನಿರ್ಮಿಸಿದ ಕೊಳ
>>
>> ಹಾಲೇಕಾಯಿ ಬಳ್ಳಿ
>>
>> ಟಿ.ವಿ. ರಾಮಚಂದ್ರ
>>
>> PreviousNext
>>
>> 12 Apr, 2016
>>
>> ಅನಿತಾ ಈ.
>>
>> ಸೂರ್ಯ ನೆತ್ತಿಗೇರುವ ಮೊದಲೇ ಬಿಸಿಲ ತಾಪ. ಎಲ್ಲಿಯಾದರೂ ಚಿಕ್ಕ ಮರ ಕಂಡರೂ ತುಸು ಹೊತ್ತು
ನಿಂತು ದಣಿವಾರಿಸಿಕೊಳ್ಳುವ ಪ್ರಯತ್ನ. ಸಿಗ್ನಲ್‌ ಬಿಡುವ ಮೊದಲೇ ವಾಹನ ನುಗ್ಗಿಸುವ ಜನರು
ಸಿಗ್ನಲ್‌ನಲ್ಲಿ ಮರದ ನೆರಳಿಗಾಗಿ ಹುಡುಕಾಡುತ್ತಾರೆ.  ಸದ್ಯ ಮರಗಳಿಲ್ಲದೆ ಬೋಳಾಗಿರುವ
ಪ್ರತಿಯೊಂದು ನಗರಗಳ ಪರಿಸ್ಥಿತಿ ಇದು.
>>
>> ನೆತ್ತಿಗೇರಿದ ಸೂರ್ಯನ ಉರಿ ಬಿಸಿಲಿನಲ್ಲೇ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಭಾರತೀಯ
ವಿಜ್ಞಾನ ಸಂಸ್ಥೆಯತ್ತ (ಐಐಎಸ್‌ಸಿ) ಬೆಳೆಸಿದ ಪಯಣ. ಗಿಜಿಗುಡುವ ವಾಹನ, ಅವುಗಳು ಹೊರ ಹಾಕುವ
ಕೆಟ್ಟ ಹೊಗೆಯನ್ನೇ ಉಸಿರಾಡುತ್ತಾ  ಐಐಎಸ್‌ಸಿ ತಲುಪುವಷ್ಟರಲ್ಲಿ ಜೀವನವೇ ಸಾಕೆನಿಸಿತ್ತು.
ಆದರೆ ಎಲೆಮರೆ ಕಾಯಿಯಂತೆ ಬೆಳೆದಿರುವ ಕಿರು ಅರಣ್ಯವನ್ನು ನೋಡುವ ತವಕ ಇದನ್ನೆಲ್ಲ ಸಹಿಸುವ
ಶಕ್ತಿ ನೀಡಿತ್ತು.
>>
>> ಐಐಎಸ್‌ಸಿ ಆವರಣದೊಳಗೆ ಕಾಲಿಡುತ್ತಿದ್ದಂತೆಯೇ ಮರಗಳ ನೆರಳು, ತಂಪಾದ ಗಾಳಿ, ಉದುರಿರುವ
ಹೂ, ಎಲೆಗಳು ಮೆಲ್ಲನೆ ಹಾರುತ್ತ ಕಾಲ ಬಳಿ ಬಂದು ಕೋರಿದ ಸ್ವಾಗತ ಒಮ್ಮೆಲೆ ಎಲ್ಲವನ್ನೂ
ಮರೆಸುವಂತೆ ಮಾಡಿತ್ತು. ಮಾರ್ಗದುದ್ದಕ್ಕೂ ಸಾಲು ಮರಗಳ ನೆರಳಿನಲ್ಲಿ ಸುಮಾರು ಎರಡೂವರೆ
ಕಿ.ಮೀ. ನಡೆದರೂ ಸ್ವಲ್ಪವೂ ಬೆವರಿಳಿಯಲಿಲ್ಲ. ರಸ್ತೆ ಬದಿ ಜೊತೆಯಲ್ಲೇ ಹೆಜ್ಜೆ ಹಾಕಿದ
ಬೆಳ್ಳಕ್ಕಿಗಳ ಜೊತೆಗೆ ಇಂಪಾದ ಹಕ್ಕಿಗಳ ಕಲರವ ಮನಸ್ಸು ಬೇರೆಡೆ ಹೋಗದಂತೆ ಮಾಡಿತ್ತು.
>>
>> ಸುಮಾರು 400 ಎಕರೆ ಪ್ರದೇಶದಲ್ಲಿರುವ ಐಐಎಸ್‌ಸಿ ಆವರಣದಲ್ಲಿ ‘ಕಿರು ಅರಣ್ಯ’
ಸಮೀಪಿಸುತ್ತಿದ್ದಂತೆಯೇ ತಂಪಾದ ಗಾಳಿ ಮೈಸೋಕುವ ಅನುಭವ. ಎತ್ತರದ ಮರಗಳು, ಪೊದೆಗಳು,
ಬಿದಿರಿನ ಗುಂಪು, ಬಳ್ಳಿಗಳಿಂದ ಕೂಡಿದ ಗಿಡಗಂಟೆಗಳು. ಅರಣ್ಯದೊಳಗೆ ಕಾಲಿಡಲು ಭಯವಾಗುವ
ವಾತಾವರಣ. ನಿಜಕ್ಕೂ ನಗರ ಹೃದಯ ಭಾಗದಲ್ಲಿ ಇಂತಹ ಅನುಭವ ಇದೇ ಮೊದಲು. 22 ಸಾವಿರ ಮರಗಳಿರುವ
ಐಐಎಸ್‌ಸಿಯಲ್ಲಿ 500 ಉತ್ತರ ಕನ್ನಡದ ಮರಗಳಿವೆ. ಈ ಪ್ರದೇಶ ಶೇಕಡ 55ರಷ್ಟು ಹಸಿರಿನಿಂದ
ಕೂಡಿದ್ದು, ಇಲ್ಲಿನ ಉಷ್ಣಾಂಶ ನಗರದ ಬೇರೆ ಪ್ರದೇಶಕ್ಕೆ ಹೋಲಿಸಿದರೆ ಎರಡು ಡಿಗ್ರಿಯಷ್ಟು
ಕಡಿಮೆ.
>>
>> ಕಿರು ಅರಣ್ಯದ ಹುಟ್ಟು
>> ದೇಶದಲ್ಲಿನ ಸಸ್ಯ ವರ್ಗದಲ್ಲಿ ತುಂಬಾ ವೈವಿಧ್ಯವಿದೆ. ಸಣ್ಣ, ದೊಡ್ಡ ಗಿಡಗಳು, ಎಲೆ
ಉದುರಿಸುವ ಗಿಡಗಳು, ವರ್ಷ ಪೂರ್ತಿ ಹಸಿರಾಗಿರುವ ನಿತ್ಯ ಹರಿದ್ವರ್ಣ ಸೇರಿದಂತೆ ವಿವಿಧ
ಪ್ರಭೇದಗಳ ಸಸ್ಯ ವರ್ಗವಿದೆ. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಸ್ಥಳೀಯ ಸಸ್ಯ
ಪ್ರಭೇದಗಳ ಮರು ಹುಟ್ಟು ಪ್ರಕ್ರಿಯೆಗೆ ಅಡಚಣೆಯಾಗಿ ಸಸ್ಯಗಳ ವಿವಿಧತೆಗೆ ಕುಂದು
ಉಂಟಾಗುತ್ತಿತ್ತು.
>>
>> ಈ ಹಿನ್ನೆಲೆಯಲ್ಲಿ ವನ್ಯ ಮತ್ತು ಸ್ಥಳೀಯ ಪ್ರಭೇದಗಳನ್ನು ದೇಶದ ಬೇರೆ ಬೇರೆ ಭಾಗಗಳಲ್ಲಿ
ಬೆಳೆಸುವ ಅಗತ್ಯ ತಲೆದೋರಿತ್ತು. ಈ ವಿಷಯವನ್ನು ಗಮನದಲ್ಲಿ ಇರಿಸಿಕೊಂಡು ಐಐಎಸ್‌ಸಿಯ ಪರಿಸರ
ವಿಜ್ಞಾನ ವಿಭಾಗ ಈ ‘ಕಿರು ಅರಣ್ಯ’ ಯೋಜನೆ ಕೈಗೆತ್ತಿಕೊಂಡಿತ್ತು. 30 ವರ್ಷಗಳ ಹಿಂದೆ
ಐಐಎಸ್‌ಸಿಯ ಆವರಣದಲ್ಲಿ ಅಧ್ಯಯನಕ್ಕಾಗಿ 1.5 ಹೆಕ್ಟೇರ್‌ ಪ್ರದೇಶದಲ್ಲಿ ಈ ಮಿನಿ ಫಾರೆಸ್ಟ್‌
ನಿರ್ಮಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ‘ಸಿ ಇಎಸ್ ಫೀಲ್ಡ್‌ ಸೇಷ್ಟನ್‌
ನರ್ಸರಿ’ಯಿಂದ ಪಶ್ಚಿಮಘಟ್ಟದಲ್ಲಿ ಬೆಳೆಯುವ 49 ಪ್ರಭೇದಗಳ 500 ವನ್ಯ ಗಿಡಗಳನ್ನು ತಂದು
ನೆಡಲಾಗಿತ್ತು.
>>
>> ಪಶ್ಚಿಮ ಘಟ್ಟದಲ್ಲಿ ಬೆಳೆಯುವ ಸಸ್ಯ ಪ್ರಭೇದಗಳು ದಖ್ಖನ್‌ ಪ್ರಸ್ಥಭೂಮಿಯ ವಾತಾವರಣದಲ್ಲಿ
ಬೆಳೆಯಬಲ್ಲವೇ ಎಂದು ಅಧ್ಯಯನ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆಗ
ಪರಿಸರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿ ಸಿ.ಎನ್‌.ಆರ್‌. ರಾವ್‌ ಅವರ
ನೇತೃತ್ವದಲ್ಲಿ ಈ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಆಗಿನ ಸಮಯದಲ್ಲಿ ಕೇವಲ
ಪಾರ್ಥೇನಿಯಂನಿಂದ ಕೂಡಿದ್ದ ಈ ಸ್ಥಳದಲ್ಲಿ ಗಿಡಗಳು ಬೆಳೆಯುತ್ತಿದ್ದಂತೆಯೇ ಪಾರ್ಥೇನಿಯಂ
ಸಂಪೂರ್ಣವಾಗಿ ಮಾಯವಾಗಿತ್ತು.
>>
>> ‘ಪಶ್ಚಿಮ ಘಟ್ಟಗಳು ಯುನೈಟೆಡ್‌ ನೇಷನ್ಸ್‌ ಗುರುತಿಸಿರುವ 34 ‘ಬಯೊ ಡೈವರ್ಸಿಟಿ ಹಾಟ್‌
ಸ್ಪಾಟ್‌’ಗಳಲ್ಲಿ ಒಂದು. ಅತೀ ಸೂಕ್ಷ್ಮ ಪರಿಸರ ಹೊಂದಿರುವ ಈ ಪ್ರದೇಶದಲ್ಲಿ ನಿತ್ಯ
ಹರಿದ್ವರ್ಣ, ಎಲೆ ಉದುರುವ ಕಾಡು, ಗಿಡಗಂಟೆ ಪೊದೆಗಳ ರೀತಿ ಸಸ್ಯಗಳು, ಶೋಲಾ ಕಾಡು,
ಹುಲ್ಲುಗಾವಲು, ವರ್ಷದಲ್ಲಿ ಕೆಲ ಕಾಲ ಮಾತ್ರ ಹಸಿರಾಗಿರುವ ಸಸ್ಯ ಪ್ರಭೇದಗಳಿವೆ. ಇಲ್ಲಿ
ಬಿಸಿಲು, ಮಳೆ, ಆರ್ದ್ರತೆ, ಸಮುದ್ರ ಮಟ್ಟಕ್ಕಿಂತ ಎತ್ತರ, ಟೊಪೊಗ್ರಫಿಯ ಅನನ್ಯ ಸಂಯೋಜನೆ
ಇರುವುದರಿಂದ ಜೀವ ಹಾಗೂ ಸಸ್ಯಗಳಲ್ಲಿ ವೈವಿಧ್ಯ ಇದೆ. ಈ ಕಾರಣದಿಂದಲೇ ಇಂತಹ ಪರಿಸರದಲ್ಲಿ
ಬೆಳೆಯುವ ಸಸ್ಯ ವರ್ಗ ತದ್ವಿರುದ್ಧವಾಗಿರುವ ಪರಿಸರದಲ್ಲಿ ಜೀವಿಸಬಲ್ಲದೇ ಎಂದು ಪರೀಕ್ಷಿಸಲು
ಆಗ 49 ಪ್ರಭೇದದ ಸಸಿಗಳನ್ನು ನೆಡಲಾಗಿತ್ತು’ ಎನ್ನುತ್ತಾರೆ ಆಗ ಐಐಎಸ್‌ಸಿಯ ಪರಿಸರ ವಿಜ್ಞಾನ
ವಿಭಾಗದಲ್ಲಿ ವಿದ್ಯಾರ್ಥಿಯಾಗಿದ್ದ ಟಿ.ವಿ ರಾಮಚಂದ್ರ.
>>
>> ‘ಸುಮಾರು 30 ವರ್ಷಗಳ ಹಿಂದೆ ಹಾಕಿದ್ದ ಗಿಡಗಳು ಈಗ ಕಾಡಾಗಿದೆ. ಮೊದಲು ದಖ್ಖನ್‌
ಪ್ರಸ್ಥಭೂಮಿಯ ಪೊದೆಗಳಿದ್ದ ಜಾಗದಲ್ಲಿ ಈಗ ಕಾಡಿದೆ. ಆಗ ಮಾಡಿದ ಪ್ರಯೋಗದಿಂದ ಪಶ್ಚಿಮ ಘಟ್ಟದ
ಸಸ್ಯ ಪ್ರಭೇದಗಳಲ್ಲಿ ಯಾವ ವಾತಾವರಣಕ್ಕಾದರೂ ಹೊಂದಿಕೊಳ್ಳುವ ಗುಣವಿರುವುದು ಸಾಬೀತಾಗಿದೆ.
ಅದರಲ್ಲೂ ಇಲ್ಲಿನ ಸ್ಥಳೀಯ ಸಸ್ಯ ವರ್ಗದೊಂದಿಗೆ ಸಹಬಾಳ್ವೆಯಿಂದ ವನ್ಯ ಸಸ್ಯ ವರ್ಗ
ಬೆಳೆಯುತ್ತಿವೆ. ಮಳೆಯ ಪ್ರಮಾಣ, ತೇವಾಂಶ, ಮಣ್ಣಿನ ಗುಣ ಸೇರಿದಂತೆ ಎಲ್ಲದರಲ್ಲೂ ಬಹಳ
ವ್ಯತ್ಯಾಸವಿದೆ. ಆದರೂ ಎರಡೂ ಪ್ರಭೇದಗಳು ಸಂಪೂರ್ಣವಾಗಿ ಹೊಂದಾಣಿಕೆ ಮಾಡಿಕೊಂಡು ಬೆಳೆದಿವೆ.
>>
>> ಕಿರು ಅರಣ್ಯದಲ್ಲಿನ ಮರ ಮತ್ತು ಗಿಡಗಳ ಬೆಳವಣಿಗೆ, ಹೂ ಬಿಡುವುದು ಸೇರಿದಂತೆ ಎಲ್ಲವೂ
ಪಶ್ಚಿಮ ಘಟ್ಟದಲ್ಲಿ ಬೆಳೆಯುವ ರೀತಿಯಲ್ಲೇ ಇದೆ. ಹೀಗಾಗಿಯೇ ಪಶ್ಚಿಮ ಘಟ್ಟದ ಸಸ್ಯ ಪ್ರಭೇದ
ಅವಕಾಶವಾದಿ ಸ್ವಭಾವ ಹೊಂದಿರುವುದು ತಿಳಿಯುತ್ತದೆ’ ಎನ್ನುತ್ತಾರೆ ಅವರು. ನಿತ್ಯ ಹರಿದ್ವರ್ಣ
ಕಾಡುಗಳ ಮರಗಳು ಎತ್ತರವಾಗಿ ಬೆಳೆದು ನೆರಳು ನೀಡುತ್ತವೆ.
>>
>> ಇದರಿಂದಾಗಿ ಈ ಕಾಡಿನಲ್ಲಿ ನಗರ ಪ್ರದೇಶಕ್ಕಿಂತ ಸುಮಾರು 4 ಡಿಗ್ರಿಯಷ್ಟು ಉಷ್ಣತೆ ಕಡಿಮೆ
ಇರುತ್ತದೆ. ಜೊತೆಗೆ ಈ ಮರಗಳಿಂದಾಗಿ ಕಿರು ಅರಣ್ಯದಲ್ಲಿ ಆರ್ದ್ರತೆ ಹೆಚ್ಚಿದೆ. ಹಣ್ಣಾಗಿ
ಉದುರುವ ಎಲೆಗಳು ಕೊಳೆತು ಆಗುವ ಗೊಬ್ಬರದಿಂದ ಇಲ್ಲಿನ ಮಣ್ಣ

[ms-stf '56948'] ಮಹಾನಗರದಲ್ಲೊಂದು ಪುಟ್ಟ ಅರಣ್ಯ

2016-04-12 Thread HAREESHKUMAR K Agasanapura
http://m.prajavani.net/article/2016_04_12/401109

*ಮಹಾನಗರದಲ್ಲೊಂದು ಪುಟ್ಟ ಅರಣ್ಯ’*

ಕಿರು ಅರಣ್ಯದ ಸಂಪೂರ್ಣ ಮಾಹಿತಿಯುಳ್ಳ ಫಲಕ

ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಮರ

ಐಐಎಸ್‌ಸಿ ಸಂಸ್ಥೆಗೆ ನೂರು ವರ್ಷ ತುಂಬಿದಾಗ ನಿರ್ಮಿಸಿದ ಕೊಳ

ಹಾಲೇಕಾಯಿ ಬಳ್ಳಿ

ಟಿ.ವಿ. ರಾಮಚಂದ್ರ

Previous Next


12 Apr, 2016

ಅನಿತಾ ಈ.








ಸೂರ್ಯ ನೆತ್ತಿಗೇರುವ ಮೊದಲೇ ಬಿಸಿಲ ತಾಪ. ಎಲ್ಲಿಯಾದರೂ ಚಿಕ್ಕ ಮರ ಕಂಡರೂ ತುಸು ಹೊತ್ತು
ನಿಂತು ದಣಿವಾರಿಸಿಕೊಳ್ಳುವ ಪ್ರಯತ್ನ. ಸಿಗ್ನಲ್‌ ಬಿಡುವ ಮೊದಲೇ ವಾಹನ ನುಗ್ಗಿಸುವ ಜನರು
ಸಿಗ್ನಲ್‌ನಲ್ಲಿ ಮರದ ನೆರಳಿಗಾಗಿ ಹುಡುಕಾಡುತ್ತಾರೆ.  ಸದ್ಯ ಮರಗಳಿಲ್ಲದೆ ಬೋಳಾಗಿರುವ
ಪ್ರತಿಯೊಂದು ನಗರಗಳ ಪರಿಸ್ಥಿತಿ ಇದು.

ನೆತ್ತಿಗೇರಿದ ಸೂರ್ಯನ ಉರಿ ಬಿಸಿಲಿನಲ್ಲೇ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಭಾರತೀಯ
ವಿಜ್ಞಾನ ಸಂಸ್ಥೆಯತ್ತ (ಐಐಎಸ್‌ಸಿ) ಬೆಳೆಸಿದ ಪಯಣ. ಗಿಜಿಗುಡುವ ವಾಹನ, ಅವುಗಳು ಹೊರ ಹಾಕುವ
ಕೆಟ್ಟ ಹೊಗೆಯನ್ನೇ ಉಸಿರಾಡುತ್ತಾ  ಐಐಎಸ್‌ಸಿ ತಲುಪುವಷ್ಟರಲ್ಲಿ ಜೀವನವೇ ಸಾಕೆನಿಸಿತ್ತು.
ಆದರೆ ಎಲೆಮರೆ ಕಾಯಿಯಂತೆ ಬೆಳೆದಿರುವ ಕಿರು ಅರಣ್ಯವನ್ನು ನೋಡುವ ತವಕ ಇದನ್ನೆಲ್ಲ ಸಹಿಸುವ
ಶಕ್ತಿ ನೀಡಿತ್ತು.

ಐಐಎಸ್‌ಸಿ ಆವರಣದೊಳಗೆ ಕಾಲಿಡುತ್ತಿದ್ದಂತೆಯೇ ಮರಗಳ ನೆರಳು, ತಂಪಾದ ಗಾಳಿ, ಉದುರಿರುವ ಹೂ,
ಎಲೆಗಳು ಮೆಲ್ಲನೆ ಹಾರುತ್ತ ಕಾಲ ಬಳಿ ಬಂದು ಕೋರಿದ ಸ್ವಾಗತ ಒಮ್ಮೆಲೆ ಎಲ್ಲವನ್ನೂ
ಮರೆಸುವಂತೆ ಮಾಡಿತ್ತು. ಮಾರ್ಗದುದ್ದಕ್ಕೂ ಸಾಲು ಮರಗಳ ನೆರಳಿನಲ್ಲಿ ಸುಮಾರು ಎರಡೂವರೆ
ಕಿ.ಮೀ. ನಡೆದರೂ ಸ್ವಲ್ಪವೂ ಬೆವರಿಳಿಯಲಿಲ್ಲ. ರಸ್ತೆ ಬದಿ ಜೊತೆಯಲ್ಲೇ ಹೆಜ್ಜೆ ಹಾಕಿದ
ಬೆಳ್ಳಕ್ಕಿಗಳ ಜೊತೆಗೆ ಇಂಪಾದ ಹಕ್ಕಿಗಳ ಕಲರವ ಮನಸ್ಸು ಬೇರೆಡೆ ಹೋಗದಂತೆ ಮಾಡಿತ್ತು.

ಸುಮಾರು 400 ಎಕರೆ ಪ್ರದೇಶದಲ್ಲಿರುವ ಐಐಎಸ್‌ಸಿ ಆವರಣದಲ್ಲಿ ‘ಕಿರು ಅರಣ್ಯ’
ಸಮೀಪಿಸುತ್ತಿದ್ದಂತೆಯೇ ತಂಪಾದ ಗಾಳಿ ಮೈಸೋಕುವ ಅನುಭವ. ಎತ್ತರದ ಮರಗಳು, ಪೊದೆಗಳು,
ಬಿದಿರಿನ ಗುಂಪು, ಬಳ್ಳಿಗಳಿಂದ ಕೂಡಿದ ಗಿಡಗಂಟೆಗಳು. ಅರಣ್ಯದೊಳಗೆ ಕಾಲಿಡಲು ಭಯವಾಗುವ
ವಾತಾವರಣ. ನಿಜಕ್ಕೂ ನಗರ ಹೃದಯ ಭಾಗದಲ್ಲಿ ಇಂತಹ ಅನುಭವ ಇದೇ ಮೊದಲು. 22 ಸಾವಿರ ಮರಗಳಿರುವ
ಐಐಎಸ್‌ಸಿಯಲ್ಲಿ 500 ಉತ್ತರ ಕನ್ನಡದ ಮರಗಳಿವೆ. ಈ ಪ್ರದೇಶ ಶೇಕಡ 55ರಷ್ಟು ಹಸಿರಿನಿಂದ
ಕೂಡಿದ್ದು, ಇಲ್ಲಿನ ಉಷ್ಣಾಂಶ ನಗರದ ಬೇರೆ ಪ್ರದೇಶಕ್ಕೆ ಹೋಲಿಸಿದರೆ ಎರಡು ಡಿಗ್ರಿಯಷ್ಟು
ಕಡಿಮೆ.

*ಕಿರು ಅರಣ್ಯದ ಹುಟ್ಟು*
ದೇಶದಲ್ಲಿನ ಸಸ್ಯ ವರ್ಗದಲ್ಲಿ ತುಂಬಾ ವೈವಿಧ್ಯವಿದೆ. ಸಣ್ಣ, ದೊಡ್ಡ ಗಿಡಗಳು, ಎಲೆ
ಉದುರಿಸುವ ಗಿಡಗಳು, ವರ್ಷ ಪೂರ್ತಿ ಹಸಿರಾಗಿರುವ ನಿತ್ಯ ಹರಿದ್ವರ್ಣ ಸೇರಿದಂತೆ ವಿವಿಧ
ಪ್ರಭೇದಗಳ ಸಸ್ಯ ವರ್ಗವಿದೆ. ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಸ್ಥಳೀಯ ಸಸ್ಯ
ಪ್ರಭೇದಗಳ ಮರು ಹುಟ್ಟು ಪ್ರಕ್ರಿಯೆಗೆ ಅಡಚಣೆಯಾಗಿ ಸಸ್ಯಗಳ ವಿವಿಧತೆಗೆ ಕುಂದು
ಉಂಟಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ವನ್ಯ ಮತ್ತು ಸ್ಥಳೀಯ ಪ್ರಭೇದಗಳನ್ನು ದೇಶದ ಬೇರೆ ಬೇರೆ ಭಾಗಗಳಲ್ಲಿ
ಬೆಳೆಸುವ ಅಗತ್ಯ ತಲೆದೋರಿತ್ತು. ಈ ವಿಷಯವನ್ನು ಗಮನದಲ್ಲಿ ಇರಿಸಿಕೊಂಡು ಐಐಎಸ್‌ಸಿಯ ಪರಿಸರ
ವಿಜ್ಞಾನ ವಿಭಾಗ ಈ ‘ಕಿರು ಅರಣ್ಯ’ ಯೋಜನೆ ಕೈಗೆತ್ತಿಕೊಂಡಿತ್ತು. 30 ವರ್ಷಗಳ ಹಿಂದೆ
ಐಐಎಸ್‌ಸಿಯ ಆವರಣದಲ್ಲಿ ಅಧ್ಯಯನಕ್ಕಾಗಿ 1.5 ಹೆಕ್ಟೇರ್‌ ಪ್ರದೇಶದಲ್ಲಿ ಈ ಮಿನಿ ಫಾರೆಸ್ಟ್‌
ನಿರ್ಮಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿರುವ ‘ಸಿ ಇಎಸ್ ಫೀಲ್ಡ್‌ ಸೇಷ್ಟನ್‌
ನರ್ಸರಿ’ಯಿಂದ ಪಶ್ಚಿಮಘಟ್ಟದಲ್ಲಿ ಬೆಳೆಯುವ 49 ಪ್ರಭೇದಗಳ 500 ವನ್ಯ ಗಿಡಗಳನ್ನು ತಂದು
ನೆಡಲಾಗಿತ್ತು.

ಪಶ್ಚಿಮ ಘಟ್ಟದಲ್ಲಿ ಬೆಳೆಯುವ ಸಸ್ಯ ಪ್ರಭೇದಗಳು ದಖ್ಖನ್‌ ಪ್ರಸ್ಥಭೂಮಿಯ ವಾತಾವರಣದಲ್ಲಿ
ಬೆಳೆಯಬಲ್ಲವೇ ಎಂದು ಅಧ್ಯಯನ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆಗ
ಪರಿಸರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿ ಸಿ.ಎನ್‌.ಆರ್‌. ರಾವ್‌ ಅವರ
ನೇತೃತ್ವದಲ್ಲಿ ಈ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಆಗಿನ ಸಮಯದಲ್ಲಿ ಕೇವಲ
ಪಾರ್ಥೇನಿಯಂನಿಂದ ಕೂಡಿದ್ದ ಈ ಸ್ಥಳದಲ್ಲಿ ಗಿಡಗಳು ಬೆಳೆಯುತ್ತಿದ್ದಂತೆಯೇ ಪಾರ್ಥೇನಿಯಂ
ಸಂಪೂರ್ಣವಾಗಿ ಮಾಯವಾಗಿತ್ತು.

‘ಪಶ್ಚಿಮ ಘಟ್ಟಗಳು ಯುನೈಟೆಡ್‌ ನೇಷನ್ಸ್‌ ಗುರುತಿಸಿರುವ 34 ‘ಬಯೊ ಡೈವರ್ಸಿಟಿ ಹಾಟ್‌
ಸ್ಪಾಟ್‌’ಗಳಲ್ಲಿ ಒಂದು. ಅತೀ ಸೂಕ್ಷ್ಮ ಪರಿಸರ ಹೊಂದಿರುವ ಈ ಪ್ರದೇಶದಲ್ಲಿ ನಿತ್ಯ
ಹರಿದ್ವರ್ಣ, ಎಲೆ ಉದುರುವ ಕಾಡು, ಗಿಡಗಂಟೆ ಪೊದೆಗಳ ರೀತಿ ಸಸ್ಯಗಳು, ಶೋಲಾ ಕಾಡು,
ಹುಲ್ಲುಗಾವಲು, ವರ್ಷದಲ್ಲಿ ಕೆಲ ಕಾಲ ಮಾತ್ರ ಹಸಿರಾಗಿರುವ ಸಸ್ಯ ಪ್ರಭೇದಗಳಿವೆ. ಇಲ್ಲಿ
ಬಿಸಿಲು, ಮಳೆ, ಆರ್ದ್ರತೆ, ಸಮುದ್ರ ಮಟ್ಟಕ್ಕಿಂತ ಎತ್ತರ, ಟೊಪೊಗ್ರಫಿಯ ಅನನ್ಯ ಸಂಯೋಜನೆ
ಇರುವುದರಿಂದ ಜೀವ ಹಾಗೂ ಸಸ್ಯಗಳಲ್ಲಿ ವೈವಿಧ್ಯ ಇದೆ. ಈ ಕಾರಣದಿಂದಲೇ ಇಂತಹ ಪರಿಸರದಲ್ಲಿ
ಬೆಳೆಯುವ ಸಸ್ಯ ವರ್ಗ ತದ್ವಿರುದ್ಧವಾಗಿರುವ ಪರಿಸರದಲ್ಲಿ ಜೀವಿಸಬಲ್ಲದೇ ಎಂದು ಪರೀಕ್ಷಿಸಲು
ಆಗ 49 ಪ್ರಭೇದದ ಸಸಿಗಳನ್ನು ನೆಡಲಾಗಿತ್ತು’ ಎನ್ನುತ್ತಾರೆ ಆಗ ಐಐಎಸ್‌ಸಿಯ ಪರಿಸರ ವಿಜ್ಞಾನ
ವಿಭಾಗದಲ್ಲಿ ವಿದ್ಯಾರ್ಥಿಯಾಗಿದ್ದ ಟಿ.ವಿ ರಾಮಚಂದ್ರ.

‘ಸುಮಾರು 30 ವರ್ಷಗಳ ಹಿಂದೆ ಹಾಕಿದ್ದ ಗಿಡಗಳು ಈಗ ಕಾಡಾಗಿದೆ. ಮೊದಲು ದಖ್ಖನ್‌
ಪ್ರಸ್ಥಭೂಮಿಯ ಪೊದೆಗಳಿದ್ದ ಜಾಗದಲ್ಲಿ ಈಗ ಕಾಡಿದೆ. ಆಗ ಮಾಡಿದ ಪ್ರಯೋಗದಿಂದ ಪಶ್ಚಿಮ ಘಟ್ಟದ
ಸಸ್ಯ ಪ್ರಭೇದಗಳಲ್ಲಿ ಯಾವ ವಾತಾವರಣಕ್ಕಾದರೂ ಹೊಂದಿಕೊಳ್ಳುವ ಗುಣವಿರುವುದು ಸಾಬೀತಾಗಿದೆ.
ಅದರಲ್ಲೂ ಇಲ್ಲಿನ ಸ್ಥಳೀಯ ಸಸ್ಯ ವರ್ಗದೊಂದಿಗೆ ಸಹಬಾಳ್ವೆಯಿಂದ ವನ್ಯ ಸಸ್ಯ ವರ್ಗ
ಬೆಳೆಯುತ್ತಿವೆ. ಮಳೆಯ ಪ್ರಮಾಣ, ತೇವಾಂಶ, ಮಣ್ಣಿನ ಗುಣ ಸೇರಿದಂತೆ ಎಲ್ಲದರಲ್ಲೂ ಬಹಳ
ವ್ಯತ್ಯಾಸವಿದೆ. ಆದರೂ ಎರಡೂ ಪ್ರಭೇದಗಳು ಸಂಪೂರ್ಣವಾಗಿ ಹೊಂದಾಣಿಕೆ ಮಾಡಿಕೊಂಡು ಬೆಳೆದಿವೆ.

ಕಿರು ಅರಣ್ಯದಲ್ಲಿನ ಮರ ಮತ್ತು ಗಿಡಗಳ ಬೆಳವಣಿಗೆ, ಹೂ ಬಿಡುವುದು ಸೇರಿದಂತೆ ಎಲ್ಲವೂ
ಪಶ್ಚಿಮ ಘಟ್ಟದಲ್ಲಿ ಬೆಳೆಯುವ ರೀತಿಯಲ್ಲೇ ಇದೆ. ಹೀಗಾಗಿಯೇ ಪಶ್ಚಿಮ ಘಟ್ಟದ ಸಸ್ಯ ಪ್ರಭೇದ
ಅವಕಾಶವಾದಿ ಸ್ವಭಾವ ಹೊಂದಿರುವುದು ತಿಳಿಯುತ್ತದೆ’ ಎನ್ನುತ್ತಾರೆ ಅವರು. ನಿತ್ಯ ಹರಿದ್ವರ್ಣ
ಕಾಡುಗಳ ಮರಗಳು ಎತ್ತರವಾಗಿ 

[ms-stf '55893'] ಗುಜರಿ ಸೇರಿದ ಜಲಚಕ್ರಕ್ಕೆ ರಿಪೇರಿ ಸಾಧ್ಯ

2016-03-23 Thread HAREESHKUMAR K Agasanapura
http://m.prajavani.net/article/2016_03_24/396640

*ಗುಜರಿ ಸೇರಿದ ಜಲಚಕ್ರಕ್ಕೆ ರಿಪೇರಿ ಸಾಧ್ಯ*

24 Mar, 2016

ನಾಗೇಶ್ ಹೆಗಡೆ








ಹೆಸರಾಂತ ನಿಸರ್ಗ ವಿಜ್ಞಾನಿ ಡೇವಿಡ್ ಅಟೆನ್‌ಬರೊ ನಮಗೊಂದು ಕೌತುಕದ ವಿಡಿಯೊ ದೃಶ್ಯವನ್ನು
ತೋರಿಸುತ್ತಾರೆ: ನೀರಿನ ಪುಟ್ಟ ಮಡುವೊಂದು ಆಫ್ರಿಕದ ಉರಿ ಬಿಸಿಲಲ್ಲಿ ಒಣಗುತ್ತಿದೆ. ನೂರಾರು
ಮರಿಗಪ್ಪೆಗಳು ಮುಷ್ಟಿನೀರಲ್ಲಿ ವಿಲವಿಲ ಪರದಾಡುತ್ತಿವೆ.

ಇನ್ನೊಂದರ್ಧ ಗಂಟೆಯಲ್ಲಿ ಅವೆಲ್ಲ ಸತ್ತೇ ಹೋಗಬಹುದು. ಪಕ್ಕದಲ್ಲೇ ಒಂದೊಂದೂವರೆ ಮೀಟರ್
ಆಚೆಗೆ ಇನ್ನೊಂದು ಕೊಳದಲ್ಲಿ ನೀರಿದೆ.

ಪೊದೆಯಲ್ಲಿದ್ದ ಬೊಗಸೆಗಾತ್ರದ ಕಪ್ಪೆಯೊಂದು (ಬುಲ್ ಫ್ರಾಗ್) ಅತ್ತ ಇತ್ತ ನೋಡುತ್ತ, ಏನೋ
ನಿರ್ಧಾರಕ್ಕೆ ಬಂದಂತೆ ನೀರಿದ್ದ ಹೊಂಡಕ್ಕೆ ಜಿಗಿಯುತ್ತದೆ. ಹಿಮ್ಮೊಗ ಈಜುತ್ತ, ತೆವಳುತ್ತ
ಕೊಳದ ಅಂಚಿಗೆ ಬಂದು ಹಿಂಗಾಲುಗಳಿಂದ ಹಳ್ಳ ತೋಡಲು ತೊಡಗುತ್ತದೆ.

ಕೆಸರನ್ನು ಅತ್ತ ಇತ್ತ ತಳ್ಳುತ್ತ ಪುಟ್ಟದೊಂದು ಕಾಲುವೆಯನ್ನು ನಿರ್ಮಿಸುತ್ತ ಅದೆಷ್ಟೊ
ಹೊತ್ತಿನ ನಂತರ ಒಣ ಹೊಂಡದತ್ತ ನೀರನ್ನು ಹರಿಸುತ್ತದೆ. ನೀರಿಗಾಗಿ ಪರದಾಡಿ ದಣಿದಿದ್ದ
ಮರಿಗಪ್ಪೆಗಳು ಮತ್ತೆ ಗೆಲುವಾಗುತ್ತವೆ. ತನ್ನ ಮರಿಗಳನ್ನು ಉಳಿಸಲೆಂದು ಅಪ್ಪಕಪ್ಪೆ ನಡೆಸುವ
ಸಾಹಸ ಅದು.

ರಾಯಚೂರಿನ ಉಷ್ಣಸ್ಥಾವರವನ್ನು ತಂಪು ಮಾಡಬೇಕಿದ್ದ ನೀರು ತಮಗೇ ಬೇಕೆಂದು ಆಂಧ್ರದ ರೈತರು
ಮೊನ್ನೆ ನೀರಿನ ಕಟ್ಟೆಯನ್ನು ಒಡೆಯುತ್ತಿರುವ ಚಿತ್ರವನ್ನು ನೋಡಿದಾಗ ಅಥವಾ ಪಂಜಾಬಿನ
ಸಾಲುಸಾಲು ಬುಲ್‌ಡೋಜರ್‌ಗಳು ಹರಿಯಾಣಾದತ್ತ ಹೋಗುತ್ತಿದ್ದ ನೀರಾವರಿ ಕಾಲುವೆಯನ್ನು
ಮುಚ್ಚಲೆಂದು ಗಿಡಮರಗಳನ್ನು, ಮಣ್ಣುಕಲ್ಲುಗಳನ್ನು ತರಿದು ತುಂಬುತ್ತಿದ್ದಾಗ ನಮಗೆ
ಮನುಷ್ಯಲೋಕದ ಹೊಸಹೊಸ ಮಗ್ಗುಲುಗಳು ಕಣ್ಣಿಗೆ ಕಟ್ಟುತ್ತವೆ.

ಮಹಾರಾಷ್ಟ್ರದ ನಾಂದೇಡದ ಹಳ್ಳಿಯೊಂದಕ್ಕೆ ಎಲ್ಲೋ ಐದಾರು ದಿನಗಳಿಗೊಮ್ಮೆ ಟ್ಯಾಂಕರ್
ಬರುತ್ತದೆ. ಆ ಊರಿಗೆ ಬೇರೆ ಜಲಮೂಲವೇ ಇಲ್ಲ. ಟ್ಯಾಂಕರ್ ಬಂದೀತೆಂಬ ನಿರೀಕ್ಷೆಯಿಂದ ಊರ
ಹೊರವಲಯದಲ್ಲಿ ಕಾದಿದ್ದ ಹತ್ತಾರು ಯುವಕರು ಅದು ಬರುತ್ತಲೇ ಜಗ್ಗಿ ಮೇಲೆ ಹತ್ತಿ ಕುಳಿತೊ,
ನಿಂತೊ, ಜೋತಾಡುತ್ತಲೊ ಹಳ್ಳಿಯ ಮಧ್ಯೆ ಬರುತ್ತಾರೆ.

ಅಲ್ಲಿರುವ ಹೆಂಗಸರು, ಮಕ್ಕಳು ಮನೆಮನೆಯಿಂದ ಹಸುರು, ನೀಲಿ ಬಣ್ಣದ ಉದ್ದುದ್ದ ಪೈಪುಗಳನ್ನು
ಮಿಂಚಿನ ವೇಗದಲ್ಲಿ ಎಳೆದು ತರುತ್ತಾರೆ. ಈ ಮೊದಲೇ ಟ್ಯಾಂಕರಿನ ಮೇಲೇರಿ ಕೂತಿರುವ ಯುವಕರು
ಅದರ ನೆತ್ತಿಯ ಮೇಲಿನ ಮುಚ್ಚಳ ತೆಗೆದು ಪೈಪೋಟಿಯಲ್ಲಿ ಬಣ್ಣದ ಪೈಪುಗಳ ಒಂದು ತುದಿಯನ್ನು
ನೀರಿನಲ್ಲಿ ಅದ್ದುತ್ತಾರೆ.

ರಸ್ತೆಯ ಮೇಲೆ ನಿಂತವರು ಪೈಪಿನ ಇನ್ನೊಂದು ತುದಿಗೆ ಬಾಯಿ ಹಚ್ಚಿ ನೀರನ್ನು
ಸೆಳೆಯುತ್ತಿರುತ್ತಾರೆ. ನೂರಕ್ಕೂ ಹೆಚ್ಚು ಪೈಪ್‌ಗಳು ಸುತ್ತಲಿನ 200-300 ಕೊಡ, ಬಕೆಟ್,
ತಪ್ಪಲೆ, ಪಿಪಾಯಿಗಳಿಗೆ ನೀರು ಸುರಿಯುತ್ತವೆ. ಟ್ಯಾಂಕರ್ ಬರೀ ನಾಲ್ಕು ನಿಮಿಷಗಳಲ್ಲಿ
ಬರಿದಾಗುತ್ತದೆ.

ನೀರಿಗಾಗಿ ಸರ್ಕಸ್, ನೀರಿಗಾಗಿ ನಾಟಕ, ನೀರಿಗಾಗಿ ಕೋರ್ಟುಕಟ್ಟೆ, ನೀರಿಗಾಗಿ ರಾಜಕೀಯ,
ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಹೋರಾಡುವ ದಿನಗಳಿವು. ವರ್ಷ ಕಳೆದಂತೆಲ್ಲ ಇಂಥ ದಿನಗಳು
ಹೆಚ್ಚುತ್ತಲೇ ಹೋಗುತ್ತವೆ. ಏಕೆಂದರೆ ನಾವೆಲ್ಲ ಹೆದರಿ ಹೈರಾಣಾಗುವಂಥ ಚಿತ್ರಣಗಳನ್ನು ಪವನ
ವಿಜ್ಞಾನಿಗಳು ಕೊಡುತ್ತಿದ್ದಾರೆ.

ಉತ್ತರ ಗೋಲಾರ್ಧದ ಈ ವರ್ಷದ ಚಳಿಗಾಲದ ತಾಪಮಾನ ಹಿಂದಿನ ದಾಖಲೆಗಳನ್ನೆಲ್ಲ ಅಳಿಸಿ
ಹಾಕಿಸುವಷ್ಟು ಮೇಲೇರಿತ್ತು. ಕಳೆದ ಫೆಬ್ರುವರಿಯಲ್ಲಿ ಭೂಮಿಯ ಸರಾಸರಿ ಉಷ್ಣತೆ ಎಷ್ಟು
ಮೇಲೇರಿತ್ತು ಎಂದರೆ, ಆ ಏರಿಕೆಗೆ ಸಮನಾದ ಹಳೇ ದಾಖಲೆ ಏನಾದರೂ ಇದೆಯೇ ಎಂದು ಪರೀಕ್ಷಿಸಲು
ವಿಜ್ಞಾನಿಗಳು ಭೂಮಿಯ 65 ಲಕ್ಷಗಳ ಹಿಂದಿನ ಚರಿತ್ರೆಗಳನ್ನು ತಿರುವಿ ಹಾಕಿ ಕೈ ತಿರುವಿದರು.

ಈಚಿನ ಪ್ಯಾರಿಸ್ ಶೃಂಗಸಭೆಯಲ್ಲಿ ‘ಭೂತಾಪ 2ಡಿಗ್ರಿ ಸೆಲ್ಸಿಯಸ್ ಏರದಂತೆ ತಡೆಯುತ್ತೇವೆ’
ಎಂದು ಎಲ್ಲ 196 ದೇಶಗಳ ಮುಖಂಡರು ಸಹಿ ಹಾಕಿದ್ದು ಅದರ ಶಾಯಿ ಒಣಗುವ ಮೊದಲೇ  1.95 ಡಿಗ್ರಿ
ಹೆಚ್ಚಳ ಕಂಡು ಬಂದಿದೆ. ಈ ಪರಿಯ ತಾಪ ವಿಕೋಪಕ್ಕೆ ಎಲ್‌ನೈನೊ ವಿದ್ಯಮಾನವೇ ಕಾರಣವಾಗಿದ್ದು ಈ
ಏರಿಕೆ ತಾತ್ಕಾಲಿಕವೆಂದು ಕೆಲವು ತಜ್ಞರು ಹೇಳುತ್ತಿದ್ದಾರೆ ನಿಜ.

ಆದರೆ ಎಲ್‌ನೈನೊ ಪರಿಣಾಮದಿಂದಾಗಿ ಭೂಮಧ್ಯರೇಖೆಗುಂಟ ಅರಣ್ಯ ಮತ್ತು ಕೃಷಿ ಭೂಮಿ ಒಣಗಿ
ನಿಂತಿವೆ. ಇಂಡೊನೇಷ್ಯನಿಂದ ಹಿಡಿದು ಥಾಯ್ಲೆಂಡ್‌ವರೆಗೆ ಅನೇಕ ದೇಶಗಳಲ್ಲಿ ವ್ಯಾಪಕ
ಕಾಳ್ಗಿಚ್ಚು ಹಬ್ಬಿದೆ. ವಾತಾವರಣಕ್ಕೆ ಇಂಗಾಲದ ಹೆಚ್ಚಿನ ಹೊರೆ ಸೇರ್ಪಡೆಯಾಗುತ್ತ, ತಾಪಮಾನ
ಜ್ವಾಲೆಗೆ ತುಪ್ಪ ಸುರಿದಂತಾಗುತ್ತಿದೆ.

ಉಷ್ಣತೆ ಹೆಚ್ಚಿದಂತೆಲ್ಲ ನೀರಿನ ಬಳಕೆ ಹೆಚ್ಚುತ್ತದೆ. ನೀರಿನ ಬಳಕೆ ಹೆಚ್ಚಿದಂತೆಲ್ಲ
ಆವಿಯಾಗುವ ಪ್ರಮಾಣವೂ ಹೆಚ್ಚುವುದರಿಂದ ಅದು ವಾತಾವರಣದ ಕಾವನ್ನು ಹೆಚ್ಚಿಸುತ್ತ ಹೋಗುತ್ತದೆ.
ನೀರಿನ ಅತಿ ಬಳಕೆ ಎಲ್ಲಿ, ಹೇಗೆ ಆಗುತ್ತಿದೆ ಎಂಬುದನ್ನು ಯಾರೇನೂ ಹೊಸದಾಗಿ
ವಿವರಿಸಬೇಕಾಗಿಲ್ಲ. ನೂರು ವರ್ಷಗಳ ಹಿಂದೆ ಪ್ರಪಂಚದ ಜನಸಂಖ್ಯೆ 120 ಕೋಟಿ ಇದ್ದುದು
250ಕ್ಕೆ, 400ಕ್ಕೆ, 520ಕ್ಕೆ ಏರಿ ಈಗ 720 ಕೋಟಿ ದಾಟಿದೆ.

ಈ ಎಲ್ಲ ದೇಹಗಳೂ ಓಡಾಡುವ ನೀರಿನ ಮೂಟೆಗಳೇ ತಾನೆ? ಈ ಜನಕೋಟಿಗೆ ಬೇಕಿದ್ದ ಹಸು, ಹೋರಿ,
ಹಂದಿ, ಕುರಿ, ಮೇಕೆಗಳ ಸಂಖ್ಯೆಗಳೂ ಏರುತ್ತ ಹೋಗಿದ್ದು ಅವೂ ನೀರಿನ ಮೂಟೆಗಳೇ ತಾನೆ?
ಅದಕ್ಕಿಂತ ಮುಖ್ಯ ವಿಷಯ ಏನೆಂದರೆ ನಾವು ಬಳಸುವ ಎಲ್ಲ ವಸ್ತುಗಳೂ- ಬಟ್ಟೆ, ಕಾಗದ, ಪಾತ್ರೆ,
ಪ್ಲಾಸ್ಟಿಕ್, ಪಾದರಕ್ಷೆ, ಬಲ್ಬ್, ಛತ್ರಿ, ಸಿಮ್‌ಕಾರ್ಡ್, ಸ್ಕೂಲ್‌ಬ್ಯಾಗ್, ಪೇಯ,
ಪೇಸ್ಟು, ಗೋಡೆಬಣ್ಣ ಇವೆಲ್ಲವೂ ತಯಾರಿಕೆಯ ಹಂತದಲ್ಲೇ ಸಾಕಷ್ಟು ನೀರು ಕುಡಿದಿರುತ್ತವೆ.

ಅಷ್ಟೇ ಅಲ್ಲ, ನಾವು ನಿರ್ಮಿಸಿಕೊಂಡ ಮಹಡಿ ಮನೆ, ರಸ್ತೆ, ಶಾಲೆ, ರೈಲು, ಕ್ರೀಡಾಂಗಣ,
ಆಸ್ಪತ್ರೆ, ಕಾರ್ಖಾನೆ ಇವೆಲ್ಲವೂ ಅಪಾರ ಪ್ರಮಾಣದಲ್ಲಿ ನೀರು ಕುಡಿದಿವೆ. ಅವಕ್ಕೆ ಬಳಕೆಯಾದ
ನೀರು ಮಲಿನವಾಗಿ, ಬಳಕೆಗೆ ಸಿಗದಂತೆ ಆವಿಯಾಗಿ ಹೋಗಿ ಉಷ್ಣತೆಯನ್ನು ಹೆಚ್ಚಿಸುತ್ತದೆ.

ಒಂದು ಕಿಲೊ ಸಕ್ಕರೆ, ಒಂದು ಲೀಟರ್ ಹಾಲು, ಒಂದು ಕಿಲೊ ಮಾಂಸ ಎಷ್ಟೆಷ್ಟು ನೀರು
ಕುಡಿದಿರುತ್ತದೆ ಎಂಬುದನ್ನು ಲೆಕ್ಕ ಹಾಕಿ, ನಮ್ಮನಮ್ಮ ‘ನೀರಹೆಜ್ಜೆ’ (ವಾಟರ್
ಫುಟ್‌ಪ್ರಿಂಟ್) ದಿನದಿನಕ್ಕೆ ಎಷ್ಟೆಷ್ಟು ದೊಡ್ಡದಾಗುತ್ತಿದೆ ಎಂಬ ಕೋಷ್ಟಕಗಳು
ಸಿದ್ಧವಾಗಿವೆ. ಅದೇ ರೀತಿ 

Re: [ms-stf '55814'] Science

2016-03-21 Thread HAREESHKUMAR K Agasanapura
Wah! Very interesting

Hareeshkumar K
AM(PCM)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com
On Mar 21, 2016 8:36 PM, "vijay prasad"  wrote:

> ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್  ಕಂಡುಹಿಡಿದನು ಅಂತ ಶಾಲೆಯಲ್ಲಿ ಉರು ಹೊಡೆದದ್ದು
> ನೆನಪಿದೆಯೇ?  ಮತ್ತೆ ನಿಕೋಲಾ ಟೇಸ್ಲಾ ಏನನ್ನು ಕಂಡುಹಿಡಿದ ? ಹೆಚ್ಚಿನ ಜನ ಈ ಹೆಸರೇ
> ಕೇಳಿಲ್ಲ. ಯಾಕೆ ಗೊತ್ತಾ? ಅವನ ಹೆಸರನ್ನೇ ಅಳಿಸಲು ಪ್ರಯತ್ನ ನಡೆದಿತ್ತು.  ಈತ ಎಷ್ಟರ
> ಮಟ್ಟಿಗೆ ವಿಕ್ಷಿಪ್ತ ಅಂದರೆ ಆತ ಹುಚ್ಚು ವಿಜ್ಞಾನಿ ಅಂತ ಆಡಿಕೊಳ್ಳುವ ಮಟ್ಟಿಗೆ.
>
> ಥಾಮಸ್ ಆಲ್ವಾ ಎಡಿಸನ್ ಈತನಿಗೆ ಘೋರ ಮೋಸ ಮಾಡಿದ್ದ.  ಕೈಯಲ್ಲಿ   4 ಸೆಂಟ್ಸ್
> ಹಿಡಿದುಕೊಂಡು 1884 ರಲ್ಲಿ ಇಂಜಿನಿಯರಿಂಗ್ ಪಾಸಾಗದ ಟೇಸ್ಲಾ ಅಮೇರಿಕಾಗೆ ಬಂದ.  ಕೆಲಸಕ್ಕೆ
> ಸೇರಿದ್ದು ಎಡಿಸನ್ ಬಳಿ.  ಸಂಬಳ ಅತೀ ಕಡಿಮೆ.
> ಎಡಿಸನ್ ಕಂಡುಹಿಡಿದಿದ್ದು ಡೈರೆಕ್ಟ ಕರೆಂಟ್ ( ಡಿಸಿ ) ಮೋಟರ್.  ಅದರಲ್ಲಿ ಅನೇಕ ನ್ಯೂನತೆ
> ಗಳಿದ್ದವು. ತಾನು ಆಲ್ಟರನೇಟಿವ ಕರೆಂಟ್ ( ಎಸಿ ) ಮೋಟಾರ್ ಕಂಡುಹಿಡಿಯುವುದಾಗಿ ಟೇಸ್ಲಾ
> ಹೇಳಿದ.  ಹಾಗೇನಾದರೂ ಮಾಡಿದಲ್ಲಿ 50 ಸಾವಿರ $ ಕೊಡುವುದಾಗಿ ಎಡಿಸನ್ ಹೇಳಿದ. ಇಂದಿನ ಲೆಕ್ಕ
> ದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಇರಬಹುದು.
>
> ಟೇಸ್ಲಾ ಹುಟ್ಟಿದ್ದು  1856 ಆಸ್ಟ್ರಿಯಾ ದಲ್ಲಿ. ( Arnold Schwarzenegger was born
> here too ) ಚಿಕ್ಕವನಿರಬೇಕಾದರೆ ಇಡೀ ಪುಸ್ತಕ ವನ್ನೇ ನೆನಪಿಟ್ಟುಕ್ಕೊಳ್ಳುವಷ್ಟು ಜ್ಞಾಪಕ
> ಶಕ್ತಿ . ಅಸಾಮಾನ್ಯ ಮೇಧಾವಿ. 17 ವರ್ಷದ ಟೇಸ್ಲಾ ಕಾಲರಾ ಆಗಿ ಒಂಬತ್ತು ತಿಂಗಳು ಹಾಸಿಗೆ
> ಹಿಡಿದ. ಬದುಕುವ ಚಾನ್ಸ್ ಇರಲಿಲ್ಲ. ಆಗ ಟೇಸ್ಲಾ ನ ತಂದೆ - ನೀನು ಬದುಕಿದರೆ ಇಂಜಿನಿಯರಿಂಗ್
> ಕಲಿಸುವೆ ಅಂತ ಮಾತು ಕೊಟ್ಟರು. ಟೇಸ್ಲಾ ಪವಾಡದಂತೆ ಗುಣವಾದ. ಆದರೆ ಕಾಲೇಜಿಲ್ಲಿ ಜೂಜಾಟ
> ಕಲಿತು ಇಂಜಿನಿಯರಿಂಗ್ ಕೊನೆಯ ಪರೀಕ್ಷೆ ಯಲ್ಲಿ ಏನೂ ಓದದೇ ಹೋಗಿದ್ದ.
>
> ಸರಿ.  ತಿಂಗಳು ಗಟ್ಟಲೇ ಕಷ್ಟ ಪಟ್ಟು ಎಸಿ ಮೋಟಾರ್ ಕಂಡುಹಿಡಿದ ಟೇಸ್ಲಾ ಗೆ,  ಎಡಿಸನ್ -
> ನಾನು ಜೋಕ್ ಮಾಡಿದ್ದೆ. ಹಣ ಗಿಣ ಏನೂ ಕೊಡಲು ಸಾಧ್ಯವಿಲ್ಲ.  ಬೇಕಾದರೆ ವಾರಕ್ಕೆ ಹತ್ತು
> ಡಾಲರ್ ಸಂಬಳ ಜಾಸ್ತಿ ಮಾಡುತ್ತೇನೆ ಅಂದ.  ಟೇಸ್ಲಾ ರಾಜೀನಾಮೆ ಕೊಟ್ಟು ಹೊರ ನಡೆದ.
>
> ನಂತರ ನಡೆದದ್ದು ಟೇಸ್ಲಾ ಎಡಿಸನ್ ಯುದ್ಧ. ಇದು ಕರೆಂಟ್ ವಾರ್ ಅಂತ ಹೆಸರಾಯಿತು. ಡಿಸಿ
> ಕರೆಂಟ್ ಚಿಕ್ಕ ಪ್ರದೇಶ ಗಳಿಗೆ ಮಾತ್ರ ಹೊಂದುತ್ತಿತ್ತು. ಟೇಸ್ಲಾ ಕರೆಂಟ್ ದೊಡ್ಡ ನಗರಗಳಿಗೆ
> ಹೊಂದುತ್ತಿತ್ತು. ಮತ್ತು ಸಪೂರ ವಾಯರ್ ಸಾಕಿತ್ತು. ಎಡಿಸನ್ ಟೇಸ್ಲಾ ನನ್ನು ಸೋಲಿಸಲು
> ಆನ್ಯಾಯದ ದಾರಿ ಹಿಡಿದ.  ಮಕ್ಕಳಿಗೆ ದುಡ್ಡು ಕೊಟ್ಟು ಜನರ ನಾಯಿ ಬೆಕ್ಕು ಗಳನ್ನು ಕೊಂದು
> ಹಾಕಿಸಿ ಇವು ಎಸಿ ಕರೆಂಟ್ ಕಾರಣ ಸತ್ತವು. ಅದು ಅಪಾಯಕಾರಿ ಅಂತ ಸುದ್ದಿ ಹಾಕಿದ. ಜನರ ಎದುರು
> ಕೆಲ ನಾಯಿಗಳನ್ನು ಮತ್ತು ಒಂದು ಆನೆಯನ್ನು ಕರೆಂಟ್ ಕೊಟ್ಟು ಸಾಯಿಸಿದ.
>
> ಇದಕ್ಕೆ ಉತ್ತರ ವಾಗಿ ಟೇಸ್ಲಾ ಸಾವಿರಾರು ವೋಲ್ಟ್ ಕರೆಂಟ್ ತನ್ನ ಮೈಯಲ್ಲಿ ಹಾಯಿಸಿಕೊಂಡು
> ತೋರಿಸಿದ.  ಹೈ ಫ್ರೀಕ್ವೆನ್ಸಿ ಕರೆಂಟ್ ಹಾನಿ ಮಾಡುವುದಿಲ್ಲ.  ಅತೀ ಹೆಚ್ಚು ತರಂಗದ ಧ್ವನಿ
> ಮಾನವ ಕಿವಿಗಳಿಗೆ ಹೇಗೆ ಕೇಳುವುದಿಲ್ಲವೋ ಹಾಗೆ. 2000 ಸೈಕಲ್ ಗಿಂತ ಹೆಚ್ಚಿನ
> ಫ್ರೀಕ್ವೆನ್ಸಿ ಕರೆಂಟ್ ನ್ನು ದೇಹ ಗುರುತಿಸುವುದಿಲ್ಲ.  ಈಗ ಈ ತರ ಕರೆಂಟ್ ನ್ನು
> ಇಲೆಕ್ಟ್ರಿಸಿಟಿ ಥೆರಪಿಯಲ್ಲಿ ಬಳಸುತ್ತಾರೆ.
> ಎಡಿಸನ್ ಸೋತ.  1893 ವರ್ಲ್ಡ ಟ್ರೇಡ್ ಫೇರ್ ಗೆ ವಿದ್ಯುತ್ ಕೊಡುವ ಕಾಂಟ್ರಾಕ್ಟ ಟೇಸ್ಲಾ
> ಗೆ ಸಿಕ್ಕಿತು.
> ಟೇಸ್ಲಾ ಮಾಡಿದ ಸಂಶೋಧನೆ ಗಳು 700 ಕ್ಕೂ ಅಧಿಕ. ಆತನ ಹೆಸರಿನಲ್ಲಿ ಇದ್ದ ಪಾಟೆಂಟ್ 125 .
> ಟೇಸ್ಲಾ ನ ಜತೆ ಸಂಪರ್ಕ ಕ್ಕೆ ಬಂದವರೆಲ್ಲ ಕೋಟ್ಯಾಧೀಶರಾದರು.
>
> 1899 . ಆತ ಮಾನವ ನಿರ್ಮಿತ ಮಿಂಚು ಕಂಡುಹಿಡಿದ.  ಲಕ್ಷಾಂತರ ವೋಲ್ಟ್ ನ ಮಿಂಚನ್ನು
> ತಯಾರಿಸಿದ ಮಾತ್ರವಲ್ಲ ಅದನ್ನು ತನ್ನ ದೇಹದಲ್ಲಿ ಹರಿಸಿದ.  ಜಾದೂ ಮಾಡಿದಂತೆ ತನ್ನ
> ಕೈಯ್ಯಿಂದ ಮಿಂಚನ್ನು ಎಸೆಯ ಬಲ್ಲವನಾಗಿದ್ದ.  ಆತ ಈ ಪ್ರಯೋಗ ಮಾಡಿದಾಗ ಆಕಾಶ ದಿಂದ 135 ಅಡಿ
> ಉದ್ದ ದ ಮಿಂಚಿನ ಪ್ರವಾಹವೇ ಆತನ ಪ್ರಯೋಗ ಶಾಲೆಯ ಮೇಲೆ ಎರಗಿತು. ಮೂವತ್ತು ಕಿಮೀ ಸುತ್ತಳತೆ
> ಯಲ್ಲಿ ಜನರಿಗೆ ಗುಡುಗಿನ ಆರ್ಭಟ ಕೇಳಿತು.  ಸುತ್ತ ನಡೆದಾಡುತ್ತಿದ್ದ ಜನರ ಪಾದಗಳ ಮಧ್ಯೆ
> ಕಿಡಿಗಳು ಉಂಟಾದವು. ಏನು ಮುಟ್ಟಿದರೂ ಕಿಡಿಗಳು ಬಂದವು. ಬ್ಯಾಕ್ ಟು ದಿ ಫ್ಯೂಚರ್ ಸಿನಿಮಾ
> ನೀವು ನೋಡಿದ್ದರೆ ಅದರಲ್ಲಿ ಬರುವ ವಿಜ್ಞಾನಿ ಟೇಸ್ಲಾ ನಿಂದ ಪ್ರೇರಿತ.
> ಟೇಸ್ಲಾ ಹೇಳಿದ್ದು ಇಡೀ ಭೂಮಿಯಲ್ಲಿ ಕರೆಂಟ್ ಹರಿಯುತ್ತಿದೆ.  ಅದಕ್ಕೆ ಒಂದು
> ಫ್ರೀಕ್ವೆನ್ಸಿ ಇದೆ.  ಆದೇ ಫ್ರೀಕ್ವೆನ್ಸಿ ಬಳಸಿದರೆ ಭೂಮಿಯ ಮೇಲೆ ಎಲ್ಲೇ ಒಂದು ಕೋಲು
> ನೆಟ್ಟರೂ ಇಲೆಕ್ಟ್ರಿಸಿಟಿ ಸಿಗುತ್ತದೆ.  ಅದೂ ಪುಕ್ಕಟೆ.
>
> ಟೇಸ್ಲಾ ಇಡೀ ಜಗತ್ತಿಗೆ ಪುಕ್ಕಟೆ ಇಲೆಕ್ಟ್ರಿಸಿಟಿ ಕೊಡಬೇಕು ಅಂತ ಯೋಜನೆ ಹಾಕಿದ್ದ .
> ಮಾತ್ರವಲ್ಲ ಅದು ವೈರ್ ಲೆಸ್ ಇಲೆಕ್ಟ್ರಿಸಿಟಿ.  ಈಗಿನ ಮೊಬೈಲ ಸಿಗ್ನಲ್ ತರ. ಅಲ್ಲಲ್ಲಿ
> ಟವರ್ ಹಾಕಿ ಇಲೆಕ್ಟ್ರಿಸಿಟಿ ರಿಲೇ ಮಾಡುವುದು.  ಇವನ್ನು ಕಾರು ಕ್ಯಾಚ್ ಮಾಡಿ ಬಳಸುವುದು.
> ಪೆಟ್ರೋಲು ಬೇಡ ಡೀಸಲ್ ಬೇಡ.  ಈ ಗಲ್ಫ್ ವಾರ್ ಇರುತ್ತಲೇ ಇರಲಿಲ್ಲ. ಭಯೋತ್ಪಾದನೆ ಕೂಡ.
> ಅದೊಂದು  ಪ್ರಾಜೆಕ್ಟ ಆಗಿದ್ದಿದ್ದರೆ ಇಡೀ ಜಗತ್ತೇ ಇಂದು ಬೇರಯೇ ಇರುತ್ತಿತ್ತು.
>
> 1900 ಇಸ್ವಿ . ಇಂತಹ ಒಂದು ಟವರ್ ನಿರ್ಮಾಣ ಮಾಡಲು ಜೆ ಪಿ ಮಾರ್ಗನ್ 1.5 ಲಕ್ಷ ಡಾಲರ್
> ಕೊಟ್ಟ. ( ಇಂದು ಮಾರ್ಗನ್ ಎಂಡ್ ಸ್ಟಾನ್ಲಿ ) ಈಗಿನ ಲೆಕ್ಕದಲ್ಲಿ 45 ಲಕ್ಷ  $.  ಟವರ್
> ಇನ್ನೇನು ಮುಗಿಯಬೇಕು ಅಂದಾಗ ಮಾರ್ಗನ್ ಉಳಿದ ಹಣ ಕೊಡಲು ಸಾಧ್ಯವಿಲ್ಲ ಅಂತ ಹೇಳಿದ. ಅಮೆರಿಕದ
> ಸರಕಾರ ಈ ಟವರ್ ಬೀಳಿಸಿತು.  ಯಾಕೆ ಅಂತ ಗೊತ್ತಿಲ್ಲ.  ಫ್ರೀ ವಿದ್ಯುತ್ ಕೊಟ್ಟರೆ ಲಾಭ ಏನು
> ಅಂತ ಬೀಳಿಸಿತು ಅಂತ ನಂತರ ಗೊತ್ತಾಯಿತು.
> ಟೇಸ್ಲಾ ಏನೇ ಮಾಡಿದರೂ ಸರಕಾರ ತೊಂದರೆ ಕೊಡುತ್ತಿತ್ತು.
>
> ಟೇಸ್ಲಾ ಸತ್ತ ನಂತರ ಆತನ ಎಲ್ಲ ನೋಟ್ಸ್ ಗಳನ್ನು ಅಮೆರಿಕ ತೆಗೆದುಕೊಂಡು ಹೋಗಿ ಕ್ಲಾಸಿಫೈ
> ಮಾಡಿ ಇಟ್ಟಿದೆ.ಯಾಕೆ ಗೊತ್ತಾ?  ಟೇಸ್ಲಾ ಡೆತ್ ರೇಸ್ ಕಂಡುಹಿಡಿದಿದ್ದ. ಈ ಲೇಸರ್ ಮೂಲಕ
> ಆಕಾಶದಲ್ಲಿ ಹಾರುವ ವಿಮಾನ ವನ್ನು  ಹೊಡೆದುರುಳಿಸಲು ಏನೂ ಖರ್ಚು ಬರುತ್ತಿರಲಿಲ್ಲ.  ಟೇಸ್ಲಾ
> ನ ಈ ನೋಟ್ಸ್ ನಿಗೂಢ ವಾಗಿ ಮಾಯವಾದವು. ಈಗ  ಮೂರು ವರ್ಷಗಳ ಹಿಂದೆ ಟೇಸ್ಲಾ ನ ಡೆತ್ ರೇ ನಾವು
> ಡೆವಲಪ್ ಮಾಡಿದ್ದೇವೆ ಅಂತ ಅಮೇರಿಕಾದ ಟೀವಿ ವರದಿ ಮಾಡಿದೆ.
>
> 1893 .ಮಾರ್ಕೋನಿ ರೇಡಿಯೋ ಕಂಡು ಹಿಡಿಯುವ ಮೊದಲೇ ಟೇಸ್ಲಾ ಕಂಡುಹಿಡಿದಿದ್ದ. ಆದರೆ ಕೋರ್ಟ್
> ಹಕ್ಕನ್ನು  ಮಾರ್ಕೋನಿಗೆ ನೀಡಿತು. ಆಗ ಟೇಸ್ಲಾ ಹೇಳಿದ - ಮಾರ್ಕೋನಿ ಒಬ್ಬ ಒಳ್ಳೆಯ ವ್ಯಕ್ತಿ
> . ಆತ ನನ್ನ 17 ಪಾಟೆಂಟ್ ಗಳನ್ನು ಬಳಸುತ್ತಿದ್ದಾನೆ. ಒಳ್ಳೆಯದಾಗಲಿ.
>
> ಒಮ್ಮೆ ಟೇಸ್ಲಾ ತನ್ನ ಒಸ್ಸಿಲೇಟರ್ ಯಂತ್ರ ಚಾಲೂ ಮಾಡಿದಾಗ ಸುತ್ತ ಭೂಕಂಪ ಆಯಿತು.  ಅದನ್ನು
> ನಿಲ್ಲಿಸಲು ಸಾಧ್ಯವಾಗದೇ ಟೇಸ್ಲಾ ಸುತ್ತಿಗೆಯಿಂದ ಅದನ್ನು ಮುರಿಯುವದಕ್ಕೂ ಪೊಲೀಸರು
> ಬರುವದಕ್ಕೂ ಸರಿ ಆಯಿತಂತೆ.  ಭೂಮಿಯ ಫ್ರೀಕ್ವೆನ್ಸಿ ಯನ್ನು ಉಪಯೋಗಿಸಿ ಈ ಯಂತ್ರ ಕೆಲಸ
> ಮಾಡುತ್ತದೆ. ಇದನ್ನು ಉಪಯೋಗಿಸಿ ಯಾವುದೇ ಬಿಲ್ಡಿಂಗ ಬೀಳಿಸಬಹುದು.  ಬೇಕಾದರೆ ಇಡೀ
> ಭೂಮಿಯನ್ನು ಎರಡು ತುಂಡು ಮಾಡಬಹುದು ಅಂತ ಟೇಸ್ಲಾ ಹೇಳಿದ. ಈ ಭೂಕಂಪನದ ಯಂತ್ರ ದ ಬಗ್ಗೆ
> ನಂತರ 

Re: [ms-stf '55749'] Computer literacy test

2016-03-20 Thread HAREESHKUMAR K Agasanapura
All india institute of local self govt, gandhinagara, bengaluru

Hareeshkumar K
AM(PCM)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com
On Mar 20, 2016 2:30 PM, "Mallappa Mallappa" <bbmallikarjuna...@gmail.com>
wrote:

> Sir where you're took the exam?
> On Mar 20, 2016 1:26 PM, "HAREESHKUMAR K Agasanapura" <
> harihusk...@gmail.com> wrote:
>
>> Dear all,
>> Govt ordered to pass computer literacy test for all govt servants ecept
>> fee cadre ( ie nurse, police, pri teachers ). I took exam today. All
>> questions are of microsoft windows. What about us. i. e. we practising,
>> learning, teaching, advertising open source software (i.e ubuntu). Please
>> think .,
>>
>> Hareeshkumar K
>> AM(PCM)
>> GHS HUSKURU
>> MALAVALLI TQ
>> MANDYA DT 571475
>> mobile no 9880328224
>> email harihusk...@gmail.com
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


Re: [ms-stf '55746'] Computer literacy test

2016-03-20 Thread HAREESHKUMAR K Agasanapura
You can visit this website  http://clt.karnataka.gov.in

Hareeshkumar K
AM(PCM)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com
On Mar 20, 2016 1:48 PM, "Shivakumara K" <shivakumara.go...@gmail.com>
wrote:

> How to take this exam
> On 20 Mar 2016 1:26 pm, "HAREESHKUMAR K Agasanapura" <
> harihusk...@gmail.com> wrote:
>
>> Dear all,
>> Govt ordered to pass computer literacy test for all govt servants ecept
>> fee cadre ( ie nurse, police, pri teachers ). I took exam today. All
>> questions are of microsoft windows. What about us. i. e. we practising,
>> learning, teaching, advertising open source software (i.e ubuntu). Please
>> think .,
>>
>> Hareeshkumar K
>> AM(PCM)
>> GHS HUSKURU
>> MALAVALLI TQ
>> MANDYA DT 571475
>> mobile no 9880328224
>> email harihusk...@gmail.com
>>
>> --
>> 1. If a teacher wants to join STF, visit
>> http://karnatakaeducation.org.in/KOER/en/index.php/Become_a_STF_groups_member
>> 2. For STF training, visit KOER -
>> http://karnatakaeducation.org.in/KOER/en/index.php
>> 4. For Ubuntu 14.04 installation, visit
>> http://karnatakaeducation.org.in/KOER/en/index.php/Kalpavriksha
>> 4. For doubts on Ubuntu, public software, visit
>> http://karnatakaeducation.org.in/KOER/en/index.php/Frequently_Asked_Questions
>> 5. Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Why_public_software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ---
>> You received this message because you are subscribed to the Google Groups
>> "Maths & Science STF" group.
>> To unsubscribe from this group and stop receiving emails from it, send an
>> email to mathssciencestf+unsubscr...@googlegroups.com.
>> To post to this group, send email to mathssciencestf@googlegroups.com.
>> Visit this group at https://groups.google.com/group/mathssciencestf.
>> For more options, visit https://groups.google.com/d/optout.
>>
> --
> 1. If a teacher wants to join STF, visit
> http://karnatakaeducation.org.in/KOER/en/index.php/Become_a_STF_groups_member
> 2. For STF training, visit KOER -
> http://karnatakaeducation.org.in/KOER/en/index.php
> 4. For Ubuntu 14.04 installation, visit
> http://karnatakaeducation.org.in/KOER/en/index.php/Kalpavriksha
> 4. For doubts on Ubuntu, public software, visit
> http://karnatakaeducation.org.in/KOER/en/index.php/Frequently_Asked_Questions
> 5. Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Why_public_software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to mathssciencestf+unsubscr...@googlegroups.com.
> To post to this group, send email to mathssciencestf@googlegroups.com.
> Visit this group at https://groups.google.com/group/mathssciencestf.
> For more options, visit https://groups.google.com/d/optout.
>

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '55744'] Computer literacy test

2016-03-20 Thread HAREESHKUMAR K Agasanapura
Dear all,
Govt ordered to pass computer literacy test for all govt servants ecept fee
cadre ( ie nurse, police, pri teachers ). I took exam today. All questions
are of microsoft windows. What about us. i. e. we practising, learning,
teaching, advertising open source software (i.e ubuntu). Please think .,

Hareeshkumar K
AM(PCM)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.


[ms-stf '55696'] ಹೈಸ್ಕೂಲ್ ಹೈಕ್ಳುಗಳಿಗೆ ಡಿಜಿಟಲ್ ಶಿಕ್ಷಣ

2016-03-18 Thread HAREESHKUMAR K Agasanapura
http://m.vijaykarnataka.com/state/State-budget-Digital-Education-to-highschool-students/articleshow/51463798.cms

*ಹೈಸ್ಕೂಲ್ ಹೈಕ್ಳುಗಳಿಗೆ ಡಿಜಿಟಲ್ ಶಿಕ್ಷಣ*

Mar 19, 2016, 04.00 AM IST

Whatsapp Facebook Google Plus
Twitter Email


state-budget-2

AAA

ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ಕೆ ಅನುಮತಿ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ
'ನಲಿ-ಕಲಿ' ಕಾರ್ಯಕ್ರಮ ಪುನರ್‌ರೂಪಿಸಿ ಜಾರಿ ಗಣಿತ ವಿಷಯದ ಚಟುವಟಿಕೆ ಆಧರಿತ ಕಲಿಕೆ 4,
5ನೇ ತರಗತಿಗಳಿಗೂ ವಿಸ್ತರಣೆ

* ಈ ವರ್ಷದೊಳಗೆ ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ.

* ಬಿಸಿಯೂಟ ಅಡಿಗೆಯವರ ಮಾಸಿಕ ಗೌರವಧನ 300 ರೂ. ಹೆಚ್ಚಳ.

* 'ನಲಿ-ಕಲಿ' ಕಾರ್ಯಕ್ರಮ ಪುನರ್‌ರೂಪಿಸಿ ಜಾರಿ.

* ಗಣಿತ ವಿಷಯದ ಚಟುವಟಿಕೆ ಆಧರಿತ ಕಲಿಕೆ 4,5ನೇ ತರಗತಿಗಳಿಗೂ ವಿಸ್ತರಣೆ.

* ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಶಿಕ್ಷಕರ 6 ತರಬೇತಿ ಕಾಲೇಜುಗಳು.

* ಕನಿಷ್ಠ 5 ವರ್ಷಗಳಿಗೆ ಶಾಲೆ ಮತ್ತು ಕಾಲೇಜುಗಳ ಮಾನ್ಯತೆ ನವೀಕರಣ.

* ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮ ಅಳವಡಿಸಲು ಅನುಮತಿ.

ಸರಕಾರಿ ಪ್ರೌಢಶಾಲೆಗಳಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ಒದಗಿಸಲು
ಪ್ರೌಢಶಾಲಾ ಶಿಕ್ಷಕರ ಮೂಲಕ ಸಮಗ್ರವಾದ ಇ-ವಿಷಯಾಧರಿತ 'ಐಟಿ ಅಟ್ ಸ್ಕೂಲ್ಸ್ ಇನ್ ಕರ್ನಾಟಕ'
ಎಂಬ ಕಾರ್ಯಕ್ರಮ ಪ್ರಾರಂಭಿಸಲು ಸರಕಾರ ನಿರ್ಧರಿಸಿದೆ.

ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಪ್ರಸ್ತುತ ಜಾರಿಯಲ್ಲಿರುವ
ಯೋಜನೆಗಳನ್ನು ತಾರ್ಕಿಕವಾಗಿ ಸಮನ್ವಯಗೊಳಿಸಿ, ಐದು ಹೊಸ ಕಾರ್ಯಕ್ರಮಗಳಡಿ ಜಾರಿಗೆ ತರಲು
ಉದ್ದೇಶಿಸಲಾಗಿದೆ. ಅವುಗಳೆಂದರೆ ಶಿಕ್ಷಣ ಗುಣಮಟ್ಟ ಸುಧಾರಣೆ ಕಾರ್ಯಕ್ರಮ, ಗುಣಮಟ್ಟ ಖಾತರಿಯ
ಉಪ ಕ್ರಮಗಳು, ತಂತ್ರಜ್ಞಾನ ಆಧರಿತ ಕಲಿಕೆ, ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ವಿದ್ಯಾರ್ಥಿಗಳನ್ನು ಪ್ರೇರೇಪಿಸುವ ಕಾರ್ಯಕ್ರಮಗಳು.

ಸಮಂಜಸವಾದ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ನೆರವಿನಿಂದ ಸರಕಾರಿ ಶಾಲೆಗಳಲ್ಲಿರುವ
ವಿದ್ಯಾರ್ಥಿಗಳ ಹಾಗೂ ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಿಗೆ ದಾಖಲಾದ
ವಿದ್ಯಾರ್ಥಿಗಳ ಕಲಿಕೆಯಲ್ಲಿನ ಸಾಧನೆಯ ಬಗ್ಗೆ ಮೇಲ್ವಿಚಾರಣೆ ನಡೆಸಲು ಉದ್ದೇಶಿಸಲಾಗಿದೆ.

'ನಲಿ-ಕಲಿ' ಪುನರ್‌ರೂಪಿಸಿ ಜಾರಿ

ಇನ್ನು, ಸರಕಾರಿ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ವಸ್ತುನಿಷ್ಠ
ಮೌಲ್ಯಮಾಪನದಿಂದ ಯಶಸ್ವಿ ಕಲಿಕೆಯ ವಿಧಾನ ಎಂದು ಗುರುತಿಸಲಾಗಿರುವ ಚಟುವಟಿಕೆ ಆಧರಿತ
'ನಲಿ-ಕಲಿ' ವಿಧಾನವನ್ನು ಪುನರ್ ರೂಪಿಸಿ ಸಮಗ್ರವಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಗಣಿತ ವಿಷಯದ ಚಟುವಟಿಕೆ ಆಧಾರಿತ ಕಲಿಕೆಯನ್ನು 4 ಮತ್ತು 5ನೇ ತರಗತಿಗಳಿಗೂ
ವಿಸ್ತರಿಸಲಾಗುತ್ತಿದೆ.

ಶಿಕ್ಷಣ ಗುಣಮಟ್ಟ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ಮೂಡಿಸುವ ಯಶಸ್ವಿ ಉಪ ಕ್ರಮಗಳನ್ನು
ಕೈಗೊಂಡು ಲಾಭದ ನಿರೀಕ್ಷೆ ಹೊಂದಿಲ್ಲದ ಸಂಸ್ಥೆಗಳ ಚಟುವಟಿಕೆಗಳನ್ನು ವಿಸ್ತರಿಸಲು
ಉದ್ದೇಶಿಸಿರುವ ಸರಕಾರ, 3 ವರ್ಷಗಳ ಅವಧಿಯಲ್ಲಿ ವೆಚ್ಚದ ಶೇ.50ರಷ್ಟನ್ನು ಭರಿಸಲಿದೆ.
ಸರಕಾರಿ ಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ರಜೆಯಲ್ಲಿ ಪೂರಕ ಬೋಧನೆಯ
ವ್ಯವಸ್ಥೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ.

ಎಲ್ಲ ವಿದ್ಯಾರ್ಥಿಗಳ ಆಧಾರ್ ನೋಂದಣಿ

2016ರೊಳಗೆ ಖಾಸಗಿ ಶಾಲೆ-ಕಾಲೇಜುಗಳೂ ಸೇರಿದಂತೆ ಶಾಲೆ-ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳ
ಆಧಾರ್ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರ ತೀರ್ಮಾನಿಸಿದೆ. ಎಲ್ಲ ಸರಕಾರಿ
ಶಾಲೆಗಳಲ್ಲಿ ಯೋಗ ಶಿಕ್ಷಣವನ್ನು ಆರಂಭಿಸುವುದಕ್ಕೆ ಪ್ರೋತ್ಸಾಹ ನೀಡುವುದಾಗಿ ಸರಕಾರ
ಪ್ರಕಟಿಸಿದೆ.

ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಡಿಗೆಯವರ ಗೌರವಧನವನ್ನು ಮಾಸಿಕ
300 ರೂ. ಹೆಚ್ಚಿಸಲಾಗಿದೆ. ಶಿಕ್ಷಕರ 6 ತರಬೇತಿ ಕಾಲೇಜುಗಳನ್ನು ಉನ್ನತ ಶಿಕ್ಷಣ ಇಲಾಖೆಯ
ವ್ಯಾಪ್ತಿಗೆ ತರಲಾಗುತ್ತಿದೆ. ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಒಂದೇ ಆಡಳಿತ
ಹಾಗೂ ಕಾರ್ಯವ್ಯವಸ್ಥೆಯಡಿ ತರಲು ಮೂರು ವರ್ಷದ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ.

5 ವರ್ಷಗಳಿಗೆ ಮಾನ್ಯತೆ ನವೀಕರಣ

ಕನಿಷ್ಠ 5 ವರ್ಷಗಳಿಗೆ ಶಾಲೆ ಮತ್ತು ಕಾಲೇಜುಗಳ ಮಾನ್ಯತೆ ನವೀಕರಣ. ಸಿಬಿಎಸ್‌ಇ ಮತ್ತು
ಐಸಿಎಸ್‌ಇ ಪಠ್ಯಕ್ರಮ ಅಳವಡಿಸಲು ಅನುಮತಿ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ
ಸ್ಥಾನಮಾನಕ್ಕಾಗಿ ಮಾನ್ಯತೆ ಅಥವಾ ನಿರಾಕ್ಷೇಪಣೆ ಪತ್ರ ನೀಡುವುದು. ಶಿಕ್ಷಣ ಹಕ್ಕು
ಕಾಯಿದೆಯಡಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಖಾಸಗಿ ಶಾಲೆಗಳಿಗೆ ಶಿಕ್ಷಣ ವೆಚ್ಚ
ಮರುಪಾವತಿ ಪ್ರಕ್ರಿಯೆ ಮುಂದುವರಿಕೆ. ಎಲ್ಲ ಖಾಸಗಿ ಶಾಲೆ ಹಾಗೂ ಕಾಲೇಜುಗಳಲ್ಲಿರುವ ಬೋಧಕ
ಮತ್ತು ಮೂಲಸೌಕರ್ಯ ಸಂಪನ್ಮೂಲಗಳ ವಿವರವನ್ನು ಸಾರ್ವಜನಿಕ ವೆಬ್‌ಸೈಟ್‌ನಲ್ಲಿ ಪ್ರಕಟಿಸುವ
ವ್ಯವಸ್ಥೆ ಮಾಡುವುದಾಗಿ ಸರಕಾರ ಪ್ರಕಟಿಸಿದೆ. ಒಟ್ಟಾರೆ, 2016-17ನೇ ಸಾಲಿನಲ್ಲಿ ಪ್ರಾಥಮಿಕ
ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ 13,373 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಕರ್ನಾಟಕ ಶಿಕ್ಷಣ ನೀತಿ ಜಾರಿಗೆ ನಿರ್ಧಾರ

-ಕಲಬುರ್ಗಿ ಹೆಸರಿನಲ್ಲಿ ಸಂಶೋಧನಾ ಕೇಂದ್ರ, ಪ್ರಶಸ್ತಿ-

* ಕಲಬುರ್ಗಿ ಹೆಸರಿನಲ್ಲಿ ಅತ್ಯುತ್ತಮ ಸಂಶೋಧನಾ ಸಾಹಿತ್ಯಕ್ಕೆ ಪ್ರತಿ ವರ್ಷ ಪ್ರಶಸ್ತಿ

* ಬೀದರ್‌ನಲ್ಲಿ ಸರಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ

* ಕರ್ನಾಟಕ ಚಿತ್ರಕಲಾ ಪರಿಷತ್‌ನ ಕಾರ್ಯಕ್ರಮಗಳಿಗೆ 1.5 ಕೋಟಿ ರೂ. ಅನುದಾನ

* ಕರ್ನಾಟಕ ಜಾನಪದ ವಿವಿ ವ್ಯಾಪ್ತಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಪಾರಂಪರಿಕ
ಕೇಂದ್ರ ಸ್ಥಾಪನೆ

* ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸಂಸ್ಥೆಗಳಿಗೂ 'ಜ್ಞಾನ ಸಂಗಮ' ಯೋಜನೆ ವಿಸ್ತರಣೆ

* ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ತುಮಕೂರು ವಿವಿಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ
ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ

ರಾಜ್ಯದಲ್ಲಿ ಜ್ಞಾನ ಮತ್ತು ಆರ್ಥಿಕ ಅಗತ್ಯಗಳಿಗೆ ಒತ್ತು ನೀಡುವ ಮಾನವ ಸಂಪನ್ಮೂಲ ಕೇಂದ್ರಿತ
ಪ್ರಗತಿದಾಯಕ ಕರ್ನಾಟಕ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ.

ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ಸಂಸ್ಥೆಗಳಲ್ಲಿ 'ಜ್ಞಾನ ಸಂಗಮ' ಯೋಜನೆ
ವಿಸ್ತರಿಸುವುದರ ಜತೆಗೆ, ಸರಕಾರಿ ಕಾಲೇಜುಗಳು ಎನ್‌ಎಎಸಿ ಮಾನ್ಯತೆ ಪಡೆದು ಯುಜಿಸಿ ಅನುದಾನ
ಪಡೆಯಲು ಅನುವಾಗುವಂತೆ 10 ಕೋಟಿ ರೂ.ಗಳ ಅನುದಾನ ಒದಗಿಸಲಾಗುತ್ತದೆ. ಸಾಂಪ್ರದಾಯಿಕ ಪದವಿ
ಕೋರ್ಸ್‌ಗಳ ಜತೆಗೆ, ಉತ್ತಮ ಉದ್ಯೋಗವಕಾಶಗಳಿರುವ ಕ್ಷೇತ್ರಗಳಾದ ಮಾಹಿತಿ ತಂತ್ರಜ್ಞಾನ,
ದೂರಸಂಪರ್ಕ, ರೀಟೇಲ್, ಪ್ರವಾಸೋದ್ಯಮ, ಮಾಧ್ಯಮ ಮತ್ತು ಮನೋರಂಜನೆ, ಎಲೆಕ್ಟ್ರಾನಿಕ್ಸ್
ಮತ್ತು ಆರೋಗ್ಯ ಪಾಲನೆ, ಮೆಕ್ಯಾನಿಕಲ್, ಸೈಬರ್ ಭದ್ರತೆ ಇತ್ಯಾದಿ ಕೋರ್ಸ್‌ಗಳನ್ನು 5 ಕೋಟಿ
ರೂ.ಗಳ ವೆಚ್ಚದೊಂದಿಗೆ ಇಂಡೋ-ಜರ್ಮನ್ ಸಹಭಾಗಿತ್ವದಲ್ಲಿ ಐದು ಸರಕಾರಿ ಎಂಜಿನಿಯರಿಂಗ್
ಕಾಲೇಜುಗಳಲ್ಲಿ ಪ್ರಾರಂಭಿಸಲಾಗುತ್ತದೆ.

ಶ್ರೇಷ್ಠತಾ ಕೇಂದ್ರಗಳ ಸ್ಥಾಪನೆ

ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ತುಮಕೂರು ವಿವಿಗಳಲ್ಲಿ
ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು 10 ಕೋಟಿ ರೂ. ವೆಚ್ಚದಲ್ಲಿ
ಶ್ರೇಷ್ಠತಾ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಕರ್ನಾಟಕ ಜಾನಪದ ವಿವಿ ಕಾರ್ಯವ್ಯಾಪ್ತಿಯಲ್ಲಿ ರಾಜ್ಯದ ಶ್ರೀಮಂತ ಹಾಗೂ ಸಾಂಸ್ಕೃತಿಕ ಮತ್ತು
ಶೈಕ್ಷಣಿಕ ಪರಂಪರೆ ಬಿಂಬಿಸಲು ಕರ್ನಾಟಕ ಪಾರಂಪರಿಕ ಕೇಂದ್ರವನ್ನು 2 ಕೋಟಿ 

[ms-stf '54823'] ಜಲಶುದ್ಧೀಕಾರಕಗಳನ್ನು ಖರೀದಿಸುವ ಮುನ್ನ

2016-03-03 Thread HAREESHKUMAR K Agasanapura
http://m.prajavani.net/article/2016_03_03/391453
*ಜಲಶುದ್ಧೀಕಾರಕಗಳನ್ನು ಖರೀದಿಸುವ ಮುನ್ನ*

3 Mar, 2016

ಯು.ಬಿ. ಪವನಜ








ನಾವು ವಾಸಿಸುತ್ತಿರುವ ಪರಿಸರ ಎಷ್ಟು ಕೆಟ್ಟಿದೆಯೆಂದರೆ ನೀರು, ಗಾಳಿ ಯಾವುದೂ
ಪರಿಶುದ್ಧವಾಗಿಲ್ಲ. ಈಗ ಬಾಟಲಿ ನೀರು ಸರ್ವೇಸಾಮಾನ್ಯವಾಗಿದೆ. ಒಂದು ಕಾಲದಲ್ಲಿ ನೀರಿಗೆ ಹಣ
ಕೊಡುವುದು ಎಂದರೆ ನಮ್ಮ ದೇಶದಲ್ಲಿ ಯಾರಿಗೂ ನಂಬುವುದಕ್ಕೆ ಸಾಧ್ಯವಿಲ್ಲದ ಹಾಗಿತ್ತು. ಇದೇನೂ
ಶತಮಾನಗಳ ಹಿಂದಿನ ಕಥೆಯಲ್ಲ. ಕೆಲವೇ ದಶಕಗಳ ಹಿಂದಿನ ಕಥೆ. ಮನೆಗಳಲ್ಲೂ ನಾವು ನೀರನ್ನು
ಹಾಗೆಯೇ ಕುಡಿಯುವಂತಿಲ್ಲ. ಕೇವಲ ಕುದಿಸಿ ಕುಡಿದರೆ ಸಾಕು ಎನ್ನುವ ಕಾಲವೂ ಈಗಿಲ್ಲ.

ನೀರಿನಲ್ಲಿ ಹಲವು ನಮೂನೆಯ ಮಲಿನಕಾರಕಗಳು ತುಂಬಿರುವುದರಿಂದ ನೀರನ್ನು ಹಲವು ಹಂತಗಳಲ್ಲಿ
ಶುದ್ಧೀಕರಿಸಬೇಕಾಗಿದೆ. ಅಂತೆಯೇ ಮಾರುಕಟ್ಟೆಯಲ್ಲಿ ಹಲವು ನಮೂನೆಯ  ಜಲಶುದ್ಧೀಕಾರಕಗಳು
ದೊರೆಯುತ್ತಿವೆ. ಏನು ಈ ಜಲಶುದ್ಧೀಕಾರಕಗಳು? ಅವು ಹೇಗೆ ಕೆಲಸ ಮಾಡುತ್ತವೆ? ಅವುಗಳನ್ನು
ಎಷ್ಟು ನಮೂನೆಗಳಿವೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ಸಂಕ್ಷಿಪ್ತವಾಗಿ ನೀಡಲು ಈ
ಸಂಚಿಕೆಯಲ್ಲಿ ಪ್ರಯತ್ನಿಸಲಾಗುತ್ತಿದೆ.

ಮೊತ್ತಮೊದಲನೆಯದಾಗಿ ತುಂಬ ಸರಳವಾದ ಸೋಸುಕಗಳು (filter). ಇವು ನೀರಿನಲ್ಲಿರುವ ಎಲ್ಲ
ನಮೂನೆಯ ಕಣಗಳನ್ನು ತಡೆಹಿಡಿಯುತ್ತವೆ. ಇವು ಕಡಿಮೆ ಬೆಲೆಯವು. ಇವುಗಳಲ್ಲೂ ಹಲವು
ನಮೂನೆಗಳಿವೆ. ಕೇವಲ ಸೋಸುಕಗಳು, ಅಯಾನ್ ಎಕ್ಸ್‌ಚೇಂಜ್ ಮಾಡುವವು ಇತ್ಯಾದಿ. ನಿಮ್ಮ ಮನೆಯ
ನೀರಿನಲ್ಲಿ ಮಣ್ಣು, ರಾಡಿ, ಇತ್ಯಾದಿ ಮಾತ್ರವಿದೆ, ಯಾವುದೇ ಸೂಕ್ಷ್ಮ ಜೀವಿ ಮತ್ತು
ರಾಸಾಯನಿಕಗಳಿಲ್ಲ ಎಂದಾದಲ್ಲಿ ನಿಮಗೆ ಸರಳ ಸೋಸುಕ ಸಾಕು. ಸ್ವಲ್ಪ ಹೆಚ್ಚಿನ ಎಚ್ಚರಿಕೆಗಾಗಿ
ನೀರನ್ನು ಕುದಿಸಿ, ತಣಿಸಿ ನಂತರ ಸೋಸುಕಕ್ಕೆ ಹಾಕಿ ಕುಡಿದರೆ ಒಂದು ಮಟ್ಟಿಗೆ ಸುರಕ್ಷಿತ
ಎನ್ನಬಹುದು.

ಆದರೆ ನಗರದ ನೀರು ಈಗ ಕೇವಲ ಸಾಮಾನ್ಯ ಸೋಸುಕದಿಂದ ಶುದ್ಧವಾಗುವುದಿಲ್ಲ. ಅಂತೆಯೇ
ಮಾರುಕಟ್ಟೆಯಲ್ಲಿ ಮೂರು ಪ್ರಮುಖ ನಮೂನೆಯ ಶುದ್ಧೀಕಾರಕಗಳಿವೆ. ಕೆಲವು ಮಾದರಿಗಳಲ್ಲಿ ಈ ಮೂರೂ
ಅಳವಡಿಕೆಯಾಗಿರುತ್ತದೆ. ಅವುಗಳ ಬಗ್ಗೆ ತಿಳಿಯೋಣ.

*ಅಲ್ಟ್ರಾ ಫಿಲ್ಟ್ರೇಶನ್ (UF)*
ಇವು ಈ ಲೇಖನದ ಪ್ರಾರಂಭದಲ್ಲಿ ತಿಳಿಸಿದ ಸೋಸುಕಗಳೇ. ಆದರೆ ಇದರಲ್ಲಿ ಬಳಕೆಯಾಗುತ್ತಿರುವ
ಸೋಸುಕ ಅತಿ ಚಿಕ್ಕ ಗಾತ್ರದ್ದು. ಅಂದರೆ ಅತಿ ಚಿಕ್ಕ ಗಾತ್ರದ ವಸ್ತುಗಳನ್ನೂ ಇದು
ತಡೆಹಿಡಿಯುತ್ತದೆ. ನೀರಿನಲ್ಲಿರುವ ಮಣ್ಣು, ಕೆಸರು, ರಾಡಿ, ಚಿಕ್ಕಪುಟ್ಟ ಜೀವಿಗಳು,
ಇತ್ಯಾದಿಗಳನ್ನೆಲ್ಲ ಇದು ತಡೆಹಿಡಿಯುತ್ತದೆ. ಇವು ಕೆಲಸ ಮಾಡಲು ವಿದ್ಯುತ್ ಶಕ್ತಿ ಬೇಡ.
ಇವುಗಳ ಪ್ರಮುಖ ಕೊರತೆ ಎಂದರೆ ಇವು ನೀರಿನಲ್ಲಿ ಕರಗಿರುವ ಲವಣ, ರಾಸಾಯನಿಕಗಳನ್ನು
ತೆಗೆಯಲಾರವು.

*ಅತಿನೇರಳೆ*
*(ultraviolet –UV)*
ಈ ನಮೂನೆಯಲ್ಲಿ ನೀರಿನ ಮೇಲೆ ಅತಿನೇರಳೆ ಕಿರಣಗಳನ್ನು ಹಾಯಿಸಲಾಗುತ್ತದೆ. ಅತಿನೇರಳೆ
ಕಿರಣಗಳು ನೀರಿನಲ್ಲಿರುವ ಎಲ್ಲ ನಮೂನೆಯ ಸೂಕ್ಷ್ಮಜೀವಿಗಳು, ಬ್ಯಾಕ್ಟೀರಿಯಾಗಳನ್ನು
ಕೊಲ್ಲುತ್ತವೆ. ಅತಿನೇರಳೆ ದೀಪವು ಇರುವ ನಳಿಕೆಯೊಳಗೆ ನೀರನ್ನು ಹರಿಬಿಡಲಾಗುತ್ತದೆ. ನೀರು
ಸಾಮಾನ್ಯವಾಗಿ ಕೆಳಗಿನಿಂದ ಮೇಲೆ ಹೋಗುತ್ತದೆ. ಈ ನಳಿಕೆಯೊಳಗೆ ಗಾಳಿಯ ಗುಳ್ಳೆಗಳಿರಬಾರದು.
ಅತಿನೇರಳೆ ಕಿರಣಗಳು ನೀರಿನಲ್ಲಿರುವ ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರೆ
ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತವೆ. ಅತಿನೇರಳೆ ಕಿರಣಗಳು ಸೂಕ್ಷ್ಮಜೀವಿಗಳನ್ನೇನೋ
ಕೊಲ್ಲುತ್ತವೆ. ಆದರೆ ಅವುಗಳು ಸತ್ತು ಅದೇ ನೀರಿನಲ್ಲಿರುತ್ತವೆ. ಅಂದರೆ ಅತಿನೇರಳೆ ಕಿರಣಗಳ
ಮೂಲಕ ಹಾಯಿಸಿದ ನಂತರ ನೀರನ್ನು ಸೋಸುವುದು ಅಗತ್ಯ.

*ವಿಪರ್ಯಯ ಪರಾಸರಣ*
*(Reverse Osmosis –RO)*
ಇವು ತುಂಬ ಜನಪ್ರಿಯವಾದವುಗಳು. ಮೊದಲಿಗೆ ಆಸ್ಮೋಸಿಸ್‌ ಎಂದರೆ ಏನು ಎಂದು ತಿಳಿಯೋಣ.
ಇದರಲ್ಲಿ ಒಂದು ಅರೆಪಾರಕ ಪರದೆ (semipermeable membrane) ಇರುತ್ತದೆ. ಇದರ ಒಂದು
ಬದಿಯಲ್ಲಿ ನೀರಿನ ಅಧಿಕ ಸಾರೀಕೃತ ದ್ರಾವಣ ಇದ್ದು ಇನ್ನೊಂದು ಬದಿಯಲ್ಲಿ ಕಡಿಮೆ ಸಾರೀಕೃತ
ದ್ರಾವಣ ಇರುತ್ತದೆ. ಈ ಅರೆಪಾರಕ ಪರದೆ ನೀರನ್ನು ಕಡಿಮೆ ಸಾರೀಕೃತ ಬದಿಯಿಂದ ಅಧಿಕ ಸಾರೀಕೃತ
ಬದಿಗೆ ಹರಿಯಲು ಬಿಡುತ್ತದೆ.

ಸರಳವಾಗಿ ಹೇಳುವುದಾದರೆ ಹೆಚ್ಚು ಲವಣಗಳು ಇರುವ ನೀರಿನ ಬದಿಗೆ ಕಡಿಮೆ ಲವಣಗಳು ಇರುವ ನೀರು
ಹರಿದು ಎರಡೂ ಕಡೆಯಲ್ಲಿ ಲವಣಗಳ ಪರಿಮಾಣ ಒಂದೇ ಆಗುವಂತೆ ಮಾಡುತ್ತದೆ. ಇದು ಪರಾಸರಣ ಕ್ರಿಯೆ
ಅರ್ಥಾತ್ ಆಸ್ಮೋಸಿಸ್. ವಿಪರ್ಯಯ ಪರಾಸರಣ ಅರ್ಥಾತ್ ರಿವರ್ಸ್ ಆಸ್ಮೋಸಿಸ್ ಎಂದರೆ ಇದಕ್ಕೆ
ವಿರುದ್ಧವಾದುದು. ಇಲ್ಲಿ ಅರೆಪಾರಕ ಪರದೆಯ ಒಂದು ಬದಿಯಲ್ಲಿರುವ ಅಧಿಕ ಸಾರೀಕೃತ (ಅಂದರೆ
ಹೆಚ್ಚಿನ ಲವಣಗಳು, ರಾಸಾಯನಿಕಗಳು, ಕಣಗಳು, ಇತ್ಯಾದಿ ಇರುವ) ನೀರಿನಿಂದ ಕಡಿಮೆ ಸಾರೀಕೃತ
ಬದಿಗೆ ಶುದ್ಧ ನೀರು ಹರಿದು ಬರುತ್ತದೆ.

ಹಾಗೆ ಮಾಡಲು ಈ ಅರೆಪಾರಕ ಪರದೆಯ ಅಧಿಕ ಸಾರೀಕೃತ ನೀರು ಇರುವ ಬದಿಗೆ ತುಂಬ ಒತ್ತಡ ಹಾಕಬೇಕು.
ಕಲುಷಿತ ನೀರಿನಿಂದ ಶುದ್ಧ ನೀರಿನ ಬದಿಗೆ ನೀರು ಹರಿದು ಹೋದ ನಂತರ ಈ ಭಾಗದ ನೀರಿನಲ್ಲಿ ಎಲ್ಲ
ಕಲ್ಮಷಗಳು ಉಳಿದಿರುತ್ತವೆ. ಈ ನೀರನ್ನು ಚೆಲ್ಲಬೇಕು. ಅದಕ್ಕೇ ಈ ಆರ್‌ಓ ಶುದ್ಧೀಕಾರಕಗಳಲ್ಲಿ
ಒಂದು ಚಿಕ್ಕ ಪೈಪ್ ಮೂಲಕ ಹೆಚ್ಚಿಗೆ ನೀರು ಹರಿದು ಬರುತ್ತಿರುತ್ತದೆ. ಸಾಮಾನ್ಯವಾಗಿ
ಮನೆಗಳಲ್ಲಿ ಈ ನೀರನ್ನು ಪಾತ್ರೆ ತೊಳೆಯಲು ಬಳಸುತ್ತಾರೆ. ಈ ವಿಧಾನದಲ್ಲಿ ಒಂದು ಲೀಟರ್
ಶುದ್ಧ ನೀರು ಪಡೆಯುವಾಗ ಇನ್ನೊಂದು ಲೀಟರ್ ನೀರು ವ್ಯರ್ಥವಾಗಿರುತ್ತದೆ.

ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುವ ಕೆಲವು ಮಾದರಿಗಳಲ್ಲಿ ಈ ಮೂರೂ ವಿಧಾನಗಳಿರುತ್ತವೆ.
ಇವಲ್ಲದೆ ಇನ್ನೂ ಒಂದು ವಿಧಾನದಲ್ಲಿ ನೀರನ್ನು ಶುದ್ಧೀಕರಿಸಲಾಗುತ್ತದೆ. ಅದು ಸಂಪೂರ್ಣ
ಕರಗಿದ ಘನವಸ್ತುಗಳ (Total Dissolved Solids –TDS) ನಿವಾರಣೆ. ನೀರು ಮೊದಲು
ಅಲ್ಟ್ರಾಫೈನ್ ಫಿಲ್ಟರ್, ನಂತರ ಆರ್‌ಓ, ನಂತರ ಅತಿನೇರಳೆ (ಅಲ್ಟ್ರಾವಯೊಲೆಟ್) ಮೂಲಕ ಹಾದು
ಕೊನೆಗೆ ಟಿಡಿಎಸ್‌ಗಳನ್ನೂ ತೆಗೆಯುವ ಸೋಸುಕದ ಮೂಲಕ ಹಾದು ಸಂಪೂರ್ಣ ಶುದ್ಧ ನೀರು ಕುಡಿಯಲು
ದೊರೆಯುತ್ತದೆ.

ಜಲಶುದ್ಧೀಕಾರಕಗಳನ್ನು ವರ್ಷಕ್ಕೊಮ್ಮೆ ಸರ್ವೀಸ್ ಮಾಡಿಸಿ ಅದರ ಕೆಲವು ಅಂಗಗಳನ್ನು
ಬದಲಿಸುತ್ತಿರಬೇಕು. ಉದಾಹರಣೆಗೆ ಸೋಸುಕ ಮತ್ತು ಅರೆಪಾರಕ ಪರದೆ. ಸಾಮಾನ್ಯವಾಗಿ ಮೇಲೆ
ತಿಳಿಸಿದ ಈ ಮೂರೂ 

[ms-stf '54563'] ಆಕಾಶವೇಕೆ ನೀಲಿಯಾಗಿದೆ?

2016-02-27 Thread HAREESHKUMAR K Agasanapura
http://m.prajavani.net/article/2016_02_28/390604

*ಆಕಾಶವೇಕೆ ನೀಲಿಯಾಗಿದೆ?*

ಪ್ರಜಾವಾಣಿ ಆರ್ಕ್ಸೈವ್ಸ್‌ / ಟಿ.ಎಲ್. ರಾಮಸ್ವಾಮಿ

ಪ್ರಿಸಂ ಮೂಲಕ ಹಾಯುವಾಗ ಬೆಳಕು ವಿಸರಣವಾಗುವುದು (ಡಿಸ್ಪರ್ಶನ್)

Previous Next


28 Feb, 2016

ಟಿ.ಆರ್. ಅನಂತರಾಮು








‘ಆಕಾಶವೇಕೆ ನೀಲಿಯಾಗಿದೆ?’ ಎಂಬುದು ಅಹಮದಾಬಾದಿನ ಸಮುದಾಯ ವಿಜ್ಞಾನ ಕೇಂದ್ರಕ್ಕೆ ಅಡಿಪಾಯ
ಹಾಕುವ ಸಂದರ್ಭದಲ್ಲಿ (ಡಿಸೆಂಬರ್ 22, 1968) ಅವರು ನೀಡಿದ ಉಪನ್ಯಾಸ. ವಿಜ್ಞಾನವನ್ನು ಹೇಗೆ
ಸರಳವಾಗಿ, ಪರಿಣಾಮಕಾರಿಯಾಗಿ ಹೇಳಬಹುದು ಎಂಬುದಕ್ಕೆ ಈ ಉಪನ್ಯಾಸ ಮಾದರಿಯಾಗಿದೆ. ಮೂಲ
ಉಪನ್ಯಾಸದ ಸಾರ ಸಂಗ್ರಹ ಮಾಡಿಕೊಟ್ಟಿದ್ದಾರೆ ಹಿರಿಯ ಲೇಖಕ
ಟಿ.ಆರ್. ಅನಂತರಾಮು.
ಎಲ್ಲ ವಿದ್ಯಾರ್ಥಿಗಳೂ ಶಿಕ್ಷಕರೂ ಓದಬೇಕಾದ ಬರಹವಿದು.

ನಾನು ವಿಜ್ಞಾನದ ಯಾವ ವಿಚಾರವಾಗಿ ಉಪನ್ಯಾಸ ಕೊಡಬೇಕು ಎಂಬುದನ್ನು ನನಗೇ ಬಿಟ್ಟಾಗ ನಾನು
ಆಯ್ಕೆ ಮಾಡಿಕೊಂಡದ್ದು ‘ಆಕಾಶವೇಕೆ ನೀಲಿಯಾಗಿದೆ?’ ಎಂಬ ವಿಷಯ. ನಿಸರ್ಗ ಈ ದಿನ ಕರುಣೆ
ತೋರಿದೆ; ಆಕಾಶ ನೀಲಿಯಾಗಿದೆ. ಆದರೆ ಎಲ್ಲೆಡೆಯೂ ಅಲ್ಲ. ಬಹಳಷ್ಟು ಭಾಗದಲ್ಲಿ ಮೋಡಗಳಿವೆ. ಈ
ವಿಷಯ ಆಯ್ಕೆಮಾಡಿಕೊಂಡದ್ದು ಏಕೆ ಎಂದರೆ ಇದನ್ನು ನೋಡಲು ಪ್ರಯೋಗಾಲಯಕ್ಕೇನೂ ಹೋಗಬೇಕಾಗಿಲ್ಲ;
ತಲೆಯೆತ್ತಿ ಮೇಲೆ ನೋಡಿದರೆ ಸಾಕು. ಅಷ್ಟೇ ಅಲ್ಲ, ಇದರಲ್ಲಿ ವಿಜ್ಞಾನದ ಚೈತನ್ಯವಿದೆ.

ಕಣ್ಣು ಬಿಟ್ಟು, ತೆರೆದ ಕಿವಿಗಳಿಂದ ಆಲಿಸಿ ಸುತ್ತಣ ಜಗತ್ತನ್ನು ನೋಡಿದರೆ ಅದೇ ವಿಜ್ಞಾನದ
ಕಲಿಕೆ. ನನ್ನ ಮಟ್ಟಿಗೆ ವಿಜ್ಞಾನ ಕೊಟ್ಟಿರುವ ಸ್ಫೂರ್ತಿಯೆಂದರೆ ಪ್ರಕೃತಿಯ ಬಗೆಗಿನ
ಪ್ರೀತಿ. ನೀವು ಜಗತ್ತನ್ನು ಎಲ್ಲೇ ನೋಡಲಿ, ಪ್ರಕೃತಿಯಲ್ಲಿ ಎಲ್ಲ ಬಗೆಯ ಚಮತ್ಕಾರಗಳನ್ನೂ
ಕಾಣುತ್ತೀರಿ. ನನಗೆ ಅವು ಸದಾ ಚೋದ್ಯವುಂಟುಮಾಡಿವೆ. ಸಾಮಾನ್ಯವಾಗಿ ಅದೆಲ್ಲ ಹಾಗೆಯೇ ಎನ್ನುವ
ಮನೋಭಾವ ನಮ್ಮದು. ವೈಜ್ಞಾನಿಕ ಚೈತನ್ಯದ ಹೂರಣವೆಂದರೆ ಹಿಂತಿರುಗಿ ನೋಡಬೇಕು, ಮುನ್ನೋಟ
ಹರಿಸಬೇಕು. ನಮ್ಮೆದುರಿಗಿರುವುದು ಎಂಥ ಅದ್ಭುತ ಜಗತ್ತು ಎನ್ನುವುದನ್ನು ನಮ್ಮ ಒಳಮನಸ್ಸಿಗೆ
ತಂದುಕೊಳ್ಳಬೇಕು. ನಾವು ನೋಡುವುದೆಲ್ಲ ಬರಿ ವಿಸ್ಮಯಕಾರಿಯಾಗಿರುವುದಿಲ್ಲ, ಬದಲು
ಮನುಷ್ಯನಿಗೆ ಸವಾಲೆಸೆಯುತ್ತವೆ. ನಮ್ಮ ಸುತ್ತ ಆವರಿಸಿರುವ ದೊಡ್ಡ ನಿಗೂಢವನ್ನು ಬೆದಕಲು
ಪ್ರೇರೇಪಿಸುತ್ತವೆ.

ಇಂಥ ಸವಾಲನ್ನು ‘ವಿಜ್ಞಾನ ಸಮುದಾಯ’ ಸವಾಲೆಂದೇ ಸ್ವೀಕರಿಸುತ್ತದೆ, ಪರಿಹಾರ ಹುಡುಕಲು
ಪ್ರಯತ್ನಿಸುತ್ತದೆ. ಡಾ. ವಿಕ್ರಂ ಸಾರಾಭಾಯಿ ಅವರು ಈಗಾಗಲೇ ನುಡಿದಂತೆ– ನಮ್ಮ ದೇಶದ ಯುವ
ಜನಾಂಗ ಇಂಥ ಸವಾಲನ್ನು ಸ್ವೀಕರಿಸಲು ಯಾವ ರೀತಿಯಲ್ಲಿ ಸಿದ್ಧವಾಗಿದೆ? ಅವರನ್ನು
ಎಚ್ಚರಿಸುವುದು ಹೇಗೆ? ಮತ್ತೆ ಭಾರತವನ್ನು ಜ್ಞಾನಕೇಂದ್ರವಾಗಿ ಬೆಳಗಬೇಕಲ್ಲ! ಈಗ ಮೊದಲು
ಎತ್ತಿದ ಪ್ರಶ್ನೆಗೆ ಮರಳುತ್ತೇನೆ.

ಆಕಾಶವೇಕೆ ನೀಲಿಯಾಗಿದೆ? ಕುತೂಹಲಕಾರಿ ಅಂಶವೆಂದರೆ ಈ ಪ್ರಶ್ನೆಗೆ ಉಡಾಫೆಯ ಉತ್ತರ ಕೊಡುವುದು
ಸುಲಭ. ಬೇಕಾದರೆ ‘ಎಲೆಗಳೇಕೆ ಹಸಿರಾಗಿವೆ?’ ಎಂದು ಸಸ್ಯ ವಿಜ್ಞಾನಿಯನ್ನು ಕೇಳಿ, ಆತ
ಗೊಣಗುತ್ತ ‘ಕ್ಲೋರೋಫಿಲ್‌ನಿಂದ’ ಎಂಬ ಚುಟಕು ಉತ್ತರಕೊಟ್ಟು ತೆಪ್ಪಗಾಗುತ್ತಾನೆ. ಎಲ್ಲ
ವೈಜ್ಞಾನಿಕ ಪ್ರಶ್ನೆಗಳಿಗೂ ಇದೇ ಧಾಟಿಯಲ್ಲಿ ಎರಡು ಮೂರು ಪದಗಳಲ್ಲಿ ಉತ್ತರಕೊಟ್ಟು ಕೈ
ತೊಳೆದುಕೊಳ್ಳುವುದಕ್ಕೆ ಆಗುವುದಿಲ್ಲ. ಇಂಥ ಉತ್ತರದಿಂದ ಪರೀಕ್ಷೆಯಲ್ಲಿ ಪಾಸಾಗಬಹುದು ನಿಜ.
ಆದರೆ ಅದು ಸಮರ್ಪಕ ಉತ್ತರ ಅಲ್ಲ.ನಿಸರ್ಗ ಎಸೆಯುವ ವೈಜ್ಞಾನಿಕ ಸವಾಲೆಂದರೆ ಅದಕ್ಕೆ
ಉತ್ತರವಾಗಿ ಬರಿ ಆವಿಷ್ಕಾರ ಮಾಡುವುದಲ್ಲ, ಮತ್ತೆ ಮತ್ತೆ ಸುದೀರ್ಘವಾಗಿ ಚಿಂತನೆ
ಮಾಡುತ್ತಿರುವುದು, ನಿಗೂಢವನ್ನು ಒಡೆಯಲು ಗಾಢವಾಗಿ ತೊಡಗುವುದು.

‘ಆಕಾಶವೇಕೆ ನೀಲಿ’ ಎಂಬುದು ಕುತೂಹಲಕರ ಪ್ರಶ್ನೆ. ಇದರಲ್ಲಿ ಎರಡು ಅಂಶಗಳಿವೆ. ಅಲ್ಲಿ
ಆಕಾಶವಿದೆ– ಇಲ್ಲಿ ನಾನಿದ್ದೇನೆ. ನನಗೆ ಅದು ಕಾಣುವುದು ನೀಲಿಯಾಗಿ. ಮನುಷ್ಯನ ಮಿದುಳು
ಮತ್ತು ಮನಸ್ಸು ಎರಡರ ಪಾತ್ರವೂ ಇದರಲ್ಲಿದೆ. ಹಿಂದೆ ಯಾರೂ ತಲೆ ಕೆಡಿಸಿಕೊಂಡಿರದ ಪ್ರಶ್ನೆ
ಇದೆಂದು ಭಾವಿಸಿ, ನಿಮಗೆ ನೀವೇ ಈ ಪ್ರಶ್ನೆ ಹಾಕಿಕೊಳ್ಳಿ. ಆಗ ಅದೊಂದು ಭಾವೋದ್ರೇಕಗೊಳಿಸುವ
ಪ್ರಶ್ನೆ ಎಂದು ನಿಮಗೆ ಅನ್ನಿಸುತ್ತದೆ. ಅದಕ್ಕೆ ಸ್ವತಃ ನೀವೇ ಉತ್ತರಿಸಬಹುದೇ ನೋಡಿ.

ನಿರಭ್ರ ರಾತ್ರಿಯಲ್ಲಿ ನಕ್ಷತ್ರಗಳು ಮಿನುಗುವುದನ್ನು ಕಾಣುತ್ತೇವೆ. ಹಾಗಿದ್ದಲ್ಲಿ, ಹಗಲು
ಹೊತ್ತಿನಲ್ಲೇಕೆ ಮಿನುಗುವುದು ಕಾಣುವುದಿಲ್ಲ? ಪ್ರಶ್ನಿಸಿಕೊಳ್ಳಿ. ಉತ್ತರ ಕಂಡ ಹಾಗೇ ಇದೆ.
ಭೂದೇವಿ ಪರದೆಯ ಹಿಂದೆ ಬಚ್ಚಿಟ್ಟುಕೊಂಡಿದ್ದಾಳೆ. ಈ ಪರದೆ ಬೇರೆ ಯಾವುದೂ ಅಲ್ಲ, ವಾಯುಗೋಳ.
ತಿಳಿರಾತ್ರಿಯಲ್ಲಿ ನಾವು ಕ್ಷೀಣವಾಗಿ ಕಾಣುವ ನಕ್ಷತ್ರವನ್ನು, ಕ್ಷೀರಪಥವನ್ನು ಅದೇ
ವಾಯುಗೋಳದಲ್ಲಿ ಕಾಣುತ್ತೇವಲ್ಲ. ಆಕಾಶ ನಿಜಕ್ಕೂ ನೀಲಿ ಆಗಿರಬೇಕೆಂದರೆ ಅಲ್ಲಿ
ಮೋಡಗಳಿರಬಾರದು, ದೂಳಿನ ಕಣಗಳು ಇರಬಾರದು.

ವಾಯುಗೋಳದ ಸ್ಥಿತಿ ಆಧರಿಸಿ, ಕೆಲವೊಮ್ಮೆ ಆಕಾಶ ನೀಲಿಯಾಗಿ ಕಾಣುತ್ತದೆ, ಕೆಲವೊಮ್ಮೆ ನೀಲಿ
ಇರುವುದಿಲ್ಲ. ನೋಡಿದ ಮಾತ್ರಕ್ಕೇ ಇದನ್ನು ಹೇಳಬಹುದು. ಆಕಾಶ ಮತ್ತು ವಾಯುಗೋಳ ಸೂರ್ಯನ
ಬೆಳಕಿನಲ್ಲಿ ಝಗಮಗಿಸುತ್ತವೆ. ಬೆಳಕು ವಾಯುವಿನಿಂದ ಕೂಡಿರುವ ದಟ್ಟ ವಾಯುಗೋಳದ ಪದರದ ಮೂಲಕವೇ
ಹಾಯ್ದುಬರಬೇಕು. ಕೆಲವೊಮ್ಮೆ ಅದು ಪಾರದರ್ಶಕ, ಇರುಳಿನಲ್ಲಿ ಗೋಚರಿಸುವುದಿಲ್ಲ. ಎಂದಾದರೂ
ಪೂರ್ಣ ಚಂದ್ರ ಇರುವ ರಾತ್ರಿಯನ್ನು ಕುತೂಹಲಕಾರಿಯಾಗಿ ನೀವು ಗಮನಿಸಿದ್ದೀರಾ? ಚಂದ್ರನ ಮೇಲೆ
ಸೂರ್ಯನ ಬೆಳಕು ವಿಸರಣವಾದರೆ (ಡಿಫ್ಯೂಸ್) ಅಥವಾ ಪ್ರತಿಫಲಿಸಿದರೆ ಅದೇ ನಾವು ಕಾಣುವ
ಬೆಳದಿಂಗಳು.

ಬೆಳದಿಂಗಳ ರಾತ್ರಿಯಲ್ಲಿ ಆಕಾಶವೇನೂ ನೀಲಿಯಾಗಿರುವುದಿಲ್ಲ. ಪೇಲವ ಬಣ್ಣ, ಸ್ವಲ್ಪ
ಬೆಳಕಿರುತ್ತದೆ. ಪೂರ್ಣಚಂದ್ರನ ರಾತ್ರಿಯಲ್ಲೂ ಮಿನುಗುವ ನಕ್ಷತ್ರಗಳನ್ನು ನೋಡಬಹುದು.
ಹಗಲಿನಲ್ಲಿ ಪ್ರಕಾಶವಿದ್ದಾಗ, ಆಕಾಶ ನೀಲಿಯಾಗಿ ಕಾಣುತ್ತದೆ, ಬೆಳದಿಂಗಳ ದಿನಗಳಲ್ಲಿ
ಏಕಿಲ್ಲ? ಕಾರಣವಿಷ್ಟೇ, ಬೆಳದಿಂಗಳು ಶಕ್ತಿಯುತವಾದದ್ದಲ್ಲ. ಇದನ್ನು ಅರ್ಥಮಾಡಿಕೊಳ್ಳಲು
ನೀವು ದೊಡ್ಡ ಗಣಿತ ವಿಶಾರದರಾಗಬೇಕಾಗಿಲ್ಲ. ಯಾರಾದರೂ ಉತ್ಸಾಹಿ ತರುಣರು ಲೆಕ್ಕಹಾಕಬಹುದು.
ಬೆಳದಿಂಗಳ ಬೆಳಕೆಂದರೆ ಸೂರ್ಯನ ಪ್ರಜ್ವಲತೆಯ ದಶಲಕ್ಷದ ಒಂದು ಭಾಗ. ಅಬ್ಬಬ್ಬಾ, ಅಷ್ಟು
ಕಡಿಮೆಯೇ ಎಂದು ನೀವು ಉದ್ಗಾರ ತೆಗೆಯಬಹುದು.

ಆದರೂ ಬೆಳದಿಂಗಳು ಉಜ್ವಲವಾಗಿಯೇ ಕಾಣುತ್ತದೆ. ಎಲ್ಲ ತಾರೆಗಳನ್ನು ಅದು
ಮಸುಕುಗೊಳಿಸುವಷ್ಟಲ್ಲ, ಆಕಾಶವಂತೂ ಆಗ ನೀಲಿಯಾಗಿರುವುದಿಲ್ಲ. ಮನುಷ್ಯನ ದೃಷ್ಟಿ ಇಲ್ಲಿ
ಕೆಲಸ ಮಾಡುತ್ತದೆ. ಬಣ್ಣ ನಿಚ್ಚಳವಾಗಿ ನಮಗೆ 

[ms-stf '54561'] ಅನುದಿನವೂ ವಿಜ್ಞಾನ ದಿನವಾಗಲಿ! - Vijaya Karnataka

2016-02-27 Thread HAREESHKUMAR K Agasanapura
http://m.vijaykarnataka.com/state/vk-special/VK-Special-C-V-Raman-Today-National-Science-Day/articleshow/51172165.cms

*ಅನುದಿನವೂ ವಿಜ್ಞಾನ ದಿನವಾಗಲಿ!*

Feb 28, 2016, 04.00 AM IST

Whatsapp Facebook Google Plus
Twitter Email


C-V-Raman

AAA

ಇಂದು ರಾಷ್ಟ್ರೀಯ ವಿಜ್ಞಾನ ದಿನ. ವಿಶ್ವ ವಿಖ್ಯಾತ ವಿಜ್ಞಾನಿ ಸರ್. ಸಿ.ವಿ. ರಾಮನ್,
ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ ಬಗ್ಗೆ ಹೊಸ ಹೊಳಹೊಂದನ್ನು
ಪ್ರತಿಪಾದಿಸಿದ ದಿನ. ಮಾನವನ ಏಳ್ಗೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ವಹಿಸುತ್ತಿರುವ
ಮಹತ್ತರ ಪಾತ್ರವನ್ನು ಗುರುತಿಸಿ, ಆ ವಲಯಕ್ಕೆ ಮತ್ತಷ್ಟು ಬಲತುಂಬುವ, ಸಂಶೋಧನಾ ರಂಗದಿಂದ
ವಿಮುಖರಾಗುತ್ತಿರುವ ಪೀಳಿಗೆಯನ್ನು ವಿಜ್ಞಾನಮುಖಿಯಾಗಿಸುವ ಕೆಲಸ ಆಗಬೇಕಿದೆ.

-
* ಸುಧೀಂದ್ರ ಹಾಲ್ದೊಡ್ಡೇರಿ
ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟು ಹದಿನಾರು ವರ್ಷಗಳು ಉರುಳಿವೆ. ಕಳೆದೊಂದು
ಶತಮಾನದತ್ತ ಅವಲೋಕಿಸಿದಾಗ ನಿಚ್ಚಳವಾಗಿ ಕಂಡುಬರುವುದು ವಿಜ್ಞಾನದೊಂದಿಗೆ ನಡೆದ ಅನುಸಂಧಾನದ
ಚರಿತ್ರೆಯೇ. ವಿಜ್ಞಾನದ ಜತೆಗಿನ ಈ ಅನುಸಂಧಾನ ಮಾನವ ಚಿಂತನೆಯ ದಿಕ್ಕನ್ನೇ ಬದಲಿಸಿದೆ.
ವಿಜ್ಞಾನ ಸಂಶೋಧನೆಗಳು, ಚಿಂತನೆಗಳು, ಅವುಗಳಿಂದ ಮೂಡಿದ ತಂತ್ರಜ್ಞಾನ ಹೊಸ ಸಂಸ್ಕೃತಿಯ
ಹುಟ್ಟಿಗೆ ನಾಂದಿ ಹಾಡಿವೆ. ಮನುಕುಲದ ಇತಿಹಾಸದಲ್ಲಿ ಕಳೆದ ಒಂದು ಶತಮಾನದಲ್ಲಿ ನಡೆದಷ್ಟು
ವೈಜ್ಞಾನಿಕ ಪ್ರಗತಿ ಇನ್ಯಾವ ಕಾಲದಲ್ಲಿಯೂ ನಡೆದಿಲ್ಲ. ಈ ಪ್ರಗತಿಯ ಬಗ್ಗೆ ಮಾತನಾಡುವಾಗ
ಕೂಡಲೇ ನಮ್ಮ ನೆನಪಿಗೆ ಬರುವುದು ಅದು ಕೊಟ್ಟಿರುವ ಐಹಿಕ ಸುಖಸಾಧನಗಳು. ಅದು ಮಿಂಚಿನ ವೇಗದ
ವಿಮಾನ - ಅಂತರಿಕ್ಷ ಶಟಲ ಪಯಣವಾಗಿರಬಹುದು. ಇಲ್ಲವೆ ಜಗತ್ತನ್ನೇ ಒಂದು ಪುಟ್ಟ
ಹಳ್ಳಿಯಾಗಿಸಿಬಿಟ್ಟಿರುವ ಟೆಲಿಫೋನ್-ಇಂಟರ್‌ನೆಟ್ ಸಂಪರ್ಕವಿರಬಹುದು. ಅಥವಾ ಕಣ್ಣು
ಮಿಟಕಿಸುವಷ್ಟರಲ್ಲಿ ಮೇಲೇರುತ್ತಾ ಕೃತಕ ಉಪಗ್ರಹವೊಂದನ್ನು ಉಡ್ಡಯಿಸಿರುವ ರಾಕೆಟ್
ಆಗಿರಬಹುದು. ಹೀಗೆ ಕಳೆದೊಂದು ಶತಮಾನದಿಂದ ಮೂಲ ವಿಜ್ಞಾನ ಮತ್ತದಕ್ಕೆ ಪೂರಕವಾಗಿರುವ
ತಂತ್ರಜ್ಞಾನ ನಮ್ಮೆಲ್ಲರ ಕಲ್ಪನೆಯನ್ನೂ ಮೀರಿ ಬೆಳೆಯುತ್ತಿದೆ. ವಿಜ್ಞಾನ ನೇರವಾಗಿ, ಹಲವು
ಬಾರಿ ಪರೋಕ್ಷವಾಗಿ ಇಪ್ಪತ್ತನೆಯ ಶತಮಾನದ ರಾಜಕೀಯ ವಿಪ್ಲವಗಳಿಗೆ, ಸಾಮಾಜಿಕ ಪಲ್ಲಟಗಳಿಗೆ,
ಜಾಗತಿಕ ಆರ್ಥಿಕ ಏಳು-ಬೀಳುಗಳಿಗೆ ಕಾರಣವಾಗಿದೆ. ಒಟ್ಟಾರೆಯಾಗಿ ವಿಜ್ಞಾನ ಮಾನವನ ಬೌದ್ಧಿಕ
ಚಿಂತನೆಯ ವಿಧಾನವನ್ನೇ ಬದಲಾಯಿಸಿದೆ.

ಈ ಅಗಾಧ ವಿಶ್ವದಲ್ಲಿ ಸದ್ಯಕ್ಕೆ ಗುರುತಿಸಿರುವಂತೆ ಜೀವಿಗಳಿರುವ ಏಕೈಕ ಗ್ರಹ ನಮ್ಮ ಭೂಮಿ. ಈ
ಭೂಮಿ ತನ್ನದೇ ಅಕ್ಷದಲ್ಲಿ ಸುತ್ತುವ ವೇಗವನ್ನು ಭೂಮಧ್ಯ ರೇಖೆಯ ಹತ್ತಿರ ಅಳೆದರೆ ಅದು
ಗಂಟೆಗೆ ಒಂದು ಸಾವಿರ ಮೈಲಿಗಳು. ಅಕಸ್ಮಾತ್ ಈ ವೇಗ ಗಂಟೆಗೆ ನೂರು ಮೈಲುಗಳಿಗೆ ಇಳಿದರೆ
ಏನಾಗುತ್ತದೆ? ನಮ್ಮ ದಿನ ಮತ್ತು ರಾತ್ರಿಗಳ ಅವಧಿ ಹತ್ತು ಪಟ್ಟು ಹೆಚ್ಚಾಗುತ್ತದೆ. ಸೂರ್ಯ
ಹೆಚ್ಚು ಕಾಲ ಪ್ರಜ್ವಲಿಸಿದಂತೆ ಹಸಿರೆಲ್ಲ ನಾಶವಾಗಬಹುದು. ಸೂರ್ಯನ ತಾಪಮಾನ ಹತ್ತು ಸಹಸ್ರ
ಡಿಗ್ರಿ ಫ್ಯಾರನ್‌ಹೀಟ್ ಎಂದು ಅಂದಾಜು ಮಾಡಲಾಗಿದೆಯಲ್ಲವೆ? ನಮ್ಮ ಭೂಮಿ ಕಾಪಾಡಿಕೊಂಡಿರುವ
ದೂರದಿಂದ ನಾವಿನ್ನೂ ಸುರಕ್ಷವಾಗಿದ್ದೇವೆ. ಈ ದೂರ ಹೆಚ್ಚಾದರೆ ಸಾಕಷ್ಟು ಬಿಸಿಯಿಲ್ಲದೆ ನಮ್ಮ
ರಕ್ತ ಹೆಪ್ಪುಗಟ್ಟಬಹುದು. ದೂರ ಕಮ್ಮಿಯಾದರೆ ಆ ಸುಡು ತಾಪಮಾನಕ್ಕೆ ನಾವೆಲ್ಲಾ ಸುಟ್ಟು
ಕರಕಲಾಗಬಹುದು. ನಮ್ಮ ಭೂಮಿ ಸೂರ್ಯನನ್ನು ಸುತ್ತುವುದು ಇಪ್ಪತ್ಮೂರು ಡಿಗ್ರಿ ಕೋನದಲ್ಲಿ. ಈ
ಕಾರಣದಿಂದ ನಮ್ಮಲ್ಲಿ ಋತು ಬದಲಾವಣೆ. ಈ ವಾಲುವ ಕೋನದ ಬದಲು ಭೂಮಿ ನೆಟ್ಟಗೆ ಸೂರ್ಯನನ್ನು
ಸುತ್ತಿದ್ದರೆ? ಸಾಗರದ ನೀರೆಲ್ಲಾ ಆವಿಯಾಗಿ, ಆ ಆವಿ ತಂಪಾಗಿ ಇಡೀ ಭೂಮಂಡಲದ ತುಂಬ
ಮಂಜುಗಡ್ಡೆಯ ರಾಶಿಯೇ ತುಂಬಿರುತ್ತಿತ್ತು. ಇನ್ನು ಚಂದ್ರ ಮತ್ತು ಭೂಮಿಗಿರುವ ಅಂತರ
ಹೆಚ್ಚಾಗಿದ್ದಿದ್ದರೆ? ಗುರುತ್ವಾಕರ್ಷಣೆಯಲ್ಲಿ ಏರುಪೇರಾಗಿ ಸಮುದ್ರಗಳೆಲ್ಲ ಉಕ್ಕಿ ಹರಿದು
ನಾವೆಲ್ಲ ಕೊಚ್ಚಿ ಹೋಗುತ್ತಿದ್ದೆವೇನೊ? ಇದೇ ರೀತಿ ಭೂಮಿಯೊಳಗಿನ ಕೇಂದ್ರದ ಸ್ಥಾನ
ಹೆಚ್ಚೂ-ಕಮ್ಮಿಯಾಗಿದ್ದರೆ? ಸಾಗರ ಮತ್ತಷ್ಟು ಆಳವಾಗಿದ್ದರೆ? ಆಮ್ಲಜನಕ ಮತ್ತು ಇಂಗಾಲದ ಡೈ
ಆಕ್ಸೈಡ್ ಪ್ರಮಾಣದಲ್ಲಿ ಏರುಪೇರಾಗುತ್ತಿತ್ತು. ಮನುಷ್ಯನೂ ಸೇರಿದಂತೆ ನಮ್ಮೆಲ್ಲ ಜೈವಿಕ
ಪರಿಸರಕ್ಕೆ ಪೂರಕವಾದ ಸಹಸ್ರಾರು ಅಂಶಗಳು ಏಕಕಾಲದಲ್ಲಿ ಒಂದೆಡೆ ಮೇಳೈಸುವ ಸಾಧ್ಯತೆ ಎಷ್ಟು?
ಗ್ರಹವೊಂದರ ಮೇಲೆ ಜೀವ ವಿಕಾಸವಾಗಲು ಅಗತ್ಯವಾದ ಪೂರಕ ಅಂಶಗಳೆಲ್ಲಾ ಏಕ ಕಾಲಕ್ಕೆ ಮೇಳೈಸಲು
ಅದೆಷ್ಟು ಲಕ್ಷ ಕೋಟಿಗಳಲ್ಲಿ ಒಂದು ಸಾಧ್ಯತೆಯೊ? ಎಣಿಸಲಾಗದು. ಈ ಒಂದು ಕುತೂಹಲ
ನಮ್ಮೆಲ್ಲರನ್ನೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳತ್ತ ಸೆಳೆಯುತ್ತಲೇ ಬಂದಿದೆ.

1930ರಿಂದ ಇಂದಿನವರೆಗೆ - ಭಾರತದಲ್ಲೇ ಹುಟ್ಟಿ, ಬೆಳೆದು, ತಮ್ಮ ಕಾರ್ಯಕ್ಷೇತ್ರವನ್ನು
ವಿದೇಶಕ್ಕೆ ಬದಲಿಸದ ಏಕೈಕ ನೊಬಲ್ ಪುರಸ್ಕೃತ ವಿಜ್ಞಾನಿ - ಸಿ.ವಿ.ರಾಮನ್.

ರಾಮನ್ ಮತ್ತು ಅವರು ಹುಟ್ಟು ಹಾಕಿದ ಅಪ್ಪಟ ಸ್ವಾವಲಂಬನೆಯ ವಿಜ್ಞಾನ ಚಿಂತನೆಯ ಬಗ್ಗೆ ಚರ್ಚೆ
ಮಾಡಲೇಬೇಕಾದ ಸಂದರ್ಭವಿದು. ಜಗತ್ತಿನ ಭವಿಷ್ಯವನ್ನು ರೂಪಿಸುವಲ್ಲಿ ಭಾರತೀಯರು ಮಹತ್ವದ
ಪಾತ್ರವಹಿಸಲಿದ್ದಾರೆಂದು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಈಗಾಗಲೇ ಮನವರಿಕೆಯಾಗಿದೆ.
ದೇಶವೊಂದರ ಆರ್ಥಿಕ ಪ್ರಗತಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅಪಾರ. ಇಂದಿನ ವಿಶ್ವ
ವ್ಯಾಪಾರ ಸಂಸ್ಥೆಯಿಂದ ಪ್ರೇರಿತವಾದ ಜಾಗತೀಕರಣದ ಕಾಲದಲ್ಲಿ ವಿಜ್ಞಾನ ಮತ್ತು
ತಂತ್ರಜ್ಞಾನಕ್ಕೆ ಉತ್ತೇಜನ ನೀಡದಿರುವ ದೇಶಗಳಿಗೆ ಉಳಿಗಾಲವಿಲ್ಲ. ಜಗತ್ತಿನೆಲ್ಲೆಡೆ ನೊಬಲ್
ಪುರಸ್ಕೃತರನ್ನು ಪೋಷಿಸುವ ಸಂಸ್ಥೆ ವಿಶ್ವವಿದ್ಯಾಲಯ. ಈ ನಿಟ್ಟಿನಲ್ಲಿ ನಮ್ಮ ದೇಶದ
ವಿಶ್ವವಿದ್ಯಾಲಯಗಳು ಕಳೆದ ಎಂಬತ್ಮೂರು ವರ್ಷಗಳಲ್ಲಿ ಮತ್ತೊಬ್ಬ ಸಿ.ವಿ.ರಾಮನ್ ಅನ್ನು
ಕೊಟ್ಟಿಲ್ಲ. ಇದರ ಬಗ್ಗೆ ಕಾರಣ ಹುಡುಕ ಹೊರಟರೆ ನಮ್ಮೆಲ್ಲ ಪ್ರತಿಭಾವಂತ ವಿದ್ಯಾರ್ಥಿಗಳು
ಮೂಲ ವಿಜ್ಞಾನ ಅಧ್ಯಯನದಿಂದ ವಿಮುಖರಾಗಿರುವ ಕಠೋರ ಸತ್ಯ ಗೋಚರಿಸುತ್ತದೆ. ಒಂದೆಡೆ
ಸಂಪನ್ಮೂಲಗಳ ಕೊರತೆ, ಮತ್ತೊಂದೆಡೆ ಅನ್ವೇಷಕ ಪ್ರವೃತ್ತಿಯ ವಿದ್ಯಾರ್ಥಿಗಳ ಅಭಾವ. ಈ
ನೆಪಗಳಿಗೂ ಮಿಗಿಲಾದ ಒಂದು ಪ್ರಮುಖ ಕಾರಣವೊಂದಿದೆ. ಅದುವೇ ಬದಲಾಗುತ್ತಿರುವ ಆದ್ಯತೆ.

ಜಗತ್ತಿನ ಮೂರನೆಯ ಅತಿ ದೊಡ್ಡ ಸಂಖ್ಯೆಯ ವಿಜ್ಞಾನ (ತಂತ್ರಜ್ಞಾನ) ಪದವೀಧರರನ್ನು
ಉತ್ಪಾದಿಸುತ್ತಿರುವ ದೇಶ ನಮ್ಮದು. ಇಂಥದೊಂದು ಕ್ಲೀಶೆಯ ವಾಕ್ಯ ಆಗಿಂದಾಗ್ಗೆ ಕಿವಿಗೆ
ತಪ್ಪದೇ ಬೀಳುತ್ತಿರುತ್ತದೆ. ಈ ಮಾತುಗಳು ನಿಜವೇ ಆಗಿದ್ದರೆ ಮತ್ತೊಬ್ಬ ರಾಮನ್ ನಮ್ಮ
ದೇಶದಲ್ಲೇಕೆ ಹುಟ್ಟಲಿಲ್ಲ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಸದ್ಯಕ್ಕೆ ಫ್ಯಾಕ್ಟರಿಯಲ್ಲಿ
ಹೊರಬರುವ ಉತ್ಪನ್ನಗಳಂತೆ ಎಂಜಿನಿಯರಿಂಗ್ ಪದವೀಧರರ ಸಂಖ್ಯೆ ವರ್ಷದಿಂದ ವರ್ಷಕ್ಕೆ
ಏರುತ್ತಿದೆ. ಆದರೆ ಮೂಲ ವಿಜ್ಞಾನ ವಿಷಯಗಳನ್ನು ಗಂಭೀರವಾಗಿ ಅಭ್ಯಸಿಸುವವರ ಸಂಖ್ಯೆ
ಕ್ಷೀಣಿಸುತ್ತಿದೆ. ಇನ್ನು ಎಂಜಿನಿಯರಿಂಗ್ ಪದವೀಧರರೂ ಹೆಚ್ಚಿನ ಪರಿಶ್ರಮವಿಲ್ಲದ (ದೇಹಕ್ಕೆ
ಮತ್ತು ಮಿದುಳಿಗೆ) ಕೆಲಸಗಳತ್ತಲೇ ಗಮನ ಹರಿಸುತ್ತಿದ್ದಾರೆ. ತಮ್ಮದೇ ದೇಶ ಕಟ್ಟುವ
ಸವಾಲೆಸೆಯಬಲ್ಲ ಕೆಲಸಗಳಿಂದ ವಿಮುಖರಾಗುತ್ತಾ ವಿದೇಶಗಳಲ್ಲಿ ಸಾಮಾನ್ಯರೂ ಮಾಡಬಹುದಾದಂಥ
ಸಣ್ಣ-ಪುಟ್ಟ ಕೆಲಸಗಳಿಗೆ ಶರಣಾಗುತ್ತಿದ್ದಾರೆ.

ರಾಮನ್ನರೇಕೆ, ವಿಶ್ವೇಶ್ವರಯ್ಯನವರನ್ನೂ ಮರೆತಿರುವ ಕಾಲವಿದು. ಕಾರು ಕಾರ್ಖಾನೆ ಕೊಡದೇ
ಸತಾಯಿಸಿದ ಬ್ರಿಟಿಷರನ್ನು ಸಾಕಷ್ಟು ಒತ್ತಾಯಿಸಿ ಕಡೆಗೆ ವಿಮಾನ ಕಾರ್ಖಾನೆಯೊಂದನ್ನು
ಬೆಂಗಳೂರಿಗೆ 

[ms-stf '54470'] ಮನುಕುಲದ ಕಿವಿ ತೆರೆಸಿದ ಗುರುತ್ವ ಕಂಪನ

2016-02-25 Thread HAREESHKUMAR K Agasanapura
http://m.prajavani.net/article/2016_02_25/389899

*ಮನುಕುಲದ ಕಿವಿ ತೆರೆಸಿದ ಗುರುತ್ವ ಕಂಪನ*

25 Feb, 2016

ನಾಗೇಶ್ ಹೆಗಡೆ








ಕಳೆದ ಗುರುವಾರ ಈ ಭೂಮಿಯ ಮೇಲಿನ ಎಲ್ಲಭೌತ ವಿಜ್ಞಾನಿಗಳಿಗೆ ವಿಶೇಷ ಗುರುಬಲ ಬಂತು. ನಾನಾ
ದೇಶಗಳ ಸಾವಿರಾರು ವಿಜ್ಞಾನಿಗಳು ಏಕಕಾಲಕ್ಕೆ ’ಉಊಊಊಂವ್’ ಎಂದು ಗುರುತ್ವ ಅಲೆಗಳ ನಾದವನ್ನು
ಅನುಕರಿಸಿ  ಹರ್ಷೋದ್ಗಾರ ಹೊಮ್ಮಿಸಿದರು. ಅವರ ಸಂತಸಕ್ಕೆ ಕಾರಣವೇನೆಂದರೆ, ಈ ವಿಶ್ವದಲ್ಲಿ
ಗುರುತ್ವ ತರಂಗಗಳಿವೆ ಎಂಬುದು ಇದೇ ಮೊದಲ ಬಾರಿಗೆ ಸಾಬೀತಾಯಿತು. ಇಂಥ ತರಂಗಗಳು
ಇರಲೇಬೇಕೆಂದು ಆಲ್ಬರ್ಟ್ ಐನ್‌ಸ್ಟೀನ್ ಸರಿಯಾಗಿ ನೂರು ವರ್ಷಗಳ ಹಿಂದೆ ಗಣಿತ ಸೂತ್ರಗಳ
ಆಧಾರದಲ್ಲಿ ಪ್ರತಿಪಾದಿಸಿದ್ದು ಕೊನೆಗೂ ಸತ್ಯವಾಯಿತೆಂಬ ಸಂತಸದ ಅಲೆ ಅದಾಗಿತ್ತು.

ಅಲೆ ಒಂದೆರಡಲ್ಲ; ನೊಬೆಲ್ ಪ್ರಶಸ್ತಿಗೆ ನೇರಾನೇರ ಅರ್ಹವಾಗಬಲ್ಲ ಸಂಶೋಧನೆ ಸಾಧ್ಯವಾಯಿತೆಂದು
ಕೆಲವರಲ್ಲಿ ಸಂಭ್ರಮದ ಅಲೆ ಹೊಮ್ಮಿದರೆ, ಇನ್ನು ಕೆಲವರಲ್ಲಿ ವಿಶ್ವದ ವಿಸ್ಮಯಗಳನ್ನು ಅರ್ಥ
ಮಾಡಿಕೊಳ್ಳಲು ಹೊಸದೊಂದು ಅಸ್ತ್ರ ಲಭಿಸಿತೆಂಬ ಆನಂದದ ಅಲೆಯನ್ನೂ ಅದು ಹೊಮ್ಮಿಸಿತು.
ಭೌತವಿಜ್ಞಾನದ ಘನ ಪಂಡಿತರಿಗೆ, ಉಪನ್ಯಾಸಕರಿಗೆ, ಚರ್ಚಾಪಟುಗಳಿಗೆ, ಗ್ರಂಥಕರ್ತರಿಗೆ,
ಪ್ರಕಾಶಕರಿಗೆ, ಹೊಸ ಅವಕಾಶಗಳ ಬಾಗಿಲು ತೆರೆದುಕೊಂಡಿತೆಂದು ಸಂತಸದ ಅಲೆ ಹೊಮ್ಮಿತು. ಪಕ್ಕದ
ಪಾಕಿಸ್ತಾನದಲ್ಲೂ ಸಂತಸದ ಅಲೆ ಎದ್ದಿತು; ಏಕೆಂದರೆ ಗುರುತ್ವ ತರಂಗವನ್ನು ಪತ್ತೆ ಹಚ್ಚಿದ
ತಂಡದಲ್ಲಿ ಪಾಕಿಸ್ತಾನಿ ಮೂಲದ ನೆರ್ಗಿಸ್ ಮಾವೆಲ್‌ವಾಲಾ ಎಂಬ ಸುಂದರ ಪಾರ್ಸಿ ಯುವತಿಯೂ
ಇದ್ದಳೆಂಬುದೇ ಅಲ್ಲಿನ ಪ್ರಜೆಗಳಿಗೆ ಉದ್ವೇಗದ ಸಂಗತಿಯಾಗಿತ್ತು.

ನಿಜ ಹೇಳಬೇಕೆಂದರೆ, ಈ ಗುರುತ್ವ ತರಂಗ ಅಂದರೆ ಏನು, ಅದರಿಂದ ಏನೇನಾಗುತ್ತದೆ, ಅದರ ಪ್ರಯೋಜನ
ಏನು ಎನ್ನುವುದು ಯಾವ ಸಾಮಾನ್ಯ ಪಾಮರರಿಗೂ ಅರ್ಥವಾಗುವ ವಿಷಯ ಅಲ್ಲವೇ ಅಲ್ಲ. ಮೂರು ವರ್ಷಗಳ
ಹಿಂದೆ ಹಿಗ್ಸ್ ಬೋಸಾನ್ ಕಣಗಳು ಪತ್ತೆಯಾದಾಗ ‘ದೇವಕಣ’ಗಳೇ ಪ್ರತ್ಯಕ್ಷವಾದವು ಎಂದು
ಮಾಧ್ಯಮಗಳಲ್ಲಿ ಎಷ್ಟೊಂದು ಸಂಭ್ರಮ ಪ್ರಕಟವಾಗಿತ್ತಲ್ಲ? ವಿಜ್ಞಾನದ ಚಮತ್ಕಾರವೇ ಅಂಥದ್ದು.
ಗಹನ ನಿಗೂಢಗಳು ಅರ್ಥವಾಗದಿದ್ದರೇನು, ಅದರಿಂದ ಹೊಮ್ಮುವ ಸಂಭ್ರಮ ಏನಿದೆ, ಅದು ದೇಶ
ಕಾಲಗಳನ್ನು ಮೀರಿ ಗುರುತ್ವದ ಅಲೆಯ ಹಾಗೆ ಎಲ್ಲರನ್ನೂ ತಟ್ಟುತ್ತದೆ.

ಸಾಮಾನ್ಯ ಅರ್ಥದಲ್ಲಿ ಗುರುತ್ವ ಎಂದರೆ ಏನೆಂಬುದು ನಮಗೆಲ್ಲ ಗೊತ್ತೇ ಇದೆ. ಮೇಲಕ್ಕೆ ಎಸೆದ
ಚಂಡು ಅಲ್ಲೇ ನಿಲ್ಲುವ ಬದಲು ಕೆಳಕ್ಕೆ ಏಕೆ ಬೀಳುತ್ತದೆ ಎಂದು ಕೇಳಿದರೆ, ‘ಭೂಮಿಗೆ
ಗುರುತ್ವಾಕರ್ಷಣೆ ಇದೆ, ಅದು ಎಲ್ಲ ವಸ್ತುಗಳನ್ನೂ ತನ್ನತ್ತ ಸೆಳೆಯುತ್ತದೆ’ ಎಂದು ಹೈಸ್ಕೂಲ್
ವಿದ್ಯಾರ್ಥಿಗಳೂ ಹೇಳುತ್ತಾರೆ. ಏಕೆಂದರೆ, ಐಸ್ಯಾಕ್ ನ್ಯೂಟನ್‌ನ ತಲೆಯ ಮೇಲೆ ಸೇಬು ಬಿದ್ದಾಗ
ಈ ಸಂಗತಿ ಆತನಿಗೆ ಹೊಳೆಯಿತೆಂದು ಹಿಂದಿನವರು ಹೇಳುತ್ತ ಬಂದಿದ್ದಾರೆ. ಸೇಬು ಆತನ ತಲೆಯ
ಮೇಲೆಯೇ ಬಿತ್ತೊ, ದೂರದಲ್ಲೊ ಅಥವಾ ಅವನ ಕನಸಿನಲ್ಲಿ ಬಿತ್ತೊ ಆ ವಿಷಯ ಹೇಗೂ ಇರಲಿ,
ಸಾಮಾನ್ಯರಿಗೆ ಹೊಳೆಯದ ಸಂಗತಿ ಅವನಿಗೆ ಹೊಳೆಯಿತು. ಅದೇ ಗುರುತ್ವ ಬಲದಿಂದಾಗಿಯೇ ಸೂರ್ಯನ
ಸುತ್ತ ಗ್ರಹಗಳು ಸುತ್ತುತ್ತವೆ ಎಂದು ನ್ಯೂಟನ್ ಹೇಳಿದ್ದನ್ನು ಎಲ್ಲರೂ ಒಪ್ಪಿಕೊಂಡಿದ್ದರು.

ಐನ್‌ಸ್ಟೀನ್ ಮಂಡಿಸಿದ ಸಾಪೇಕ್ಷ ಸಿದ್ಧಾಂತದಲ್ಲಿ ಗುರುತ್ವಕ್ಕೆ ಬೇರೆಯದೇ ಆಯಾಮ ಬಂತು.
ಗುರುತ್ವ ಬಲ (ಗ್ರಾವಿಟಿ) ಎಂಬುದು ಜಾಳಿಗೆಯಂತೆ ಇಡೀ ವಿಶ್ವವನ್ನು ಆವರಿಸಿದೆ ಎಂದು ಆತ
ಪ್ರತಿಪಾದಿಸಿದ. ಎಲ್ಲೋ ದೂರದಲ್ಲಿ, ನಮ್ಮ ಸೌರಮಂಡಲಕ್ಕೆ ಸಂಬಂಧವೇ ಇಲ್ಲದಂತೆ ದೂರದ
ಗ್ಯಾಲಕ್ಸಿಯಲ್ಲಿ ಒಂದು ತಾರೆ ಸ್ಫೋಟಗೊಂಡರೂ ಆಗ ಏಳುವ ತುಮುಲಗಳು ಅಲೆಅಲೆಯಾಗಿ
ವಿಶ್ವಕ್ಕೆಲ್ಲ ಹರಡುತ್ತವೆ ಎಂದ.

ಅಷ್ಟೇ ಅಲ್ಲ, ಈ ತರಂಗ ಸ್ಪೇಸ್‌ಟೈಮ್ (ದೇಶಕಾಲ) ಎಂಬ ನಾಲ್ಕನೇ ಆಯಾಮದಲ್ಲಿದೆ ಎಂತಲೂ
ಹೇಳಿದ. ಅದನ್ನು ಅರ್ಥ ಮಾಡಿಕೊಳ್ಳಲು ತಿಣುಕುವವರಿಗಾಗಿ ಒಂದು ರೂಪಕವೂ ಸಿದ್ಧವಾಯಿತು.
ಸರ್ಕಸ್ ಡೇರೆಗಳಲ್ಲಿ ಎತ್ತರಕ್ಕೆ ಒಂದು ಬಲೆಯನ್ನು ಬಿಗಿಯಾಗಿ ಕಟ್ಟಿರುತ್ತಾರೆ ತಾನೆ?
ಜೋಕಾಲಿ ಜೀಕುವವರು, ಜೋಕರ್‌ಗಳು ಅದರ ಮೇಲೆ ಕುಪ್ಪಳಿಸಿ ಲಾಗಾ ಹೊಡೆಯುತ್ತಿರುತ್ತಾರೆ.

ಅಂಥ ಜಾಳಿಗೆಯ ಮೇಲೊಂದು ಭಾರವಾದ ಗುಂಡನ್ನು ಇಟ್ಟರೆ ಅಲ್ಲೊಂದು ಗುಳಿಯನ್ನು ಸೃಷ್ಟಿಸಿಕೊಂಡು
ಅದರಲ್ಲಿ ಕೂರುತ್ತದೆ. ಗುಂಡಿನ ಭಾರ ಹೆಚ್ಚಿದ್ದಷ್ಟೂ ಗುಳಿಯ ಆಳ ಹೆಚ್ಚಿಗೆ ಇರುತ್ತದೆ.
ಅದರತ್ತ ಇನ್ನೊಂದು ಚಿಕ್ಕ ಗುಂಡನ್ನು ಉರುಳಿಸಿದರೆ ಅದು ನೇರವಾಗಿ ಗುಳಿಯೊಳಕ್ಕೆ ಹೋಗುವ
ಬದಲು ವೃತ್ತಾಕಾರವಾಗಿ ಚಲಿಸುತ್ತ ಕ್ರಮೇಣ ಗುಳಿಯಲ್ಲಿನ ದೊಡ್ಡ ಗುಂಡಿನ ಬಳಿ ಸೇರುತ್ತದೆ.
ಹಾಗೇ ಭಾರೀ ನಕ್ಷತ್ರಗಳು ಅಥವಾ ಭಾರೀ ಗ್ಯಾಲಕ್ಸಿಗಳು ಇದ್ದಲ್ಲೆಲ್ಲ ಸ್ಪೇಸ್‌ಟೈಮ್
ಜಾಲದಲ್ಲಿ ಇಂಥ ಗುಳಿಗಳು ಏರ್ಪಡುತ್ತವೆಂದೂ ಗ್ರಹಗಳು ಅಲ್ಲೇ ಗಿರಕಿ ಹೊಡೆಯುತ್ತಿರುತ್ತವೆ
ಎಂತಲೂ ಐನ್‌ಸ್ಟೀನ್ ಅನುಯಾಯಿಗಳು ತರ್ಕಿಸಿದರು.

ಇಡೀ ವಿಶ್ವವನ್ನು ಸ್ಪೇಸ್‌ಟೈಮ್ ಜಾಳಿಗೆ ಆವರಿಸಿದೆ ಎಂಬುದಕ್ಕೆ ಪರೋಕ್ಷ ಉದಾಹರಣೆಗಳು ಒಂದರ
ನಂತರ ಒಂದರಂತೆ ಲಭಿಸುತ್ತ ಹೋದವು (ಹಾಗೆ ಸಾಕ್ಷ್ಯವನ್ನು ಒದಗಿಸಿದವರಿಗೆ ಪಿಎಚ್‌ಡಿಗಳೂ
ನೊಬೆಲ್‌ಗಳೂ ಲಭಿಸುತ್ತ ಬಂದವು). ಉದಾಹರಣೆಗೆ: ದೊಡ್ಡ ಗ್ಯಾಲಕ್ಸಿಯ ಹಿಂಭಾಗದಲ್ಲಿ ಪ್ರಖರ
ತಾರೆಗಳ ಇನ್ನೊಂದು ಗುಂಪು ಇದೆಯೆಂದುಕೊಳ್ಳಿ. ಅವುಗಳಿಂದ ಹೊರಟ ಬೆಳಕು ನೇರವಾಗಿ ನಮ್ಮತ್ತ
ಬರುವ ಬದಲು ತನ್ನೆದುರಿನ ಗ್ಯಾಲಕ್ಸಿಯ ಗುರುತ್ವ ಕುಳಿಯನ್ನು ಸುತ್ತುಹೊಡೆದು ಬರುತ್ತದೆ
ಎಂಬುದು ಗೊತ್ತಾಯಿತು.

ಅಂದರೆ, ಗ್ಯಾಲಕ್ಸಿಗಳು ನಿರ್ಮಿಸಿಕೊಂಡ ಕುಳಿಯೇ ಒಂಥರಾ ಮಸೂರದಂತೆ ಇರುತ್ತದೆ ಎಂಬುದು
ಸಾಬೀತಾಯಿತು. ಅವುಗಳ ಹಿಂಭಾಗದಲ್ಲಿದ್ದ ತಾರೆಗಳ ದೂರವನ್ನು ನಿಖರವಾಗಿ ಅಳೆಯುವುದು
ಸಾಧ್ಯವಾಯಿತು. ನಮ್ಮದೇ ಬುಧ ಗ್ರಹ ನ್ಯೂಟನ್ ನಿಯಮವನ್ನು ಅನುಸರಿಸುತ್ತ ಸೂರ್ಯನನ್ನು
ಸುತ್ತುಹೊಡೆಯುವ ಬದಲು ತನ್ನ ಕಕ್ಷೆಯಲ್ಲಿ ಆಗಾಗ ಏಕೆ ತಳಕಾ ಬಳಕಾ ಆಗುತ್ತದೆ ಎಂಬುದು
ಹಿಂದೆಲ್ಲ ದೊಡ್ಡ ಪ್ರಶ್ನೆಯಾಗಿತ್ತು.

ಯಾವುದೋ ಅಗೋಚರ ಇನ್ನೊಂದು ಗ್ರಹ ಅಲ್ಲಿರಬೇಕು ಎಂದು ಅದನ್ನು ಶೋಧಿಸಲು ಏನೆಲ್ಲ ವಿಫಲ
ಯತ್ನಗಳು ನಡೆದಿದ್ದವು. ಆದರೆ ಐನ್‌ಸ್ಟೀನ್‌ನ ಸ್ಪೇಸ್‌ಟೈಮ್ ಜಾಲದಲ್ಲಿ ಸೂರ್ಯನನ್ನು
ಸಿಲುಕಿಸಿ ನೋಡಿದಾಗ ಬುಧಗ್ರಹದ ಎರ್ರಾಬಿರ್ರಿ ಚಾಲನೆಗೆ ಉತ್ತರ ಸಿಕ್ಕಿತ್ತು.

ಈ ಸ್ಪೇಸ್‌ಟೈಮ್ ಜಾಳಿಗೆ ಎಲ್ಲೆಡೆ 

[ms-stf '53786'] ರಾಜ್ಯ ಪಠ್ಯಕ್ರಮ : ಕ್ರೇಂದ್ರಕ್ಕಿಂತ ಕಳಪೆಯಲ್ಲ

2016-02-14 Thread HAREESHKUMAR K Agasanapura
http://m.prajavani.net/article/2016_02_15/387433

*ರಾಜ್ಯ ಪಠ್ಯಕ್ರಮ : ಕ್ರೇಂದ್ರಕ್ಕಿಂತ ಕಳಪೆಯಲ್ಲ*

15 Feb, 2016

ಹೇಮಾ ವೆಂಕಟ್








*ಬೆಂಗಳೂರು:  *‘ರಾಜ್ಯ ಪಠ್ಯಕ್ರಮದಲ್ಲಿ  ಶಿಕ್ಷಣ ಪಡೆಯುತ್ತಿರುವ ಮಕ್ಕಳು ಆತಂಕಪಡುವ
ಅಗತ್ಯವಿಲ್ಲ. ರಾಜ್ಯ ಪಠ್ಯಕ್ರಮ ಕೇಂದ್ರ ಪಠ್ಯಕ್ರಮಕ್ಕಿಂತ ಕಳಪೆಯಲ್ಲ’. ಕೇಂದ್ರ ಮತ್ತು
ರಾಜ್ಯ ಪಠ್ಯಕ್ರಮಗಳ ಗುಣಮಟ್ಟದ ತೌಲನಿಕ ಅಧ್ಯಯನ ನಡೆಸಿದ ತಜ್ಞರ ಸಮಿತಿ ಹೀಗೆ ಹೇಳಿದೆ.

ರಾಜ್ಯ ಮತ್ತು ಕೇಂದ್ರ ಪಠ್ಯಕ್ರಮದ 6ರಿಂದ 10ನೇ ತರಗತಿಯವರೆಗಿನ ವಿಜ್ಞಾನ, ಗಣಿತ, ಸಮಾಜ
ವಿಜ್ಞಾನ ವಿಷಯಗಳನ್ನು ಹೋಲಿಸಿ ಅಧ್ಯಯನ ನಡೆಸಿದ ಸಮಿತಿಗಳು ಇತ್ತೀಚೆಗೆ  ರಾಜ್ಯ
ಪಠ್ಯಪುಸ್ತಕ ಪರಿಷ್ಕರಣ ಸಮಿತಿಗೆ ವರದಿ ನೀಡಿವೆ. ಎರಡೂ ಪಠ್ಯಕ್ರಮಗಳಲ್ಲಿ ರಾಷ್ಟ್ರೀಯ
ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ 2005ರಲ್ಲಿ ರೂಪಿಸಿದ ‘ರಾಷ್ಟ್ರೀಯ ಪಠ್ಯಕ್ರಮ
ಚೌಕಟ್ಟಿನ’ ಶಿಫಾರಸುಗಳನ್ನು ಬಹುತೇಕ ಅನುಸರಿಸಲಾಗಿದೆ ಎಂದು ವರದಿ ತಿಳಿಸಿದೆ.

‘ಕೇಂದ್ರ ಪಠ್ಯಕ್ರಮಕ್ಕೆ ಹೋಲಿಸಿದರೆ ರಾಜ್ಯ ಪಠ್ಯಕ್ರಮದ ಕೆಲವು ತರಗತಿಗಳ ವಿಜ್ಞಾನ
ಅಧ್ಯಾಯಗಳು  ಉತ್ಕೃಷ್ಟವಾಗಿದೆ. ವಿಜ್ಞಾನದ ಪರಿಕಲ್ಪನೆಗಳಲ್ಲಿರುವ ತಪ್ಪು ಗ್ರಹಿಕೆಗಳನ್ನು
ತೆಗೆದು ಹಾಕಿ, ಕೆಲವು ಉಪಯುಕ್ತ ಅಧ್ಯಾಯಗಳನ್ನು ಸೇರ್ಪಡೆಗೊಳಿಸಿ, ಪರಿಷ್ಕರಿಸಿದರೆ ರಾಜ್ಯ
ಪಠ್ಯಕ್ರಮ ಅತ್ಯುತ್ತಮ  ಎನಿಸಲಿದೆ’ ಎಂದು ವಿಜ್ಞಾನ ಪಠ್ಯಗಳ ಅಧ್ಯಯನ ಸಮಿತಿಯ ಅಧ್ಯಕ್ಷ
ಪ್ರೊ.ಟಿ.ಆರ್. ಅನಂತರಾಮು ‘ಪ್ರಜಾವಾಣಿ’ಗೆ ತಿಳಿಸಿದರು.

*ಖಗೋಳ ವಿಜ್ಞಾನಕ್ಕೆ ಒತ್ತು: *ರಾಜ್ಯ ಪಠ್ಯಕ್ರಮದಲ್ಲಿ 6 ರಿಂದ 10ನೇ ತರಗತಿಯವರೆಗೆ
ಅಂತರಿಕ್ಷ ಕುರಿತು ಒಟ್ಟು ಆರು ಅಧ್ಯಾಯಗಳಿವೆ.  ಕೇಂದ್ರ ಪಠ್ಯ ಕ್ರಮದಲ್ಲಿ 8ನೇ ತರಗತಿಗೆ
ಮಾತ್ರ ‘ಸ್ಟಾರ್ಸ್ ಅಂಡ್‌ ಸೋಲಾರ್’ ಎಂಬ ಒಂದೇ ಪಾಠ ಇದೆ. ರಾಜ್ಯ ಪಠ್ಯಕ್ರಮದಲ್ಲಿ ಖಗೋಳ
ವಿಜ್ಞಾನದ ಜೊತೆಗೆ ಅಂತರಿಕ್ಷ ಸಂಶೋಧನೆ ಕುರಿತು ಉಪಯುಕ್ತ ಮಾಹಿತಿ ಇದೆ. ಸಮಕಾಲೀನ
ವಿಜ್ಞಾನದ ಬೆಳವಣಿಗೆಯನ್ನು ಗ್ರಹಿಸಲು ರಾಜ್ಯ ಪಠ್ಯ ಪುಸ್ತಕಗಳು ಉತ್ತೇಜನಕಾರಿಯಾಗಿವೆ.

ರಾಜ್ಯ ಪಠ್ಯಕ್ರಮದಲ್ಲಿ ಪರಿಕಲ್ಪನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಕೇಂದ್ರ
ಪಠ್ಯದಲ್ಲಿ ತಾಂತ್ರಿಕ ಪದಬಳಕೆ ಕಡಿಮೆ. ಇದರಿಂದ  ಪರೀಕ್ಷೆಗೆ ತೊಂದರೆಯಾಗದಿದ್ದರೂ,
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತೊಡಕಾಗುತ್ತದೆ. ಆದರೆ ರಾಜ್ಯ ಪಠ್ಯ ಪುಸ್ತಕಗಳಲ್ಲಿ
ತಾಂತ್ರಿಕ ಪದಗಳ ಬಳಕೆ, ಪರಿಕಲ್ಪನೆಗೆ ಪೂರಕವಾದ ಮಾಹಿತಿ ಧಾರಾಳವಾಗಿದೆ.

*ಗುಣಮಟ್ಟದ ಗಣಿತ :* ಗಣಿತ ಪಠ್ಯವನ್ನು ಡಾ.ಸಿ.ಎಸ್‌. ಯೋಗಾನಂದ ಅಧ್ಯಕ್ಷತೆಯ ಸಮಿತಿ
ಅಧ್ಯಯನ ನಡೆಸಿದೆ. ‘ಕೇಂದ್ರ ಪಠ್ಯಕ್ಕೆ ಹೋಲಿಸಿದರೆ ರಾಜ್ಯದ ಆರು ಮತ್ತು ಏಳನೇ ತರಗತಿಯ
ಗಣಿತ ಪಠ್ಯದ  ವಿಷಯ ಮತ್ತು  ಮುದ್ರಣ ಎರಡೂ ಅತ್ಯುತ್ತಮ ಗುಣಮಟ್ಟ ಹೊಂದಿದೆ. ಭಾಷೆಯೂ
ಚೆನ್ನಾಗಿದೆ. ಆದರೆ, ಪ್ರಬುದ್ಧ ಭಾಷೆ ಬಳಸಲಾಗಿದೆ. ಸ್ವಲ್ಪ ಸರಳ ಭಾಷೆ ಬಳಸುವ ಅಗತ್ಯವಿದೆ.
ಎಂಟು ಮತ್ತು ಒಂಬತ್ತರ ಗಣಿತ ಹೆಚ್ಚು ಪರಿಷ್ಕರಣೆಯಾಗಬೇಕಿದೆ. ಹತ್ತನೇ ತರಗತಿಯ ಗಣಿತ
ಉತ್ತಮವಾಗಿದೆ’ ಎಂದು ಸಮಿತಿ ಹೇಳಿದೆ.

*ಸಮಾಜ ವಿಜ್ಞಾನ ಅಂತರ ಹೆಚ್ಚು:* ಸಮಾಜ ವಿಜ್ಞಾನದ ವಿಷಯಗಳ ಕುರಿತು ಅಧ್ಯಯನ ನಡೆಸಿದ ಪ್ರೊ.
ಎಂ.ಎಸ್‌. ತಳವಾರ ಅಧ್ಯಕ್ಷತೆಯ ತಂಡ,  ರಾಜ್ಯ ಮತ್ತು ಕೇಂದ್ರ ಪಠ್ಯಗಳ ಸಮಾಜ ವಿಜ್ಞಾನ
ವಿಷಯದಲ್ಲಿ ಹೆಚ್ಚು ಅಂತರವಿದೆ ಎಂದು ತಿಳಿಸಿದೆ. ‘ಕೇಂದ್ರ ಪಠ್ಯಕ್ರಮ ರಾಷ್ಟ್ರವ್ಯಾಪಿ
ಯಾಗಿರುವ ಕಾರಣ ಅವರಿಗೆ ಹೆಚ್ಚಿನ ವಿಷಯಗಳನ್ನು ಅಳವಡಿಸಲು ಅವಕಾಶವಿದೆ. ರಾಜ್ಯ ಪಠ್ಯದಲ್ಲಿ
ಪ್ರಾದೇಶಿಕ ಇತಿಹಾಸ, ವೈವಿಧ್ಯತೆ ಮಾತ್ರ ಅಳವಡಿಸಲಾಗುತ್ತಿದೆ. ಇದು ಎರಡರ ನಡುವೆ ಹೆಚ್ಚು
ವ್ಯತ್ಯಾಸಕ್ಕೆ ಕಾರಣವಾಗಿದೆ.

ಕೇಂದ್ರ ಪಠ್ಯದ ಕೆಲವು ಅಧ್ಯಾಯಗಳನ್ನು ರಾಜ್ಯ ಪಠ್ಯಕ್ಕೆ ಅಳವಡಿಸುವ ಅಗತ್ಯವಿದೆ’ ಎಂದು
ಪ್ರೊ.ತಳವಾರ  ತಿಳಿಸಿದರು. ಕೇಂದ್ರ ಪಠ್ಯಕ್ರಮದಲ್ಲಿ ಪ್ರೌಢ ಶಾಲಾ ಹಂತದಲ್ಲಿಯೇ ನಿರ್ವಹಣೆ
ಮತ್ತು ವಾಣಿಜ್ಯ ವಿಷಯಗಳನ್ನು ಅಳವಡಿಸಲಾಗಿದೆ. ಇದು ಮಕ್ಕಳ ಜ್ಞಾನವನ್ನು
ವಿಸ್ತರಿಸುತ್ತದೆ. ರಾಜ್ಯ ಪಠ್ಯದಲ್ಲಿ 8ನೇ ತರಗತಿಯಿಂದ ಆರಂಭವಾಗುವ ವಿಷಯ ಕೇಂದ್ರ
ಪಠ್ಯಕ್ರಮದಲ್ಲಿ 6ನೇ ತರಗತಿಯಿಂದಲೇ ಆರಂಭವಾಗಿರುತ್ತದೆ ಎಂದು ಅವರು ವಿವರಿಸಿದರು.

*ಮುದ್ರಣ ಕಳಪೆ*
ರಾಜ್ಯ ಪಠ್ಯ ಪುಸ್ತಕಗಳ ಮುದ್ರಣ ತೀರಾ ಕಳಪೆಯಾಗಿದೆ. ಗುಣಮಟ್ಟದ ಕಾಗದ ಬಳಸದ ಕಾರಣ
ಚಿತ್ರಗಳು,  ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತಿಲ್ಲ.  ಚಿತ್ರಗಳು ಆಕರ್ಷಕವಾಗಿಲ್ಲ.
ಕಾಗುಣಿತ ತಪ್ಪುಗಳು ಕನ್ನಡ, ಇಂಗ್ಲಿಷ್‌ ಎರಡು ಮಾಧ್ಯಮಗಳಲ್ಲೂ ಸಾಮಾನ್ಯವಾಗಿವೆ.

ರಾಜ್ಯ ಪಠ್ಯಪುಸ್ತಕಗಳನ್ನು   ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ  ಗುಣಮಟ್ಟದ ಮುದ್ರಣಕ್ಕೆ
ಹೆಚ್ಚಿನ ಗಮನ ನೀಡಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ.

***ಕೇಂದ್ರ ಮತ್ತು ರಾಜ್ಯ ಪಠ್ಯಕ್ರಮಗಳಲ್ಲಿ ವಿಷಯದ ದೃಷ್ಟಿಯಿಂದ ದೊಡ್ಡ ಅಂತರವಿಲ್ಲ.
ವಿಷಯಗಳ ಅಳವಡಿಕೆ ಏಕರೂಪದಲ್ಲಿ ಇಲ್ಲದಿದ್ದರೂ ಬೇರೊಂದು ತರಗತಿಯ ಪಠ್ಯದಲ್ಲಿ ಅಳವಡಿಸಲಾಗಿದೆ.
*ಪ್ರೊ. ಟಿ.ಆರ್. ಅನಂತರಾಮು *ಹಿರಿಯ ವಿಜ್ಞಾನಿ

***ಈ ವರದಿಯನ್ನು ಆಧರಿಸಿ ಕೇಂದ್ರೀಯ ಪಠ್ಯಕ್ರಮದ ಗುಣಮಟ್ಟದಲ್ಲಿಯೇ ರಾಜ್ಯ
ಪಠ್ಯಪುಸ್ತಕಗಳನ್ನು ಪರಿಷ್ಕರಿಸ ಲಾಗುವುದು.
*ಪ್ರೊ. ಬರಗೂರು ರಾಮಚಂದ್ರಪ್ಪ *ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷ.

Hareeshkumar K
AM(PCM)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 

[ms-stf '53724'] ವಿಶ್ವೇಶ್ವರ ಸಂಶೋಧನೆಯೇ ಬುನಾದಿ

2016-02-13 Thread HAREESHKUMAR K Agasanapura
http://m.prajavani.net/article/2016_02_14/387292

*ವಿಶ್ವೇಶ್ವರ ಸಂಶೋಧನೆಯೇ ಬುನಾದಿ*

ಡಾ.ಸಿ.ವಿ. ವಿಶ್ವೇಶ್ವರ

ಪರಮೇಶ್ವರನ್‌ ಅಜಿತ್‌

ಪ್ರೊ. ಬಾಲ ಆರ್‌. ಅಯ್ಯರ್‌

Previous Next


14 Feb, 2016

ಪ್ರಜಾವಾಣಿ ವಾರ್ತೆ








*ಬೆಂಗಳೂರು: *ಗುರುತ್ವಾಕರ್ಷಣ ಅಲೆಗಳ ಅನ್ವೇಷಣೆಯಲ್ಲಿ ಬೆಂಗಳೂರಿನ ವಿಜ್ಞಾನಿಗಳು ಪ್ರಮುಖ
ಪಾತ್ರ ವಹಿಸಿದ್ದಾರೆ. ಅದರಲ್ಲಿ ಹಿರಿಯ ವಿಜ್ಞಾನಿ ಪ್ರೊ.ಸಿ.ವಿ. ವಿಶ್ವೇಶ್ವರ ಅವರ ಕೊಡುಗೆ
ಮಹತ್ವದ್ದು. ಕಪ್ಪುರಂಧ್ರದ ರಚನೆಯ ಬಗ್ಗೆ ಮೊದಲ ಬಾರಿ ಸಂಶೋಧನೆ ಕೈಗೊಂಡ ವಿಜ್ಞಾನಿಗಳಲ್ಲಿ
ವಿಶ್ವೇಶ್ವರ ಅವರೂ ಒಬ್ಬರು.

ಕಪ್ಪು ರಂಧ್ರಗಳ ಬಗ್ಗೆ ಅವರು 1968ರಲ್ಲಿ ಮೊದಲ ಸಂಶೋಧನೆ ಮಾಡಿದ್ದರು. ಕಪ್ಪು ರಂಧ್ರಗಳ
ರಚನೆ, ವಿನ್ಯಾಸದ ಮೇಲೆ ಅವರು ಪ್ರಬಂಧ ಬರೆದಿದ್ದರು. ಕಪ್ಪು ರಂಧ್ರಗಳ ಒಳಗೆ ಬೆಳಕು ಸೇರಿ
ಎಲ್ಲ ಪದಾರ್ಥಗಳು ಹೋಗಬಹುದು. ಆದರೆ, ಹಿಂದಕ್ಕೆ ಬರಲು ಸಾಧ್ಯವಿಲ್ಲ ಎಂದು ಬೆಳಕು
ಚೆಲ್ಲಿದ್ದರು. ಕಪ್ಪು ರಂಧ್ರದ ಸ್ಥಿರತೆ ಬಗ್ಗೆ ಅವರು 1970ರಲ್ಲಿ ಅವರು ಎರಡನೇ ಪ್ರಬಂಧ
ಬರೆದಿದ್ದರು.

ಕಪ್ಪು ರಂಧ್ರಗಳನ್ನು ಗುರುತಿಸುವುದು ಹೇಗೆ ಎಂಬ ಬಗ್ಗೆ ಮೂರನೇ ಪ್ರಬಂಧವನ್ನು
ಬರೆದಿದ್ದರು. ‘ಈಗಿನ ಆವಿಷ್ಕಾರ ನನ್ನ ಸಂಶೋ ಧನೆಯನ್ನು ಖಚಿತಪಡಿಸಿದೆ’ ಎಂದು ಅವರು ಸಂತೋಷ
ವ್ಯಕ್ತಪಡಿ ಸಿದರು.

*ವಿಶ್ವೇಶ್ವರ ಅವರ ಸಾಧನೆ: * ಕೊಲಂಬಿಯಾ ವಿಶ್ವವಿದ್ಯಾಲ ಯದಲ್ಲಿ  ಉನ್ನತ ವ್ಯಾಸಂಗ ಮಾಡಿದ
ಅವರು ರಾಮನ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಹಾಗೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌
ಆಸ್ಟ್ರೋಫಿಸಿಕ್ಸ್‌ನಲ್ಲಿ ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸಿದ್ದರು. ಹಲವು ವಿವಿಗಳಿಗೆ
ಸಂದರ್ಶಕ ಪ್ರಾಧ್ಯಾಪಕರಾ ಗಿದ್ದರು.
ಜವಾಹರ್‌ಲಾಲ್‌ ನೆಹರೂ ತಾರಾಲಯದ ಸಂಸ್ಥಾಪಕ ನಿರ್ದೇಶಕ ರಾಗಿಯೂ ಸೇವೆ ಸಲ್ಲಿಸಿದ್ದರು.

1989ರಲ್ಲಿ ತಾರಾಲಯ ಸ್ಥಾಪನೆಯಾಯಿತು. ಆಗ ದೇಶದ ನಾನಾ ಭಾಗಗಳಲ್ಲಿ ಸಾಕಷ್ಟು
ತಾರಾಲಯಗಳಿದ್ದವು. ಅವುಗಳಿಗಿಂತ ವಿಭಿನ್ನವೂ, ವಿಶಿಷ್ಟವೂ ಆದ ತಾರಾಲಯವನ್ನು ರೂಪಿಸುವ ಹೊಣೆ
ವಿಶ್ವೇಶ್ವರ ಅವರ ಹೆಗಲೇರಿತ್ತು. ಅದನ್ನು ಸುಸಜ್ಜಿತ ವಿಜ್ಞಾನ ಕೇಂದ್ರವಾಗಿ ಮಾರ್ಪಡಿಸಿದ
ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.

‘ವಿಜ್ಞಾನಿಗಳು ಹೆಚ್ಚಿನ ನಿರೀಕ್ಷೆ ಇಲ್ಲದೆ ಸಂಶೋಧನೆಯಲ್ಲಿ ತೊಡಗುತ್ತಾರೆ. ಬಹು ದೊಡ್ಡ ಫಲ
ಸಿಕ್ಕಾಗ ಸಂತಸವಾಗುತ್ತದೆ. ಈಗಿನ ಸಂಶೋಧನೆ ಮಹತ್ವದ ಮೈಲುಗಲ್ಲು’ ಎಂದು ವಿಶ್ವೇಶ್ವರ ಅವರ
ಪತ್ನಿ ಸರಸ್ವತಿ ಅಭಿಪ್ರಾಯಪಟ್ಟರು. ಅವರೂ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ
ಪ್ರಾಧ್ಯಾಪಕರಾಗಿದ್ದರು.

*ಟಾಟಾ ಇನ್‌ಸ್ಟಿಟ್ಯೂಟ್‌ ವಿಜ್ಞಾನಿಗಳು ಭಾಗಿ:*ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್ ಆಫ್
ಫಂಡಮೆಂಟಲ್ ರಿಸರ್ಚ್ ಮುಂತಾದ ಸಂಸ್ಥೆಗಳು ಬಹುಕಾಲದಿಂದ ಗುರುತ್ವ ಅಲೆಯ ಪತ್ತೆ ಕಾರ್ಯದಲ್ಲಿ
ತೊಡಗಿವೆ. ಅನ್ವೇಷಣಾ ಕಾರ್ಯದಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಆಫ್‌ ಫಂಡಮೆಂಟಲ್‌ ರಿಸರ್ಚ್‌ನ
ಹಿರಿಯ ವಿಜ್ಞಾನಿ ಪ್ರೊ. ಬಾಲ ಆರ್‌. ಅಯ್ಯರ್‌ ಹಾಗೂ ಅವರ ಸಹೋದ್ಯೋಗಿ ವಿಜ್ಞಾನಿ
ಪರಮೇಶ್ವರನ್‌ ಅಜಿತ್‌ ಭಾಗಿಗಳಾಗಿದ್ದರು.

‘ಇದು ಅಂತರರಾಷ್ಟ್ರೀಯ ಮಟ್ಟದ ಪ್ರಯೋಗ. ಸಾವಿರಾರು ವಿಜ್ಞಾನಿಗಳು ಪಾಲ್ಗೊಂಡಿದ್ದಾರೆ. ದೇಶದ
ಸುಮಾರು 35 ವಿಜ್ಞಾನಿಗಳು ಭಾಗಿಯಾಗಿದ್ದಾರೆ’ ಎಂದು ಪ್ರೊ. ಬಾಲ ಆರ್‌. ಅಯ್ಯರ್‌ ಹೇಳಿದರು.
ಅವರು 20 ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿದ್ದಾರೆ. ‘ಈಗಿನ ಯಶಸ್ಸಿಗೆ ವಿಶ್ವೇಶ್ವರ ಅವರು
1970ರಲ್ಲಿ ಮಂಡಿಸಿದ ಪ್ರಬಂಧವೇ ಬುನಾದಿ’ ಎಂದು ಅವರು ಹೆಮ್ಮೆಯಿಂದ ಹೇಳಿದರು. ಅಯ್ಯರ್‌
ಅವರು ಕೇರಳ ಮೂಲದವರು.

‘ಈ ಅಲೆಯ ಪತ್ತೆಯು ವಿಜ್ಞಾನ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಲಿದೆ’ ಎಂದು ಅವರು
ಹೇಳಿದರು.
‘2015ರ ಸೆಪ್ಟೆಂಬರ್‌ನಲ್ಲಿ ರಜೆಯಲ್ಲಿ ಕೇರಳಕ್ಕೆ ತೆರಳಿದ್ದೆ. ಆಗ ಸಹೋದ್ಯೋಗಿಯೊಬ್ಬರು
ಕರೆ ಮಾಡಿ ಮಹತ್ವದ ಫಲಿತಾಂಶ ಸಿಗುವ ಸಾಧ್ಯತೆಗಳು ನಿಚ್ಚಳ ವಾಗಿದ್ದು, ಕೂಡಲೇ ಕರ್ತವ್ಯಕ್ಕೆ
ಹಾಜರಾ ಗುವಂತೆ ವಿನಂತಿಸಿದರು.

ರಜೆಯನ್ನು ರದ್ದುಗೊಳಿಸಿ ಬೆಂಗಳೂರಿಗೆ ಮರಳಿದೆ. ಬಳಿಕ ನಿದ್ರೆಯಿಲ್ಲದ ಮೂರು ವಾರಗ ಳನ್ನು
ಕಳೆದೆವು. 10 ದಿನಗಳಲ್ಲಿ ಮೊದಲ ಫಲಿತಾಂಶ ಬಂತು. ಅದು ಮುಂದಿನ ಸಂಶೋಧನೆ ಹಾಗೂ
ವಿಶ್ಲೇಷಣೆಗೆ ನೆರವಾಯಿತು’ ಎಂದು ಅಜಿತ್‌ ಅವರು ನೆನಪಿಸಿಕೊಂಡರು.

Hareeshkumar K
AM(PCM)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.